ಮುಳ್ಳುರಾಮಫಲ

Annona muricata
A spiy green fruit growing on a tree
Soursop fruit on its tree
Scientific classification e
ಸಾಮ್ರಾಜ್ಯ:ಸಸ್ಯ
ಏಕಮೂಲ ವರ್ಗ:ಹೂಬಿಡುವ ಸಸ್ಯ
ಏಕಮೂಲ ವರ್ಗ:ಮ್ಯಾಗ್ನೋಲಿಯೀಡ್ಸ್
ಗಣ:ಮ್ಯಾಗ್ನೋಲಿಯೇಲ್ಸ್
ಕುಟುಂಬ:ಅನೋನೇಸೀ
ಕುಲ:ಅನೋನಾ
ಪ್ರಜಾತಿ:
A. muricata
Binomial name
Annona muricata
L.
Synonyms

Annona macrocarpa Wercklé
Annona crassiflora Mart.[೧]
Guanabanus muricatus M.Gómez
Guanabanus muricatus (L.) M.Gómez[೨]
Annona bonplandiana Kunth
Annona cearensis Barb. Rodr.
Annona muricata Vell.[೩]

ಮುಳ್ಳುರಾಮಫಲ ಅನೋನೇಸೀ ಕುಟುಂಬಕ್ಕೆ ಸೇರಿದ ಫಲವೃಕ್ಷ (ಸೌರ್‌ಸಾಪ್). ಅನೋನ ಮ್ಯೂರಿಕೇಟ ಇದರ ಶಾಸ್ತ್ರೀಯ ಹೆಸರು. ರಾಮಫಲ, ಸೀತಾಫಲಗಳ ಹತ್ತಿರ ಸಂಬಂಧಿ.

ವ್ಯಾಪ್ತಿ

ದಕ್ಷಿಣ ಭಾರತ ಹಾಗೂ ಶ್ರೀಲಂಕಾಗಳಲ್ಲಿ ಈ ಮರ ಅಲ್ಲಲ್ಲಿ ಕಂಡು ಬರುತ್ತದೆ. ಅಸ್ಸಾಮ್ ಮತ್ತು ಬರ್ಮಾಗಳಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವುದಿದೆ.

ಸಸ್ಯ ವಿವರಣೆ

ಸುಮಾರು 6 ಮೀಟರಿಗಿಂತ ಎತ್ತರಕ್ಕೆ ಬೆಳೆಯುವ ನಿತ್ಯ ಹಸಿರಾಗಿರುವ ಸಣ್ಣ ಮರ ಇದು.[೪][೫]

ಇದರ ಹಣ್ಣುಗಳ ಮೇಲೆ ಸಣ್ಣ ಸಣ್ಣ ಮುಳ್ಳುಗಳಿರುತ್ತವೆ. ಒಳಗೆ ನಾರಿನಿಂದ ಕೂಡಿದ ತಿರುಳು ರಸಭರಿತವಾಗಿಯೂ ವಾಸನಾಭರಿತವಾಗಿಯೂ ಇರುತ್ತದೆ. ಇದಕ್ಕೆ ಒಂದು ತೆರನ ಹುಳಿ ರುಚಿಯುಂಟು. ಇದಕ್ಕೆ ಕಾರಣ ತಿರುಳಿನಲ್ಲಿರುವ ಆಮ್ಲದ ಅಂಶ.[೬] ಸಕ್ಕರೆ ಅಂಶ ಕಡಿಮೆ ಪ್ರಮಾಣದಲ್ಲಿದೆ.

ಉಪಯೋಗಗಳು

ಜಾವಾದಲ್ಲಿ ಎಳೆಯ ಹಣ್ಣುಗಳನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಮೀನುಗಳನ್ನು ಕೊಲ್ಲಲು ಇದರ ಬೀಜದ ಬಳಕೆಯುಂಟು. ಇದಕ್ಕೆ ಕ್ರಿಮಿನಾಶಕ ಗುಣಗಳೂ ಉಂಟು. ಇದರ ಎಲೆಗಳಲ್ಲಿ ಸುವಾಸನೆಭರಿತ ತೈಲವಿದೆ.

ಉಲ್ಲೇಖಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: