ಕೋನೇರು ಹಂಪಿ

ಕೋನೇರು ಹಂಪಿ ಒಬ್ಬ ಚದುರಂಗ ಆಟಗಾರ್ತಿ. ಅವರು ೩೧ ಮಾರ್ಚ್ ೧೯೮೭ ರಂದು ಆಂಧ್ರ ಪ್ರದೇಶದ ಗುಡಿವಾಡದಲ್ಲಿ ಜನಿಸಿದರು.[೧] . ಆಕೆ ಅಕ್ಟೋಬರ್ ೨೦೦೭ರಲ್ಲಿ ಭಾರತದ ಚೆಸ್ ಗ್ರಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದರು. ಆಕೆ ೨೬೦೦ ಎಲೊ ರ್‍ಯಾಂಕಿಂಗ್ ಪಡೆದು ಜುಡಿತ್ ಪೊಲ್ಗಾರ್ ನಂತರ ಇಷ್ಟು ಅಂಕ ಪಡೆದ ದ್ವಿತೀಯ ಮಹಿಳಾ ಚೆಸ್ ಆಟಗಾರ್ತಿ ಆದರು.[೨][೩]

ಕೋನೇರು ಹಂಪಿ

ಕೋನೇರು ಹಂಪಿಯವರು ೨೦೦೨ರಲ್ಲಿ ಅತಿ ಕಿರಿಯ ವಯಸ್ಸಿನ ಮಹಿಳಾ ಗ್ರಾಂಡ್‍ಮಾಸ್ಟರ್ (ಏಕೈಕ ಮಹಿಳಳಾ ಗ್ರಾಂಡ್‍ಮಾಸ್ಟರ್) ಆದರು. ಆಗ ಆಕೆಯ ವಯಸ್ಸು ೧೫ವರ್ಷ, ೧ ತಿಂಗಳು, ೨೭ ದಿನಗಳಾಗಿತ್ತು,  ಇದಕ್ಕೆ ಮೊದಲು ಈ ದಾಖಲೆ ಜುಡಿತ್ ಪೊಲ್ಗಾರ್ ಅವರ ಹೆಸರಿನಲ್ಲಿತ್ತು.[೪]. ಹೌವ್ ಯಿಫಾನ್ ಅವರು ಈ ದಾಖಲೆಯನ್ನು ೨೦೦೮ರಲ್ಲಿ ಮುರಿದರು.

ವೈಯಕ್ತಿಕ ಜೀವನ

ಅವರ ಪೋಷಕರು ಕೋನೇರು ಅಶೋಕ್ ಮತ್ತು ಶ್ರೀಮತಿ ಲತಾ ಅಶೋಕ್. ಚಾಂಪಿಯನ್ ಎಂಬ ಅರ್ಥ ಬರುವಂತೆ ಆಕೆಗೆ ಹಂಪಿ ಎಂದು ಹೆಸರಿಡಲಾಯಿತು. ಇದು ರಶಿಯನ್ ಹೆಸರಿಗೆ ನಿಕಟವಾಗಿ ಹೋಲುವ ಹೆಸರು.[೫][೬]

  • ಆಗಸ್ಟ್ ೨೦೧೪ರಲ್ಲಿ ಅವರ ಮದುವೆಯಾಯಿತು. ಪತಿಯ ಹೆಸರು ದಾಸರಿ ಅನ್ವೆಶ್.[೭] ಪ್ರಸ್ತುತ ONGC ಲಿಮಿಟೆಡ್ನಲ್ಲಿ ಕೆಲಸ ಮಾಡುತ್ತಿದ್ದಾರೆ.[೮]

ಸಾಧನೆಗಳು

ಕೋನೇರು ಹಂಪಿಯವರು ಭಾಗವಹಿಸಿದ FIDE ಮಹಿಳಾ ಗ್ರಾಂಡ್ ಫ್ರೀ ೨೦೦೯-೨೦೧೧ ರಲ್ಲಿ  ಅಂತಿಮವಾಗಿ ಎರಡನೇ ಸ್ಥಾನವನ್ನು ಪಡೆದು ವಿಶ್ವ ಮಹಿಳಾ ಚೆಸ್ ಚಾಂಪಿಯನ್ಷಿಪ್ ೨೦೧೧ರಲ್ಲಿ ಆಡುವ ಅರ್ಹತೆ ಪಡೆದರು.[೯][೧೦] ಅದರಲ್ಲಿ ಹೌವ್ ಯಿಫಾನ್ ಜಯ ಸಾಧಿಸಿದರು. ಹಂಪಿಯವರು ದ್ವಿತೀಯ ಸ್ಥಾನ ಪಡೆದರು.

ಅವರು ಚೀನಾದ ಚೆಂಗ್ಡುವಿನಲ್ಲಿ ೨೦೧೫ರಲ್ಲಿ ನಡೆದ ವಿಶ್ವ ಮಹಿಳಾ ಚೆಸ್ ಚಾಂಪಿಯನ್‍ಶಿಪ್‍ನಲ್ಲಿ ವೈಯಕ್ತಿಕ ಕಂಚಿನ ಪದಕ ಪಡೆದರು. ಅದರಲ್ಲಿ ಭಾರತೀಯ ತಂಡ ನಾಲ್ಕನೇ ಸ್ಥಾನ ಪಡೆಯಿತು.[೧೧]

ಪ್ರಶಸ್ತಿ ಮತ್ತು ಸಾಧನೆ

ಕ್ರಮ ಸಂಖ್ಯೆಪ್ರಶಸ್ತಿಯ ಹೆಸರುಪಡೆದ ವರ್ಷನಡೆದ ಸ್ಥಳ
ವಿಶ್ವ ಯುವ ಚೆಸ್ ಚಾಂಪಿಯನ್ಷಿಪ್(ಅಂಡರ್-10 ಬಾಲಕಿಯರ ವಿಭಾಗ)೧೯೯೭
ವಿಶ್ವ ಯುವ ಚೆಸ್ ಚಾಂಪಿಯನ್ಷಿಪ್ (ಅಂಡರ್-12 ಹುಡುಗಿಯರು)೧೯೯೮
ವಿಶ್ವ ಯುವ ಚೆಸ್ ಚಾಂಪಿಯನ್ಷಿಪ್(ಅಂಡರ್-14 ಹುಡುಗಿಯರು)೨೦೦೦
ಏಷ್ಯನ್ ಯೂತ್ ಚೆಸ್ ಚಾಂಪಿಯನ್ಷಿಪ್[೧೨]೧೯೯೯ಅಹಮದಾಬಾದ್
ವಿಶ್ವ ಜೂನಿಯರ್ ಗರ್ಲ್ಸ್ ಚಾಂಪಿಯನ್ಷಿಪ್[೧೩]೨೦೦೧
ವಿಶ್ವ ಜೂನಿಯರ್ ಚಾಂಪಿಯನ್ಷಿಪ್[೧೪]೨೦೦೪
10ನೇ ಏಷ್ಯನ್ ಮಹಿಳಾ ವೈಯಕ್ತಿಕ ಚಾಂಪಿಯನ್ಷಿಪ್ ಮತ್ತು ಭಾರತೀಯ ಮಹಿಳೆಯರ ಚಾಂಪಿಯನ್ಶಿಪ್[೧೫][೧೬]೨೦೦೦, ೨೦೦೨, ೨೦೦೩
ಬ್ರಿಟಿಷ್ ಮಹಿಳೆಯರ ಚಾಂಪಿಯನ್ಶಿಪ್೨೦೦, ೨೦೦೨, ೨೦೦೩
ಉತ್ತರ ಯೂರಲ್ ಕಪ್ನಲ್ಲಿ ಗೆಲುವು[೧೭]೨೦೦೫
೧೦ಮುಂಬೈ ಮೇಯರ್ ಕಪ್[೧೮]೨೦೧೦ಮುಂಬೈ
೧೧ಪದ್ಮಶ್ರೀಪ್ರಶಸ್ತಿ[೧೯].೨೦೧೩
೧೨ಅರ್ಜುನ ಪ್ರಶಸ್ತಿ೨೦೦೭

ರಾಯಭಾರಿ

  • ಸ್ವಚ್ಛ ಭಾರತ ಆಂದೋಲನದ ಬ್ರ್ಯಾಂಡ್‌ ರಾಯಭಾರಿ

ಉಲ್ಲೇಖ

ಬಾಹ್ಯ ಕೊಂಡಿ