ಇಟ್ರಿಯಮ್
ಇಟ್ರಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ವಿರಳ ಭಸ್ಮ ಲೋಹಗಳ ಖನಿಜಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ಇದನ್ನು ಪ್ರಮುಖವಾಗಿ ದೂರದರ್ಶನ ಪೆಟ್ಟಿಗೆಯ ಕೆಂಪು ಬಣ್ಣವನ್ನು ಪ್ರದರ್ಶಿಸುವ ರಂಜಕಗಳಲ್ಲಿ ಉಪಯೋಗಿಸಲಾಗುತ್ತದೆ. ಲೇಸರ್ಗಳಲ್ಲಿ ಮತ್ತು ಎಥಿಲೀನ್ ತಯಾರಿಕೆಯಲ್ಲಿ ಇದರ ಉಪಯೋಗವಿದೆ. ಇದನ್ನು ಫಿನ್ಲ್ಯಾಂಡ್ನ ಜೊಹಾನ್ ಗಾಡೊಲಿನ್ ಎಂಬ ರಸಾಯನಶಾಸ್ತ್ರಜ್ಞ ೧೭೯೪ರಲ್ಲಿ ಕಂಡುಹಿಡಿದನು. ಇದರ ಹೆಸರು ಸ್ವೀಡನ್ ದೇಶದ ಯ್ಟೆರ್ಬಿ ನಗರದ ಹೆಸರಿಂದ ಬಂದಿದೆ. ಈ ಊರಿನ ಬಳಿಯಲ್ಲಿನ ಗಣಿಯೊಂದರಲ್ಲಿ ಸಿಗುವ ಖನಿಜಗಳಿಂದ ಅನೇಕ ಮೂಲಧಾತುಗಳನ್ನು ಮೊದಲು ಪಡೆಯಲಾಯಿತು. ಎರ್ಬಿಯಮ್, ಟೆರ್ಬಿಯಮ್, ಯ್ಟೆರ್ಬಿಯಮ್ ಮತ್ತು ಯ್ಟ್ರಿಯಮ್ ಎಲ್ಲವೂ ಈ ಪುಟ್ಟ ಊರಿನ ಹೆಸರಿಂದಲೇ ತಮ್ಮ ಹೆಸರನ್ನು ಪಡೆದಿರುವವು.
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ