ಎಬಿಒ ರಕ್ತ ಗುಂಪು ವ್ಯವಸ್ಥೆ

ಎಬಿಒ ರಕ್ತ ಗುಂಪು ವ್ಯವಸ್ಥೆಯು ಮಾನವನ ರಕ್ತ ಪೂರಣದಲ್ಲಿನ ಒಂದು ಅತಿ ಮುಖ್ಯವಾದ ರಕ್ತ ವಿಧದ ವ್ಯವಸ್ಥೆ (ಅಥವಾ ರಕ್ತ ಗುಂಪಿನ ವ್ಯವಸ್ಥೆ). ಇದಕ್ಕೆ ಸಂಬಂಧಿಸಿದ ಆ್ಯಂಟಿ-ಎ ಪ್ರತಿಕಾಯಗಳು ಮತ್ತು ಆ್ಯಂಟಿ-ಬಿ ಪ್ರತಿಕಾಯಗಳು ಹೆಚ್ಚಾಗಿ ಐ‌ಜಿಎಮ್ ಪ್ರತಿಕಾಯಗಳಾಗಿದ್ದು, ಇವು ಸಾಮಾನ್ಯವಾಗಿ ಆಹಾರ, ಬ್ಯಾಕ್ಟೀರಿಯಾ ಮತ್ತು ವೈರಸ್ ಇವುಗಳ ವಾತಾವರಣದ ವ್ಯತಿರಿಕ್ತ ಪರಿಣಾಮದಿಂದಾಗಿ ಮೊದಲ ವರ್ಷದ ಜೀವನದಲ್ಲಿ ಉತ್ಪತ್ತಿಯಾಗುತ್ತವೆ. ಎಬಿಒ ರಕ್ತ ವಿಧವು ಕೆಲವು ಪ್ರಾಣಿಗಳಲ್ಲೂ ಗೋಚರಿಸುತ್ತವೆ. ಉದಾ: ಮಂಗಗಳು ಅವುಗಳಲ್ಲೂ ಹೆಚ್ಚಾಗಿ ಚಿಂಪಾಂಜಿಗಳು, ಬೋನೋಬೊಗಳು ಮತ್ತು ಗೊರಿಲ್ಲಾ.[೧]

ಕೆಂಪು ರಕ್ತಕಣದಲ್ಲಿ ಎಬಿಒ ರಕ್ತದಗುಂಪಿನ ಪ್ರತಿಜನಕ ಇರುತ್ತದೆ ಮತ್ತು ಐಜಿಎಮ್ ಪ್ರತಿಕಾಯ ಸೀರಮ್‍ನಲ್ಲಿರುತ್ತದೆ

ಎ, ಬಿ, ಓ ಪ್ರತಿಕಾಯಗಳನ್ನು ಆರು ವಾರದ ಭ್ರೂಣದಲ್ಲೂ ಪತ್ತೆ ಹಚ್ಚಬಹುದಾದರೂ, ಇವುಗಳು ಪೂರ್ಣ ಪ್ರಮಾಣದಲ್ಲಿ ಹೊರಹೊಮ್ಮಲು ಮಗುವಿಗೆ ಕನಿಷ್ಠ ಮೂರು ವರ್ಷಗಳಾದರೂ ಆಗಬೇಕು. ಈ ಪ್ರತಿಕಾಯಗಳು ರಕ್ತದಲ್ಲಿ ಮಾತ್ರವಲ್ಲದೆ ನಮ್ಮ ದೇಹದ ಇತರ ಅಂಗಾಂಶಗಳನ್ನೂ ಪಸರಿಸಿರುತ್ತವೆ, ಮತ್ತು ನಮ್ಮ ದೇಹದಲ್ಲಿರುವ ಗ್ರಂಥಿಗಳು ಸ್ರವಿಸುವ ಎಲ್ಲಾ ದ್ರವಗಳಲ್ಲಿಯೂ ಈ ಪ್ರತಿಕಾಯಗಳಿರುತ್ತವೆ. ನಮ್ಮ ದೇಹದಲ್ಲಿನ ಎಲ್ಲಾ ಜೀವಕೋಶಗಳ ಮೇಲೂ ಇವುಗಳು ಇರುವುದರಿಂದ, ರಕ್ತಪೂರಣೆಯಲ್ಲಿ ಹಾಗೂ ಅಂಗಾಂಗಗಳ ಕಸಿ ಮಾಡುವಾಗ, ಈ ಪದ್ಧತಿ ಪ್ರಮುಖ ಪಾತ್ರ ವಹಿಸುತ್ತದೆ.

ಸಂಶೋಧನೆಗಳ ಇತಿಹಾಸ

ಎಬಿಒ ರಕ್ತ ಗುಂಪಿನ ವ್ಯವಸ್ಥೆಯನ್ನು ಆಸ್ಟ್ರಿಯಾದ ಕಾರ್ಲ್ ಲಾಂಡ್‍ಸ್ಟೈನರ್ ಎಂಬ ವಿಜ್ಞಾನಿಯು ಕಂಡುಹಿಡಿದನೆಂದು ತಿಳಿಯಲಾಗಿದೆ. ಅವನು 1900 ರಲ್ಲಿ ಮೂರು ಬೇರೆ ವಿಧಧ ರಕ್ತ ವಿಧಗಳನ್ನು ಕಂಡುಹಿಡಿದನು.[೨] ತನ್ನ ಈ ಕಾರ್ಯಕ್ಕಾಗಿ 1930 ರಲ್ಲಿ ಅವನು ಜೀವಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದನು. ಆ ಸಮಯದಲ್ಲಿ ಸಂವಹನದ ಕೊರತೆಯಿಂದಾಗಿ, ಝೆಕೊಸ್ಲಾವಾಕಿಯಾದ ಸೀರಮ್ ಶಾಸ್ತ್ರಜ್ಞ ಜಾನ್ ಜಾನ್‍ಸ್ಕಿಯು ಮಾನವ ರಕ್ತವನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸುವುದರಲ್ಲಿ ಮೊದಲಿಗನಾಗಿದ್ದನು,[೩] ಆದರೆ ಲಾಂಡ್‍ಸ್ಟೈನರ್‌ನ ಸ್ವತಂತ್ರ ಸಂಶೋಧನೆಯು ವಿಜ್ಞಾನ ಜಗತ್ತಿನಲ್ಲಿ ಮನ್ನಣೆಯನ್ನು ಪಡೆಯಿತು. ಅದೇ ಸಮಯದಲ್ಲಿ ಜಾನ್‍ಸ್ಕಿಯ ಸಂಶೋಧನೆಯು ಕತ್ತಲೆಯಲ್ಲೇ ಉಳಿಯಿತು. ಈಗಲೂ ಕೂಡ ರಷ್ಯ ಮತ್ತು ಯುಎಸ್‌ಎಸ್‌ಆರ್‌ನ ಹಲವು ರಾಜ್ಯಗಳಲ್ಲಿ ಜಾನ್‍ಸ್ಕಿಯ ವಿಂಗಡಣೆಯನ್ನು ಬಳಸುತ್ತಾರೆ. ಅಮೇರಿಕದಲ್ಲಿ ಮೊಸ್ ಎಂಬುವವನು 1910 ರಲ್ಲಿ ತನ್ನ ಸಂಶೋಧನೆಯನ್ನು (ಒಂದೇ ರೀತಿಯ) ಪ್ರಕಟಿಸಿದನು.[೪]

ಲಾಂಡ್‍ಸ್ಟೈನರ್ ಎ ಬಿ ಮತ್ತು ಒ ಕಣಗಳನ್ನು ವರ್ಣಿಸಿದನು; ಎಬಿ ಎಂಬ ನಾಲ್ಕನೆ ವಿಧವನ್ನು ಡಿಕಾಸ್ಟ್ರೆಲ್ಲೊ ಮತ್ತು ಸ್ಟುರ್ಲಿ 1902 ರಲ್ಲಿ ಕಂಡುಹಿಡಿದರು.[೫] ಲುಡ್ವಿಕ್ ಹರ್ಜಫೆಲ್ಡ್ ಮತ್ತು ಇ ವೊನ್ ದುಂಗರ್ನ್ ಎಂಬುವವರು ಎಬಿಒ ರಕ್ತ ಗುಂಪಿನ ಆನುವಂಶಿಕತೆಯ ಬಗ್ಗೆ 191೦-೧೧ ರಲ್ಲಿ ಕಂಡುಹಿಡಿದರು. ಇವರು ೧924 ರಲ್ಲಿ ಫಿಲಿಕ್ಸ್ ಬರ್ನ್‌ಸ್ಟೈನ್ ಜೊತೆಗೂಡಿ ಅಪೂರ್ವ ಸ್ಥಾನದ ದ್ವಿಗುಣ ಅನುವಂಶಿಕತೆಯ ಸರಿಯಾದ ರಕ್ತ ಗುಂಪಿನ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು.[೬] ಇಂಗ್ಲೆಂಡಿನ ವಾಟ್ಕಿನ್ಸ್ ಮತ್ತು ಮೊರ್ಗನ್ ಎಂಬುವವರು ಎಬಿಒ ಎಪಿಟೋಪ್‍ಗಳು ಸಕ್ಕರೆಯಿಂದ ದೊರೆಯುತ್ತವೆ, ಮುಖ್ಯವಾಗಿ ಎ ರಕ್ತ ವಿಧಕ್ಕೆ ಎನ್-ಎಸಿಟೈಲ್‌ಗ್ಯಾಲಕ್ಟೊಸಮೈನ್ ಮತ್ತು ಬಿ ರಕ್ತ ವಿಧಕ್ಕೆ ಗ್ಯಾಲಕ್ಟೋಸ್ ಎಂಬುದನ್ನು ಕಂಡುಹಿಡಿದರು.[೭][೮][೯] ನಂತರ ಬಿಡುಗಡೆಯಾದ ಬಹಳ ಕೃತಿಗಳು, ಎಬಿಎಚ್ ವಸ್ತುಗಳು ಗ್ಲೈಕೋಸ್ಫಿಂಗೋಲಿಪಿಡ್ಸ್‌ಗಳಿಗೆ ಸಂಬಂಧಿಸಿರುತ್ತವೆ ಎಂದು ಪ್ರತಿಪಾದಿಸಿದವು. ಲೇನ್‌ನ ಗುಂಪು (1988) 3 ನೇ ಗುಂಪಿನ ಪ್ರೋಟೀನ್‍ಗಳು ಉದ್ದದ ಪಾಲಿಲ್ಯಾಕ್ಟೊಸ್‍ಅಮೈನ್ ಸರಪಳಿಗೆ ಯಥಾವತ್ತಾಗಿರುತ್ತವೆ ಮತ್ತು[೧೦] ಇವು ಪ್ರಮುಖ ಎಬಿಎಚ್ ದ್ರವ್ಯದ ಪದಾರ್ಥಗಳನ್ನು ಒಳಗೊಂಡಿರುತ್ತವೆ ಎಂಬುದನ್ನು ಕಂಡುಹಿಡಿದರು.[೧೧] ನಂತರ, ಯಾಮಮೊಟೊನ ಸಂಸ್ಥೆಯು, ಎ, ಬಿ ಮತ್ತು ಒ ಎಪಿಟೋಪ್‌ಗಳನ್ನು ನೀಡುವ ನಿಖರವಾದ ಗ್ಲೈಕೊಸಿಲ್ ಟ್ರಾನ್ಸ್‌ಫರೇಸ್‌ ಗುಂಪನ್ನು ತೋರಿಸಿತು.[೧೨]

ಎಬಿಒ ಪ್ರತಿಜನಕಗಳು

ಎಬಿಒ ರಕ್ತದ ಗುಂಪನ್ನು ನಿರ್ಧರಿಸುವ ಕಾರ್ಬೊಹೈಡ್ರೇಟ್‌ನ ಸರಪಳಿಗಳನ್ನು ರೇಖಾಚಿತ್ರವು ತೋರಿಸುತ್ತದೆ

ಎಚ್ ಪ್ರತಿಜನಕವು ಎಬಿಒ ರಕ್ತ ಗುಂಪಿನ ಪ್ರತಿಜನಕದ ಒಂದು ಅತಿ ಮುಖ್ಯವಾದ ಮುನ್ಸೂಚಕ. ಎಚ್ ಸ್ಥಾನವು ವರ್ಣತಂತು 19 ರಲ್ಲಿ ಕಂಡುಬರುತ್ತದೆ. ಇದು 5 ಕೆಬಿ ಗೂ ಮೇಲ್ಪಟ್ಟು ಜೀನೋಮಿಕ್ ಡಿಎನ್‌ಎಯನ್ನು ದಾಟಿ ಹೋಗುವ 3 ಎಕ್ಸಾನ್‍ಗಳನ್ನು ಒಳಗೊಂಡಿರುತ್ತದೆ, ಮತ್ತು ಇದು ಆರ್‌ಬಿಸಿಯಲ್ಲಿ ಎಚ್ ಪ್ರತಿಜನಕವನ್ನು ಉತ್ಪತ್ತಿ ಮಾಡುವ ಫ್ಯೂಕೋಸಿಲ್‌ಟ್ರಾನ್ಸ್‌ಫರೇಸ್ ಅನ್ನು ಒಳಗೊಂಡಿರುತ್ತದೆ. ಎಚ್ ಪ್ರತಿಜನಕವು ಹೈಡ್ರೊಜನ್ ಮತ್ತು ಆಮ್ಲಜನಕಗಳ ಸಂಯುಕ್ತದ ಅನುಕ್ರಮವಾಗಿದ್ದು ಅದರಲ್ಲೂ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಪ್ರೋಟೀನ್‍ಗಳಿಗೆ ಕೂಡಿರುತ್ತದೆ (ಸ್ವಲ್ಪ ಪ್ರಮಾಣದಲ್ಲಿ ಸಿರಮೈಡ್ ಮೊಇಟಿಗಳಿಗೆ ಲಗತ್ತಾಗಿರುತ್ತದೆ). ಇದು ಬಿ-ಡಿ ಗ್ಯಾಲಕ್ಟೊಸ್, ಬಿ-ಡಿ-ಎನ್-ಎಸಿಟೈಲ್‌ಗ್ಯಾಲಕ್ಟೊಸಮೈನ್‍ಗಳ ಸರಪಳಿಯನ್ನು ಒಳಗೊಂಡಿರುತ್ತದೆ ಮತ್ತು 2-ಸಂಪರ್ಕಿತ, α-ಎಲ್-ಫ್ಯುಕೋಸ್ ಸರಪಳಿಯು ಪ್ರೋಟೀನ್ ಅಥವಾ ಸಿರಾಮೈಡ್‌ಗಳಿಗೆ ಲಗತ್ತಾಗಿರುತ್ತದೆ.

ಎಬಿಒ ಸ್ಥಾನವು ವರ್ಣತಂತು 9ರಲ್ಲಿ ಕಂಡುಬರುತ್ತದೆ.‍ ಇದು 18 ಕೆಬಿ ಜಿನೊಮಿಕ್ ಡಿಎನ್‌ಎ ಗಳನ್ನು ಹಾದು ಹೋಗುವ 7 ಎಕ್ಸಾನ್‍ಗಳನ್ನು ಒಳಗೊಂಡಿರುತ್ತದೆ. ಎಕ್ಸಾನ್ 7 ಇದು ಅತಿ ದೊಡ್ಡ ಮತ್ತು ಬಹುತೇಕ ಸಂಕೇತ ಅನುಕ್ರಮಗಳನ್ನು ಒಳಗೊಂಡಿರುತ್ತದೆ. ಎಬಿಒ ಸ್ಥಾನದಲ್ಲಿ ಮೂರು ಮುಖ್ಯ ಬಗೆಗಳಿವೆ: ಎ, ಬಿ ಮತ್ತು ಒ. ಎ ಯುಗ್ಮವಿಕಲ್ಪಿಯು ಗ್ಲೈಕೋಸಿಲ್‍ಟ್ರಾನ್ಸ್‌ಫರೇಸ್‌ ನ್ನು ಒಳಗೊಂಡಿರುತ್ತದೆ. ಅದು α-ಎನ್-ಎಸಿಟೈಲ್‌ಗ್ಯಾಲಕ್ಟೊಸಮೈನ್ ಅನ್ನು ಎ ಪ್ರತಿಜನಕವನ್ನು ತಯಾರಿಸುವ ಎಚ್ ಪ್ರತಿಜನಕದ ಕೊನೆಯ ಡಿ-ಗ್ಯಾಲಕ್ಟೊಸ್‍ಗೆ ಬಂಧಿಸುತ್ತದೆ. ಬಿ ಯುಗ್ಮವಿಕಲ್ಪಿಯು ಗ್ಲೈಕೋಸಿಲ್‍ಟ್ರಾನ್ಸ್‌ಫರೇಸ್‌ ಅನ್ನು ಒಳಗೊಂಡಿರುತ್ತದೆ ಅದು ಬಿ ಪ್ರತಿಜನಕವನ್ನು ತಯಾರಿಸುವ ಎಚ್ ಪ್ರತಿಜನಕದ ಕೊನೆಯ α-ಡಿ-ಗ್ಯಾಲಕ್ಟೋಸ್‍ಗೆ ಬಂಧಿತವಾಗಿರುತ್ತದೆ.

ಒ ಯುಗ್ಮವಿಕಲ್ಪಿಯ ವಿಷಯದಲ್ಲಿ, ಎಕ್ಸಾನ್ 6 ಕಿಣ್ವಕ್ಕೆ ಸಂಬಂಧಿಸಿದ ಚಟುವಟಿಕೆಯ ನಷ್ಟಕ್ಕೆ ಕಾರಣವಾಗುವ ವಿಲೋಪನ ಕ್ರಿಯೆಯನ್ನು ಒಳಗೊಂಡಿರುತ್ತದೆ. 261 ನೆ ಸ್ಥಾನದಲ್ಲಿರುವ ನೈಟ್ರೋಜನ್‍ನ ಏಕೈಕ ನ್ಯೂಕ್ಲಿಯೋಟೈಡ್‌ನ ವಿಲೋಪನ ಕ್ರಿಯೆಯಿಂದ ಒ ಯುಗ್ಮವಿಕಲ್ಪಿಯು ಎ ಯುಗ್ಮವಿಕಲ್ಪಿಗಿಂತ ಸ್ವಲ್ಪದರಲ್ಲಿ ಬೇರೆಯಾಗಿರುತ್ತದೆ. ವಿಲೋಪನವು ಚೌಕಟ್ಟನ್ನು ಬದಲಾಯಿಸುವುದರಲ್ಲಿ ಮತ್ತು ಕಿಣ್ವಕ್ಕೆ ಸಂಬಂಧಿಸಿದ ಚಟುವಟಿಕೆಯ ಅಭಾವವನ್ನೊಳಗೊಂಡ ಸಂಪೂರ್ಣ ಭಿನ್ನ ಪ್ರೋಟೀನ್‍ನ ಬದಲಾವಣೆಗೆ ಕಾರಣವಾಗುತ್ತದೆ. ಒ ಗುಂಪಿನ ವಿಷಯದಲ್ಲಿ ಎಚ್ ಪ್ರತಿಜನಕಗಳ ಫಲಿತಾಂಶವು ಬದಲಾಗುವುದಿಲ್ಲ.

ಬಹುಪಾಲು ಎಬಿಒ ಪ್ರತಿಜನಕಗಳು ಬ್ಯಾಂಡ್ 3 ಪ್ರೋಟೀನ್‍ಗೆ ಲಗತ್ತಾದ ಉದ್ದನೆಯ ಪಾಲಿಲ್ಯಾಕ್ಟೋಸಮೈನ್‌ ಸರಪಳಿಗಳ ಕೊನೆಗೆ ಪ್ರಕಟವಾಗುತ್ತವೆ, ಆರ್‌ಬಿಸಿ ಒಳಚರ್ಮಗಳ ಪ್ರೋಟೀನ್‍ಗಳು, ಮತ್ತು ಮೇಲ್ಮೈಯ ಅತಿ ಚಿಕ್ಕ ಭಾಗವು ತಟಸ್ಥ ಗ್ಲೈಕೋಸ್ಪಿಂಗೋಲಿಪಿಡ್ಸ್ ನಂತೆ ತೋರಿಸಲ್ಪಡುತ್ತದೆ.

ರಕ್ತಸಾರ ವಿಜ್ಞಾನ

ಆ್ಯಂಟಿ-ಎ ಮತ್ತು ಆ್ಯಂಟಿ-ಬಿ ಪ್ರತಿಕಾಯಗಳು (ಐಸೊಹೀಮಾಗ್ಲುಟಿನಿನ್ಸ್ ಎಂದು ಕರೆಯಲ್ಪಡುತ್ತವೆ) ಆಗತಾನೆ ಜನಿಸಿದ ಮಕ್ಕಳಲ್ಲಿ ಕಂಡುಬರುವುದಿಲ್ಲ, ಜೀವನದ ಮೊದಲ ವರ್ಷದಲ್ಲಿ ಕಂಡುಬರುತ್ತವೆ. ಅವುಗಳು ಒಂದೇ ರೀತಿಯ ಪ್ರತಿಕಾಯಗಳಾಗಿವೆ, ಅಂದರೆ ಅವು ಮಾನವ ದೇಹದ ಒಂದೇ ಜಾತಿಯ ಪ್ರತಿಜನಕಗಳಿಂದ ಉತ್ಪತ್ತಿಯಾಗುತ್ತವೆ (ಒಂದೇ ರೀತಿಯ ಪ್ರತಿಜನಕಗಳು). ಆ್ಯಂಟಿ-ಎ ಮತ್ತು ಆ್ಯಂಟಿ-ಬಿ ಪ್ರತಿಕಾಯಗಳು ಹೆಚ್ಚಾಗಿ ಐಜಿಎಂ ವಿಧದ್ದಾಗಿದ್ದು, ಅವು ಜರಾಯುವಿನ ಮೂಲಕ ಭ್ರೂಣದ ರಕ್ತ ಪರಿಚಲನೆಗೆ ಸಾಗುವುದಿಲ್ಲ. ಒ-ರಕ್ತಗುಂಪಿನ ಮಾನವರು ಐಜಿಜಿ ವಿಧಧ ಎಬಿಒ ಪ್ರತಿಕಾಯಗಳನ್ನು ಉತ್ಪತ್ತಿ ಮಾಡಬಲ್ಲರು.

ಮೂಲ ಸಿದ್ಧಾಂತಗಳು

ಆಹಾರ ಮತ್ತು ವಾತಾವರಣದ ಪ್ರತಿಜನಕಗಳು (ಬ್ಯಾಕ್ಟೀರಿಯ, ವೈರಸ್ ಅಥವಾ ಗಿಡದ ಪ್ರತಿಜನಕಗಳು) ಎ ಮತ್ತು ಬಿ ಗ್ಲೈಕೊಪ್ರೋಟೀನ್‍ಗಳ ಪ್ರತಿಜನಕಗಳಿಗೆ ಸಮಾನವಾದ ಎಪಿಟೋಪ್‍ಗಳನ್ನು ಹೊಂದಿರುತ್ತವೆ. ವಾತಾವರಣದ ಪ್ರತಿಜನಕಗಳಿಗೆ ವಿರುದ್ಧವಾಗಿ ಜೀವನದ ಮೊದಲ ವರ್ಷದಲ್ಲಿ ಉತ್ಪತ್ತಿಯಾದ ಈ ಪ್ರತಿಕಾಯಗಳು ನಂತರದ ಜೀವನದಲ್ಲಿ ರಕ್ತದಾನದ ಸಮಯದಲ್ಲಿ ಎಬಿಒ-ಹೊಂದಿಕೆಯಿಲ್ಲದ ಕೆಂಪು ರಕ್ತಕಣಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತವೆ. ಆ್ಯಂಟಿ-ಎ ಪ್ರತಿಕಾಯಗಳು ಮೂಲದಲ್ಲಿ ಇನ್‌ಫ್ಲುಯೆಂಜಾ ವೈರಸ್‍ನಿಂದ ರಕ್ಷಣೆ ಪಡೆದಿರುತ್ತವೆ ಎಂದು ಭಾವಿಸಲಾಗಿದೆ. ಅವುಗಳ ಎಪಿಟೋಪ್‍ಗಳು ವಿಷಮ ಪ್ರತಿಕ್ರಿಯೆಯನ್ನು ಉಂಟುಮಾಡುವ ಬಿ ಗ್ಲೈಕೋಪ್ರೋಟೀನ್‍ನ ಪ್ರತಿಜನಕಗಳ α-ಡಿ ಗ್ಯಾಲಕ್ಟೋಸ್‍ಗೆ ಸದೃಶವಾಗಿರುತ್ತವೆ. ಆ್ಯಂಟಿ-ಬಿ ಪ್ರತಿಕಾಯಗಳು ಗ್ರಾಮ್ ನೆಗೆಟಿವ್ ಬ್ಯಾಕ್ಟೀರಿಯದ ವಿರುದ್ಧ ಉತ್ಪತ್ತಿಯಾದ ಪ್ರತಿಕಾಯಗಳಿಂದ ತಯಾರಾಗಿವೆಯೆಂದು ಭಾವಿಸಲಾಗಿದೆ, ಉದಾಹರಣೆ ಇ. ಕೋಲಿ , ಎ ಗ್ಲೈಕೊಪ್ರೋಟೀನ್‍ನ ಮೇಲೆ α-ಎನ್ ಗ್ಯಾಲಕ್ಟೋಸಮೈನ್‌ ಜೊತೆ ವ್ಯತಿರಿಕ್ತ ಪರಿಣಾಮವನ್ನುಂಟುಮಾಡುತ್ತದೆ.[೧೩]

"ಕತ್ತಲೆಯಲ್ಲಿ ಬೆಳಕು ಸಿದ್ಧಾಂತ"ವು (ಡೆಲ್ ನಾಗ್ರೊ 1998) ಸೂಚಿಸುವುದೇನೆಂದರೆ ಯಾವಾಗ ಬೆಳೆಯುತ್ತಿರುವ ರೋಗಾಣುಗಳು ಒಂದು ಮನುಷ್ಯ ರೋಗಿಯ ಅತಿಥಿ ಕೋಶದ ಒಳಚರ್ಮವನ್ನು ಹೊಂದುತ್ತವೆಯೋ (ಮುಖ್ಯವಾಗಿ ಶ್ವಾಸಕೋಶ ಮತ್ತು ಲೋಳೆಪೊರೆಯ ಹೊರಪದರದಲ್ಲಿ ಅವು ಮುಖ್ಯವಾಗಿ ಪ್ರಕಟವಾಗುತ್ತವೆ) ಅವು ಆ ಒಳಚರ್ಮಗಳಿಂದ ಎಬಿಒ ರಕ್ತ ಪ್ರತಿಜನಕಗಳನ್ನೂ ಕೂಡ ತೆಗೆದುಕೊಳ್ಳುತ್ತವೆ, ಮತ್ತು ಅವುಗಳನ್ನು ದ್ವಿತೀಯ ಗ್ರಾಹಿಗೆ ತೆಗೆದುಕೊಂಡು ಹೋಗುತ್ತವೆ. ಅಲ್ಲಿ ಈ ಪ್ರತಿಜನಕಗಳು ತನ್ನದಲ್ಲದ ಅನ್ಯ ರಕ್ತ ಪ್ರತಿಜನಕಗಳ ವಿರುದ್ಧ ದೊಡ್ಡ ಸಂಖ್ಯೆಯಲ್ಲಿ ರಕ್ಷಣೆ ಪಡೆದಿರುವ ಪ್ರತಿಜನಕಗಳಿಂದ ಹೊರಸೆಳೆಯಲ್ಪಡುತ್ತವೆ. ಈ ರೋಗಕಾರಕ ಸೂಕ್ಷ್ಮ ಜೀವಿಗಳನ್ನೊಳಗೊಂಡ ಮಾನವ ರಕ್ತ ಪ್ರತಿಜನಕಗಳು ನವಜಾತ ಶಿಶುಗಳಲ್ಲಿ ಅನ್ಯ ಪ್ರತಿಜನಕಗಳ ವಿರುದ್ಧ ತಟಸ್ಥವಾಗಿರುವ ಪ್ರತಿಜನಕಗಳನ್ನು ಉತ್ಪತ್ತಿಮಾಡುವ ಜವಾಬ್ದಾರಿಗೆ ಹೊಣೆಯಾಗುತ್ತವೆ. ಈ ಸಿದ್ಧಾಂತಕ್ಕೆ ಇತ್ತೀಚಿನ ಎಚ್‌ಐವಿಯೊಂದಿಗಿನ ಪ್ರಯೋಗದಿಂದ ಉತ್ತೇಜನ ದೊರೆಯಿತು. ರಕ್ತ ಗುಂಪಿನ ಪ್ರತಿಜನಕಗಳ ವಿರುದ್ಧ ಪ್ರತಿಕಾಯಗಳನ್ನು ಬಳಸಿಕೊಂಡು ಮಾಡುವ ಪ್ರಯೋಗಗಳಿಂದ ಎಚ್‌ಐವಿ ಯನ್ನು "ಕೃತಕ-ಪರಿಸರದಲ್ಲಿ", ನಿರ್ದಿಷ್ಟ ರೀತಿಯಲ್ಲಿ ಹೇಳುವುದಾದರೆ ಎಚ್‌ಐವಿಯನ್ನು ಉತ್ಪತ್ತಿ ಮಾಡುವ ಕೋಶ ಸಾಲುಗಳ ಮೇಲೆ ತಟಸ್ಥಗೊಳಿಸಬಹುದು.[೧೪][೧೫]

"ಕತ್ತಲೆಯಲ್ಲಿ ಬೆಳಕು ಸಿದ್ಧಾಂತ"ವು ಒಂದು ಹೊಸ ರೀತಿಯ ಸಿದ್ಧಾಂತದ ವಿಕಸನಕ್ಕೆ ಪ್ರೇರಣೆಯಾಯಿತು: ಹೇಗೆಂದರೆ ಅಲ್ಲಿ ನಿಜವಾದ ಸಾಮುದಾಯಿಕ ರಕ್ಷಣೆಯಿದೆ, ಅದು ಒಂದು ಜನಸಂಖ್ಯೆಯಲ್ಲಿನ ವೈರಸ್‌ಗಳ ಸೋಂಕು ಹರಡುವುದನ್ನು ಕಡಿಮೆಗೊಳಿಸಲು ಅಭಿವೃದ್ಧಿಯಾಯಿತು. ಇದು ಸೂಚಿಸುವುದೇನೆಂದರೆ ಒಂದು ಜನಸಂಖ್ಯಾ ಪೂರೈಕೆ ಮತ್ತು ಏಕಮಾತ್ರ ವೈವಿಧ್ಯದ ಪ್ರತಿಜನಕಗಳು ಒಟ್ಟಾರೆ ಜನಸಾಂದ್ರತೆಯನ್ನು ಸೋಂಕಿನಿಂದ ರಕ್ಷಿಸುತ್ತವೆ. ಬದಲಾಯಿಸಬಹುದಾದ ಅಪ್ರಭಾವಿ ಯುಗ್ಮವಿಕಲ್ಪಿಗಳ ಜೊತೆಗೆ ಕೆಲಸ ಮಾಡಲು ಸ್ಥಾಪಿಸಿದ ಒಂದು ವ್ಯವಸ್ಥೆಯಾಗಿದೆ.

ಇದು ಬಹು ನಿರೀಕ್ಷಿತ, ಹೇಗೆಂದರೆ ಯುಗ್ಮವಿಕಲ್ಪಿ ವೈವಿಧ್ಯವನ್ನು ಚಲಿಸುವಂತೆ ಮಾಡುವ ಬಲವು (ಶಕ್ತಿಯು) ಋಣಾತ್ಮಕ ಆವರ್ತನ ಅವಲಂಬಿತ ಆಯ್ಕೆಯಾಗಿರುತ್ತದೆ; ವಿರಳವಾದ ಭಿನ್ನತೆಯನ್ನು ಹೊಂದಿರುವ ಒಳಚರ್ಮದ ಪ್ರತಿಜನಕ ಕೋಶಗಳು ರಕ್ಷಣೆ ಪಡೆದಿರುವ ವ್ಯವಸ್ಥೆಯನ್ನು ಇತರ ದೊಡ್ಡ ಸಂಖ್ಯೆಯ ರೋಗಾಣುಗಳನ್ನು ತರುವ ಪ್ರತಿಜನಕಗಳಿಂದ ಬಹಳ ಸುಲಭವಾಗಿ ಬೇರೆಯಾಗಿಸುತ್ತದೆ (ಪತ್ತೆಹಚ್ಚುತ್ತದೆ). ಈ ರೀತಿ ವಿಶೇಷ ಪ್ರಕಾರವನ್ನು ಹೊಂದಿರುವ ಮನುಷ್ಯರು ರೋಗಾಣುಗಳನ್ನು ಕಂಡುಹಿಡಿಯುವುದರಲ್ಲಿ ನಿಷ್ಣಾತರಾಗಿರುತ್ತಾರೆ. ಜನಸಾಂದ್ರತೆಯಲ್ಲಿನ ಅತಿ ಹೆಚ್ಚು ವೈವಿಧ್ಯವು ಮಾನವ ಸಂಖ್ಯೆಯಲ್ಲಿ ಕಾಣಿಸುತ್ತದೆ. ನಂತರ ಅದು ಮಾನವನ ಮೇಲೆ ಸಹಜ ಆಯ್ಕೆಯ ಪರಿಣಾಮಕ್ಕೆ ಕಾರಣವಾಗುತ್ತದೆ.[೧೬]

ರಕ್ತಪೂರಣದ ಪ್ರತಿಕ್ರಿಯೆಗಳು

ತನ್ನದಲ್ಲದ ರಕ್ತ ಗುಂಪಿನ ಪ್ರತಿಜನಕಗಳ ವಿರುದ್ಧ ಅಸ್ತಿತ್ವದಲ್ಲಿರುವ ಒಂದೇ ರೀತಿಯ ಪ್ರತಿಕಾಯಗಳ ಕಾರಣದಿಂದಾಗಿ ಎ ರಕ್ತ ಗುಂಪಿನ ಮಾನವರು ಬಿ ಗುಂಪಿನಿಂದ ರಕ್ತವನ್ನು ತೆಗೆದುಕೊಂಡಲ್ಲಿ ತಕ್ಷಣ ಎ ಗುಂಪಿನ ಆರ್‌ಬಿಸಿಯ ವಿರುದ್ಧ ಆ್ಯಂಟಿ-ಬಿ ಪ್ರತಿಕಾಯಗಳನ್ನು ಹೆಚ್ಚಾಗಿ ಉತ್ಪತ್ತಿ ಮಾಡುತ್ತವೆ. ಆ್ಯಂಟಿ-ಬಿ ಪ್ರತಿಕಾಯಗಳು ಆರ್‌ಬಿಸಿಯಲ್ಲಿನ ಬಿ ಪ್ರತಿಜನಕಗಳ ಬಂಧನದಲ್ಲಿರುತ್ತವೆ ಮತ್ತು ಆರ್‌ಬಿಸಿಯ ವಿಭಜನೆಯನ್ನು ಪೂರ್ತಿಮಾಡುವ ಮಾಧ್ಯಮವಾಗಲು ಕಾರಣವಾಗುತ್ತದೆ. ಬಿ ಮತ್ತು ಒ ಗುಂಪುಗಳೊಂದಿಗೂ ಇದೇ ರೀತಿಯ ಪರಿಣಾಮಗಳುಂಟಾಗುತ್ತವೆ. (ಅವು ಆ್ಯಂಟಿ-ಎ ಮತ್ತು ಆ್ಯಂಟಿ-ಬಿ ಈ ಎರಡೂ ರೀತಿಯ ಪ್ರತಿಕಾಯಗಳನ್ನು ಹೆಚ್ಚಿಸುತ್ತವೆ). ಇದರ ಹೊರತಾಗಿ, ಎಬಿ ರಕ್ತ ಗುಂಪು ಮಾತ್ರ ಒಂದೇ ರೀತಿಯ ಆ್ಯಂಟಿ-ಎ ಮತ್ತು ಆ್ಯಂಟಿ-ಬಿ ಪ್ರತಿಕಾಯಗಳನ್ನು ಹೊಂದಿರುವುದಿಲ್ಲ. ಇದು ಏಕೆಂದರೆ ಆರ್‌ಬಿಸಿಯಲ್ಲಿ ಎ ಮತ್ತು ಬಿ ಎರಡೂ ಪ್ರತಿಜನಕಗಳು ಕಂಡುಬರುತ್ತವೆ ಮತ್ತು ಅವು ಎರಡೂ ಸ್ವಯಂ ಪ್ರತಿಜನಕಗಳಾಗಿರುತ್ತವೆ, ಹಾಗಾಗಿ ಅವು ಎಲ್ಲಾ ಗುಂಪುಗಳಿಂದಲೂ ರಕ್ತವನ್ನು ಪಡೆಯಬಹುದು ಮತ್ತು ಅವು ಸಾರ್ವತ್ರಿಕ ಗ್ರಾಹಿ ಗಳಾಗಿರುತ್ತವೆ.

  • ಎ ರಕ್ತ ಗುಂಪಿನ ಮಾನವರು ಎ ಗುಂಪು ಮತ್ತು ಒ ರಕ್ತ ಗುಂಪಿನ ದಾನಿಗಳಿಂದ ರಕ್ತವನ್ನು ಪಡೆಯಬಹುದು.
  • ಬಿ ರಕ್ತ ಗುಂಪಿನ ಮಾನವರು ಬಿ ಗುಂಪು ಮತ್ತು ಒ ರಕ್ತ ಗುಂಪಿನ ದಾನಿಗಳಿಂದ ರಕ್ತವನ್ನು ಪಡೆಯಬಹುದು.
  • ಎಬಿ ರಕ್ತ ಗುಂಪಿನ ಮಾನವರು ಎ ಗುಂಪು, ಬಿ ಗುಂಪು, ಎಬಿ ಗುಂಪು ಅಥವಾ ಒ ರಕ್ತ ಗುಂಪಿನ ದಾನಿಗಳಿಂದ ರಕ್ತವನ್ನು ಪಡೆಯಬಹುದು.
  • ಒ ರಕ್ತ ಗುಂಪಿನ ಮಾನವರು ಒ ರಕ್ತ ಗುಂಪಿನ ದಾನಿಗಳಿಂದ ಮಾತ್ರ ರಕ್ತವನ್ನು ಪಡೆಯಬಹುದು.
  • ಎ, ಬಿ, ಎಬಿ ಮತ್ತು ಒ ರಕ್ತ ಗುಂಪಿನ ಮಾನವರು ಒ ರಕ್ತ ಗುಂಪಿನ ದಾನಿಗಳಿಂದ ರಕ್ತವನ್ನು ಪಡೆಯಬಹುದು. ಒ ರಕ್ತ ಗುಂಪು ಸಾರ್ವತ್ರಿಕ ದಾತ ಎಂದು ಕರೆಯಲ್ಪಡುತ್ತದೆ.

"ಸಾರ್ವತ್ರಿಕ ಗ್ರಾಹಿ" ಈ ಸಿದ್ಧ ನಿಯಮಕ್ಕೆ ಅಪವಾದವೆಂದರೆ ಇದು ಕೇವಲ ಸರಿಯಾಗಿ ಪ್ಯಾಕ್ ಮಾಡಿದ ಆರ್‌ಬಿಸಿಗೆ ಮಾತ್ರ ಅನ್ವಯಿಸುತ್ತದೆ, ಮತ್ತು ಎಲ್ಲಾ ರಕ್ತದ ಉತ್ಪನ್ನಗಳಿಗೆ ಅನ್ವಯಿಸುವುದಿಲ್ಲ. ಮೊದಲಿನ ಕೋಷ್ಟಕದ ಪ್ರಕಾರ, ಒ ರಕ್ತ ವಿಧವು ರಕ್ತದ ತೆಳು ಪಾರದರ್ಶಕ ಭಾಗದಲ್ಲಿ ಆ್ಯಂಟಿ-ಎ ಮತ್ತು ಆ್ಯಂಟಿ-ಬಿ ಪ್ರತಿಕಾಯಗಳನ್ನು ಕೊಂಡೊಯ್ಯುತ್ತದೆ. ಎ, ಬಿ, ಅಥವಾ ಎಬಿ ಪ್ರಕಾರದ ರಕ್ತ ಸ್ವೀಕರಿಸುವವರಿಗೆ ಒ ರಕ್ತ ಗುಂಪು ಸೇರಿಸಲು ಸಂಪೂರ್ಣ ರಕ್ತವು ಅದರಲ್ಲಿನ ಸೀರಮ್‌ನಲ್ಲಿರುವ ಪ್ರತಿಕಾಯಗಳ ಕಾರಣಕ್ಕಾಗಿ ಹೀಮೊಲಿಟಿಕ್ ರಕ್ತಪೂರಣ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ.

ಸ್ವೀಕರಿಸುವವರುನೀಡುವವರು
ಎ ಅಥವಾ ಒ
ಬಿಬಿ ಅಥವಾ ಒ
ಎಬಿಎ, ಬಿ, ಎಬಿ ಅಥವಾ ಒ

ಬಾಂಬೆ ಪ್ರಕಟ ಲಕ್ಷಣವನ್ನು ಹೊಂದಿರುವ ಮನುಷ್ಯರನ್ನು ಹೊರತುಪಡಿಸಿ, ಎಚ್ ಪ್ರತಿಜನಕದ ವಿರುದ್ಧ ಯಾವುದೇ ಪ್ರತಿಕಾಯಗಳು ತಯಾರಾಗುವುದಿಲ್ಲ.

ಎಬಿಎಚ್ ಸ್ರಾವಕಗಳಲ್ಲಿ, ಎಬಿಚ್ ಪ್ರತಿಜನಕಗಳು ಶ್ವಾಸಕೋಶ, ಚರ್ಮ, ಮೂತ್ರಪಿಂಡ, ಮೇದೋಜೀರಕ ಗ್ರಂಥಿ, ಹೊಟ್ಟೆ, ಕರುಳುಗಳು, ಅಂಡಾಶಯಗಳು ಮತ್ತು ಪ್ರೋಸ್ಟ್ರೇಟ್ ಗ್ರಂಥಿ ಇವುಗಳನ್ನು ಒಳಗೊಂಡಂತೆ ವಾತಾವರಣದ ಜೊತೆ ಸಂಪರ್ಕ ಏರ್ಪಡಿಸುವ ಲೋಳೆಯನ್ನು ಉತ್ಪತ್ತಿ ಮಾಡುವ ಕೋಶಗಳನ್ನು ಸ್ರವಿಸುತ್ತವೆ.[೧೭]

ನವಜಾತ ಶಿಶುವಿನ ಎಬಿಒ ಹಿಮೊಲಿಟಿಕ್ ಕಾಯಿಲೆ

ತಾಯಿ ಮತ್ತು ಮಗುವಿನ ನಡುವಿನ ಎಬಿಒ ರಕ್ತ ಗುಂಪಿನ ಅಸಾಮರಸ್ಯವು ಹೆಚ್ಚಾಗಿ ನವಜಾತ ಶಿಶುವಿನ ಹಿಮೊಲಿಟಿಕ್ ಕಾಯಿಲೆಗೆ (ಎಚ್‌ಡಿ‍ಎನ್) ಕಾರಣವಾಗುವುದಿಲ್ಲ. ಹೇಗೆಂದರೆ ಎಬಿಒ ರಕ್ತ ಗುಂಪಿನ ಪ್ರತಿಕಾಯಗಳು ಹೆಚ್ಚಾಗಿ ಐಜಿಎಮ್ ವಿಧದ್ದಾಗಿದ್ದು ಅದು ಜರಾಯುವನ್ನು ಹಾದು ಹೋಗುವುದಿಲ್ಲ; ಆದಾಗ್ಯೂ ಒ-ರಕ್ತ ಗುಂಪಿನ ತಾಯಿಯಲ್ಲಿ, ಐಜಿಜಿ ಎಬಿಒ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ ಮತ್ತು ಮಗುವಿನ ಎಬಿಒ ಹಿಮೊಲಿಟಿಕ್ ಕಾಯಿಲೆಯ ಬೆಳವಣಿಗೆಗೆ ಕಾರಣವಾಗುತ್ತದೆ.

ಆನುವಂಶಿಕತೆ

ಎ ಮತ್ತು ಬಿ ಸಹಪ್ರಭಾವಿಯಾಗಿದ್ದು, ಎಬಿ ಪ್ರಕಟ ಲಕ್ಷಣವನ್ನು ಕೊಡುತ್ತವೆ
ರಕ್ತ ಗುಂಪಿನ ಆನುವಂಶಿಕತೆ
ತಾಯಿ/ತಂದೆಬಿಎಬಿ
ಒ, ಎಒ, ಬಿಎ, ಬಿ
ಒ, ಎಒ, ಎಒ, ಎ, ಬಿ, ಎಬಿಎ, ಬಿ, ಎಬಿ
ಬಿಒ, ಬಿಒ, ಎ, ಬಿ, ಎಬಿಒ, ಬಿಎ, ಬಿ, ಎಬಿ
ಎಬಿಎ, ಬಿಎ, ಬಿ, ಎಬಿಎ, ಬಿ, ಎಬಿಎ, ಬಿ, ಎಬಿ

ರಕ್ತ ಗುಂಪುಗಳು ತಂದೆ ಮತ್ತು ತಾಯಿ ಇಬ್ಬರಿಂದಲೂ ಆನುವಂಶಿಕವಾಗಿರುತ್ತವೆ. ಎಬಿಒ ರಕ್ತ ವಿಧವು ಒಂದೇ ಜೀನ್‍ನಿಂದ ನಿಯಂತ್ರಿಸಲ್ಪಡುತ್ತದೆ (ಎಬಿಒ ಜೀನ್). ಇದು ಮೂರು ಯುಗ್ಮವಿಕಲ್ಪಿಗಳನ್ನು ಹೊಂದಿರುತ್ತದೆ: , ಮತ್ತು ಬಿ. ಕೆಂಪು ರಕ್ತ ಕಣಗಳ ಪ್ರತಿಜನಕಗಳ ಕಾರ್ಬೊಹೈಡ್ರೇಟ್‍ಗಳನ್ನು ಬದಲಾಯಿಸುವ ಗ್ಲೈಕೋಸಿಲ್‍ಟ್ರಾನ್ಸ್‌ಫರೇಸ್‌ ಎಂಬ ಕಿಣ್ವವನ್ನು ಈ ಜೀನ್ ಒಳಗೊಂಡಿರುತ್ತದೆ. ಈ ಜೀನ್ ಒಂಭತ್ತನೇ ವರ್ಣತಂತುವಿನ ಉದ್ದ ತೋಳುಗಳಲ್ಲಿ ನೆಲೆಗೊಂಡಿರುತ್ತದೆ (9q34).

ಯುಗ್ಮವಿಕಲ್ಪಿಯು ಎ ವಿಧವನ್ನು, ಬಿ ಯು ಬಿ ವಿಧವನ್ನು ಮತ್ತು ಒ ವಿಧವನ್ನು ನೀಡುತ್ತವೆ. ಹಾಗೆ ಮತ್ತು ಬಿ ಗಳೆರಡೂ ಗಿಂತ ಪ್ರಾಮುಖ್ಯ ಪಡೆದಿರುತ್ತವೆ, ಕೇವಲ ಐಐ ಅನ್ನು ಹೊಂದಿರುವ ಮನುಷ್ಯರು ಮಾತ್ರ ಒ ರಕ್ತ ವಿಧವನ್ನು ಹೊಂದಿರುತ್ತಾರೆ. ಅಥವಾ ಇರುವ ಮನುಷ್ಯನು ಎ ರಕ್ತ ಗುಂಪನ್ನು, ಮತ್ತು ಬಿಬಿ ಅಥವಾ ಬಿ ಇರುವ ಮನುಷ್ಯನು ಬಿ ರಕ್ತ ಗುಂಪನ್ನು ಹೊಂದಿರುತ್ತಾನೆ. ಬಿ ಇರುವ ಮನುಷ್ಯರು ಎರಡು ವಿಧವನ್ನೂ ಹೊಂದಿರುತ್ತಾರೆ. ಏಕೆಂದರೆ ಎ ಮತ್ತು ಬಿ ಕಣಗಳು ವಿಶಿಷ್ಟವಾದ ಪ್ರಭಾವೀ ಸಂಬಂಧವನ್ನು ಪ್ರಕಟಪಡಿಸುತ್ತವೆ: ಸಹಪ್ರಾಧಾನ್ಯ ಅಂದರೆ ಎ ಮತ್ತು ಬಿ ವಿಧದ ಜನಕರು ಎಬಿ ಮಗುವನ್ನು ಹೆರಬಹುದು. ಎ ಪ್ರಕಾರದ ಒಂದು ಮತ್ತು ಬಿ ಪ್ರಕಾರದ ಒಂದು ಜೋಡಿಯು ಅವರಿಬ್ಬರೂ ಭಿನ್ನಯುಗ್ಮಜೀಯವಾಗಿದ್ದಲ್ಲಿ (ಬಿ , ) ಒ ಪ್ರಕಾರದ ರಕ್ತವಿರುವ ಮಗುವನ್ನು ಹೊಂದಬಹುದು. cis-AB ಪ್ರಕಟ ಲಕ್ಷಣವು ಒಂದು ಏಕ ಕಿಣ್ವವನ್ನು ಹೊಂದಿದ್ದು ಅದು ಎ ಮತ್ತು ಬಿ ಎರಡೂ ಪ್ರತಿಜನಕಗಳನ್ನು ಸೃಷ್ಟಿಸಬಲ್ಲುದು. ಅದರಿಂದ ಸೃಷ್ಟಿಯಾದ ರಕ್ತ ಕಣಗಳು ಸಾಮಾನ್ಯವಾಗಿ ಸಾಮಾನ್ಯ ಗುಂಪು ಎ1 ಅಥವಾ ಬಿ ಕೆಂಪು ರಕ್ತ ಜೀವಕೋಶಗಳಲ್ಲಿ ನಿರೀಕ್ಷಿಸಿದಂತೆ ಎ ಅಥವಾ ಬಿ ಪ್ರತಿಜನಕವನ್ನು ಒಂದೇ ಮಟ್ಟದಲ್ಲಿ ವ್ಯಕ್ತಪಡಿಸುವುದಿಲ್ಲ, ಮತ್ತು ಇದು ಒಂದು ಅನುವಂಶೀಯವಾಗಿ ಅಸಾಧ್ಯವಾಗಿ ಕಾಣುವ ರಕ್ತ ಗುಂಪಿನ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಬಹುದು.[೧೮]

ಹಂಚಿಕೆ ಮತ್ತು ವಿಕಾಸದ ಇತಿಹಾಸ

ಜನಸಂಖ್ಯೆಯನ್ನು ಆಧರಿಸಿ ಎ, ಬಿ, ಒ ಮತ್ತು ಎಬಿ ರಕ್ತದ ಗುಂಪುಗಳ ವಿತರಣೆಯು ಜಗತ್ತಿನೆಲ್ಲೆಡೆ ಬೇರೆ ಬೇರೆಯಾಗಿದೆ. ಮಾನವನ ಉಪ-ಜನಸಂಖ್ಯೆಯ ಹಂಚಿಕೆಯ ಆಧಾರದ ಮೇಲೆಯೂ ರಕ್ತದ ಪ್ರಕಾರಗಳಲ್ಲಿ ವ್ಯತ್ಯಾಸಗಳಿವೆ.

ಯುಕೆಯಲ್ಲಿನ ಜನಸಂಖ್ಯೆಯ ರಕ್ತ ಪ್ರಕಾರದ ಹಂಚಿಕೆಯು ಸ್ಥಳನಾಮಗಳ ಹಂಚಿಕೆಯೊಂದಿಗೆ ಸಂಬಂಧವನ್ನು ಮತ್ತು ವೈಕಿಂಗರು, ಡೇನ್ಸ್, ಸ್ಯಾಕ್ಸನ್ಸ್, ಸೆಲ್ಟ್ಸ್, ಮತ್ತು ನಾರ್ಮನ್ಸ್ ಗಳ ದಾಳಿ ಮತ್ತು ವಲಸೆಗಳಿಗೆ ಸಂಬಂಧವನ್ನು ಹೊಂದಿದೆ. ಇವರೆಲ್ಲರೂ ಸ್ಥಳನಾಮಗಳಿಗೆ ರೂಪಿಮೆಗಳನ್ನು ಮತ್ತು ಜನಸಂಖ್ಯೆಗೆ ಜೀನ್‌ಗಳನ್ನೂ ನೀಡಿದರು.[೧೯]

ಎಬಿಒ ವಂಶವಾಹಿಯನ್ನು ಹೊಂದಿರುವ ಬಿಳಿ ವ್ಯಕ್ತಿಗಳಲ್ಲಿ ಆರು ಸಾಮಾನ್ಯ ಯುಗ್ಮವಿಕಲ್ಪಿಗಳಿದ್ದು ಅವು ಆಯಾ ವ್ಯಕ್ತಿಯ ರಕ್ತದ ಪ್ರಕಾರವನ್ನು ಉತ್ಪಾದಿಸುತ್ತವೆ:[೨೦][೨೧]

ಜಗತ್ತಿನಾದ್ಯಂತ ಇರುವ ಮಾನವ ಜನಸಂಖ್ಯೆಗಳಲ್ಲಿ ಈ ಯುಗ್ಮವಿಕಲ್ಪಿಗಳ ಹಲವಾರು ವಿರಳ ರೂಪಾಂತರಗಳನ್ನು ಗುರುತಿಸಲಾಗಿದೆ.

ವಿಕಾಸವಾದದ ಕೆಲವು ಜೀವವಿಜ್ಞಾನಿಗಳು ಯುಗ್ಮವಿಕಲ್ಪಿಗಳು ಬಹಳ ಹಿಂದೆಯೇ ರೂಪಗೊಂಡಿದ್ದವು ಎಂದು, ಮತ್ತು ನಂತರದಲ್ಲಿ O (ಒಂದು ಏಕ ನ್ಯೂಕ್ಲಿಯೋಟೈಡ್‍ನ್ನು ಅಳಿಸುವ ಮೂಲಕ, ರೀಡಿಂಗ್ ಫ್ರೇಮ್ ಸರಿಸಿದ ನಂತರ) ಮತ್ತು ನಂತರದಲ್ಲಿ ಬಿ ಗಳು ಬಂದವು ಎಂದು ಸಿದ್ಧಾಂತಿಸುತ್ತಾರೆ.

ಈ ಘಟನಾ ಕಾಲಕ್ರಮವು ಜಗತ್ತಿನಾದ್ಯಂತ ಇರುವ ಪ್ರತಿಯೊಂದು ರಕ್ತ ಪ್ರಕಾರದ ಪ್ರತಿಶತ ಜನರ ಲೆಕ್ಕವನ್ನು ಒಳಗೊಂಡಿದೆ. ಇದು ಜಗತ್ತಿನ ವಿವಿಧೆಡೆಗಳಲ್ಲಿ ಪ್ರಾರಂಭಿಕ ಜನವಲಸೆ ಮತ್ತು ಬದಲಾಗುತ್ತಿರುವ, ವಿಸ್ತಾರವಾಗಿ ಹರಡುತ್ತಿರುವ ರಕ್ತ ಪ್ರಕಾರಗಳ ಸ್ವೀಕೃತ ಪ್ರಕಾರಗಳೊಂದಿಗೆ ಸ್ಥಿರತೆಯನ್ನು ಹೊಂದಿದೆ: ಉದಾಹರಣೆಗೆ, ಏಷ್ಯಾದ ಸಂತತಿಯವರಲ್ಲಿ ಬಹಳ ಸಾಮಾನ್ಯವಾಗಿದೆ, ಆದರೆ ಇದು ಪಾಶ್ಚಾತ್ಯ ಯೂರೋಪಿಯನ್ ಸಂತತಿಯವರಲ್ಲಿ ಬಹಳ ವಿರಳವಾಗಿದೆ. ಇನ್ನೊಂದು ಸಿದ್ಧಾಂತದ ಪ್ರಕಾರ, ಎಬಿಒ ವಂಶವಾಹಿಗಳ ನಾಲ್ಕು ಮುಖ್ಯ ವಂಶಾವಳಿಗಳಿವೆ ಮತ್ತು ರಕ್ತದಲ್ಲಿ ಒ ಗುಂಪನ್ನು ರಚಿಸುವಂತಹ ರೂಪಾಂತರಗಳು ಕನಿಷ್ಠ ಮೂರು ಬಾರಿ ಮಾನವರಲ್ಲಿ ಉಂಟಾಗಿವೆ.[೨೨] ಅತ್ಯಂತ ಹಳೆಯದರಿಂದ ಅತ್ಯಂತ ಇತ್ತೀಚಿನದರವರೆಗೆ, ಈ ವಂಶಾವಳಿಗಳು ಈ ಯುಗ್ಮವಿಕಲ್ಪಿಗಳನ್ನು ಅಡಕ ಮಾಡಿಕೊಂಡಿವೆ: A101/A201/O09, B101, O02 ಮತ್ತು O01. ಒ ಯುಗ್ಮವಿಕಲ್ಪಿಗಳ ನಿರಂತರವಾದ ಅಸ್ತಿತ್ವವು ಸಮತೂಗಿಸುವ ಆಯ್ಕೆಯ ಫಲವೆಂದು ಊಹಿಸಲಾಗಿದೆ.[೨೨] ಈ ಎರಡೂ ಸಿದ್ಧಾಂತಗಳೂ ಮೊದಲಿನ ಸಿದ್ಧಾಂತವಾದ ಒ ಪ್ರಕಾರದ ರಕ್ತ ಮೊದಲು ಹುಟ್ಟಿತು ಎಂಬುದನ್ನು ಅಲ್ಲಗಳೆಯುತ್ತವೆ, ಮತ್ತು ಅದಕ್ಕೆ ಎಲ್ಲ ಮಾನವರೂ (hh ಪ್ರಕಾರದವರನ್ನು ಬಿಟ್ಟು) ಅದನ್ನು ಸ್ವೀಕರಿಸಬಹುದು ಎಂಬ ಸಂಗತಿಯು ಬೆಂಬಲಿಸುತ್ತದೆ. ದ ಬ್ರಿಟಿಷ್ ನ್ಯಾಶನಲ್ ಬ್ಲಡ್ ಟ್ರಾನ್ಸ್‌ಫ್ಯೂಶನ್ ಸರ್ವಿಸ್ ಪ್ರಕಾರ ಇದನ್ನು (ಕೆಳಗೆ ಬಾಹ್ಯ ಲಿಂಕ್‌ಗಳಲ್ಲಿ ವೆಬ್-ಲಿಂಕ್ ನೋಡಿ) ಮತ್ತು ಪ್ರಾರಂಭಿಕವಾಗಿ ಎಲ್ಲ ಮಾನವರೂ ಒ ಪ್ರಕಾರದ ರಕ್ತ ಗುಂಪನ್ನು ಹೊಂದಿದ್ದರು ಎಂದು ಹೇಳುತ್ತದೆ.

ದೇಶಗಳ ಪ್ರಕಾರ ಎಬಿಒ ಮತ್ತು ಆರ್‌ಎಚ್ ಹಂಚಿಕೆ

ಎಬಿಒ ಮತ್ತು ಆರ್‌ಎಚ್‌ ರಕ್ತ ಪ್ರಕಾರಗಳ ರಾಷ್ಟ್ರೀಯ ವಿಭಜನೆ (ಸರಾಸರಿ ಜನಸಂಖ್ಯೆ)
ದೇಶಜನಸಂಖ್ಯೆ(2009) ಒ+ ಎ+ ಬಿ+ಎಬಿ+ ಒ- ಎ- ಬಿ-ಎಬಿ-
ಆಸ್ಟ್ರೇಲಿಯಾ[೨೩]21,262,64140%31.8.2.9%7%2.1%
ಆಸ್ಟ್ರಿಯಾ[೨೪]8,210,28130%33%12%67%8.3%1%
ಬೆಲ್ಜಿಯಮ್‌[೨೫]10,414,33638%34%8.5%4.1%7%61.5%0.8%
ಬ್ರೆಝಿಲ್‌[೨೬]198,739,26936%34%8.2.5%9%8.2.0/5
ಕೆನಡಾ[೨೭]33,487,20839%36%7.62.5%7%61.4%0/5
ಡೆನ್ಮಾರ್ಕ್‌[೨೮]5,500,51035%37%8.4%67%2.1%
ಎಸ್ಟೋನಿಯಾ‌[೨೯]1,299,37130%31.−20%64/54/53%1%
ಫಿನ್‌ಲ್ಯಾಂಡ್‌[೩೦]5,250,27527%38%15%7%4%62.1%
ಫ್ರಾನ್ಸ್‌[೩೧]62,150,77536%37%9%3%67%1%1%
ಜರ್ಮನಿ[೩೨]82,329,75835%37%9%4%662.1%
ಹಾಂಗ್ ಕಾಂಗ್ ಎಸ್‌ಎಆರ್‌[೩೩]7,055,07140%26 ^27%7%0.31%0.19%0.14%0.05%
ಐಸ್‌ಲ್ಯಾಂಡ್‌[೩೪]306,69447.6%26.4%9.3%1.6%8.4%4.6%1.7%0.4%
ಭಾರತ[34]1,166,079,21736.5%22.1%30.9%6.4%2.0%0.8%1.1%0.2%
ಐರ್‌‌ಲ್ಯಾಂಡ್‌[೩೫]4,203,20047%26 ^9%2.8.5%2.1%
ಇಸ್ರೇಲ್‌[೩೬]7,233,70132%34%177%3%4%2.1%
ನೆದರ್‌ಲ್ಯಾಂಡ್ಸ್‌[೩೭]16,715,99939.5%35%6.7%2.5%7.5%7%1.3%0/5
ನ್ಯೂಜಿಲ್ಯಾಂಡ್‌[೩೮]4,213,41838%32%9%3%9%62.1%
ನಾರ್ವೆ[೩೯]4,660,53934%42.5%6.8%3.4%67.5%1.2%0.6%
ಪೋಲ್ಯಾಂಡ್‌[೪೦]38,482,91931.32%15%7%662.1%
ಪೋರ್ಚುಗಲ್‌[೪೧]10,707,92436.2%39.8%6.62.9%6.0%6.61.1%0/5
ಸೌದಿ ಅರೇಬಿಯಾ[೪೨]28,686,63348%"24"174%4%2.1%0.23%
ದಕ್ಷಿಣ ಆಫ್ರಿಕಾ[38]49,320,00039%32%12%3%7%5%2.1%
ಸ್ಪೇನ್‌[೪೩]40,525,00236%34%8.2.5%9%8.2.0/5
ಸ್ವೀಡನ್‌[೪೪]9,059,65132%37%-105%67%2.1%
ಟರ್ಕೀ76,805,52429.8%37.8%14.2%7.2%3.9%4.7%1.6%0.8%
ಯುನಿಟೆಡ್ ಕಿಂಗ್‌ಡಮ್‌[೪೫]61,113,20537%35%8.3%7%7%2.1%
ಯುನಿಟೆಡ್ ಸ್ಟೇಟ್ಸ್‌[೪೬]307,212,12337.4%35.7%8.5%3.4%6.66.3%1.5%0.6%
ಜನಸಂಖ್ಯೆ - ತೂಕಮಾಡಿದ ಸರಾಸರಿ(ಒಟ್ಟು ಜನಸಂಖ್ಯೆ = 2,261,025,244)36.44%28.27%20.59%5.06%4.33%3.52%1.39%0.45%
ಎಬಿಒ ಜನಾಂಗೀಯ ಮತ್ತು ಬುಡಕಟ್ಟಿನ ಹಂಚಿಕೆ (ಆರ್‌ಎಚ್ ಇಲ್ಲದೇ‌) ರಕ್ತ ಪ್ರಕಾರಗಳು[೪೭]
(ಈ ಪಟ್ಟಿಯು ಮೇಲಿನದಕ್ಕಿಂತ ಹೆಚ್ಚಿನ ನಮೂದುಗಳನ್ನು ಹೊಂದಿದೆ ಆದರೆ ಅದು ಆರ್‌ಎಚ್‌ ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ಹೇಳುವುದಿಲ್ಲ.)
</tr
ಜನ ಗುಂಪುಒ (%)ಎ (%)ಬಿ (%)ಎಬಿ (%)
ಮೂಲನಿವಾಸಿಗಳು 61 39 0 0
ಅಬಿಸ್ಸೀನಿಯನ್ಸ್‌ 43 27 25 5
ಐನು (ಜಪಾನ್‌) 17 32 32 18
ಅಲ್ಬೇನಿಯನ್ಸ್ 38 43 13 6
ಗ್ರ್ಯಾಂಡ್ ಅಂಡಮಾನೀಸ್‌ 9 60 23 9
ಅರಬ್ಬರು 34 31 29 6
ಅರ್ಮೇನಿಯನ್ನರು 31 50 13 6
ಏಶಿಯಾದವರು (ಯುಎಸ್‌ಎದಲ್ಲಿ - ಸಾಮಾನ್ಯ) 40 28 27 5
ಆಸ್ಟ್ರಿಯನ್ನರು 36 44 13 6
ಬಂಟುಸ್ 46 30 19 5
ಬಾಸ್ಕ್‌ಸ್ 51 44 4 1
ಬೆಲ್ಜಿಯನ್ನರು 47 42 8 3
ಬ್ಲ್ಯಾಕ್‌ಫೂಟ್ (ನಾ. ಅಮೇ. ಇಂಡೀಯನ್) 17 82 0 1
ಬೊರೊರೊ(ಬ್ರೆಝಿಲ್‌) 100 0 0 0
ಬ್ರೆಝಿಲಿಯನ್ 47 41 9 3
ಬಲ್ಗೇರಿಯನ್ನರು 32 44 15 8
ಬರ್ಮೀಸ್ 36 24 33 7
ಬುರಿಯಟ್ಸ್ (ಸೈಬೀರಿಯಾ) 33 "21" 38 8
ಬುಷ್‌ಮನ್ 56 34 9 2
ಚೈನೀಸ್-ಕ್ಯಾಂಟನ್ 46 23 25 6
ಚೈನೀಸ್-ಪೀಕಿಂಗ್ 29 27 32 13
ಚುವಾಷ್ 30 29 33 7
ಚೆಕ್ ಜನರು 30 44 18 9
ಡೇನರು 41 44 11 4
ಡಚ್ಚರು 45 43 9 3
ಈಜಿಪ್ಟಿಯನ್ನರು 33 36 24 8
ಇಂಗ್ಲಿಷ್‌ 47 42 9 3
ಎಸ್ಕಿಮೋ ಜನರು (ಅಲಾಸ್ಕಾ) 38 44 13 5
ಎಸ್ಕಿಮೋ ಜನರು (ಗ್ರೀನ್‌ಲ್ಯಾಂಡ್) 54 36 23 8
ಎಸ್ಟೋನಿಯನ್ನರು 34 36 23 8
ಫಿಜಿಯನ್ನರು 44 34 17 6
ಫಿನ್ನರು 34 41 18 7
ಫ್ರೆಂಚರು 43 47 7 3
ಜಾರ್ಜಿಯನ್ನರು 46 37 12 4
ಜರ್ಮನ್ನರು 41 43 11 5
ಗ್ರೀಕರು 40 42 14 5
ಜಿಪ್ಸಿಗಳು (ಹಂಗೇರಿ) 29 27 35 10
ಹವಾಯಿಯನ್ನರು 37 61 2 1
ಹಿಂದೂಗಳು (ಬಾಂಬೆ) 32 29 28 11
ಹಂಗೇರಿಯನ್ನರು 36 43 16 5
ಐಸ್‌ಲ್ಯಾಂಡರ್ಸ್ 56 32 10 3
ಭಾರತೀಯರು(ಭಾರತ - ಸಾಮಾನ್ಯ) 37 22 33 7
ಇಂಡಿಯನ್ಸ್ (ಯುಎಸ್‌ಎ - ಸಾಮಾನ್ಯ) 79 16 4 1
ಐರಿಷ್ 52 35 10 3
ಇಟಾಲಿಯನ್ನರು (ಮಿಲಾನ್) 46 41 11 3
ಜಪಾನಿಯರು 30 38 22 10
ಯಹೂದ್ಯರು (ಜರ್ಮನಿ) 42 41 12 5
ಯಹೂದ್ಯರು (ಪೋಲ್ಯಾಂಡ್‌) 33 41 18 8
ಕಲ್ಮುಕ್ಸ್ 26 23 41 11
ಕಿಕುಯು (ಕೀನ್ಯಾ) 60 19 20 1
ಕೋರಿಯನ್ನರು 28 32 31 10
ಲ್ಯಾಪ್ಸ್ 29 63 4 4
ಲಾಟ್ವಿಯನ್ನರು 32 37 24 7
ಲಿಥುವೇನಿಯನ್ನರು 40 34 20 6
ಮಲೇಶಿಯನ್ನರು 62 18 20 0
ಮಾವೋರಿಸ್ 46 54 1 0
ಮಾಯನ್ನರು 98 1 1 1
ಮೋರೋಸ್ 64 16 20 0
ನವಜೋ (ನಾ. ಅಮೇ. ಇಂಡಿಯನ್) 73 27 0 0
ನಿಕೋಬಾರೀಸ್ (ನಿಕೋಬಾರ್ಸ್)  74 9 15 1
ನಾರ್ವೇಜಿಯನ್ನರು 39 50 8 4
ಪಪುವ (ನ್ಯೂಗಿನಿ) 41 27 23 9
ಪರ್ಶಿಯನ್ನರು 38 33 22 7
ಪೆರು (ಇಂಡಿಯನ್ನರು) 100 0 0 0
ಫಿಲಿಪಿನೋಸ್ 45 22 27 6
ಪೋಲೆಂಡ್‌ ಜನ 33 39 20 9
ಪೊರ್ಚುಗೀಸರು 35 53 8 4
ರೋಮ್ಯಾನಿಯನ್ನರು 34 41 19 6
ರಷಿಯನ್ನರು 33 36 23 8
ಸಾರ್ಡೇನಿಯನ್ನರು 50 26 19 5
ಸ್ಕಾಟ್ಸ್‌ 51 34 12 3
ಸರ್ಬಿಯನ್ನರು 38 42 16 5
ಶೋಂಪೆನ್ (ನಿಕೋಬಾರ್ಸ್) 100 0 0 0
ಸ್ಲೋವಾಕ್ಸ್ 42 37 16 5
ದಕ್ಷಿಣ ಆಫ್ರಿಕನ್ನರು 45 40 11 4
ಸ್ಪಾನಿಷ್‌ 38 47 10 5
ಸೂಡಾನೀಸರು 62 16 21 0
ಸ್ವೀಡಿಷರು 38 47 10 5
ಸ್ವಿಸ್ ಜನರು 40 50 7 3
ಟಾರ್ಟಾರ್ಸ್ 28 30 29 13
ಥಿಯಾಸ್ 37 22 33 8
ಟರ್ಕ್ಸ್ 43 34 18 6
ಉಕ್ರೇನಿಯನ್ನರು 37 40 18 6
ಯುಎಸ್‌ಎ (ಯುಎಸ್ ಕಪ್ಪುಜನರು) 49 27 20 4
ಯುಎಸ್‌ಎ (ಯುಎಸ್ ಬಿಳಿಜನರು) 45 40 11 4
ವಿಯೆಟ್ನಾಮೀಯರು‌ 42 22 30 5
ಸರಾಸರಿ 43.91 34.80 16.55 5.14
ವಿಚಲನ 16.87 13.80 9.97 3.41

ಭಾರತದ ಉತ್ತರದಲ್ಲಿ ಹಾಗೂ ನೆರೆಯ ಕೇಂದ್ರ ಏಷಿಯಾದಲ್ಲಿ ಬಿ ರಕ್ತದ ಗುಂಪು ಯಥೇಚ್ಛ ಪುನರಾವರ್ತನೆಯನ್ನು ಹೊಂದಿದ್ದು, ಪಶ್ಚಿಮ ಮತ್ತು ಪೂರ್ವಗಳೆರಡರಲ್ಲೂ ಇದರ ಪುನರಾವರ್ತನೆ ಕಡಿಮೆಯಿದ್ದು, ಸ್ಪೇನ್‌ನಲ್ಲಿ ಇದು ಶೇಕಡಾ ಒಂದಂಕಿಗೆ ಇಳಿದಿದೆ.[೪೮][೪೯] ಮೂಲ ಅಮೆರಿಕನ್ ಮತ್ತು ಆಸ್ಟ್ರೇಲಿಯಾದವರಲ್ಲಿ ಹಾಗೂ ಆ ಭಾಗಗಳಲ್ಲಿ ಯೂರೋಪಿಯನ್ನರು ಬರುವುದಕ್ಕೆ ಮುಂಚಿನ ಬುಡಕಟ್ಟು ಜನತೆಯಲ್ಲಿ ಇದು ಸಂಪೂರ್ಣವಾಗಿ ಇಲ್ಲವಾಗಿದೆ ಎಂದು ನಂಬಲಾಗಿದೆ.[೪೯][೫೦]

ಎ ರಕ್ತದ ಗುಂಪಿನ ಯಥೇಚ್ಛ ಪುನರಾವರ್ತನೆಯು ಯೂರೋಪ್‌ನೊಂದಿಗೆ ಸಂಬಂಧಿಸಿದ್ದು, ಯೂರೋಪ್‌ನಲ್ಲಿ ವಿಶೇಷವಾಗಿ ಸ್ಕ್ಯಾಂಡಿನೇವಿಯಾ ಮತ್ತು ಕೇಂದ್ರ ಯೂರೋಪ್ ಎ ರಕ್ತ ಗುಂಪಿನ ಹೆಚ್ಚಿನ ಪುನರಾವರ್ತನೆಯನ್ನು ಹೊಂದಿದ್ದು, ಆಸ್ಟ್ರೇಲಿಯಾದ ಕೆಲ ಬುಡಕಟ್ಟು ಜನಾಂಗದವರಲ್ಲಿ ಹಾಗೂ ಮೊಂಟಾನದ ಕರಿಪಾದ ಇಂಡಿಯನ್ನರಲ್ಲೂ ಇದರ ಹೆಚ್ಚಿನ ಪುನರಾವರ್ತನೆಯನ್ನು ಕಾಣಬಹುದು.[೫೧][೫೨]

ವಾನ್ ವಿಲ್ಲೆಬ್ರ್ಯಾಂಡ್ ಅಂಶದೊಂದಿಗೆ ಸಂಬಂಧ

ಎಬಿಒ ಪ್ರತಿಜನಕವು ವಾನ್ ವಿಲ್ಲೆಬ್ರ್ಯಾಂಡ್ ಅಂಶ (ವಿಡಬ್ಲುಎಫ್) ಗ್ಲೈಕೊಪ್ರೊಟೀನ್ ಮೇಲೆ ಕೂಡ ಪ್ರಭಾವ ಬೀರುವುದು,[೫೩] ಇದು ರಕ್ತಸ್ತಂಭನದಲ್ಲಿ ಭಾಗಿಯಗುವುದು (ರಕ್ತಸ್ರಾವದ ನಿಯಂತ್ರಣ). ವಾಸ್ತವಿಕವಾಗಿ, ಓ ಮಾದರಿ ರಕ್ತವನ್ನು ಹೊಂದಿರುವವರನ್ನು ರಕ್ತಸ್ರಾವಕ್ಕೆ[೫೪] ಈಡುಮಾಡುತ್ತದೆ. ಪ್ಲಾಸ್ಮಾದಲ್ಲಿ ಪರೀಕ್ಷಿಸಿದಂತೆ, vWF ಒಟ್ಟು ಆನುವಂಶಿಕ ವ್ಯತ್ಯಯನದಲ್ಲಿ 30% ಎಬಿಓ ರಕ್ತ ಗುಂಪಿನ[೫೫] ಪರಿಣಾಮದಿಂದ ವಿವರಿಸಲಾಗಿದ್ದು, ಓ ಗುಂಪೇತರರಿಗಿಂತ, ಓ ರಕ್ತ ಗುಂಪಿನ ವ್ಯಕ್ತಿಗಳು ಸಾಮಾನ್ಯವಾಗಿ vWFನ ಅತಿ ಕಡಿಮೆ ಪ್ಲಾಸ್ಮಾ ಮಟ್ಟವನ್ನು (ಮತ್ತು ಅಂಶ VIII) ಹೊಂದಿರುತ್ತಾರೆ.[೫೬][೫೭] ಇದಲ್ಲದೇ, vWF ನ (ಇದೊಂದು VWF ನಲ್ಲಿನ ಅಮಿನೋ ಆಮ್ಲ ಬಹುರೂಪತೆ) Cys1584 ವೈವಿಧ್ಯ ಇರುವ ಕಾರಣದಿಂದಾಗಿ vWF ಒ ರಕ್ತ ಗುಂಪು ಹೆಚ್ಚಾಗಿ ಇರುವ ಕಾರಣದಿಂದಾಗಿ ಹೆಚ್ಚು ವೇಗದಲ್ಲಿ ಅವನತಿ ಹೊಂದಿತು:[೫೮] ADAMTS13 ನ ವಂಶವಾಹಿಯು (vWF-ಕ್ಲೀವಿಂಗ್ ಪ್ರೋಟೀಯೇಸ್) ಒಂಬತ್ತನೇ ಕ್ರೋಮೋಸೋಮ್‌ನೊಂದಿಗೆ (9q34) ಹೊಂದಿಕೆಯಾಗುತ್ತದೆ, ಎಬಿಒ ರಕ್ತ ಪ್ರಕಾರದ್ದೇ ಸ್ಥಾನವಾಗಿರುತ್ತದೆ. vWF ಯ ಉನ್ನತ ಮಟ್ಟದವು ಮೊದಲ ಬಾರಿಗೆ ರಕ್ತಕೊರತೆಯ ಹೊಡೆತ (ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ) ಹೊಂದಿರುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿವೆ.[೫೯]

ಈ ಅಧ್ಯಯನದ ಪರಿಣಾಮವಾಗಿ, ಉದ್ಭವವು ADAMTS13 ಬಹುರೂಪತೆಯಿಂದಾಗಿ ತೊಂದರೆಗೀಡಾಗಲಿಲ್ಲ ಮತ್ತು ಕೇವಲ ಒಂದೇ ಒಂದು ಅರ್ಥಗರ್ಭಿತವಾದ ಆನುವಂಶಿಕ ಸಂಗತಿಯೆಂದರೆ ಅದು ವ್ಯಕ್ತಿಗಳ ರಕ್ತ ಗುಂಪು ಎಂಬುದನ್ನು ಗುರುತಿಸಲಾಯಿತು.

ಉಪಗುಂಪುಗಳು

ಎ1 ಮತ್ತು ಎ2

ಎ ರಕ್ತ ಪ್ರಕಾರವು ಸುಮಾರು ಇಪ್ಪತ್ತು ಉಪಗುಂಪುಗಳನ್ನು ಹೊಂದಿರುತ್ತದೆ, ಅದರಲ್ಲಿ ಎ1 ಮತ್ತು ಎ2 ಅತಿ ಸಾಮಾನ್ಯವಾಗಿದೆ (99% ವರೆಗೆ). ಎ1 ಎಲ್ಲ ಎ-ಬಗೆಯ ರಕ್ತದವರ ಸುಮಾರು 80% ನ್ನು ರೂಪಿಸುತ್ತದೆ, ಎ2 ಇನ್ನುಳಿದದ್ದನ್ನು ರೂಪಿಸುತ್ತದೆ.[೬೦] ಅದೇ ಪ್ರಕಾರ, AB ಗುಂಪನ್ನು A1B ಮತ್ತು A2B ಎಂದು ವಿಂಗಡಿಸಲಾಗಿದೆ. ರಕ್ತ ಬಗೆಯನ್ನು ವರ್ಗೀಕರಣ ಮಾಡುವಾಗ ಅಪರೂಪಕ್ಕೆ ಕೆಲ ಪ್ರಕರಣಗಳಲ್ಲಿ ಜಟಿಲತೆ ತಲೆದೋರಿದರೂ, ರಕ್ತ ಪೂರೈಕೆಗೆ ಸಂಬಂಧಿಸಿದಂತೆ ಈ ಎರಡು ಉಪಗುಂಪುಗಳನ್ನು ಪರಸ್ಪರ ವಿನಿಮಯ ಮಾಡಬಹುದಾಗಿದೆ.[೬೦]

ಬಾಂಬೆ ಪ್ರಕಟ ಲಕ್ಷಣ

ಅಪರೂಪದ ಬಾಂಬೆ ಪ್ರಕಟ ಲಕ್ಷಣವನ್ನು (ಹೆಚ್‌ಹೆಚ್) ಹೊಂದಿರುವ ವ್ಯಕ್ತಿಗಳು ತಮ್ಮ ಕೆಂಪುರಕ್ತ ಕಣಗಳಲ್ಲಿ ಪ್ರತಿಜನಕ ಹೆಚ್‌ನ್ನು ಪ್ರಕಟಿಸುವುದಿಲ್ಲ. ಎ ಮತ್ತು ಬಿ ಪ್ರತಿಜನಕಗಳನ್ನು ಉತ್ಪಾದಿಸಲು ಹೆಚ್ ಪ್ರತಿಜನಕವು ಪೂರ್ವಗಾಮಿಯಾಗಿ ಕೆಲಸ ಮಾಡುತ್ತದೆ, ಹೆಚ್ ಪ್ರತಿಜನಕವು ಇಲ್ಲದಿದ್ದರೆ ಆ ವ್ಯಕ್ತಿಗಳು ಎ ಅಥವಾ ಬಿ ಪ್ರತಿಜನಕಗಳನ್ನು ಹೊಂದಿಲ್ಲವೆಂದು ಅರ್ಥ (ಓ ರಕ್ತದ ಗುಂಪಿನ ರೀತಿಯಲ್ಲಿಯೇ). ಓ ಗುಂಪಿನಂತಲ್ಲದೆ, ಹೆಚ್ ಪ್ರತಿಜನಕವು ಇರುವುದಿಲ್ಲ, ಆದ ಕಾರಣ ಈ ವ್ಯಕ್ತಿಗಳು ಪ್ರತಿಜನಕ ಹೆಚ್ ಜೊತೆಗೆ ಎ ಮತ್ತು ಬಿ ಪ್ರತಿಜನಕಗಳಿಗೆ ಪ್ರತ್ಯೇಕ ಪ್ರತಿಕಾಯಗಳನ್ನು ಉತ್ಪಾದಿಸುತ್ತಾರೆ. ಒಂದು ಪಕ್ಷ ಅವರು ಓ ರಕ್ತದ ಗುಂಪಿನಿಂದ ರಕ್ತವನ್ನು ಸ್ವೀಕರಿಸಿದರೆ, ಹೆಚ್ ವಿರುದ್ಧ ಪ್ರತಿಕಾಯಗಳು ದಾನಿ ರಕ್ತದ ಆರ್‌ಬಿಸಿ ಮೇಲಿನ ಹೆಚ್ ಪ್ರತಿಜನಕಕ್ಕೆ ಬಂಧಿಯಾಗಿರುತ್ತವೆ ಹಾಗೂ ಪೂರಕ-ಹೊಂದಾಣಿಕೆ ವಿಯೋಜನೆಯಿಂದ ಆರ್‌ಬಿಸಿಗಳನ್ನು ನಾಶಮಾಡುತ್ತವೆ. ಆದ್ದರಿಂದ ಬಾಂಬೆ ಪ್ರಕಟ ಲಕ್ಷಣವು ಕೇವಲ ಇತರ ಹೆಚ್‌ಹೆಚ್‌ ದಾನಿಗಳಿಂದ ಮಾತ್ರ ರಕ್ತವನ್ನು ಪಡೆಯಬಹುದು (ಓ ಗುಂಪಿನವರಂತೆ ಅವರು ದಾನ ಮಾಡಬಹುದಾಗಿದ್ದರೂ).

ಯೂರೋಪ್ ಮತ್ತು ಹಿಂದಿನ ಯುಎಸ್‍ಎಸ್‌ಆರ್‌ನಲ್ಲಿನ ನಾಮಕರಣ

ಎಬಿಓ ರಕ್ತ ವ್ಯವಸ್ಥೆಯಲ್ಲಿನ "ಓ" ಗುಂಪನ್ನು ಯೂರೋಪಿನ ಭಾಗಗಳಲ್ಲಿ ಓ ಬದಲಾಗಿ "0" (ಸೊನ್ನೆ) ಎಂದು ಕರೆಯಲಾಗುತ್ತಿದ್ದು ಇದು ಎ ಅಥವಾ ಬಿ ಪ್ರತಿಜನಕದ ಕೊರತೆಯನ್ನು ಸೂಚಿಸುತ್ತದೆ. ಹಿಂದಿನ ಯುಎಸ್‌ಎಸ್‌ಆರ್‌ನಲ್ಲಿ ರಕ್ತ ಮಾದರಿಗಳನ್ನು ಅಕ್ಷರಗಳ ಬದಲಾಗಿ ಸಂಖ್ಯೆಗಳನ್ನು ಮತ್ತು ರೋಮನ್ ಅಂಕಿಗಳಿಂದ ಉಲ್ಲೇಖಿಸಲಾಗುತ್ತಿತ್ತು. ಇದು ಜಾನ್‌ಸ್ಕಿಯ ರಕ್ತ ಮಾದರಿಗಳ ಮೂಲ ವರ್ಗೀಕರಣವಾಗಿದೆ. ಇದು ಮಾನವ ರಕ್ತಮಾದರಿಗಳನ್ನು I, II, III, ಮತ್ತು IV, ಎಂದು ಹೆಸರಿಸುತ್ತದೆ, ಇವುಗಳನ್ನು ಬೇರೆಡೆಗಳಲ್ಲಿ ಅನುಕ್ರಮವಾಗಿ ಓ, ಎ, ಬಿ, ಮತ್ತು ಎಬಿ ಎಂದು ಹೆಸರಿಸಲಾಗುತ್ತದೆ.[೬೧] ರಕ್ತ ಮಾದರಿಗೆ ಸಂಬಂಧಿಸಿದಂತೆ ಎ ಮತ್ತು ಬಿ ಎಂಬ ಹೆಸರನ್ನು ಲುಡ್‌ವಿಕ್ ಹಿರ್ಝ್‌ಫ್ಲೆಡ್ ಪ್ರಸ್ತಾಪಿಸಿದ್ದರು.

ಎಬಿಓ ಮತ್ತು ರೀಸಸ್ ಡಿ ಜಾರುಗಾಜು ಪರೀಕ್ಷಾ ವಿಧಾನದ ಉದಾಹರಣೆಗಳು

ಮೇಲೆ ತೋರಿಸಿದ ಜಾರುಗಾಜು ಪರೀಕ್ಷಾ ವಿಧಾನದಲ್ಲಿ, ದ್ರವರೂಪದ ರಾಸಾಯನಿಕ ಕಾರಕಗಳೊಂದಿಗೆ ಗಾಜಿನ ಪಟ್ಟಿಯೊಂದರ ಮೇಲೆ ಮೂರು ಹನಿ ರಕ್ತವನ್ನು ಇಡಲಾಗಿದೆ. ಅಂಟಿಕೊಂಡಿರುವಿಕೆಯು ರಕ್ತದಲ್ಲಿನ ರಕ್ತ ಗುಂಪು ಪ್ರತಿಜನಕಗಳ ಇರುವಿಕೆಯನ್ನು ಸೂಚಿಸುತ್ತದೆ.

ಇತರೆ ವಿಧಾನಗಳಿಂದ ತಯಾರಿಸಲಾದ ಸಾರ್ವತ್ರಿಕ ರಕ್ತ ಮತ್ತು ಕೃತಕ ರಕ್ತ

ಏಪ್ರಿಲ್ 2007 ರಲ್ಲಿ ಅಂತರಾಷ್ಟ್ರೀಯ ಸಂಶೋಧಕರ ತಂಡವು ನೇಚರ್ ಬಯೋಟೆಕ್ನಾಲಜಿ ಎಂಬ ಪತ್ರಿಕೆಯಲ್ಲಿ, ಎ, ಬಿ, ಮತ್ತು ಎಬಿ ರಕ್ತಗುಂಪುಗಳನ್ನು ಓ ಗುಂಪಿಗೆ ಪರಿವರ್ತಿಸುವ ಕಡಿಮೆ ಬೆಲೆಯ ಮತ್ತು ಸಮರ್ಥ ಹಾದಿಯನ್ನು ಸಾದರಪಡಿಸಿದರು.[೬೨] ಕೆಂಪು ರಕ್ತ ಕಣದಿಂದ ರಕ್ತ ಗುಂಪು ಪ್ರತಿಜನಕಗಳನ್ನು ತೆಗೆದುಹಾಕಲು ನಿರ್ದಿಷ್ಟ ಬ್ಯಾಕ್ಟೀರಿಯಾದಿಂದ ಗ್ಲೈಕೊಸಿಡೇಸ್‌ ಕಿಣ್ವಗಳನ್ನು ಬಳಸಿಕೊಂಡು ಇದನ್ನು ಮಾಡಲಾಗುತ್ತದೆ. ಎ ಮತ್ತು ಬಿ ಪ್ರತಿಜನಕಗಳನ್ನು ತೆಗೆದುಹಾಕಿದರೂ ಇದು ರೀಸಸ್ ರಕ್ತ ಕಣಗಳ ಮೇಲಿನ ರೀಸಸ್ ರಕ್ತಗುಂಪು ಪ್ರತಿಜನಕದ ಸಮಸ್ಯೆಯನ್ನು ನಿಭಾಯಿಸುವುದಿಲ್ಲ. ಜೀವಂತ ಸಂದರ್ಭಗಳಲ್ಲಿ ವಿಧಾನವನ್ನು ಅವಲಂಬಿಸುವ ಮುನ್ನ ರೋಗಿ ಪರೀಕ್ಷೆಗಳನ್ನು ನಡೆಸಲಾಗುವುದು.

ತುರ್ತು ಸಂದರ್ಭಗಳಲ್ಲಿ ಪೂರಕವಾಗುವ ಕೃತಕ ರಕ್ತ ಉತ್ಪಾದನೆಯು ರಕ್ತ ಪ್ರತಿಜನಕದ ಸಮಸ್ಯೆಗೆ ಇನ್ನೊಂದು ಮಾರ್ಗೋಪಾಯವಾಗಿದೆ. [೨] ಬಿಬಿಸಿ

ಊಹೆಗಳು

ಎಬಿಓ ರಕ್ತ ಗುಂಪುಗಳ ಸುತ್ತ ಅನೇಕ ಜನಪ್ರಿಯ ಊಹೆಗಳಿವೆ. ಎಬಿಓ ರಕ್ತ ಗುಂಪುಗಳನ್ನು ಗುರುತಿಸಿದಾಗಿನಿಂದ ಈ ನಂಬಿಕೆಗಳು ಅಸ್ವಿತ್ವದಲ್ಲಿವೆ ಹಾಗೂ ಪ್ರಪಂಚದಾದ್ಯಂತ ಭಿನ್ನ ಸಂಸ್ಕೃತಿಯಲ್ಲಿ ಇವುಗಳನ್ನು ಕಾಣಬಹುದು. ಉದಾಹರಣೆಗೆ, 1930ರ ದಶಕದಲ್ಲಿ, ಜಪಾನ್ ಮತ್ತು ಜಗತ್ತಿನ ಇತರೆ ಭಾಗಗಳಲ್ಲಿ ವ್ಯಕ್ತಿತ್ವ ವಿಧಗಳಿಗೆ ರಕ್ತ ಗುಂಪುಗಳನ್ನು ಜೋಡಿಸುವುದು ಜನಪ್ರಿಯವಾಗಿತ್ತು.[೬೩]

ಪೀಟರ್ ಜೆ.ಡಿ’ಅಡ್ಯಮೊನ ಪುಸ್ತಕ ಈಟ್ ರೈಟ್ ಫಾರ್ ಯುವರ್ ಬ್ಲಡ್ ಟೈಪ್ ನ ಜನಪ್ರಿಯತೆ, ಈ ಅಭಿಪ್ರಾಯಗಳು ದೃಢವಾಗಿ ನಿಂತಿವೆ ಎಂಬುದನ್ನು ಸೂಚಿಸುತ್ತದೆ. ಈ ಪುಸ್ತಕ ಎಬಿಓ ರಕ್ತ ಮಾದರಿ ಒಬ್ಬರ ತಕ್ಕಮಟ್ಟದ ಆಹಾರ ಪದ್ಧತಿಯನ್ನು ನಿರ್ಧರಿಸುತ್ತದೆ ಎಂದು ಹೇಳುತ್ತದೆ.[೬೪]

ಹೆಚ್ಚುವರಿ ಕಲ್ಪನೆಗಳಲ್ಲಿ, ಎ ಗುಂಪು ಗಂಭೀರ ಜಡತ್ವ ಉಂಟುಮಾಡುತ್ತದೆ, ಓ ಗುಂಪು ಪರಿಪೂರ್ಣ ಹಲ್ಲುಗಳೊಂದಿಗೆ ಸಂಬಂಧಿಸಿರುತ್ತದೆ, ಹಾಗೂ ಎ2 ರಕ್ತದ ಗುಂಪಿನವರು ಉನ್ನತ ಬುದ್ಧಿ ಪ್ರಮಾಣವನ್ನು ಹೊಂದಿರುತ್ತಾರೆಂಬ ವಿಚಾರಗಳು ಸೇರಿವೆ. ಈ ಪರಿಕಲ್ಪನೆಗಳಿಗೆ ಸಹಕಾರಿಯಾದ ವೈಜ್ಞಾನಿಕ ಸಾಕ್ಷ್ಯಗಳು ಅಸ್ತಿತ್ವದಲ್ಲಿಲ್ಲ.[೬೫]

ಉಲ್ಲೇಖಗಳು

ಹೆಚ್ಚಿನ ಮಾಹಿತಿಗಾಗಿ

ಬಾಹ್ಯ ಕೊಂಡಿಗಳು