ಬಂಗಾಳ ಕೊಲ್ಲಿ ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ


ಬಹು-ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳ ಕೊಲ್ಲಿ ಉಪಕ್ರಮ (ಬಿಮ್ಸ್ಟೆಕ್ BIMSTEC) ಏಳು ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ಅಂತರರಾಷ್ಟ್ರೀಯ ಸಂಘಟನೆಯಾಗಿದ್ದು,1.73 ಬಿಲಿಯನ್ ಜನರಿಗೆ ವಸತಿ ಕಲ್ಪಿಸಿದೆ ಮತ್ತು 5.2 ಟ್ರಿಲಿಯನ್ ಯುಎಸ್ ಡಾಲರ್ ಒಟ್ಟು ರಾಷ್ಟ್ರೀಯ ಉತ್ಪನ್ನ (GDP)ಯನ್ನು(2023) ಹೊಂದಿದೆ.[೬][೭] ಬಂಗಾಳ ಕೊಲ್ಲಿಯನ್ನು ಅವಲಂಬಿಸಿರುವ ದೇಶಗಳಾದ ಬಾಂಗ್ಲಾದೇಶ, ಭೂತಾನ್, ಭಾರತ, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಬಿಮ್ಸ್ಟೆಕ್ ಸದಸ್ಯ ರಾಷ್ಟ್ರಗಳಾಗಿವೆ.[೮]

Bay of Bengal Initiative for Multi-Sectoral Technical and Economic Cooperation
BIMSTEC
of BIMSTEC
SecretariatDhaka, Bangladesh[೧]
Official languageEnglish
Membership
Leaders
• Chairmanship
 ಥೈಲ್ಯಾಂಡ್ (since March 2022)[೨]
• Secretary General
Shri Indra Mani Pandey
 ಭಾರತ (since 2023)[೩]
Establishment6 ಜೂನ್ 1997; 9817 ದಿನ ಗಳ ಹಿಂದೆ (1997-೦೬-06)
Area
• 
4,876,941 km2 (1,882,997 sq mi) (7th)
Population
• 2020 estimate
1,723,388,648[೪]
• Density
353.37/km2 (915.2/sq mi)
GDP (PPP)estimate
• Total
US$18.582 trillion[೫] (3rd)
GDP (nominal)2023 estimate
• Total
$5.225 trillion[೫] (4th)

ಈ ದೇಶಗಳು ನಡುವೆ ಸಹಕಾರದ ಹದಿನಾಲ್ಕು ಆದ್ಯತೆಯ ವಲಯಗಳನ್ನು ಗುರುತಿಸಲಾಗಿದೆ ಮತ್ತು ಆ ವಲಯಗಳ ಮೇಲೆ ಕೇಂದ್ರೀಕರಿಸಲು ಹಲವಾರು ಬಿಮ್ಸ್ಟೆಕ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.[೬][೯] ಸಾರ್ಕ್ (SAARC) ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹೋಲುವ ಬಿಮ್ಸ್ಟೆಕ್ ಮುಕ್ತ ವ್ಯಾಪಾರ ಒಪ್ಪಂದವು ಮಾತುಕತೆ ಹಂತದಲ್ಲಿದೆ (ಸಿ. 2018).

ಈ ಸಂಘಟನೆಯ ನಾಯಕತ್ವವನ್ನು ಸದಸ್ಯ ದೇಶದ ಹೆಸರುಗಳ ವರ್ಣಮಾಲೆಯ ಸರದಿ ಕ್ರಮದಲ್ಲಿ ವಹಿಸಿಕೊಳ್ಳಲಾಗುತ್ತದೆ. ಇದರ ಶಾಶ್ವತ ಸಚಿವಾಲಯ(Secretariat)ವು ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿದೆ.