ಜೀವಕಣದ ಬೀಜಕಣ

ಜೀವಕಣವಿಜ್ಞಾನದಲ್ಲಿ ಬೀಜಕಣ (ಲ್ಯಾಟಿನ್ ನಿಂದ ಬಹುವಚನ. ಬೀಜಕಣಗಳು ಅಥವಾ ತಿರುಳು ಎಂದರ್ಥ) ಮತ್ತು ಕೆಲವೊಮ್ಮೆ "ನಿಯಂತ್ರಣ ಕೇಂದ್ರ" ಎಂದು ಉಲ್ಲೇಖಿಸುವುದೂ ಉಂಟು, ಯೂಕಾರ್ಯೋಟಿಕ್ ಜೀವಕಣಗಳಲ್ಲಿ ಕಂಡು ಬರುವ ಒಳಪೊರೆಯ ವಿಶೇಷ ಭಾಗ. ಇದರಲ್ಲಿ ಜೀವಕಣಗಳ ವಂಶವಾಹಿನಿ ಸಾಮಗ್ರಿ ಇರುತ್ತದೆ, ನಾನಾ ಭಾಗಗಳುಳ್ಳ ಉದ್ದನೆಯ ರೇಖೆಯಂತೆ DNA ಕಣಗಳು ಸಂಯುಕ್ತವಾಗಿ ವ್ಯವಸ್ಥಿತಗೊಂಡಿರುತ್ತದೆ ಮತ್ತು ಇದರಲ್ಲಿ ದೊಡ್ಡ ಮಟ್ಟದಲ್ಲಿ ನಾನಾ ವಿಧದ ಪ್ರೊಟೀನ್ ಗಳು ಉದಾಹರಣೆಗೆ ಹಿಸ್ಟೋನ್ ಗಳು ಕ್ರೋಮೋಸೋಮ್ ಗಳಾಗಿ ರೂಪಗೊಳ್ಳುತ್ತವೆ. ಈ ಕ್ರೋಮೋಸೋಮ್ಸ್‌ಗಳಲ್ಲಿರುವ ವಂಶಾವಳಿಗಳೇ ಜೀವಕಣಗಳ ಬೈಜಿಕ ಜಿನೋಮ್ ಗಳು. ಬೀಜಕಣಗಳ ಕಾರ್ಯವೆಂದರೆ ಜೀನ್‌ಗಳ ಸಮಗ್ರತೆಯನ್ನು ಕಾಯ್ದುಕೊಳ್ಳುವುದಲ್ಲದೆ ಜೀವಕಣಗಳ ಚಟುವಟಿಕೆಗಳನ್ನು ಜೀನ್ ಎಕ್ಸ್‌ಪ್ರೆಷನ್ ಅನ್ನು ನಿಗ್ರಹಿಸುವ ಮೂಲಕ ನಿಯಂತ್ರಿಸುವುದು- ಆದುದರಿಂದ ಬೀಜಕಣಗಳೆಂದರೆ ಜೀವಕಣಗಳ ನಿಗ್ರಹಿಸುವ ಕೇಂದ್ರ.ಬೀಜಕಣಗಳಾಗುವ ಮೂರು ಮುಖ್ಯ ರಚನೆಗಳೆಂದರೆ-ಬೈಜಿಕ ಹೊದಿಕೆ, ಪೂರಾ ಆರ್ಗಾನೆಲ್ ಅನ್ನು ಸುತ್ತುವರಿದು ಅದರ ಹೂರಣವನ್ನು ಸೆಲ್ಯುಲಾರ್ ಸೈಟೋಪ್ಲಾಸಂ ಮತ್ತು ನ್ಯೂಕ್ಲೀಯಾರ್ ಲ್ಯಾಮೀನಾಗಳಿಂದ ಬೇರ್ಪಡಿಸುವ ಎರಡು ಒಳಪೊರೆಗಳು ಹಾಗೂ ಬೀಜಕಣಗಳಲ್ಲಿನ ಯಾಂತ್ರಿಕ ಬೆಂಬಲವನ್ನು ಕೊಡುವ ಜಾಲರಿಬಂಧ. ಇವೆಲ್ಲವೂ ಸೈಟೋಸ್ಕೆಲೀಟನ್ ತರಹವು ಜೀವಕಣಗಳನ್ನು ಪೂರ್ತಿ ಬೆಂಬಲಿಸುತ್ತದೆ. ಅನೇಕ ಕಣಗಳಿಗೆ ಒಳಹೋಗಲು ಈ ನ್ಯೂಕ್ಲಿಯಾರ್ ಒಳಪೊರೆಗಳು ಅವಕಾಶಕೊಡದ ಕಾರಣ ನ್ಯೂಕ್ಲೀಯಾರ್ ರಂಧ್ರಗಳು ಹೊದಿಕೆಯ ಸುತ್ತ ಕಣಗಳ ಚಲನವಲನಕ್ಕೆ ಅಗತ್ಯವಾಗಿ ಬೇಕಾಗುತ್ತವೆ. ಈ ರಂಧ್ರಗಳು ಎರಡೂ ಒಳಪೊರೆಗಳನ್ನು ದಾಟುತ್ತದೆ ಈ ಪ್ರಕ್ರಿಯೆಯಲ್ಲಿ ಕಣಗಳಿಗೆ ಮತ್ತು ಐಯಾನ್ ಗಳಿಗೆ ಮುಕ್ತವಾಗಿ ಚಲಿಸಲು ನಾಲೆಯನ್ನು ಒದಗಿಸುತ್ತದೆ. ದೊಡ್ಡ ಕಣಗಳಾದ ಪ್ರೊಟೀನ್‌ಗಳಂಥವನ್ನು ಬಹಳ ಎಚ್ಚರಿಕೆಯಿಂದ ನಿಗ್ರಹಿಸಲಾಗುತ್ತದೆ ಮತ್ತು ಸಾಗಾಳು ಅಥವಾ ವಾಹಕ ಪ್ರೊಟೀನ್‌ಗಳು ನಿಗ್ರಹಿಸುವ ಕ್ರಿಯಾಶೀಲ ಸಾಗಾಣಿಕೆಯ ಅಗತ್ಯವಿದೆ. ನ್ಯೂಕಿಯಾರ್ ಸಾಗಾಣಿಕೆಯು ಬೀಜಕಣಗಳ ಕಾರ್ಯನಿರ್ವಹಣೆಗೆ ಕಠಿಣವಾಗುತ್ತದೆ, ಕಾರಣ ರಂಧ್ರಗಳ ಮೂಲಕ ಚಲನೆಯು ಜೀನ್ ಎಕ್ಸ್‌ಪ್ರೆಷನ್ ಮತ್ತು ಕ್ರೋಮೋಸೋಮಲ್ ಸಂರಕ್ಷಣೆ ಎರಡಕ್ಕೂ ಬೇಕಾಗುತ್ತದೆ.

HeLa ಸೆಲ್ಸ್ ಸ್ಟೇಯ್ನಡ್ ಫಾರ್ DNA ವಿಥ್ ದಿ ಬ್ಲೂ ಹೋಶ್ಟ್ ಡೈ. ಮಧ್ಯಂತರ ಮತ್ತು ಬಲತುದಿಯ ಜೀವಕಣವು ಇಂಟರ್‌ಫೇಸ್‌ನಲ್ಲಿರುತ್ತದೆ, ಆದುದರಿಂದ ಅವುಗಳ ಸಮಗ್ರ ಬೀಜಕಣಗಳಿಗೆ ಗುರುತಿನ ಚೀಟಿ ಕೊಡಲಾಗಿದೆ.ಎಡಗಡೆ ಜೀವಕಣವು ಮಿಟೋಸಿಸ್ ಮುಖಾಂತರ ಹಾದು ಹೋಗುತ್ತದೆ ಮತ್ತು ಅದರ DNAಯು ವಿಭಜನೆಗೆ ಘನೀಕರಿಸಿದೆ.
ಉಪಕೋಶೀಯ ಸಂಯೋಜನೆಗಳನ್ನು ತೋರಿಸುವ ಪ್ರಾಣಿಯ ಜೀವಕಣಗಳ ಸ್ಥೂಲ ಚಿತ್ರಣ.ಆಂಗಿಕಗಳು: (1) ನ್ಯೂಕ್ಲೀಯೋಲಸ್ (2) ಬೀಜಕಣ (3) ರಿಬೋಸೋಮ್ (4) ವೆಸಿಕಲ್ (5) ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ (6) ಗಾಲ್ಜಿ ಪರಿಕರ (7) ಕೋಶ ಕಂಕಾಲ (8) ಮೃದು ಎಂಡೋಪ್ಲಾಸ್ಮಿಕ್ ರೆಟಿಕ್ಯುಲಮ್ (9) ಮಿಟೋಕಾಂಡ್ರಿಯಾ (10) ವ್ಯಾಕ್ಯೋಲ್ (11) ಕೋಶದ್ರವ್ಯ (12) ಲೈಸೋಸೋಮ್ (13) ಸೆಂಟ್ರೀಯೋಲುಗಳು
ಭಕ್ಷಕಕೋಶೀಯ ಭಕ್ಷಣ ಮುಖೇನ ಬೀಜಕಣಕ್ಕೆ ಸಾಮಗ್ರಿಯ ಪ್ರವೇಶ. ಫ್ಯಾಗೋಸೋಮ್, ಜೀವಕಣಗಳ ಪೊರೆಯಿಂದ ಬೀಜಕಣಗಳಿಗೆ ಸಾಗಣಿಕೆ ಮಾಡುತ್ತದೆ ಆನಂತರ ಅದರ ಅಂತರ್ಗತವನ್ನು ಬಿಡುಗಡೆ ಮಾಡುತ್ತ ಅದನ್ನು ಬೀಜಕಣಗಳು ಆವರಿಸಿಬಿಡುತ್ತವೆ.

ಆದಾಗ್ಯೂ ಬೀಜಕಣಗಳ ಒಳಗೆ ಯಾವುದೇ ರೀತಿಯ ಒಳಪೊರೆ ಆಧಾರಿತ ಒಳ ಉಪ-ಅಂಕಣಗಳಿಲ್ಲ, ಅವುಗಳ ಒಳಗಿರುವ ಹೂರಣಗಳು ಏಕ ರೀತಿಯಲಿಲ್ಲ ಮತ್ತು RNA ಕಣಗಳು ಮತ್ತು ಕ್ರೋಮೋಸೋಮ್ಸ್‌ನ ನಿರ್ದಿಷ್ಟ ಭಾಗಗಳನೊಳಗೊಂಡ, ಅನನ್ಯವಾದ ಪ್ರೊಟೀನ್‌ಗಳಿರುವ ಅಸಂಖ್ಯಾತ ಸಬ್ ನ್ಯೂಕ್ಲಿಯರ್ ಬಾಡೀಸ್ ಅಸ್ತಿತ್ವದಲ್ಲಿರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆಯೆಂದರೆ ನ್ಯೂಕ್ಲಿಯೋಲಸ್ ಇದು ಮುಖ್ಯವಾಗಿ ರಿಬೋಸೋಮ್ಸ್ ಗಳ ಜೋಡಣೆಯಲ್ಲಿ ಪಾಲ್ಗೊಂಡಿರುತ್ತದೆ. ನ್ಯೂಕ್ಲಿಯೋಲಸ್‌ನಲ್ಲಿ ಇದನ್ನು ಉತ್ಪಾದಿಸಿದ ಮೇಲೆ ರಿಬೋಸೋಮ್ಸ್ ಅನ್ನು ಸೈಟೋಪ್ಲಾಸಂಗೆ ರಫ್ತು ಮಾಡಲಾಗುತ್ತದೆ ಅಲ್ಲಿ ಅವು mRNAಗೆ ರೂಪಾಂತರವಾಗುತ್ತದೆ.

ಇತಿಹಾಸ

ಅತ್ಯಂತ ಹಳೆಯ ಜೀವಕಣ ಮತ್ತು ಬೀಜಕಣಗಳ ವರ್ಣನೆಯನ್ನು ಆಂಟೋನೀ ವ್ಯಾನ್ ಲೀವೆನ್ಹೋಕ್, 1719ರಲ್ಲಿ ಮಾಡಿರುತ್ತಾನೆ.
ಚಿರೋನೊಮಸ್ ಸಲೈವರಿ ಗ್ಲಾಂಡ್ ಜೀವಕಣದ ಚಿತ್ರವನ್ನು ವಾಲ್ಥರ್ ಫ್ಲೆಮ್ಮಿಂಗ್ 1882ರಲ್ಲಿ ಪ್ರಕಟಿಸದ.ಬೀಜಕಣವು ಪಾಲಿಟೀನ್ ಕ್ರೋಮೋಸೋಮ್ಸ್ ಅನ್ನು ಹೊಂದಿರುತ್ತದೆ.

ಬೀಜಕಣಗಳೇ ಮೊದಲು ಸಂಶೋಧಿಸಿದ ಆರ್ಗಾನೆಲ್. ಗೊತ್ತಾಗಿರುವ ಅತ್ಯಂತ ಹಳೆಯದು ಎನ್ನಬಹುದಾದ್ದು ಬಹಳ ಹಿಂದೆ ಅಂದರೆ, ಸೂಕ್ಷ್ಮದರ್ಶಕ ತಜ್ಞ ಆಂಟೋನೀ ವ್ಯಾನ್ ಲೀವೆನ್ಹೋಕ್ (೧೬೩೨ – ೧೭೨೩) ಕಾಲಕ್ಕೆ ಸಲ್ಲುತ್ತದೆ. ಒಂದು ತೆರನಾದ ’ಗೂಡನ್ನು’, ಬೀಜಕಣವನ್ನು, ಆಹಾರ ನಂಜನ್ನುಂಟು ಮಾಡುವ ಸಾಲ್ಮನ್ ಸೂಕ್ಷ್ಮ ಜೀವಕಣಗಳಲ್ಲಿನ ಕೆಂಪು ರಕ್ತ ಕಣಗಳಲ್ಲಿ ಗಮನಿಸಿದನು[೧]. ಮಮಾಲೀಯನ್ ರೆಡ್ ಬ್ಲಡ್ ಸೆಲ್ಸ್ ಗಳಂಥಲ್ಲದೆ ಬೆನ್ನೆಲುಬುಳ್ಳ ಯಾವುದೇ ಜೀವಿ ಬೀಜಕಣಗಳನ್ನುಳ್ಳದಾಗಿರುತ್ತದೆ. ಫ್ರಾಂಜ್ ಬಾಯರ್ 1804ರಲ್ಲಿ [೨] ಮತ್ತು 1831ರಲ್ಲಿ ಇನ್ನೂ ವಿವರಾತ್ಮಕವಾಗಿ ಸ್ಕಾಟಿಶ್ ಸಸ್ಯವಿಜ್ಞಾನಿ ರಾಬರ್ಟ್ ಬ್ರೌನ್ ಲಿನ್ನೀಯನ್ ಸೊಸೈಟಿ ಆಫ್ ಲಂಡನ್ ನಲ್ಲಿ ಬೀಜಕಣಗಳನ್ನು ವಿವರಿಸಿದರು. ಏಕದಳ ಬೀಜವರ್ಗ ಗಳನ್ನು ಬ್ರೌನ್ ಅಧ್ಯಯನ ಮಾಡುವಾಗ ಸೂಕ್ಷ್ಮದರ್ಶಕದಲ್ಲಿ ಒಂದು ಅಪಾರದರ್ಶಕ ಎಡೆ (ಬೆಳಕನ್ನು ಹಾಯಗೊಡದ) ಕ್ಷೇತ್ರವನ್ನು ಗಮನಿಸಿದನು ಮತ್ತು ಹೂವಿನ ಹೊರ ಪದರದಲ್ಲಿನ ಜೀವಕಣಗಳಲ್ಲಿ ಅದನ್ನು ಅರಿಯೋಲಾ ಅಥವಾ ಬೀಜಕಣ (ನ್ಯೂಕ್ಲೀಯಸ್) ಎಂದು ಕರೆದನು.[೩]ಅದರ ಕಾರ್ಯಚಟುವಟಿಕೆಗಳ ಸಾಮರ್ಥ್ಯವನ್ನು ಆತ ಸೂಚಿಸಿಲ್ಲ. ೧೮೩೮ರಲ್ಲಿ ಮ್ಯಾಥೀಯಸ್ ಸ್ಕ್ಲೇಯ್ಡೆನ್ ಬೀಜಕಣವು ಜೀವಕಣಗಳನ್ನು ಉತ್ಪಾದಿಸುತ್ತದೆ ಎಂದು ಸೂಚಿಸಿದನು ಮತ್ತು ಅದಕ್ಕೆ "ಸೈಟೋಬ್ಲಾಸ್ಟ್" (ಜೀವಕಣಗಳ ನಿರ್ಮಾಪಕ) ಎಂದು ಪರಿಚಯಿಸಿದನು. "ಸೈಟೋಬ್ಲಾಸ್ಟ್" ಗಳ ಸುತ್ತ ಹೊಸ ಜೀವಕಣಗಳನ್ನು ತಾನು ಗಮನಿಸಿರುವುದಾಗಿಯೇ ಆತ ನಂಬಿದ್ದನು. ಈ ದೃಷ್ಟಿಕೋನಕ್ಕೆ ಬಲವಾಗಿ ವಿರೋಧಿಸಿದವನೆಂದರೆ ಫ್ರಾಂಜ್ ಮೇಯೆನ್ ಈತ ಈಗಾಗಲೇ ಜೀವಕಣಗಳನ್ನು ವಿವರಿಸಿ ಅದು ವಿಭಾಗಗೊಳ್ಳುವ ಮೂಲಕ ಬಹ್ವಂಶಗಳಾಗುತ್ತವೆ ಮತ್ತು ಜೀವಕಣಗಳಲ್ಲಿ ಬೀಜಕಣಗಳಿರುವುದಿಲ್ಲ ಎಂದು ಪ್ರತಿಪಾದಿಸಿದನು. "ಸೈಟೋಬ್ಲಾಸ್ಟ್" ಗಳಿಂದಾಗಲಿ ಅಥವಾ ಇನ್ಯಾವುದೇ ಕಾರಣದಿಂದಾಗಲೀ ಜೀವಕಣಗಳು ಹೊಸದಾಗಿ ಉತ್ಪತ್ತಿಯಾಗುವುದನ್ನು, ರಾಬರ್ಟ್ ರೀಮಕ್ (1852) ಮತ್ತು ರುಡಾಲ್ಫ್ ವಿಚೋವ್ (1855) ನವರುಗಳು ಅಲ್ಲಗಳೆದರು ಮತ್ತು ನಿರ್ಣಾಯಕವಾಗಿ ಹೊಸ ನಿದರ್ಶನಗಳನ್ನು ಕೊಟ್ಟು ಜೀವಕಣಗಳು ಜೀವಕಣಗಳಿಂದಲ್ಲೇ ಉತ್ಪತ್ತಿ ಆಗುವುದೆಂದು ಪ್ರತಿಪಾದಿಸಿದರು ("ಓಮ್ನಿಸ್ ಸೆಲುಲ್ಲಾ ಇ ಸೆಲುಲ್ಲಾ"). ಬೀಜಕಣಗಳ ಕಾರ್ಯ ಅಸ್ಪಷ್ಟವಾಗಿಯೇ ಉಳಿಯಿತು.[೪]

1876 ಮತ್ತು 1878ರ ನಡುವೆ ಆಸ್ಕರ್ ಹರ್ಟ್ವಿಗ್ ಸೀ ಅರ್ಚಿನ್ ನ ಗರ್ಭಾಧಾನಗಳ ಬಗ್ಗೆ ಅನೇಕ ಅಧ್ಯಯನಗಳನ್ನು ಪ್ರಕಟಿಸಿದರು, ಈ ಅಧ್ಯಯನಗಳ ಪ್ರಕಾರ ವೀರ್ಯ ಅಥವಾ ಪ್ರಾಣಿಜನಜ ದ್ರವ್ಯಗಳು ಇನ್ನೂ ಫಲಿತವಾಗಿರದ ಅಂಡಾಣುವಿನೊಳಗೆ ಪ್ರವೇಶಿಸಿ ಅದರ ಬೀಜಕಣಗಳಲ್ಲಿ ಬೆಸುಗೆಯಾಗುತ್ತದೆ. ಒಂಟಿ ನ್ಯೂಕ್ಲೀಯೇಟೆಡ್ ಜೀವಕಣಗಳಿಂದ ಒಂದು ಜೀವಿ ಬೆಳವಣಿಗೆ ಆಗುತ್ತದೆಂದು ಇದೇ ಮೊದಲ ಬಾರಿಗೆ ಸೂಚಿಸಲಾಗಿತ್ತು. ಆದರೆ ಈ ತತ್ವವು, ಅರ್ನ್ಸಟ್ ಹ್ಯಾಕೆಲ್ ನ ತತ್ವವಾದ ಜೀವ ವರ್ಗಗಳ ಸಂಪೂರ್ಣ ಜೀವವಿಕಾಸ ಚರಿತ್ರೆ ಎಂಬ್ರೈಯೋನಿಕ್ ಬೆಳವಣಿಗೆಯಲ್ಲಿ ಮರುಕಳಿಸುತ್ತದೆ ಎಂಬುದಕ್ಕೆ ವಿರೋಧವಾಗಿದೆ, "ಮೊನೇರುಲಾ"ದಿಂದ ಮೊದಲ ನ್ಯೂಕ್ಲೀಯೇಟೆಡ್ ಜೀವಕಣದ ಪೀಳಿಗೆಯೂ ಸೇರಿ ರಚನೆಯೇ ಇಲ್ಲದ ಪ್ರೈಮಾರ್ಡಿಯಲ್ ಮ್ಯೂಕಸ್‌ನ ಸಮೂಹ ("ಉರ್ಸ್ಕ್‌ಲೇಮ್") ಇರುತ್ತದೆ. ಆದುದರಿಂದ ಬೀಜಕಣಗಳ ವೀರ್ಯದ ಅಗತ್ಯವು ಗರ್ಭಾಧಾನಕ್ಕೆ ಇದೆ ಎಂಬುದು ಕೆಲ ಸಮಯ ಚರ್ಚೆಯ ವಿಷಯವಾಗಿತ್ತು. ಆದಾಗ್ಯೂ, ಹರ್ವಿಟ್ಗ್ ತನ್ನ ಅವಲೋಕನಗಳನ್ನು ಬೇರೆ ಪ್ರಾಣಿಗಳಲ್ಲಿ ಉದಾಹರಣೆಗೆ ಆಂಫೀಬಿಯನ್ಸ್ ಮತ್ತು ಮೊಲಸ್ಕ್ ಗಳಲ್ಲಿ ಖಾತರಿ ಪಡಿಸಿದ. ಇದೇ ಪರಿಣಾಮಗಳನ್ನು, ಎಡ್ಯೂವರ್ಡ್ ಸ್ಟ್ರಾಸ್‌ಬರ್ಗರ್ ಸಸ್ಯಗಳಲ್ಲಿ ಕಾಣಿಸಿಸಿದ (1884). ಈ ವಾದದಿಂದಾಗಿ ವಂಶವಾಹಿನಿಯಲ್ಲಿ ಬೀಜಕಣಗಳ ಪಾತ್ರ ಮಹತ್ವವಾದುದೆಂಬ ಅಂಶಕ್ಕೆ ಮನ್ನಣೆ ಸಿಕ್ಕಂತಾಯಿತು. 1873ರಲ್ಲಿ ಅಗಸ್ಟ್ ವೀಸ್ಮನ್ನ್ ಮಾತೃವಿನ ಮತ್ತು ಪಿತೃವಿನ ಮೊಗ್ಗಿನ ಸ್ಥಿತಿಯ ಜೀವಕಣಗಳು ಸಮಾನತೆಯನ್ನು ವಂಶಾಭಿವೃದ್ಧಿ ಸಾಧಿಸುತ್ತದೆ. ವಂಶವಾಹಿನಿಯ ಮಾಹಿತಿಯನ್ನು ಹೊತ್ತೊಯುವುದು ಬೀಜಕಣಗಳ ಕಾರ್ಯವೆಂದು ಆನಂತರ ಸ್ಪಷ್ಟವಾಯಿತು, ಮೈಟಾಸಿಸ್ ನ ಶೋಧದ ನಂತರ ಮತ್ತು ಮೆಂಡೇಲೀಯನ್ ಕಾನೂನು ನಿನ ಮರು ಶೋಧದ ನಂತರ, 20ನೇ ಶತಮಾನದ ಆದಿಯಲ್ಲಿ; ಕ್ರೋಮೋಸೋಮ್‌ನ ವಂಶದ ತತ್ವವನ್ನು ಅಭಿವೃದ್ಧಿ ಪಡಿಸಲಾಯಿತು.[೪]

ರಚನೆಗಳು

ಬೀಜಕಣಗಳು ಪ್ರಾಣಿಗಳಲ್ಲಿನ ದೊಡ್ಡ ಕೋಶೀಯ ಅಂಗಕ.[೫] ಸಸ್ತನಿ ಗಳ ಜೀವಕಣಗಳಲ್ಲಿನ ಬೀಜಕಣಗಳ ಸರಾಸರಿ ವ್ಯಾಸವು 6 ಮೈಕ್ರೋಮೀಟರ್ಸ್ (μm) ಆಗಿರುತ್ತದೆ, ಇದು ಜೀವಕಣಗಳ ಒಟ್ಟು ಘನ ಅಳತೆಯಲ್ಲಿ 10% ಆಕ್ರಮಿಸಿರುತ್ತದೆ.[೬] ಅಂಟಂಟಾದ ದ್ರವವಾಗಿದ್ದಾಗ ಅದನ್ನು ನ್ಯೂಕ್ಲೀಯೋಪ್ಲಾಸಂ ಎಂದು ಕರೆಯಲಾಗುತ್ತದೆ ಮತ್ತು ಅದು ಬೀಜಕಣಗಳ ಹೊರಗಡೆ ಕಾಣಸಿಗುವ ಸೈಟೋಸಲ್ ಸಂಯೋಜನೆಯಂಥೆ ಕಾಣುತ್ತದೆ ಎನ್ನಲಾಗಿದೆ.[೭] ದಟ್ಟವಾಗಿ ಒಂದು ಅಂದಾಜಿನಂತೆ ಗೋಲಾಕೃತಿಯ ಆರ್ಗಾನೆಲ್ಲ್‌ನಂಥೆ ಕಾಣುತ್ತದೆ.

ನ್ಯೂಕ್ಲೀಯಾರ್ ಹೊದಿಕೆ ಮತ್ತು ರಂಧ್ರಗಳು

ಯೂಕಾರ್ಯೋಟಿಕ್ ಜೀವಕಣದ ಬೀಜಕಣ. ಈ ಚಿತ್ರದಲ್ಲಿ ಕಾಣುವುದು ರಿಬೋಸೋಮ್ ನಿಂದ ಸಾಂದ್ರವಾದ ನ್ಯೂಕ್ಲೀಯರ್ ಹೊದಿಕೆಯ ಡಬ್ಬಲ್ ಪೊರೆ, DNA (ಕ್ರೊಮಾಟಿನ್‌ನ ಸಮಷ್ಟಿ), ಮತ್ತು ನ್ಯೂಕ್ಲೀಯೋಲಸ್. ಜೀವಕಣದ ಬೀಜಕಣದೊಳಗೆ ನ್ಯೂಕ್ಲೀಯೋಪ್ಲಾಸಂ ಎಂದು ಕರೆಯಲ್ಪಡುವ ಅಂಟಂಟಾದ ದ್ರವ್ಯವಿರುತ್ತದೆ ಅದು ಬೀಜಕಣದಾಚೆಗಿರುವ ಸೈಟೋಪ್ಲಾಸಂನಂತ್ತಿರುತ್ತದೆ.
ನ್ಯೂಕ್ಲೀಯರ್ ಹೊದಿಕೆಯ ಮೇಲಿನ ನ್ಯೂಕ್ಲೀಯರ್ ರಂಧ್ರದ ಅಡ್ಡಛೇಧನ.(1). ಬೇರೆ ಚಿತ್ರದ ಗುರುತು ತೋರಿಸುವ ಪ್ರಕಾರ (2) ದಿ ಔಟರ್ ರಿಂಗ್, (3) ಸ್ಪೋಕ್ಸ್, (4) ಬ್ಯಾಸ್ಕೆಟ್, ಮತ್ತು (5) ಫಿಲಾಮೆಂಟ್ಸ್.

ನ್ಯೂಕ್ಲೀಯಾರ್ ಹೊದಿಕೆ ಬೇರೆ ಅರ್ಥದಲ್ಲಿ ನ್ಯೂಕ್ಲೀಯಾರ್ ಮೆಂಬ್ರೇನ್ ಎಂದೂ ಕರೆಯಲಾಗುತ್ತದೆ ಇದಕ್ಕೆ ಎರಡು ಕೋಶೀಯ ಪೊರೆಗಳಿವೆ ಒಂದು ಒಳಗಡೆ ಮತ್ತೊಂದು ಹೊರಗಡೆ, ಇವು ಒಂದಕ್ಕೊಂದು ಸಮನಾಂತರವಾಗಿ 10 ರಿಂದ 50 ನ್ಯಾನೋಮೀಟಗಳಷ್ಟು(nm) ಅಂತರದಲ್ಲಿ ಬೇರ್ಪಟ್ಟಿರುತ್ತದೆ. ನ್ಯೂಕ್ಲೀಯಾರ್ ಹೊದಿಕೆಯು ಬೀಜಕಣಗಳನ್ನು ಸಂಪೂರ್ಣವಾಗಿ ಸುತ್ತುವರಿದು ಜೀವಕಣಗಳ ವಂಶಾವಳಿ ಸಾಮಗ್ರಿಯನ್ನು ಸುತ್ತ-ಮುತ್ತ ಇರತಕ್ಕ ಸೈಟೋಪ್ಲಾಸಂ‌ನಿಂದ ಬೇರ್ಪಡಿಸಿರುತ್ತದೆ, ನ್ಯೂಕ್ಲೀಯೋಪ್ಲಾಸಂ ಮತ್ತು ಸೈಟೋಪ್ಲಾಸಂನಿಂದ ಪ್ರಸರಿಸುವ ಸ್ಥೂಲಾಣುಗಳು ಗಳಿಗೆ ತಡೆಗೋಡೆಯಾಗಿರುತ್ತವೆ.[೮] ಹೊರ ನ್ಯೂಕ್ಲೀಯಾರ್ ಪೊರೆಯು ಒರಟು ಎಂಡೋಪ್ಲಾಸ್ಮಿಕ್ ರೆಟಿಕ್ಯೂಲಮ್ (RER)ನ ಪೊರೆಯ ಜೊತೆ ಸತತವಾಗಿರುತ್ತದೆ ಮತ್ತು ಅದು ರಿಬೋಸೋಮ್ಸ್ ನ ಜೊತೆಯೂ ಅದೇ ರೀತಿ ದಟ್ಟವಾಗಿರುತ್ತದೆ. ಪೊರೆಗಳ ನಡುವಿನ ಸ್ಥಳವನ್ನು ಪೆರಿನ್ಯೂಕ್ಲೀಯಾರ್ ಸ್ಪೇಸ್ ಎಂದು ಕರೆಯುತ್ತಾರೆ ಮತ್ತು ಅದು RER ಲ್ಯೂಮೆನ್ ಜೊತೆ ಸತತವಾಗಿರುತ್ತದೆ.

ಹೊದಿಕೆ ಮುಖಾಂತರ ಜಲೀಯ ನಾಲೆಗಳನ್ನು ಒದಗಿಸುವ ನ್ಯೂಕ್ಲೀಯಾರ್ ರಂಧ್ರಗಳು ಬಹ್ವಂಶ ಪ್ರೊಟೀನ್‌ಗಳ ಸಂಯೋಜನೆಯನ್ನು ಹೊಂದಿದೆ, ಇವನ್ನು ಸಮಗ್ರವಾಗಿ ನ್ಯೂಕ್ಲೋಪೊರಿನ್ಸ್ ಎಂದು ಉಲ್ಲೇಖಿಸಲಾಗುತ್ತದೆ. ಅಣ್ವಿಕ ತೂಕ ದಲ್ಲಿ ರಂಧ್ರಗಳು ಸುಮಾರು 125 ದಶಲಕ್ಷ ಡಾಲ್ಟನ್ ಗಳಿವೆ ಮತ್ತು ಸುಮಾರು 50 ( ಯೀಸ್ಟ್ ನಲ್ಲಿ) ರಿಂದ 100 ಪ್ರೊಟೀನ್ಸ್ (ವರ್ಟಿಬ್ರೇಟ್ ಗಳಲ್ಲಿ) ಇರುತ್ತದೆ.[೫] ಒಟ್ಟು ವ್ಯಾಸದಲ್ಲಿ ರಂಧ್ರಗಳು 100 nm ಇರುತ್ತದೆ ; ಆದಾಗ್ಯೂ ಕಣಗಳು ಮುಕ್ತವಾಗಿ ಚೆದುರುವ ಸ್ಥಳ ಕೇವಲ 9 nm ಅಗಲವಾಗಿರುತ್ತದೆ, ಇದಕ್ಕೆ ಕಾರಣ ರಂಧ್ರಗಳ ಮಧ್ಯದಲ್ಲಿರುವ ನಿಯಂತ್ರಣ ವ್ಯವಸ್ಥೆ. ಈ ಸ್ಥಳವು ನೀರಿನಲ್ಲಿ ಕರಗಬಲ್ಲ ಸಣ್ಣ ಕಣಗಳನ್ನು ಬಿಟ್ಟುಕೊಂಡು ನ್ಯೂಕ್ಲೀಕ್ ಆಸಿಡ್ ನಂಥ ದೊಡ್ಡವನ್ನು ಮತ್ತು ದೊಡ್ಡ ಪ್ರೊಟೀನ್‌ಗಳನ್ನು ಒಳಪ್ರವೇಶಿಸುವುದಾಗಲಿ ಅಥವಾ ಹೊರ ಹೋಗುವುದಕ್ಕಾಗಲಿ ಅವಕಾಶ ಕೊಡದೆ ತಡೆಯುತ್ತವೆ. ಆದರೆ ಇದಕ್ಕೆ ಬದಲಾಗಿ ಈ ದೊಡ್ದ ಕಣಗಳನ್ನು ಕ್ರಿಯಾಶೀಲವಾಗಿ ಬೀಜಕಣಗಳಿಗೆ ಸಾಗಿಸಬೇಕಾಗಿತ್ತು. ಒಂದು ನಮೂನೆಯ ಸಸ್ತನಿಯ ಜೀವಕಣಗಳ ಬೀಜಕಣಗಳಲ್ಲಿ ಸುಮಾರು 3000 ರಿಂದ 4000 ರಂಧ್ರಗಳು ಅದರ ಹೊದಿಕೆಯುದ್ದಕ್ಕೂ ಇರುತ್ತದೆ,[೯] ಪ್ರತಿಯೊಂದರಲ್ಲೂ ಡೋನಟ್-ಆಕಾರದ ಎಂಟು ಸುತ್ತುಗಳುಳ್ಳ ಸಿಮ್ಮೆಟ್ರ‍ಿಕ್ ಉಂಗುರಾಕಾರದ ರಚನೆಯು ಒಳ ಮತ್ತು ಹೊರ ಪೊರೆಗಳ ಬೆಸುಗೆಯ ಸ್ಥಳದಲ್ಲಿರುತ್ತದೆ.[೧೦] ಈ ಉಂಗೂರಕ್ಕೆ ಸೇರಿದಂತೆ ನ್ಯೂಕ್ಲೀಯಾರ್ ಬ್ಯಾಸ್ಕೆಟ್ ರಚನೆಯಿರುತ್ತದೆ ಅದು ನ್ಯೂಕ್ಲೀಯೋಪ್ಲಾಸಂವರೆಗೂ ವಿಸ್ತರಿಸಿರುತ್ತದೆ ಮತ್ತು ಸೈಟೋಪ್ಲಾಸಂನೊಳಗೆ ಮುಟ್ಟುವ ಫಿಲಾಮೆಂಟಸ್ ವಿಸ್ತರಣೆಗಳ ಸರಣಿಯೂ ಇರುತ್ತದೆ. ಇವೆರಡೂ ರಚನೆಗಳು ನ್ಯೂಕ್ಲೀಯಾರ್ ಸಾಗಾಣಿಕೆಯ ಪ್ರೊಟೀನ್‌ಗಳ ನಡುವೆ ಬಂಧ ಬೆಸೆಯುವ ಕಾರ್ಯವನ್ನು ಮಾಡುತ್ತದೆ.[೫]

ಅನೆಕ ಪ್ರೊಟೀನ್‌ಗಳು, ರಿಬೋಸೊಮಲ್ ಸಬ್‌ಯೂನಿಟ್‌ಗಳು ಮತ್ತು ಕೆಲ RNAಗಳು ರಂಧ್ರಗಳ ಮುಖಾಂತರ ಸಾಗಾಣಿಕೆ ಮಾಡಲ್ಪಡುತ್ತದೆ, ಆ ಪ್ರಕ್ರಿಯೆ ಸಾಗಾಣಿಕೆ ಕ್ಯಾರಿಯೋಫೆರಿನ್ ಗಳು ಎಂದು ಕರೆಯಲ್ಪಡುವ ಕುಟುಂಬಗಳ ಮಧ್ಯಸ್ಥಿಕೆಯಿಂದ ನಡೆಯುತ್ತದೆ. ಕಾರ್ಯೋಫೆರಿನ್‌ಗಳು, ಬೀಜಕಣಗಳೊಳಗೆ ಚಲನೆಗೆ ಮಧ್ಯಸ್ಥಿಕೆ ಮಾಡುತ್ತಾವೋ ಅವನ್ನು ಇಂಪೊರ್ಟಿನ್ಸ್ ಎಂದು ಮತ್ತು ಬೀಜಕಣಗಳಿಂದಾಚೆಯ ಚಲನೆಗೆ ಮಧ್ಯಸ್ಥಿಕೆವಹಿಸುತ್ತಾವೋ ಅವನ್ನು ಎಕ್ಸ್‌ಪೋರ್ಟಿನ್ಸ್ ಎಂದು ಕರೆಯಲಾಗುತ್ತದೆ. ಅನೇಕ ಕಾರ್ಯೋಫೆರಿನ್‌ಗಳು ಪರಸ್ಪರ ಕ್ರಿಯೆಯನ್ನು ನೇರವಾಗಿ ಸಾಗುವಳಿ ದೋಣಿಯ ಜೊತೆಗೆ ಮಾಡುತ್ತದೆ, ಆದಾಗ್ಯೂ ಕೆಲವು ಸಂಯೋಜಕ ಪ್ರೊಟೀನ್‌ಗಳನ್ನು ಬಳಸುತ್ತವೆ.[೧೧] ಸ್ಟಿರಾಯ್ಡ್ ಹಾರ್ಮೋನ್ ಗಳಾದ ಕಾರ್ಟಿಸಲ್ ಮತ್ತು ಆಳ್ಡೋಸ್ಟೀರೋನ್, ಮತ್ತು ಜೀವಕೋಶಗಳ ನಡುವೆ ಸಂಕೇತಗಳಲ್ಲಿ ಮುಳುಗಿರುವ, ಲಿಪಿಡ್‌ನಲ್ಲಿ-ಕರಗಬಲ್ಲ ಇತರ ಸಣ್ಣ ಕಣಗಳು, ಜೀವಕಣಗಳ ಪೊರೆಯಿಂದ ಸೈಟೋಪ್ಲಾಸಂನೊಳಗೆ ಬೆರೆತು ಹೋಗುತ್ತದೆ, ಬೀಜಕಣದೊಳಗೆ ಸಂಚಾರದೊಳಗಿರುವ ನ್ಯೂಕ್ಲೀಯಾರ್ ರೆಸೆಪ್ಟರ್ ಪ್ರೊಟೀನ್ಸ್ ಅನ್ನು ಬಂಧಿಸುತ್ತದೆ. ಕೇಂದ್ರ ಪರಮಾಣುವಿನೊಂದಿಗೆ ಬಂಧಿಸಿಕೊಂಡಿರು ವಾಗ ಅವು ಪ್ರತಿಲಿಪಿಯ ಅಂಶ ಗಳಾಗಿ ಕಾರ್ಯವೆಸಗುತ್ತದೆ ; ಕೇಂದ್ರ ಪರಮಾಣುವಿನೊಂದಿಗಿನ ಬಂಧವು ಗೈರು ಹಾಜರಾಗಿದ್ದಾಗ ಪ್ರತಿವರ್ತಿಸುವ ಜೀವಕೋಶಗಳು ಹಿಸ್ಟೋನ್ ಡೀಯಾಸೆಟಿಲೇಸ್ ಗಳಾಗಿ ಕಾರ್ಯವೆಸಗುತ್ತವೆ, ಇವು ಜೀನ್ ಎಕ್ಸ್ ಪ್ರೆಷನ್‌ಗಳನ್ನು ಅದುಮಿಡುತ್ತವೆ.[೫]

ನ್ಯೂಕ್ಲೀಯಾರ್ ಲ್ಯಾಮೀನಾ

ಪ್ರಾಣಿಗಳ ಜೀವಕಣಗಳಲ್ಲಿ ಎರಡು ಮಧ್ಯವರ್ತಿ ಫಿಲಾಮೆಂಟ್ಸ್ ಜಾಲಗಳು ಬೀಜಕಣಗಳಿಗೆ ಯಾಂತ್ರಿಕ ಬೆಂಬಲವನ್ನೀಯುತ್ತದೆ : ನ್ಯೂಕ್ಲೀಯಾರ್ ಲ್ಯಾಮೀನಾ ವ್ಯವಸ್ಥಿತ ಜಾಲರಿಯ ಹೊದಿಕೆಯ ಒಳಾಂಗಣವನ್ನಾಗಿ ರೂಪಗೊಳ್ಳುತ್ತದೆ, ಕಡಿಮೆ ವ್ಯವಸ್ಥಿತವಾಗಿರುವ ಬೆಂಬಲವನ್ನು ಸೈಟೋಸಲಿಕ್ ಹೊದಿಕೆಯ ಮೇಲೆ ಒದಗಿಸಲಾಗಿದೆ. ಎರಡು ವ್ಯವಸ್ಥೆಗಳು, ನ್ಯೂಕ್ಲೀಯಾರ್ ಹೊದಿಕೆ ಮತ್ತು ಕ್ರೋಮೋಸೊಮ್ಸ್ ಹಾಗೂ ನ್ಯೂಕ್ಲೀಯಾರ್ ರಂಧ್ರಗಳಿಗೆ ಹಿಡಿಗೂಟ ಅಥವಾ ಆಧಾರವಾಗುತ್ತಿರುವ ರಚನೆಗೆಯ ಸಹಾಯವನ್ನು ಒದಗಿಸುತ್ತದೆ.[೬]

ನ್ಯೂಕ್ಲೀಯಾರ್ ಲ್ಯಾಮೀನಾ ಬಹುತೇಖವಾಗಿ ಲ್ಯಾಮಿನ್ ಪ್ರೊಟೀನ್‌ಗಳಿಂದ ಸಂಯೋಜನೆಗೊಂಡಿದೆ. ಎಲ್ಲಾ ಪ್ರೊಟೀನ್‌ಗಳಂತೆ ಲ್ಯಾಮಿನ್‌ಗಳು ಸೈಟೋಪ್ಲಾಸಂಗಳಲ್ಲಿ ಸಂಯೊಜಿಸಲಾಗಿದೆ ಆನಂತರ ಅದನ್ನು ಬೀಜಕಣಗಳ ಒಳಾಂಗಣಕ್ಕೆ ಸಾಗುವಳಿ ಮಾಡಲಾಗುತ್ತದೆ, ಇಲ್ಲಿ ಪ್ರಸ್ತುತವಿರುವ ನ್ಯೂಕ್ಲೀಯಾರ್ ಲ್ಯಾಮಿನಾ ಜಾಲದೊಳಗೆ ಅಂತರ್ಗತವಾಗುವ ಮೊದಲು ಜೋಡಣೆಗೊಳಪಡುತ್ತದೆ.[೧೨][೧೩] ಲ್ಯಾಮಿನ್ಸ್‌ಗಳು ನ್ಯೂಕ್ಲೀಯೋಪ್ಲಾಸಂನೊಳಗೂ ಕಂಡು ಬರುತ್ತದೆ ಇಲ್ಲಿ ಅವು ಮತ್ತೊಂದು ರಚನೆಯನ್ನು ಕ್ರಮಬದ್ಧವಾಗಿ ರೂಪಿಸುತ್ತವೆ, ಇದನ್ನು ನ್ಯೂಕ್ಲೀಯೋಪ್ಲಾಸ್ಮಿಕ್ ವೇಯ್ಲ್ ಎನ್ನಲಾಗುತ್ತದೆ[೧೪], ಫ್ಲೋರೀಸೆನ್ಸ್ ಮೈಕ್ರೋಸ್ಕೋಪಿ ನಲ್ಲಿ ಮಾತ್ರ ಇದನ್ನು ಕಾಣಬಹುದಾಗಿದೆ. ಈ ವೇಯ್ಲ್‌ನ ಕಾರ್ಯವೇನೆಂದು ಸ್ಪಷ್ಟವಾಗಿ ಗೊತ್ತಿಲ್ಲ ಆದಾಗ್ಯೂ ಇದನ್ನು ನ್ಯೂಕ್ಲೀಯೋಲಸ್ ನಿಂದ ಹೊರತು ಪಡಿಸಲಾಗಿದೆ ಮತ್ತು ಇಂಟರ್‌ಫೇಸ್ ನಲ್ಲಿ ಮಾತ್ರ ಇದು ಹಾಜರಾಗಿರುತ್ತದೆ.[೧೫] ಲ್ಯಾಮಿನ್ ರಚನೆಗಳು ಕ್ರೋಮೋಟಿನ್ ಅನ್ನು ವೇಯ್ಲ್ ಮುಖೇನ ಬಂಧಿಸಿ ಮತ್ತು ಅದರ ರಚನೆಯನ್ನು ಕದಡಿಸಿ ಅದರ ಪ್ರೊಟೀನ್-ಕೋಡಿಂಗ್ ಜೀನ್ಸ್‌ಗಳನ್ನು ಪ್ರತಿಬಂಧಿಸುತ್ತದೆ.[೧೬]

ಬೇರೆ ಇತರ ಇಂಟರ್‌ಮೀಡಿಯೇಟ್ ಫಿಲಾಮೆಂಟ್ ಗಳ ಸಲಕರಣೆಗಳಂತೆ, ಲ್ಯಾಮಿನ್ ಮೋನೋಮರ್ ಗಳಲ್ಲಿ ಆಲ್ಫಾ-ಹೆಲಿಕಲ್ ಡೊಮೈನ್‌ಗಳಿರುತ್ತದೆ ಇದನ್ನು ಎರಡು ಮೋನೋಮರ್ಸ್‌ಗಳಿಂದ ಒಂದಕ್ಕೊಂದು ಸುರುಳಿ ಸುತ್ತುವಂತೆ ಸುತ್ತಲಾಗುತ್ತದೆ, ಇದರಿಂದಾಗಿ ಡೈಮರ್ ರಚನೆ ಕಾಯ್ಲಡ್ ಕಾಯಿಲ್ ಎಂಬುದೊಂದು ರಚನೆಗೊಳ್ಳುತ್ತದೆ. ಈ ಎರಡು ಡೈಮರ್ ರಚನೆಗಳು ಒಂದಕ್ಕೊಂದು ಅಕ್ಕ-ಪಕ್ಕದಲ್ಲಿ ಸೇರುತ್ತವೆ ಆದರೆ ಅವು ಅಸಮನಾಂತರ ವ್ಯವಸ್ಥೆಯಲ್ಲಿ ಇದ್ದು ಪ್ರೊಟೋಫಿಲಾಮೆಂಟ್ ಎಂದು ಕರೆಯಲ್ಪಡುವ ಟ್ರೆಟ್ರಾಮೆರ್ ರೂಪ ತಾಳುತ್ತದೆ. ಈ ರೀತಿಯ ಪ್ರೋಟೋಫಿಲಾಮೆಂಟ್‌ಗಳು ಪಾರ್ಶ್ವವಾಗಿ ವ್ಯವಸ್ಥೆಗೊಂಡು ಸುರುಳಿ ಸುತ್ತಿದಂತೆ ರೂಪತಾಳಿ ಹಗ್ಗದರೀತಿಯ ಫಿಲಾಮೆಂಟ್ ಆಗುತ್ತದೆ. ಈ ಫಿಲಾಮೆಂಟ್ಸ್‌ಗಳನ್ನು ಕ್ರಿಯಾಶೀಲವಾಗಿ ಜೋಡಿಸಬಹುದು ಅಥವಾ ಜೋಡಣೆಯನ್ನು ಬಿಡಿಸಬಹುದು ಅಂದರೆ ಅದರ್ಥ ಅದರ ಉದ್ದದಲ್ಲಿ ವ್ಯತ್ಯಾಸವಾಗುತ್ತದೆ, ಈ ವ್ಯತ್ಯಾಸ ಎಷ್ಟು ಆಗುತ್ತದೆ ಅನ್ನುವುದು ಅದಕ್ಕೆ ಒದಗುವ ಫಿಲಾಮೆಂಟ್‌ಗಳ ಸೇರ್ಪಡೆ ಅಥವಾ ತ್ಯಾಜ್ಯದ ಮೇಲೆ ಅವಲಂಬಿಸುತ್ತದೆ.[೬]

ಲ್ಯಾಮಿನ್‌ ಜೀನ್‌ಗಳ ಬದಲಾವಣೆ ಅಥವಾ ಪರಿವರ್ತನೆಯಿಂದಾಗುವ ಫಿಲಾಮೆಂಟ್ ಜೋಡಣೆಯ ಊನವನ್ನು ಲ್ಯಾಮಿನೋಪಥೀಸ್ ಎಂದು ಕರೆಯಲಾಗುತ್ತದೆ. ಅತ್ಯಂತ ಗಮನೀಯವಾದ ಲ್ಯಾಮಿನೋಪಥಿ ಎಂದರೆ ಅದು ಪ್ರೊಗೇರಿಯಾ ವರ್ಗದ ರೋಗ, ಇದರಿಂದಾಗುವ ಲಕ್ಷಣವೆಂದರೆ ಇದರ ರೋಗಿಗಳು ಅವರ ನಿಜ ವಯಸ್ಸಿಗಿಂತ ಅಧಿಕ ವಯಸ್ಸಾದ ವರಂತೆ ಕಂಡು ಬರುತ್ತಾರೆ. ಜೊತೆಯಾಗಿರುವ ಜೀವರಾಸಾಯನಿಕ ಬದಲಾವಣೆಯು ವಯಸ್ಸಾದ ಫಿನೋಟೈಪ್ ಗಳಿಗೆ ಕೊಡುವ ಏರಿಕೆಯನ್ನು ಇನ್ನೂ ಸರಿಯಾಗಿ ಅರ್ಥೈಸಲು ಆಗಿಲ್ಲ.[೧೭]

ವರ್ಣತಂತುಗಳು (ಕ್ರೋಮೋಸೋಮ್ಸ್‌ಗಳು)

ಮೌಸ್ ಫೈಬ್ರೋಬ್ಲಾಸ್ಟ್ ಬೀಜಕಣಗಳಲ್ಲಿ DNA ನೀಲಿ ಕಲೆಯಂತಿದೆ.ಅಸಮವಾದ ವರ್ಣತಂತು ಕ್ಷೇತ್ರಗಳಲ್ಲಿ ವರ್ಣತಂತು 2 (ಕೆಂಪು) ಮತ್ತು ವರ್ಣತಂತು 9 (ಹಸಿರು) ಕಲೆಯಂಥೆ ಫ್ಲೋರೀಸೆಂಟ್ ಜೊತೆ ಸಿಟು ಬೆರಕೆಯ ಸ್ಥಿತಿಯಲ್ಲಿರುತ್ತದೆ.

ಜೀವಕಣದ ಬೀಜಕಣದಲ್ಲಿ, ಜೀವಕಣಗಳ ವಂಶವಾಹಿನಿ ಸಾಮಗ್ರಿಗಳು ಬಹುತೇಖವಾಗಿ ಬಹ್ವಂಶ ರೇಖಾತ್ಮಕ DNA ಕಣಗಳು ವ್ಯವಸ್ಥಿತ ವರ್ಣತಂತುಗಳ ರಚನೆಯ ರೂಪದಲ್ಲಿ ಇರುತ್ತದೆ. ಇವು ಜೀವಕಣ ಚಕ್ರದಲ್ಲಿ ಕ್ರೊಮಾಟಿನ್ ಎನ್ನುವ DNA-ಪ್ರೊಟೀಣ್ ಕಾಂಪ್ಲೆಕ್ಸ್‌ನಲ್ಲಿ ವ್ಯವಸ್ಥಿತವಾಗಿರುತ್ತದೆ, ಮತ್ತು ಜೀವಕಣಗಳ ವಿಭಜನೆಯಲ್ಲಿ ಕ್ರೊಮಾಟೀನ್‌ಗಳು ಕಾರ್ಯೋಟೈಪ್ ಗಳ ವಾಡಿಕೆಯ ಸ್ಪಷ್ಟವಾದ ಕ್ರೋಮೋಸೋಮ್ ಗಳು ರೂಪತಾಳುತ್ತವೆ. ಜೀವಕಣದ ಜೀನ್‌ಗಳ ಒಂದು ಭಾಗ ಮಿಟೋಕಾಂಡ್ರಿಯಾದಲ್ಲಿ ಸ್ಥಾಪಿತವಾಗಿರುತ್ತದೆ.

ಎರಡು ರೀತಿಯ ಕ್ರೊಮಾಟಿನ್‌ಗಳಿವೆ. ಯೂಕ್ರೊಮಾಟಿನ್ ಅಲ್ಪ ಪ್ರಮಾಣದ ದಟ್ಟತೆ DNA ರೂಪದಲ್ಲಿರುತ್ತದೆ ಮತ್ತು ಜೀವಕಣಗಳು ಆಗಾಗ್ಗೆ ಅಭಿವ್ಯಕ್ತ ಗೊಳಿಸುವ ಜೀನ್‌ಗಳನ್ನು ಹೊಂದಿರುತ್ತದೆ.[೧೮] ಇನ್ನೊಂದು ರೀತಿಯದು ಎಂದರೆ ಅದು ಹೆಟೀರೋಕ್ರೊಮಾಟಿನ್ ಇದು ಹೆಚ್ಚು ಸಾಂದ್ರವಾಗಿ ಅಂದರೆ ದಟ್ಟವಾಗಿ ಕೂಡಿರುತ್ತದೆ ಮತ್ತು ಅಪರೂಪಕ್ಕೆ ನಕಲು ಅಥವಾ ಪ್ರತಿಯಾಗುತ್ತದೆ. ಈ ರಚನೆಯು ಇನ್ನೂ ವರ್ಗೀಕರಣಗೊಂಡು ಫ್ಯಾಕುಲ್ಟೇಟೀವ್ ಹೆಟಿರೋಕ್ರೊಮಾಟಿನ್ ಎಂದು ಕರೆಯಲ್ಪಡುತ್ತದೆ, ಮತ್ತು ಇದರಲ್ಲಿ ಹೆಟಿರೋಕ್ರೊಮಾಟಿನ್ ಆಗಿ ಕೆಲವು ಜೀವಕಣಗಳಲ್ಲಿ ಅಥವಾ ಕೆಲ ಜೀವ ಕಣಗಳ ಬೆಳವಣಿಗೆಯಲ್ಲಿ ವ್ಯವಸ್ಥೆಗೊಂಡಿರುತ್ತದೆ, ಮತ್ತು ಇನ್ನೂ ವರ್ಗೀಕರಣಗೊಂಡು ಕಾನ್ಸ್‌ಟಿಟ್ಯೂಟಿವ್ ಹೆಟಿರೋಕ್ರೊಮಾಟಿನ್ ಆಗುತ್ತದೆ, ಇದರಲ್ಲಿ ಟೆಲೊಮೀರ್ ಗಳು ಮತ್ತು ಸೆಂಟ್ರೋಮೀರ್ ಗಳೆಂಬ ಕ್ರೋಮೋಸೋಮ್ಸ್‌ಗಳು ಇರುತ್ತದೆ.[೧೯] ಆಂತರಿಕ ಬೆಳವಣಿಗೆಯಲ್ಲಿ ಕ್ರೊಮಾಟಿನ್ ತನ್ನನ್ನು ತಾನೆ ಪ್ರತ್ಯೇಕವಾದ ಒಂಟಿ ಪಟ್ಟೆಗಳಾಗಿ [೨೦] ವ್ಯವಸ್ಥಿತಗೊಳ್ಳುತ್ತದೆ ಇದನ್ನು ಕ್ರೋಮೋಸೋಮ್ ಪ್ರದೇಶ ಗಳೆಂದು ಕರೆಯಲಾಗುತ್ತದೆ.[೨೧] ಕ್ರೋಮೋಸೋಮ್‌ನ ಯೂಕ್ರೊಮ್ಯಾಟಿಕ್ ಪ್ರದೇಶದಲ್ಲಿ ಸಾಮಾನ್ಯವಾಗಿ ಕ್ರಿಯಾಶೀಲ ಜೀನ್‌ಗಳಿರುತ್ತವೆ, ಇವು ಕ್ರೋಮೋಸೋಮ್‌ನ ಪ್ರದೇಶದ ಗಡಿಯಲ್ಲಿದ್ದಂತೆ ಕಂಡುಬರುತ್ತದೆ.[೨೨]

ಕೆಲ ಕ್ರೋಮಟಿನ್ ವ್ಯವಸ್ಥೆಗಳಿಗೆ ವಿಶೇಷವಾಗಿ ನ್ಯೂಕ್ಲೀಯೋಸೋಮ್ ಗಳಿಗೆ ಪ್ರತಿಕಾಯಗಳು ಅಸಂಖ್ಯಾತ ಸಿಸ್ಟಮಿಕ್ ಲ್ಯೂಪಸ್ ಎರಿಥಿಮಾಟೋಸಸ್ ಗಳಂಥ ಆಟೋ‌ಇಮ್ಯೂನ್‌ಡಿಸೀಸ್ ಗಳ ಜೊತೆ ಇರುತ್ತದೆ.[೨೩] ಇವುಗಳನ್ನು ಪ್ರತಿ-ನ್ಯೂಕ್ಲೀಯರ್ ಪ್ರತಿಕಾಯಗಳು (ANA) ಎಂದು ಕರೆಯಲಾಗುತ್ತದೆ ಮತ್ತು ಸಾಮಾನ್ಯ ಇಮ್ಯೂನ್ ವ್ಯವಸ್ಥೆಯ ಸರಿಯಾಗಿ ಕಾರ್ಯನಿರ್ವಹಿಸದರ ಭಾಗವಾಗಿ ಬಹ್ವಂಶ ಸ್ಕ್ಲಿರೋಸಿಸ್ ಜೊತೆ ಹೊಂದಾಣಿಕೆಯಾಗಿ ಕಂಡು ಬರುತ್ತದೆ.[೨೪] ಪ್ರೊಗೆರಿಯಾದಲ್ಲಿ ಆಗುವಂತೆ ಪ್ರತಿಕಾಯಗಳು ಆಟೋಇಮ್ಯೂನ್ ರೋಗಗಳನ್ನು ತುಂಬುವದರಲ್ಲಿ ಪಾತ್ರವಹಿಸುವುದು ಸ್ಪಷ್ಟವಾಗಿಲ್ಲ.

ನ್ಯೂಕ್ಲೀಯೋಲಸ್ (ಜೀವಕಣಗಳಲ್ಲಿ ವಿಭಜಿಸಲಾಗದ ವಿಶೇಷವಾಗಿ ಪ್ರೊಟೀನಿಂದಾಗಿರುವ ಚಿಕ್ಕ ಸಾಂದ್ರ ಕಾಯ)

ಜೀವಕಣದಲ್ಲಿನ ಬೀಜಕಣದ ಎಲೆಕ್ಟ್ರಾನ್ ಮೈಕ್ರೊಗ್ರಾಫ್‌ನಲ್ಲಿ ಕಪ್ಪು ಕಲೆಯ ನ್ಯೂಕ್ಲೀಯೋಲಸ್ ಕಾಣಿಸುತ್ತದೆ.

ನ್ಯೂಕ್ಲೀಯೋಲಸ್ ಎನ್ನುವುದು ಬೀಜಕಣಗಳಲ್ಲಿ ಪ್ರತ್ಯೇಕವಾಗಿ ಮಲಿನಗೊಂಡ ಸಾಂದ್ರತೆಯುಳ್ಳ ರಚನೆ. ಇದೇನು ಪೊರೆಯಿಂದ ಸುತ್ತುವರಿದುದ್ದಲ್ಲ ಮತ್ತು ಕೆಲವೊಮ್ಮೆ ಇದನ್ನು ಸಬ್‌ಆರ್ಗಾನೆಲ್ಲೆ ಎಂದು ಕರೆಯುವುದುಂಟು. rDNAಯ ಟ್ಯಾಂಡೆಮ್ ಪುನರಾವರ್ತನೆಯ ಸುತ್ತ ರೂಪಗೊಳ್ಳುತ್ತದೆ, ರಿಬೋಸೋಮಲ್ RNA (rRNA)ಯ DNA ಕೋಡಿಂಗ್. ಈ ಪ್ರದೇಶಗಳು ನ್ಯೂಕ್ಲಿಯೋಲಾರ್ ಆರ್ಗನೈಜರ್ ಪ್ರದೇಶಗಳು (NOR) ಎನ್ನಲಾಗುತ್ತದೆ. ನ್ಯೂಕ್ಲೀಯೋಲಸ್‌ನ ಮುಖ್ಯಪಾತ್ರವೆಂದರೆ rRNAಯನ್ನು ಸಮನ್ವಗೊಳ್ಳಿಸುವುದು ಮತ್ತು ರಿಬೋಸೋಮ್ಸ್‌ಗಳನ್ನು ಜೋಡಿಸುವುದು. ನ್ಯೂಕ್ಲೀಯೋಲಸ್‌ನ ರಚನೆಗಳು ಒಂದಕ್ಕೊಂದು ಅಂಟಿಕೊಂಡಿರುವುದು ಅದರ ಚಟುಟಿಕೆಗಳ ಮೇಲೆ ಅವಲಂಬಿಸಿದೆ, ನ್ಯೂಕ್ಲೀಯೋಲಸ್‌ನಲ್ಲಿ ರಿಬೋಸೋಮಲ್ ಜೋಡಣೆಯು ನ್ಯೂಕ್ಲೀಯೋಲಾರ್‌ನ ಸಲಕರಣೆಗಳಲ್ಲಿ ಅಶಾಶ್ವತ ಕೂಟವಾಗಿ ಪರಿಣಮಿಸುತ್ತದೆ. ಈ ಮಾದರಿಯ ಅವಲೋಕನದಲ್ಲಿ ಕಂಡು ಬರುವುದೇನೆಂದರೆ rDNAಯನ್ನು ನಿಷ್ಕ್ರೀಯಗೊಳಿಸುವುದರಿಂದ ನ್ಯೂಕ್ಲೀಯೋಲಾರ್ ರಚನೆಗಳು ಒಂದಕ್ಕೊಂದು ಬೆರೆಯುವುದರಲ್ಲಿ ಪರಿಣಮಿಸುತ್ತದೆ.[೨೫]

ರಿಬೋಸೋಮಲ್ ಜೋಡಣೆಯ ಮೊದಲ ಹಂತದಲ್ಲಿ, RNA ಪಾಲಿಮರೇಸ್ I ಎಂಬ ಪ್ರೊಟೀನ್‌ನಿಂದ, rDNA ದೊಡ್ಡ ಮಟ್ಟದ ಪೂರ್ವ-rRNA ಸ್ಥಿತಿಯಾಗಿ ರಚನೆಗೆ ಪರಿವರ್ತಿತವಾಗುವುದು. ಇದು 5.8S, 18S ಮತ್ತು 28S rRNA ಉಪಘಟಕವಾಗಿ ಒಡೆಯುತ್ತದೆ.[೨೬] ಪರಿವರ್ತನೆ, ಪರಿವರ್ತನೆಯ ನಂತರದ ಪ್ರಕ್ರಿಯೆಯಲ್ಲಿ ಮತ್ತು rRNA ಜೋಡಣೆಯು ನ್ಯೂಕ್ಲೀಯೋಲಸ್‌ನಲ್ಲಿ ಸಂಭವಿಸುತ್ತದೆ, ಇದಕ್ಕೆ ಸಹಾಯಕವಾಗಿ-ರಿಬೋಸೋಮಲ್ ಕಾರ್ಯಗಳಿಗೆ ಸಂಬಂದ್ಧಿಸಿದ ಜೀನ್‌ಗಳನ್ನು ತನ್ನಲ್ಲಿ ಎನ್‌ಕೋಡಿಂಗ್ ಮಾಡಿಕೊಂಡಿರುವ ಮೆಸೆಂಜೆರ್ RNA ಗಳಿಂದ, ತುದಿಗಳನ್ನು ಹೊಸೆದುಕೊಂಡು ರೂಪಗೊಂಡಿರುವ ಇನ್‌ಟ್ರಾನ್ಗಳಿಂದ ಸಾಧಿಸಿರುವ ಚಿಕ್ಕ ನ್ಯೂಕ್ಲೀಯೋಲಾರ್ RNA (snoRNA) ಕಣಗಳು ಮಾಡುತ್ತವೆ. ಜೋಡಣೆಗೊಂಡ ಉಪಘಟಕಗಳು ನ್ಯೂಕ್ಲೀಯರ್ ರಂಧ್ರಗಳಲ್ಲಿ ಹಾದು ಹೋಗುವ ಅತ್ಯಂತ ದೊಡ್ಡ ರಚನೆಗಳು.[೫]

ಎಲೆಕ್ಟ್ರಾನ್ ಸೂಕ್ಷ್ಮದರ್ಶಿ ಮುಖಾಂತರ ವೀಕ್ಷಿಸಿದಾಗ, ನ್ಯೂಕ್ಲೀಯೋಲಸ್ ಮೂರು ವಿಭಿನ್ನ ಎಂದು ಗುರುತಿಸಬಹುದಾದ ಕ್ಷೇತ್ರಗಳು ಕಂಡು ಬರುತ್ತದೆ, ಅವು : ಅತ್ಯಂತ ಒಳಾಂಗಣದ ಫೈಬ್ರಲ್ಲಾರ್ ಕೇಂದ್ರಗಳು (FCs) ಅನ್ನು ಸುತ್ತುವರೆದಿರುವ ಡೆನ್ಸ್ ಫೈಬ್ರಿಲ್ಲಾರ್ ಸಲಕರಣೆಗಳು (DFC) ಇವೆಲ್ಲವಕ್ಕೆ ಗಡಿಯಾಗಿ ಗ್ರಾನ್ಯುಲ್ಲಾರ್ ಸಲಕರಣೆ (GC) ಕಂಡುಬರುತ್ತದೆ. rDNAಯ ಪರಿವರ್ತನೆಯು FCನಲ್ಲಿ ಅಥವಾ FC-DFCಯ ಗಡಿಯಲ್ಲಿ ಮೂಡುತ್ತದೆ ಮತ್ತು ಜೀವಕಣಗಳಲ್ಲಿ rDNA ಪರಿವರ್ತನೆಯು FCಗಳು ಕಂಡು ಬಂದಾಗೆಲೆಲ್ಲಾ ಅಧಿಕಗೊಳ್ಳುತ್ತದೆ. rRNAಯ ವಿಭಜನೆ ಮತ್ತು ಪರಿವರ್ತನೆ ಅನೇಕ ವೇಳೆ ಸಂಭವಿಸುವುದು DFCನಲ್ಲಿ, ಆನಂತರದ ಹಂತಗಳಲ್ಲಿ ರಿಬೋಸೋಮಲ್ ಉಪಘಟ್ಟಗಳು GCಯ ಮೇಲೆ ಪ್ರೊಟೀನ್ ಜೋಡಣೆಯಲ್ಲಿ ಭಾಗಿಯಾಗುತ್ತದೆ.[೨೬]

ಇತರ ಉಪನ್ಯೂಕ್ಲೀಯಾರ್ ಶಾರೀರಗಳು

ಉಪನ್ಯೂಕ್ಲೀಯಾರ್ ರಚನೆಯ ಗಾತ್ರಗಳು
ರಚನೆಯ ಹೆಸರುರಚನೆಯ ಅಡ್ಡಳತೆ
ಕ್ಯಾಜಲ ಬಾಡೀಸ್0.2–2.0 µm[೨೭]
PIKA5 µm[೨೮]
PML ಬಾಡೀಸ್0.2–1.0 µm[೨೯]
ಪ್ಯಾರಾಸ್ಪೆಕಲ್ಸ್0.2–1.0 µm[೩೦]
ಸ್ಪೆಕಲ್ಸ್20–25 nm[೨೮]

ನ್ಯೂಕ್ಲೀಯಸ್‌ನಲ್ಲಿ ನ್ಯೂಕ್ಲೀಯೋಲಸ್ ಜೊತೆಗೆ ಬೇರೆ ಇತರ ನಾನ್-ಮೆಂಬ್ರೇನ್ ಡಿಲಿನೀಯೇಟೆಡ್ ಬಾಡೀಸ್ ಇರುತ್ತದೆ. ಇವುಗಳಲ್ಲಿ ಕ್ಯಾಜಲ್ ಬಾಡಿಗಳು,ಜೆಮಿನಿ ಆಫ್ ಕಾಯ್ಲಡ್ ಬಾಡೀಸ್, ಪಾಲಿಮಾರ್ಫಿಕ್ ಇಂಟರ್‌ಫೇಸ್ ಕಾರ್ಯೋಸೋಮಲ್ ಅಸೋಸಿಯೇಷನ್ (PIKA), ಪ್ರಾಮಿಎಲೋಸೈಟಿಕ್ ಲ್ಯೂಕೇಮಿಯಾ (PML) ಬಾಡಿಗಳು, ಪ್ಯಾರಾಸ್ಪೆಕಲ್ ಗಳು ಮತ್ತು ಒಟ್ಟುಗೂಡಿಸುವ ಸ್ಪೆಕಲ್ಸ್. ಆದಾಗ್ಯೂ ಅವುಗಳ ಕ್ಷೇತ್ರದ ಬಗ್ಗೆ ಅಲ್ಪ ಗೊತ್ತಿರುತ್ತದೆ, ಈ ಪ್ರದರ್ಶನದಲ್ಲಿ ಇವುಗಳು ಮಹತ್ವವಾಗಿರುತ್ತದೆ ಆದರಿಂದ ನ್ಯೂಕ್ಲೀಯೋಪ್ಲಾಸಂ ಒಂದೇ ರೀತಿಯ ಮಿಶ್ರಣದಲ್ಲಿ ಇರುವುದಿಲ್ಲ ಬದಲಾಗಿ ವ್ಯವಸ್ಥಿತ ಉಪಕ್ಷೇತ್ರಗಳ ಕಾರ್ಯಗಳಿರುತ್ತವೆ.[೨೯]

ಬೇರೆ ಉಪನ್ಯೂಕ್ಲೀಯಾರ್ ರಚನೆಗಳು, ಅಸ್ವಾಭಾವಿಕ ಖಾಯಿಲೆ ಪ್ರಕ್ರಿಯೆಯ ಭಾಗವಾಗಿ ಕಂಡು ಬರುತ್ತದೆ. ಉದಾಹರಣೆಗೆ, ನೆಮಾಲೀನ್ ಮೈಯೋಪಥಿಯಂಥ ಪ್ರಸಂಗಗಳಲ್ಲಿ ಸಣ್ಣ ಇಂಟ್ರಾನ್ಯೂಕ್ಲೀಯಾರ್ ರಾಡ್‌ಗಳು ಇರುವುದಾಗಿ ವರದಿಯಾಗಿದೆ. ಆಕ್ಟಿನ್ ನ ಹಠಾತ್ ರೂಪಾಂತರದ ಪರಿಣಾಮ ಈ ನಮೂನೆಯ ಸ್ಥಿತಿವುಂಟಾಗಿದೆ ಮತ್ತು ರಾಡ್‌ಗಳು ತಮ್ಮೊಳಗೇ ಹಠಾತ್ ರೂಪಾಂತರಗೊಳ್ಳುವ ಆಕ್ಟಿನ್ ಜೊತೆಗೆ ಸೈಟೋಸ್ಕೆಲೀಟಲ್ ಪ್ರೊಟೀನ್ ಗಳನ್ನು ಹೊಂದಿರುತ್ತವೆ.[೩೧]

ಕ್ಯಾಜಲ್ ಬಾಡಿಗಳು ಮತ್ತು ರತ್ನಗಳು

ಬೀಜಕಣಗಳು 1ರಿಂದ 10ರವರೆಗೂ ಅಡಕವಾದ ರಚನೆಗಳನ್ನು ಹೊಂದಿರುತ್ತದೆ, ಅವನ್ನು ಕ್ಯಾಜಲ್ ಬಾಡಿಗಳು ಅಥವಾ ಕಾಯ್ಲಡ್ ಬಾಡಿಗಳು (CB) ಎಂದು ಕರೆಯಲಾಗುತ್ತದೆ, ಇವುಗಳ ವ್ಯಾಸವು 0.2 µm ಮತ್ತು 2.0 µm ಇರುತ್ತದೆ ಮತ್ತು ಈ ಅಳತೆಯು ಜೀವಕಣಗಳ ಮಾದರಿ ಹಾಗೂ ವರ್ಗಗಳ ಮೇಲೆ ಅವಲಂಬಿಸಿರುತ್ತದೆ.[೨೭] ಎಲೆಕ್ಟ್ರಾನ್ ಸೂಕ್ಷ್ಮದರ್ಶಕದಲ್ಲಿ ನೋಡಿದಾಗ ಅವು ತೊಡಕು-ತೊಡಕಿನ ಕಗ್ಗಂಟಿನ ದಾರದುಂಡೆಯಂತೆ [೨೮] ಕಾಣುತ್ತದೆ ಮತ್ತು ಅವು ಪ್ರೊಟೀನ್ ಕಾಯ್ಲಿನ್ ಹಂಚಿಕೆಗಾಗಿ ಸಾಂದ್ರತೆಯುಳ್ಳದಾಗಿರುತ್ತದೆ.[೩೨] CBಗಳು RNA ಸಂಸ್ಕರಣದಲ್ಲಿ ವಿವಿಧ ರೀತಿಯಲ್ಲಿ ಭಾಗಿಯಾಗುತ್ತದೆ, ನಿರ್ದಿಷ್ಟವಾಗಿ ಸಣ್ಣ ನ್ಯೂಕ್ಲೀಯೋಲಾರ್ RNA (snoRNA) ಮತ್ತು ಸಣ್ಣ ನ್ಯೂಕ್ಲೀಯರ್ RNA (snRNA)ಯ ಪಕ್ವಸ್ಥಿತಿ ಮತ್ತು ಹಿಸ್ಟೋನ್ mRNA ಮಾರ್ಪಾಟು.[೨೭]

ಕ್ಯಾಜಲ್ ಬಾಡಿಗಳಿಗೆ ಹೋಲುವುದೆಂದರೆ ಕಾಯ್ಲಡ್ ಬಾಡಿಗಳ ಜೆಮಿನಿ ಅಥವಾ ರತ್ನಗಳು ಮತ್ತಿವುಗಳ ಹೆಸರನ್ನು ಜೆಮಿನಿ ಕಾನ್ಸ್‌ಟೆಲ್ಲೇಷನ್ ನಿಂದ ಪಡೆದಿರುವುದಾಗಿದೆ, CBಗಳ ಜೊತೆಗಿನ "ಅವಳಿ-ಜವಳಿ" ಸಂಬಂದ್ಧದಿಂದಾಗಿ ಈ ಉಲ್ಲೇಖವೆನ್ನಬಹುದು. ರತ್ನಗಳು ಗಾತ್ರ ಮತ್ತು ರೂಪದಲ್ಲಿ CBಗಳನ್ನು ಹೋಲುತ್ತದೆ, ವಾಸ್ತವಾಗಿ ಸೂಕ್ಷ್ಮದರ್ಶಕದ ಅಡಿಯಲ್ಲಿ ಇವೆರಡೂ ಒಂದೇ ರೀತಿಯಲ್ಲಿ ತೋರ್ಪಡುತ್ತದೆ.[೩೨] CBಗಳಂತೆ ರತ್ನಗಳು ಸಣ್ಣ ನ್ಯೂಕ್ಲೀಯಾರ್ ರೈಬೋನ್ಯೂಕ್ಲೀಯೋಪ್ರೊಟೀನ್ಸ್ (snRNPs) ಅನ್ನು ಹೊಂದಿರುವುದಿಲ್ಲ ಆದರೆ snRNP ಬೈಯೋಜೆನೀಸಿಸ್‌ಗೆ ಸಂಬಂದ್ಧಿಸಿದ ಸರ್ವೈವರ್ ಆಫ್ ಮೋಟಾರ್ ನ್ಯೂರಾನ್ಸ್ ಎನ್ನುವ ಪ್ರೊಟಾನ್ ಅನ್ನು ಹೊಂದಿರುತ್ತದೆ. ಸೂಕ್ಷ್ಮದರ್ಶಕಗಳ ಸಾಕ್ಷ್ಯದಿಂದ ರತ್ನಗಳು ಮತ್ತು snRNP ಬಯೋಜೆನಿಸಿಸ್‌ನ [೩೩] CBಗಳು ಬೇರೆ ಎಂದು ಗೊತ್ತಿದ್ದರೂ CBಗಳು ಮತ್ತು ರತ್ನಗಳು ಒಂದೇ ರಚನೆಯ ಬೇರೆ ಅಭಿವ್ಯಕ್ತಿ ಎಂದು ಸೂಚಿಸಲಾಗುತ್ತದೆ.[೩೨]

PIKA ಮತ್ತು PTF ಕ್ಷೇತ್ರಗಳು

PIKA ಕ್ಷೇತ್ರಗಳು ಅಥವಾ ಪಾಲಿಮಾರ್ಫಿಕ್ ಇಂಟರ್‌ಫೇಸ್ ಕಾರ್ಯೋಸೋಮಲ್ ಅಸೋಸಿಯೇಷನ್ಸ್ ಅನ್ನು ಮೊದಲ ಬಾರಿಗೆ 1991ರಲ್ಲಿ ಸೂಕ್ಷ್ಮದರ್ಶಕಗಳ ಅಧ್ಯಯನದಲ್ಲಿ ವಿವರಿಸಲಾಯಿತು. DNAಯ ಉತ್ಪತ್ತಿ ಮಾಡುವ ಪ್ರಕ್ರಿಯೆ, ನಕಲು ಅಥವಾ ರಣ ಸಂಸ್ಕರಣಗಳ ನಡುವೆ ಅದರ ಸಹಯೋಗವಿದ್ದರೂ ಅವುಗಳ ಕಾರ್ಯಚಟುವಟಿಕೆಗಳು ಅಸ್ಪಷ್ಟವಾಗಿಯೇ ಉಳಿಯುತ್ತದೆ.[೩೪] ಪ್ರತ್ಯೇಕವಾದ ಸಾಂದ್ರತೆಯುಳ್ಳ snRNAಯನ್ನು ಅಭಿವೃದ್ಧಿಪಡಿಸುವ ನಕಲನ್ನು ಮಾಡುವ ಅಂಶ PTF ಕ್ಷೇತ್ರಗಳ ಜೊತೆ ಅವುಗಳನ್ನು ಕಾಣಬಹುದು.[೩೫]

PML ಬಾಡಿಗಳು

0.2–1.0 µm. ಅಳತೆಯ, ಗೋಳಾಕಾರದ ಬಾಡಿಗಳಾದ ಪ್ರಾಮಿಎಲೋಸೈಟಿಕ್ ಲ್ಯುಕೇಮಿಯಾ ಬಾಡಿಗಳು (PML ಬಾಡಿಗಳು) ನ್ಯೂಕ್ಲೀಯೋಪ್ಲಾಸಂನಲೆಲ್ಲಾ ಹರಡಿರುತ್ತದೆ.

ನ್ಯೂಕ್ಲೀಯರ್ ಕ್ಷೇತ್ರ 10 (ND10), ಕ್ರೀಮರ್ ಬಾಡಿಗಳು ಮತ್ತು PML ಆನ್ಕೋಜೆನಿಕ್ ಕ್ಷೇತ್ರಗಳು ಎಂದು ಮುಂತಾದ ಅನೇಕ ಹೆಸರುಗಳಿಂದ ಗುರುತ್ತಿಸಲ್ಪಡುತ್ತದೆ. ಇವು ಆಗಾಗ್ಗೆ ಬೀಜಕಣಗಳಲ್ಲಿ ಕ್ಯಾಜಲ್ ಬಾಡಿಗಳ ಮತ್ತು ಸೀಳುಳ್ಳ ಬಾಡಿಗಳು ಜೊತೆ ಕಾಣುತ್ತದೆ. ಇವು ನಕಲಿನ ಕಾರ್ಯಗಳಲ್ಲಿ ನಿಯಂತ್ರಣದ ಪಾತ್ರವನ್ನು ವಹಿಸುತ್ತದೆ ಎಂದು ಸೂಚಿಸಲಾಗಿದೆ.[೨೯]

ಪ್ಯಾರಾಸ್ಪೆಕಲ್ಸ್

ಇದು ಫಾಕ್ಸ್ ಎಟ್ ಆಲ್ 2002ರಲ್ಲಿ ಕಂಡು ಹಿಡಿದದ್ದು, ಈ ಪ್ಯಾರಾಸ್ಪೆಕಲ್ ಗಳು ಬೀಜಕಣಗಳಲ್ಲಿನ ಇಂಟರ್‌ಕ್ರೊಮಾಟಿನ್ ಸ್ಥಳದಲ್ಲಿರುವ ಅನಿಯಮಿತ ಆಕಾರದ ಕಪಾಟು.[೩೬] HeLa ಜೀವಕಣಗಳಲ್ಲಿ ಇದು ಮೊದಲು ಕಂಡು ಬಂದದ್ದು, ಇಲ್ಲಿ ಸಾಮಾನ್ಯವಾಗಿ ಪ್ರತಿ ಬೀಜಕಣಗಳಿಗೆ 10–30 ರಂತೆ ಇರುತ್ತದೆ ಎನ್ನಲಾಗಿದೆ[೩೭], ಆದರೆ ಈಗ ಈ ಪ್ಯಾರಾಸ್ಪೆಕಲ್ಸ್ ಎಲ್ಲಾ ಮಾನವನ ಪ್ರಾಥಮಿಕ ಜೀವಕಣಗಳಲ್ಲಿ, ಪರಿವರ್ತಿತ ಜೀವಕಣಗಳ ಸಾಲಿನಲ್ಲಿ ಮತ್ತು ಅಂಗಾಂಶಗಳಲ್ಲಿಯೂ ಇದೆ ಎನ್ನಲಾಗಿದೆ.[೩೮] ಅವುಗಳು ಬೀಜಕಣಗಳಲ್ಲಿ ಹಂಚಿಕೆಯಾಗಿರುವ ರೀತಿಯಿಂದಾಗಿ ಅವಿಗಳಿಗೆ ಪ್ಯಾರಾಸ್ಪೆಕಲ್ಸ್ ಎಂಬ ಹೆಸರು ಬಂದಿರುತ್ತದೆ; "ಪ್ಯಾರಾ" ಎಂದರೆ ಇಂಗ್ಲೀಷಿನಲ್ಲಿ ಸಮನಾಂತರವೆಂದಾದರೆ "ಸ್ಪೆಕಲ್ಸ್" ಎಂದರೆ ಅದರ ಸಾಮೀಪ್ಯವನ್ನು ಉಲ್ಲೇಖಿಸುತ್ತ ಹಾಗೆ ಕರೆಯುವುದಿದೆ.[೩೭]

ಪ್ಯಾರಾಸ್ಪೆಕಲ್ಸ್ ಗಳಿಗೆ ಕ್ರಿಯಾತ್ಮಕ ರಚನೆಗಳಿವೆ, ಈ ರಚನೆಗಳನ್ನು ಜೀವಕಣಗಳ ಚಯಾಪಚಯ ಚಟುವಟಿಕೆಯ ಬದಲಾವಣೆಗೆ ಸ್ಪಂದಿಸಲು ಬದಲಾಯಿಸುವುದೂ ಇದೆ. ಇವು ಬದಲಾವಣೆ ಅವಲಂಬಿತವಾಗಿರುವಂತಹವು[೩೬] ಮತ್ತು RNA Pol II ಪರಿವರ್ತನೆಯ ಗೈಹಾಜರಿಯಲ್ಲಿ, ಪ್ಯಾರಾಸ್ಪೆಕಲ್ ಕಣ್ಮರೆಯಾಗಿ ಅದರ ಎಲ್ಲಾ ಜಂಟಿ ಪ್ರೊಟೀನ್ ಸಲಕರಣೆಗಳು ನ್ಯೂಕ್ಲೀಯೋಲಸ್ ನಲ್ಲಿ (PSP1, p54nrb, PSP2, CFI(m)68 ಮತ್ತು PSF) ಅರ್ಧಚಂದ್ರಾಕಾರದ ಪೆರಿನ್ಯೂಕ್ಲೀಯೋಲಾರ್ ಕ್ಯಾಪ್ ರೂಪವನ್ನು ತಾಳುತ್ತದೆ. ಈ ಪ್ರಕ್ರಿಯೆಯ ಪ್ರದರ್ಶನವನ್ನು ಜೀವಕಣಗಳ ಚಕ್ರದಲ್ಲಿ ಕಾಣಬಹುದು. ಜೀವಕಣಗಳ ಚಕ್ರದಲ್ಲಿ, ಪ್ಯಾರಾಸ್ಪೆಕಲ್ಸ್ ಇಂಟರ್‌ಫೇಸ್ ಮತ್ತು ಟೆಲೋಫೇಸ್ ನ ಹೊರತಾಗಿ ಎಲ್ಲಾ ಮೈಟಾಸಿಸ್ ನಲ್ಲಿ ಹಾಜರಿರುತ್ತದೆ. ಟೆಲೋಫೇಸ್‌ನ ಅವಧಿಯಲ್ಲಿ, ಎರಡು ಪುತ್ರಿ ಬೀಜಕಣಗಳು ರಚನೆಗೊಳ್ಳುತ್ತದೋ ಆಗ RNA Pol II ಪರಿವರ್ತನೆ ಇರುವುದಿಲ್ಲ, ಆದುದರಿಂದ ಪ್ರೊಟೀನ್ ಸಲಕರಣೆಗಳು ಪೆರಿನ್ಯೂಕ್ಲೀಯೋಲಾರ್ ಕ್ಯಾಪ್ ಆಗಿ ರಚನೆಯಾಗುತ್ತದೆ.[೩೮]

ತುದಿಗಳನ್ನು ಹೊಸೆದುಕೊಂಡಿರುವ ಗೆರೆ ಅಥವಾ ಪಟ್ಟೆಗಳು

ಕೆಲವೊಮ್ಮೆ ಇಂಟರ್ ಕ್ರೊಮಾಟಿನ್ ಗ್ರಾನ್ಯೂಲ್ ಕ್ಲಸ್ಟರ್ಸ್ ಅಥವಾ ಸ್ಪ್ಲೈಸಿಂಗ್-ಫ್ಯಾಕ್ಟರ್ ಕಪಾಟುಗಳು ಎಂದು ಉಲ್ಲೇಖಿತವಾಗುವ ಸ್ಪೆಕಲ್ಸ್‌ಗಳು, snRNP ತುದಿಗಳನ್ನು ಮತ್ತು ಪೂರ್ವ-mRNA ಪಟ್ಟೆಯ ಸಂಸ್ಕರಣಕ್ಕೆ ಅಗತ್ಯವಾದ ಇತರ ಮಾದರಿಯ ಪ್ರೊಟೀನ್ ಅನ್ನು ಹೊಸೆದುಕೊಂಡಿರುವುದರಲ್ಲಿ ಹೆಚ್ಚು ಕ್ರಿಯಾಶೀಲವಾಗತ್ತದೆ.[೩೯] ಜೀವಕಣಗಳ ಬದಲಾವಣೆಗೆ ಅಗತ್ಯವಾದವುಗಳಿಂದಾಗಿ ಇವುಗಳ ಸಂಯೋಜನೆ ಮತ್ತು ಸ್ಥಳಗಳು, mRNA ಪರಿವರ್ತನೆ ಮತ್ತು ನಿರ್ದಿಷ್ಟ ಪ್ರೊಟೀನ್‌ಗಳ ಫಾಸ್ಫಲೀಕರಣ ಮುಖೇನ ನಿಯಂತ್ರಣಗಳ ಮೇಲೆ ಅವಲಂಬಿಸಿದೆ.[೪೦]

ಕಾರ್ಯ ವಿಧಾನ

ಜೀವಕಣಗಳಲ್ಲಿನ ಬೀಜಕಣದ ಮುಖ್ಯಕಾರ್ಯವೆಂದರೆ ಜೀನ್ ಅಭಿವ್ಯಕ್ತಿಯನ್ನು ನಿಗ್ರಹಿಸುವುದು ಮತ್ತು ಜೀವಕಣಗಳ ಚಕ್ರದ ಅವಧಿಯಲ್ಲಿ DNAಯ ಪ್ರತಿಗೆ ಸಾಧನವಾಗುವುದು. ಬೀಜಕಣವು ವಂಶಾವಳಿಯ ಪರಿವರ್ತನೆಗೆ ನೆಲೆಯನ್ನು ಒದಗಿಸುತ್ತದೆ, ಇದು ಸೈಟೋಪ್ಲಾಸಂನಲ್ಲಿ ತರ್ಜುಮೆಯ ನೆಲೆಯಿಂದ ಹೊಮ್ಮಿರುವುದಾಗಿದೆ, ಪ್ರೊಕಾರ್ಯೋಟ್ ಗೆ ದಕ್ಕದ ವಂಶಾವಳಿಯ ನಿಯಂತ್ರಣದ ಹಂತಗಳನ್ನು ಒದಗಿಸುತ್ತದೆ.

ಜೀವಕಣಗಳ ವಿಭಾಗೀಕರಣ

ಬೀಜಕಣಗಳಲ್ಲಿ ಅಂತರ್ಗತವಾಗಿರುವುದನ್ನು ನ್ಯೂಕ್ಲೀಯಾರ್ ಹೊದಿಕೆ ಬೀಜಕಣಗಳನ್ನು ನಿಯಂತ್ರಿಸಲು ಅವಕಾಶ ಕಲ್ಪಿಸುತ್ತದೆ ಮತ್ತು ಎಲ್ಲಿ ಅಗತ್ಯವೋ ಅಲ್ಲಿ ಇನ್ನಿತರ ಸೈಟೋಪ್ಲಾಸಂನಿಂದ ಬೇರ್ಪಡಿಸುತ್ತದೆ. ನ್ಯೂಕ್ಲೀಯಾರ್ ಪೊರೆಗಳಲ್ಲಿ ಎರಡೂ ಕಡೆ ನಿಯಂತ್ರಿಸಲು ಇದು ಮುಖ್ಯವಾಗುತ್ತದೆ. ಕೆಲವೊಮ್ಮೆ ಸೈಟೋಪ್ಲಾಸ್ಮಿಕ್ ಪ್ರಕ್ರಿಯೆಯನ್ನು ಮಿತಗೊಳಿಸಬೇಕಾಗುತ್ತದೆ, ಮುಖ್ಯ ಪಾಲುದಾರವೊಂದನ್ನು ಬೀಜಕಣಗಳೆಡೆಗೆ ಜರುಗಿಸಬೇಕಾಗಿದೆ ಅಲ್ಲಿ ಅದು ಪರಿವರ್ತನೆಗೊಳಿಸುವ ಅಂಶಗಳೊಡನೆ ಮುಖಾಮುಖಿಯಾಗುತ್ತದೆ ಮತ್ತು ಉತ್ಪದಿತವಾಗುವ ಕೆಲ ಕಿಣ್ವಗಳನ್ನು (ಎನ್‌ಜೈಮ್‌ಗಳು) ಕಡಿಮೆ ನಿಯಂತ್ರಿಸುತ್ತದೆ. ಈ ನಿಯಂತ್ರಣ ಪ್ರಕ್ರಿಯೆಯು ಗ್ಲೈಕೋಸಿಸ್ ಪ್ರಸಂಗಗಳಲ್ಲಿ ಮೂಡುತ್ತದೆ, ಇದೊಂದು ಸೆಲ್ಯೂಲಾರ್ ಹಾದಿ ಇದರಲ್ಲಿ ಶಕ್ತಿ ಉತ್ಪಾದನೆಗೆ ಗ್ಲುಕೋಸ್ ಅನ್ನು ಒಡೆಯಲಾಗುತ್ತದೆ. ಗ್ಲೈಕೊಲೈಸಿಸ್‌ನ ಮೊದಲ ಹೆಜ್ಜೆಗೆ ಹೆಕ್ಸಾಕಿನೇಸ್ಎನ್ನುವ ಕಿಣ್ವ ಅಥವಾ ಎನ್‌ಜೈಮ್ ಕಾರಣವಾಗಿದೆ ಮತ್ತು ಇದರಿಂದ ಗ್ಲುಕೋಸ್‌ನ ಗ್ಲುಕ್ಲೋಸ್-6-ಫಾಸ್ಫೇಟ್ ಅನ್ನು ರಚಿಸಲಾಗುತ್ತದೆ. ಫ್ರಕ್ಟೋಸ್-6-ಫಾಸ್ಫೇಟ್ ಅನ್ನು ಅಧಿಕ ದಟ್ಟತೆಯಲ್ಲಿ, ಒಂದು ಕಣವನ್ನು ಗ್ಲುಕೋಸ್-6-ಫಾಸ್ಫೇಟ್ ನಲ್ಲಿ ಆನಂತರ ಮಾಡಲಾಗುತ್ತದೆ, ನಿಯಂತ್ರಕ ಪ್ರೊಟೀನ್ ಹೆಕ್ಸೊಕಿನೇಸ್ ಅನ್ನು ಬೀಜಕಣಗಳಲ್ಲಿ [೪೧] ವರ್ಜಿತಮಾಡುತ್ತದೆ ಇಲ್ಲಿ ಅದು ನ್ಯೂಕ್ಲೀಯಾರ್ ಪ್ರೊಟೀನ್‌ಗಳ ಜೊತೆ ಪರಿವರ್ತಿತ ನಿರೋಧಕ ಸಂಯುಕ್ತವಾಗಿ ರೂಪಗೊಂಡು ಅದು ಗ್ಲೈಕ್ಲೋಸಿಸ್‌ನಲ್ಲಿರುವ ವಂಶಾವಳಿಯ ಅಭಿವ್ಯಕ್ತಿಯನ್ನು ಕಡಿಮೆಗೊಳಿಸುತ್ತದೆ.[೪೨]

ವಂಶಾವಳಿಯನ್ನು ನಿಯಂತ್ರಿಸುವ ಉದ್ದೇಶದಿಂದ ಅದಕ್ಕೆ ಕಾರಣವಾಗುವ ಜೀವಕಣಗಳ ಪರಿವರ್ತನೆಯ ಅಂಶದ ಪ್ರೊಟೀನ್‌ಗಳನ್ನು DNAಯ ಭೌತಿಕ ಪ್ರವೇಶವನ್ನು ಬೇರ್ಪಡಿಸುತ್ತದೆ, ಈ ಪ್ರತ್ಯೇಕತೆ ಬೇರೆ ಇನ್ನಿತರ ಹಾದಿಯ ಸಂಕೇತಗಳು ಚೇತನಗೊಳಿಸುವವರೆಗೂ ಚಾಲ್ತಿಯಲ್ಲಿರುತ್ತದೆ. ಇದರಿಂದ ಕಡಿಮೆ ಹಂತದ ಅಸಮಂಜಸ ವಂಶಾವಳಿಯ ಅಭಿವ್ಯಕ್ತಿಯನ್ನೂ ತಡೆಯುತ್ತದೆ. ಪ್ರಚೋದಕ ಸ್ಪಂದನಗಳ ಭಾಗಿಯಾದ, ಉದಾಹರಣೆಗೆ NF-κB-ನಿಯಂತ್ರಿಸಿದ ವಂಶಾವಳಿಯ ಪ್ರಸಂಗಗಳಲ್ಲಿ, ಸಂಕೇತಗಳ ಕಣ TNF-αದಿಂದ ಪ್ರೇರಿತವಾದ ಸಂಕೇತದ ಹಾದಿಯಿಂದಾಗಿ ಪರಿವರ್ತನೆಯನ್ನು ಅಳವಡಿಸಲಾಗುತ್ತದೆ, ಇದು ಜೀವಕಣಗಳ ಪೊರೆಯ ಗ್ರಾಹಕವನ್ನು ಬಂಧಿಸುತ್ತದೆ ಇದರ ಪರಿಣಾಮವಾಗಿ ಸಂಕೇತಗಳ ಪ್ರೊಟೀನನ್ನು ನೇಮಿಸುತ್ತದೆ ಮತ್ತು ಅಂತಿಮವಾಗಿ ಪರಿವರ್ತನೆಯ ಅಂಶಗಳಾದ NF-κB ಅನ್ನು ಸಕ್ರಿಯಗೊಳಿಸುತ್ತದೆ. NF-κB ಪ್ರೊಟೀನ್ ಮೇಲೆ ನ್ಯೂಕ್ಲೀಯಾರ್ ಲೋಕಲೈಜೇಷನ್ ಸಂಕೇತವು ನ್ಯೂಕ್ಲೀಯಾರ್ ರಂಧ್ರದ ಮೂಲಕ ಅದನ್ನು ಬೀಜಕಣಗಳಿಗೆ ರವಾನಿಸಲು ಅವಕಾಶಕೊಡುತ್ತದೆ ಮತ್ತು ಅಲ್ಲಿ ಅದು ಸಲ್ಲಬೇಕಾದ ವಂಶವಾಹಿನಿಗೆ ಪರಿವರ್ತನೆಯನ್ನು ಉದ್ದೀಪಿಸುತ್ತದೆ.[೬]

ಬೀಜಕಣಗಳಲ್ಲಿನ ಕಪಾಟುಗಳು ಸೀಳಿರದ-ಒಡೆದಿರದ mRNAಯ ತರ್ಜುಮೆಯನ್ನು ತಡೆಯುತ್ತದೆ.[೪೩] ಯೂಕಾರ್ಯೋಟಿಕ್ mRNA ಇಂಟ್ರಾನ್ಸ್ ಅನ್ನು ಅಂತರ್ಗತವಾಗಿರುತ್ತದೆ ಆದರೆ ಇದು ತರ್ಜುಮೆಗೊಂಡು ಕ್ರಿಯಾಶೀಲ ಪ್ರೊಟೀನ್ ಆಗುವ ಮೊದಲು ಇದನ್ನು ತೆಗೆದು ಹಾಕಬೇಕಾಗುತ್ತದೆ. ರಿಬೋಸೋಮ್‌ಗಳು mRNAಯನ್ನು ತರ್ಜುಮೆಗೆ ಒಳಪಡಿಸುವ ಮೊದಲು ಬೀಜಕಣಗಳಲ್ಲಿ ಸೀಳುವ ಅಥವಾ ಒಡೆಯುವ ಕಾರ್ಯವನ್ನು ಮಾಡಿರಬೇಕಾಗುತ್ತದೆ. ಬೀಜಕಣಗಳಲ್ಲಿನ ರಿಬೋಸೋಮ್ಸ್‌ಗಳು ಹೊಸ mRNAಯನ್ನು ತರ್ಜುಮೆ ಮಾಡದೆ ಇದ್ದಲ್ಲಿ ಅದು ನಿಷ್ಕ್ರೀಯ ಪ್ರೊಟೀನ್‌ಗಳಾಗುವುದರಲ್ಲಿ ಪರಿಣಮಿಸುತ್ತದೆ.

ಜೀನ್ ಅಭಿವ್ಯಕ್ತಿ

ರಿಬೊಸೋಮಲ್ RNAಯ ಜೀನ್‌ನ ಪ್ರತಿನಕಲಿನ ಮೈಕ್ರೋಗ್ರಾಫ್ ಚಿತ್ರ ಇದರಲ್ಲಿ ಬೆಳೆಯುತ್ತಿರುವ ಪ್ರಾಥಮಿಕ ಪ್ರತಿಯನ್ನು ತೋರಿಸಲಾಗಿದೆ."ಬಿಗಿನ್" 3' ಅನ್ನು DNAಯ ಕೊನೆಯೆಂದು ತೋರಿಸುತ್ತದೆ, ಇಲ್ಲಿ RNA ಕೃತಕವಾಗುವುದು ಪ್ರಾರಂಭವಾಗುತ್ತದೆ; "ಕೊನೆ" 5' ಕೊನೆಯನ್ನು ತೋರಿಸುತ್ತದೆ, ಇಲ್ಲಿ ಪ್ರಾಥಮಿಕ ಲಿಪಿಯೂ ಬಹುತೇಖವಾಗಿ ಮುಗಿದಿರುತ್ತದೆ.

ಜೀನ್ ಅಭಿವ್ಯಕ್ತಿಯು ಮೊದಲು ಪ್ರತಿಲಿಪಿ ಮಾಡುವುದರಲ್ಲಿ ಭಾಗಿಯಾಗುತ್ತದೆ, ಅದರಲ್ಲಿ DNAಯನ್ನು ಪ್ರಮಾಣ ಫಲಕವಾಗಿ ಬಳಸಿ RNAಯನ್ನು ಉತ್ಪಾದಿಸಲಾಗುತ್ತದೆ. ಜೀನ್ ಎನ್‌ಕೋಡಿಂಗ್ ಪ್ರೊಟೀನ್ಸ್ ಪ್ರಸಂಗಗಳಲ್ಲಿ ಉತ್ಪಾದಿತವಾಗಿರುವ RNAಯು ಸಂದೇಶಕ RNA (mRNA) ಆಗಿರುತ್ತದೆ, ಆದರೆ ಇದು ರಿಬೋಸೋಮ್ಸ್ ಗಳಿಂದ ತರ್ಜುಮೆ ಆಗಿ ಪ್ರೊಟೀನ್ ಆಗಬೇಕಿದೆ. ರಿಬೋಸೋಮ್ಸ್‌ಗಳು ಬೀಜಕಣಗಳ ಹೊರಗಡೆ ಇರುವುದರಿಂದ ಉತ್ಪಾದಿತವಾಗಿರುವ mRNAಯನ್ನು ರಫ್ತು ಮಾಡಿಕೊಳ್ಳಬೇಕಿದೆ.[೪೪]

ಪ್ರತಿಲಿಪಿಗೆ ಬೀಜಕಣವೇ ನೆಲೆಯಾಗಿರುವುದರಿಂದ ಅದು ನಾನಾ ವಿಧದ ಪ್ರೊಟೀನ್‌ಗಳನ್ನು ಅಂತರ್ಗತ ಮಾಡಿಕೊಂಡಿರುತ್ತದೆ, ಅದು ಪ್ರತಿಲಿಪಿಗೆ ನೇರವಾಗಿ ಸಾಧನವಾಗುತ್ತದೆ ಅಥವಾ ಆ ಪ್ರಕ್ರಿಯೆಯನ್ನು ನಿಯಂತ್ರಿಸುವ ಮೂಲಕ ಭಾಗವಹಿಸುತ್ತದೆ. ಈ ಪ್ರೊಟೀನ್‌ಗಳಲ್ಲಿ ಹೆಲಿಕೇಸ್ ಗಳಿರುತ್ತದೆ, ಇದು ಎರಡು-ಎಳೆಯ DNA ಕಣದ ಸುರುಳಿಬಿಚ್ಚಿ ಅದಕ್ಕೆ ಪ್ರವೇಶ ಒದಗಿಸುತ್ತದೆ, RNA ಕಣವನ್ನು ಸಂಷ್ಲೇಶಿಸುವ RNA ಪಾಲಿಮರೇಸ್ ಗಳು, DNAಯ ಸೂಪರ್‌ಕಾಯ್ಲ್ ನ ಪ್ರಮಾಣವನ್ನು ಟೋಪೋಸೋಮೆರೇಸ್ ಗಳು ಬದಲಾಯಿಸುತ್ತದೆ ಮತ್ತು ಸುರುಳಿ ಸುತ್ತುವುದಕ್ಕೆ ಮತ್ತು ಸುರುಳಿಯನ್ನು ಬಿಚ್ಚುವುದಕ್ಕೆ ಸಹಾಯ ಮಾಡುತ್ತದೆ ಹಾಗೂ ದೊಡ್ದ ರೀತಿಯಲ್ಲಿ ವಿವಿಧ ಪ್ರತಿಲಿಪಿ ಅಂಶ ಗಳು ಅಭಿವ್ಯಕ್ತಿಯನ್ನು ನಿಯಂತ್ರಿಸುತ್ತದೆ.[೪೫]

ಪೂರ್ವ-mRNAಯ ಸಂಸ್ಕರಣ

ಹೊಸದಾಗಿ ಸಂಶ್ಲೇಷಿಸಿದ ಅಥವಾ ಕೃತಕವಾಗಿಸಿದ mRNA ಕಣಗಳನ್ನು ಪ್ರಾಥಮಿಕ ಪ್ರತಿಲಿಪಿ ಗಳು ಅಥವಾ ಪೂರ್ವ-mRNA ಎಂದು ಕರೆಯಲಾಗುತ್ತದೆ. ಸೈಟೋಪ್ಲಾಸಂಗೆ ರಫ್ತಾಗುವ ಮೊದಲು ಅವುಗಳನ್ನು ಬೀಜಕಣಗಳಲ್ಲಿ ಪೋಸ್ಟ್-ಟ್ರಾನ್ಸ್‌ಕ್ರಿಪ್ಶನಲ್ ತಿದ್ದುಪಡಿಗೆ ಒಳಪಡಿಸಬೇಕು; ಈ ತಿದ್ದುಪಡಿಯಿಲ್ಲದೆ ಹಾಜರಾಗುವ mRNAಗಳನ್ನು ಪ್ರೊಟೀನ್ ತರ್ಜುಮೆಗೆ ಬಳಸುವ ಬದಲು ಅದನ್ನು ಕೆಳದರ್ಜೆಗೆ ಇಳಿಸಲಾಗುತ್ತದೆ. ಮೂರು ತಿದ್ದುಪಡಿಗಳೆಂದರೆ 5' ಕ್ಯಾಪ್ಪಿಂಗ್, 3' ಪಾಲ್ಯಾಡೆನಿಲೇಷನ್ ಮತ್ತು RNA ಸೀಳುವುದು. ಬೀಜಕಣಗಳಲ್ಲಿ ಪೂರ್ವ-mRNAಯ ಜೊತೆಗೆ ವಿವಿಧ ಪ್ರೊಟೀನ್‌ಗಳು ಸಹವರ್ತಿಯಾಗಿರುತ್ತವೆ, ಅವುಗಳ ಹೆಸರೆಂದರೆ ಹೆಟಿರೋಜೀನೀಯಸ್ ರೀಬೋನ್ಯೂಕ್ಲೀಯೋಪ್ರೊಟೀನ್ ಕಣಗಳು (hnRNPಗಳು). 5' ಕ್ಯಾಪ್ ಪ್ರತಿಲಿಪಿಯ ಜೊತೆಗೆ ಮೂಡುತ್ತದೆ ಮತ್ತು ಅದು ಪೋಸ್ಟ್-ಪ್ರತಿಲಿಪಿ ಪರಿವರ್ತನೆಯ ಮೊದಲ ಹೆಜ್ಜೆ. ಪ್ರತಿಲಿಪಿ ಪೂರ್ಣವಾದ ನಂತರ 3' ಪಾಲಿ-ಅಡಿನೈನ್ ಟೈಲ್ ಅನ್ನು ಮಾತ್ರ ಸೇರಿಸಲಾಗುತ್ತದೆ.

RNA ಸೀಳುವುದು ಎನ್ನುವುದನ್ನು ಸ್ಪ್ಲೈಸೀಯೋಸೋಮ್ ಪ್ರಕ್ರಿಯೆಯಿಂದ ಮಾಡಲಾಗುತ್ತದೆ ಈ ಪ್ರಕ್ರಿಯೆಯಲ್ಲಿ ಇಂಟ್ರಾನ್ಸ್ ಅಥವಾ DNAಯ ಕ್ಷೇತ್ರಗಳು ಪ್ರೊಟೀನ್ ಜೊತೆ ಕೋಡ್ ಮಾಡಿಕೊಳ್ಳುವುದಿಲ್ಲ ಮತ್ತು ಇವುಗಳನ್ನು ಪೂರ್ವ-mRNA ಹಾಗೂ ಉಳಿದ ಎಕ್ಸಾನ್ ಗಳು ಜೋಡಣೆಗೊಂಡು ಒಂದು ಒಂಟಿ ಕಣವಾಗಿ ಪುನರ್ ರಚನೆಯಾಗುತ್ತದೆ. ಈ ಪ್ರಕ್ರಿಯೆ ಸಾಧಾರಣವಾಗಿ 5' ಕ್ಯಾಪ್ಪಿಂಗ್ ಮತ್ತು 3' ಪಾಲಿಡೆನೈಲೇಷನ್ ಆಗಿದ್ದ ತಕ್ಷಣ ಮೂಡುತ್ತದೆ, ಸಂಶ್ಲೇಷಣೆಗೆ ಮೊದಲು ಅನೇಕ ಎಕ್ಸಾನ್ಸ್ ಗಳ ಜೊತೆ ಪ್ರತಿಲಿಪಿ ಮುಗಿಯಬಹುದು.[೫] ಆಂಟಿಬಾಡೀಸ್ ಗಳನ್ನು ಎನ್‌ಕೋಡಿಂಗ್ ಮಾಡುವುದನ್ನೂ ಸೇರಿಸಿ ಅನೇಕ ಪೂರ್ವ-mRNAಗಳನ್ನು ಬಹ್ವಂಶಗಳಲ್ಲಿ ಸೀಳಬಹುದು ಇದರಿಂದಾಗಿ ಪ್ರೌಢ mRNAಗಳು ವಿವಿಧ ಪ್ರೊಟೀನ್ ಸಿಕ್ವೆನ್ಸಸ್ ಗಳನ್ನು ಎನ್‌ಕೋಡ್ ಮಾಡುತ್ತದೆ. ಈ ಪ್ರಕ್ರಿಯೆಯನ್ನು ಪರ್ಯಾಯ ಸೀಳುವುದು ಎನ್ನಲಾಗುತ್ತದೆ ಮತ್ತು DNAಯಿಂದ ಇದು ದೊಡ್ದ ಮಟ್ಟದ ವಿವಿಧ ಪ್ರೊಟೀನ್ ಗಳ ಉತ್ಪಾದನೆಗೆ ಅವಕಾಶ ಮಾಡಿಕೊಡುತ್ತದೆ.

ಚಾಲಕಶಕ್ತಿ ಮತ್ತು ನಿಯಂತ್ರಣ

ನ್ಯೂಕ್ಲೀಯಾರ್ ಸಾರಿಗೆ

ರಣ ಮತ್ತು ಪ್ರೊಟೀನ್‌ಗಳಂಥ ಮ್ಯಾಕ್ರೋಮಾಲೀಕ್ಯೂಲ್ಸ್‌ಗಳನ್ನು ಕ್ರಿಯಾಶೀಲವಾಗಿ ನ್ಯೂಕ್ಲೀಯರ್ ಪೊರೆಯ ಮೇಲೆ ಅಡ್ಡಲಾಗಿ ಸಾಗಿಸಲಾಗುತ್ತದೆ ಅದನ್ನು Ran-GTP ನ್ಯೂಕ್ಲೀಯಾರ್ ಟ್ರಾನ್ಸ್‌ಪೋರ್ಟ್ ಸೈಕಲ್ ಎಂದು ಕರೆಯುತ್ತಾರೆ.

ಬೀಜಕಣಗಳಿಂದ ದೊಡ್ದ ಕಣಗಳ ಪ್ರವೇಶ ಮತ್ತು ನಿರ್ಗಮಣ ತುಂಬಾ ಕಟ್ಟುನಿಟ್ಟಾಗಿ ನ್ಯೂಕ್ಲೀಯಾರ್ ರಂಧ್ರಗಳು ನಿಗ್ರಹಿಸುತ್ತವೆ. ಆದಾಗ್ಯೂ ಸಣ್ಣ ಕಣಗಳು ಯಾವುದೇ ನಿಯಂತ್ರಣವಿಲ್ಲದೆ ಬೀಜಕಣಗಳ ಒಳಗೆ ಪ್ರವೇಶಿಸಬಹುದಾಗಿದೆ,[೪೬] RNAಯಂಥ ಮ್ಯಾಕ್ರೋಕಣಗಳು ಮತ್ತು ಪ್ರೊಟೀನ್‌ಗಳು, ಇಂಪಾರ್ಟಿನ್ ಗಳಂಥ ಕಾರ್ಯೋಫೆರಿನ್ ಗಳು ಬೀಜಕಣಗಳೊಳಗೆ ಪ್ರವೇಶಿಸಲು ಬೇಕಾಗುತ್ತದೆ ಹಾಗೆಯೇ ನಿರ್ಗಮಿಸಲು ಎಕ್ಸ್‌ಪೋರ್ಟಿನ್ ಗಳು ಬೇಕಾಗುತ್ತವೆ. ಸೈಟೋಪ್ಲಾಸಂನಿಂದ ಬೀಜಕಣಗಳಿಗೆ ಸ್ಥಳಾಂತರಗೊಳ್ಳುವ "ಕಾರ್ಗೋ" ಪ್ರೊಟೀನ್‌ಗಳಲ್ಲಿ, ಇಂಪೋರ್ಟಿನ್ಸ್‌ಗಳಿಂದ ಸುತ್ತುವರೆದಿರುವ ನ್ಯೂಕ್ಲೀಯಾರ್ ಲೋಕಲೈಜೇಷನ್ ಸಂಕೇತ ಗಳೆಂಬ ಚಿಕ್ಕ ಅಮಿನೋ ಆಸಿಡ್‌ಗಳಿರುತ್ತವೆ, ಅದೇ ಬೀಜಕಣಗಳಿಂದ ಸೈಟೋಪ್ಲಾಸಂಗೆ ಸಾಗಣಿಕೆ ಮಾಡುವಾಗ ಎಕ್ಸ್‌ಪೋರ್ಟೀನ್ ಗಳಿಂದ ಸುತ್ತುವರೆದಿರುವ ನ್ಯೂಕ್ಲೀಯಾರ್ ಎಕ್ಸ್ ಪೋರ್ಟ್ ಸಂಕೇತಗಳನ್ನು ಹೊತ್ತೊಯುತ್ತದೆ. ಇಂಪೋರ್ಟಿನ್‌ಗಳ ಮತ್ತು ಎಕ್ಸ್‌ಪೋರ್ಟಿನ್‌ಗಳ ಸಾಗಾಣಿಕೆ ಶಕ್ತಿಯನ್ನು GTPಗಳಿಂದ ನಿಯಂತ್ರಿಸಲಾಗುತ್ತದೆ, ಇವು ಗ್ವಾನೋಸೈನ್ ಟ್ರಿಫಾಸ್ಫೇಟ್ ಕಣಗಳನ್ನು ಹೈಡ್ರೋಲೈಜ್ ಮಾಡಿ ಶಕ್ತಿಯನ್ನು ಬಿಡುಗಡೆ ಮಾಡುವ ಕಿಣ್ವಗಳು. ನ್ಯೂಕ್ಲೀಯಾರ್ ಸಾರಿಗೆಯ ಮುಖ್ಯ GTPಗಳು ಎಂದರೆ ಅದು Ran, ಇದು GTP ಆಥವಾ GDP (ಗ್ವಾನೋಸೈನ್ ಡೈಫಾಸ್ಫೇಟ್) ಅನ್ನು ಸುತ್ತುವರಿಯಬಹುದು ಆದರೆ ಇದು ಅವಲಂಬಿಸಿರುವುದು ಬೀಜಕಣಗಳಲ್ಲಿ ಇದೆಯೊ ಅಥವಾ ಸೈಟೋಪ್ಲಾಸಂನಲ್ಲಿ ಇದೆಯೋ ಎನ್ನುವುದರ ಮೇಲೆ. ಕಾರ್ಗೋದಿಂದಾಚೆ ಉಳಿಯಲು ಇಂಪೋರ್ಟಿನ್‌ಗಳು RanGTPಯನ್ನು ಅವಲಂಬಿಸಿದರೆ ಅದೇ ಕಾರ್ಗೋದಲ್ಲಿ ಭಾಗವಹಿಸಲು ಎಕ್ಸ್‌ಪೋರ್ಟಿನ್‌ಗಳಿಗೆ RanGTPಯು ಬೇಕಾಗುತ್ತದೆ.[೧೧]

ನ್ಯೂಕ್ಲೀಯಾರ್ ಆಮದು ಸೈಟೋಪ್ಲಾಸಂನ ಕಾರ್ಗೋದ ಮೇಲೆ ಅವಲಂಬಿಸಿರುತ್ತದೆ ಮತ್ತು ನ್ಯೂಕ್ಲೀಯಾರ್ ರಂಧ್ರಗಳ ಮೂಲಕ ಬೀಜಕಣಗಳಿಗೆ ಹೊತ್ತೊಯುತ್ತದೆ. ಬೀಜಕಣಗಳೊಳಗೆ RanGTPಯು ಇಂಪೋರ್ಟಿನ್‌ನಿಂದ ಕಾರ್ಗೋವನ್ನು ಬೇರ್ಪಡಿಸುತ್ತದೆ ಇದರಿಂದಾಗಿ ಇಂಪೋರ್ಟಿನ್ ಬೀಜಕಣದಿಂದ ನಿರ್ಗಮಿಸಿ ಮತ್ತೆ ಬಳಕೆಗೆ ಸಿದ್ಧವಾಗುತ್ತದೆ. ನ್ಯೂಕ್ಲೀಯಾರ್ ರಫ್ತು ಇದೇ ರೀತಿ ಸದೃಶವಾಗಿರುತ್ತದೆ, RanGTP ಒದಗಿಸುವ ಪ್ರಕ್ರಿಯೆಯಲ್ಲಿ ಎಕ್ಸ್‌ಪೋರ್ಟಿನ್ ಕಾರ್ಗೋವನ್ನು ಬೀಜಕಣದೊಳಗೆ ಸುತ್ತುವರೆದು, ನ್ಯೂಕ್ಲೀಯಾರ್ ರಂಧ್ರದೊಳಗೆ ನಿರ್ಗಮಿಸಿ ಸೈಟೋಪ್ಲಾಸಂನಲ್ಲಿ ಕಾರ್ಗೋದಿಂದ ಬೇರ್ಪಡುತ್ತದೆ.

ವಿಶೇಷ ನೈಪುಣ್ಯದ ರಫ್ತಿನ ಪ್ರೊಟೀನ್‌ಗಳು ಅಸ್ತಿತ್ವದಲ್ಲಿದ್ದು ಅವು ಪ್ರೌಢ mRNA ಮತ್ತು tRNA ಅನ್ನು ಸೈಟೋಪ್ಲಾಸಂಗೆ ಪ್ರತಿಲಿಪಿಯ ತರುವಾಯ ಬದಲಾವಣೆ ಮುಗಿದ ನಂತರ ಸ್ಥಳಾಂತರಿಸುತ್ತದೆ. ಪ್ರೊಟೀನ್ ಪ್ರತಿಲಿಪಿ ಕಾರ್ಯ ಮಾಡುವ ಈ ಕಣಗಳಿಗೆ ಗುಣ-ನಿಯಂತ್ರಣ ಪ್ರಕ್ರಿಯೆ ಬಹಳ ಮುಖ್ಯವಾಗುತ್ತದೆ; ಎಕ್ಸಾನ್‌ಗಳನ್ನು ಪೂರ್ತಿ ಛೇಧನ ಮಾಡದೆ ಅಥವಾ ಅಮಿನೋ ಆಸಿಡ್‌ಗಳನ್ನು ಪೂರ್ತಿ ಸೇರಿಸದೆ ಇದ್ದಾಗ ಪ್ರೊಟೀನ್‌ಗಳ ಅಭಿವ್ಯಕ್ತಿ ಸರಿಯಾಗಿ ಆಗದೇ ಜೀವಕಣಗಳ ಮೇಲೆ ನಕಾರಾತ್ಮಕ ಪರಿಣಾಮಗಾಳುವ ಸಾಧ್ಯತೆಗಳಿವೆ; ಆದುದರಿಂದ ಸೈಟೋಪ್ಲಾಸಂ ತಲುಪುವ, ಅಪೂರ್ಣವಾಗಿ ಪರಿವರ್ತನೆಯಾದ RNAಯನ್ನು ತರ್ಜುಮೆಗೆ ಬಳಸುವ ಬದಲು ತಿರಸ್ಕರಿಸಲಾಗುತ್ತದೆ.[೫]

ಸಂಯೋಜನೆ ಮತ್ತು ವಿಭಜನೆ

ಮೆಟಾಫೇಸ್ ಸಂದರ್ಭದಲ್ಲಿ ಹೊಸ ಶ್ವಾಸಕೋಶದಲ್ಲಿ ಫ್ಲೋರೀಸೆಂಟ್ ಡೈಯಿನ ಕಲೆಯ ಚಿತ್ರ.ಎರಡು ಸೆಟ್ಟುಗಳ ನೀಲಿ ಕಲೆಯ ಕ್ರೋಮೋಸೋಮ್‌ಗಳ ಪಕ್ಕದಲ್ಲಿ ಹಸಿರು ಕಲೆಯ ಮಿಟೋಟಿಕ್ ಸ್ಪಿಂಡಲ್ ಅನ್ನು ಕಾಣಬಹುದಾಗಿದೆ.ಮೆಟಾಫೇಸ್ ಪ್ಲೇಟ್‌ನಲ್ಲಿ ಒಂದು ಕ್ರೋಮೋಸೋಮ್ ಅನ್ನು ಬಿಟ್ಟು ಮಿಕೆಲ್ಲವೂ ಇರುತ್ತದೆ.

ಜೀವಿತಾವಧಿಯಲ್ಲಿ ಬೀಜಕಣವು ಜೀವಕಣದ ವಿಭಜನೆಯಲ್ಲಿ ಅಥವಾ ಅಪೋಪ್ಟೋಸಿಸ್ ಅವಸ್ಥೆಯಲ್ಲಿ ಮತ್ತು ಜೀವಕಣಗಳ ಸಾವಿನಲ್ಲಿ ಕುಸಿಯಬಹುದು. ಈ ಪ್ರಸಂಗಗಳಲ್ಲಿ ಬೀಜಕಣಗಳ ರಚನೆಯ ಸಂಯೋಜನೆಗಳಾದ- ಹೊದಿಕೆ ಮತ್ತು ಲ್ಯಾಮಿನಾಗಳನ್ನು ವ್ಯವಸ್ಥಿತವಾಗಿ ತಿರಸ್ಕರಿಸಲಾಗುತ್ತದೆ.

ಜೀವಕಣಗಳ ಚಕ್ರದಲ್ಲಿ ಜೀವಕಣಗಳು ಎರಡು ಜೀವಕಣಗಳಾಗಿ ವಿಭಜನೆಗೊಳ್ಳುತ್ತದೆ. ಈ ಪ್ರಕ್ರಿಯೆ ಸಾಧ್ಯವಾಗಬೇಕಾದರೆ ಪ್ರತಿಯೊಂದು ಹೊಸ ಪುತ್ರಿ ಜೀವಕಣಗಳಲ್ಲಿ ಪೂರ್ಣಪ್ರಮಾಣದ ವಂಶಾವಳಿ (ಜೀನ್) ಗಳು ಇರಬೇಕಾಗುತ್ತದೆ, ಈ ಪ್ರಕ್ರಿಯೆಗೆ ಕ್ರೋಮೋಸೋಮ್‌ಗಳ ಪ್ರತ್ಯುತ್ತರ ಮತ್ತು ಸೆಟ್ಟುಗಳ ಪ್ರತ್ಯೇಕತೆ ಬೇಕಾಗುತ್ತದೆ. ಇದು ಸಂಭವಿಸುವುದು ಕ್ರೋಮೋಸೋಮ್‌ಗಳ ಪ್ರತ್ಯುತ್ತರದಿಂದ, ಮೈಕ್ರೋಟ್ಯೂಬ್ಯೂಲ್ ಗಳ ಜೊತೆ ಅಂಟಿಕೊಳ್ಳುವ ಸೋದರಿ ಕ್ರೋಮಾಟಿಡ್ ಗಳಿಂದಾಗಿ ಮರಳಿ ವಿವಿಧ ಸೆಂಟ್ರೋಸೋಮ್ ಗಳ ಅಂಟಿಕೊಳ್ಳುತ್ತದೆ. ಆಗ ಸೋದರಿ ಕ್ರೊಮಾಟಿಡ್‌ಗಳನ್ನು ಜೀವಕಣಗಳಲ್ಲಿ ಪ್ರತ್ಯೇಕ ಸ್ಥಳಗಳಿಗೆ ಎಳೆಯಬಹುದು. ಅನೇಕ ಜೀವಕಣಗಳಲ್ಲಿ ಸೆಂಟ್ರೋಸೋಮ್‌ಗಳು ಸೈಟೋಸೋಮ್‌ಗಳಲ್ಲಿ ನೆಲೆ ಕಂಡಿರುತ್ತದೆ, ಬೀಜಕಣಗಳ ಆಚೆ ಮೈಕ್ರೋಟ್ಯೂಬ್‌ಗಳು ನ್ಯೂಕ್ಲೀಯಾರ್ ಹೊದಿಕೆಯ ಹಾಜರಿಯಲ್ಲಿ ಕ್ರೊಮಾಟಿಡ್‌ಗಳಿಗೆ ಅಂಟಿಕೊಳ್ಳುವುದು ಅಸಾಧ್ಯ.[೪೭] ಆದುದರಿಂದಲ್ಲೇ ಜೀವಕಣಗಳ ಆರಂಭಿಕ ಹಂತಗಳಲ್ಲಿ ಅಂದರೆ ಪ್ರೊಫೇಸ್ ನಿಂದ ಹಿಡಿದು ಪ್ರೊಮಿಟಾಫೇಸ್ ಗಳವರೆಗೂ ನ್ಯೂಕ್ಲೀಯಾರ್ ಪೊರೆಯನ್ನು ಕಳಚಲಾಗುತ್ತದೆ.[೧೪] ಅದೇ ರೀತಿ, ಅದೇ ಅವಧಿಯಲ್ಲಿ ನ್ಯೂಕ್ಲೀಯಾರ್ ಲ್ಯಾಮಿನಾವನ್ನು ಕಳಚಲಾಗುತ್ತದೆ ಮತ್ತು ಈ ಪ್ರಕ್ರಿಯೆಯನ್ನು ಲ್ಯಾಮಿನ್ ಫಾಸ್ಫಾರೈಲೇಷನ್‌ನಿಂದ ನಿಯಂತ್ರಿಸಲಾಗುತ್ತದೆ.[೪೮] ಜೀವಕಣ ಚಕ್ರದ ಕೊನೆಯಲ್ಲಿ ನ್ಯೂಕ್ಲೀಯಾರ್ ಪೊರೆಯು ಪುನರಚನೆಗೊಳ್ಳುತ್ತದೆ ಮತ್ತು ಅದೇ ಅವಧಿಯಲ್ಲಿ ನ್ಯೂಕ್ಲೀಯಾರ್ ಲ್ಯಾಮಿನಾವು ಡಿಫಾಸ್ಫಾರೈಲೇಟಿಂಗ್‌ನಿಂದ ಪುನರ್ ಜೋಡಣೆಗೊಳ್ಳುತ್ತದೆ.[೪೮]

ಏನೇ ಆದರೂ, ಡೈನೋಫ್ಲಾಗೆಲ್ಲೇಟ್ಸ್ ನಲ್ಲಿ ನ್ಯೂಕ್ಲೀಯಾರ್ ಹೊದಿಕೆಯು ಸ್ಪರ್ಷಿಸದಂತಿರುತ್ತದೆ, ಸೆಂಟ್ರೋಸೋಮ್‌ಗಳು ಸೈಟೋಪ್ಲಾಸಂಗಳಲ್ಲಿ ನೆಲೆಗೊಂಡಿರುತ್ತದೆ ಮತ್ತು ಮೈಕ್ರೋಟ್ಯೂಬ್‌ಗಳು ಕ್ರೋಮೋಸೋಮ್‌ಗಳ ಜೊತೆ ಸಂಪರ್ಕ ಮಾಡುತ್ತದೆ, ಇವುಗಳ ಸೆಂಟ್ರೋಮೆರಿಕ್ ಕ್ಷೇತ್ರಗಳನ್ನು ನ್ಯೂಕ್ಲೀಯಾರ್ ಹೊದಿಕೆಯೊಳಗೆ ಸೇರಿಸಲಾಗಿರುತ್ತದೆ (ಇದನ್ನು ಎಕ್ಸ್ಟ್ರಾ‌ನ್ಯೂಕ್ಲೀಯಾರ್ ಸ್ಪಿಂಡಲ್ ಕ್ಲೋಸ್ಡ್ ಮಿಟೋಸಿಸ್ ಎಂದು ಕರೆಯಲಾಗುತ್ತದೆ). ಅನೇಕ ಪ್ರಾಟಿಸ್ಟ್‌ಗಳಲ್ಲಿ (ಉದಾ ಸಿಲ್ಲಿಯೇಟ್ಸ್‌ಗಳು, ಸ್ಪೋರೋಜಾನ್ಸ್‌ಗಳು) ಮತ್ತು ಫಂಗೈಗಳಲ್ಲಿ ಸೆಂಟ್ರೋಸೋಮ್‌ಗಳು ಇಂಟ್ರಾನ್ಯೂಕ್ಲೀಯಾರ್‌ಗಳಾಗಿರುತ್ತವೆ ಮತ್ತು ಅವುಗಳ ನ್ಯೂಕ್ಲೀಯಾರ್ ಹೊದಿಕೆಯು ಜೀವಕಣಗಳ ವಿಭಜನೆಯಲ್ಲಿ ವಿಭಜನೆಗೊಳ್ಳುವುದಿಲ್ಲ.

ಅಪೊಪ್ಟೋಸಿಸ್ ಎನ್ನುವುದು ನಿಯಂತ್ರಿತ ಪ್ರಕ್ರಿಯೆ ಇದರಲ್ಲಿ ಜೀವಕಣಗಳ ರಚನೆಯ ಸಂಯೋಜನೆಯನ್ನು ನಾಶಪಡಿಸಲಾಗುತ್ತದೆ ಪರಿಣಾಮವಾಗಿ ಜೀವಕೋಶವು ಸಾಯುತ್ತದೆ. ಅಪೊಪ್ಟೋಸಿಸ್ ಜೊತೆಗೆ ಇರುವ ಬದಲಾವಣೆಯು ನೇರವಾಗಿ ಬೀಜಕಣ ಮತ್ತದರ ಅಂತರ್ಗತಕ್ಕೆ ಪರಿಣಾಮ ಬೀರುತ್ತದೆ ಉದಾಹರಣೆಗೆ ಕ್ರೊಮಾಟಿನ್‌ನ ಘನೀಕರಣ ಮತ್ತು ನ್ಯೂಕ್ಲೀಯಾರ್ ಹೊದಿಕೆ ಹಾಗೂ ಲ್ಯಾಮಿನಾದ ವಿಭಜನೆ. ಲ್ಯಾಮಿನ್ ಜಾಲದ ನಾಶವನ್ನು ನೈಪುಣ್ಯದ ಅಪೊಪ್ಟೋಟಿಕ್ ಪ್ರೊಟೀಸ್ ಗಳಾದ ಕ್ಯಾಸ್ಪೇಸ್ ಗಳಿಂದ ನಿಯಂತ್ರಣ ಮಾಡಬಹುದಾಗಿದೆ, ಇದು ಲ್ಯಾಮಿನ್ ಪ್ರೊಟೀನ್‌ಗಳನ್ನು ಸೀಳಿ ಬೀಜಕಣಗಳ ರಚನೆಯ ಸಮಗ್ರತೆಯನ್ನು ತಿರಸ್ಕರಿಸುತ್ತದೆ. ಲ್ಯಾಮಿನ್ ಸೀಳನ್ನು ಕೆಲವೊಮ್ಮೆ ಪ್ರಯೋಗಾಲಯಗಳಲ್ಲಿ ಅಸ್ಸೇಯ್ ಗಳಲ್ಲಿನ ಆರಂಭಿಕ ಅಪೊಪ್ಟೋಟಿಕ್ ಚಟುವಟಿಕೆಯಲ್ಲಿ ಕ್ಯಾಸ್ಪೇಸ್ ಚಟುವಟಿಕೆಯನ್ನು ಗ್ರಹಿಸಲು ಬಳಸಲಾಗುತ್ತದೆ.[೧೪] ಪರಿವರ್ತಿತ ಕ್ಯಾಸ್ಪೇಸ್-ನಿರೋಧಕವನ್ನು ಅಭಿವ್ಯಕ್ತಿಸುವ ಜೀವಕಣಗಳ ಲ್ಯಾಮಿನ್‌ಗಳು, ಅಪೊಪ್ಟೊಸಿಸ್‌ಗೆ ಸಂಬಂದ್ಧಪಟ್ಟಂತೆ ನ್ಯೂಕ್ಲೀಯಾರ್ ಬದಲಾವಣೆಯಲ್ಲಿ ಕೊರತೆಯನ್ನು ಕಾಣುತ್ತದೆ, ಇದರಿಂದ ಸೂಚಿತವಾಗುವುದೇನೆಂದರೆ ಲ್ಯಾಮಿನ್‌ಗಳು-ಬೀಜಕಣಗಳನ್ನು ತಿರಸ್ಕರಿಸುವುದಕ್ಕೆ ಇರುವ ಪೂರಕ ಅಂಶಗಳಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತದೆ ಎಂಬುದು.[೧೪] ಲ್ಯಾಮಿನ್ ಜೋಡಣೆಯ ನಿರೋಧವೇ ಅಪೊಪ್ಟೊಸಿಸ್‌‌ನ ಪ್ರೇರಕವಾಗುತ್ತದೆ.[೪೯]

ನ್ಯೂಕ್ಲೀಯಾರ್ ಹೊದಿಕೆಯು DNA ಮತ್ತು RNA ವೈರಸಸ್‌ಗಳನ್ನು ಬೀಜಕಣಗಳ ಒಳಗೆ ಪ್ರವೇಶಿಸದಂತೆ ತಡೆಯುವ ಗೋಡೆಯಂತೆ ವರ್ತಿಸುತ್ತದೆ. ಬೀಜಕಣಗಳ ಒಳಗೆ ಪ್ರೊಟೀನ್ಸ್ ಬಳಿ ಪ್ರವೇಶವನ್ನು ಕೆಲ ವೈರಸಸ್‌ಗಳಿಗೆ ಅಗತ್ಯವಿದೆ ಕಾರಣ ಅದು ಜೋಡಣೆಯನ್ನು ಪುನರಾವರ್ತಿಸುವುದಕ್ಕೆ ಮತ್ತು/ಅಥವಾ ಜೋಡಣೆ ಮಾಡುವುದಕ್ಕೆ. ಹೆರ್ಪೇಸ್ ವೈರಸ್ ನಂಥ DNA ವೈರಸ್ ಜೀವಕಣಗಳಲ್ಲಿ ಬೀಜಕಣದಲ್ಲಿ ಪುನರಾವರ್ತನೆ ಮತ್ತು ಜೋಡಣೆಗೊಂಡು ಒಳ ನ್ಯೂಕ್ಲೀಯಾರ್ ಪೊರೆಯ ಮುಖಾಂತರ ನಿರ್ಗಮಿಸುತ್ತದೆ. ಈ ಪ್ರಕ್ರಿಯೆಯ ಜೊತೆಗೆ ಒಳ ಪೊರೆಯ ನ್ಯೂಕ್ಲೀಯಾರ್ ಲ್ಯಾಮಿನಾದ ವಿಭಜನೆಯೂ ಇರುತ್ತದೆ.[೧೪]

ಅನ್ಯೂಕ್ಲೀಯೇಟೆಡ್ ಮತ್ತು ಪಾಲಿನ್ಯೂಕ್ಲೀಯೇಟೆಡ್ ಜೀವಕಣಗಳು

ಬೇರೆ ಸಸ್ತನಿಯಂತೆ ಮಾನವನ ಕೆಂಪು ರಕ್ತದ ಜೀವಕಣಗಳಲ್ಲಿ ಬೀಜಕಣಗಳಿರುವುದಿಲ್ಲ.ಜೀವಕಣಗಳ ಬೆಳವಣಿಗೆಯಲ್ಲಿ ಇದು ಸಾಧಾರಣವಾಗಿ ಸಂಭವಿಸುತ್ತದೆ.

ಆದಾಗ್ಯೂ ಅನೇಕ ಜೀವಕಣಗಳಲ್ಲಿ ಒಂಟಿ ಬೀಜಕಣವಿದ್ದರೆ ಕೆಲವು ಯೂಕಾರ್ಯೋಟಿಕ್ ಜೀವಕಣಗಳಲ್ಲಿ ಬೀಜಕಣವು ಇರುವುದೇ ಇಲ್ಲ ಮತ್ತು ಅನೇಕವಲ್ಲಿ ಒಂದಕ್ಕಿಂತ ಅಧಿಕ ಬೀಜಕಣಗಳಿರುತ್ತದೆ. ಸಸ್ತನಿಯ ಪ್ರೌಢಾವಸ್ಥೆಯ ಕೆಂಪು ರಕ್ತದ ಜೀವಕಣ ಗಳಲ್ಲಿ ಆಗುವಂತೆ ಅಥವಾ ತಪ್ಪು ಜೀವಕಣಗಳ ವಿಭಜನೆಯ ಪರಿಣಾಮದಂತೆ, ಇದು ಸಾಧಾರಣ ಪ್ರಕ್ರಿಯೆ ಆಗಿರುತ್ತದೆ.

ಅನ್ಯೂಕ್ಲೀಯೆಟೆಡ್ ಜೀವಕೋಶಗಳಲ್ಲಿ ಬೀಜಕಣಗಳೇ ಇರುವುದಿಲ್ಲ ಆದುದರಿಂದ ಅವುಗಳು ವಿಭಜನೆಗೊಂಡು ಪುತ್ರಿ ಜೀವಕೋಶಗಳನ್ನು ಉತ್ಪಾದಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಅನ್ಯೂಲೀಯೇಟೆಡ್ ಜೀವಕಣಗಳ ಉತ್ತಮ ಉದಾಹರಣೆಯೆಂದರೆ ಸಸ್ತನಿಯ ಜಾತಿಯ ಪ್ರಾಣಿಗಳ ಕೆಂಪು ರಕ್ತದ ಜೀವಕೋಶ ಅಥವಾ ಎರಿಥ್ರೋಸೈಟ್ ಇವುಗಳಲ್ಲಿ ಮಿಟೋಕಾಂಡ್ರಿಯಾದಂಥ ಜೀವಕೋಶದ ವಿಶೇಷ ಭಾಗಗಳ ಕೊರತೆಯಿರುತ್ತದೆ ಮತ್ತು ಇವು ಪ್ರಾಥಮಿಕವಾಗಿ ಶ್ವಾಸಕೋಶಗಳಿಂದ ಆಮ್ಲಜನಕವನ್ನು ದೇಹದ ಇತರ ಜೀವದ್ರವ್ಯಗಳಿಗೆ ಸಾಗಾಣಿಕೆ ಮಾಡುತ್ತದೆ. ಎರಿಥ್ರೋಪಾಯ್ಸಿಸ್ ಮುಖಾಂತರ ಎರಿಥ್ರೋಸೈಟ್ಸ್ ಮೂಳೆಯ ತಿರುಳು ವಿನಲ್ಲಿ ಪ್ರೌಢಾವಸ್ಥೆ ತಲುಪುತ್ತದೆ ಇಲ್ಲಿ ಅವು ಬೀಜಕಣಗಳನ್ನು, ಜೀವಕೋಶಗಳನ್ನು ಮತ್ತು ರಿಬೋಸೋಮ್ಸ್‌ಗಳನ್ನು ಕಳೆದುಕೊಳ್ಳುತ್ತವೆ. ಎರಿಥ್ರೋಬ್ಲಾಸ್ಟ್ ನಿಂದ ರೆಟಿಕ್ಯೂಲೋಸೈಟ್ ನ ಭೇಧಕಾರಕ ಪ್ರಕ್ರಿಯೆಯಲ್ಲಿ ಬೀಜಕಣಗಳನ್ನು ವರ್ಜಿತಮಾಡಲಾಗುತ್ತದೆ ಇದು ಪ್ರೌಢವಾದ ಎರಿಥ್ರೋಸೈಟ್‌ನ ತುರ್ತು ಪೂರ್ವವರ್ತಿ.[೫೦] ಮ್ಯೂಟಾಗೆನ್ ಗಳ ಹಾಜರಿಯು ಪ್ರೌಢವಲ್ಲದ "ಮೈಕ್ರೊನ್ಯೂಕ್ಲೀಯೇಟೆಡ್" ಎರಿಥ್ರೋಸೈಟ್ಸ್‌ಗಳನ್ನು ನೆತ್ತರುಹರಿವಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.[೫೧][೫೨] ಅನ್ಯೂಕ್ಲೀಯೇಟೆಡ್ ಜೀವಕೋಶಗಳು ಸೀಳಿದ ಜೀವಕೋಶಗಳ ವಿಭಜನೆಯಿಂದಲ್ಲೂ ಹೊರಹೊಮ್ಮಬಹುದು ಮತ್ತು ಇದರಲ್ಲಿ ಒಂದು ಪುತ್ರಿ ಜೀವಕಣದಲ್ಲಿ ಬೀಜಕಣವು ಇರುವುದಿಲ್ಲ ಹಾಗೂ ಬೇರೆಯದರಲ್ಲಿ ಎರಡು ಬೀಜಕಣಗಳು ಇರುತ್ತದೆ.

ಪಾಲಿನ್ಯೂಕ್ಲೀಯೇಟೆಡ್ ಜೀವಕೋಶಗಳಲ್ಲಿ ಬಹ್ವಂಶ ಬೀಜಕಣಗಳಿವೆ. ಪ್ರೊಟೋಜೋವಾ[೫೩] ದ ಅನೇಕ ಅಕಾಂಥೇರಿಯಾ ವರ್ಗದ ಮತ್ತು ಕೆಲವು ಮೈಕೋರಿಜೇಯಿ[೫೪] ಯಾದ ಅಣಬೆಗಳಲ್ಲಿ ನೈಸರ್ಗಿಕವಾಗಿ ಪಾಲಿನ್ಯೂಕ್ಲೀಯೇಟೆಡ್ ಜೀವಕಣಗಳಿವೆ. ಬೇರೆ ಇತರ ಉದಾಹರಣೆಗಳೆಂದರೆ ಅವು ಗೀನಸ್‌ ಗಿಯಾರ್ಡಿಯಾ ದ ಕರುಳಿನ ಪರಾವಲಂಬಿಗಳು, ಇವಲ್ಲಿ ಪ್ರತಿ ಜೀವಕಣದಲ್ಲಿ ಎರಡು ಬೀಜಕಣಗಳಿವೆ.[೫೫] ಮನುಷ್ಯನಲ್ಲಿ, ಸ್ಕೆಲೀಟಲ್ ಸ್ನಾಯುವಿನ ಜೀವಕಣಗಳಲ್ಲಿ ಮೈಯೋಸೈಟ್ ಗಳು ಬೆಳವಣಿಗೆಯ ಸಂದರ್ಭದಲ್ಲಿ ಪಾಲಿನ್ಯೂಕ್ಲೀಯೇಟೆಡ್ ಆಗಿಬಿಡುತ್ತದೆ; ಜೀವಕಣಗಳ ಹೊರವಲಯದಲ್ಲಿ ಆಗುವ ಬೀಜಕಣಗಳ ವ್ಯವಸ್ಥೆಯು ಗರಿಷ್ಠ ಇಂಟ್ರಾಸೆಲ್ಯೂಲಾರ್ ಸ್ಥಳವನ್ನು ಮೈಯೋಫಿಬ್ರಿಲ್ಸ್ ಗೆ ಬಿಟ್ಟು ಕೊಡುತ್ತದೆ.[೫] ಬಹ್ವಂಶ ನ್ಯೂಕ್ಲೀಯೇಟೆಡ್ ಜೀವಕಣಗಳು ಮನುಷ್ಯನಲ್ಲಿ ಕೂಡ ಅತಿರೇಖವಾಗಿರುತ್ತದೆ; ಉದಾಹರಣೆಗೆ ಜೀವಕಣಗಳು ಮೊನೋಸೈಟ್ ಗಳ ಮತ್ತು ಮ್ಯಾಕ್ರೋಫೇಜ್ ಗಳ ಬೆಸುಗೆಯಿಂದ ಉದ್ಭವವಾಗುತ್ತದೆ ಮತ್ತು ಇದನ್ನು ದೈತ್ಯ ಬಹ್ವಂಶವಾದ ನ್ಯೂಕ್ಲೀಯೇಟೆದ್ ಜೀವಕಣಗಳು ಎಂದು ಕರೆಯಲಾಗುತ್ತದೆ, ಕೆಲವೊಮ್ಮೆ ಉರಿಯನ್ನು ತರುತ್ತದೆ[೫೬] ಮತ್ತು ಇದು ದುರ್ಮಾಂಸ ರಚನೆಗೆ ಒಳಗಾಗುತ್ತದೆ.[೫೭]

ವಿಕಸನ

ಯೂಕಾರ್ಯೋಟಿಕ್ ಜೀವಕಣಗಳ ಮುಖ್ಯವಾದ ವಿವರಣೆಯೆಂದರೆ ಬೀಜಕಣಗಳ ವಿಕಸನದ ಮೂಲವು ಊಹೆಯ ಒಂದು ವಿಷಯವೇ ಸರಿ! ನಾಲ್ಕು ದೊಡ್ಡ ತತ್ವಗಳ ಪ್ರಸಾವನೆಯನ್ನು ಬೀಜಕಣಗಳನ್ನು ವಿವರಿಸುವುದಕ್ಕೆಂದೇ ಇದ್ದರೂ ಯಾವೂ ವ್ಯಾಪಕ ಬೆಂಬಲವನ್ನು ಗಳಿಸಲು ಸಫಲವಾಗಿಲ್ಲ.[೫೮]

"ಸಿಂಟ್ರೋಫಿಕ್ ಮಾಡೆಲ್" ಎನ್ನುವ ತತ್ವವು ಆರ್ಕೇಯಿಯಾ ಮತ್ತು ಬ್ಯಾಕ್ಟೀರಿಯಾ ನಡುವಿನ ಪರಸ್ಪರ ಸಹಕಾರದ ಸಂಬಂದ್ಧವು ಯೂಕಾರ್ಯೋಟಿಕ್ ಜೀವಕಣಗಳುಳ್ಳ ಬೀಜಕಣವನ್ನು ಸೃಷ್ಟಿಸಿತು ಎಂದು ಪ್ರಸ್ತಾಪಿಸಿದೆ. ಈ ರೀತಿ ಒಂದು ಊಹೆ ಮಾಡಲಾಗಿದೆ; ಪುರಾತನ ಆರ್ಕೇಯಿಯಾ ಆಧುನಿಕ ಮೆಥಾನೋಜೆನಿಕ್ ಆರ್ಕೇಯಿಯಾದಂತೆ ದಂಡೆತ್ತಿ ಹಾಗೂ ಆಧುನಿಕ ಮೈಕ್ಸೋಬ್ಯಾಕ್ಟೀರಿಯಾ ಜೊತೆಯೊಳಗೆ ಪರಸ್ಪರ ಸಹಕಾರದಿಂದ ಬಾಳಲು ಪ್ರಾರಂಭಿಸಿತು, ಅಂತಿಮವಾಗಿ ಆರಂಭಿಕ ಬೀಜಕಣವಾಗಿ ರಚನೆಗೊಂಡಿತು. ಯೂಕಾರ್ಯೋಟಿಕ್ ಮೂಲವನ್ನು ಹೇಳುವ ಮಿಟೋಕಾಂಡ್ರಿಯಾ ಮತ್ತು ಕ್ಲೋರೋಪ್ಲಾಸ್ಟ್ ಒಪ್ಪಿತ ತತ್ವಕ್ಕೆ, ಈ ತತ್ವವು ಸದೃಶವಾಗಿದೆ, ಇದು ಪ್ರೊಟೋ-ಯೂಕಾರ್ಯೋಟಿಕ್‌ಗಳ ಮತ್ತು ಏರೋಬಿಕ್ ಬ್ಯಾಕ್ಟೀರಿಯಾದ ನಡುವೆ ಸಂಭವಿಸುವ ಎಂಡೋಸಿಂಬಯಾಟಿಕ್ ಸಂಬಂದ್ಧದಿಂದ ಅಭಿವೃದ್ಧಿಯಾಗಿದೆ ಎಂದು ಭಾವಿಸಲಾಗಿದೆ.[೫೯] ಬೀಜಕಣಗಳ ಆರ್ಕೀಯೇಲ್ ಮೂಲವನ್ನು, ಆರ್ಕೇಯೀ ಮತ್ತು ಯೂಕಾರ್ಯಾ ಅಧ್ಯಯನಗಳಿಂದ ಕಂಡು ಬಂದ ಅಂಶದ ಪ್ರಕಾರ ಇವುಗಳಲ್ಲಿ ಕೆಲವು ಪ್ರೊಟೀನ್‌ಗಳಲ್ಲಿ ಅದೇ ಜೀನ್‌ಗಳು ಹಿಸ್ಟೋನ್ ಗಳೂ ಸೇರಿದಂತೆ ಇದೆ ಎನ್ನುವುದರಿಂದ ಬೆಂಬಲಿತವಾಗಿದೆ. ಮೈಕ್ಸೋಬ್ಯಾಕ್ಟೀರಿಯಾವು ಚಲನಶೀಲವಾಗಿದ್ದು ಅದು ಬಹ್ವಂಶ ಜೀವಕಣಗಳಾಗಿ ರೂಪಗೊಳ್ಳಬಹುದು ಮತ್ತು ಅವು ಕೈನೇಸ್ ಗಳನ್ನು ಮತ್ತು G ಪ್ರೊಟೀನ್ ಗಳನ್ನು ಯೂಕಾರ್ಯೋದಂತೆ ಹೊಂದಿದೆ ಎಂದು ಅಧ್ಯಯನವು ಸೂಚಿಸುವುದರಿಂದ ಯೂಕಾರ್ಯೋಟೀಕ್ ಜೀವಕಣಗಳು ಬ್ಯಾಕ್ಟೀರಿಯಾದ ಮೂಲವನ್ನು ಬೆಂಬಲಿಸಿದಂತಾಗುತ್ತದೆ.[೬೦]

ಎರಡನೆಯ ಮಾದರಿಯು ಪ್ರಸ್ತಾಪಿಸುವ ಪ್ರಕಾರ ಬ್ಯಾಕ್ಟೀರಿಯಾದಿಂದ ಹೊಮ್ಮಿದಂತಹ ಪ್ರೋಟೋ-ಯೂಕಾರ್ಯೋಟಿಕ್ ಜೀವಕಣಗಳಲ್ಲಿ ಎಂಡೋಸಿಂಬಯಾಟಿಕ್ ಹಂತವಿರುವುದಿಲ್ಲ. ಸರಳ ರಂಧ್ರಗಳುಳ್ಳ ನ್ಯೂಕ್ಲೀಯಾರ್ ರಚನೆಯನ್ನು ಹೊಂದಿದ, ಜೊತೆಗೆ ಕವಾಟುಗಳುಳ್ಳ ಪೊರೆಯ ರಚನೆಗಳೂ ಇರುವ ಆಧುನಿಕ ಪ್ಲ್ಯಾಂಕ್ಟೋಮೈಸಿಟಿಸ್ ಅಸ್ತಿತ್ವದ ಮೇಲೆ ಈ ಮಾದರಿಯು ಆಧಾರಿತವಾಗಿದೆ.[೬೧] ಅದೇ ರೀತಿಯ ಸೂಚಿತವೊಂದು ಹೇಳುವ ಪ್ರಕಾರ ಯೂಕಾರ್ಯೋಟಿಕ್ ಜೀವಕಣಗಳ ರೀತಿ ಇರುವ ಕ್ರೋನೋಸೈಟ್ ಮೊದಲು ಉಗಮವಾಯಿತು ಮತ್ತು ಫ್ಯಾಗೊಸೈಟೋಸ್ಡ್ ಆರ್ಕೇಯೀ ಹಾಗೂ ಬ್ಯಾಕ್ಟೀರಿಯಾ ಬೀಜಕಣಗಳನ್ನು ಮತ್ತು ಯೂಕಾರ್ಯೋಟೀಕ್ ಜೀವಕಣಗಳನ್ನು ಉತ್ಪಾದಿಸುತ್ತದೆ.[೬೨]

ವೈರಸ್‌ನಿಂದ ಬಂದಂತಹ ಪ್ರೊಕಾರ್ಯೋಟ್ ಸೋಂಕಿನಿಂದ ಹೊಮ್ಮಿರುವ-ಪೊರೆಯಿಂದ ಸುತ್ತುವರೆದಿರುವ, ಯೂಕಾರ್ಯೋಟಿಕ್ ವಿಶೇಷಣದ ಬೀಜಕಣ ಎಂದು ಆಧಾರವಾಗಿಟ್ಟು ಕೊಂಡು ಸೂಚಿಸುವ ಅತ್ಯಂತ ವಿವಾದಾತ್ಮಕ ಮಾದರಿ ಎಂದರೆ ವೈರಲ್ ಯೂಕಾರ್ಯೋಜೆನಿಸಿಸ್ . ಈ ಸಲಹೆಗಳಿಗೆ ಆಧಾರವಾಗಿ ಇರುವ ಅಂಶಗಳೆಂದರೆ-ಯೂಕಾರ್ಯೋಟಿಸ್ ಮತ್ತು DNA ಸ್ಟ್ರಾಂಡ್ಸ್, mRNA ಕ್ಯಾಪ್ಪಿಂಗ್ ನಂಥ ಸೋಂಕುಗಳು ನಡುವೆ ಇರುವ ಹೋಲಿಕೆಗಳು ಹಾಗೂ ಪ್ರೊಟೀನ್‌ ಎಡೆಗಳಿಗಿರುವ ಬಿಗಿಯಾದ ಬಂಧ ಆಗಿರುತ್ತದೆ (ಹಿಸ್ಟೋನ್ ಗಳಿಗೂ ವೈರಲ್ ಹೊದಿಕೆಗಳಿಗೂ ಸದೃಶವಾಗಿರುತ್ತದೆ). ಒಂದು ಮಾದರಿಯ ಸೂಚಿತವೊಂದಂತೂ, ಬೀಜಕಣಗಳು ಫ್ಯಾಗೋಸೈಟೋಸಿಸ್ನೊಂದಿಗಿನ ಹೊಂದಾಣಿಕೆಯಿಂದಾಗಿ ಆರಂಭಿಕ ಜೀವಕಣಗಳ "ಪ್ರಿಡೇಟರ್" ಆಗಿ ರೂಪಗೊಂಡಿತು ಎಂದು ಹೇಳುತ್ತದೆ.[೬೩] ಇನ್ನೊಂದು ವಿಭಿನ್ನವಾದ ಪ್ರಸ್ತಾಪವೊಂದು ಯೂಕಾರ್ಯೋಟಿಸ್ ಆರಂಭವು ಪೋಕ್ಸ್ ವೈರಸ್ ಗಳಿಂದ ಸೋಂಕಾದ ಆರ್ಕೇಯಿಯಿಂದ ಆಗಿರುತ್ತದೆ ಎನ್ನಲಾಗಿದೆ, ಈ ಭಾವನೆಗೆ ಆಧುನಿಕ ಪಾಕ್ಸ್‌ವೈರಸ್‌ನಲ್ಲಿಯ DNA ಪಾಲಿಮರೇಸ್ ಗಳಿಗೂ ಯೂಕಾರ್ಯೋಟಿಸ್‌ಗಳಿಗೂ ಇರುವ ಹೋಲಿಕೆಯನ್ನು ಅಧ್ಯಯನ ಮಾಡಿದ ಮೇಲೆ ಇದರ ಆಧಾರವಾಗಿಯೇ ಪ್ರಸ್ತಾಪ ಮೂಡಿದೆ.[೬೪][೬೫] ಉತ್ತರ ಕಾಣದ ಲೈಂಗಿಕ ವಿಕಸನವು ಯೂಕಾರ್ಯೋಜೆನಿಸಿಸ್ ಹೈಪೊಥಿಸಿಸ್ ಸೋಂಕಿಗೆ ಸಂಬಂದ್ಧಿಸಬಹುದಾಗಿದೆ ಎಂದು ಸೂಚಿಸಲಾಗಿದೆ.[೬೬]

ಅಂತಿಮವಾಗಿ, ಇತ್ತೀಚಿನ ಪ್ರಸ್ತಾಪವೊಂದು ಸೂಚಿಸುವ ಪ್ರಕಾರ ಈ ಸಾಂಪ್ರದಾಯಿಕ ಎಂಡೋಸಿಂಬೀಯಂಟ್ ಸೂಚನೆಗಳು ಯೂಕಾರ್ಯೋಟಿಕ್ ಬೀಜಕಣಗಳ ಉಗಮವನ್ನು ವಿವರಿಸಲು ಅಷ್ಟೊಂದು ಸಶಕ್ತವಲ್ಲ. ಈ ಮಾದರಿಯನ್ನು ಎಕ್ಸೋಮೆಂಬ್ರೇನ್ ಹೈಪೋಥೀಸಿಸ್ ಎಂದು ಕರೆಯಲಾಗುತ್ತದೆ, ಇದು ಸೂಚಿಸುವ ಪ್ರಕರ ಬೀಜಕಣವು ಪುರಾತನ ಜೀವಕಣದಿಂದ ಹೊಮ್ಮಿದವಾಗಿರುತ್ತವೆ ಮತ್ತು ಇದರಿಂದ ಎರಡನೆಯ ಹೊರ ಜೀವಕಣದ ಪೊರೆಯು ಹೊಮ್ಮುತ್ತದೆ; ಮೂಲ ಜೀವಕಣದ ಒಳ ಪೊರೆಯು ಆನಂತರ ನ್ಯೂಕ್ಲೀಯಾರ್ ಪೊರೆಯಾಗಿ ಉಗಮಗೊಳ್ಳುತ್ತದೆ ಹಾಗು ಆಂತರಿಕವಾಗಿ ಕೃತಕವಾದ ಸೆಲ್ಯೂಲಾರ್ ಸಂಯೋಜನೆಗಳಾದ ರಿಬೋಸೊಮಲ್ ಉಪಘಟಕಗಳನ್ನು ಅದರ ಅಧಿಕವಾದ ರಂಧ್ರಗಳಿಗೆ ರವಾನೆಯಾಗುತ್ತದೆ.[೬೭]

ಆಕರಗಳು

ಹೆಚ್ಚಿನ ಮಾಹಿತಿಗಾಗಿ

  • Goldman, Robert D.; Gruenbaum, Y; Moir, RD; Shumaker, DK; Spann, TP (2002). "Nuclear lamins: building blocks of nuclear architecture". Genes & Dev. 16 (16): 533–547. doi:10.1101/gad.960502. PMID 11877373.
ನ್ಯೂಕ್ಲೀಯರ್ ಲ್ಯಾಮಿನ್‌ಗಳ ಬಗೆಗಿನ ಪುನರ್ವಿಮರ್ಶೆ ಲೇಖನ ಇದರಲ್ಲಿ ಅದರ ರಚನೆ ಹಾಗೂ ಪಾತ್ರಗಳ ಬಗ್ಗೆ ವಿವರಿಸಲಾಗಿದೆ
ನ್ಯೂಕ್ಲೀಯಾರ್ ಸಾರಿಗೆ ಬಗೆಗಿನ ಪುನರ್ವಿಮರ್ಶೆ ಲೇಖನ, ಇದರಲ್ಲಿ ಯಾಂತ್ರಿಕ ತತ್ವ ಮತ್ತು ನಾನಾವಿಧದ ಸಾರಿಗೆ ಹಾದಿಗಳ ಬಗ್ಗೆ ವಿವರಿಸಲಾಗಿದೆ
ಬೀಜಕಣಗಳ ಬಗ್ಗೆ ಪುನರ್ವಿಮರ್ಶೆ ಲೇಖನ, ಇದರಲ್ಲಿ ಜೀವಕೋಶಗಳ ವಿಶೇಷ ಭಾಗದಲ್ಲಿರುವ ಕ್ರೋಮೋಸೋಮ್ಸ್‌ಗಳ ರಚನೆಯ ಬಗ್ಗೆ ವಿವರಿಸಲಾಗಿರುತ್ತದೆ ಮತ್ತು ಇದರಲ್ಲೇ ನ್ಯೂಕ್ಲೀಯೋಲಸ್ ಮತ್ತು ಉಪನ್ಯೂಕ್ಲೀಯಾರ್ ಬಾಡಿಗಳ ಬಗ್ಗೆಯೂ ವಿವರಣೆ ಇರುತ್ತದೆ
ಬೀಜಕಣಗಳ ಉಗಮದ ಬಗ್ಗೆ ಒಂದು ಪುನರ್ವಿಮರ್ಶಾ ಲೇಖನ, ಇದರಲ್ಲಿ ವಿವಿಧ ತತ್ವಗಳ ಬಗ್ಗೆ ವಿವರಿಸಲಾಗಿದೆ
  • Pollard, Thomas D. (2004). Cell Biology. Philadelphia: Saunders. ISBN 0-7216-3360-9. {{cite book}}: Unknown parameter |coauthors= ignored (|author= suggested) (help)
ವಿಶ್ವವಿದ್ಯಾನಿಲಯದ ಹಂತದ ಪಠ್ಯಪುಸ್ತಕ, ಜೀವಕಣಗಳ ಶಾಸ್ತ್ರದ ಬಗ್ಗೆ ದೃಷ್ಟಿಹರಿಸಲಾಗಿದೆ. ಇದರಲ್ಲಿ ಬೀಜಕಣಗಳ ರಚನೆ ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಅದರಲ್ಲಿಯೂ ನ್ಯೂಕ್ಲೀಯಾರ್ ಸಾರಿಗೆ ಹಾಗೂ ಉಪನ್ಯೂಕ್ಲೀಯಾರ್ ಕ್ಷೇತ್ರಗಳ ಬಗ್ಗೆ ಇರುತ್ತದೆ

ಬಾಹ್ಯ ಕೊಂಡಿಗಳು

ಬೀಜಕಣ ಚಿತ್ರಗಳ ಗ್ಯಾಲರಿ