ಥಾಮಸ್ ಆಲ್ವ ಎಡಿಸನ್

ಥಾಮಸ್ ಆಲ್ವ ಎಡಿಸನ್ (ಫೆಬ್ರುವರಿ ೧೧, ೧೮೪೭ - ಅಕ್ಟೋಬರ್ ೧೮, ೧೯೩೧) ಅಮೇರಿಕ ದೇಶದ ಸಂಶೋಧಕ.

ಥಾಮಸ್ ಆಲ್ವ ಎಡಿಸನ್
ಥಾಮಸ್ ಎಡಿಸನ್ ಜೊತೆ ಒಂದು ದಿನ (1922)

ಸಂಶೋಧನೆಗಳು

  • ಗ್ರಾಮಫೋನ್, ವಿದ್ಯುದ್ವೀಪ ,ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಬ್ಬಿಣ ಅದುರು ಬೇರ್ಪಡಿಸುವ ಕಾಂತೀಯ ಸಲಕರಣೆ, ಮೊದಲಾದ ಅಮೂಲ್ಯ ವಸ್ತುಗಳನ್ನು ಜಗತ್ತಿಗೆ ನೀಡಿದ ಮಹಾವಿಜ್ಞಾನಿ,
  • ಥಾಮಸ್ ಆಲ್ವ ಎಡಿಸನ್, ಈತ ಫೆಬ್ರುವರಿ ೧೧. ೧೮೪೭ರಂದು ಸಂ. ರಾ. ಅಮೆರಿಕದ ಮಿಲಾನ್ ಎಂಬ ಪಟ್ಟಣದಲ್ಲಿ ಜನಿಸಿದರು. ತಂದೆಯ ಹೆಸರು ಸಾಮ್ಯುಯೆಲ್ ಎಡಿಸನ್, ತಾಯಿ ನ್ಯಾನ್ಸಿ ಚಿಕ್ಕವನಿದ್ದಾಗ ಥಾಮಸ್ ಆಲ್ವ ಎಡಿಸನ್ ತುಂಬ "ಕಿಡಿಗೇಡಿ" ಆಗಿದ್ದ. ಅದಕ್ಕಾಗಿ ಎಲ್ಲರಿಂದಲೂ ಚೆನ್ನಾಗಿ ಬೈಸಿಕೊಳ್ಳುತ್ತಿದ್ದ, ಒಮ್ಮೊಮ್ಮೆ ಏಟೂ ತಿನ್ನುತ್ತಿದ್ದ. ಆದರೆ ಈತನ ಅಂದಿನ "ಕಿಡಿಗೇಡಿತನ"ದ ಹಿಂದೆ ಎಷ್ಟು ಅದ್ಭುತವಾದ ಪ್ರತಿಭಾಶಕ್ತಿ ರೂಪಗೊಳ್ಳುತ್ತಲಿತ್ತು ಎಂಬುದು ಬಹುಶಃ ಯಾರಿಗೂ ತಿಳಿದಿರಲಿಲ್ಲ. ಮೊಟ್ಟೆಗಳಿಗೆ ಕಾವು ಕೊಡಲು ಕೋಳಿಯೇ ಆಗ ಬೇಕೆ! ಮನುಷ್ಯರೂ ಕಾವು ಕೊಡಬಹುದಲ್ಲ ಎಂದು ಭಾವಿಸಿದ ಹುಡುಗಮೊಟ್ಟೆಗಳ ಮೇಲೆ ಕುಳಿತು ಕಾವು ಕೊಟ್ಟು ಮರಿಗಳು ಹೊರಬರುವುದನ್ನು ಎದುರು ನೋಡುತ್ತ ಕುಳಿತಿದ್ದ. ಮಿಚಿಗನ್ ಪ್ರಾಂತ್ಯದ ಪೋರ್ಟ್ ಹೂರಾನ್ ನಲ್ಲಿ ಶಾಲೆಯಲ್ಲಿ ಶಿಕ್ಷಕರಿಗೆ ಕಿರಿಕಿರಿಯಾಗುವಂಥ ಪ್ರಶ್ನೆಗಳನ್ನು ಕೇಳುವುದು, ಪಾಠದ ಕಡೆಗೆ ಲಕ್ಷ್ಯ ಕೊಡದೆಎ ಸ್ಲೇಟಿನ ಮೇಲೆ ಏನಾದರೂ ಗೀಚುವುದು ಮಾಡುತ್ತಿದ್ದ. ಆತನ ಶಿಕ್ಷಕಿ ಚೆನ್ನಾಗಿ ಬೈದ ಮೇಲೆ ಶಾಲೆಯನ್ನೇ ಬಿಟ್ಟ. ತಾಯಿಯೇ ಆತನಿಗೆ ಮನೆಯಲ್ಲಿ ಪಾಠ ಹೇಳಬೇಕಾಯಿತು. ಬಲೂನುಗಳಿಗೆ ಅನಿಲ ತುಂಬಿದಾಗ ಅವು ಹಾರುತ್ತವೆ, ಹಾಗೆಯೇ ಅನಿಲ ತುಂಬಿದ ಮನುಷ್ಯ ಹಾರಬಹುದೆ? ಎಡಿಸನ್ ಆ ಪ್ರಯೋಗವನ್ನೂ ಮಾಡಿದ! ಅನಿಲ ಹೊರಡಿಸುವ ಸೈಡ್ ಲಿಟ್ಸ್ ಪುಡಿಯನ್ನು ತಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನೊಬ್ಬನಿಗೆ ತಿನ್ನಿಸಿದ. ಆತ ಹಾರುವ ಬದಲು ಹೊಟ್ಟೆ ನೋವಾಗಿ ನೆಲದ ಮೇಲೆ ಬಿದ್ದ. ಥಾಮಸ್ ಎಡಿಸನ್ಗೆ ಪುನಃ ಏಟು.
  • ಇನ್ನೂ ಹದಿನೈದು ವರ್ಷದವನಿದ್ದಾಗಲೇ ಎಡಿಸನ್ "ದಿ ವೀಕ್ಲಿ ಹೆರಾಲ್ಡ್ " ಎಂಬ ತನ್ನದೇ ಆದ ಒಂದು ಸಾಪ್ತಾಹಿಕ ಪತ್ರಿಕೆಯನ್ನು ಪ್ರಕಟಿಸಿದ. ರೈಲು ಡಬ್ಬಿಯನ್ನೇ ಪ್ರಯೋಗಾಲಯ ಮಾಡಿಕೊಂಡು ಪ್ರಯೋಗಗಳನ್ನೂ ಮುಂದುವರಿಸಿದ. ಒಮ್ಮೆ ರಂಜಕದ ತುಂಡು ಬಿದ್ದು ರೈಲು ಡಬ್ಬಿಗೆ ಬೆಂಕಿ ಹೊತ್ತಿದಾಗ ಗಾರ್ಡ್‌ ಆತನ ಕಿವಿ ಹಿಡಿದು ಥಳಿಸಿದ. ಥಾಮಸ್ ನ ಕಿವಿಯೇ ಕಿವುಡಾಯಿತು. ಆದರೆ ರೈಲು ನಿಲ್ದಾಣದ ಅಧಿಕಾರಿಯೊಬ್ಬನ ಮಗು ಹಳಿಗೆ ಸಿಕ್ಕು ಸಾಯುವ ಸಂದರ್ಭದಲ್ಲಿ ಎಡಿಸನ್ ತನ್ನ ಪ್ರಾಣದ ಪರಿವೆಯಿಲ್ಲದೆ ಆ ಮಗುವನ್ನು ರಕ್ಷಿಸಿದ. ಅದನ್ನು ಮೆಚ್ಚಿದ ರೈಲು ನಿಲ್ದಾಣದ ಅಧಿಕಾರಿ ಆತನಿಗೆ ಟೆಲಿಗ್ರಾಫ್ ನಿರ್ವಹಣೆ, ಮೋರ್ಸ್ ಸಂಕೇತ ಕಲಿಸಿದ.[೧]
  • ಥಾಮಸ್ ಆಲ್ವ ಎಡಿಸನ್ ಟೆಲಿಗ್ರಾಫ್ ನಲ್ಲಿ ಹಲವಾರು ಸುಧಾರಣೆಗಳನ್ನು ಮಾಡಿದರು, ಫೋನೋಗ್ರಾಮ್ ಕಂಡು ಹಿಡಿದರು, ವಿದ್ಯುದ್ವೀಪಗಳನ್ನು ತಯಾರಿಸಿದರು, ಚಲನಚಿತ್ರ ಕ್ಯಾಮರಾ, ಕೈನಟೊಸ್ಕೋಪ್, ಸಂಚಯನ ವಿದ್ಯುತ್ಕೋಶ, ಕಾಂತೀಯ ಸಲಕರಣೆಗಳು ಮೊದಲಾದವುಗಳನ್ನು ಮಾರುಕಟ್ಟೆಗೆ ತಂದರು.
  • "ಕಿಡಿಗೇಡಿ" ಆಗಿದ್ದ ಹುಡುಗ ಈಗ "ಪವಾಡ ಪುರುಷ" ಆದ, ೧೮೮೯ರಲ್ಲಿ ವಾಕ್ ಚಲನಚಿತ್ರಗಳನ್ನು ಎಡಿಸನ್ ಪ್ರದರ್ಶಿಸಿದರು.
  • ಥಾಮಸ್ ಆಲ್ವ ಎಡಿಸನ್ ಅಕ್ಟೋಬರ್ ೧೮, ೧೯೩೧ರಂದು ನಿಧನ ಹೊಂದಿದರು.

ಉಲ್ಲೇಖ