ಜನವರಿ
ಜನವರಿ ಆಧುನಿಕ ತಾರೀಖು ಪಟ್ಟಿಯ (ಕ್ರೈಸ್ತವರ್ಷದ) ಮೊದಲನೆಯ ತಿಂಗಳು. 31 ದಿವಸಗಳಿವೆ. ಜನವರಿಯ ಮೊದಲನೆಯ ದಿವಸ ನೂತನ ವರ್ಷಾರಂಭವಾಗುತ್ತದೆ. ಕ್ರಿ.ಪೂ. ಸು. 153ರ ಜನವರಿ ವರ್ಷದ ಹನ್ನೊಂದನೆಯ ತಿಂಗಳೆಂದು ಪರಿಗಣಿತವಾಗಿತ್ತು. ಗ್ರೆಗೋರಿಯನ್ ತಾರೀಖುಪಟ್ಟಿಗೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾರ್ವತ್ರಿಕ ಮನ್ನಣೆ ದೊರೆತ ಬಳಿಕ (1752) ಜನವರಿಯೇ ವರ್ಷದ ಪ್ರಾರಂಭ ತಿಂಗಳು ಎಂಬುದು ರೂಢಿಗೆ ಬಂತು. ಭಾರತೀಯ ಪಂಚಾಂಗದ ರೀತ್ಯ ಮಾರ್ಗಶಿರ-ಪುಷ್ಯಮಾಸಗಳು ಜನವರಿಯಲ್ಲಿ ಕಾಣಬರುತ್ತವೆ.
ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ರೋಮ್ನ ಪುರಾಣದಲ್ಲಿ ದ್ವಾರಗಳ ದೇವತೆಯಾದ ಜಾನಸ್ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ.
ಪ್ರಮುಖ ದಿನಗಳು
- ಜನವರಿ ೧: ವಿಶ್ವದಾದ್ಯಂತ 'ಹೊಸ ವರ್ಷದ ದಿನ', ಜಾಗತಿಕ ಕುಟುಂಬ ದಿನ
- ಜನವರಿ ೧೧: ಭಾರತದ ಎರಡನೇಯ ಪ್ರಧಾನಮಂತ್ರಿ ಲಾಲ್ ಬಹಾದುರ್ ಶಾಸ್ತ್ರಿಯವರು ಮರಣ ಹೊಂದಿದ ದಿನ.
- ಜನವರಿ ೧೪ ಅಥವಾ ೧೫ ರಂದು ಮಕರ ಸಂಕ್ರಾಂತಿ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ.
- ಜನವರಿ ೨೬: ಭಾರತದ ಗಣರಾಜ್ಯೋತ್ಸವ ದಿನ.ಭಾರತವು ೧೯೫೦ನೇ ಇಸವಿಯಲ್ಲಿ ಈ ದಿನದಂದು ಗಣರಾಜ್ಯವಾಗಿ ಘೋಷಿಸಲ್ಪಟ್ಟಿತು.
- ಜನವರಿ ೩೦: ಭಾರತದ ರಾಷ್ತ್ರಪಿತ ಮಹಾತ್ಮ ಗಾಂಧೀಜಿಯವರು ಮರಣ ಹೊಂದಿದ ದಿನ. ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ.
- ಜನವರಿ ೨೩ : ಭಾರತದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನ.
- ಜನವರಿ ೨೪: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
- ಜನವರಿ ೨೫: ರಾಷ್ಟ್ರೀಯ ಪ್ರವಾಸೋದ್ಯಮ ದಿನ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ