ಜಯಂತಿ (ನಟಿ)

ಭಾರತೀಯ ನಟಿ

ಜಯಂತಿಯವರು (೧೯೪೫-೨೦೨೧) ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟಿಯಲ್ಲಿ ಒಬ್ಬರು. ಒಟ್ಟು ಆರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೬೮ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ ಜೇನು ಗೂಡು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ''ಕಮಲ ಕುಮಾರಿ.'' ಅದಕ್ಕಿಂತ ಮುನ್ನ ''ಜಗದೇಕ ವೀರನ ಕಥೆ'' ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ ''ಮಿಸ್ ಲೀಲಾವತಿ'' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. 'ಎರಡು ಮುಖ'(೧೯೬೯), 'ಮನಸ್ಸಿನಂತೆ ಮಾಂಗಲ್ಯ'(೧೯೭೬), 'ಧರ್ಮ ದಾರಿ ತಪ್ಪಿತು'(೧೯೮೧), 'ಮಸಣದ ಹೂವು' (೧೯೮೫), 'ಆನಂದ್'(೧೯೮೬) ಚಿತ್ರಗಳಲ್ಲಿನ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ವಿಶಿಷ್ಟ ಅಭಿನಯ ನೀಡಿದ್ದಾರೆ.

ಜಯಂತಿ
ಕುಲ ಗೌರವ ಚಿತ್ರದಲ್ಲಿ
ಜನನ
ಕಮಲಕುಮಾರಿ

೧೯೪೫
ಬಳ್ಳಾರಿ, ಮೈಸೂರು ರಾಜ್ಯ, ಬ್ರಿಟಿಷ್ ಭಾರತ
ವೃತ್ತಿ(ಗಳು)ನಟಿ, ನಿರ್ದೇಶಕಿ, ನಿರ್ಮಾಪಕಿ
Years active೧೯೬೧–೨೦೨೦
Partner(s)ಪೇಕೇಟಿ ಶಿವರಾಂ, ವಿಜಯ್

ಜಯಂತಿ ಅಭಿನಯದ ಕೆಲವು ಚಿತ್ರಗಳು

ಕನ್ನಡ

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೬೩ಜೇನುಗೂಡುವೈ.ಆರ್.ಸ್ವಾಮಿಕೆ.ಎಸ್.ಅಶ್ವಥ್, ಪಂಡರೀಬಾಯಿ, ಉದಯಕುಮಾರ್, ಚಂದ್ರಕಲಾ
೧೯೬೩ಶ್ರೀರಾಮಾಂಜನೇಯ ಯುದ್ಧಎಮ್.ಎಸ್.ನಾಯಕ್ರಾಜ್ ಕುಮಾರ್, ಉದಯಕುಮಾರ್, ಆದವಾನಿ ಲಕ್ಷ್ಮಿದೇವಿ
೧೯೬೪ಕಲಾವತಿಟಿ.ವಿ.ಸಿಂಗ್ ಠಾಕೂರ್ಉದಯಕುಮಾರ್, ಲತಾ
೧೯೬೪ಕವಲೆರಡು ಕುಲವೊಂದುಟಿ.ವಿ.ಸಿಂಗ್ ಠಾಕೂರ್ರಮೇಶ್, ಉದಯಕುಮಾರ್, ಕಲ್ಪನಾ
೧೯೬೪ಚಂದವಳ್ಳಿಯ ತೋಟಟಿ.ವಿ.ಸಿಂಗ್ ಠಾಕೂರ್ರಾಜ್ ಕುಮಾರ್, ಉದಯಕುಮಾರ್, ರಾಜಶ್ರೀ
೧೯೬೪ಪತಿಯೇ ದೈವಆರ್.ನಾಗೇಂದ್ರ ರಾವ್ಆರ್.ಎನ್.ಸುದರ್ಶನ್, ಕಲ್ಪನಾ, ಆರ್.ನಾಗೇಂದ್ರ ರಾವ್
೧೯೬೪ಪ್ರತಿಜ್ಞೆಬಿ.ಎಸ್.ರಂಗಾರಾಜ್ ಕುಮಾರ್, ಲೀಲಾವತಿ
೧೯೬೪ಮುರಿಯದ ಮನೆವೈ.ಆರ್.ಸ್ವಾಮಿರಾಜ್ ಕುಮಾರ್, ಉದಯಕುಮಾರ್, ವಾಣಿಶ್ರೀ
೧೯೬೪ತುಂಬಿದ ಕೊಡಟಿ.ವಿ.ಸಿಂಗ್ ಠಾಕೂರ್ಉದಯಕುಮಾರ್, ಲತಾ
೧೯೬೫ಬೆಟ್ಟದ ಹುಲಿಎ.ವಿ.ಶೇಷಗಿರಿ ರಾವ್ರಾಜ್ ಕುಮಾರ್, ಪಂಢರೀಬಾಯಿ
೧೯೬೫ಬೆರೆತ ಜೀವಕು. ರಾ. ಸೀತಾರಾಮ ಶಾಸ್ತ್ರಿಕಲ್ಯಾಣ್ ಕುಮಾರ್, ಬಿ.ಸರೋಜಾ ದೇವಿ
೧೯೬೫ಮಿಸ್.ಲೀಲಾವತಿಎಂ.ಆರ್.ವಿಠಲ್ಉದಯಕುಮಾರ್, ರಮೇಶ್, ವಾಣಿಶ್ರೀ
೧೯೬೫ವಾತ್ಸಲ್ಯವೈ.ಆರ್.ಸ್ವಾಮಿರಾಜ್ ಕುಮಾರ್, ಲೀಲಾವತಿ, ಉದಯಕುಮಾರ್
೧೯೬೬ಎಂದೂ ನಿನ್ನವನೆಕಲ್ಯಾಣ್ ಕುಮಾರ್ಕಲ್ಯಾಣ್ ಕುಮಾರ್, ಲತಾ
೧೯೬೬ಕಿಲಾಡಿ ರಂಗಜಿ.ವಿ.ಅಯ್ಯರ್ರಾಜ್ ಕುಮಾರ್
೧೯೬೬ದೇವಮಾನವಸಿ.ಪಿ.ಜಂಬುಲಿಂಗಂಉದಯಕುಮಾರ್, ವಂದನಾ, ಬಿ.ವಿ.ರಾಧ
೧೯೬೬ಪ್ರೇಮಮಯಿಎಂ.ಆರ್.ವಿಠಲ್ರಾಜ್ ಕುಮಾರ್, ಲೀಲಾವತಿ, ಕೆ.ಎಸ್.ಅಶ್ವಥ್
೧೯೬೬ಮಂತ್ರಾಲಯ ಮಹಾತ್ಮೆಟಿ.ವಿ.ಸಿಂಗ್ ಠಾಕೂರ್ರಾಜ್ ಕುಮಾರ್, ಉದಯಕುಮಾರ್
೧೯೬೬ಮಮತೆಯ ಬಂಧನಬಿ.ಎಸ್.ನಾರಯಣ್ಬಿ.ಎಂ.ವೆಂಕಟೇಶ್
೧೯೬೬ಮಹಾಶಿಲ್ಪಿಎಸ್.ವಿ.ದೊರೆಸ್ವಾಮಿಜ್ವಲನಯ್ಯ
೧೯೬೭ಅನುರಾಧಆರೂರು ಪಟ್ಟಾಭಿಪಂಢರೀಬಾಯಿ, ಕೆ.ಎಸ್.ಅಶ್ವಥ್, ರಾಜಾಶಂಕರ್, ಮೈನಾವತಿ
೧೯೬೭ಇಮ್ಮಡಿ ಪುಲಿಕೇಶಿಎನ್.ಸಿ.ರಾಜನ್ರಾಜ್ ಕುಮಾರ್, ಕಲ್ಪನಾ
೧೯೬೭ಕಲ್ಲುಸಕ್ಕರೆಕಲ್ಯಾಣ್ ಕುಮಾರ್ಕಲ್ಯಾಣ್ ಕುಮಾರ್, ವಂದನಾ, ರೇವತಿ
೧೯೬೭ಚಕ್ರತೀರ್ಥದ್ವಿಪಾತ್ರಪೆಕೇಟಿ ಶಿವರಾಂರಾಜ್ ಕುಮಾರ್, ಉದಯಕುಮಾರ್, ಬಿ.ಎಂ.ವೆಂಕಟೇಶ್
೧೯೬೭ದೇವರ ಗೆದ್ದ ಮಾನವಹುಣಸೂರು ಕೃಷ್ಣಮೂರ್ತಿರಾಜ್ ಕುಮಾರ್, ನರಸಿಂಹರಾಜು, ಶೈಲಶ್ರೀ
೧೯೬೭ನಕ್ಕರೆ ಅದೇ ಸ್ವರ್ಗಎಂ.ಆರ್.ವಿಠಲ್ನರಸಿಂಹರಾಜು, ಶೈಲಶ್ರೀ, ಅರುಣ್ ಕುಮಾರ್
೧೯೬೭ಮನಸ್ಸಿದ್ದರೆ ಮಾರ್ಗಎಂ.ಆರ್.ವಿಠಲ್ರಾಜ್ ಕುಮಾರ್, ರಾಜಾಶಂಕರ್, ಉದಯಚಂದ್ರಿಕಾ,
ರಂಗಾ, ಶೈಲಶ್ರೀ, ನರಸಿಂಹರಾಜು, ಬಿ.ವಿ.ರಾಧ
೧೯೬೭ಮಿಸ್ ಬೆಂಗಳೂರುಪಿ.ಎಸ್.ಮೂರ್ತಿವಂದನಾ, ಅರುಣ್ ಕುಮಾರ್, ನರಸಿಂಹರಾಜು
೧೯೬೭ಮುದ್ದು ಮೀನವೈ.ಆರ್.ಸ್ವಾಮಿಕಲ್ಯಾಣ್ ಕುಮಾರ್
೧೯೬೭ಲಗ್ನಪತ್ರಿಕೆಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ನರಸಿಂಹರಾಜು, ದ್ವಾರಕೀಶ್, ಬಿ.ವಿ.ರಾಧ
೧೯೬೮ಜೇಡರ ಬಲೆದೊರೈ-ಭಗವಾನ್ರಾಜ್ ಕುಮಾರ್, ಶೈಲಶ್ರೀ, ಕೆ.ಎಸ್.ಅಶ್ವಥ್, ನರಸಿಂಹರಾಜು
೧೯೬೮ಬೆಂಗಳೂರು ಮೈಲ್ಎಲ್.ಎಸ್.ನಾರಾಯಣರಾಜ್ ಕುಮಾರ್, ನರಸಿಂಹರಾಜು, ಬಿ.ವಿ.ರಾಧ
೧೯೬೮ಮಾತೆಯೇ ಮಹಾ ಮಂದಿರಬಿ.ಸಿ.ಶ್ರೀನಿವಾಸ್ಉದಯಕುಮಾರ್, ಬಿ.ಎಂ.ವೆಂಕಟೇಶ್
೧೯೬೮ಸಿಂಹಸ್ವಪ್ನಸುಬ್ಬರಾವ್ರಾಜ್ ಕುಮಾರ್
೧೯೬೯ಅದೇ ಹೃದಯ ಅದೇ ಮಮತೆಎಂ.ಏನ್.ಫ್ರಸಾದ್ರಮೇಶ್, ಸಾಹುಕಾರ್ ಜಾನಕಿ
೧೯೬೯ಎರಡು ಮುಖಎಂ.ಆರ್.ವಿಠಲ್ರಾಜೇಶ್
೧೯೬೯ಗೃಹಲಕ್ಷ್ಮಿವಿಜಯಸತ್ಯಂರಮೇಶ್, ಭಾರತಿ, ರಾಜಾಶಂಕರ್
೧೯೬೯ಚಿಕ್ಕಮ್ಮಆರ್.ಸಂಪತ್ರಾಜ್ ಕುಮಾರ್, ಬಾಲಕೃಷ್ನ, ಶ್ರೀನಾಥ್, ವಿಜಯಲಲಿತ
೧೯೬೯ಚೂರಿ ಚಿಕ್ಕಣ್ಣಆರ್.ರಾಮಮೂರ್ತಿರಾಜ್ ಕುಮಾರ್, ಬಿ.ವಿ.ರಾಧ
೧೯೬೯ಪುನರ್ಜನ್ಮಪೆಕೇಟಿ ಶಿವರಾಂರಾಜ್ ಕುಮಾರ್, ಚಂದ್ರಕಲಾ
೧೯೬೯ಬ್ರೋಕರ್ ಭೀಷ್ಮಾಚಾರಿಬಿ.ಸಿ.ಶ್ರೀನಿವಾಸ್ರಾಜಾಶಂಕರ್, ರಾಜೇಶ್, ಶೈಲಶ್ರೀ
೧೯೬೯ಭಲೇ ಬಸವಬಿ.ಎಸ್.ರಂಗಾಉದಯಕುಮಾರ್, ರಾಜೇಶ್, ರಾಜಶ್ರೀ
೧೯೬೯ಭಲೇ ರಾಜವೈ.ಆರ್.ಸ್ವಾಮಿರಾಜ್ ಕುಮಾರ್, ಬಿ.ವಿ.ರಾಧ, ರಂಗ
೧೯೬೯ಭಾಗೀರಥಿಟಿ.ವಿ.ಸಿಂಗ್ ಠಾಕೂರ್ಪಂಢರೀಬಾಯಿ, ಉದಯಕುಮಾರ್, ರಾಜಾಶಂಕರ್
೧೯೬೯ಮದುವೆ ಮದುವೆ ಮದುವೆಗೀತಪ್ರಿಯಉದಯಕುಮಾರ್, ಬಿ.ಎಂ.ವೆಂಕಟೇಶ್
೧೯೭೦ಕಣ್ಣೀರುಬಿ.ಎಂ.ಶಂಕರ್ಬಿ.ಎಂ.ವೆಂಕಟೇಶ್
೧೯೭೦ದೇವರ ಮಕ್ಕಳುವೈ.ಆರ್.ಸ್ವಾಮಿರಾಜ್ ಕುಮಾರ್, ರಾಜೇಶ್, ಕಲ್ಪನಾ
೧೯೭೦ನನ್ನ ತಮ್ಮಕೆ.ಬಾಬು ರಾವ್ರಾಜ್ ಕುಮಾರ್, ಗಂಗಾಧರ್
೧೯೭೦ಪರೋಪಕಾರಿವೈ.ಆರ್.ಸ್ವಾಮಿರಾಜ್ ಕುಮಾರ್
೧೯೭೦ಬಾಳು ಬೆಳಗಿತುಸಿದ್ಧಲಿಂಗಯ್ಯರಾಜ್ ಕುಮಾರ್, ಭಾರತಿ
೧೯೭೦ಶ್ರೀ ಕೃಷ್ಣದೇವರಾಯಬಿ.ಆರ್.ಪಂತುಲುರಾಜ್ ಕುಮಾರ್, ಭಾರತಿ
೧೯೭೦ಸೇಡಿಗೆ ಸೇಡುಎ.ವಿ.ಶೇಷಗಿರಿ ರಾವ್ಉದಯಕುಮಾರ್
೧೯೭೧ಕಲ್ಯಾಣಿಗೀತಪ್ರಿಯಗಂಗಾಧರ್
೧೯೭೧ಕಸ್ತೂರಿ ನಿವಾಸದೊರೈ-ಭಗವಾನ್ರಾಜ್ ಕುಮಾರ್, ರಾಜಾಶಂಕರ್, ಆರತಿ
೧೯೭೧ಕುಲಗೌರವಪೆಕೇಟಿ ಶಿವರಾಂರಾಜ್ ಕುಮಾರ್, ಭಾರತಿ
೧೯೭೧ತಂದೆ ಮಕ್ಕಳುಎಸ್.ವಿ.ಶ್ರೀಕಾಂತ್ಸುದರ್ಶನ್, ರಮೇಶ್, ಬಿ.ಸರೋಜಾದೇವಿ, ಶ್ರೀನಾಥ್
೧೯೭೧ಬಾಳ ಬಂಧನಪೆಕೇಟಿ ಶಿವರಾಂರಾಜ್ ಕುಮಾರ್
೧೯೭೧ಮಾಲತಿ ಮಾಧವಬಿ.ಆರ್.ಪಂತುಲುಗಂಗಾಧರ್, ಸುದರ್ಶನ್, ಶೈಲಶ್ರೀ
೧೯೭೧ಸಂಶಯ ಫಲಎ.ಎಮ್.ಸಮೀಯುಲ್ಲಾಉದಯಕುಮಾರ್
೧೯೭೧ಸಿಡಿಲಮರಿಬಿ.ಎಸ್.ರಂಗಾಉದಯಕುಮಾರ್
೧೯೭೧ಸೇಡಿನ ಕಿಡಿಬಿ.ಕೃಷ್ಣನ್ಕಲ್ಯಾಣ್ ಕುಮಾರ್, ರಾಜಾಶಂಕರ್, ಸುದರ್ಶನ್
೧೯೭೧ಹೂ ಬಿಸಿಲುಟಿ.ವಿ.ಸಿಂಗ್ ಠಾಕೂರ್ರಮೇಶ್, ರಾಜಾಶಂಕರ್
೧೯೭೨ಒಂದು ಹೆಣ್ಣಿನ ಕಥೆಬಿ.ಆರ್.ಪಂತುಲುಎಂ.ವಿ.ರಾಜಮ್ಮ, ರಾಜೇಶ್, ಸುದರ್ಶನ್, ಬಿ.ವಿ.ರಾಧ
೧೯೭೨ಕ್ರಾಂತಿವೀರಆರ್.ರಾಮಮೂರ್ತಿರಾಜ್ ಕುಮಾರ್, ರಾಜೇಶ್
೧೯೭೨ನಂದಗೋಕುಲವೈ.ಆರ್.ಸ್ವಾಮಿರಾಜ್ ಕುಮಾರ್, ರಮೆಶ್, ಬಿ.ವಿ.ರಾಧ
೧೯೭೨ನಾಗರಹಾವುಪುಟ್ಟಣ್ಣ ಕಣಗಾಲ್ವಿಷ್ಣುವರ್ಧನ್, ಆರತಿ, ಶುಭಾ
೧೯೭೨ವಿಷಕನ್ಯೆಹುಣಸೂರು ಕೃಷ್ಣಮೂರ್ತಿರಾಜೇಶ್, ಬಿ.ವಿ.ರಾಧ
೧೯೭೩ಎಡಕಲ್ಲು ಗುಡ್ಡದ ಮೇಲೆಪುಟ್ಟಣ್ಣ ಕಣಗಾಲ್ಚಂದ್ರಶೇಖರ್, ಆರತಿ, ರಂಗ
೧೯೭೩ಜಯ ವಿಜಯದ್ವಿಪಾತ್ರಎ.ವಿ.ಶೇಷಗಿರಿ ರಾವ್ಗಂಗಾಧರ್
೧೯೭೩ದೇವರು ಕೊಟ್ಟ ತಂಗಿಕೆ.ಎಸ್.ಎಲ್.ಸ್ವಾಮಿರಾಜ್ ಕುಮಾರ್, ಬಿ.ವಿ.ರಾಧ, ಶ್ರೀನಾಥ್
೧೯೭೩ಭಾರತದ ರತ್ನಟಿ.ವಿ.ಸಿಂಗ್ ಠಾಕೂರ್ಉದಯಕುಮಾರ್, ಜಯದೇವ್ ಕುಮಾರ್, ಲೀಲಾವತಿ
೧೯೭೩ಮೂರೂವರೆ ವಜ್ರಗಳುವೈ.ಆರ್.ಸ್ವಾಮಿರಾಜ್ ಕುಮಾರ್, ಶ್ರೀನಾಥ್, ಆರತಿ, ಮಂಜುಳಾ
೧೯೭೪ಮಣ್ಣಿನ ಮಗಳುದ್ವಿಪಾತ್ರಬಿ.ಎಸ್.ರಂಗಾಉದಯಕುಮಾರ್, ಗಂಗಾಧರ್, ಆರತಿ
೧೯೭೫ಕಸ್ತೂರಿ ವಿಜಯಎಸ್.ವಿ.ಶ್ರೀಕಾಂತ್ರಾಜೇಶ್
೧೯೭೬ತುಳಸಿಕೆ.ಎಸ್.ಎಲ್.ಸ್ವಾಮಿಕಲ್ಯಾಣ್ ಕುಮಾರ್, ಶ್ರೀನಾಥ್, ಮಂಜುಳಾ
೧೯೭೬ದೇವರು ಕೊಟ್ಟ ವರಆರ್.ರಾಮಮೂರ್ತಿವಿಷ್ಣುವರ್ಧನ್, ಗಂಗಾಧರ್, ಬಿ.ವಿ.ರಾಧ
೧೯೭೬ಬದುಕು ಬಂಗಾರವಾಯಿತುಎ.ವಿ.ಶೇಷಗಿರಿ ರಾವ್ರಾಜೇಶ್, ಶ್ರೀನಾಥ್, ಮಂಜುಳಾ, ಉದಯಚಂದ್ರಿಕಾ
೧೯೭೬ಬಹದ್ದೂರ್ ಗಂಡುಎ.ವಿ.ಶೇಷಗಿರಿ ರಾವ್ರಾಜ್ ಕುಮಾರ್, ಆರತಿ
೧೯೭೬ಮಾಂಗಲ್ಯ ಭಾಗ್ಯವಿಜಯಸತ್ಯಂಬಸಂತ್ ಕುಮಾರ್ ಪಾಟೀಲ್, ಭವಾನಿ
೧೯೭೭ಗಂಡ ಹೆಂಡತಿಕೆ.ಎಸ್.ಪ್ರಕಾಶ್ ರಾವ್ಶ್ರೀನಾಥ್, ಮಂಜುಳಾ
೧೯೭೭ತಾಯಿಗಿಂತ ದೇವರಿಲ್ಲವೈ.ಆರ್.ಸ್ವಾಮಿಶ್ರೀನಾಥ್, ಮಂಜುಳಾ
೧೯೭೭ದೇವರ ದುಡ್ಡುಕೆ.ಎಸ್.ಎಲ್.ಸ್ವಾಮಿರಾಜೇಶ್, ಶ್ರೀನಾಥ್
೧೯೭೭ಬನಶಂಕರಿಕೆ.ಎಸ್.ಎಲ್.ಸ್ವಾಮಿಕಲ್ಯಾಣ್ ಕುಮಾರ್, ಕೆ.ಆರ್.ವಿಜಯಾ
೧೯೭೭ಮನಸ್ಸಿನಂತೆ ಮಾಂಗಲ್ಯಬಂಡಾರು ಗಿರಿಬಾಬುಮಾನು, ಅಂಬರೀಶ್, ಬಿ.ವಿ.ರಾಧ
೧೯೭೭ಶುಭಾಶಯವಿ.ಟಿ.ತ್ಯಾಗರಾಜನ್ಕಲ್ಯಾಣ್ ಕುಮಾರ್, ಶ್ರೀನಾಥ್, ಹೇಮಾ ಚೌಧರಿ
೧೯೭೭ಶ್ರೀಮಂತನ ಮಗಳುಎ.ವಿ.ಶೇಷಗಿರಿ ರಾವ್ವಿಷ್ಣುವರ್ಧನ್, ಜಯಲಕ್ಷ್ಮಿ
೧೯೭೮ದೇವದಾಸಿಸಿ.ವಿ.ರಾಜುಉದಯಕುಮಾರ್, ಲತಾ
೧೯೭೮ಶ್ರೀದೇವಿವಿ.ಎಲ್.ಆಚಾರ್ಯಎಸ್.ಶಿವರಾಂ, ಹೇಮಾ ಚೌಧರಿ
೧೯೭೯ಬಾಳಿನ ಗುರಿಕೆ.ಎಸ್.ಪ್ರಕಾಶ್ ರಾವ್ಶ್ರೀನಿವಾಸಮೂರ್ತಿ
೧೯೭೯ವಿಜಯ್ ವಿಕ್ರಮ್ವಿ.ಸೋಮಶೇಖರ್ವಿಷ್ಣುವರ್ಧನ್, ದೀಪಾ
೧೯೮೦ಜನ್ಮ ಜನ್ಮದ ಅನುಬಂಧಶಂಕರ್ ನಾಗ್ಅನಂತ್ ನಾಗ್, ಶಂಕರ್ ನಾಗ್, ಜಯಮಾಲ, ಮಂಜುಳಾ
೧೯೮೦ಜಾರಿ ಬಿದ್ದ ಜಾಣವೈ.ಆರ್.ಸ್ವಾಮಿಲೋಕೇಶ್, ಅಶೋಕ್, ರೇಖಾ ರಾವ್,
ಶ್ರೀನಿವಾಸಮೂರ್ತಿ, ಪ್ರಮೀಳಾ ಜೋಷಾಯ್
೧೯೮೦ಮಿಥುನಮಾವಿನಕೆರೆ ರಂಗನಾಥನ್ಶ್ರೀನಾಥ್, ಮಂಜುಳಾ
೧೯೮೦ವಜ್ರದ ಜಲಪಾತಬಂಡಾರು ಗಿರಿಬಾಬುಅಂಬರೀಶ್
೧೯೮೧ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆಹುಣಸೂರು ಕೃಷ್ಣಮೂರ್ತಿಲೋಕೇಶ್, ಸುಂದರ್ ಕೃಷ್ಣ ಅರಸ್, ಜೈ ಜಗದೀಶ್, ಆರತಿ
೧೯೮೧ನಾಗ ಕಾಳ ಭೈರವತಿಪಟೂರು ರಘುವಿಷ್ಣುವರ್ಧನ್, ಜಯಮಾಲ
೧೯೮೧ರೈತನ ಮಕ್ಕಳುಚಿಂದೋಡಿ ಬಂಗಾರೇಶ್ಗುಡಿಗೇರಿ ಬಸವರಾಜ್
೧೯೮೧ಲೀಡರ್ ವಿಶ್ವನಾಥ್ಕೆ.ಮಣಿಮುರುಗನ್ಅಂಬರೀಶ್
೧೯೮೧ಸಿಂಹದಮರಿ ಸೈನ್ಯಎಸ್.ವಿ.ರಾಜೇಂದ್ರಸಿಂಗ್ ಬಾಬುಅರ್ಜುನ್ ಸರ್ಜಾ, ಸುಂದರ್ ಕೃಷ್ಣ ಅರಸ್
೧೯೮೨ಧರ್ಮ ದಾರಿ ತಪ್ಪಿತುಬಂಡಾರು ಗಿರಿಬಾಬುಶಂಕರ್ ನಾಗ್, ಶ್ರೀನಾಥ್, ಜಯಮಾಲ
೧೯೮೨ನನ್ನ ದೇವರುಬಿ.ಮಲ್ಲೇಶ್ಅನಂತ್ ನಾಗ್, ಸುಜಾತ
೧೯೮೨ಭಕ್ತ ಜ್ಞಾನದೇವಹುಣಸೂರು ಕೃಷ್ಣಮೂರ್ತಿರಾಮಕೃಷ್ಣ
೧೯೮೨ಮುತ್ತಿನಂತ ಅತ್ತಿಗೆಬಂಡಾರು ಗಿರಿಬಾಬುಶ್ರೀನಿವಾಸಮೂರ್ತಿ, ಅಶೋಕ್, ಕೆ.ವಿಜಯಾ
೧೯೮೩ಕಲ್ಲು ವೀಣೆ ನುಡಿಯಿತುತಿಪಟೂರು ರಘುವಿಷ್ಣುವರ್ಧನ್, ಆರತಿ, ಪದ್ಮಪ್ರಿಯ
೧೯೮೩ಕೆರಳಿದ ಹೆಣ್ಣುಎ.ವಿ.ಶೇಷಗಿರಿ ರಾನ್ಶಂಕರ್ ನಾಗ್, ವಿಜಯಶಾಂತಿ
೧೯೮೩ಬ್ಯಾಂಕರ್ ಮಾರ್ಗಯ್ಯಟಿ.ಎಸ್.ನಾಗಾಭರಣಲೋಕೇಶ್
೧೯೮೪ಬೆಂಕಿ ಬಿರುಗಾಳಿತಿಪಟೂರು ರಘುವಿಷ್ಣುವರ್ಧನ್, ಶಂಕರ್ ನಾಗ್, ಜಯಮಾಲ
೧೯೮೪ಶುಭಮುಹೂರ್ತಗೀತಪ್ರಿಯಕಲ್ಯಾಣ್ ಕುಮಾರ್, ಚರಣ್ ರಾಜ್
೧೯೮೫ತಾಯಿಯ ಹೊಣೆವಿಜಯ್ಚರಣ್ ರಾಜ್, ಅಶೋಕ್, ಸುಮಲತಾ
೧೯೮೫ಧರ್ಮವಿಜಯ್ ಗುಜ್ಜರ್ಜೈಜಗದೀಶ್, ರೂಪಾದೇವಿ
೧೯೮೫ಮಸಣದ ಹೂವುಪುಟ್ಟಣ್ಣ ಕಣಗಾಲ್ಅಂಬರೀಶ್
೧೯೮೫ಶಿವ ಕೊಟ್ಟ ಸೌಭಾಗ್ಯಹುಣಸೂರು ಕೃಷ್ಣಮೂರ್ತಿಲೋಕೇಶ್, ಆರತಿ
೧೯೮೬ಅಗ್ನಿಪರೀಕ್ಷೆನಾಗ ಶ್ರೀನಿವಾಸ್ಟೈಗರ್ ಪ್ರಭಾಕರ್, ಸುಮಿತ್ರಾ, ಶಂಕರ್ ನಾಗ್, ಭವ್ಯಾ
೧೯೮೬ಆನಂದ್ಸಿಂಗೀತಂ ಶ್ರೀನಿವಾಸ ರಾವ್ಶಿವರಾಜ್ ಕುಮಾರ್, ಸುಧಾರಾಣಿ, ರಾಜೇಶ್
೧೯೮೬ಉಷಾರಾಘವಕಲ್ಯಾಣ್ ಕುಮಾರ್, ಸುಹಾಸಿನಿ, ರಾಮಕೃಷ್ಣ
೧೯೮೬ತಾಯಿಯೇ ನನ್ನ ದೇವರುವಿಜಯ್ಟೈಗರ್ ಪ್ರಭಾಕರ್, ಶಂಕರ್ ನಾಗ್
೧೯೮೬ರಸ್ತೆ ರಾಜಬಿ.ಎಲ್.ವಿ.ಪ್ರಸಾದ್ಶಂಕರ್ ನಾಗ್, ಗಾಯತ್ರಿ
೧೯೮೭ತಾಯಿ ಕೊಟ್ಟ ತಾಳಿರವೀಂದ್ರನಾಥ್ಮುರಳಿ, ಮಹಾಲಕ್ಷ್ಮಿ, ಲೋಕೇಶ್
೧೯೮೭ಮುಖವಾಡಎಂ.ಡಿ.ಕೌಶಿಕ್ರಾಮಕೃಷ್ಣ, ತಾರಾ
೧೯೮೮ತಾಯಿ ಕರುಳುಎನ್.ಎಸ್.ಧನಂಜಯಶ್ರೀನಿವಾಸಮೂರ್ತಿ, ವಿನೋದ್ ಆಳ್ವ, ವನಿತಾ ವಾಸು
೧೯೮೮ನೀ ನನ್ನ ದೈವಕೆ.ಸುಂದರನಾಥ ಸುವರ್ಣಟೈಗರ್ ಪ್ರಭಾಕರ್, ಮಹಾಲಕ್ಷ್ಮಿ
೧೯೮೮ಭರತ್ಜೋಸೈಮನ್ಟೈಗರ್ ಪ್ರಭಾಕರ್
೧೯೮೮ಮಾತೃದೇವೋಭವಎನ್.ಎಸ್.ಧನಂಜಯಷ್ರೀನಿವಾಸಮೂರ್ತಿ, ಜೈಜಗದೀಶ್, ರಾಮಕೃಷ್ಣ, ಮಹಾಲಕ್ಷ್ಮಿ, ತಾರಾ
೧೯೮೯ಏನ್ ಸ್ವಾಮಿ ಅಳಿಯಂದ್ರೆಜಯಂತಿಟೈಗರ್ ಪ್ರಭಾಕರ್
೧೯೮೯ನ್ಯಾಯಕ್ಕಾಗಿ ನಾನುಎ.ಟಿ.ರಘುಅಂಬರೀಶ್, ಸುಮಲತಾ, ಶ್ರೀನಾಥ್
೧೯೯೦ಶ್ರೀ ಸತ್ಯನಾರಾಯಣ ಪೂಜಾಫಲಎನ್.ಎಸ್.ಧನಂಜಯಕಲ್ಯಾಣ್ ಕುಮಾರ್, ರಾಜೇಶ್
೧೯೯೧ಸುಂದರಕಾಂಡಕೆ.ವಿ.ರಾಜುಶಂಕರ್ ನಾಗ್, ದೇವರಾಜ್, ಶಿವರಂಜಿನಿ, ತಾರಾ
೧೯೯೨ಗೃಹಲಕ್ಷ್ಮಿಬಿ.ಸುಬ್ಬರಾವ್ಶ್ರೀನಾಥ್, ಲಕ್ಷ್ಮಿ, ಶ್ರೀಧರ್, ಮಾಲಾಶ್ರೀ
೧೯೯೨ಬೆಳ್ಳಿ ಮೋಡಗಳುಕೆ.ವಿ.ರಾಜುರಮೇಶ್, ಮಾಲಾಶ್ರೀ
೧೯೯೩ಜನ ಮೆಚ್ಚಿದ ಮಗಬಿ.ಡಿ.ಶೇಷುಶ್ರೀಧರ್, ಚಂದ್ರಿಕಾ, ಅಂಜಲಿ
೧೯೯೩ನಾವಿಬ್ಬರು ನಮಗಿಬ್ಬರುಎಂ.ಎಸ್.ರಾಜಶೇಖರ್ರಾಘವೇಂದ್ರ ರಾಜಕುಮಾರ್, ಮಾಲಾಶ್ರೀ
೧೯೯೩ಮೌನ ಸಂಗ್ರಾಮಮೋಹನ್ ಮಲ್ಲಪಲಿಲ್ರಘುವೀರ್, ಶ್ರುತಿ
೧೯೯೪ಪ್ರೇಮ ಸಿಂಹಾಸನಎಸ್.ವಿ.ಪ್ರಸಾದ್ಜಗ್ಗೇಶ್, ಶಿವರಂಜಿನಿ, ಶ್ರೀನಾಥ್
೧೯೯೪ಮೇಘ ಮಾಲೆಎಸ್.ನಾರಾಯಣ್ಸುನಂದ್ ರಾಜ್
೧೯೯೪ರಸಿಕದ್ವಾರಕೀಶ್ರವಿಚಂದ್ರನ್, ಭಾನುಪ್ರಿಯ, ಶ್ರುತಿ
೧೯೯೫ಈಶ್ವರ್ಆರ್.ಸಿ.ರಂಗಜಗ್ಗೇಶ್, ತಾರ, ಚಾಂದಿನಿ
೧೯೯೫ಮನ ಮಿಡಿಯಿತುಎಂ.ಎಸ್.ರಾಜಶೇಖರ್ಶಿವರಾಜ್ ಕುಮಾರ್, ಪ್ರಿಯಾ ರಾಮನ್, ಶ್ರೀನಾಥ್
೧೯೯೫ಗಾಜನೂರ ಗಂಡುಆನಂದ್ ಪಿ.ರಾಜುಶಿವರಾಜ್ ಕುಮಾರ್, ನರ್ಮದಾ
೧೯೯೭ವಿಮೋಚನೆಟಿ.ಎಸ್.ನಾಗಭರಣಶಿಲ್ಪಾ, ತಾರಾ, ಮಾಧುರಿ
೧೯೯೮ನಮ್ಮೂರ ಹುಡುಗರವೀಂದ್ರನಾಥ್ಶಿವರಾಜ್ ಕುಮಾರ್, ಶ್ರುತಿ
೧೯೯೯ಟುವ್ವಿ ಟುವ್ವಿ ಟುವ್ವಿಸಿಂಗೀತಂ ಶ್ರೀನಿವಾಸ ರಾವ್ರಾಘವೇಂದ್ರ ರಾಜಕುಮಾರ್, ಚಾರುಲತಾ
೧೯೯೯ನನ್ನಾಸೆಯ ಹೂವೆಇ.ಚೆನ್ನಗಂಗಪ್ಪಜಗ್ಗೇಶ್, ಮೋನಿಕಾ ಬೇಡಿ
೧೯೯೯ಪಟೇಲವಿ.ವಾಸುಜಗ್ಗೇಶ್, ಪಾಯಲ್ ಮಲ್ಹೋತ್ರಾ
೨೦೦೦ಆಂಧ್ರ ಹೆಂಡ್ತಿಮಹಮ್ಮದ್ ಗೌಸ್ರಮ್ಯಾ ಕೃಷ್ಣ, ಮದನ್
೨೦೦೧ನೀಲಾಟಿ.ಎಸ್.ನಾಗಾಭರಣರಾಘವೇಂದ್ರ ರಾಜಕುಮಾರ್, ಚಾರುಲತಾ
೨೦೦೧ಭಾವ ಭಾಮೈದಆರ್.ಕಿಶೋರ್ ಸರ್ಜಾಶಿವರಾಜ್ ಕುಮಾರ್, ಪ್ರಕಾಶ್ ರೈ, ರಂಭಾ, ವಿನಯಾ ಪ್ರಸಾದ್
೨೦೦೧ಮಹಾಲಕ್ಷ್ಮಿಸಿಂಗೀತಂ ಶ್ರೀನಿವಾಸ ರಾವ್ರಾಘವೇಂದ್ರ ರಾಜಕುಮಾರ್, ಚಾರುಲತಾ
೨೦೦೧ಶಿವಪ್ಪ ನಾಯಕಬಿ.ಸಿ.ಪಾಟೀಲ್ಬಿ.ಸಿ.ಪಾಟೀಲ್, ಅನು ಪ್ರಭಾಕರ್
೨೦೦೨ಎಂಥಾ ಲೋಕವಯ್ಯಜಗನ್ನಾಥ್ ಕದ್ರಿಜಗನ್ನಾಥ್ ಕದ್ರಿ, ಕೆ.ಎಸ್.ಅಶ್ವಥ್
೨೦೦೨ಧೀರಸಾಯಿಪ್ರಕಾಶ್ರಾಕಲೈನ್ ವೆಂಕಟೇಶ್, ಸಾಂಘವಿ
೨೦೦೬ಬೆಳ್ಳಿ ಬೆಟ್ಟಶಿವರಾಜ್ ಹೊಸಕೆರೆಸುನೀಲ್ ರಾವ್, ಮಾನ್ಯ
೨೦೦೬ಮಿಸ್ ಕ್ಯಾಲಿಫ಼ೋರ್ನಿಯಕೂಡ್ಲು ರಾಮಕೃಷ್ಣದಿಗಂತ್, ಜಾನು ಅರಸು
೨೦೦೬ಸಾವಿರ ಮೆಟ್ಟಿಲುಪುಟ್ಟಣ್ಣ ಕಣಗಾಲ್-ಕೆ.ಎಸ್.ಎಲ್.ಸ್ವಾಮಿಕಲ್ಯಾಣ್ ಕುಮಾರ್
೨೦೦೭ಜಂಭದ ಹುಡುಗಿಪ್ರಿಯಾ ಹಾಸನ್ಪ್ರಿಯಾ ಹಾಸನ್, ಜೈಆಕಾಶ್
೨೦೦೭ಪ್ರಾರಂಭಟಿ.ಎಸ್.ನಾಗಾಭರಣಪ್ರಭುದೇವ, ಬಿ.ಸರೋಜಾದೇವಿ
೨೦೦೭ಪ್ರೀತಿಗಾಗಿಎಸ್.ಮಹೇಂದರ್ಶ್ರೀಮುರಳಿ, ಶ್ರೀದೇವಿ ವಿಜಯಕುಮಾರ್
೨೦೦೭ಶ್ರೀ ದಾನಮ್ಮ ದೇವಿಚಿಂದೋಡಿ ಬಂಗಾರೇಶ್ಅನು ಪ್ರಭಾಕರ್, ಶಿವಧ್ವಜ್
೨೦೦೮ಆಕಾಶ ಗಂಗೆದಿನೇಶ್ ಬಾಬುಮಿಥುನ್ ತೇಜಸ್ವಿ, ಛಾಯಾ ಸಿಂಗ್
೨೦೦೮ಜನುಮದ ಗೆಳತಿದಿನೇಶ್ ಬಾಬುಶ್ರೀನಗರ ಕಿಟ್ಟಿ, ಪೂಜಾ ಗಾಂಧಿ
೨೦೦೮ಮಂದಾಕಿನಿರಮೇಶ್ ಸುರ್ವೆರಶ್ಮಿ, ಚೇತನ್, ಶ್ರೀನಾಥ್
೨೦೦೯ಸ್ವತಂತ್ರ ಪಾಳ್ಯಹುಚ್ಚ ವೆಂಕಟ್ಅರ್ಜುನ್, ದಾಮಿನಿ, ಸಿ.ಆರ್.ಸಿಂಹ

ತೆಲುಗು

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೬೧ಜಗದೇಕವೀರುನಿ ಕಥಾಕೆ.ವಿ.ರೆಡ್ಡಿಎನ್.ಟಿ.ರಾಮರಾವ್, ಬಿ.ಸರೋಜಾ ದೇವಿ, ಎಲ್.ವಿಜಯಲಕ್ಷ್ಮಿ
೧೯೬೨ಗಾಳಿ ಮೆಡಲುಬಿ.ಆರ್.ಪಂತುಲುಎನ್.ಟಿ.ರಾಮರಾವ್, ದೇವಿಕಾ, ಜಗ್ಗಯ್ಯ
೧೯೬೩ವಿಷ್ಣು ಮಾಯನಂದೂರಿ ನಮ್ಮಾಳ್ವಾರ್ಕಾಂತ ರಾವ್, ಕೃಷ್ಣಕುಮಾರಿ
೧೯೬೪ತೋಟಲೊ ಪಿಲ್ಲ ಕೋಟಲೊ ರಾಣಿಜಿ.ವಿಶ್ವನಾಥ್ಕಾಂತ ರಾವ್, ರಾಜಶ್ರೀ
೧೯೬೮ಅತ್ತಗಾರು ಕೊತ್ತ ಕೊಡಲ್ಲುಅಕ್ಕಿನೇನಿ ಸಂಜೀವಿಕೃಷ್ಣ, ವಿಜಯ ನಿರ್ಮಲ, ಹರನಾಥ್
೧೯೬೮ಚುಟ್ಟಾರಿಕಾಲುಪೆಕೇಟಿ ಶಿವರಾಂಜಗ್ಗಯ್ಯ, ಶೋಭನ್ ಬಾಬು, ಲಕ್ಷ್ಮಿ
೧೯೬೮ದೇವುಡಿಚ್ಚನ ಭರ್ತನಾಲಗುಮ್ಮಿ ಪದ್ಮರಾಜುಕಾಂತ ರಾವ್, ರಾಜಶ್ರೀ, ಹರನಾಥ್
೧೯೬೮ಭಲೇ ಕೊಡಲ್ಲುಕೆ.ಬಾಲಚಂದರ್ಸಾಹುಕಾರ್ ಜಾನಕಿ, ಕಾಂಚನಾ, ಚಲಂ, ರಾಮಕೃಷ್ಣ
೧೯೭೨ಕಲೆಕ್ಟರ್ ಜಾನಕಿಎಸ್.ಎಸ್.ಬಾಲನ್ಜಗ್ಗಯ್ಯ, ಜಮುನಾ
೧೯೭೨ಕುಲಗೌರವಂಪೆಕೇಟಿ ಶಿವರಾಂಎನ್.ಟಿ.ರಾಮರಾವ್, ಆರತಿ
೧೯೭೨ಬಡಿಪಂತುಲುಪಿ.ಸಿ.ರೆಡ್ಡಿಎನ್.ಟಿ.ರಾಮರಾವ್, ಅಂಜಲಿದೇವಿ, ರಾಮಕೃಷ್ಣ
೧೯೭೩ಗಾಂಧಿ ಪುಟ್ಟಿನ ದೇಶಂಲಕ್ಷ್ಮಿದೀಪಕ್ಕೃಷ್ಣಂ ರಾಜು, ಪ್ರಮೀಳಾ, ಲತಾ
೧೯೭೩ಜೀವಿತಂಕೆ.ಎಸ್.ಪ್ರಕಾಶ್ ರಾವ್ಶೋಭನ್ ಬಾಬು, ಶಾರದಾ
೧೯೭೩ಬಂಗಾರು ಬಾಬುವಿ.ವಿ.ರಾಜೇಂದ್ರ ಪ್ರಸಾದ್ಅಕ್ಕಿನೇನಿ ನಾಗೇಶ್ವರ್ ರಾವ್, ವಾಣಿಶ್ರೀ
೧೯೭೩ಮರಪುರಾನಿ ಮನಿಷಿಟಿ.ರಾಮರಾವ್ಅಕ್ಕಿನೇನಿ ನಾಗೇಶ್ವರ್ ರಾವ್, ಮಂಜುಳಾ
೧೯೭೩ಮಾಯದಾರಿ ಮಲ್ಲಿಗಾಡುಎ.ಸುಬ್ಬರಾವ್ಕೃಷ್ಣ, ಮಂಜುಳಾ
೧೯೭೩ಶಾರದಾಕೆ.ವಿಶ್ವನಾಥ್ಶೋಭನ್ ಬಾಬು, ಶಾರದಾ
೧೯೭೪ಅಮ್ಮ ಮನಸುಕೆ.ವಿಶ್ವನಾಥ್ಚಲಂ, ಭಾರತಿ, ಶುಭಾ, ಸತ್ಯನಾರಾಯಣ
೧೯೭೪ಚಂದನಾಗಿರಿಬಾಬುರಂಗನಾಥ್
೧೯೭೪ದೇವದಾಸುವಿಜಯ ನಿರ್ಮಲಕೃಷ್ಣ, ವಿಜಯ ನಿರ್ಮಲ
೧೯೭೪ನಿತ್ಯ ಸುಮಂಗಲಿಆರ್ಯಕೃಷ್ಣಂ ರಾಜು
೧೯೭೪ಮಾಂಗಲ್ಯ ಭಾಗ್ಯಂಪದ್ಮನಾಭಂಭಾನುಮತಿ, ಜಗ್ಗಯ್ಯ
೧೯೭೪ಸಂಸಾರಂ ಸಾಗರಂದಾಸರಿ ನಾರಾಯಣ್ ರಾವ್ಸತ್ಯನಾರಯಣ, ಶುಭಾ
೧೯೭೫ಅಂದರೂ ಮಂಚಿವಾರೆಜೆಮಿನಿ ಬಾಲನ್ಶೋಭನ್ ಬಾಬು, ಲೋಕೇಶ್, ಮಂಜುಳಾ ವಿಜಯಕುಮಾರ್
೧೯೭೫ಚಲ್ಲನಿ ತಲ್ಲಿಕೆ.ಎಸ್.ರಾಮಿ ರೆಡ್ಡಿಎಸ್.ವಿ.ರಂಗ ರಾವ್, ಅಂಜಲಿದೇವಿ, ಕೃಷ್ಣಂ ರಾಜು
೧೯೭೫ಚಿನ್ನನಾಟಿ ಕಾಲಾಲುಕೆ.ವಿಶ್ವನಾಥ್ಕೃಷ್ಣಂ ರಾಜು, ಪ್ರಮೀಳಾ
೧೯೭೫ಭಾಗಸ್ತುಲುನಾಗಭೂಷಣಂ, ಚಂದ್ರಮೋಹನ್
೧೯೭೫ರಾಮಯ್ಯ ತಂಡ್ರಿರಂಗನಾಥ್, ಪ್ರಭಾ
೧೯೭೫ಶ್ರೀರಾಮಾಂಜನೇಯ ಯುದ್ಧಂಬಾಪುಎನ್.ಟಿ.ರಾಮರಾವ್, ಬಿ.ಸರೋಜಾದೇವಿ
೧೯೭೬ಆಡವಾಳ್ಳು ಅಪನಿಂದಾಲುಬಿ.ಎಸ್.ನಾರಾಯಣಕೃಷ್ಣಂ ರಾಜು
೧೯೭೮ಕುಮಾರ ರಾಜಪಿ.ಸಾಂಬಶಿವ ರಾವ್ಕೃಷ್ಣ, ಜಯಪ್ರದಾ
೧೯೭೮ಬೊಮ್ಮರಿಲ್ಲುರಾಜಚಂದ್ರಶ್ರೀಧರ್, ಮುರಳಿ ಮೋಹನ್, ಮಾಧವಿ
೧೯೭೯ಕಮಲಮ್ಮ ಕಮತಂಕೆ.ಪ್ರತ್ಯಗಾತ್ಮಕೃಷ್ಣಂ ರಾಜು
೧೯೭೯ಬೊಟ್ಟು ಕಾಟುಕರಾಜಚಂದ್ರಮುರಳಿ ಮೋಹನ್, ಮಾಧವಿ
೧೯೭೯ವಿಜಯರಾಜಚಂದ್ರ
೧೯೮೦ಚುಕ್ಕಲೊ ಚಂದ್ರುಡುಸಿ.ಎಸ್.ರಾವ್ಚಂದ್ರಮೋಹನ್, ವೆನ್ನಿರಾಡೈ ನಿರ್ಮಲ, ಕಾಂತ ರಾವ್
೧೯೮೧ಅಗ್ನಿ ಪೂಲುಕೆ.ಬಪ್ಪಯ್ಯಕೃಷ್ಣಂ ರಾಜು, ಜಯಸುಧಾ, ಜಯಪ್ರದಾ
೧೯೮೧ಕೊಂಡವೀಟಿ ಸಿಂಹಂಕೆ.ರಾಮಚಂದ್ರ ರಾವ್ಎನ್.ಟಿ.ರಾಮರಾವ್, ಶ್ರೀದೇವಿ
೧೯೮೧ಮಿನಿಸ್ಟರ್ ಮಹಾಲಕ್ಷ್ಮಿಡಿ.ರಂಗಾ ರಾವ್ನೂತನ್ ಪ್ರಸಾದ್
೧೯೮೨ಏಕಲವ್ಯವಿಜಯಭಾಸ್ಕರ್ಕೃಷ್ನ, ಜಯಪ್ರದಾ
೧೯೮೨ಜಸ್ಟಿಸ್ ಚೌಧರಿಕೆ.ರಾಮಚಂದ್ರ ರಾವ್ಎನ್.ಟಿ.ರಾಮರಾವ್, ಶಾರದಾ, ಶ್ರೀದೇವಿ
೧೯೮೪ರಕ್ತ ಸಂಬಂಧಂವಿಜಯನಿರ್ಮಲಕೃಷ್ಣ, ರಾಧ
೧೯೮೪ರಾರಾಜುಜಿ.ರಾಂಮೋಹನ್ ರಾವ್ಕೃಷ್ಣಂ ರಾಜು, ವಿಜಯಶಾಂತಿ
೧೯೮೬ಧೈರ್ಯವಂತುಡುಲಕ್ಷ್ಮಿದೀಪಕ್ಚಿರಂಜೀವಿ, ವಿಜಯಶಾಂತಿ
೧೯೮೬ಶಾಂತಿ ನಿವಾಸಂಕೃಷ್ಣ, ಸುಹಾಸಿನಿ ಮಣಿರತ್ನಂ, ರಾಧಿಕಾ
೧೯೮೭ಅಲ್ಲರಿ ಕೃಷ್ಣಯ್ಯನಂದಮೂರಿ ರಮೇಶ್ಬಾಲಕೃಷ್ಣ, ಭಾನುಪ್ರಿಯ
೧೯೮೭ದೊಂಗ ಮೂಗುಡುಎ.ಕೆ.ಕೋದಂಡರಾಮ ರೆಡ್ಡಿಚಿರಂಜೀವಿ, ಭಾನುಪ್ರಿಯ, ಮಾಧವಿ, ರಾಧಿಕಾ
೧೯೮೭ದೊಂಗೊಡೊಚ್ಚಾಡುಕೋಡಿ ರಾಮಕೃಷ್ಣಕೃಷ್ಣ, ರಾಧ
೧೯೮೮ಆಖರಿ ಪೋರಾಟಂಕೆ.ರಾಮಚಂದ್ರ ರಾವ್ನಾಗಾರ್ಜುನ, ಸುಹಾಸಿನಿ, ಶ್ರೀದೇವಿ
೧೯೯೦ಮುದ್ದುಲ ಮೇನಲ್ಲುಡುಕೋಡಿ ರಾಮಕೃಷ್ಣಬಾಲಕೃಷ್ಣ, ವಿಜಯಶಾಂತಿ
೧೯೯೧ವಿಧಾತಜ್ಯೋತಿ ಕುಮಾರ್ಕ್ರಷ್ಣಂ ರಾಜು, ಅರ್ಚನಾ
೧೯೯೨ಸ್ವಾತಿ ಕಿರಣಂಕೆ.ವಿಶ್ವಾನಾಥ್ಮುಮ್ಮೂಟಿ, ರಾಧಿಕಾ
೧೯೯೫ಪೆದ್ದ ರಾಯುಡುರವಿರಾಜ್ ಪಿನಿಶೆಟ್ಟಿಮೋಹನ್ ಬಾಬು, ಸೌಂದರ್ಯ

ತಮಿಳು

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೬೫ನೀರ್ ಕುಮಿಳಿಕೆ.ಬಾಲಚಂದರ್ನಾಗೇಶ್, ಸಾಹುಕಾರ್ ಜಾನಕಿ
೧೯೬೬ಕಾದಲ್ ಪಾಡುತುಮ್ ಪಾಡುಜೋಸೆಫ್ ಡೇಲಿಯಟ್ಜೈಶಂಕರ್, ವಾಣಿಶ್ರೀ
೧೯೬೬ಮೂಗರಸಿಎಂ.ಎ.ತಿರುಮುಗಂಎಂ.ಜಿ.ರಾಮಚಂದ್ರನ್, ಜೆಮಿನಿ ಗಣೇಶನ್, ಜಯಲಲಿತ
೧೯೬೭ಭಾಮಾವಿಜಯಂಕೆ.ಬಾಲಚಂದರ್ಸಾಹುಕಾರ್ ಜಾನಕಿ, ಕಾಂಚನಾ, ಮುತ್ತುರಾಮನ್, ನಾಗೇಶ್
೧೯೬೮ಎದಿರ್ ನೀಚಲ್ಕೆ.ಬಾಲಚಂದರ್ನಾಗೇಶ್, ಸಾಹುಕಾರ್ ಜಾನಕಿ, ಮುತ್ತುರಾಮನ್
೧೯೬೯ಇರು ಕೊಡುಗಳಕೆ.ಬಾಲಚಂದರ್ಜೆಮಿನಿ ಗಣೇಶನ್, ಸಾಹುಕಾರ್ ಜಾನಕಿ
೧೯೬೯ನಿಲ್ ಗವನಿ ಕಾದಲೈಸಿ.ವಿ.ರಾಜೆಂದ್ರನ್ಜೈಶಂಕರ್, ಭಾರತಿ, ನಾಗೇಶ್
೧೯೭೧ಕಣ್ಣ ನಲಮಾಕೆ.ಬಾಲಚಂದರ್ಜೆಮಿನಿ ಗಣೇಶನ್
೧೯೭೧ಪುನ್ನಗೈಕೆ.ಬಾಲಚಂದರ್ಜೆಮಿನಿ ಗಣೇಶನ್, ಮುತ್ತುರಾಮನ್
೧೯೭೨ವೆಲ್ಲಿ ವಿಳಾಕೆ.ಬಾಲಚಂದರ್ಜೆಮಿನಿ ಗಣೇಶನ್, ವಾಣಿಶ್ರೀ
೧೯೭೩ಗಂಗಾ ಗೌರಿಬಿ.ಆರ್.ಪಂತುಲುಜೆಮಿನಿ ಗಣೇಶನ್, ಜಯಲಲಿತ
೧೯೭೩ನಲ್ಲ ಮುಡಿವುಸಿ.ಎನ್.ಷಣ್ಮುಗಂಜೆಮಿನಿ ಗಣೇಶನ್, ಮುತ್ತುರಾಮನ್
೧೯೭೩ಪೆಣ್ಣೈ ನಂಬುಂಗಳ್ಬಿ.ವಿ.ಶ್ರೀನಿವಾಸ್ಎ.ವಿ.ಎಂ.ರಾಜನ್
೧೯೭೩ಮನ್ನಿಪ್ಪಾಯಲ್ಎ.ಜಗನ್ನಾಥನ್ಎ.ವಿ.ಎಂ.ರಾಜನ್
೧೯೭೩ಷಣ್ಮುಗಪ್ರಿಯಕೆ.ಕೃಷ್ಣಮೂರ್ತಿಮುತ್ತುರಾಮನ್
೧೯೭೫ಎಲ್ಲೋರುಮ್ ನಲ್ಲವರೆಜೆಮಿನಿ ಬಾಲನ್ಮುತ್ತುರಾಮನ್, ಲೋಕೇಶ್, ಮಂಜುಳಾ ವಿಜಯಕುಮಾರ್
೧೯೭೬ಕುಲ ಗೌರವಂಪೆಕೇಟಿ ಶಿವರಾಂಮುತ್ತುರಾಮನ್, ಜಯಸುಧಾ
೧೯೭೯ದೇವತೈಪಿ.ಎನ್.ಮೆನನ್ಶಿವಕುಮಾರ್

ಮಲಯಾಳಂ

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೬೫ಕಲಿಯೋದಂಪಿ.ಸುಬ್ರಹ್ಮಣ್ಯಂಪ್ರೇಮ್ ನಜೀರ್, ಮಧು
೧೯೬೫ಕಾಟ್ಟು ಪೂಕ್ಕಳ್ಕೆ.ತಂಗಪ್ಪನ್ಮಧು, ದೇವಿಕಾ
೧೯೬೮ಕಾರುತ ಪೌರ್ಣಮಿನಾರಾಯಣ ಕುಟ್ಟಿ ವಲ್ಲತ್ಮಧು, ಶಾರದಾ
೧೯೬೮ಲಕ್ಷಪ್ರಭುಪಿ.ಭಾಸ್ಕರನ್ಪ್ರೇಮ್ ನಜೀರ್, ಶೀಲಾ

ಹಿಂದಿ

ವರ್ಷಚಿತ್ರಪಾತ್ರನಿರ್ದೇಶನಭೂಮಿಕೆ
೧೯೬೬ದಾದಾಕೇದಾರ್ ಕಪೂರ್ದಾರಾ ಸಿಂಗ್
೧೯೬೬ಲಾಲ್ ಬಂಗ್ಲಾಜುಗಲ್ ಕಿಶೋರ್ಸುಜಿತ್ ಕುಮಾರ್, ಶ್ಯಾಮಾ
೧೯೬೭ಏಕ್ ಫೂಲ್ ಏಕ್ ಭೂಲ್ಕೇದಾರ್ ಕಪೂರ್ದೇವ್ ಕುಮಾರ್
೧೯೬೭ಮೆಹರ್ಬಾನ್ಎ.ಭೀಮ್ ಸಿಂಗ್ಸುನಿಲ್ ದತ್, ನೂತನ್, ಭಾರತಿ
೧೯೬೮ತೀನ್ ಬಹುರಾಣಿಯಾಎಸ್.ಎಸ್.ವಾಸನ್-ಎಸ್.ಎಸ್.ಬಾಲನ್ಪ್ರಥ್ವಿರಾಜ್ ಕಪೂರ್, ಸಾಹುಕಾರ್ ಜಾನಕಿ, ಕಾಂಚನಾ
೧೯೬೯ಗುಂಡಾಮಹಮ್ಮದ್ ಹುಸೇನ್ಸುಜಿತ್ ಕುಮಾರ್
೧೯೬೯ತುಮ್ ಸೆ ಅಚ್ಚಾ ಕೌನ್ ಹೈಪ್ರಮೋದ್ ಚಕೃವರ್ತಿಶಮ್ಮಿ ಕಪೂರ್, ಬಬಿತಾ
೧೯೮೫ಆಜ್ ಕೆ ಶೋಲಿಎಸ್.ವಿ.ರಾಜೇಂದ್ರಸಿಂಗ್ ಬಾಬುಸುಂದರ್ ಕೃಷ್ನ ಅರಸ್, ಅರ್ಜುನ್ ಸರ್ಜಾ

ನಿಧನ

೭೬ ವರ್ಷ ವಯಸ್ಸಿನ ಜಯಂತಿಯವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಸೋಮವಾರ, ೨೬ಜುಲೈ೨೦೨೧ ರಂದು ನಿಧನರಾದರು. ಸ್ವಲ್ಪದಿನಗಳಿಂದ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದರು.[೧]

ಹೆಚ್ಚಿನ ಮಾಹಿತಿ

ಉಲ್ಲೇಖಗಳು