ಐಪ್ಯಾಡ್

ಆಪಲ್ ಅಭಿವೃದ್ಧಿಪಡಿಸಿದ ಟ್ಯಾಬ್ಲೆಟ್ ಕಂಪ್ಯೂಟರ್‌ಗಳ ಸಾಲು

Lua error in package.lua at line 80: module 'Module:Pagetype/setindex' not found.

iPad

ಚಿತ್ರ:IPad-02.jpg
An iPad showing its home screen
DeveloperApple Inc.
ManufacturerFoxconn (on contract)[೧]
TypeTablet media player/PC
Release dateWi-Fi model (U.S.):
ಏಪ್ರಿಲ್ 3, 2010 (2010-04-03)[೨][೩]
Wi-Fi + 3G Model (U.S.):
ಏಪ್ರಿಲ್ 30, 2010 (2010-04-30)[೪]
Both models (nine more countries): ಮೇ 28, 2010 (2010-05-28)[೫]
Units sold7.5 million (as of 30 ಸೆಪ್ಟೆಂಬರ್ 2010)[೬][೭]
Operating systemiOS 4.2.1 [೮] Released ನವೆಂಬರ್ 22, 2010 (2010-11-22)
PowerInternal rechargeable non-removable 25 W⋅h (90 kJ) lithium-polymer battery[೯]
CPU1 GHz Apple A4[೯][೧೦]
Storage capacityFlash memory
16 GB, 32 GB, or 64 GB models only[೯]
Memory256 MB DRAM built into Apple A4 package (top package of PoP contains two 128 MB dies)[೧೧]
Display1024 × 768 px (aspect ratio 4:3), 9.7 in (25 cm) diagonal, appr. 45 in2 (290 cm2), 132 PPI, XGA, LED-backlit IPS LCD[೯]
GraphicsPowerVR SGX 535 GPU[೧೨]
InputMulti-touch touch screen, headset controls, proximity and ambient light sensors, 3-axis accelerometer, magnetometer
CameraNone
ConnectivityWi-Fi (802.11 a/b/g/n)
Bluetooth 2.1 + EDR
Wi-Fi + 3G model also includes: UMTS / HSDPA (Tri band–850, 1900, 2100 MHz)
GSM /
EDGE (Quad band–850, 900, 1800, 1900 MHz)
Online servicesiTunes Store, App Store, MobileMe, iBookstore, Safari
Dimensions9.56 in (243 mm) (h)
7.47 in (190 mm) (w)
.5 in (13 mm) (d)
WeightWi-Fi model: 1.5 lb (680 g)
Wi-Fi + 3G model: 1.6 lb (730 g)[೯]
Related articlesiPhone, iPod touch (Comparison)
Websitewww.apple.com/ipad

ಐಪ್ಯಾಡ್ ಎಂಬ ಟ್ಯಾಬ್ಲೆಟ್ ಕಂಪ್ಯೂಟರ್ ಅನ್ನು ಆ‍ಪ್ಪಲ್ ಸಂಸ್ಥೆಯು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದು ಪುಸ್ತಕಗಳು, ನಿಯತಕಾಲಿಕೆಗಳು, ಚಲನಚಿತ್ರಗಳು, ಸಂಗೀತ, ಆಟಗಳು, ಮತ್ತು ಅಂತರ್ಜಾಲದ ಸಂಗತಿಗಳು ಮುಂತಾದ ಶ್ರವ್ಯ-ದೃಶ್ಯ ಮಾಧ್ಯಮದ ಚಟುವಟಿಕೆಗಳಿಗೆ ಇದನ್ನು ಬಳಸಬಹುದಾಗಿದೆ. ಇದರ ಗಾತ್ರ ಮತ್ತು ಭಾರವು ಈಗ ಬಳಕೆಯಲ್ಲಿರುವ ಸ್ಮಾರ್ಟ್ ಫೋನ್ಸ್ ಮತ್ತು ಲ್ಯಾಪ್‌ಟಾಪ್ ಕಂಪ್ಯೂಟರ್ ಗಳ ತೂಕದಷ್ಟೇ ಇದೆ.1.5 pounds (680 grams) ಆ‍ಪ್ಪಲ್, ಏಪ್ರಿಲ್ 2010ರಲ್ಲಿ ಐಪ್ಯಾಡ್ ಬಿಡುಗಡೆ ಮಾಡಿದ್ದು, 80 ದಿನಗಳಲ್ಲಿ 3 ಮಿಲಿಯನ್ ಉಪಕರಣಗಳನ್ನು ಮಾರಾಟ ಮಾಡಿದೆ.[೧೩]

2010ರ ಎರಡನೆಯ ತ್ರೈಮಾಸಿಕದ ಕೊನೆಗೆ ಆ‍ಪ್ಪಲ್ ಐಪ್ಯಾಡ್ ಟ್ಯಾಬ್ಲೆಟ್ ಪಿಸಿ ಮಾರಾಟದಲ್ಲಿ ಶೇ95ರಷ್ಟು ಪಾಲು ಹೆಚ್ಚಾಗಿತ್ತು ಎಂದು ಸ್ಟ್ರಾಟಜಿ ಅನಾಲಿಸ್ಟ್ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ. 2010ರ ಎರಡನೆಯ ತ್ರೈಮಾಸಿಕದ ಸಮಯದಲ್ಲಿ ಆ‍ಯ್‌ಪಲ್ ಜಗತ್ತಿನಾದ್ಯಂತ 4.19 ಮಿಲಿಯನ್ ಐಪ್ಯಾಡ್‌ಗಳನ್ನು ಮಾರಾಟ ಮಾಡಿತ್ತು.[೧೪]

ಐಪ್ಯಾಡ್ ಕೂಡ ಐಪಾಡ್ ಟಚ್ ಮತ್ತು ಐಫೋನ್ ಹೊಂದಿರುವಂತಹ ಆಪರೇಟಿಂಗ್ ಸಿಸ್ಟಮ್‌ಗಳಿಂದಲೇ ಕಾರ್ಯ ನಿರ್ವಹಿಸುವಂತದ್ದಾಗಿದೆ. ಅಲ್ಲದೆ ಐಫೋನ್‌ ಅಪ್ಲಿಕೇಶನ್‌ನಂತೆಯೆ ತನ್ನದೆ ಆದ ಅಪ್ಲಿಕೇಶನ್‌ ಮೂಲಕ ಕೂಡ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಆ‍ಯ್‌ಪಲ್‌ನಿಂದ ಅನುಮತಿ ಹೊಂದಿದ ಮತ್ತು ಇದರ ಆನ್‌ಲೈನ್ ಸ್ಟೋರ್‌ ಮೂಲಕ ಹಂಚಿಕೆಯಾಗುವ ಪ್ರೋಗ್ರಾಂಗಳನ್ನು ಯಾವುದೇ ಬದಲಾವಣೆ ಇಲ್ಲದೇ ಇದರಲ್ಲಿ ಬಳಸಬಹುದಾಗಿದೆ.

ಐಫೋನ್ ಮತ್ತು ಐಪಾಡ್ ಟಚ್‌ಗಳಂತೆ, ಐಪ್ಯಾಡ್ ಕೂಡ ಮಲ್ಟಿಟಚ್ ಡಿಸ್‌ಪ್ಲೇಯಿಂದ ನಿಯಂತ್ರಿಸಲ್ಪಡುತ್ತದೆ — ಒತ್ತಡದಿಂದ ಕಾರ್ಯನಿರ್ವಹಿಸುವ ಸ್ಟೈಲಸ್ ಸಾಧನ ಹೊಂದಿದ್ದ ಇದರ ಹಿಂದಿನ ಟ್ಯಾಬ್ಲೆಟ್ ಕಂಪ್ಯೂಟರ್‌ಗಳಿಗಿಂತ ಇದು ಭಿನ್ನವಾಗಿದೆ ಮತ್ತು ಭೌತಿಕ ಕೀಬೋರ್ಡ್ ಬದಲಾಗಿ ಒಂದು ವರ್ಚುವಲ್ ಕೀಬೋರ್ಡ್ ಹೊಂದಿದೆ. ಐಪ್ಯಾಡ್, ಅಂತರ್ಜಾಲ ಹುಡುಕಲು, ಲೋಡ್ ಮತ್ತು ಸ್ಟ್ರೀಮ್ ಮಿಡೀಯಾ ಮತ್ತು ಸಾಪ್ಟ್‌ವೇರ್ ಅಳವಡಿಸಲು ವೈ-ಫೈ ಡಾಟಾ ಸಂಪರ್ಕ್ ಬಳಕೆ ಮಾಡಿಕೊಳ್ಳುತ್ತದೆ. ಕೆಲವೊಂದು ಮಾದರಿಗಳು 3ಜಿ ನಿಸ್ತಂತು ಮಾಹಿತಿ ಸಂಪರ್ಕ ಹೊಂದಿದ್ದು ಇವುಗಳ ಮೂಲಕ ಎಚ್‌ಎಸ್‌ಪಿಎ ಮಾಹಿತಿ ಜಾಲಕ್ಕೆ ಸಂಪರ್ಕಿಸಬಹುದು. ಈ ಸಾಧನವನ್ನು ಕಂಪ್ಯೂಟರಿನಲ್ಲಿ ಯುಎಸ್‌ಬಿ ಕೇಬಲ್ ಮೂಲಕ ಐಟ್ಯೂನ್ಸ್ ಗೆ ಸಿಂಕ್ ಮಾಡುವ ಮೂಲಕ ನಿರ್ವಹಿಸಬಹುದಾಗಿದೆ.

ಈ ಉಪಕರಣಕ್ಕೆ ಮಾಧ್ಯಮ ಪ್ರತಿಕ್ರಿಯೆಯು ತಟಸ್ಥವಾಗಿತ್ತು ಅಥವಾ ಸಕಾರಾತ್ಮಕವಾಗಿತ್ತು, ಆದರೆ ಉಪಕರಣ ಬಿಡುಗಡೆಯಾದ ನಂತರದಲ್ಲಿ ಹೆಚ್ಚು ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾದವು.

ಇತಿಹಾಸ

1993ರಲ್ಲಿ ಆ‍ಪ್ಪಲ್ ತನ್ನ ಮೊದಲ ಟ್ಯಾಬ್ಲೆಟ್ ಗಣಕಯಂತ್ರ ನ್ಯೂಟನ್ ಮೆಸೇಜ್‌ಪ್ಯಾಡ್ 100,[೧೫][೧೬] ಅನ್ನು ಪರಿಚಯಿಸಿತು. ಇದು ಮುಂದೆ ಎಕಾರ್ನ್ ಕಂಪ್ಯೂಟರ್ಸ್ ನೊಂದಿಗೆ ಎಆರ್‌ಎಂ6 ಪ್ರೊಸೆಸರ್ ಕೋರ್ ರಚನೆಗೆ ದಾರಿ ಮಾಡಿತು. ಆ‍ಯ್‌ಪಲ್ ಪವರ್‌ಬುಕ್ ಡ್ಯೂಒ-ಆಧಾರಿತ ಪೆನ್‌ಲೈಟ್ ಹೆಸರಿನ ಒಂದು ಮೂಲಮಾದರಿ ಅಭಿವೃದ್ಧಿ ಪಡಿಸಿತು, ಅದರೆ ಮೆಸೇಜ್‌ಪ್ಯಾಡ್ ಮಾರಾಟಕ್ಕೆ ತೊಂದರೆಯಾಗುವುದೆಂದು ಇದನ್ನು ಮಾರಾಟ ಮಾಡಲಿಲ್ಲ.[೧೭] ಆ‍ಯ್‌ಪಲ್ ನ್ಯೂಟನ್ ಆಧಾರಿತ ಪಿಡಿಎಗಳನ್ನು ಬಿಡುಗಡೆ ಮಾಡಿತು, ಮತ್ತು 1998ರಲ್ಲಿ ಮೆಸೇಜ್‌ಪ್ಯಾಡ್ 2100 ನಿಲ್ಲಿಸಲಾಯಿತು.

ಜೊತೆಗೆ 2001ರಲ್ಲಿ ಒಯ್ಯುವಂತಹ ಸಂಗೀತ ಸಾಧನ ಐಪಾಡ್ ಪರಿಚಯಿಸಿ ಯಶಸ್ವಿಯಾಯಿತು, ಆ‍ಪ್ಪಲ್ ಪುನಃ 2007ರಲ್ಲಿ ಮೊಬೈಲ್ ಕಂಪ್ಯೂಟಿಂಗ್ ಮಾರುಕಟ್ಟೆಗೆ ಐಫೋನ್ ಮೂಲಕ ಪ್ರವೇಶ ಮಾಡಿತು. ಐಪ್ಯಾಡ್‌ಗಿಂತ ಚಿಕ್ಕದಾಗಿದ್ದು ಆದರೆ ಕ್ಯಾಮರಾ ಮತ್ತು ಮೊಬೈಲ್ ಫೋನ್‌ಹೊಂದಿದೆ, ಇದನ್ನು ಮಲ್ಟಿಟಚ್ ಬೆರಳು ಸಂವೇದಕ-ಟಚ್‌ಸ್ಕ್ರೀನ್ ಆಗಿ ಪ್ರಾರಂಭಿಸಲಾಗಿದ್ದು ಆ‍ಯ್‌ಪಲ್‌ನ ಮೊಬೈಲ್ ಆಪರೇಟಿಂಗ್ ಸಿಸ್ಟಮ್—ಐಒಎಸ್‌ನೊಂದಿಗೆ ಸಂಪರ್ಕ ಏರ್ಪಡಿಸುತ್ತದೆ. 2009ರ ನಂತರದಲ್ಲಿ ಐಪ್ಯಾಡ್ ಬಿಡುಗಡೆಯಾಗುತ್ತದೆ ಎಂದು ಹಲವಾರು ವರ್ಷಗಳ ಕಾಲ ಗಾಳಿಸುದ್ಧಿ ಹಬ್ಬಿತ್ತು. "ಆ‍ಯ್‌ಪಲ್‌ನ ಟ್ಯಾಬ್ಲೆಟ್"ಗೆ ಐಟ್ಯಾಬ್ಲೆಟ್ ಮತ್ತು ಐಸ್ಲೇಟ್ ಎಂಬ ಹೆಸರಿರಬಹುದೆಂದು ಊಹಿಸಲಾಗಿತ್ತು.[೧೮] ಜನವರಿ 27, 2010ರಂದು ಐಪ್ಯಾಡ್ ಬಿಡುಗಡೆ ಮಾಡುತ್ತಿರುವುದನ್ನು ಸ್ಯಾನ್‌ಪ್ರಾನ್ಸಿಸ್ಕೊದ ಯೆರ್ಬಾ ಬ್ಯುಯೆನಾ ಸೆಂಟರ್ ಫಾರ್ ಆರ್ಟ್ಸ್‌ನಲ್ಲಿ ಆ‍ಯ್‌ಪಲ್ ಪತ್ರಿಕಾಗೋಷ್ಠಿಯಲ್ಲಿ ಸ್ಟೀವ್ ಜಾಬ್ಸ್ ತಿಳಿಸಿದರು.[೧೯][೨೦]

ನಂತರ ಐಫೋನ್‌ಗಿಂತ ಮೊದಲಿಗೆ ಐಪ್ಯಾಡ್ ಅಭಿವೃದ್ಧಿ ಪಡಿಸಲಾಗಿದೆ ಎಂದು ಜಾಬ್ಸ್ ಅಂಗೀಕರಿಸಿದರು.[೨೧][೨೨][೨೩] ಇದು ಮೊಬೈಲ್ ಫೋನ್ ರೀತಿಯಲ್ಲಿ ಸಹಾ ಕೆಲಸ ಮಾಡುವುದನ್ನು ಮನಗಂಡು ಐಪ್ಯಾಡ್ ಅಭಿವೃದ್ಧಿ ಪಡಿಸುವುದನ್ನು ನಿಲ್ಲಿಸಿದ ಸ್ಟೀವ್ ಜಾಬ್ಸ್ ಅದರ ಬದಲಿಗೆ ಐಫೋನ್ ಅಭಿವೃದ್ಧಿಪಡಿಸಲು ನಿರ್ಧರಿಸಿದರು.[೨೪]

ಹಾರ್ಡ್‌ವೇರ್

ಸ್ಕ್ರೀನ್ ಮತ್ತು ಇನ್ಪುಟ್

ಐಪ್ಯಾಡ್‌ನ ಟಚ್‌ಸ್ಕ್ರೀನ್ ಡಿಸ್‌ಪ್ಲೇ 9.7 in (25 cm) ಲಿಕ್ವಿಡ್ ಕ್ರಿಸ್ಟಲ್ ಡಿಸ್‌ಪ್ಲೇ (1024 × 768 ಪಿಕ್ಸಲ್ಸ್ ಹೊಂದಿದ್ದು) ಜೊತೆಗೆ ಬೆರಳಚ್ಚು-ನಿರೋಧಕ ಮತ್ತು ಗೀಚುಗಳನ್ನು ತಡೆಗಟ್ಟಬಹುದಾದ ಗಾಜನ್ನು ಹೊಂದಿದೆ. ಐಫೋನ್‌ನಂತೆ, ಐಪ್ಯಾಡ್‌ನ್ನು ಕೂಡ ಕೇವಲ ಬೆರಳಿನ ಮೂಲಕ ನಿಯಂತ್ರಿಸಬಹುದು; ಕೈಚೀಲಗಳು ಮತ್ತು ಸ್ಟೈಲಿ, ಬಳಸದೆ ಇರುವಾಗ ಬಹಳಷ್ಟು ಅಗತ್ಯ ವಿದ್ಯುತ್‌ ಸಂಚಲನವನ್ನು ನಿಯಂತ್ರಿಸುತ್ತವೆ.[೨೫] ಆದರೆ ಇದಕ್ಕಾಗಿಯೆ ವಿಶೇಷ ಕೈಚೀಲಗಳು ಮತ್ತು ಧಾರಕ ಸ್ಟೈಲಿ ರೂಪಿಸಲಾಗಿದೆ.[೨೬][೨೭]

ಡಿಸ್‌ಪ್ಲೇಯು ಎರಡು ಸಂವೇದಕಗಳಿಗೆ ಪ್ರತಿಸ್ಪಂದಿಸುತ್ತದೆ:ಪದೆಯ ಸುತ್ತಲಿನ ಬೆಳಕಿನ ಸಂವೇದಕವು ಬೆಳಕಿನ ಪ್ರಖರವನ್ನು ಹೊಂದಿಸಿಕೊಳ್ಳುತ್ತದೆ ಮತ್ತು 3-ಅಕ್ಷೀಯ ಅಕ್ಸೆಲೆರೊಮೀಟರ್ ‌ ಫೋನ್‌ನ ಸ್ಥಿತಿ ಗುರುತಿಸಿ ಅದಕ್ಕನುಗುಣವಾಗಿ ಪರದೆಯನ್ನು ಹೊಂದಿಸುತ್ತದೆ. ಇದರಿಂದ ಬಳಕೆದಾರರು ಪೊರ್ಟ್ರೇಟ್‌ (ಪ್ರತಿಕ್ರತಿ ಮತ್ತು ಭೂಚಿತ್ರಣ)ಮತ್ತು ಲ್ಯಾಂಡ್‌ಸ್ಕೇಪ್‌ ನಡುವೆ ಬದಲಿಸಿ ಸುಲಭದ ತಿಳಿವಳಿಕೆಗೆ ಅವಕಾಶ ಕಲ್ಪಿಸುತ್ತದೆ. ಐಫೋನ್ ಮತ್ತು ಐಪಾಡ್ ಟಚ್ ಅಪ್ಲಿಕೇಶನ್‌ನಂತೆ ಕೇವಲ ಮೂರೇ ಹೊಂದಾಣಿಕೆ (ಪೊರ್ಟ್ರೇಟ್‌ ಮತ್ತು ಲ್ಯಾಂಡ್‌ಸ್ಕೇಪ್‌-ಎಡ ಮತ್ತು ಲ್ಯಾಂಡ್‌ಸ್ಕೇಪ್‌-ಬಲ) ಇರದೆ, ಐಪ್ಯಾಡ್ ಅಪ್ಲಿಕೇಶನ್‌ಗಳನ್ನು ನಾಲ್ಕು ಕಡೆಗೆ ( ಮೇಲೆ ತಿಳಿಸಿದ ಮೂರು ರೀತಿ ಮತ್ತು ಮತೊಂದು ಮೇಲೆ ಕೆಳಗೆ)ಪರದೆ ತಿರುಗುವಿಕೆಗೆ ಸಹಾಯವಾಗುವಂತೆ ವಿನ್ಯಾಸ ಮಾಡಲಾಗಿದೆ,[೨೮] ಇದರರ್ಥ ಉಪಕರಣವು ಯಾವುದೇ ಅಂತರ್ಗತ " ಸಹಜವಾದವಾದ" ಹೊಂದಾಣಿಕೆ ಹೊಂದಿಲ್ಲ; ಕೇವಲ ಹೋಮ್ ಬಟನ್ ಸ್ಥಾನದಲ್ಲಿ ಮಾತ್ರ ಬದಲಾವಣೆ ಇದೆ.

ಐಪ್ಯಾಡ್‌ನಲ್ಲಿ ಒಟ್ಟು ನಾಲ್ಕು ಒತ್ತುಗುಂಡಿಗಳಿವೆ, ಬಳಕೆದಾರರು ಮುಖ್ಯ ಪರಿವಿಡಿಗೆ ಹಿಂದಿರುಗಲು ಡಿಸ್‌ಪ್ಲೇ ಕೆಳಗೆ ಹೋಮ್ ಒತ್ತುಗುಂಡಿ, ಮತ್ತು ಬದಿಯಲ್ಲಿ ಮೂರು ಪ್ಲಾಸ್ಟಿಕ್ ಒತ್ತುಗುಂಡಿಗಳು: ವೇಕ್‌/ಸ್ಲೀಪ್‌ , ವಾಲ್ಯೂಮ್‌ ಹೆಚ್ಚು/ಕಡಿಮೆ , ಜೊತೆಗೆ ಮೂರನೆಯ ಒತ್ತುಗುಂಡಿಯಾದ ಐಒಎಸ್ 4.2 ನಿಶ್ಯಬ್ಧ ಗುಂಡಿಯಾಗಿ ಕಾರ್ಯನಿರ್ವಹಿಸುತ್ತದೆ.[೯] ಮೊದಲಿಗೆ ಈ ಗುಂಡಿಯು ಪರದೆ ತಿರುಗದಂತೆ ಮಾಡಲು ಬಳಕೆಯಾಗುತ್ತಿತ್ತು (ಬಳಕೆದಾರ ಮಲಗಿರುವ ಸ್ಥಿತಿಯಲ್ಲಿದ್ದಾಗ ಅಸಂಕಲ್ಪಿತ ತಿರುಗುವಿಕೆ ತಡೆಯಲು).[೨೯] ಆದರೆ, ಐಒಎಸ್ 4.2 ಪರಿಷ್ಕೃತದಲ್ಲಿ, ಈ ವ್ಯವಸ್ಥೆಯನ್ನು ತೆಗೆದುಹಾಕಲಾಗಿದೆ ಮತ್ತು ಈಗ ಐಒಎಸ್ ಟಾಸ್ಕ್ ಸ್ವಿಚರ್ ಮೂಲಕ ತಿರುಗುವಿಕೆಯನ್ನು ಸಾಪ್ಟ್‌ವೇರ್ ಅಂತರಣ ನಿಯಂತ್ರಿಸುತ್ತದೆ. ಐಒಎಸ್ ಬಿಡುಗಡೆಯಲ್ಲಿ ಯಾವುದೇ ರೀತಿಯಲ್ಲಿ ಭೌತಿಕ ಸ್ವಿಚ್‌ಗಳ ಕಾರ್ಯನಿರ್ವಹಣೆಯನ್ನು ಮತ್ತೆ ಹಾಕಲು ಸಾಧ್ಯವಿಲ್ಲ.

ಐಪ್ಯಾಡ್ ಮತ್ತು ಸ್ಟಾರ್ ಟ್ರೇಕ್‌ನ ಕಲ್ಪನೆಗೆ ಸಂಬಂಧಪಟ್ಟ ಪಿಎಡಿಡಿ ಟ್ಯಾಬ್ಲೆಟ್ ಗಣಕಯಂತ್ರದ ನಡುವೆ ಹೆಸರು ಮತ್ತು ಸಾಮರ್ಥ್ಯ ಎರಡರಲ್ಲೂ ಹೋಲಿಕೆ ಇರುವುದನ್ನು ಆರ್ಸ್ ಟೆಕ್ನಿಕಾ ಟಿಪ್ಪಣಿ ಮಾಡಿದೆ.[೩೦]

ಸಂಪರ್ಕಶೀಲತೆ

ಐಪ್ಯಾಡ್‌ನ್ನು ಪರಿಚಯಿಸುತ್ತಿರುವ ಆ‍ಯ್‌ಪಲ್ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್

ಐಪ್ಯಾಡ್ ಗೂಗಲ್ ಮ್ಯಾಪ್ಸ್‌‍‍ನಂತಹ ಅಪ್ಲಿಕೇಶನ್‌ಗೆ ಸ್ಥಳದ ಮಾಹಿತಿ ಒದಗಿಸಲು ಸ್ಕೈಹುಕ್ ವೈರ್‌ಲೆಸ್‌ನಿಂದ ಟ್ರೈಲೆಟರೇಶನ್ ವೈ-ಫೈ ಸಂಪರ್ಕಜಾಲವನ್ನು ಬಳಸಿಕೊಳ್ಳುತ್ತದೆ. 3ಜಿ ಮಾದರಿಯು A-GPSಹೊಂದಿದ್ದು GPS ನೊಂದಿಗೆ ಇದರ ಸ್ಥಾನವನ್ನು ಲೆಕ್ಕಹಾಕಲು ಅಥವಾ ಸಮೀಪದ ಸೆಲ್‌‌ಫೋನ್ ಗೋಪುರಕ್ಕೆ ಪರಸ್ಪರ ಸಂಪರ್ಕ ಕಲ್ಪಿಸಲು ಅನುಮತಿಸುತ್ತದೆ; ಇದಲ್ಲದೆ 3ಜಿ ರೇಡಿಯೋ ಸಂವೇದನ ಸುಧಾರಿಸಲು ಹಿಂಬದಿಯಲ್ಲಿ ಕಪ್ಪು ಪ್ಲಾಸ್ಟಿಕ್ ಇತ್ತು ಹೊಂದಿರುತ್ತದೆ.[೩೧]

ತಂತಿ ಮೂಲಕ ಐಪ್ಯಾಡ್ ಸಂಪರ್ಕಕ್ಕಾಗಿ, ಆ‍ಯ್‌ಪಲ್ ಒಡೆತನದ ಡಾಕ್ ಜೋಡಕವನ್ನು ಹೊಂದಿದೆ; ಇದು ದೊಡ್ಡ ಕಂಪ್ಯೂಟರ್ಸ್‌ನ ಈಥರ್ನೆಟ್ ಮತ್ತು ಯುಎಸ್‌ಬಿ ಪೋರ್ಟ್ಸ್ ರಹಿತವಾಗಿರುತ್ತದೆ.[೯]

ಶ್ರವಣಸಾಮರ್ಥ್ಯ

ಐಪ್ಯಾಡ್ 3ಜಿಯ ಹಿಂಭಾಗ

ಐಪ್ಯಾಡ್ ಎರಡು ಆಂತರಿಕ ಸ್ಪೀಕರ್‌ಗಳನ್ನು ಹೂಂದಿದೆ. ಇದು ಯುನಿಟ್ಟಿನ ಕೆಳಭಾಗದ ಬಲಬದಿಯೊಳಗೆ ಮೂರು ಆಡಿಯೋ ಪೋರ್ಟ್ಸ್‌ಗೆ ಮಚ್ಚಿದ ಎರಡು ಸಣ್ಣ ಮಾರ್ಗದ ಮೂಲಕ ಏಕಧ್ವನಿಕವನ್ನು ತಳ್ಳುತ್ತದೆ.[೧೨] ಯುನಿಟ್ಟಿನ ಬಲ ಬದಿಗೆ ವಾಲ್ಯೂಮ್ ಗುಂಡಿ ಇದೆ.

ಉಪಕರಣದ ಎಡಭಾಗದ ಮೇಲಿನ ಮೂಲೆಯಲ್ಲಿರುವ 3.5-ಎಂಎಂ ಟಿಆರ್‌ಎಸ್ ಜೋಡಕ ಆಡಿಯೋ ಔಟ್ ಜಾಕ್ ಮೈಕ್ರೋಫೋನ್‌ ಮತ್ತು ಧ್ವನಿ ನಿಯಂತ್ರಕ ಇದ್ದರೂ/ ಇಲ್ಲದಿದ್ದರೂ ಹೆಡ್‌ಫೋನ್‌ಗೆ ಸ್ಟೀರೀಯೊ ಸೌಂಡ್ ಒದಗಿಸುತ್ತದೆ. ಐಪ್ಯಾಡ್ ಧ್ವನಿ ಮುದ್ರಣಕ್ಕಾಗಿ ಸೂಕ್ಷ್ಮ ಧ್ವನಿವರ್ಧಕ ಹೊಂದಿದೆ.

ಬ್ಲೂಟೂತ್ 2.1 + EDR ಅಂತರ ಸಂಪರ್ಕ ಸಾಧನವು ನಿಸ್ತಂತು ಹೆಡ್‌ಫೋನನ್‌ಗಳು ಮತ್ತು ಕೀಲಿಮಣೆ ಜೊತೆಗೆ ಐಪ್ಯಾಡ್ ಬಳಸಲು ಅವಕಾಶ ನೀಡುತ್ತದೆ.[೩೨] ಆದರೆ, ಪ್ರಸ್ತುತ ಒಎಸ್ ಬ್ಲೂಟೂತ್ ಮೂಲಕ ಕಡತ ವರ್ಗಾವಣೆಗೆ ಬೆಂಬಲ ನೀಡುತ್ತಿಲ್ಲ.[೩೩] ಐಪ್ಯಾಡ್ ಬಾಹ್ಯ ಡಿಸ್‌ಪ್ಲೇ ಅಥವಾ ಟಿವಿಗೆ ಸಂಪರ್ಕಿಸಲು 1024 x 768 ವಿಜಿಎ ವಿಡಿಯೋ ಔಟ್‌ಪುಟ್ ಕೂಡ ಹೊಂದಿದೆ.[೩೪]

ಪವರ್ ಮತ್ತು ಬ್ಯಾಟರಿ

thumb|ಐಪ್ಯಾಡ್ ಕೀಬೋರ್ಡ್ ಡಾಕ್ ಹೊಂದಿರುವ ಐಪ್ಯಾಡ್ಐಪ್ಯಾಡ್ ಆಂತರಿಕವಾಗಿ ಪುನರಾವೇಶ್ಯ ಲಿಥಿಯಂ-ಅಯಾನ್ ಪಾಲಿಮರ್ ಬ್ಯಾಟರಿ(LiPo)ಯನ್ನು ಬಳಸಿಕೊಳ್ಳುತ್ತದೆ . ಶೇ60%ರಷ್ಟು ಬ್ಯಾಟರಿಗಳನ್ನು ತೈವಾನ್‌ನ ಸಿಂಪ್ಲೊ ಟೆಕ್ನಾಲಜಿ ಮತ್ತು ಡೈನಾಪ್ಯಾಕ್ ಇಂಟರ್ನ್ಯಾಷನಲ್ ಟೆಕ್ನಾಲಜಿ ತಯಾರಿಸುತ್ತದೆ.[೩೫] ಯುಎಸ್‌ಬಿ10-watt (0.013 hp) ಪವರ್ ಅಡಾಪ್ಟರ್ ಒಳಗೊಂಡು ಹೆಚ್ಚು ವಿದ್ಯುತ್(2 ಎಂಪರ್ಸ್) ಪೂರಣವಾಗುವಂತೆ ಐಪ್ಯಾಡ್‌ನ್ನು ವಿನ್ಯಾಸಗೊಳಿಸಲಾಗಿದೆ. ಕಂಪ್ಯೂಟರ್‌ನ ಪ್ರಮಾಣಿತ ಯುಎಸ್‌ಬಿ ಪೋರ್ಟ್‌ನಿಂದ ಇದು ವಿದ್ಯುತ್ ಪೂರಣ ಮಾಡಿಕೊಳ್ಳುತ್ತದೆಯಾದರೂ ಅದು 500 ಮಿಲಿ ಎಂಪಿಯರ್ಸ್(ಅರ್ಧ ಎಂಪಿಯರ್ಸ್)ವರೆಗೆ ಮಾತ್ರ ಸಿಮೀತವಾಗಿದೆ. ಇದರ ಪರಿಣಾಮವಾಗಿ ಸಾಮಾನ್ಯ ಕಂಪ್ಯೂಟರ್ ಯುಎಸ್‌ಬಿ ಪೋರ್ಟ್‌ಗೆ ಸಂಪರ್ಕಹೊಂದಿ ಐಪ್ಯಾಡ್ ತಿರುಗಿದ್ದರೆ ತುಂಬಾ ನಿಧಾನವಾಗಿ ವಿದ್ಯುತ್ ಪೂರೈಕೆಯಾಗುತ್ತದೆ ಅಥವಾ ಆಗುವುದೇ ಇಲ್ಲ. ಹೊಸದಾದ ಆ‍ಯ್‌ಪಲ್ ಕಂಪ್ಯೂಟರ್ಸ್‌ನಲ್ಲಿ ಹೆಚ್ಚು ಸಾಮರ್ಥ್ಯದ ಯುಎಸ್‌ಬಿ ಪೋರ್ಟ್‌ನ್ನು ಇಡಲಾಗಿದ್ದು ಪರಿಕರಗಳು ಸಂಪೂರ್ಣ ಪೂರಣ ಸಾಮರ್ಥ್ಯವನ್ನು ಒದಗಿಸುತ್ತದೆ.[೩೬]

ಐಪ್ಯಾಡ್‌ನ ಬ್ಯಾಟರಿ ಸುಮಾರು 10 ತಾಸು ವಿಡಿಯೋ ನೋಡುವಷ್ಟು, 140 ತಾಸು ಆಡಿಯೋ ಕೇಳುವಷ್ಟು, ಅಥವಾ ಒಂದು ತಿಂಗಳ ಕಾಲ ಪೂರಣವನ್ನು ಹೊಂದಿರುತ್ತದೆ ಎಂದು ಆ‍ಯ್‌ಪಲ್ ಹೇಳಿದೆ. ಯಾವುದೇ ಬ್ಯಾಟರಿ ತಂತ್ರಜ್ಞಾನದಂತೆ ಐಪ್ಯಾಡ್‌ನ ಲಿಪೊ ಬ್ಯಾಟರಿ ಕೂಡಾ ತುಂಬಾ ಸಮಯದ ನಂತರ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ ಆದರೆ ಬಳಕೆದಾರ ವಿನಿಮಯ ಸಾಧ್ಯತೆ ಹೊಂದಿರುವಂತೆ ವಿನ್ಯಾಸ ಮಾಡಲಾಗಿಲ್ಲ. ಐಪಾಡ್ ಮತ್ತು ಮೂಲ ಐಫೋನ್‌ಗೆ ಇರುವಂತಹದೆ ಬ್ಯಾಟರಿ-ಬದಲಾವಣೆ ಯೋಜನೆಯನ್ನು ಹೊಂದಿದೆ, ಆ‍ಯ್‌ಪಲ್ ವಿದ್ಯುದಾವೇಶ ಹೊಂದಿರದ ಐಪ್ಯಾಡ್ ಬದಲಿಸಿ ಮತ್ತು $99 ( $6.95 ಸಾಗಾಣಿಕಾ ವೆಚ್ಚ) ಶುಲ್ಕದೊಂದಿಗೆ ನವೀಕರಿಸಿದ ಐಪ್ಯಾಡ್ ನೀಡುತ್ತದೆ.[೩೭][೩೮]

ಶೇಖರಣೆ ಮತ್ತು ಸಿಮ್

ಐಪ್ಯಾಡ್‌ ಮೂರು ಆಂತರಿಕ ಸಂಗ್ರಹ ಗಾತ್ರದೊಂದಿಗೆ ಬಿಡುಗಡೆ ಮಾಡಲಾಯಿತು: ಎ 16, 32, ಅಥವಾ 64 ಜಿಬಿ ಫ್ಲ್ಯಾಶ್ ಡ್ರೈವ್. ಎಲ್ಲಾ ಮಾಹಿತಿಗಳು ಫ್ಲ್ಯಾಶ್ ಡ್ರೈವ್‌ನಲ್ಲಿ ಸಂಗ್ರಹವಾಗುತ್ತವೆ ಮತ್ತು ಸಂಗ್ರಹವನ್ನು ಹೆಚ್ಚಿಸಿಸಲು ಯಾವುದೆ ಆಯ್ಕೆ ಇಲ್ಲ. ಆ‍ಯ್‌ಪಲ್ ಎಸ್‌ಡಿ ಕಾರ್ಡ್ ರೀಡರ್‌ನೊಂದೊಗೆ ಕ್ಯಾಮರಾ ಸಂಪರ್ಕ ಕಿಟ್ ಕೂಡ ಮಾರಾಟ ಮಾಡಿತು, ಆದರೆ ಇದನ್ನು ಪೋಟೋಗಳನ್ನು ಮತ್ತು ವಿಡಿಯೋಗಳನ್ನು ವರ್ಗಾಯಿಸಲು ಮಾತ್ರ ಬಳಸಬಹುದು.[೩೯]

ವೈ-ಫೈ + 3ಜಿ ಮಾದರಿಯು ಮೈಕ್ರೋ-ಸಿಮ್ ಸ್ಲಾಟ್ (ಮಿನಿ-ಸಿಮ್ಅಲ್ಲ) ಹೊಂದಿರುತ್ತದೆ. ಐಫೋನ್‌ಗಿಂತ ಭಿನ್ನವಾದ ಭದ್ರಪಡಿಸಿದ ಕ್ಯಾರಿಯರ್‌ಗಳಲ್ಲಿ ಮಾರಲಾಗುತ್ತದೆ, 3ಜಿ ಐಪ್ಯಾಡ್‌ನ್ನು ಭದ್ರಪಡಿಸದ ಮತ್ತು ಅನುರೂಪವದ ಯಾವುದೇ ಜಿಎಸ್‌ಎಂ ಕ್ಯಾರಿಯರ್‌ಗಳಲ್ಲಿ ಮಾರುತ್ತಾರೆ.[೪೦] ಜಾಪಾನಿನಲ್ಲಿ ಈ ರೀತಿ ಮಾರದೆ ಐಪ್ಯಾಡ್ 3ಜಿಯನ್ನು ಸಾಪ್ಟ್‌ಬ್ಯಾಂಕ್‌ ಭದ್ರಪಡಿಸುತ್ತದೆ.[೪೧] ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಟಿ-ಮೊಬೈಲ್‌ನ ಜಾಲದ ಮೂಲಕ ಮಾಹಿತಿ ಜಾಲ ಪ್ರವೇಶ ಮಾಡುತ್ತದೆ ಆದರೆ ಇಡಿಜಿಇ ಸೆಲ್ಯುಲರ್ ವೇಗ ಕಡಿಮೆ ಇರುವಂತೆ ನಿಯಂತ್ರಿಸಲಾಗಿದೆ ಏಕೆಂದರೆ ಟಿ-ಮೊಬೈಲ್‌ನ 3ಜಿ ಜಾಲವು ಭಿನ್ನವಾದ ಕಂಪನಾಂಕಗಳನ್ನು ಬಳಸಿಕೊಳ್ಳುತ್ತದೆ.[೪೨][೪೩]

ಪರಿಕರಗಳ ಆಯ್ಕೆ

thumb|ಐಪ್ಯಾಡ್ ತನ್ನ ಕೇಸ್‌ನೊಂದಿಗೆಆ‍ಯ್‌ಪಲ್ ಹಲವಾರು ವಿಧವಾದ ಐಪ್ಯಾಡ್ ಪರಿಕರಗಳನ್ನು ಮಾರಾಟ ಮಾಡುತ್ತಿದೆ:[೯]

  • ಐಪ್ಯಾಡ್ ಕೀಬೋರ್ಡ್ ಡಾಕ್ ಹಾರ್ಡ್‌ವೇರ್ ಕೀಬೋರ್ಡ್, 30-ಪಿನ್ ಕನೆಕ್ಟರ್, ಮತ್ತು ಆಡಿಯೋ ಜಾಕ್
  • ಐಪ್ಯಾಡ್ ಕೇಸ್ ಐಪ್ಯಾಡ್‌ನ್ನು ಬೇರೆಬೇರೆ ಸ್ಥಾನಗಳಲ್ಲಿ ಡಲು ಬಳಸಿಕೊಳ್ಳಬಹುದು.
  • ಐಪ್ಯಾಡ್ ಡಾಕ್ 30-ಪಿನ್ ಕನೆಕ್ಟರ್, ಮತ್ತು ಆಡಿಯೋ ಜಾಕ್
  • ಹೊರಗಿನ ಮಾಜಿಟರ್ ಅಥವಾ ಪ್ರೊಜೆಕ್ಟರ್‌ಗಾಗಿ ಐಪ್ಯಾಡ್ ಡಾಕ್ ಕನೆಕ್ಟರ್ ಟು ವಿಜಿಎ ಅಡಾಪ್ಟರ್
  • ಪೋಟೋಗಳನ್ನು ಮತ್ತು ವಿಡಿಯೋಗಳನ್ನು ವರ್ಗಾಯಿಸಲು ಯುಎಸ್‌ಬಿ ಟೈಪ್ ಎ ಕನೆಕ್ಟರ್ ಅಡಾಪ್ಟರ್ ಮತ್ತು ಎಸ್‌ಡಿ ಕಾರ್ಡ್ ರೀಡರ್‌ನೊಂದಿಗೆ ಐಪ್ಯಾಡ್ ಕ್ಯಾಮರಾ ಸಂಪರ್ಕ ಕಿಟ್ .
  • 2 ಎ ಔಟ್‌ಪುಟ್‌ನೊಂದಿಗೆ(10 W) ಐಪ್ಯಾಡ್ 10W ಯುಎಸ್‌ಬಿ ಪವರ್ ಅಡಾಪ್ಟರ್

ತಾಂತ್ರಿಕ ವಿವರಣೆಗಳು

ಜಿಯೋಲೊಕೇಶನ್ವೈಫೈ[೯]/ಆ‍ಯ್‌ಪಲ್ ಸ್ಥಳ ದತ್ತಾಂಶಮೂಲಗಳು[೪೭]ಅಸಿಸ್ಟೆಡ್ ಜಿಪಿಎಸ್, ಆ‍ಯ್‌ಪಲ್ ದತ್ತಾಂಶಮೂಲಗಳು,[೪೭] ಸೆಲ್ಯುಲಾರ್ ನೆಟ್‌ವರ್ಕ್[೯]
ಪಾರಿಸಾರಿಕ ಗ್ರಾಹಕಗಳುಅಕ್ಸೆಲೆರೊಮೀಟರ್, ಆವರಿಸಿದ ಬೆಳಕಿನ ಗ್ರಾಹಕ, ಮ್ಯಾಗ್ನೆಟೋಮೀಟರ್ (ಡಿಜಿಟಲ್ ಕಂಪಾಸ್‌ಗೆ)[೯]
ಕಾರ್ಯಾಚರಣ ವ್ಯವಸ್ಥೆಐಒಎಸ್ 4.2.1 [೮]
ವಿದ್ಯುತ್ಕೋಶ(ವಿದ್ತ್ಯುತ್ ಸಂಚಯನದ ವಸ್ತು)ಅಂತರ್‌ನಿರ್ಮಿತ ಲಿಥಿಯಮ್-ಅಯಾನ್ ಪಾಲಿಮರ್ ಬ್ಯಾಟರಿ; (10 hours video,[೯] 140 hours audio,[೪೮] 1 month standby[೪೯])
Weight1.5 lb (680 g)[೯]1.6 lb (730 g)[೯]
ಆಯಾಮಗಳು9.56 x 7.47 x .5 in (243 × 190 × 13 mm)[೯]
ಯಾಂತ್ರಿಕ ಕೀಲಿಗಳುಹೋಮ್, ಸ್ಲೀಪ್, ವಾಲ್ಯೂಮ್ ರಾಕರ್, ಸ್ಕ್ರೀನ್ ರೊಟೇಶನ್ ಲಾಕ್, (ಐಒಎಸ್ 4.2 ನಲ್ಲಿ ಮ್ಯೂಟ್‌ ಸ್ವಿಚ್)[೯]

ಉತ್ಪಾದನೆ

ಐಪ್ಯಾಡ್ ಫಾಕ್ಸ್‌ಕಾನ್‌ನೊಂದಿಗೆ ಸಂಯೋಜಿಸಿದೆ, ಚೀನಾದ ಷೆನ್‌ಝೆನ್‌‌ನಲ್ಲಿರು ದೊಡ್ಡ ಉತ್ಪಾದನಾ ಸ್ಥಾವರದಲ್ಲಿ ಆ‍ಯ್‌ಪಲ್‌ನ ಐಪಾಡ್, ಐಫೋನ್ ಮತ್ತು ಮ್ಯಾಕ್ ಮಿನಿ ಕೂಡ ಉತ್ಪಾದಿಸುತ್ತದೆ .[೫೦]

ಐಸಪ್ಲಿ ಅಂದಾಜು ಮಾಡಿರುವಂತೆ 16 ಜಿಬಿ ವೈ-ಫೈ ಆವೃತ್ತಿಯ ಐಪ್ಯಾಡ್‌ನ ಉತ್ಪಾದನಾ ವೆಚ್ಚ $259.60 ಇದರಲ್ಲಿ ಸಂಶೋಧನೆ, ಅಭಿವೃದ್ಧಿ,ಪರವಾನಿಗೆ ಮತ್ತು ಪೇಟೆಂಟ್ ವೆಚ್ಚ ಹೊಂದಿಲ್ಲ.[೫೧]ಆ‍ಯ್‌ಪಲ್ ಐಪ್ಯಾಡ್ ಬಿಡಿಭಾಗಗಳನ್ನು ತಯಾರಿಸುವವರನ್ನು ಬಹಿರಂಗ ಪಡಿಸಿಲ್ಲ ಅದರೆ ಉದ್ಯಮದ ಒಳಗಿರುವವರಿಂದ ಟೀಯರ್‌ಡೌನ್ ಪಡೆದ ವರದಿಗಳು ಮತ್ತು ವಿಶ್ಲೇಷಣೆಗಳು ಸೂಚಸುಯಂತೆ ಇದರ ಹಲವಾರು ಘಟಕಗಳು ಮತ್ತು ಪೂರೈಕೆದಾರು:

  • ಆ‍ಯ್‌ಪಲ್ ಎ4 ಈಸ್‌ಒಸಿ: ಸ್ಯಾಮ್‌ಸಂಗ್.[೯][೫೨]
  • ಎನ್‌ಎ‌ಎನ್‌ಡಿ ಫ್ಲ್ಯಾಶ್ ರ್ಯಾಮ್ ಚಿಪ್ಸ್: ತೋಷಿಬಾ; ಸ್ಯಾಮ್‌ಸಂಗ್‌ನ 64 ಜಿಬಿ ಮಾದರಿ ಹೊರತು ಪಡಿಸಿ.[೫೩][೫೪]
  • ಟಚ್-ಸ್ಕ್ರೀನ್ ಚಿಪ್ಸ್: ಬ್ರಾಡ್‌ಕಾಮ್.[೫೩]
  • ಐಪಿಎಸ್ ಡಿಸ್‌ಪ್ಲೇ: ಎಲ್‌ಜಿ ಡಿಸ್‌ಪ್ಲೇ
  • ಟಚ್ ಪ್ಯಾನೆಲ್ಸ್: ವಿಂಟೆಕ್. (ಟಿಪಿಕೆ ಟಚ್ ಸೊಲ್ಯೂಷನ್ಸ್‌ನಲ್ಲಿ ಕೆಲಸ ಪಡೆದ ನಂತರ ಇದರ ಆರ್ಡರ್‌ನ್ನು ಪೂರೈಸಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಮಾರ್ಚ್ ಕೊನೆಯಿಂದ ಏಪ್ರಿಲ್ ಮೊದಲವರೆಗೆ ಐಪ್ಯಾಡ್‌ನ ಬಿಡುಗಡೆ ಮುಂದೂಡಲ್ಪಟ್ಟಿತ್ತು.[೫೫])
  • ಕೇಸ್: ಕ್ಯಾಚರ್ ಟೆಕ್ನಾಲಜೀಸ್.[೫೬]
  • ಎಲ್‌ಸಿಡಿ ಡ್ರೈವರ್ಸ್: ನೊವಾಟೆಕ್ ಮೈಕ್ರೋಎಲೆಕ್ಟ್ರಾನಿಕ್ಸ್.[೫೭]
  • ಬ್ಯಾಟರಿಗಳು: ಶೇ60%ರಷ್ಟು ಬ್ಯಾಟರಿಗಳನ್ನು ತೈವಾನ್‌ನ ಸಿಂಪ್ಲೊ ಟೆಕ್ನಾಲಜಿ ಮತ್ತು 40%ರಷ್ಟು ಡೈನಾಪ್ಯಾಕ್ ಇಂಟರ್ನ್ಯಾಷನಲ್ ತಯಾರಿಸುತ್ತದೆ.[೩೫][೫೮]
  • ಅಕ್ಸೆಲೆರೊಮೀಟರ್: ಎಸ್‌ಟಿಮೈಕ್ರೋಎಲೆಕ್ಟ್ರಾನಿಕ್ಸ್.[೫೯]

ಸಾಫ್ಟ್‌ವೇರ್‌‍

ಐಫೋನ್‌ನಂತೆಯೆ, ಅಭಿವೃದ್ಧಿ ಎನ್ವಿರಾನ್ಮೆಂಟ್ (ಐಫೋನ್ ಎಸ್‌ಡಿಕೆ, ಅಥವಾ ಸಾಫ್ಟ್‌ವೇರ‍್ ಡೆವಲಪ್‌ಮೆಂಟ್‌ ಕಿಟ್‌ ಮುಂದಿನ ಆವೃತ್ತಿ 3.2)ನೊಂದಿಗೆ ಹಂಚಿಕೊಳ್ಳುತ್ತದೆ[೬೦], ಐಪ್ಯಾಡ್ ಕೇವಲ ತನ್ನದೆ ಆದ ಸಾಫ್ಟ್‌ವೇರ್‌ನೊಂದಿಗೆ ಚಾಲನೆಯಾಗುತ್ತದೆ, ಆ‍ಯ್‌ಪಲ್‌ನ ಆ‍ಯ್‌ಪ್ ಸ್ಟೋರ್‌ನಿಂದ ಸಾಫ್ಟ್‌ವೇರ್ ಡೌನ್‌ಲೋಡ್ ಆಗುತ್ತದೆ, ಮತ್ತು ದಾಖಲಾದ ಉಪಕರಣಗಳಿಗೆ ಅಭಿವೃದ್ದಿ ಪರವಾನಿಗೆ ಪಡೆದ ಅಭಿವೃದ್ಧಿಗಾರರು ಸಾಫ್ಟ್‌ವೇರ್ ಬರೆಯುತ್ತಾರೆ.[೬೧] ಐಪ್ಯಾಡ್ ಐಫೋನ್ ಅಪ್ಲಿಕೇಶನ್ಸ್‌ನ ಮೂರನೇಯಷ್ಟರಿಂದ ನಡೆಯುತ್ತದೆ, ಐಫೋನ್ ಗಾತ್ರದಲ್ಲಿ ಡಿಸ್‌ಪ್ಲೇ ಆಗುತ್ತದೆ ಆಥವಾ ಐಪ್ಯಾಡ್‌ನ ಪರದೆಯನ್ನು ತುಂಬುವಷ್ಟು ದೊಡ್ಡದಾಗಿ ಮಾಡಿತ್ತದೆ.[೬೨] ಅಭಿವೃದ್ಧಿಗಾರರು ಆ‍ಯ್‌ಪ್ಸ್ ರಚಿಸಲು ಅಥವಾ ಬದಲಾಯಿಸಲು ಐಪ್ಯಾಡ್‌ನ ಲಕ್ಷಣಗಳ ಅನುಕೂಲತೆ ಪಡೆದುಕೊಳ್ಳಬಹುದು.[೬೩] ಐಪ್ಯಾಡ್‌ನ ಅಪ್ಲಿಕೇಶನ್ಸ್ ಅಭಿವೃದ್ಧಿ ಪಡಿಸಲು ಅಪ್ಲಿಕೇಶನ್ ಅಭಿವೃದ್ಧಿಗಾರರು ಐಫೋನ್ ಎಸ್‌ಡಿಕೆ ಬಳಸಿಕೊಳ್ಳುತ್ತಾರೆ.[೬೪] ಐಪ್ಯಾಡ್ ಅನ್ನು ಒಂದು ಗ್ರಾಹಕೀಕೄತ ಐಪ್ಯಾಡ್-ಮಾತ್ರ v3.2 ಎಂಬ ಐಫೋನ್ ಒಎಸ್ ಆವೃತ್ತಿಯೊಂದಿಗೆ ಸಮುದ್ರ ಮುಖಾಂತರ ಕಳಿಸಲಾಗುತ್ತದೆ. ನವೆಂಬರ್ 2010ರಿಂದ ಐಪ್ಯಾಡ್ ಐಒಎಸ್ 4.2ನೊಂದಿಗೆ ದೊರೆಯುತ್ತದೆ ಎಂದು ಸೆಪ್ಟೆಂಬರ್ 1ರಂದು ಪ್ರಕಟಿಸಲಾಯಿತು.[೬೫] ನವೆಂಬರ್ 22ರಂದು ಆ‍ಯ್‌ಪಲ್ ಐಒಎಸ್ 4.2.1 ನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿತು .[೬೬]

ಅಳವಡಿಕೆಗಳು

ಐಪ್ಯಾಡ್ ಹಲವಾರು ಅಪ್ಲಿಕೇಶನ್ಸ್‌ನೊಂದಿಗೆ ಹೊರಬಂದಿತು: ಸಫಾರಿ, ಮೇಲ್, ಪೋಟೋಸ್, ವಿಡಿಯೋ, ಯುಟ್ಯೂಬ್, ಐಪಾಡ್, ಐಟ್ಯೂನ್ಸ್, ಆ‍ಯ್‌ಪ್ ಸ್ಟೋರ್‌, ಐಬುಕ್, ಮ್ಯಾಪ್ಸ್, ನೋಟ್ಸ್, ಕ್ಯಾಲೆಂಡರ್, ಕಾಂಟ್ಯಾಕ್ಟ್ಸ್, ಮತ್ತು ಸ್ಪಾಟ್‌ಲೈಟ್ ಸರ್ಚ್.[೬೭] ಇವುಗಳಲ್ಲಿ ಐಫೋನ್‍ಗಾಗಿ ಅಭಿವೃದ್ಧಿ ಪಡಿಸಿದ ಅಪ್ಲಿಕೇಶನ್ಸ್‌ಗಳನ್ನೆ ಹಲವನ್ನು ಸುಧಾರಿಸಲಾಗಿದೆ.

ಐಟ್ಯೂನ್ಸ್ ಮ್ಯಾಕ್ ಅಥವಾ ವಿಂಡೋಸ್ ಪಿಸಿಯೊಂದಿಗೆ ಐಪ್ಯಾಡ್ ಹೊಂದಿಸಲಾಗಿದೆ.[೧೯] ಆ‍ಯ್‌ಪಲ್ ತನ್ನ ಐವರ್ಕ್ ಸ್ಯೂಟ್‌ ಅನ್ನು ಮ್ಯಾಕ್‌ನಿಂದ ಐಪ್ಯಾಡ್‌ಗೂ ತಂದಿದ್ದು ಆ‍ಯ್‌ಪ್ ಸ್ಟೋರ್ ನಲ್ಲಿ ಪೇಜಸ್, ನಂಬರ್ಸ್, ಮತ್ತು ಕೀನೋಟ್‌ ಅಪ್ಲಿಕೇಶನ್‌ಗಳ ಚಿಕ್ಕದಾಗಿಸಿದ ಆವೃತ್ತಿಗಳನ್ನು ಮಾರುತ್ತದೆ.[೬೮] ಆದರೆ ಐಪ್ಯಾಡ್‌ನ್ನು ಮೊಬೈಲ್ ಫೋನ್‌ಗೆ ಬದಲಾಗಿ ಬಳಸುವಂತೆ ವಿನ್ಯಾಸ ಮಾಡಲಾಗಿಲ್ಲ, ತಂತಿ ಹೊಂದಿದ ಹೆಡ್‌ಸೆಟ್ ಅಥವಾ ಸ್ಪೀಕರ್‌ ಮತ್ತು ಮೈಕ್ರೋಫೋನ್‌ನೊಂದಿಗೆ ನಿರ್ಮಿಸಲಾದ ಮತ್ತು ಪ್ಲೇಸ್ ಫೋನ್ ಕಾಲ್ಸ್ ವೈ-ಫೈ ಅಥವಾ ವಿಒಐಪಿ ಅಪ್ಲಿಕೇಶನ್ 3ಜಿ ಮೂಲಕ ಗ್ರಾಹಕರು ಇದನ್ನು ಬಳಸಿಕೊಳ್ಳಬಹುದು.[೬೯] ಸೆಪ್ಟೆಂಬರ್ 1, 2010ರ ಹೊತ್ತಿಗೆ ಐಪ್ಯಾಡ್‌ಗೆ ಪೂರಕವಾದ ಸುಮಾರು 25,000 ಅಪ್ಲಿಕೇಷನ್‌ಗಳು ಆ‍ಯ್‌ಪ್ ಸ್ಟೋರ್‌ನಲ್ಲಿ ಲಭ್ಯವಿದ್ದದ್ದು ಕಂಡುಬಂದಿದೆ.[೭೦] ಐಪ್ಯಾಡ್ ಐಒಎಸ್ ಬಳಸುವವರೆಗೆ ಎಕ್ಸ್‌ಕೋಡ್ ಚಾಲಿಸುವುದಿಲ್ಲ .[೭೧]

ಕೆಲವೊಂದು ಅಪ್ಲಿಕೇಶನ್‌ಗಳು ಮೂರನೇಯ ಪ್ರಚಾರಕರಿಗೆ ತಮ್ಮ ಅನುಮತಿ ಇಲ್ಲದೆ ಮಾಹಿತಿಯನ್ನು ರವಾನಿಸುತ್ತವೆ ಎಂದು ಐಫೋನ್ ಮತ್ತು ಐಪ್ಯಾಡ್ ಬಳಕೆದಾರರು ಆರೋಪಿಸಿ ಆ‍ಯ್‌ಪಲ್ ಇಂಕ್ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಡಿಸೆಂಬರ್ 2010ರಲ್ಲಿ ರೈಟರ್ಸ್ ವರದಿ ಮಾಡಿದೆ.[೭೨]

ಡಿಜಿಟಲ್ ಹಕ್ಕುಗಳ ನಿರ್ವಹಣೆ

ಐಪ್ಯಾಡ್ ಕಾರ್ಮಿಕರ ಡಿಆರ್‌ಎಮ್ ಖರೀದಿಸಿದ ಕೆಲವು ಕಾರ್ಯಕ್ರಮಗಳನ್ನು ಉದಾಹರಣೆಗೆ ಟಿವಿ ಶೋ, ಚಲನಚಿತ್ರಗಳು ಮತ್ತು ಕೆಲವು ಅಪ್ಲಿಕೇಷನ್‌ಗಳು ಕೇವಲ ಆ‍ಯ್‌ಪಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾತ್ರ ಬಳಸುವಂತೆ ಮಾಡುವಂತೆ ನಿರ್ಭಂದವನ್ನು ವಿಧಿಸಲು ಪ್ರಯತ್ನಿಸುತ್ತಿದೆ. ಅಲ್ಲದೆ ಐಪ್ಯಾಡ್‌ನ ಮುಂದುವರೆದ ವಿನ್ಯಾಸಕ್ಕಾಗಿ ಅಪ್ಲಿಕೇಷನ್‌ಗಳನ್ನು ತಯಾರಿಸುವವ ಯಾರೇ ಆದರೂ ನಾನ್-ಡಿಸ್‌ಕ್ಲೋಸರ್ ಅಗ್ರಿಮೆಂಟ್‌ ಅನ್ನು ಸಹಿ ಮಾಡಬೇಕಾಗುತ್ತದೆ. ಅಲ್ಲದೆ ಬೆಳವಣಿಗೆ ಸಹಕಾರಿ ಸದಸ್ಯತ್ವ ಶುಲ್ಕವನ್ನು ಪಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ಟೀಕಾಕಾರರು ಆ‍ಯ್‌ಪಲ್ ಈ ಒಪ್ಪಿಗೆ ಪಡೆದುಕೊಳ್ಳುವ ಕೇಂದ್ರೀಕೃತ ಕ್ರಿಯೆಯಿಂದಾಗಿ ಸಾಫ್ಟ್‌ವೇರ್‌ ಬೆಳವಣಿಗೆ ಕ್ರಿಯೆಯ ತಡೆಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಡಿಜಿಟಲ್ ಹಕ್ಕು ಪ್ರಕಾರ ಆ‍ಯ್‌ಪಲ್ ನಿಶ್ಚಿತವಲ್ಲದ ಪ್ರದೇಶದಿಂದ ಅಪ್ಲಿಕೇಷನ್‌ಗಳನ್ನು ತನ್ನ ಇಚ್ಛೆಯಂತೆಯೇ, ಮಿಡಿಯಾ ಅಥವಾ ಡಾಟಾವನ್ನು ಅಳಿಸಲು ಸಾಧ್ಯವಿಲ್ಲ.[೭೩][೭೪][೭೫]

ಡಿಜಿಟಲ್ ಹಕ್ಕು ಹೇಳುವ ಪ್ರಕಾರ, ಉಚಿತ ಸಾಫ್ಟ್‌ವೇರ್ ಪೌಂಡೇಶನ್, ಎಲೆಕ್ಟ್ರಾನಿಕ್ ಫ್ರಂಟೀಯರ್ ಫೌಂಡೇಶನ್ ಮತ್ತು ಕಂಪ್ಯೂಟರ್ ಇಂಜಿನಿಯರ್ ಮತ್ತು ಕ್ರಾಂತಿಕಾರಿ ಬ್ರಿವ್‌ಸ್ಟರ್ ಕಾಹ್ಲೆ ಅವರು ಐಪ್ಯಾಡ್‌ನ ಡಿಜಿಟಲ್ ಹಕ್ಕಿನ ವಿರುದ್ದ ಇರುವ ನಿರ್ಭಂದವನ್ನು ಟೀಕಿಸಿದ್ದಾರೆ. ಗಿಗಾಒಎಮ್‌ನಲ್ಲಿ ವಿಮರ್ಶಕನಾಗಿರುವ ಪೌಲ್ ಸ್ವೀಟಿಂಗ್‌ ನ್ಯಾಷನಲ್ ಪಬ್ಲಿಕ್ ರೆಡಿಯೋ ದಲ್ಲಿ "ಐಪ್ಯಾಡ್‌ ನಿಮ್ಮ ಕೈಯಲ್ಲಿದ್ದರೆ ಅದು ಅಂತರ್ಜಾಲ ವಿರೋದಿ ಉಪಕರಣವನ್ನು ನೀವು ಇಟ್ಟುಕೊಂಡಂತೆಯೇ" ಎಂದು ಹೇಳಿಕೆ ನೀಡಿದ್ದಾರೆ. [...] ಇದು (ಮುಖ್ಯ ಮಾಧ್ಯಮ ಕಂಪೆನಿಗಳು) ಹಳೆಯ ವ್ಯವಹಾರ ಪ್ರಕಾರವನ್ನು ಮರು ಸೃಷ್ಟಿಸಲು ಅವಕಾಶ ನೀಡುತ್ತದೆ. ಇಲ್ಲಿ ಕಂಪೆನಿಗಳು ತಮ್ಮ ಆಯ್ಕೆಗೆ ತಕ್ಕುದಾದ ಅಂಶಗಳನ್ನು ನೀಡುತ್ತವೆಯೇ ಹೊರತು ನಿಮಗೆ ಅಗತ್ಯವಾದ ಅಂಶಗಳನ್ನು ಅವು ನೀಡುವುದಿಲ್ಲ. ಅಥವಾ ಯಾವುದೇ ಸರ್ಚ್ ಇಂಜಿನ್ ನಿಮಗೆ ಅಗತ್ಯವಾದ ಅಂಶಗಳನ್ನು ಹುಡುಕಲು ಸಹಾಯಕವಾಗುವುದಿಲ್ಲ. ಆದರೆ ಸ್ವಿಟಿಂಗ್‌ ಹೇಳುವ ಪ್ರಕಾರ ಆ‍ಯ್‌ಪಲ್‌ನಲ್ಲಿರುವ ನಿರ್ಭಂದಗಳು ಈ ಉತ್ಪನ್ನವನ್ನು ಉಪಯೋಗಿಸುವ ವ್ಯಕ್ತಿಯು ತೀರಾ ಹತ್ತಿರದ ಅನುಭವವನ್ನು ಪಡೆಯುತ್ತಾನೆ. ಏಕೆಂದರೆ "ಆ‍ಯ್‌ಪಲ್ ಇದು ಉಪಯೋಗಿಸುವ ವ್ಯಕ್ತಿಗೆ ನಿರ್ಭಂದಿತ ಹಾಗೂ ರಕ್ಷಣಾತ್ಮಕವಾದ ಉಪಯೋಗವನ್ನು ನೀಡುತ್ತದೆ. ಅಲ್ಲದೆ ಇಲ್ಲಿ ದುರುಪಯೋಗವಾಗದ ಸೇವೆಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ." ಅಂಕಣ ಬರಹಗಾರ ಲೌರಾ ಸಿಡೆಲ್ "ಇಂಟರ್‌ನೆಟ್‌ ಬಳಕೆದಾರರು ಅಲ್ಲಿ ತಮ್ಮ ಉಪಕರಣ ಹಾಗೂ ತಮ್ಮ ಮಾಹಿತಿಯ ರಕ್ಷಣೆಯ, ವೈರಸ್‌ಗಳ, ನಕಲಿ ವಸ್ತುಗಳ ಕುರಿತಾದ ಕಳವಳ ಹೊಂದಿರುವ ಸಮಯದಲ್ಲಿ ರಕ್ಷಣಾತ್ಮಕವಾದ ಆ‍ಯ್‌ಪಲ್ ಅನ್ನು ಹೊಂದುವಲ್ಲಿ ಆಸಕ್ತಿ ತೋರಿಸುವುದು ಸಹಜವಾದುದಾಗಿದೆ.[೭೬]

ನಿರ್ಬಂಧ ಮುರಿಯುವುದು (Jailbreaking)

ಉಳಿದ iOS ಸಾಧನಗಳಂತೆಯೇ ಐಪ್ಯಾಡ್‌ನಲ್ಲಿಯ ನಿರ್ಭಂದವನ್ನು ಮುರಿಯುವ ಮೂಲಕ ಆ‍ಯ್‌ಪಲ್‌ನಿಂದ ಒಪ್ಪಿಗೆ ಪಡೆಯದ ಅಪ್ಲಿಕೇಷನ್‌ಗಳನ್ನೂ ಕೂಡ ಸಾಧನದಲ್ಲಿ ಬಳಸಬಹುದಾಗಿದೆ.[೭೭][೭೮] ಒಮ್ಮೆ ನಿರ್ಬಂಧವನ್ನು ಮುರಿದ ನಂತರದಲ್ಲಿ ಐಪ್ಯಾಡ್ ಬಳಕೆದಾರರು ತಮಗೆ ಅಗತ್ಯವಾದ ಆ‍ಯ್‌ಪ್ ಸ್ಟೋರ್‌ನಲ್ಲಿಲ್ಲದ ಸಾಕಷ್ಟು ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇದನ್ನು ಕಾನೂನು ಬದ್ಧವಲ್ಲದ ಇನ್‌ಸ್ಟಾಲರ್‌ ಆದ ಸೈಡಿಯಾ(Cydia) ಅಥವಾ ಕಾನೂನು ವಿರುದ್ಧವಾದ ನಕಲಿ ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ.[೭೮] ಆ‍ಯ್‌ಪಲ್ ಹೇಳುವ ಪ್ರಕಾರ ನಿರ್ಬಂಧ ಮೀರಿದರೆ ನಮ್ಮ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಫ್ಯಾಕ್ಟರಿ ವಾರಂಟಿಯನ್ನು ಅವು ಕಳೆದುಕೊಳ್ಳಬೇಕಾಗುತ್ತದೆ.[೭೮][೭೯]

ಪುಸ್ತಕಗಳು, ಸುದ್ದಿಗಳು, ಮತ್ತು ಮ್ಯಾಗಜೀನ್ ವಿಷಯಗಳು

ಚಿತ್ರ:IPad eBook reader.jpg
ಐಪ್ಯಾಡ್‌ನಲ್ಲಿ ಪುಸ್ತಕ ಓದುತ್ತಿರುವುದು

ಐಪ್ಯಾಡ್ ಆ‍ಯ್‌ಪ್ ಸ್ಟೋರ್‌ನಿಂದ ಐಚ್ಛಿಕವಾಗಿ ಐಬುಕ್ಸ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಹೊಂದಿದೆ, ಮತ್ತು ಐಬುಕ್ಸ್‌ಸ್ಟೋರ್‌ನಿಂದ ಪುಸ್ತಕಗಳು ಮತ್ತು ಇತರೆ ಇಪಬ್-ಫಾರ್ಮ್ಯಾಟ್ ಡೌನ್‌ಲೋಡ್ ಮಾಡಿಕೊಳ್ಳುವ ಆಯ್ಕೆ ಹೊಂದಿದೆ.[೮೦] ಏಪ್ರಿಲ್ 3, 2010ರ ಐಪ್ಯಾಡ್ ಬಿಡುಗಡೆಗಾಗಿ, ಐಬುಕ್‌ಸ್ಟೋರ್ ಕೇವಲ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾತ್ರ ಲಭ್ಯವಿತ್ತು .[೩][೧೯][೬೭] ಪೆಂಗ್ವಿನ್ ಬುಕ್ಸ್, ಹಾರ್ಪರ್‌ಕಾಲಿನ್ಸ್‌, ಸಿಮನ್ & ಸ್ಚಸ್ಟರ್ ಮತ್ತು ಮ್ಯಾಕ್‌ಮಿಲನ್‌ಗಳಂತ ಹಲವಾರು ಪ್ರಮುಖ ಪ್ರಕಾಶಕರು ಐಪ್ಯಾಡ್‌ಗಾಗಿ ಪುಸ್ತಕ ಪ್ರಕಟಿಸಲು ಒಪ್ಪಿದ್ದರು.[೮೧] ಆದರೂ ಅಮೆಜಾನ್ ಕಿಂಡಲ್ ಮತ್ತು ಬಾರ್ನ್ಸ್& ನೋಬಲ್ ನೂಕ್ ನೇರವಾದ ಪ್ರತಿಸ್ಪರ್ಧಿಗಳಾಗಿದ್ದವು,[೮೨] ಅಮೆಜಾನ್.ಕಾಮ್ ಮತ್ತು ಬಾರ್ನ್ಸ್& ನೋಬಲ್ ಕಿಂಡಲ್e & ನೂಕ್ ಅಪ್ಲಿಕೇಶನ್‌ಗಳು ಐಪ್ಯಾಡ್‌ನಲ್ಲಿ ದೊರೆಯುವಂತೆ ಮಾಡಿದವು.[೮೩][೮೪]

ಫೆಬ್ರವರಿ 2010ರಲ್ಲಿ, ಕೊಂಡೆ ನಾಸ್ಟ್ ಪಬ್ಲಿಕೇಶನ್ಸ್ ಜೂನ್‌ನಿಂದ ಜಿಒ , ವ್ಯಾನಿಟಿ ಫೇರ್ ಮತ್ತು ವೈಯರ್ಡ್ ಮ್ಯಾಗಜೀನ್‌ಗಳಿಗಾಗಿ ಚಂದಾವನ್ನು ಐಪ್ಯಾಡ್‌ಗೆ ಮಾರುವುದಾಗಿ ಹೇಳಿತು..[೮೫]

ಏಪ್ರಿಲ್ 2010ರಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಐಪ್ಯಾಡ್‌ನಲ್ಲಿ ದಿನಪತ್ರಿಕೆಯನ್ನು ಪ್ರಕಟಿಸುವುದಾಗಿ ಪ್ರಕಟಿಸಿತು.[೮೬] ಅಕ್ಟೋಬರ್ 2010ರಿಂದ, ದಿ ನ್ಯೂಯಾರ್ಕ್ ಟೈಮ್ಸ್ ಐಪ್ಯಾಡ್‌ಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಲಭ್ಯವಿರುವಂತೆ ಮತ್ತು ಪ್ರಚಾರ ಬೆಂಬಲ ನೀಡುವುದಾಗಿ ಹೇಳಿತು ಆದರೆ 2011ರಲ್ಲಿ ಚಂದಾ-ಆಧಾರಿತ ಮಾದರಿಬದಲಾಗುತ್ತದೆ.[೮೭] ಪ್ರಮುಖ ಸುದ್ಧಿ ಸಂಸ್ಥೆಗಳಾದ ದಿ ವಾಲ್ ಸ್ಟ್ರೀಟ್ ಜರ್ನಲ್, ಬಿಬಿಸಿ, ಮತ್ತು ರೈಟರ್ಸ್ ಯಶಸ್ಸಿನ ಹಂತಗಳನ್ನ ಬದಲಾಯಿಸಲು ಐಪ್ಯಾಡ್ ಅಪ್ಲಿಕೇಶನ್ಸ್ ಪ್ರಕಟಿಸಿದವು.[೮೮]

ಸೆನ್ಸಾರ್‌ಶಿಪ್

ಐಫೋನ್ ಮತ್ತು ಐಪ್ಯಾಡ್ ಮತ್ತು ಐಪ್ಯಾಡ್ ಅಪ್ಲಿಕೇಶನ್ಸ್‌‍‌ಗಳನ್ನು ಸರಬರಾಜು ಮಾಡುವ ಆ‍ಯ್‌ಪಲ್‌ನ ಆ‍ಯ್‌ಪ್ ಸ್ಟೋರ್, ಅದರಲ್ಲಿರುವ ವಸ್ತುವಿಷಯಗಳ ಮೇಲೆ ಸೆನ್ಸಾರ್‌ಶಿಪ್‌ ಅನ್ನು ಹೊಂದಿರುತ್ತದೆ. ಇದು ಪುಸ್ತಕ ಪ್ರಕಟಣೆದಾರರಿಗೆ ಮತ್ತು ಮ್ಯಾಗಜಿನ್ ಅನ್ನು ಬಳಸುವವರಿಗೆ ಈ ಸಾಧನವನ್ನು ಬಳಸಿಕೊಳ್ಳುವುದು ಕಷ್ಟದಾಯಕವಾಗಿದೆ. ದಿ ಗಾರ್ಡಿಯನ್ ವಿವರಿಸುವ ಪ್ರಕಾರ ಆ‍ಯ್‌ಪಲ್‌ನ ಈ ಕ್ರಮವು ಹಲವು ವರ್ಷಗಳವರೆಗೆ ಪ್ರಸಾರ ವ್ಯವಹಾರದಲ್ಲಿದ್ದ ಡಬ್ಲ್ಯೂ ಎಚ್‌ ಸ್ಮಿತ್‌ ಬ್ರಿಟಿಷ್‌ ಪ್ರಕಟಣೆಗಾರರು ಪ್ರಕಟಿಸುತ್ತಿದ್ದ ವಿಷಯಗಳ ಮೇಲೆ ನಿರ್ಬಂಧ ಹೇರುತ್ತಿದ್ದ ಘಟನೆಯನ್ನು ನೆನಪಿಸುತ್ತದೆ ಎಂದು ಹೇಳುತ್ತದೆ.[೮೯]

ಆ‍ಯ್‌ಪ್ ಸ್ಟೋರ್‌ನಿಂದ ಅಶ್ಲಿಲ ವಿಡಿಯೋವನ್ನು ನಿರ್ಬಂಧಿಸಿದ್ದರಿಂದ ಯು ಪೊರ್ನ್ ಮತ್ತು ಇತರೆ ಕಂಪೆನಿಗಳು ತಮ್ಮ ವಿಡಿಯೋ ಫಾರ್ಮಾಟ್‌ ಅನ್ನು ಫ್ಲಾಶ್‌ನಿಂದ H.264 ಮತ್ತು HTML5ಗೆ ಬದಲಾಯಿಸಿವೆ. ಅದೂ ಐಪ್ಯಾಡ್‌ಗಾಗಿ ಮಾತ್ರ.[೯೦][೯೧] ವ್ಯಾಲಿವಾಗ್‌ ರ್ಯಾನ್ ಟೇಟ್‌ನ ಜೊತೆಗಿನ ಈ ಮೇಲ್ ಸಂಭಾಷಣೆಯಲ್ಲಿ[೯೨] ಸ್ಟೀವ್ ಜಾಬ್ಸ್‌ ಹೇಳಿರುವ ಪ್ರಕಾರ ಐಪ್ಯಾಡ್ ’ಅಶ್ಲೀಲ ಮುಕ್ತ’ ವ್ಯವಸ್ಥೆಯನ್ನು ನೀಡುತ್ತದೆ ಎಂಬ ಹೇಳಿಕೆಯು ಕಲಾವಿದ ಜೊಹಾನ್ಸ್‌ ಪಿ. ಒಸ್ಟೆರ್‌ಹಾಫ್‌ನಿಂದ[೯೩] ಬರ್ಲಿನ್‌ನ ಆಡ್‌ಬಸ್ಟಿಂಗ್‌ನಿಂದ ಮತ್ತು ಸ್ಯಾನ್‌ಫ್ರಾನ್ಸಿಸ್ಕೊದಲ್ಲಿಯ WWDC10ಯ ಸಮಯದಲ್ಲಿ ಅನೇಕ ವಿರೋಧಾತ್ಮಕ ಪ್ರಕ್ರಿಯೆಗಳಿಗೆ ಕಾರಣವಾಯಿತು.[೯೪]

ಬಿಡುಗಡೆ

ಮಾರ್ಚ್ 12, 2010ರಂದು ಅಮೆರಿಕಾ ಸಂಯುಕ್ತ ಸಂಸ್ಥಾನದ ಗ್ರಾಹಕರಿಂದ ಮೊದಲೆ ತಮ್ಮ ಐಪ್ಯಾಡ್‌ಗಾಗಿನ ಕೋರಿಕೆಯನ್ನು ಆ‍ಯ್‌ಪಲ್ ತೆಗೆದುಕೊಳ್ಳಲು ಪ್ರಾರಂಭಿಸಿತು.[೩] ಪ್ರಕಟಣೆಯ ಸಮಯದಲ್ಲಿ ತೋರಿಸಿರುವ ಉಪಕರಣಕ್ಕೂ ಮೊದಲೆ ಕೋರಿಕೆ ಮಾಡಿ ಲಭ್ಯವಿರುವ ಉಪಕರಣದ ನಡುವೆ ಒಂದು ಪ್ರಮುಖ ಬದಲಾವಣೆ ಇದ್ದು, ಪರದೆ ತಿರುಗುವುದನ್ನು ನಿಲ್ಲಿಸಲು ಬದಿಯಲ್ಲಿರುವ ಒತ್ತುಗುಂಡಿಯನ್ನು ಬದಲಾಯಿಸಲಾಗಿದೆ.[೯೫] ಏಪ್ರಿಲ್ 3, 2010ರಿಂದ ಐಪ್ಯಾಡ್‌ನ ವೈ-ಫೈ ಆವೃತ್ತಿಯು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಮಾರಾಟಕ್ಕೆ ಲಭ್ಯವಾಯಿತು.[೩][೯೬] ಏಪ್ರಿಲ್ 30ರಂದು ವೈ-ಫೈ + 3ಜಿ ಆವೃತ್ತಿ ಬಿಡುಗಡೆಯಾಯಿತು.[೩][೪][೪]

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಲಭ್ಯವಿದ್ದ 3ಜಿ ಸೇವೆಯನ್ನು ಎಟಿ&ಟಿಯು ನೀಡುತ್ತಿತ್ತು ಮತ್ತು ಮೊದಲಿಗೆ ಎರಡು ಪ್ರಿಪೇಡ್ ಕಾಂಟ್ರಾಕ್ಟ್-ಫ್ರೀ ಮಾಹಿತಿ ಯೋಜನೆಯನ್ನು ನೀಡುತ್ತಿತ್ತು: ಒಂದು ಮಿತಿ ಹೊಂದಿರದ ಮಾಹಿತಿ ಮತ್ತು ಇನ್ನೊಂದು ಅರ್ಧ ಬೆಲೆಯಲ್ಲಿ ಪ್ರತಿ ತಿಂಗಳಿಗೆ 250 ಎಂಬಿ.[೯೭][೯೮] ಜೂನ್ 7ರಿಂದ ಅನ್ವಯಿಸುವಂತೆ ಹೊಸ ಗ್ರಾಹಕರಿಕೆ ಮಿತಿಹೊಂದಿರದ ಯೋಜನೆಗೆ ಬದಲಾಗಿ 2 ಜಿಬಿ ಯೋಜನೆಯನ್ನು ಸ್ವಲ್ಪ ಕಡಿಮೆ ಬೆಲೆಯಲ್ಲಿ ನೀಡುವುದಾಗು ಎಟಿ&ಟಿ ಜೂನ್ 2, 2010ರಂದು ಪ್ರಕಟಿಸಿತು; ಈಗಾಗಲೇ ಮಿತಿಹೊಂದಿರದ ಯೋಜನೆಯನ್ನು ಹೊಂದಿರುವ ಗ್ರಾಹಕರು ಅದನ್ನೆ ಮುಂದುವರೆಸಬಹುದು ಎಂದು ಹೇಳಿತು.[೯೯] ಈ ಯೊಜನೆಯು ಐಪ್ಯಾಡ್‌ನಲ್ಲಿ ತಾನಾಗಿಯೆ ಕ್ರಿಯಾ ಮುಖವಾವುದು ಮತ್ತು ಯಾವುದೇ ಸಮಯದಲ್ಲಿ ಇದು ರದ್ದಾಗಬಹುದು.[೧೦೦]

ಐಪ್ಯಾಡ್‌ನ್ನು ಮೇ 28ರಂದು ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಸ್ಪೇನ್, ಸ್ವಿಡ್ಜರ್‌ಲ್ಯಾಂಡ್ ಮತ್ತು ಯುನೈಟೆಡ್ ಕಿಂಗ್ಡಮ್ ಬಿಡುಗಡೆ ಮಾಡಲಾಯಿತು.[೫][೧೦೧] ಈ ದೇಶಗಳಲ್ಲಿ ಮೇ 10ರಿಂದ ಅಂತರ್ಜಾಲದ ಮೂಲಕ ಐಪ್ಯಾಡ್‌ನ್ನು ಬುಕ್ ಮಾಡಲು ಪ್ರಾರಂಭಿಸಲಾಯಿತು.[೪] ಆ‍ಯ್‌ಪಲ್ ಐಪ್ಯಾಡ್ ಜುಲೈ 23, 2010ರಿಂದ ಆಸ್ಟ್ರೀಯಾ, ಬೆಲ್ಜಿಯಂ, ಹಾಂಗ್‌ಕಾಂಗ್, ಐರ್ಲ್ಯಾಂಡ್, ಲಕ್ಸೆಮ್ಬರ್ಗ್, ಮೆಕ್ಸಿಕೊ, ನೆದರ್ಲ್ಯಾಂಡ್ಸ್, ನ್ಯೂಜಿಲ್ಯಾಂಡ್ ಅಮ್ತ್ತು ಸಿಂಗಾಪೂರದಲ್ಲಿ ಬಿಡುಗಡೆಯಾಯಿತು.[೧೦೨] ಐಪ್ಯಾಡ್‌ನ ವೈ-ಫೈ ಇತರೆ ಉಪಕರಣಗಳಲ್ಲಿ ಮಧ್ಯೆ ಪ್ರವೇಶಿಸಬಹುದೆಂದು ಇಸ್ರೇಲ್ ಸ್ವಲ್ಪಕಾಲ ಐಪ್ಯಾಡ್ ಆಮದನ್ನು ನಿಶೇಧಿಸಿತ್ತು .[೧೦೩] ಐಪ್ಯಾಡ್ ಸೆಪ್ಟೆಂಬರ್ 17, 2010ರಿಂದ ಚೀನಾದಲ್ಲಿ ಅಧೀಕೃತವಾಗಿ ಬಿಡುಗಡೆಯಾಯಿತು.[೧೦೪] ಐಪ್ಯಾಡ್ ನವೆಂಬರ್ 30, 2010ರಿಂದ ಮಲೇಷಿಯಾದಲ್ಲಿ ಅಧೀಕೃತವಾಗಿ ಬಿಡುಗಡೆಯಾಯಿತು.[೧೦೫]

ಐಪ್ಯಾಡ್ ಲಭ್ಯವಾದ ಮೊದಲ ದಿನ ಪ್ರಾರಂಭದಲ್ಲಿ 300,000 ಮಾರಾಟವಾಗಿ ಪ್ರಸಿದ್ಧಿ ಪಡೆಯಿತು.[೧೦೬] ಮೇ 3, 2010ರಿಂದ ಆ‍ಯ್‌ಪಲ್ ಮಿಲಿಯನ್ ಐಪ್ಯಾಡ್‌ಗಳನ್ನು ಮಾರಾಟ ಮಾಡಿತು ,[೧೦೭] ಇದರ ಅರ್ಧ ಸಮಯದಲ್ಲಿಯೇ ಇಷ್ಟೆ ಸಂಖ್ಯೆಯಲ್ಲಿ ಮೂಲ ಐಫೋನ್‌ಗಳನ್ನು ಆ‍ಯ್‌ಪಲ್ ಮಾರಾಟ ಮಾಡಿತು.[೧೦೮] ಮೇ 31, 2010ರಿಂದ, ಆ‍ಯ್‌ಪಲ್ ಎರಡು ಮಿಲಿಯನ್ ಐಪ್ಯಾಡ್‌‍ಗಳನ್ನು ಮಾರಾಟ ಮಾಡಿತು[೧೦೯] ಮತ್ತು ಜೂನ್ 22, 2010ರಿಂದ 3 ಮಿಲಿಯನ್ ಐಪ್ಯಾಡ್‌‍ಗಳನ್ನು ಮಾರಾಟ ಮಾಡಿತು.[೧೩][೧೧೦] ಜುಲೈ 1 ಮತ್ತು ಸೆಪ್ಟೆಂಬರ್ 30, 2010ರ ಮಧ್ಯದಲ್ಲಿ ಆ‍ಯ್‌ಪಲ್ ಇನ್ನೂ ಹೆಚ್ಚಾಗಿ 4.2 ಮಿಲಿಯನ್ ಐಪ್ಯಾಡ್‌‍ಗಳನ್ನು ಮಾರಾಟ ಮಾಡಿತು. ಆ‍ಯ್‌ಪಲ್ ತ್ರೈಮಾಸಿಕ ಹಣಕಾಸಿನ ಸಮಯದಲ್ಲಿ ಮ್ಯಾಕ್ಸ್‌ಗಿಂತ ಹೆಚ್ಚು ಐಪ್ಯಾಡ್‌ಗಳನ್ನು ಮಾರಾಟ ಮಾಡಿದೆ ಎಂದು ಅಕ್ಟೋಬರ್ 18, 2010ರ ಫೈನಾನ್ಶಿಯಲ್ ಕಾನ್ಫರೆನ್ಸ್ ಕಾಲ್‌ನಲ್ಲಿ ಸ್ಟೀವ್ ಜಾಬ್ಸ್ ಹೇಳಿದರು .[೧೧೧]

ದಕ್ಷಿಣ ಕೊರಿಯಾದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ, ಯು ಇನ್-ಚಾನ್ "ಅನುಮೋದನೆಯಾಗದ" ಐಪ್ಯಾಡ್‌ನ್ನು ಸಾರ್ವಜನಿಕ ಸಮಾರಂಭಗಳ ಬಳಕೆಗಾಗಿ ಟೀಕಿಸಿದರು; ದಕ್ಷಿಣ ಕೊರಿಯಾದಲ್ಲಿ ಅನುಮೋದನೆಯಾಗದ ಇಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದು ಕಾನೂನು ಬಾಹಿರ ಚಟುವಟಿಕೆಯಾಗುತ್ತದೆ.[೧೧೨] ಹೀಗಿದ್ದರೂ, ನವೆಂಬರ್ 30ರಂದು ಕೊರಿಯಾದಲ್ಲಿ ಐಫೋನ್ ಸಾಗಿಸುವ ಕೆಟಿ ಮೂಲಕ ಐಪ್ಯಾಡ್ ಬಿಡುಗಡೆಯಾಯಿತು.

ಐಪ್ಯಾಡ್ ಮೊದಲಿಗೆ ಆ‍ಯ್‌ಪಲ್ ಸ್ಟೋರ್‌ನ ಅಂತರ್ಜಾಲದಲ್ಲಿ ಮತ್ತು ಕಂಪನಿಯ ಚಿಲ್ಲರೆ ಅಂಗಡಿಗಳಲ್ಲಿ ಮಾತ್ರ ಲಭ್ಯವಿತ್ತು. ಈಗ ಐಪ್ಯಾಡ್ ಅಮೆಜಾನ್, ವಾಲ್-ಮಾರ್ಟ್, ಬೆಸ್ಟ್ ಬೈ, ವೆರಿಜಾನ್, ಮತ್ತು ಎಟಿ&ಟಿಯಂತಹ ಚಿಲ್ಲರೆ ಮಾರಾಟಗಾರರಲ್ಲಿಯೂ ಖರೀದಿಗೆ ಲಭ್ಯವಿದೆ.

ಸ್ವೀಕೃತಿ

ಪ್ರಕಟಣೆಗೆ ಪ್ರತಿಕ್ರಿಯೆ

ಐಪ್ಯಾಡ್ ಪ್ರಕಟಣೆಗೆ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ವಾಲ್ಟ್ ಮಾಸ್‌ಬರ್ಗ್ ಬರೆಯುತ್ತಾರೆ, "ಇದು ಸಾಫ್ಟ್‌ವೇರ್ ಮೂರ್ಖತನದ ಕುರಿತಾದುದು", ಸಾಫ್ಟ್‌ವೇರ್ ಮತ್ತು ಅಂತರ ಸಂಪರ್ಕ ಸಾಧನದ ಯಶಸ್ಸಿಗಿಂತ ಹಾರ್ಡ್‌ವೇರ್ ಲಕ್ಷಣಗಳು ಮತ್ತು ಐಪ್ಯಾಡ್‌ನ ವಿನ್ಯಾಸಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಲಾಗಿದೆ, ಇವರ ಮೊದಲ ಅಭಿಪ್ರಾಯ ತುಂಬಾ ಪ್ರಶಂಸನೀಯವಾಗಿತ್ತು. ಮಾಸ್‌ಬರ್ಗ್ ಉಪಕರಣದ ಸಾಮರ್ಥ್ಯಕ್ಕಾಗಿ ಬೆಲೆಯು ತುಂಬಾ "ಜಾಸ್ತಿಯಲ್ಲ" ಮತ್ತು ಹತ್ತು ತಾಸು ಬಳಸಬಹುದಾದ ಬ್ಯಾಟರಿ ಬಾಳಿಕೆಯನ್ನು ಹೊಗಳಿದರು.[೧೧೩] ಇತರರಾದ ಪಿಸಿ ಅಡ್ವೈಸರ್ ಮತ್ತು ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್‌ ನಲ್ಲಿ ಬರೆದಿರುವ ಪ್ರಕಾರ, ಐಪ್ಯಾಡ್ ಇದು ಮೈಕ್ರೋಸಾಫ್ಟ್ ವಿಂಡೋಸ್‌ ಅನ್ನು ಬಳಸುವ ನೆಟ್‌ಬುಕ್ ಜೊತೆಗೆ ಸ್ಪರ್ಧೆಯನ್ನು ಒಡ್ಡುವಂತದ್ದಾಗಿದೆ.[೧೧೪][೧೧೫] ಮೂಲ ವಿನ್ಯಾಸವು $499 ಬೆಲೆನ್ನು ಹೊಂದಿತ್ತು. ಇದು ಬಿಡುಗಡೆಯ ಮುನ್ನ ಅಂದುಕೊಂಡದ್ದಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿತ್ತು. ವಾಲ್‌ಸ್ಟ್ರೀಟ್‌ ವಿಮರ್ಶನಕಾರರು ಮತ್ತು ಆ‍ಯ್‌ಪಲ್‌ ಜೊತೆಗಿನ ಸ್ಪರ್ಧೆಯಲ್ಲಿದ್ದ ಕಂಪೆನಿಗಳು ಇದಕ್ಕಿಂತ ಹೆಚ್ಚಿನ ಬೆಲೆಯನ್ನು ಅಂದಾಜು ಮಾಡಿದ್ದರು.[೧೧೬][೧೧೭][೧೧೮]

ಬಾರ್ನ್ಸ್& ನೋಬಲ್ ನೂಕ್ ಮತ್ತು ಅಮೆಜಾನ್ ಕಿಂಡಲ್ ಮುಂತಾದವು 70 ಶೇಕಡಾ ಆದಾಯವನ್ನು ಪ್ರಕಟಣೆದಾರರಿಗೆ ಕೊಡುತ್ತಿರುವ ಈ ಸಂದರ್ಭದಲ್ಲಿ ಆ‍ಯ್‌ಪಲ್ ಆ‍ಯ್‌ಪ್ ಸ್ಟೋರ್‌ನಲ್ಲಿಯೂ ಕೂಡ ಇವರು ಇದೇ ಮಟ್ಟದ ಆದಾಯವನ್ನು ನಿರೀಕ್ಷೆ ಮಾಡಿದ್ದರು. ಈ ಕಾರಣದಿಂದಾಗಿ ಐಪ್ಯಾಡ್ ಇ-ಬುಕ್‌ಗಳ ಜೊತೆಗೆ ಸ್ಪರ್ಧೆಗೆ ನಿಲ್ಲುವ ಸಾಧ್ಯತೆ ಇದೆ ಎಂದು ಯೈರ್ ರೈನರ್ ಹೇಳಿದ್ದಾರೆ.[೮೨] ಗಮನಿಸಬೇಕಾದ ವಿಷಯವೆಂದರೆ, ಐಪ್ಯಾಡ್ ಬಿಡುಗಡೆಯಾಗುವ ಒಂದು ವಾರ ಇರುವ ಸಮಯದಲ್ಲಿ, ಅಮೆಜಾನ್ ಕಿಂಡಲ್ ಸ್ಟೋರ್ ಪ್ರಕಟಣೆದಾರರ ಆದಾಯದ ಭಾಗವನ್ನು ಶೇಕಡಾ 70ಕ್ಕೆ ಏರಿಸಿತು.[೧೧೯]

ಬಿಡುಗಡೆಯಾದ ಕೆಲವು ದಿನಗಳ ನಂತರ, ಸ್ಟಿಫನ್ ಫ್ರೈ, ಹೇಳಿಕೆ ನೀಡುವ ಮೂಲಕ ಜನರು ಐಪ್ಯಾಡ್‌ ಅನ್ನು ಉತ್ತಮ ಕಾರ್ಯವಿಧಾನ ಹಾಗೂ ಅದರ ಕಾರ್ಯವಿಧಾನದ ಕಾರಣದಿಂದಾಗಿ ಜನರು ಬಳಕೆ ಮಾಡಲು ಪ್ರಾರಂಭಿಸಿದರು ಮತ್ತು ಮೊದ ಮೊದಲು ಕಂಡುಬಂದಿದ್ದ ಟೀಕೆಗಳನ್ನು ಮೀರಿ ಬೆಳೆದಿದ್ದು ಕಂಡುಬಂದಿತು ಎಂದು ಹೇಳಿಕೆ ನೀಡಿದರು. ಅಷ್ಟೇ ಅಲ್ಲದೆ ಫ್ರೈ, ಐಪ್ಯಾಡ್‌ನ ವೇಗ ಮತ್ತು ಅದರ ಪ್ರತಿಕ್ರಿಯಾ ವಿಧಾನ, ಅದರಲ್ಲೇ ನಿರ್ಮಿತವಾಗಿರುವ ಅಂತರ ಸಂಪರ್ಕ್‌ ಸಾಧನ ಮತ್ತು ಡಿಸ್‌ಪ್ಲೆಯಲ್ಲಿನ ನಿಖರತೆ ಮತ್ತು ಸ್ಪಷ್ಟತೆಯನ್ನು ಕೂಡಾ ಕೊಂಡಾಡಿದ್ದರು.[೧೨೦] ಬಿಡುಗಡೆಯ ಸಮಯದಲ್ಲಿ ಸ್ಟಿವ್ ಜಾಬ್ಸ್‌ ಜೊತೆಗೆ ಮಾಧ್ಯಮ ಪ್ರತಿನಿಧಿಗಳೂ ಕೂಡಾ ಈ ಸಾಧನವು ಸ್ಮಾರ್ಟ್‌ಫೋನ್ ಮತ್ತು ಲ್ಯಾಪ್‌ಟಾಪ್‍ನ ನಡುವಿನ ಒಂದು ಹೊಸ ಸಾಧನವನ್ನು ಹುಟ್ಟು ಹಾಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದರು.[೧೨೧][೧೨೨]

ವಿಮರ್ಶೆಗಳು

ಐಪ್ಯಾಡ್ ಕುರಿತಾಗಿನ ವಿಮರ್ಶೆಗಳು ಅನುಕೂಲಕರವಾಗಿತ್ತು. ದಿ ವಾಲ್ ಸ್ಟ್ರೀಟ್ ಜರ್ನಲ್‌ ನ ವಾಲ್ಟ್ ಮಾಸ್‌ಬರ್ಗ್ "ಅಂದವಾದ" ಲ್ಯಾಪ್‌ಟಾಪ್ ಕೊಲೆಗಾರ ಎಂದು ಬಣ್ಣಿಸಿದ್ದಾರೆ.[೧೨೩] ದಿ ನ್ಯೂಯಾರ್ಕ್ ಟೈಮ್ಸ್‌ ನ ಡೇವಿಡ್ ಪೋಜ್ ಒಂದು ತಂತ್ರಜ್ಞಾನ ಮನೋಭಾವದ ಜನರಿಗೆ,ಮತ್ತೊಂದು ತಂತ್ರಜ್ಞಾನ ಮನೋಭಾವನೆ ಹೊಂದಿರದ ಜನರಿಗಾಗಿ ಎರಡು ವಿಮರ್ಶೆಗಳನ್ನು ಬರೆದಿದ್ದಾರೆ. ಮೊದಲಿನ ಭಾಗದಲ್ಲಿ ಐಪ್ಯಾಡ್‌ನ ಬೆಲೆಗಿಂತ ಲ್ಯಾಪ್‌ಟಾಪ್ ಹೆಚ್ಚು ವೈಶಿಷ್ಟ್ಯಗಳೊಂದಿಗೆ ಕಡಿಮೆ ಬೆಲೆ ಹೊಂದಿಯುತ್ತದೆ ಎಂದು ಬರೆದಿದ್ದಾರೆ. ಹೀಗಿದ್ದರೂ, ನಂತರದ ಖರೀದಿಗಾರರಿಗಾಗಿನ ಅವಲೋಕನದಲ್ಲಿ ತಮ್ಮ ಓದಿಗರು ಈ ಪರಿಕಲ್ಪನೆಯ ಉಪಕರಣವನ್ನು ಮೆಚ್ಚಿದರೆ ಮತ್ತು ಇದರ ಬಳಕೆ ಉದ್ದೇಶವನ್ನು ಅರ್ಥಮಾಡಿಕೊಂಡರೆ ಮಾತ್ರ ಉಪಕರಣದ ಬಳಕೆಯನ್ನ ಆನಂದಿಸುತ್ತಾರೆ ಎಂದು ಬರೆದಿದ್ದಾರೆ.[೧೨೪] ಪಿಸಿ ಮ್ಯಾಗಜೀನ್‌ನ ಟಿಮ್‌ ಗಿಡಿಯೋನ್, "ನಿಮ್ಮಲ್ಲಿಯೇ ಗೆಲ್ಲುವವನಿದ್ದಾನೆ" ಅದು "ಈಗ ಬಿಡುಗಡೆಯಾದ ಟ್ಯಾಬ್ಲೆಟ್ ಲ್ಯಾಂಡ್‌ಸ್ಕೇಪ್‌ ಅನ್ನು ವಿನ್ಯಾಸಗೊಳಿಸುವಲ್ಲಿ ಸಹಕಾರಿಯಾಗಿದೆ" ಎಂದು ಹೇಳಿಕೆ ನೀಡಿದರು.[೧೨೫] ಟೆಕ್‌ಕ್ರಂಚ್‌ನ ಮೈಕೆಲ್ ಆ‍ಯ್‌ರಿಂಗ್ಟನ್ "ಐಪ್ಯಾಡ್ ತನ್ನ ಆಶಾಪೂರ್ವಕ ನಿರೀಕ್ಷೆಗಳನ್ನು ಮೀರಿಸಿದೆ ಎಂದು ಹೇಳಿದ್ದಾರೆ. ಇದೊಂದು ಹೊಸ ವಿಧಾನದ ಉಪಕರಣವಾಗಿದೆ. ಆದರೆ ಹಲವಾರು ಜನರಿಗಾಗಿ ಲ್ಯಾಪ್‌ಟಾಪ್‌ಗಳನ್ನು ಬದಲಾಯಿಸಬೇಕಾಗುತ್ತದೆ."[೧೨೨]

ಪಿಸಿ ವರ್ಲ್ಡ್ , ಐಪ್ಯಾಡ್‌ನಲ್ಲಿಯ ಗಾತ್ರ ಹಾಗೂ ಅದರ ಮುದ್ರಣ ಸಾಮರ್ಥ್ಯವನ್ನು[೧೨೬] ವಿಮರ್ಶಿಸಿದರು. ಅಲ್ಲದೆ ಆರ್ಸ್ ಟೆಕ್ನಿಕಾ ಹೇಳಿದ ಪ್ರಕಾರ ಕಂಪ್ಯೂಟರ್ ಇಲ್ಲದೆ ಫೈಲ್‌ ಶೇರ್‌ ಮಾಡುವ ಸಾಮರ್ಥ್ಯವು ಐಪ್ಯಾಡ್‌ನಲ್ಲಿಯ ಒಂದು ಉತ್ತಮವಾದ ಅವಕಾಶವಾಗಿದೆ.[೧೨೭]

ಅಂತರಾಷ್ಟ್ರೀಯ ಬಿಡುಗಡೆಗೆ ಪ್ರತಿಕ್ರಿಯೆ

ಮೇ 28, 2010ರಂದು ಐಪ್ಯಾಡ್ ಆಸ್ಟ್ರೇಲಿಯಾ, ಕೆನಡಾ, ಮತ್ತು ಜಪಾನ್, ಹಾಗೆಯೇ ಯೂರೋಪಿನ ಹಲವಾರು ದೊಡ್ಡ ದೇಶಗಳಲ್ಲಿ ಬಿಡುಗಡೆಯಾಯಿತು. ಈ ಬಿಡುಗಡೆಗೆ ಮಾಧ್ಯಮದಿಂದ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ಉಪಕರಣದ ಅಭಿಮಾನಿಗಳ ಸಕಾರಾತ್ಮಕ ಅಭಿಪ್ರಾಯವನ್ನು ಜೊತೆಗೆ ಈ ದೇಶಗಳಲ್ಲಿ ಮೊದಲನೇಯ ದಿನದ ಖರೀದಿಗಾಗಿಯೇ ಜನರು ಸರತಿಯ ಸಾಲಲ್ಲಿ ನಿಂತಿರುವುದನ್ನು ಮಾಧ್ಯಮಗಳು ಬರೆದವು.[೧೨೮][೧೨೯] ಮಾಧ್ಯಮ ಕೂಡ ಅಪ್ಲಿಕೇಶನ್ಸ್‌ಗಳ ಗುಣಮಟ್ಟ ಹಾಗೆಯೇ ಸ್ಟೋರ್‌ಸ್ಟೋರ್ ಮತ್ತು ಇತರೆ ಮೀಡಿಯಾ ಅಪ್ಲಿಕೇಶನ್ಸ್ ಹೊಗಳಿತು.[೧೩೦][೧೩೧] ಇದಕ್ಕೆ ವ್ಯತಿರಿಕ್ತವಾಗಿ ಐಪ್ಯಾಡ್ ಕ್ಲೋಸ್ಡ್ ಸಿಸ್ಟಮ್ ಮತ್ತು ಐಪ್ಯಾಡ್ ಆಂಡ್ರಾಯ್ಡ್ (ಆಪರೇಟಿಂಗ್ ಸಿಸ್ಟಂ) ಆ‍ಯ್‌ನ್‌ರಾಯಿಡ್ ಆಧಾರಿತ ಟ್ಯಾಬ್ಲೆಟ್‌ಗಳಿಂದ ಸ್ಪರ್ಧೆಯನ್ನು ಎದುರಿಸಬೇಕೆಂದು ವಿಮರ್ಶೆ ಮಾಡಲಾಯಿತು. ಇದರ ಪುಸ್ತಕದ ವಿಭಾಗಕ್ಕೆ ಸಂಬಂಧಿಸಿದಂತೆ ದಿ ಇಂಡೆಪೆಂಡೆಂಟ್ ಪತ್ರಿಕೆಯು ಐಪ್ಯಾಡ್‌ ತುಂಬಾ ಬೆಳ್ಳಗಿನ ಬೆಳಕಿನಲ್ಲಿ ಕಾಗದದಂತೆ ಓದಲಾಗುವುದಿಲ್ಲ ಎಂದು ಟೀಕಿಸಿತು. ಆದರೂ, ದೊಡ್ಡ ಪ್ರಮಾಣದಲ್ಲಿ ಹಲವಾರು ಪುಸ್ತಕಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದೆಂದು ಶ್ಲಾಘಿಸಿತು.[೧೩೦]

ಉಪೇಕ್ಷಿತ ಲಕ್ಷಣಗಳು

ಸಿಎನ್‌ಇಟಿ ಮತ್ತು ಗಿಜ್ಮೊಡೊ ಲಕ್ಷಣಗಳನ್ನು ಗ್ರಾಹಕರು ನಿರೀಕ್ಷಿಸಿದ್ದರು ಆದರೆ ಬಿಡುಗಡೆಯ ಸಮಯದಲ್ಲಿ ಇದು ತಪ್ಪಿಹೋಗಿತ್ತು, ವಿಡಿಯೋ ಚಾ‍ಟ್‌ಗಾಗಿ ಕ್ಯಾಮೆರಾ, ಉದ್ದವಾದ ಮತ್ತು ಕಿರಿದಾದ "ಅಗಲವಾದ ಪರದೆ, ಅಗಲವಾದ ಪರದೆ ಮೂಲಕ ಚಲನಚಿತ್ರವನ್ನು ವೀಕ್ಷಿಸಲು ಅನುಕೂಲಕರವಾದ ಆಸ್ಪೆಕ್ಟ್ ರೇಡಿಯೋ, ಮಲ್ಟಿಟಾಸ್ಕ್‌ಗಾಗಿ ಸಾಮರ್ಥ್ಯ (ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಅಪ್ಲಿಕೇಶನ್‌ಗಳ ಚಾಲನೆ), ಯುಎಸ್‌ಬಿ ಪೋರ್ಟ್, ಎಚ್‌ಡಿಎಂಐ ಔಟ್‌ಪುಟ್, ಐಪಾಡ್ ಡಾಕ್ ಕನೆಕ್ಟರ್‌ನಿಂದ ಫೆಕ್ಸಿಬಲ್ ವೈಯರ್ಡ್-ಡಾಟಾ ಪೋರ್ಟ್.[೬೧][೧೩೨] ಏಪ್ರಿಲ್ 8, 2010ರಂದು ಆ‍ಯ್‌ಪಲ್‌ನ ಐಒಎಸ್ 4 ಅನಾವರಣ ಮಾಡಿ ಪ್ರದರ್ಶಿಸಲಾಯಿತು, ಐಪ್ಯಾಡ್‌ಗಾಗಿ ಬಹುಕಾರ್ಯ ಮತ್ತು ಐಪ್ಯಾಡ್‌ನ ಐಒಎಸ್ 4.2 ಜೊತೆಗೆ ಬಹುಕಾರ್ಯವನ್ನು ಸೇರಿಸಿ ನವೆಂಬರ್ 22, 2010ರಂದು ಬಿಡುಗಡೆ ಮಾಡಲಾಯಿತು.[೧೩೩][೧೩೪] ಆ‍ಯ್‌ಪ್ ಸ್ಟೋರ್‌ನಿಂದ ಮಾತ್ರ ಸಾಫ್ಟ್‌ವೇರ್ ಇನ್‌ಸ್ಟಾಲ್‌ಗೆ ಅಧಿಕೃತವಾಗಿ ಬೆಂಬಲ ನೀಡುತ್ತದೆ ಎಂದು ಸೀಟಲ್ ಪೋಸ್ಟ್- ಇಂಟೆಲಿಜೆನ್ಸರ್ ಮತ್ತು ಗಿಜ್ಮೊಡೊ ಬರೆದವು.[೬೧][೧೩೫] ಮೈಕ್ರೋಸಾಪ್ಟ್‌ನ ಜೂನ್‌ನಂತಹ ಉಪಕರಣವು ಹಲವಾರು ವರ್ಷಗಳಿಂದ ಒಯ್ಯುಬಹುದಾಗಿದೆ ಆದರೆ ಐಪ್ಯಾಡ್ ನಿಸ್ತಂತು ಹೊಂದಾಣಿಕೆಯ ಕೊರತೆಯನ್ನು ಹೊಂದಿದೆ ಎಂದು ಸಿಎನ್‌ಇಟಿ ಟೀಕಿಸಿದೆ. ಐಟ್ಯೂನ್ಸ್ ಅಪ್ಲಿಕೇಶನ್ ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿಕೊಳ್ಳಲು ಬರುವಂತೆ ವಿನ್ಯಾಸ ಮಾಡಲಾಗಿದೆ.[೧೩೬]

ಸಿಎನ್‌ಎನ್ ಮತ್ತು ವೈಯರ್ಡ್ ನ್ಯೂಸ್ ಆ‍ಯ್‌ಪಲ್ ತನ್ನ ಸಾಧನದಲ್ಲಿ ಸೇರಿಸದ ಕೆಲವು ಅಪ್ಲಿಕೇಷನ್‌ಗಳ ಕುರಿತು ಸಮರ್ಥನೆಯನ್ನು ಮಾಡಿಕೊಂಡಿತು.ಎಡೋಬ್ ಫ್ಲ್ಯಾಶ್‌ಗೆ ನೀಡಿದ ಬೆಂಬಲ ಹಾಗೂ ಯು ಟ್ಯೂಬ್ ಮತ್ತು ವಿಮಿಯೋ ಇದು ವಿಡಿಯೋ ಸ್ಟ್ರೀಮಿಂಗ್‌ಗಾಗಿ H.264 ಬದಲಾವಣೆ ಹೊಂದಿದ್ದನ್ನು ಗುರುತಿಸಿತು. ಅದಲ್ಲದೆ ಅವರು ’ಬಹುಕಾರ್ಯ ನಿರ್ವಹಣೆಯ ಸಾಮರ್ಥ್ಯ ಇಲ್ಲದಿರುವುದು <nowiki>ಐ ಪ್ಯಾಡ್‌</nowiki>ನ ಉದ್ದೇಶಿತ ಬಳಕೆದಾರರಿಗೆ ಯಾವುದೇ ಸಮಸ್ಯೆ ಆಗಲಾರದು. ಹಲವು ಅಪ್ಲಿಕೇಶನ್‌ಗಳನ್ನು ತೆಗೆದಿರುವುದು ಐ ಪ್ಯಾಡ್‌ನ ಹತ್ತು ಗಂಟೆಗಳ ಬ್ಯಾಟರಿ ಸಾಮರ್ಥ್ಯಕ್ಕೆ ಕಾರಣವಾಯಿತು. ಆಸ್ಪೆಕ್ಟ್ ರೇಡಿಯೋ: " ಪೊರ್ಟ್ರೇಟ್‌ ಮೋಡ್‌ನಲ್ಲಿ 16:9 ರೇಶಿಯೋ ವಿಚಿತ್ರವಾಗಿ ಎತ್ತರವಾಗಿದೆ ಮತ್ತು ಅತ್ಯಂತ ತೆಳುವಾಗಿದೆ." ಯುಎಸ್‌ಬಿ ಫೋರ್ಟ್ ಕೊರತೆಯಿಂದಲೂ: "ಐಪ್ಯಾಡ್ ಸುಲಭವಾಗು ಬಳಕೆಗೆ ಬರುತ್ತದೆ, ಎಲ್ಲ ಕಂಪ್ಯೂಟರ್ ಉದ್ದೇಶದಂತೆ ಅಲ್ಲ. ಪ್ರಿಂಟರ್, ಸ್ಕ್ಯಾನರ್, ಮತ್ತು ಇತರೆ ಯಾವುದೇ ಸಂಬಂಧಿಸಿದ ವಿಷಯಗಳಿಗಾಗಿ ಯುಎಸ್‌ಬಿ ಪೋರ್ಟ್ ಡ್ರೈವರ್ಸ್ ಇನ್‌ಸ್ಟಾಲ್ ಹೊಂದಿರಬೇಕು.[೧೩೭][೧೩೮]

ಐ ಪ್ಯಾಡ್‌ ಅನ್ನು ವೈಯುಕ್ತಿಕ ಕಂಪ್ಯೂಟರ್ ಎಂದು ಒಪ್ಪಿಕೊಳ್ಳುವಲ್ಲಿ ಭಿನ್ನಾಭಿಪ್ರಾಯಗಳಿದೆ. ಫೊರೆಸ್ಟರ್ ರಿಸರ್ಚ್ ‌ ವಾದ ಮಾಡುವ ಪ್ರಕಾರ ಐಪ್ಯಾಡ್‌ನಲ್ಲಿಯ ಎಲ್ಲ ನಿರ್ಬಂಧಗಳ ಹೊರತಾಗಿಯೂ ಇದನ್ನು ತಒಂದು ವೈಯುಕ್ತಿಕ ಕಂಪ್ಯೂಟರ್ ಎಂದು ಪರಿಗಣಿಸಬಹುದು ಎಂದು ಹೇಳುತ್ತದೆ.[೧೩೯] ಇದಕ್ಕೆ ವಿರುದ್ಧವಾಗಿ ಪಿಸಿ ವರ್ಲ್ಡ್ ‌‍, ಆ‍ಯ್‌ಪಲ್ ಹೇಳಿಕೆ ನೀಡಿದ ಪ್ರಕಾರ ಐಪ್ಯಾಡ್ ಇದು ವೈಯುಕ್ತಿಕ ಕಂಪ್ಯೂಟರ್ ಅಲ್ಲ ಕಾರಣ ಈ ಸಾಧನದಲ್ಲಿ ಹಲವಾರು ಅಪ್ಲಿಕೇಶನ್‌ಗಳನ್ನು ತೆಗದುಹಾಕಿರುವುದರಿಂದ ಇದನ್ನು ಹಾಗೆಂದು ಹೇಳಲಾಗದು ಎಂದು ಹೇಳಿಕೆ ನೀಡಿತು.[೧೪೦]

ಉತ್ಪನ್ನದ ಹೆಸರು

ಈಗಿರುವ ಉತ್ಪನ್ನಗಳು ಕೂಡ ಐಫೋನ್, ಐಪ್ಯಾಡ್‌ನ ಹೆಸರಿನೊಂದಿಗೆ ಹಂಚಿಕೊಂಡಿವೆ. ಹೆಚ್ಚು ಪ್ರಚಾರ ಪಡೆದ ಫಿಜಿಸ್ತು ಐಪ್ಯಾಡ್,ಒಂದು ಮೊಬೈಲ್‌ ಆಗಿದ್ದು ಹಲವಾರು ವಿಧದ ಕಾರ್ಯಹೊಂದಿರುವ ಉಪಕರಣವಾಗಿದೆ, ಗುಮಾಸ್ತರಿಗೆ ಬೆಲೆಗಳನ್ನು ಪರಿಶೀಲಿಸಲು, ಸ್ಟಾಕ್ ಇನ್‌ವೆಂಟರಿ, ಮತ್ತು ಕ್ಲೋಸ್ ಸೇಲ್ಸ್‌ಗೆ ನೆರವಾಗಲು ಚಿಲ್ಲರೆ ಮಾರಾಟಗಾರಗಿಗೆ ಮಾರಾಟ ಮಾಡಲಾಗಿದೆ. 2002ರಲ್ಲಿ ಜಪಾನಿನ ಫಿಜಿಸ್ತುಕಂಪನಿ ಐಪ್ಯಾಡ್ ಪರಿಚಯಿಸಿತು, ಮತ್ತು ಮುಂದಿನ ವರ್ಷದಲ್ಲಿ ಟ್ರೇ‌ಡ್‌ಮಾರ್ಕ್‌ಗಾಗಿ ಅರ್ಜಿ ಹಾಕಿತು, ಆದರೆ ಮಾಗ್‌-ಟೆಕ್ ಈಗಾಗಲೇ ಟ್ರೇ‌ಡ್‌ಮಾರ್ಕ್ ಹೊಂದಿರುವ ಫರ್ಮ್ ಸ್ಥಾಪಿಸಿತ್ತು. ಎಪ್ರಿಲ್ 2009ರಲ್ಲಿ ಫಿಜಿಸ್ತು ಟ್ರೇ‌ಡ್‌ಮಾರ್ಕ್ ಅರ್ಜಿಯು "ಕೈಬಿಟ್ಟ" ಪಟ್ಟಿಯಲ್ಲಿ ಸೇರಿತ್ತು ಮತ್ತು ಮಾರ್ಕ್‌ನ ಒಡೆತನ ಮಾತ್ರ ಸ್ಪಷ್ಟವಾಗಿರಲಿಲ್ಲ. ಈ ವಿಷಯಕ್ಕಾಗಿ ಯಾವುದಾರರೂ ಕ್ರಮ ತೆಗೆದುಕೊಳ್ಳಬಹುದೆ ಎಂಬುದನ್ನು ವಿಚಾರಿಸಲು ಫಿಜಿಸ್ತು ಅಟಾರ್ನಿಗಳನ್ನು ಸಂಪರ್ಕಿಸಿತು.[೧೪೧][೧೪೨] ಮಾರ್ಚ್ 17, 2010ರಂದು ಫಿಜಿಸ್ತು ಐಪ್ಯಾಡ್ ಯು.ಎಸ್. ಟ್ರೇ‌ಡ್‌ಮಾರ್ಕ್ ಆ‍ಯ್‌ಪಲ್‌ಗೆ ವರ್ಗಾವಣೆಯಾಯಿತು.[೧೪೩]

ಐಪ್ಯಾಡ್‌ನ ಪ್ರಕಟಣೆ ಹೊರಬರುತ್ತಿದ್ದ ಮರುದಿನವೆ ಕೆಲವು ಮಾಧ್ಯಮಗಳು ಮತ್ತು ಅಂತರ್ಜಾಲ ವ್ಯಾಖ್ಯಾನಕಾರರು "ಐಪ್ಯಾಡ್" ಹೆಸರನ್ನು ವಿಮರ್ಶೆಮಾಡಿದರು, ಇದು "ಪ್ಯಾಡ್" ಶಬ್ಧಕ್ಕೆ ಸಮನಾದುದು ಹಾಗೂ ಸ್ಯಾನಿಟರಿ ಪ್ಯಾಡ್‌‌ಗೆ ಇದು ಸಾಮಾನ್ಯ ಬಳಕೆಯಲ್ಲಿರುವ ಶಬ್ಧ ಎಂದು ಹೇಳಿದರು.[೧೪೪][೧೪೫][೧೪೬][೧೪೭] ಬಿಡುಗಡೆ ಮಾಡುವ ಪ್ರಕಟಣೆ ಬಹಿರಂಗವಾಗುತ್ತಿದ್ದಂತೆ, ಹ್ಯಾಶ್‌ಟ್ಯಾಗ್ "ಐಟ್ಯಾಂಪೂನ್" ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಎರಡನೆಯ ಧೋರಣೆ ವಿಷಯವಾಗಯಿತು.[೧೪೬][೧೪೮]

ಮನ್ನಣೆ

ಟೈಮ್ ಮ್ಯಾಗಜೀನ್ 2010ರ 50 ಅತ್ಯುತ್ಕೃಷ್ಟ ಸಂಶೋಧನೆಗಳಲ್ಲಿ ಐಪ್ಯಾಡ್‌ನ್ನು ಆಯ್ಕೆ ಮಾಡಿದೆ[೧೪೯], ಪಾಪ್ಯುಲರ್ ಸೈನ್ಸ್ ಅಗ್ರ ಅನುಬಂಧವಾಗಿ ಆರಿಸಿದೆ[೧೫೦], ಇದರ ಬೆನ್ನಲ್ಲೆ ಗ್ರೋಯಾಸಿಸ್ ವಾಟರ್‌ಬಾಕ್ಸ್‌ನ "ಬೆಸ್ಟ್ ಆಫ್ ವಾಟ್ಸ್ ನ್ಯೂ 2010"ದಲ್ಲಿ ವಿಜೇತವಾಗಿದೆ.[೧೫೧]

ಬಳಕೆ

ವ್ಯವಹಾರ

ಐಪ್ಯಾಡ್‌ನ್ನು ಗ್ರಾಹಕರು ಹೆಚ್ಚಾಗಿ ಬಳಸತೊಡಗಿದಂತೆ ವ್ಯಾಪಾರಿ ಬಳಕೆದಾರರು ಬಳಸತೊಡಗಿದರು. ಕೆಲವೊಂದು ಕಂಪನಿಗಳು ಐಪ್ಯಾಡ್ ಅಳವಡಿಸಿಕೊಂಡು ತಮ್ಮ ವ್ಯಾಪಾರಿ ಕಛೇರಿಗಳಲ್ಲಿನ ಉದ್ಯೋಗಿಗಳಿಗೆ ಐಪ್ಯಾಡ್ ವಿತರಿಸಿತು ಅಥವಾ ದೊರೆಯುವಂತೆ ಮಾಡಿತು. ಕೆಲಸದ ಸ್ಥಳಗಳಲ್ಲಿ ಬಳಸಿಕೊಂಡಿರುವ ಉದಾಹರಣೆಗೆಳು; ವಕೀಲರು ಕಕ್ಷಿಗಾರರಿಗೆ ಪ್ರತಿಸ್ಪಂದಿಸಲು, ವೈಧ್ಯಕೀಯ ವೃತ್ತಿಪರರು ರೋಗಿಗಳನ್ನು ಪರೀಕ್ಷಿಸುವಾಗ ಆರೋಗ್ಯದ ದಾಖಲೆಗಳನ್ನು ಸಂಗ್ರಹಿಸಲು, ಮತ್ತು ವ್ಯವಸ್ಥಾಪರು ತಮ್ಮ ಉದ್ಯೋಗಿಗಳ ವಿನಂತಿಗಳನ್ನು ಅನುಮೋದಿಸಲು ಬಳಸಿಕೊಳ್ಳುತ್ತಿದ್ದಾರೆ.[೧೫೨][೧೫೩][೧೫೪]

ಕಛೇರಿಗಳಲ್ಲಿ ಉದ್ಯೋಗಿಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು, ಪೇಪರ್‌ವರ್ಕ್ ಕಡಿಮೆ ಮಾಡಲು, ಮತ್ತು ಆದಾಯ ಹೆಚ್ಚಿಸಿಕೊಳ್ಳಲು ಐಪ್ಯಾಡ್ ಬಳಕೆಯಾಗುತ್ತಿದೆ ಎಂಬುದನ್ನು ಪ್ರೋಸ್ಟ್& ಸಲ್ಲಿವಾನ್ ಸಮೀಕ್ಷೆ ತಿಳಿಸುತ್ತದೆ. ಉತ್ತರ ಅಮೆರಿಕಾ ಮೊಬೈಲ್ ಆಫೀಸ್ ಅಪ್ಲಿಕೇಶನ್ ಮಾರುಕಟ್ಟೆಯಲ್ಲಿ 2010ರ 1.76 ಬಿಲಿಯನ್‌ನಿಂದ 2015ರಲ್ಲಿ $6.85 ಬಿಲಿಯನ್ ತಲುಪುತ್ತದೆ ಎಂದು ಸಂಶೋಧಾನಾ ಫರ್ಮ್ ಅಂದಾಜಿಸಿದೆ.[೧೫೫]

ಶಿಕ್ಷಣ

ಐಪ್ಯಾಡ್ ತರಗತಿಯಲ್ಲಿ ಹಲವಾರು ಉದ್ದೇಶಗಳಿಗೆ ಬಳಕೆಯಾಗುತ್ತಿದೆ,[೧೫೬] ಮತ್ತು ಮನೆಶಿಕ್ಷಣಕ್ಕೆ ಮೌಲ್ಯಯುತವಾದ ಸಾಧನವಾಗಿದೆ ಎಂಬ ಪ್ರಶಂಸೆಯನ್ನು ಪಡೆದುಕೊಂಡಿದೆ.[೧೫೭][೧೫೮] ಐಪ್ಯಾಡ್ ಬಿಡುಗಡೆಯಾದ ಕೂಡಲೇ ವರದಿಯಾದ ವಿಷಯವೆಂದರೆ 81% ಸಾಧನವು ಮಕ್ಕಳಿಗಾಗಿ ಖರೀದಿಸಲ್ಪಟ್ಟಿದ್ದವು.[೧೫೯] ಸ್ವಲೀನತೆ ಹೊಂದಿರುವ ಮಕ್ಕಳಿಗೆ ಐಪ್ಯಾಡ್ ಕ್ರಾಂತಿಕಾರಕ ಸಾಧನವಾಗಿದ್ದು ತುಂಬಾ ಸುಲಭವಾಗಿ ಸಂಪರ್ಕಿಸಲು ಮತ್ತು ಸಮಾಜದ ಜೊತೆಗೆ ಬೆರೆಯಲು ಸಹಾಯ ಮಾಡುತ್ತದೆ.[೧೬೦]

ಹಲವಾರು ಕಾಲೇಜುಗಳು ಕೂಡ ಐಪ್ಯಾಡ್ ಬಳಸುತ್ತಿವೆ. ಒಹಾಯೊ, ಯಂಗ್ಸ್‌ಟೌನ್‌ನಲ್ಲಿರುವ ಯಂಗ್ಸ್‌ಟೌನ್ ಸ್ಟೇಟ್ ಯುನಿವರ್ಸಿಟಿ ಫಾಲ್ 2010ರ ಸೆಮಿಸ್ಟರ್‌ನಿಂದ ಮೂರು ತಾಸುಗಳ ಬಾಡಿಗೆಯಾಧಾರಿತ ಐಪ್ಯಾಡ್ ನೀಡಲು ಪ್ರಾರಂಭಿಸಿತು, ಇದಲ್ಲದೆ ಬಾಡಿಗೆಯಾಧರಿಸಿ ಅಮೆಜಾನ್ ಕಿಂಡಲ್, ಲ್ಯಾಪ್‌ಟಾಪ್ ಕಂಪ್ಯೂಟರ್ಸ್, ಮತ್ತು ಫ್ಲಿಫ್ ಕ್ಯಾಮರಾಸ್ ಕೂಡ ನೀಡುತ್ತಿದೆ.[೧೬೧]

ಕ್ರೀಡೆಗಳು

2010ರ ಮೇಜರ್ ಲೀಗ್ ಬೇಸ್‌ಬಾಲ್ ವಿರಾಮದ ಋತುವಿನಲ್ಲಿ, ಕಾರ್ಲ್ ಕ್ರಾಫೋರ್ಡ್ ಎಂಬ ಆಟಗಾರನಲ್ಲಿ ಆಸಕ್ತಿ ಹೊಂದಿದ್ದ ಮುಂದಿನ ತಂಡಗಳು ಐಪ್ಯಾಡ್ ಕಳುಹಿಸಿತು. ಈ ಐಪ್ಯಾಡ್‌ಗಳಲ್ಲಿ ಮೊದಲೇ ವಿಡಿಯೋ ಕ್ಲಿಪ್‌ಗಳು, ಅವರ ಆಟಗಾರರ ಪ್ರಮುಖಾಂಶಗಳು, ಮತ್ತು ಆತನು ತಂಡದೊಳಗಿದ್ದರೆ ತಮಗೆ ಹೇಗೆ ಲಾಭ ಎಂಬುದನ್ನು ಲೋಡ್ ಮಾಡಲಾಗಿತ್ತು.[೧೬೨]

ಸಂಗೀತ

ಐಪ್ಯಾಡ್ ಹಲವಾರು ಸಂಗೀತ ಅಪ್ಲಿಕೇಶನ್ಸ್‌ಗಳಿಗೆ ಬೆಂಬಲ ನೀಡುವ ಸಾಮರ್ಥ್ಯ ಹೊಂದಿದೆ ಮತ್ತು ಐಟ್ಯೂನ್ಸ್ ಸಂಗೀತ ಸಾಧನ ಸಾಫ್ಟ್‌ವೇರ್ ಕೂಡ ಹೊಂದಿದೆ. ಧ್ವನಿ ಮಾದರಿಗಳು,ಗಿಟಾರ್ ಮತ್ತು ಧ್ವನಿ ಪ್ರಭಾವ ಪ್ರೊಸೆಸರ್‌ಗಳು, ಧ್ವನಿ ಹೊಂದಿಸಲು ಅನುಕ್ರಮವನ್ನು ನಿರ್ಧಸುವ ಸಾಧನ ಮತ್ತು ಮಾದರಿ ಲೂಪ್‌ಗಳು, ಕಾರ್ಯತಃ ಹೊಂದಿಕೆಗಳು ಮತ್ತು ಡ್ರಮ್ ಮಷಿನ್‌ಗಳು, ದೇರ್‌ಮಿನ್-ಸ್ಟೈಲ್ ಮತ್ತು ಸ್ಪರ್ಷಕ್ಕೆ ಪ್ರತಿಸ್ಪಂದಿಸುವ ಇತರೆ ಉಪಕರಣಗಳು, ಡ್ರಮ್ ಪ್ಯಾಡ್ಸ್ ಮತ್ತು ಇನ್ನೂ ಹಲವಾರು ಅಂಶಗಳನ್ನು ಹೊಂದಿದೆ. ಡಮೊನ್ ಅಲ್ಬರ್ನ್ ತನ್ನ ತಂಡದ ಜೊತೆಗೆ ಪ್ರವಾಸದಲ್ಲಿದ್ದಾಗ ಐಪ್ಯಾಡ್ ಬಳಕೆದಾರರಿಗೆ ಪ್ರತ್ಯೇಕವಾಗಿ, ಗೋಲಿಲ್ಲಾಜ್‌ರ 2010ರ ಆಲ್ಬಮ್, ದ ಫಾಲ್‌ ನ್ನು ರಚಿಸಿದರು.[೧೬೩]

ಮುಂಬರುವ ಐಪ್ಯಾಡ್

ಮುಂಬರುವ ದಿನಗಳಲ್ಲಿ 7-ಇಂಚ್ ಸ್ಕ್ರೀನ್ ಹೊಂದಿರುವ ಐಪ್ಯಾಡ್ ಬರುವ ಸಾಧ್ಯತೆಯನ್ನು ಎಂಬುದನ್ನು ಸ್ಟೀವ್ ಜಾಬ್ಸ್ ಅಕ್ಟೋಬರ್ 2010ರಲ್ಲಿ ತಳ್ಳಿಹಾಕಿ "ಸಾಫ್ಟ್‌ವೇರ್ ಸ್ಪಷ್ಟಪಡಿಸಲು ಇದು ತುಂಬಾ ಸಣ್ಣದು" ಎಂದು ಹೇಳಿದರು.[೧೬೪] ಟ್ಯಾಬ್ಲೆಟ್ ಸ್ಕ್ರೀನ್‌ಗೆ ಕಡಿಮೆ ಎಂದರು 10 ಇಂಚ್ ಇರಬೇಕು ಎಂದು ಹೇಳಿದರು.[೧೬೪]

ಇಲೆಕ್ಟ್ರಾನಿಕ್ಸ್ ಪರಿಕರಗಳ ಉತ್ಪಾದಕ ಡೆಕ್ಸಿಮ್, 2011ರ ಗ್ರಾಹಕ್ ಇಲೆಕ್ಟ್ರಾನಿಕ್ ಪ್ರದರ್ಶನದಲ್ಲಿ ರಾಷ್ಟ್ರೀಯ ಐಪ್ಯಾಡ್ 2ಗಾಗಿ ಕೇಸ್ ವಿನ್ಯಾಸಗೊಳಿಸಿ ಪ್ರದರ್ಶಿಸಿತು.[೧೬೫]

ಇವನ್ನೂ ಗಮನಿಸಿ

Page ಮಾಡ್ಯೂಲ್:Portal/styles.css has no content.

  • ಟ್ಯಾಬ್ಲೆಟ್ ಪಿಸಿ – ಸಾಮಾನ್ಯವಾದ ಟ್ಯಾಬ್ಲೆಟ್ ಪಿಸಿಗಳು.
  • ಇ-ಬುಕ್ ರೀಡರ್ಸ್‌ಗೆ ಹೋಲಿಕೆ
  • ಒಯ್ಯಬಹುದಾದ ಸಂಗೀತ ಸಾಧನಗಳ ಹೋಲಿಕೆ
  • ಟ್ಯಾಬ್ಲೆಟ್ ಪಿಸಿಗಳಿಗೆ ಹೋಲಿಕೆ
  • ಐಒಎಸ್ ಉಪಕರಣಗಳ ಪಟ್ಟಿ
  • ಫ್ಲೆಕ್ಸಿಬಲ್ ಇಲೆಕ್ಟ್ರಾನಿಕ್ಸ್
  • ಪೆನ್ ಕಂಪ್ಯೂಟಿಂಗ್

ಉಲ್ಲೇಖಗಳು

ಬಾಹ್ಯ ಕೊಂಡಿಗಳು