ಎಲಚಿ

ಝಿಝಿಫಸ್ (ಬೋರೆ ಹಣ್ಣು) ಎಲಚೆಹಣ್ಣು
Ziziphus jujuba
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Rosids
ಗಣ:
Rosales
ಕುಟುಂಬ:
Rhamnaceae
ಕುಲ:
Ziziphus
ಪ್ರಜಾತಿ:
Z. jujuba
Binomial name
Ziziphus jujuba
Mill.
Synonyms[೧]
  • Paliurus mairei H. Lèv.
  • Rhamnus jujuba L.
  • Rhamnus soporifera Lour.
  • Rhamnus zizyphus L.
  • Ziziphus jujuba (L.) Lam.
  • Ziziphus jujuba (L.) Gaertn.
  • Ziziphus mairei (H. Lèv.) Browicz & Lauener
  • Ziziphus nitida Roxb.
  • Ziziphus orthacantha DC.
  • Ziziphus poiretii G.Don nom. illeg.
  • Ziziphus rotundata DC.
  • Ziziphus sativa Gaertn.
  • Ziziphus soporifera (Lour.) Stokes
  • Ziziphus spinosa (Bunge) Hu ex F.H. Chen
  • Ziziphus tomentosa Poir.
  • Ziziphus trinervia Roth nom. illeg.
  • Ziziphus vulgaris var. inermis Bunge
  • Ziziphus vulgaris var. spinosa Bunge
  • Ziziphus zizyphus (L.) H.Karst.
  • Ziziphus zizyphus (L.) Meikle
  • Zizyphon jujubum St.-Lag.
ಹಸಿ ಎಲಚಿ ಹಣ್ಣು
Azufaifas fcm.jpg
Fresh jujube fruit
Nutritional value per 100 g (3.5 oz)
ಆಹಾರ ಚೈತನ್ಯ331 kJ (79 kcal)
ಶರ್ಕರ ಪಿಷ್ಟ20.23 g
ಕೊಬ್ಬು0.2 g
Protein1.2 g
ನೀರು77.86 g
Vitamin A equiv.40 μg (5%)
Thiamine (vit. B1)0.02 mg (2%)
Riboflavin (vit. B2)0.04 mg (3%)
Niacin (vit. B3)0.9 mg (6%)
Vitamin B60.081 mg (6%)
Vitamin C69 mg (83%)
ಕ್ಯಾಲ್ಸಿಯಂ21 mg (2%)
ಕಬ್ಬಿಣ ಸತ್ವ0.48 mg (4%)
ಮೆಗ್ನೇಸಿಯಂ10 mg (3%)
ಮ್ಯಾಂಗನೀಸ್0.084 mg (4%)
ರಂಜಕ23 mg (3%)
ಪೊಟಾಸಿಯಂ250 mg (5%)
ಸೋಡಿಯಂ3 mg (0%)
ಸತು0.05 mg (1%)
Link to USDA Database entry
Percentages are roughly approximated
using US recommendations for adults.
Source: USDA Nutrient Database
ಒಣ ಎಲಚಿ ಹಣ್ಣು
Ziziphus jujuba MS 2461.JPG
Jujube fruit naturally turns red upon drying.
Nutritional value per 100 g (3.5 oz)
ಆಹಾರ ಚೈತನ್ಯ1,201 kJ (287 kcal)
ಶರ್ಕರ ಪಿಷ್ಟ73.6 g
ಕೊಬ್ಬು1.1 g
Protein3.7 g
ನೀರು19.7 g
Vitamin A equiv.0 μg (0%)
Thiamine (vit. B1)0.21 mg (18%)
Riboflavin (vit. B2)0.36 mg (30%)
Niacin (vit. B3)0.5 mg (3%)
Vitamin B60 mg (0%)
Vitamin C13 mg (16%)
ಕ್ಯಾಲ್ಸಿಯಂ79 mg (8%)
ಕಬ್ಬಿಣ ಸತ್ವ1.8 mg (14%)
ಮೆಗ್ನೇಸಿಯಂ37 mg (10%)
ಮ್ಯಾಂಗನೀಸ್0.305 mg (15%)
ರಂಜಕ100 mg (14%)
ಪೊಟಾಸಿಯಂ531 mg (11%)
ಸೋಡಿಯಂ9 mg (1%)
ಸತು0.19 mg (2%)
Link to USDA Database entry
Percentages are roughly approximated
using US recommendations for adults.
Source: USDA Nutrient Database
Ziziphus zizyphus - MHNT


ಎಲಚಿ(ಬೋರೆ ಹಣ್ಣು): ರ್ಯಾಮ್ನೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವೃಕ್ಷ ಜಾತಿಯ ಸಸ್ಯ (ಝಿಝಿಫಸ್ ಜುಜೂಬ), ಇಂಗ್ಲೀಷ್ ಭಾಷೆಯಲ್ಲಿ ಇದಕ್ಕೆ ಬ್ಹೇರ್ ಫ್ರೂಟ್ ಟ್ರೀ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಬೋರೆ ಎಂಬ ಹೆಸರೂ ಉಂಟು. ಇದು ಭಾರತ, ಪಾಕಿಸ್ತಾನ, ಮಯನ್ಮಾರ್, ಶ್ರೀಲಂಕ, ಚೀನ, ಆಫ್ಘಾನಿಸ್ತಾನ, ಆಸ್ಟ್ರೇಲಿಯ, ಆಫ್ರಿಕ ಗಳಲ್ಲಿ ಹರಡಿದೆ. ಹುಲ್ಲುಗಾವಲು, ಒಣಬಂಜರು ನೆಲಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಅಲಂಕಾರಕ್ಕಾಗೂ ಹಣ್ಣುಗಳಿಗಾಗೂ ಬೆಳೆಸುತ್ತಾರೆ.

ಲಕ್ಷಣಗಳು

ಎಲಚಿ ಮರ 10-15ಮೀ. ಎತ್ತರಕ್ಕೆ ಬೆಳೆಯುವ ಕುಳ್ಳು ಕಾಂಡದ ಮಧ್ಯಮ ಪ್ರಮಾಣದ ವೃಕ್ಷ. ಕಾಂಡ ಕಪ್ಪುಬಣ್ಣದ ತೊಗಟೆಯಿಂದ ಆವೃತ ವಾಗಿದೆ. ತೊಗಟೆಯ ಮೇಲ್ಗಡೆ ಸೀಳಿಕೆ ಗಳಿದ್ದು ಒಳಭಾಗ ಕೆಂಪಾಗಿರುತ್ತದೆ. ರೆಂಬೆಗಳು ತೂಗು ಬಿದ್ದಿರುತ್ತವೆ. ಪುಷ್ಯ ಪತ್ರಗಳು (ಸ್ಟಿಪ್ಯುಲ್ಸ್‌) ಮುಳ್ಳುಗಳಾಗಿ ಮಾರ್ಪಟ್ಟು ಒಂದು ನೆಟ್ಟಗೂ ಇನ್ನೊಂದು ಇಳಿಮುಖವಾಗಿಯೂ ಇವೆ. ಸುಮಾರು ಚಕ್ರಾಕಾರವಾಗಿ ಮೂರು ನರಗಳುಳ್ಳ ಎಲೆಗಳ ಕೆಳಭಾಗದಲ್ಲಿ ಬಿಳಿಗೂದಲುಗಳಿವೆ. ಹೂಗಳು ಸಣ್ಣವಾಗಿ ಹಸಿರು. ಹಳದಿ ಬಣ್ಣದಿಂದ ಕೂಡಿದ್ದು ಎಲೆ ಕಂಕುಳ ನಡುವೆ ಮಧ್ಯಾರಂಭಿ ಗೊಂಚಲುಗಳಲ್ಲಿ (ಸೈಮ್ಸ್‌) ಕಾಣಬರುತ್ತವೆ. ಹಣ್ಣಗಳು ದುಂಡಾಗಿ ಕಿತ್ತಳೆ ಅಥವಾ ಕೆಂಪು ಬಣ್ಣದಿಂದ ಕೂಡಿದ ಅಷ್ಟಿಫಲಗಳು, ಒಳ ಓಟೆ ಬಹುಗಟ್ಟಿ. ರಾಯ ಬೋರೆ ಎಂಬ ಒಂದು ಜಾತಿ ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಕೊಡುತ್ತದೆ.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: