ಪೀಚ್ (peach)

Lua error in package.lua at line 80: module 'Module:Pagetype/setindex' not found.

ಪೀಚ್
Autumn Red Peaches, cross section
Scientific classification
ಸಾಮ್ರಾಜ್ಯ:
Plantae
Division:
Magnoliophyta
ವರ್ಗ:
Magnoliopsida
ಗಣ:
Rosales
ಕುಟುಂಬ:
Rosaceae
ಕುಲ:
Prunus
Subgenus:
Amygdalus
ಪ್ರಜಾತಿ:
P. persica
Binomial name
Prunus persica
(L.) Batsch

ಪೀಚ್ ಮರ (ಪ್ರುನುಸ್ ಪರ್ಸಿಕ ) ಚೀನಾದ ಪ್ರುನುಸ್ ಸ್ಥಳೀಯ ಪ್ರಭೇದವಾಗಿದ್ದು, ಪೀಚ್ ಎಂದು ಕರೆಯುವ ತಿನ್ನಬಹುದಾದ ರಸಭರಿತ ಹಣ್ಣನ್ನು ಹೊಂದಿರುತ್ತದೆ. ಇದು ಶುಷ್ಕಪರ್ಣಿ ಮರವಾಗಿದ್ದು, 4–10 m ಎತ್ತರವಾಗಿ ಬೆಳೆಯುತ್ತವೆ.ಈ ಮರಗಳು ರೊಸಸೆಯೆ ವಂಶದ ಪ್ರುನಾಯ್ಡೆ‌ಉಪಕುಟುಂಬಕ್ಕೆ ಸೇರಿವೆ. ಇದನ್ನು ಪ್ರುನಸ್ ಕುಲದ ಒಳಗೆ ಅಮಿಗ್ಡಲುಸ್ ಎಂಬ ಉಪಕುಲದಲ್ಲಿ ಬಾದಾಮಿ ಯೊಂದಿಗೆ ವರ್ಗೀಕರಿಸಲಾಗುತ್ತದೆ. ಅಲ್ಲದೇ ಉಬ್ಬುತಗ್ಗಿರುವ ಬೀಜದ ಕೋಶ ಇತರ ಉಪಕುಲಗಳಿಂದ ಇವುಗಳನ್ನು ಬೇರ್ಪಡಿಸುತ್ತವೆ.'

ಎಲೆಗಳು ಶೂಲಶಿರದ ಆಕಾರವನ್ನು ಹೊಂದಿದ್ದು , 7–16 ಸೆಮೀ ಉದ್ದವನ್ನು (3–6 in), 2–3 ಸೆಮೀ ಅಗಲವನ್ನು, ಗರಿರೂಪದಎಳೆಗಳನ್ನು ಹೊಂದಿರುತ್ತವೆ. ಎಲೆಗಳು ಬರುವ ಮೊದಲೇ ವಸಂತಕಾಲದ ಪೂರ್ವದಲ್ಲೇ ಹೂಗಳು ಬಿಡುತ್ತವೆ; ಹೂವುಗಳು ಐದು ದಳಗಳೊಂದಿಗೆ ನಸುಕೆಂಪು ಬಣ್ಣವನ್ನು ಹೊಂದಿದ್ದು 2.5–3 ಸೆಮೀ ವ್ಯಾಸವನ್ನು ಹೊಂದಿರುತ್ತವೆ ಹಾಗೂ ಒಂಟಿಯಾಗಿ ಅಥವಾ ಜೋಡಿಯಾಗಿರುತ್ತವೆ. ಇದರ ಹಣ್ಣು ಹಳದಿ ಅಥವಾ ನಸುಬಿಳಿ ಬಣ್ಣದ ತಿರುಳನ್ನು ಮತ್ತು ಸೂಕ್ಷ್ಮವಾದ ಕಂಪನ್ನು ಹಾಗೂ ವಿಭಿನ್ನ ಪ್ರಭೇದಗಳಲ್ಲಿ ನುಣುಪಾದ (ಪೀಚ್ ಗಳು ) ಅಥವಾ ಮೃದುವಾದ (ನೆಕ್ಟರೀನ್‌ಗಳು ) ಸಿಪ್ಪೆಯನ್ನು ಹೊಂದಿರುತ್ತವೆ. ತಿರುಳು ತುಂಬ ಸೂಕ್ಷ್ಮವಾಗಿರುತ್ತದೆ ಮತ್ತು ಕೆಲವೊಂದು ಪ್ರಭೇದಗಳಲ್ಲಿ ಸುಲಭವಾಗಿ ಪೆಟ್ಟು ಬೀಳಬಹುದು. ಆದರೆ ವಿಶೇಷವಾಗಿ ಹಣ್ಣು ಹಸಿರು ಬಣ್ಣದಲ್ಲಿದ್ದಾಗ ಇದು ಕೆಲವೊಂದು ವಾಣಿಜ್ಯ ತಳಿಗಳಲ್ಲಿ ಗಟ್ಟಿಯಾಗಿರುತ್ತದೆ. ದೊಡ್ಡದಾದ ಏಕ ಬೀಜ ಕೆಂಪು-ಕಂದು ಬಣ್ಣದಲ್ಲಿದ್ದು, ಅಂಡಾಕಾರದಲ್ಲಿರುತ್ತದೆ ಹಾಗೂ ಸರಿಸುಮಾರು 1.3–2 ಸೆಮಿ ನಷ್ಟು ಉದ್ದವನ್ನು ಹೊಂದಿರುತ್ತದೆ ಮತ್ತು ಮರದರೀತಿಯ ಸಿಪ್ಪೆಯಿಂದ ಸುತ್ತುವರೆಯಲ್ಪಟ್ಟಿರುತ್ತದೆ. ಚೆರಿಹಣ್ಣುಗಳು, ಪ್ಲಮ್ ಹಣ್ಣುಗಳು ಮತ್ತು ಏಪ್ರಿಕಾಟ್ ಹಣ್ಣುಗಳ(ಜರದಾಳು ಹಣ್ಣು) ಜೊತೆಯಲ್ಲಿ ಪೀಚ್ ಹಣ್ಣುಗಳು ಓಟೆ ಹಣ್ಣುಗಳಾಗಿವೆ (ಡ್ರ್ಯೂಪ್ಸ್).

ಸ್ವತಃ " ಪೀಚ್" ಪದದ ಜತೆ ಅನೇಕ ಯುರೋಪಿಯನ್ ಭಾಷೆಗಳಲ್ಲಿರುವ ಇದರ ಸಜಾತೀಯಗಳು ಪರ್ಸಿಕಾ ಎಂಬ ವೈಜ್ಞಾನಿಕ ಹೆಸರು, ಪೀಚ್‌ಗಳು ಪರ್ಷಿಯ(ಈಗಿನ ಇರಾನ್)ಕ್ಕೆ ಸ್ಥಳೀಯವಾದವು ಎಂಬ ಯುರೋಪಿನ ಮುಂಚಿನ ನಂಬಿಕೆಯಿಂದ ವ್ಯುತ್ಪತ್ತಿಯಾಗಿದೆ. ಅವುಗಳು ಚೀನಾದಲ್ಲಿ ಹುಟ್ಟಿದವು ಹಾಗೂ ಪರ್ಷಿಯಾಕ್ಕೆ ಮತ್ತು ಸಿಲ್ಕ್ ಹೆದ್ದಾರಿಯ ಮೂಲಕ ಮೆಡಿಟೇರಿಯನ್ ಪ್ರದೇಶಗಳಿಗೆ ಕ್ರಿಸ್ತ ಶಕ ಕಾಲಕ್ಕೆ ಮೊದಲೇ ಪರಿಚಯಿಸಲ್ಪಟ್ಟಿದ್ದವು ಎಂಬುದು ಆಧುನಿಕ ಸಸ್ಯವಿಜ್ಞಾನದ ಬಹುಮತಾಭಿಪ್ರಾಯವಾಗಿದೆ.[೧] ತಿರುಳು ಓಟೆಯನ್ನು ಅಂಟಿಕೊಂಡಿರುತ್ತದೋ ಅಥವಾ ಇಲ್ಲವೋ ಎಂಬುದರ ಆಧಾರದ ಮೇಲೆ ಬೆಳೆದ ಪೀಚ್ ಗಳನ್ನು ಕ್ಲಿಂಗ್‌ಸ್ಟೋನ್ಸ್ ಮತ್ತು ಫ್ರೀಸ್ಟೋನ್ಸ್ ಎಂದು ವಿಂಗಡಿಸಲಾಗುತ್ತದೆ; ಎರಡು ಬಿಳಿಯ ಅಥವಾ ಹಳದಿ ಬಣ್ಣದ ತಿರುಳನ್ನು ಹೊಂದಿರಬಹುದು. ಬಿಳಿಯ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ವಿಶೇಷವಾಗಿ ತುಂಬ ಸಿಹಿಯಾಗಿದ್ದು ಸ್ವಲ್ಪ ಹುಳಿಯನ್ನು ಹೊಂದಿದ್ದರೆ ಹಳದಿ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ವಿಶೇಷವಾಗಿ ಸಿಹಿಯಿಂದ ಕೂಡಿರುವ ಆಮ್ಲೀಯ ರುಚಿಯನ್ನು ಹೊಂದಿದ್ದರೂ ಹೆಚ್ಚಾಗಿ ವೈವಿಧ್ಯದಿಂದ ಕೂಡಿದೆ. ಯಾವಾಗಲೂ ಎರಡು ಬಣ್ಣಗಳು ಅವುಗಳ ಸಿಪ್ಪೆಯ ಮೇಲೆ ಒಂದು ರೀತಿಯ ಕೆಂಪು ಬಣ್ಣವನ್ನು ಹೊಂದಿರುತ್ತವೆ. ಕಡಿಮೆ ಹುಳಿಯ ಬಿಳಿ ಬಣ್ಣದ ತಿರುಳನ್ನು ಹೊಂದಿರುವ ಪೀಚ್ ಹಣ್ಣುಗಳು ಚೀನಾ, ಜಪಾನ್ ಮತ್ತು ಸುತ್ತಮುತ್ತಲಿನ ಏಷ್ಯದ ರಾಷ್ಟ್ರಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಪ್ರಭೇದಗಳಾಗಿದ್ದರೆ, ಆಮ್ಲೀಯ ಹಳದಿ ಬಣ್ಣದ ತಿರುಳಿನ ಪ್ರಭೇಧಗಳನ್ನು ಯುರೋಪಿನ ಮತ್ತು ಉತ್ತರ ಅಮೇರಿಕಾದವರು ಐತಿಹಾಸಿಕವಾಗಿ ಇಷ್ಟಪಡುತ್ತಾರೆ.

ಇತಿಹಾಸ

ಇದರ ಸಸ್ಯವಿಜ್ಞಾನದ ಹೆಸರಾದ ಪ್ರುನಸ್ ಪರ್ಸಿಕಾ ಪೀಚ್ ಪರ್ಷಿಯಾದ ಮೂಲವಾಗಿದೆ ಎಂದು ಹೇಳಿದರೂ, ಪೀಚ್ ನಿಜವಾಗಿಯೂ ಚೀನಾದಲ್ಲೇ ಹುಟ್ಟಿದೆ. ಚೀನೀ ಸಂಸ್ಕೃತಿಯ ಆರಂಭಿಕ ದಿನಗಳಲ್ಲೆ ಇವುಗಳನ್ನು ಬೆಳೆಸಲಾಗಿತ್ತು. ಚೀನೀ ಬರಹಗಳಲ್ಲಿ ಪೀಚ್ ಹಣ್ಣುಗಳು ಕ್ರಿಸ್ತಪೂರ್ವ 10 ನೇ ಶತಮಾನದ ಹಿಂದೆ ವರ್ಣಿತವಾಗಿವೆ. ಇವು ರಾಜರ ಮತ್ತು ಚಕ್ರವರ್ತಿಗಳ ನೆಚ್ಚಿನ ಹಣ್ಣುಗಳಾಗಿದ್ದವು ಎಂದು ಹೇಳಲಾಗಿದೆ. [ಸೂಕ್ತ ಉಲ್ಲೇಖನ ಬೇಕು]

ಇದರ ಇಂಗ್ಲೀಷ್ ಹೆಸರು ಲ್ಯಾಟಿನ್ಪ್ರುನಸ್ ಪರ್ಸಿಕಾ ದಿಂದ ವ್ಯತ್ಪತ್ತಿಯಾಗಿದೆ. ಮೊದಲು ಪರ್ಸಿಕಾ , ನಂತರ ಪೆಸಿಕಾ , ನಂತರ ಪೆಸ್ಕ , ಅನಂತರ ಫ್ರೆಂಚ್ಪಿಚೆ , ನಂತರ ಮಧ್ಯಕಾಲೀನ ಇಂಗ್ಲೀಷ್ ನಲ್ಲಿ ಪೀಚ್ ಎಂದಾಯಿತು.[ಸೂಕ್ತ ಉಲ್ಲೇಖನ ಬೇಕು]

ಭಾರತಕ್ಕೆ ಮತ್ತು ಪಶ್ಚಿಮ ಏಷ್ಯಿಯಕ್ಕೆ ಪೀಚ್ ಅನ್ನು ಪ್ರಾಚೀನ ಕಾಲದಲ್ಲಿ ತರಲಾಯಿತು.[೨] ಯುರೋಪಿಗೆ ಈ ಹಣ್ಣನ್ನು ಅಲೆಗ್ಸಾಂಡರ್ ದಿ ಗ್ರೇಟ್ ಪರ್ಷಿಯನ್ನರನ್ನು ಸೋಲಿಸಿದ ನಂತರ ಪರಿಚಯಿಸಿದನು.[೨] ನಂತರ 16 ನೇ ಶತಮಾನದಲ್ಲಿ ಸ್ಪ್ಯಾನಿಷ್ ಪರಿಶೋಧಕರು ಇದನ್ನು ಅಮೇರಿಕಾಗೆ ತಂದರು. ಅಂತಿಮವಾಗಿ 17 ನೇ ಶತಮಾನದಲ್ಲಿ ಇದನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ ಗೆ ತರಲಾಯಿತು. ಅಲ್ಲಿ ಇದು ಅಮೂಲ್ಯವಾದ, ಅಪರೂಪದ ತಿನ್ನುವ ಪದಾರ್ಥವಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಸಾಮಾನ್ಯವಾಗಿ ತಿಳಿದಿರುವಂತೆ ಜಾರ್ಜ್ ಮಿನಿಫೈ ಎಂಬ ತೋಟಗಾರಿಕಾ ತಜ್ಞ 17 ನೇ ಶತಮಾನದಲ್ಲಿ ಮೊಟ್ಟ ಮೊದಲನೆಯ ಬಾರಿಗೆ ಪೀಚ್ ಗಳನ್ನು ಇಂಗ್ಲೆಂಡ್ ನಿಂದ ಉತ್ತರ ಅಮೇರಿಕಾದ ವಸಾಹತುಗಳಿಗೆ ತಂದನು ಹಾಗೂ ಅವುಗಳನ್ನು ವರ್ಜಿನಿಯಾದಲ್ಲಿರುವ ಅವನ ಬುಕ್ ಲ್ಯಾಂಡ್ ಎಸ್ಟೇಟ್( ತೋಟ)ದಲ್ಲಿ ಬೆಳೆಸಿದನು.[೩]

ಅಮೆರಿಕನ್ ಇಂಡಿಯನ್‌ ಬುಡಕಟ್ಟು ಜನಾಂಗದವರು ಅಮೇರಿಕ ಸಂಯುಕ್ತ ಸಂಸ್ಥಾನದುದ್ದಕ್ಕೂ ಪೀಚ್ ಮರಗಳನ್ನು ಹರಡಿದ ಹಿರಿಮೆ ಗಳಿಸಿದ್ದಾರೆ. ಅವರು ದೇಶದಲ್ಲಿ ಸುತ್ತಾಡುವಾಗ ತಮ್ಮ ಜತೆ ಬೀಜಗಳನ್ನು ಒಯ್ದು ಬಿತ್ತುತ್ತಿದ್ದರು.

ಥಾಂಮಸ್ ಜೆಫರ್ಸನ್ ಮಾಂಟಿಸೆಲ್ಲೊ ನಲ್ಲಿ ಪೀಚ್ ಮರಗಳನ್ನು ಹೊಂದಿದ್ದರೂ ಕೂಡ ಅಮೇರಿಕ ಸಂಯುಕ್ತ ಸಂಸ್ಥಾನದ ಕೃಷಿಕರು 19ನೇ ಶತಮಾನದವರೆಗೆ ಮೇರಿಲ್ಯಾಂಡ್, ಡೆಲವೇರ್, ಜಾರ್ಜಿಯ ಮತ್ತು ಅಂತಿಮವಾಗಿ ವರ್ಜೀನಿಯಾದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿರಲಿಲ್ಲ. ಅಮೇರಿಕ ಸಂಯುಕ್ತ ಸಂಸ್ಥಾನದ ವಾಣಿಜ್ಯ ಉತ್ಪಾದನೆಗೆಂದು ಕ್ಯಾಲಿಪೋನಿಯಾದಲ್ಲಿ ಈಗ ಶೇಕಡ 65 ರಷ್ಟು ಪೀಚ್ ಗಳನ್ನು ಬೆಳೆಸುತ್ತದೆ,[೪] ಆದರೆ ಕೊಲೆರಾಡೊ, ಮಿಚಿಗನ್, ಮತ್ತು ವಾಷಿಂಗ್ಟನ್ ನ ಉತ್ತರದ ರಾಜ್ಯಗಳು ಕೂಡ ಗಮನಾರ್ಹ ಮಟ್ಟದಲ್ಲಿ ಬೆಳಸುತ್ತವೆ. ಅಮೇರಿಕ ಸಂಯುಕ್ತ ಸಂಸ್ಥಾನವನ್ನು ಹೊರತುಪಡಿಸಿ ಇಟಲಿ , ಚೀನಾ, ಭಾರತ ಮತ್ತು ಗ್ರೀಸ್ ಗಳು ಪೀಚ್ ಗಳ ಪ್ರಧಾನ ಉತ್ಪಾದಕ ರಾಷ್ಟ್ರಗಳಾಗಿವೆ.

ಬೆಳೆ ತೆಗೆಯುವುದು

2005 ರಲ್ಲಿ ಪ್ರಪಂಚದಾದ್ಯಂತ ಪೀಚ್ ಮತ್ತು ನೆಕ್ಟರಿನ್ ಇಳುವರಿ

ಪೀಚ್ ಗಿಡಗಳು ಸೂಕ್ತವಾದ ಸೀಮಿತ ವ್ಯಾಪ್ತಿಯಲ್ಲಿ ಚೆನ್ನಾಗಿ ಬೆಳೆಯುತ್ತವೆ. ಉಷ್ಣವಲಯಕ್ಕೆ ಒದಗಿಸಲು ಸಾಧ್ಯವಾಗದಂತಹ ಚಳಿಯ ಅಗತ್ಯವನ್ನು ಅದು ಅಪೇಕ್ಷಿಸುತ್ತವೆ. ಅಲ್ಲದೇ ಅತಿಯಾದ ಥಂಡಿಯನ್ನು ಸಹಿಸಿಕೊಳ್ಳಲಾರವು. ಮರಗಳು ಸಾಮಾನ್ಯವಾಗಿ ಸುಮಾರು −26 °C ನಿಂದ −30 °C ನವರೆಗಿನ ತಾಪಮಾನವನ್ನು ಸಹಿಸಿಕೊಳ್ಳಬಲ್ಲವು ಆದರೂ, ಅನಂತರದ ಋತುವಿನ ಹೂವಿನ ಮೊಗ್ಗುಗಳು ಸಾಮಾನ್ಯವಾಗಿ ಈ ತಾಪಮಾನದಲ್ಲಿ ನಾಶವಾಗುವ ಮೂಲಕ ಆ ಬೇಸಿಗೆಯಲ್ಲಿ ಬೆಳೆ ಇಲ್ಲದಂತೆ ಮಾಡುತ್ತವೆ. ಮೊಗ್ಗುಗಳು −15 °C ಮತ್ತು −25 °C ನಡುವೆ ಅವುಗಳ ಪ್ರಭೇದ (ಕೆಲ ಪ್ರಭೇದಗಳು ಇತರ ತಳಿಗಳಿಗಿಂತ ಹೆಚ್ಚು ಥಂಡಿಯನ್ನು ಸಹಿಸಿಕೊಳ್ಳಬಲ್ಲವು)ಗಳು ಹಾಗೂ ಚಳಿಯ ಸಮಯವನ್ನು ಅವಲಂಬಿಸಿ ಸಾಯಲಾರಂಭಿಸುತ್ತವೆ. ಮೊಗ್ಗುಗಳಿಗೆ ಚಳಿಗಾಲದ ಕೊನೆಯಲ್ಲಿ ಹೆಚ್ಚು ಥಂಡಿಯನ್ನು ಸಹಿಸುವ ಸಾಮರ್ಥ್ಯ ಕಡಿಮೆಯಿರುತ್ತದೆ.[೫] ಕೆಲವೊಂದು ನಿರ್ದಿಷ್ಟ ಪ್ರಭೇದಗಳು ಅತ್ಯಂತ ಸೂಕ್ಷ್ಮವಾಗಿದ್ದರೆ ಇತರ ಪ್ರಭೇದಗಳು ಸ್ವಲ್ಪ ಪ್ರಮಾಣದ ಥಂಡಿಯನ್ನು ಸಹಿಸಿಕೊಳ್ಳಬಲ್ಲವು. ಇದರ ಜೊತೆಯಲ್ಲಿ ಬೆಳೆಯನ್ನು ಪಕ್ವಗೊಳಿಸಲು ಬೇಸಿಗೆ ತಿಂಗಳಿನ 20 °C ನಿಂದ 30 °C ವರೆಗಿರುವ ಸರಾಸರಿ ಉಷ್ಣಾಂಶದೊಂದಿಗೆ ಹೆಚ್ಚು ಬೇಸಿಗೆಯ ಬಿಸಿಲೂ ಬೇಕಾಗುತ್ತದೆ. ವಸಂತ ಕಾಲದ ಹಿಮ ಪೀಚ್ ಬೆಳೆಯುವ ಅನೇಕ ಸ್ಥಳಗಳಲ್ಲಿರುವ ಮತ್ತೊಂದು ಸಮಸ್ಯಾತ್ಮಕ ವಿಷಯವಾಗಿದೆ. ವಸಂತಕಾಲದ ಆರಂಭದಲ್ಲಿ ಮರಗಳು ಚೆನ್ನಾಗಿ ಹೂವನ್ನು ಬಿಡುತ್ತವೆ. ಕೆಲವೊಮ್ಮೆ ಹಿಮದಿಂದ ಹೂವುಗಳಿಗೆ ಹಾನಿಯುಂಟಾಗಬಹುದು ಅಥವಾ ಅವು ಸಾಯಬಹುದು; ಸಾಮಾನ್ಯವಾಗಿ ಉಷ್ಣಾಂಶ -4 °C ಕ್ಕಿಂತ ಕಡಿಮೆಯಾದರೆ ಬಹುಪಾಲು ಹೂವುಗಳು ನಾಶವಾಗುತ್ತವೆ. ಆದರೂ, ಹೂವುಗಳು ಸಂಪೂರ್ಣವಾಗಿ ಅರಳದಿದ್ದಲ್ಲಿ ಅವು ಇದರ ಎರಡರಷ್ಟು ಥಂಡಿಯನ್ನು ಸಹಿಸಿಕೊಳ್ಳಬಲ್ಲವು.

ಪೀಚ್ ಅನ್ನು ಬೆಳೆಯುವ ಪ್ರಮುಖ ಐತಿಹಾಸಿಕ ಪ್ರದೇಶಗಳೆಂದರೆ ಚೀನಾ, ಇರಾನ್, ಫ್ರಾನ್ಸ್, ಹಾಗು ಇಟಲಿ, ಸ್ಪೇನ್ಮತ್ತು ಗ್ರೀಸ್ ನಂತಹ ಮೆಡಿಟೇರಿಯನ್ ರಾಷ್ಟ್ರಗಳು. ಅತ್ಯಂತ ಇತ್ತೀಚೆಗೆ ಅಮೇರಿಕ ಸಂಯುಕ್ತ ಸಂಸ್ಥಾನ (ಬೃಹತ್ ಪ್ರಮಾಣದಲ್ಲಿ ಬೆಳೆಯುವ ಮೂರು ರಾಜ್ಯಗಳಾದ ಕ್ಯಾಲಿಪೋನಿಯಾ, ದಕ್ಷಿಣ ಕರೊಲಿನ,[೬] ಮತ್ತುಜಾರ್ಜಿಯ[೭] ವನ್ನು ಹೊಂದಿರುವ), ಕೆನಡಾ (ಬ್ರಿಟಿಷ್ ಕೊಲಂಬಿಯ), ಮತ್ತು ಆಸ್ಟ್ರೇಲಿಯ(ರಿವರ್ ಲ್ಯಾಂಡ್ ಪ್ರದೇಶ) ದೇಶಗಳು ಕೂಡ ಪ್ರಮುಖವಾಗಿವೆ; ಕೆನಡಾದ ಆಂಟ್ಯಾರಿಯೊದ ನಯಾಗರ ಪರ್ಯಾಯದ್ವೀಪದಲ್ಲಿ ಪೀಚ್ ಅಧಿಕ ಪ್ರಮಾಣದಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಕೆನಡಾದ ಕೊನೆಯ ಹಣ್ಣಿನ ಕ್ಯಾನರಿಯನ್ನು ಅದರ ಮಾಲೀಕರು ಮುಚ್ಚಿದಾಗಿನಿಂದ 2008ರಲ್ಲಿ ಇದರ ಉತ್ಪಾದನೆ ಗಮನಾರ್ಹ ಇಳಿಮುಖವಾಯಿತು.[೮] ಫೆಸಿಫಿಕ್ ವಾಯವ್ಯ ಪ್ರದೇಶಗಳು ಮತ್ತು ಯುರೋಪ್ ನ ವಾಯವ್ಯ ಭಾಗದ ಕರಾವಳಿ ತೀರಗಳಂತಹ ದೂರಸಾಗರದ ಹವಾಮಾನ ವನ್ನು ಹೊಂದಿರುವ ಪ್ರದೇಶಗಳು ಅಸಮರ್ಪಕ ಬೇಸಿಗೆ ಉಷ್ಣಾಂಶದ ಹಿನ್ನೆಲೆಯಲ್ಲಿ ಪೀಚ್ ಬೆಳೆಗೆ ಹಿತಕರವಲ್ಲ. ಸೂರ್ಯನ ಹೆಚ್ಚಿನ ಶಾಖವನ್ನು ಪಡೆಯಲು ದಕ್ಷಿಣಾಭಿಮುಖ ಗೋಡೆಗಳಿಗೆ ವಿರುದ್ಧವಾಗಿ ಅವುಗಳನ್ನು ಕೆಲವು ಬಾರಿ ಬೆಳೆಯಲಾಗುತ್ತದೆ. ಇಂಗ್ಲೆಂಡ್ ನ ಆಗ್ನೇಯ ಭಾಗದಲ್ಲಿ ಆಸರೆ ಪಡೆದು ದಕ್ಷಿಣಾಭಿಮುಖ ಸ್ಥಾನದಲ್ಲಿ ಬೆಳೆದ ಮರಗಳು ಹೂಗಳನ್ನು ಮತ್ತು ಅತ್ಯಂತ ಹೆಚ್ಚು ಹಣ್ಣುಗಳನ್ನು ಬಿಡುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಲ್ಯಾಂಗ್ ಸನ್ ಪ್ರಾಂತದ ಲಾಕ್ ಬಿನ್ಹ್ ಜಿಲ್ಲೆ(/1)ಯಲ್ಲಿರುವ ಮೌಸನ್ ಸಮುದಾಯದಲ್ಲಿ ಬೆಳೆಯುವ ಹಣ್ಣು ವಿಯೆಟ್ನಾಂನಲ್ಲಿ ಅತ್ಯಂತ ಜನಪ್ರಿಯವಾಗಿರುವ ಪೀಚ್ ಹಣ್ಣಿನ ಪ್ರಭೇದವಾಗಿದೆ.

ಮನೆಯ ತೋಟದಲ್ಲಿ, ಅರೆ ಕುಬ್ಜ(3ರಿಂದ 4ಮೀ)ಮತ್ತು ಕುಬ್ಜ(2ರಿಂದ 3 ಮೀ)ಜಾತಿಗಳನ್ನು ಇಚ್ಛಿತ ಪ್ರಭೇದಗಳನ್ನು ಕುಬ್ಜ ಬೇರಿನಕಾಂಡಕ್ಕೆ ಕಸಿ ಮಾಡುವ ಮೂಲಕ ಬೆಳಸಲಾಗುತ್ತದೆ. ಇದು ಹಣ್ಣಿನ ಗಾತ್ರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಇನ್ನೊಂದು ಪರಿವರ್ತನೆ ಹೂವಿನಿಂದ ಕೂಡಿದ ಪೀಚ್. ಹಣ್ಣು ಉತ್ಪಾದನೆಗಿಂತ ಅಲಂಕಾರದ ಪ್ರದರ್ಶನಕ್ಕೆ ಇವನ್ನು ಆಯ್ಕೆಮಾಡಲಾಗುತ್ತದೆ.

ಹವಾಮಾನ ಮತ್ತು ತಳಿಯನ್ನು ಆಧರಿಸಿ ಪೀಚ್ ಕೊಯ್ಲು ಮೇ ತಿಂಗಳ ಕೊನೆಯಿಂದ ಆಗಸ್ಟ್ ನ ಸಮಯದಲ್ಲಿ ನಡೆಯುತ್ತದೆ; ಪ್ರತಿಯೊಂದು ಮರದ ಕೊಯ್ಲು ಒಂದು ವಾರ ಹಿಡಿಯುತ್ತದೆ.

ನೆಕ್ಟರಿನ್‌ಗಳು

ಪೂರ್ತಿಯಾಗಿರುವ ಮತ್ತು ಅರ್ಧಕ್ಕೆ ಕತ್ತರಿಸಿ ತೆರೆದಿಟ್ಟಿರುವ ಬಿಳಿಬಣ್ಣದ ನೆಕ್ಟರಿನ್ ಹಣ್ಣು

ನೆಕ್ಟರಿನ್ ಎಂಬುದು ಮೃದುವಾದ ಸಿಪ್ಪೆಯನ್ನು ಹೊಂದಿರುವ ಪೀಚ್ ನ ಪ್ರಭೇದ ಗುಂಪಾಗಿದೆ. ಜಾಳುಜಾಳಾದ ಪೀಚ್ ಹಣ್ಣುಗಳನ್ನು ಮತ್ತು ನೆಕ್ಟರಿನ್ ಅನ್ನು ವಾಣಿಜ್ಯವಾಗಿ ವಿಭಿನ್ನ ಹಣ್ಣುಗಳೆಂದು ಕರೆದರೂ ಕೂಡ, ನೆಕ್ಟರಿನ್ ಪೀಚ್‌‌ಗಳು ಮತ್ತು ಪ್ಲಮ್ ಗಳ ಮಿಶ್ರತಳಿಯೆಂದು ಅಥವಾ "ಪ್ಲಮ್ ನ ಸಿಪ್ಪೆಯನ್ನು ಹೊಂದಿರುವ ಪೀಚ್" ಎಂದು ತಪ್ಪಾಗಿ ಭಾವಿಸಿದರೂ ಕೂಡ ಅವೆರಡೂ ಪೀಚ್ ನಂತೆ ಒಂದೇ ಪ್ರಭೇದಕ್ಕೆ ಸೇರಿವೆ. ನೆಕ್ಟರಿನ್ಸ್ ಅಪಸರಣ ವಂಶವಾಹಿಯ ಕಾರಣದಿಂದ ಸೃಷ್ಟಿಯಾಗಿದ್ದರೆ, ಜಾಳುಜಾಳಾದ ಪೀಚ್(ಫಜಿ ಪೀಚ್) ಹಣ್ಣಿನ ಸಿಪ್ಪೆ ಪ್ರಧಾನ ವಂಶವಾಹಿ(ಡಾಮಿನೆಂಟ್) ಕಾರಣ ದಿಂದ ಸೃಷ್ಟಿಯಾಗಿವೆ ಎಂದು ಅನೇಕ ತಳಿ ಅಧ್ಯಯನಗಳು ತೀರ್ಮಾನಿಸಿವೆ.[೯] ಅನೇಕ ಸಲ ನೆಕ್ಟರಿನ್ ಪೀಚ್ ಮರಗಳಿಂದ ಹಾಗೂ ಕೆಲವೊಮ್ಮೆ ಮರದ ಭಾಗಗಳಿಂದ ಹುಟ್ಟಿಕೊಂಡಿವೆ.

ಪೀಚ್ ಗಳಂತೆ ನೆಕ್ಟರಿನ್ ಗಳು ಕೂಡ ಬಿಳಿ ಅಥವಾ ಹಳದಿಯಾಗಿರಬಹುದು ಹಾಗೂ ಕ್ಲಿಂಗ್‌ಸ್ಟೋನ್(ತಿರುಳು ಓಟೆಗೆ ಬಲವಾಗಿ ಅಂಟಿಕೊಂಡಿರುವ ಒಂದು ಬಗೆಯ ಪೀಚ್ ಹಣ್ಣು) ಅಥವಾ ಪೀಚ್‌ಸ್ಟೋನ್(ಓಟೆ ಸಡಿಲವಾಗಿರುವ ಒಂದು ತೆರನಾದ ಪೀಚ್ ಹಣ್ಣು) ಆಗಿರಬಹುದು. ಸರಾಸರಿ ನೆಕ್ಟರಿನ್ ಗಳು ಪೀಚ್ ಹಣ್ಣುಗಳಿಗಿಂತ ಸ್ವಲ್ಪಮಟ್ಟಿಗೆ ಚಿಕ್ಕದಾಗಿವೆ ಮತ್ತು ಸಿಹಿಯಾಗಿವೆ. ಆದರೆ ಅತಿವ್ಯಾಪಿಸಿದೆ.[೯] ಸಿಪ್ಪೆಯ ಜಾಳುಜಾಳಿನ ಕೊರತೆ ಕಾರಣ ನೆಕ್ಟರಿನ್ ನ ಸಿಪ್ಪೆಗಳು ಪೀಚ್‌ಗಳಿಂತ ಹೆಚ್ಚು ಕೆಂಪಾಗಿ ಕಾಣುತ್ತವೆ. ಇದರಿಂದಾಗಿ ಹಣ್ಣಿನ ಪ್ಲಮ್‌ನಂತಹ ರೂಪಕ್ಕೆ ಕೊಡುಗೆ ನೀಡುತ್ತದೆ. ನೆಕ್ಟರಿನ್ ಸಿಪ್ಪೆಗಳಲ್ಲಿ ನವಿರು ಕೂದಲಿನ ಕೊರತೆಯಿಂದ ಪೀಚ್ ಗಳಿಗಿಂತ ಸುಲಭವಾಗಿ ಅವುಗಳ ಸಿಪ್ಪೆಗೆ ಪೆಟ್ಟು ತಾಗಬಹುದು ಎಂಬ ಅರ್ಥವನ್ನು ಕೊಡುತ್ತದೆ.

ನೆಕ್ಟರಿನ್ ನ ಇತಿಹಾಸ ಅಸ್ಪಷ್ಟವಾಗಿದೆ; ಇಂಗ್ಲೀಷ್‌ನಲ್ಲಿ ಅದರ ಮೊದಲ ದಾಖಲೆ 1616 ರಿಂದ ಕಂಡುಬಂದಿದೆ,[೧೦] ಆದರೆ ಮಧ್ಯ ಮತ್ತು ಪೂರ್ವ ಏಷ್ಯದಲ್ಲಿ ಪೀಚ್‌ನ ಸ್ಥಳೀಯ ವಲಯದಲ್ಲಿ ಬಹುಶಃ ಮೇಲ್ಕಂಡ ಕಾಲಕ್ಕಿಂತ ಮೊದಲೇ ಅವುಗಳನ್ನು ಬೆಳೆಯಲಾಗಿದೆ. ನೆಕ್ಟರಿನ್ ಗಳನ್ನು ಕೃಷಿ ವಿಭಾಗದಲ್ಲಿದ್ದ ಡೇವಿಡ್ ಫೇರ್ ಚಿಲ್ಡ್ ಎಂಬುವವನು ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ 1906 ರಲ್ಲಿ ಪರಿಚಯಿಸಿದನು.[೧೧]

ರೋಗಗಳು

ಮರಗಳಿಗೆ ಲೀಫ್ ಕರ್ಲ್ ಎಂಬ ರೋಗ ತಗಲುವ ಸಂಭವವಿರುತ್ತದೆ. ಇದು ಸಾಮಾನ್ಯವಾಗಿ ಹಣ್ಣಿನ ಮೇಲೆ ನೇರವಾಗಿ ಪ್ರಭಾವ ಬೀರುವುದಿಲ್ಲ. ಆದರೆ ಭಾಗಶಃ ಮರವನ್ನು ವಿಪರ್ಣಗೊಳಿಸುವ ಮೂಲಕ ಇಳುವರಿಯನ್ನು ಕಡಿಮೆಗೊಳಿಸುತ್ತದೆ. ಹಣ್ಣುಗಳು ಬ್ರೌನ್ ರಾಟ್ ಅಥವಾ ಗಾಢವಾದ ಕೆಂಪು ಚುಕ್ಕೆಗಳಿಗೆ ಎಡೆಮಾಡಿಕೊಡಬಲ್ಲವು.

ನೆಡುವುದು

ಚಳಿಗಾಲದ ಆರಂಭದಲ್ಲಿ ಮೊಗ್ಗು ರಚನೆಯಿಂದ ಹಿಡಿದು ಬೇಸಿಗೆಯ ಮಧ್ಯಾವಧಿಯಲ್ಲಿ(ಮುಂದಿನ ಮಾಹಿತಿಗಾಗಿ ಚಿತ್ರಪುಟವನ್ನು ನೋಡಿ) ಹಣ್ಣು ಮಾಗುವವರೆಗೆ [23] ತಿಂಗಳುಗಳ ಕಾಲದ ನೆಕ್ಟರಿನ್ ಬೆಳವಣಿಗೆಯ ಕ್ರಮಾನುಗತಿ.

ನರ್ಸರಿಗಳು ಮಾರುವ ಬಹುಪಾಲು ಪೀಚ್ ಮರಗಳು ಬಡೆಡ್ (ಕಸಿಯ ಒಂದು ವಿಧಾನ)ಪ್ರಭೇದಗಳು ಅಥವಾ ಸೂಕ್ತವಾದ ಬೇರಿನ ಕಾಂಡಕ್ಕೆ ಕಸಿ ಮಾಡಲಾಗಿರುವ ತಳಿಗಳಾಗಿರುತ್ತವೆ. ಪೀಚ್ ನಿಂದ ಇಲ್ಲವೇ ನೆಕ್ಟರಿನ್ ಬೀಜ ದಿಂದಲೂ ಕೂಡ ಮರವನ್ನು ಬೆಳೆಸಬಹುದು, ಆದರೆ ಹೀಗೆ ಬೆಳೆಸಲಾದ ಮರದ ಹಣ್ಣಿನ ಗುಣಮಟ್ಟವನ್ನು ಊಹಿಸಲು ಸಾಧ್ಯವಿಲ್ಲ.

ಪೀಚ್ ಅನ್ನು ಸಂಪೂರ್ಣ ಸೂರ್ಯನ ಬೆಳಕು ಬೀಳುವ ಹಾಗೂ ಚೆನ್ನಾಗಿ ಗಾಳಿಯಾಡುವ ಪ್ರದೇಶದಲ್ಲಿ ನೆಡಬೇಕು. ಇದರಿಂದಾಗಿ ಹಿಮಚ್ಛಾದಿತ ರಾತ್ರಿಗಳಲ್ಲಿ ತಣ್ಣನೆಯ ಗಾಳಿಯನ್ನು ದೂರದಲ್ಲಿ ಬೀಸುವಂತೆ ಮಾಡಿ ಬೇಸಿಗೆಯಲ್ಲಿ ಪ್ರದೇಶವನ್ನು ತಣ್ಣಗಿರಿಸುತ್ತದೆ. ಚಳಿಗಾಲದ ಆರಂಭದಲ್ಲಿ ಪೀಚ್‌ಗಳನ್ನು ನೆಡುವುದು ಉತ್ತಮವಾಗಿದೆ. ಇದು ಬೇರುಗಳಿಗೆ ಸ್ಥಿರವಾಗಲು ಮತ್ತು ಹೊಸ ವಸಂತದ ಬೆಳವಣಿಗೆಯನ್ನು ತಾಳಿಕೊಳ್ಳಲು ಸಮಯವನ್ನು ನೀಡುತ್ತದೆ. ಸಾಲಾಗಿ ನೆಡುವಾಗ ಉತ್ತರ ದಿಂದ ದಕ್ಷಿಣಾಭಿಮುಖವಾಗಿ ನೆಡಲಾಗುತ್ತದೆ.

ಗರಿಷ್ಠ ಬೆಳವಣಿಗೆಗಾಗಿ ಪೀಚ್ ಮರಗಳಿಗೆ ನಿರಂತರ ನೀರಿನ ಸರಬರಾಜು ಅಗತ್ಯವಾಗಿವೆ. ಕಟಾವು ಮಾಡುವ ಸ್ವಲ್ಪ ಕಾಲದ ಮೊದಲು ಇದನ್ನು ಹೆಚ್ಚಿಸಬೇಕು. ಋತುವಿನುದ್ದಕ್ಕೂ ನೀರಿನ ಸೌಕರ್ಯವನ್ನು ಪೀಚ್ ಪಡೆದರೆ, ಅತ್ಯಂತ ರುಚಿಯಾದ ಹಣ್ಣುಗಳನ್ನು ಬಿಡುತ್ತವೆ. ಪ್ರತಿ ಮರಕ್ಕೆ ಒಂದು ಡ್ರಿಪ್ಪರ್‌ನೊಂದಿಗೆ ಹನಿ ನೀರಾವರಿಯ ಮೂಲಕ ನೀರುಹಾಯಿಸುವುದು ಅತ್ಯುತ್ತಮವಾಗಿದೆ. ಮರದ ಸುತ್ತಲೂ ಬಹು ಡ್ರಿಪ್ಪರ್‌ಗಳನ್ನು ಬಳಸುವುದು ಒಳ್ಳೆಯದಾದರೂ ಇದು ಅತ್ಯವಶ್ಯಕವಲ್ಲ. ಬೇರಿನ ಕಾಲು ಭಾಗದಷ್ಟು ಮಾತ್ರ ನೀರಿನೊಳಗಿದ್ದರೆ ಸಾಕು.

ಪೀಚ್ ಗಳು ಅತ್ಯಂತ ಹೆಚ್ಚು ಪೌಷ್ಟಿಕವನ್ನು ಅಪೇಕ್ಷಿಸುತ್ತವೆ. ಇದಕ್ಕೆ ಬಹುಪಾಲು ಇತರ ಹಣ್ಣುಗಳ ಮರಗಳಿಗಿಂತ ಹೆಚ್ಚಿನ ಸಾರಜನಕ ಅಗತ್ಯವಾಗಿರುತ್ತದೆ. NPK ರಸಗೊಬ್ಬರವನ್ನು ನಿಯಮಿತವಾಗಿ ಬಳಸಬಹುದು.ಇದರ ಜೊತೆಗೆ ಕಟಾವು ಮಾಡಿದ ಕೂಡಲೇ ಶರತ್ಕಾಲದಲ್ಲಿ ಸಾಕು ಕೋಳಿಗಳ ಅರೆಕೊಳೆತ ಗೊಬ್ಬರದ ಮಿಶ್ರಣ ಹಾಕುವುದರಿಂದ ಮರಕ್ಕೆ ಒಳ್ಳೆಯ ಅನುಕೂಲವಾಗುತ್ತದೆ. ಪೀಚ್ ನ ಎಲೆಗಳು ಹಳದಿಬಣ್ಣ ಅಥವಾ ಚಿಕ್ಕದಾಗಿದ್ದರೆ ಮರಗಳಿಗೆ ಹೆಚ್ಚಿನ ಸಾರಜನಕ ಅಗತ್ಯವಾಗುತ್ತದೆ. ಬೆಳೆದುನಿಂತ ಪ್ರತಿಮರಕ್ಕೆ ಬ್ಲಡ್ ಮೀಲ್ (ಒಣಗಿಸಿ ಪುಡಿಮಾಡಿದ ರಕ್ತದ ರಸಗೊಬ್ಬರ) ಮತ್ತು ಬೋನ್ ಮೀಲ್(ಪುಡಿಮಾಡಿದ ಮೂಳೆಯ ರಸಗೊಬ್ಬರ) 3–5 kg ಅಥವಾ ಕ್ಯಾಲ್ಶಿಯಂ ಅಮೋನಿಯಂ ನೈಟ್ರೇಟ್‌ಗಳು 0.5–1 kg, ಉಪಯುಕ್ತ ರಸಗೊಬ್ಬರಗಳಾಗಿವೆ. ಮರವು ಸ್ವಲ್ಪ ಬೆಳೆಯುವ ಹಂತಕ್ಕೆ ಬಂದಾಗ ಕೂಡ ಇದು ಅನ್ವಯಿಸುತ್ತದೆ.

ಪೂರ್ಣ ಪ್ರಮಾಣದ ಪೀಚ್‌ಗಳನ್ನು ಕೀಳದೇ ಬಿಟ್ಟರೆ , ಅವುಗಳು ಕಡಿಮೆ ಗಾತ್ರದಿಂದ ಕೂಡಿ, ಅವುಗಳಲ್ಲಿ ಸಕ್ಕರೆ ಮತ್ತು ರುಚಿಯ ಕೊರತೆಯುಂಟಾಗುತ್ತದೆ. ಒಣಗಿದ ಸ್ಥಿತಿಯಲ್ಲಿ ಅಧಿಕ ನೀರಿನ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಹಣ್ಣುಗಳು ಹೂ ಬಿಟ್ಟ ಎರಡು ತಿಂಗಳಿನ ನಂತರ 2 cmಅಡಿಯಷ್ಟು ವ್ಯಾಸವನ್ನು ಪಡೆದಾಗ ಕೀಳಬೇಕು. ತಾಜಾ ಹಣ್ಣುಗಳನ್ನು ಮರದಿಂದ ಕಿತ್ತದಿನದಂದೇ ಸೇವಿಸಿದರೆ ಒಳ್ಳೆಯದು. ಸೂರ್ಯನ ಬಿಸಿಲಿಗೆ ಗುರಿಯಾದ ಹಣ್ಣುಗಳು ಸ್ವಲ್ಪ ಮೆದುವಾಗಿ, ಕಂಪನ್ನು ಹೊಂದಿರುವಾಗಲೇ ತಿನ್ನುವುದು ಒಳ್ಳೆಯದು.

ಶೇಖರಣೆ

ಪೀಚ್‌ಗಳನ್ನು ಕೊಠಡಿಯ ತಾಪಮಾನದಲ್ಲಿ ಸಂಗ್ರಹಿಸಿಡಬೇಕು ಹಾಗೂ ಪೀಚ್‌ನ ರುಚಿಯನ್ನು ಕಡಿಮೆ ಮಾಡುವ ಶೈತ್ಯೀಕರಣವನ್ನು ತಡೆಯಬೇಕು. ಪೀಚ್ ಗಳು ಮರದಿಂದ ಕಿತ್ತನಂತರ ಪಕ್ವಗೊಳ್ಳುವುದಿಲ್ಲ(ಮಾಗುವುದಿಲ್ಲ). ಆದ್ದರಿಂದ ಪಕ್ವಗೊಳಿಸಲು ಅವುಗಳನ್ನು ಶೇಖರಿಸುವ ಅವಶ್ಯಕತೆಯಿಲ್ಲ.[೧೨]

ಏಷ್ಯನ್ ಸಂಪ್ರದಾಯ

ಪ್ಯಾರಗುಯ (ಪ್ಯಾರಗುಯಾನ್) ಎಂದು ಕೂಡ ಕರೆಯಲಾಗುವ ಮಟ್ಟಸವಾದ ಚೀನೀ ಪೀಚ್

ಚೀನಾ, ಜಪಾನ್, ಕೊರಿಯ, ಲಾವೋಸ್ ಮತ್ತು ವಿಯೆಟ್ನಾಂದಲ್ಲಿ ಪೀಚ್ ಅನ್ನು ಕೇವಲ ಜನಪ್ರಿಯ ಹಣ್ಣೆಂದು ಮಾತ್ರ ಹೆಸರಾಗಿರದೆ ಇದಕ್ಕೆ ಸಂಬಂಧಿಸಿರುವ ಅನೇಕ ಜನಪದ ಕಥೆಗಳು ಮತ್ತು ಸಂಪ್ರದಾಯಗಳಿಗೂ ಹೆಸರಾಗಿದೆ.

ಚೀನಾದಲ್ಲಿ ಪೀಚ್ ಹಣ್ಣುಗಳನ್ನು ಯಾರು ತಿನ್ನುತ್ತಾರೋ ಅವರೆಲ್ಲರಿಗೂ ದೀರ್ಘಾಯುಷ್ಯ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ ಇವುಗಳನ್ನು ದೇವತೆಗಳು ಬಳಸುತ್ತಿದ್ದರು ಎಂದು ಹೇಳಲಾಗುತ್ತದೆ. ಜೇಡ್ ಚಕ್ರವರ್ತಿಎಂದು ಕೂಡ ಕರೆಯುವ ದೈವತ್ವದ ಯು ಹುಹ್ಯಾಂಗ್ ಮತ್ತು ಅವನ ತಾಯಿ ಹಾಗೂ ಪಶ್ಚಿಮದ ರಾಣಿ ತಾಯಿ ಎಂದು ಕೂಡ ಹೆಸರಾದ ಕ್ಸಿ ವ್ಯಾಂಗ್ ಮು ದೇವತೆಗಳಿಗೆ ಅಮರತ್ವದ ಪೀಚ್ ಗಳನ್ನು ತಿನ್ನಿಸಿ ಅವರ ಶಾಶ್ವತ ಅಸ್ತಿತ್ವವನ್ನು ಖಾತರಿ ಮಾಡಿದರು. ಕ್ಸಿ ವ್ಯಾಂಗ್ ಮುನ ಅರಮನೆಯಲ್ಲಿದ್ದ ದೇವತೆಗಳು ಪ್ಯಾಂಟೊ ಹುಯಿ ಅಥವಾ "ಪೀಚ್‌ಗಳ ಔತಣ" ವೆಂದು ಕರೆಯಲಾಗುವ ಅದ್ದೂರಿ ಔತಣಕೂಟದಲ್ಲಿ ಪಾಲ್ಗೊಂಡರು ಎಂದು ಹೇಳಲಾಗುತ್ತದೆ. ಭರ್ಜರಿಯಾದ ಈ ಔತಣಕೂಟಕ್ಕೆ ಸೇರಲು ದೇವತೆಗಳು ಸುಮಾರು ಆರು ಸಾವಿರ ವರ್ಷಗಳು ಕಾದಿದ್ದರು. ಪ್ರತಿ ಸಾವಿರ ವರ್ಷಗಳಿಗೊಮ್ಮೆ ಪೀಚ್ ಎಲೆಗಳನ್ನು ಬಿಡುತ್ತಿತ್ತು.ಇವುಗಳ ಹಣ್ಣುಗಳು ಪಕ್ವವಾಗಲು ಮತ್ತೆ ಮೂರು ಸಾವಿರ ವರ್ಷಗಳು ಬೇಕಾಗುತ್ತಿತ್ತು. ಕ್ಸಿ ವ್ಯಾಂಗ್ ಮು ಸಹವರ್ತಿಗಳು ಮೂರು ಪೀಚ್ ಗಳೊಂದಿಗೆ ಇರುವುದನ್ನು ದಂತ ಪ್ರತಿಮೆಗಳು ಬಿಂಬಿಸುತ್ತವೆ.

11 ನೇ ಶತಮಾನದಲ್ಲಿ ಸಾಂಗ್‌ನ ಹುಯಿಜಾಂಗ್ ಚಕ್ರವರ್ತಿ ಚಿತ್ರಿಸಿರುವ ಚೀನದ ಸಾಂಗ್ ರಾಜವಂಶದ ಪಕ್ಷಿ ಮತ್ತು ಪೀಚ್ ಹೂವಿನ ವರ್ಣಚಿತ್ರ.

ಪೀಚ್ ಚೀನೀ ಸಂಪ್ರದಾಯದಲ್ಲಿ ಪ್ರಮುಖ ಪಾತ್ರನಿರ್ವಹಿಸುತ್ತದಲ್ಲದೇ,ಇದು ದೀರ್ಘಾಯಸ್ಸಿನ ಸಂಕೇತವಾಗಿದೆ. ಜ್ಯಾಂಗ್ ಡೌಲಿಂಗ್ ನ ಪೀಚ್ ಒಟ್ಟುಗೂಡಿಸುವ ಕಥೆಯು ಒಂದು ಉದಾಹರಣೆಯಾಗಿದೆ. ಕೆಲವರು ಇವನೇ ಟೊವೋ ತತ್ತ್ವವನ್ನು ಸ್ಥಾಪಿಸಿದ ನಿಜವಾದ ಸಂಸ್ಥಾಪಕನೆಂದು ಹೇಳುತ್ತಾರೆ. ಚೀನಾದ ಎಂಟು ದೇವತೆಗಳಲ್ಲಿ ಒಬ್ಬನಾದ ಎಲ್ಡರ್ ಜ್ಯಾಂಗ್ ಗೌ ಅಮರತ್ವದ ಪೀಚ್ ಅನ್ನು ಕೊಂಡೊಯ್ಯುತ್ತಿರುವಂತೆ ಚಿತ್ರಿಸಲಾಗಿದೆ. ಪೀಚ್ ನ ಹೂವುಗಳಗೆ ಚೀನೀ ಸಂಪ್ರದಾಯದಲ್ಲಿ ಹೆಚ್ಚು ಬೆಲೆ ಕಟ್ಟಲಾಗಿದೆ.

ರೋಮ್ಯಾನ್ಸ್ ಆಫ್ ದಿ ತ್ರೀ ಕಿಂಗ್ಡಮ್ಸ್ /3} ಎಂಬ ಚೀನಾದ ಶ್ರೇಷ್ಟ ಕಾದಂಬರಿಯ ಆರಂಭಿಕ ಅಧ್ಯಾಯದಲ್ಲಿ ಲಿಯು ಬೇ, ಗೌನ್ ಯು, ಮತ್ತು ಜ್ಯಾಂಗ್ ಫಿ ಎಂಬುವವರು ಹೂವರಳುವ ಪೀಚ್ ಮರಗಳ ತೋಟದಲ್ಲಿ ಸಹೋದರತ್ವದ ಪ್ರಮಾಣವನ್ನು ಸ್ವೀಕರಿಸಿದರು ಎಂದು ಬರೆಯಲಾಗಿದೆ.

ಜಪಾನಿನ ಅತ್ಯಂತ ಗಣ್ಯ ಹಾಗು ಅರೆ ಐತಿಹಾಸಿಕ ನಾಯಕನಲ್ಲಿ ಒಬ್ಬನಾದ ಮೊಮೊಟ್ಯಾರೊ ತೊರೆಯಲ್ಲಿ ತೇಲುತ್ತಿದ್ದ ಆಗಾದ ಗಾತ್ರದ ಪೀಚ್ ನಿಂದ ಜನ್ಮತಳೆದ. ಮೊಮೊಟ್ಯಾರೊ ಅಥವಾ "ಪೀಚ್ ಹುಡುಗ" ಒನಿ ಎಂಬ ದುಷ್ಟಶಕ್ತಿಯೊಡನೆ ಹೋರಾಡಲು ಹಾಗೂ ಅನೇಕ ಸಾಹಸಗಳನ್ನು ಮಾಡಲು ತೆರಳುತ್ತಾನೆ.

ಕೊರಿಯಾದಲ್ಲಿ , ಪೀಚ್ ಗಳನ್ನು ಪ್ರಾಚೀನ ಕಾಲದಿಂದಲ್ಲೇ ಬೆಳೆಯಲಾಗುತ್ತಿತ್ತು. ಸ್ಯಾಮ್ ಗುಕ್ ಸಾಗಿ{/೦ ದಾಖಲೆಯ ಪ್ರಕಾರ ಪೀಚ್ ಮರಗಳನ್ನು {1}ಕೊರಿಯ ಅವಧಿಯ ಮೂರು ಸಾಮ್ರಾಜ್ಯಗಳ ಆಳ್ವಿಕೆಯ ಕಾಲದಲ್ಲೆ ಬೆಳೆಯಲಾಗಿತ್ತು ಹಾಗೂ ಸಲ್ಲಿಮ್ ಗ್ಯೆಯೊನ್ ಜೆ ಕೂಡಾ ಪೀಚ್ ಮರಗಳನ್ನು ಬೆಳೆಸುವ ಕೌಶಲಗಳನ್ನು ಪ್ರಸ್ತಾಪಿಸಿದೆ. ಪೀಚ್ ಸಂತೋಷದ , ಶ್ರೀಮಂತಿಕೆಯ , ಗೌರವದ ಮತ್ತು ದೀರ್ಘಾಯಸ್ಸಿನ ಸಂಕೇತವೆಂಬಂತೆ ಕಂಡುಬಂದಿದೆ. ಅಮರತ್ವದ ಹತ್ತು ಸಸ್ಯಗಳು ಮತ್ತು ಪ್ರಾಣಿಗಳಲ್ಲಿ ಇದು ಕೂಡಾ ಒಂದಾಗಿದೆ. ಆದ್ದರಿಂದ ಪೀಚ್ ಅನೇಕ ಮಿನ್ಹವ(ಜನಪದ ಚಿತ್ರಕಲೆಗಳಲ್ಲಿ) ಗಳಲ್ಲಿ ಕಂಡುಬಂದಿದೆ. ಪೀಚ್ ಮತ್ತು ಪೀಚ್ ಮರಗಳು ಆತ್ಮಗಳನ್ನು ಬೆನ್ನಟ್ಟಿ ಹೋಗುತ್ತವೆ ಎಂದು ನಂಬಲಾಗಿದ್ದ ಕಾರಣ ಜೆಸಾ (ಪೂರ್ವಿಕರಿಗೆ ಗೌರವ) ಆಚರಣೆಯಲ್ಲಿ ಮೇಜಿನ ಮೇಲೆ ಇತರ ಹಣ್ಣುಗಳಂತೆ ಅವುಗಳನ್ನು ಇಡುತ್ತಿರಲಿಲ್ಲ.[೧೩][೧೪]

1789 ರ ವಸಂತ ಕಾಲದಲ್ಲಿ ನ್ಯಾಗೊಕ್ ಹಾಯ್ ಗೆ ದಂಡಯಾತ್ರೆ ಮಾಡಿ, ಚೀನಾದಕ್ವಿಗ್ ರಾಜವಂಶದ ಆಕ್ರಮಣಕಾರರ ಮೇಲೆ ಅದ್ಭುತವಾದ ವಿಜಯವನ್ನು ಸಾಧಿಸಿದ ನಂತರ,ಕ್ವಾಂಗ್ ಟ್ರುಂಗ್ ರಾಜ ಅವನ ದೂತನಿಗೆ ಪು ಕ್ಸಾನ್ ಕೋಟೆಗೆ (ಹ್ಯೂ ಇಂದಿನದಿನಗಳಲ್ಲಿ) ನಾಗಾಲೋಟದಲ್ಲಿ ತೆರಳಿ ರಾಣಿ ನೊಕ್ ಹ್ಯಾನ್‌ಳಿಗೆ ಹೂವಿರುವ ಪೀಚ್ ರೆಂಬೆಯನ್ನು ಕೊಡುವಂತೆ ಆಜ್ಞೆಮಾಡಿದನು ಎಂದು ವಿಯೆಟ್ನಾಂನವರ ಪೌರಾಣಿಕ ಇತಿಹಾಸದಲ್ಲಿ ತಿಳಿಸಲಾಗಿದೆ. ಇದು ಮೊದಲನೆಯ ಚಂದ್ರಮಾಸದ ಐದನೆಯ ದಿನದಂದು ನಡೆಯುತ್ತದೆ. ಅಂದರೆ ಯುದ್ಧ ಮುಗಿಯಬಹುದು ಎಂದು ಊಹಿಸಲಾದ ಎರಡು ದಿನಗಳ ಮೊದಲು ನಡೆಯುತ್ತದೆ. ಉತ್ತರ ವಿಯೆಟ್ನಾಂ ದಿಂದ ಮಧ್ಯ ವಿಯೆಟ್ನಾಂಗೆ ಕಳುಹಿಸಲಾದ ಪೀಚ್ ಹೂಗಳ ರೆಂಬೆ ರಾಜನಿಂದ ಅವನ ಪತ್ನಿಗೆ ಕಳುಹಿಸಲಾದ ಕೇವಲ ವಿಜಯದ ಸಂದೇಶ ಮಾತ್ರವಾಗಿರದೆ ಎಲ್ಲಾ ವಿಯೆಟ್ನಾಂ ಪ್ರಜೆಗಳಿಗೆ ಮುಂಬಲಿರುವ ಶಾಂತಿಯ ಮತ್ತು ಸಂತೋಷದ ಚಿಲುಮೆಯ ಸಂದೇಶವಾಗಿದೆ. ಇದರ ಜೊತೆಯಲ್ಲಿ , ನ್ಯಾಟ್‌ಟ್ಯಾನ್‌ನ ಸ್ಥಳವು ರಾಜನಿಗೆ ಉಚಿತವಾಗಿ ಪೀಚ್ ಹೂಗಳ ಕೊಂಬೆಯನ್ನು ಕೊಟ್ಟಾಗಿನಿಂದ ಇದು ಅವನ ರಾಜವಂಶದ ಸ್ವಾಮಿನಿಷ್ಠ ಉದ್ಯಾನವಾಯಿತು.

ಕಿಯು ಕಥೆಯಲ್ಲಿ ಕಿಮ್ಟ್ರಾಂಗ್ ಮತ್ತು ತುಯ್ ಕಿಯು ಪ್ರೇಮದಲ್ಲಿ ಸಿಲುಕಿದಾಗ, ಪೀಚ್ ಮರವು ಕೂಡ ಆ ಸಂದರ್ಭದಲ್ಲಿ ವರ್ಣಿತವಾಗಿದೆ. ಹಾಗೂ ವಿಯೆಟ್ನಾಂ ನಲ್ಲಿ ಅರಳುತ್ತಿರುವ ಪೀಚ್ ಹೂ ಮುಂಬರಲಿರುವ ವಸಂತಕಾಲದ ಸಂಕೇತವಾಗಿದೆ. ಅಂತಿಮವಾಗಿ, ಪೀಚ್ ಬೋನ್ ಸೈ ಮರಗಳನ್ನು ಉತ್ತರ ವಿಯೆಟ್ನಾಂನಲ್ಲಿ ವಿಯೆಟ್ನಾಂ ಜನರ ಹೊಸವರ್ಷದ (ಟೆಟ್)ಸಂದರ್ಭದಲ್ಲಿ ಅಲಂಕಾರಕ್ಕೆ ಬಳಸಲಾಗುತ್ತದೆ.

ಪೋಷಣೆ ಮತ್ತು ಆರೋಗ್ಯ

ಮಧ್ಯಮ ಗಾತ್ರದ ಪೀಚ್ (75 ಗ್ರಾಂ), 30 ಕ್ಯಾಲರಿ, 7 ಗ್ರಾಂ ಕಾರ್ಬೊಹೈಡ್ರೇಟ್ (6 ಗ್ರಾಂ ಸಕ್ಕರೆಗಳು ಮತ್ತು 1 ಗ್ರಾಂ ಫೈಬರ್) 1 ಗ್ರಾಂನಷ್ಟು ಪ್ರೋಟೀನ್ , 140 ಮಿಲಿಗ್ರಾಂ ಪೊಟ್ಯಾಸಿಯಂ, ಹಾಗು ವಿಟಮಿನ್ C ಯಲ್ಲಿ ಶೇಕಡ 8% ರಷ್ಟು ದಿನ ನಿತ್ಯದ ಮೌಲ್ಯವನ್ನು(DV) ಹೊಂದಿರುತ್ತದೆ.[೧೫]

ಗುಲಾಬಿ ವಂಶಕ್ಕೆ ಸೇರಿದ ಇತರ ಸಸ್ಯಗಳಂತೆ ಪೀಚ್ ಬೀಜಗಳು ಅಮಿಗ್ಡಲಿನ್ ( ಗಮನಿಸಿ, ಉಪಕುಲ ಹೆಸರು:ಅಮಿಗ್ಡಲುಸ್ ) ಒಳಗೊಂಡಂತೆ ಸೈನೊಗೆನಿಕ್ ಗ್ಲಿಕೊಸೈಡ್ಸ್ ಅನ್ನು ಹೊಂದಿರುತ್ತದೆ. ಈ ವಸ್ತುಗಳು ಸಕ್ಕರೆಯ ಸಣ್ಣಕಣವಾಗಿ ಮತ್ತು ಹೈಡ್ರೋಜನ್ ಸೈನೈಡ್ ಅನಿಲವಾಗಿ ವಿಘಟಿತಗೊಳ್ಳುವ ಸಾಮರ್ಥ್ಯ ಹೊಂದಿದೆ. ಪೀಚ್ ಬೀಜಗಳು ಗುಲಾಬಿ ಜಾತಿಯಲ್ಲಿರುವ ಇತರ ಬೀಜಗಳಿಗಿಂತ ಅತ್ಯಂತ ವಿಷಯುಕ್ತ ಬೀಜಗಳಲ್ಲ. ಅಂತಹ ಸಂದೇಹಾಸ್ಪದ ಗೌರವ ಕಹಿ ಬಾದಾಮಿಗೆ ಸಲ್ಲುತ್ತದೆ. ಯಾವುದೇ ಮೂಲದಿಂದ ತೆಗೆದುಕೊಳ್ಳಲಾದ ಈ ರಾಸಾಯನಿಕಗಳ ದೊಡ್ಡ ಪ್ರಮಾಣ ಮಾನವನ ದೇಹಕ್ಕೆ ಅಪಾಯಕಾರಿಯಾಗಿದೆ.

ಪೀಚ್ ಅಲರ್ಜಿ ಅಥವಾ ಅಸಹಿಷ್ಣುತೆಯು ಪೀಚ್ ಮತ್ತು ಅದಕ್ಕೆ ಸಂಬಂಧಿಸಿರುವ ಇತರ ಹಣ್ಣುಗಳಲ್ಲಿ (ಬಾದಾಮಿಗಳು) ಒಳಗೊಂಡಿರುವ ಪ್ರೊಟೀನ್‌ಗಳಿಗೆ ಅತಿಸೂಕ್ಷ್ಮ ಪ್ರತಿಕ್ರಿಯೆಯ ಸಾಮಾನ್ಯ ಸ್ವರೂಪವಾಗಿದೆ. ರೋಗ ಲಕ್ಷಣದ ಪ್ರಮಾಣ ಸ್ಥಳೀಯ ರೋಗಲಕ್ಷಣಗಳಿಂದ (ಉದಾಹರಣೆಗೆ ಓರಲ್ ಅಲರ್ಜಿ ಸಿಂಡ್ರೋಮ್(ಆಹಾರದ ಅಲರ್ಜಿ ಲಕ್ಷಣ), ಕಾನ್ ಟ್ಯಾಕ್ಟ್ ಅರ್ಟಿಕೇರಿಯ(ಚರ್ಮದ ಅಲರ್ಜಿ))ಹಿಡಿದು, ಆನಫಿಲ್ಯಾಕ್ಸಿಸ್(ಅತೀ ಸಂವೇದನಶೀಲತೆ) (ಉದಾಹರಣೆಗೆ ಅರ್ಟಿಕೆರಿಯ(ತುರುಚಿ ದದ್ದು), ಆಂಜಿಯೊಡೆಮ, ಗ್ಯಾಸ್ಟ್ರೋ ಇನ್‌ಟೆನ್‌ಸ್ಟಿನಲ್ ಮತ್ತು ರೆಸ್ಪಿರೇಟರಿ ಸಿಂಪ್ಟಮ್ಸ್)ನನ್ನು ಒಳಗೊಂಡಂತೆ ಇಡೀ ದೇಹದ ರೋಗ ಲಕ್ಷಣದವರೆಗೆ ಇರಬಹುದು.[೧೬] ಪ್ರತಿಕೂಲ ಪ್ರತಿಪರಿಣಾಮಗಳು ಹಣ್ಣಿನ "ತಾಜಾತನಕ್ಕೆ" ಸಂಬಂಧಿಸಿರುತ್ತವೆ: ಸಿಪ್ಪೆ ಸುಲಿದ ಅಥವಾ ಜಾಡಿಯಲ್ಲಿ ಹಾಕಿಟ್ಟ ಹಣ್ಣುಗಳ ಪ್ರತಿಕೂಲ ಪರಿಣಾಮಗಳನ್ನು ಸಹಿಸಬಹುದು.

ಚಿತ್ರ ಸಂಪುಟ

ಆಕರಗಳು

ಬಾಹ್ಯ ಕೊಂಡಿಗಳು