ಮದ್ಯದ ಗೀಳು

ಮದ್ಯದ ಗೀಳು ಅಥವಾ ಮದ್ಯಪಾನದ ವ್ಯಸನವೆಂದರೆ ಮದ್ಯದ ಮೇಲಿನ ಅವಲಂಬನೆ ,ಇದು ಹವ್ಯಾಸವನ್ನು ಚಟವಾಗಿಸುತ್ತದೆ;ಇದರಿಂದಾಗಿ ಮನುಷ್ಯ ತನ್ನ ನಿಯಂತ್ರಣ ಕಳೆದುಕೊಂಡು ಮದ್ಯಪಾನದಿಂದಾಗಿ ತನ್ನ ಆರೋಗ್ಯ,ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸಿಕೊಳ್ಳುತ್ತಾನೆ.ತನ್ನ ಬದುಕಿನ ಮೌಲ್ಯಗಳಿಗೂ ಆತ ಎರವಾಗುತ್ತಾನೆ. ಮಾದಕ ವಸ್ತುಗಳ ದುರಭ್ಯಾಸದಂತೆ ಮದ್ಯದ ಗೀಳನ್ನು ಸಹ ವೈದ್ಯಕೀಯವಾಗಿ ಗುಣಪಡಿಸಬಹುದಾದ ಕಾಯಿಲೆ[೧] ಯಾಗಿದೆ. ಸುಮಾರು 19 ಮತ್ತು 20ನೆಯ ಶತಮಾನದ ಆರಂಭದಲ್ಲಿ ಇದನ್ನು ಮದ್ಯದ ದುರ್ವ್ಯಸನ ಎಂದು ಕರೆಯಲಾಗುತಿತ್ತು.ಈಗ ಆಶಬ್ದವನ್ನು ಮದ್ಯದ ಗೀಳು ಅಥವಾ ಅಲ್ಕೊಹಾಲಿಸಮ್ [೨] ಆಕ್ರಮಿಸಿದೆ.

Alcoholism
Classification and external resources
"King Alcohol and his Prime Minister" circa 1820
ICD-9303
MedlinePlusalcoholism
MeSHD000437

ಮದ್ಯದ ಗೀಳು ಹೇಗೆ ಜೀವಶಾಸ್ತ್ರೀಯ ಮಟ್ಟದಲ್ಲಿ ಪಸರಿಸುತ್ತದೆ ಎನ್ನುವುದು ಅನಿಶ್ಚಿತವಾಗಿದೆ.ಆದರೆ ಅದಕ್ಕೆ ಕೆಲವು ಅಂಶಗಳನ್ನು ಗಮನಿಸಬಹುದಾಗಿದೆ.ಸಾಮಾಜಿಕ ಪರಿಸರ,[೩] ಒತ್ತಡ,ಮಾನಸಿಕ ಆರೋಗ್ಯ,ಅನುವಂಶೀಯ ಪ್ರವೃತ್ತಿಯ ಕಾರಣಗಳು,ವಯಸ್ಸು,ಜನಾಂಗೀಯತೆ ಮತ್ತು [೪][೫] ಲಿಂಗಭೇದವೂ ಇದಕ್ಕೆ ಕಾರಣವಾಗಬಹುದು. ದೀರ್ಘಕಾಲಿಕ ಮದ್ಯಪಾನವು ದೈಹಿಕ ಮೆದುಳಿನ ಕಾರ್ಯಗಳ ಬದಲಾವಣೆಗಳಿಗೆ ಒಳಪಡುತ್ತದೆ.ಉದಾಹರಣೆಗೆ ಸಹನೆ ಮತ್ತು ದೈಹಿಕ ಅವಲಂಬನೆ ಇದು ಮದ್ಯಪಾನ ತ್ಯಜಿಸುವ ಲಕ್ಷಣಗಳನ್ನು ತೋರಿಸಿ ಕುಡಿತವನ್ನು ಬಿಡಿಸುವ ಮಟ್ಟಕ್ಕೂ ಹೋಗಬಹುದು. ಹೀಗೆ ಕೆಲವೊಮ್ಮೆ ದೈಹಿಕ ಮೆದುಳಿನಲ್ಲಿನ ರಾಸಾಯನಿಕ ಬದಲಾವಣೆಗಳಿಂದಾಗಿ ಕುಡಿತ ಬಿಡಲಾಗದಷ್ಟು [೬] ಅಸಮರ್ಥವಾಗಬಹುದಾಗಿದೆ. ಮದ್ಯಪಾನವು ದೇಹದ ಪ್ರತಿಯೊಂದು ಅಂಗಕ್ಕೂ ಹಾನಿಯನ್ನುಂಟು ಮಾಡುತ್ತದೆ.ಏಕೆಂದರೆ ಇದರಲ್ಲಿನ ವಿಷಕಾರಿ ಅಂಶಗಳು ನರಮಂಡಲದ ಮೇಲೆ ಭೀಕರ ಪರಿಣಾಮ [೭] ಬೀರುತ್ತದೆ. ಮದ್ಯದ ಗೀಳು ಸಾಮಾಜಿಕವಾಗಿ ಬದುಕಿನಲ್ಲಿ ತಮ್ಮ ಸುತ್ತಲಿನ ಜನರ ಮಧ್ಯೆ ದುಷ್ಪರಿಣಾಮಕ್ಕೆ ದಾರಿ [೮][೯] ಮಾಡಿಕೊಡುತ್ತದೆ.

ಮದ್ಯದ ಗೀಳು ಕುಡುಕರನ್ನು ಸಹನೆಯ ವರೆಗೆ ಹಚ್ಚುವದರ ಜೊತೆಗೆ ಕುಡಿತವನ್ನು ಬಿಡಲಾಗದಷ್ಟು ದುರ್ಬಲಗೊಳಿಸುವ ಸಾಧ್ಯತೆ ಇದೆ.ಇದರಿಂದಾಗಿ ಮದ್ಯವ್ಯಸನಿಯು ತನ್ನ ಆರೋಗ್ಯವನ್ನು ಹಾಳು ಮಾಡಿಕೊಂಡು ಕುಡುಕ [೧೦] ಎನಿಸಿಕೊಳ್ಳುತ್ತಾನೆ. ಮದ್ಯವ್ಯಸನಿಗಳ ವಿವಿಧ ಪ್ರಕಾರಗಳನ್ನು ಪತ್ತೆ ಮಾಡಲು ಪ್ರಶ್ನಾವಳಿಯ ಪರೀಕ್ಷೆಯೊಂದು ಚಾಲ್ತಿಯಲ್ಲಿದೆ,ಇಲ್ಲಿ ಮ್ಮದ್ಯದ ಗೀಳು ಇರುವವರನ್ನು ಸಹ ಈ ಪಟ್ಟಿಗೆ [೧೧] ಸೇರಿಸಲಾಗುತ್ತದೆ. ಮದ್ಯದಲ್ಲಿರುವ ವಿಷವಸ್ತುವನ್ನು ತೆಗೆದು ಹಾಕುವ ಮೂಲಕ ವ್ಯಸನಿಗಳಿಗೆ ಮದ್ಯದ ಗೀಳನ್ನು ಬಿಡಿಸಬಹುದಾಗಿದೆ,ಇದಕ್ಕೆ ಪೂರಕವಾಗಿ ಮಾದಕ ವ್ಯಸನಿಗಳ ಔಷಧಿಯ ಬಳಕೆಯನ್ನು ಇಲ್ಲಿ ಮಾಡಬಹುದಾಗಿದೆ.ಹೀಗೆ ಕುಡಿತದ ಚಟಕ್ಕೆ ಅಂಟಿಕೊಳ್ಳುವುದನ್ನು ಕಡಿಮೆ ಮಾಡುವ ವಿಧಾನಗಳನ್ನು [೧೨] ಅನುಸರಿಸಬೇಕಾಗಿದೆ. ವೈದ್ಯಕೀಯ ಔಷಧೋಪಚಾರದ ನಂತರದ ಕಾಳಜಿ,ಅಂದರೆ ಸಮೂಹ ಚಿಕಿತ್ಸೆ ಅಥವಾ ಸ್ವಸಹಾಯ ಗುಂಪುಗಳು ಇತ್ಯಾದಿ ಇದರ ಬಗ್ಗೆ ಕುಲಂಕುಷವಾಗಿ ಗಮನಿಸಿ ಸರಳ ಉಪಾಯಗಳನ್ನು [೧೩][೧೪] ಅನುಸರಿಸುತ್ತವೆ. ಮದ್ಯವ್ಯಸನಿಗಳು ಸಾಮಾನ್ಯವಾಗಿ ಬೇರೆ ಮಾದಕ ವಸ್ತುಗಳನ್ನು ಸೇವಿಸಲು ಸಹ ಆರಂಭಿಸಬಹುದಾಗಿದೆ.ಉದಾಹರಣೆಗಾಗಿ ಬೆಂಜೊಡೈಜೆಪೈನ್ಸ್ ಅಂದರೆ ನರನಾಡಿಗಳನ್ನು ಸಡಿಲುಗೊಳಿಸುವ ಮತ್ತು ಅದು ಚಟವಾಗಿ ಮಾರ್ಪಡುವ ಅಗತ್ಯವೂ ಇದೆ.ಇಂತಹ ಸಂದರ್ಭಗಳಲ್ಲಿ ಹೆಚ್ಚಿನ ಚಿಕಿತ್ಸೆ ಹಾಗು ಔಷಧೋಪಚಾರದ [೧೫] ಅಗತ್ಯವಿದೆ. ಮಹಿಳೆ ಕೂಡಾ ಮದ್ಯ ವ್ಯಸನದ ಪಾತಾಳಕ್ಕೆ ಬಿದ್ದರೆ ಅವಳ ಅಂದರೆ ಹೆಣ್ಣಿಗಿರುವ ಸೂಕ್ಷ್ಮತೆ ಭೌತಿಕವಾಗಿ ಮತ್ತು ಮಾನಸಿಕ ಹಾಗು ಮೆದುಳಿಗೆ ಅಪಾಯಕಾರಿಯಾಗುವ ಸಾಧ್ಯತೆ ಇದೆ.ಸಾಮಾಜಿಕವಾಗಿ ಕುಡುಕವ್ಯಕ್ತಿಯೊಂದಿಗಿನ ಸಹಸವಾಸವೂ ಒಂದು ಕಳಂಕವಾಗಿ [೧೬][೧೭] ಮಾರ್ಪಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವಾದ್ಯಾಂತ ಸುಮಾರು 140ದಶಲಕ್ಷ ಮದ್ಯದ ಗೀಳು ಇರುವವರು [೧೮][೧೯] ಇದ್ದಾರೆ.

ವರ್ಗೀಕರಣ

ವೈದ್ಯಕೀಯ ವ್ಯಾಖ್ಯೆಗಳು

ಮದ್ಯದ ಗೀಳು ಮತ್ತು ಮಾದಕ ದೃವ್ಯಗಳ ಅವಲಂಬಿತರ ಕುರಿತ ರಾಷ್ಟ್ರೀಯ ಸಮಿತಿ ಹಾಗುಅಮೆರಿಕನ್ ಸೊಸೈಟಿ ಆಫ್ ಅಡಿಕ್ಷನ್ ಮೆಡಿಸಿನ್ಇವುಗಳ ಪ್ರಕಾರ ಮದ್ಯದ ಗೀಳು ಅಥವಾ ದುರಭ್ಯಾಸವು "ಮೂಲಭೂತವಾಗಿ ಕುಡಿತದ ನಿಯಂತ್ರಣ ಮಾಡಲಾಗದ ಸುದೀರ್ಘ ಕಾಲದ ಪ್ರಾಥಮಿಕ ಕಾಯಿಲೆ ಎನ್ನಬಹುದು,ಇದರ ಜೊತೆಗೆ ಇತರ ಮತ್ತಿನ ಔಷಧಿಗಳು ಮತ್ತು ಕುಡಿತದ ವ್ಯಸನವು ವಿಚಾರ ಲಹರಿಯನ್ನು ಕೆಡಿಸಿ ಹಲವಾರು ದುಷ್ಪರಿಣಾಮಗಳಿಗೆ [೨೦] ಕಾರಣವಾಗುತ್ತದೆ." ಇದರ DSM-IV(ದಿ ಡೊಮಿನಂಟ್ ಡೈಗ್ನೊಸ್ಟಿಕ್ ಮ್ಯಾನುವಲ್ ಇನ್ ಸೈಕಿಯಾಟ್ರಿ ಅಂಡ್ ಸೈಕೊಲಾಜಿ)ಪ್ರಕಾರ ಮದ್ಯದ ಗೀಳು ಪದೇ ಪದೇ ಕುಡಿತ ಹಾಗು ದುಷ್ಪರಿಣಾಮಗಳ ಲೆಕ್ಕಿಸದೆ ಕುಡಿತದ ಹಾನಿಗೊಳಗುವರೇ [೨೧] ಹೆಚ್ಚು. ಮುಂದುವರೆದು ಇದರ ವ್ಯಾಖ್ಯಾನಗಳನ್ನು ಗಮನಿಸಿದರೆಮದ್ಯದ ಮೇಲಿನ ಅವಲಂಬನೆಯು ಮದ್ಯದಿಂದಾಗುವ ಹಾನಿ ಯನ್ನು ವಿವರಿಸುತ್ತವೆ.ಇದು ಸಹಿಷ್ಣುತೆ ಹಾಗು ಕುಡಿತಕ್ಕೆ ಎಳಸುವ ಅನಿಯಂತ್ರಿತ ಚಟವಾಗಿ [೨೧] ಪರಿಣಮಿಸುತ್ತದೆ. (DSM ಚಿಕಿತ್ಸೆ-ತಪಾಸಣೆ ಕೆಳಗೆ ನೋಡಿ.) [೨೧] ಮನೋಶಾಸ್ತ್ರ ಮತ್ತು ಮಾನಸಿಕತೆಗಳ ಲೆಕ್ಕಾಚಾರದಲ್ಲಿ ಮದ್ಯದ ಮೇಲಿನ ಅವಲಂಬನೆ ಯು ದುಶ್ಚಟಕ್ಕೆ ಉತ್ತಮ ಪದವಾಗಿ [೨೧] ಬಳಕೆಯಾಗುತ್ತದೆ.

ಶಾಬ್ದಿಕ ನಿರ್ದಿಷ್ಟಾರ್ಥ[ಪರಿಭಾಷಾ ಶಾಸ್ತ್ರ]

ಮದ್ಯಪಾನಕ್ಕೆ ಕುಡುಕರ ಸಂಬಂಧವನ್ನು ಹಲವು ವಿಧಗಳಲ್ಲಿ ಅಳವಡಿಸಿ ಅದಕ್ಕೆ ಸೂಕ್ತ ಪದ ಬಳಕೆ ಮಾಡಲಾಗುತ್ತದೆ. ಉಪಯೋಗ , ದುರುಪಯೋಗ , ಅತ್ಯಧಿಕ ಉಪಯೋಗ , ಹಾನಿಕಾರಕ , ವ್ಯಸನಿ , ಮತ್ತು ಅವಲಂಬನೆಗಳು ಇತ್ಯಾದಿ ಶಬ್ದಗಳು ಕುಡಿತದ ಚಟಗಳನ್ನು ವ್ಯಾಖ್ಯಾನಿಸುವ ವಿವಿಧ ಪದಗಳಾಗಿವೆ.ಆದರೆ ಈ ಎಲ್ಲಾ ಪದ ಪ್ರಯೋಗಗಳು ಆಯಾ ಸಂದರ್ಭವನ್ನು ಅನುಸರಿಸಿ ಅಲ್ಲಲ್ಲಿ ಬಳಸಬೇಕಾಗುತ್ತದೆ.

ಉಪಯೋಗವು ಸಾಮಾನ್ಯ ರೀತಿಯಲ್ಲಿ ಆ ವಸ್ತುವಿನ ಬಳಕೆ ಎಂದು ಸರಳರೆತಿಯಲ್ಲಿ ಹೇಳಬಹುದು. ಯಾವುದೇ ವ್ಯಕ್ತಿಯು ಒಂದು ಪಾನೀಯದೊಂದಿಗೆ ಮದ್ಯಸಾರವನ್ನು ಬಳಸಿದರೆ ಆತ ಮದ್ಯವನ್ನು ಉಪಯೋಗಿಸಿದ ನೆಂದೇ ಅರ್ಥ. ದುರುಪಯೋಗ , ಸಮಸ್ಯಾತ್ಮಕ ಉಪಯೋಗ , ಹಾನಿ , ಮತ್ತು ಅತಿಯಾದ ಉಪಯೋಗ ಇವುಗಳು ಮದ್ಯಸಾರವನ್ನು ಸೂಕ್ತ ರೀತಿಯಲ್ಲಿ ಬಳಸಿಲ್ಲವೆಂಬುದನ್ನು ತೋರಿಸುತ್ತವೆ.ಇವು ಶಾರೀರಿಕ,ಸಾಮಾಜಿಕ ಅಥವಾ ನೈತಿಕವಾಗಿ ಕುಡಿಯ್ವವನನ್ನು ಅಧ:ಪತನಕ್ಕೆ ತಳ್ಳುತ್ತವೆ.[೨೨]

}ಸಾಮಾನ್ಯ ಉಪಯೋಗವೆಂದರೆ ದಿ ಡೈಟ್ರಿ ಗೈಡ್ ಲೈನ್ಸ್ ಫಾರ್ ಅಮೆರಿಕನ್ಸ್ ಪ್ರಕಾರ ಎರಡು ಮದ್ಯವನ್ನು ಒಳಗೊಂಡ ಪಾನೀಯಗಳು ಪುರುಷರಿಗೆ ಹಾಗು ಒಂದು ಮಹಿಳೆಯರಿಗೆ ಎಂದು ಅಂದಾಜು [೨೩] ಮಾಡಿದೆ.

ರೋಗ ಸೂಚನೆ ಹಾಗೂ ಲಕ್ಷಣಗಳು

ಮದ್ಯದ ಸುದೀರ್ಘಕಾಲದ ಉಪಯೋಗದಿಂದ ಉಂಟಾಗುವ ಪರಿಣಾಮಗಳು

ಎಥನಾಲ್ ನ ಸುದೀರ್ಘ ಬಳಕೆಯಿಂದಾಗುವ ಪರಿಣಾಮಗಳು.ಸಾಂಪ್ರದಾಯಿಕವಾಗಿ ಇದು ಗರ್ಭಿಣಿಯರಲ್ಲಿ ಹೆಚ್ಚಿನ ಅಪಾಯಾಕಾರಿ ಲಕ್ಷಣಗಳನ್ನು ತೋರಿಸುತ್ತದೆ.

ಇದರ ಪ್ರಾಥಮಿಕವಾದ ಪರಿಣಾಮಗಳೆಂದರೆ ಇದು ಮದ್ಯಪಾನ ಮಾಡುವವನನ್ನು ಇನ್ನಷ್ಟು ಕುಡಿಯುವಂತೆ ಪ್ರಚೋದಿಸುತ್ತದೆ.ಅಕಾಲಿಕ ಹಾಗು ಅನಿಯಂತಿತ ಕುಡಿತವು ದೈಹಿಕ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಎರಡನೆಯ ಪರಿಣಾಮವೆಂದರೆ ಕುಡಿತವನು ನಿಲ್ಲಿಸಲು ಅಸಮರ್ಥನಾಗುವುದು.ಹೀಗೆ ಮದ್ಯವ್ಯಸನವು ನಾನಾ ವಿಧಗಳಲ್ಲಿ ತನ್ನ ಹಿಡಿತ ಸಾಧಿಸುತ್ತದೆ. ಮದ್ಯದ ಗೀಳು ಸಾಮಾಜಿಕವಾಗಿ ವ್ಯಕ್ತಿಯನ್ನಷ್ಟೇ ಅಲ್ಲ ಆತನ ಕುಟುಂಬಕ್ಕೂ ಕೆಟ್ಟ ಹೆಸರು ತರುವ ಸಾಧ್ಯತೆ [೨೪] ಇದೆ. ಮದ್ಯದ ಗೀಳಿನಿಂದಾಗಿ ಮನುಷ್ಯ ತನ್ನ ಸಹನೆ,ದೈಹಿಕ ಅವಲಂಬನೆ,ಹಾಗು ಮದ್ಯವನ್ನು ಬಿಡಲಾಗದ ದುಸ್ಥಿತಿಯನ್ನು ತಂದುಕೊಳ್ಳುತ್ತಾನೆ. ಹೀಗಾಗಿ ಕುಡಿತವು ಸಾಮಾನ್ಯ ಪ್ರವೃತ್ತಿ ಸಹನೆಯನ್ನು ಕಳೆದುಕೊಳ್ಳುವುದರ ಜೊತೆಗೆ ಅವಲಂಬನೆಯನ್ನು ಹೆಚ್ಚಿಸುತ್ತದೆ.ಇದರಿಂದ ಕುಡಿತದ ದುರಭ್ಯಾಸವು ಹತೋಟಿ ತಪ್ಪಿ [೬] ಹೋಗುತ್ತದೆ. ಮದ್ಯದ ಗೀಳಿನಿಂದಾಗಿ ಮನುಷ್ಯ ತನ್ನ ವೈಯಕ್ತಿಕ ನೆಲೆಯಲ್ಲಿ ತನ್ನ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾನಸಿಕ ಆರೋಗ್ಯವನ್ನು ಹಾಳು [೨೫] ಮಾಡಿಕೊಳ್ಳುತ್ತಾನೆ. ಒಂದು ಅಂದಾಜಿನ ಪ್ರಕಾರ ಪ್ರತಿಶತ 18ರಷ್ಟು ಮದ್ಯವ್ಯಸನಿಗಳು ಆತ್ಮಹತ್ಯೆಗೆ [೨೬] ಶರಣಾಗುತ್ತಾರೆ. ಸಂಶೋಧಕರ ಪ್ರಕಾರ ಪ್ರತಿಶತ 50ಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಮದ್ಯವ್ಯಸನಿಗಳು ಇಲ್ಲವೇಮಾದಕ ವಸ್ತುಗಳ ಅವಲಂಬಿತರ ಸಾಲಿನಲ್ಲಿವೆ.[೨೭] ವಯಸ್ಕರಲ್ಲಿ ಮದ್ಯಪಾನದಿಂದ ಇಲ್ಲವೇ ಮಾದಕ ದೃವ್ಯಗಳ ದುರುಪಯೋಗದ ಕಾರಣಗಳು ಮಹತ್ವದ ಪಾತ್ರ ವಹಿಸುತ್ತವೆ,ಇದರಿಂದಾಗಿ 70ರಷ್ಟು ಆತ್ಮಹತ್ಯೆ ಪ್ರಕರಣಗಳು [೨೭] ವರದಿಯಾಗುತ್ತವೆ.

ಶಾರೀರಿಕ ಆರೋಗ್ಯದ ಮೇಲಿನ ಪರಿಣಾಮಗಳು

ಮದ್ಯಪಾನದಿಂದ ಶರೀರದ ಆರೋಗ್ಯದ ಮೇಲೆ ಭೀಕರ ಪರಿಣಾಮ ಉಂಟಾಗುತದೆ.ಅದರಲ್ಲೂ ಯಕೃತ್ತಿನ ತೀವ್ರ ಕಾಯಿಲೆಯಿಂದಾಗಿ ಜಠರಕ್ಕೆ ಹಾನಿ,ಮೇದೋಜೀರಕದ ಉರಿಯೂತ,ಮೂರ್ಛೆ ರೋಗ,ನರಗಳ ದೌರ್ಬಲ್ಯ,ಮದ್ಯಸಾರದಿಂದಾಗುವ ಸ್ಮೃತಿಭ್ರಮಣ,ಹೃದಯ ರೋಗ,ಅಪೌಷ್ಟಿಕತೆ,ಲೈಂಗಿಕ ಶಕ್ತಿ ಕುಸಿತ ಇವು ಸಾಮಾನ್ಯವಾಗಿ ಮದ್ಯವ್ಯಸನಿಗಳನ್ನು ಕಾಡುವ ಕಾಯಿಲೆಗಳಾಗಿವೆಯಲ್ಲದೇ ಕೆಲವು ಸಂದರ್ಭಗಳಲ್ಲಿ ಮದ್ಯದ ಗೀಳು ಇರುವವರು ಸಾವೀಗಿಡಾಗಬಹುದು. ಭೀಕರ ಸ್ಮರಣ ಗ್ರಹಣ ಶಕ್ತಿ ಹಾಳಾಗುವುದೇನು ಮದ್ಯವ್ಯಸನಿಗಳಲ್ಲಿ ಅಪರೂಪವೇನಲ್ಲ. ಒಂದು ಅಂದಾಜಿನ ಪ್ರಕಾರ ಶೇಕಡಾ10ರಷ್ಟು ಬುದ್ದಿ ಮಾಂದ್ಯ ಪ್ರಕರಣಗಳು ಮದ್ಯವ್ಯಸನಿಗಳಿಗೇ ಸಂಬಂಧಿಸಿದ ಮಾನಸಿಕ ರೋಗ ಕೂಡಾ ಮದ್ಯಪಾನಿಗಳಿಗೆ ಇದು ಎರಡನೆಯ ತರಹದ [೨೮] ಕಾಯಿಲೆಯಾಗಿದೆ. ಶಾರೀರಿಕ ಇನ್ನಿತರ ಪರಿಣಾಮಗಳೆಂದರೆ ಅಧಿಕಗೊಳ್ಳುವ ಹೃದಯದ ಕವಾಟಿನ ಕಾಯಿಲೆ,ಅಜೀರ್ಣತೆ,ಮದ್ಯಪಾನದಿಂದ ಜಠರ ರೋಗ ಮತ್ತು ಕ್ಯಾನ್ಸರ್ ಗೆ ಕಾರಣವಾಗುವ ಸಾಧ್ಯತೆ ಇದೆ. ನಿರಂತರ ಮದ್ಯಸೇವನೆಯಿಂದ ಕೇಂದ್ರ ನರಮಂಡಲ ವ್ಯವಸ್ಥೆ ಮತ್ತು ನರಮಂಡಲದ ಇತರ ಚಟುವಟಿಕೆಗಳ ಭಾಗಗಳು ಹಾನಿಗೊಳಗಾಗುವ ಸಾಧ್ಯತೆ [೨೯][೩೦] ಇದೆ. ಮದ್ಯಪಾನಿಗಳ ಬಹುತೇಕ ಸಾವುಗಳು ಅವರ ಹೃದಯದ ಕವಾಟುಗಳ ತೊಂದರೆ ಮತ್ತು ದೌರ್ಬಲ್ಯದಿಂದ ಉಂಟಾಗುವ ಸಾಧ್ಯತೆಗಳೇ [೩೧] ಹೆಚ್ಚು.

ಮಾನಸಿಕ ಆರೋಗ್ಯದ ಪರಿಣಾಮಗಳು

ಸುದೀರ್ಘ ಕಾಲದ ಮದ್ಯಪಾನದ ದುರುಪಯೋಗವು ದೊಡ್ಡ ಪ್ರಮಾಣದ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಮದ್ಯದ ದುರುಪಯೋಗವು ಕೇವಲ ಶರೀರಕ್ಕಷ್ಟೆ ವಿಷಕಾರಿಯಲ್ಲ,ಅದು ಮೆದುಳಿನ ಕಾರ್ಯವನ್ನೂ ಕುಂಠಿತಗೊಳಿಸಿ ಬಹುಕಾಲದ ಮದ್ಯಪಾನವು ದೀರ್ಘಕಾಲಿಕ ಪರಿಣಾಮಗಳನ್ನು ಹೊತ್ತು [೩೨] ತರುತ್ತದೆ. ಮಾನಸಿಕ ಏರಿಳಿತಗಳು ಮದ್ಯಪಾನಿಗಳಲ್ಲಿ ಸಾಮಾನ್ಯ.ಉದಾಹರಣೆಗಾಗಿ ಆತಂಕ ಮತ್ತು ಒತ್ತಡ ಸಂಬಂಧಿತ ಅಸ್ತವ್ಯಸ್ತೆಗಳು ಮನೋರೋಗಕ್ಕೆ ಕಾರಣವಾಗುತ್ತದೆ.ಹೀಗಾಗಿ ತೀವ್ರತರವಾದ ಮನೋವಿಕಾರ ಉಂಟಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ಇಂತಹ ಮನೋರೋಗದ ಲಕ್ಷಣಗಳು ಆರಂಭಿಕವಾಗಿ ಮದ್ಯವನ್ನು ಬಿಟ್ಟಾಗ ಹೆಚ್ಚಾಗಿ ಕಂಡು ಬರಬಹುದು.ಆದರೆ ನಿಯಮಿತ ಅದರ ಮೇಲಿನ ಹಿಡಿತ ಒಮ್ಮೊಮ್ಮೆ ಆರೋಗ್ಯವನ್ನು ಸುಧಾರಣೆಯತ್ತ ಕೊಂಡೊಯ್ಯಬಹುದು ಇಲ್ಲವೇ ಸಂಪೂರ್ಣ ಮಾಯವಾಗಿ [೩೩] ಹೋಗಬಹುದು. ಮನೋವ್ಯಾಧಿ,ಗೊಂದಲಮಯ ಮನಸ್ಥಿತಿ,ಮೆದುಳಿನ ಜೀವಕೋಶದ ಲಕ್ಷಣಗಳು ಸತತ ಕುಡಿತದಿಂದ ಉದ್ಭವಿಸಬಹುದು,ಇದೇ ಸಂದರ್ಭದಲ್ಲಿ ಅತ್ಯಂತ ಛಿದ್ರ ಮನಸ್ಥಿತಿಗಳು ಸಹ ಮದ್ಯಪಾನದ ದುರುಪಯೋಗದಿಂದ [೩೪] ಸಂಭವಿಸಬಹುದು. ಅಧಿಕ ಮದ್ಯದ ಗೀಳಿನಿಂದ ಗಾಬರಿಗೊಳ್ಳುವ ಬೆಚ್ಚಿ ಬೀಳುವ ಅವ್ಯವಸ್ಥೆ ಶರೀರದಲ್ಲಿ ಉಂಟಾಗೋತ್ತದೆ.ದೀರ್ಘಕಾಲದ ವರೆಗೆ ಮದ್ಯವ್ಯಸನಿಗಳಿಗೆ ಮೆದಳಿನ ಕಾರ್ಯಚಟುವಟಿಕೆಗಳು ಕುಸಿತದ ಲಕ್ಷಣ ಕಾಣುತ್ತವೆ.ಭಾಗಶ: ಕುಡಿತ ತ್ಯಜಿಸಿದ ನಂತರ ಇಂತಹ ಲಕ್ಷಣಗಳು ಹೆಚ್ಚಾಗಿ [೩೫][೩೬] ಕಂಡುಬರಬಹುದಾಗಿದೆ.

ಬಹುಮುಖ್ಯವಾಗಿ ಮದ್ಯದ ಗೀಳಿನವರಿಗೆಪ್ರಮುಖವಾಗಿ ಖಿನ್ನತೆಯ ಪರಿಸ್ಥಿತಿ ಮತ್ತು ಮದ್ಯಪಾನದ ಅತಿ ಸೇವನೆಯು ಅವರ ಅರೋಗ್ಯದ ಕುಸಿತಕ್ಕೆ [೩೭][೩೮][೩೯] ಮೂಲವಾಗುತ್ತದೆ. ಇವುಗಳೊಂದಿಗೆ ಮನಸ್ಸಿನ ಭ್ರಾಂತಿ ಉಂಟಾಗುವುದು,ಖಿನ್ನತೆಯ ಸಂದರ್ಭದಲ್ಲಿ ಆತನ ಒತ್ತಡದ ಪ್ರಮಾಣವು ಆತನಿಗೆ ಒಂದು ರೀತಿಯ ಕ್ಷೀಣತೆಗೆ ಎಡೆ ಮಾಡುತ್ತದೆ.ಎರಡನೆಯದೆಂದರೆ ಅದರ ರಾಸಾಯನಿಕ ದುಷ್ಪ್ರಭಾವ ಅಥವಾ ವಿಷಕಾರಕ ಪರಿಣಾಮಗಳು ಅತ್ಯಧಿಕ ಮದ್ಯಪಾನಿಗಳಿಗೆ ಸಾಮಾನ್ಯ ಲೋಪವಾಗಿದೆ.ಹೀಗಾಗಿ ಮೊದಮೊದಲು ಇದು ಒಂದು ಸರಳ ಕಾಯಿಲೆಯಂತೆ ಕಂಡರೂ ಅದು ಮನುಷ್ಯನ ಶರೀರವನ್ನು ಅರೆಜೀವಕ್ಕೆ ತಂದು ನಿಲ್ಲಿಸುತ್ತದೆ. ಇನ್ನೂ ಹೆಚ್ಕಿನ ಮಾದಕ ಚಟಗಳಿಗೆ ಬಲಿಯಾದ ಮದ್ಯದ ಗೀಳಿನವರಿಗೆ ಅತಿ ಹೆಚ್ಚಾದ ಖಿನ್ನತೆಯ ಸಾಧ್ಯತೆ [೪೦] ಇರುತ್ತದೆ. ಅತಿಯಾದ ಕುಡಿತವು ಮಾನಸಿಕ ವಿಷಣ್ಣತೆಯನ್ನು ತರುವುದಲ್ಲದೇ ಕುಡಿತದ ದುರಭ್ಯಾಸವು "ಸ್ವತಂತ್ರ" ಎನ್ನುವ ಏಕೈಕ ಕಾಯಿಲೆಗಳನ್ನು ತರದೇ ಹಲವಾರು ಖಿನ್ನತೆಗಳ ಮೂಲವಾಗಿರುತ್ತದೆ.ಇದು ಎಲ್ಲಡೆ ಹಬ್ಬುವ ಮಾನಸಿಕ ವ್ಯಾಧಿಯಾಗಿರುತ್ತದೆ.ಇದನ್ನು ಅತಿಯಾದ "ಕುಡಿತದ-ದುಷ್ಪರಿಣಾಮದ ಕಾರಣ"[೪೧][೪೨][೪೩] ಎನ್ನಬಹುದು. ಅತಿಯಾಗಿ ಕುದಿಯುವವರು ಮತ್ತು ನಿರಂತರವಾಗಿ ಕುದಿಯುವವರಿಗೆ ಆತ್ಮಹತ್ಯೆಯ ಭಾವನೆಗಳ ತೀವ್ರತೆ ಹೆಚ್ಚ್ಕಾಗಿ ಕಾಣಬರುತ್ತದೆ. ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆಗಳು ಮತ್ತು ಸಾಮಾಜಿಕವಾಗಿ ಮದ್ಯದ ಗೀಳಿರುವವರನ್ನು ಕಡೆಗಣಿಸುವದರಿಂದ ಅವರಿಗೆ ಒಂಟಿತನ ಕಾದುವುದು.ಇಂತಹ ಸಾಮಾನ್ಯ ಪರಿಣಾಮಗಳಿಂದಾಗಿ ಅವರು ಅತ್ಮಹತ್ಯೆಗೆ ಸಹಜವಾಗಿ ಎಳಸುತ್ತಾರೆ. ವಯಸ್ಕರಾದ ಮದ್ಯವ್ಯಸನಿಗಳಲ್ಲಿ ಆತ್ಮಹತ್ಯೆ ಪ್ರಮಾಣವು ಗಣನೀಯಪ್ರಮಾಣದಲ್ಲಿದೆ.ಮದ್ಯದ ಅತಿಯಾದ ದುರುಪಯೋಗ ಅಥವಾ ಅದರ ಅತಿ ಸೇವನೆಯು ಅವರನ್ನು ಆತ್ಮಹತ್ಯೆಗೆ ಸಲೀಸಾಗಿ [೪೪] ಕರೆದೊಯ್ಯುತ್ತದೆ.

ಸಾಮಾಜಿಕ ಪರಿಣಾಮಗಳು

ಮದ್ಯದ ಗೀಳಿನಿಂದ ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.ಸುದೀರ್ಘಕಾಲದ ಮದ್ಯಪಾನವು ಮೆದುಳಿನಲ್ಲಿನ ಹಲವಾರು ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಆತನನ್ನು ದೌರ್ಬಲ್ಯದೆಡೆಗೆ ನೂಕುತ್ತದೆ.ಹೀಗೆ ವಿಷಕಾರಿಯಾದ ಅತಿ ಮದ್ಯಪಾನ ತನ್ನ ವಿಷವನ್ನು ಶರೀರವಲ್ಲದೇ ಸಾಮಾಜಿಕವಾದ ಖಿನ್ನತೆಯಲ್ಲೂ [೨೪][೨೮] ತೋರುತ್ತದೆ.[೪೫] ಮದ್ಯಪಾನದ ದುರುಪಯೋಗವು ಅಪರಾಧದೆಡೆಗೆ ಕೊಂಡೊಯ್ಯುವ ಸಾಧ್ಯತೆಗಳು ಹೆಚ್ಚು.ಉದಾಹರಣೆಗೆ ಮಕ್ಕಳ ಮೇಲಿನ ದೌರ್ಜನ್ಯ,ಮನೆಯಲ್ಲಿಕ್ರೌರ್ಯ,ಅತ್ಯಾಚಾರಗಳು,ಕಳ್ಳತನಗಳು ಮತ್ತು ಹಲ್ಲೆಗಳು ಸಾಮಾನ್ಯವಾಗಿ [೪೫] ಕಾಣಿಸುತ್ತವೆ. ಮದ್ಯದ ಗೀಳು ಕೆಲಸ ಕಳೆಯಬಹುದು,ಇದರಿಂದಾಗಿ ಆರ್ಥಿಕ ತೊಂದರೆಗಳು ಅಧಿಕಗೊಂಡು ತಾನು ವಾಸಿಸುವ ಗೃಹಸೌಲಭ್ಯವನ್ನೂ ಸಹ ಕುಡುಕರು ಕಳೆದುಕೊಳ್ಳುವ ಸಾಧ್ಯತೆ [೪೬] ಹೆಚ್ಕು ಹೊತ್ತಿಲ್ಲದ ಹೊತ್ತಲ್ಲಿ ಕುಡಿಯುವುದು,ಮತ್ತು ಅಸಭ್ಯವಾಗಿ ವರ್ತಿಸುವುದು,ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳುವುದು ಹಲವಾರು ಅಪರಾಧಗಳಿಗೆ ಎಡೆ ಮಾಡಿಕೊಡುತ್ತದೆ.ಉದಾಹರಣೆಗೆ ಕುಡಿದು ವಾಹನ ಚಾಲನೆ,ಅಥವಾ ಸಾರ್ವಜನಿಕ ವಲಯದಲ್ಲಿ ಗೊಂದಲ,ಅಥವಾ ನಾಗರಿಕ ಕಾನೂನು ಉಲ್ಲಂಘನೆಯ ಹಾಗು ಕಿರಿಕಿರಿಯಾಗುವಂತೆ ವರ್ತಿಸುವುದಕ್ಕೆ ದಂಡ [೯] ಇತ್ಯಾದಿ. ಮದ್ಯಪಾನ ಮಾಡಿದ ಸಮಯದಲ್ಲಿನ ಆತನ ನಡವಳಿಕೆ ಮತ್ತು ನಿಯಂತ್ರಣ ತಪ್ಪಿದ ಸ್ವಾಧೀನತೆಯು ಖಂದಿತವಾಗಿಯೂ ಸುತ್ತಮುತ್ತಲಿನವರಲ್ಲಿ ಅಸಹ್ಯ ಹುಟ್ಟಿಸುವುದಲ್ಲದೇ ಕುಟುಂಬ ಮತ್ತು ಸ್ನೇಹಿತರಲ್ಲಿನ ವಿಶ್ವಾಸಕ್ಕೆ ಧಕ್ಕೆ ತರಬಹುದು.ದಾಂಪತ್ಯ ಜೀವನದಲ್ಲಿಚಕಮಕಿವಿಚ್ಛೇದನಕ್ಕೆ ದಾರಿ ಮಾಡಿಕೊಡಬಹುದು.ಇಲ್ಲವೇಮನೆಯಲ್ಲಿನ ದೌರ್ಜನ್ಯಕ್ಕೆ ಪ್ರಮುಖ ಕಾರಣವಾಗುವ ಸಾಧ್ಯತೆ ಇದೆ. ಇದು ಸ್ವಾಭಿಮಾನಕ್ಕೆ ಸಾಮಾಜಿಕ ಸ್ವತಹದ ಸ್ಥಾನಮಾನಕ್ಕೆ ಧಕ್ಕೆ ತರಬಹುದಲ್ಲದೇ ಹಲವಾರು ಬಾರಿ ಸೆರೆಮನೆವಾಸದ ಶಿಕ್ಷೆಗೂ ಕಾರಣವಾಗುತ್ತದೆ. ಮದ್ಯದ ಗೀಳು ಮಕ್ಕಳ ಬಗೆಗಿನ ನಿರ್ಲಕ್ಷ್ಯಕ್ಕೂ ಕಾರಣವಾಗುತ್ತದೆ.ಹೀಗಾಗಿ ಮದ್ಯವ್ಯಸನಿಗಳ ಮಕ್ಕಳ ಮೇಲೂ ಸಾಮಾಜಿಕವಾಗಿ ದುಷ್ಪರಿಣಾಮ ಬೀರುತ್ತದೆ.ಮಕ್ಕಳ ದೊಡ್ಡವರಾದ ನಂತರವೂ ಅವರ ಮಾನಸಿಕ ಭಾವನೆಗಳ ಮೇಲೆ ತಮ್ಮ ಪೋಷಕರ ಈ ವ್ಯಸನ ಪರಿಣಾಮ [೮] ಬೀರಬಹುದು.

ಮದ್ಯಪಾನದಿಂದ ನಿವೃತ್ತಿ

ಇನ್ನು ಹಲವಾರು ದುರಭ್ಯಾಸಗಳಿಗೆ ಮದ್ಯವ್ಯಸನವನ್ನು ಬಿಟ್ಟಿದ್ದನ್ನು ಹೋಲಿಸಿದಾಗ ಒಮ್ಮೆಲೆ ಬಿಟ್ಟಾಗ ಇದು ತೀವ್ರತರವಾದ ಮಾರಣಾಂತಿಕ ಪರಿಣಾಮಗಳನ್ನು ಉಂಟು ಮಾದುತ್ತದೆ. ಉದಾಹರಣೆಗೆ ಹೆರೊಯಿನ್ ತ್ಯಜಿಸಿದವರ ಪ್ರಕರಣಗಳಲ್ಲಿ ಇದು ಅಷ್ಟಾಗಿ ಘಾತಕಕಾರಿಯಲ್ಲ ಎನಿಸುತ್ತದೆ. ಹೆರೊಯಿನ್ ಅಥವಾ ಕೊಕೆನ್ ಬಿಟ್ಟವರಲ್ಲಿ ಸಾವಿನ ಪ್ರಮಾಣಗಳಿದ್ದರೂ ಅವರು ಇನ್ನುಳಿದ ಭೀಕರ ಖಾಯಿಲೆಗಳಿಗೆ ತುತ್ತಾಗಿ ಸಾಯುವ ಸಾಧ್ಯತೆ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದೆ.ಅತಿಯಾದ ಆಯಾಸ ಅಥವಾ ತೀವ್ರತರವಾದ ಅದರಿಂದ ದೂರವಾದ ಕಾರಣಗಳೂ ಇಲ್ಲದಿಲ್ಲ. ಮದ್ಯವ್ಯಸನಿಗೆ ಒಂದು ವೇಳೆ ಗಂಭೀರ ಸ್ವರೂಪದ ಖಾಯಿಲೆಗಳಿಲ್ಲದಿದ್ದರೆ ಸಾವಿನ ಪ್ರಮಾಣ ಅಷ್ಟಾಗಿ ಇರುದಿಲ್ಲ.ಆದರೆ ಉತ್ತಮವಾಗಿ ಇದನ್ನು ಸಮತೋಲನಗೊಳಿಸಿದರೆ ಅಪಾಯ ಕಡಿಮೆ. ಆದರೆ ಒಮ್ಮೆಲೆ ಬಿಟ್ಟ ಇವರು ಅಪಾಯವನ್ನು ಎದುರಿಸುವುದು ಸರ್ವೆ [೨೪] ಸಾಮಾನ್ಯ. ಹಲವಾಉ ಉದ್ವಿಗ್ನಕಾರಿ ಮಾದಕ ದೃವ್ಯಗಳಾದ ಬಾರ್ಬಿತುರೇಟ್ಸ್ ಮತ್ತು ಬೆಂಜೊಡೈಯಾಜೆಪಿನೀಸ್ ಗಳು ಮದ್ಯದ ಗೀಳಿನಷ್ಟೆ ಸಾವಿನ ಅಪಾಯಗಳನ್ನು ತಂದೊಡ್ಡುವುದು ಅವುಗಳನ್ನು ಹಠಾತ್ ಆಗಿ ಬಿಟ್ಟಾಗ ಎಂದು [೪೭] ಹೇಳಬಹುದು.

ಮದ್ಯದ ಗೀಳಿನವರಲ್ಲಿನ ಪ್ರಾಥಮಿಕ ದೋಷವೆಂದರೆ GABAA ಗೆ ಬಲಿಯಾಗುವಿಕೆ,ಇದುಕೇಂದ್ರನರಮಂಡಲ ವ್ಯವಸ್ಥೆಯನ್ನು ಅಸ್ತವ್ಯಸ್ಥಗೊಳಿಸುತ್ತದೆ.ಇದು ಕುಂಠಿತಾವಸ್ಥೆಗೆ ಸಾಗುತ್ತದೆ. ಇಂತಹ ವ್ಯವಸ್ಥೆಯು ನಿರಂತರ ಕುಡಿತದಿಂದ ಮತ್ತಷ್ಟು ಅಸ್ತವ್ಯಸ್ತಗೊಳ್ಳುವುದಲ್ಲದೇ ಸಹನೆ ಮತ್ತು ದೈಹಿಕ ಅವಲಂಬನೆಯನ್ನು ತೀವ್ರಗೊಳಿಸುತ್ತದೆ.ಅತಿಯಾದ ಮದ್ಯಪಾನವು ಹಲವು ಅಗೋಚರ ದುಷ್ಪರಿಣಾಮಗಳನ್ನು ಉಂಟು ಮಾಡಬಹುದು. ಕುಡಿತವನ್ನು ಹಠಾತ್ ಆಗಿ ನಿಲ್ಲಿಸಿದಾಗ ಅಥವಾ ಅದನ್ನು ಅನಿಯಮಿತಗೊಳಿಸಿದಾಗ ಮಾನವನ ನರಮಂಡಲವು ಅನಿಯಂತ್ರಿತವಾಗಿ ನರಮಂಡಲದ ಕೇಂದ್ರದ ಕ್ಕೆ ತನ್ನ ಉರಿತವಾಗಿ ಮಾರ್ಪಡುತ್ತದೆ.[೪೮][೪೯] ಇಂತಹ ಪರಿಸ್ಥಿತಿಯು ತೀವ್ರತರವಾದ ವ್ಯಾಕುಲತೆ,ಜೀವಭಯದ ನರಗಳ ಹಿಡಿತಗಳು,ದ್ವಂದ್ವತೆ ಅಪಾಯಗಳು,ಖಾಲಿತನ,ನಡುಕಗಳು ಹಾಗು ಕೆಲವೊಮ್ಮೆ ಹೃದಯ ವೈಫಲ್ಯದ ಸಾಧ್ಯತೆ [೪೮][೪೯] ಇದೆ.

ತ್ಯಜಿಸಿದ ನಂತರದ ಹಲವಾರು ದುಷ್ಪರಿಣಾಮಗಳು ಒಂದರಿಂದ ಮೂರು ವಾರಗಳ ಅವಧಿಯಲ್ಲಿ ತನ್ನ ಲಕ್ಷಣಗಳನ್ನು ತೋರುತ್ತದೆ. ಕಡಿಮೆ ಪ್ರಮಾಣದ ತೀವ್ರತೆಯುಳ್ಳವೆಂದರೆ ಮತಿ (ಉದಾಹರಣೆಗೆ ಮತಿ ಭ್ರಮಣೆ ಮತ್ತು ವ್ಯಾಕುಲತೆ),ನರಗಳ ದೌರ್ಬಲ್ಯಗಳು ಬಿಟ್ಟ ನಂತರದ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿವೆ.ಇದು ಕ್ರಮೇಣ ಒಂದು ವರ್ಷಅಥವಾ ಅದಕ್ಕಿಂತ ಹೆಚ್ಚಿನ ಅವಧಿ ವರೆಗೆ ತನ್ನ ಬೆಳವಣಿಗೆಯನ್ನು [೫೦][೫೧][೫೨] ತೋರುತ್ತದೆ. ಹಲವಾರು ಬಾರಿ ಕುಡಿತ ತ್ಯಜಿಸಿದ ನಂತರ ದೇಹವು ನರಮಂಡಲ ವ್ಯವಸ್ಥೆಯ ಕೇಂದ್ರ ಭಾಗದಲ್ಲಿನ ಕಾರ್ಯಚಟುವಟಿಕೆಯು ಮತ್ತೆ ತಾಳ್ಮೆಮತ್ತು GABA ಕ್ರಿಯೆಗಳನ್ನು ಮರುಪಡೆಯುವ ಸಾಧ್ಯತೆ [೫೩][೫೪] ಇದೆ. ನರಗಳ ಸಂವಹನವನ್ನು ಸಾಗಿಸುವ ವ್ಯವಸ್ಥೆಯು ನಿಯಂತ್ರಣ ಮತ್ತು NMDAಗಳನ್ನು ಇದರಲ್ಲಿ ಒಳಗೊಳ್ಳುವಂತೆ [೬][೫೫] ಮಾಡಿದೆ.

ಅಪಾಯಕಾರಿ ಅಂಶಗಳು

ಕುಡಿತದ ಚಟ ಅಥವಾ ಗೀಳು ಅಂಟಿಕೊಳ್ಳಲು ವ್ಯಕ್ತಿಯ ವಯಸ್ಸು ಕಾರಣವಾಗುತ್ತದೆ.ಕೆಲವೊಮ್ಮೆ ಸಣ್ಣ ವಯಸ್ಸಿನಲ್ಲೇ ಇದು ಆರಂಭಗೊಳ್ಳುತ್ತದೆ. ಕೆಲವರು ಮೊದಲೇ ಮದ್ಯದ ಬಗ್ಗೆ ತಮ್ಮ ಒಲವನ್ನು ತೋರಿದ್ದರೆ ಅಥವಾ ಈ ಗೀಳಿನವರಿಂದ ಪ್ರಭಾವಿತರಾಗಿದ್ದರೆ ಅಂತವರು ಎಳೆವಯಸ್ಸಿನಲ್ಲೇ ಇಂತಹ ಚಟಕ್ಕೆ ಅಂಟಿಕೊಳ್ಳುವ ಸರಾಸರಿಯಲ್ಲಿ [೫೬] ಮೊದಲಿಗರಾಗಿರುತ್ತಾರೆ. ಕೌಟುಂಬಿಕ ಹಿನ್ನಲೆಯೂ ಕುಡಿತದ ಗೀಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ,ಕೆಲವು ಕೌಟುಂಬಿಕ ಇತಿಹಾಸವು ಇದಕ್ಕೆ [೫೭] ಪೂರಕವಾಗಿದೆ.[೫೮] ಒಂದು ಈ ಕುರಿತು ಪ್ರಕಟಗೊಂಡ ಲೇಖನದ ಪ್ರಕಾರ ಇದು ಅನುವಂಶೀಯ ಕಾರಣಗಳಿಗೂ ಸಂಬಂಧಿತವಾಗಿದೆ.ಕೆಲವು ವಂಶವಾಹಿನಿಗಳ ಮೂಲದಲ್ಲೇ ಇಂತಹ ಮದ್ಯದ ಗೀಳಿನ ಪರಿಣಾಮಗಳು ಇದರ ಚಟಕ್ಕೆ ಅಂಟಿಕೊಳ್ಳುವ ಉದಾಹರಣೆಗಳನ್ನು [೫೮] ಕಾಣಬಹುದಾಗಿದೆ. ಈ ತೆರನಾದ ಅಪಾಯಕಾರಿಯಾದ ಚಟವೂ ವಯಸ್ಕರಲ್ಲಿ ಅತಿ ಹೆಚ್ಚಿನ ಸಂವೇದನೆಗಳನ್ನು ಹುಟ್ಟಿಸಿ ಅನುವಂಶೀಯ ಜೀವಕೋಶಗಳು ಮೆದುಳಿನ ಕಾರ್ಯವೈಖರಿಯನ್ನು ಬದಲಿಸಿಬಿಡಬಹುದು.ಹೀಗಾಗಿ ಇದರಲ್ಲಿ ಕುಡಿತದ ಚಟಕ್ಕೆ ಬಲಿಯಾಗುವವರು ಸಾಮಾನ್ಯವಾಗಿ ಅತಿ ಹೆಚ್ಚು ಬಲಿಪಶುವಾಗುವ ಸಂದರ್ಭಗಳೇ ಜಾಸ್ತಿಯಾಗಿರುತ್ತವೆ.ಮೆದುಳಿನ ಈ ಸಂವೇದನೆಯಿಂದಾಗಿ ಮದ್ಯದ ಅವಲಂಬನೆಯು ಅಧಿಕವಾಗುತ್ತದೆ. ಸುಮಾರು 40ಪ್ರತಿಶತದಷ್ಟು ಮದ್ಯದ ಗೀಳು ಇರುವವರು ತಮ್ಮ ಹರೆಯದ ಕೊನೆಯ ಹಂತಗಳಲ್ಲಿ ಇದಕ್ಕೆ ಬಲಿಯಾಗುತ್ತದೆ. ಅದರೆ ಸಾಮಾನ್ಯವಾಗಿ ಮದ್ಯದ ಗೀಳಿರುವವರು ಯುವಕರಾಗಿದ್ದಾಗ ಅಥವಾ ಆರಂಭಿಕ ಯೌವನದಲ್ಲಿ ಇದು ನಡೆಯುತ್ತದೆ. ಬಾಲ್ಯಾವಸ್ಥೆಯಲ್ಲಿ ಸಹ ಮದ್ಯದ ಗೀಳು ಅಥವಾ ಇತರ ಮಾದಕ ದೃವ್ಯಗಳ ಸಮಸ್ಯೆಯ ಚಟಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಇದರಲ್ಲಿ ಸಂಕೀರ್ಣವಾದ ಸಮಸ್ಯೆ ಅಥವಾ ಅನುವಂಶೀಯ ಕಾರಣಗಳು ಮತ್ತು ಸುತ್ತಮುತ್ತಲಿನ ವಾತಾವರಣ ಇದಕ್ಕೆ ಕುಮ್ಮಕ್ಕು ನೀಡಬಹುದು.ಇದರಿಂದಾಗಿ ಮದ್ಯದ ಗೀಳಿಗೆ ಅಂಟಿಕೊಳ್ಳುವ ಪ್ರಸಂಗಗಳು ಉದ್ಭವಹಿಸುತ್ತವೆ. ಮದ್ಯದ ಪಾಚಕ ಶಕ್ತಿಯನ್ನು ಕೂಡಾ ಅನುವಂಶೀಯ ಕಾರಣಗಳು ಪ್ರಭಾವಿಸುತ್ತವೆ,ಇದು ಕುಡಿತದ ಚಟಕ್ಕೆ ಬಲಿಯಾಗುವ ಸಂದರ್ಭಗಳೇ ಹೆಚ್ಚು. ಉತ್ತಮ ಸಲಹೆ ಸೂಚನೆ ಹಾಗು ಕೌಟುಂಬಿಕ ಸಹಕಾರವು ಮದ್ಯದ ಗೀಳನ್ನು ಕಡಿಮೆ ಮಾಡಲು [೫೯] ನೆರವಾಗುತ್ತದೆ.

ರೋಗನಿರ್ಣಯ

ರೋಗ ನಿದಾನ ಪರೀಕ್ಷೆ

ಮದ್ಯದ ಬಳಕೆಯ ಬಗ್ಗೆ ನಿರ್ಧಿಷ್ಟವಾಗಿ ತಿಳಿಯಲು ಹಲವಾರು ಉಪಕರಣಗಳನ್ನು ಉಪಯೋಗಿಸಿ ಇದರ ನಿಯಂತ್ರಣವ ಮಾಡಬಹುದಾಗಿದೆ. ಇಂತಹ ಸಲಕರಣೆಗಳುಸ್ವಯಂ ವರದಿಗಳಂತಿದ್ದು ಒಂದು ಪ್ರಶ್ನಾವಳಿಯನ್ನು ಈ ಸಂದರ್ಭದಲ್ಲಿ ನೀಡಲಾಗುತ್ತದೆ. ಇನ್ನೊಂದು ಸಾಮಾನ್ಯ ನಿಯಮವೆಂದರೆ ಒಟ್ಟಾರೆ ಗಣನೆ ಮತ್ತು ಸಮತೋಲನೆಯ ಅಧ್ಯಯನದ ಮೂಲಕ ಇದನ್ನು [೧೧] ಪರೀಕ್ಷಿಸಬಹುದು.

  • ಇದರಲ್ಲಿ CAGE ಪ್ರಶ್ನಾವಳಿಯು, ಬಹಳಷ್ಟು ವಿಷಯಗಳನ್ನು ಸಂಗ್ರಹಿಸಬಹುದಾಗಿದೆ.ಇದರಲ್ಲಿರುವ ನಾಲ್ಕು ಪ್ರಶ್ನೆಗಳ ಮೂಲಕ ವೈದ್ಯರ ಕಚೇರಿಯಲ್ಲಿಯೇ ಇದರ ಪರಿಣಾಮಗಳನ್ನು ಪತ್ತೆಹಚ್ಚಬಹುದಾಗಿದೆ.

Two "yes" responses indicate that the respondent should be investigated further.

The questionnaire asks the following questions:

  1. Have you ever felt you needed to Cut down on your drinking?
  2. Have people Annoyed you by criticizing your drinking?
  3. Have you ever felt Guilty about drinking?
  4. Have you ever felt you needed a drink first thing in the morning (Eye-opener) to steady your nerves or to get rid of a hangover?[೬೦][೬೧]
ಇಲ್ಲಿ CAGE ಪ್ರಸ್ನಾವಳಿಯು,ಮದ್ಯದ ಗೀಳಿನಿಂದುಂಟಾಗುವ ಸಮಸ್ಯೆಗಳನ್ನು ಕಂಡು ಹಿದಿದು ಅದರ ಪ್ರಮಾಣವನ್ನು ಗುರುತಿಸಬಹುದಾಗಿದೆ.ಗಂಬೀರ ಪರಿಣಾಮಗಳನ್ನು ಈ ಸಂದರ್ಬದಲ್ಲಿ ಕಂಡು [೬೨] ಹಿಡಿಯಬಹುದಾಗಿದೆ.
  • ಮದ್ಯದ ಅವಲಂಬನೆ ಅಂಕಿಅಂಶಗಳ ಪ್ರಶ್ನಾವಳಿಯು ರೋಗ ಕಂಡು ಹಿಡಿಯುವಲ್ಲಿ CAGE ಪರೀಕ್ಷಾ ಪ್ರಶ್ನಾವಳಿಗಿಂತ ನಿಖರವಾಗಿದೆ., ಮದ್ಯದ ಅವಲಂಬನೆ ಮತ್ತು ವಿಪರೀತ ಕುಡಿತದ ಚಟವನ್ನು ಸಹ ಕಂಡು ಹಿಡಿಯಲು ಕಾರಣವಾಗುತ್ತದೆ.
  • ದಿ ಮಿಚಿಗನ್ ಅಲ್ಕೊಹಾಲ್ ಸ್ಕೀರ್ನಿಂಗ್ ಟೆಸ್ಟ್ (MAST)ಗಳನ್ನು ಬಹುತೇಕವಾಗಿ ನ್ಯಾಯಾಲಯಗಳಲ್ಲಿ ಬಳಸಲಾಗುತ್ತದೆ.ಇದರಲ್ಲಿ ಎಷ್ಟರ ಮಟ್ಟಿಗೆ ಶಿಕ್ಷೆ ವಿಧಿಸಬೇಕೆಂಬುದನ್ನು ಪರಿಶೀಲಿಸಲಾಗುತ್ತದೆ.ಇದರಿಂದಾಗಿ ಮದ್ಯಪಾನಕ್ಕೆ ಸಂಬಂಧಿಸಿದ ಅಪರಾಧಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.ಅಮಲಿನಲ್ಲಿ ವಾಹನ ಚಾಲನೆಯು ಬಹುಮುಖ್ಯವಾದ [೬೩] ಕಾರಣವಾಗಿರುತ್ತದೆ.
  • ದಿ ಅಲ್ಕೊಹಾಲ್ ಯುಸೆ ಡಿಸ್ ಆರ್ಡರ್ಸ್ ಐಡೆಂಟಿಫಿಕೇಶನ್ ಟೆಸ್ಟ್ (AUDIT)ನ್ನು ವಿಶ್ವ ಆರೋಗ್ಯ ಸಂಸ್ಥೆಯು ಬಳಸುತ್ತದೆ. ಈ ಪರೀಕ್ಷೆಯು ಅಪರೂಪವಾಗಿದ್ದು ಸುಮಾರು ಆರು ದೇಶಗಳಲ್ಲಿ ಇದನ್ನು ಬಳಸಲಾಗುತ್ತದೆ,ಅದಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಳಕೆ [೬೪] ಮಾಡಲಾಗುತ್ತದೆ. ದಿ CAGE ಪ್ರಶ್ನಾವಳಿಯಂತೆ ,ಇಲ್ಲಿಯೂ ಸರಳ ಪ್ರಶ್ನೆಗಳ ಸರಮಾಲೆಯು ಇರುತ್ತದೆ,ಇದರಲ್ಲಿ ಅತ್ಯಂತ ಆಳವಾದ ಸಮಸ್ಯೆಗಳನ್ನು ಪತೆಹಚ್ಚಬಹುದಾಗಿದೆ.
  • ದಿ ಪ್ಯಾಡಿಂಗ್ ಟನ್ ಅಲ್ಕೊಹಾಲ್ ಟೆಸ್ಟ್ (PAT)ನ್ನು ಅಪಘಾತ ಮತ್ತು ತುರ್ತು ವಿಭಾಗಗಳಲ್ಲಿ ಸಂದರ್ಬದ ಘಟನೆಗಳಲ್ಲಿ ಬಳಸಲಾಗುತ್ತದೆ. ಇದನ್ನು AUDIT ನ ಪ್ರಶ್ನಾವಳಿಯಲ್ಲಿ ಐದನೆಯ ಬಾರಿಗೆ ನದೆಯುವ ಪರೀಕ್ಷೆಯಲ್ಲಿ [೬೫] ಉಪಯೋಗಿಸಲಾಗುತ್ತದೆ.

ಅನುವಂಶೀಯ ಪ್ರವೃತ್ತಿಯ ತಪಾಸಣೆ

"ಮನೋವೈಜ್ಞಾನಿಕ ಅನುವಂಶೀಯ ವಿಜ್ಞಾನಿಗಳಾದ ಜಾನ್ 1,ನರ್ನ್ ಬರ್ಗೆರ್ ,ಜೂ.ಮತ್ತು ಲೌರಾ ಜೀನ್ ಬೀರಟ್ ಅವರ ಸಲಹೆ ಪ್ರಕಾರ ಮದ್ಯದ ಗೀಳು ಕೇವಲ ಅನುವಂಶೀಯತೆಯನ್ನು ಒಂದೇ ಕಾರಣವನ್ನಾಗಿಸುವದಿಲ್ಲ."ಈ ಪ್ರಕ್ರಿಯೆಯಲ್ಲಿ ದೈಹಿಕ ಬದಲಾವಣೆ ಮತ್ತು ಮೆದುಳಿನಲ್ಲಿನ ರೂಪಾಂತರಗಳು ಒಂದೊಕ್ಕೊಂದು ತಮ್ಮ ಏಕ ಕೋಶಗಳ ವಾಹಿನಿಗಳೊಂದಿಗೆ ಪೂರ್ಕವಾಗಿರುತ್ತದೆ.ಬದುಕಿನ ಅನುಭವಗಳಿಗೆ ಒಡ್ಡಿಕೊಳ್ಳುವ ಇದು ರಕ್ಷಣೆ ಅಥವಾ ನಿಯಂತ್ರಣವನ್ನು ತರುತ್ತದೆ". ಇದರಲ್ಲಿ ಸುಮಾರು ಡಜನ್ನಷ್ಟು ಮದ್ಯದ ಗೀಳಿಗೆ ಸಂಬಂಧಿತ ವಂಶವಾಹಿನಿಗಳನ್ನು ಗುರುತಿಸಲಾಗಿದ್ದು ಇನ್ನು ಹೆಚ್ಚಿನ ಸಂಶೋಧನೆಯನ್ನು ಈ ನಿಟ್ಟಿನಲ್ಲಿ [೬೬] ಮಾಡಲಾಗುತ್ತದೆ.

ಪ್ರತಿಯೊಂದು ವಂಶವಾಹಿನಿಯ ಪರೀಕ್ಷೆಗೆ ಒಂದು ಜೀವವಿಜ್ಞಾನದ ಪರೀಕ್ಷೆ ಅಗತ್ಯವಿದೆ.ಇದು ಮದ್ಯದ ಗೀಳು ಮತ್ತು ಇತರೆ ಮಾದಕ ದೃವ್ಯಗಳ ಪರೀಕ್ಷೆಯನ್ನು [೬೭] ಮಾಡಬಹುದಾಗಿದೆ. ಮನುಷ್ಯರು ಸೇವಿಸುವ ಮಾದಕ ವಸ್ತುಗಳನ್ನು ಪದೆಯುವ ವಂಶವಾಹಿನಿಗಳು ಸುಮಾರಾಗಿ DRD2 TaqI ಪಾಲಿಮರ್ಫಿಸಮ್ ನ್ನು ಉಲ್ಲೇಖಿಸಿ ಅದರ ವ್ಯತ್ಯಾಸಗಳನ್ನು ತಿಳಿಸುತ್ತದೆ. ಯಾರು ಈ A1 ಜೀವವಿಜ್ಞಾನ ದ (ವ್ಯತ್ಯಾಸ)ಅಂದರೆ ಇಂತಹ ಮಾದಕ ಹವ್ಯಾಸಗಳಿಗೆ ಈಡಾಗುತ್ತಾರೋ ಅವರಲ್ಲಿ ಮಾದಕ ದೃವ್ಯಗಳು ಅಥವಾ ಕುಡಿತದ ಗೀಳು ಹುಟ್ಟುವುದು ಸಹಜವಾದರೂ ಮಾದಕ ವಸ್ತುಗಳನ್ನು ಸೇವಿಸುವವರು ಕ್ರಮೇಣ ಎಲ್ಲಾ ತೆರನಾದ ವ್ಯಸನಗಳಿಗೆ ದಾಸರಾಗುವುದು [೬೮] ಸಾಮಾನ್ಯವಾಗಿದೆ. ಈ ತೆರನಾದ ವ್ಯಸನವು ಸಾಮಾನ್ಯವೆನಿಸಿದರೂ ಜೀವಶಾಸ್ತ್ರೀಯವಾಗಿ ಬಹುತೇಕರು ಇದಕ್ಕೆ ಬಲಿಯಾಗುತ್ತಾರೆ.ಇದಕ್ಕೆ ನಂತರ ವಿಪರೀತ ಅವಲಂಬನೆ ತೋರಿ ಮತ್ತಷ್ಟು ಮಾದಕ ವ್ಯಸನಗಳಿಗೆ ಬಲಿಯಾಗುವುದೇ ಹೆಚ್ಚು.ಆದ್ದರಿಂದ ಕೆಲವು ವಿಮರ್ಶಕರ ಪ್ರಕಾರ DRD2 ಪರಿಣಾಮದ ಬಗ್ಗೆ ಹಲವರಲ್ಲಿ ವಾದ [೬೬] ವಿವಾದಗಳಿವೆ.

DSM ಚಿಕಿತ್ಸೆ

ಈ DSM-IVನ ರೋಗ ಪತ್ತೆಹಚ್ಚುವ ವಿಧಾನವು ಮದ್ಯದ ಗೀಳಿನ ಅವಲಂಬನೆ ಬಗ್ಗೆ ವಿವರವಾದ ಕಾರಣ ಹಾಗು ಅದರ ದುಷ್ಪರಿಣಾಮಗಳ ಬಗ್ಗೆ ವಿವರಿಸುವ ತಂತ್ರಜ್ಞಾನವೆಂದರೂ ಪರವಾ ಇಲ್ಲ. ಇಂತಹ ಪ್ರಕರಣಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಇನ್ನೊಂದರ ಬೆಳವಣಿಗೆಗಳ ಪರಿಣಾಮಗಳ ಬಗ್ಗೆ ಹೋಲಿಸಿ ಸೂಕ್ತ ಕ್ರಮಕ್ಕೆ ಕಾರಣವಾಗುತ್ತದೆ. DSM-IV, ಪ್ರಕಾರ ಅಲ್ಕೊಹಾಲ್ ಅವಲಂಬನೆಯ ಚಿಕಿತ್ಸೆಯನ್ನು ಈ ರೀತಿಯಾಗಿ [೧೦] ಪತ್ತೆಹಚ್ಚಬಹುದು:

...maladaptive alcohol use with clinically significant impairment as manifested by at least three of the following within any one-year period: tolerance; withdrawal; taken in greater amounts or over longer time course than intended; desire or unsuccessful attempts to cut down or control use; great deal of time spent obtaining, using, or recovering from use; social, occupational, or recreational activities given up or reduced; continued use despite knowledge of physical or psychological sequelae.

ಮೂತ್ರ ಮತ್ತು ರಕ್ತ ತಪಾಸಣೆ

ನಿಜವಾಗಿ ಯಾವ ಪ್ರಮಾಣದಮದ್ಯಪಾನವನ್ನು ಮಾಡಲಾಗಿದೆ ಎಂದು ಗುರ್ತಿಸಲು ಸಾಮಾನ್ಯ ಪರೀಕ್ಷೆ ಎಂದರೆ ರಕ್ತದಲ್ಲಿರುವ ಮದ್ಯದ ಅಂಶ(BAC)ವನ್ನು [೬೯] ಪತ್ತೆಹಚ್ಚುವುದು. ಇಂತಹ ತಪಾಸಣೆಗಳು ಮದ್ಯಪಾನಿಗಳು ಮತ್ತು ಮದ್ಯಪಾನ ಮಾಡದವರ ಬಗ್ಗೆ ಯಾವುದೇ ಭೇದ ತೋರುವುದಿಲ್ಲ;ಆದರೆ ದೀರ್ಘಕಾಲದ ಮದ್ಯಪಾನವು ದೇಹದ ಮೇಲೆ ಹಲವಾರು ಗಂಭೀರ ಪರಿಣಾಮಗಳನ್ನು [೭೦] ಬೀರುತ್ತದೆ:

  • ಮ್ಯಾಕ್ರೊಸೈಟೊಸಿಸ್ (ದೊಡ್ಡದಾದMCV)1
  • ವಿಸ್ತೃತಗೊಂಡ GGT²
  • ಸಾಮಾನ್ಯವಾಗಿ ದೊಡ್ಡದಾದ ASTಮತ್ತುALT ಮತ್ತು ಒಂದು AST:ಇದರ ಪ್ರಮಾಣವು 2:1ರ ಅನುಪಾತದಲ್ಲಿರುತ್ತದೆ.
  • ಅಧಿಕ ಕಾರ್ಬೊಹೈಡ್ರೇಟ್ ಕೊರತೆಯ ಕಾರಣ (CDT)

ಹೇಗೆಯಾದರೂ ಇಂತಹ ಪರೀಕ್ಷೆಗಳು ಜೀವಶಾಸ್ತ್ರೀಯ ಅಧ್ಯಯನದ ಪ್ರಕಾರ ಸ್ಕ್ರೀನಿಂಗ್ ಪ್ರಶ್ನಾವಳಿಯಷ್ಟು ಪರಿಣಾಮಕಾರಿಯಲ್ಲ ಎಂದು ಹೇಳಬಹುದು.

ನಿಯಂತ್ರಣ

ಯಾಕೆಂದರೆ ಮದ್ಯದ ಗೀಳು ಅಥವಾ ವ್ಯಸನವು ಇಡೀ ಸಾಮಾಜಿಕ ಸ್ವಾಸ್ಥ್ಯದ ಮೇಲೆ ತನ್ನ ದುಷ್ಪ್ರಭಾವ ಬೀರುತ್ತದೆ.ಅಂದರೆ ವಿಶ್ವ ಆರೋಗ್ಯ ಸಂಘಟನೆ,ದಿ ಯುರೊಪಿಯನ್ ಯುನಿಯನ್ ಮತ್ತು ಇನ್ನಿತರ ಸ್ಥಳೀಯ ಸಂಸ್ಥೆಗಳು ಮತ್ತುರಾಷ್ಟ್ರೀಯ ಸರ್ಕಾರ ಹಾಗು ಸಂಸತ್ತುಗಳು ಆಯಾ ಕಾಲಕ್ಕೆ ನೂತನ ನೀತಿಗಳನ್ನು ರೂಪಿಸಿ ಒಟ್ಟಾರೆ ಮದ್ಯದ ಗೀಳನ್ನು ಕಡಿಮೆ ಮಾಡುವವಲ್ಲಿ [೭೧][೭೨] ಶ್ರಮಿಸುತ್ತವೆ.

ಆರೋಗ್ಯದ ಸೂತ್ರಗಳನ್ನು ಕಾಪಾಡಲು ಮದ್ಯಪಾನದಂತಹ ದುರಭ್ಯಾಸಗಳಿಗೆ ಪೂರ್ಣವಿರಾಮ ಕೊಡುವತ್ತ ಹಲವಾರು ಶಿಕ್ಷಣ ಸಂಸ್ಥೆಗಳು ಹಾಗು ಉತ್ತಮ ಧೇಯೋದ್ಯೇಶದ ಸಂಘಟನೆಗಳು ಕಾರ್ಯಪ್ರವೃತ್ತವಾಗಿ ಇಂತಹ ಪ್ರಮಾಣವನ್ನು ಕಡಿಮೆ ಮಾಡಲು ಕಟಿಬದ್ದವಾಗಿವೆ. ಈ ದುರಭ್ಯಾಸವನ್ನು ಕೆಲವು ಕಾರಣಗಳಿಂದ ಮದ್ಯಪಾನವು ವ್ಯಸನದ ಮೂಲಕ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗದಂತೆ ನೋದಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.ಇದರ ದುಷ್ಪರಿಣಾಮಗಳನ್ನು ಕಡಿಮೆ ಮಾದಲು ಕಾಲ ಕಾಲಕ್ಕೆ ಜಾಹಿರಾತುಗಳು ಮತ್ತು ಫಲಕಗಳನ್ನು ಹಾಕಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗುತ್ತದೆ. ಅತ್ಯಂತ ನಿಖರ ಮತ್ತು ನಂಬಿಕೆಗೆ ಯೋಗ್ಯವಾದ ಸಾಕ್ಷಿಗಳ ಆಧಾರಿತ ಶೈಕ್ಷಣಿಕ ಆಂದೋಲನಗಳನ್ನು ಕೈಗೊಳ್ಳಬೇಕಾಗುತ್ತದೆ.ಮದ್ಯಪಾನದ ದುರುಪಯೋಗ ಮತ್ತು ಕೆಟ್ಟ ಪರಿಣಾಮಗಳನ್ನು ವಿವರಿಸಬೇಕಾಗುತ್ತದೆ.ಇದಕ್ಕೆ ಸಮೂಹ ಮಾಧ್ಯಮದ ನೆರವು ಅತ್ಯಗತ್ಯವಾಗಿದೆ. ಹದಿವಯಸ್ಕರು ಮದ್ಯಪಾನ ಹಾಗು ಇತರ ಮಾದಕ ವಸ್ತುಗಳತ್ತ ವಾಲದಂತೆ ನೋಡಿಕೊಳ್ಳಲು ಪೋಷಕರು ಅತಿ ಕಾಳಜಿ ವಹಿಸಬೇಕಾಗುತ್ತದೆ,ಮಾನಸಿಕ ನೆಮ್ಮದಿ ಕೊಡುವ ವಾತಾವರಣವನ್ನು ಅವರು ನಿರ್ಮಾಣ ಮಾಡಬೇಕಾಗುತ್ತದೆ.ಮದ್ಯ ಹಾಗು ಇತರ ಮಾದಕ ವಸ್ತುಗಳ ಬಳಕೆಗೆ ಕಡಿವಾಣ [೭೩] ಹಾಕಬೇಕಾಗುತ್ತದೆ.

ಆಡಳಿತ ಮಂಡಳಿ

ಮದ್ಯದ ಗೀಳು ಬಿದಿಸಲು ಸಾಕಷ್ಟು ವಿಭಿನ್ನ ಚಿಕಿತ್ಸೆಗಳಿವೆ(ಆಂಟಿಡಿಸ್ಪೊಸೊಟ್ರಾಪಿಕ್ )ಅಂದರೆ ಮದ್ಯವಿರೋಧಿ ಮದ್ದುಗಳು ಆಯಾ ಪರಿಸರ ಮತ್ತು ಆರೋಗ್ಯದ ಮೇಲೆ ಪ್ರಮುಖ ಬದಲಾವಣೆ ತರುತ್ತವೆ. ಮದ್ಯದ ಗೀಳನ್ನು ವೈದ್ಯಕೀಯವಾಗಿ ಅಥವಾ ಅದೊಂದು ಕಾಯಿಲೆ ಎಂದು ಪರಿಗಣಿಸುವವರು ಅದನ್ನು ಚಿಕಿತ್ಸೆ ನೀಡುವ ಸ್ಥಳ ಹಾಗು ವಾತಾವರಣವನ್ನು ಪರಿಗಣಿಸಬೇಕಾಗುತ್ತದೆ.ಅಂದರೆ ಯಾರಿಗೆ ಯಾವ ತೆರನಾದ ಪರೀಕ್ಷೆ ಅಥವಾ ತಪಾಸಣೆ ಹಾಗು ಚಿಕಿತ್ಸೆ ಅಗತ್ಯವೆಂಬುದನ್ನು ಅವರೇ ನಿರ್ಧರಿಸಬೇಕಾಗುತ್ತದೆ.

ಬಹಳಷ್ಟು ಚಿಕಿತ್ಸೆಗಳು ಅವರು ಮದ್ಯಪಾನಕ್ಕೆ ಅಂಟಿಕೊಳ್ಳದಂತೆ ತಪ್ಪಿಸಲಾಗುತ್ತದೆ. ಬಹುಮುಖ್ಯವಾಗಿ ಜನರು ಬದುಕಿನ ಉತ್ತಮ ಕ್ಷಣವೆಂದು ತಿಳಿಸಬೇಕಾಗುತ್ತದೆ.ಮದ್ಯಪಾನವು ಸಾಕಷ್ಟು ತರಬೇತಿ ಹಾಗು ತಿಳಿವಳಿಕೆ ನೀಡುವ ಮೂಲಕ ಅಲ್ಕೊಹಾಲ್ ಬಳಕೆ ಕಡಿಮೆ ಮಾಡಬಹುದಾಗಿದೆ. ಮದ್ಯಪಾನದ ಗೀಳು ಬಹು ತೆರನಾದ ದುರಭ್ಯಾಸಗಳಿಗೆ ದಾರಿ ಮಾಡಿಕೊಡುತ್ತದೆ.ಇದರಿಂದಾಗಿ ಆ ವ್ಯಕ್ತಿಯು ಮತ್ತಷ್ಟು ಕುಡಿತಕ್ಕೆ ಈಡಾಗುತ್ತಾನೆ.ಇಂತಹ ಸಂದರ್ಭಗಳನ್ನು ಸರಿಯಾಗಿ ವಿವರಿಸಿ ದುರಭ್ಯಾಸಗಳನ್ನು ಯಶಸ್ವಿಯಾಗಿ ಕಡಿಮೆ ಮಾಡಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ವಿಷಯುಕ್ತತೆಯನ್ನು(ಡಿಟಾಕ್ಸಿಫಿಕೇಶನ್ )ಕಡಿಮೆ ಮಾಡುವ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ.ಇದರಲ್ಲಿ ಸೆಲ್ಫ್ ಹೆಲ್ಪ್ ಗ್ರುಪ್ ನಿಂದ ಬೆಂಬಲಿತ ಗುಂಪುಗಳು ಚಿಕಿತ್ಸಾ ವಿಧಾನಗಳನ್ನು ತಂತ್ರಜ್ಞಾನವನ್ನು ಬಳಸಬೇಕಾಗುತ್ತದೆ. ಸಮೂಹದ ಚಿಕಿತ್ಸಾ ಪದ್ದತಿಯಲ್ಲಿ ಹಲವಾರು ಸಬಲ ಉಪಾಯಗಳನ್ನು ಅನುಸರಿಸಲಾಗುತ್ತದೆ.ಅಂದರೆ ಜೀರೊ ಟಾಲರನ್ಸ್ ಚಿಕಿತ್ಸಾ ಪದ್ದತಿ ಅನುಸರಿಸಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಬೇಕಾಗುತ್ತದೆ.ಇಲ್ಲಿ ಮದ್ಯದ ಗೀಳಿನಿಂದಾಗುವ ಅಪಾಯಗಳನ್ನು ಕಡಿಮೆ [೭೪] ಮಾಡಬಹುದಾಗಿದೆ.

ನಿರ್ವಿಷೀಕರಣ

ಅಲ್ಕೊಹಾಲ್ ಡಿಟಾಕ್ಸಿಫಿಕೇಶನ್ ಅಥವಾ "ಡಿಟಾಕ್ಸ್ " ಅಂದರೆ ನಿರ್ವಿಷೀಕರಣ ಅಥವಾ ಮದ್ಯಪಾನದಿಂದಾಗುವ ವಿಷಕಾರಕ ಪರಿಣಾಮ ತಡೆಯಲು ಮಾದಕ ದೃವ್ಯಗಳನ್ನು ಬಿಡಿಸಲು ನೀಡುವ ಬೆಂಜೊಡೈಜೆಪಿನೆಸ್ ಅಂತಹ ಔಷಧಿಗಳನ್ನು ಉಪಯೋಗಿಸಲಾಗುತ್ತದೆ.ಇಂಥ ಚಿಕಿತ್ಸೆಗಳು ಮದ್ಯದ ಗೀಳನ್ನು ತ್ಯಜಿಸುವ ಕ್ರಮಕ್ಕೂ ನೆರವಾಗುತ್ತವೆ. ಕಡಿಮೆ ಪ್ರಮಾಣದ ಪರಿಣಾಮಗಳಿಗೆ ಮದ್ಯದ ಗೀಳು ಬಿಡುಸುವ ಲಕ್ಷಣಗಳನ್ನು ತೋರುತ್ತದೆ.ನಿರ್ವಿಷೀಕರಣದ ಚಿಕಿತ್ಸೆಯನ್ನು ಹೊರರೋಗಿಗಳಿಗೆ ನೀಡಬಹುದಾಗಿದೆ. ಅತಿ ಗಂಬೀರ ಪರಿಣಾಮದ ಅಥವಾ ಗೀಳಿನ ಅವಲಂಬನೆಯ ಪ್ರಮಾಣವನ್ನು ಗಮನಿಸಿ ಅವರನ್ನು ಒಳರೋಗಿಗಳೆಂದು ಚಿಕಿತ್ಸೆ ನೀಡಲಾಗುತ್ತದೆ. ಆದರೆ ನಿರ್ವಿಷೀಕರಣವು ವಾಸ್ತವವಾಗಿ ಮದ್ಯದ ಗೀಳಿನ ರೋಗವನ್ನು ವಾಸಿ ಮಾದುವದಿಲ್ಲ.[೧೨] ಆದ್ದರಿಂದ ನಿರ್ವಿಷೀಕರಣದ ಚಿಕಿತ್ಸೆಗೆ ಅದಕ್ಕೆ ಪೂರಕವಾದ ನಿಯಮಗಳನ್ನು ಅನುಸರಿಸಿ ಸೂಕ್ತ ಮಾರ್ಪಾಡು ಮಾಡಬೇಕಾಗುತ್ತದೆ.ಇಲ್ಲಿ ಮತ್ತೆ ರೋಗಿಯು ಅದೇ ಪರಿಸ್ಥಿಗೆ ಅಂಟಿಕೊಳ್ಳದಂತೆ [೧೨] ನೋಡಿಕೊಳ್ಳಬೇಕಾಗುತ್ತದೆ.

ಸಮೂಹ ಚಿಕಿತ್ಸೆ ಮತ್ತು ಮಾನಸಿಕ ರೋಗನಿದಾನ ಚಿಕಿತ್ಸೆ

ಮದ್ಯದ ನಿಯಂತ್ರಣಕ್ಕಾಗಿರುವ ಸ್ಥಳೀಯ ಸೇವಾ ಕೇಂದ್ರ.

ನಿರ್ವಿಷೀಕರಣದ ನಂತರ ಹಲವಾರು ವಿಭಿನ್ನ ಸಮೂಹ ಚಿಕಿತ್ಸೆ ಅಥವಾಮಾನಸಿಕ ನೆರವಿನ ಸಹಾಯಹಸ್ತ ಪದ್ದತಿಗಳನ್ನು ಬಳಸಿ ಮದ್ಯದ ಗೀಳನ್ನು ಬಿದಿಸಲು ಪ್ರಯತ್ನ ಮಾಡಬಹುದಾಗಿದೆ.ಸ್ವಲ್ಪಮಟ್ಟಗಿನ ಪರಿಹಾರವನ್ನೂ ಸಹ ಮಾಡಿಕೊಳ್ಳಬಹುದಾಗಿದೆ. ಪರಸ್ಪರ ನೆರವಿನ ಗುಂಪುಗಳು ಆಪ್ತಸಮಾಲೋಚನೆ ನಡೆಸುವ ಮೂಲಕ ಸಾಮಾನ್ಯವಾಗಿ ಈ ಕಾಯಿಲೆಗೆ ಒಂದು ಪರಿಹಾರ [೧೩][೧೪] ಸೂಚಿಸಬಹುದು.

ಪಡಿತರ ಪದ್ದತಿ ಮತ್ತು ಮತ್ತು ತೀವ್ರತೆ

ಪಡಿತರ ಪದ್ದತಿ ಮತ್ತು ತೀವ್ರತೆಯನ್ನು ನಿಯಂತ್ರಿಸಲು ಮಾಡ್ ರೇಟ್ ಮ್ಯಾನೇಜ್ ಮೆಂಟ್ ಮತ್ತು ಕುಡಿತದ ಪರಿಣಾಮಗಳ ಸೂಚಿ ಪಟ್ಟಿಯನ್ನು ಅನುಸರಿಸಬೇಕಾಗುತ್ತದೆ. ಬಹಳಷ್ಟು ಮದ್ಯದ ಗೀಳು ಇರುವವರುಮಿಂತಹ ಕಡಿತದ ಪಡಿತರ ವಿಧಾನವನ್ನು ಸಹಿಸದ ಮದ್ಯವ್ಯಸನಿಗಳು ಕುಡಿತವನ್ನು ನಿಯಂತ್ರಿಸಲು ಅಸಮರ್ಥರಾಗುತ್ತಾರೆ. ಒಂದು ವರದಿ 2002 U.S.ಮೂಲದ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆನ್ ಅಲ್ಕೊಹಾಲ್ ಅಬ್ಯುಸ್ ಮತ್ತು ಅಲ್ಕೊಹಾಲಿಸಮ್ (NIAAA)ಪ್ರಕಾರ ಸುಮಾರು 17.7ಪ್ರತಿಶತದಷ್ಟು ಜನರು ವೈಯಕ್ತಿಕ ಚಿಕಿತ್ಸೆಗೆ ಒಳಗಾಗುವದರೊಂದಿಗೆ ತಮ್ಮ ಕುಡಿತದ ಪ್ರಮಾಣವನ್ನು ಕಡಿಮೆಗೊಳಿಸಿಕೊಳ್ಳಲು ಸಮರ್ಥರಾದರು.[೭೫] ಇಂತಹ ಗುಂಪು ಅವಲಂಬನೆಯ ಪ್ರಮಾಣದಲ್ಲಿ ಗಣನೀಯ ಇಳಿಮುಖವನ್ನು [೭೫] ತೋರಿದರು. ಇದರ ಸತತ ಅಧ್ಯಯನವು ಇದೇ ವಿಷಯವನ್ನು ಬಳಸಿ 2001-2002ರಲ್ಲಿ ಪರೀಕ್ಷೆ ನಡೆಸಿತು.ಅದೇ ವೇಳೆಗೆ ಅಂದರೆ 2004-2005ರಲ್ಲಿ ಕುಡಿತದ ಗೀಳಿನ ಸಮಸ್ಯೆಯಿಂದ ಉಂಟಾಗುವ ಸರಳ ತೊಂದರೆಗಳನ್ನು ತಡೆಯಲಾಯಿತು. ಈ ಅಧ್ಯಯನದ ಪ್ರಕಾರ ಸಾಕಷ್ಟು ಮದ್ಯದ ದುರಭ್ಯಾಸದ ವ್ಯಕ್ತಿಗಳಲ್ಲಿ ಒಂದು ಸ್ಥಿರತೆ ತರುವಲ್ಲಿ ಸಾಫಲ್ಯ [೭೬] ಗಳಿಸಲಾಯಿತು.[೭೭] ಸುದೀರ್ಘ (60ವರ್ಷಗಳ)ನಿರಂತರ ಅಧ್ಯಯನದಿಂದ ಮದ್ಯದ ಗೀಳಿನ ಸಮೂಹದ ವ್ಯಕ್ತಿಗಳು ಮತ್ತೆ ತಮ್ಮ ಕುಡಿಯುವ ಚಟಕ್ಕೆ ಬಲಿಯಾಗಲು ಕೆಲ ಸಮಯ ತೆಗೆದುಕೊಂಡರು.ಹೀಗಾಗಿ ಕೆಲವು ಗುಣಮುಖದ ಪ್ರಕರಣಗಳು ಉತ್ತಮ ಫಲಿತಾಂಶವನ್ನು [೭೭] ತಂದವು.

ಔಷಧಗಳು

ಮದ್ಯದ ಗೀಳು ಬಿಡಿಸಲು ಹಲವಾರು ಚಿಕಿತ್ಸಾ ಉಪಾಯಗಳನ್ನು ಭಾಗಶ:ಬಳಸಲಾಗುತ್ತದೆ.

ಸದ್ಯ ಚಾಲತಿಯಲ್ಲಿರುವ ಔಷಧೀಕರಣ

  • ಅಂಟ್ ಅಬ್ಯುಸ್ ದಿಸಲ್ಫಿರ್ಮ್ ಔಷಧಿಗಳು ಕುಡಿತದ ದುರಭ್ಯಾಸ ಕಡಿಮೆಗೊಳಿಸಲು ಎಸೆಟಾಲ್ಡೆಹೈಡ್ ಗಳ ರಾಸಾಯನಿಕ ಪ್ರಕ್ರಿಯೆಗಳನ್ನು ವಾಸಿಗಾಗಿ ಉಪಯೋಗಿಸಲಾಉತ್ತದೆ. ಎಸೆಟಾಲೈಹೈಡ್ ನ್ನು ಕುಡಿತದ ಅಮಲು ಅಥವಾ ಹ್ಯಾಂಗೊವರ್ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ವಿಪರೀತ ಕುಡಿತವು ಅನಾನುಕೂಲತೆಯನ್ನು ತರುವುದಲ್ಲದೇ ಇದರ ಪರಿಣಾಮವು ಬಹುಕಾಲದ ವರೆಗೆ ದೇಹದ ಮೇಲೆ ಅಮಲಿನ ನಶೆಯ ಗುಂಗನ್ನು ತರುತ್ತದೆ. ಈ ಔಷಧಿ ಬಳಸುವದರಿಂದ ಮದ್ಯದ ಗೀಳು ಇರುವವರು ಬಹುಮಟ್ಟಿಗೆ ತಮ್ಮ ಪ್ರಮಾಣವನ್ನು ಇಳಿಮುಖಗೊಳಿಸುತ್ತಾರೆ. ಇತ್ತೀಚಿನ 9ವರ್ಷಗಳ ಅಧ್ಯಯನವು ಹಲವಾರು ಸಂಯುಕ್ತ ಔಷಧಿಗಳನ್ನು ಒಟ್ಟುಗೂಡಿಸಿ ಪ್ರಾಯೋಗಿಕವಾಗಿ ಪ್ರಯತ್ನಿಸಿದಾಗ ಅದರಲ್ಲೂ ಕಾರ್ಬಾಮೈಡ್ ನಂತಹ ಸಂಯುಕ್ತಗಳು ಡಿಸಲ್ಫರಾಮ್ ನೊಂದಿಗೆ ಸೇರಿ ಸಮಗ್ರ ಚಿಕಿತ್ಸೆ ನೀಡಲು ನಿರ್ಧರಿಸಿದ್ದರಿಂದ ಸುಮಾರು ಪ್ರತಿಶತ 50ರಷ್ಟು ಮದ್ಯದ ಗೀಳನ್ನು ಬೊಇಡಿಸುವ [೭೮] ಸಾಧ್ಯತೆಗಳಿವೆ.
  • ಟೆಂಪೊಸಿಲ್ ಕ್ಯಾಲ್ಸಿಯಮ್ ಕಾರ್ಬಿಮೈಡ್ ಗಳು ಅಂಟಾಬ್ಯುಸ್ ನಂತೆಯೇ ಕೆಲಸ ಮಾಡುತ್ತವೆ;ಡಿಸಲ್ಫರಾಮ್ ನಂತಹವುಗಳ ಸಣ್ಣ ಪ್ರಮಾಣದ ಅಡ್ದ ಪರಿಣಾಮಗಳು ಸಹ ಈ ಸಂದರ್ಭದಲ್ಲಿ ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ,ಹೆಪಾಟೊಟಾಕ್ಸಿಸಿಟಿ ಮತ್ತು ಖಿನ್ನತೆಗಳು ಕ್ಯಾಲ್ಸಿಯಮ್ ಕಾರ್ಬಿಮೈಡ್ ನಲ್ಲಿ [೭೮][೭೯] ಆಗುವದಿಲ್ಲ.
  • ನಲ್ಟ್ರೆಕ್ಸೊನ್ ಕೂಡಾ ಒಂದು ಪೈಪೋಟಿದಾಯಕ ನಿರೋಧಕವಾಗಿದ್ದು ಇದದು ವ್ಯಸನಿಗಳಿಗೆ ಪರಿಣಾಮಕಾರಿಯಾಗಿ ದುರಭ್ಯಾಸ ನಿಲ್ಲಿಸುವುದನ್ನು ಪರಿಹಾರವಾಗಿ ಮಾರ್ಪಡಿಸುತ್ತದೆ.
ಲ್ಟ್ರೆಕ್ಸೊನ್ ಮದ್ಯದ್ಸ ಗೀಳು ಮತ್ತಿತರ ಮಾದಕ ದೃವ್ಯಗಳ ಬಳಕೆಗೆ ಕಡಿವಾಣ ಹಾಕುತ್ತದೆ. ಮದ್ಯದ ಸೇವನೆಯಿಂದ ದೇಹದಲ್ಲಿ ಎಂಡಾರ್ಫಿನ್ಸ್ ಗಳ ಬಿಡುಗಡೆಯಾಗಿ ಡೊಪ್ ಮೈನಗಳನ್ನು ಹೊರಸೂಸಿದಾಗ ನಲ್ಟ್ರೆಕ್ಸೊನಿ ದೇಹದಲ್ಲಿನ ಮದ್ಯದ ಪ್ರಮಾಣದ ದುಷ್ಪರಿಣಮಾಗಳು ನಿಯಂತ್ರಣಕ್ಕೆ ಬರುತ್ತವೆ. ಇದರಿಂದಾಗಿ ಕುಡಿತದ ಕೆಲಮಟ್ಟಿಗಿನ ದುಶ್ಚಟದ ಪರಿಣಾಮವನ್ನು ಕಡಿಮೆ [೮೦] ಮಾಡಬಹುದಾಗಿದೆ.
  • ಅಕ್ಯಾಂಪ್ರೊಸೇಟ್ (ಇದನ್ನು ಕ್ಯಾಂಪ್ರಾಲ್ ಎಂದೂ ಕರೆಯುತ್ತಾರೆ)ಇದು ದೇಹದ ರಸಾಯನಶಾಸ್ತ್ರವನ್ನು ಬದಲಿಸುತ್ತದೆ.ಇದರಿಂದ ಅಲ್ಕೊಹಾಲ್ ಅವಲಂಬನೆಯನ್ನು ಇಳಿಮುಖವಾಗುವ ಸಾಧ್ಯತೆ ಇರುತ್ತದೆ.ಗ್ಲುಟಾಮೇಟ್ ನ ಪ್ರತಿಕ್ರಿಯೆಗಳಿಂದಾಗಿ ಕುದಿತದ ಗೀಳು ಬಿಟ್ಟ ನಂತರ ನ್ಯುರೊಟ್ರಾನ್ಸ್ ಮೀಟರ್ ಯಾವಾಗಲೂ ತನ್ನ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತದೆ.ಅಂದರೆ ಕುಡಿತದ ನಂತರದ ಎಲ್ಲಾ ಪ್ರತಿಕ್ರಿಯೆಗಳಿಗೆ ಅದು ಪ್ರತಿಸ್ಪಂದಿಸಿ ಅಡ್ಡ ಪರಿಣಾಮಗಳನ್ನು [೮೧] ತಡೆಗಟ್ಟುತ್ತದೆ. ದಿ [೮೨] ಫೂಡ್ ಅಂಡ್ ಡ್ರಗ್ ಅಡ್ಮಿನಿಸ್ಟೃಇಶನ್ (FDA)ಸಂಸ್ಥೆಯು ಈ ಔಷಧಿಯನ್ನುಬಳಸಲು 2004ರಲ್ಲಿ [೮೨] ಸಮ್ಮತಿಸಿದೆ.

ಪ್ರಾಯೋಗಿಕ ಔಷಧೋಪಚಾರಗಳು

  • ಟಾಪಿರಾಮೇಟ್ (ಇದರ ವಾಣಿಜ್ಯಿಕ ಹೆಸರು ಟೊಪಾಮ್ಯಾಕ್ಸ್ )ಇದು ಸಾಕ್ರೀನ್ ನ ಸಕ್ಕರೆ ಪ್ರಮಾಣದ ಮೊನೊಸಾಕ್ರೈಡ್ D-ಫ್ರಕ್ಟೋಸ್,ಮದ್ಯದ ಗೀಳನ್ನು ಅತ್ಯಂತ ಸುಲಭವಾಗಿ ಬಿಡಿಸುವ ಇಲ್ಲವೆ ಅದನ್ನು ತ್ಯಜಿಸುವ ಗುಣವನ್ನು ಕುಡಕರಲ್ಲಿ ಬೆಳೆಸಲು ಕಾರಣವಾಗುತ್ತದೆ. ಸಾಕ್ಷಿಗಳ ಆಧಾರದ ಪ್ರಕಾರ ಟಾಪಿರಾಮೇಟ್ ನಿರೋಧಕವಾಗಿ ಕೆಲಸ ಮಾಡಿ ಗ್ಲುಟಾಮೇಟ್ ನ ಒಂದಿಗೆ ಸೇರಿ ಡೊಪಾಮೈನ್ ನ್ನು ಬಿಡುಗಡೆಗೊಳಿಸಿ ದೇಹದಲ್ಲಿರುವ ಗಾಮ್ಮಾ ಅಮಿನೊಬಿಟ್ರಿಕ್ ಆಮ್ಲವನ್ನು ಹೆಚ್ಚಿಸಿ ಮದ್ಯದ ಗೀಳನ್ನು ತಹಬಂದಿಗೆ ತರುತ್ತದೆ. ಸುಮಾರು 2008ರಲ್ಲಿ ಟಾಪಿರಾಮೇಟ್ ನ ಮೇಲೆ ಮ್ನಡೆಸಿದ ಅಧ್ಯಯನದ ಪ್ರಕಾರ ಇದರ ಪರಿಣಾಮಗಳು ಅತ್ಯಂತ ಭರವಸೆ ಮೂಡಿಸಿದ ಫಲಿತಾಂಶಗಳನ್ನು ನೀಡಿತು.ದಿಅರ ಬಗ್ಗೆ ಹಲವಾರು ಲೇಖನಗಳು ಪ್ರಕಟಗೊಂಡಿದ್ದು ಆದರೆ ಇದಕ್ಕೆ ಪೂರಕವಾಗಿ ಕುಡಿತದ ವ್ಯಸನವನ್ನು ದೂರ ಮಾಡುವುದು ಬಹಳಷ್ಟು ಸಾಧ್ಯತೆಗಳನ್ನು ತಂದುಕೊಟ್ಟಿತು.ಇದರಲ್ಲಿ ಮದ್ಯದ ಮೇಲಿನ ಅವಲಂಬನೆಗೂ ಕಡಿವಾಣ [೮೩] ಹಾಕಲಾಯಿತು. ಇತ್ತೀಚಿನ 2010ರ ಅಧ್ಯಯನದ ಪ್ರಕಾರ ಟಾಪಿರಾಮೇಟ್ ಈಗಿರುವ ಎಲ್ಲಾ ಔಷಧಿಗಳಿಗಿಂತಲೂ ಮದ್ಯದ ಗೀಳುಬಿಡಿಸುವ ಎಲ್ಲಾ ಔಷಧಗಳಿಗಿಂತ ಉತ್ತಮವಾಗಿದೆ. ಟಾಪಿರಾಮೇಟ್ ಪರಿಣಾಮಕಾರಿಯಾಗಿ ಕುಡಿತದ ಅವಲಂಬನೆ ಮತ್ತು ತೀವ್ರತೆಯನ್ನು ತಡೆಯುತ್ತದೆ.ಇದು ಬದುಕಿನ ಜೀವನಮಟ್ಟವನ್ನು [೮೪] ಹೆಚ್ಚಿಸುತ್ತದೆ.

ಕೆಲವೊಂದು ಔಷಧೋಪಚಾರಗಳು ಕೆಟ್ಟ ಪರಿಣಾಮಕ್ಕೊ ಕಾರಣವಾಗಬಹುದು.

  • ಬೆಂಜೊಡೈಜೊಪೈನ್ಸ್,ಗಳು ಮದ್ಯದ ಗೀಳು ಬಿಡಿಸಲು ನಿರಂತರವಾಗಿ ಬಳಸುವದರಿಂದ ವ್ಯಸನದ ಪ್ರಮಾಣ ಒಮ್ಮೊಮ್ಮೆ ಹೆಚ್ಚಾಗುವ ಸಾಧ್ಯತೆ ಇವೆ. ಬೆಂಜೊಡೈಜೆಪೈನ್ಸ್ ಗಳನ್ನು ಬಹುಕಾಲದ ಮದ್ಯದ ಗೀಳನ್ನು ಬಿಡಿಸಲು ಮತ್ತು ಇದರ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.ಅಂದರೆ ಬೆಂಜೊಡೈಪೈನ್ಸ್ ಬಳಸುವವರು ಕೊಂಚ ಜಾಗೃತೆಯಿಂದ ಉಪಯೋಗಿಸಬೇಕಾಗುತ್ತದೆ.[೮೫] ಇಂತಹ ಪ್ರಕಾರದ ಔಷಧಗಳನ್ನು ಮದ್ಯದ ಗೀಳಿನಿಂದಾಗಿ ವಿಸ್ಮೃತಿಗೆ ಒಳಗಾದವರಿಗೆ ಅಥವಾ ತೀವ್ರ ಆತಂಕಕ್ಕೊಳಗಾದವರಿಗೆ [೮೫] ಬಳಸಲಾಗುತ್ತದೆ. ಮೊದಲ ಬಾರಿಗೆ ಬೆಂಜೊಡೈಜೆಪೈನ್ಸ್ ಗಳನ್ನು ಬಳಸಿದಾಗ ವ್ಯಸನದ ವ್ಯಕ್ತಿಗಳಲ್ಲಿ ಇದರ ಪರಿಣಾಮ ಹೆಚ್ಚಿನ ಪ್ರಮಾಣದಲ್ಲಾದರೂ ಮತ್ತೆ ಮದ್ಯದ ಅವಲಂಬನೆಯು ಇದನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ.ಸುಮಾರು ಕಾಲು ಭಾಗದಷ್ಟು ಜನರು ಹಿಂಜರಿತದಿಂದ ಇದರ ಬಳಕೆಯನ್ನು ಸಾಧ್ಯವಾದಷ್ಟು ನಿಲ್ಲಿಸಲು ಪ್ರಯತ್ನಿಸುತ್ತಾರೆ. ರೋಗಿಗಳು ನಿರಂತರವಾಗಿ ಬೆಂಜೊಡೈಜೆಪೈನ್ಸ್ ತೆಗೆದುಕೊಳ್ಳುವುದರಿಂದ ತಮ್ಮ ಈ ಗೀಳಿಗೆ ತಾನಾಗಿಯೇ ಕಡಿತ ಬೀಳಬಹುದೆಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ದೀರ್ಘಕಾಲಿಕವಾಗಿ ಬೆಂಜೊಡೈಜೆಪೈನ್ಸ್ ನ್ನು ಉಪಯೋಗಿಸುವವರು ವೇಗವಾಗಿ ಗೀಳನ್ನು ಬಿಟ್ಟ ಉದಾಹರಣೆಗಳಿಲ್ಲ.ಈ ಸಂದರ್ಭದಲ್ಲಿ ರೋಗಿಯು ಮತ್ತೆ ಅಥವಾ ಹಠಾತ್ ಕುಡಿತಕ್ಕೆ ಬಲಿಯಾಗುವ ತೀವ್ರತೆಯನ್ನೂ ಅನುಭವಿಸಬೇಕಾಗುತ್ತದೆ.ಇದು ನಿಜವಾಗಿಯೂ ಹಲವಾರು ಬಾರಿ ಅಪಾಯಕಾರಿಯಾಗಿ ಕಾಣಬರುತ್ತದೆ.[೮೬][೮೭] ಟೇಪರ್ ನ 6–12ತಿಂಗಳಗಳ ಬಳಕೆಯು ಸಾಕಷ್ಟು ಉಪ್ಯುಕ್ತ ಎನಿಸಿದೆ.ಕುಡಿತದ ಗೀಳನ್ನು ಕಡಿಮೆ ಮಾಡುವಲ್ಲಿ ಇದು ಯಶಸ್ವಿಯೂ [೮೬][೮೭] ಆಗಿದ್ದಿದೆ.

ಎರಡು ರೀತಿಯ ದುರಭ್ಯಾಸಗಳು

ಮದ್ಯದ ಗೀಳಿರುವವರು ಇತ್ಯರೆ ಮಾದಕ ದೃವ್ಯ ಸೇವನೆ ಮಾಡುವವರಿಗೆ ನೀಡಬೇಕಾದ ಚಿಕಿತ್ಸೆಯನ್ನೇ ನೀಡಬೇಕಾಗಬಹುದು.ಅಂದರೆ ಮಾನಸಿಕ ರೋಗ ಚಿಕಿತ್ಸಾ ಪದ್ದತಿಯನ್ನು ಸಹ ಇಲ್ಲಿ ಕಾಣಬಹುದಾಗಿದೆ. ಇದರಲ್ಲಿ ಬಹಳಷ್ಟು ಮದ್ಯದ ಗೀಳಿರುವವರು ಬೆಂಜೆಡೈಜೆಪೈನ್ ಅವಲಂಬನೆ ಹೊಂದಿರುತ್ತಾರೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ.ಅಂದರೆ ಸುಮಾರು 10-20 ಶೇಕಡಾ ಜನರು ಬೆಂಜೆಡೈಜೆಪೈನ್ಸ್ ನ ಅವಲಂಬನೆ ಇಲ್ಲವೆ ಅದರ ದುರುಪಯೋಗದ ಸಮಸ್ಯೆಗಳಿಗೆ ಬಲಿಯಾಗುತ್ತಾರೆ. ಅಲ್ಕೊಹಾಲ್ ಮೊದಲೇ ಒಂದು ಉತ್ತೇಜಕ-ತೀವ್ರತರವಾದದ್ದು,ಉಳಿದ ಬಾರ್ಬಿಚ್ರೇಟ್ಸ್ಬೆಂಜೆಡೈಜೆಪೈನ್ಸ್,ಮತ್ತುಬೆಂಜೆಡೈಜೆಪೈನ್ಸ್ ರಹಿತ ಗಳು ಈ ದುರಭ್ಯಾಸದ ಉದ್ವಿಗ್ನತೆಗೆ ದಾರಿ ಮಾಡುಕೊಡುತ್ತವೆ. ಇನ್ನುಳಿದ ಮಾದಕ ವಸ್ತುಗಳಿಗೆ ವಾಲುವ ಸಂದರ್ಭಗಳೂ ಅಂದರೆ ಜೊಲ್ಪಿಡೆಮ್ ಮತ್ತು ಜೊಪಿಕ್ಲೊನ್ ಅಲ್ಲದೇ ಒಪಿಏಟ್ಸ್ ಮತ್ತು ಅನಧಿಕೃತ ಮಾದಕ ದೃವ್ಯಗಳನ್ನು ಬಳಸುವುದು ಸಾಮಾನ್ಯವಾಗಿದೆ.[೧೫] ಅವಲಂಬನೆ ಮತ್ತು ಉದ್ವಿಗ್ನತೆಯನ್ನುಂಟು ಮಾಡುವ ಮಾದಕ ವಸ್ತುಗಳು ಉದಾಹರಣೆಗಳೆಂದರೆ ಬೆಂಜೆಡೈಜೆಪೈನ್ ಹಿಂತೆಗೆತವು ಅಲ್ಕೊಹಾಲ್ ದುಷ್ಪರಿಣಾಮಕ್ಕೆ ಗುರಿಯಾಗಬೇಕಾಗುತ್ತದೆ.ಔಷೋಧಪಚಾರಕ್ಕೆ ತೀವ್ರವಾಗಿ ಸಿಗದಿದ್ದರೆ ಮಾನಸಿಕ ಅಸ್ವಸ್ಥೆಯ ಅಪಾಯವೂ ತಪ್ಪಿದ್ದಲ್ಲ.ಅಥವಾ ಇದನ್ನು ಸೂಕ್ತವಾಗಿ ನೋದಿಕೊಳ್ಳದಿದ್ದರೆ ಸೆಳೆತದಂತಹ ಅಪಸ್ಮಾರ ರೋಗವೂ [೧೫] ಉಂಟಾಗಬಹುದು. ಬೆಂಜೆಡೈಜೆಪೈನ್ ಅವಲಂಬನೆಯು ಇದರ ಕಾಳಜಿಪೂರ್ವಕ ಪ್ರಮಾಣವನ್ನು ಅನುಸರಿಸಬೇಕಾಗುತ್ತದೆ.ಯಾಕೆಂದರೆ ಬೆಂಜೆಡೈಜೆಪೈನ್ ನ ಅವಲಂಬನೆಯ ಲಕ್ಷಣ ತೋರಿಸುತ್ತದೆ.ಇದು ಆರೋಗ್ಯ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಹಲವಾರು ಬಾರಿ ಬೆಂಜೆಡೈಜೆಪೈನ್ ಗಳು ಮದ್ಯವ್ಯಸನಿಗಳಲ್ಲಿ ಮತ್ತೆ ಕುಡಿತಕ್ಕೆ ಎಳೆಸುವ ಸಂದರ್ಭಗಳನ್ನು ಕೂಲಂಕಷವಾಗಿ ಗಮನಿಸಬೇಕಾಗುತ್ತದೆ. ಈ ಬೆಂಜೆಡೈಜೆಪೈನ್ ಗಳು ಕುಡಿತದ ಸಮಸ್ಯೆ ಎದುರಿಸುವವರಲ್ಲಿ ಹೆಚ್ಚಿನ ಪ್ರಮಾಣದ ಮದ್ಯದ ಸೇವನೆಗೆ ಕಾರಣವಾಗಿ ಸಮಸ್ಯೆಯನ್ನುಂಟು [೮೮] ಮಾಡಬಹುದಾಗಿದೆ.

ಸೋಂಕು/ಸಾಂಕ್ರಾಮಿಕಶಾಸ್ತ್ರ

ಅಸಮರ್ಥ-ಹೊಂದಾಣಿಕೆಯ ವಾರ್ಷಿಕ ಮದ್ಯದ ಪ್ರಮಾಣದ ಅಪಾಯಗಳು ತಲಾ -ಪ್ರತಿ 100,000 inhabitants in 2004.[190][191][192][193][194][195][196][197][198][199][200][201][202]
ಒಟ್ಟು ದಾಖಲಾದ ವಾರ್ಷಿಕ ತಲಾ ಮದ್ಯದ ಪ್ರಮಾಣ ಉಪಭೋಗ p (15+), ಲೀಟರಗಳಲ್ಲಿ ಶುದ್ದ ಮದ್ಯ[೮೯]

ಸಾಮಾನ್ಯವಾಗಿ ಹಲವಾರು ದೇಶಗಳಲ್ಲಿ ರೋಗದ ಲಕ್ಷಣಗಳು ಹಾಗು ಏರುಪೇರುಗಳುಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. "ಬಹುಮುಖ್ಯವಾದ ವಿಷಯದ ಮೇಲಿನ ಮದ್ಯದ ಗೀಳಿರುವವರ ಅವಲಂಬನೆ ಎಂದರೆ ಅವರನ್ನು ಚಿಕಿತ್ಸೆಗೆ ಸಜ್ಜುಗೊಳಿಸುವುದು ಒಂದು ಸಮಸ್ಯೆಯೇ [೭೪] ಸರಿ." ಯುನೈಟೆಡ್ ಕಿಂಗ್ ಡಮ್ ನಲ್ಲಿ"ಅವಲಂಬಿತ ಕುಡಕರ" ಸಂಖ್ಯೆಯನ್ನು 2.8 ದಶಲಕ್ಷ ಎಂದು 2001ರಲ್ಲಿ [೯೦] ಅಂದಾಜಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ವಿಶ್ವಾದ್ಯಂತ ಸುಮಾರು 140ದಶಲಕ್ಷ ಜನರು ಮದ್ಯದ ಅವಲಂಬನೆಯ ಗೀಳಿನಿಂದ [೧೮][೧೯] ಬಳಲುತ್ತಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮತ್ತು ಪಶ್ಚಿಮ ಯುರೊಪ್ ನಲ್ಲಿ ಸುಮಾರು 10ರಿಂದ20 ಶೇಕಡಾ ಪುರುಷರು ಮತ್ತು ಶೇಕಡಾ 5ರಿಂದ 10ರಷ್ಟು ಮಹಿಳೆಯರು ಮದ್ಯದ ಗೀಳಿಗೆ ಬಲಿಯಾಗುವ [೯೧] ಸಂಭವವಿದೆ.

ವೈದ್ಯಕೀಯ ಮತ್ತು ವೈಜ್ಞಾನಿಕ ವಲಯದಲ್ಲಿ ಮದ್ಯಪಾನದ ವಿಪರೀತತೆಯು ಒಂದು ಕಾಯೊಲೆಯಾಗಿ ಪರಿಗಣಿಸಲ್ಪಡುತ್ತದೆ. ಉದಾಹರಣೆಗಾಗಿ ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ಪ್ರಕಾರ ಮದ್ಯವೂ ಒಂದು ಮಾದಕ ದೃವ್ಯ್ವೆನಿಸಿದೆ."ಇದರ ದುಶ್ಚಟವು ಅವ್ಯಾಹತವಾಗಿದ್ದು ಇದರಿಂದಾಗಿ ಸತತ ಸೇವನೆಯ ಗೀಳಿಗೆ ಕುಡುಕ ವ್ಯಕ್ತಿ ಬಲಿಯಾಗುತ್ತಾನೆ.ಇದು ಆತನ ಮೆದುಳು ಮತ್ತು ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಂತರ ವ್ಯಸನವಾಗಿ ಮಾರ್ಪಟ್ಟು ಜೈವಿಕ ಸಂವೇದನೆಗೆ ಒಳಗಾಗಿ ಸುತ್ತಲಿನ ಪರಿಸರದ ಮೇಲೂ ಪರಿಣಾಮವನ್ನುಂಟು ಮಾಡಬಲ್ಲುದು.(ಉದಾಹರಣೆಗೆ: ಮೆದುಳಿನ ಪ್ರಬುದ್ದತೆಯ ಹಂತದಲ್ಲೊ ಇದು [೯೨] ಕಾಣಬಹುದು)

ಮದ್ಯದ ಚಟವು ಸಾಮಾನ್ಯವಾಗಿ ಪುರುಷರನ್ನೇ ಹೆಚ್ಚು ಆವರಿಸಿಕೊಳ್ಳುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಇದು ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವಲ್ಲಿ [೧೭] ಸಫಲವಾಗಿದೆ. ಸದ್ಯದ ಸಾಕ್ಷಿಗಳ ಪ್ರಕಾರ ಪುರುಷರು ಮತ್ತು ಮಹಿಳೆಯರು ಒಟ್ಟು50-60ಶೇಕಡಾ ಅನುವಂಶೀಕವಾಗಿ ಮತ್ತು40-50ಶೇಕಡಾದಷ್ಟು ಪರಿಸರದಿಂದಾಗಿ ಈ ಗೀಳು ಅಂಟಿಸಿಕೊಳ್ಳುವ ಸಾಧ್ಯತೆ [೯೩] ಹೆಚ್ಚು.

ಪ್ರಾಗ್ನೋಸೀಸ್‌

ಸುಮಾರು 2002ರಲ್ಲಿ ನ್ಯಾಶನಲ್ ಇನ್ ಸ್ಟಿಟ್ಯೂಟ್ ಆನ್ ಆಲ್ಕೊಹಾಲ್ ಅಬ್ಯುಸ್ ಅಂಡ್ ಅಲ್ಕೊಹಾಲಿಸಮ್ ಸಂಸ್ಥೆಯು ಒಟ್ಟು4,422 ಜನರನ್ನು ಪರೀಕ್ಷೆಗೆ ಒಳ್ಪದಿಸಿತು.ಇದರಲ್ಲಿ ಅಲ್ಕೊಹಾಲ್ ಅವಲಂಬನೆ ಮತ್ತು ಒಂದು ವರ್ಷದ ನಂತರದ ಪ್ರಯೋಗದಲ್ಲಿ25.5ಶೇಕಡಾ ಜನರು ಯಾವದೇ ಚಿಕಿತ್ಸೆಗೆ ಒಳಗಾಗಲಿಲ್ಲ.ಅದರಲ್ಲಿ ಆ ರೋಗಿಗಳ ಪ್ರಯೋಗದ ವಿವರ [೯೪] ಹಂಚಿಕೆ:

  • ಶೇಕಡಾ 25 ರಷ್ಟು ಇನ್ನೂ ಅವಲಂಬಿತರು
  • ಶೇಕದಾ 27.3 ಭಾಗಶ:ಅವಲಂಬನೆ (ಕೆಲವು ಲಕ್ಷಣಗಳು ಇರುತ್ತದೆ)
  • ಶೇಕಡಾ 11.8 ರಷ್ಟು ಲಕ್ಷಣವಿಲ್ಲದ ಕುಡುಕರು(ಸೇವನೆ ಹೆಚ್ಚಳದ ಸಂಬಹ್ವನೀಯತೆ)
  • ಶೇಕಡಾ 35.9 ರಷ್ಟು ಸಂಪೂರ್ಣ ಗುಣಮುಖ- — ಇದರಲ್ಲಿ ಶೇಕಡಾ 17.7 ರಷ್ಟು ಕಡಿಮೆ ಅಪಾಯಕಾರಿ ಕುಡಿತದ ಪರಿಣಾಮ ಹಾಗು ಶೇಕಡಾ 18.7ರಷ್ಟು ವ್ಯಸನಕ್ಕೆ ಅಂಟಿಕೊಂಡವರನ್ನು ವರ್ಗೀದಕರಿಸಬಹುದು.

ಇದಕ್ಕೆ ತದ್ವಿರುದ್ದ ಎನ್ನುವಂತೆ ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಜಾರ್ಜ್ ವಿಲಿಯಂಟ್ ಅವರ ಪ್ರಕಾರ (ಸುಮಾರು 60ವರ್ಷಗಳ) ಸುದೀರ್ಘ ಅದ್ಯಯನದ ಪ್ರಕಾರ "ನಿಯಂತ್ರಿತ ಕುಡಿತಕೆ ಮರಳುವವರ ಸಂಖ್ಯೆ ಗಣನೀಯವಾಗಿಲ್ಲ,ಔಷೋಧಪಾದಚಾರದ ಹತ್ತು ವರ್ಷಗಳ ನಂತರ ಮತ್ತೆ ಅದೇ ಲಕ್ಷಣಗಲನ್ನು ಇಂತಹವರಲ್ಲಿ [೯೫] ಕಾಣಬ್ನಹುದಾಗಿದೆ." "ವೇಲಿಯಂಟ್ ಅವರ ಪ್ರಕಾರ "ನಿಯಂತ್ರಿತ ಕುಡಿತಕ್ಕೆ ವಾಪಸಾದವರ ಸಂಖ್ಯೆ ಕಡಿಮೆ ಅಥವಾ ವಿರಳ "ಎಂಬುದನ್ನು ಅಲ್ಪಾವಧಿಯ ಅಧ್ಯಯನ ತೋರಿಸಿಕೊಟ್ಟಿದೆ.

ಇತಿಹಾಸ

ಪದಮೂಲ

1904 ರಲ್ಲಿನ ಮದ್ಯದ ಗೀಳನ್ನು ವರ್ಣಿಸುವ ಕಾಯಿಲೆ ಕುರಿತ ಜಾಹಿರಾತು

"ಅಲ್ಕೊಹಾಲಿಸಮ್ " ಎಂಬ ಶಬ್ದವನ್ನು ಸ್ವಿಡನ್ನಿನ ವೈದ್ಯ ಮ್ಯಾಗ್ನಸ್ ಹಸ್ ಮೊದಲ ಬಾರಿಗೆ ಪರಿಚಯಿಸಿದರು,ಅದರೆ ಕುಡಿತದ ದುಷ್ಪರಿಣಾಮಗಳನ್ನು ಸೂಕ್ತ ರೀತಿಯಲ್ಲಿ ವರ್ಣಿಸಲು ಅನುಕೂಲವಾಗುವಂತೆ ಅವರು ಇದನ್ನು [೯೬] ಹೆಸರಿಸಿದರು.

AA' ಅವರ ಮೂಲಭೂತ ಪಠ್ಯ "ಬಿಗ್ ಬುಕ್ "ದ ಪ್ರಕಾರ ಮದ್ಯದ ಗೀಳು ದೈಹಿಕ ಅಲರ್ಜಿ ಅಥವಾ ಅಹಿತಕರ ಲಕ್ಷಣ ಮತ್ತು ಮಾನಸಿಕ ಕಾಯಿಲೆಯಾಗಿ [೯೭]: p.xxviii [೯೭]: p.23 [೯೮] ಪರಿಗಣಿಸಲ್ಪಡುತ್ತದೆ. ಆದರೆ "ಅಲರ್ಜಿ" ಎಂಬುದನ್ನು ಆಧುನಿಕವೈದ್ಯಶಾಸ್ತ್ರದಲ್ಲಿ ವ್ಯಾಖ್ಯಾನಿಸಿದಂತೆ [೯೯] ಇದರಲಿಲ್ಲ. ವೈದ್ಯ ಮತ್ತು ವ್ಯಸನದ ವಿಶೇಷಜ್ಞ ಡಾ.ವಿಲಿಯಮ್ ಡಿ ಸಿಲ್ಕ್ವರ್ಥ ಎಂ.ಡಿ ಅವರ ಪ್ರಕಾರ ಅವರು AA ಪುಸ್ತದಲ್ಲಿ ವಿವರಿಸಿದಂತೆ ಮದ್ಯದ ಗೀಳು ಇರುವವರು ತಮ್ಮ ಚಟವನ್ನು ಮಾನಸಿಕ ನಿಯಂತ್ರಣ ಮೀರಿ ಅದಕ್ಕೆ [೧೦೦] ಈಡಾಗುತ್ತಾರೆ.

[೧೦೧] ಸುಮಾರು 1960ರಲ್ಲಿ ಈ. ಮಾರ್ಟೊನ್ ಜೆಲ್ಲಿನೆಕ್ ಅವರು ಆಧುನಿಕ ಅಲ್ಕೊಹಾಲಿಸಮ್ ನ ರೋಗದ ಮೂಲವನ್ನು [೧೦೧] ಪ್ರಸ್ತುತಪಡಿಸಿದ. ಜೆಲ್ಲಿನಿಕ್ ನ ಈ ಅಧ್ಯಯನವು "ಅಲ್ಕೊಹಾಲಿಸಮ್ "ಅಥವಾ ಮದ್ಯದ ಗೀಳನ್ನು ವ್ಯಕ್ತಿ ತೋರುವ ವಿಶೇಷವನ್ನು ಆತ ಸಾಮಾನ್ಯ ಇತಿಹಾಸ ವಿವರಿಸಿದ್ದಾನೆ. ಆವಾಗಿನಿಂದ ಮದ್ಯದ ಗೀಳಿನ ವ್ಯಾಖ್ಯಾನವು ಮೇಲಿಂದ ಮೇಲೆ ಬದಲಾವಣೆ ಹೊಂದುತ್ತಾ ಬಂದಿದ್ದು ಗೋಚರವಾಗುತ್ತದೆ. ದಿ ಅಮೆರಿಕನ್ ಮೆಡಿಕಲ್ ಅಸೋಶಿಯೇಶನ್ ಇತ್ತೀಚಿಗೆ ಅಲ್ಕೊಹಾಲಿಸಮ್ ನ್ನು ಮೂಲಭೂತ ಸಾಂಕ್ರಾಮಿಕ ಪ್ರಾಥಮಿಕ ಕಾಯಿಲೆಗೆ [೯೨] ಹೋಲಿಸಲಾಗುತ್ತದೆ.

ಒಂದು ಅಲ್ಪಸಂಖ್ಯಾತ ವರ್ಗದ ವಲಯದ ಪ್ರಕಾರ ಹರ್ಬೆರ್ಟ್ ಫಿಂಗಾರೆಟ್ಟೆ ಮತ್ತುಸ್ಟಾಂಟೊನ್ ಪೀಲೆ ಅವರ ವಾದ ಪ್ರಕಾರದ ಮದ್ಯದ ಗೀಳು ಅಂಟಿಸಿಕೊಂಡವರು ಇದನ್ನು ಕಾಯೊಲೆಯೆಂದೇ ಗುರುತಿಸಿಕೊಳ್ಳುತ್ತಾರೆ. ಈ ಕಾಯಿಲೆಯ ನಮೂನೆಯನ್ನು ಟೀಕಿಸುವವರು "ವಿಪರೀತ ಕುಡಿತ" ಎಂದು ಅಲ್ಕೊಹಾಲ್ ನ ದುಷ್ಪರಿಣಾಮಗಳನ್ನು ಹೇಳುವಾಗ ವಿವರಿಸುತ್ತಾರೆ.

ಸಮಾಜ ಮತ್ತು ಸಂಸ್ಕೃತಿ

ಮದ್ಯದ ವಿಪರೀತ ಗೀಳಿನಿಂದಾಗುವ ಹಲವಾರು ವ್ಯತಿರಿಕ್ತ ಪರಿಣಾಮಗಳು ಆತನನ್ನು ಸಾಮಾಜಿಕವಾಗಿ ಹಿನ್ನಡೆಗೆ ನೂಕುತ್ತವೆ.ಇದರಿಂದ ಆರ್ಥಿಕವಾಗಿಯೂ ಮಾನವ ಕೆಲಸದ ಅವಧಿಯ ನಷ್ಟ,ಹಣಕಾಸಿನ ಹಾನಿ ಹಾಗು ವೈದ್ಯಕೀಯ ವೆಚ್ಚ ಇತ್ಯಾದಿಗಳು ಚಿಕಿತ್ಸಾ ವೆಚ್ಚಗಳು ಉಂಟಾಗುತ್ತವೆ. ಮದ್ಯದ ಬಳಕೆಯು ತಲೆಗುಂಟಾಗುವ ಗಾಯಗಳಿಗೆ ಹೆಚ್ಚಿನ ಕಾರಣವಾಗುತ್ತದೆ.ವಾಹನ ಅಪಘಾತಗಳು,ಹಿಂಸಾಚಾರ ಮತ್ತು ಹಲ್ಲೆಗಳು ಇದರ ವ್ಯತಿರಿಕ್ತ ಪರಿಣಾಮಗಳಾಗಿವೆ. ಹಣಕಾಸಿನ ಹಾನಿಯನ್ನೂ ಮೀರಿಯು ನೋವು ಮತ್ತು ಪ್ರಯಾಸವು ವ್ಯಕ್ತಿಗಳು ಅಲ್ಕೊಹಾಲಿಕ್ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ ಗರ್ಭಿಣಿಯೊಬ್ಬಳ ಮದ್ಯದ ಗೀಳು ಆಕೆಯ ಗರ್ಭದಲ್ಲಿರುವ ಎಳೆ ಕಂದಮ್ಮನಲ್ಲಿ ಮದ್ಯದ ಗೀಳಿನ ಲಕ್ಷಣವನ್ನು ತೋರಬಹುದು.ಇದು ತೀವ್ರತರ ಹಾನಿ ತಲುಪಿಸುವ ಸಾಧ್ಯತೆ [೧೦೨][೧೦೩] ಇದೆ.

ಒಂದು ಅಂದಾಜಿನ ಪ್ರಕಾರ ಅಲ್ಕೊಹಾಲ್ ಪಿಡುಗಿನಿಂದ ಆಯಾ ದೇಶಗಳಲ್ಲಿ ಒಟ್ಟು ಆದಾಯದ ಸುಮಾರು ಆರು ಶೇಕಡಾ GDP ಗೆ [೧೦೪] ಸಂಬಂಧಿಸಿರುತ್ತದೆ. ಆಸ್ಟ್ರೇಲಿಯಾದ ಒಂದು ಅಂದಾಜಿನ ಪ್ರಕಾರ ಈ ಮದ್ಯದ ಗೀಳಿನಿಂದ ಉಂಟಾಗುವ ಸಾಮಾಜಿಕ ಆರೋಗ್ಯ ವೆಚ್ಚಗಳು ಶೇಕಡಾ24ರಷ್ಟನ್ನು ಮೀರುವ ಸಾಧ್ಯತೆ ಇದೆ.ಕೆನಡಾ ದೇಶದ ಅಧ್ಯಯನದ ಪ್ರಕಾರ ಸುಮಾರು ಶೇಕಡಾ 41ರಷ್ಟು ಆಗಿರುವುದನ್ನು [೧೦೫] ತಿಳಿಸಿದೆ.

UK ನ ಒಂದು ಅಧ್ಯಯನದ ಪ್ರಕಾರ ಎಲ್ಲಾ ಪ್ರಕಾರದ ಅಲ್ಕೊಹಾಲ್ ದುರುಪಯೋಗದ ಪ್ರಕರಣಗಳಿಗಾಗಿ ಸುಮಾರು£18.5–20ಬಿಲಿಯನ್ ವಾರ್ಷಿಕ ಖರ್ಚಾಗುತ್ತದೆ.(2001ರ [೯೦][೧೦೬] ಅಂಕಿಅಂಶಗಳು)

ಸಮಸ್ವರೂಪದ ಮಾದರಿಗಳು

ಅಶಿಸ್ತಿನ ಅಥವಾ ಅಸಂಬದ್ದ ಕುಡಿತದ ಚಿತ್ರಣ

ಸಾಮಾನ್ಯವಾಗಿ ಒಂದೇ ಸ್ವರೂಪಗಳ ಮದ್ಯದ ಗೀಳಿನವರು ಅಲ್ಲಲ್ಲಿ ಕಾಲ್ಪನಿಕ ಕಥೆ ಮತ್ತು ಜನಪ್ರಿಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಂಡು ಬರುವುದು ಸಹಜವಾಗಿದೆ. ದಿ" ಟೌನ್ ಡ್ರಂಕ್ "ಕೂಡಾ ಸ್ಟಾಕ್ ಕ್ಯಾರೆಕ್ಟರ್ ನ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಕಾಣುತ್ತದೆ.

ಒಂದೇ ಸ್ವರೂಪದ ಕುಡಿತವು ಅಲ್ಲಿನ ಜನಾಂಗೀಯ ತತ್ವ ಅಥವಾ ಅಲ್ಲಿನ ಭಯಭೀತಿಯ ವಾತಾವರಣವು ಅಂದರೆ ಸುಮಾರು ಐರಿಶ್ ಜನರಲ್ಲಿ ಇಂತಹ ಲಕ್ಷಣಗಳು ಕಾಣಬರುತ್ತವೆ.ಇವರು ಆತ್ಯಧಿಕ ಕುಡಿತದ ಗೀಳಿಗೆ [೧೦೭][೧೦೮] ಅಂಟಿಕೊಂಡವರಾಗಿದ್ದಾರೆ.

ಸಾಮಾಜಿಕ ಮನ:ಶಾಸ್ತ್ರಜ್ಞರಾದ ಸ್ಟೈವರ್ಸ್ ಮತ್ತು [೧೦೯] ಗ್ರೀಲಿ ಅವರ ಪ್ರಕಾರ ಅತಿ ಹೆಚ್ಚು ಮದ್ಯದ ಗೀಳಿರುವವರ ಬಗ್ಗೆ ವಿವರ ಒಳಗೊಂಡ ಐರಿಶ್ ಅಮೆರಿಕನ್ ರ ಒಂದು ದಾಖಲೆಯನ್ನು ಮಾಡಿದ್ದಾರೆ.

ಚಲನಚಿತ್ರ ಮತ್ತು ಸಾಹಿತ್ಯದಲ್ಲಿ

ಇಂದಿನ ಆಧುನಿಕ ಯುಗದಲ್ಲಿ ಮದ್ಯದ ಗೀಳು ಬಿಡಿಸುವಲ್ಲಿ ಮತ್ತು ಅದರ ಮೂಲಬೇರುಗಳನ್ನು ಸಮಸ್ಯೆಗಳನ್ನು ಪ್ರದರ್ಶಿಸುತ್ತದೆ. ಬರಹಗಾರರಾದ ಚಾರ್ಲೆಸ್ ಆರ.ಜಾಕ್ಸನ್ ಮತ್ತು ಚಾರ್ಲೆಸ್ ಬುಕೊಸ್ಕಿ ಅವರು ತಮ್ಮ ಸ್ವಂತ ಅನುಭವವನ್ನು ಆಧರಿಸಿ ತಮ್ಮ ಮದ್ಯದ ಗೀಅಳನ್ನು ವಿವರಿಸಿದ್ದಾರೆ. ಪ್ಯಾಟ್ರಿಕ್ ಹ್ಯಾಮಿಲ್ಟನ್ ಅವರ ಹ್ಯಾಂಗೊವರ್ ಸ್ಕೆಯರ್ ಬರಹವು ಮದ್ಯದ ಗೀಳಿನ ಕೇಂದ್ರ ಲಕ್ಷಣದ ಪ್ರತಿಬಿಂಬವನ್ನು ತಿಳಿಸುತ್ತದೆ. ಒಂದು ಪ್ರಸಿದ್ದ ಕಾದಂಬರಿಯಲ್ಲಿ ಮದ್ಯದ ಗೀಳಿನ ಬಗ್ಗೆ ಮತ್ತು ಅದರ ಮಾನಸಿಕ ಪರಿಣಾಮಗಳ ವಿವರ ಒದಗಿಸಲಾಗಿದೆ.ಮಾಲ್ಕೊಲ್ಮ್ ಲೌರಿಯ ಜನಪ್ರಿಯ ಕಾದಂಬರಿ ಅಂಡರ್ ದಿ ವೊಲ್ಕ್ಯಾನೊದಲ್ಲಿ ಬ್ರಿಟಿಶ್ಕೌನ್ಮ್ಸೆಲ್ ಜಾಫ್ರಿ ಫರ್ಮಿನ್ 1939ರ ಮಿಕ್ಸಿಕೊದಲ್ಲಿ ತನ್ನ ಸಾವಿನ ದಿನದಂದಿನ ವಿಷಯ ಬಂದಾಗ ಆತ ತನ್ನ ಪ್ರೀತಿಯ ಮಡದಿಗಿಂತ ಹೆಚ್ಚಾಗಿ ಮದ್ಯದ ಗೀಳನ್ನೇ ಆಯ್ಕೆ ಮಾಡಿಕೊಳ್ಳುವುದು ಕಂಡು ಬರುತ್ತದೆ.

ಚಲನಚಿತ್ರಗಳಾದ ಬ್ಯಾಡ್ ಸಾಂಟಾ ,ಬಾರ್ಫ್ಲಿ ,ಡೇಸ್ ಆಫ್ ವೈನ್ ಅಂಡ್ ರೋಜಸ್ ,ಐರನ್ ವೀಡ್ ,ಮಾಯ್ ನೇಮ್ ಈಸ್ ಬಿಲ್ ಡಬ್ಲ್ಯು. , ಉಯಿತ್ ನೇಲ್ ಅಂಡ್ ಐ, ಆರ್ಥರ್ ,ಲೀವಿಂಗ್ ಲಾಸ್ ವೇಗಾಸ್ ವ್ಹೆನ್ ಎ ಮ್ಯಾನ್ ಲೌವ್ಸ್ ಎ ಉಮನ್ ,ಶಾಟರ್ಡ್ ಸ್ಪಿರಿಟ್ಸ್ ಮತ್ತು ದಿ ಲಾಸ್ಟ್ ವೀಕ್ ಎಂಡ್ ಹೀಗೆ ಅಲ್ಕೊಹಾಲ್ ಬಗೆಗಿನ ಒಂದೇ ತೆರನಾದ ಕಥಾನಕಗಳು ಹುಟ್ಟಿಕೊಳ್ಳುತ್ತವೆ.

ಲಿಂಗ ಮತ್ತು ಮದ್ಯದ ಗೀಳು

ವಿಲಿಯಮ್ ಹೂಗಾರ್ಥ್ ನ' ಜಿನ್ ಲೇನ್, 1751.

ಜೈವಿಕ ವ್ಯತ್ಯಾಸ ಮತ್ತು ದೈಹಿಕ ಪರಿಣಾಮಗಳು

ಜೀವಶಾಸ್ತ್ರೀಯವಾಗಿ ನೋಡಿದರೆ ಮಹಿಳೆಯರು ಮದ್ಯದ ಗೀಳಿನ ಲಕ್ಷಣಗಳಿಗೆ ಒಳಗಾಗುವ ಪ್ರಮೇಯವು ಅವರ ಮದ್ಯಪಾನದ ಅಭ್ಯಾಸವನ್ನು ಅವಲಂಬಿಸಿರುತ್ತದೆ.ಇಂತಹ ಸಂದರ್ಭಗಳಲ್ಲಿ ಪುರುಷರ ಗೀಳಿಗೆ ಒಂದು ಮಹತ್ವದ ತಿರುವನ್ನೂ ಪಡೆಯುವ ಸಾಧ್ಯತೆ ಇರುತ್ತದೆ. ಅವರು ದೂರದೃಷ್ಟಿಯ ಕೋನದಲ್ಲಿ ಇದರ ಭೌತಿಕ ಪರಿಣಾಮಗಳಿಗೆ ತುತ್ತಾಗುತ್ತಾರೆ.ಮದ್ಯವು ಕಾಣದಂತೆ ದೂರವಾಗಿದ್ದರೂ ಅದರ ಚಟಕ್ಕೆ ಬಲಿಯಾಗುವ ಲಕ್ಷಣಗಳನ್ನು ಜೈವಿಕಶಾಸ್ತ್ರದಲ್ಲಿ ವಿವರಿಸಲಾಗಿದೆ. ಸಾಮಾನ್ಯವಾಗಿ ಸಮಪ್ರಮಾಣದ ಮದ್ಯವನ್ನು ಪುರುಷರು ಮತ್ತು ಮಹಿಉಳೆಯರು ಸೇವಿಸಿದರೆ ಅತಿಹೆಚ್ಚು ಅಲ್ಕೊಹಾಲ್ ಮಹಿಳೆಯರ ರಕ್ತದಲ್ಲಿ (BACs)ಕಂಡು [೧೧೦] ಬರುತ್ತದೆ. ಇದಕ್ಕೆ ಬೇರೆ ಬೇರೆ ಕಾರಣಗಳಿವೆ.ಯಾಕೆಂದರೆ ಮಹಿಳೆಯರ ಶರೀರದಲ್ಲಿ ಪುರುಷರಿಗಿಂತ ಕಡಿಮೆ ನೀರಿನಾಂಶ ಇರುವುದೂ ಇದಕ್ಕೆ ಕಾರಣವಾಗಿದೆ. ಆದ್ದರಿಂದ ಒಂದು ಸಮಪ್ರಮಾಣದ ಮದ್ಯವು ಮಹಿಳೆಯರ ದೇಹದಲ್ಲಿ ಅಧಿಕವಾಗಿ ಸಂಗ್ರಹವಿರುವುದು ಕಾಣಬರುತ್ತದೆ. ಇದರಿಂದಾಗಿ ಮಹಿಳೆಯ ದೇಹವು ಅತಿ ಹೆಚ್ಚು ವಿಷಪೂರಿತವಾಗುವ ಸಾಧ್ಯತೆ ಇದೆ.ಇದಕ್ಕೆ ಇದೇ ಸಂದರ್ಭದಲ್ಲಿ ಬೇರೆ ಬೇರೆ ಹಾರ್ಮೊನ್ ಗಳ ಬಿಡುಗಡೆಯೇ [೧೭] ಕಾರಣವಾಗಿದೆ.

ಹೀಗಾಗಿ ಮಹಿಳೆಯರು ಮದ್ಯಪಾನದಿಂದ ಸುದೀರ್ಘಕಾಲದ ಅಸ್ಥವ್ಯಸ್ತತೆಯನ್ನು ಪುರುಷರಿಗಿಂತ ಹೆಚ್ಚು ಕಾಣುವುದು ಸಹಜವೆನಿಸಿದೆ. ಇದರಿಂದಲೇ ಮದ್ಯದ ಗೀಳು ಇರುವ ಮಹಿಳೆಯರಲ್ಲಿ ಮದ್ಯದ ಗೀಳಿನ ಪುರುಷರಿಗಿಂತ ಹೆಚ್ಚು ಪ್ರಮಾಣದ ಸಾವಿನ ಪ್ರಮಾಣ [೧೬] ಕಂಡುಬರುತ್ತದೆ. ಉದಾಹರಣೆಗಾಗಿ ಸುದೀರ್ಘ ದುಷ್ಪರಿಣಾಮಗಳೆಂದರೆ ಮೆದುಳು,ಹೃದಯ ಮತ್ತು ಜಠರ [೧೭] ಹಾನಿ ಅದಲ್ಲದೇ ಸ್ತನ ಕ್ಯಾನ್ಸರ್ ಕೂಡಾ ಇನ್ನೊಂದು ಸಮಸ್ಯೆಯಾಗಿ ಕಾಡುತ್ತದೆ.(ಮದ್ಯ ಮತ್ತು ಸ್ತನ ಕ್ಯಾನ್ಸರ್ ಬಗ್ಗೆ ನೋಡಬಹುದಾಗಿದೆ) ಮಹಿಳೆಯರಲ್ಲಿನ ವಿಪರೀತ ಕುಡಿತವು ಅವರ ಸಂತಾನಶಕ್ತಿಯ ಬಗ್ಗೆಯೂ ಋಣಾತ್ಮಕ ಪರಿಣಾಮಕ್ಕೆ ಕಾರಣವಾಗಬಹುದು. ಇದರಿಂದಾಗಿ ಮಹಿಳೆಯರ ಸಹಜ ಕ್ರಿಯೆಗಳು ಅನಿಯಮಿತಗೊಳ್ಳುವುದಲ್ಲದೇ ಅಂಡಾಂಶದ ಮೊಟ್ಟೆಗಳ ಸಂಖೆಯಲ್ಲಿ ಏರಿಳಿತ,ಅನಿಯಮಿತ ಋತುಚಕ್ರ,ರಕ್ತಹೀನತೆ,ದೇಹದ ಜೀರ್ಣಾಂಗ ವ್ಯೂಹದ ಕಾರ್ಯಕ್ಕೆ ಅಡತಡೆಯೂ ಮದ್ಯದ ಗೀಳಿನಿಂದಾಗಿ ಅಧಿಕಗೊಳ್ಳುವ ಸಾಧ್ಯತೆ [೧೬] ಇದೆ.

ಶಾರೀರಿಕ ಮತ್ತು ಭಾವಾನಾತ್ಮಕ ಪರಿಣಾಮಗಳು

ಮದ್ಯದ ಗೀಳಿರುವ ಮಹಿಳೆಯರು ಸಾಮಾನ್ಯವಾಗಿ ಅಸಹಜ ಶಾರೀರಿಕ ಅವ್ಯವಸ್ಥೆಗಳಿಗೆ ಕಾರಣವಾಗುತ್ತದೆ. ಇಂತಹ ದೈಹಿಕ ಅಸಮಾನತೆಗಳು ಮಹಿಳೆಯರು ಮತ್ತು ಪುರುಷರಲ್ಲಿ ಒಂದೇ ತೆರನಾಗಿ ಇರುತ್ತದೆ. ಮದ್ಯದ ಗೀಳಿರುವ ಮಹಿಳೆಯರಲ್ಲಿ ಸಾಮಾನ್ಯವಾಗಿ ಪ್ರಮುಖ ಖಿನ್ನತೆ,ಆತಂಕ,ಗಾಬರಿ ಲಕ್ಷಣ,ಅತಿಹಸಿವಿನ ರೋಗ,(PTSD),ಸಾವು ಬದುಕಿನ ಅಂಚಿನಲ್ಲಿನ ಹೋರಾಟ ಇತ್ಯಾದಿಗಳು ಪ್ರಮುಖ ದುಷ್ಪರಿಣಾಮಗಳು. ಸಾಮಾನ್ಯವಾಗಿ ಪುರುಷರಲ್ಲಿ ಸಮರೂಪದಲ್ಲೇ ದೈಹಿಕ ಅಸ್ತವ್ಯಸ್ತತೆಗಳು ಕಂಡರೂ ಬಹುತೇಕ ಸ್ವಪ್ರತಿಷ್ಟೆ ಮತ್ತು ಸಮಾಜವಿರೋಧಿ ವ್ಯಕ್ತಿತ್ವದ ಅಸ್ತವ್ಯಸ್ತತೆ,ದೈಹಿಕ ದಣಿವು,ಅಪಸ್ಮಾರ,ನರಗಳ ದುರ್ಬಲತೆ ಮತ್ತು ಗಮನದ ಕೊರತೆ/ಅತಿಹೆಚ್ಚಿನ ಚಟುವಟಿಕೆ ಇತ್ಯಾದಿಗಳು ಪುರುಷರಲ್ಲಿನ [೧೧೦] ಅಡತಡೆಗಳು.

[೧೧೦] ಸರ್ವೆಸಾಮಾನ್ಯವಾಗಿ ಮದ್ಯದ ಗೀಳಿರುವ ಮಹಿಳೆಯರು ಹಿಂಸಾಕೃತ್ಯಗಳಿಗೆ ಈಡಾಗುತ್ತಾರೆ,ದೈಹಿಕ ಹಲ್ಲೆ,ಲೈಂಗಿಕ ಕ್ರುಕಳಕ್ಕೆ ಬಲಿಯಾಗುವ ಸಾಧ್ಯತೆ [೧೧೦] ಹೆಚ್ಚು. ಇಂತಹ ಪ್ರಸಂಗಗಳಲ್ಲಿ ಅತಿಹೆಚ್ಚು PTSD ಪ್ರಕರಣಗಳು,ಖಿನ್ನತೆ,ಆತಂಕ ಮತ್ತು ಅಧಿಕ ಮದ್ಯದ ಮೇಲಿನ ಅವಲಂಬನೆ ಇತ್ಯಾದಿ ಹೆಚ್ಚಾಗುತ್ತವೆ.

ಚಿಕಿತ್ಸೆಗಾಗಿ ಸಾಮಾಜಿಕ ನಿರ್ಭಂದನೆಗಳು

ನಡವಳಿಕೆಗಳು ಮತ್ತು ಸಾಮಾಜಿಕ ಸಮರೂಪದ ವ್ಯವಸ್ಥೆಗಳಲ್ಲಿ ಮಹಿಳೆಯರು ಮತ್ತು ಮದ್ಯ ಹಾಗು ಅದರ ಪತ್ತೆಗೆ ಹೆಚ್ಚು ಗಮನ ನೀಡುವುದು ಸಾಧ್ಯವಾಗುದಿಲ್ಲ. ಹೀಗಾಗಿ ಮದ್ಯದ ಗೀಳಿಗೆ ಒಳಗಾಗಿರುವ ಮಹಿಳೆಯರು "ಸಾಮಾನ್ಯವಾಗಿ ಲೈಗಿಕವಾಗಿ ಮತ್ತು ಅನೈತಿಕ "ಎಂದು ಗುರುತಿಸಿ "ಬಿದ್ದು ಹೋದವರು" ಅಪವಾದಕ್ಕೆ ಗುರಿಯಾಗುತ್ತಾರೆ. ಇಂತಹ ಕಳಂಕವು ಮಹಿಳೆಯರಿಗೆ ತಮ್ಮ ಕುಡಿತದ ಗೀಳನ್ನು ಹೇಳಿಕೊಳ್ಳಲು ಮತ್ತು ಔಷಧೋಪಚಾರ ಮಾಡಿಕೊಳ್ಳಲು ಸಹ ಹಿಂಜರಿಕೆ ಮಾಡಲಾಗುತ್ತದೆ. ಇದರಿಂದಾಗಿ ಕುಟುಂಬದ ವೈದ್ಯರು ಸಹ ಇಂಥ ಮದ್ಯದ ಗೀಳಿರುವ ಮಹಿಳೆಯರ ಬಗೆಗಿನ ಸಂಶಯಗಳಿಗೆ ಹಿಂದೇಟು [೧೬] ಹಾಕುತ್ತಾರೆ.

ಇದಕ್ಕೆ ತದ್ವಿರುದ್ದವಾಗಿ ಪುರುಷರಲ್ಲಿ ಮದ್ಯದ ಗೀಳಿನ ಚಿಕಿತ್ಸೆಗೆ ಸಾಮಾಜಿಕವಾಗಿ ನಿರ್ಭಂಧನೆಗಳಿದ್ದರೂ ಅವರು ತಮ್ಮ ಗೀಳನ್ನು ಕಡಿಮೆ ಮಾಡಿಕೊಳ್ಳಲು ಹೆಣಗಾಡುತ್ತಾರೆ. "ಇಂತಹ ದುರಭ್ಯಾಸಗಳು ಗಂಡಸರಲ್ಲಿ ಇವರು "ನೈತಿಕವಾಗಿ ಉತ್ತಮ" ರೆಂದು ಅವರು ದೊಡ್ದವರೆಂದು ಪರಿಗಣಿತರಾಗುತ್ತಾರೆ. ಕಳಂಕತ ಕಡಿಮೆ ಭೀತಿಯಿಂದ ಪುರುಷರು ವೈದ್ಯಕೀಯ ಪರಿಸ್ಥಿತಿಗಳನ್ನು ಎದುರಿಸುತ್ತಾರಲ್ಲದೇ ಸಾಮಾನ್ಯವಾಗಿ ಕುಡಿತವನ್ನು ಸಾಮೂಹಿಕವಾಗಿಯೂ ಅವರು ಚಿಕಿತ್ಸೆಗಾಗಿ ಮುಂದಾಗಿದ್ದಾರೆ. ಈ ಪ್ರಕರಣವು ಪುರುಷರಲ್ಲಿ ಸಾಮಾನ್ಯವಾಗಿ ಕುಟುಂಬ ವೈದ್ಯರು ಇವನ್ನು ಸಹಜವಾಗಿ ಪರಿಗಣಿಸಿ ತಮಗೆ ಪರಿಚಿತ ವ್ಯಕ್ತಿಗಳಿಗೆ ಅನುಕೂಲ ಮಾದಲು ಮುಂದಾಗುತ್ತಾರೆ. ಇಂತಹ ವಿಷಯಗಳಲ್ಲಿ ಮಹಿಳೆಯರು ಕೂಡಾ ಸಾಮಾಜಿಕ ಕಳಂಕದ ಬಗ್ಗೆ ಆಕೆ ವಿಚಾರ ಮಾಡಬೇಕಾಗುತ್ತದೆ.ಇಲ್ಲಿ ಆಕೆಯ ಕೌಟುಂಬಿಕ ವಿಷಯಗಳಲ್ಲಿ ತನ್ನ ಗೌರವಕ್ಕೆ ಧಕ್ಕೆ ತರುವ ಸಾಧ್ಯತೆ ಇರುತ್ತದೆ. ಇದು ನೆರವು ಕೇಳುವವರನ್ನು [೧೧೦] ದೂರವಿಡುತ್ತದೆ.

ಚಿಕಿತ್ಸಾ ಉಪಾಯಗಳು

ಮದ್ಯದ ಗೀಳು ಇರುವವರು ಸುಧಾರಿಸಲು ವೃತ್ತಿಪರರು ಇಂತಹ ಸಮಸ್ಯಾತ್ಮಕ ಅಲ್ಕೊಹಾಲ್ ಪ್ರಕರಣಗಳನ್ನು ಬಹುಮುಖ್ಯವಾಗಿ ಮಹಿಳೆಯರಿಗಾಗಿ ಹೆಚ್ಚು ಗಮನ [೧೧೦] ನೀಡಬೇಕಾಗುತ್ತದೆ. ಮದ್ಯಸಾರ ಉಪಯೋಗಿಸುವವರು ಆರೋಗ್ಯದ ಏರುಪೇರುಗಳನ್ನು ಪರಿಗಣಿಸುತ್ತದೆ.ಇದರಲ್ಲಿ ಲಿಂಗ ತಾರತಮ್ಯಗಳಿಗೆ ಇದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಗುಣಪಡಿಸುವ ವೃತ್ತಿಪರರಿಗೆ ಇದರ ಅರಿವು ಇರಬೇಕಾಗುತ್ತದೆ.ಇದಕ್ಕೆ ಬಲಿಯಾಗುವವರು ಸಾಧ್ಯವಾದಷ್ಟು ಅನುಕಂಪವನ್ನು ತೋರಿಸಬೇಕಾಗುತ್ತದೆ. ಮದ್ಯದ ಗೀಳು ಹೊಂದಿರುವವರಿಗೆ ಯಾವುದೇ ಲಿಂಗಭೇದವಿಲ್ಲದೇ ಉತ್ತಮ ಶಿಕ್ಷಣ ಮತ್ತು ಜಾಗೃತಿ ಮೂಡಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ.ಕುಡಿತದ ಚಟ ಬಿಡಿಸುವ ಸಂಘಸಂಸ್ಥೆಗಳು ಅದರಲ್ಲೂ ಮಹಿಳೆಯರು ಇದಕ್ಕೆ ಬಲಿಯಾಗಿದ್ದರೆ ಅದನ್ನು ಆದ್ಯತೆ ಮೇರೆಗೆ ಗುಣಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವಂತೆ ಸಲಹೆ ನೀಡಬೇಕಾಗುತ್ತದೆ. ಆರಂಭಿಕ ಪತ್ತೆಹಚ್ಚುವಿಕೆಯು ಪುನ:ಶ್ಚೇತನದ ಅವಕಾಶಗಳನ್ನು ಹೆಚ್ಚಿಸುತ್ತದೆ.[೧೧೦]

ಇವನ್ನೂ ನೋಡಿ

  • ಮದ್ಯದ ಉಪಭೋಗ ಮತ್ತು ಆರೋಗ್ಯ
  • ಕೌಟುಂಬಿಕ ಪದ್ದತಿಯಲ್ಲಿನ ಮದ್ಯದ ಗೀಳು
  • ಮದ್ಯಕ್ಕೆ -ಸಂಬಂಧಿತ ಸಂಚಾರಿ ಡಿಕ್ಕಿಗಳು
  • ಅಲ್ಕೊಹಾಲ್ ಟಾಲ್ ರನ್ಸ್
  • ಮದ್ಯ ಬಿಟ್ಟ ಲಕ್ಷಣ
  • ಅಪರೊಪದ ಕುಡಿತ
  • ಮದ್ಯದ ಉಪಭೋಗದ ಪ್ರಮಾಣ ತೋರಿಸುವ ಆಯಾ ದೇಶಗಳ ಪಟ್ಟಿ
  • ಅಲ್ಕೊಹಾಲ್ ಇಂಟಾಕ್ಸಿಕೇಶನ್
  • ಅಲ್ -ಅನೊನ್ ಅಂಡ್ಅಲಾಟೀನ್: ಸಪೊರ್ಟ್ ಗ್ರುಪ್ಸ್ ಫಾರ್ ಫ್ರೆಂಡ್ಸ್ ಅಂಡ್ ಫಮಿಲೀಸ್ ಅಫೆಕ್ಟೆಡ್ ಬೈ ಅಲ್ಕೊಹಾಲಿಸಮ್

ಆಕರಗಳು

ಹೆಚ್ಚಿನ ಮಾಹಿತಿಗಾಗಿ

  • ಪೆನ್ಸ್ವ್ , ಗ್ರೆಗೊರಿ , "ಕಾಂಟ್ ಆನ್ ವೆದರ್ ಅಲ್ಕೊಹಾಲಿಸಮ್ ಈಸ್ ಎ ಡಿಸೀಸ್ ," Ch. 2, The ಎಲೆಮೆಂಟ್ಸ್ ಆಫ್ ಬಯೊಥಿಕ್ಸ್, McGraw-Hill Books, 2007 ISBN 0-073-13277-2.
  • Plant, Martin A. and Moira Plant (2006). Binge Britain: Alcohol and the National Response. Oxford, UK; New York, NY: Oxford University Press. ISBN 0199299404. OCLC 238809013 64554668. {{cite book}}: Check |oclc= value (help); Cite has empty unknown parameter: |chapterurl= (help)
  • Sutton, Philip M. (2007). "Alcoholism and Drug Abuse". In Michael L. Coulter, Stephen M. Krason, Richard S. Myers, and Joseph A. Varacalli (ed.). Encyclopedia of Catholic Social Thought, Social Science, and Social Policy. Lanham, MD; Toronto, Canada; Plymouth, UK: Scarecrow Press. pp. 22–24. ISBN 9780810859067. {{cite book}}: Cite has empty unknown parameter: |chapterurl= (help)CS1 maint: multiple names: editors list (link)
  • ವಾರನ್ ಥಾಂಪ್ಸನ್, MD, FACP. "ಮದ್ಯದ ಗೀಳು." Emedicine.com, June 6, 2007. ಮರುಪಡೆದದ್ದು 2007-09-02.

ಚಿಕಿತ್ಸೆಯ ಮಾದರಿ