ಲಲಿತಕಲೆ

ಐರೋಪ್ಯ ಶೈಕ್ಷಣಿಕ ಸಂಪ್ರದಾಯಗಳಲ್ಲಿ, ಲಲಿತಕಲೆ ಎಂದರೆ ಮುಖ್ಯವಾಗಿ ಸೌಂದರ್ಯಕ್ಕಾಗಿ ಬೆಳೆಸಲಾದ ಕಲೆ. ಹೀಗೆ ಇದು ಅಲಂಕಾರಿಕ ಕಲೆ ಅಥವಾ ಅನ್ವಯಿಕ ಕಲೆಯಿಂದ ಭಿನ್ನವಾಗಿದೆ, ಏಕೆಂದರೆ ಇವು ಯಾವುದಾದರೂ ವ್ಯಾವಹಾರಿಕ ಕಾರ್ಯವನ್ನು ಕೂಡ ಸಾಧಿಸಬೇಕು, ಉದಾಹರಣೆಗೆ ಕುಂಬಾರಿಕೆ ಅಥವಾ ಬಹುತೇಕ ಲೋಹಗೆಲಸ. ಇಟ್ಯಾಲಿಯನ್ ನವೋದಯ ಕಾಲದಲ್ಲಿ ಅಭಿವೃದ್ಧಿಪಡಿಸಲಾದ ಸೌಂದರ್ಯಶಾಸ್ತ್ರದ ಸಿದ್ಧಾಂತಗಳಲ್ಲಿ, ಅತ್ಯುನ್ನತ ಕಲೆಯೆಂದರೆ ಕಲಾವಿದನ ಕಲ್ಪನೆಯ ಸಂಪೂರ್ಣ ಅಭಿವ್ಯಕ್ತಿ ಹಾಗೂ ಪ್ರದರ್ಶನಕ್ಕೆ ಅವಕಾಶ ನೀಡುವಂಥದ್ದಾಗಿತ್ತು, ಮತ್ತು ಯಾವುದೇ ವ್ಯಾವಹಾರಿಕ ಪರಿಶೀಲನೆಗಳಿಂದ ಅನಿರ್ಬಂಧಿತವಾಗಿರುತ್ತಿತ್ತು.

ಐತಿಹಾಸಿಕವಾಗಿ, ಐದು ಮುಖ್ಯ ಲಲಿತಕಲೆಗಳೆಂದರೆ ಚಿತ್ರಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಸಂಗೀತ ಮತ್ತು ಕಾವ್ಯ, ಜೊತೆಗೆ ಪ್ರದರ್ಶನ ಕಲೆಗಳಲ್ಲಿ ನಾಟಕ ಕಲೆ ಹಾಗೂ ನೃತ್ಯ ಸೇರಿವೆ.[೧] ಆಚರಣೆಯಲ್ಲಿ, ಶಿಕ್ಷಣದ ಹೊರಗೆ ಈ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಕೇವಲ ದೃಶ್ಯ ಕಲೆಗಳಿಗೆ ಅನ್ವಯಿಸಲಾಗುತ್ತದೆ.

ಬದಲಾವಣೆ ಜಗದ ನೀಯಮ ಆದರೇ ಆ ಬದಲಾವನೇ ಹಿಡೀತದಲೀ ಹಿಡಿದುಕೋಲು ವುದು ಅಷ್ಟೇ ಮುಖ್ಯ ಆಲವೇ?..