ದ್ರಾಕ್ಷಿ ಹಣ್ಣು

Lua error in package.lua at line 80: module 'Module:Pagetype/setindex' not found.

Grapefruit
Grapefruit, hybrid citrus.
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Sapindales
ಕುಟುಂಬ:
Rutaceae
ಕುಲ:
Citrus
ಪ್ರಜಾತಿ:
C. × paradisi
Binomial name
Citrus × paradisi
Macfad.

ದ್ರಾಕ್ಷಿ ಹಣ್ಣು (ಕನ್ನಡ:ಹುಳಿಕಂಚಿ ಹಣ್ಣು ಅಥವಾ ಕಂಚಿಹಣ್ಣು) (Grapefruit) - (paradisi)ಒಂದು ಸಿಟ್ರಸ್ ಪರಾಡಿಸಿ ಜಾತಿಗೆ ಸೇರಿದ ಮತ್ತು ಸಮಶೀತೋಷ್ಣ ವಲಯದ ವಾತಾವರಣದಲ್ಲಿ ಬೆಳೆಯುವ ಸಿಟ್ರಸ್ (ಹುಳಿ) ತನ್ನ ಒಗರು ಹಣ್ಣಿಗೆ ಹೆಸರಾಗಿದೆ,18 ನೆಯ ಶತಮಾನದಲ್ಲಿ ಇದರ ಹೈಬ್ರಿಡ್ ತಳಿ ಸುಧಾರಿತ ಜಾತಿಯ ಹಣ್ಣನ್ನು ವೆನುಜುಲದ ದ್ವೀಪ ಬಾರಬಡೊಸ್ ನಲ್ಲಿ ಮೊದಲು [೧] ಬೆಳೆಯಲಾಯಿತು. ಮೊದಲು ಕಂಡ ಈ ಹಣ್ಣನ್ನು "ನಿಷಿದ್ದ [೨] ಹಣ್ಣು "ಎಂದು ಹಣ್ಣು ಎಂದು ಹೇಳಲಾಗಿತ್ತಲ್ಲದೇ ಇದನ್ನು ಚಕ್ಕೊತಾ ಅಥವಾ ಚಕ್ಕೊತಾ ಜಾತಿಗೆ ಸೇರಿದ ಸಿಟ್ರಸ್ (C. ಮ್ಯಾಕ್ಸಿಮಾ ),ಕೂಡಾ ಇದೇ ತಳಿಯ ಹಣ್ಣಿನ ಜಾತಿಯಾಗಿದ್ದು ಮತ್ತೊಂದೆಂದರೆ ಸಿಹಿ ಕಿತ್ತಳೆ (C. × ಸಿನೆಸಿಸ್ )

ಈ ನಿತ್ಯ ಹಸಿರು ಗಿಡಗಳು 5–6 metres (16–20 ft)ಸುಮಾರಾಗಿ ಎತ್ತರ ಮತ್ತು ನಮಗೆ ನಿಲುಕುವ 13–15 metres (43–49 ft)ಸಸ್ಯವರ್ಗವಾಗಿದೆ. ಇದರ ಎಲೆಗಳು ಕಪ್ಪು ಹಸಿರು ಮತ್ತು ಉದ್ದವಾಗಿ ಮತ್ತು 5 cm (2 in)ತೆಳುವಾಗಿರುತ್ತವೆ. (ಸುಮಾರು 150 mm, ಅಥವಾ 6 ಇಂಚಗಳು )ಇದು ನಾಲ್ಕು ದಳಗಳ ಬಿಳಿ ಹೂವುಗಳನ್ನು ಬಿಡುತ್ತವೆ. ಈ ಹಣ್ಣು ಹಳದಿ-ಕಿತ್ತಳೆ ತೊಗಟೆಯ ಬಹುವಾಗಿ ಗುಂಡಗಿರುವ ಕೊಂಚ ಚಪ್ಪಟೆಯಾಕಾರಾದ್ದಾಗಿದೆ.ಇದು ಸುಮಾರು 10-15ರ ವ್ಯಾಸದ ಅಳತೆ ಹೊಂದಿರುತ್ತದೆ. ಒಳತಿರುಳು ಆಮ್ಲೀಯದಿಂದ ಕೂಡಿದ್ದು ಬಣ್ಣದಲ್ಲಿ ವ್ಯತ್ಯಾಸ ಕಾಣುತ್ತದೆ,ಅದನ್ನು ಯಾವ ರೀತಿಯಲ್ಲಿ ಬೆಳಸಲಾಗಿದೆ ಎಂಬುದರ ಮೇಲೆ ಸಿಹಿ ಅವಲಂಬಿಸಿದೆ.ಇದು ಬಿಳಿ,ತಿಳಿಕೆಂಪು ಮತ್ತು ಕೆಂಪು ತಿರಳನ್ನು ಪಡೆದಿರುತ್ತದೆ.[೩] US ನ ರಬ್ವಿ ರೆಡ್ 1929ರಲ್ಲಿ ಮೊದಲ ಬಾರಿಗೆ ಹಕ್ಕು ಸ್ವಾಮ್ಯ ಪಡೆದ ದ್ರಾಕ್ಷಿ ಹಣ್ಣಾಗಿದೆ.(ಕೆಂಪು [೩] ಜಾತಿಯದು)

ಈ ಹಣ್ಣು 19 ನೆಯ ಶತಮಾನದ ನಂತರದಲ್ಲಿ ಜನಪ್ರಿಯತೆ ಪಡೆದ ಈ ಹಣ್ಣು ಮೊದಲು ಅಲಂಕಾರಿಕ ಸಸ್ಯವಾಗಿ ಬೆಳೆಸಲಾಗುತಿತ್ತು. ಯುನೈಟೆಡ್ ಸ್ಟೇಟ್ಸ್ ಶೀಘ್ರದಲ್ಲೇ ಇದನ್ನು ಬೆಳೆಸುವ ಪ್ರಧಾನ ಪ್ರದೇಶವಾಯಿತು.ಫ್ಲೊರಿಡಾ,ಟೆಕ್ಸಾಸ್ ಅರಿಝೋನಾ ಮತ್ತು ಕ್ಯಾಲಿಫೊರ್ನಿಯಾದ ತೋಟಗಳಲ್ಲಿ ಇದನ್ನು ಸಾಕಷ್ಟು ಪ್ರಮಾಣದಲ್ಲಿ ಬೆಳೆಯಲಾಯಿತು. ಸ್ಪ್ಯಾನಿಶ್ ನಲ್ಲಿ ಈ ಹಣ್ಣನ್ನು ಟ್ರೊರಂಜಾ ಅಥವಾ ಪೊಮೆಲೊ ಎಂದು ಕರೆಯಲಾಯಿತು.

ಇತಿಹಾಸ

ದ್ರಾಕ್ಷಿ ಹಣ್ಣಿನ ಪ್ರಾಚೀನ ಜಾತಿಗೆ ಸಂಬಂಧಿಸಿದೆಂದರೆ ಜಮೈಕನ್ ಸಿಹಿ ಕಿತ್ತಳೆ (ಸಿಟೃಸ್ ಸೈನೆಸಿಸ್ )ಇನ್ನೊಂದು ಪೊಮೆಲೊ (ಸಿ.ಮ್ಯಾಕ್ಸಿಮಾ ) ಏಷ್ಯಯನನ ಹೈಬ್ರಿಡ್ ತಳಿ ಎಂದು ಹೇಳಲಾಗುತ್ತದೆ. ಒಂದು ಹಣ್ಣಿನ ಕಥೆಯ ಪ್ರಕಾರ ಇದರ ಮೂಲವನ್ನು "ಕ್ಯಾಪ್ಟೇನ್ [೪] ಶಡ್ಡಾಕ್ "ಪೊಮೆಲೊ ಬೀಜಗಳನ್ನು ತಂದು ಅವುಗಳನ್ನು ಜಮೈಕದಲ್ಲಿ ಬೆಳಸಿದ ಮೊದಲ ಹಣ್ಣು ಎಂದು [೫] ಹೇಳಲಾಗುತ್ತದೆ. ಆದರೆ ಇದು ಸಾಮಾನ್ಯವಾಗಿ ನೈಸರ್ಗಿಕವಾಗಿ ಹುಟ್ಟಿಕೊಂಡ ಹೈಬ್ರೀಡ್ ತಳಿ [೧] ಎನ್ನಲಾಗಿದೆ.

ಈ ಹೈಬ್ರೀಡ್ ಹಣ್ಣನ್ನು 1750ರಲ್ಲಿ ವೆಲ್ಶಮನ್ ,ರೆವ್.ಗ್ರಿಫಿತ್ ಹುಗ್ಸ್ ದಾಖಲಿದ ವಿವರಗಳನ್ನು ನೋಡಿದರೆ ಇವುಗಳನ್ನು ಬಾರ್ಬಡೊಸ್ ನಿಂದ ತಂದಿದ್ದರು [೬] ಎನ್ನಲಾಗಿದೆ. ಸದ್ಯ ದ್ರಾಕ್ಷಿ ಹಣ್ಣನ್ನು "ಬಾರ್ಬಡೊಸ್ ನ ಏಳು ಅದ್ಭುತಗಳೆಂದು" [೭] ಹೇಳಲಾಗುತ್ತದೆ ಕೌಂಟ್ ಒಡೆಟ್ಟೆ ಫಿಲಿಪ್ಪೆ ಎಂಬಾತನು 1823 ರಲ್ಲಿ ಇದನ್ನು ತಂದಿದ್ದು ಅದನ್ನೀಗ ಸೇಫ್ಟಿ ಹಾರ್ಬರ್ ಎನ್ನಲಾಗುತ್ತದೆ. ಮುಂದೆ ಬೇರೆ ರೀತಿಯ ತಳಿಗಳನ್ನು ಬೆಳಸಲಾಯಿತು,ಉದಾಹರಣೆಗೆ ಟ್ಯಾಂಜೆಲೊ (1905),ಮಿನ್ನಿಯೊಲಾ (1931),ಮತ್ತು ಸ್ವೀಟೆ (1984) ಇತ್ಯಾದಿಗಳನ್ನು ಪರಿಚಯಿಸಲಾಯಿತು. ಸ್ವೀಟೆ ತಳಿಯು ಸಣ್ಣ ಅನುವಂಶೀಯ ಮತ್ತು ಇನ್ನುಳಿದವು ಪೊಮೆಲೊಗಿಂತ ವಿಭಿನ್ನ ಗುಣದವಾಗಿದ್ದವು.

ದ್ರಾಕ್ಷಿಹಣ್ಣನ್ನು ಮೊದಲು ಶ್ಯಾಡಕ್ ಅಥವಾ ಶಾಟಕ್ ಎಂದು 1800 ನೆಯ ವರ್ಷದ ವರ್ಗೆ ಗುರುತಿಸಲಾಗುತಿತ್ತು. ಅದರ ಪ್ರಸಕ್ತ ಹೆಸರು ತನ್ನ ಬಳ್ಳಿಯಲ್ಲಿನ ಆಕಾರಕ್ಕೆ ಹೊಂದಿಕೊಳ್ಳುತ್ತದೆ,ಇದರ ಇನ್ನೊಂದು ತಳಿಯು ಅದೇ ರೂಪದ ದ್ರಾಕ್ಷಿಗಳಿಗೆ [೮] ಹೋಲುತ್ತದೆ. ಸಸ್ಯಶಾಸ್ತ್ರೀಯವಾಗಿ 1830 ರ ವರೆಗೆ ಇದನ್ನು ಪೊಮೆಲೊದಿಂದ ಬೇರೆ ಎಂದು ತಿಳಿದಿರಲಿಲ್ಲ.ಆಗ ಇದಕ್ಕೆ ಸಿಟ್ರಸ್ ಪ್ಯಾರಾದಿಸಿ ಎಂಬ ಹೆಸರನ್ನು ನೀಡಲಾಗಿತ್ತು. ಇದರ ಮೂಲಗಳನ್ನು 1940 ರ ವರೆಗೆ ಕಂಡು ಹಿಡಿದಿರಲಿಲ್ಲ. ಇದನ್ನು ಅಧಿಕೃತವಾಗಿ ಬದಲಿಸಿದ ಸಿಟ್ರಸ್ × ಪ್ಯಾರಾದಿಸಿ "×" ಎಂಬ ಸಂಜ್ಞೆ ರೂಪದಲ್ಲಿ ಹೈಬ್ರಿಡ್ ಎಂದು [೯][೧೦] ಗುರುತಿಸಲಾಯಿತು.

ರಬಿ ರೆಡ್ ಸ್ವಾಮ್ಯವು 1929ರಲ್ಲಿ ವಾಣಿಜ್ಯಿಕವಾಗಿ ಯಶಸ್ವು ಪಡೆಯಿತು,ಇದು ನಂತರ ತಿಳಿ ಗುಲಾಬಿ ಬಣ್ಣದ ಜಾತಿಯ ದ್ರಾಕ್ಷಿ ಹಣ್ಣನ್ನು ಆವಿಷ್ಕರಿಸಲಾಯಿತು. ನಂತರ ರಬಿ ರೆಡ್ ದ್ರಾಕ್ಷಿ ಹಣ್ಣು ಹೊಸ ರೂಪ ಪಡೆದು ಕೃಷಿಯಲ್ಲಿ ತನ್ನ ಯಶಸ್ಸು ಕಂಡಿತು. ಕೆಂಪು ದ್ರಾಕ್ಷಿ ಹಣ್ಣು ರಬಿ ರೆಡ್ ನಿಂದ ಆರಂಭ ಪಡೆದು ಟೆಕ್ಸಾಸ್ ನ ಸಾಂಕೇತಿಕ ಹಣ್ಣಾಗಿ ಬೆಲಳೆಯಲಾರಂಭಿಸಿತು.ಆಗ ಕಳಪೆ ಗುಣಮಟ್ಟದ ಬಿಳಿ ಬಣ್ಣದ ದ್ರಾಕ್ಷಿಯನ್ನು ತೆಗೆದು ಹಾಕಿ ಕೇವಲ ಕೆಂಪು ಬಣ್ಣದ ದ್ರಾಕ್ಷಿ ಬೆಳೆಸಲಾಯಿತು. ಇದರಲ್ಲಿನ ಬದಲಾವಣೆಗಳಿಗೆ ವಿಕಿರಣವನ್ನು ಬಳಸಲಾಯಿತು,ಆಗ ಕೆಂಪಗಿನ ಬಣ್ಣ ಮಾಸಿದಂತಾಗಿ ತಿಳಿ [೧೧] ಗುಲಾಬಿ ಬಣ್ಣಕ್ಕೆ ತಿರುಗಿದವು.ರಿಯೊ ರೆಡ್ ಪ್ರಕಾರವು ಸದ್ಯ (2007)ಟೆಕ್ಸಾಸ್ ನ ದ್ರಾಕ್ಷಿಹಣ್ಣು ರಿಯೊ ಸ್ಟಾರ್ ಮತ್ತು ರಬಿ-ಸ್ವೀಟ್ ಎಂಬ ವ್ಯಾಪಾರಿ ಚಿನ್ಹೆಯನ್ನು ಪಡೆದವು.ಕೆಲವು ವೇಳೆ ಇದನ್ನು"ರೆಡೆಸ್ಟ್ ಮತ್ತು ಟೆಕ್ಸಾಸ್ ಚೊಯಿಸ್ "ಎನ್ನಲಾಗುತ್ತದೆ.

ದಿ ಫ್ಲೊರಿಡಾ ಡಿಪಾರ್ಟ್ ಮೆಂಟ್ ಆಫ್ ಸಿಟ್ರಸ್ ಹೇಳುವ ಪ್ರಕಾರ "ಫ್ಲೊರಿಡಾ ಗುಣಮಟ್ಟದ ವಿವಿಧ ಪ್ರಕಾರಗಳೆಂದರೆ,ರಬಿ ರೆಡ್ ,ಪಿಂಕ್ ,ಥೊಂಪ್ಸನ್ ,ಮಾರ್ಶ್ ಮತ್ತು ಡಂಕನ್ ಇತ್ಯಾದಿ. ದ್ರಾಕ್ಷಿಹಣ್ಣುಗಳ ಸುಗ್ಗಿಯು ಸಾಮಾನ್ಯವಾಗಿ ಅಕ್ಟೊಬರ್ ನಿಂದ ಜೂನ್ "ವರೆಗೆ [೧೨] ಇರುತ್ತದೆ.

ಉತ್ಪಾದನೆ

ದ್ರಾಕ್ಷಿ ಹಣ್ಣು ಮತ್ತು ಪೊಮೆಲೊ ಉತ್ಪಾದನೆಗಳಿಗೆ ಯುನೈಟೆಡ್ ಸ್ಟೇಟ್ಸ್ ಮೊದಲಿದ್ದರೆ ಕ್ರಮವಾಗಿ ಚೀನಾ ಮತ್ತು ದಕ್ಷಿಣಾ ಆಫ್ರಿಕಾ ಮುಂದಿವೆ.

ದ್ರಾಕ್ಷಿಹಣ್ಣು ಮತ್ತು ಪೊಮೆಲೊ ಫಲಿತಾಂಶ 2005 ರಲ್ಲಿ
ಉನ್ನತ ಗುಣ ಮಟ್ಟದ ಹತ್ತು ದ್ರಾಕ್ಷಿ ಹಣ್ಣು(inc. ಪೊಮೆಲೊಸ್) ಉತ್ಪಾದಕರು— 2007
ರಾಷ್ಟ್ರಉತ್ಪಾದನೆ (ಟನ್ ಗಳು)ಅಡಿಟಿಪ್ಪಣಿ
 ಅಮೇರಿಕ ಸಂಯುಕ್ತ ಸಂಸ್ಥಾನ1580000ಬಲಗಡೆ=ಹೊಂದಾಣಿಕೆ
 ಚೀನಾ547000F
 ದಕ್ಷಿಣ ಆಫ್ರಿಕಾ430000F
 ಮೆಕ್ಸಿಕೋ390000F
 ಸಿರಿಯಾ290000F
 ಇಸ್ರೇಲ್245000*
 ಟರ್ಕಿ181923ಬಲಗಡೆ=ಹೊಂದಾಣಿಕೆ
 ಭಾರತ178000F
 ಅರ್ಜೆಂಟೀನ176000F
 ಕ್ಯೂಬಾ175000F
[15]ವಿಶ್ವ5061023a
ಸಂಕೇತಗಳಿಲ್ಲದ = ಅಧಿಕೃತ ಮೊತ್ತ, ಪಿ= ಅಧಿಕೃತ ಮೊತ್ತ, F = FAO ಅಂದಾಜು, * = ಅನಧಿಕೃತ/ಅರೆ-ಅಧಿಕೃತ/ಪ್ರತಿಬಿಂಬಿತ ಅಂಕಿಅಂಶ, C = ಅಂದಾಜಿಸಿದ ಮೊತ್ತ A = ಸರಾಸರಿ(ಇದು ಅಧಿಕೃತ ಒಳಗೊಂಡಿರಬಹುದು, ಅರೆ-ಅಧಿಕೃತ ಅಥವಾ ಅಂದಾಜುಗಳು);
ಮೂಲ: ಫುಡ್ ಅಂಡ್ ಅಗ್ರಿಕಲ್ಚರಲ್ ಆರ್ಗೈನೇಶನ್ ಆಫ್ ಯುನೈಟೆಡ್ ನೇಶನ್ಸ್: ಎಕಾನೊಮಿಕ್ ಅಂಡ್ ಸೊಸಿಯಲ್ ದಿಪಾರ್ಟ್ ಮೆಂಟ್: ದಿ ಸ್ಟಾಟಿಟಿಕಲ್ ಡಿವಿಸನ್

ಬಣ್ಣಗಳು ಮತ್ತು ವಾಸನೆಗಳು

ದಕ್ಷಿಣ ಕ್ಯಾಲಿಫೊರ್ನಿಯಾದಿಂದ ಬಂದ ದ್ರಾಕ್ಷಿಹಣ್ಣು

ದ್ರಾಕ್ಷಿ ಹಣ್ಣು ಹಲವಾರು ಮಾದರಿಗಳಲ್ಲಿ ಬೆಳೆಯಲಾಗುತ್ತದೆ,ಅದನ್ನು ಅದರ ಬಣ್ಣದ ಮೇಲಿಂದ ಗುರುತಿಸಬಹುದು ಮತ್ತು ಅದರ ಹೊರ ತೊಗಟೆಯ ಮೇಲಿಂದ ಇದು ಗೊತ್ತಾಗುತ್ತದೆ,ಇದು ಅದರ ಫಲಿತ ಮತ್ತು ತಳಿಯ ಸಂಬಂಧಕ್ಕೆ [೧೩] ಹೊಂದಿರುತ್ತದೆ. ಇಂದು ಅತ್ಯಂತ ಜನಪ್ರಿಯ ತಳಿಗಳೆಂದರೆ ಕೆಂಪು,ಬಿಳಿ ಮತ್ತು ತಿಳಿ ಗುಲಾಬಿ ಇವುಗಳು ತಮ್ಮೊಳಗಿನ ತಿರುಳಿಗೆ ಸಂಬಂಧಿಸಿ ಹಣ್ಣಿನ ಬಣ್ಣವನ್ನು ತೋರಿಸುತ್ತವೆ. ಇದರ ವಾಸನೆಗೆ ಸಂಬಂಧಿಸಿದಂತೆ ಅತ್ಯಧಿಕ ಆಮ್ಲೀಯ ಮತ್ತು ಹುಳಿಯಿಂದ ಸಿಹಿ ಮತ್ತು ಕಟು ಹುಳಿ ಒಗರಿನ ರುಚಿ [೧೩] ಹೊಂದಿರುತ್ತವೆ. ದ್ರಾಕ್ಷಿ ಮೆರಕ್ಯಾಪ್ಟನ್ ,ಗಂಧಕ-ಟ್ರೆಪೆನ್ ಹೊಂದಿರುವ ರಾಸಾಯನಕವು ಹಣ್ಣಿನಲ್ಲಿನ ರುಚಿಗೆ ಕಾರಣವಾಗುತ್ತದೆ,ಇನ್ನುಳಿದ ಸಿಟ್ರಿಕ್ ಅಥವಾ ಆಮ್ಲೀಯ ಹಣ್ಣುಗಳಿಗೆ ಈ ಗುಣ ಇರುವುದಿಲ್ಲ.ಆದ್ದರಿಂದ ದ್ರಾಕ್ಷಿ ಇದಕ್ಕಿಂತ [೧೪] ಭಿನ್ನವಾಗಿರುತ್ತದೆ.

ರಾಸಾಯನಿಕ ಔಷಧಿ ಪ್ರತಿಕ್ರಿಯೆಗಳು

ದ್ರಾಕ್ಷಿಹಣ್ಣು ಮೆರ್ಕ್ಯಾಪ್ಟನ್

ದ್ರಾಕ್ಷಿ ಹಣ್ಣು ರಾಸಾಯನಿಕ ಔಷಧಿಗಳ ವಿಷಯದಲ್ಲಿ ಹಲವಾರು ಅಸಂಖ್ಯಾತ ಪ್ರತಿಕ್ರಿಯೆಗಳನ್ನು ನೀಡುತ್ತದೆ,ಇದು ಸಂಯುಕ್ತಗಳ ಹೆಚ್ಚಳದ ಮೇಲೆ ಇದರ ಪರಿಣಾಮ ಅವಲಂಬಿತವಾಗಿರುತ್ತದೆ. ಪೊಲಿಫೆನೊಲ್ ಗಳ ಸಂಯುಕ್ತಗಳನ್ನು ಪರಿಗಣಿಸಿದಾಗ ದ್ರಾಕ್ಷಿ ಹಣ್ಣು ಫ್ಲೆವೊನೊನ್ ನಾರಂಜಿನ್ ಒಳಗೊಂಡಿದೆ.ಇನ್ನುಳಿದ ಫರ್ನೊಕ್ಲೊಮಾರಿಯನ್ಸ್ ಸಂಯುಕ್ತಗಳಾದ ಬೆರ್ಗಾಮೊಟಿನ್ ಮತ್ತು ಡಿಹೈಡ್ರೊಕ್ಸಿಬೆರ್ಗಾಮೊಟಿನ್ ಒಳಗೊಂಡಿದೆ.ಇದರಲ್ಲಿ ಪ್ರೊಟೀನ್ ಐಸೊಫಾರ್ಮ್ CYP3A4ಪ್ರಧಾನವಾಗಿ ಸಣ್ಣ ಅಂಗಾಂಗದಲ್ಲಿ ಕಾಣಬಹುದು,ಅಲ್ಲದೇ ಹೆಚ್ಚಿನ ಔಷಧಿ ಪ್ರಮಾಣವು CYP3A4 ಸಂಯುಕ್ತ ಕೂಡಾ ಇದರಲ್ಲಿರುತ್ತದೆ. ಈ ಕಿಣ್ವಗಳ ಮೂಲಕ ದ್ರಾಕ್ಷಿ ಹಣ್ಣು ತಾನು ಬಳಸುವ ಔಷಧಿಗಳಿಗೆ ವೈವಿಧ್ಯತೆಗೆ ಅನುಗುಣವಾಗಿ ತನ್ನ ಜೈವಿಕ ಲಭ್ಯತೆಯನ್ನು [೧೫][೧೬][೧೭][೧೮][೧೯] ತೋರಿಸುತ್ತದೆ. ದ್ರಾಕ್ಷಿ ಹಣ್ಣಿನಲ್ಲಿರುವ ದ್ರವದ ಮೇಲೆ ಪರೀಕ್ಷೆ ನಡೆಸಿದ ವಿಜ್ಞಾನಿಗಳು ಇದರ ಮೂಲ ಪ್ರಮಾಣದ ಪರಿಣಾಮವನ್ನು 1989ರಲ್ಲಿ ಪತ್ತೆ ಹಚ್ಚಿದರು. ಇದರ ಮೂಲಕ ಪರಿಣಾಮಗಳ ನಿಯಂತ್ರಣಕ್ಕೆ ಪರಿಶ್ರಮ ವಹಿಸಲಾಯಿತು,ಅತಿ ಹೆಚ್ಚು ಪ್ರಮಾಣದ ಔಷಧೀಕರಣದಿಂದ ಸಾವು ಸಂಭವಿಸುವ ಸಾಧ್ಯತೆಯನ್ನು [೨೦] ಹೇಳಲಾಯಿತು.

ದ್ರಾಕ್ಷಿ ಹಣ್ಣಿನ ದ್ರವವು ಮೊದಲಿಗೆ ತನ್ನ ಔಷಧಿ ಗುಣವನ್ನು ದಾಖಲಿಸಿದೆ,ಅದು ಎಟೊಪೊಸೈಡ್ ನೊಂದಿಗೆ ಬೆರೆತಾಗ ಅದರ ಪರಿಣಾಮಗಳ ಬಗ್ಗೆ ಹೇಳಲಾಗದು,ಒಂದು ಕೆಮೊಥೆರಪಿ ಔಷಧಿ,ಕೆಲವು ಬೆಟಾ ಬ್ಲಾಕರ್ ಔಷಧಿಗಳನ್ನು ಅತಿ ರಕ್ತದೊತ್ತಡ ಮತ್ತು ಸೈಕ್ಲೊಸ್ಪೊರೈನ್ (ಮೂರ್ಛೆ)ತಡೆಯಲು ಬಳಸಲಾಗುತ್ತದೆ.ಇಲ್ಲಿ ಇದರ ಅಂಶಗಳ ಅಗತ್ಯ ಹೇಳಲಾಗಿದೆ,ಆದರೆ ಕೆಲವು ಅಂಗಗಳ ಜೋಡಣೆಯಾದ ರೋಗಿಗಳಲ್ಲಿ ಇದರ ನಿರಾಕರಣೆಯ ಸಂದರ್ಭವೂ [೨೧] ಇಲ್ಲದಿಲ್ಲ.

ಇನ್ನುಳಿದ ಹಣ್ಣುಗಳಂತೆ ದ್ರಾಕ್ಷಿ ಹಣ್ಣಿನಲ್ಲೂ ದೊಡ್ಡ ಪ್ರಮಾಣದ ನಾರಿಂಜಿನ್ ಇರುತ್ತದೆ.ಇದು 72 ಗಂಟೆಗಳ ಕಾಲ ಅಂದರೆ ಆ ಔಷಧಿ ಪಡೆದ ನಂತರದ ಅವಧಿಯಲ್ಲಿ CYP3A4 ಮೇಲೆ ಕಿಣ್ವಗಳನ್ನು ಕಾರ್ಯ ಪರಿಶೀಲಿಸಬಹುದು. ಇದು ಕೆಲವು ವೇಳೆ ಸಮಸ್ಯೆದಾಯಕವಾಗಿರುತ್ತದೆ ಯಾಕೆಂದರೆ ದ್ರಾಕ್ಷಿಹಣ್ಣು ಕೇವಲ 4 oz ಪ್ರಮಾಣದ ಕಿಣ್ವಗಳನ್ನು ಪಡೆದು ನಾರಿಂಜಿನ್ ಒಳಗೊಳ್ಳಲು CYP3A4 ನ್ನು ಸೇರ್ಪಡೆಗೊಳಿಸಲು ತಿಳಿಸುತ್ತದೆ.

ಪೌಷ್ಟಿಕಾಂಶದ ಮೂಲಗಳು

ದ್ರಾಕ್ಷಿಯು ಹಲವಾರು ಪೌಷ್ಟಿಕಾಂಶಗಳ ಮೂಲವಾಗಿದೆ,ಇದರಲ್ಲಿರುವ ಫಿಟೊಕೆಮಿಕಲ್ಸ್ ಗಳು ಆರೋಗ್ಯಪೂರ್ಣ ಆಹಾರವನ್ನು ಒದಗಿಸಲು ಸಹಾಯ ಮಾಡುತ್ತವೆ. ದ್ರಾಕ್ಷಿ ಹಣ್ಣು [೧೩][೨೨] ವಿಟಾಮಿಮ್ ಸಿ ನ ಉತ್ತಮ ಮೂಲ,ಇದು ಫೈಬರ್ [೨೩] ಪೆಕ್ಟಿನ್ಒಳಗೊಂಡಿದೆ,ಮತ್ತು ತಿಳಿ ಗುಲಾಬಿ ಮತ್ತು ಕೆಂಪು ಜಾತಿಗಳು ಆಂಟಿಆಕ್ಸಿಡಂತ್ ಲಿಕೊಪೆನೆ [೧೩][೨೪] ಒಳಗೊಂಡಿವೆ. ಅಧ್ಯಯನಗಳ ಪ್ರಕಾರ ದ್ರಾಕ್ಷಿಯು [೧೩][೨೫] ಕೊಲೆಸ್ಟ್ರಾಲಕಡಿಮೆ ಮಾಡುವ ಗುಣ ಹೊಂದಿದೆ.ಬೀಜಗಳಿಗೆ ಆಂಟಿಆಕ್ಸಿಡಂಟ್ [೨೬] ಗುಣವಿದೆ.[೨೭] ದ್ರಾಕ್ಷಿಯು "ದ್ರಾಕ್ಷಿಯ ಹಣ್ಣಿನ ಆಹಾರ"ದ ಪ್ರಧಾನ ಪಾತ್ರ ವಹಿಸುತ್ತದೆ,ಹಣ್ಣಿನ ಕಡಿಮೆ ಪ್ರಮಾಣದ ಗ್ಲಿಕೆಮಿಕ್ ಸೂಚ್ಯಾಂಕ ಇರುವುದರಿಂದ ದೇಹದ ಪಚನಕ್ರಿಯೆಯಲ್ಲಿ ಸರಳ ಮತ್ತು ಸುಗಮವಾಗಿರುವುದರಿಂದ ದೇಹದ ಕೊಬ್ಬಿನ ಪ್ರಮಾಣವನ್ನು ಕರಗಿಸಲು ಸಹಾಯ [೨೭] ಮಾಡುತ್ತದೆ.

ದ್ರಾಕ್ಷಿ ಹಣ್ಣುಗಳ ಬೀಜದ ತಿರುಳಿನಲ್ಲಿ(GSE)ಪ್ರಬಲ ಆಂಟಿಮೈಕ್ರೊಬೈಯಲ್ ಶಕ್ತಿ ಮೂಲಗಳಿವೆ,ಇವು ಬ್ಯಾಕ್ಟೀರಿಯಾ ಮತ್ತು ಫಂಗಿಗಳ ವಿರುದ್ದ ಕೆಲಸ ಮಾಡಲು ಸಾಧ್ಯವಿದೆ ಎಂದು ಸಂಶೋಧನೆಗಳು ಹೇಳಿವೆ. ಆದರೂ ಬ್ಯಾಕ್ಟೀರಿಯಾ ಮತ್ತು ಫಂಗಿ ವಿಷಯದಲ್ಲಿ ಈ ತಿರುಳು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ಇನ್ನೂ ತಿಳಿಯಲಾಗಿಲ್ಲ. ಅಧಿಕವಾಗಿ ಈ ತಿರುಳನ್ನು GSE ಹಲವಾರು ಉತ್ಪಾದಕರು ಸಂಯುಕ್ತವನ್ನಾಗಿ ಪ್ರಿಸರ್ವೇಟಿವ್ ಆಗಿ ಬಳಸುತ್ತಾರೆ.ಆಂಟಿಮೈಕ್ರೊಬೈಯಲ್ ಕ್ರಿಯೆಗಳು ಈ ತಿರುಳಿನ ಅಂಶಗಳ ಮೇಲೆ ಪರಿಣಾಮ ಬೀರುತ್ತಿವೆ.ಇದರ ಪರಿಣಾಮ ಈ ಸಂಯುಕ್ತಗಳಲ್ಲಿನ ಅಶುದ್ಧತೆಯು ಸಿಂಠೆಟಿಕ್ ಪ್ರಿಸರ್ವವೇಟಿವ್ಸ್ (ಸಂರಕ್ಷಕಗಳು)[೨೮][೨೯][೩೦][೩೧][೩೨] ಒಳಗೊಂಡಿದೆ.

ಕೆಲವು ಔಷಧಿಗಳ ಮತ್ತು ಹಾರ್ಮೊನ್ ಗಳ ನವೀಕರಣಕ್ಕಾಗಿ ದ್ರಾಕ್ಷಿಹಣ್ಣಿನ ರಸವನ್ನು ಬಳಸಲಾಗುತ್ತದೆ.ಹಾರ್ಮೊನ್ ಮೂಲದ ಕ್ಯಾನ್ಸರ್ ಕಾರಕಗಳ ಹೆಚ್ಚಳಕ್ಕೆ ಇದು ಕೆಲವೊಮ್ಮೆ ಕಾರಣವಾಗಬಹುದು.ರಾಸಾಯನಿಕಗಳ ಪರಿಣಾಮ ಇದನ್ನು ಸರಿಯಾಗಿ ಸರಿದೂಗಿಸಲು ಕಿಣ್ವಗಳ ಕ್ರಿಯೆಗಳನ್ನು ಗಮನಿಸಬೇಕಾಗಿದೆ. ಸುಮಾರು 2007 ರ ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಒಂದು ಕಾಲು ಕಿಲೊದಷ್ಟು ದ್ರಾಕ್ಷಿ ಹಣ್ಣು ಸೇವನೆಯು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಗೆ 30% ರಷ್ಟು ಹೆಚ್ಚು ಒಡ್ಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.ಇದು ಋತುಮತಿ ನಂತರದ ಅವಧಿಯಲ್ಲಿ ಮಹಿಳೆಯರಿಗೆ ಹೆಚ್ಚು ಪರಿಣಾಮ ಬೀರಬಹುದು. ಈ ಅಧ್ಯಯನದ ಪ್ರಕಾರ [[CYP3A4(/0) ಈ ಎಂಜೈಮ್ ದ್ರಾಕ್ಷಿಹಣ್ಣಿನಿಂದ ಬರುವುದರಿಂದ ಇದು {0}ಎಸ್ಟ್ರೊಜಿನ್]] ನನ್ನು [೩೩] ಹೊರಹಾಕುತ್ತದೆ. ಆದರೆ 2008 ರ ಅಧ್ಯಯನದ ಪ್ರಕಾರ ದ್ರಾಕ್ಷಿ ಹಣ್ಣು ತಿನ್ನುವುದರಿಂದ ಸ್ತನಗಳ ಕ್ಯಾನ್ಸರ್ ಅಪಾಯವಿರುವುದಿಲ್ಲ ಬದಲಾಗಿ ಇದರಿಂದ ಅಪಾಯವನ್ನು ತಪ್ಪಿಸಬಹುದಾಗಿದೆ,ಹಾರ್ಮೊನ್ ಥೆರಪಿಯನ್ನು ಬಳಸದ ಮಹಿಳೆಯರಲ್ಲಿ ಇದನ್ನು [೩೪] ಕಾಣಬಹುದಾಗಿದೆ.

ದ್ರಾಕ್ಷಿಹಣ್ಣು ದೊಡ್ಡ ಪ್ರಮಾಣದ ಸಾಮಾನ್ಯ ಪೊಲಿಮೈನ್ ಅಂದರೆ ಸ್ಪೆರ್ಮಿಡೈನ್ ಒಳಗೊಂಡಿದ್ದು ಇದು ಮುಪ್ಪಿನ ಸಂಕೇತಕ್ಕೆ ದಾರಿಯಾಗಲಿದೆ. ಇದು ಜೀವಕೋಶಗಳ ಬೆಳವಣಿಗೆಗೆ ಅಗತ್ಯವಿದೆ,ಅಂಗಾಂಶಗಳ ಪರಿಶುದ್ದತೆಗೆ ಅವುಗಳ ಪ್ರಬುದ್ದತೆಗೆ ಅನುಕೂಲವಾಗುತ್ತದೆ,ಬಿದ್ದು ಹೋಗುವ ಜೀವಕೋಶಗಳ ನಿಗಾವಹಿಸಲೂ ಸಾಧ್ಯವಾಗುತ್ತದೆ. ಜೀವಿಗಳಿಗೆ ಸ್ಪೆರ್ಮೈಡೈನ್ ನನ್ನು ನೀಡುವುದರಿಂದ ಅವುಗಳ ಜೀವಾವಧಿ ಹೆಚ್ಚಾಗುತ್ತದೆ,ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅದಲ್ಲದೇ ಸ್ಪೆರ್ಮೈಡೈನನ್ನು ಇಲಿಗಳ ಆಹಾರದಲ್ಲಿ ಬೆರೆಸಿದಾಗ ಅದರ ಜೀವಕೋಶಗಳ ಜೀವಾವಧಿಯು ತನ್ನ ಪರಿಣಾಮವನ್ನು ತೋರಿದ್ದು ಕಾಣಿಸಿತು.ಅದೇ ರೀತಿಯ ಮನುಷ್ಯರಲ್ಲಿನ ಜೀವಕೋಶಗಳಿಗೆ ಇದನ್ನು ಬಳಸಿದಾಗ ಇವುಗಳ ಜೀವಿತಾವಧಿಯೂ ಹೆಚ್ಚಾಗಿದ್ದು [೩೫] ಕಾಣಿಸಿದೆ.

ದ್ರಾಕ್ಷಿಹಣ್ಣಿನ ರಸ. ದ್ರಾಕ್ಷಿಹಣ್ಣಿನ ರಸವನ್ನು ಸೇವಿಸುವುದರಿಂದ ಮೂತ್ರಕೋಶದ ಕಲ್ಲುಗಳ ರಚನೆಯಾಗಬಹುದೆಂಬ ಅಭಿಪ್ರಾಯವೂ ಇದೆ. ಪ್ರತಿದಿನ ಸುಮಾರು 8 ಔನ್ಸ್ ಕಪ್ ನಷ್ಟು ದ್ರಾಕ್ಷಿಹಣ್ಣಿನ ರಸ ಕುಡಿಯುವುದರಿಂದ 44% ರಷ್ಟು ಮೂತ್ರಕೋಶದ ಕಲ್ಲುಗಳ ಸಂಭವವಿದೆ ಎಂದು [ಸೂಕ್ತ ಉಲ್ಲೇಖನ ಬೇಕು]ಹೇಳಲಾಗುತ್ತದೆ..

ದ್ರಾಕ್ಷಿಹಣ್ಣಿನ ಸಿಹಿತಿನಿಸುಗಳು

ಕೊಸ್ಟಾ ರಿಕಾದಲ್ಲಿ ಅದರಲ್ಲೂ ವಿಶೇಷವಾಗಿ ಅತೆನಾಸ್ ನಲ್ಲಿ ದ್ರಾಕ್ಷಿಹಣ್ಣುಗಳ ಹುಳಿ ಕಡಿಮೆ ಮಾಡಲು ಕುದಿಸಲಾಗುತ್ತದೆ.ಹೀಗೆ ಅವುಗಳನ್ನು ಸಿಹಿಯಾಗಿಸಲಾಗುವುದು.ಇವುಗಳನ್ನು ಡಲ್ಸೆ ಡೆ ಲೆಚೆ ಸೇರಿಸಿ ಒಂದು ಪಾನೀಯ ತಯಾರಿಸಿ ಅದನ್ನು ಟೊರೊಂಜಾ ರೆಲ್ಲೆನಾ ರಸ ಎಂದು ಕರೆಯುತ್ತಾರೆ.(ಇದರಲ್ಲಿ ದ್ರಾಕ್ಷಿ ಹಣ್ಣುಗಳಿರುತ್ತವೆ)

ಫಿಲಿಪೈನ್ಸ್ ನಲ್ಲಿ ಇದನ್ನು ಪೊಮೆಲೊ ಎನ್ನಲಾಗುತ್ತದೆ.

ಇತರ ಉಪಯೋಗಗಳು

ದ್ರಾಕ್ಷಿಹಣ್ಣಿನ ಕವಚದ ಕೋಶ ಅಥವಾ ತೊಗಟೆಯನ್ನು ಸುವಾಸನಾ ಪರಿಮಳ ಚಿಕಿತ್ಸೆಗೆ ಬಳಸುತ್ತಾರೆ,ಐತಿಹಾಸಿಕವಾಗಿ ಇದನ್ನು ಅದರ ಪರಿಮಳಕ್ಕಾಗಿ ಎಲ್ಲರೂ [೩೬] ಮೆಚ್ಚುತ್ತಾರೆ.

ದ್ರಾಕ್ಷಿಹಣ್ಣನ್ನು ಕ್ಯಾನ್ಸರ್ ಔಷಧಿಯಾದ ಫಾರ್ಮಾಕೊಡೈನಾಮಿಕ್ಸ್ ನಲ್ಲೂ ಉಪಯೋಗಿಸಿರುತ್ತಾರೆ. ಅದರ ಕೆಲವು ಪರಿಣಾಮಗಳು ಚಯಾಪಚಯದ ಮೇಲೆ ಅವಲಂಬಿಸಿವೆ,ಕೆಲವು ಔಷಧಿಗಳ ಕಡಿಮೆ ಪ್ರಮಾಣದ ಸೇವನೆಯನ್ನು ಶಿಫಾರಸು ಮಾಡಲಾಗುತ್ತದೆ,ಇದು ವೆಚ್ಚವನ್ನು [೩೭] ಉಳಿಸಬಹುದು.

ಈ ಕೆಳಗಿನವುಗಳನ್ನೂ ನೋಡಬಹುದು

  • ದ್ರಾಕ್ಷಿಹಣ್ಣಿನ ರಸ
  • ದ್ರಾಕ್ಷಿಹಣ್ಣಿನ ಚೂರಿ
  • ದ್ರಾಕ್ಷಿಹಣ್ಣು ಬೀಜದ ತಿರುಳು
  • ದ್ರಾಕ್ಷಿಹಣ್ಣು ಚಮಚ
  • ಪೊಮೆಲೊ

ಆಕರಗಳು

ಬಾಹ್ಯ ಕೊಂಡಿಗಳು