ಮೆಲ್ ಗಿಬ್ಸನ್

ಮೆಲ್ ಕಾಲ್ಮ್-ಸಿಲ್ಲೆ ಗೆರಾರ್ಡ್ ಗಿಬ್ಸನ್ AO(1956,ಜನವರಿ 3ರಂದು ಜನನ)ಅಮೆರಿಕನ್ ಆಸ್ಟ್ರೇಲಿಯನ್ ನಟ,ಚಿತ್ರನಿರ್ದೇಶಕ ಮತ್ತು ನಿರ್ಮಾಪಕ ಹಾಗೂ ಕಥಾಲೇಖಕರು. ನ್ಯೂಯಾರ್ಕ್‌ನ ಪೀಕ್‌ಸ್ಕಿಲ್‌ನಲ್ಲಿ ಜನಿಸಿದ ಗಿಬ್ಸನ್, ತಮ್ಮ 12ರ ವಯಸ್ಸಿನಲ್ಲೇ ತನ್ನ ತಂದೆತಾಯಿಗಳ ಜತೆ ಸಿಡ್ನಿಗೆ ತೆರಳುತ್ತಾರೆ. ನಂತರ ನಾಟಕ ಕಲೆಯ ರಾಷ್ಟ್ರೀಯ ಸಂಸ್ಥೆಯಲ್ಲಿ ನಟನಾವೃತ್ತಿಯ ತರಬೇತಿ ಕೈಗೊಂಡರು.

Mel Gibson

at the 1990 Air America premiere
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Mel Colm-Cille Gerard Gibson
(1956-01-03) ಜನವರಿ ೩, ೧೯೫೬ (ವಯಸ್ಸು ೬೮)
Peekskill, New York, U.S.
ವೃತ್ತಿActor, film director, film producer, screenwriter
ವರ್ಷಗಳು ಸಕ್ರಿಯ1976–present
ಪತಿ/ಪತ್ನಿRobyn Moore (ವಿವಾಹ 1980)

ಮ್ಯಾಡ್‌ಮಾಕ್ಸ್ ಮತ್ತು ಲೆಥಾಲ್ ವೆಪನ್ ಸರಣಿಗಳಲ್ಲಿ ಕಾಣಿಸಿಕೊಂಡ ನಂತರ,ಅಕಾಡೆಮಿ ಪ್ರಶಸ್ತಿ ವಿಜೇತ ಬ್ರೇವ್‌ಹಾರ್ಟ್ ಚಿತ್ರದ ನಿರ್ದೇಶನ ಮತ್ತು ನಟನೆಯಲ್ಲಿ ಗಿಬ್ಸನ್ ತೊಡಗಿಕೊಂಡರು. ಬ್ರೇವ್‌ಹಾರ್ಟ್ ನಿರ್ದೇಶನದಿಂದ ಅವರು,ಶ್ರೇಷ್ಠ ನಿರ್ದೇಶನಕ್ಕಾಗಿ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಿದ ಚಿತ್ರನಿರ್ಮಾಪಕರಾಗಿ ಪರಿವರ್ತನೆಯಾದ 6ನೇ ನಟನೆನಿಸಿದರು.[೧] ಅವರು 2004ರಲ್ಲಿ ದಿ ಪ್ಯಾಶನ್ ಆಪ್ ದಿ ಕ್ರೈಸ್ಟ್ ಚಿತ್ರದ ನಿರ್ದೇಶನ,ನಿರ್ಮಾಣ ಕೈಗೊಂಡರು. ಇದು ವಿವಾದಾತ್ಮಕ ಆದರೆ ಯಶಸ್ವಿ ಚಿತ್ರವಾಗಿದ್ದು,[೨] ಏಸು ಕ್ರಿಸ್ತನ ಜೀವನದ ಅಂತಿಮ ಗಂಟೆಗಳನ್ನು ಬಿಂಬಿಸುತ್ತದೆ.[೩] U.S.ಒಂದರಲ್ಲೇ ಅವರು ಅಭಿನಯಿಸಿದ ಚಿತ್ರಗಳು ಎರಡು ದಶಲಕ್ಷ ಡಾಲರ್‌ಗಳಿಗಿಂತ ಹೆಚ್ಚು ಹಣವನ್ನು ಗಳಿಸಿದವು‌[೪]

ಬಾಲ್ಯ ಜೀವನ

ಗಿಬ್ಸನ್ ನ್ಯೂಯಾರ್ಕ್‌ನ ಪೀಕ್‌ಸ್ಕಿಲ್‌ನಲ್ಲಿ ಜನಿಸಿದರು. ಹಟ್ಟನ್ ಗಿಬ್ಸನ್ ಮತ್ತು ಐರಿಷ್ ಸಂಜಾತೆ ಅನ್ನೆ ಪೆಟ್ರೀಸಿಯ(ನೀ ರೈಲಿ)ಅವರ 11 ಮಂದಿ ಮಕ್ಕಳಲ್ಲಿ 6ನೆಯವರಾಗಿದ್ದರು ಮತ್ತು ಎರಡನೇ ಪುತ್ರರಾಗಿದ್ದರು.[೫] ಅವರ ತಂದೆಯ ತಾಯಿ ಆಸ್ಟ್ರೇಲಿಯ ಒಪೇರಾ ಗಾಯಕಿ ಎವಾ ಮೈಲಾಟ್(1875-1920)[೬] ಗಿಬ್ಸನ್ ಕಿರಿಯ ಸಹೋದರರಲ್ಲಿ ಒಬ್ಬರಾದ ಡೊನಾಲ್ ಕೂಡ ಒಬ್ಬ ನಟ. ಅವರ ಪ್ರಥಮ ಹೆಸರು ಸೇಂಟ್ ಮೆಲ್‌‍ನಿಂದ ಹುಟ್ಟಿಕೊಂಡಿದೆ. ಸೇಂಟ್ ಮೆಲ್ ಐದನೇ-ಶತಮಾನದ ಐರಿಷ್ ಸಂತ ಮತ್ತು ಗಿಬ್ಸನ್ ತಾಯಿಯ ತವರು ಆರ್ಡಾಗ್,ಡಯೋಸೀಸ್‍‌‌ನ ಸಂಸ್ಥಾಪಕ. ಅವರ ಎರಡನೇ ಹೆಸರಾದ ಕಾಲ್ಮ್-ಸಿಲ್ಲೆ[೭] ಯನ್ನು ಐರಿಷ್ ಸಂತನೊಬ್ಬ ಹಂಚಿಕೊಂಡಿದ್ದು, ಗಿಬ್ಸನ್ ತಾಯಿ ಹುಟ್ಟಿ ಬೆಳೆದ ಲಾಂಗ್‌ಫರ್ಡ್ ಕೌಂಟಿಯ ಪ್ಯಾರಿಷ್ ಹೆಸರಾಗಿದೆ.[೮] ತನ್ನ ತಾಯಿಯ ಕಾರಣದಿಂದ ಗಿಬ್ಸನ್ ಐರಿಷ್ ಮತ್ತು ಅಮೆರಿಕದ ದ್ವಿಪೌರತ್ವವನ್ನು ಹೊಂದಿದ್ದರು.[೯]

ನ್ಯೂಯಾರ್ಕ್ ಸೆಂಟ್ರಲ್ ರೈಲ್‌ರೋಡ್ ವಿರುದ್ಧ 1968ರ ಫೆಬ್ರವರಿ 14ರಂದು ಕೆಲಸಕ್ಕೆ ಸಂಬಂಧಿಸಿದ ಕಾನೂನು ದಾವೆಯಲ್ಲಿ $145,000 ಗೆದ್ದ ಕೂಡಲೇ ಹಟ್ಟನ್ ಗಿಬ್ಸನ್ ಆಸ್ಟ್ರೇಲಿಯದ ಸಿಡ್ನಿಗೆ ತಮ್ಮ ಕುಟುಂಬವನ್ನು ಸ್ಥಳಾಂತರಿಸಿದರು.[೧೦] ಆ ಸಂದರ್ಭದಲ್ಲಿ ಗಿಬ್ಸನ್ ಅವರಿಗೆ 12 ವರ್ಷ ವಯಸ್ಸಾಗಿತ್ತು. ಹಟ್ಟನ್ ತಾಯಿಯ ತವರಾದ ಆಸ್ಟ್ರೇಲಿಯಕ್ಕೆ ಸ್ಥಳಾಂತರವನ್ನು ಆರ್ಥಿಕ ಕಾರಣಗಳಿಗಾಗಿ ಮಾಡಲಾಗಿತ್ತು. ಏಕೆಂದರೆ ವಿಯೆಟ್ನಾಂ ಯುದ್ಧಕ್ಕೆ ಕಡ್ಡಾಯ ಸೈನ್ಯ ಸೇವೆಗೆ ಆಸ್ಟ್ರೇಲಿಯ ಮಿಲಿಟರಿ ತಮ್ಮ ಹಿರಿಯ ಪುತ್ರನನ್ನು ನಿರಾಕರಿಸುತ್ತದೆಂದು ಹಟ್ಟನ್ ಭಾವಿಸಿದರು.[೧೧]

ಗಿಬ್ಸನ್ ಅವರು ತಮ್ಮ ಪ್ರೌಢಶಾಲೆಯ ವರ್ಷಗಳಲ್ಲಿ ನ್ಯೂ ಸೌತ್ ವೇಲ್ಸ್ ವಾಹರೂಂಗಾದ ಸೇಂಟ್ ಲಿಯೊಸ್ ಕ್ಯಾಥೋಲಿಕ್ ಕಾಲೇಜ್‌ನಲ್ಲಿ ಕ್ರೈಸ್ತ ಸಹೋದರರ ಕೂಟದ ಸದಸ್ಯರಿಂದ ಶಿಕ್ಷಣ ಪಡೆದರು.

ವೃತ್ತಿಜೀವನ

ಗಿಬ್ಸನ್ ಅವರು ಚಲನಚಿತ್ರಕ್ಕೆ ಸಂಬಂಧಿಸಿದ ಸನ್ನಿವೇಶಕ್ಕೆ ಪ್ರವೇಶಿಸಿದ ಕೂಡಲೇ ಚಿತ್ರವಿಮರ್ಶಕರಿಂದ ಅನೇಕ ಅನುಕೂಲಕರ ಪ್ರತಿಕ್ರಿಯೆಗಳನ್ನು ಸಂಪಾದಿಸಿದರು ಮತ್ತು ಅನೇಕ ಪ್ರಸಿದ್ಧ ಚಿತ್ರತಾರೆಗಳ ಜತೆ ಅವರನ್ನು ಹೋಲಿಸಲಾಯಿತು. ವಿನ್ಸೆಂಟ್ ಕ್ಯಾನ್‌ಬಿ 1982ರಲ್ಲಿ ಬರೆಯುತ್ತಾ ಗಿಬ್ಸನ್,ಯುವ ಸ್ಟೀವ್ ಮೆಕ್ವೀನ್ಅವರನ್ನು ನೆನಪಿಸುತ್ತಾರೆ ...ನಾನು "ತಾರೆಯ ಗುಣಮಟ್ಟ"ವನ್ನು ವ್ಯಾಖ್ಯಾನಿಸಲು ಸಾಧ್ಯವಾಗುವುದಿಲ್ಲ. ಅದು ಏನೇ ಇರಲಿ, ಗಿಬ್ಸನ್ ಅವರಲ್ಲಿ ಅದು ಅಂತರ್ಗತವಾಗಿದೆ.[೧೨] ಗಿಬ್ಸನ್ ಅವರನ್ನು "ಕ್ಲಾರ್ಕ್ ಗೇಬಲ್ ಮತ್ತು ಹಂಫ್ರಿ ಬೊಗಾರ್ಟ್ ಸಂಯೋಜನೆ"ಗೆ ಹೋಲಿಸಲಾಗಿತ್ತು.[೧೩] ಅವರ ದೈಹಿಕ ವ್ಯಕ್ತಿತ್ವವು ಅವರನ್ನು ಸಾಹಸ ಯೋಜನೆಗಳಾದ "ಮ್ಯಾಡ್ ಮ್ಯಾಕ್ಸ್" ಸರಣಿಗಳ ಚಿತ್ರಗಳಲ್ಲಿ, ಪೀಟರ್ ವೇರ್ ಅವರ ಗಾಲ್ಲಿಪೊಲಿ ಮತ್ತು "ಲೆಥಾಲ್ ವೆಪನ್ಸ್" ಸರಣಿಗಳ ಚಿತ್ರಗಳಲ್ಲಿ ಪ್ರಮುಖ ಪುರುಷ ಪಾತ್ರಗಳಿಗೆ ಅವರು ಸ್ವಭಾವಸಿದ್ಧರೆನಿಸಿದರು. ನಂತರ, ಅವರು ಭಿನ್ನವಾದ ನಟನಾ ಯೋಜನೆಗಳಲ್ಲಿ ವಿಸ್ತರಿಸಿಕೊಂಡರು. ಮಾನವೀಯ ನಾಟಕಗಳಾದ ಹ್ಯಾಮ್ಲೆಟ್ ಮತ್ತು ಮೆವೆರಿಕ್ ಮತ್ತು ವಾಟ್ ವುಮನ್ ವಾಂಟ್ ಮುಂತಾದ ಹಾಸ್ಯ ಪಾತ್ರಗಳೂ ಸೇರಿವೆ. ನಟನಾವೃತ್ತಿಯನ್ನು ಮೀರಿ ನಿರ್ದೇಶನ ಮತ್ತು ನಿರ್ಮಾಣಕ್ಕೆ ವಿಸ್ತರಿಸಿಕೊಂಡ ಚಿತ್ರಗಳಲ್ಲಿ ಅವರ ಅತ್ಯಂತ ಕಲಾತ್ಮಕ ಮತ್ತು ಆರ್ಥಿಕ ಯಶಸ್ಸು ಮೂಡಿಬಂದಿದೆ. ಅವುಗಳಲ್ಲಿ 1993ರ ದಿ ಮ್ಯಾನ್ ವಿತೌಟ್ ಎ ಫೇಸ್ ,1995ರ ಬ್ರೇವ್‌ಹಾರ್ಟ್ ,2000ದ ಪಾಟ್ರಿಯಟ್ (ನಟನೆ ಮಾತ್ರ), 2004ರ ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್ ಮತ್ತು 2006ರ ಅಪೊಕ್ಯಾಲಿಪ್ಟೊ ಸೇರಿವೆ.ಅವರನ್ನು ಬ್ಯಾಟ್‌ಮನ್ , ಗೋಲ್ಡನ್ ಐ , ಅಮೆಡಾಸ್ , ದಿ ಗೋಲ್ಡನ್ ಚೈಲ್ಡ್ , X-ಮೆನ್ , Robin Hood: Prince of Thieves , ರನ್‌ಎವೇ ಬ್ರೈಡ್ ಮತ್ತು ಪ್ರೈಮರಿ ಕಲರ್ಸ್ ಪಾತ್ರಗಳಿಗೆ ಪರಿಗಣಿಸಲಾಯಿತು.[ಸೂಕ್ತ ಉಲ್ಲೇಖನ ಬೇಕು] ಕಾನೆರಿಯ M ಗೆ ಮುಂದಿನ ಜೇಮ್ಸ್ ಬಾಂಡ್‌ಪಾತ್ರದಲ್ಲಿ ನಟಿಸಬೇಕೆಂದು ನಟ ಸೀನ್ ಕಾನೆರಿ ಒಮ್ಮೆ ಸಲಹೆ ಮಾಡಿದ್ದರು. ತಾವು ಒಂದೇ ಬಗೆಯ ಪಾತ್ರಕ್ಕೆ ಗುರುತಿಸಲ್ಪಡಬಹುದೆಂಬ ಭಯದಿಂದ ಆ ಪಾತ್ರವನ್ನು ಗಿಬ್ಸನ್ ತಳ್ಳಿಹಾಕಿದರು.[೧೪]

ಹಂತಗಳು

ಗಿಬ್ಸನ್ ಸಿಡ್ನಿಯ ನಾಟಕ ಕಲೆಯ ರಾಷ್ಟ್ರೀಯ ಸಂಸ್ಥೆ(NIDA)ಯಲ್ಲಿ ವಿದ್ಯಾಭ್ಯಾಸ ಮಾಡಿದರು. NIDAದ ವಿದ್ಯಾರ್ಥಿಗಳಿಗೆ ಚಲನಚಿತ್ರ ನಟನೆಗೆ ಸಿದ್ಧತೆ ಬದಲಿಗೆ ಬ್ರಿಟಿಷ್-ನಾಟಕ ಸಂಪ್ರದಾಯದಲ್ಲಿ ಶಾಸ್ತ್ರೀಯ ತರಬೇತಿ ನೀಡಲಾಗುತ್ತಿತ್ತು.[೧೫]ವಿದ್ಯಾರ್ಥಿಗಳಾಗಿ ಗಿಬ್ಸನ್ ಮತ್ತು ನಟಿ ಜೂಡಿ ಡೇವಿಸ್ [[ರೋಮಿಯೊ ಮತ್ತು ಜೂಲಿಯೆಟ್‌ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್‌ನ ಪ್ರಾಯೋಗಿಕ ನಿರ್ಮಾಣದಲ್ಲಿ ಗಿಬ್ಸನ್ ರಾಣಿ ಟಿಟಾನಿಯ ಪಾತ್ರವನ್ನು ನಿರ್ವಹಿಸಿದರು.|ರೋಮಿಯೊ ಮತ್ತು ಜೂಲಿಯೆಟ್‌ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು ಮತ್ತು ಎ ಮಿಡ್‌ಸಮ್ಮರ್ ನೈಟ್ಸ್ ಡ್ರೀಮ್‌ನ ಪ್ರಾಯೋಗಿಕ ನಿರ್ಮಾಣದಲ್ಲಿ ಗಿಬ್ಸನ್ ರಾಣಿ ಟಿಟಾನಿಯ ಪಾತ್ರವನ್ನು ನಿರ್ವಹಿಸಿದರು.[೧೬]]] 1977ರಲ್ಲಿ ಪದವಿ ಪಡೆದ ನಂತರ,ಮ್ಯಾಡ್‌ಮ್ಯಾಕ್ಸ್ ಚಿತ್ರೀಕರಣದ ಕೆಲಸವನ್ನು ತಕ್ಷಣವೇ ಆರಂಭಿಸಿದರು. ಆದರೆ ರಂಗ ನಟನಾಗಿ ಕೆಲಸವನ್ನು ಮುಂದುವರಿಸಿದರು ಮತ್ತು ಅಡೆಲೈಡ್‌ನಲ್ಲಿ ದಕ್ಷಿಣ ಆಸ್ಟ್ರೇಲಿಯದ ಸ್ಟೇಟ್ ಥಿಯೇಟರ್ ಕಂಪೆನಿಯನ್ನು ಸೇರಿದರು. ಗಿಬ್ಸನ್ ನಾಟಕದ ಖ್ಯಾತಿಗಳಲ್ಲಿ ವೇಯ್ಟಿಂಗ್ ಫಾರ್ ಗೋಡೊಟ್‌ ನಲ್ಲಿ ಎಸ್ಟ್ರಾಜನ್ ಪಾತ್ರ(ಜೆಫ್ರಿ ರಷ್ ಎದುರು)ಮತ್ತು ಸಿಡ್ನಿಯಲ್ಲಿ 1982ರ ನಿರ್ಮಾಣ ಡೆತ್ ಆಫ್ ಎ ಸೇಲ್ಸ್‌ಮನ್ ನ ಬಿಫ್ ಲೋಮ್ಯಾನ್ ಪಾತ್ರ ಸೇರಿವೆ. ಸಿಸ್ಸಿ ಸ್ಪಾಸೆಕ್ ಎದುರು ಗಿಬ್ಸನ್ ಅವರ ಅತೀ ಇತ್ತೀಚಿನ ನಾಟಕ ಪ್ರದರ್ಶನವು ಕೊಲರೊಡೊದ ಟೆಲ್ಲುರೈಡ್‌ನಲ್ಲಿ A. R.ಗರ್ನಿ ಅವರ 1993ರ ನಿರ್ಮಾಣ ಲವ್ ಲೆಟರ್ಸ್ .[೧೭]

ಆಸ್ಟ್ರೇಲಿಯನ್ ಟೆಲಿವಿಷನ್ ಮತ್ತು ಸಿನೆಮಾ

NIDAದಲ್ಲಿ ವಿದ್ಯಾರ್ಥಿಯಾಗಿದ್ದಾಗ,ಗಿಬ್ಸನ್ 1977ರ ಚಿತ್ರ ಸಮ್ಮರ್ ಸಿಟಿ ಯಲ್ಲಿ ಚಿತ್ರರಂಗಕ್ಕೆ ಚೊಚ್ಚಲ ಪ್ರವೇಶ ಮಾಡಿದರು. ಅದರಲ್ಲಿ ಅವರಿಗೆ $250 ಪಾವತಿ ಮಾಡಲಾಗಿತ್ತು. ಮಾನಸಿಕ-ದುರ್ಬಲ ಯುವಕನಾಗಿ ಗಿಬ್ಸನ್ ಟಿಮ್ ಚಿತ್ರದಲ್ಲಿ ನಟಿಸಿದರು. ಇದು ಪ್ರಮುಖ ಪಾತ್ರದಲ್ಲಿ ಆಸ್ಟ್ರೇಲಿಯ ಚಲನಚಿತ್ರ ಸಂಸ್ಥೆಯ ಅತ್ಯುತ್ತಮ ನಟ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿತು. ಮ್ಯಾಡ್ ಮ್ಯಾಕ್ಸ್ 1979ರಲ್ಲಿ ಬಿಡುಗಡೆಯಾದ ನಂತರ ಗಿಬ್ಸನ್ ಮುಖ್ಯವಾಹಿನಿಯ ಗಮನಸೆಳೆದರು.

ಈ ಸಂದರ್ಭದಲ್ಲಿ ಗಿಬ್ಸನ್ ಕಾರ್ಯಕ್ರಮಗಳಾದ ದಿ ಸಲಿವಾನ್ಸ್ , ಕಾಪ್ ಶಾಪ್ (1980ರಲ್ಲಿ),ಪನಿಷ್‌ಮೆಂಟ್ ಬೃಹತ್ ಸಂಚಿಕೆ(1980ರಲ್ಲಿ ನಿರ್ಮಾಣ,1981ರಲ್ಲಿ ಪ್ರದರ್ಶನ)ಗಳಲ್ಲಿ ಆಸ್ಟ್ರೇಲಿಯನ್ ಟೆಲಿವಿಷನ್ ಸರಣಿಗಳ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡರು.

ವರ್ಲ್ಡ್ ವಾರ್ IIಸಾಹಸ ಚಿತ್ರ ಅಟ್ಯಾಕ್ ಫೋರ್ಸ್ Z ನ ಸಾಹಸ ಚಿತ್ರದ ಪಾತ್ರವರ್ಗದಲ್ಲಿ ಅವರು ಸೇರ್ಪಡೆಯಾದರು.ಅವರು ಪ್ರಸಿದ್ಧ ನಟರಾಗುವ ತನಕ 1982ರವರೆಗೆ ಅದು ಬಿಡುಗಡೆಯಾಗಿರಲಿಲ್ಲ.ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿದ ವರ್ಲ್ಡ್ ವಾರ್ I‌ ಕಥೆ ಗ್ಯಾಲಿಪೊಲಿ ಯಲ್ಲಿ ಗಿಬ್ಸನ್ ಅವರಿಗೆ ನಿರ್ದೇಶಕ ಪೀಟರ್ ವೇರ್ ಪ್ರಮುಖ ಪಾತ್ರವೊಂದನ್ನು ನೀಡಿದರು. ಇದು ಆಸ್ಟ್ರೇಲಿಯನ್ ಚಲನಚಿತ್ರ ಸಂಸ್ಥೆಯಿಂದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಗಿಬ್ಸನ್ ಅವರಿಗೆ ದೊರಕಿಸಿಕೊಟ್ಟಿತು. ಚಲನಚಿತ್ರ ಗ್ಯಾಲಿಪೊಲಿ ಯು ಗಿಬ್ಸನ್ ಅವರಿಗೆ ಗಂಭೀರ,ಬಹುಮುಖ ಪ್ರತಿಭೆಯ ನಟನೆಂಬ ಖ್ಯಾತಿ ಗಳಿಸಲು ನೆರವಾಯಿತು ಮತ್ತು ಹಾಲಿವುಡ್ ಏಜೆಂಟ್ ಎಡ್ ಲಿಮಾಂಟೊರಲ್ಲಿ ಸ್ಥಾನ ಗಳಿಸಿದರು. ಉತ್ತರದ ಭಾಗ ಮ್ಯಾಡ್‌ಮ್ಯಾಕ್ಸ್ 2 ಅಮೆರಿಕದಲ್ಲಿ ಅವರ ಪ್ರಥಮ ಜನಪ್ರಿಯತೆ ಗಳಿಸಿದ ಚಿತ್ರವಾಯಿತು.(ದಿ ರೋಡ್ ವಾರಿಯರ್ ಆಗಿ ಬಿಡುಗಡೆಯಾಯಿತು) ಪೀಟರ್ ವೇರ್ ಅವರ ರಮ್ಯ ರೋಮಾಂಚಕ ಕಥೆ ದಿ ಇಯರ್ ಆಫ್ ಲೀವಿಂಗ್ ಡೇಂಜರಸ್ಲಿ ಚಿತ್ರಕ್ಕೆ 1982ರಲ್ಲಿ ಗಿಬ್ಸನ್ ವಿಮರ್ಶತ್ಮಾಕ ಮೆಚ್ಚುಗೆಯನ್ನು ಗಳಿಸಿದರು. ತಮ್ಮ ಅವಳಿ ಪುತ್ರರ ಜನನದ ನಂತರ ಒಂದು ವರ್ಷ ಚಿತ್ರನಟನೆಯಿಂದ ದೂರವುಳಿದ ಬಳಿಕ, ಗಿಬ್ಸನ್ 1984ರಲ್ಲಿ ದಿ ಬೌಂಟಿ ಚಿತ್ರದಲ್ಲಿ ಫ್ಲೆಚರ್ ಕ್ರಿಶ್ಚಿಯನ್ ಪಾತ್ರವನ್ನು ವಹಿಸಿದರು. ಮ್ಯಾಡ್ ಮ್ಯಾಕ್ಸ್ ಬಿಯೊಂಡ್ ಥಂಡರ್‌ಸ್ಟಾರ್ಮ್‌ ನಲ್ಲಿ ಮೂರನೇ ಬಾರಿಗೆ ಮ್ಯಾಕ್ಸ್ ರೊಕಾಟಾನ್ಸ್ಕಿ ಪಾತ್ರವನ್ನು ಗಿಬ್ಸನ್ 1985ರಲ್ಲಿ ನಿರ್ವಹಿಸುವ ಮೂಲಕ ಅವರು ಪ್ರಥಮ ದಶಲಕ್ಷ ಡಾಲರ್ ವೇತನವನ್ನು ಸಂಪಾದಿಸಿದರು.[೧೮]

ಹಾಲಿವುಡ್‌

ಪೂರ್ವದ ಹಾಲಿವುಡ್ ವರ್ಷಗಳು

ಮೆಲ್ ಗಿಬ್ಸನ್ ಅವರ ಪ್ರಥಮ ಅಮೆರಿಕನ್ ಚಿತ್ರ ಮಾರ್ಕ್ ರೈಡಲ್ ಅವರ 1984ರ ರೂಪಕ ದಿ ರಿವರ್ . ಅದರಲ್ಲಿ ಅವರು ಮತ್ತು ಸಿಸ್ಸಿ ಸ್ಪಾಸೆಕ್ ಪ್ರಯಾಸಪಡುವ ಟೆನ್ನೆಸೀ ರೈತರ ಪಾತ್ರವನ್ನು ವಹಿಸಿದರು. ಆಸ್ಟ್ರೇಲಿಯ ನಿರ್ದೇಶಕ ಗಿಲಿಯನ್ ಆರ್ಮ್‌ಸ್ಟ್ರಾಂಗ್ ಅವರ ಗೋತಿಕ್ ರಮ್ಯಕಥೆ ಮಿಸಸ್.ಸೋಫೆಲ್‌‌ ನಲ್ಲಿ ಗಿಬ್ಸನ್ ಪಾತ್ರವಹಿಸಿದರು. ಅವರು ಮತ್ತು ಮ್ಯಾಥಿವ್ ಮೊಡೈನ್ ನಿಂದಿತ ಕೈದಿ ಸಹೋದರರಾಗಿ ಪಾತ್ರವಹಿಸಿದರು. ಬೈಬಲ್ ಓದಿಹೇಳಲು ಅವರಲ್ಲಿಗೆ ಭೇಟಿ ನೀಡುತ್ತಿದ್ದ ಜೈಲುಮೇಲ್ವಿಚಾರಕನ ಪತ್ನಿ ಡಯೇನ್ ಕೀಟನ್ ಎದುರು ಈ ಪಾತ್ರದಲ್ಲಿ ನಟಿಸಿದರು. ಸತತವಾಗಿ ನಾಲ್ಕು ಚಿತ್ರಗಳಲ್ಲಿ 1985ರಲ್ಲಿ ಕೆಲಸ ಮಾಡಿದ ಬಳಿಕ, ಅವರು ಎರಡು ವರ್ಷಗಳ ವಿರಾಮ ಪಡೆದು ತಮ್ಮ ಆಸ್ಟ್ರೇಲಿಯದ ಜಾನುವಾರು ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಲೆಥಾಲ್ ವೆಪನ್‌ ನಲ್ಲಿ ಮಾರ್ಟಿನ್ ರಿಗ್ಸ್ ಪಾತ್ರವನ್ನು ವಹಿಸಲು ಅವರು ಹಿಂತಿರುಗಿದರು.ಈ ಚಿತ್ರವು ಅವರಿಗೆ ಹಾಲಿವುಡ್ ಸ್ಟಾರ್ ಸ್ಥಾನಮಾನವನ್ನು ಗಟ್ಟಿ ಮಾಡಲು ಸಹಾಯವಾಯಿತು. ಗಿಬ್ಸನ್ ಮುಂದಿನ ಚಿತ್ರ ರಾಬರ್ಟ್ ಟೌನ್ ಅವರ ಟೆಕ್ವಿಲಾ ಸನ್‌ರೈಸ್ ,ಅದನ್ನು ಅನುಸರಿಸಿ 1989ರಲ್ಲಿ ಲೆಥಾಲ್ ವೆಪನ್ 2 ಚಿತ್ರದಲ್ಲಿ ಅಭಿನಯಿಸಿದರು. ಒಂದರ ಹಿಂದೊಂದು ಮೂರು ಚಿತ್ರಗಳಾದ ಬರ್ಡ್ ಆನ್ ಎ ವೈರ್ , ಏರ್ ಅಮೆರಿಕ ಮತ್ತು ಹ್ಯಾಮ್ಲೆಟ್ ಚಿತ್ರಗಳಲ್ಲಿ ಪಾತ್ರವಹಿಸಿದ ಬಳಿಕ,ಗಿಬ್ಸನ್ ಹಾಲಿವುಡ್‌ನಿಂದ ಇನ್ನೊಂದು ವಿರಾಮ ತೆಗೆದುಕೊಂಡರು.

1990ರ ದಶಕ

1990 ದಶಕದಲ್ಲಿ ಗಿಬ್ಸನ್ ತಮ್ಮ ಬಾಕ್ಸ್‌ಆಫೀಸ್ ಪ್ರಭಾವವನ್ನು ವಾಣಿಜ್ಯ ಮತ್ತು ವೈಯಕ್ತಿಕ ಯೋಜನೆಗಳ ನಡುವೆ ಪರ್ಯಾಯವಾಗಿ ಬಳಸಿಕೊಂಡರು. ದಶಕದ ಮೊದಲರ್ಧಲ್ಲಿ ಅವರ ಚಿತ್ರಗಳು ಫೋರೆವರ್ ಯಂಗ್ ,ಲೆಥಾಲ್ ವೆಪನ್ 3 ಮತ್ತು ಮಾವೆರಿಕ್ ಮತ್ತು ಬ್ರೇವ್‌ಹಾರ್ಟ್ . ನಂತರ ಅವರು ರ‌‌್ಯಾನ್ಸಮ್ ,ಕನ್‌ಸ್ಪೈರೆಸಿ ಥಿಯರಿ , ಲೆಥಾಲ್ ವೆಪನ್ 4 ಮತ್ತು ಪೇಬ್ಯಾಕ್ ಚಿತ್ರಗಳಲ್ಲಿ ನಟಿಸಿದರು. ಡಿಸ್ನಿಯ ಪೊಕಾಹೊಂಟಾಸ್‌ ನಲ್ಲಿ ಅವರು ಜಾನ್ ಸ್ಮಿತ್ ಅವರ ಸಂಭಾಷಣೆಯ ಮತ್ತು ಗಾಯಕ ಧ್ವನಿಯಾಗಿ ಸೇವೆ ಸಲ್ಲಿಸಿದರು.

2000 ನಂತರ

2000ದಲ್ಲಿ ಗಿಬ್ಸನ್ ಮೂರು ಚಿತ್ರಗಳಲ್ಲಿ ಅಭಿನಯಿಸಿದರು. ಪ್ರತಿಯೊಂದೂ $100 ದಶಲಕ್ಷಕ್ಕಿಂತ ಹೆಚ್ಚು ಹಣ ಒಟ್ಟುಮಾಡಿತು: ದಿ ಪ್ಯಾಟ್ರಿಯಟ್ ,ಚಿಕನ್ ರನ್ ಮತ್ತು ವಾಟ್ ವುಮನ್ ವಾಂಟ್ 2002ರಲ್ಲಿ ವಿಯೆಟ್ನಾಂ ವಾರ್ ಕಥೆ ವಿ ವರ್ ಸೋಲ್ಜರ್ಸ್ ಮತ್ತು M.ನೈಟ್ ಶ್ಯಾಮಲನ್‌ರ ಸೈನ್ಸ್‌ ನಲ್ಲಿ ಕಾಣಿಸಿಕೊಂಡರು.ಅವರ ನಟನಾ ವೃತ್ತಿಯಲ್ಲಿ ಅತ್ಯಧಿಕ ಹಣ ಗಳಿಸಿದ ಚಿತ್ರವಾಯಿತು.[೧೯] ಸೈನ್ಸ್ ಪ್ರಚಾರದ ಸಂದರ್ಭದಲ್ಲಿ,ತಾವು ಚಿತ್ರನಟರಾಗಿ ಉಳಿಯಲು ಇಷ್ಟಪಡುವುದಿಲ್ಲ,ಚಿತ್ರಕತೆ ನಿಜವಾಗಲೂ ಅಸಾಮಾನ್ಯವೆನಿಸಿದರೆ ಮಾತ್ರ ತಾವು ಚಿತ್ರದಲ್ಲಿ ಅಭಿನಯಿಸುವುದಾಗಿ ಹೇಳಿದರು. ಗಿಬ್ಸನ್ 2010ರಲ್ಲಿ ಎಡ್ಜ್ ಆಫ್ ಡಾರ್ಕ್‌ನೆಸ್ ಚಿತ್ರದಲ್ಲಿ ಪಾತ್ರವಹಿಸಿದರು. ಅದು 2002ರಿಂದೀಚೆಗೆ ಅವರು ನಟಿಸಿದ ಪ್ರಥಮ ಪಾತ್ರವೆನಿಸಿತು.[೨೦] ಅದು BBC ಮಿನಿಸರಣಿಗಳ ಎಡ್ಜ್ ಆಫ್ ಡಾರ್ಕ್‌ನೆಸ್ ರೂಪಾಂತರವಾಗಿತ್ತು.[೨೧]

ನಿರ್ಮಾಪಕ

ಲೆಥಾಲ್ ವೆಪನ್ ಸರಣಿಗಳೊಂದಿಗೆ ಹಾಲಿವುಡ್‌ನಲ್ಲಿ ಯಶಸ್ಸಿನ ನಂತರ,ಗಿಬ್ಸನ್ ಚಿತ್ರನಿರ್ಮಾಣ ಮತ್ತು ನಿರ್ದೇಶನದಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದರು. ಹ್ಯಾಮ್ಲೆಟ್ ಚಿತ್ರನಿರ್ಮಾಣದ ಸಲುವಾಗಿ 1989ರಲ್ಲಿ ಪಾಲುದಾರ ಬ್ರೂಸ್ ಡೇವಿ ಜತೆ ಗಿಬ್ಸನ್ ಐಕಾನ್ ಪ್ರೊಡಕ್ಸನ್ಸ್ ರಚಿಸಿದರು. ಗಿಬ್ಸನ್ ಸ್ವಂತ ಅಭಿನಯದ, ನಿರ್ಮಾಣದ ಅಥವಾ ಸಹ ನಿರ್ಮಾಣದ ಚಿತ್ರಗಳ ಜತೆ ಐಕಾನ್ ಇನ್ನೂ ಇತರೆ ಇಮ್ಮೋರ್ಟಲ್ ಬಿಲೌಡ್‌ ನಿಂದ ಆನ್ ಐಡಿಯಲ್ ಹಸ್ಬೆಂಡ್ ವರೆಗೆ ಸಣ್ಣ ಚಿತ್ರಗಳನ್ನು ತಯಾರಿಸಿತು. ಮಿಲಿಯನ್ ಡಾಲರ್ ಹೊಟೆಲ್ ಮತ್ತು ದಿ ಸಿಂಗಿಂಗ್ ಡಿಟೆಕ್ಟಿವ್ ಮುಂತಾದ ಕೆಲವು ಚಿತ್ರಗಳಲ್ಲಿ ಅವುಗಳ ವಾಣಿಜ್ಯ ಭವಿಷ್ಯ ಸುಧಾರಿಸುವುದಕ್ಕಾಗಿ ಪೋಷಕ ಪಾತ್ರಗಳನ್ನು ನಿರ್ವಹಿಸಿದರು. ಟೆಲಿವಿಷನ್‌ಗೆ ಕೂಡ ಗಿಬ್ಸನ್ ಅನೇಕ ಯೋಜನೆಗಳನ್ನು ನಿರ್ಮಿಸಿದರು.ಜೀವನಚರಿತ್ರೆಯ ಚಿತ್ರ ದಿ ತ್ರೀ ಸ್ಟೂಜಸ್ ಮತ್ತು 2008ರ PBS ಸಾಕ್ಷ್ಯಚಿತ್ರ ಕೆರಿಯರ್ ಕೂಡ ಇವುಗಳಲ್ಲಿ ಸೇರಿವೆ. ಐಕಾನ್ ಕೇವಲ ಚಿತ್ರನಿರ್ಮಾಣ ಕಂಪೆನಿಯನ್ನು ಮೀರಿ ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ವಿತರಣೆ ಮತ್ತು ಚಿತ್ರಪ್ರದರ್ಶಕ ಕಂಪೆನಿಯಾಗಿ ಬೆಳವಣಿಗೆ ಸಾಧಿಸಿತು.

ನಿರ್ದೇಶಕ

ಮೆಲ್ ಗಿಬ್ಸನ್ ವಿಶೇಷವಾಗಿ ಜಾರ್ಜ್ ಮಿಲ್ಲರ್,ಪೀಟರ್ ವೇರ್ ಮತ್ತು ರಿಚರ್ಡ್ ಡಾನರ್ ಅವರಿಗೆ ಚಿತ್ರನಿರ್ಮಾಣದ ಕಲೆಯನ್ನು ಬೋಧಿಸಿ ಮತ್ತು ನಿರ್ದೇಶಕರಾಗಿ ಪ್ರಭಾವ ಬೀರುವ ಮೂಲಕ ನಿರ್ದೇಶಕರಿಗೆ ಮನ್ನಣೆ ನೀಡಿದರು. ರಾಬರ್ಟ್ ಡೌನಿ, ಜೂ.ಪ್ರಕಾರ,ಸ್ಟುಡಿಯೊ ಕಾರ್ಯನಿರ್ವಾಹಕರು ಗಿಬ್ಸನ್ ಅವರು ಒಂದು ಸಂದರ್ಭದಲ್ಲಿ ನಿರಾಕರಿಸಿದ ಚಿತ್ರವೊಂದರ ಕಲ್ಪನೆಯನ್ನು ನಿರ್ದೇಶಿಸಬೇಕೆಂದು ಪ್ರೋತ್ಸಾಹಿಸಿದರು.[೨೨]ಗಿಬ್ಸನ್ 1993ರಲ್ಲಿ ಚೊಚ್ಚಲ ನಿರ್ದೇಶನವನ್ನು ದಿ ಮ್ಯಾನ್ ವಿತೌಟ್ ಎ ಫೇಸ್‌ ನೊಂದಿಗೆ ಕೈಗೊಂಡರು. ಎರಡು ವರ್ಷಗಳ ನಂತರ ಬ್ರೇವ್‌ಹಾರ್ಟ್ ಚಿತ್ರ ನಿರ್ದೇಶಿಸಿದರು. ಅದು ಅವರಿಗೆ ಉತ್ತಮ ನಿರ್ದೇಶನದ ಅಕಾಡೆಮಿ ಪ್ರಶಸ್ತಿಯನ್ನು ತಂದುಕೊಟ್ಟಿತು. ಗಿಬ್ಸನ್ ಫ್ಯಾರನ್‌ಹೀಟ್ 451 ರಿಮೇಕ್ ಚಿತ್ರ ನಿರ್ದೇಶನಕ್ಕೆ ಬಹುಹಿಂದೆ ಯೋಜಿಸಿದ್ದರು.ಆದರೆ ವೇಳಾಪಟ್ಟಿಯ ವಿವಾದಗಳಿಂದಾಗಿ ಯೋಜನೆ 1999ರಲ್ಲಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿತು.[೨೩]ಲಾಸ್ ಏಂಜಲ್ಸ್‌ನಲ್ಲಿ ಹ್ಯಾಮ್ಲೆಟ್‌ನ ನಾಟಕ ನಿರ್ಮಾಣದಲ್ಲಿ ಗಿಬ್ಸನ್ 2001ರ ಜನವರಿಯಲ್ಲಿ ರಾಬರ್ಟ್ ಡೌನಿ,Jr ಚಿತ್ರ ನಿರ್ದೇಶನಕ್ಕೆ ನಿಗದಿಯಾಗಿತ್ತು. ಆದರೆ ಮಾದಕವಸ್ತು ಸೇವನೆಯಿಂದ ಡೌನಿ ಆರೋಗ್ಯಸ್ಥಿತಿ ಹದಗೆಟ್ಟಿದ್ದರಿಂದ ಯೋಜನೆ ಸ್ಥಗಿತಗೊಂಡಿತು.[೨೪] 2002ರಲ್ಲಿ ಮಾಧ್ಯಮಕ್ಕೆ ವಿ ವರ್ ಸೋಲ್ಜರ್ಸ್ ಮತ್ತು ಸೈನ್ಸ್ ಪ್ರಚಾರದ ಸಂದರ್ಭದಲ್ಲಿ,ತಾವು ನಟನೆಯನ್ನು ಹಂತ,ಹಂತವಾಗಿ ಕುಂಠಿತಗೊಳಿಸಿ ನಿರ್ದೇಶನಕ್ಕೆ ಹಿಂತಿರುಗುವ ಯೋಜನೆಯನ್ನು ಪ್ರಸ್ತಾಪಿಸಿದರು.[೨೫] 2002 ಸೆಪ್ಟೆಂಬರ್‌ನಲ್ಲಿ,ತಾವು ಅರಾಮಿಕ್‌ ಭಾಷೆಯಲ್ಲಿ ದಿ ಪ್ಯಾಶನ್ ಮತ್ತು ಲ್ಯಾಟಿನ್ ಚಿತ್ರವನ್ನು ಯಾವುದೇ ಉಪೆಶೀರ್ಷಿಕೆಗಳಿಲ್ಲದೇ ನಿರ್ದೇಶಿಸುವುದಾಗಿ ಪ್ರಕಟಿಸಿದರು. ಏಕೆಂದರೆ ಚಿತ್ರದ ಕಥಾನಿರೂಪಣೆಯ ಮೂಲಕ ಭಾಷೆಯ ನಿರ್ಬಂಧಗಳನ್ನು ಮೀರಲು ಅವರು ಆಶಿಸಿದ್ದರು.[೨೬] ಅವರು 2004ರಲ್ಲಿ ವಿವಾದಾತ್ಮಕ ಚಿತ್ರ ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್ ಬಿಡುಗಡೆ ಮಾಡಿದರು. ಆ ಚಿತ್ರದ ಸಹ-ಚಿತ್ರಕಥೆ,ಸಹ ನಿರ್ಮಾಣ ಮತ್ತು ನಿರ್ದೇಶನವನ್ನು ಅವರು ವಹಿಸಿಕೊಂಡರು. ಅವರು ABCಜಾಲಕ್ಕಾಗಿ ಕಂಪ್ಲೀಟ್ ಸ್ಯಾವೇಜಸ್‌ ನ ಕೆಲವು ಸಂಚಿಕೆಗಳನ್ನು ನಿರ್ದೇಶಿಸಿದರು. ಅವರು 2006ರಲ್ಲಿ ಆಕ್ಷನ್-ಸಾಹಸ ಚಿತ್ರ ಅಪೊಕ್ಯಾಲಿಪ್ಟೊ ನಿರ್ದೇಶಿಸಿದರು. ಇಂಗ್ಲೀಷೇತರ ಭಾಷೆಯಲ್ಲಿ ವಿರಳ ಸಂಭಾಷಣೆಯ ಲಕ್ಷಣ ಹೊಂದಿರುವ ಅವರ ಎರಡನೇ ಚಿತ್ರವಾಗಿದೆ.

ಗೌರವಗಳು

ಗಿಬ್ಸನ್ 1997 ಜುಲೈ 25ರಲ್ಲಿ ಆಫೀಸರ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯ(AO) ಗೌರವಕ್ಕೆ ಹೆಸರಿಸಲ್ಪಟ್ಟರು.ಆಸ್ಟ್ರೇಲಿಯ ಚಿತ್ರೋದ್ಯಮಕ್ಕೆ ಅವರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು. ಇದೊಂದು ಗೌರವ ಪ್ರಶಸ್ತಿಯಾಗಿದೆ.ಏಕೆಂದರೆ ಆಸ್ಟ್ರೇಲಿಯದ ಪೌರರಿಗೆ ಮಾತ್ರ ಪ್ರಮುಖ ಪ್ರಶಸ್ತಿಗಳನ್ನು ನೀಡಲಾಗುತ್ತದೆ.[೨೭][೨೮] ಗಿಬ್ಸನ್ 1985ರಲ್ಲಿ ದಿ ಸೆಕ್ಸಿಯಸ್ಟ್ ಮ್ಯಾನ್ ಅಲೀವ್ ಎಂದು ಪೀಪಲ್‌ ನಿಂದ ಹೆಸರಿಸಲ್ಪಟ್ಟ ಪ್ರಥಮ ವ್ಯಕ್ತಿಯೆನಿಸಿದರು.[೨೯] ಅವರು 1995ರಲ್ಲಿ ಫ್ರೆಂಚ್ ಸರ್ಕಾರದ ಚೆವಲಿಯರ್ ಡೆಸ್ ಆರ್ಟ್ಸ್ ಎಟ್ ಲೆಟರ್ಸ್ ಪ್ರಶಸ್ತಿಯನ್ನು ಮೌನವಾಗಿ ನಿರಾಕರಿಸಿದರು. ವಾಯವ್ಯ ಪೆಸಿಫಿಕ್‌ನಲ್ಲಿ ಫ್ರಾನ್ಸ್ ಅಣ್ವಸ್ತ್ರ ಪರೀಕ್ಷೆ ಆರಂಭದ ವಿರುದ್ಧ ಪ್ರತಿಭಟಿಸಲು ಈ ಕ್ರಮ ಕೈಗೊಂಡರು.[೩೦] ಟೈಮ್ ನಿಯತಕಾಲಿಕೆ ಮೆಲ್ ಗಿಬ್ಸನ್ ಮತ್ತು ಮೈಕೆಲ್ ಮೂರ್ ಅವರನ್ನು ವರ್ಷದ ಪುರುಷರಾಗಿ 2004ರಲ್ಲಿ ಆಯ್ಕೆ ಮಾಡಿತು. ಆದರೆ ಗಿಬ್ಸನ್ ಛಾಯಾಚಿತ್ರ ಸೆಷನ್ ಮತ್ತು ಸಂದರ್ಶನವನ್ನು ತಳ್ಳಿಹಾಕಿದ್ದರಿಂದ ಅವರ ಬದಲಿಗೆ ಜಾರ್ಜ್ ಡಬ್ಲ್ಯೂ.ಬುಷ್ ಚಿತ್ರವು ಮುಖಪುಟದಲ್ಲಿ ಕಾಣಿಸಿತು.[೩೧]

ಮಹತ್ವದ ಚಿತ್ರಗಳು

ಮ್ಯಾಡ್ ಮ್ಯಾಕ್ಸ್ ಸರಣಿಗಳು

ಜಾರ್ಜ್ ಮಿಲ್ಲರ್‌ರ ಮ್ಯಾಡ್‌ಮ್ಯಾಕ್ಸ್‌ ನಲ್ಲಿ ಪ್ರಳಯದ ನಂತರ ಜೀವಂತವಾಗುಳಿದ ಚರ್ಮದ ಹೊದಿಕೆಯನ್ನು ಹೊದ್ದ ವ್ಯಕ್ತಿಯ ಪಾತ್ರದಲ್ಲಿ ಗಿಬ್ಸನ್ ಜನಪ್ರಿಯರಾದರು. ಸ್ವತಂತ್ರವಾಗಿ ಹಣಹೂಡಿದ ಜನಪ್ರಿಯ ಚಿತ್ರ ಗಿಬ್ಸನ್ ಅವರಿಗೆ $15,000 ಗಳಿಸಲು ನೆರವಾಯಿತು ಮತ್ತು ಸರ್ವವ್ಯಾಪಿ ಅಂತಾರಾಷ್ಟ್ರೀಯ ತಾರೆಯಾಗಲು ಸಹಾಯಮಾಡಿತು. ಆದರೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನಟನ ಆಸ್ಟ್ರೇಲಿಯದ ಉಚ್ಚಾರಣಾ ಶೈಲಿಯನ್ನು ಅಮೆರಿಕನ್ ಉಚ್ಚಾರಣೆ ಶೈಲಿಗೆ ಅಳವಡಿಸಲಾಯಿತು. ಮೂಲ ಚಿತ್ರವು ಎರಡು ಉತ್ತರ ಭಾಗಗಳನ್ನು ಸೃಷ್ಟಿಸಿತು.ಮ್ಯಾಡ್ ಮ್ಯಾಕ್ಸ್ 2 (ಉತ್ತರ ಅಮೆರಿಕದಲ್ಲಿ ದಿ ರೋಡ್ ವಾರಿಯರ್ ಎಂದು ಪರಿಚಿತ)ಮತ್ತು ಮ್ಯಾಡ್ ಮ್ಯಾಕ್ಸ್ 3 (ಉತ್ತರ ಅಮೆರಿಕದಲ್ಲಿ ಮ್ಯಾಡ್ ಮ್ಯಾಕ್ಸ್ ಬಿಯಾಂಡ್ ಥಂಡರ್‌ಸ್ಟಾರ್ಮ್ ಎಂದು ಪರಿಚಿತ). ನಾಲ್ಕನೇ ಚಿತ್ರ Mad Max 4: Fury Road ಬೆಳವಣಿಗೆಯ ಹಂತದಲ್ಲಿದೆ. ಆದರೆ ಗಿಬ್ಸನ್ ಮತ್ತು ಜಾರ್ಜ್ ಮಿಲ್ಲರ್ ಇಬ್ಬರೂ ಯುವ ನಾಯಕನಿಗೆ ಪ್ರಮುಖ ಪಾತ್ರ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ.[೩೨]

ಗಾಲ್ಲಿಪೊಲಿ

ಗಿಬ್ಸನ್ ಪೀಟರ್ ವೇರ್ 1981ರ ಚಿತ್ರದಲ್ಲಿ ಸಹ-ನಟ ಮಾರ್ಕ್ ಲೀ ಜತೆಯಲ್ಲಿ ಸಿನಿಕತನದ ಫ್ರಾಂಕ್ ಡನ್ನೆ ಪಾತ್ರವನ್ನು ಗಿಬ್ಸನ್ ನಿರ್ವಹಿಸಿದ್ದಾರೆ. ಗಾಲ್ಲಿಪೊಲಿ ಕಥೆಯಲ್ಲಿ ಪಶ್ಚಿಮ ಆಸ್ಟ್ರೇಲಿಯದ ಗ್ರಾಮೀಣ ಪ್ರದೇಶದ ಅನೇಕ ಯುವಕರು ಪ್ರಥಮ ವಿಶ್ವಮಹಾಯುದ್ಧದಲ್ಲಿ ಆಸ್ಟ್ರೇಲಿಯದ ಸೇನೆಗೆ ಸೇರ್ಪಡೆಯಾಗುತ್ತಾರೆ. ಅವರನ್ನು ಟರ್ಕಿಗೆ ಕಳಿಸಲಾಗುತ್ತದೆ ಮತ್ತು ಅಲ್ಲಿ ಗಾಲ್ಲಿಪೊಲಿ ದಂಡಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಚಿತ್ರದ ಒಂದು ಹಂತದಲ್ಲಿ,ಯುವಸೈನಿಕರು ಯುದ್ಧದ ಉದ್ದೇಶದ ಬಗ್ಗೆ ತಮ್ಮ ಅಮಾಯಕತೆಯನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ. ಗಾಲ್ಲಿಪೊಲಿಯ ANZACಯುದ್ಧಭೂಮಿಯಲ್ಲಿ ಚಿತ್ರ ಪರಾಕಾಷ್ಠೆಗೆ ಮುಟ್ಟುತ್ತದೆ ಮತ್ತು ನೆಕ್‌ನಲ್ಲಿ ನಿರ್ದಯ ದಾಳಿಯನ್ನು ಬಿಂಬಿಸುತ್ತದೆ. ವಿಮರ್ಶಾತ್ಮಕವಾಗಿ ಮೆಚ್ಚಿಗೆ ಗಳಿಸಿದ ಚಿತ್ರ ಗಿಬ್ಸನ್ ವೃತ್ತಿಜೀವನದ ಆರಂಭಕ್ಕೆ ಉತ್ತೇಜನ ನೀಡುತ್ತದೆ. ಪ್ರಮುಖ ಪಾತ್ರದ ಶ್ರೇಷ್ಠ ನಟ ಪ್ರಶಸ್ತಿಯನ್ನು ಆಸ್ಟ್ರೇಲಿಯದ ಚಿತ್ರ ಸಂಸ್ಥೆಯಿಂದ ಅವರು ಪಡೆಯುತ್ತಾರೆ.

ದಿ ಇಯರ್ ಆಫ್ ಲೀವಿಂಗ್ ಡೇಂಜರಸ್ಲಿ

ಗಿಬ್ಸನ್ ಪೀಟರ್ ವೇರ್ ಅವರ 1982ರ ಭಾವನಾತ್ಮಕ ಚಿತ್ರ ದಿ ಇಯರ್ ಆಫ್ ಲೀವಿಂಗ್ ಡೇಂಜರಸ್ಲಿ ಯಲ್ಲಿ ಸಿಜರ್ನಿ ವೀವರ್ ಮತ್ತು ಲಿಂಡಾ ಹಂಟ್ ಎದುರು ಅನನುಭವಿ ಆದರೆ ಮಹತ್ವಾಕಾಂಕ್ಷಿ ಪತ್ರಕರ್ತನ ಪಾತ್ರವನ್ನು ಗಿಬ್ಸನ್ ನಿರ್ವಹಿಸಿದ್ದಾರೆ. ಕ್ರಿಸ್ಟೋಫರ್ ಕೊಚ್ ಅವರ ಅದೇ ಹೆಸರಿನ ಕಾದಂಬರಿಯನ್ನು ಈ ಚಿತ್ರವು ಆಧರಿಸಿದೆ. ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯದೃಷ್ಟಿಯಿಂದ ಯಶಸ್ಸಾಯಿತು ಮತ್ತು ಭರವಸೆಯ ಆಸ್ಟ್ರೇಲಿಯ ನಟನನ್ನು MGMಸ್ಟುಡಿಯೊ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಕುದುರಿಸಿತು. ಚಿತ್ರದ ಪರಾಮರ್ಶೆಯಲ್ಲಿ ನ್ಯೂಯಾರ್ಕ್ ಟೈಮ್ಸ್ ವಿನ್ಸೆಂಟ್ ಕ್ಯಾನ್‌ಬಿ ಬರೆಯುತ್ತಾರೆ, "ಈ ಚಿತ್ರವು ಗಿಬ್ಸನ್ ಅವರನ್ನು ಅಂತಾರಾಷ್ಟ್ರೀಯ ತಾರೆಯನ್ನಾಗಿ ಮಾಡದಿದ್ದರೆ, ಬೇರಾವುದೂ ಮಾಡುವುದಿಲ್ಲ". ಅವರು ಅಗತ್ಯ ಪ್ರತಿಭೆ ಮತ್ತು ತೆರೆಯ ಮೇಲೆ ನಟನಾ ಕೌಶಲ್ಯ ಎರಡೂ ಹೊಂದಿದ್ದರು."[೩೩]

ಗಿಬ್ಸನ್ ಆರಂಭದಲ್ಲಿ ಗೈ ಹ್ಯಾಮಿಲ್ಟನ್ ಪಾತ್ರವನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದರು. "ತಮ್ಮ ಪಾತ್ರವು ಅತ್ಯವಶ್ಯವಾಗಿ ದೊಡ್ಡ ಸವಾಲೆಂದು ತಾವು ಭಾವಿಸುವುದಿಲ್ಲ. ಚಿತ್ರವೇ ಹೇಳುವಂತೆ ತಮ್ಮ ಪಾತ್ರವು ಗೊಂಬೆಯಂತಿದೆ. ನಾನೂ ಅದೇ ರೀತಿ ಅಭಿನಯಿಸಿದೆ. ಅದೊಂದು ನಾಯಕನ ವಿಷಯವಸ್ತುವಲ್ಲ. ಆದರೂ ಅವರು ಆ ರೀತಿಯಲ್ಲಿ ಜಾಹೀರಾತು ನೀಡಿದರು."[೩೪] ಗಿಬ್ಸನ್ ಸ್ವಯಂ ತಮ್ಮ ನಡುವೆ ಮತ್ತು ವ್ಯಕ್ತಿಯ ಪಾತ್ರದ ನಡುವೆ ಹೋಲಿಕೆಗಳನ್ನು ಕಂಡರು. "ಅವನು ಅಪ್ರಮಾಣಿಕ ನಿರರ್ಗಳ ಮಾತುಗಾರನಲ್ಲ. ಅವನು ಒಂದು ರೀತಿಯಲ್ಲಿ ಅಪಕ್ವನಾಗಿದ್ದ ಮತ್ತು ಕೆಲವು ತೊಡಕುಗಳನ್ನು ಎದುರಿಸಿದ. ನನಗೆ ಕೂಡ ಹಾಗೆ ಹೇಳಬಹುದೆಂದು ಭಾವಿಸುತ್ತೇನೆ"[೧೩] ಚಿತ್ರದ ಸಾಧನೆ ವೈಯಕ್ತಿವಾಗಿ ತಮಗೆ ಮೆಚ್ಚಿಗೆಯಾಗಿದೆಯೆಂದು ಹೇಳಿದರು.[ಯಾವಾಗ?]

ದಿ ಬೌಂಟಿ

ಮುಟಿನಿ ಆನ್ ದಿ ಬೌಂಟಿಯ ಸಿನೆಮಾ ಪುನರಾವರ್ತಿತ ಕಥೆಯಲ್ಲಿ ಗಿಬ್ಸನ್ ಪ್ಲೆಚರ್ ಕ್ರಿಶ್ಚಿಯನ್ ಪಾತ್ರದಲ್ಲಿ ಎರಾಲ್ ಫ್ಲೈನ್,ಕ್ಲಾರ್ಕ್ ಗೇಬಲ್ ಮತ್ತು ಮಾರ್ಲಾನ್ ಬ್ರಾಂಡೊ ಅವರ ಹೆಜ್ಜೆಗಳನ್ನು ಅನುಸರಿಸಿದರು. ಇದರ ಫಲವಾಗಿ 1984ರ ಚಿತ್ರ ದಿ ಬೌಂಟಿ ಯು ಐತಿಹಾಸಿಕವಾಗಿ ನಿಖರ ಆವೃತ್ತಿಯಾಗಿ ಪರಿಗಣಿತವಾಯಿತು. ಆದಾಗ್ಯೂ, ಚಿತ್ರದ ಪರಿಷ್ಕರಣ ನೀತಿ ಸಾಕಷ್ಟು ದೂರ ಹೋಗಿಲ್ಲವೆಂದು ಗಿಬ್ಸನ್ ಭಾವಿಸಿದ್ದಾರೆ. ಅವರ ಪಾತ್ರವನ್ನು ಖಳನಾಯಕನಿಗಿಂತ ಹೆಚ್ಚಾಗಿ ಬಿಂಬಿಸಬೇಕಾಗಿತ್ತು ಮತ್ತು ವಿಲಿಯಂ ಬ್ಲೈಗ್ ಪಾತ್ರದಲ್ಲಿ ಆಂಥೋನಿ ಹಾಪ್ಕಿನ್ಸ್ ಸಾಧನೆಯನ್ನು ಚಿತ್ರದ ಉತ್ತಮ ಅಂಶವೆಂದು ಬಣ್ಣಿಸಿದರು.[೩೪]

ಲೆಥಾಲ್ ವೆಪನ್ ಸರಣಿಗಳು

ಗಿಬ್ಸನ್ ಜನಪ್ರಿಯ ಬಡ್ಡಿ ಕಾಪ್ ಲೆಥಾಲ್ ವೆಪನ್ ಸರಣಿಗಳಿಂದ ವಾಣಿಜ್ಯ ಚಿತ್ರನಿರ್ಮಾಣದ ಮುಖ್ಯವಾಹಿನಿಗೆ ಪ್ರವೇಶಿಸಿದರು.ಅದು 1987ರ ಮೂಲದಿಂದ ಆರಂಭವಾಯಿತು. ಚಿತ್ರಗಳಲ್ಲಿ ಅವರು LAPDಪತ್ತೆದಾರಿ ಮಾರ್ಟಿನ್ ರಿಗ್ಸ್ ಪಾತ್ರವನ್ನು ನಿರ್ವಹಿಸಿದರು. ಇತ್ತೀಚೆಗೆ ವಿಧುರನಾಗಿದ್ದ ವಿಯೆಟ್ನಾಂ ನಿವೃತ್ತ ಸೈನಿಕ ಸಾಯುವ ಇಚ್ಛೆಯೊಂದಿಗೆ ಹಿಂಸೆ ಮತ್ತು ಸಣ್ಣ ಆಯುಧಗಳೊಂದಿಗೆ ಹೋರಾಟದಲ್ಲಿ ತೀವ್ರ ಆಸಕ್ತನಾಗಿದ್ದ ಪಾತ್ರವಾಗಿತ್ತು. ಚಿತ್ರಗಳಲ್ಲಿ ಅವರು ಮಿತಭಾಷಿ ಕುಟುಂಬಿಕ ರೋಜರ್ ಮುರ್ಟಾಗ್(ಡ್ಯಾನಿ ಗ್ಲೋವರ್)ಎಂಬ ಹೆಸರಿನ ವ್ಯಕ್ತಿಯ ಸಹಭಾಗಿ. ಲೆಥಾಲ್ ವೆಪನ್ ಯಶಸ್ಸಿನ ಹಿನ್ನೆಲೆಯಲ್ಲಿ, ನಿರ್ದೇಶಕ ರಿಚರ್ಡ್ ಡೋನರ್ ಮತ್ತು ಮುಖ್ಯ ಪಾತ್ರಧಾರಿ ಮೂರು ಭಾಗಗಳಲ್ಲಿ ಲೆಥಾಲ್ ವೆಪನ್ 2 (1989), ಲೆಥಾಲ್ ವೆಪನ್ 3 (1993),ಮತ್ತು ಲೆಥಾಲ್ ವೆಪನ್ 4 (1998) ಪಾತ್ರಗಳಿಗೆ ಮರುಪ್ರವೇಶ ಮಾಡಿದರು. ಈ ಸರಣಿಗಳು ಇಬ್ಬರು ಸ್ನೇಹಿತರ ಜೋಡಿಯುಳ್ಳ ಚಿತ್ರದ ಉಪಶೈಲಿಗೆ ನಿದರ್ಶನವಾಗಿದೆ.

ಹ್ಯಾಮ್ಲೆಟ್‌

ಫ್ರಾಂಕೊ ಝೆಪಿರೆಲ್ಲಿಯ ಹ್ಯಾಮ್ಲೆಟ್ ಚಿತ್ರದಲ್ಲಿ ವಿಷಣ್ಣಭಾವದ ಡ್ಯಾನಿಷ್ ರಾಜಕುಮಾರನ ಪಾತ್ರದಲ್ಲಿ ನಟಿಸುವ ಮೂಲಕ ಗಿಬ್ಸನ್ ಸಾಹಸ ಚಿತ್ರಗಳಿಂದ ಸಾಂಪ್ರದಾಯಿಕ ಉಪಶೈಲಿಯ ಚಿತ್ರಗಳಿಗೆ ಅಸಹಜ ಪರಿವರ್ತನೆಯಾದರು. ಗಿಬ್ಸನ್ ಅವರು ಅನುಭವಿ ಶೇಕ್ಸ್‌ಪಿಯರ್ ಕಥೆಗಳ ನಟರಾದ ಐಯಾನ್ ಹೋಮ್, ಅಲಾನ್ ಬೇಟ್ಸ್ ಮತ್ತು ಪಾಲ್ ಸ್ಕಾಫೀಲ್ಡ್ ಜತೆ ಪಾತ್ರವಹಿಸಿದರು. ಸಹೋದ್ಯೋಗಿ ಪಾತ್ರಧಾರಿಗಳ ಜತೆ ಕೆಲಸಮಾಡುವುದು "ಮೈಕ್‌ಟೈಸನ್ ಜತೆ ಹೋರಾಟಕ್ಕೆ ಅಖಾಡಕ್ಕೆ ಎಸೆದ" ಹಾಗೆ ಎಂದು ಅವರು ವರ್ಣಿಸಿದ್ದರು.

ಚಿತ್ರವು ವಿಮರ್ಶಾತ್ಮಕ ಮತ್ತು ಮಾರುಕಟ್ಟೆ ಯಶಸ್ಸು ಗಳಿಸಿತು ಮತ್ತು DVD ಮಾರಾಟಗಳಲ್ಲಿ ಸ್ಥಿರವಾಗುಳಿಯಿತು. ಮೆಲ್ ಗಿಬ್ಸನ್ ಅವರು ಸಾಹಸಿ ನಾಯಕನ ಪಾತ್ರದಿಂದ ಗಂಭೀರ ಪಾತ್ರದ ನಟ ಮತ್ತು ಚಿತ್ರನಿರ್ಮಾಪಕರಾಗಿ ಪರಿವರ್ತನೆಯ ಸಂಕೇತವಾಯಿತು.

ಬ್ರೇವ್‌ಹಾರ್ಟ್

ಮೆಲ್ ಗಿಬ್ಸನ್ ಬ್ರೇವ್‌ಹಾರ್ಟ್ ಚಿತ್ರದ ನಿರ್ದೇಶನ,ನಿರ್ಮಾಣ ಮತ್ತು ನಟನಾಗಿ ಪಾತ್ರವಹಿಸಿದರು. 13ನೇ ಶತಮಾನದ ಸ್ಕಾಟಿಷ್ ದೇಶಭಕ್ತ ಸರ್ ವಿಲಿಯಂ ವ್ಯಾಲೇಸ್ ಅವರ ದಂತಕತೆಯುಳ್ಳ ಮಹಾಕೃತಿಯ ಕಥಾನಕವಿದು. ಅವರ ಎರಡನೇ ನಿರ್ದೇಶನ ಪ್ರಯತ್ನಕ್ಕೆ ಗಿಬ್ಸನ್ ಶ್ರೇಷ್ಠ ನಿರ್ದೇಶಕ ಮತ್ತು ಶ್ರೇಷ್ಠ ಚಿತ್ರದ ಎರಡು ಅಕಾಡೆಮಿ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಬ್ರೇವ್‍‌ಹಾರ್ಟ್ ಸ್ಕಾಟಿಷ್ ರಾಷ್ಟ್ರೀಯ ಆಂದೋಳನಕ್ಕೆ ಪ್ರಭಾವ ಬೀರಿತು ಮತ್ತು ಐತಿಹಾಸಿಕ ಮಹಾಕೃತಿಯ ಚಿತ್ರಶೈಲಿಗೆ ಉತ್ತೇಜನ ನೀಡಲು ನೆರವಾಯಿತು. (1}ಬ್ರೇವ್‌ಹಾರ್ಟ್‌ನಲ್ಲಿ ಬ್ಯಾಟಲ್ ಆಫ್ ಸ್ಟರ್ಲಿಂಗ್ ಬ್ರಿಜ್ ಭಾಗವು ಸರ್ವಕಾಲದ ಶ್ರೇಷ್ಠ ನಿರ್ದೇಶನದ ಯುದ್ಧ ದೃಶ್ಯಗಳಲ್ಲೊಂದು ಎಂದು ವಿಮರ್ಶಕರು ಪರಿಗಣಿಸಿದ್ದಾರೆ.[೩೫]

ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್

ಗಿಬ್ಸನ್ 2004ರ ಚಿತ್ರ ಪ್ಯಾಶನ್ ಆಫ್ ದಿ ಕ್ರೈಸ್ಟ್‌ ಗೆ ನಿರ್ದೇಶನ, ನಿರ್ಮಾಣ, ಸಹ-ಕಥೆ ಮತ್ತು ಸ್ವಯಂ ಹಣಕಾಸು ನೆರವು ಒದಗಿಸಿದರು. ಇದು [[ಏಸುಕ್ರಿಸ್ತನ ಶಿಲುಬೆಯಲ್ಲಿನ ಯಾತನೆ ಮತ್ತು ಸಾವು|ಏಸುಕ್ರಿಸ್ತನ ಶಿಲುಬೆಯಲ್ಲಿನ ಯಾತನೆ ಮತ್ತು ಸಾವು]] ನಿರೂಪಿಸುತ್ತದೆ. ಪಾತ್ರವರ್ಗವು ಅರಾಮಿಕ್,ಲ್ಯಾಟಿನ್ ಮತ್ತು ಹೆಬ್ರಿವ್ ಭಾಷೆಗಳಲ್ಲಿ ಮಾತನಾಡಿದವು. ಚಿತ್ರವನ್ನು ಯಾವುದೇ ಉಪಶೀರ್ಷಿಕೆಗಳಿಲ್ಲದೇ ಬಿಡುಗಡೆ ಮಾಡುವ ಇಚ್ಛೆಯನ್ನು ಗಿಬ್ಸನ್ ಮೊದಲಿಗೆ ಪ್ರಕಟಿಸಿದ್ದರು. ತೆರೆಯ ಪ್ರದರ್ಶನಕ್ಕಾಗಿ ಈ ಅಂಶಕ್ಕೆ ಅವರು ಪಟ್ಟುಹಿಡಿದರು. ಅತ್ಯಂತ ವಿವಾದಾತ್ಮಕ ಚಿತ್ರವು ಅತ್ಯಂತ ಮೆಚ್ಚುಗೆಯಿಂದ ಹಿಡಿದು ಹಿಂಸೆ ಮತ್ತು ಸೆಮಿಟಿಕ್ ಜನಾಂಗ ವಿರೋಧಿ ಆರೋಪಗಳವರೆಗೆ ವಿವಿಧ ಪರಾಮರ್ಶೆಗಳಿಗೆ ಒಳಪಟ್ಟಿತು. ಚಿತ್ರವು ವಿಶ್ವಾದ್ಯಂತ US$ 611,899,420 ಸಂಗ್ರಹಿಸಿತು ಮತ್ತು ಅಮೆರಿಕ ಒಂದರಲ್ಲೇ $370,782,930 ಗಳಿಕೆ ಮಾಡಿ ಗಿಬ್ಸನ್ ನಟನೆಯ ಯಾವುದೇ ಚಲನಚಿತ್ರವನ್ನು ಮೀರಿಸಿತು. US ಬಾಕ್ಸ್‌ಆಫೀಸ್ ಗಳಿಕೆಯ ಇತಿಹಾಸದಲ್ಲಿ ಅತ್ಯಧಿಕ ಗಳಿಕೆ ಮಾಡಿದ ಎಂಟನೇ ಚಿತ್ರವೆನಿಸಿತು ಮತ್ತು ಸರ್ವಕಾಲೀನ ಅತ್ಯಂತ ಗಳಿಕೆಯಿಂದ R ದರ್ಜೆಯ ಅತ್ಯಂತ ಗಳಿಕೆಯ ಚಿತ್ರವಾಯಿತು. ಮೂರು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನವಾದ ಚಿತ್ರ ಶ್ರೇಷ್ಠ ಕಥೆಗಾಗಿ ಜನರ ಆಯ್ಕೆ ಪ್ರಶಸ್ತಿಯನ್ನು ಗೆದ್ದಿತು.

ಅಪೊಕ್ಯಾಲಿಪ್ಟೊ

ಗಿಬ್ಸನ್ ಅವರು ನಿರ್ದೇಶಕರಾಗಿ ತಮ್ಮ ಖ್ಯಾತಿಯನ್ನು 2006ರ ಆಕ್ಷನ್-ಸಾಹಸ ಚಿತ್ರ ಅಪೋಕ್ಯಾಲಿಪ್ಟೊ ನೊಂದಿಗೆ ಸಾಬೀತು ಮಾಡಿದರು.ಗಿಬ್ಸನ್ ಅವರ ನಾಲ್ಕನೇ ನಿರ್ದೇಶನದ ಪ್ರಯತ್ನವು ಮೆಸೊಅಮೆರಿಕದಲ್ಲಿ ಮಾಯಾ ನಾಗರಿಕತೆಯ ಪ್ರಕ್ಷುಬ್ಧ ಕೊನೆಯ ದಿನಗಳ ವಿರುದ್ಧ 16ನೇ ಶತಮಾನದ ಆರಂಭದಲ್ಲಿ ನಡೆಯಿತು. ಸ್ಥಳೀಯ ಅಮೆರಿಕ ತಲೆಮಾರಿನ ಪಾತ್ರವರ್ಗದಿಂದ ಯುಕಾಟೆಕ್ ಮಾಯಾ ಭಾಷೆಯಲ್ಲಿ ವಿರಳವಾದ ಸಂಭಾಷಣೆಯನ್ನು ಹೇಳಲಾಗಿದೆ.

ಭವಿಷ್ಯದ ಚಿತ್ರಗಳು

ಮಾರ್ಚ್ 2007ರಲ್ಲಿ, ಗಿಬ್ಸನ್ ಚಿತ್ರಪ್ರದರ್ಶನದ ಪ್ರೇಕ್ಷಕರಿಗೆ,ಆಕ್ಸ್‌ಫರ್ಡ್ ಇಂಗ್ಲೀಷ್ ನಿಘಂಟಿನ (OED)ಬರಹದ ಬಗ್ಗೆ ಫರ್‌ಹಾದ್ ಸಫೀನಿಯ ಜತೆ ಇನ್ನೊಂದು ಚಿತ್ರಕಥೆ ಸಿದ್ಧಪಡಿಸುತ್ತಿರುವುದಾಗಿ ತಿಳಿಸಿದರು.[೩೬] OED ಸೃಷ್ಟಿಯನ್ನು ಕುರಿತು ಕಥೆ ಹೇಳುವ ಫ್ರೊಫೆಸರ್ ಅಂಡ್ ದಿ ಮ್ಯಾಡ್‌ಮ್ಯಾನ್ ಹಕ್ಕುಗಳಿಗೆ ಗಿಬ್ಸನ್ ಕಂಪೆನಿ ಬಹುಹಿಂದೆ ಸ್ವಾಮ್ಯತೆ ಪಡೆದಿತ್ತು.[೩೭]

ತಾವು ಸ್ಪಾನಿಷ್ ಪರಿಶೋಧಕ ವಾಸ್ಕೊ ನುನೆಜ್ ಡೆ ಬಾಲ್ಬೋವಾ ಕುರಿತು ಚಿತ್ರವೊಂದರ ನಿರ್ದೇಶನಕ್ಕೆ ಯೋಚಿಸುತ್ತಿದ್ದೇನೆಂಬ ವದಂತಿಗಳನ್ನು ಅವರು ತಳ್ಳಿಹಾಕಿದರು.[೩೮][೩೯][೪೦] ನಟನೆಗೆ ಹಿಂತಿರುಗಿ,ನಿರ್ದಿಷ್ಟವಾಗಿ ಆಕ್ಷನ್ ಪಾತ್ರಗಳಲ್ಲಿ ನಟಿಸುವ ಯೋಜನೆಯಿದೆಯೇ ಎಂದು ಸೆಪ್ಟೆಂಬರ್ 2007ರಲ್ಲಿ ಕೇಳಿದಾಗ ಗಿಬ್ಸನ್ ಉತ್ತರಿಸಿದರು:

"ಚಿತ್ರನಟನೆಗೆ ತೀರಾ ವಯಸ್ಸಾಗಿದೆಯೆಂದು ನಾನು ಭಾವಿಸುತ್ತೇನೆ,ಆದರೆ ನಿಮಗೆ ಅದು ಗೊತ್ತಿಲ್ಲ. ಕಥೆಗಳನ್ನು ಹೇಳುವುದನ್ನು ನಾನು ಇಷ್ಟಪಡುತ್ತೇವೆ. ಮನರಂಜನೆ ನ್ಯಾಯಸಮ್ಮತವಾಗಿದ್ದು,ಅದು ಮುಗಿಯುವ ಮುಂಚೆ ನಾನು ಬಹುಶಃ ಪುನಃ ಅದನ್ನು ಮಾಡುವುದಾಗಿ ಭಾವಿಸುತ್ತೇನೆ. ನಿಮಗೆ ಗೊತ್ತಿರಬಹುದು,ಜನರ ಕೋಪಕ್ಕೆ ಗುರಿಯಾಗದ ಏನನ್ನಾದರೂ ಮಾಡಬೇಕು [೪೧]

2005ರಲ್ಲಿ “ಸ್ಯಾಮ್ ಅಂಡ್ ಜಾರ್ಜ್“ ಚಿತ್ರವನ್ನು ನಿರ್ದೇಶಕ ರಿಚರ್ಡ್ ಡಾನರ್ ಮತ್ತು ಗಿಬ್ಸನ್ ನಡುವೆ ಏಳನೆಯ ಸಹಯೋಗವಾಗಿ ಪ್ರಕಟಿಸಲಾಯಿತು. ಡಾನರ್ ಫೆಬ್ರವರಿ 2009ರಲ್ಲಿ ಈ ಪರಮ ಯೋಜನೆ “ಮೃತ“ವಾಗಿದೆಯೆಂದು ಪ್ರಕಟಿಸಿದರು. ಆದರೆ ಗಿಬ್ಸನ್ ಮತ್ತು ತಾವು ಬ್ರಿಯಾನ್ ಹೆಲ್ಗಿಲ್ಯಾಂಡ್ ಮೂಲಚಿತ್ರ ಕಥೆ ಆಧಾರದ ಮೇಲೆ 2009ರಲ್ಲಿ ನಿರ್ಮಾಣದ ಇನ್ನೊಂದು ಚಿತ್ರವನ್ನು ಯೋಜಿಸಿರುವುದಾಗಿ ಹೇಳಿದರು.[೪೨][೪೩]

ಮುಂಚಿನ ಮೆವರಿಕ್ ಸಹ-ನಟ ಜೂಡಿ ಫಾಸ್ಟರ್ ನಿರ್ದೇಶನದ ದಿ ಬೇವೆರ್ ಚಿತ್ರದಲ್ಲಿ ಗಿಬ್ಸನ್ ಪಾತ್ರವಹಿಸುತ್ತಾರೆಂದು 2009ರಲ್ಲಿ ವರದಿಯಾಗಿತ್ತು.[೪೪] ಲಿಯೋನಾರ್ಡೊ ಡಿಕ್ಯಾಪ್ರಿಯೊ ಪಾತ್ರದ ಸಾಹಸಯಾತ್ರೆಗಳ ಕುರಿತ ಚಿತ್ರವೊಂದನ್ನು ನಿರ್ದೇಶಿಸುವ ಇಚ್ಛೆಯನ್ನು ಕೂಡ ಅವರು ವ್ಯಕ್ತಪಡಿಸಿದ್ದರು.ಇನ್ನೂ ಹೆಸರಿಡದ ಚಿತ್ರವಾಗಿದ್ದ ಪ್ಯಾಶನ್ ಆಫ್ ದಿ ಕ್ರೈಸ್ಟ್ ಮತ್ತು ಅಪೊಕ್ಯಾಲಿಪ್ಟೊ ಮೂಲ ಭಾಷೆಯ ಲಕ್ಷಣ ಹೊಂದಿದ್ದವು.[೪೫]

ವೈಯಕ್ತಿಕ ಜೀವನ

ಕುಟುಂಬ

ಮ್ಯಾಡ್‌ಮ್ಯಾಕ್ಸ್ ಚಿತ್ರೀಕರಣವಾದ ನಂತರ ಶೀಘ್ರದಲ್ಲೇ ಗಿಬ್ಸನ್ 1970ರ ದಶಕದ ಅಂತ್ಯದಲ್ಲಿ ರಾಬಿನ್ ಡೆನಿಸ್ ಮೂರ್ ಅವರನ್ನು ಭೇಟಿ ಮಾಡಿದರು. ಅಡೆಲೈಡ್‌ನ ಮನೆಯೊಂದರಲ್ಲಿ ಇಬ್ಬರೂ ಬಾಡಿಗೆದಾರರಾಗಿದ್ದಾಗ ಈ ಭೇಟಿ ನಡೆಯಿತು. ಆ ಸಂದರ್ಭದಲ್ಲಿ ರಾಬಿನ್ ದಂತವೈದ್ಯಕೀಯ ದಾದಿಯಾಗಿದ್ದು, ಮೆಲ್ ದಕ್ಷಿಣ ಆಸ್ಟ್ರೇಲಿಯ ನಾಟಕ ಕಂಪೆನಿಗೆ ಕೆಲಸ ಮಾಡುವ ಅಜ್ಞಾತ ನಟನಾಗಿದ್ದ.[೪೬] ನ್ಯೂ ಸೌತ್ ವೇಲ್ಸ್‌ನ ಫಾರೆಸ್ಟ್‌ವಿಲ್ಲೆಯ ಕ್ಯಾಥೋಲಿಕ್ ಚರ್ಚ್‌ನಲ್ಲಿ 1980ರ ಜೂನ್ 7ರಂದು ಅವರಿಬ್ಬರು ವಿವಾಹವಾದರು.[೪೭] ದಂಪತಿಗೆ ಒಬ್ಬಳು ಪುತ್ರಿ,6 ಮಂದಿ ಪುತ್ರರು ಮತ್ತು ಇಬ್ಬರು ಮೊಮ್ಮಕ್ಕಳಿದ್ದರು[೪೮] ಅವರ ಏಳು ಮಕ್ಕಳು ಹನ್ನಾ(1980ರಲ್ಲಿ ಜನನ),ಅವಳಿಗಳಾದ ಎಡ್ವರ್ಡ್ ಮತ್ತು ಕ್ರಿಶ್ಚಿಯನ್(1982ರಲ್ಲಿ ಜನನ), ವಿಲಿಯಂ(1985ರಲ್ಲಿ ಜನನ), ಲೂವಿಸ್(1988ರಲ್ಲಿ ಜನನ),ಮೈಲೊ(1990ರಲ್ಲಿ ಜನನ) ಮತ್ತು ಥಾಮಸ್(1999ರಲ್ಲಿ ಜನನ).

ಪುತ್ರಿ ಹನ್ನಾ ಗಿಬ್ಸನ್ ಬ್ಲೂಸ್ ಸಂಗೀತಗಾರ ಕೆನ್ನಿ ವೇನ್ ಶೆಪರ್ಡ್ ಅವರನ್ನು 2006 ಸೆಪ್ಟೆಂಬರ್ 16ರಂದು ವಿವಾಹವಾದರು.[೪೯][೪೯] ಹನ್ನಾ ಕ್ರೈಸ್ತಸನ್ಯಾಸಿನಿಯಾಗಲು ಯೋಜಿಸಿದ್ದಾಳೆಂಬ ವದಂತಿಯನ್ನು ಗಿಬ್ಸನ್ ವಕ್ತಾರ ಮುಂಚೆ ನಿರಾಕರಿಸಿದ್ದರು.[೫೦]

ಸುಮಾರು ಮೂರು ವರ್ಷಗಳ ಅಗಲಿಕೆ ಬಳಿಕ, ರಾಜಿಮಾಡಲಾಗದ ಭಿನ್ನಾಭಿಪ್ರಾಯಗಳನ್ನು ಉದಾಹರಿಸಿ ಏಪ್ರಿಲ್ 13,2009ರಂದು ರಾಬಿನ್ ಗಿಬ್ಸನ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಜಂಟಿ ಹೇಳಿಕೆಯಲ್ಲಿ ಗಿಬ್ಸನ್ ದಂಪತಿ ಘೋಷಿಸಿದರು "ನಮ್ಮ ವೈವಾಹಿಕ ಜೀವನ ಮತ್ತು ಅಗಲಿಕೆಯುದ್ಧಕ್ಕೂ ನಾವು ನಮ್ಮ ಕುಟುಂಬದ ಖಾಸಗಿತನ ಮತ್ತು ಸಮಗ್ರತೆ ಕಾಯ್ದುಕೊಳ್ಳಲು ನಾವು ಸದಾ ಶ್ರಮಿಸಿದ್ದು, ಮುಂದೆಯೂ ಹಾಗೆ ಮಾಡುತ್ತೇವೆ"[೭]

ಗಿಬ್ಸನ್ ಗೆಳತಿ ರಷ್ಯನ್ ಸಂಗೀತಗಾರ್ತಿ ಒಕ್ಸಾನಾ ಗ್ರಿಗೋರಿವಾ ಮಾಜಿ ಗೆಳೆಯ, ನಟ ತಿಮೋತಿ ಡಾಲ್ಟನ್‌ನಿಂದ ಪುತ್ರನೊಬ್ಬನನ್ನು ಪಡೆದಿದ್ದಳು.[೫೧] ಗ್ರಿಗೋರಿವಾ ಅಕ್ಬೋಬರ್ 30,2009ರಂದು ಗಿಬ್ಸನ್ ಪುತ್ರಿ ಲೂಸಿಯಗೆ ಜನ್ಮ ನೀಡಿದಳು.

ಹೂಡಿಕೆಗಳು

ಆಸ್ತಿಗಳ ಹೂಡಿಕೆಗಳಲ್ಲಿ ಗಿಬ್ಸನ್ ತೀವ್ರಾಸಕ್ತಿಯನ್ನು ಹೊಂದಿದ್ದು,ಮಾಲಿಬು,ಕ್ಯಾಲಿಫೋರ್ನಿಯ,ಕೋಸ್ಟಾರಿಕಾದ ವಿವಿಧ ಸ್ಥಳಗಳಲ್ಲಿ ಬಹು ಆಸ್ತಿಗಳಿದ್ದವು.ಫಿಜಿಯಲ್ಲಿ ಖಾಸಗಿ ದ್ವೀಪ ಮತ್ತು ಆಸ್ಟ್ರೇಲಿಯದಲ್ಲಿ ಆಸ್ತಿಗಳು ಕೂಡ ಇದ್ದವು.[೫೨][೫೩] ಡಿಸೆಂಬರ್ 2004ರಲ್ಲಿ ಗಿಬ್ಸನ್ ತಮ್ಮ ಕಿವಾ ಕಣಿವೆಯ300-acre (1.2 km2) ಆಸ್ಟ್ರೇಲಿಯದ ಜಮೀನನ್ನು $6 ದಶಲಕ್ಷಕ್ಕೆ ಮಾರಾಟ ಮಾಡಿದರು.[೫೪] ಡಿಸೆಂಬರ್ 2004ರಂದು ಗಿಬ್ಸನ್ ಫಿಜಿಯಲ್ಲಿ ಜಪಾನ್ ಟೋಕಿಯು ಕಾರ್ಪೊರೇಷನ್‌ನಿಂದ $15 ದಶಲಕ್ಷಕ್ಕೆ ಮಾಗೊ ದ್ವೀಪವನ್ನು ಖರೀದಿಸಿದರು. ಮ್ಯಾಗೊದ ಮೂಲ ಸ್ಥಳೀಯ ನಿವಾಸಿಗಳ ವಂಶಸ್ಥರು(1860ರಲ್ಲಿ ಸ್ಥಳಾಂತರಗೊಂಡವರು)ಖರೀದಿ ವಿರುದ್ಧ ಪ್ರತಿಭಟಿಸಿದರು. ಅಭಿವೃದ್ಧಿಯಾಗದ ದ್ವೀಪದ ಪರಿಸರದ ಮೂಲರೂಪ ಉಳಿಸಿಕೊಳ್ಳುವುದು ತಮ್ಮ ಇಚ್ಛೆಯೆಂದು ಗಿಬ್ಸನ್ ಹೇಳಿಕೆ ನೀಡಿದರು.[೫೫] 2005ರ ಆರಂಭದಲ್ಲಿ ಅವರು ಮಾಂಟಾನಾ45,000-acre (180 km2) ಜಾನುವಾರು ಕ್ಷೇತ್ರವನ್ನು ನೆರೆಮನೆಯೊಬ್ಬರಿಗೆ ಬಹಿರಂಗಪಡಿಸದ ಬಹುದಶಲಕ್ಷ ಡಾಲರ್ ಮೊತ್ತಕ್ಕೆ ಮಾರಾಟ ಮಾಡಿದರು.[೫೬] 2007 ಏಪ್ರಿಲ್‌ನಲ್ಲಿ ಅವರು ಕೋಸ್ಟಾರಿಕಾದಲ್ಲಿ ಜಾನುವಾರು ಕ್ಷೇತ್ರವನ್ನು 26 ದಶಲಕ್ಷ ಡಾಲರ್‌ಗೆ ಖರೀದಿಸಿದರು.400-acre (1.6 km2) ಜುಲೈ 2007ರಲ್ಲಿ 76-acre (310,000 m2)ಅವರು ಕನೆಕ್ಟಿಕಟ್‌ನ ಟ್ಯೂಡರ್ ಎಸ್ಟೇಟ್($9 ದಶಲಕ್ಷಕ್ಕೆ 1994ರಲ್ಲಿ ಖರೀದಿ) ಅಜ್ಞಾತ ಖರೀದಿದಾರನಿಗೆ $40 ದಶಲಕ್ಷಕ್ಕೆ ಮಾರಾಟ ಮಾಡಿದರು.[೫೭]ಎರಡು ವರ್ಷಗಳ ಹಿಂದೆ $24 ದಶಲಕ್ಷಕ್ಕೆ ಖರೀದಿ ಮಾಡಿದ ಮಾಲಿಬು ಆಸ್ತಿಯನ್ನು ಅದೇ ತಿಂಗಳಲ್ಲಿ $30 ದಶಲಕ್ಷಕ್ಕೆ ಮಾರಾಟ ಮಾಡಿದರು.[೫೮] 2008ರಲ್ಲಿ ಅವರು ಡೇವಿಡ್ ಡುಕೋವ್ನಿ ಮತ್ತು ಟೀ ಲಿಯೋನಿ ಅವರ ಮಾಲಿಬು ಮನೆಯನ್ನು ಖರೀದಿಸಿದರು.[೫೯]

ಧಾರ್ಮಿಕ ಮತ್ತು ರಾಜಕೀಯ ದೃಷ್ಟಿಕೋನಗಳು

ಧರ್ಮಶ್ರದ್ಧೆ

ಗಿಬ್ಸನ್ ಸಾಂಪ್ರದಾಯಿಕ ಕ್ಯಾಥೋಲಿಕ್‌ರಾಗಿ ಬೆಳೆದುಬಂದರು. ಪೋಪ್ ಜಾನ್ ಪಾಲ್ II ಪ್ಯಾಶನ್ ಆಫ್ ದಿ ಕ್ರೈಸ್ಟ್ ಚಿತ್ರವನ್ನು ನೋಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಗಿಬ್ಸನ್ ಹೇಳಿದರು, "ಅವರು ಏನು ಹೇಳುತ್ತಾರೆಂದು ಕೇಳಲು ತಾವು ಇಚ್ಛಿಸಿರುವೆ" ಯಾರೊಬ್ಬರು ಈ ಬಗ್ಗೆ ಏನು ಹೇಳುತ್ತಾರೆಂದು ಕೇಳಲು ನಾನು ಇಷ್ಟಪಡುವೆ. ಈ ಚಿತ್ರವನ್ನು ಗಣ್ಯವರ್ಗದವರಿಗೆ ನಿರ್ಮಾಣ ಮಾಡಿದ್ದಲ್ಲ. ಯಾರು ಬೇಕಾದರೂ ಈ ಚಿತ್ರವನ್ನು ನೋಡಬಹುದು. ಪೀಟರ್ ಪೀಠದ ಅಧಿಪತಿಗಳು ಕೂಡ ಈ ಚಿತ್ರವನ್ನು ವೀಕ್ಷಿಸಬಹುದು.[೬೦][೬೦] 2004ರ ರೀಡರ್ಸ್ ಡೈಜೆಸ್ಟ್ ಸಂದರ್ಶನದಲ್ಲಿ ಅವರನ್ನು ಪೋಪ್ ಜಾನ್ ಪಾಲ್ II ಎಂದು ಕೂಡ ಗಿಬ್ಸನ್ ಉಲ್ಲೇಖಿಸಿದ್ದಾರೆ.[೬೧] ಗಿಬ್ಸನ್ ಪೋಪ್ ಅಥವಾ ವ್ಯಾಟಿಕನ್ II ಇಬ್ಬರನ್ನೂ ನಿರಾಕರಿಸುವುದಿಲ್ಲವೆಂದು ಪರಿಚಯಸ್ಥ ಫಾದರ್ ವಿಲಿಯಂ ಫಲ್ಕೊ ತಿಳಿಸಿದರು.[೬೨]]]

ಕ್ಯಾಥೋಲಿಕ್ ಸಿದ್ಧಾಂತ ಎಕ್ಸ್‌ಟ್ರಾ ಎಕ್ಲೇಸಿಯಂ ನಲ್ಲಾ ಸ್ಯಾಲಸ್(ಚರ್ಚ್ ಹೊರಗೆ ಮುಕ್ತಿಯಿಲ್ಲ)ಕುರಿತು ಪ್ರಶ್ನಿಸಿದಾಗ,"ಗಿಬ್ಸನ್ ಚರ್ಚ್‌ ಹೊರಗಿನವರಿಗೆ ಮುಕ್ತಿಯಿಲ್ಲ... ಅದನ್ನು ತಾವು ನಂಬುವುದಾಗಿ ಗಿಬ್ಸನ್ ಉತ್ತರಿಸಿದರು. ಈ ರೀತಿ ತೆಗೆದುಕೊಳ್ಳಿ. ನನ್ನ ಪತ್ನಿ ಒಬ್ಬಳು ಸಂತೆ. ತಮಗಿಂತ ಅವಳು ಉತ್ತಮ ವ್ಯಕ್ತಿ. ಪ್ರಾಮಾಣಿಕವಾಗಿ. ಅವಳು ಚರ್ಚ್ ಆಫ್ ಇಂಗ್ಲೆಂಡ್‌ನ ಎಪಿಸ್ಕಾಪಾಲಿಯನ್ ರೀತಿ. ಅವಳು ಪ್ರಾರ್ಥಿಸುತ್ತಾಳೆ,ದೇವರಲ್ಲಿ ನಂಬಿಕೆ ಹೊಂದಿದ್ದಾಳೆ,ಕ್ರೈಸ್ತನ ಬಗ್ಗೆ ತಿಳಿವಳಿಕೆಯಿದೆ,ಆ ಸತ್ವದಲ್ಲಿ ಅವಳು ನಂಬಿಕೆ ಇರಿಸಿದ್ದಾಳೆ. ಅವಳು ಮುಕ್ತಿ ಹೊಂದದಿದ್ದರೆ ಅದು ನ್ಯಾಯಯುತವಲ್ಲ, ನನಗಿಂತ ಆಕೆ ಉತ್ತಮ. ಆದರೆ ಅದು ಪೀಠದ ಘೋಷಣೆ. ಅದನ್ನು ನಾನು ಪಾಲಿಸುತ್ತೇನೆ."[೬೩] ವಿಲ್ಲೊ ಕ್ರೀಕ್ ಚರ್ಚ್‌ನಲ್ಲಿ ಜಾನ್ 14:6 ಅಸಹಿಷ್ಣು ಸ್ಥಾನದಲ್ಲಿದೆಯೇ ಎಂದು ಅವರನ್ನು ಪ್ರಶ್ನಿಸಿದಾಗ,[೬೪] ಏಸು ಕ್ರಿಸ್ತನ ತ್ಯಾಗದ ಅರ್ಹತೆಗಳ ಮೂಲಕ ...ಏಸುಕ್ರಿಸ್ತನ ಬಗ್ಗೆ ತಿಳಿದಿರದ ಜನರು ಕೂಡ ಏಸುಕ್ರಿಸ್ತನ ಮೂಲಕ ರಕ್ಷಿಸಲ್ಪಡಲು ಸಾಧ್ಯವಾಗಿದೆ.[೬೫] ಕ್ಯಾಥೋಲಿಕೇತರರು ಮತ್ತು ಕ್ರೈಸ್ತೇತರರು ಸ್ವರ್ಗಕ್ಕೆ ಹೋಗಬಹುದೆಂದು ತಾವು ನಂಬಿರುವುದಾಗಿ ಗಿಬ್ಸನ್ ಡಯೇನೆ ಸಾಯೆರ್‌ಗೆ ತಿಳಿಸಿದ್ದಾರೆ.[೬೬][೬೭]

ಮೆಲ್ ಗಿಬ್ಸನ್ ಮೇ 2007ರಲ್ಲಿ ಮೆಕ್ಸಿಕೊದ ಹರ್ಮಸಿಲ್ಲೊಗೆ ಪ್ರಯಾಣಿಸಿದರು. ಅಲ್ಲಿ ಟ್ರೈಡೆಂಟೈನ್ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರ ಸ್ನೇಹಿತರ ಮೊಮ್ಮಕ್ಕಳು ಮತ್ತು ಅವರ ಇಬ್ಬರು ಮಕ್ಕಳು ಧಾರ್ಮಿಕ ಕ್ರಿಯೆ ಸ್ಥಿರೀಕರಣವನ್ನು ಸ್ವೀಕರಿಸಿದರು. ಆರ್ಕ್‌ಬಿಷಪ್ ಎಮಿರೈಟಸ್ ಕಾರ್ಲೋಸ್ ಕ್ವಿಂಟೆರೊ ಆರ್ಸ್ ಇದನ್ನು ವಿಧಿವತ್ತಾಗಿ ಬೋಧಿಸಿದರು.[೬೮][೬೯] ಇದೇ ಆರ್ಕ್‌ಬಿಷಪ್ ಆರ್ಸ್ ಗಿಬ್ಸನ್ ಅವರ ಖಾಸಗಿ, ಸಾಂಪ್ರದಾಯಿಕ ಕ್ಯಾಥೋಲಿಕ್ ಚರ್ಚ್‌ನ್ನು ಫೆಬ್ರವರಿ 2007ರಂದು ಧಾರ್ಮಿಕವಿಧಿಗಳಿಂದ ಪವಿತ್ರಗೊಳಿಸಿದರು.[೭೦]

ಅವರ ಸಾಂಪ್ರದಾಯಿಕ ಕ್ಯಾಥೋಲಿಕ್ ನಂಬಿಕೆಗಳು, ವಿಶೇಷವಾಗಿ ಅವರ ಚಿತ್ರ ದಿ ಪ್ಯಾಶನ್ ಆಫ್ ಕ್ರೈಸ್ಟ್ ಕುರಿತು ಉದ್ಭವಿಸಿದ ವಿವಾದದ ಸಂದರ್ಭದಲ್ಲಿ ದಾಳಿಗಳಿಗೆ ಗುರಿಯಾಗಿತ್ತು. ದಿ ಪ್ಯಾಶನ್‌ ನಿಂದ ಹೊತ್ತಿದ ಕಿಡಿಯಿಂದ ವೈಯಕ್ತಿಕವಾಗಿ,ತಮ್ಮ ಕುಟುಂಬದ ಮೇಲೆ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಕಟುವಾದ ದಾಳಿಗಳನ್ನು ನಡೆಸುವ ಮೂಲಕ ತಮ್ಮ ಮಾನವ ಹಕ್ಕುಗಳನ್ನು ಉಲ್ಲಂಘಿಸಲಾಗಿದೆಯೆಂದು ಭಾವಿಸುವುದಾಗಿ ಡಯೇನ್ ಸಾಯರ್ ಸಂದರ್ಶನದಲ್ಲಿ ಗಿಬ್ಸನ್ ಹೇಳಿದ್ದಾರೆ.[೬೬]

ರಾಜಕೀಯ

“ಉಗ್ರಸಂಪ್ರದಾಯವಾದಿ“[೭೧] ಯಿಂದ ಹಿಡಿದು “ರಾಜಕೀಯವಾಗಿ ಅತಿ ಉದಾರವಾದಿ“ ಎಂದು ಗಿಬ್ಸನ್ ಅವರನ್ನು ಅವರ ಪರಿಚಯಸ್ಥ ವಿಲಿಯಂ ಫಲ್ಕೊ ಎಲ್ಲಾ ರೀತಿಯಲ್ಲಿ ಕರೆದಿದ್ದಾರೆ.[೬೨] ತಾವು ರಿಪಬ್ಲಿಕನ್ ಎನ್ನುವುದನ್ನು ಅವರು ಅಲ್ಲಗಳೆದಿದ್ದರೂ,[೭೨] ಗಿಬ್ಸನ್ ಅವರನ್ನು ಮಾಧ್ಯಮ ಹಾಗೆಂದು ಆಗಾಗ್ಗೆ ಉಲ್ಲೇಖಿಸಿತು ಮತ್ತು ವರ್ಲ್ಡ್‌ನೆಟ್ ಡೇಲಿ 2008ರಲ್ಲಿ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಗಿಬ್ಸನ್ ಅವರಿಗೆ ರಿಪಬ್ಲಿಕನ್ನರಲ್ಲಿ ಮೂಲಭೂತ ಬೆಂಬಲವಿದೆಯೆಂದು ಒಮ್ಮೆ ವರದಿ ಮಾಡಿತ್ತು.[೭೩]

ತಾವು ಮತ್ತು ಮೂರ್ ಅವರು 2005ರ ಜನರ ಆಯ್ಕೆ ಪ್ರಶಸ್ತಿಗಳಿಗೆ ಗುರುತಿಸಲ್ಪಟ್ಟಾಗ ಚಿತ್ರನಿರ್ಮಾಪಕ ಮೈಕೇಲ್ ಮೂರ್ ಮತ್ತು ಅವರ ಸಾಕ್ಷ್ಯಚಿತ್ರ ಫ್ಯಾರನ್‌ಹೀಟ್ 9/11 ಗೆ ಗಿಬ್ಸನ್ ಅಭಿನಂದನೆ ಸಲ್ಲಿಸಿದರು.[೭೪] ಗಿಬ್ಸನ್ ಅವರ ಐಕಾನ್ ಪ್ರೊಡಕ್ಷನ್ಸ್ ಮೂರ್ ಚಿತ್ರಕ್ಕೆ ಆರ್ಥಿಕ ನೆರವು ನೀಡಲು ಮುಂಚೆ ಒಪ್ಪಿಕೊಂಡಿತ್ತು. ಆದರೆ ನಂತರ ಹಕ್ಕುಗಳನ್ನು ಮಿರಮ್ಯಾಕ್ಸ್ ಫಿಲ್ಮ್ಸ್‌ಗೆ ಮಾರಾಟ ಮಾಡಿದರು. ನಂತರ,ಶ್ವೇತಭವನಕ್ಕೆ ಹೆಚ್ಚು ಆಮಂತ್ರಣಗಳನ್ನು ಸ್ವೀಕರಿಸುವ ನಿರೀಕ್ಷೆ ಇಟ್ಟುಕೊಳ್ಳಬೇಡಿರೆಂದು ಉನ್ನತ ರಿಪಬ್ಲಿಕನ್ನರು ಮೆಲ್ ಗಿಬ್ಸನ್ ಅವರಿಗೆ ಕರೆಮಾಡಿದ್ದಾರೆಂದು ತಮ್ಮ ಏಜೆಂಟ್ ಆರಿ ಎಮ್ಯಾನುಯಲ್ ಹೇಳಿದ್ದಾಗಿ ಮೂರ್ ತಿಳಿಸಿದರು.[೭೫] ಐಕಾನ್ ವಕ್ತಾರ ಈ ಕಥೆಯನ್ನು ತಳ್ಳಿಹಾಕಿ ನಾವು ವಿವಾದಕ್ಕೆ ಗುರಿಯಾಗಿಲ್ಲವೆಂದು ತಿಳಿಸಿದರು. ನೀವು ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದರೆ ಪ್ಯಾಶನ್ ಆಫ್ ದಿ ಕ್ರೈಸ್ಟ್ ನ್ನು ಈಗ ತಾನೆ ನಿರ್ಮಿಸಿದ ಕಂಪೆನಿ ಬಗ್ಗೆ ಹಾಗೆ ಭಾವಿಸುತ್ತೀರಿ"[೭೬]

ಪ್ಲೇಬಾಯ್ ನಿಯತಕಾಲಿಕೆಗೆ ಜುಲೈ 1995ರಲ್ಲಿ ನೀಡಿದ ಸಂದರ್ಶನದಲ್ಲಿ,ಅಧ್ಯಕ್ಷ ಬಿಲ್ ಕ್ಲಿಂಟನ್ "ಕೆಳಮಟ್ಟದ ಅವಕಾಶವಾದಿ" ಮತ್ತು "ಏನುಮಾಡಬೇಕೆಂದು ಯಾರೊ ಅವರಿಗೆ ನಿರ್ದೇಶನ ನೀಡುತ್ತಿದ್ದಾರೆ"ಎಂದು ಗಿಬ್ಸನ್ ಆರೋಪಿಸಿದ್ದರು. ರೋಡ್ಸ್ ವಿದ್ಯಾರ್ಥಿವೇತನವನ್ನು ಹೊಸ ವಿಶ್ವವ್ಯವಸ್ಥೆಗೆ ಶ್ರಮಿಸುವ ಯುವಕ ಮತ್ತು ಯುವತಿಯರಿಗೆ ಸ್ಥಾಪಿಸಲಾಗಿದೆ ಮತ್ತು ಇದು ಮಾರ್ಕ್ಸ್‌ವಾದದ ಪರ ಆಂದೋಳನವೆಂದು ಹೇಳಿದರು.[೭೭] ಇಂತಹ ಒಳಸಂಚಿನ ಸಿದ್ಧಾಂತಗಳಿಂದ ನಂತರ ಹಿಂದೆ ಸರಿದ ಗಿಬ್ಸನ್,ಇದು: ಹೇ, ನಮಗೊಂದು ಪಿತೂರಿ ಹೇಳು...ಎಂಬ ರೀತಿಯಲ್ಲಿತ್ತು.ಆಗ ನಾನು ಈ ವಿಷಯ ಹೇಳಿದೆ, ಇದ್ದಕ್ಕಿದ್ದಂತೆ,ನಾನು ಸುವಾರ್ತೆಯ ಸತ್ಯವನ್ನು ಹೇಳುವ ರೀತಿಯಲ್ಲಿತ್ತು,ಅದರಲ್ಲಿ ನಂಬಿಕೆ ಇರಿಸಿದಂತೆ ಎಲ್ಲ ರಾಜಕೀಯ ಅಸಹ್ಯಗಳನ್ನು ಎತ್ತಿಹಿಡಿದಂತಿತ್ತು"[೭೮]

ಅದೇ 1995ರ ಪ್ಲೇಬಾಯ್ ಸಂದರ್ಶನದಲ್ಲಿ,ಮಹಿಳೆಯರು ಪಾದ್ರಿಗಳಾಗುವುದಕ್ಕೆ ನಿಮ್ಮ ವಿರೋಧವೇಕೆ ಎಂದು ಕೇಳಿದಾಗ ಅವರು ಉತ್ತರಿಸಿದರು "ಪುರುಷ ಮತ್ತು ಮಹಿಳೆ ಭಿನ್ನವಾಗಿದ್ದಾರೆ". ಅವರಿಬ್ಬರು ಸಮಾನರಲ್ಲ. ಅದೇ ರೀತಿ ನೀವು ಮತ್ತು ನಾವು ಸಮಾನರಲ್ಲ.... ನೀವು ಇನ್ನೂ ಬುದ್ಧಿವಂತರಾಗಿರಬಹುದು,ಅಥವಾ ದೊಡ್ಡ ಜಾಣನಾಗಿರಬಹುದು. ಅದು ಏನೇಇರಲಿ ಯಾರೊಬ್ಬರೂ ಸಮಾನರಲ್ಲ. ಪುರುಷ ಮತ್ತು ಮಹಿಳೆಯರು ಕೂಡ ಸಮಾನರಲ್ಲ. ನನಗೆ ಮಹಿಳೆಯರ ಬಗ್ಗೆ ಅಪಾರ ಗೌರವವಿದೆ. ಅವರನ್ನು ನಾನು ಪ್ರೀತಿಸುತ್ತೇನೆ. ಆದರೆ ಅವರು ಕೆಳಕ್ಕಿಳಿಯಲು ಯಾಕೆ ಬಯಸುತ್ತಾರೆಂದು ತಮಗೆ ತಿಳಿದಿಲ್ಲ. ನಮ್ಮ ಕುಟುಂಬದಲ್ಲಿ ಮಹಿಳೆಯರು ಕೇಂದ್ರವಸ್ತುಗಳಾಗಿದ್ದಾರೆ. ಅವರಿಂದ ಒಳ್ಳೆಯ ಕೆಲಸಗಳು ಹೊಮ್ಮುತ್ತವೆ. ಪುರುಷರು ಸಾಮಾನ್ಯವಾಗಿ ಅಸ್ತವ್ಯಸ್ತಗೊಳಿಸುತ್ತಾರೆ. ಮಹಿಳೆಯರು ಭಿನ್ನವಾಗಿದ್ದಾರೆ. ಅವರ ಸಂವೇದನೆಗಳು ಭಿನ್ನವಾಗಿದೆ." ಉದಾಹರಣೆಗೆ ಕೇಳಿದಾಗ,"ತಮ್ಮ ಜತೆ ಮಹಿಳಾ ವ್ಯವಹಾರ ಪಾಲುದಾರರೊಬ್ಬಳು ಒಮ್ಮೆ ಇದ್ದರೆಂದು ತಿಳಿಸಿದರು. ಆದರೆ ಅದು ಕಾರ್ಯಗತವಾಗಲಿಲ್ಲ." ಏಕೆಂದು ಕೇಳಿದಾಗ "ಅವಳು ಇಷ್ಟವಾಗಲಿಲ್ಲ" ಎಂದು ಉತ್ತರಿಸಿದರು. "ಮಹಿಳೆಯರು ನನ್ನನ್ನು ಇಷ್ಟಪಡುವುದಿಲ್ಲ, ನಾನೂ ಕೂಡ ಅವರನ್ನು ಇಷ್ಟಪಡುವುದಿಲ್ಲ" ಎಂದು ಕೂಡ ಗಿಬ್ಸನ್ ಹೇಳಿದರು. ಅವರ ವಾದವನ್ನು ಅರ್ಥಮಾಡಿಕೊಳ್ಳಲು ತಮಗೆ ಆಗುವುದಿಲ್ಲ. ಮಹಿಳೆಯರು ತಮ್ಮ ಬಗ್ಗೆ ಹೀಗೇಕೆ ಎಂದು ತಮಗೆ ಅರ್ಥವಾಗುವುದಿಲ್ಲ. ಆದರೆ ಅದು ಅವರ ಸಮಸ್ಯೆ,ನನ್ನ ಸಮಸ್ಯೆಯಲ್ಲ."[೭೭][೭೯][೮೦]

2004ರಲ್ಲಿ ಅವರು ತದ್ರೂಪ ಮತ್ತು ಮಾನವ ಭ್ರೂಣಗಳ ನಾಶವನ್ನು ಒಳಗೊಂಡ ಭ್ರೂಣ ಆಕರಕೋಶ ಸಂಶೋಧನೆಗೆ ತೆರಿಗೆದಾರನ ಆರ್ಥಿಕನೆರವಿನ ವಿರುದ್ಧ ಸಾರ್ವಜನಿಕವಾಗಿ ಧ್ವನಿ ಎತ್ತಿದ್ದರು.[೮೧]

ಸೀನ್ ಹ್ಯಾನಿಟಿ ರೇಡಿಯ ಶೋನಲ್ಲಿ ಟೆರಿ ಸ್ಕಿಯಾವೊ ಪ್ರಕರಣದ ಫಲಶ್ರುತಿಯನ್ನು ಖಂಡಿಸಿ ಮಾರ್ಚ್ 2005ರಲ್ಲಿ ಹೇಳಿಕೆ ನೀಡಿದ ಅವರು, ಸ್ಕಿಯಾವಲೊ ಸಾವನ್ನು ರಾಜ್ಯ ಅನುಮೋದನೆಯ ಹತ್ಯೆಯೆಂದು ಉಲ್ಲೇಖಿಸಿದ್ದರು.[೮೨]

ಡಯೇನ್ ಸಾಯರ್ ಜತೆ ಫೆಬ್ರವರಿ 2004ರ ಸಂದರ್ಶನದಲ್ಲಿ ಗಿಬ್ಸನ್WMDಗಳನ್ನು ಕುರಿತು ಹಾಸ್ಯ ಮಾಡಿದರು ಮತ್ತು ಮಾರ್ಚ್ 2004ರಲ್ಲಿ ಸೀನ್ ಹ್ಯಾನಿಟಿ ರೇಡಿಯೊ ಪ್ರದರ್ಶನದಲ್ಲಿ ಇರಾಕ್ ಯುದ್ಧವನ್ನು ಕುರಿತು ಪ್ರಶ್ನೆ ಮಾಡಿದರು.[೮೩] 2006ರಲ್ಲಿ ಗಿಬ್ಸನ್ ಟೈಮ್ ನಿಯತಕಾಲಿಕೆಯ ಜತೆ ಮಾತನಾಡುತ್ತಾ, ಅವರ ಚಿತ್ರ ಅಪೊಕ್ಯಾಲಿಪ್ಟೊ ನಲ್ಲಿ ಬಿಂಬಿಸಿರುವ "ಭಯಹುಟ್ಟಿಸುವವರು", ಅಧ್ಯಕ್ಷ ಬುಷ್ ಮತ್ತು ಅವರ ಅನುಯಾಯಿಗಳನ್ನು ಸ್ವಲ್ಪಮಟ್ಟಿಗೆ ನೆನಪಿಗೆ ತರುತ್ತದೆಂದು ಹೇಳಿದ್ದರು.[೭೧]

ಸಲಿಂಗಿಗಳ ಬಗ್ಗೆ ಭಯ ಆರೋಪಗಳು

ಮಾನಹಾನಿ ವಿರುದ್ಧ ಪುರುಷ ಸಲಿಂಗಕಾಮಿ ಮತ್ತು ಸ್ತ್ರೀಸಲಿಂಗಕಾಮಿಗಳ ಕೂಟ(GLAAD)ವು ಗಿಬ್ಸನ್ ಸಲಿಂಗಕಾಮಿಗಳ ವಿರುದ್ಧ ಪೂರ್ವಗ್ರಹ ಪೀಡಿತ ಭಾವನೆ ಹೊಂದಿದ್ದಾರೆಂದು ಸ್ಪೇನ್ ಸುದ್ದಿಪತ್ರಿಕೆ ಎಲ್ ಪಾಯಿಸ್ ನಲ್ಲಿ ಡಿಸೆಂಬರ್ 1991ರ ಸಂದರ್ಶನದ ನಂತರ ಆರೋಪಿಸಿದವು. ಸಲಿಂಗಕಾಮಿಗಳನ್ನು ಕುರಿತು ನಿಮ್ಮ ಭಾವನೆಯೇನು ಎಂದು ಪ್ರಶ್ನಿಸಿದಾಗ, "ಅವರು ಹಿಂಭಾಗದಲ್ಲಿ ತೆಗೆದುಕೊಳ್ಳುತ್ತಾರೆ" ಎಂದು ಪ್ರತಿಕ್ರಿಯಿಸಿದರು. ಗಿಬ್ಸನ್ ತಮ್ಮ ಹಿಂಭಾಗದ ಕಡೆ ಕೈತೋರಿಸುತ್ತಾ: "ಇದು ಹೇಸಿಗೆಗೆ ಮಾತ್ರ" ಎಂದು ಉತ್ತರಿಸಿದರು.

ಅವರು ನಾಟಕ ಶಾಲೆಯಲ್ಲಿ ಸಲಿಂಗಿ ಜನರ ಜತೆ ನಿಕಟವಾಗಿ ಕೆಲಸ ಮಾಡಿದ್ದರ ಬಗ್ಗೆ ನೆನಪಿಸಿದಾಗ, ಅವರು ಒಳ್ಳೆಯ ಜನರು, ತಾವು ಇಷ್ಟಪಡುವುದಾಗಿ ತಿಳಿಸಿದರು. ಆದರೆ ಅವರು ಮಾಡುವ ಕೆಲಸ ನನ್ನ ಕೆಲಸವಲ್ಲ"ಎಂದರು. ಅವರು ನಟನಾಗಿದ್ದರಿಂದ ಜನರು ಸಲಿಂಗಕಾಮಿ ಎಂದು ಭಾವಿಸಿದ್ದಾರೆಂದು ಗಿಬ್ಸನ್‌ಗೆ ಭಯವೇ ಎಂದು ಪ್ರಶ್ನಿಸಿದಾಗ, ಗಿಬ್ಸನ್ ಉತ್ತರಿಸಿದರು "ನಾನು ಸಲಿಂಗಿ ರೀತಿಯಲ್ಲಿ ಕಾಣುತ್ತೀನಾ, ಅವರ ತರ ನಾನು ಮಾತನಾಡುತ್ತೀನಾ? ಅವರ ರೀತಿಯಲ್ಲಿ ನಾನು ವರ್ತಿಸುತ್ತೀನಾ? ನೀವು ಒಬ್ಬ ನಟನಾಗಿದ್ದಾಗ, ಅಂತಹ ಹಣೆಪಟ್ಟಿಯನ್ನು ನಿಮಗೆ ಅಂಟಿಸುತ್ತಾರೆ."[೮೦][೮೪] ಗುಡ್ ಮಾರ್ನಿಂಗ್ ಅಮೆರಿಕ ದಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಮರ್ಥಿಸಿಕೊಳ್ಳುತ್ತಾ ಗಿಬ್ಸನ್ ಹೇಳಿದರು,[ಆ ಉತ್ತರಗಳು ಪ್ರತಿಕ್ರಿಯೆ)ನೇರ ಪ್ರಶ್ನೆಗೆ. ಯಾರಾದರೂ ನಮ್ಮ ಅಭಿಪ್ರಾಯ ಬಯಸಿದರೆ,ಅದನ್ನು ನಾನು ನೀಡುತ್ತೇನೆ. ಏನು,ಅವರಿಗೆ ನಾನು ಸುಳ್ಳು ಹೇಳುತ್ತೀನಾ"[೮೪] ಪ್ಲೇಬಾಯ್‌ ನ 1995ರ ಸಂದರ್ಶನದಲ್ಲಿ GLAADಪ್ರತಿಭಟನೆಗಳಿಗೆ ತಮ್ಮ ಉತ್ತರದ ಮೂಲಕ ಪ್ರತಿಕ್ರಿಯಿಸಿದರು."ನರಕ ಹೆಪ್ಪುಗಟ್ಟಿದಾಗ ನಾನು ಕ್ಷಮೆಕೇಳುತ್ತೇನೆ. ಅವರು ಏನು ಬೇಕಾದರೂ ಮಾಡಲಿ".[೭೭] ತರುವಾಯ, 1997 ಜನವರಿಯಲ್ಲಿ ಕನ್ಸ್‌ಪೈರಸಿ ಥಿಯರಿ ಚಿತ್ರದ ಸೆಟ್‌ನ ಹೊರಾಂಗಣದಲ್ಲಿ 10 ಸಲಿಂಗಸ್ತ್ರೀ ಮತ್ತು ಸಲಿಂಗಕಾಮಿ ಪುರುಷ ಚಿತ್ರನಿರ್ಮಾಪಕರನ್ನು ಸಂಯೋಜಿಸಲು ಗಿಬ್ಸನ್ GLAADಗೆ ಸೇರಿದರು.[೮೫] 1999ರಲ್ಲಿ ಎಲ್ ಪಯಸ್‌ ಗೆ ನೀಡಿದ ಪ್ರತಿಕ್ರಿಯೆಗಳನ್ನು ಕುರಿತು ಪ್ರಶ್ನಿಸಿದಾಗ,"ನಾನು ಹಾಗೆ ಹೇಳಬಾರದಿತ್ತು,ಆದರೆ ಸಂದರ್ಶನದಲ್ಲಿ ತಾವು ಸ್ವಲ್ಪ ಮಟ್ಟಿನ ಓಡ್ಕಾ ಹೀರುತ್ತಿದ್ದೆ ಮತ್ತು ಆ ಉಲ್ಲೇಖವು ನನಗೆ ವಾಪಸು ಚುಚ್ಚಿತು".[೭೮]

ಬ್ರೇವ್‌ಹಾರ್ಟ್ [೮೬] ಮತ್ತು ಪ್ಯಾಶನ್ ಆಫ್ ದಿ ಕ್ರೈಸ್ಟ್ ಚಿತ್ರಗಳಲ್ಲಿ ಸಲಿಂಗಿಗಳ ಬಗ್ಗೆ ಪೂರ್ವಗ್ರಹಪೀಡಿತ ಭಾವನೆಗಳನ್ನು ಕುರಿತು ಗಿಬ್ಸನ್ ಅವರನ್ನು ಟೀಕಿಸಲಾಯಿತು.[೮೭]

ಸೆಮಿಟಿಕ್ ಜನಾಂಗ ವಿರೋಧಿ ಆರೋಪಗಳು

ಎರಡು ವಿಷಯಗಳಿಗೆ ಸಂಬಂಧಪಟ್ಟಂತೆ ಗಿಬ್ಸನ್ ಅವರನ್ನು ಸೆಮಿಟಿಕ್ ಜನಾಂಗ ವಿರೋಧಿ ಎಂದು ಆರೋಪಿಸಲಾಯಿತು:ಅವರ 2004ರ ಚಿತ್ರ ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್ ಸೆಮಿಟಿಕ್ ಜನಾಂಗ ವಿರೋಧಿ ಚಿತ್ರಣ ಮತ್ತು ವ್ಯಂಗ್ಯಾರ್ಥಗಳ ಆರೋಪಗಳಿಂದ ತೀವ್ರ ವಾದವಿವಾದದ ಕಿಡಿ ಸ್ಫೋಟಿಸಿತು. ಚಿತ್ರವು ಸೆಮಿಟಿಕ್ ಜನಾಂಗ ವಿರೋಧಿ ಎಂಬುದನ್ನು ಗಿಬ್ಸನ್ ಅಲ್ಲಗಳೆದರು. ಆದರೆ ವಿಮರ್ಶಕರಲ್ಲಿ ಭಿನ್ನಾಭಿಪ್ರಾಯ ಉಳಿಯಿತು. ಚಿತ್ರವು ಸುವಾರ್ತೆಗಳು(ಏಸುಕ್ರಿಸ್ತನ ಜೀವನ,ಬೋಧನೆಗಳು) ಮತ್ತು ಸಾಂಪ್ರದಾಯಿಕ ಕ್ಯಾಥೋಲಿಕ್ ಬೋಧನೆಗಳಿಗೆ ಸಂಗತವಾಗಿದೆ ಎಂದು ಕೆಲವರು ಒಪ್ಪಿಕೊಂಡರೂ,ಸುವಾರ್ತೆಗಳ ಆಯ್ದ ವಾಚನವನ್ನು ಇದು ಬಿಂಬಿಸುತ್ತದೆ[೮೮] ಅಥವಾ 1998ರಲ್ಲಿ USCCBಯ ಏಕತೆ ಸಂಘಟಿಸುವ ಮತ್ತು ಅಂತರಧರ್ಮೀಯ ವ್ಯವಹಾರಗಳ ಸಮಿತಿಯಿಂದ ಪ್ಯಾಶನ್ ನಾಟಕೀಕರಣದ ಶಿಫಾರಸುಗಳನ್ನು ಅನುಸರಿಸಲು ವಿಫಲವಾಗಿದೆ ಎಂದು ಇತರರು ವಾದಿಸಿದರು.[೮೯]

ಗಿಬ್ಸನ್ ಜುಲೈ 28,2006ರಲ್ಲಿ ಪಾನಮತ್ತರಾಗಿ ಚಾಲನೆ ಮಾಡುವಾಗ ಬಂಧಿತರಾಗಿದ್ದನೆಂದು ಸೋರಿಕೆಯಾದ ವರದಿಯೊಂದು ಬಹಿರಂಗ ಮಾಡಿತ್ತು.ಯಹೂದಿಯಾಗಿದ್ದ ಬಂಧಿಸಿದ ಅಧಿಕಾರಿ ಜೇಮ್ಸ್ ಮೀ ಅವರಿಗೆ ಸೆಮಿಟಿಕ್ ಜನಾಂಗ ವಿರೋಧಿ ಪ್ರತಿಕ್ರಿಯೆಗಳನ್ನು ನೀಡಿ, ಫಕಿಂಗ್ ಜಿವ್ಸ್....ಜಗತ್ತಿನ ಎಲ್ಲ ಯುದ್ಧಗಳಿಗೆ ಯಹೂದಿಗಳು ಕಾರಣಕರ್ತರು. ನೀನು ಯಹೂದಿಯೇ?"[೯೦] ಗಿಬ್ಸನ್ ಈ ಘಟನೆಗಾಗಿ ತಮ್ಮ ಪ್ರಚಾರಕರ ಮೂಲಕ ಎರಡು ಕ್ಷಮೆಗಳನ್ನು ಯಾಚಿಸಿದರು. ನಂತರ ಡಯೇನ್ ಸಾಯರ್ ಜತೆ ಸಂದರ್ಶನದಲ್ಲಿ, ಉಲ್ಲೇಖನಗಳ ನಿಖರತೆಯನ್ನು ದೃಢಪಡಿಸಿದರು.

ಕುಚೇಷ್ಟೆ ಸ್ವಭಾವ

ಮೆಲ್ ಗಿಬ್ಸನ್ ಚಿತ್ರಗಳ ಸೆಟ್‌‍ಗಳಲ್ಲಿ ಹಾಸ್ಯಪ್ರವೃತ್ತಿಗೆ ಹೆಸರಾಗಿದ್ದರು.[೯೧] ಪ್ರಾಯೋಗಿಕ ಹಾಸ್ಯಗಳು,ಪದಪ್ರಯೋಗಗಳು, ವಿದೂಷಕ ಪ್ರೇರಿತವಾದ ದೈಹಿಕ ಹಾಸ್ಯ ಮತ್ತು ಜನರಿಗೆ ಆಘಾತವುಂಟು ಮಾಡುವ ಹದ್ದುಮೀರಿದ ವರ್ತನೆಗಾಗಿ ಅವರು ಹೆಸರು ಮಾಡಿದ್ದರು. ಗಿಬ್ಸನ್ ತಮ್ಮ ಸಹ-ಕೆಲಸಗಾರರಿಗೆ ಗೌರವ ಸಲ್ಲಿಸಲು ವ್ಯಂಗ್ಯಚಿತ್ರಗಳನ್ನು ಬರೆಯುವುದಕ್ಕೆ ಮತ್ತು ಪ್ರೌಢಶಾಲೆ ಮೆರವಣಿಗೆ ಬ್ಯಾಂಡ್‌ಗಳನ್ನು ಬಾಡಿಗೆಗೆ ಪಡೆಯಲು ಇಷ್ಟಪಟ್ಟಿದ್ದರು. ನಿರ್ದೇಶಕರಾಗಿ ಕೆಲವು ಬಾರಿ ಅವರು ನಟರನ್ನು ಕೆಂಪು ಕೋಡಂಗಿ ಮೂಗನ್ನು ಧರಿಸಿ ಗಂಭೀರ ಪಾತ್ರಗಳನ್ನು ನಿರ್ವಹಿಸಲು ಆದೇಶಿಸುವ ಮೂಲಕ ಉದ್ವೇಗ ಶಮನ ಮಾಡುತ್ತಿದ್ದರು.[೯೨] ಹ್ಯಾಮ್ಲೆಟ್‌ ನಲ್ಲಿ ಅವರ ಜತೆ ಕಾಣಿಸಿಕೊಂಡ ಹೆಲೆನಾ ಬೋನಾಮ್ ಕಾರ್ಟರ್ ಅವರನ್ನು ಕುರಿತು ಮಾತನಾಡುತ್ತಾ, "ಅವರಿಗೆ ತೀರಾ ಮೂಲಭೂತ ಹಾಸ್ಯಪ್ರವೃತ್ತಿಯಿದೆಯೆಂದು ಹೇಳಿದ್ದರು. ಅದು ಸ್ವಲ್ಪಮಟ್ಟಿಗೆ ಕೀಳುಅಭಿರುಚಿಯದಾಗಿದ್ದು,ಅಷ್ಟೊಂದು ಒಳ್ಳೆಯ ಅಭಿರುಚಿಯಿಂದ ಕೂಡಿಲ್ಲ"ವೆಂದು ತಿಳಿಸಿದರು.[೯೩] ಮೇವರಿಕ್ ಸೆಟ್‌ನಲ್ಲಿ ಗಿಬ್ಸನ್ ಸಹ-ನಟಿ ಜೂಡಿ ಫಾಸ್ಟರ್ ಹುಟ್ಟುಹಬ್ಬದಂದು ಗುಪ್ತವಾಗಿ ಚಿತ್ರಕಥೆಯನ್ನು ಪುನಃ ಬರೆದು ಅವಳ ಪಾತ್ರದಲ್ಲಿ ಚರ್ವಿತಚರ್ವಣ ಸಂಭಾಷಣೆಗಳನ್ನು ಸೇರಿಸಿದ್ದರು. ಬ್ರೇವ್‌ಹಾರ್ಟ್‌ ಚಿತ್ರಕ್ಕಾಗಿ ಗೆದ್ದ ಆಸ್ಕರ್‌ ಕುರಿತ ವ್ಯಾನಿಟಿ ಫೇರ್ ಕೂಟದಲ್ಲಿ ಮೆಲ್ ಅವರನ್ನು ಹಿಂಬಾಲಿಸಲು ಬ್ಯಾಗ್‌ಪೈಪರ್‌ನನ್ನು ಪೂರ್ಣ ಸ್ಕಾಟಿಷ್ ಲಾಂಛನದೊಂದಿಗೆ ನೇಮಿಸಿಕೊಳ್ಳುವ ಮೂಲಕ ಫಾಸ್ಟರ್ ಮರುಹಾಸ್ಯ ಮಾಡಿದರು. ಬ್ರೇವ್‌ಹಾರ್ಟ್ ಮತ್ತು ಅಪೋಲೊ 13 ಎರಡೂ ಶ್ರೇಷ್ಠ ಚಿತ್ರಕ್ಕಾಗಿ ನಾಮನಿರ್ದೇಶಿತಗೊಂಡಾಗ, ಗಿಬ್ಸನ್ ರಾನ್ ಹೊವಾರ್ಡ್ ಮತ್ತು ಬ್ರಿಯಾನ್ ಗ್ರೇಜರ್ ಅವರಿಗೆ ರಾನ್ಸಮ್ ಸೆಟ್‌ನಲ್ಲಿ ನಿಮ್ಮ ಪರಿಗಣನೆಗೆ ಬ್ರೇವ್‌ಹಾರ್ಟ್ ಜಾಹೀರಾತು ಎಂಬ ಅಣಕವನ್ನು ನೀಡಿದರು. “ಬೆಸ್ಟ್ ಮೂನ್ ಶಾಟ್‌“ ಎಂಬ ಹೆಸರಿನೊಂದಿಗೆ ಈ ಜಾಹೀರಾತು ನೀಡಲಾಗಿದ್ದು, ಬ್ರೇವ್ ಹಾರ್ಟ್ ಸ್ಕಾಟಿಷ್ ಸೇನೆ ಇಂಗ್ಲೀಷರಿಗೆ ಬೆತ್ತಲೆ ಹಿಂಭಾಗವನ್ನು ತೋರಿಸುವ ಚಿತ್ರವನ್ನು ಒಳಗೊಂಡಿತ್ತು.[೯೪] ಕನ್ಸ್ಪರೈಸಿ ಥಿಯರಿ ಚಿತ್ರೀಕರಣದ ಸಂದರ್ಭದಲ್ಲಿ ಅವರು ಮತ್ತು ಸಹನಟ ಜೂಲಿಯ ರಾಬರ್ಟ್ಸ್ ಪರಸ್ಪರ ಕುಚೇಷ್ಟೆಗಳನ್ನು ಮಾಡಿದರು. ಆರಂಭದಲ್ಲಿ ಗಿಬ್ಸನ್ ಘನೀಕರಿಸಿದ ಮುಚ್ಚಿದ ಇಲಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ರಾಬರ್ಟ್ಸ್ ಅವರನ್ನು ಸೆಟ್‌ಗೆ ಸ್ವಾಗತಿಸಿದರು.[೯೫] ತಮ್ಮ ಲೆಥಾಲ್ ವೆಪನ್ ಚಿತ್ರಗಳಲ್ಲಿ ಮೂವರು ವಿದೂಷಕರಿಗೆ ಗೌರವಗಳನ್ನು ಸೇರಿಸುವ ಜತೆಗೆ, ಗಿಬ್ಸನ್ ಮೈಕೆಲ್ ಚಿಕ್ಲಿಸ್ ಕರ್ಲಿ ಹೊವಾರ್ಡ್‌ಪಾತ್ರದಲ್ಲಿ ಹಾಸ್ಯತಂಡವನ್ನು ಕುರಿತ 2000ದ ಕಿರುತೆರೆಯ ಚಿತ್ರವನ್ನು ನಿರ್ಮಿಸಿದರು. ಅಪೋಕ್ಯಾಲಿಪ್ಟೊ ದ 2005ರ ಅಣಕದ ಟ್ರೇಲರ್‌ನಲ್ಲಿ ಸಿಗರೇಟೊಂದನ್ನು ಸೇವಿಸುವ ತಮ್ಮ ಒಂಟಿ ಚಿತ್ರವೊಂದನ್ನು ಗಿಬ್ಸನ್ ಸೇರ್ಪಡೆ ಮಾಡಿದರು.[೯೬]

ಮದ್ಯಸೇವನೆ ದುರಭ್ಯಾಸ

ತಾವು 13ರ ವಯಸ್ಸಿನಲ್ಲೇ ಕುಡಿತ ಆರಂಭಿಸಿದ್ದಾಗಿ ಗಿಬ್ಸನ್ ಹೇಳಿದ್ದಾರೆ.[೯೭] NIDAದಲ್ಲಿದ್ದ ಸಂದರ್ಭದಲ್ಲಿ 2002ರ ಸಂದರ್ಶನದಲ್ಲಿ ಗಿಬ್ಸನ್ "ನಾನು ಅತೀ ಎತ್ತರದ ಮಟ್ಟಕ್ಕೆ ಏರಿದ್ದೇನೆ. ಆದರೆ ಕೆಲವು ತೀರಾ ಕೆಳಮಟ್ಟಕ್ಕೆ ಇಳಿದಿದ್ದೇನೆ. ತಾವು ಖಿನ್ನತೆಯ ಉನ್ಮಾದತೆಗೆ ಒಳಗಾಗಿದ್ದು ಇತ್ತೀಚೆಗೆ ಕಂಡುಬಂತು.[೯೮] ಗಿಬ್ಸನ್ ಭಾವನೆಯ ಅಸ್ತವ್ಯಸ್ತತೆ ಉಂಟಾಗುವ ಬಗ್ಗೆ ಯಾವುದೇ ಸಾರ್ವಜನಿಕ ಪ್ರಸ್ತಾಪವನ್ನು ಮಾಡಿಲ್ಲ.

ರಕ್ತದ ಆಲ್ಕೋಹಾಲ್ ಪ್ರಮಾಣ 0.12%-0.13%ರ ನಡುವೆ ವಾಹನ ಚಾಲನೆ ಮಾಡುತ್ತಿದ್ದ ಗಿಬ್ಸನ್ ಕಾರೊಂದರ ಹಿಂಭಾಗಕ್ಕೆ ಡಿಕ್ಕಿ ಹೊಡೆದ ನಂತರ ಟೊರೆಂಟೊದಲ್ಲಿ 1984ರಲ್ಲಿ ಅವರನ್ನು ಬಂಧಿಸಲಾಗಿತ್ತು. ಗಿಬ್ಸನ್ ತಪ್ಪಿತಸ್ಥರೆಂದು ಒಪ್ಪಿಕೊಂಡರು ಮತ್ತು $300 ದಂಡ ಹೇರಲಾಯಿತು. 3 ತಿಂಗಳವರೆಗೆ ಒಂಟಾರಿಯೊದಲ್ಲಿ ವಾಹನಚಾಲನೆಯಿಂದ ಅವರನ್ನು ನಿಷೇಧಿಸಲಾಯಿತು.[೯೯] ಕುಡಿತದ ಚಟದಿಂದ ಚೇತರಿಸಿಕೊಳ್ಳುವುದಕ್ಕೆ ಸುಮಾರು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಆಸ್ಟ್ರೇಲಿಯ ಜಮೀನಿಗೆ ಹಿಂತಿರುಗಿದರು. ಆದರೆ ಕುಡಿತದ ಚಟದಿಂದ ಹೊರಬರುವುದಕ್ಕೆ ಹೆಣಗಾಟ ಮುಂದುವರಿಸಿದರು. ಈ ಸಮಸ್ಯೆಯ ನಡುವೆ ಕೂಡ ಗಿಬ್ಸನ್ ವೃತ್ತಿಪರತೆ ಮತ್ತು ಸಮಯಪ್ರಜ್ಞೆಯಿಂದ ಹಾಲಿವುಡ್ ಚಿತ್ರಜಗತ್ತಿನಲ್ಲಿ ಖ್ಯಾತಿಯನ್ನು ಗಳಿಸಿದರು. ಗಿಬ್ಸನ್ ಬೆಳಗಿನ ತಿಂಡಿಯ ಜತೆ ಐದು ಪಿಂಟ್ ಬಿಯರ್ ಸೇವಿಸುತ್ತೇನೆಂದು ಬಹಿರಂಗ ಮಾಡಿದಾಗ ಲೆಥಾಲ್ ವೆಪನ್ 2 ನಿರ್ದೇಶಕ ರಿಚರ್ಡ್ ಡಾನರ್ ಆಘಾತಕ್ಕೆ ಈಡಾಗಿದ್ದರು.[೬೬] ಗಿಬ್ಸನ್ ತಮ್ಮ 30ರ ಮಧ್ಯಾವಧಿ ವಯಸ್ಸಿನಲ್ಲಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದರು. ಏಸುಕ್ರಿಸ್ತನ ಶಿಲುಬೆಯಲ್ಲಿನ ಯಾತನೆ ಬಗ್ಗೆ ಧ್ಯಾನ ಮಾಡಿದ ಅವರು ತಮ್ಮ ನೋವುಗಳನ್ನು ಶಮನಮಾಡಿಕೊಂಡಿದ್ದಾಗಿ 2003 ಮತ್ತು 2004ರಲ್ಲಿ ಅವರು ಹೇಳಿಕೆಗಳಲ್ಲಿ ಬಿಂಬಿತವಾಗಿವೆ.[೬೩][೬೬][೧೦೦]ಅವರು 1991ರಲ್ಲಿ ನಟನೆಯಿಂದ ಹೆಚ್ಚು ವಿರಾಮ ತೆಗೆದುಕೊಂಡು ವೃತ್ತಿಪರ ನೆರವಿಗಾಗಿ ಕೋರಿದರು. ಅದೇ ವರ್ಷ AA ಸಭೆಗಳಲ್ಲಿ ಗಿಬ್ಸನ್ ಹೇಳಿಕೆಗಳನ್ನು ಸಂಡೇ ಮಿರರ್ ಪ್ರಕಟಿಸದಂತೆ ತಡೆಯುವುದರಲ್ಲಿ ಗಿಬ್ಸನ್ ವಕೀಲರು ಸೋಲುತ್ತಾರೆ.[೧೦೧][clarification needed] 1992ರಲ್ಲಿ ಗಿಬ್ಸನ್ ಹಾಲಿವುಡ್ ಮಧ್ಯಪಾನ ವಿಮುಕ್ತಿ ಕೇಂದ್ರಕ್ಕೆ ಆರ್ಥಿಕ ನೆರವು ಒದಗಿಸಿ, ಮಧ್ಯಪಾನ ಚಟವು ನಮ್ಮ ಕುಟುಂಬದಲ್ಲಿ ಹಾಸುಹೊಕ್ಕಾಗಿದೆಯೆಂದು ಹೇಳಿದರು. ಇದು ತಮಗೆ ನಿಕಟತೆ ಹೊಂದಿರುವ ವಿಷಯ. ಜನರು ಅದರಿಂದ ಹಿಂತಿರುಗಿ ಬಂದರೆ ಅದೊಂದು ಪವಾಡ."[೧೦೨]

ಜುಲೈ 28, 2006ರಂದು ಆಲ್ಕೊಹಾಲ್‌ನ ತೆರೆದ ಸೀಸೆಯೊಂದಿಗೆ ವೇಗವಾಗಿ ವಾಹನ ಚಾಲನೆ ಮಾಡುತ್ತಿದ್ದ ಗಿಬ್ಸನ್ ಅವರನ್ನು DUI ಆರೋಪದ ಮೇಲೆ ಬಂಧಿಸಲಾಯಿತು. ಬಂಧನ ಸಂದರ್ಭದಲ್ಲಿ ತಾವು ಸೆಮಿಟಿಕ್ ಜನಾಂಗ ವಿರೋಧಿ ಹೇಳಿಕೆ ನೀಡಿದ್ದನ್ನು ಒಪ್ಪಿಕೊಂಡು,ತಮ್ಮ ತುಚ್ಛ ನಡವಳಿಕೆಗೆ ಕ್ಷಮೆ ಯಾಚಿಸಿದರು.[೧೦೩] ತಮ್ಮ ಪ್ರತಿಕ್ರಿಯೆಗಳು "ಮನೋದ್ರೇಕದ ಕ್ಷಣದಲ್ಲಿ ಹೇಳಿದ್ದೆಂದು" ಅವರು ನುಡಿದರು. "ಗುಣಪಡಿಸುವ ಸೂಕ್ತ ಮಾರ್ಗವನ್ನು ಗ್ರಹಿಸಲು" ಯಹೂದಿ ನಾಯಕರನ್ನು ಭೇಟಿ ಮಾಡುವಂತೆ ಅವರಿಗೆ ಸೂಚಿಸಲಾಯಿತು.[೧೦೪] ಡಯೇನ್ ಸಾಯರ್ ಜತೆ ನಂತರದ ಸಂದರ್ಶನದಲ್ಲಿ ಆ ಸಂದರ್ಭದಲ್ಲಿನ ಅವರ ಯೋಚನೆಗಳೇನೆಂದು ಪ್ರಶ್ನಿಸಿದಾಗ, ತಮ್ಮ ಚಿತ್ರ ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್ ಮೇಲೆ ತೀಕ್ಷ್ಣ ದಾಳಿಗಳು ಮತ್ತು ಇಸ್ರೇಲ್-ಲೆಬನಾನ್ ಸಂಘರ್ಷದ ಬಗ್ಗೆ ಅವರು ಉದಾಹರಿಸಿದರು. ಗಿಬ್ಸನ್ ಬಂಧನ ನಂತರ ಅವರು ಮದ್ಯಪಾನ ಚಟದಿಂದ ಮುಕ್ತಿ ಪಡೆಯಲು ಚೇತರಿಕೆಯ ಕಾರ್ಯಕ್ರಮವನ್ನು ಹಿಡಿದಿದ್ದಾರೆಂದು ಅವರ ಪ್ರಚಾರಕರು ತಿಳಿಸಿದರು. ಆಗಸ್ಟ್ 17,2006ರಂದು ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪಕ್ಕೆ ಗಿಬ್ಸನ್ ಯಾವುದೇ ಪ್ರತಿವಾದ ಇಲ್ಲವೆಂದು ಹೇಳಿದಾಗ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡುವ ಮೂರು ವರ್ಷಗಳ ಶಿಕ್ಷೆ ವಿಧಿಸಲಾಯಿತು.[೧೦೩] ಅವರ ಶಿಕ್ಷೆಯ ಅವಧಿಯಲ್ಲಿ ಪ್ರಥಮ ವರ್ಷದ ನಾಲ್ಕೂವರೆ ತಿಂಗಳ ಕಾಲ ವಾರಕ್ಕೆ ಐದು ಬಾರಿ ಮತ್ತು ಉಳಿದ ಅವಧಿಯಲ್ಲಿ ವಾರಕ್ಕೆ ಮೂರು ಬಾರಿ ಸ್ವಯಂ-ನೆರವು ಸಭೆಗಳಲ್ಲಿ ಭಾಗವಹಿಸುವಂತೆ ಆದೇಶಿಸಲಾಯಿತು. ತಪ್ಪಿತಸ್ಥರ ಪ್ರಥಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೂಡ ಅವರಿಗೆ ಆದೇಶಿಸಲಾಯಿತು ಮತ್ತು $1,300 ದಂಡ ವಿಧಿಸಲಾಯಿತು ಮತ್ತು ಅವರ ಪರವಾನಗಿಯನ್ನು 90 ದಿನಗಳಿಗೆ ಸೀಮಿತಗೊಳಿಸಲಾಯಿತು.[೧೦೩] ಅವರು ಸ್ವಯಂಪ್ರೇರಣೆಯಿಂದ ಸಾರ್ವಜನಿಕ ಸೇವೆಯ ಪ್ರಕಟಣೆಯನ್ನು ದಾಖಲಿಸಿದರು.

ಡಯೇನ್ ಸಾಯರ್ ಜತೆ ಸಂದರ್ಶನದಲ್ಲಿ ಕುಡಿತದ ಅಮಲಿನಿಂದ ದೂರವಾಗಿ ಸಾಮಾನ್ಯ ಸ್ಥಿತಿಗೆ ಬರಲು ತಮ್ಮ ಹೆಣಗಾಟ ಕುರಿತು ಹೇಳಿದರು.

ಎಲ್ಲವನ್ನೂ ಅಪಾಯಕ್ಕೆ ಒಡ್ಡಿದೆ-ಜೀವನ,ಅವಯವ,ಕುಟುಂಬ-ಅದರಿಂದ ದೂರಹೋಗಲು ಇವು ಸಾಕಾಗಲಿಲ್ಲ-ನೀವೇ ಸ್ವಯಂ ಚಟದಿಂದ ಮುಕ್ತರಾಗಲು ಸಾಧ್ಯವಿಲ್ಲ. ಜನರು ಸಹಾಯ ಮಾಡಬಹುದು. ಆದರೆ ಸಹಾಯ ಮಾಡುವುದು ದೇವರು. ನೀವು ಅಲ್ಲಿಗೆ ಹೋಗಬೇಕು. ನೀವು ಅದನ್ನು ಮಾಡಲೇಬೇಕು. ಇಲ್ಲದಿದ್ದರೆ ನಿಮಗೆ ಉಳಿಗಾಲವಿಲ್ಲ..ಇಡೀ ಅನುಭವವನ್ನು ನಾನು ಒಂದು ರೀತಿಯ ಆಶೀರ್ವಾದದಂತೆ ಎಣಿಸುತ್ತೇನೆ.ಮೊದಲಿಗೆ, ಯಾರಿಗೆ ಯಾವುದೇ ನಿಜವಾದ ಹಾನಿ ಮಾಡುವ ಮುಂಚೆ ಚಟದಿಂದ ಮುಕ್ತನಾದೆ. ದೇವರಿಗೆ ಅದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಸ್ವಯಂ ನೋವನ್ನು ಉಂಟುಮಾಡಿಕೊಳ್ಳಲಿಲ್ಲ. ನನ್ನ ಮಕ್ಕಳು ತಂದೆಯನ್ನು ಕಳೆದುಕೊಳ್ಳುವಂತೆ ಮಾಡಲಿಲ್ಲ... ಕುಡಿತದಿಂದ ಉಂಟಾಗುವ ಒಂದು ರೀತಿಯ ಜೋಂಪಿಗೆ ಒಂದು ಬಕೆಟ್ ತಣ್ಣೀರು ಮುಖಕ್ಕೆ ಬೇಕಾಗುತ್ತದೆ,ಏಕೆಂದರೆ ಆತ್ಮಕ್ಕುಂಟಾಗುವ ಒಂದು ರೀತಿಯ ವ್ಯಾಧಿ,ಮನಸ್ಸಿನ ಗೀಳು ಮತ್ತು ದೈಹಿಕ ಅಸಹಿಷ್ಣುತೆಯನ್ನು ನೀವು ನಿಭಾಯಿಸುತ್ತೀರಿ. ಕೆಲವು ಜನರಿಗೆ ಭುಜದ ಮೇಲೆ ದೊಡ್ಡ ಪೆಟ್ಟು ಅಗತ್ಯವಾಗುತ್ತದೆ. ತಮ್ಮ ಪ್ರಕರಣದಲ್ಲಿ, ಜಾಗತಿಕ ಪ್ರಮಾಣದಲ್ಲಿ ಸಾರ್ವಜನಿಕ ಅವಮಾನ ಅಗತ್ಯವೆಂಬಂತೆ ಕಂಡುಬಂತು.[೧೦೫]

ಮೇ 2007 ಪ್ರಗತಿ ವಿಚಾರಣೆಯಲ್ಲಿ, ಗಿಬ್ಸನ್ ಅವರ ಸನ್ನಡತೆಯ ಬಿಡುಗಡೆಯ ಶಿಕ್ಷೆ ಅವಧಿಯ ನಿಯಮಗಳನ್ನು ಪಾಲಿಸಿದ್ದಕ್ಕಾಗಿ ಮೆಚ್ಚುಗೆಗೆ ಪಾತ್ರರಾದರು ಮತ್ತು ಅವರು ಸ್ವಯಂ-ನೆರವು ಕಾರ್ಯಕ್ರಮದಲ್ಲಿ ಅಗತ್ಯವನ್ನು ಮೀರಿ ವ್ಯಾಪಕವಾಗಿ ಭಾಗವಹಿಸಿದ್ದಕ್ಕಾಗಿ ಮೆಚ್ಚುಗೆಗೆ ಪಾತ್ರರಾದರು.[೧೦೬]

ಲೋಕೋಪಕಾರ

ಗಿಬ್ಸನ್ ದಂಪತಿ ತಮ್ಮ ಸಮಾಜಸೇವೆಯ ಬಗ್ಗೆ ಪ್ರಚಾರದಿಂದ ದೂರವಿದ್ದರೂ,ಅವರು ವಿವಿಧ ಧರ್ಮದತ್ತಿ ಸಂಸ್ಥೆಗಳಿಗೆ ಗಣನೀಯ ಪ್ರಮಾಣದ ಮೊತ್ತವನ್ನು ಪಾವತಿ ಮಾಡಿದ್ದಾರೆಂದು ನಂಬಲಾಗಿದ್ದು, ಅವುಗಳಲ್ಲೊಂದು ಹಿಲಿಂಗ್ ದಿ ಚಿಲ್ಡ್ರನ್ ಸಂಸ್ಥೆ. ಸಂಸ್ಥಾಪಕರಲ್ಲೊಬ್ಬರಾದ ಕ್ರಿಸ್ ಎಂಬಲ್‌ಟನ್ ಪ್ರಕಾರ,ಗಿಬ್ಸನ್ ದಂಪತಿ ಜಗತ್ತಿನಾದ್ಯಂತ ಅಗತ್ಯ ಮಕ್ಕಳ ಜೀವವುಳಿಸುವ ವೈದ್ಯಕೀಯ ಚಿಕಿತ್ಸೆಗೆ ಲಕ್ಷಾಂತರ ಹಣ ನೀಡಿದ್ದಾರೆ.[೧೦೭][೧೦೮] ಕಲೆಗಳಿಗೆ ಕೂಡ ಗಿಬ್ಸನ್ ದಂಪತಿ ಒತ್ತಾಸೆಯಾಗಿದ್ದರು, ನವೋದಯ ಕಲಾಕೃತಿಗಳ ಮರುಸ್ಥಾಪನೆಗೆ ಆರ್ಥಿಕನೆರವು[೧೦೯] ಮತ್ತು NIDAಗೆ ಲಕ್ಷಾಂತರ ಡಾಲರ್‌ಗಳ ಕೊಡುಗೆ ನೀಡಿದ್ದರು.[೧೧೦]

ಅಪೋಕ್ಯಾಲಿಪ್ಟೊ ಚಿತ್ರೀಕರಣದ ಸಂದರ್ಭದಲ್ಲಿ, ಮೆಕ್ಸಿಕೊದ ವೆರಾಕ್ರಜ್ ರಾಜ್ಯದ ಅರಣ್ಯಗಳಲ್ಲಿ ರೋಟರಿ ಕ್ಲಬ್‌ಗೆ ಹತ್ತು ಲಕ್ಷ ಡಾಲರ್‌ಗಳ ದೇಣಿಗೆಯನ್ನು ಗಿಬ್ಸನ್ ನೀಡಿದರು.[೧೧೧] ತೀವ್ರ ಪ್ರವಾಹದಿಂದ ಆ ಪ್ರದೇಶದ ಅನೇಕ ಮನೆಗಳು ಕೊಚ್ಚಿಕೊಂಡು ಹೋದ ಬಳಿಕ ಬಡಜನರಿಗೆ ಮನೆಗಳನ್ನು ಕಟ್ಟಿಕೊಡಲು ಈ ನೆರವು ನೀಡುತ್ತಾ:

"ಅವರು ಅಲ್ಲಿ ತೀವ್ರ ಪ್ರವಾಹಕ್ಕೆ ತುತ್ತಾದರು. ಇದು ದಕ್ಷಿಣ ಪ್ರದೇಶಗಳ ಲೂವಿಸಿಯಾನ ರೀತಿಯಲ್ಲಿತ್ತು. ತೀವ್ರ ಪ್ರವಾಹದಿಂದ ಹತ್ತುಲಕ್ಷಕ್ಕೂ ಹೆಚ್ಚು ಜನರು ನಿರ್ವಸಿತರಾದರು ಮತ್ತು ಕೊಚ್ಚಿಕೊಂಡು ಹೋದರು. ಚಿತ್ರನಿರ್ಮಾಣಕ್ಕೆ ಬೇರೆಯದೊಂದು ರಾಷ್ಟ್ರಕ್ಕೆ ಪ್ರಯಾಣಿಸಿದಾಗ ಸುಮ್ಮನೇ ಅಲ್ಲಿಗೆ ಹೋಗಿ ಎಲ್ಲ ಸ್ಥಳಗಳಲ್ಲಿ ಭಾರವಾದ ಹೆಜ್ಜೆಗಳನ್ನು ಹಾಕಬಾರದೆನ್ನುವುದು ತಮ್ಮ ಅಭಿಪ್ರಾಯ. ನೀವು ಉಡುಗೊರೆಯೊಂದನ್ನು ತನ್ನಿ. ಇದು ಬೇರೆಯವರ ಮನೆಗೆ ಹೋದ ರೀತಿಯಲ್ಲಿ. ಬೇರೆಯವರ ಮನೆಗೆ ಹೋಗುವಾದ ವೈನ್ ಸೀಸೆ, ಹೂವಿನ ಗುಚ್ಛ ಅಥವಾ ಚಾಕಲೇಟ್ ಪೆಟ್ಟಿಗೆಯನ್ನು ನೀವು ತೆಗೆದುಕೊಂಡು ಹೋಗುವಂತೆ ಬೇರೆಯ ರಾಷ್ಟ್ರಕ್ಕೆ ತೆರಳುವಾಗ,ದೊಡ್ಡ ಪ್ರಮಾಣದಲ್ಲಿ ಅದೇ ರೀತಿಯ ವಸ್ತುಗಳನ್ನು ತಂದರೆ, ನಿಮ್ಮ ಚಿತ್ರನಿರ್ಮಾಣಕ್ಕೆ ಅವರು ಸಹಕರಿಸುತ್ತಾರೆ. ನೀವು ಹೇಗಾದರೂ ಮಾಡಿ ಅವರಿಗೆ ಸಹಾಯ ಮಾಡಿ,ಅಥವಾ ಅವರಿಗೆ ಉಡುಗೊರೆ ನೀಡಿ ಅಥವಾ ಯಾವುದೇ ರೀತಿಯಲ್ಲಾದರೂ ನೆರವು ನೀಡಿ ಆದ್ದರಿಂದ ಪ್ರವಾಹ ಪರಿಹಾರ ಸಾಮಗ್ರಿಗಳೊಂದಿಗೆ ನಾವು ಒಂದು ರೀತಿಯ ನೆರವು ಅಲ್ಲಿ ನೀಡಿದೆವು" [೧೧೨]

ಮನರಂಜನೆ ಸಮುದಾಯದ ಸದಸ್ಯರಿಗೆ ಮಾದಕವಸ್ತು ಚಟದ ಸಮಸ್ಯೆಗಳಿಂದ ದೂರಮಾಡಲು ಗಿಬ್ಸನ್ ವಿವೇಚನೆಯಿಂದ ನೆರವು ನೀಡಿಕೆಯಲ್ಲಿ ಪಾಲ್ಗೊಂಡರು. ರಾಬರ್ಟ್ ಡೌನಿ ಜೂ. ಕೊರ್‍‌ಕೊರಾನ್ ರಾಜ್ಯ ಬಂಧೀಖಾನೆಯಲ್ಲಿದ್ದಾಗ ಗಿಬ್ಸನ್ ತೆರೆಮರೆಯಲ್ಲಿ ಕೆಲಸ ಮಾಡಿ ಅವರಿಗೆ ನೆರವು ನೀಡಿದರು.[೧೧೩] ಹೋಲ್ ರಾಕರ್ ಕರ್ಟನಿ ಲೌವ್ ಹಾಲಿವುಡ್ ನಟ ತನ್ನನ್ನು ಮಾದಕವಸ್ತು ಚಟದಿಂದ ಮುಕ್ತಿಗೊಳಿಸುವ ವಿಮುಕ್ತಿ ಕೇಂದ್ರಕ್ಕೆ ಸೇರಿಸಿ ನೆರವಾಗುವ ಮೂಲಕ ತಮ್ಮನ್ನು ಉಳಿಸಿದರೆಂದು ಮೆಲ್ ಗಿಬ್ಸನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಗೀತಗಾರ್ತಿ ಪುನಃ ಮಾದಕವಸ್ತು ಬಳಸುತ್ತಿದ್ದಾಳೆಂದು ಕೇಳಿ ಲಾಸ್ ಏಂಜಲ್ಸ್ ಹೊಟೆಲ್‌ನಲ್ಲಿದ್ದ ಆಕೆಯ ನೆರವಿಗೆ ಧಾವಿಸಿದರು. ಲವ್ ನಂತರ ಸ್ಮರಿಸಿಕೊಂಡಿದ್ದಾರೆ,

"ಗಿಬ್ಸನ್ ಮುಖಕ್ಕೆ ಬಾಗಿಲನ್ನು ಬಡಿಯುವುದನ್ನು ನಾನು ಮುಂದುವರಿಸಿದ್ದೆ. ನನ್ನ ಜತೆ ಇಬ್ಬರು ಮಾದಕವಸ್ತು ಜನರಿದ್ದು, ಬಿಟ್ಟು ಹೋಗಲಿಲ್ಲ. ಆದ್ದರಿಂದ ನನ್ನನ್ನು ಮಾದಕವಸ್ತು ವಿಮುಕ್ತಿ ಕೇಂದ್ರಕ್ಕೆ ಸೇರಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಮೆಲ್ ಕಾರಣದಿಂದಾಗಿ ಆ ಮಾದಕವಸ್ತು ಜನರು ಮೆಲ್ ಜತೆ ಚೀಸ್‌ಬರ್ಗರ್ ಸೇವಿಸಲು ತೆರಳಿದರು.ಬಳಿಕ ವಾರನ್(ಬಾಯ್ಡ್)(ಮಾದಕವಸ್ತುವಿನಿಂದ ರಕ್ಷಣೆಯ ಮೇಲ್ವಿಚಾರಕ)ನನ್ನನ್ನು ವಿಮುಕ್ತಿ ಕೇಂದ್ರಕ್ಕೆ ಸೇರಿಸಲು ಸಾಧ್ಯವಾಯಿತು.[೧೧೪]

ಮಧ್ಯ ಅಮೆರಿಕದಲ್ಲಿ ಸ್ವಚ್ಛ ಮಳೆಯಾಧಾರಿತ ಅರಣ್ಯದ ಕೊನೆಯ ಪ್ರದೇಶವನ್ನು ರಕ್ಷಿಸಲು ಗಿಬ್ಸನ್ ಎಲ್ ಮಿರಾಡರ್ ಜಲಾನಯನ ಪ್ರದೇಶ ಯೋಜನೆಗೆ ಮತ್ತು "ಮಾಯಾನ್ ನಾಗರಿಕತೆಯ ಉಗಮ" ಸ್ಥಳದಲ್ಲಿ ಪುರಾತತ್ವ ಉತ್ಖನನಕ್ಕೆ ಆರ್ಥಿಕ ನೆರವು ನೀಡಲು $500,000 ದೇಣಿಗೆ ನೀಡಿದರು.[೧೧೫] ಸ್ಥಳೀಯ ಜನಸಂಖ್ಯೆಗೆ ದೇಣಿಗೆಗಳನ್ನು ನೀಡುವುದಕ್ಕೆ ವ್ಯವಸ್ಥೆ ಮಾಡಲು ಜುಲೈ 2007ರಲ್ಲಿ ಗಿಬ್ಸನ್ ಪುನಃ ಮಧ್ಯ ಅಮೆರಿಕಕ್ಕೆ ಭೇಟಿ ನೀಡಿದರು. ಕೋಸ್ಟಾರಿಕಾದ ಅಧ್ಯಕ್ಷ ಆಸ್ಕರ್ ಅರಿಯಾಸ್ ಅವರನ್ನು ಭೇಟಿ ಮಾಡಿದ ಗಿಬ್ಸನ್, "ನಿಧಿಗಳನ್ನು ಯಾವ ರೀತಿ ಕಳಿಸಬೇಕೆಂಬ" ಬಗ್ಗೆ ಚರ್ಚಿಸಿದರು.[೧೧೬] ಅದೇ ತಿಂಗಳಲ್ಲಿ ಗಿಬ್ಸನ್,ನ್ಯೂ ಮೆಕ್ಸಿಕೊದ ಗ್ಯಾಲಪ್‌ ಪ್ರದೇಶದ ಟೈರ್ ಮರುಸಂಸ್ಕರಣೆ ಕಾರ್ಖಾನೆಗಾಗಿ ಗ್ರೀನ್ ರಬ್ಬರ್ ಗ್ಲೋಬಲ್ ಎಂಬ ಮಲೇಶಿಯದ ಕಂಪೆನಿಗೆ ಆರ್ಥಿಕ ನೆರವು ನೀಡುಪ ಭರವಸೆ ನೀಡಿದರು.[೧೧೭] ಸೆಪ್ಟೆಂಬರ್ 2007ರಲ್ಲಿ ಸಿಂಗಪುರಕ್ಕೆ ವ್ಯವಹಾರ ಪ್ರವಾಸದಲ್ಲಿದ್ದ ಅವರು ದೀರ್ಘಕಾಲದ,ಪ್ರಾಣಾಂತಿಕ ಕಾಯಿಲೆಗಳುಳ್ಳ ಮಕ್ಕಳಿಗಾಗಿ ಸ್ಥಳೀಯ ಧರ್ಮದತ್ತಿ ಸಂಸ್ಥೆಗೆ ದೇಣಿಗೆ ನೀಡಿದರು.[೧೧೮] ಫಿಜಿಯ ಮೂತ್ರಪಿಂಡ ಪ್ರತಿಷ್ಠಾನಕ್ಕೆ ಸೆಪ್ಟೆಂಬರ್ 2008ರಲ್ಲಿ ಗಿಬ್ಸನ್ ದಂಪತಿ $50,000 ದೇಣಿಗೆ ನೀಡಿದರು. ಪುತ್ರ ಮೈಲೊ ಈ ಚೆಕ್ಕನ್ನು ತಲುಪಿಸಿದರು.ತಾನು ಫಿಜಿಯನ್ನು ಪ್ರೀತಿಸುವುದಾಗಿ ಮತ್ತು ಸಂಸ್ಥೆಗೆ ನೆರವು ನೀಡಲು ಸಾಧ್ಯವಾಗಿದ್ದಕ್ಕಾಗಿ ತಮ್ಮ ಕುಟುಂಬ ಆಭಾರಿಯಾಗಿದ್ದಾಗಿ ಅವರ ಪುತ್ರ ತಿಳಿಸಿದರು.[೧೧೯]

ಚಲನಚಿತ್ರಗಳ ಸೂಚಿ ಮತ್ತು ಪ್ರಶಸ್ತಿಗಳು

ನಟ
ವರ್ಷಚಲನಚಿತ್ರಪಾತ್ರಟಿಪ್ಪಣಿಗಳು
1977ಸಮ್ಮರ್ ಸಿಟಿಸ್ಕಾಲಪ್
ಐ ನೆವರ್ ಪ್ರಾಮಿಸ್ಡ್ ಯು ಎ ರೋಸ್ ಗಾರ್ಡನ್ಬೇಸ್‌ಬಾಲ್ ಆಟಗಾರ
1979ಮ್ಯಾಡ್ ಮ್ಯಾಕ್ಸ್ಮ್ಯಾಡ್‌ ಮ್ಯಾಕ್ಸ್ ರೊಕಾಟನ್‌ಸ್ಕೈ
ಟಿಮ್ಟಿಮ್ಪ್ರಮುಖ ಪಾತ್ರದಲ್ಲಿ ಆಸ್ಟ್ರೇಲಿಯ ಚಲನಚಿತ್ರ ಸಂಸ್ಥೆಯ ಶ್ರೇಷ್ಠ ನಟ ಪ್ರಶಸ್ತಿ
1980ದಿ ಚೇನ್ ರಿಯಾಕ್ಷನ್ಗಡ್ಡಧಾರಿ ಮೆಕಾನಿಕ್
1981ಮ್ಯಾಡ್ ಮ್ಯಾಕ್ಸ್ 2ಮ್ಯಾಕ್ಸ್ ರೊಕಾಟಾನ್‌ಸ್ಕಿ

ಅಕಾ ದಿ ರೋಡ್ ವಾರಿಯರ್
ನಾಮನಿರ್ದೇಶಿತ – ಅತ್ಯುತ್ತಮ ನಟನಾಗಿ ಸ್ಯಾಟರ್ನ್‌ ಪ್ರಶಸ್ತಿ‌

ಗ್ಯಾಲ್ಲಿಪೊಲಿಫ್ರ್ಯಾಂಕ್ ಡುನ್ನೆಪ್ರಮುಖ ಪಾತ್ರದಲ್ಲಿ ಆಸ್ಟ್ರೇಲಿಯ ಚಲನಚಿತ್ರ ಸಂಸ್ಥೆಯ ಶ್ರೇಷ್ಠ ನಟ ಪ್ರಶಸ್ತಿ
1982ದಿ ಇಯರ್ ಆಫ್ ಲೀವಿಂಗ್ ಡೇಂಜರಸ್ಲಿಗೈ ಹ್ಯಾಮಿಲ್ಟನ್ನಾಮನಿರ್ದೇಶಿತ — ಪ್ರಮುಖ ಪಾತ್ರದಲ್ಲಿ ಆಸ್ಟ್ರೇಲಿಯ ಚಲನಚಿತ್ರ ಸಂಸ್ಥೆಯ ಶ್ರೇಷ್ಠ ನಟ ಪ್ರಶಸ್ತಿ
ಅಟ್ಯಾಕ್ ಫೋರ್ಸ್ Zಕ್ಯಾಪ್ಟನ್ P.G. (ಪಾಲ್)ಕೆಲ್ಲಿ
1984ಮಿಸೆಸ್. ಸೋಫೆಲ್ಎಡ್ ಬಿಡಲ್
ದಿ ರಿವರ್ಟಾಮ್ ಗಾರ್ವೆ
ದಿ ಬೌಂಟಿಫ್ಲೆಚರ್ ಕ್ರಿಶ್ಚಿಯನ್
1985ಮ್ಯಾಡ್ ಮ್ಯಾಕ್ಸ್ ಬಿಯಾಂಡ್ ಥಂಡರ್‌ಡೋಮ್ಮ್ಯಾಡ್ ಮ್ಯಾಕ್ಸ್ಮ್ಯಾಕ್ಸ್ ರೊಕಾಟಾನ್ಸ್ಕಿ
1987ಲೆಥಾಲ್ ವೆಪನ್ಸಾರ್ಜೆಂಟ್ ಮಾರ್ಟಿನ್ ರಿಗ್ಸ್
1988ಟೆಕಿಲಾ ಸನ್‌ರೈಸ್ಡೇಲ್ "ಮ್ಯಾಕ್" ಮೆಕ್ಯುಸಿಕ್
1989ಲೆಥಾಲ್ ವೆಪನ್ 2ಸಾರ್ಜೆಂಟ್ ಮಾರ್ಟಿನ್ ರಿಗ್ಸ್
1990ಹ್ಯಾಮ್ಲೆಟ್‌ಪ್ರಿನ್ಸ್ ಹ್ಯಾಮ್ಲೆಟ್
ಏರ್ ಅಮೆರಿಕಜೀನ್ ರ‌್ಯಾಕ್
ಬರ್ಡ್ ಆನ್ ಎ ವೈರ್ರಿಕ್ ಜಾರ್ಮಿನ್
1992ಫಾರೆವರ್ ಯಂಗ್ಕ್ಯಾ. ಡೇನಿಯಲ್ ಮೆಕಾರ್ಮಿಕ್
ಲೆಥಾಲ್ ವೆಪನ್ 3ಸಾರ್ಜೆಂಟ್ ಮಾರ್ಟಿನ್ ರಿಗ್ಸ್ಅತ್ಯುತ್ತಮ ಸಾಹಸ ಭಾಗಕ್ಕಾಗಿ MTV ಮೂವಿ ಪ್ರಶಸ್ತಿ
ತೆರೆಯ ಮೇಲೆ ಅತ್ಯುತ್ತಮ ಜೋಡಿಗೆ MTV ಮೂವಿ ಪ್ರಶಸ್ತಿ ಜತೆ ಡ್ಯಾನಿ ಗ್ಲೋವರ್
ನಾಮನಿರ್ದೇಶಿತ — ಅತ್ಯುತ್ತಮ ಚುಂಬನಕ್ಕಾಗಿ MTV ಮೂವಿ ಪ್ರಶಸ್ತಿ ಜತೆ ರೇನೆ ರುಸೊ
ನಾಮನಿರ್ದೇಶಿತ — ಅತ್ಯಂತ ಅಪೇಕ್ಷಣೀಯ ಪುರುಷನಾಗಿ MTV ಮೂವಿ ಪ್ರಶಸ್ತಿ
1993ದಿ ಮ್ಯಾನ್ ವಿತೌಟ್ ಎ ಫೇಸ್ಜಸ್ಟಿನ್ ಮೆಕ್‌ಲಿಯೋಡ್
ದಿ ಚಿಲ್ಲಿ ಕಾನ್ ಕಾರ್ನೆ ಕ್ಲಬ್ಮೆಲ್
1994ಮೇವರಿಕ್ಬ್ರೆಟ್ ಮೇವರಿಕ್
1995ಪೊಕಾಹೊಂಟಾಸ್ಜಾನ್‌ ಸ್ಮಿತ್‌ಧ್ವನಿ
ಬ್ರೇವ್‌ಹಾರ್ಟ್ವಿಲಿಯಂ ವ್ಯಾಲೇಸ್ನಾಮನಿರ್ದೇಶಿತ – MTV ಮೂವೀ ಪ್ರಶಸ್ತಿ‌ (ಅತ್ಯುತ್ತಮ ನಟನೆ - ಪುರುಷ)
ನಾಮನಿರ್ದೇಶಿತ — MTV ಮೂವಿ ಪ್ರಶಸ್ತಿ ಅತ್ಯಂತ ಅಪೇಕ್ಷಣೀಯ ಪುರುಷ
1996ರಾನ್ಸಮ್ಟಾಮ್ ಮುಲ್ಲನ್ನಾಮನಿರ್ದೇಶಿತ – ಅತ್ಯುತ್ತಮ ನಟನೆ ಚಲನಚಿತ್ರ ಕಥೆಗಾಗಿ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ
1997FairyTale: A True Storyಫ್ರಾನ್ಸ್ ತಂದೆ
ಕನ್‌ಸ್ಪೈರೆಸಿ ಥಿಯರಿಜೆರಿ ಫ್ಲೆಚರ್ಬ್ಲಾಕ್‌ಬಸ್ಟರ್ ಮನರಂಜನೆ ಪ್ರಶಸ್ತಿಗಳು- ಮೆಚ್ಚಿನ ನಟ ಸಸ್ಪೆನ್ಸ್
ಫಾದರ್ಸ್ ಡೆಸ್ಕಾಟ್ ದಿ ಬಾಡಿ ಪಿಯರ್ಸರ್
1998ಲೆಥಾಲ್ ವೆಪನ್ 4ಸಾರ್ಜೆಂಟ್ ಮಾರ್ಟಿನ್ ರಿಗ್ಸ್ನಾಮನಿರ್ದೇಶಿತ — MTV ಮೂವಿ ಪ್ರಶಸ್ತಿ ಅತ್ಯುತ್ತಮ ಸಾಹಸ ಭಾಗ ಜತೆಡ್ಯಾನಿ ಗ್ಲೋವರ್
1999ಪೇಬ್ಯಾಕ್ಪೋರ್ಟರ್
2000ವಾಟ್ ವುಮನ್ ವಾಂಟ್ನಿಕ್ ಮಾರ್ಷಲ್ನಾಮನಿರ್ದೇಶಿತ — ಅತ್ಯುತ್ತಮ ನಟನೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ - ಮೋಷನ್ ಪಿಕ್ಚರ್ ಸಂಗೀತ ಅಥವಾ ಹಾಸ್ಯ
ದಿ ಪ್ಯಾಟ್ರಿಯಟ್ಬೆಂಜಮಿನ್ ಮಾರ್ಟಿನ್ಬ್ಲಾಕ್‌ಬಸ್ಟರ್ ಮನರಂಜನೆ ಪ್ರಶಸ್ತಿಗಳು : ಮೆಚ್ಚಿನ ನಟ — ಕಥೆ
ಜನರ ಆಯ್ಕೆ ಪ್ರಶಸ್ತಿಗಳು — ಕಥೆಯೊಂದರಲ್ಲಿ ಮೆಚ್ಚಿನ ಚಲನಚಿತ್ರ ತಾರೆ
ನಾಮನಿರ್ದೇಶಿತ – MTV ಮೂವೀ ಪ್ರಶಸ್ತಿ‌ (ಅತ್ಯುತ್ತಮ ನಟನೆ - ಪುರುಷ)
ಚಿಕನ್ ರನ್ರಾಕಿಧ್ವನಿ
ದಿ ಮಿಲಿಯನ್ ಡಾಲರ್ ಹೊಟೆಲ್ಡಿಟೆಕ್ಟಿವ್ ಸ್ಕಿನ್ನರ್
2002ವಿ ವರ್ ಸೋಲ್ಜರ್ಸ್ಲೆಫ್ಟಿನೆಂಟ್ ಕರ್ನಲ್ ಹಾಲ್ ಮೂರ್
ಚಿಹ್ನೆಗಳುರೆವ್. ಗ್ರಾಹಮ್ ಹೆಸ್
2003ದಿ ಸಿಂಗಿಂಗ್ ಡಿಟೆಕ್ಟಿವ್ಡಾ.ಗಿಬ್ಬನ್
2004ಪಾಪರಾಜ್ಜಿಕೋಪ ನಿರ್ವಹಣೆ ಚಿಕಿತ್ಸೆ ರೋಗಿ
2006ಹು ಕಿಲ್ಲಡ್ ದಿ ಎಲೆಕ್ಟ್ರಿಕ್ ಕಾರ್?ನಿಜಜೀವನದ ಪಾತ್ರ
2010ಎಡ್ಜ್ ಆಫ್ ಡಾರ್ಕ್‌ನೆಸ್ಥಾಮಸ್ ಕ್ರೇವನ್
2011ದಿ ಬೇವರ್ವಾಲ್ಟರ್ ಬ್ಲಾಕ್ನಿರ್ಮಾಣ-ನಂತರದ ಹಂತ
Director
ವರ್ಷಚಲನಚಿತ್ರಟಿಪ್ಪಣಿಗಳು
1993ದಿ ಮ್ಯಾನ್ ವಿತೌಟ್ ಎ ಫೇಸ್
1995ಬ್ರೇವ್‌ಹಾರ್ಟ್ಅತ್ಯುತ್ತಮ ನಿರ್ದೇಶನಕ್ಕೆ ಅಕಾಡೆಮಿ ಪ್ರಶಸ್ತಿ
ಅತ್ಯುತ್ತಮ ನಿರ್ದೇಶನಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ
ಅತ್ಯುತ್ತಮ ನಿರ್ದೇಶನಕ್ಕೆ ಬ್ರಾಡ್‌ಕಾಸ್ಟ್ ಚಿತ್ರ ವಿಮರ್ಶಕರ ಒಕ್ಕೂಟದ ಪ್ರಶಸ್ತಿ
ಚಿತ್ರನಿರ್ಮಾಣದಲ್ಲಿ ವಿಶೇಷ ಸಾಧನೆ ಪರಾಮರ್ಶೆ ರಾಷ್ಟ್ರೀಯ ಮಂಡಳಿ
ಶೋವೆಸ್ಟ್ ಪ್ರಶಸ್ತಿ: ವರ್ಷದ ನಿರ್ದೇಶಕ
ನಾಮನಿರ್ದೇಶಿತ — ಅತ್ಯುತ್ತಮ ನಿರ್ದೇಶನಕ್ಕೆ BAFTA ಪ್ರಶಸ್ತಿ
ನಾಮನಿರ್ದೇಶಿತ — ನಿರ್ದೇಶಕರ ಗಿಲ್ಡ್‌ನ ಅಮೆರಿಕ ಪ್ರಶಸ್ತಿ
2004ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್ಅತ್ಯುತ್ತಮ ನಿರ್ದೇಶನಕ್ಕೆ ಸೆಟಲೈಟ್ ಪ್ರಶಸ್ತಿ
2006ಅಪೊಕ್ಯಾಲಿಪ್ಟೊ
ನಿರ್ಮಾಪಕ
ವರ್ಷಚಲನಚಿತ್ರಟಿಪ್ಪಣಿಗಳು
1992ಫಾರೆವರ್ ಯಂಗ್ಕಾರ್ಯನಿರ್ವಾಹಕ ನಿರ್ಮಾಪಕ-ಅನ್ ಕ್ರೆಡಿಟೆಡ್
1995ಬ್ರೇವ್‌ಹಾರ್ಟ್ಅಕಾಡೆಮಿ ಪ್ರಶಸ್ತಿ‌ (ಅತ್ಯುತ್ತಮ ಚಲನಚಿತ್ರ)
ನಾಮನಿರ್ದೇಶಿತ — ಇಂಗ್ಲೀಷ್ ಭಾಷೆಯಲ್ಲಿಲ್ಲದ ಅತ್ಯುತ್ತಮ ಚಿತ್ರಕ್ಕೆ BAFTA ಪ್ರಶಸ್ತಿ
2000ದಿ ತ್ರೀ ಸ್ಟೂಜಸ್ಕಿರುತೆರೆ
ಕಾರ್ಯನಿರ್ವಾಹಕ ನಿರ್ಮಾಪಕ
2001ಇನ್‌ವಿನ್ಸಿಬಲ್ಕಿರುತೆರೆ
ಕಾರ್ಯನಿರ್ವಾಹಕ ನಿರ್ಮಾಪಕ
2003ಫ್ಯಾಮಿಲಿ ಕರ್ಸ್ಕಿರುತೆರೆ
ಕಾರ್ಯನಿರ್ವಾಹಕ ನಿರ್ಮಾಪಕ
ದಿ ಸಿಂಗಿಂಗ್ ಡಿಟೆಕ್ಟಿವ್
2004ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್ಜನರ ಆಯ್ಕೆ ಪ್ರಶಸ್ತಿಗಳು — ಮೆಚ್ಚಿನ ಚಲನಚಿತ್ರ ರೂಪಕ
ಪಾಪರಾಜ್ಜಿ
2005Leonard Cohen: I'm Your Manಕಿರುತೆರೆ
ಕಾರ್ಯನಿರ್ವಾಹಕ ನಿರ್ಮಾಪಕ
2006ಅಪೋಕ್ಯಾಲಿಪ್ಟೊನಾಮನಿರ್ದೇಶಿತ — ಅತ್ಯುತ್ತಮ ವಿದೇಶಿ ಭಾಷೆ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ
ನಾಮನಿರ್ದೇಶಿತ — ಇಂಗ್ಲೀಷ್ ಭಾಷೆಯಲ್ಲಿಲ್ಲದ ಅತ್ಯುತ್ತಮ ಚಿತ್ರಕ್ಕೆ BAFTA ಪ್ರಶಸ್ತಿ
ನಾಮನಿರ್ದೇಶಿತ — ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರಕ್ಕೆ ಬ್ರಾಡ್‌ಕಾಸ್ಟ್ ಚಲನಚಿತ್ರ ವಿಮರ್ಶಕರ ಒಕ್ಕೂಟದ ಪ್ರಶಸ್ತಿ
2008ಅನದರ್ ಡೇ ಇನ್ ಪ್ಯಾರಡೈಸ್ಕಿರುತೆರೆ
ಚಿತ್ರಕಥೆಗಾರ
ವರ್ಷಚಲನಚಿತ್ರಟಿಪ್ಪಣಿಗಳು
2004ದಿ ಪ್ಯಾಶನ್ ಆಫ್ ದಿ ಕ್ರೈಸ್ಟ್ಚಿತ್ರಕಥೆ
2006ಅಪೋಕ್ಯಾಲಿಪ್ಟೊ

ಇತರೆ ಪ್ರಶಸ್ತಿಗಳು ಮತ್ತು ಸಾಧನೆಗಳು

  • ಜನರ ಆಯ್ಕೆ ಪ್ರಶಸ್ತಿಗಳು: ಮೆಚ್ಚಿನ ಚಲನಚಿತ್ರ ನಟ (1990, 1996, 2000, 2002, 2003)
  • ಶೋವೆಸ್ಟ್ ಪ್ರಶಸ್ತಿ: ವರ್ಷದ ಪುರುಷ ತಾರೆ (1993)
  • ಅಮೆರಿಕನ್ ಸಿನೆಮಾಥಿಕ್ ಗಾಲಾ ಗೌರವ: ಅಮೆರಿಕನ್ ಸಿನೆಮಾಥಿಕ್ ಪ್ರಶಸ್ತಿ(1995)
  • ಹೇಸ್ಟಿ ಪಡ್ಡಿಂಗ್ ಥಿಯೇಟ್ರಿಕಲ್ಸ್: ವರ್ಷದ ಪುರುಷ(1997)
  • ಆಸ್ಟ್ರೇಲಿಯನ್ ಚಿತ್ರನಿರ್ಮಾಣ ಸಂಸ್ಥೆ: ಗ್ಲೋಬಲ್ ಸಾಧನೆ ಪ್ರಶಸ್ತಿ(2002)
  • ಗೌರವ ಡಾಕ್ಟರೇಟ್ ಪುರಸ್ಕೃತರು ಮತ್ತು ಪದವಿಪೂರ್ವ ಆರಂಭದ ಭಾಷಣಕಾರ, ಲೋಯೊಲಾ ಮೆರಿಮೌಂಟ್ ವಿಶ್ವವಿದ್ಯಾಲಯ (2003)
  • ವಿಶ್ವದ ಅತ್ಯಂತ ಪ್ರಭಾವಶಾಲಿ ಪ್ರಖ್ಯಾತ ವ್ಯಕ್ತಿ-US ಉದ್ಯಮ ನಿಯತಕಾಲಿಕೆ ಫೋರ್ಬ್ಸ್ (2004)
  • ಹಾಲಿವುಡ್ ರಿಪೋರ್ಟರ್ ವರ್ಷದ ಪರಿವರ್ತನೆಗಾರ (2004)
  • ಕಲೆಗಳ ನಿರ್ವಹಣೆಯಲ್ಲಿ ಗೌರವ ಫೆಲೋಶಿಪ್‌ [[ಲಿಮ್ಕಾಕ್‌ವಿಂಗ್ ವಿಶ್ವವಿದ್ಯಾನಿಲಯ‌|ಲಿಮ್ಕಾಕ್‌ವಿಂಗ್ ವಿಶ್ವವಿದ್ಯಾನಿಲಯ‌ ]](2007)
  • ವಿಶ್ವ ಸಿನೆಮಾಗೆ ಮಹೋನ್ನತ ಕೊಡುಗೆಐರಿಷ್ ಚಿತ್ರ ಮತ್ತು ಕಿರುತೆರೆ ಪ್ರಶಸ್ತಿಗಳು (2008)[೧೨೦]

ಆಕರಗಳು

ಗ್ರಂಥಸೂಚಿ

  • McCarty, John (2001). The Films of Mel Gibson. New York: Citadel. ISBN 0806522267. {{cite book}}: Unknown parameter |month= ignored (help)
  • Clarkson, Wensley (2004). Mel Gibson: Man on a Mission. London: John Blake. ISBN 1-85782-537-3. {{cite book}}: Unknown parameter |month= ignored (help)

ಬಾಹ್ಯ ಕೊಂಡಿಗಳು