ಇದಿ ಅಮೀನ್

ಇದಿ ಅಮೀನ್ (ಸಿ.೧೯೨೫[A] – ೧೬ ಆಗಸ್ಟ್ ೨೦೦೩) ಇವರು ೧೯೭೧ ರಿಂದ ೧೯೭೯ ರವರೆಗೆ ಉಗಾಂಡಾದ ಅಧ್ಯಕ್ಷರಾಗಿದ್ದರು ಹಾಗೂ ಸೈನ್ಯದ ನಾಯಕರಾಗಿದ್ದರು. ಅಮೀನ್ ಅವರು ೧೯೪೬ರಲ್ಲಿ ಬ್ರಿಟಿಷ್ ವಸಾಹತು ಸೈನಿಕ ಪಡೆ ಕಿಂಗ್ಸ್ ಆಫ್ರಿಕನ್ ರೈಫಲ್ಸ್ ಸೇರಿದರು, ಹಾಗೂ ಮಿಲ್ಟನ್ ಒಬೋಟ್ ನಂತರ ಮಿಲಿಟರಿ ಕಾಪ್ ಆಫ್ ಜನವರಿ ೧೯೭೧ ಗೆ ಆಯ್ಕೆಗೊಂಡು ನಂತರದಲ್ಲಿ ಮೇಜರ್ ಜನರಲ್ ದರ್ಜೆಗೇರಿದರು ಹಾಗೂ ಉಗಾಂಡನ್ ಸೈನ್ಯದ ಕಮ್ಯಾಂಡರ್ ಆದರು. ಅವರು ರಾಜ್ಯದ ಮುಖ್ಯಸ್ಥರಾಗಿದ್ದಾಗ ತಮ್ಮನ್ನು ಫೀಲ್ಡ್ ಮಾರ್ಷಲ್ ಸ್ಥಾನಕ್ಕೆ ನಿಯಮಿಸಿಕೊಂಡರು.ಅಮೀನ್‌ರವರ ಆಡಳಿತ ಮಾನವ ಹಕ್ಕುಗಳ ದುರುಪಯೋಗ ರಾಜಕೀಯ ನಿಗ್ರಹ ಜನಾಂಗೀಯ ಹಿಂಸಾಚರಣೆ, ಕಾನೂನು ಬಾಹಿರ ಕೊಲೆಗಳು ಕುಲ ಪಕ್ಷಪಾತ, ಭ್ರಷ್ಟಾಚಾರ, ಮತ್ತು ಆರ್ಥಿಕತೆಯ ಅಸಪರ್ಪಕ ನಿರ್ವಹಣೆಗಳನ್ನು ಒಳಗೊಂಡಿದೆ.ಅಂತರಾಷ್ಟ್ರೀಯ ವೀಕ್ಷಕರು ಮತ್ತು ಮಾನವ ಹಕ್ಕುಗಳ ಪ್ರಕಾರ ಅವರ ಆಡಳಿತಾವಧಿಯಲ್ಲಿ ಕೊಲ್ಲಲ್ಪಟ್ಟವರು ಸುಮಾರು ೧೦೦,೦೦೦[೧] ದಿಂದ ೫೦೦,೦೦೦ ಜನರು ಎಂದು ಅಂದಾಜು ಮಾಡಲಾಗಿದೆ.ತಮ್ಮ ಆಡಳಿತದ ವರ್ಷಗಳಲ್ಲಿ , ಅಮೀನ್‌ರವರು ಲಿಬಿಯಾದ ಮುಮ್ಮರ್ ಆಲ್ -ಗಡ್ಡಾಫಿ ಮತ್ತು ಸೋವಿಯತ್ ರಷ್ಯಾ ಹಾಗೂ ಪೂರ್ವ ಜರ್ಮನಿಯಿಂದ ಹಿಂದೆ ಸರಿದರು.[೨][೩][೪]೧೯೭೫–೧೯೭೬ ರ ಅವಧಿಯಲ್ಲಿ ಅಮೀನ್‌ರವರು ಆಫ್ರಿಕಾ ರಾಷ್ಟ್ರಗಳ ಐಕ್ಯತೆಯನ್ನು ಉತ್ತೇಜಿಸಲು ರಚಿತವಾದ ಒಂದು ಪಾನ್ -ಆಫ್ರಿಕನ್ ಗುಂಪಾದ ಆಫ್ರಿಕಾ ಐಕ್ಯತಾ ಸಂಸ್ಥೆಯ ಅಧ್ಯಕ್ಷರಾಗಿದ್ದರು.[೫]೧೯೭೭–೧೯೭೯ ರ ಅವಧಿಯಲ್ಲಿ, ಉಗಾಂಡಾ ಮಾನವ ಹಕ್ಕುಗಳ ವಿಶ್ವ ರಾಷ್ಟ್ರಗಳ ಸಮಿತಿಗೆ ನೇಮಕಗೊಂಡಿತು.[೬]೧೯೭೭ ರಿಂದ ೧೯೭೯ ರವರೆಗೆ ತಮ್ಮಷ್ಟಕ್ಕೆ ತಾವೇ ಹಲವಾರು ಹೆಸರುಗಳಿಂದ ಕರೆದುಕೊಂಡರು ಅವೆಂದರೆ "ಹಿಸ್ ಎಕ್ಸಲೆನ್ಸಿ, ಪ್ರೆಸಿಡೆಂಟ್ ಫಾರ್ ಲೈಫ್, ಫೀಲ್ಡ್ ಮಾರ್ಷಲ್ ಅಲ್ ಹಾದ್ಜಿ ಡಾಕ್ಟರ್[B] ಇದಿ ಅಮೀನ್ ದಾದಾ, ವಿಸಿ,[C] ಡಿಎಸ್‌ಒ, ಎಮ್‌ಸಿ, ಆಫ್ರಿಕಾದಲ್ಲಿ ಬ್ರಿಟಿಷ್ ಎಂಪೈರ್ ವಿಜಯಶಾಲಿ ಹಾಗೂ ಉಗಾಂಡಾ ವಿಶೇಷವಾಗಿ ".[೭] ಉಗಾಂಡಾದಲ್ಲಿನ ಮತಬೇಧಗಳು ಮತ್ತು ೧೯೭೮ ರಲ್ಲಿ ಅಮೀನ್ಟಾಂಜೆನಿಯಾ ದ ಪ್ರಾಂತವಾದ ಕಗೇರಾ ವನ್ನು ಸ್ವಾಧೀನ ಪಡೆಸಿಕೊಳ್ಳಲು ಮಾಡಿದ ಪ್ರಯತ್ನಗಳು ಉಗಾಂಡಾ -ಟಾಂಜೇನಿಯಾ ಯುದ್ಧ ಕ್ಕೆ ಕಾರ‍ಣವಾದವು ಮತ್ತು ಇದರಿಂದ ಅವರ ಆಡಳಿತವು ಪತನಗೊಂಡಿತು.ಅಮೀನ್ ನಂತರಲಿಬಿಯಾ ಮತ್ತು ಸೌದಿ ಅರೇಬಿಯಾಗೆ ಗಡಿಪಾರು ಮಾಡಲ್ಪಟ್ಟು ೧೬ ಆಗಸ್ಟ್ ೨೦೦೩ ರಂದು ನಿಧನರಾದರು.

Field Marshal
Idi Amin
Idi Amin addresses the United Nations General Assembly in New York, 1975

3rd President of Uganda
ಅಧಿಕಾರ ಅವಧಿ
January 25, 1971 – April 11, 1979
ಉಪ ರಾಷ್ಟ್ರಪತಿMustafa Adrisi
ಪೂರ್ವಾಧಿಕಾರಿMilton Obote
ಉತ್ತರಾಧಿಕಾರಿYusufu Lule
ವೈಯಕ್ತಿಕ ಮಾಹಿತಿ
ಜನನc.1925
Koboko or Kampala[A], Uganda Protectorate
ಮರಣ16 August 2003(2003-08-16) (aged 78)
Jeddah, Saudi Arabia
ರಾಷ್ಟ್ರೀಯತೆUgandan
ಸಂಗಾತಿ(ಗಳು)Malyamu Amin (divorced)
Kay Amin (divorced)
Nora Amin (divorced)
Madina Amin
Sarah Amin
ಉದ್ಯೋಗSoldier
ಧರ್ಮIslam
ಮಿಲಿಟರಿ ಸೇವೆ
Allegianceಯುನೈಟೆಡ್ ಕಿಂಗ್ಡಂ United Kingdom
ಉಗಾಂಡ Uganda
ಸೇವೆ/ಶಾಖೆBritish Army
Ugandan Army
ವರ್ಷಗಳ ಸೇವೆ1946-1979
RankField Marshal
UnitKing's African Rifles
CommandsCommander-in-Chief of the Forces
Battles/warsMau Mau Uprising
1971 Ugandan coup d'état

ಪ್ರಾರಂಭಿಕ ಜೀವನ ಹಾಗೂ ಸೈನ್ಯದ ವೃತ್ತಿಜೀವನ

ಅಮೀನ್ ಎಂದೂ ತಮ್ಮ ಜೀವನ ಚರಿತ್ರೆಯನ್ನಾಗಲೀ ಅಥವಾ ತಮ್ಮ ಜೀವನದ ಅಧಿಕೃತ ದಾಖಲೆಯನ್ನಾಗಲೀ ಇರಿಸಿಸಲಿಲ್ಲ, ಆದ್ದರಿಂದ ಅವರು ಯಾವಾಗ ಮತ್ತು ಎಲ್ಲಿ ಹುಟ್ಟಿದರು ಎಂಬುದರ ಬಗ್ಗೆ ಭಿನ್ನಾಭಿಪ್ರಾಯಗಳಿವೆ.ಅವರ ಅನೇಕ ಜೀವನ ಚರಿತ್ರೆಯ ಮೂಲಗಳು ತಿಳಿಸುವಂತೆ, ಅವರು ಸುಮಾರು ೧೯೨೫ರಲ್ಲಿ ಕೊಬೊಕೊ ಅಥವಾ ಕಂಪಾಲದಲ್ಲಿ ಹುಟ್ಟಿರಬಹುದು ಎಂದು ಊಹಿಸಲಾಗಿದೆ.[A]ಇತರೆ ಕೆಲವು ಅನಧಿಕೃತ ಮೂಲಗಳ ಪ್ರಕಾರ ಅಮೀನ್‌ರವರ ಹುಟ್ಟು ೧೯೨೩ ರ ಆರಂಭ ಅಥವಾ ೧೯೨೮ರ ಕೊನೆಯಲ್ಲಿರಬಹುದು.ಮಕೆರೆರೆ ವಿಶ್ವವಿದ್ಯಾನಿಲಯದ ಸಂಶೋಧಕರಾದ ಫ್ರೆಡ್ ಗುವೆಡ್ಡೆಕೊ ರವರ ಪ್ರಕಾರ , ಇದಿ ಅಮೀನ್ ಆಂಡ್ರಿಯಾಸ್ ನಯಾಬೈರ್ ರವರ ಮಗನಾಗಿದ್ದರು (೧೮೮೯–೧೯೭೬).ನಯಾಬೈರ್ ಕಕಾವ ಜನಾಂಗೀಯ ಗುಂಪಿನ ಒಬ್ಬ ಸದಸ್ಯರಾಗಿದ್ದರು, ನಂತರ ಅವರು೧೯೧೦ ರಲ್ಲಿ ರೋಮನ್ ಕ್ಯಾಥೋಲಿಕ್ ನಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ಅಮೀನ್ ದಾದ ಎಂದು ಬದಲಾಯಿಸಿಕೊಂಡರು, ಈ ಹೆಸರನ್ನೇ ಅವರ ಮೊದಲನೇ ಮಗನಿಗೆ ಇರಿಸಿದರು.ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯಿಂದ ತೊರೆಯಲ್ಪಟ್ಟ , ಇದಿ ಅಮೀನ್ ಉಗಾಂಡಾದ ವಾಯುವ್ಯ ಭಾಗದಲ್ಲಿರುವ ತಮ್ಮ ತಾಯಿಯ ಕುಟುಂಬವಿರುವ ಒಂದು ಗ್ರಾಮದಲ್ಲಿ ಬೆಳೆದರು.ಗುವೆಡ್ಡೆಕ್ಕೋ ಹೇಳುವಂತೆ ಅಮೀನ್‌ರವರ ತಾಯಿ ಅಸ್ಸಾ ಆಟ್ಟೆ(೧೯೦೪–೧೯೭೦) ಲುಗ್ಬಾರಾ ಎಂಬ ಒಂದು ಜನಾಂಗಕ್ಕೆ ಸೇರಿದವಳಾಗಿದ್ದು ಬುಗಾಂಡಾ ಸದ್ಯರಿಗೆ ಮತ್ತು ಇತರರಿಗೆ ಗಿಡಮೂಲಿಕೆ ಔಷಧಿಯನ್ನು ಕೊಡುವವಳಾಗಿದ್ದಳು.೧೯೪೧ ರಲ್ಲಿ ಬೊಂಬೋದಲ್ಲಿ ಅಮೀನ್ ಇಸ್ಲಾಮಿಕ್ ಶಾಲೆಗೆ ಸೇರಿದರು. ಕೆಲ ವರ್ಷಗಳ ನಂತರ, ಶಾಲೆಯನ್ನು ಬಿಟ್ಟು ಸೇನೆ ಸೇರುವುದಕ್ಕೆ ಮುನ್ನ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು.[೮]


ಸೈನ್ಯದ ಕಮ್ಯಾಂಡರ್-ಇನ್-ಚೀಫ್
ಸೈನ್ಯ ಚೀಫ್ ಆಫ್ ಸ್ಟಾಫ್ ಹಾಗೂ ಚೀಫ್ ಆಫ್ ಏರ್ ಸ್ಟಾಫ್ |- ೧೯೭೧–೧೯೭೨ [ಉಗಾಂಡಾದ ಈ ಜನರಲ್‌ರು ಏಷಿಯಾ ಮೂಲದ ಎಲ್ಲಾ ಉಗಾಂಡನ್ನರು ದೇಶವನ್ನು ಬಿಟ್ಟು ಹೋಗಬೇಕು ಇಲ್ಲವಾದರೆ ಪ್ರಾಣಕಳೆದುಕೊಳ್ಳಬೇಕಾಗುತ್ತದೆ ಎಂದು ಘೋಷಿಸಿದರು. 1972 ಮತ್ತು 1973 ರ ಮಧ್ಯದಲ್ಲಿ, ಸುಮಾರು 7000 ಏಷ್ಯಾದ ಉಗಾಂಡನ್ನರು ಕೆನಡಾಕ್ಕೆ ಬಂದರು
1975

ಉಚ್ಚ ಸೇನಾಧಿಕಾರಿ,

ಬ್ರಿಟಿಷ್ ವಸಾಹತು ಸೈನ್ಯ

ಅಮೀನ್ ೧೯೪೬ ರಲ್ಲಿ ಸಹಾಯಕ ಅಡುಗೆಯವನಾಗಿ ಬ್ರಿಟಿಷ್ ವಸಾಹತು ಸೇನೆಯ ಕಿಂಗ್ಸ್ ಆಫ್ರಿಕನ್ ರೈಫಲ್ಸ್ (ಕೆ‌ಎಆರ್) ಸೇರಿದರು.[೯] ಅವರು ಅಭಿಪ್ರಾಯ ಪಡುವಂತೆ ಅಮೀನ್‌ರವರು ಎರಡನೇ ಪ್ರಪಂಚದ ಮಹಾಯುದ್ಧ ದ ಸಮಯದಲ್ಲಿ ಸೈನ್ಯಕ್ಕೆ ಸೇರಿ ಬರ್ಮಾ ಸಂಘಟನೆಯಲ್ಲಿ ಸೇವೆ ಸಲ್ಲಿಸಿದರು ,[೧೦] ಆದರೆ ದಾಖಲೆಗಳ ಪ್ರಕಾರ ಯುದ್ಧದ ನಂತರ ಅವರನ್ನು ಮೊದಲು ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಯಿತು.[೭][೧೧] ೧೯೪೭ ರಲ್ಲಿ ಒಬ್ಬ ಖಾಸಗಿ ಸೈನಿಕನಾಗಿ ಅವರನ್ನು ಕಾಲಾಳು ಸೇವೆಗೆ ಕಿನ್ಯಾಗೆ ವರ್ಗಾಯಿಸಲಾಯಿತು ಮತ್ತು ೧೯೪೯ ರವರೆಗೆ ೨೧ನೇ ಕೆ‌ಎಆರ್ ಕಾಲಾಳು ಸೈನ್ಯದಲ್ಲಿ ಗಿಲ್ಗಿಲ್ ಮತ್ತು ಕಿನ್ಯಾದಲ್ಲಿ ಸೇವೆ ಸಲ್ಲಿಸಿದರುಅದೇ ವರ್ಷದಲ್ಲಿ , ಅವರ ಘಟಕವು ಸೊಮೇಲಿಯಾ ದ ಸೊಮಾಲಿ ಶಿಫ್ಟಾ ದಂಗೆಕೋರರೊಂದಿಗೆ ಹೋರಾಡಲು ಮುಂದಾಯಿತು.೧೯೫೨ ರಲ್ಲಿ ಅವರ ಸೇನಾದಳವು ಕಿನ್ಯಾದಲ್ಲಿರುವ ಮೌ ಮೌ ವಿರುದ್ಧ ಹೋರಾಡಲು ಸಜ್ಜಾಯಿತು. ಅದೇ ವರ್ಷ ಅವರು ಕಾರ್ಪೋರಲ್ ಆಗಿ ಬಡ್ತಿ ಹೊಂದಿದರು, ನಂತರ ೧೯೫೩ರಲ್ಲಿ ಸಾರ್ಜೆಂಟ್ ಆಗಿ ಬಡ್ತಿ ಹೊಂದಿದರು.[೮]೧೯೫೯ರಲ್ಲಿ ಅಮೀನ್‌ರವರನ್ನು ಅಂದಿನ ವಸಹಾತು ಬ್ರಿಟೀಷ್ ಸೈನ್ಯ ದ ದಲ್ಲಿ ಒಬ್ಬ ಕರಿಯ ಆಫ್ರಿಕನ್ ಅಲಂಕರಿಸಬಹುದಾದ ಅತ್ಯುನ್ನದ ಹುದ್ದೆಯಾದ ಎಫೆಂಡಿ (ವಾರೆಂಟ್ ಅಧಿಕಾರಿ), ಯನ್ನಾಗಿ ನೇಮಕ ಮಾಡಲಾಯಿತು.ಅದೇ ವರ್ಷ ಅಮೀನ್‌ರವರು ಉಗಾಂಡಾಕ್ಕೆ ಹಿಂದಿರುಗಿ ಬಂದು ೧೯೬೧ ರಲ್ಲಿ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿ , ಉಗಾಂಡಾದ ಇಬ್ಬರು ಕಮಿಷನ್ ಅಧಿಕಾರಿಗಳಲ್ಲಿ ತಾವೂ ಒಬ್ಬರು ಎನಿಸಿಕೊಂಡರು.ನಂತರ ಅವರನ್ನು ಉಗಾಂಡಾದಕರಾಮೊಜೊಂಗ್ ಮತ್ತು ಕಿನ್ಯಾದ ತುರ್ಕಾನಾ ಅಲೆಮಾರಿಗಳ ನಡುವಣ ಜಗಳಗಳನ್ನು ಹುಟ್ಟಡಗಿಸಲು ಜವಾಬ್ದಾರಿಯನ್ನು ಕೊಡಲಾಯಿತು.೧೯೬೨ ಉಗಾಂಡಾ ಗ್ರೇಟ್ ಬ್ರಿಟನ್ ನಿಂದ ಸ್ವಾತಂತ್ರಗೊಂಡ ನಂತರ, ಅಮೀನ್‌ರವರು ಕ್ಯಾಪ್ಟನ್ ಆಗಿ ಮತ್ತು ನಂತರ ೧೯೬೩ರಲ್ಲಿ ಮೇಜರ್ ಆಗಿ ಬಡ್ತಿ ಹೊಂದಿದರು. ನಂತರದ ವರ್ಷದಲ್ಲಿ ಸೈನ್ಯದ ಡೆಪ್ಯುಟಿ ಕಮ್ಯಾಂಡರ್ ಆಗಿ ನೇಮಕಗೊಂಡರು.[೮] ಬ್ರಿಟೀಷ್ ಮತ್ತು ಉಗಾಂಡ ಸೈನದಲ್ಲಿದ್ದಾಗ ಅಮೀನ್‌ರವರು ಒಬ್ಬ ಉತ್ತಮ ಅಥ್ಲೀಟ್ ಆಗಿದ್ದರು.ಸುಮಾರು ೧೯೩ ಸೆಂ.ಮೀ (೬ ಅಡಿ ೪ ಇಂಚು) ಎತ್ತರವಿದ್ದ ಅಮೀನ್‌ರವರು ೧೯೫೧ರಿಂದ ೧೯೬೦ ರವರೆಗೆ ಉಗಾಂಡಾದ ಲೈಟ್ ಹೆವೀ ವೈಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದರು ಮತ್ತು ಅಷ್ಟೇ ಅಲ್ಲದೆ ಒಬ್ಬ ಉತ್ತಮ ಈಜುಗಾರರೂ ಆಗಿದ್ದರು. ಇದು ಅಮೀನ್‌ರವರು ಒಬ್ಬ ಅಸಾಧಾರಣ ರಗ್ಬಿ ಆಟಗಾರರಾಗಿದ್ದರು,[೧೨][೧೩] ಒಬ್ಬ ಅಧಿಕಾರಿಯು ಅವರ ಬಗ್ಗೆ ಹೇಳುವಂತೆ:" ಇದಿ ಅಮೀನ್ ಒಬ್ಬ ಪ್ರಶಂಸನೀಯ ಹಾಗೂ ಉತ್ತಮ ರಗ್ಬಿ ಆಟಗಾರ, ಆದರೆ ವಾಸ್ತವವಾಗಿ ಪ್ರಮುಖ ಆಧಾರವಾಗಿದ್ದು, ಒಂದು ಅಕ್ಷರದಲ್ಲಿ ವಿವರಿಸಲು ಪದಗಳ ಅಗತ್ಯವಿದೆ".[೧೩][೧೪]೧೯೫೦ ರಲ್ಲಿ ಅವರು ನೈಲ್ ಆರ್‌ಎಫ್‌ಸಿಗಾಗಿ ಕೆಲಸ ಮಾಡಿದರು.[೧೫] ಅವರು ೧೯೫೫ ರ ಬ್ರಿಟೀಷ್ ಲಯನ್ಸ್ ವಿರುದ್ಧದ ಪಂದ್ಯಕ್ಕೆ ಪೂರ್ವ ಆಫ್ರಿಕಾ ದಿಂದ ಬೇರೊಬ್ಬರ ಸ್ಥಾನಕ್ಕೆ ಆಯ್ಕೆಗೊಂಡಿದ್ದರು ಎಂಬ ಅರ್ಬನ್ ದಂತಕಥೆ[೧೩][೧೫] ಆಗಾಗ್ಗೆ ಕೇಳಿಬರುತ್ತದೆ.ಆದರೆ ಈ ಕಥೆಯು ಸಂಪೂರ್ಣವಾಗಿ ಆಧಾರವಿಲ್ಲದ್ದು; ಏಕೆಂದರೆ ಅವರು ತಂಡದ ಅಧಿಕೃತ ಪಟ್ಟಿಯ[೧೬] ಛಾಯಾಚಿತ್ರದಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ ಮತ್ತು ಈ ಘಟನೆ ಸಂಭವಿಸಿತು ಎನ್ನಲಾದ ನಂತರ ೧೩ ವರ್ಷಗಳವರೆಗೆ ಅಂತರಾಷ್ಟ್ರೀಯ ರುಗ್ಬೀಯಲ್ಲಿ ಪ್ರತಿಯಾಗಿ ತೆಗೆದುಕೊಳ್ಳುವುದಕ್ಕೆ ಅವಕಾಶಗಳಿರಲಿಲ್ಲ.[೧೭]

ಸೈನ್ಯದ ನಾಯಕ

೧೯೬೫ ರಲ್ಲಿ ಪ್ರಧಾನ ಮಂತ್ರಿ ಯಾದ ಮಿಲ್ಟನ್ ಒಬೊಟೆ ಮತ್ತು ಅಮೀನ್ ಜೈರ್ ನಿಂದ ಉಗಂಡಾಗೆ ದಂತ ಮತ್ತು ಚಿನ್ನ ವನ್ನು ಕಳ್ಳಸಾಗಣಿಕೆ ಮಾಡುವ ವ್ಯವಹಾರದಲ್ಲಿ ತೊಡಗಿದರು.ನಂತರ ಈ ವ್ಯವಹಾರವು, ಪ್ರಾಕ್ಟಿಸ್ ಲುಂಬಾ ದ ಮಾಜಿ ನಾಯಕರಾದ ಜನರಲ್ ನಿಕೋಲಾಸ್ ಒಲೆಂಗಾ ರವರು,ಕಾಂಗೋಲೀಸ್ ಸರ್ಕಾರವು ಸಂಘಟನೆಗಳಿಗೆ ಅಮೀನ್ ದಂತ ಮತ್ತು ಚಿನ್ನವನ್ನು ಕಳ್ಳಸಾಗಣಿಕೆಯ ಮೂಲಕ ಸರಬರಾಜು ಮಾಡುತ್ತಿದ್ದಾರೆಂದು ಆರೋಪಿಸಿದರು . ೧೯೬೬ರಲ್ಲಿ ಉಗಾಂಡಾ ಸಂಸತ್ತು ತನಿಖೆಗೆ ಒತ್ತಾಯಪಡಿಸಿತು.ಒಬೊಟೆ ಬುಗಾಂಡಾದ ಕಬಾಕ (ರಾಜ)ನಾದ ಎಡ್ವರ್ಡ್ ಮುಟೇಸಾII ಅಧ್ಯಕ್ಷತೆಯನ್ನು ರದ್ದು ಪಡಿಸಿ ಒಂದು ಹೊಸ ಸಂವಿಧಾನವನ್ನು ಜಾರಿಗೆ ತಂದು, ತಾನು ಅದರ ಕಾರ್ಯನಿರ್ವಾಹಕ ಅಧ್ಯಕ್ಷ ಎಂದು ಘೋಷಿಸಿದರು.ಅವರು ಅಮೀನ್‌ರಿಗೆ ಕರ್ನಲ್ ಹಾಗೂ ಸೇನಾದಳದ ಕಮಾಂಡರ್ ಆಗಿ ಬಡ್ತಿ ನೀಡಿದರು.ಅಮೀನ್ ಕಬಾಕ ನ ಅರಮನೆಯನ್ನು ಮುತ್ತಿಗೆ ಹಾಕುವ ಮುಂದಾಳತ್ವ ವಹಿಸಿದರು ಮತ್ತು ಮುಟೇಸಾನನ್ನು ಯುನೈಟೆಡ್ ಸಾಮ್ರಾಜ್ಯಕ್ಕೆ ಗಡಿ ಪಾರು ಮಾಡುವಂತೆ ಮಾಡಿದರು , ನಂತರ ೧೯೬೯ ರಲ್ಲಿ ತಾನು ಸಾಯುವವರೆಗೂ ಕಬಾಕ ಅಲ್ಲೇ ಉಳಿಯಬೇಕಾಯಿತು.[೧೮][೧೯]ಅಮೀನ್ ಕವಾಕ , ಲುಗ್ಬಾರ , ನುಬಿಯನ್, ಮತ್ತು ಪಶ್ಚಿಮ ನೈಲ್ ನ ಸುಡಾನ್ ನ ಗಡಿ ಭಾಗದ ಜನಾಂಗೀಯ ಗುಂಪುಗಳಿಂದ ಸದಸ್ಯರನ್ನು ನೇಮಕ ಮಾಡಲು ಆರಂಭಿಸಿದರು.ನುಬಿಯನ್ನರು ಸುಡಾನ್ ನಿಂದ ಬಂದು ವಸಹಾತು ಸೇನೆಯಲ್ಲಿ ಸೇವೆ ಸಲ್ಲಿಸುತ್ತಾ ೨೦ ನೇ ಶತಮಾನದ ಮೊದಲಿನಿಂದಲೂ ಉಗಾಂಡಾದ ನಿವಾಸಿಗಳಾಗಿದ್ದಾರೆ.ಉತ್ತರ ಉಗಾಂಡಾದ ಹಲವಾರು ಆಫ್ರಿಕನ್ ಜನಾಂಗಗಳು ಉಗಾಂಡಾ ಮತ್ತು ಸೂಡಾನ್ ನಲ್ಲಿ ನೆಲೆಸಿದ್ಡಾರೆ; ಅಮೀನ್‌ರವರ ಸೈನ್ಯದಲ್ಲಿ ಹೆಚ್ಚಿನ ಪಾಲು ಸೂಡಾನ್ ಸೈನಿಕರೇ ಇದ್ದರು ಎಂಬ ಅಪಾದನೆಗಳು ಇನ್ನೂ ಹಾಗೆಯೇ ಇವೆ.[೨೦]

ಅಧಿಕಾರದ ವಶ

ಅಂತಿಮವಾಗಿ, ಅಮೀನ್ ಪಶ್ಚಿಮ ನೈಲ್ ಪ್ರದೇಶದ ಜನರನ್ನು ನೇಮಕ ಮಾಡಿಕೊಳ್ಳುವುದರ ಮೂಲಕ ತಮ್ಮ ಸೈನ್ಯವನು ಕಟ್ಟಿ ದಕ್ಷಿಣ ಸೂಡಾನ್ ದಂಗೆಕೋರರಿಗೆ ಬೆಂಬಲ ನೀಡುವುದರಲ್ಲಿ ಭಾಗಿಯಾದ್ದರಿಂದ ಅಮೀನ್ ಮತ್ತು ಒಬೊಟೆ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿತು ಮತ್ತು ೧೯೬೯ ರಲ್ಲಿ ಒಬೊಟೆ ಯವರ ಜೀವಕ್ಕೆ ಬೆದರಿಕೆ ಹಾಕುವ ಪ್ರಯತ್ನ ನಡೆಯಿತು.ಅಕ್ಟೋಬರ್ ೧೯೭೦ ರಂದು ಒಬೊಟೆ‍, ಅಮೀನ್‌ರವರ ಹಳೆಯ ಹುದ್ದೆಯಾದ ಎಲ್ಲಾ ಸೈನ್ಯ ಬಲದ ಕಮ್ಯಾಂಡರ್ ಹುದ್ದೆಯನ್ನು ತೆಗೆದು ಕೇವಲ ಸೈನ್ಯದ ಕಮ್ಯಾಂಡರ್ ನ್ನಾಗಿ ಮಾಡುವ ಮೂಲಕ ತಾವೇ ಎಲ್ಲಾ ಸೇನಾ ಪಡೆಯ ಅಧಿಕಾರವನ್ನು ವಹಿಸಿಕೊಂಡರು.[೨೧]

ಸೈನ್ಯದ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದ್ದರಿಂದ ತಮ್ಮನ್ನು ಒಬೊಟೆ ಬಂಧಿಸಬಹುದೆಂದು ಆಲೋಚಿಸಿದ ಅಮೀನ್‌ರವರು ೨೫ ಜನವರಿ ೧೯೭೧,ರಂದು ಒಬೊಟೆ ಸಿಂಗಪೂರ್ ನಲ್ಲಿ ಕಾಮನ್ ವೆಲ್ತ್ ಶೃಂಗ ಸಭೆಯಲ್ಲಿರುವಾಗ ಒಂದು ಮಿಲಿಟರಿ ಕಾಪ್ನ ಅಧಿಕಾರವನ್ನು ವಶಪಡಿಸಿಕೊಂಡರು.ಅಮೀನ್ ಅವರಿಗೆ ನಿಷ್ಠೆಯಿಂದ ಇದ್ದ ಸೈನಿಕರ ದಂಡು ಉಗಾಂಡಾದ ಪ್ರಮುಖ ದಾರಿಯಾದ ಎಂಟಬೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಿ , ಕಂಪಾಲಕ್ಕೆ ಕೊಂಡೊಯ್ದರು.ಸೈನಿಕರು ಒಬೋಟ್‌ನ ಮನೆಯನ್ನು ಮುತ್ತಿಗೆ ಹಾಕಿದರು ಮತ್ತು ಪ್ರಮುಖ ರಸ್ತೆಗಳು ಮುಚ್ಚಲ್ಪಟ್ಟವು.ರೇಡಿಯೋ ಉಗಾಂಡಾ ದ ಒಂದು ಪ್ರಸಾರವು ಒಬೊಟೆ ಸರ್ಕಾರದ ಭ್ರಷ್ಟಾಚಾರ ಮತ್ತು ಲೊಂಗೋ ಪ್ರದೇಶಕ್ಕೆ ಕೊಟ್ಟ ಪ್ರಮುಖ ಆಧ್ಯತೆಯ ಕುರಿತು ಆರೋಪ ಮಾಡಿತು.ರೇಡಿಯೋ ಪ್ರಸಾರದ ನಂತರ ಹರ್ಷೋದ್ಗಾರವಿಡುತ್ತಿರುವ ಜನರ ಗುಂಪು ಕಂಪಾಲದ ಬೀದಿಗಳಲ್ಲಿ ಕಾಣಿಸಿ ಕೊಂಡಿತು.[೨೨]ಅಮೀನ್ ತಾನು ಒಬ್ಬ ಸೈನಿಕನೇ ಹೊರತು, ರಾಜಕೀಯ ವ್ಯಕ್ತಿಯಲ್ಲ ಮತ್ತು ಹೊಸ ಚುನಾವಣೆಗಳು ನಡೆಯುವವರಗೂ ಮಿಲಿಟರಿ ಸರ್ಕಾರವು ಸಹಜ ಸ್ಥಿತಿಗೆ ಬರುವವರೆಗೂ ಒಂದು ಹಿತಚಿಂತಕ ಆಡಳಿತವಾಗಿ ಮಾತ್ರವೇ ಇರುತ್ತದೆ ಎಂದು ಘೋಷಿಸಿದರು.ತಾನು ಎಲ್ಲಾ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡುವುದಾಗಿ ಮಾತುಕೊಟ್ಟರು.[೨೩]

ಏಪ್ರಿಲ್ ೧೯೭೧ ರಂದು ಅಮೀನ್ ಮಾಜಿ ರಾಜ ಮತ್ತು ಅಧ್ಯಕ್ಷರಾದ ಮುಟೇಸಾ (ಗಡಿಪಾರಿನಲ್ಲಿ ಮೃತಹೊಂದಿದವರು) ರವರಿಗೆ ಅಧಿಕೃತ ಅಂತಿಮ ಸಂಸ್ಕಾರ ಮಾಡಿ, ಅನೇಕ ರಾಜಕೀಯ ಖದಿಗಳನ್ನು ಬಿಡುಗಡೆ ಮಾಡಿದರು ಮತ್ತು ಆದಷ್ಟು ಬೇಗನೆ ರಾಷ್ಟ್ರಕ್ಕೆ ಪ್ರಜಾಪ್ರಭುತ್ವ ದ ಆಡಳಿತವನ್ನು ನೀಡಲು ಸ್ವತಂತ್ರ ಚುನಾವಣೆಗಳನ್ನು ನಡೆಸುವ ತಮ್ಮ ಭರವಸೆಯನ್ನು ಪುನರುಚ್ಛರಿಸಿದರು.[೨೪]

ಅಧ್ಯಕ್ಷತೆ

ಮಿಲಿಟರಿ ಆಡಳಿತದ ಸ್ಥಾಪನೆ

೨ ಫೆಬ್ರವರಿ ೧೯೭೧ ರಲ್ಲಿ ದಾಳಿಯ ಒಂದು ವಾರದ ನಂತರ , ಅಮೀನ್ ತಾವು ಉಗಾಂಡಾದ ಅಧ್ಯಕ್ಷ ಸೇನಾ ಪಡೆಯ ಕಮ್ಯಾಂಡರ್ -ಇನ್ -ಚೀಫ್ , ಸೇನಾಪಡೆಯ ಪ್ರಮುಖ ಹಾಗೂ ವಾಯು ಪಡೆಯ ಪ್ರಮುಖ ಎಂದು ಘೋಷಣೆ ಮಾಡಿಕೊಂಡರು. ತಾವು ಉಗಾಂಡಾ ಸಂವಿಧಾನ ದ ಕೆಲವು ಪ್ರಾಂತಗಳನ್ನು ಅಮಾನತುಗೊಳಿಸಿ, ಸ್ವತಃ ತಾವೇ ಅಧ್ಯಕ್ಷರಾಗಿರುವ ಮಿಲಿಟರಿ ಅಧಿಕಾರಿಗಳನ್ನು ಒಳಗೊಂಡ ಒಂದು ರಕ್ಷಣಾ ಸಲಹಾ ಪರಿಷತ್ ನ್ನು ಸ್ಥಾಪಿಸುವುದಾಗಿ ಘೋಷಿಸಿದರು.ಅಮೀನ್‌ರವರು ನಾಗರೀಕ ಕಾನೂನನ್ನು ಮೀರಿ ಮಿಲಿಟರಿ ಟ್ರೈಬ್ಯುನಾಲ್‌ಗಳಲ್ಲಿ ಸರ್ಕಾರದ ಉನ್ನತ ಉದ್ದೆಗಳಲ್ಲಿ ಸೈನಿಕರನ್ನು ಮತ್ತು ಪ್ಯಾರಾಸ್ಟಾಟಲ್ ಏಜನ್ಸಿಗಳಲ್ಲಿ ನೇಮಕ ಮಾಡಿಕೊಂಡರು, ಮತ್ತು ಹೊಸದಾಗಿ ನಿರ್ಮಾಣಗೊಂಡ ಸಚಿವ ಸಂಪುಟ ಮಂತ್ರಿಗಳಿಗೆ ಮಿಲಿಟರಿ ಶಿಸ್ತನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಿದರು.[೨೧][೨೫]ಅಮೀನ್ ಕಂಪಾಲದಲ್ಲಿರುವ ಅಧ್ಯಕ್ಷ ವಸತಿಯ ಸರ್ಕಾರಿ ಭವನ ಎಂಬ ಹೆಸರಿನಿಂದ "ದಿ ಕಮ್ಯಾಂಡ್ ಪೋಸ್ಟ್" ಎಂಬ ಹೆಸರನ್ನು ಇಡುವುದರ ಮೂಲಕ ಪುನರ್ ನಾಮಕರಣ ಮಾಡಿದರು.ಹಿಂದಿನ ಸರ್ಕಾರವು ರಚಿಸಿದ್ದ ಜನರಲ್ ಸರ್ವೀಸ್ ಯುನಿಟ್ (GSU) ಎಂಬ ಒಂದು ಬೇಹುಗಾರಿಕೆ ಏಜೆನ್ಸಿಯನ್ನು ರದ್ದು ಪಡಿಸಿ, ಅದರ ಸ್ಥಾನದಲ್ಲಿ ಸ್ಟೇಟ್ ರಿಸರ್ಚ್ ಬ್ಯೂರೋ (SRB) ವನ್ನು ಇರಿಸಿದರು.ಕಂಪಾಲ ಪ್ರಾಂತದ ನಕಾಸೆರೊನಲ್ಲಿರುವ SRB ಪ್ರಧಾನ ಕಛೇರಿಯು ನಂತರದ ವರ್ಷಗಳಲ್ಲಿ ಹಿಂಸಾತ್ಮಕ ಮತ್ತು ಮರಣ ದಂಡನೆಯ ಒಂದು ತಾಣವಾಗಿ ಮಾರ್ಪಟ್ಟಿತು.[೨೬]ಇತರ ಏಜೆನ್ಸಿಗಳು ಮಿಲಿಟರಿ ಪೋಲೀಸ್ ಮತ್ತು ಸಾರ್ವಜನಿಕ ರಕ್ಷಣಾ ಘಟಕ (PSU) ಗಳನ್ನೊಳಗೊಂಡಂತೆ ರಾಜಕೀಯ ರಾಜಕೀಯ ಮತಬೇಧಗಳನ್ನು ಬೇರು ಸಹಿತ ಕಿತ್ತು ಹಾಕಲು ಪ್ರಾರಂಭಿಸಿದವು .[೨೬]

ಒಬೊಟೆ ಟಾಂಜೇನಿಯಾದಲ್ಲಿ ಆಶ್ರಯ ಪಡೆದರು, ಅಲ್ಲಿ ಟಾಂಜೇನಿಯಾದ ಅಧ್ಯಕ್ಷ ಜೂಲಿಯಸ್ ನೈರೆರೆ ಇವರಿಗೆ ಆಶ್ರಯ ನೀಡಿದರು.ಅವರು ನಂತರ ಬಹು ಬೇಗನೇ ಅಮೀನ್‌ರವರಿಂದ ತಲೆ ಮರೆಸಿಕೊಂಡಿದ್ದ ಸುಮಾರು ೨೦,೦೦೦ ಉಗಾಂಡಾದ ನಿರಾಶ್ರಿತರೊಂದಿಗೆ ಸೇರಿಕೊಂಡರು. ೧೯೭೨ ರಲ್ಲಿ ಒಂದು ದುರ್ಬಲ ಸಂಘನೆಯ ಮೂಲಕ ಗಡಿಪಾರಾದ ನಿರಾಶ್ರಿತರು ತಮ್ಮ ರಾಷ್ಟ್ರವನ್ನು ಪುನಃ ಪಡೆಯಲು ಪ್ರಯತ್ನಿಸಿದರು.[೨೭]

ತಮ್ಮ ಜನಾಂಗದ ಹಾಗೂ ಇತರೆ ಗುಂಪುಗಳ ದಬ್ಬಾಳಿಕೆ

ಅಮೀನ್‌ರವರು ಒಬೊಟೆಯ ಬೆಂಬಲಿಗರ ಸೈನ್ಯವನ್ನು ಸದೆ ಬಡಿಯುವುದರ ಮೂಲಕ ೧೯೭೨ ರಲ್ಲಿ ಗಡಿಪಾರಾದ ನಿರಾಶ್ರಿತರು ತಮ್ಮ ಮೇಲೆ ದಂಡೆತ್ತಿ ಬರುವುದರ ವಿರುದ್ಧ ಸೇಡು ತೀರಿಸಿಕೊಂಡರು ,ಪ್ರಮುಖ ವಾಗಿ ಅವರ ಪ್ರತಿಕಾರ ಆಲ್ಕೋಲಿ ಮತ್ತು ಲಾಂಗೊ ಜನಾಂಗೀಯ ಗುಂಪುಗಳ ವಿರುದ್ಧ ಆಗಿತ್ತು.[೨೮]೧೯೭೧ರಲ್ಲಿ , ಜಿಂಜಾ ಮತ್ತು ಮಬಾರಾ ಸೇನಾಪಾಳ್ಯಗಳಲ್ಲಿ ಲಾಂಗೋ ಮತ್ತು ಆಲ್ಕೋಲಿ ಸೈನಿಕರು ಹತ್ಯೆಗೀಡಾದರು,[೨೯] ಮತ್ತು ೧೯೭೨ ರ ಆರಂಭದಲ್ಲಿ , ಸುಮಾರು ೫,೦೦೦ ಆಲ್ಕೋಲಿ ಮತ್ತು ಲಾಂಗೋ ಸೈನಿಕರನ್ನು ಒಳಗೊಂಡಂತೆ ಕನಿಷ್ಟ ಎರಡು ಪಟ್ಟು ನಾಗರೀಕರು ಕಣ್ಮರೆಯಾದರು.[೩೦]ಈ ಬಲಿಪಶುಗಳಲ್ಲಿ ಬಹುಬೇಗನೇ ಇತರೆ ಜನಾಂಗಿಯ ಗುಂಪುಗಳು, ಧಾರ್ಮಿಕ ಮುಖಂಡರು, ಪತ್ರ ಕರ್ತರು, ಕಲಾವಿದರು, ಹಿರಿಯ ಅಧಿಕಾರಿಗಳು, ವಕೀಲರು, ಸಲಿಂಗ ಕಾಮಿಗಳು, ವಿದ್ಯಾರ್ಥಿಗಳು ಮತ್ತು ಬುದ್ಧಿ ಜೀವಿಗಳು, ಅಪರಾಧಿಗಳು ಮತ್ತು ಪರ ರಾಷ್ಟ್ರದವರು ಸದಸ್ಯರಾದರು.ಈ ಹಿಂಸಾತ್ಮಕ ವಾತಾವರಣದಲ್ಲಿ, ಹಲವಾರು ಜನರು ಅಪರಾಧ ಪ್ರಚೋಧನೆ ಅಥವಾ ಕ್ಷುಲ್ಲಕ ಕಾರಣಗಳಿಗಾಗಿ ಕೊಲ್ಲಲ್ಪಟ್ಟರು.[೩೧]

ಜನಾಂಗೀಯ, ರಾಜಕೀಯ ಮತ್ತು ಆರ್ಥಿಕ ಅಂಶಗಳಿಂದ ಪ್ರಚೋದಿತವಾದ ಅನೇಕ ಕೊಲೆಗಳು ಅಮೀನ್‌ರವರ ಎಂಟು ವರ್ಷಗಳ ಆಡಳಿತದುದ್ದಕ್ಕೂ ನಡೆಯಿತು.[೩೦]ಕೊಲೆಯಾದವರ ಸಂಖ್ಯೆ ಗೊತ್ತಾಗಿಲ್ಲ. ಇಂಟರ್ನ್ಯಾಷನಲ್ ಕಮಿಷನ್ ಆಫ್ ಜೂರಿಸ್ಟ್ಸ್ ಸಾವಿನ ಸಂಖ್ಯೆಯನ್ನು ೮೦,೦೦೦ ದಷ್ಟೆಂದು ಅಂದಾಜಿಸಿದೆ ಹಾಗೂ ಹೆಚ್ಚಿನ ಪ್ರಕಾರ ಸುಮಾರು ೩೦೦,೦೦೦. ಆಮ್ನೆಸ್ಟಿ ಇಂಟನ್ಯಾಷನಲ್ ಸಹಾಯದಿಂದ ಕೆಲವು ಸಂಸ್ಥೆಗಳು ಅಂದಾಜು ಮಾಡಿದಂತೆ ಕೊಲೆಗೀಡಾದವರ ಸಂಖ್ಯೆ ೫೦೦,೦೦೦.[೭] ಕೊಲೆಯಾದವರಲ್ಲಿ ಅತಿ ಪ್ರಮುಖರೆಂದರೆ ಮಾಜಿ ಪ್ರಧಾನ ಮಂತ್ರಿ ಹಾಗೂ ಮುಖ್ಯ ನ್ಯಾಯಾಧೀಶ ಬೆನೆಡಿಕ್ಟೋ ಕಿವನುಕ; ಆಂಗ್ಲಿಕನ್ ಆರ್ಚ್‌ಬಿಷಪ್ ಜನನಿ ಲುವುಮ್; ಸೆಂಟ್ರಲ್ ಬ್ಯಾಂಕ್ನ ಮೊದಲ ಗವರ್ನರ್ ಜೋಸೆಫ್ ಮುಬಿರು; ಮಕೆರೆರೆ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಫ್ರಾಂಕ್ ಕಲಿಮುಝೊ; ಪ್ರಸಿದ್ಧ ನಾಟಕಕಾರ ಬೈರನ್ ಕವಡ್ವಾ; ಹಾಗೂ ಅಮೀನ್‌ ಸಚಿವ ಸಂಪುಟದ ಇಬ್ಬರು ಮಂತ್ರಿಗಳಾದ ಎರಿನಯೊ ವಿಲ್ಸನ್ ಒರ್ಯೆಮಾ ಹಾಗೂ ಚಾರ್ಲ್ಸ್ ಒಬೊತ್ ಒಫಂಬಿ.[೩೨]ಅಮೀನ್‌ರ ಅಲಿ ಮುಯಮ್ಮರ್ ಗಡ್ಡಾಫಿಯು ಉಗಾಂಡಾದಿಂದ ಏಷ್ಯನ್ನರು ಹೊರಹಾಕಲು ಸೂಚಿಸಿದರು[೩೩] ಆಗಸ್ಟ್ ೧೯೭೨ ರಲ್ಲಿ "ಆರ್ಥಿಕ ಸಮರ"ವನ್ನು ಘೋಷಿಸಲಾಯಿತು, ಏಷ್ಯನ್ನರು ಹಾಗೂ ಯೂರೋಪಿಯನ್ನರು ಹೊಂದಿದ್ದ ಆಸ್ತಿಪಾಸ್ತಿಗಳನ್ನು ಸುಲಿಗೆ ಮಾಡಲು ಕೆಲವು ನಿಯಮಗಳನ್ನು ರೂಪಿಸಲಾಯಿತು. ಉಗಾಂಡಾದ ೮೦,೦೦೦ ಏಷ್ಯನ್ನರು ಹೆಚ್ಚಾಗಿ ಭಾರತದವರಾಗಿದ್ದರು, ಅವರ ಪೂರ್ವಜರು ಉಗಾಂಡಾಗೆ ವಲಸೆ ಬಂದವರಾಗಿದ್ದರು. ಇದರಲ್ಲಿ ಹಲವರು ಸಣ್ಣ ಪ್ರಮಾಣದ ಹಾಗೂ ದೊಡ್ಡ ಪ್ರಮಾಣದ ವ್ಯವಹಾರಗಳನ್ನು ಹೊಂದಿದ್ದು, ಉಂಗಾಂಡಾದ ಆರ್ಥಿಕತೆಗೆ ಬೆನ್ನೆಲುಬಾಗಿತ್ತು. ಆಗಸ್ಟ್ ೪, ೧೯೭೨ ರಲ್ಲಿ ಅಮೀನ್ ಒಂದು ಶಾಸನವನ್ನು ಹೊರಡಿಸಿದರು, ಅದು ಉಗಾಂಡಾದ ನಾಗರೀಕರಲ್ಲದ ಸುಮಾರು ೬೦,೦೦೦ ಏಷ್ಯನ್ನರ ಉಚ್ಛಾಟನೆ (ಅದರಲ್ಲಿ ಹಲವರು ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದವರಾಗಿದ್ದರು). ನಂತರದಲ್ಲಿ ಇದನ್ನು ತಿದ್ದುಪಡಿ ಮಾಡಿ ಡಾಕ್ಟರ್‌ಗಳು, ವಕೀಲರುಗಳು ಹಾಗೂ ಶಿಕ್ಷಕರಂತಹ ವೃತ್ತಿಪರರನ್ನು ಹೊರತು ಪಡಿಸಿ ಉಳಿದ ಏಷ್ಯನ್ನರು ಹೊರಹೋಗಬೇಕೆನ್ನಲಾಯಿತು. ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿದ್ದ ಸುಮಾರು ೩೦,೦೦೦ ಏಷ್ಯನ್ನರು ಬ್ರಿಟನ್ನಿಗೆ ತೆರಳಿದರು. ಉಳಿದವರು ಆಸ್ಟ್ರೇಲಿಯಾ, ಕೆನಡಾ, ಭಾರತ, ಕೀನ್ಯಾ, ಪಾಕೀಸ್ತಾನ, ಸ್ವೀಡನ್, ತಾಂಝೇನಿಯಾ, ಹಾಗೂ ಯು.ಎಸ್.ಗೆ ತೆರಳಿದರು.[೩೪][೩೫][೩೬] ದೇಶದಿಂದ ಹೊರಹೋದ ಏಷ್ಯನ್ನರ ವ್ಯಾಪಾರ ಹಾಗೂ ಆಸ್ತಿಗಳನ್ನು ಅಮೀನ್ ತನ್ನ ಆಪ್ತರಿಗೆ ಹಂಚಿದರು. ವ್ಯಾಪಾರ ಹಾಗೂ ಕೈಗಾರಿಕೆಗಳು ಸರಿಯಾದ ನಿರ್ವಹಣೆಯಿಲ್ಲದೆ ಹಾಳಾದವು. ಇದು ದೇಶದ ಆರ್ಥಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಿತು.[೨೫]೧೯೭೭ರಲ್ಲಿ, ಅಮೀನ್‌ರ ಆರೋಗ್ಯ ಮಂತ್ರಿ ಓಬೋಟ್ ಪ್ರದೇಶದಲ್ಲಿ ಮೊದಲು ಅಧಿಕಾರಿಯಾಗಿದ್ದ ಹೆನ್ರಿ ಕ್ಯೆಂಬಾ, ಬ್ರಿಟನ್‌ನಲ್ಲಿ ನೆಲೆಯಾದರು. ಕ್ಯೆಂಬಾ ಎ ಸ್ಟೇಟ್ ಆಫ್ ಬ್ಲಡ್ ಪುಸ್ತಕವನ್ನು ಬರೆದು ಪ್ರಕಟಿಸಿದರು, ಅಮೀನ್‌ನ ಆಡಳಿತವನ್ನು ಹತ್ತಿರದಿಂದ ಕಂಡು ಬಯಲಿಗೆಳೆದ ಮೊದಲಿಗರಾದ್ದಾರೆ.

ಅಂತರರಾಷ್ಟ್ರೀಯ ಸಂಬಂಧಗಳು

೧೯೭೨ ಭಾರತೀಯ ಮೂಲದವರನ್ನೂ ಒಳಗೊಂಡಂತೆ ಉಗಾಂಡಾದ ಏಷ್ಯಾ ನಿವಾಸಿಗಳನ್ನು ಹೊರಹಾಕಿದ್ದರಿಂದ, ಭಾರತದ ಉಗಾಂಡದೊಂದಿಗಿನ ರಾಯಭಾರಿ ಸಂಬಂಧಗಳು ನರ‍ಳಿದವು.ಅದೇ ವರ್ಷ , ತಮ್ಮ " ಆರ್ಥಿಕ ಸಮರ" ದ ಒಂದು ಭಾಗವಾಗಿ ಅಮೀನ್ ಬ್ರೀಟೀಷ್ ಮತ್ತು ೮೫ ಬ್ರಿಟೀಷ್ -ಮೂಲದ ರಾಷ್ಟ್ರೀಕೃತ ವ್ಯಾಪಾರಗಳೊಂದಿಗಿನ ರಾಯಭಾರಿ ಸಂಬಂಧವನ್ನು ಮುರಿದರು.ಆ ವರ್ಷದಲ್ಲಿ ಇಸ್ರೇಲ್‌ ಜೊತೆಗಿದ್ದ ಸಂಬಂಧ ಹಾಳಾಯಿತು. ಇಸ್ರೇಲ್ ಇದಕ್ಕೂ ಮುನ್ನ ಉಗಾಂಡಾಗೆ ಸೈನ್ಯವನ್ನು ಸರಬರಾಜು ಮಾಡಿದ್ದರೂ ಸಹ , ೧೯೭೨ ರಲ್ಲಿ ಅಮೀನ್ ಇಸ್ರೇಲ್ ಮಿಲಿಟರಿ ಸಲಹೆಗಾರರನ್ನು ಹೊರಹಾಕಿದರು ಮತ್ತು ಲಿಬಿಯಾ ದ ಮುಮ್ಮಾದ್ ಆಲ್ -ಗಿಡ್ಡಾಫಿ ಮತ್ತು ಸೋವಿಯತ್ ಒಕ್ಕೂಟದ ಕಡೆಗೆ ಬೆಂಬಲಕ್ಕಾಗಿ ಮುಖ ಮಾಡಿದರು.[೨೮]ಅಮೀನ್ ಅವರು ಇಸ್ರೇಲ್‌ ಬಗೆಗೆ ಖಂಡಿತವಾದಿಯಾಗಿ ಮಾತನಾಡುವಂತಾದರು. ಗಡ್ಡಾಫಿ ಅಮೀನ್‌ರಿಗೆ ಹಣಕಾಸು ನೆರವು ನೀಡಿದರು.[೩೭] ಡಾಕ್ಯುಮೆಂಟರಿ ಚಿತ್ರದಲ್ಲಿ General Idi Amin Dada: A Self Portrait , ಅಮೀನ್ ಅವರು ಪ್ಯಾರಾಟ್ರೂಪ್‌ಗಳು, ಬಾಂಬ್‌ಗಳು ಹಾಗೂ ಆತ್ಮಹತ್ಯಾ ದಳವನ್ನುಪಯೋಗಿಸಿ ಇಸ್ರೇಲ್‌ ವಿರುದ್ಧ ಯುದ್ಧ ಮಾಡುವ ವಿಚಾರವನ್ನು ಚರ್ಚಿಸಿದರು.[೧೦] ಅಮೀನ್ ನಂತರದಲ್ಲಿ "ಆರು ಸಾವಿರ ಯಹೂದಿಗಳನ್ನು ಭಸ್ಮ "ಮಾಡಿದ ಹಿಟ್ಲರ್ ಸರಿಯಾಗಿ ಮಾಡಿರುವನೆಂಬ ಹೇಳಿಕೆ ನೀಡಿದರು.[೩೮]ಸೋವಿಯಟ್ ಯೂನಿಯನ್ ಅಮೀನ್‌ಗೆ ಶಸ್ತ್ರಗಳನ್ನು ಸರಬರಾಜು ಮಾಡುತ್ತಿತ್ತು.[೩] ಪೂರ್ವ ಜರ್ಮನಿ ಸ್ಟೇಟ್ ರಿಸರ್ಚ್ ಬ್ಯೂರೋ ಮತ್ತು ಜನರಲ್ ಸರ್ವೀಸ್ ಯುನಿಟ್ ಎಂಬ ಭಯೋತ್ಪಾದನೆಗೆ ಹೆಸರಾದ ಎರಡು ಪಾರುಪತ್ಯಗಳಲ್ಲಿ ಭಾಗಿಯಾಗಿತ್ತು.ನಂತರ ೧೯೭೯ರಲ್ಲಿ ಟಾಂಜೇನಿಯಾದ ಮೇಲಿನ ಉಗಾಂಡಾದ ದಾಳಿಯಲ್ಲಿ, ಪೂರ್ವ ಜರ್ಮನಿ ಇಂತಹ ಪಾರುಪತ್ಯಗಳೊಂದಿಗೆ ತಾನು ಭಾಗಿಯಾಗಿರುವುದರ ಸಾಕ್ಷಿಯನ್ನು ತೆಗೆದುಹಾಕಲು ಪ್ರಯತ್ನಿಸಿತು.[೪]೧೯೭೩ರಲ್ಲಿ , ರಾಯಭಾರಿಯಾದ ಥಾಮಸ್ ಪಾಟ್ರಿಕ್ ಮೆಲಡಿ ಯವರು ಉಗಾಂಡಾದಲ್ಲಿ ತನ್ನ ಅಸ್ತಿತ್ವವನ್ನು ಕಡೀಮೆಗೊಳಿಸುವಂತೆ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ಶಿಪಾರಸು ಮಾಡಿದರು.ಮೆಲಡಿ ಅಮೀನ್‌ರವರ ಆಡಳಿತವನ್ನು "ಜನಾಂಗೀಯ ಬೇಧ, ಕ್ರೂರ ಮತ್ತು ಅನಿಶ್ಚಿತ, ವಿವೇಚನಾರಹಿತ, ಹಾಸ್ಯಾಸ್ಪದ ಮತ್ತು ಮಿಲಿಟರಿ ಮಾದರಿ " ಎಂದು ವಿವರಿಸಿದರು.ಅದರ ಪ್ರಕಾರ , ಅಮೇರಿಕಾ ಸಂಯುಕ್ತ ಸಂಸ್ಥಾನವು ತನ್ನ ಕಂಪಾಲದಲ್ಲಿ ತನ್ನ ರಾಯಭಾರವನ್ನು ಅಂತ್ಯಗೊಳಿಸಿತು.ಜೂನ್ ೧೯೭೬ ರಲ್ಲಿ, ಅಮೀನ್ ಏರ್ ಫ್ರಾನ್ಸ್ನ ಅಪಹರ‍ಣದಲ್ಲಿ ಭಾಗಿಯಾಗಿದ್ದ ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ - ಎಕ್ಸ್‌ಟರ್ನಲ್ ಆಪರೇಶನ್ಸ್ (ಪಿಎಫ್‌ಎಲ್‌ಪಿ-ಇಒ) ನ ಇಬ್ಬರು ಸದಸ್ಯರು ಮತ್ತು ಜರ್ಮನ್ ನ ರೆವೊಲ್ಯೂಷನರಿ ಝೆಲೆನ್ ಇಬ್ಬರು ಸದ್ಯರನ್ನು ಏಂಟೆಬೆ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನೀಡಿದರು.ಅಪಹರಣಕಾರರು ಅಲ್ಲಿ ಇನ್ನೂ ಮೂರು ಜನ ಸೇರಿದರು ಇದರ ನಂತರ, ಇಸ್ರೇಲ್ ಪಾಸ್ ಪೋರ್ಟ್ ಹೊಂದಿರದ ೧೫೬ ಯೆಹೂದಿಯೇತರ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಯಿತು ,ಆದರೆ ೮೩ ಯೆಹೂದಿಗಳು ಮತ್ತು ಇಸ್ರೇಲ್ ನಾಗರೀಕರು ಹಾಗೂ ೨೦ ಇತರೆ ನಿರಾಶ್ರಿತರನ್ನು ( ಇವರಲ್ಲಿ ಏರ್ ಫ್ರಾನ್ಸ್ ನಲ್ಲಿ ಅಪಹರಣಗೊಂಡ ಕ್ಯಾಪ್ಟನ್ ಗಳು ಮತ್ತು ಗುಂಪು ಇದ್ದರು) ಒತ್ತೆಯಾಳುಗಳಾಗಿ ಮುಂದುವರೆಸಲಾಯಿತು.ಇಸ್ರೇಲ್ ಬಿಡುಗಡೆ ಕಾರ್ಯಾಚರಣೆಯಲ್ಲಿ, ಆಪರೇಷನ್ ತಂಡರ್ ಬೋಲ್ಟ್ ( ಇದು ಆಪರೇಷನ್ ಎಂಟೆಬ್ಬೆ ಎಂದು ಪ್ರಸಿದ್ಧ ವಾಗಿದೆ) ಹೆಚ್ಚು ಕಡಿಮೆ ಎಲ್ಲಾ ಒತ್ತೆಯಾಳುಗಳನ್ನೂ ಬಿಡುಗಡೆ ಮಾಡಿತು.ಈ ಕಾರ್ಯಾಚರಣೆಯಲ್ಲಿ ಮೂರು ಒತ್ತೆಯಳುಗಳು ಮರಣಹೊಂದಿ, ೧೦ ಜನರು ಗಾಯಗೊಂಡರು; ಏಳು ಜನ ಅಪಹರಿಸಲ್ಪಟ್ಟವರು, ೪೫ ಉಗಾಂಡಾದ ಸೈನಿಕರು ಮತ್ತು ಒಬ್ಬ ಇಸ್ರೇಲಿನ ಸೈನಿಕನಾದ ಯಾನಿ ನೆತಾನಿಯಾಹು , ಕೊಲ್ಲಲ್ಪಟ್ಟರು.ನಾಲ್ಕನೇಯ ಒತ್ತೆಯಾಳಾದ ೭೫ ವರ್ಷದ ದೊರಾ ಬ್ಲೋಚ್ ರನ್ನು ಬಿಡುಗಡೆ ಮಾಡುವುದಕ್ಕಿಂತ ಮುಂಚೆ ಕಂಪಾಲ ದಲ್ಲಿನ ಮುಲಾಗೋ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಗೆ ಕೊಂಡೊಯ್ಯುವ ಸಮಯದಲ್ಲಿ ಕೊಲ್ಲಲ್ಪಟ್ಟರು.ಈ ಘಟನೆಯು ಮುಂದೆ ಉಗಾಂಡಾದ ಅಂತರಾಷ್ಟ್ರೀಯ ಸಂಬಂಧವನ್ನು ಹೆಚ್ಚಿಸುವಂತೆ ಮಾಡಿತು, ಇದು ಮುಂದೆ ಉಗಾಂಡಾದಲ್ಲಿ ಬ್ರಿಟನ್ ತನ್ನ ಹೈಕಮಿಷನ್ ಗೆ ಬಹಳ ಹತ್ತಿರವಾಗುವಂತೆ ಮಾಡಿತು.[೩೯]ಉಗಾಂಡಾ ಅಮೀನ್‌ರವರ ನೇತೃತ್ವದಲ್ಲಿ ಒಂದು ಮಿಲಿಟರಿ ಪಡೆಯನ್ನು ರಚಿಸುವ ಸಾಹಸ ಕಾರ್ಯವನ್ನು ಮಾಡಿತು , ಇದು ಕಿನ್ಯಾದಲ್ಲಿ ಅದರ ಕಾಳಜಿಯನ್ನು ಹೆಚ್ಚಿಸಿತು.೧೯೭೫ ರಜೂನ್ ನ ಆರಂಭದಲ್ಲಿ , ಕೀನ್ಯಾದ ಅಧಿಕಾರಿಗಳು ಸೋವಿಯತ್- ನಿರ್ಮಿತ ಆಯುಧ ಎನ್ ರೂಟ್ ನ್ನು ಉಗಾಂಡಾಕ್ಕೆ ತರಲು ಮೊಂಬಾಸ ವಿಮಾನ ನಿಲ್ದಾಣಕ್ಕೆ ಒಂದು ದೊಡ್ಡ ಪಡೆಯನ್ನು ಏರ್ಪಡಿಸಿದರು.೧೯೭೬ರಲ್ಲಿ ಅಮೀನ್‌ರವರು ದಕ್ಷೀಣ ಸುಡಾನ್ ಮತ್ತು ಮಧ್ಯ ಹಾಗೂ ಪಶ್ಚಿಮ ಕೀನ್ಯಾದಿಂದ ಹಿಡಿದು ನೈರೋಬಿಯ32 kilometres (20 mi) ಒಳಗಿನ ಚಾರಿತ್ರಿಕ ಉಗಾಂಡಾದ ಭಾಗಗಳವರೆಗೂ ತಾವು ತಕ್ಕ ಮಟ್ಟಿಗಿನ ತನಿಖೆ ನಡೆಸುವುದಾಗಿ ಘೋಷಿಸಿದಾಗ ಉಗಾಂಡಾ ಮತ್ತು ಕೀನ್ಯಾದ ನಡುಣ ಬಿಕ್ಕಟ್ಟು ತಾರಕಕ್ಕೇರಿತು.ಕೀನ್ಯಾ ಸರ್ಕಾರ ವು ಒಂದು ಉತ್ತಮವಾದ ಹೇಳಿಕೆಯೊಂದಿಗೆ ತಾನು "ಒಂದು ಇಂಚು ಪ್ರಾಂತದೊಂದಿಗೂ" ಭಾಗಿಯಾಗುವುದಿಲ್ಲ ಎಂಬ ನಿಲುವನ್ನು ವ್ಯಕ್ತಪಡಿಸಿತು.ಕಿನ್ಯಾದ ಸೈನ್ಯವು ತಮ್ಮ ಸೇನಾಪಡೆಯನ್ನು ಹಿಮ್ಮೆಟ್ಟಿಸಿದ ನಂತರ ಅಮೀನ್ ಹಿಂದೆ ಸರಿದರು ಮತ್ತು ಕೀನ್ಯಾ-ಉಗಾಂಡಾ ದ ಗಡಿಯುದ್ದಕ್ಕೂ ಉದ್ಯೋಗದ ಆಯುಧಗಳನ್ನು ಇರಿಸಿದರು.[೪೦]

ಸ್ಕಾಟ್‌ಲ್ಯಾಂಡ್‌ನ ದೊರೆ

೧೯೭೬ರ ಅಂತಿಮದಲ್ಲಿ , ಅಮೀನ್ ಅಧಿಕೃತವಾಗಿ ತಾವು " ಕಿರೀಟಧಾರಿಯಲ್ಲದ ಸ್ಕಾಟ್ ಲ್ಯಾಂಡ್ ನ ಅರಸ" ಎಂದು ಘೋಷಿಸಿಕೊಂಡರು ( ಇದಕ್ಕೆ ಸರಿಯಾದ ಬಿರುದು ಕಿಂಗ್ ಆಫ್ ಸ್ಕಾಟ್ಸ್ ).[೪೧] ಅಮೀನ್ ತಮ್ಮ ಅತಿಥಿಗಳನ್ನು ಮತ್ತು ಸ್ಕಾಟಿಷ್ ಅಕಾರ್ಡಿಯನ್ ಸಂಗೀತದೊಂದಿಗಿದ್ದ ಮಹನೀಯರನ್ನು , ಸ್ಕಾಟ್ ಲ್ಯಾಂಡ್ ಉಡುಪಗಳನ್ನು ಕೊಡುವುದರ ಮೂಲಕ ದುಂದುವೆಚ್ಚ ಮಾಡಿದರು.[೪೨]ಅವರುಮಹಾರಾಣಿ ಎಲಿಜಬೆತ್ II ಅವರಿಗೆ ಬರೆಯುತ್ತಾ," ನೀವು ನನ್ನ ಸ್ಕಾಟ್ ಲ್ಯಾಂಡ್, ಐರ್ಲೆಂಡ್ ಮತ್ತು ವೇಲ್ಸ್ ನ ಭೇಟಿ ಗೆ ವ್ಯವಸ್ಥೆ ಮಾಡಿ ನಿಮ್ಮ ಸಾಮ್ರಾಜ್ಯದ ವಿರುದ್ಧ ಹೋರಾಡುವ ಕ್ರಾಂತಿಕಾರಕ ಚಳುವಳಿಯ ಮುಖ್ಯಸ್ಥರನ್ನು ಸಂಧಿಸಲು ಅವಕಾಶ ಕೊಡಿ ಎಂದು ಬರೆದರು . ತಕ್ಷಣವೇ ಮಹಾರಾಣಿಯ ವರು ಟೆಲೆಕ್ಸ್ ಮೂಲಕ ಪ್ರತಿಕ್ರಿಯಿಸಿ, ಪ್ರೀತಿಯ ಲಿಜ್, ನೀವು ನಿಜವಾದ ಮನುಷ್ಯನನ್ನು ನೋಡಬೇಕೆಂದರೆ ಕಂಪಾಲಕ್ಕೆ ಬನ್ನಿ " ಎಂದು ಉತ್ತರಿಸಿದರು.[೪೩] ಅಮೀನ್ ಕೆಲವು ಸಂದರ್ಭದಲ್ಲಿ ತಾವು "ಸ್ಕಾಟ್ ಲ್ಯಾಂಡ್ ನ ಕಡೆಯ ಅರಸ" ಎಂದು ವಾದಿಸುತ್ತಿದ್ದರು.[೪೪]

ಅನಿರ್ದಿಷ್ಟ ನಡವಳಿಕೆ, ಸ್ವಯಂ-ದಯಪಾಲಿಸಿಕೊಂಡ ಬಿರುದುಗಳು ಹಾಗೂ ಮಾಧ್ಯಮಗಳಲ್ಲಿ ವ್ಯಕ್ತಿಚಿತ್ರಣ

ಎಡ್ಮಂಡ್ ಎಸ್.ವಾಲ್ಟ್ಮನ್ 1977 ರಲ್ಲಿ ರಚಿಸಿದ ಅಧ್ಯಕ್ಷರ ಉಡುಪು ಧರಿಸಿದಂತಹ ಅಮೀನ್‌ನ ವ್ಯಂಗ್ಯ ಚಿತ್ರ

ಅಮೀನ್ ತಮ್ಮ ಆಡಳಿತ ಅವಧಿಯಲ್ಲಿ ಹೆಚ್ಚು ಕ್ರೂರ ಮತ್ತು ಜೋರಾಗಿ ಮಾತನಾಡುವ ವ್ಯಕ್ತಿಯಾಗಿ ಕಂಡು ಬಂದರು.೧೯೭೧ರಲ್ಲಿ ಅಮೀನ್ ಮತ್ತು ಜೈರ್ ನ ಅಧ್ಯಕ್ಷರಾದ ಮೊಬುಟು ಸೆಸೆ ಸೆಕೊ ಲೇಕ್ ಆಲ್ಬರ್ಟ್ ಮತ್ತು ಲೇಕ್ ಎಡ್ವರ್ಡ್ಗಳ ಹೆಸರುಗಳನ್ನು ಕ್ರಮವಾಗಿ ಲೇಕ್ ಮೊಬೊಟು ಸೆಸೆ ಸೆಕೊ ಮತ್ತು ಲೇಕ್ ಇದಿ ಅಮೀನ್ ದಾದ ಎಂದು ಬದಲಾಯಿಸಿದರು.[೪೫]೧೯೭೭ರಲ್ಲಿ ಅವರ ಆಡಳಿತದೊಂದಿಗಿನ ರಾಯಭಾರಿ ಸಂಬಂಧವನ್ನು ಬ್ರಿಟನ್ ಮುರಿದುಕೊಂಡ ನಂತರ, ಅಮೀನ್‌ರವರು ತಾವು ಬ್ರಿಟನ್‌ನ್ನು ಸೋಲಿಸಿದ್ದಾಗಿಯೂ ಮತ್ತು CBE ( ಬ್ರಿಟೀಷ್ ಸಾಮ್ರಾಜ್ಯದ ವಿಜಯಶಾಲಿ ) ಎಂದು ಸ್ವಯಂ ಘೋಷಿಸಿಕೊಂಡರು.ಸ್ವಯಂ ಘೋಷಿಸಿಕೊಂಡ ಬಿರುದುಗಳು ಹೀಗಿವೆ "ಹಿಸ್ ಎಕ್ಸಲೆನ್ಸಿ ಪ್ರೆಸಿಡೆಂಟ್ ಫಾರ್ ಲೈಫ್, ಫೀಲ್ಡ್ ಮಾರ್ಷಲ್ ಅಲ್ ಹದ್ಜೀ ಡಾಕ್ಟರ್[B] ಇದಿ ಅಮೀನ್ ದಾದಾ, ವಿಸಿ,[C] ಡಿಎಸ್‌ಒ, ಎಮ್‌ಸಿ, ಭೂಮಿಯ ಮೇಲಿನ ಪ್ರಾಣಿಗಳು ಹಾಗೂ ಸಾಗರದಲ್ಲಿರುವ ಮೀನುಗಳ ಭಗವಂತ ಆಫ್ರಿಕಾದ ಬ್ರಿಟಿಷ್ ಸಾಮ್ರಾಜ್ಯದ ವಿಜಯಶಾಲಿ, ವಿಶೇಷವಾಗಿ ಉಗಾಂಡಾದ", ಇವೆಲ್ಲದರ ಜೊತೆಗೆ ಅಧಿಕೃತವಾಗಿ ಪ್ರಭುತ್ವ ತಪ್ಪಿದ ಸ್ಕಾಟ್‌ಲ್ಯಾಂಡ್‍ನ ದೊರೆ ಎಂದೂ ಹೇಳಿಕೊಂಡಿದ್ದಾರೆ.[೪೬]ಅಮೀನ್ ಒಬ್ಬ ನರಮಾಂಸ ಭಕ್ಷಕ ಎಂಬ ವ್ಯಾಪಕ ಸುದ್ದಿಯನ್ನೂ ಒಳಗೊಂಡಂತೆ ಅವರು ಒಬ್ಬ ಗಾಳಿಸುದ್ದಿಗಳ ಮತ್ತು ದಂತ ಕಥೆಗಳ ಕಥಾ ವಸ್ತುವಾದರು.[೪೭][೪೮]ತಮ್ಮ ಪತ್ನಿಯೊಬ್ಬರನ್ನು ವಿಕಲಾಂಗ ಮಾಡಿದಂತಹ ಕೆಲವು ವದಂತಿಗಳು ವ್ಯಾಪಕವಾಗಿ ಹರಡಿಕೊಂಡವು ಮತ್ತು ೧೯೮೦ ರ ಚಲನಚಿತ್ರವಾದ ರೈಸ್ ಅಂಡ ಫಾಲ್ ಆಫ್ ಇದಿ ಅಮೀನ್ ನಲ್ಲಿ ಇವು ಜನಪ್ರಿಯವಾದವು ಮತ್ತು ೨೦೦೬ರಲ್ಲಿ ಬಿಡುಗಡೆಯಾದ ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ ಲ್ಯಾಂಡ್ ಚಿತ್ರದಲ್ಲಿ ಇವುಗಳನ್ನು ಪ್ರಸ್ತಾಪಿಸಲಾಯಿತು.[೪೯]ಅಮೀನ್‌ರವರ ಅಧಿಕಾರ ಅವಧಿಯಲ್ಲಿ , ಉಗಾಂಡಾದ ಹೊರಗಿನ ಜನಪ್ರಿಯ ಮಾಧ್ಯಮಗಳು ಅವರನ್ನು ಒಬ್ಬ ಹಾಸ್ಯಾಸ್ಪದ ಮತ್ತು ವಿಲಕ್ಷಣ ವ್ಯಕ್ತಿಯಾಗಿ ಚಿತ್ರಿಸಿದವು.೧೯೭೭ರಲ್ಲಿ ಟೈಮ್‌ನ ಒಂದು ಮಾದರಿ ಅಸ್ಸಸ್ ಮೆಂಟ್ ನಲ್ಲಿ , ಟೈಮ್ ಪತ್ರಿಕೆಯ ಒಂದು ಲೇಖನವು ಅವರನ್ನು " ಒಬ್ಬ ಕೊಲೆಗಾರ ಮತ್ತು ಗಮಾರ, ದೊಡ್ಡ -ಹೃದಯದ ಬಫೋನ್ ಮತ್ತು ಸೆಟೆದು ನಡೆಯುವ ಸೂತ್ರದ ಗೊಂಬೆ" ಎಂದು ವಿವರಿಸಿತು.[೫೦]ಅಮೀನ್‌ರವರ ಅತಿ ಹೆಚ್ಚಿನ ಅಭಿ ರುಚಿಗಳು ಮತ್ತು ಸ್ವಯಂ- ಅಧಿಕಾರದ ವಿಲಕ್ಷಣಗಳನ್ನು ಬಿಂಬಿಸಿದ ನಂತರ, ಪರಕೀಯ ಮಾಧ್ಯಮಗಳು ಅವರ ಹಿಂಸಾತ್ಮಕ ನಡತೆಯನ್ನು ಮನ್ನಿಸಿದ್ದಕ್ಕೆ ಉಗಾಂಡಾದ ನಿರಾಶ್ರಿತರಿಂದ ವ್ಯಾಪಕ ಟೀಕೆಗಳಿಗೆ ಗುರಿಯಾದವು.[೫೧]ಇತರ ವಿಮರ್ಷಕರು ಹೇಳುವಂತೆ ಅಮೀನ್ ಉಗಾಂಡಾದಲ್ಲಿನ ತಮ್ಮ ಆಡಳಿತವು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವಂತೆ ಸುಲಭವಾಗಿ ತಮ್ಮನ್ನು ಗುರುತಿಕೊಳ್ಳಲು ಪರಕೀಯ ಮಾಧ್ಯಮಗಳಲ್ಲೂ ವಿಲಕ್ಷಣವಾದ ಗೌರವನ್ನು ಸಂಪಾದಿಸಿಕೊಳ್ಳುವ ಹವ್ಯಾಸವನ್ನು ಹೊಂದಿದ್ದರು.[೫೨]

ಪದಚ್ಯುತಿ ಹಾಗೂ ದೇಶಭ್ರಷ್ಟತೆ

೧೯೭೮ರ ಹೊತ್ತಿಗೆ ಅಮೀನ್‌ರವರ ಅನೇಕ ಬೆಂಬಲಿಗರು ಮತ್ತು ಹತ್ತಿರದ ಆಪ್ತರು ಗಣನೀಯವಾಗಿ ಕುಸಿದಿದ್ದರು ಮತ್ತು ಉಗಾಂಡಾದಲ್ಲಿ ತಮ್ಮ ಬೇಜವಾಬ್ದಾರಿಯಿಂದ ಉಂಟಾದ ಆರ್ಥಿಕ ಕುಸಿತದಿಂದ ಹೆಚ್ಚುತ್ತಿರುವ ಮತಬೇಧಗಳನ್ನು ಮತ್ತು ನಿಂದನೆಗಳನ್ನು ಅವರು ಎದುರಿಸಬೇಕಾಯಿತು.೧೯೭೭ರಲ್ಲಿ ಬಿಷೋಪ್ ಲಿವುಮ್ ಮತ್ತು ಮಂತ್ರಿಗಳಾದ ಒರೆಯಾಮ ಮತ್ತು ಒಬೊತ್ ಒಫುಂಬಿಯವರನ್ನು ಕೊಂದ ನಂತರ , ಅಮೀನ್‌ರವರ ಹಲವಾರು ಮಂತ್ರಿಗಳು ತಲೆ ಮರೆಸಿಕೊಂಡರು.[೫೩]ಆ ವರ್ಷದ ನವಂಬರ್ ತಿಂಗಳಿನಲ್ಲಿ , ಅಮೀನ್‌ರವರ ಉಪಾಧ್ಯಕ್ಷತೆಯ ನಂತರ , ಒಂದು ಕಾರು ಅಪಘಾತದಲ್ಲಿ ಜನರಲ್ ಮುಸ್ತಾಫಾ ಆದ್ರಿಸಿ ಗಾಯಗೊಂಡರು , ತನಗೆ ನಿಷ್ಟೆಯಿಂದ ಇದ್ದ ಸೇನಾಪಡೆಯವರು ಬಂಡಾಯ ವೆದ್ದರು.ಬಂಡಾಯಗೊಂಡವರ ವಿರುದ್ಧ ಅಮೀನ್ ಸೇನಾ ಪಡೆಯನ್ನು ಕಳುಹಿಸಿದರು , ಇವರಲ್ಲಿ ಕೆಲವರು ಟಾಂಜೇನಿಯಾದ ಗಡಿ ಭಾಗದಲ್ಲಿ ತಲೆ ಮರೆಸಿಕೊಂಡರು.[೨೫]ಟಾಂಜೇನಿಯಾದ ಅಧ್ಯಕ್ಷರಾದ ಜೀಲಿಯಸ್ ನೈರೆರೆ ಉಗಾಂಡಾದ ವಿರುದ್ಧ ಸಮರ ಸಾರಿದ್ದಕ್ಕಾಗಿ ಅಮೀನ್‌ರವರು ಆರೋಪಿಸಿದರು , ಟಾಂಜೇನಿಯಾದ ಪ್ರಾಂತ ಮತ್ತು ಮೊದಲು ಕಗೆರಾ ಪ್ರಾಂತದ ಆಕ್ರಮಿತ ಗಡಿಯ ಭಾಗದ ಮೇಲೆ ದಾಳಿ ನಡೆಸಲು ಆದೇಶಿಸಿದರು.[೨೫][೨೭]೧೯೭೯ ಜನವರಿಯಲ್ಲಿ, ನೈರೆರೆ ಟಾಂಜೇನಿಯಾದ ರಕ್ಷಣಾ ಪಡೆ ಯನ್ನು ಉತ್ತೇಜಿಸಿ, ಉಗಾಂಡಾ ನ್ಯಾಷನಲ್ ಲಿಬರೇಶನ್ ಆರ್ಮಿ (UNLA) ಯ ಹೆಸರಿನಲ್ಲಿ ಒಟ್ಟಾಗಿದ್ದ ಉಗಾಂಡಾದ ನಿರಾಶ್ರಿತರೊಂದಿಗಿನ ಕೆಲವು ಗುಂಪುಗಳನ್ನು ಸೇರಿ ಆಕ್ರಮಣ ನಡೆಸಿದರು.ಲಿಬಿಯಾದ ಮುಮ್ಮಾರ್ ಆಲ್- ಗಡ್ಡಾಫಿ ಯ ಮಿಲಿಟರಿ ಸಹಾಯದ ಹೊರತಾಗಿಯೂ ಅಮೀನ್‌ರವರ ಸೈನ್ಯ ಹಗುರವಾಗಿ ಹಿಂದೆ ಸಸಿಯಿತು, ನಂತರ ಕಂಪಾಲವನ್ನು ಆಕ್ರಮಿಸಿದ ನಂತರ ೧೧ಏಪ್ರಿಲ್ ೧೯೭೯ ರಂದು ಹೆಲಿಕ್ಯಾಫ್ಟರ್ ನಮೂಲಕ ತಪ್ಪಿಸಿಕೊಳ್ಳಬೇಕಾಯಿತು.ಅವರು ಮೊದಲು ಲಿಬಿಯಾಗೆ ಪರಾರಿಯಾಗಿ ೧೯೮೦ರವರೆಗೆ ಅಲ್ಲಿ ನೆಲೆಸಿದರು, ಮತ್ತು ನಂತರ ಅಂತಿಮವಾಗಿ ಸೌದಿ ಅರೇಬಿಯಾದಲ್ಲಿ ನೆಲೆಸಿದರು . ಅಲ್ಲಿ ಸೌದಿಯ ಶ್ರೀಮಂತ ಕುಟುಂಬವೊಂದು ಅವರಿಗೆ ಆಶ್ರಯ ನೀಡಿ , ಅವರು ರಾಜಕೀಯ ಹೊರತಾಗಿ ತಮ್ಮಲ್ಲಿ ತಂಗಿದ್ದರಿಂದ ಅವರಿಗೆ ಉದಾರವಾದ ಧನಸಹಾಯವನ್ನೂ ಮಾಡಿತು.[೯]ಅಮೀನ್‌ರವರು ಹಲವಾರು ವರ್ಷಗಳ ಕಾಲ ಜೆಡ್ಡಾದ ಪ್ಯಾಲೆಸ್ಟೀನ್ ರಸ್ತೆಯಲ್ಲಿರುವ ನೊವೊಟೆಲ್ ನ ಮೇಲಿನ ಎರಡು ಅಂತಸ್ತುಗಳಲ್ಲಿ ವಾಸಮಾಡಿದರು.BBCಯ ಪ್ರಮುಖ ಸಂಚಾಲಕರು ಮತ್ತು ಉಗಾಂಡಾ -ಟಾಂಜೇನಿಯಾ ಯುದ್ಧನ್ನು ಸೆರೆಹಿಡಿದ ಬ್ರಿಯಾನ್ ಬ್ಯಾರನ್ ರವರು, ಛಾಯಾಚಿತ್ರಕರಾದ ಮಹಮ್ಮದ್ ಅಮಿನ್ ಅವರೊಂದಿಗೆ ನೈರೋಬಿಯಲ್ಲಿ ೧೯೮೦ ರಲ್ಲಿ ಅಮೀನ್‌ರವರು ತಮ್ಮ ಪದಚ್ಯುತಿಯ ನಂತರ ಮೊದಲನೇ ಬಾರಿ ಸಂದರ್ಶನವನ್ನು ನಡೆಸಿದರು.[೫೪]ಅಮೀನ್ ಉಗಾಂಡಾಗೆ ತಾನು ಅನಿವಾರ್ಯ ಎಂದು ಅಭಿಪ್ರಾಯ ಪಟ್ಟಿದ್ದರು , ಅವರು ಎಂದೂ ತಮ್ಮ ಆಡಳಿತದ ಬಗ್ಗೆ ಮರುಕ ವ್ಯಕ್ತ ಪಡಿಸಲಿಲ್ಲ .[೫೫]೧೯೮೯ರಲ್ಲಿ, ಅವರು ಕರ್ನಲ್ ಜುಮಾ ಓರಿಸ್ ರವರಿಂದ ಸಂಘಟಿಸಲ್ಪಟ್ಟ ಒಂದು ಸೇನಾದಳವನ್ನು ಮುನ್ನಡೆಸಲು ಉಗಾಂಡಾಕ್ಕೆ ಹಿಂದಿರುಗುವ ಪ್ರಯತ್ನ ನಡೆಸಿದರು.ತಮ್ಮನ್ನು ಜೈರಿಯಾದ ಅಧ್ಯಕ್ಷರಾದ ಮೊಬುಟು ಸೌದಿ ಅರೇಬಿಯಾದಿಂದ ಹಿಂದಿರುಗಲು ಒತ್ತಾಯಿಸುವುದಕ್ಕಿಂತ ಮುಂಚೆ ಅವರು ಕಿಂಶಾನ, ಜೈರ್ ( ಈಗಿನ ಕಾಂಗೋದ ಪ್ರಜಾಸತ್ತಾತ್ಮಕ ಗಣರಾಜ್ಯ)

ಅಮೀನ್‌ರ ಸಾವು

೨೦ ಜುಲೈ ೨೦೦೩, ಅಮೀನ್‌ನ ಪತ್ನಿಯರಲ್ಲಿ ಒಬ್ಬರಾದ ಮದೀನಾ ಸೌದಿ ಅರೇಬಿಯಾದ ಜೆಡ್ಡಾಹ್ನ ಕಿಂಗ್ ಫೈಸಲ್ ಸ್ಪೆಷಲಿಸ್ಟ್ ಹಾಸ್ಪಿಟಲ್ನಲ್ಲಿ ಮೂತ್ರಪಿಂಡಗಳ ವೈಫಲ್ಯತೆಯಿಂದಾಗಿ ಕೋಮಾ ಸ್ಥಿತಿಯಲ್ಲಿದ್ದಾರೆಂದು ಪ್ರಕಟಿಸಿದ್ದರು. ಅವರ ಉಳಿದ ಜೀವನವನ್ನು ಉಗಾಂಡಾದಲ್ಲಿ ಕಳೆಯುವಂತೆ ಕೋರಿ ಆಕೆಯು ಉಗಾಂಡಾದ ಅಧ್ಯಕ್ಷ ಯೊವೆರಿ ಮುಸೆವೆನಿಯವರನ್ನು ಮನವಿ ಮಾಡಿಕೊಂಡಳು. ಮುಸೆವೇನಿಯು ಪ್ರತ್ಯುತ್ತರ ನೀಡಿ ಅಮೀನ್ ಹಿಂತಿರುಗಿ ಬಂದ ನಂತರ ಮಾಡಿದ ಪಾಪಗಳಿಗೆ ಉತ್ತರ ನೀಡಬೇಕೆಂದು ಹೇಳಿದರು."[೫೬] ಅಮೀನ್ ಅವರು ಸೌದಿ ಅರೇಬಿಯಾದ ಆಸ್ಪತ್ರೆಯಲ್ಲಿ ೧೬ ಆಗಸ್ಟ್ ೨೦೦೩ ರಂದು ನಿಧನರಾದರು. ಅವರು ಜೆದ್ದಾಹ್‌ದ ರುವಾಯಿಸ್ ಸಿಮೆಟರಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.[೫೭]

ಕುಟುಂಬ ಹಾಗೂ ಸಹವರ್ತಿಗಳು

ಬಹು ಪತ್ನೀ ವಲ್ಲಭರಾಗಿದ್ದ ಇದೀ ಅಮೀನ್ ಅವರು ಕನಿಷ್ಟ ಆರು ಮಹಿಳೆಯರನ್ನು ವಿವಾಹವಾಗಿದ್ದು ಅದರಲ್ಲಿ ಮೂರು ಜನರಿಗೆ ವಿಚ್ಛೇದನ ನೀಡಿದ್ದಾರೆ. ಇವರು ೧೯೬೬ ರಲ್ಲಿ ಮಲ್ಯಮು ಹಾಗೂ ಕೇ ಎಂಬುವವರೊಂದಿಗೆ ಮೊದಲನೆಯ ಮತ್ತು ಎರಡನೆಯ ವಿವಾಹವಾದರು ನಂತರದ ವರ್ಷದಲ್ಲಿ ನೋರಾ ಎಂಬುವವರನ್ನು ಹಾಗೂ ೧೯೭೨ರಲ್ಲಿ ನಲೊಂಗೊ ಮದಿನಾ ಎಂಬುವವರನ್ನು ವಿವಾಹವಾದರು. ೨೬ ಮಾರ್ಚ್ ೧೯೭೪ ರಲ್ಲಿ ಮಲ್ಯಮು, ನೋರಾ ಹಾಗೂ ಕೇ ಅವರಿಗೆ ವಿಚ್ಛೇದನ ನೀಡಿರುವುದಾಗಿ ಉಗಾಂಡಾ ರೇಡಿಯೋದಲ್ಲಿ ಪ್ರಕಟಿಸಿದರು.[೫೮][೫೯] ಏಪ್ರಿಲ್ ೧೯೭೪ ರಲ್ಲಿ ಕೀನ್ಯಾಗೆ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಕಾರಣ ಕೀನ್ಯಾದ ಗಡಿಯ ಟೊರೊರೊದಲ್ಲಿ ಮಲ್ಯಮುಳನ್ನು ಬಂಧಿಸಲಾಯಿತು. ನಂತರದಲ್ಲಿ ಆಕೆಯು ಲಂಡನ್‌ಗೆ ಸ್ಥಳಾಂತರವಾದಳು.[೫೮][೬೦] ಕೇಯು ಆಕೆಯ ಪ್ರಿಯಕರ ಡಾ. ಎಮ್ಬಲು ಮುಕಾಸ (ನಂತರ ತಾನೇ ಆತ್ಮಹತ್ಯೆ ಮಾಡಿಕೊಂಡ)ಎಂಬುವವನು ಮಾಡಿದ ಸರ್ಜಿಕಲ್ ಗರ್ಭಪಾತದಿಂದ ೧೩ ಆಗಸ್ಟ್ ೧೯೭೪ ರಲ್ಲಿ ಮೃತಪಟ್ಟಳು .[ಸೂಕ್ತ ಉಲ್ಲೇಖನ ಬೇಕು]. ಆಕೆಯ ದೇಹಚ್ಚೇದ ಮಾಡಲಾಯಿತು. ಆಗಸ್ಟ್ ೧೯೭೫ ರಲ್ಲಿ ಆರ್ಗನೈಸೇಶನ್ ಆಫ್ ಆಫ್ರಿಕನ್ ಯುನಿಟಿ (ಒಎಯು) ಸಭೆಯಲ್ಲಿ ಕಂಪಾಲಾದಲ್ಲಿ ಅಮೀನ್ ಅವರು ಸಾರಾಹ್ ಕ್ಯೊಲಬ ಎಂಬುವವಳನ್ನು ವಿವಾಹವಾದರು. ಅಮೀನ್ ನಂತರದಲ್ಲಿ ಮುಯಮ್ಮರ್ ಅಲ್-ಗಡ್ಡಾಫಿಯ ಮಗಳು ಆಯೆಶಾ ಅಲ್ ಗಡ್ಡಾಫಿಯನ್ನು ಮದುವೆಯಾದನು ಆದರೆ ಆಕೆ ವಿಚ್ಚೇದನ ತೆಗೆದುಕೊಂಡಳು.[೩೩] ೧೯೯೩ ರಲ್ಲಿ ಅಮೀನ್ ತನ್ನ ನಾಲ್ಕು ಚಿಕ್ಕ ಮಕ್ಕಳ ತಾಯಿಯಾದ ಹೆಂಡತಿ, ಮಾಮ ಚುಮಾರು ಹಾಗೂ ಇನ್ನೂ ಐದು ಜನ ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಆತನ ಕೊನೆಯ ಮಗಳಾದ ಈಮಾನ್ ೧೯೯೨ ರಲ್ಲಿ ಜನಿಸಿದ್ದಳು .[೬೧] ದಿ ಮಾನಿಟರ್ ಪ್ರಕಾರ, ಅಮೀನ್ ೨೦೦೩ ರಲ್ಲಿ ಸಾಯುವ ಮುನ್ನವೂ ಇನ್ನೊಂದು ವಿವಾಹವಾಗಿದ್ದರು.[೬೦]ಅಮೀನ್‌ನ ಮಕ್ಕಳೆಷ್ಟು ಎಂಬುದನ್ನು ಬೇರೆ ಬೇರೆ ಮೂಲಗಳು ಬೇರೆ ರೀತಿಯಲ್ಲಿ ಹೇಳುತ್ತವೆ; ಹೆಚ್ಚಿನ ಮೂಲಗಳ ಪ್ರಕಾರ ೩೦ ರಿಂದ ೪೫ ರವರೆಗೆ ಇದೆ.[D] ೨೦೦೩ ರವರೆಗೆ, ಇದಿ ಅಮೀನ್ ಅವರ ಹಿರಿಯ ಮಗ, ತಬನ್ ಅಮೀನ್ (ಜನನ ೧೯೫೫),[೬೨] ವೆಸ್ಟ್ ನೈಲ್ ಬ್ಯಾಂಕ್ ಫ್ರಂಟ್ (ಡಬ್ಲು‌ಎನ್‌ಬಿಎಫ್)ನ ಮುಖಂಡರಾಗಿದ್ದರು, ಇದು ಯೊವೆರಿ ಮುಸೆವೇನಿ ಸರ್ಕಾರದಿಂದ ವಿರೋಧಿಸಲ್ಪಟ್ಟ ಗುಂಪಾಗಿದೆ. ೨೦೦೫ ರಲ್ಲಿ, ಮುಸೆವೇನಿಯಿಂದ ರಾಜಕೀಯ ಅಪರಾಧಿಗಳಿಗೆ ನೀಡುವ ಸಾಮೂಹಿಕ ಕ್ಷಮಾದಾನ ದೊರೆಯಿತು ಹಾಗೂ ೨೦೦೬ರಲ್ಲಿ, ಇಂಟರ್ನಲ್ ಸೆಕ್ಯುರಿಟಿ ಆರ್ಗನೈಸೇಶನ್ನ ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಆಯ್ಕೆಯಾದರು.[೬೩] ಅಮೀನ್‌ರ ಇನ್ನಿಬ್ಬರು ಮಕ್ಕಳಾದ ಹಾಜಿ ಅಲಿ ಅಮೀನ್ ೨೦೦೨ ರಲ್ಲಿ ಎನ್ಜೆರು ಟೌನ್ ಕೌನ್ಸಿಲ್‌ನ ಛೇರ್ಮನ್ (ಅಂದರೆ ಮೇಯರ್) ಸ್ಥಾನಕ್ಕಾಗಿ ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದರು.[೬೪] ೨೦೦೭ರ ಮೊದಲ ಭಾಗದಲ್ಲಿ ಪ್ರಶಸ್ತಿ ವಿಜೇತ ಚಿತ್ರ ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್‌ಲ್ಯಾಂಡ್ ಚಿತ್ರವು ಅಮೀನ್ ಅವರ ಪುತ್ರರಲ್ಲಿ ಒಬ್ಬರಾದ ಜಾಫರ್ ಅಮೀನ್ (ಜನನ ೧೯೬೭),[೬೫] ಅವರದ್ದಾಗಿತ್ತು. ತನ್ನ ತಂದೆಯ ಹೆಸರನ್ನು ಉಳಿಸಲು ಜಾಫರ್ ಅಮೀನ್ ಒಂದು ಪುಸ್ತಕ ಬರೆಯುವುದಾಗಿ ಹೇಳಿದರು.[೬೬] ಅಮೀನ್‌ರ ಏಳು ಅಧಿಕೃತ ಪತ್ನಿಯರಿಂದ ಪಡೆದ ೪೦ ಮಕ್ಕಳಲ್ಲಿ ಜಾಫರ್ ಹತ್ತನೆಯವರಾಗಿದ್ದರು.[೬೫] ೩ ಆಗಸ್ಟ್ ೨೦೦೭ ರಲ್ಲಿ ಅಮೀನ್‌ರ ಮಕ್ಕಳಲ್ಲಿ ಒಬ್ಬನಾದ ಫೈಸನ್ ವಾಂಗಿತ (ಜನನ ಫೆಬ್ರವರಿ ೧೯೮೩),[೬೭] ಲಂಡನ್‌ನಲ್ಲಿ ನಡೆದ ಒಂದು ಕೊಲೆಯಲ್ಲಿ ಪಾತ್ರವಹಿಸಿದ್ದಕ್ಕಾಗಿ ಅಪರಾಧಿಯೆಂದು ನಿರ್ಣಯಿಸಲಾಗಿತ್ತು.[೬೮]ವಾಂಗಿತನ ತಾಯಿ ಅಮೀನ್‌ನ ಐದನೆಯ ಪತ್ನಿಯಾಗಿದ್ದಳು, ಆಕೆಯ ಹೆಸರು ಸಾರಾಹ್ ಕ್ಯೊಲಬ (ಜನನ ೧೯೫೫)[೬೯], ಆಕೆಯು ಗೊ-ಗೊ ನೃತ್ಯ ಕಲಾವಿದೆಯಾಗಿದ್ದಳು, ಉಗಾಂಡನ್ ರೆವೊಲ್ಯೂಷನರಿ ಸ್ಯೂಸೈಡ್ ಮರ್ಚನೈಸ್ಡ್ ರೆಜಿಮೆಂಟ್ ಬ್ಯಾಂಡ್‌ಗಾಗಿ ಆಕೆ ಗೊ-ಗೊ ನೃತ್ಯ ಮಾಡುತ್ತಿದ್ದುದರಿಂದ ಆಕೆಯನ್ನು 'ಸ್ಯುಸೈಡ್ ಸಾರಾಹ್' ಎಂದು ಕರೆಯಲಾಗುತ್ತಿತ್ತು.[೬೯]ಅಮೀನ್‌ನ ಹತ್ತಿರದ ಸಹವರ್ತಿಗಳಲ್ಲಿ ಒಬ್ಬರು ಬ್ರಿಟಿಷ್ ಬಾಬ್ ಆಸಲ್ಸ್, ಇವರು ಕೆಟ್ಟವನೆಂದು ಹಲವರಿಂದ ಪರಿಗಣಿಸಲಾಗಿತ್ತು .[೭೦] ಇನ್ನೊಬ್ಬರು ಅಮೀನ್‌ನ ಸೇನೆಯಲ್ಲಿ ಅಧಿಕಾರಿಯಾಗಿದ್ದ ಐಸಾಕ್ ಮಲ್ಯಮುಂಗು.[೫೩]

ಮಾಧ್ಯಮ ಹಾಗೂ ಸಾಹಿತ್ಯದಲ್ಲಿ ವ್ಯಕ್ತಿಚಿತ್ರಣ

ಚಲನಚಿತ್ರ ನಾಟಕೀಕರಣ

  • ವಿಕ್ಟರಿ ಅಟ್ ಏಂಟೆಬ್ಬೆ (೧೯೭೬), ಆಪರೇಷನ್ ಎಂಟೆಬ್ಬೆ ಆಧಾರಿದ ಟಿವಿ ಚಿತ್ರ. ಹಾಸ್ಯ ರೀತಿಯಲ್ಲಿ ಅಮೀನ್ ಪಾತ್ರದಲ್ಲಿ ಜೂಲಿಯಸ್ ಹ್ಯಾರಿಸ್ ಅವರು ನಟಿಸಿದ್ದಾರೆ. ಮೊದಲು ನಟಿಸುತ್ತಿದ್ದ ಗಾಡ್‌ಫ್ರೇ ಕೇಂಬ್ರಿಡ್ಜ್ ಅವರು ಅಮೀನ್ ಪಾತ್ರದಲ್ಲಿ ನಟಿಸುತ್ತಿದ್ದು ಅವರು ಚಿತ್ರೀಕರಣ ಸಮಯದಲ್ಲಿ ಹೃದಯಾಘಾತದಿಂದ ನಿಧನರಾದರು.
  • ರೇಡ್ ಆನ್ ಎಂಟೆಬ್ಬೆ (೧೯೭೭), ಇದು ಆಪರೇಷನ್ ಎಂಟೆಬ್ಬೆಯನ್ನು ಚಿತ್ರಿಸುವ ಚಿತ್ರವಾಗಿದೆ. ಅಮೀನ್ ಅವರು ದಿವ್ಯಶಕ್ತಿಯುಳ್ಳ ಆದರೆ ಮುಂಗೋಪಿ ರಾಜಕಾರಣಿ ಹಾಗೂ ಸೇನೆಯ ನಾಯಕನಾಗಿದ್ದರೆಂದು ತೋರಿಸುವ ಈ ಪಾತ್ರಧಾರಿಯಾಗಿ ಯಾಫೆಟ್ ಕೊಟ್ಟೋ ಅಭಿನಯಿಸಿದ್ದಾರೆ.
  • ಮಿವ್‌ತ್ಸಾ ಯೊನಾಟನ್ (೧೯೭೭; ಆಪರೇಷನ್ ಥಂಡರ್ಬೋಲ್ಟ್ ಎಂದು ಕೂಡಾ ಕರೆಯಲ್ಪಡುವ ), ಆಪರೇಷನ್ ಎಂಟೆಬ್ಬೆಯ ಬಗೆಗಿನ ಒಂದು ಇಸ್ರೇಲಿ ಚಿತ್ರ, ಜಮೈಕನ್‌ನಲಿ ಜನಿಸಿದ ಬ್ರಿಟಿಷ್ ನಟ ಮಾರ್ಕ್ ಹೆತ್ ಅವರು ಅಮೀನ್ ಪಾತ್ರದಲ್ಲಿ ನಟಿಸಿದ್ದಾರೆ. ಇಲ್ಲಿ, ಅಮೀನ್ ಮೊದಲು ಜರ್ಮನ್ ಭಯೋತ್ಪಾದಕರಿಂದ ಕೋಪಗೊಂಡು ನಂತರದಲ್ಲಿ ಆಶ್ರಯ ನೀಡಿದರು.
  • ರೈಸ್ ಅಂಡ್ ಫಾಲ್ ಆಫ್ ಇದಿ ಅಮೀನ್ (೧೯೮೧), ಇದಿ ಅಮೀನ್‌ ಅವರ ಉಗ್ರಸ್ವಭಾವನ್ನು ಬಿಂಬಿಸುವ ಚಿತ್ರ. ಕೀನ್ಯಾದ ನಟ ಜೋಸೆಫ್ ಒಲಿಟಾ ಅಮೀನ್ ಪಾತ್ರದಲ್ಲಿ ನಟಿಸಿದ್ದಾರೆ.
  • ದಿ ನೇಕೆಡ್ ಗನ್ (೧೯೮೮), ಒಂದು ಹಾಸ್ಯ ಚಿತ್ರ ಇದರಲ್ಲಿ ಇದಿ ಅಮೀನ್ (ಪ್ರಿನ್ಸ್ ಹ್ಯೂಸ್) ಹಾಗೂ ಇತರೆ ವಿಶ್ವ ನಾಯಕರುಗಳಾದ ಯಸ್ಸರ್ ಅರಾಫತ್, ಫೀಡಲ್ ಕ್ಯಾಸ್ಟ್ರೊ, ಮಿಖಾಯಿಲ್ ಗೊರ್ಬಚೆವ್ , ರುಹೊಲ್ಲಾಹ್ ಖೊಮೀನಿ, ಮತ್ತು ಮುಯಮ್ಮರ್ ಅಲ್-ಗಡ್ಡಾಫಿಯವರು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಪಿತೂರಿ ನಡೆಸಲು ಬೀರತ್ನಲ್ಲಿ ಸೇರುತ್ತಾರೆ.
  • ಮಿಸ್ಸಿಸಿಪ್ಪಿ ಮಸಾಲಾ (೧೯೯೧), ಇದಿ ಅಮೀನ್‌ರಿಂದ ಉಗಾಂಡಾದಿಂದ ಏಷ್ಯನ್ನರು ಹೊರನಡೆದ ನಂತರ ಭಾರತೀಯ ಕುಟುಂಬಗಳು ಪುನರ್ವಸತಿ ಹೊಂದಿದ ಬಗೆಗಿನ ಚಿತ್ರ. ಅಮೀನ್ ಪಾತ್ರದಲ್ಲಿ ಜೋಸೆಫ್ ಒಲಿಟಾ ಅವರು ನಟಿಸಿದ್ದಾರೆ.
  • ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್‌ಲ್ಯಾಂಡ್ (೨೦೦೬), ಗೈಲ್ಸ್ ಫೊಡನ್ ಅವರು ರಚಿಸಿದ ೧೯೯೮ ರ ಕಲ್ಪನಾತೀತ ಅದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ. ಈ ಚಿತ್ರದಲ್ಲಿ ಇದಿ ಅಮೀನ್ ಪಾತ್ರದಲ್ಲಿ ನಟಿಸಿದ ನಟ ಫಾರೆಸ್ಟ್ ವ್ಹಿಟೇಕರ್ ಈ ಪಾತ್ರಕ್ಕಾಗಿ ಉತ್ತಮ ನಟ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದರು, ಬಾಫ್ಟಾ, ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅತ್ಯುತ್ತಮ ನಟ ಪ್ರಶಸ್ತಿ (ನಾಟಕ), ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದರು.

ಸಾಕ್ಷ್ಯಚಿತ್ರಗಳು

  • General Idi Amin Dada: A Self Portrait (೧೯೭೪), ಫ್ರೆಂಚ್ ಚಲನಚಿತ್ರ ನಿರ್ಮಾಪಕ ಬಾರ್ಬೆಟ್ ಶ್ರೋಡರ್ ನಿರ್ದೇಶಿಸಿದ ಚಿತ್ರ.
  • Idi Amin: Monster in Disguise (೧೯೯೭), ಗ್ರೆಗ್ ಬೇಕರ್ ನಿರ್ದೇಶಿಸಿದ ದೂರದರ್ಶನ ಡಾಕ್ಯುಮೆಂಟರಿ.
  • ದಿ ಮ್ಯಾನ್ ವ್ಹು ಏಟ್ ಹಿಸ್ ಆರ್ಚ್‌ಬಿಷಪ್ಸ್ ಲಿವರ್? (೨೦೦೪), ಅಸೋಸಿಯೇಟೆಡ್-ರೀಡಿಫ್ಯೂಶನ್ ಹಾಗೂ ಚಾನಲ್ ೪ ಕ್ಕಾಗಿ ಎಲಿಝಬೆತ್ ಸಿ. ಜೋನ್ಸ್ ಅವರು ಬರೆದು, ನಿರ್ಮಿಸಿ ನಿರ್ದೇಶಿಸಿದ ದೂರದರ್ಶನ ಡಾಕ್ಯುಮೆಂಟರಿ.
  • ದಿ ಮ್ಯಾನ್ ವ್ಹು ಸ್ಟೋಲ್ ಉಗಾಂಡಾ (೧೯೭೧), ವರ್ಲ್ಡ್ ಇನ್ ಆ‍ಯ್‌ಕ್ಷನ್ ಮೊದಲ ಪ್ರಸಾರ ೫ ಏಪ್ರಿಲ್ ೧೯೭೧.
  • ಇನ್ಸೈಡ್ ಇದಿ ಅಮೀನ್ಸ್ ಟೆರರ್ ಮೆಷೀನ್ (೧೯೭೯), ವರ್ಲ್ಡ್ ಇನ್ ಆ‍ಯ್‌ಕ್ಷನ್ ಮೊದಲ ಪ್ರಸಾರ ೧೩ ಜೂನ್ ೧೯೭೯.

ಪುಸ್ತಕಗಳು

  • ಸ್ಟೇಟ್ ಆಫ್ ಬ್ಲಡ್: ದಿ ಇನ್ಸೈಡ್ ಸ್ಟೋರಿ ಆಫ್ ಇದಿ ಅಮೀನ್ (೧೯೭೭) ಹೆನ್ರಿ ಕ್ಯೆಂಬಾ ಅವರ ರಚನೆ
  • ಪೀಟರ್ ನಝಾರೆತ್ ಅವರು ರಚಿಸಿದ ದಿ ಜನರಲ್ ಈಸ್ ಅಪ್
  • ಜಾರ್ಜ್ ಇವಾನ್ ಸ್ಮಿತ್ಘೋಸ್ಟ್ಸ್ ಆಫ್ ಕಂಪಾಲ: ದಿ ರೈಸ್ ಅಂಡ್ ಫಾಲ್ ಆಫ್ ಇದಿ ಅಮೀನ್ (೧೯೮೦)
  • ಗಿಲ್ಸ್ ಫೋಡನ್ (ಕಾಲ್ಪನಿಕ) ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲ್ಯಾಂಡ್ (೧೯೯೮)
  • Idi Amin Dada: Hitler in Africa (೧೯೭೭) ರಚಿಸಿದವರು ಥಾಮಸ್ ಪ್ಯಾಟ್ರಿಕ್ ಮೆಲಡಿ
  • ಡೇವಿಡ್ ಮಾರ್ಟಿನ್ ರಚಿಸಿದ ಜನರಲ್ ಅಮೀನ್ (೧೯೭೫) [disambiguation needed]
  • ಅಲನ್ ಕೋರನ್ ರಚಿಸಿರುವಂತಹ ದಿ ಕಲೆಕ್ಟೆಡ್ ಬುಲೆಟಿನ್ಸ್ ಆಫ್ ಇದಿ ಅಮೀನ್ (೧೯೭೪) ಹಾಗೂ ಫರ್ದರ್ ಬುಲೆಟಿನ್ಸ್ ಆಫ್ ಪ್ರೆಸಿಡೆಂಟ್ ಇದಿ ಅಮೀನ್ (೧೯೭೫), ಇದರಲ್ಲಿ ಅಮೀನ್ ಅವರನ್ನು ಸ್ನೇಹಪರ ಎಂದು ಬಿಂಬಿಸಲಾಗಿದೆ. ಅಲನ್ ಸಂಗೀತ ಬಿಡುಗಡೆಯ ಜವಾಬ್ದಾರಿಗೂ ಪಾತ್ರರಾಗಿದ್ದಾರೆ – "ದಿ ಕಲೆಕ್ಟೆಡ್ ಬ್ರಾಡ್‌ಕಾಸ್ಟ್ಸ್ ಆಫ್ ಇದಿ ಅಮೀನ್". ಇದು ಬ್ರಿಟಿಷ್ ಹಾಸ್ಯ ಆಲ್ಬಂ ಆಗಿದೆ ಹಾಗೂ ೧೯೭೫ ರಲ್ಲಿ ಬಿಡುಗಡೆಯಾಗಿತ್ತು. ಅಲನ್ ಕೋರನ್ ರಚಿಸಿರುವ ಇದರಲ್ಲಿ ಜಾನ್ ಬರ್ಡ್ ಅವರು ಹಾಡಿದ್ದಾರೆ.
  • ಫೆಸ್ಟೋ ಕಿವೆಂಗೆರ್ ಅವರು ರಚಿಸಿದ ಐ ಲವ್ ಇದಿ ಅಮೀನ್: ದಿ ಸ್ಟೋರಿ ಆಫ್ ಟ್ರಯಂಪ್ ಅಂಡರ್ ಫೈರ್ ಇನ್ ದಿ ಮಿಡ್‌ಸ್ಟ್ ಆಫ್ ಸಫರಿಂಗ್ ಅಂಡ್ ಪರ್ಸಿಕ್ಯೂಶನ್ ಇನ್ ಉಗಾಂಡಾ (೧೯೭೭)
  • ಎರಿಯಾ ಕೇಟ್ಗಯಾ ರಚಿಸಿದ ಇಂಪ್ಯಾಷನ್ಡ್ ಫಾರ್ ಫ್ರೀಡಂ: ಉಗಾಂಡಾ, ಸ್ಟ್ರಗಲ್ ಎಗೆನೆಸ್ಟ್ ಇದಿ ಅಮೀನ್ (೨೦೦೬)
  • ಜಮೀಲಾ ಸಿದ್ದಿಕಿ ಅವರು ರಚಿಸಿದ ದಿ ಫೀಸ್ಟ್ ಆಫ್ ದಿ ನೈನ್ ವರ್ಜಿನ್ಸ್ (೨೦೦೧)
  • ಜಮೀಲಾ ಸಿದ್ದಿಕಿ ರಚಿಸಿದ ಮುಂಬಯಿ ಗಾರ್ಡನ್ಸ್ (೨೦೦೬)
  • ಎಫ್. ಕೆಫಾ ಸೆಂಪಂಗಿ ರಚಿಸಿದ ಎ ಡಿಸ್ಟೆಂಟ್ ಗ್ರೀಫ್ (೧೯೭೯)
  • ಡೊನಾಲ್ಡ್ ಇ ವೆಸ್ಟ್‌ಲೇಕ್ ರಚಿಸಿದ ಕಹಾವ (೧೯೮೧)
  • ಟ್ರೆವರ್ ಡೊನಾಲ್ಡ್ ಸಂಗ್ರಹಿಸಿರುವ ಕನ್ಫೆಷನ್ಸ್ ಆಫ್ ಇದಿ ಅಮೀನ್: ದಿ ಚಿಲಿಂಗ್, ಎಕ್ಸ್‌ಪ್ಲೋಸೀವ್ ಎಕ್ಸ್‌ಫೋಸ್ ಆಫ್ ಆಫ್ರಿಕಾಸ್ ಮೋಸ್ಟ್ ಇವಿಲ್ ಮ್ಯಾನ್ – ಇನ್ ಹಿಸ್ ಓನ್ ವರ್ಡ್ಸ್ (೧೯೭೭)
  • ಚೈಲ್ಡ್ ಆಫ್ ದಾಂಡೆಲಿಯನ್ಸ್, ಗವರ್ನರ್ ಜನರಲ್ ಅವಾರ್ಡ್ ಫೈನಲಿಸ್ಟ್ (೨೦೦೮) ಶೆನಾಝ್ ನಂಜಿ
  • ಕ್ಯಾಂಬೆಲ್, ಎಮ್. ಹಾಗೂ ಕೊಹೆನ್, ಇ.ಜೆ. ( ೧೯೬೦) ಈಸ್ಟ್ ಆಫ್ರಿಕಾದ ರಗ್ಬಿ ಫುಟ್ಬಾಲ್ ೧೯೦೯–೧೯೫೯. ಈಸ್ಟ್ ಆಫ್ರಿಕಾದ ರಗ್ಬೀ ಫುಟ್ಬಾಲ್ ಯೂನಿಯನ್‌ನಿಂದ ಪ್ರಕಟಿಸಲ್ಪಟ್ಟಿದೆ.

ಟಿಪ್ಪಣಿಗಳು

  • ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ, ಎನ್ಕಾರ್ಟಾ ಹಾಗೂ ಕೊಲಂಬಿಯಾ ಎನ್‌ಸೈಕ್ಲೋಪೀಡಿಯಾದಂತಹ  ^ ಹಲವಾರು ಮೂಲಗಳಿಂದ ತಿಳಿದುಬರುವುದೇನೆಂದರೆ ಅಮೀನ್ ೧೯೨೫ ರಲ್ಲಿ ಕೊಬೊಕೊ ಅಥವಾ ಕಂಪಾಲಾದಲ್ಲಿ ಜನಿಸಿದರು ಆದರೆ ನಿಗದಿತ ದಿನಾಂಕವು ತಿಳಿದುಬಂದಿಲ್ಲ. ಸಂಶೋಧಕ ಫ್ರೆಡ್ ಗುವೆಡೆಕೊ ಅವರು ಹೇಳುವಂತೆ ಅಮೀನ್ ಅವರ ಜನ್ಮ ದಿನಾಂಕ ೧೭ ಮೇ ೧೯೨೮,[೮] ಆದರೆ ಅದು ಚರ್ಚಾಸ್ಪದವಾಗಿತ್ತು.[೭೧] ೧೯೨೦ ರ ಮಧ್ಯಭಾಗದಲ್ಲಿ ಜನಿಸಿರಬಹುದೆಂದು ಮೂಲಗಳಿಂದ ಅಂದಾಜಿಸಬಹುದಾಗಿದೆ.
  • ^ ಅವರು ಮಕೆರೆರೆ ವಿಶ್ವವಿದ್ಯಾನಿಲಯದಿಂದ ಕಾನೂನಿನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು.[೫]
  • ^ ದಿ ವಿಕ್ಟೋರಿಯಸ್ ಕ್ರಾಸ್ (ವಿಸಿ) ಎಂಬ ಪದಕವನ್ನು ಬ್ರಿಟಿಷರ ವಿಕ್ಟೋರಿಯಾ ಕ್ರಾಸ್ ಪೈಪೋಟಿಯಲ್ಲಿ ಇದುವ ಪ್ರಶಸ್ತಿಯಾಗಿದೆ.[೭೨]
  • ^ ಹೆನ್ರಿ ಕ್ಯೆಮಾ ಹಾಗೂ ಆಫ್ರಿಕಾದ ಅಧ್ಯಯನಗಳ ಪ್ರಕಾರ,[೭೩] ಇದಿ ಅಮೀನ್ ೩೪ ಮಕ್ಕಳನ್ನು ಹೊಂದಿದ್ದರು. ಕೆಲವು ಮೂಲಗಳ ಪ್ರಕಾರ ಅವರಿಗೆ ೩೨ ಮಕ್ಕಳಿದ್ದರು. ದಿ ಮಾನಿಟರ್ ವರದಿಯ ಪ್ರಕಾರ ಅವರು ೪೫ ಮಕ್ಕಳಿಂದ ದೂರವಾದರು,[೬೦] ಆದರೆ ಬಿಬಿಸಿಯ ಪ್ರಕಾರ ಮಕ್ಕಳ ಸಂಖ್ಯೆ ೫೪.[೭೪]

ಅಡಿ ಟಿಪ್ಪಣಿಗಳು

ಉಲ್ಲೇಖಗಳು‌

  • African studies review. Vol. 25–26. University of California. 1982.{{cite book}}: CS1 maint: location missing publisher (link)
  • Avirgan, Tony (1982). War in Uganda: The Legacy of Idi Amin. Westport: Lawrence Hill & Co. Publishers. ISBN ೦೮೮೨೦೮೧೩೬೫. {{cite book}}: Check |isbn= value: invalid character (help); Unknown parameter |coauthors= ignored (|author= suggested) (help)
  • ಕಾಟನ್, ಫ್ರಾನ್ (ಆವೃತ್ತಿ., ೧೯೮೪) ದಿ ಬುಕ್ ಆಫ್ ರಗ್ಬೀ ಡಿಸಾಸ್ಟರ್ಸ್ & ಬಿಝರೆ ರೆಕಾರ್ಡ್ಸ್ . ಕ್ರಿಸ್ ರೈಸ್ ಅವರಿಂಗ ಸಂಗ್ರಹಿಸಲ್ಪಟ್ಟಿದೆ. ಲಂಡನ್. ಸೆಂಚುರಿ ಪಬ್ಲಿಷಿಂಗ್ ಐಎಸ್‌ಬಿಎನ್ ೦-೫೨೧-೮೦೧೮೩-೪.
  • Decalo, Samuel (1989). Psychoses of Power: African Personal Dictatorships. Boulder: Westview Press. ISBN ೦೮೧೩೩೭೬೧೭೩. {{cite book}}: Check |isbn= value: invalid character (help); Cite has empty unknown parameter: |coauthors= (help)
  • Gwyn, David (1977). Idi Amin: Death-Light of Africa. Boston: Little, Brown and Company. ISBN ೦೩೧೬೩೩೨೩೦೫. {{cite book}}: Check |isbn= value: invalid character (help); Cite has empty unknown parameter: |coauthors= (help)
  • Kyemba, Henry (1977). A State of Blood: The Inside Story of Idi Amin. New York: Ace Books. ISBN ೦೪೪೧೭೮೫೨೪೪. {{cite book}}: Check |isbn= value: invalid character (help); Cite has empty unknown parameter: |coauthors= (help)
  • Lloyd, Lorna (2007). Diplomacy with a difference: the Commonwealth Office of High Commissioner, 1880–2006. University of Michigan: Martinus Nijhoff. ISBN 9004154973.
  • Melady, Thomas P. (1977). Idi Amin Dada: Hitler in Africa. Kansas City: Sheed Andrews and McMeel. ISBN ೦೮೩೬೨೦೭೮೩೧. {{cite book}}: Check |isbn= value: invalid character (help); Unknown parameter |coauthors= ignored (|author= suggested) (help)
  • Orizio, Riccardo (2004). Talk of the Devil: Encounters with Seven Dictators. Walker & Company. ISBN 0436209993.
  • Palmowski, Jan (2003). Dictionary of Contemporary World History: From 1900 to the present day (Second ed.). Oxford University Press. ISBN 0-19-860539-0.

ಬಾಹ್ಯ ಕೊಂಡಿಗಳು‌

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಇದಿ ಅಮೀನ್]]
Political offices
ಪೂರ್ವಾಧಿಕಾರಿ
Milton Obote
President of Uganda
೧೯೭೧–೧೯೭೯
ಉತ್ತರಾಧಿಕಾರಿ
Yusufu Lule

ಟೆಂಪ್ಲೇಟು:UgandaPresidents