ತಾಳೆ ಎಣ್ಣೆ

ತಾಳೆ ಎಣ್ಣೆಯು ಎಣ್ಣೆ ಉತ್ಪಾದಿಸುವ ತಾಳೆಮರಗಳ ಹಣ್ಣಿನ ಮಧ್ಯದ ಭಾಗ (ಕೆಂಪು ಬಣ್ಣದ ತಿರುಳು) ದಿಂದ ಪಡೆದ ತಿನ್ನಲರ್ಹ ಸಸ್ಯಜನ್ಯ ಎಣ್ಣೆ.[೧] ಈ ತೈಲವನ್ನು ಆಹಾರ ತಯಾರಿಕೆಯಲ್ಲಿ, ಸೌಂದರ್ಯ ಉತ್ಪನ್ನಗಳಲ್ಲಿ ಮತ್ತು ಜೈವಿಕ ಇಂಧನವಾಗಿ ಬಳಸಲಾಗುತ್ತದೆ. 2014 ರಲ್ಲಿ ತೈಲ ಬೆಳೆಗಳಿಂದ ಉತ್ಪತ್ತಿಯಾಗುವ ಜಾಗತಿಕ ತೈಲಗಳಲ್ಲಿ ತಾಳ ಎಣ್ಣೆಯು ಸುಮಾರು 33% ನಷ್ಟು ರೂಪಿಸಿತ್ತು.[೨]

ತಾಳೆ ಎಣ್ಣೆಯ ತುಂಡು. ಕುದಿಯುವಿಕೆಯಿಂದ ಉಂಟಾಗುವ ತಿಳಿಯಾದ ಬಣ್ಣವನ್ನು ತೋರಿಸುತ್ತಿದೆ

ತಾಳೆ ಎಣ್ಣೆಯ ಬಳಕೆಯ ಬಗ್ಗೆ ಪರಿಸರ ಗುಂಪುಗಳು ಕಾಳಜಿ ವ್ಯಕ್ತಪಡಿಸಿವೆ; ತೈಲ-ತಾಳೆ ಏಕಸಂಸ್ಕೃತಿಗೆ ಸ್ಥಳಾವಕಾಶ ಕಲ್ಪಿಸಲು ಇಂಡೋನೇಷ್ಯಾ ಮತ್ತು ಮಲೇಷ್ಯಾದ ಕೆಲವು ಭಾಗಗಳಲ್ಲಿ ಕಾಡುಗಳನ್ನು ತೆರವುಗೊಳಿಸಲಾಗಿದೆ.[೩] ಇದು ಸ್ಥಳೀಯ ಪರಿಸರ ವ್ಯವಸ್ಥೆಗಳ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರುತ್ತದೆ. ಇದು ಅರಣ್ಯನಾಶ ಮತ್ತು ಜೀವವೈವಿಧ್ಯತೆಯ ನಷ್ಟಕ್ಕೆ ಕಾರಣವಾಗುತ್ತದೆ.

ಎಣ್ಣೆಯನ್ನು ಉತ್ಪಾದಿಸುವ ತಾಳೆಮರಗಳು (ಎಲೇಸ್ ಗಿನೀನ್ಸಿಸ್)
ಮರದ ಮೇಲೆ ಎಣ್ಣೆ ಉತ್ಪಾದಿಸುವ ತಾಳೆ ಹಣ್ಣುಗಳು

ತಾಳೆ ಎಣ್ಣೆಯ ಹೆಚ್ಚು ಸಂಪೂರಣಗೊಂಡ ಗುಣದ ಕಾರಣ ಸಮಶೀತೋಷ್ಣ ಪ್ರದೇಶಗಳಲ್ಲಿ ಇದು ಕೋಣೆಯ ಉಷ್ಣಾಂಶದಲ್ಲಿ ಘನವಾಗಿರುತ್ತದೆ. ಹಾಗಾಗಿ ಇದು ಘನ ಕೊಬ್ಬು ಅಪೇಕ್ಷಣೀಯವಾದ ಬಳಕೆಗಳಲ್ಲಿ ಬೆಣ್ಣೆ ಅಥವಾ ಹೈಡ್ರೋಜನೀಕರಿಸಿದ ಸಸ್ಯಜನ್ಯ ಎಣ್ಣೆಗಳಿಗೆ ಬದಲಾಗಿ ಅಗ್ಗದ ಬದಲಿ ವಸ್ತುವಾಗಿರುತ್ತದೆ, ಉದಾಹರಣೆಗೆ ಪೇಸ್ಟ್ರಿ ಹಿಟ್ಟು ಮತ್ತು ಬೇಕ್ ಮಾಡಿದ ವಸ್ತುಗಳ ತಯಾರಿಕೆ.

ಉಲ್ಲೇಖಗಳು