ವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)

ಯಾವುದೇ ಒಂದು ರೋಗಕ್ಕೆ ಪ್ರತಿರೋಧಕ(ಇಮ್ಯುನಿಟಿ) ಶಕ್ತಿಯನ್ನು ಉತ್ಪಾದಿಸುವ ಪ್ರತಿಜನಕ (ಆಂಟಿಜೆನಿಕ್‌‌) ವಸ್ತುವನ್ನು (ಒಂದು ಲಸಿಕೆ) ನೀಡುವ ಪ್ರಕ್ರಿಯೆಗೆ ವ್ಯಾಕ್ಸಿನೇಷನ್‌ (ಲಸಿಕೆಯನ್ನು ಹಾಕುವುದು) ಎಂದು ಕರೆಯಲಾಗುತ್ತದೆ. ಲಸಿಕೆಗಳು ಅನೇಕ ರೋಗಕಾರಕು ಉಂಟುಮಾಡುವಂತಹ ಸೋಂಕುಗಳಿಂದಾಗುವ ದುಷ್ಪರಿಣಾಮವನ್ನು ಸುಧಾರಿಸುತ್ತವೆ ಅಥವಾ ತಡೆಗಟ್ಟುತ್ತವೆ. ಅನೇಕ ಲಸಿಕೆಗಳ ಪೈಕಿ ವೈರಸ್ ರೋಗದ ಲಸಿಕೆ‌ [೧], HPV ಲಸಿಕೆ [೨] ಮತ್ತು ಸೀತಾಳೆ ಸಿಡುಬು (ಚಿಕನ್‌ಪಾಕ್ಸ್‌) ಲಸಿಕೆಗಳು[೩] ಉಪಯುಕ್ತವಾಗಿವೆ ಎನ್ನುವುದಕ್ಕೆ ಬಲವಾದ ಸಾಕ್ಷಿಗಳಿವೆ. ಲಸಿಕೆ ಹಾಕುವ ಪ್ರಕ್ರಿಯೆಯು ,ಸಾಮಾನ್ಯವಾಗಿ ರೋಗವನ್ನು ತಡೆಗಟ್ಟ ಬಹುದಾದ ಅತಿ ಕಡಿಮೆ ವೆಚ್ಚದ ಹಾಗೂ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ. ಈ ರೀತಿ ನೀಡಲಾದ ಲಸಿಕೆಯು ಜೀವಂತ ಆದರೆರೋಗಕಾರಕದ(ಬ್ಯಾಕ್ಟೀರಿಯ ಅಥವಾ ವೈರಸ್‌ಗಳು) ಕ್ಷೀಣ ರೂಪವಾಗಿರಬಹುದು , ಈ ರೋಗಕಾರಕಗಳ ಸತ್ತ ಅಥವಾ ನಿಷ್ಕ್ರಿಯ ರೂಪಗಳಾಗಿರಬಹುದು, ಅಥವಾ ಪ್ರೋಟೀನ್‌ ಮಾದರಿಯ ಶುದ್ಧೀಕರಿಸಿದ ವಸ್ತುಗಳಾಗಿರಬಹುದು.

ಬಾಯಿಯ ಮೂಲಕ ಪೋಲಿಯೊ ಲಸಿಕೆ ಪಡೆಯುತ್ತಿರುವ ಮಗು.

ಮನುಷ್ಯರು ಇತರೆ ಸೋಂಕುಗಳಿಂದ ತಮ್ಮನ್ನು ತಾವೇ ಉದ್ದೇಶಪೂರ್ವಕವಾಗಿ ಚುಚ್ಚಿಕೊಂಡು ತಡೆಯಲೆತ್ನಿಸಿದ ಮೊದಲ ರೋಗವೇ ಸಿಡುಬು (ಸ್ಮಾಲ್‌ ಪಾಕ್ಸ್‌). ಸಿಡುಬನ್ನು ತಡೆಗಟ್ಟಲು ಲಸಿಕೆ ಹಾಕುವ (ಇನಾಕ್ಯುಲೇಷನ್‌ನ) ಪದ್ಧತಿಯು ಚೀನಾ ಅಥವಾ ಭಾರತದಲ್ಲಿ 200 BCಗೂ ಹಿಂದೆ ಪ್ರಾರಂಭವಾಯಿತು. [೪] ಇಸವಿ 1718ರಲ್ಲಿ ಲೇಡಿ ಮೇರಿ ವೊರ್ಟ್ಲೆ ಮಾಂಟಗು ವರದಿ ಮಾಡಿದ ಪ್ರಕಾರ, ತುರ್ಕರು ಉದ್ದೇಶಪೂರ್ವಕವಾಗಿ ಸಿಡುಬನ್ನು ಕ್ಷೀಣಿಸುವ ಅಂಶಗಳುಳ್ಳ ದ್ರವವನ್ನು ಚುಚ್ಚಿಕಕೊಳ್ಳುತ್ತಿದ್ದರು, ಹಾಗೂ ಆಕೆ ತಮ್ಮ ಮಕ್ಕಳಿಗೂ ಸಹ ಚುಚ್ಚಿದ್ದರಂತೆ. [೫] 1796ರ ಮೊದಲು ಬ್ರಿಟಿಷ್‌ ವೈದ್ಯ ಎಡ್ವರ್ಡ್‌ ಜೆನರ್‌, ಮೊದಲ ಬಾರಿಗೆ ದನದ ಸಿಡುಬಿನ ಲಸಿಕೆಯನ್ನು ಬಳಸಿ ಮನುಷ್ಯರಲ್ಲಿ ಸಿಡುಬಿಗೆ ಪ್ರತಿರಕ್ಷಣೆಯಾಗಿ ಬಳಸುವ ಸಾಧ್ಯತೆಯನ್ನು ಪರಿಶೀಲಿಸಿದರು. ಇದಕ್ಕೆ ಮುಂಚೆ ಹಲವು ವರ್ಷಗಳ ಹಿಂದೆ ಕನಿಷ್ಠ ಪಕ್ಷ ಆರು ವ್ಯಕ್ತಿಗಳು ಇದನ್ನು ಮಾಡಿದ್ದರು. ಒಬ್ಬ ಅಜ್ಞಾತ ವ್ಯಕ್ತಿ, ಇಂಗ್ಲೆಂಡ್‌ (ಸುಮಾರು 1771), ಶ್ರೀಮತಿ ಸೆವೆಲ್, ಜರ್ಮನಿ (ಸುಮಾರು 1772), ಶ್ರೀ. ಜೆನ್‌ಸೆನ್‌, ಜರ್ಮನಿ (ಸುಮಾರು 1770); ಬೆಂಜಮಿನ್‌ ಜೆಸ್ಟಿ, ಇಂಗ್ಲೆಂಡ್, 1774, ಶ್ರೀಮತಿ ರೆಂಡಾಲ್‌, ಇಂಗ್ಲೆಂಡ್‌ (ಸುಮಾರು 1782), ಹಾಗೂ ಪೀಟರ್‌ ಪ್ಲೆಟ್‌, ಜರ್ಮನಿ, 1791. [೬]

'ವ್ಯಾಕ್ಸಿನೇಷನ್‌' ಎನ್ನುವ ಪದವನ್ನು ಮೊದಲ ಬಾರಿಗೆ ಎಡ್ವರ್ಡ್‌ ಜೆನ್ನರ್ 1796ರಲ್ಲಿ ಬಳಸಿದರು. ಲೂಯಿಸ್‌ ಪಾಶ್ಚರ್ ಸೂಕ್ಷ್ಮಜೀವವಿಜ್ಞಾನದಲ್ಲಿ ಮಾಡಿದ ಪ್ರವರ್ತನಕಾರಿ ಸಂಶೋಧನೆಗಳಿಂದಾಗಿ ಈ ಪರಿಕಲ್ಪನೆಯು ವಿಸ್ತಾರವಾಯಿತು. ಇದನ್ನು 'ವ್ಯಾಕ್ಸಿನೇಷನ್ (ಲಸಿಕೆಹಾಕಿಸುವುದು)' Latin: vacca—cow ಎಂದು ಕರೆಯಲು ಕಾರಣವೇನೆಂದರೆ, ಹಸುಗಳಿಗೆ ಸೋಂಕು ತಗುಲಿಸಿದ 'ದನದ ಸಿಡುಬು' ಎಂಬ ಸೌಮ್ಯ ವೈರಸ್‌ನಿಂದ ಮೊದಲ ಲಸಿಕೆಯನ್ನು ಸಂಶ್ಲೇಷಿಸಿ ಪಡೆಯಲಾಯಿತು. ಈ ಹೊಸ ಲಸಿಕೆಯು ಸಾಂಕ್ರಾಮಿಕ ಹಾಗೂ ಮಾರಕ ಸಿಡುಬಿನ ವಿರುದ್ಧ ಕೆಲ ಪ್ರಮಾಣದ ಪ್ರತಿರಕ್ಷಣೆ ನೀಡಿತು. ರೂಢಿ ಮಾತಿನಲ್ಲಿ 'ವ್ಯಾಕ್ಸಿನೇಷನ್‌' ಮತ್ತು 'ಇಮ್ಯುನೈಸೇಷನ್' ಎರಡೂ ಪದಗಳಿಗೂ ಸಾಮಾನ್ಯವಾಗಿ ಒಂದೇ ಅರ್ಥದ ಪದಗಳಾಗಿ ಬಳಸಲಾಗುತ್ತದೆ. ಕ್ಷೀಣವಾಗಿಸಿರದ ಜೀವಂತ ರೋಗಕಾರಕಗಳನ್ನು ಬಳಸುವ ರೋಗಾಣು ಚುಚ್ಚಿಕೆ (ಇನಾಕ್ಯುಲೇಷನ್) ಪ್ರಕ್ರಿಯೆಗಿಂತಲೂ ಇದು ಭಿನ್ನವಾಗಿದೆ. ಆದರೂ ಸಾಮಾನ್ಯ ಬಳಕೆಯಲ್ಲಿ, ಪ್ರತಿರಕ್ಷಣೆಯನ್ನು ಉಲ್ಲೇಖಿಸಲು ಇವೆರಡನ್ನೂ ಬಳಸಲಾಗಿದೆ. ಆದರೆ, ಸಾಮಾನ್ಯವಾಗಿ 'ಲಸಿಕೆ ಹಾಕುವಿಕೆ' ಎಂಬ ಉಕ್ತಿಯನ್ನು ವಿಶಿಷ್ಟವಾಗಿ ಸಿಡುಬು ಲಸಿಕೆ ಹಾಕುವ ಪ್ರಕ್ರಿಯೆಗೆ ಬಳಸಲಾಗುತ್ತಿತ್ತು.[೪] [೬]


ನೈತಿಕ, ರಾಜಕೀಯ, ವೈದ್ಯಕೀಯ ಸುರಕ್ಷತೆ, ಧಾರ್ಮಿಕ ಮತ್ತಿತ್ತರ ಆಧಾರಗಳ ಮೇಲೆ, ಲಸಿಕೆ ಹಾಕುವ ಯತ್ನಗಳಿಗೆ ಆರಂಭದಿಂದಲೂ ಒಂದಲ್ಲ ಒಂದು ವಿವಾದ ಎದುರಾಗುತ್ತಲಿದೆ. ಕೆಲವೊಂದು ವಿರಳ ಸಂದರ್ಭಗಳಲ್ಲಿ, ಲಸಿಕೆ ಹಾಕಿದ್ದರಿಂದ‌ ಜನರಿಗೆ ಹಾನಿಯಾಗಿರಬಹುದು; ಈ ಹಾನಿಗಳಿಗೆ ಸೂಕ್ತ ಪರಿಹಾರವನ್ನೂ ಪಡೆದಿದ್ದಾರೆ.

ಆರಂಭಿಕ ಯಶಸ್ಸು ಮತ್ತು ಲಸಿಕೆಯ ಕಡ್ಡಾಯ ಬಳಕೆಯಿಂದಾಗಿ ವ್ಯಾಪಕ ಸ್ವೀಕೃತಿಯಾಗಿದೆ. ಹಲವು ಸಾಮೂಹಿಕ ಲಸಿಕಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಇದರಿಂದಾಗಿ ಹಲವಾರು ಭೌಗೋಳಿಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡಿದ್ದ ವಿವಿಧ ರೋಗಗಳನ್ನು ಕಡಿಮೆಮಾಡಲು  ಬಹಳಷ್ಟು  ಸಹಾಯವಾಯಿತು.

ಕಾರ್ಯವಿಧಾನದ ವೈಖರಿ

ಸಾಮಾನ್ಯವಾಗಿ ಹೇಳುವುದಾದರೆ, ಪ್ರತಿರಕ್ಷಿತ ವ್ಯವಸ್ಥೆ (ಇಮ್ಯೂನ್‌ ಸಿಸ್ಟಮ್‌)ಯನ್ನು 'ಇಮ್ಯೂನೋಜೆನ್' (ರೋಗಕ್ಕೆ ಪ್ರತಿರಕ್ಷಕ ಪ್ರತಿಕ್ರಿಯೆ ಪ್ರಚೋದಿಸುವ ವಸ್ತು) ಬಳಸಿ ವೇಗವರ್ಧಿಸುವ ಮೂಲಕ, ಸಾಂಕ್ರಾಮಿಕ ರೋಗಗಳ ವಿರುದ್ಧ ಕೃತಕ ರಕ್ಷಣೆ ಪಡೆಯುವ ಪ್ರಕ್ರಿಯೆ ನಡೆಯುತ್ತದೆ. ರೋಗಕಾರಕವೊಂದನ್ನು ಬಳಸಿ ಪ್ರತಿರಕ್ಷಣೆ ಪ್ರತಿಕ್ರಿಯೆ ಪ್ರಚೋದಿಸುವುದನ್ನು ಪ್ರತಿರಕ್ಷಣೆ (ಇಮ್ಯೂನೈಸೇಷನ್) ಅಥವಾ 'ಸೋಂಕಾಗದಂತೆ ರಕ್ಷಿಸುವಿಕೆ' ಎಂದು ಕರೆಯುತ್ತಾರೆ. ಲಸಿಕೆ ನೀಡುವ ಪ್ರಕಿಯೆಯು ಒಂದು ಅಥವಾ ಹೆಚ್ಚು ಇಮ್ಯೂನೋಜೆನ್‌ ನೀಡುವುದನ್ನು ಒಳಗೊಂಡಿರುತ್ತದೆ, ಇದನ್ನು ಅನೇಕ ರೂಪಗಳಲ್ಲಿ ಕೊಡಬಹುದು.

ವ್ಯಕ್ತಿಗೆ ರೋಗ ಅಂಟಿದ ನಂತರವೇ ಕೆಲವು ಆಧುನಿಕ ಲಸಿಕೆಗಳನ್ನು ನೀಡಲಾಗುತ್ತದೆ. AIDS, ಕ್ಯಾನ್ಸರ್ ಹಾಗೂ ಆಲ್ಝೈಮರ್ಸ್‌ ರೋಗಗಳ ಲಸಿಕೆ ವಿಚಾರದಲ್ಲಿ ಈ ರೀತಿ ಮಾಡಲಾಗುತ್ತದೆ. ಸಿಡುಬಿಗೆ ಈಡಾಗಿ ನಾಲ್ಕು ದಿನಗಳೊಳಗೆ ವ್ಯಾಕ್ಸಿನಿಯಾ (ಸಿಡುಬಿಗೆ ಪರಿಹಾರವಾಗಿ ಬಳಸುವ ಸಿಡುಬು ವೈರಸ್) ನೀಡಲಾದಲ್ಲಿ, ರೋಗವನ್ನು ಗಮನಾರ್ಹವಾಗಿ ದುರ್ಬಲಗೊಳಿಸುತ್ತದೆ. ರೋಗ ತಗುಲಿ ಒಂದು ವಾರದೊಳಗೆ ಲಸಿಕೆ ನೀಡಿದಲ್ಲಿ ಸ್ವಲ್ಪಮಟ್ಟಿಗೆ ಸಹಾಯಕವಾಗಬಹುದು ಎಂದು ಕಂಡುಬಂದಿದೆ.

ಹುಚ್ಚು ನಾಯಿ (ರಾಬಿಡ್‌) ಕಚ್ಚಿದ ಒಂದು ಮಗುವಿಗೆ ಲೂಯಿಸ್ ಪಾಶ್ಚರ್ ಮೊದಲ ರೇಬೀಸ್‌ ಲಸಿಕೆ ಕೊಟ್ಟರು. ತರುವಾಯ, ಸಾಮಾನ್ಯವಾಗಿ ರೇಬೀಸ್‌ ರೋಗಲಕ್ಷಣಗಳು ಸಂದೇಹಿಸಲ್ಪಟ್ಟಾಗ ಇದರ ಪ್ರತಿರಕ್ಷಣೆ ಮಾಡಲಾಗುತ್ತಿದ್ದು, ಈ ವಿಧಾನ ಯಶಸ್ವಿಯಾಗಿದೆ.  ಇಂತಹ ಪ್ರತಿರಕ್ಷಣಾ ಪ್ರಕ್ರಿಯೆಗಳ ಹಿಂದಿನ ಅಗತ್ಯ ಪ್ರಾಯೋಗಿಕ ವಿಧಾನವೇನೆಂದರೆ, ಲಸಿಕೆಯು ಸಹಜ ಸೋಂಕಿಗಿಂತಲೂ ವೇಗವಾಗಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ.


ಕರುಳುಗಳಲ್ಲಿ ಸಮರ್ಪಕವಾಗಿ ಹೀರಿಕೊಳ್ಳಲಾರದ ಕಾರಣ, ಹಲವು ಲಸಿಕೆಗಳನ್ನು ಚರ್ಮದ ಕೆಳಗೆ ಚುಚ್ಚಲಾಗುತ್ತದೆ. ಕರುಳ ಭಾಗದಲ್ಲಿ ಪ್ರತಿರಕ್ಷಣಾ ಕ್ಷಮತೆ ಹೆಚ್ಚಿಸಲು, ಜೀವಿತ, ದುರ್ಬಲಗೊಳಿಸಲಾದ ಪೋಲಿಯೊ, ಕೆಲ ಟೈಫಾಯಿಡ್‌ ಹಾಗು ಕಾಲರ ಲಸಿಕೆಗಳನ್ನು ಬಾಯಿಯ ಮೂಲಕ ನಿಡಲಾಗುತ್ತದೆ.

ಸಹೌಷಧ ಮತ್ತು ಸಂರಕ್ಷಕಗಳು

ಲಸಿಕೆಗಳು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚಿನ ಸಹೌಷಧಗಳನ್ನು (ಆಜ್ಯುವೆಂಟ್) ಹೊಂದಿರುತ್ತದೆ; ಇದನ್ನು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ. ಉದಾಹರಣೆಗೆ ಟೆಟಾನಸ್‌ ಟಾಕ್ಸಾಯಿಡ್‌ನ್ನು ಆಲಮ್‌ಗೆ ಅಡ್ಸಾರ್ಬ್‌ ಮಾಡಲಾಗುತ್ತದೆ (ಹೊರಹೀರಲಾಗುತ್ತದೆ). ಹೀಗೆ ಮಾಡುವುದರಿಂದ, ಸರಳ ಟೆಟಾನಸ್‌ ಟಾಕ್ಸಯಿಡ್‌‌ನ ದ್ರವ್ಯ ಉಂಟು ಮಾಡುವ ಪ್ರತಿಕ್ರಿಯೆಗಿಂತ ಹೆಚ್ಚಿನ ಪ್ರಮಾಣದ ಪ್ರತಿಕ್ರಿಯೆಯನ್ನು ಉಂಟುಮಾಡುವ ಹಾಗೆ ಈ ಆಂಟಿಜನ್‌ ಅನ್ನು ರೂಪಿತವಾಗುತ್ತದೆ. ಅಡ್ಸಾರ್ಬ್‌ಯಾದ ಟೆಟಾನಸ್ ಟಾಕ್ಸಯಿಡ್‌ಗೆ ವ್ಯತಿರಿಕ್ತವಾಗಿ ಪ್ರತಿಕ್ರಿಯಿಸುವ ಜನರಿಗೆ ಬೂಸ್ಟರ್ (ಪರಿಣಾವ ಮರುಕಳಿಸಲು ಅಥವಾ ಹೆಚ್ಚಿಸಲು ನೀಡುವ ಔಷಧ) ಕೊಡಬೇಕಾದಾಗ ಸರಳ ಲಸಿಕೆ‌ ಅನ್ನು ಕೊಡಲಾಗುತ್ತದೆ.

ಈ ಹಿಂದೆ 1990ರಲ್ಲಿ ಗಲ್ಫ್‌ನಲ್ಲಿ ನಡೆದ ಸೈನಿಕ ಕಾರ್ಯಾಚರಣೆಗೆ ತಯಾರಿ ನಡೆಸುವಾಗ, ಪೆರ್ಟುಸಿಸ್‌ ಲಸಿಕೆ‌ (ಜೀವಕೋಶವಿರುವ) ಯನ್ನು ಅಂಥ್ರಾಕ್ಸ್‌ ಲಸಿಕೆ‌ಗೆ ಸಹೌಷಧವನ್ನಾಗಿ ಬಳಸಲಾಯಿತು. ಕೇವಲ ಅಂಥ್ರಾಕ್ಸ್‌ ಕೊಡುವುದಕ್ಕಿಂತ ಇದು ಶೀಘ್ರ ಗತಿಯ ಪ್ರತಿರೋಧಕ ಶಕ್ತಿಯನ್ನು ಉಂಟು ಮಾಡುತ್ತದೆ; ರೋಗ ಬರುವ ಸಂಭವಗಳು ಜಾಸ್ತಿಯಿದ್ದ ಕಾರಣ ಇದು ಹೆಚ್ಚು ಪರಿಣಾಮಕಾರಿಯಾಯಿತು.

ಇದಲ್ಲದೆ ಲಸಿಕೆ‌ಗಳು ಕೆಲವು ಸಂರಕ್ಷಕಗಳನ್ನು ಕೂಡ ಒಳಗೊಂಡಿರಬಹುದು; ಇದನ್ನು ಬ್ಯಾಕ್ಟೀರಿಯ ಅಥವಾ ಫಂಗೈ(ಶಿಲೀಂಧ್ರ) ಗಳಿಂದಾಗಬಹುದಾದ ಸೋಂಕನ್ನು ತಡೆಗಟ್ಟಲು ಬಳಸಲಾಗುತ್ತದೆ. ತೀರ ಇತ್ತೀಚಿನವರೆಗೆ, ಥಿಯೊಮೆರ್ಸಲ್ ಎನ್ನುವ ಸಂರಕ್ಷಕವನ್ನು ಜೀವಂತ (ಲೈವ್) ವೈರಸ್‌ ಇರದ ಅನೇಕ ಲಸಿಕೆ‌ಗಳಲ್ಲಿ ಬಳಸಲಾಗುತ್ತಿತ್ತು.As of 2005 U.S.(ಯು.ಎಸ್) ನಲ್ಲಿ ಬಳಸಲಾಗುವ ಚಿಕ್ಕಮಕ್ಕಳಿಗೆ ಕೊಡುವ ಲಸಿಕೆ‌ಗಳ ಪೈಕಿ ಥಿಯೊಮೆರ್ಸಲ್ ಅಂಶವು ಅತ್ಯಲ್ಪ ಪ್ರಮಾಣಕ್ಕಿಂತ(ಟ್ರೇಸ್‌) ಹೆಚ್ಚಿನ ಪ್ರಮಾಣದಲ್ಲಿರುವ ಲಸಿಕೆ‌ ಎಂದರೆ ಇನ್‌ಫ್ಲೂಯೆಂಜ ಲಸಿಕೆ‌ [೧] Archived 2005-12-10 ವೇಬ್ಯಾಕ್ ಮೆಷಿನ್ ನಲ್ಲಿ.. ಇದನ್ನು ಪ್ರಸ್ತುತ ಕೆಲವು ನಿರ್ದಿಷ್ಟ ಅಪಾಯಕಾರಿ ಲಕ್ಷಣಗಳನ್ನು ಎದುರಿಸುತ್ತಿರುವ ಮಕ್ಕಳಿಗೆ ಮಾತ್ರವೆ ಶಿಫಾರಸ್ಸು ಮಾಡಲಾಗಿದೆ.[೭] UK(ಯು.ಕೆ) ಮಕ್ಕಳಿಗೆ ಇನ್‌ಫ್ಲುಯೆಂಜ ತಡೆಗಟ್ಟುವ ಸಲುವಾಗಿ ಲಸಿಕೆ ಕೊಡುವ ಕಾರ್ಯಕ್ರಮವನ್ನು (ಇನ್‌ಫ್ಲುಯೆಂಜ ಇಮ್ಯೂನೈಸೇಷನ್‌), 2006-7 ರಿಂದ ಶುರುಮಾಡಲು ಯೋಜಿಸುತ್ತಿದೆ. UK ಯಲ್ಲಿ ಸಿಗುವ ಸಿಂಗಲ್‌ ಡೋಸ್‌ ಇನ್‌ಫ್ಲುಯೆಂಜ ವ್ಯಾಕ್ಸೀನಿನ ಘಟಕಾಂಶವಾಗಿ ಥಿಯೊಮೆರ್ಸಲ್ (UKಯಲ್ಲಿ ಅದರ ಹೆಸರು) ಅನ್ನು ನಮೂದಿಸುವುದಿಲ್ಲ. ಸಂರಕ್ಷಕಗಳನ್ನು ಲಸಿಕೆ‌ ತಯಾರಿಸುವ ವಿವಿಧ ಹಂತಗಳಲ್ಲಿ ಬಳಸಬಹುದು; ಪರಿಮಾಣಗಳನ್ನು ಕಂಡುಹಿಡಿಯಲು ಬಳಸುವ ಅತ್ಯಾಧುನಿಕವಾದ ವಿಧಾನಗಳ ಮೂಲಕ ಅಂತ್ಯ ಉತ್ಪನ್ನದಲ್ಲಿ, ಪರಿಸರದಲ್ಲಿ ಹಾಗು ಒಟ್ಟಿನಲ್ಲಿ ಸಹಜವಾಗಿರಬಹುದಾದ ಕಾರಣದಿಂದ, ಸ್ವಲ್ಪ ಮಟ್ಟಿಗಿನ ಅಲ್ಪಪ್ರಮಾಣದಲ್ಲಿ(ಟ್ರೇಸ್‌) ಸಂರಕ್ಷಕಗಳು ಪತ್ತೆಯಾಗಬಹುದು[೨] Archived 2007-09-29 ವೇಬ್ಯಾಕ್ ಮೆಷಿನ್ ನಲ್ಲಿ..

ವ್ಯಾಕ್ಸಿನೇಷನ್ ಮತ್ತು ಇನಾಕ್ಯುಲೇಷನ್

ಅನೇಕ ಸಂದರ್ಭಗಳಲ್ಲಿ ಈ ಎರಡೂ ಪದಗಳನ್ನು ಸಮಾನಾರ್ಥಕ ಪದಗಳಂತೆ ಅದಲುಬದಲಿಯಾಗಿ ಬಳಸಲಾಗುತ್ತದೆ. ಆದರೆ ವಾಸ್ತವವಾಗಿ ಎರಡೂ ಬೇರೆಬೇರೆ. ಡಾಕ್ಟರ್ ಬೈರಾನ್‌ ಪ್ಲಾಂಟ್‌ ಹೀಗೆ ವಿವರಿಸುತ್ತಾರೆ: "ವ್ಯಾಕ್ಸಿನೇಷನ್ ಎಂಬುದು ಸಾಮಾನ್ಯವಾಗಿ ಬಳಸುವಂತಹ ಪದವಾಗಿದ್ದು, ಇದು ದನದ ಸಿಡುಬಿ(ಕೌ ಪಾಕ್ಸ್‌) ನಿಂದ ನರಳುತ್ತಿರುವ ದನದಿಂದ ತೆಗೆಯಲಾಗಿರುವ "ಸುರಕ್ಷಿ"ತವಾದ ಚುಚ್ಚುಮದ್ದಿನ ಮಾದರಿಯನ್ನು ಒಳಗೊಂಡಿರುತ್ತದೆ... ಇನಾಕ್ಯುಲೇಷನ್‌, ಈ ಪದ್ಥತಿಯು ರೋಗದಷ್ಟೆ ಹಳೆಯದಿರಬಹುದು, ಈ ವಿಧಾನದಲ್ಲಿ ಸಿಡುಬು ಬಂದಿರುವ ವ್ಯಕ್ತಿಯ ಗುಳ್ಳೆ ಅಥವಾ ಹಕ್ಕಳೆಗಳಿಂದ ಪಡೆದ ವೇರಿಯೊಲ ವೈರಸ್‌‌ನ ಚುಚ್ಚುಮದ್ದನ್ನು ವ್ಯಕ್ತಿಯ ಚರ್ಮದ ಮೇಲ್ಪದರಗಳ ಮೇಲೆ ಸಾಮಾನ್ಯವಾಗಿ ತೋಳಿನ ಮೇಲ್ಭಾಗಕ್ಕೆ ನೀಡಲಾಗುತ್ತದೆ. ಯಾವಾಗಲು ಇನಾಕ್ಯುಲೇಷನ್‌ ಅನ್ನು ತೋಳಿನಿಂದ ತೋಳಿಗೆ" ಅಥವಾ ಕಡಿಮೆ ಪರಿಣಾಮಕಾರಿಯಾಗಿ "ಹಕ್ಕಳೆಯಿಂದ ತೋಳಿಗೆ" ಮಾಡಲಾಗುತ್ತಿತ್ತು ....[೮]

ವ್ಯಾಕ್ಸಿನೇಷನ್‌ ಕೇವಲ ಹದಿನೆಂಟನೇ ಶತಮಾನದಲ್ಲಿ ಎಡ್ವರ್ಡ್‌ ಜೆನ್ನರ್ ನ ಆಧ್ಯಯನಗಳ ನಂತರ ಪ್ರಾರಂಭವಾಯಿತು.[೯][೧೦][೧೧]

ವಿಧಗಳು

ಪ್ರತಿರೋಧಕ ಪ್ರಕ್ರಿಯೆಯನ್ನು ಉಂಟುಮಾಡಲು ಹೊರಗಿನ ಪ್ರತಿಜನಕ(ಪ್ರತಿಜನಕ) ಒಂದನ್ನು ಇಮ್ಯೂನ್‌ ಸಿಸ್ಟಂ(ಪ್ರತಿರಕ್ಷಿತ ವ್ಯವಸ್ಥೆ)ಒಳಗೆ ಸೇರಿಸಿಸುದರಿಂದ ಎಲ್ಲಾ ವ್ಯಾಕ್ಸಿನೇಷನ್‌ಗಳು ಕಾರ್ಯ ನಿರ್ವಹಿಸುತ್ತವೆ. ಆದರೆ ಇದನ್ನು ಮಾಡಲು ಇನ್ನೂ ಅನೇಕ ವಿಧಾನಗಳಿವೆ. ಪ್ರಸ್ತುತದಲ್ಲಿ ವೈದ್ಯಕೀಯ ಬಳಕೆಯಲ್ಲಿರುವ ನಾಲ್ಕು ಪ್ರಮುಖ ವಿಧಾನಗಳು:

  1. ನಿಷ್ಕ್ರಿಯ ಲಸಿಕೆಯು ನಿಯಂತ್ರಿತ ಪರಿಸರದಲ್ಲಿ ಬೆಳೆದಂತಹ ವೈರಸ್ ಅಂಶಗಳನ್ನು ಒಳಗೊಂಡಿರುತ್ತದೆ.ಅಲ್ಲದೇ ನಂತರ ಶಾಖ ಹಾಗು ಫಾರ್ಮಿಲ್ಡಿಹೈಡ್‌ ಅನಿಲವನ್ನು ಬಳಸಿ ಅವುಗಳನ್ನು ಸಾಯಿಸಲಾಗುತ್ತದೆ. ಈ ವೈರಸ್‌ ಅಂಶಗಳು ನಾಶವಾಗಿದ್ದು,ನಕಲು ಮಾಡಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡಿರುತ್ತದೆ, ಆದರೂ ವೈರಸ್‌ನ ಕಾಪ್ಸಿಡ್‌ ಪ್ರೋಟೀನ್‌ಗಳು ನಾಶವಾಗಿರುವುದಿಲ್ಲ, ಇದನ್ನು ಪ್ರತಿರಕ್ಷಿತ ವ್ಯವಸ್ಥೆ ಗುರುತಿಸಿ ಇದಕ್ಕೆ ತಕ್ಕುದಾದ ಪ್ರತಿಕ್ರಿಯೆಯನ್ನು ಉಂಟುಮಾಡುತ್ತದೆ. ಸರಿಯಾಗಿ ತಯಾರಿಸಲ್ಪಟ್ಟರೆ, ಈ ಲಸಿಕೆ ಸೋಂಕುಕಾರಕವಲ್ಲ, ಆದರೆ ನಿಷ್ಕ್ರಿಯತೆಯನ್ನು ಸರಿಯಾಗಿ ಉಂಟುಮಾಡಲಾಗದಿದ್ದಾಗ ಇದು ಸೋಂಕು ತಗಲಲು ಶಕ್ತವಾದ ಪಾದರ್ಥಗಳನ್ನು ಉತ್ಪತ್ತಿಸುತ್ತದೆ. ಸರಿಯಾಗಿ ತಯಾರಿಸಿದ ಲಸಿಕೆ‌ಗಳು ಪುನರುತ್ಪಾನೆಯಾಗದ ಕಾರಣದಿಂದಾಗಿ, ಪ್ರತಿರಕ್ಷಿತ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಹೆಚ್ಚುವರಿಯಾದ ಬಲವರ್ಧಕ ಡೋಸ್‌ಗಳನ್ನು ನಿಯತಕಾಲದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ.
  2. ಶಕ್ತಿಯನ್ನು ತಗ್ಗಿಸಿರುವ ಲಸಿಕೆ‌ಗಳಲ್ಲಿ, ಕಡಿಮೆ ಶಕ್ತಿಯಿರುವ ಜೀವಂತ(ಲೈವ್) ವೈರಸ್‌ನ ಅಂಶಗಳನ್ನು ಕೊಡಲಾಗುತ್ತದೆ. ಇದು ಬಹಳ ನಿಧಾನವಾಗಿ ಪುನರುತ್ಪಾದನೆಯಾಗುತ್ತವೆ. ಇದು ಪುನರುತ್ಪಾದನೆಯಾಗುವುದರಿಂದ ಹಾಗು ಪ್ರಾಥಮಿಕ ವ್ಯಾಕ್ಸಿನೇಷನ್‌ ಸ್ಥಿತಿಯಲ್ಲೇ ಪ್ರತಿಜನಕವನ್ನು ಉತ್ಪಾದಿಸುವ ಶಕ್ತಿ ಹೊಂದಿರುವುದರಿಂದ,ಮತ್ತೆ ಮತ್ತೆ ಬಲವರ್ಧಕಗಳ ಅವಶ್ಯಕತೆ ಇರುವುದಿಲ್ಲ. ಈ ವಾಕ್ಸೀನ್‌ಗಳನ್ನು, ಪ್ರಾಣಿಗಳ ಕೋಶದ ನಿಯಂತ್ರಿತ ಪರಿಸರದಲ್ಲಿ ವೈರಸ್ ಗಳನ್ನು ಸಾಗಿಸುವುದರಿಂದ ಉತ್ಪಾದಿಸಲಾಗುತ್ತದೆ, ಅಥವಾ ಹಿತಕರ ತಾಪಮಾನದಲ್ಲಿ ಕಡಿಮೆ ವಿಷಮತೆ ಉಂಟುಮಾಡುವ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ , ಅಥವಾ ವಿಕೃತಿ ಜನಕದ ಮೂಲಕ (ಮುಟಾಜೆನಿಸಿಸ್‌) ಅಥವಾ ವಿಷಮತೆಯನ್ನು ಉಂಟು ಮಾಡಲು ಅಗತ್ಯವಿರುವ ಜೀನ್ ಗಳನ್ನು ತೆಗೆದುಹಾಕುವ ಮೂಲಕವೂ ಉತ್ಪಾದಿಸಲಾಗುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ವಿಷಮತೆಯು/ತೀವ್ರತೆಯು ವಿರುದ್ಧವಾಗುವ ಅಪಾಯವಿದೆ, ಜೀನ್ ಗಳನ್ನು ತೆಗೆದುಹಾಕುವ ಮೂಲಕ ತಯಾರಾದ ಲಸಿಕೆ‌ಗಳಲ್ಲಿ ಈ ಅಪಾಯ ಕಡಿಮೆಯಿರುತ್ತದೆ. ಅಟೆನ್ಯುಏಟೆಡ್ ಲಸಿಕೆ‌ಗಳನ್ನು (ಶಕ್ತಿಯನ್ನು ತಗ್ಗಿಸಿರುವ ಲಸಿಕೆ) ಇಮ್ಯುನೊಕಾಂಪ್ರಮೈಸಡ್‌‌ (ಪ್ರತಿರೋದಕ ಶಕ್ತಿಯನ್ನು ಕಳೆದು ಕೊಂಡಿರುವ) ವ್ಯಕ್ತಿಗಳಿಗೆ ಕೊಡಲಾಗುವುದಿಲ್ಲ.
  3. ವೈರಸ್‌-ರೀತಿಯ ವಸ್ತುಗಳಿರುವ ಲಸಿಕೆ‌ಗಳಲ್ಲಿ ವೈರಸ್‌ನ ರಾಚನಿಕ ಪ್ರೋಟೀನ್‌ಗಳಿಂದ ಪಡೆದ ವೈರಲ್‌ ಪ್ರೋಟೀನ್‌ಗಳನ್ನು ಹೊಂದಿರುತ್ತದೆ. ಈ ಪ್ರೋಟೀನ್‌ಗಳು ತಮ್ಮಷ್ಟಕ್ಕೆ ತಾವೆ ಒಪ್ಪವಾಗಿ ಕೂಡಿ, ಅವುಗಳನ್ನು ಪಡೆದ ವೈರಸ್‌ ಮಾದರಿಯ ಕಾರಕಗಳಾಗಿ ರೂಪಗೊಳ್ಳುತ್ತವೆ, ಆದರೆ ಇವುಗಳಲ್ಲಿ ವೈರಸ್‌ನ ನ್ಯುಕ್ಲಿಯಕ್‌ ಆಸಿಡ್‌(ಅಮ್ಲ) ಇರುವುದಿಲ್ಲ, ಹೀಗಾಗಿ ಇದು ಸೋಂಕುಕಾರಕವಲ್ಲ. ಇವುಗಳ ಹೆಚ್ಚು ಪ್ರತಿಉತ್ಪಾದನ ಸಾಮರ್ಥ್ಯವಿರುವ ಮಲ್ಟಿವೇಲೆಂಟ್‌(ಬಹು ವೇಲನ್ಸಿ) ರಚನೆಯು ಈ ವೈರಸ್‌ ರೀತಿಯ ವಸ್ತುಗಳನ್ನು ಅವುಗಳ ಸಬ್‌ಯುನಿಟ್‌ ಲಸಿಕೆ‌ಗಳಿಗಿಂತ (ಕಳೆಗೆ ವಿವರಿಸಲಾಗಿರುವ) ಹೆಚ್ಚು ಇಮ್ಯುನೊಜೆನಿಕ್‌ ಆಗಿಸುತ್ತವೆ. ಸದ್ಯಕ್ಕೆ ವೈದ್ಯಕೀಯ ಬಳಕೆಯಲ್ಲಿರುವ ವೈರಸ್‌ ರೀತಿಯ ವಸ್ತುಗಳನ್ನು ಆಧರಿಸಿದ ಎರಡು ಲಸಿಕೆ‌ಗಳು: ಮನುಷ್ಯರ ಪಾಪಿಲೊಮವೈರಸ್‌ ಮತ್ತು ಹೆಪಟೈಟಿಸ್‌ 'ಬಿ' ವೈರಸ್‌ಲಸಿಕೆ‌.
  4. ಸಬ್‌ಯುನಿಟ್‌(ಉಪ ಘಟಕ) ಲಸಿಕೆ‌ ಪ್ರತಿರಕ್ಷಿತ ವ್ಯವಸ್ಥೆಗೆ ವೈರಸ್‌ ಅಂಶವನ್ನು ಪೂರ್ತಿಯಾಗಿ ಆಥವಾ ಭಾಗಶ: ಸೇರಿಸದೆ ಪ್ರತಿಜನಕವನ್ನು ಮಾತ್ರ ಒದಗಿಸುತ್ತದೆ. ಇದನ್ನು ಉಂಟುಮಾಡುವ ಒಂದು ವಿಧಾನದ ಪೈಕಿ ವೈರಸ್‌ ಅಥವಾ ಬ್ಯಾಕ್ಟೀರಿಯದಿಂದ(ಉದಾಹರಣಗೆ ಬ್ಯಾಕ್ಟೀರಿಯ ಟಾಕ್ಸಿನ್‌) ನಿರ್ದಿಷ್ಟ ಪ್ರೋಟೀನ್‌ ಅನ್ನು ಬೇರ್ಪಡಿಸಿ ಅದನ್ನು ನೀಡುವುದನ್ನು ಒಳಗೊಂಡಿರುತ್ತದೆ. ಈ ವಿಧಾನದ ಕೊರತೆಯೆಂದರೆ, ಹೀಗೆ ಬೇರ್ಪಟ್ಟ ಪ್ರೋಟೀನ್‌, ಸಹಜವಾಗಿರುವ ಪ್ರೋಟೀನ್‌ಗಿಂತ ವ್ಯತಾಸವಾದ ಮೂರು ಆಯಾಮದ ರಚನೆಯನ್ನು ಹೊಂದಿರಬಹದು; ಇದು ಉಂಟು ಮಾಡುವ ಪ್ರತಿಕಾಯಗಳು ಸೋಂಕುಕಾರಕಗಳನ್ನು ಗುರುತಿಸದೆ ಹೋಗಬಹುದು. ಇದಲ್ಲದೆ, ಸಬ್‌ಯುನಿಟ್‌ ಲಸಿಕೆ‌ಗಳು ಇತರ ಲಸಿಕೆ‌ಗಳ ವಿಧಗಳಿಗಿಂತ ಕಡಿಮೆ ಪ್ರಮಾಣದ ಪ್ರತಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡಬಹುದು.

ಇತರ ಅನೇಕ ಲಸಿಕೆ‌ ತಂತ್ರಗಾರಿಕೆಗಳು ಪ್ರಾಯೋಗಿಕ ಹಂತದಲ್ಲಿದೆ. ಅವಗಳು DNA ವ್ಯಾಕ್ಸಿನೇಷನ್‌ ಮತ್ತು ರಿಕಾಂಬಿನೆಂನ್ಟ್‌ ವೈರಲ್‌ ವೆಕ್ಟ್‌ರ್‌ಗಳನ್ನು ಒಳಗೊಂಡಿದೆ.

ಇತಿಹಾಸ

ಪ್ರಥಮ ವ್ಯಾಕ್ಸಿನೇಷನ್‌ ಕುರಿತಂತೆ ಜೆನ್ನರ್ ಬರೆದಿರುವ ಹಸ್ತಪ್ರತಿ.

ಇನಾಕ್ಯುಲೇಷನ್‌ ನ ಮೊದಲ ವಿಧಾನಗಳು ಪ್ರಾಚೀನ ಚೀನದಲ್ಲಿ 200 B.C. ರಷ್ಟು ಹಿಂದೆಯೇ ಆಭಿವೃದ್ಧಿಮಾಡಲಾಗಿತ್ತು.[೪] ವಿದ್ವಾಂಸ ಒಲೆ ಲುಂಡ್‌ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ:"ವ್ಯಾಕ್ಸಿನೇಷನ್‌ ಬಗ್ಗೆ ಸಿಕ್ಕಿರುವ ಅತಿ ಹಳೆಯ ಅಧಾರಗಳು ಭಾರತ ಮತ್ತು ಚೀನಾದಲ್ಲಿ 17ನೇ ಶತಮಾನದಲ್ಲಿ ಸಿಕ್ಕಿವೆ; ಇಲ್ಲಿ ಸಿಡಬು(ಸ್ಮಾಲ್‌ಪಾಕ್ಸ್‌) ರೋಗವಿರುವ ವ್ಯಕ್ತಿಗಳಿಂದ ಪಡೆದ ವಸ್ತುಗಳಿಂದ ತಯಾರಿಸಿದ ಚುಚ್ಚುಮದ್ದುನ್ನು ಈ ರೋಗವನ್ನು ತಡೆಗಟ್ಟುವ ಸಲುವಾಗಿ ಬಳಸಲಾಗುತ್ತಿತ್ತು. ಸಿಡಬು ಆಗಿನ ಕಾಲದಲ್ಲಿ ವಿಶ್ವದಾದ್ಯಂತ ಅತ್ಯಂತ ಸಾಮಾನ್ಯ ರೋಗವಾಗಿತ್ತು; ಹಾಗು ಈ ರೋಗ ತಗುಲಿದ ಜನರ ಪೈಕಿ 20% ರಿಂದ 30% ಜನರು ಸಾವನ್ನಪ್ಪುತ್ತಿದ್ದರು. ಹದಿನೆಂಟನೇ ಶತಮಾನದಲ್ಲಿ ಯೂರೋಪಿನ ದೇಶಗಳಲ್ಲಿ ಉಂಟಾದ ಎಲ್ಲಾ ಸಾವುಗಳ ಪೈಕಿ ಶೇಕಡಾ 8 ರಿಂದ 20ರಷ್ಟು ಸಾವಿಗೆ ಸಿಡಬು ಕಾರಣವಾಗಿತ್ತು. ಇನಾಕ್ಯುಲೇಷನ್‌ ಪದ್ಧತಿಯು ಭಾರತದಲ್ಲಿ AD 1000ರಲ್ಲಿ ಪ್ರಾರಂಭವಾಗಿರಬಹುದು."[೧೨] ಇನಾಕ್ಯುಲೇಷನ್‌ ಪದ್ಧತಿಯ ಬಗ್ಗೆ ಸಕ್ತೆಯ ಗ್ರಂಥಂ ಎನ್ನುವ ಆಯುರ್ವೇದಿಕ್ ಗ್ರಂಥದಲ್ಲಿ ಉಲ್ಲೇಖವಿದೆ ಎಂದು ಫ್ರೆಂಚ್ ವಿದ್ವಾಂಸ ಹೆನ್ರಿ ಮಾರಿ ಹಸ್ಸನ್ ಡಿಕ್ಷಿನರಿ ಡೆಸ್‌ ಸೈನ್‌ಸ್ಸ್‌ ಮೆಡಿಕಲೆಸ್‌ ಎನ್ನುವ ನಿಯತಕಾಲಿಕೆಯಲ್ಲಿ(ಜರ್ನಲ್‌) ತಿಳಿಸಿದ್ದಾನೆ. [೧೩] ಅಲ್ಮರೊತ್‌ ವ್ರೈಟ್‌, ಎನ್ನುವ ನೆಟ್ಲೆಯಲ್ಲಿನ ಪಾಥಲಜಿಯ ಪ್ರೊಫೆಸ್ಸರ್, ವ್ಯಾಕ್ಸಿನೇನೆಷನ್‌ ಪದ್ಧತಿ ಆಭಿವೃದ್ಧಿಗೊಳಿಸಿದರು. ಇವರು ತಮ್ಮನೊಳಗೊಂಡಂತೆ ನೆಟ್ಲಿಯ ತನ್ನ ಜೊತೆ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳ ಮೇಲೆ ಸೀಮಿತ ಮತ್ತು ನಿಯಂತ್ರಿತ ಪ್ರಯೋಗಗಳನ್ನು ಕೈಗೊಂಡರು. ಈ ಪ್ರಯೋಗಗಳ ಫಲಿತಾಂಶಗಳು ಯುರೋಪಿನಲ್ಲಿ ವ್ಯಾಕ್ಸಿನೇಷನ್‌ ಅಭಿವೃದ್ಧಿಗೆ ಸಹಾಯಮಾಡಿದವು.[೧೪] ಅನಟೊಲಿಯದ ಅಟ್ಟೊಮನ್‌ ಟರ್ಕರು ಇನಾಕ್ಯುಲೇಷನ್ ವಿಧಾನಗಳನ್ನು ತಿಳಿದಿದ್ದರು.ಇನಾಕ್ಯುಲೇಷನ್‌ನ ಈ ವಿಧಾನ ಹಾಗು ವರಿಯೊಲೇಷನ್‌ ಇತರ ಮಾದರಿಗಳು ಇಂಗ್ಲೆಂಡ್‌ಗೆ ಲೇಡಿ ಮೊಂಟಾಗು ಇಂಗ್ಲೆಂಡ್‌ಗೆ ಪರಿಚಯಿಸಿದಳು; ಮೊಂಟಾಗು ಇಂಗ್ಲಿಷ್‌ನ ಪ್ರಸಿದ್ಧ ಪತ್ರಬರಹಗಾರ್ತಿಯಾಗಿದ್ದಳು, ಈಕೆಯ ಗಂಡ 1716 ರಿಂದ 1718ರ ನಡುವೆ ಇಸ್ತಾನ್ಬುಲ್‌ನಲ್ಲಿ ಇಂಗ್ಲಿಷ್ ರಾಯಭಾರಿಯಾಗಿದ್ದರು. ಈ ರಾಯಭಾರಿ ಚಿಕ್ಕ ವಯಸ್ಸಿನ ಯುವಕನಿದ್ದಾಗ ಸಿಡುಬಿನಿಂದ(ಸ್ಮಾಲ್‌ಪಾಕ್ಸ್‌) ಸಾವಿನ ದವಡೆಯಿಂದ ಪಾರಾಗಿದ್ದನು, ಹಾಗು ಅದರ ಕುರುವಾಗಿ ದೇಹದ ಮೇಲೆ ಅನೇಕ ಗುರುತುಗಳಿದ್ದವು. ಈಕೆ ಇನಾಕ್ಯುಲೇಷನಿನ್‌ ಪದ್ಧತಿಯ ಟರ್ಕಿಶ್‌ ವಿಧಾನದ ಬಗ್ಗೆ ತಿಳಿದುಕೊಂಡಳು; ಈಕೆ ತನ್ನ ಮಗನನ್ನು ದೂತವಾಸದ (ರಾಯಭಾರ) ಶಸ್ತ್ರಚಿಕಿತ್ಸಕ ಚಾರ್ಲ್ಸ್‌ ಮೈಟ್‌ಲ್ಯಾಂಡ್‌ ರಿಂದ ಟರ್ಕಿಶ್‌ ವಿಧಾನದಲ್ಲಿ ಇನಾಕ್ಯುಲೇಟ್‌ ಮಾಡಿಸಿಲು ಒಪ್ಪಿಗೆ ಕೊಟ್ಟಳು. ಲೇಡಿ ಮೊಂಟಾಗು ಇಂಗ್ಲೆಂಡಿನಲ್ಲಿದ ತನ್ನ ಅಕ್ಕಂದಿರು ಹಾಗು ಸ್ನೇಹಿತೆಯರಿಗೆ ಈ ವಿಧಾನದ ಕುರಿತಂತೆ ವಿವಿರವಾಗಿ ಪತ್ರ ಬರೆದು ತಿಳಿಸಿದಳು. ಇಂಗ್ಲೆಂಡಿಗೆ ವಾಪಸ್ಸಾದ ಮೇಲೆ ಈಕೆ ಟರ್ಕಿಶ್ ಪದ್ಧತಿಯ ಬಗ್ಗೆ ಪ್ರಚಾರ ಮಾಡುವುದನ್ನು ಮುಂದುವರೆಸಿದಳು; ತನ್ನ ಅನೇಕ ಸಂಬಂಧಿಗಳಿಗೆ ಇದೇ ಮಾದರಿಯಲ್ಲಿ ಇನಾಕ್ಯುಲೇಷನ್ ಮಾಡಿಸಿದಳು. ಇಸ್ತಾನ್‌ಬುಲ್‌ನಲ್ಲಿ ಮೊಂಟಾಗು ಮನೆತನದ ವೈದ್ಯನಾಗಿದ್ದ (ಫ್ಯಾಮಿಲಿ ಫಿಸಿಷಿಯನ್) ಡಾಕ್ಟರ್ ಎಮ್ಮಾನುಯಲ್‌ ಟಿಮೊನಿ, ಇನಾಕ್ಯುಲೇಷನ್‌ ವಿಧಾನದ ಬಗ್ಗೆ ವೈಜ್ಞಾನಿಕ ವಿವರಣೆಯನ್ನು ರಾಯಲ್‌ ಸೊಸೈಟಿಗೆ 1724ರಲ್ಲಿ ಕೊಟ್ಟನ್ನು ಇದಾದ ನಂತರ ಈ ವಿಧಾನವು ಪ್ರಮುಖ ಪ್ರಗತಿ ಕಂಡಿತು. ಇನಾಕ್ಯುಲೇಷನ್‌ ಅನ್ನು ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ ದೇಶಗಳೆರಡು ಜೆನ್ನರ್ 1796ರಲ್ಲಿ ಅಭಿವೃದ್ಧಿಪಡಿಸಿದ ಸಿಡುಬು ಲಸಿಕೆಗೂ ಐವತ್ತು ವರ್ಷಗಳ ಹಿಂದೆಯೆ ಅಳವಡಿಸಿಕೊಂದಿದ್ದವು.[೧೫]

ಅಲ್ಲಿಂದಾಚೆಗೆ ಲಸಿಕೆ ಹಾಕುವ(ವ್ಯಾಕ್ಸಿನೇಷನ್) ಕಾರ್ಯಕ್ರಮಗಳನ್ನು ವಿಶ್ವದಾದ್ಯಂತ ಹಮ್ಮಿಕೊಳ್ಳಲಾಗಿದೆ, ಕೆಲವೊಂದು ಸಂದರ್ಭಗಳಲ್ಲಿ ಇದನ್ನು ಕಾನೂನಿನ ಚೌಕಟ್ಟಿನೊಳಗೆ ತರಲಾಗಿದೆ (ವ್ಯಾಕ್ಸಿನೇಷನ್‌ ಕಾನುನೂಗಳನ್ನು ನೋಡಿ). ಲಸಿಕೆಗಳನ್ನು ಇಂದು ಸಿಡುಬು ಅಲ್ಲದೆ ಅನೇಕ ಬೇರೆ ರೋಗಗಳನ್ನು ತಡೆಗಟ್ಟಲು ಕೂಡ ಬಳಸಲಾಗುತ್ತದೆ. ಲೂಯಿಸ್‌ ಪಾಶ್ಚರ್, 19ನೇ ಶತಮಾನದಲ್ಲಿ ಈ ವಿಧಾನವನ್ನು ಇನ್ನೂ ಆಭಿವೃದ್ಧಿಪಡಿಸಿದಾಗ, ವ್ಯಾಕ್ಸಿನೇಷನ್‌ ಬ್ಯಾಕ್ಟೀರಿಯಗಳು ಉಂಟುಮಾಡುವ ಅಂಥ್ರಾಕ್ಸ್ ಮತ್ತು ವೈರಸ್‌ನಿಂದ ಉಂಟಾಗುವ ರೇಬಿಸ್ ಅನ್ನು ತಡೆಗಟ್ಟಲು ವಿಸ್ತೃತಗೊಂಡಿತು. ಈ ರೋಗಗಳನ್ನು ಉಂಟುಮಾಡುವ ಸೋಂಕುಕಾರಕಗಳು ತಮ್ಮ ಗಂಭೀರವಾದ ರೋಗವನ್ನು ಉಂಟುಮಾಡುವ ಸಾಮರ್ಥ್ಯವನ್ನು ಕಳೆದಕೊಳ್ಳವು ಹಾಗೆ ಚಿಕಿತ್ಸೆಕೊಡುವ ವಿಧಾನವನ್ನು ಪಾಶ್ಚರ್ ಆಳವಡಿಸಿಕೊಂಡನು. ಪಾಶ್ಚರ್ ಜೆನ್ನರ್ ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗೌರವಿಸುವ ಸಲುವಾಗಿ ಇದಕ್ಕೆ ವ್ಯಾಕ್ಸೀನ್‌ ಎನ್ನುವ ಜಾತಿಯ (ವರ್ಗಕ್ಕೆ ವಿಶಿಷ್ಟವಾದ) ಹೆಸರನ್ನಿಟ್ಟ.

ಟೈಫಾಯಿಡ್‌ ವ್ಯಾಕ್ಸಿನೇಷನ್ ಮಾಡುತ್ತಿರುವ ವೈದ್ಯ, 1943.

ದನದ ಸಿಡುಬಿನಿಂದ (ಕೌಪಾಕ್ಸ್‌) ವ್ಯಾಕ್ಸಿನೇಷನ್‌ ಮಾಡುವುದಕ್ಕೂ ಮುಂಚೆ ಸಿಡುಬು(ಸ್ಮಾಲ್‌ಪಾಕ್ಸ್‌) ಅನ್ನು ತಡೆಗಟ್ಟಲು ಇನಾಕ್ಯುಲೇಷನ್ ಅಥವಾ ವೇರಿಯೊಲೇಷನ್‌ (ವೇರಿಯೊಲ-ಸ್ಮಾಲ್‌ಪಾಕ್ಸ್‌ ವೈರಸ್ಸಗಳು) ಪದ್ಧತಿ ಮಾತ್ರವಿತ್ತು; ಈ ಪದ್ಧತಿಯಲ್ಲಿ ಸಿಡುಬು (ಸ್ಮಾಲ್‌ಪಾಕ್ಸ್‌) ವೈರಸ್‌ ಅನ್ನು ರೋಗಿಗಳಿಗೆ ಕೊಡಲಾಗುತ್ತಿತ್ತು; ಈ ಪದ್ಧತಿಯಲ್ಲಿ ರೋಗಿಗಳು ಸಾಯಬಹುದಾದ ಅಥವಾ ಹುಷಾರು ತಪ್ಪುವ ಬಹಳ ದೊಡ್ಡ ಅಪಾಯವಿತ್ತು. ವೈರಸ್‌ನಿಂದ ಸಹಜವಾಗಿ ಉಂಟಾಗುವ ರೋಗಗಕ್ಕಿಂತ ವೇರಿಯೊಲೇಷನ್‌ ಪದ್ಧತಿಯಿಂದ ಉಂಟಾಗುತ್ತಿದ್ದ ಸಾವಿನ ಪ್ರಮಾಣ ಹತ್ತನೇ ಒಂದು ಭಾಗದಷ್ಟಿತ್ತು; ಇದಲ್ಲದೆ ಈ ಪದ್ಧತಿಯನ್ನು ಅನುಸರಿಸಿದಾಗ ಪ್ರತಿರಕ್ಷಣೆ ಸಿಗುವುದು ಸಾಕಷ್ಟು ಖಾತರಿಯಾಗಿತ್ತು. ವೇರಿಯೊಲೇಷನ್‌ ಯಶಸ್ವಿಯಾಗಬೇಕಾದರೆ ಅನೇಕ ಅಂಶಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕಾಗುತ್ತದೆ ಅವು-ಬಳಕೆಯಾಗುವ ವೇರಿಯೊಲ ಮೈನರ್ ಸ್ಟ್ರೇನ್‌ನ (ವೈರಸ್‌ ವಿಧ) ವಿಧದ ಮೇಲೆ, ಮೊದಲ ಬಾರಿ ಸೋಂಕು ಉಂಟಾದಾಗ ಮೊದಲ ವರ್ಧಿಸುವ ಹಂತದಲ್ಲಿ ಜೀವಕೋಶಗಳಿಗೆ ತುಲನಾತ್ಮಕವಾಗಿ ಕಡಮೆ ಪ್ರಮಾಣದಲ್ಲಿ ಸೋಂಕು ತಗುಲಿದ್ದರೆ, ಮತ್ತು ಸೋಂಕು ಹೇಗೆ ಹರಡುತ್ತದೆ ಎನ್ನುವುದರ ಮೇಲೆ, ಅಥವಾ ಸಣ್ಣತೊಟ್ಟುಗಳ ಮೂಲಕ ಉಸಿರಿನಿಂದ ಶ್ವಾಸಕೋಶಗಳಿಗೆ ತೆಗೆದುಕೊಳ್ಳುವುದಕ್ಕಿಂತ, ಚರ್ಮ ಅಥವಾ ನೇಸಲ್ ಲೈನಿಂಗ್‌ ಮೂಲಕ ತೆಗೆದುಕೊಳ್ಳಲಾಗುತ್ತದೆ- ಈ ಎಲ್ಲಾ ಆಂಶವು ಪರಿಣಾಮದ ಮೇಲೆ ಪ್ರಭಾವ ಬೀರುತ್ತದೆ.


ಹಿಂದೆ ಇದ್ದ ಪದ್ಧತಿಗಳಿಂದ ಒಂದೇ ರೀತಿಯಾದ ಫಲಿತಾಂಶಗಳು ಬರುತ್ತಿದ್ದವು ಹಾಗು ಇದ್ದಕ್ಕೆ ವ್ಯತಿರಿಕ್ತವಾಗಿ ಋಣಾತ್ಮಕವಾಗಿ ಹೆಚ್ಚು ಪರಿಣಾಮಕಾರಿಯಾಗಿದ್ದ ಜೆನ್ನರ್‌ರ ವ್ಯಾಕ್ಸಿನೇಷನ್‌ ಪದ್ಧತಿ ಬೇಗನೆ ಬಳಕೆಗೆ ಬರುವ ಹಾಗೆ ಆಯಿತು. ಇದಲ್ಲದೆ ಹಳೆಯ ಮತ್ತು ಹೆಚ್ಚು ಅಪಾಯಕಾರಿಯಾದ ವೇರಿಯೊಲೇಷನ್‌ ಪದ್ಧತಿಯ ವಿರುದ್ಧ ಇದ್ದ ಪ್ರತಿಭಟನೆಯು ಕೂಡ ಇದಕ್ಕೆ ಪೂರಕವಾದವು.[ಸೂಕ್ತ ಉಲ್ಲೇಖನ ಬೇಕು]

ಅಧುನಿಕ ಕಾಲದಲ್ಲಿ, ವಾಕ್ಸೀನ್‌ನಿಂದ ತಡೆಗಟ್ಟಬಹುದಾದ ರೋಗವೊಂದನ್ನು ನಿರ್ನಾಮ ಮಾಡಲು ಗುರಿಮಾಡಲ್ಪಟ್ಟ ಮೊದಲ ರೋಗ-ಸಿಡುಬು(ಸ್ಮಾಲ್‌ಪಾಕ್ಸ್‌). ಈ ರೋಗವನ್ನು ವಿಶ್ವದ್ಯಾದಂತ ಸಂಪೂರ್ಣವಾಗಿ ನಿರ್ನಾಮ ಮಾಡಲು ಜಾಗತಿಕ ಮಟ್ಟದಲ್ಲಿ ನಡೆಸಿದ ಪ್ರಯತ್ನವನ್ನು ವಿಶ್ವ ಆರೋಗ್ಯ ಸಂಸ್ಥೆ (ವರ್ಲ್ಡ್‌ ಹೆಲ್ತ್‌ ಆರ್ಗನೈಸೇಷನ್‌) (WHO) ಸಂಘಟಿಸಿತು. ಸ್ವಭಾವಿಕವಾಗಿ ಉಂಟಾಗುವ ಸಿಡುಬಿನ ಪ್ರಕರಣ ಸೋಮಾಲಿಯದಲ್ಲಿ ಕೊನೆಯದಾಗಿ 1977ರಲ್ಲಿ ಕಾಣಿಸಿಕೊಂಡಿತು.

ಲಸಿಕೆಗಳನ್ನು (ವಾಕ್ಸೀನ್‌) ಅಭಿವೃದ್ಧಿ ಪಡಿಸಿದ ಅನೇಕರಲ್ಲಿ ಮಾರೈಸ್‌ ಹಿಲ್ಲೆಮನ್‌ ಬಹಳ ಪ್ರಮುಖರು. ಈತ ದಡಾರ (ಮೀಸಲ್ಸ್)‌, ಗದ್ದಕಟ್ಟು(ಮಂಪ್ಸ್‌), ಹೆಪಾಟೈಟಿಸ್ 'ಎ', ಹೆಪಾಟೈಟಿಸ್ 'ಬಿ', ಸಿತಾಳೆ ಸಿಡುಬು(ಚಿಕನ್‌ಪಾಕ್ಸ್)‌, ಮೆನಿಂಜೈಟಿಸ್, ನ್ಯುಮೊನಿಯ ಮತ್ತು ಹಿಮೊಫಿಲಸ್‌ ಇನ್‌ಫ್ಲೂಯೆಂಜೆ ಬ್ಯಾಕ್ಟೀರಿಯ ಗಳನ್ನು ತಡೆಗಟ್ಟಲು ಯಶಸ್ವಿಯಾದ ಲಸಿಕೆಗಳನ್ನು(ಲಸಿಕೆ‌) ಅಭಿವೃದ್ಧಿ ಪಡಿಸಿದರು.[೧೬]

ಇಸವಿ 1988ರಲ್ಲಿ, WHOವಿನ ಆಡಳಿತ ಮಂಡಳಿ ಪೋಲಿಯೊ ರೋಗವನ್ನು 2010ರ ವೇಳೆಗೆ ಸಂಪೂರ್ಣವಾಗಿ ನಿರ್ನಾಮಮಾಡಬೇಕೆಂಬ ಗುರಿಯನ್ನು ಹಾಕಿಕೊಂಡಿತ್ತು. ಈ ಗುರಿಯನ್ನು ಸಾಧಿಸಲು ಸಾಧ್ಯವಾಗಲಿಲ್ಲವಾದರು, ಪೋಲಿಯೋ ನಿರ್ನಾಮ ಬಹಳ ಸನ್ನಿಹಿತವಾಗಿದೆ. ಇದೇ ರೀತಿಯಲ್ಲಿ, ಮುಂಬರುವ ದಿನಗಳಲ್ಲಿ ಸಂಪೂರ್ಣವಾಗಿ ನಿರ್ನಾಮಕ್ಕೆ ಗುರಿಮಾಡಬಹುದಾದ ರೋಗವೆಂದರೆ-ದಡಾರ(ಮೀಸಲ್ಸ್)‌; ದಡಾರದ ಲಸಿಕೆಯನ್ನು (ಮೀಸಲ್ಸ್‌ ಲಸಿಕೆ‌)1963ರಲ್ಲಿ ಅಭಿವೃದ್ಧಿ ಮಾಡಿ ಬಳಸಲು ಪ್ರಾರಂಭಿಸದ ಮೇಲೆ ದಡಾರದ ಪ್ರಮಾಣ ಬಹಳ ಕಡಿಮೆಯಾಗಿದೆ.

ಗ್ಲೋಬಲ್‌ ಅಲೈಯನ್ಸ್‌‌ ಫಾರ್ ವ್ಯಾಕ್ಸಿನ್ಸ್ ಅಂಡ್‌ ಇಮ್ಯೂನೈಸೇಷನ್‌ ಎನ್ನುವ ಸಂಸ್ಥೆಯನ್ನು 2000ರಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯ ಉದ್ದೇಶ ಲಸಿಕೆ ಹಾಕುವ (ವ್ಯಾಕ್ಸಿನೇಷನ್‌) ಪದ್ಧತಿಯನ್ನು ಇನ್ನೂ ಹೆಚ್ಚು ಬಲಪಡಿಸುವುದು ಹಾಗು ತಲಾವಾರು GDP US$1000 ಗಿಂತಲೂ ಕಡಿಮೆಯಿರುವ ರಾಷ್ಟ್ರಗಳಲ್ಲಿ ಹೊಸ ಮತ್ತು ಕಡಿಮೆ ಬಳಸಲಾಗುತ್ತಿರುವ ಲಸಿಕೆಗಳನ್ನು ಹೆಚ್ಚು ಬಳಕೆ ಮಾಡುವಂತೆ ಕ್ರಮಗಳನ್ನು ಕೈಗೊಳ್ಳವುದು. GAVI ಹಣವನ್ನು ಒದಗಿಸುವ ಎರಡನೇ ಹಂತವನ್ನು ತಲುಪಿದ್ದು, ಇದು(ಎರಡನೇ ಹಂತ) 2014ರ ತನಕ ಮುಂದುವರೆಯುತ್ತದೆ.

ಸಮಾಜ ಮತ್ತು ಸಂಸ್ಕೃತಿ

ಸಿಡುಬು(ಸ್ಮಾಲ್‌ಪಾಕ್ಸ್‌)ವ್ಯಾಕ್ಸಿನೇಷನ್‌ನ ವಿರುದ್ಧಕ್ಕೆ ಕುರಿತ ಬಿತ್ತಿಪತ್ರ(ಪೋಸ್ಟರ್).

ಕೆಲವು ರೋಗಗಳನ್ನು ಸಂಕ್ರಾಮಿಕವಾಗಿ ಹರಡುವುದನ್ನು ತಡೆಗಟ್ಟಲು ಅನೇಕ ಸಂದರ್ಭಗಳಲ್ಲಿ ಬೇರೆಬೇರೆ ಸರ್ಕಾರಗಳು ಮತ್ತಿತ್ತರ ಸಂಸ್ಥೆಗಳು ಲಸಿಕೆ ಹಾಕುವುದನ್ನು (ವ್ಯಾಕ್ಸಿನೇಷನ್‌ ಅನ್ನು) ಎಲ್ಲರಿಗೂ ಕಡ್ಡಾಯಗೊಳಿಸುವ ಪದ್ಧತಿ ಅನುಸರಿಸಿವೆ.

ಉದಾಹರಣೆಗೆ 1853 ರಲ್ಲಿದ್ದ ಕಾನೂನಿನ ಪ್ರಕಾರ ಇಂಗ್ಲೆಂಡ್‌ ಮತ್ತು ವೇಲ್ಸ್‌ ನಲ್ಲಿ ಸಿಡುಬನ್ನು ತಡೆಗಟ್ಟುವ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕಾಗಿತ್ತು; ಇದಕ್ಕೆ ತಪ್ಪಿದಲ್ಲಿ ದಂಡವನ್ನು ತೆರಬೇಕಾಗಿತ್ತು.  ಸಮಕಾಲೀನ U.S. ವ್ಯಾಕ್ಸಿನೇಷನ್‌ ನೀತಿಗಳ ಪ್ರಕಾರ ಮಕ್ಕಳು ಶಾಲೆ ಸೇರಬೇಕಾದರೆ ಕೆಲವು ಸಾಮಾನ್ಯವಾದ ಲಸಿಕೆಗಳನ್ನು ತೆಗೆದುಕೊಂಡಿರಬೇಕು ಎನ್ನುವ ನಿಯಮಿವಿದೆ.  ಇತರ ಅನೇಕ ರಾಷ್ಟ್ರಗಳೂ ಕೂಡ ಕೆಲವೊಂದು ವ್ಯಾಕ್ಸಿನೇಷನ್‌ಗಳನ್ನು ಕಡ್ಡಾಯಗೊಳಿಸಿವೆ.  

ಹತ್ತೊಂಬತನೆ ಶತಮಾನದಲ್ಲಿ ಶುರುವಾದ ವ್ಯಾಕ್ಸಿನೇಷನ್‌ ಕಡ್ಡಾಯಗೊಳಿಸುವ ಪದ್ಧತಿಯು ವಿವಿಧ ಗುಂಪುಗಳಿಂದ ವಿರೋಧವನ್ನು ಎದುರಿಸಬೇಕಾಯಿತು, ಲಸಿಕೆ‌ಗಳನ್ನು ವಿರೋಧಿಸುವ ಈ ಗುಂಪಗಳನ್ನು ಒಟ್ಟಾರೆಯಾಗಿ ಆಂಟಿ-ವ್ಯಾಕ್ಸಿನೇಷನಿಸ್ಟ್‌ ಎಂದು ಕರೆಯಲಾಗುತ್ತದೆ. ಈ ಗುಂಪು ನೈತಿಕತೆ, ರಾಜಕೀಯ, ಆರೋಗ್ಯ ಸ್ವಾಸ್ಥ್ಯ, ಧಾರ್ಮಿಕ ಮತ್ತಿತ್ತರ ಕಾರಣಗಳಿಂದ ವ್ಯಾಕ್ಸಿನೇಷನ್‌ ಅನ್ನು ವಿರೋಧಿಸುತ್ತಾರೆ. ಲಸಿಕೆ ಹಾಕಿಸಿಕೊಳ್ಳುವುದನ್ನು (ವ್ಯಾಕ್ಸಿನೇಷನ್‌) ಕಡ್ಡಾಯಮಾಡಿಸಿಕೊಳ್ಳುವುದರ ಬಗ್ಗೆ ಇರುವ ಸಾಮಾನ್ಯ ಆಕ್ಷೇಪಣೆಗಳೆಂದರೆ ಇದನ್ನು ಸ್ವಂತ ವಿಷಯದಲ್ಲಿ ಸರಕಾರದ ಅನಗತ್ಯ ಹಸ್ತಕ್ಷೇಪ ಎಂದು ಪರಿಗಣಿಸಲಾಗುತ್ತದೆ, ಅಥವಾ ಈ ಲಸಿಕೆ‌ಗಳು ಸಾಕಷ್ಟು ಸುರಕ್ಷಿತವಾಗಿಲ್ಲ ಎಂದು ಕೂಡ ಆಕ್ಷೇಪಿಸಲಾಗುತ್ತದೆ.[೧೭] ಹಲವು ಆಧುನಿಕ ಲಸಿಕೆ‌ ಹಾಕಿಸುವ ಕಾರ್ಯಕ್ರಮಗಳು, ಇಮ್ಯೂನ್‌ ಸಿಸ್ಟಂ(ಪ್ರತಿರಕ್ಷಿತ ವ್ಯವಸ್ಥೆ) ಬಹಳ ಕ್ಷೀಣಗೊಂಡಿರುವ ವ್ಯಕ್ತಿಗಳಿಗೆ, ಅಥವಾ ಲಸಿಕೆ‌ಗಳಲ್ಲಿ ಬಳಕೆಯಾಗುವ ಪದಾರ್ಥಗಳಿಗೆ ಅಲರ್ಜಿಯಾಗುವ ವ್ಯಕ್ತಿಗಳಿಗೆ, ಅಥವಾ ಲಸಿಕೆ‌ ವಿರುದ್ಧ ದೃಢವಾದ ಆಕ್ಷೇಪಗಳಿರುವ ವ್ಯಕ್ತಿಗಳಿಗೆ ಲಸಿಕೆ‌ ಹಾಕಿಸಿಕೊಳ್ಳವುದರಿಂದ ರಿಯಾಯತಿಯನ್ನು ನೀಡುತ್ತದೆ.[೧೮]

ಇತ್ತೀಚಿನ ದಶಕಗಳಲ್ಲಿ ಲಸಿಕೆ‌ಗಳಿಂದ ಉಂಟಾದ ಹಾನಿಯೆಂದು ಹಾಗು ಅದಕ್ಕೆ ಪರಿಹಾರ ಕೊಡಿಸಬೇಕೆಂದು ಯು.ಎಸ್‌ನ (U.S.) ನ್ಯಾಯಲಯದಲ್ಲಿ ದಾವೆಗಳನ್ನು ಹಾಕಲಾಗಿದೆ, ಸಾರ್ವಜನಿಕ ವೈದ್ಯ ಅಧಿಕಾರಗಳು ಈ ಹಾನಿಯಾದದುರ ಬಗ್ಗೆಗಿನ ವಾದವು ಅಧಾರರಹಿತವಾದದ್ದು ಎಂದು ನಂಬಿದರೂ ಕೂಡ, ಕೆಲವೊಂದು ಸಂದರ್ಭಗಳಲ್ಲಿ ಸಹಾನುಭೂತಿಯಿರುವ ನ್ಯಾಯದರ್ಶಿ ಮಂಡಲಿಗಳು ಕೆಲವು ಕುಟುಂಬಗಳಿಗೆ ಗಣನೀಯ ಪ್ರಮಾಣದ ಪರಿಹಾರವನ್ನು ನೀಡಿದ್ದಾರೆ.[೧೯] ಇದಕ್ಕೆ ಪ್ರತಿಯಾಗಿ ಲಸಿಕೆ‌ ತಯಾರಕರು ಲಸಿಕೆ‌ ತಯಾರಿಕೆಯನ್ನು ನಿಲ್ಲಿಸಿದರು; ಇದು ಸಾರ್ವಜನಿಕ ಸ್ವಾಸ್ಥ್ಯದ ಮೇಲೆ ಪ್ರತಿಕೂಲಕರ ಪರಿಣಾಮವನ್ನು ಬೀರಿತು. ಹೀಗಾಗಿ ಲಸಿಕೆ‌ಗಳಿಂದಾದ ಹಾನಿಯೆಂದು ವಾದಗಳಿಂದ ಒದಗುವ ಪ್ರಸಂಗಗಳಿಂದ ಲಸಿಕೆ‌ ತಯಾರಕರನ್ನು ಹೊಣೆಗಾರಿಕೆಯಿಂದ ಮುಕ್ತಗೊಳಿಸುವಂತಹ ಕಾನೂನುಗಳನ್ನು ತರಲಾಯಿತು.[೧೯]

ಸೀಮಿತ ಹಣಕಾಸಿನ ಸೌಲಭ್ಯವಿರುವ ದೇಶಗಳಲ್ಲಿ, ವ್ಯಾಕ್ಸಿನೇಷನ್‌ನ ಸೀಮಿತ ಬಳಕೆ ದೊಡ್ಡ ಸಮಸ್ಯೆಯಾಗಿದ್ದು, ಇದು ಅನಗತ್ಯ ರೋಗ ಹರಡುವಿಕೆಗೆ ಮತ್ತು ಅಪಾರ ಪ್ರಾಣ ಹಾನಿಗೆ ಕಾರಣವಾಗಿದೆ. ಮಧ್ಯಸ್ಥವಾದ(ಸರಾಸರಿ) ಬಳಕೆ ಸಾಮಾನ್ಯವಾಗಿ ಸಾಕಾಗುತ್ತದೆ ಎನ್ನುವ ಭಾವನೆಯನ್ನು ಉಂಟು ಮಾಡುತ್ತದೆ. ಆದರೆ, ಕೂಲಂಕುಷವಾಗಿ ಪರಿಶೀಲಿಸಿದಾಗ ಹೀಗೆ ಮಾಡುವುದರಿಂದ ಪರಿಣಾಮಕಾರಿಯಾದ ರಕ್ಷಣೆ ಬಹಳ ಕಡಿಮೆ ಪ್ರಮಾಣದಲ್ಲಿರುತ್ತದೆ.[೨೦]ಕೆಲವು ಶ್ರೀಮಂತ ರಾಷ್ಟ್ರಗಳು ರೋಗಹರಡುವ ಸಂಭವ ಹೆಚ್ಚಿರುವ ಗುಂಪುಗಳಿಗೆ ವ್ಯಾಕ್ಸಿನೇಷನ್‌ ಅನ್ನು ರಿಯಾಯಿತಿ ದರದಲ್ಲಿ ನೀಡುತ್ತವೆ; ಹೀಗಾಗಿ ವ್ಯಾಕ್ಸಿನೇಷನ್‌ನ ಬಳಕೆಯು ವ್ಯಾಪಕವಾಗಿಯು, ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಉದಾಹರಣೆಗೆ ಅಸ್ಟ್ರೇಲಿಯ, ಸರಕಾರ ಹಿರಿಯ ನಾಗರೀಕರಿಗೆ ಮತ್ತು ಅಸ್ಟ್ರೇಲಿಯಾದ ಮೂಲ ನಿವಾಸಿಗಳಿಗೆ ವ್ಯಾಕ್ಸಿನೇಷನ್‌ ಅನ್ನು ರಿಯಾಯಿತಿ ದರದಲ್ಲಿ ನೀಡುತ್ತದೆ. [೨೧]

ಪಬ್ಲಿಕ್‌ ಹೆಲ್ತ್‌ ಲಾ ರಿಸರ್ಚ್ ‌[೨೨] ಎನ್ನುವ ಸ್ವಾಯತ್ತ ಸಂಸ್ಥೆ, 2009ರಲ್ಲಿ ಕೆಲವು ನಿರ್ದಿಷ್ಟ ರೋಗಗಳಗೆ ಸುಲಭವಾಗಿ ಇಡಾಗಬಹುದಾದ ಜನರಿಗೆ ರೋಗ ಬರದ ಹಾಗೆ ಮಾಡುವಸಲುವಾಗಿ ಕೆಲವು ನಿರ್ದಿಷ್ಟ ಕೆಲಸಗಳಿಗೆ ವ್ಯಾಕ್ಸಿನೇಷನ್‌ ಅನ್ನು ಕಡ್ಡಾಯಗೊಳಿಸುವುದರ ಪರಿಣಾಮದ ಕುರಿತಂತೆ ಸಾಕಷ್ಟು ಸಾಕ್ಷಿಗಳಿಲ್ಲವೆಂದು ವರದಿ ಸಲ್ಲಿಸಿದೆ;[೨೩]ಇದೇ ಸಂದರ್ಭದಲ್ಲಿ ಮಕ್ಕಳು ಶಾಲೆ ಮತ್ತು ಶಿಶುಪಾಲನೆ ವ್ಯವಸ್ಥೆಗೆ ಸೇರಿಸಲು ಕಡ್ಡಾಯ ವ್ಯಾಕ್ಸಿನೇಷನ್‌ ಆಗಿರಬೇಕೆಂಬ ನಿಯಮದಿಂದ ಉಪಯುಕ್ತವಾಗಿದೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಿಗಳಿವೆ;[೨೪]ಇದಲ್ಲದೆ, ವ್ಯಾಕ್ಸಿನೇಷನ್‌ ಪ್ರಮಾಣವನ್ನು ಹೆಚ್ಚು ಮಾಡುವ ಸಲುವಾಗಿ ಪ್ರಿಸ್‌ಕ್ರಿಪ್ಷನ್‌(ಸಲಹೆ) ನೀಡಲು ಅಧಿಕಾರವಿಲ್ಲದ ಆರೋಗ್ಯಾಧಿಕರಿಗಳು ಕೂಡ ಲಸಿಕೆ‌ ಕೊಡಬಹುದು ಎನ್ನುವ ಸ್ಥಾಯಿ ಆದೇಶಗಳ ನಿಯಮದಿಂದ ಉಪಯುಕ್ತವಾಗಿದೆ ಎನ್ನುವದಕ್ಕೆ ಕೂಡ ಬಲವಾದ ಸಾಕ್ಷಿಗಳಿದೆ ಎಂದು ತಿಳಿಸಿದೆ. [೨೫]

ಲಸಿಕೆ ನೀಡುವ ಕ್ರಮ

ಪ್ಯಾರಿಸ್‌ನ 7ನೇ ಆಡಳಿತ ವಿಭಾದಲ್ಲಿರುವ (ಆಡಳಿತ ವಿಭಾಗ‌) ಏರ್ ಫ್ರಾನ್ಸ್‌ನ ಲಸಿಕೆ ಹಾಕುವ (ವ್ಯಾಕ್ಸಿನೇಷನ್‌) ಕೇಂದ್ರ.

ಲಸಿಕೆ‌ಯನ್ನು ಬಾಯಿಯ ಮೂಲಕ, ಚುಚ್ಚುಮದ್ದಿನ ರೂಪದಲ್ಲಿ (ಇಂಟ್ರಾಮಸ್ಕುಲಾರ್(ಸ್ನಾಯುವಿನೊಳಗಿನ), ಇಂಟ್ರಾಡರ್ಮಲ್‌(ಚರ್ಮದ ಒಳಭಾಗದಲ್ಲಿ) , ಸಬ್‌ಕ್ಯುಟೆನಿಯಸ್(ಚರ್ಮದಡಿಯಿಂದ), ಪಂಕ್ಚರ್‌ (ಚುಚ್ಚುವುದರ) ಮೂಲಕ, ಟ್ರಾನ್ಸ್‌ಡರ್ಮಲ್ (ಚರ್ಮದ ಮೂಲಕ)‌, ಅಥವಾ ಇಂಟ್ರಾನೇಸಲ್‌(ಮೂಗಿನ) ಮೂಲಕ ನೀಡಬಹುದು. [೨೬]

ಸಂಶೋಧನೆ

ಪ್ರಸ್ತುತದಲ್ಲಿ ವ್ಯಾಕ್ಸಿನೇಷನ್‌ ಬಗ್ಗೆ ನಡೆಯುತ್ತಿರುವ ಆಧ್ಯಯನಗಳು ಪ್ರಮುಖವಾಗಿ HIV ಮತ್ತು ಮಲೇರಿಯ ರೋಗಗಳನ್ನೊಳಗೊಂಡ ಲಸಿಕೆ‌ಗಳನ್ನು ಅಭಿವೃದ್ಧಿಪಡಿಸುವ ಕಡೆಗೆ ಗಮನ ಹರಿಸಿವೆ.

ಲಸಿಕೆ‌ ಎನ್ನುವುದು ವ್ಯಾಕ್ಸಿನೇಷನ್‌ ಸಂಶೋಧಕರಿಗೆ ಇರುವ ಸಮಾನಸ್ಕಂದರಿಂದ ವಿಮರ್ಶೆಗೊಳಗಾಗುವ(ಪಿಯರ್-ರಿವ್ಯೂಡ್) ಅಂತರ್‌ರಾಷ್ಟ್ರೀಯ ನಿಯತಕಾಲಿಕೆ(ಜರ್ನಲ್), ಇದನ್ನು ಮೆಡ್‌ಲೈನ್‌ pISSN: 0264-410X ಇಂಡೆಕ್ಸ್‌‌ ಮಾಡಲಾಗಿದೆ.

ಇವನ್ನೂ ನೋಡಿ

  • ಇನ್‌ಫ್ಲೂಯೆಂಜ ಲಸಿಕೆ
  • H5N1 ಫ್ಲೂ ಲಸಿಕೆ‌ ವೈದ್ಯಕೀಯ ಪ್ರಯೋಗಗಳು
  • ಲಸಿಕೆ‌ ಪ್ರಯೋಗ
  • ನಾಯಿಗಳಿಗೆ ಕೊಡುವಂತಹ ಲಸಿಕೆ
  • ಫೀಲೈನ್‌ ವ್ಯಾಕ್ಸಿನೇಷನ್
  • ಇಮ್ಯೂನೈಸೇಷನ್ ಡ್ಯೂರಿಂಗ್ ಪ್ರೆಗ್ನನೆನ್ಸಿ

ಆಕರಗಳು

ಬಾಹ್ಯ ಕೊಂಡಿಗಳು

  • ಇಮ್ಯೂನೈಸೇಷನ್ Archived 2007-10-24 ವೇಬ್ಯಾಕ್ ಮೆಷಿನ್ ನಲ್ಲಿ. UK ಯಲ್ಲಿ ಮಕ್ಕಳಿಗೆ ಲಸಿಕೆಗಳನ್ನು ಹಾಕಿಸಬೇಕಾದ ವೇಳಾಪಟ್ಟಿ, ಇದನ್ನು UK(ಯು.ಕೆ) ಯ ಅರೋಗ್ಯ ಇಲಾಖೆ(ಡಿಪಾರ್ಟ್‌ಮೆಂಟ್‌ ಆಫ್‌ ಹೆಲ್ತ್‌) ಪ್ರಕಟಿಸಿದೆ.
  • CDC.gov - 'ನ್ಯಾಷನಲ್‌ ಇಮ್ಯೂನೈಸೇಷನ್ ಪ್ರೋಗ್ರಾಂ: ಲೀಡಿಂಗ್‌ ದಿ ವೇ ಟು ಹೆಲ್ತಿ ಲಿವ್ಸ್‌', US ಸೆಂಟರ್ಸ್‌‌ ಫಾರ್‌ ಡೀಸಿಸ್‌ ಕಂಟ್ರೋಲ್‌ (CDCಯ ವ್ಯಾಕ್ಸಿನೇಷನ್‌ ಬಗ್ಗೆಗಿನ ಮಾಹಿತಿ)
  • CDC.gov - 'ಮರ್ಕ್ಯೂರಿ ಅಂಡ್‌ ವ್ಯಾಕ್ಸೀನ್ಸ್ (ಥಿಯೊಮೆರ್ಸಲ್ )', US ಸೆಂಟರ್ಸ್‌ ಫಾರ್‌ ಡೀಸಿಸ್‌ ಕಂಟ್ರೋಲ್‌
  • Immunize.org - ಇಮ್ಯೂನೈಸೇಷನ್ ಆಕ್ಷನ್ ಕೋಯಲಿಷನ್‌' (ನಾನ್‌ಪ್ರಾಫಿಟ್‌ ವರ್ಕಿಂಗ್‌ ಟು ಇನ್‌ಕ್ರೀಸ್‌ ಇಮ್ಯೂನೈಸೇಷನ್ ರೇಟ್ಸ್‌‌)
  • WHO.int - 'ಇಮ್ಯುನೈಸೇಷನ್ಸ್‌, ವ್ಯಾಕ್ಸೀನ್ಸ್ ಅಂಡ್‌ ಬೈಯೊಲಾಜಿಕಲ್ಸ್‌: ಟುವರ್ಡ್ಸ್‌ ಎ ವರ್ಲ್ಡ್‌ ಫ್ರೀ ಆಫ್‌ ವ್ಯಾಕ್ಸೀನ್ ಪ್ರಿವೆಂಟಬೆಲ್‌‌ ಡೀಸಿಸಸ್', ವರ್ಲ್ಡ್‌ ಹೆಲ್ತ್‌ ಆರ್ಗನೈಸೇಷನ್‌(ವಿಶ್ವ ಆರೋಗ್ಯ ಸಂಸ್ಥೆ) (WHO ಯ ವಿಶ್ವದಾದ್ಯಂತ ಕೈಗೊಂಡಿರುವ ಲಸಿಕೆ ಹಾಕುವ ಕಾರ್ಯಕ್ರಮದ ಕಾರ್ಯಚರಣೆಯ ವೆಬ್‌‌ಸೈಟ್‌ (ಗ್ಲೋಬಲ್‌ ವ್ಯಾಕ್ಸಿನೇಷನ್‌‌ ಕ್ಯಾಂಪೇನ್ ವೆಬ್‌ಸೈಟ್‌)
  • ಹೆಲ್ತ್‌-EU ಪೋರ್ಟಲ್‌ Archived 2011-08-23 ವೇಬ್ಯಾಕ್ ಮೆಷಿನ್ ನಲ್ಲಿ. EU ಯಲ್ಲಿ ವ್ಯಾಕ್ಸಿನೇಷನ್‌ಗಳು (ವ್ಯಾಕ್ಸಿನೇಷನ್‌ ಇನ್‌ EU)

[[