ಪಂಜಾಬಿ ಭಾಷೆ

ಪಂಜಾಬಿ[ಟಿಪ್ಪಣಿ ೧] ಒಂದು ಇಂಡೋ ಆರ್ಯ ಭಾಷೆ ಮತ್ತು ಇದನ್ನು ಜಗತ್ತಿನಾದ್ಯಂತ ಸುಮಾರು ೧೦ ಕೋಟಿ ಜನರು ಮಾತನಾಡುತ್ತಾರೆ. ಇದು ಅತಿ ಹೆಚ್ಚು ಭಾಷಿಗರ ಪಟ್ಟಿಯಲ್ಲಿ ೧೦ನೇ ಸ್ಥಾನದಲ್ಲಿದೆ.[೨][೩] ಐತಿಹಾಸಿಕ ಪಾಕಿಸ್ತಾನ ಮತ್ತು ಭಾರತಗಳ ಪಂಜಾಬ್ ಪ್ರದೇಶದ ಸ್ಥಳೀಯರು ಮಾತನಾಡುವ ಭಾಷೆ.

ಪಂಜಾಬಿ
Pañjābī
ಬಳಕೆಯಲ್ಲಿರುವ 
ಪ್ರದೇಶಗಳು:
ಪಾಕಿಸ್ತಾನ,ಭಾರತ 
ಪ್ರದೇಶ:ಪಶ್ಚಿಮ ಪಂಜಾಬ್, ಪೂರ್ವ ಪಂಜಾಬ್
ಒಟ್ಟು 
ಮಾತನಾಡುವವರು:
೧೦೦ ಮಿಲಿಯ
ಭಾಷಾ ಕುಟುಂಬ:
 ಇಂಡೋ -ಇರಾನಿಯನ್
  ಇಂಡೋ -ಆರ್ಯನ್
   Central[೧]
    ಪಂಜಾಬಿ 
ಬರವಣಿಗೆ:ಗುರುಮುಖಿ (ಬ್ರಾಹ್ಮೀ)
ಷಾಮುಖಿ ಅಕ್ಷರಮಾಲೆ (ಪೆರ್ಸೋ-ಅರೇಬಿಕ್)
Punjabi Braille 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಭಾರತ (ಭಾರತದ ರಾಜ್ಯಗಳಾದ ಪಂಜಾಬ್, ಚಂಡೀಗಢ, ಹರ್ಯಾನ, and ಹಿಮಾಚಲ ಪ್ರದೇಶ, ದ್ವಿತೀಯ ಅಧಿಕೃತ ಭಾಷೆಯಾಗಿ ದೆಹಲಿ, ಜಮ್ಮು ಮತ್ತು ಕಾಶ್ಮೀರ,ಮತ್ತು ಪಶ್ಚಿಮ ಬಂಗಾಳ)

 ಪಾಕಿಸ್ತಾನ (ಪಾಕಿಸ್ತಾನದ ಪ್ರದೇಶಗಳಾದ ಪಂಜಾಬ್, ಅಜಾದ್ ಕಾಶ್ಮೀರ,ಮತ್ತು ಇಸ್ಲಾಮಾಬಾದ್ ರಾಜಧಾನಿ ಪ್ರದೇಶ)

ಸೌಥಾಲ್ (ಇಂಗ್ಲೆಂಡ್)

ನಿಯಂತ್ರಿಸುವ
ಪ್ರಾಧಿಕಾರ:
ಭಾಷೆಯ ಸಂಕೇತಗಳು
ISO 639-1:pa
ISO 639-2:pan
ISO/FDIS 639-3:

ಪಾಕಿಸ್ತಾನದಲ್ಲಿ ಪಂಜಾಬಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ,[೪] ಭಾರತದಲ್ಲಿ ಇದರ ಭಾಷಿಗರ ಸಂಖ್ಯೆಯಲ್ಲಿನ ಸ್ಥಾನ ೧೧.[೫] ಇದು ಭಾರತೀಯ ಉಪಖಂಡದಲ್ಲಿನ ಮೂರನೆಯ ಅತಿ ಹೆಚ್ಚು ಜನರು ಮಾತನಾಡುವ ಭಾಷೆ. ಯುನೈಡ್‌ ಕಿಂಗ್‌ಡಮ್‌ನಲ್ಲಿ ೪ನೆಯ ಅತಿಹೆಚ್ಚು ಜನರು ಮಾತನಾಡುವ ಭಾಷೆಯಾದರೆ[೬] ಕೆನಡದಲ್ಲಿನ ಅದರ ಸ್ಥಾನ ಮೂರನೆಯದು (ಇಂಗ್ಲೀಶ್ ಮತ್ತು ಪ್ರೆಂಚ್ ನಂತರದ ಸ್ಥಾನ).[೭][೮] ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಸಂಯುಕ್ತ ಸಂಸ್ಥಾನ, ಸೌದಿ ಅರೇಬಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಗಣನೀಯ ಸಂಖ್ಯೆಯ ಜನರು ಮಾತನಾಡುತ್ತಾರೆ.

ಪ್ರಮಾಣಕ ಉಪಭಾಷೆ

ಅಮೃತಸರ ಮತ್ತು ಲಾಹೋರ್ ಸುತ್ತಮುತ್ತಲು ಮಾತನಾಡುವ ಮಾಝಿ ಉಪಭಾಷೆ ಪ್ರತಿಷ್ಠೆ ಪಡೆದಿದೆ. ಈ ಉಪಭಾಷೆಯನ್ನು ಪಂಜಾಬ್‌ನ ಹೃದಯ ಪ್ರದೇಶವಾದ ಮಾಝದಲ್ಲಿ ಮಾತನಾಡುತ್ತಾರೆ. ಈ ಪ್ರದೇಶವು ಲಾಹೋರ್, ಅಮೃತಸರ, ಗುರುದಾಸ್ಪುರ್, ಕಸೂರ್, ತರನ್ ತಾರನ್, ಫೈಸಲಾಬಾದ್, ನಾನ್‌ಕನ ಸಾಹಿಬ, ಪಠಾಣ್‌ಕೋಟ್, ಓಕರ, ಪಾಕ್‌ಪಟ್ಟನ, ಸಾಹಿವಾಲ, ನರೊವಾಲ, ಶೇಖುಪುರ, ಸಿಯಾಲ್‌ಕೋಟ, ಚಿನೊಟ, ಗುಜ್ರನವಾಲ, ಮತ್ತು ಗುಜರಾತ್ (ಪಾಕಿಸ್ತಾನ ಮತ್ತು ಭಾರತದ ಜಿಲ್ಲೆಗಳು) ಜಿಲ್ಲೆಗಳನ್ನು ಒಳಗೊಂಡಿದೆ. ಪಾಕಿಸ್ತಾನದಲ್ಲಿ ಬಳಸುವ ಮಾಝಿಯ ಪದಕೋಶವು ಹೆಚ್ಚು ಪರ್ಸಿಯೀಕರಣವಾಗಿದೆ.

ಇತಿಹಾಸ

ಇಂಡೊ ಆರ್ಯ ಭಾಷೆಯಾದ ಪಂಜಾಬಿಯು ಮಧ್ಯಕಾಲಿನ ಉತ್ತರ ಭಾರತದ ಪ್ರಮುಖ ಭಾಷೆಯಾದ ಶೌರಸೇನಿಯಿಂದ ಬಂದಿದೆ.[೯][೧೦][೧೧] ಪರಿದುದ್ದೀನ್ ಗಂಜ್‌ಶಕರ ಅದರ ಮೊದಲ ಪ್ರಮುಖ ಕವಿ ಎಂದು ಸಾಮಾನ್ಯವಾಗಿ ಗುರುತಿಸಲಾಗಿದೆ.[೧೨]

೧೫ನೆಯ ಶತಮಾನದಲ್ಲಿ ಪಂಜಾಬ್ ಪ್ರಾಂತದಲ್ಲಿ ಸಿಖ್ ಧರ್ಮ ಹುಟ್ಟಿತು ಮತ್ತು ಸಿಖ್ಖರು ಮಾತನಾಡುವ ಪ್ರಮುಖ ಭಾಷೆ ಪಂಜಾಬಿ.[೧೩] ಗುರು ಗ್ರಂಥ ಸಾಹಿಬ್‌ನ ಬಹು ಭಾಗಗಳನ್ನು ಗುರುಮುಖಿಯಲ್ಲಿ ಬರೆಯಲಾಗಿದೆ ಆದರೆ ಸಿಖ್ ಧರ್ಮಗ್ರಂಥಗಳಲ್ಲಿ ಪಂಜಾಬಿಯಷ್ಟೇ ಬಳಕೆಯಾಗಿಲ್ಲ. ಜನಮ್‌ಸಾಕ್ಷಿ ಗುರುನಾನಕ್‌ರ (೧೪೬೯-೧೫೩೯) ಜೀವನ ಮತ್ತು ಐತಿಹ್ಯಗಳನ್ನು ಹೇಳುವ ಕಥೆಗಳು ಪಂಜಾಬಿ ಗದ್ಯದ ಆರಂಭಿಕ ಉದಾಹರಣೆಗಳು. ೧೬ ರಿಂದ ೧೮ನೆಯ ಶತಮಾನದ ಬುಲೇ ಷಾನಂತಹ (೧೬೮೦-೧೭೫೭) ಹಲವು ಮುಸ್ಲಿಂಮರು ಸೂಪಿ ಕಾವ್ಯ ಬೆಳವಣಿಗೆಗೆ ಕಾರಣರಾದರು.

ಪಂಜಾಬಿಯ ಸೂಫಿ ಕಾವ್ಯ ಪಂಜಾಬಿ ಸಾಹಿತ್ಯಿಕ ಸಂಪ್ರದಾಯವನ್ನು ಸಹ ಪ್ರಭಾವಿಸಿದೆ. ವಿಶೇಷವಾಗಿ ದುರಂತ ಪ್ರೇಮದ ಪ್ರಕಾರವಾದ ಪಂಜಾಬಿ ಕಿಸ್ಸಾ ಇದಕ್ಕೆ ಉದಾಹರಣೆ. ಭಾರತೀಯ, ಪರ್ಶಿಯಾದ, ಕುರಾನಿನ ಮೂಲಗಳಿಂದಲೂ ಪ್ರಭಾವಿತವಾದ ಈ ಪ್ರಕಾರದ ವಾರಿಸ್ ಶಾನ (೧೮೦೨-೧೮೯೨) ಹಿರ್ ರಾಂಝ ಜನಪ್ರಿಯವಾಗಿದೆ.

ಆಧುನಿಕ ಪಂಜಾಬಿ

ಪ್ರಮಾಣಕ ಪಂಜಾಬಿಯು ಪಾಕಿಸ್ತಾನ ಮತ್ತು ಭಾರತಗಳೆರಡರಲ್ಲಿಯೂ ಮಾಳವೈ ಪಂಜಾಬಿಯ ಬರವಣಿಗೆಯ ಪ್ರಮಾಣಕ. ಪಾಕಿಸ್ತಾನದಲ್ಲಿ ಪಂಜಾಬಿಯನ್ನು ಸಾಮಾನ್ಯವಾಗಿ ಶಾಮುಖಿ ಲಿಪಿಯಲ್ಲಿ ಬರೆಯಲಾಗುತ್ತದೆ. ಇದು ಪರ್ಶಿಯಾದ ಮಾರ್ಪಡಿಸಿದ ರೂಪ. ಭಾರತದಲ್ಲಿ ಬಹಳಷ್ಟು ಕಡೆ ಲಿಪಿ ಗುರುಮುಖಿಯಲ್ಲಿರುತ್ತದೆ. ಭಾರತದ ಕೇಂದ್ರ ಮಟ್ಟದಲ್ಲಿ ಎರಡು ಪ್ರಮುಖ ಅಧಿಕೃತ ಭಾಷೆಗಳಾದ ಹಿಂದಿ ಮತ್ತು ಇಂಗ್ಲೀಶ್ ಪ್ರಭಾವದಲ್ಲಿ ಕೆಲವೊಮ್ಮೆ ದೇವನಾಗರಿ ಅಥವಾ ಲ್ಯಾಟಿನ್ ಲಿಪಿಯಲ್ಲಿಯೂ ಬರೆಯುವುದು ಕಂಡುಬರುತ್ತದೆ.

ಭಾರತದಲ್ಲಿ ಪಂಜಾಬಿ ೨೨ ಎಂಟನೆಯ ಪರಿಚ್ಛೇದದಲ್ಲಿರುವ ಭಾಷೆಗಳಲ್ಲಿ ಒಂದು ಮತ್ತು ಪಂಜಾಬ್ ರಾಜ್ಯದ ಮೊದಲ ಅದಿಕೃತ ಭಾಷೆ. ವಾಸ್ತವದಲ್ಲಿ ಪಂಜಾಬಿ ಪಾಕಿಸ್ತಾನದ ಬಹುಸಂಖ್ಯಾತರು ಮಾತನಾಡುವ ಭಾಷೆಯಾಗಿದ್ದಾಗ್ಯೂ ಅಲ್ಲಿ ಯಾವ ಪ್ರಾಂತೀಯ ಭಾಷೆಗಳನ್ನು ಕೇಂದ್ರದಲ್ಲಿ ಗುರುತಿಸಿಲ್ಲ, ಪಾಕಿಸ್ತಾನದ ಎರಡು ರಾಷ್ಟ್ರೀಯ ಸಂಪರ್ಕ ಭಾಷೆಗಳು ಉರ್ದು ಮತ್ತು ಇಂಗ್ಲೀಶ್. ಆದರೆ ಅದು ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಧಿಕೃತ ಭಾಷೆ. ಈ ಪ್ರಾಂತವು ಎರಡನೆ ಅತಿದೊಡ್ಡ ಮತ್ತು ಜನಸಂಖ್ಯೆಯಲ್ಲಿ ಮೊದಲನೆಯ ದೊಡ್ಡ ಪ್ರಾಂತ.

ಭೌಗೋಳಿಕ ಹಂಚಿಕೆ

ಪಾಕಿಸ್ತಾನ

ಪಾಕಿಸ್ತಾನದಲ್ಲಿ ಪಂಜಾಬಿ ಅತಿಹೆಚ್ಚು ಜನರು ಮಾತನಾಡುವ ಭಾಷೆ ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತದ ಅಧಿಕೃತ ಭಾಷೆ. ಪಂಜಾಬಿಯನ್ನು ಸ್ಥಳೀಯ ಭಾಷೆಯಾಗಿ ಶೇ ೪೪.೧೫ಗೂ ಹೆಚ್ಚು ಪಾಕಿಸ್ತಾನೀಯರು ಮಾತನಾಡುತ್ತಾರೆ. ಸುಮಾರು ಶೇ ೭೦ರಷ್ಟು ಪಾಕಿಸ್ತಾನಿಯರು ಪಂಜಾಬಿಯನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಮಾತನಾಡುತ್ತಾರೆ ಮತ್ತು ಕೆಲವೊಂದು ಜನರಿಗೆ ಅದು ಮೂರನೆಯ ಭಾಷೆ. ಪಾಕಿಸ್ತಾನ ಪಂಜಾಬಿನ ರಾಜಧಾನಿಯಾದ ಲಾಹೋರ್‌ನಲ್ಲಿ ಶೇ೮೬ರಷ್ಟು ಈ ಭಾಷೆ ಮಾತನಾಡುತ್ತಾರೆ. ಇದು ಜಗತ್ತಿನಲ್ಲೇ ಅತಿಹೆಚ್ಚು ಸ್ಥಳೀಯ ಪಂಜಾಬಿ ಭಾಷಿಕರಿರುವ ನಗರ. ಫೈಸಲಾಬಾದ್‌ನಲ್ಲಿ ಈ ಸಂಖ್ಯೆ ಶೇ ೭೬ ಮತ್ತು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶೇ ೭೧. ಇವೆರಡು ಅತಿ ಹೆಚ್ಚು ಸ್ಥಳೀಯ ಪಂಜಾಬಿ ಭಾಷಿಕರಿರುವ ನಗರಗಳ ಸ್ಥಾನದಲ್ಲಿ ಎರಡನೆಯ ಮತ್ತು ಮೂರನೆಯ ಸ್ಥಾನ ಪಡೆದಿವೆ. ಕರಾಚಿ ನಗರದಲ್ಲಿನ ಪಂಜಾಬಿ ಭಾಷಿಕರ ಸಂಖ್ಯೆ ಸಹ ದೊಡ್ಡದು.

ಪಾಕಿಸ್ತಾನದ ಪಂಜಾಬಿ ಭಾಷಿಗರ ಜನಗಣತಿಯ ಇತಿಹಾಸ[೧೪]
ವರುಷಪಾಕಿಸ್ತಾನದ ಜನಸಂಖ್ಯೆಶೇಕಡವಾರುಪಂಜಾಬಿ ಭಾಷಿಗರು
೧೯೫೧೩೩,೭೪೦,೧೬೭೫೭.೦೮೨೨,೬೩೨,೯೦೫
೧೯೬೧೪೨,೮೮೦,೩೭೮೫೬.೩೯೨೮,೪೬೮,೨೮೨
೧೯೭೨೬೫,೩೦೯,೩೪೦೫೬.೧೧೪೩,೧೭೬,೦೦೪
೧೯೮೧೮೪,೨೫೩,೬೪೪೪೮.೧೭೪೦,೫೮೪,೯೮೦
೧೯೯೮೧೩೨,೩೫೨,೨೭೯೪೪.೧೫೫೮,೪೩೩,೪೩೧
ಪಾಕಿಸ್ತಾನದ ಪ್ರಾಂತಗಳಲ್ಲಿ ಪಂಜಾಬಿ ಭಾಷಿಕರು (೨೦೦೮)
ರ‌್ಯಾಂಕ್ವಿಭಾಗಪಂಜಾಬಿ ಭಾಷಿಕರುಶೇಕಡವಾರು
-ಪಾಕಿಸ್ತಾನ೧೦೬,೩೩೫,೩೦೦೬೦ (ಸರೈಕಿ ಮತ್ತು ಹಿಂಡಕೊ ಉಪಭಾಷೆಗಳನ್ನು ಸೇರಿ)
ಪಂಜಾಬ್೭೦,೬೭೧,೭೦೪೭೫.೨೩
ಸಿಂಧ್೪,೫೯೨,೨೬೧೧೦
ಇಸ್ಲಾಮಾಬಾದ್ ರಾಜಧಾನಿ ಪ್ರದೇಶ೧,೩೪೩,೬೨೫೭೧.೬೬
ಖೈಬರ್ ಪಖ್‌ತುನಕ್ವಾ೭,೩೯೬,೦೮೫೨೧
ಬಲೂಚಿಸ್ತಾನ೩೧೮,೭೪೫೨.೫೨

ಗಮನಿಕೆ: ೧೯೮೧ರ ಪಾಕಿಸ್ತಾನದ ರಾಷ್ಟ್ರೀಯ ಜನಗಣತಿ ಪಶ್ಚಿಮ ಪಂಜಾಬಿನ ಉಪಭಾಷೆಗಳಾದ ಸರೈಕ, ಪೊಥೊಹರಿ ಮತ್ತು ಹಿಂಡಕೊಗಳಿಗೆ ಭಿನ್ನ ಭಾಷೆಯ ಸ್ಥಾನ ಕೊಟ್ಟಿತು. ಇದು ಪಂಜಾಬಿ ಭಾಷಿಗರ ಸಂಖ್ಯೆಯ ಕುಗ್ಗುವಿಕೆಯನ್ನು ವಿವರಿಸುತ್ತದೆ.

ಭಾರತ

ಭಾರತದಲ್ಲಿ ಪಂಜಾಬಿಯು ಸುಮಾರು ೩ ಕೋಟಿ ಜನರ ಸ್ಥಳೀಯ ಭಾಷೆ, ಎರಡನೆಯ ಅಥವಾ ಮೂರನೆಯ ಭಾಷೆ. ಪಂಜಾಬಿಯು ಭಾರತದ ಪಂಜಾಬ್, ಹರಿಯಾಣ ಮತ್ತು ದೆಹಲಿ ರಾಜ್ಯಗಳ ಅಧಿಕೃತ ಭಾಷೆ. ಪಂಜಾಬಿ ಭಾಷಿಕರು ಇರುವ ಕೆಲವು ಪ್ರಮುಖ ನಗರ ಕೇಂದ್ರಗಳು ಅಂಬಾಲ, ಲುದಿಯಾನ, ಅಮೃತಸರ, ಚಂಡೀಗರ್, ಜಲಂಧರ್ ಮತ್ತು ದೆಹಲಿ.

ಭಾರತದಲ್ಲಿ ಪಂಜಾಬಿ ಭಾಷಿಕರ ಜನಗಣತಿ ಇತಿಹಾಸ[೧೫]
ವರುಷಭಾರತದ ಜನಸಂಖ್ಯೆಪಂಜಾಬಿ ಭಾಷಿಕರುಶೇಕಡವಾರು
೧೯೭೧೫೪೮,೧೫೯,೬೫೨೧೪,೧೦೮,೪೪೩೨.೫೭
೧೯೮೧೬೬೫,೨೮೭,೮೪೯೧೯,೬೧೧,೧೯೯೨.೯೫
೧೯೯೧೮೩೮,೫೮೩,೯೮೮೨೩,೩೭೮,೭೪೪೨.೭೯
೨೦೦೧೧೦೨೮,೬೧೦,೩೨೮೨೯,೧೦೨,೪೭೭೨.೮೩

ಟಿಪ್ಪಣಿಗಳು

ಉಲ್ಲೇಖಗಳು