ಮದ್ಯಸಾರಯುಕ್ತ ಪಾನೀಯ (ಆಲ್ಕೊಹಾಲ್‌ಯುಕ್ತ ಪಾನೀಯ)

ಆಲ್ಕೊಹಾಲ್‌ಯುಕ್ತ ಪಾನೀಯವು ಎಥನಾಲನ್ನು ಹೊಂದಿರುವ (ಸಾಮಾನ್ಯವಾಗಿ ಆಲ್ಕೊಹಾಲ್ ಎಂದು ಕರೆಯಲ್ಪಡುತ್ತದೆ) ಪಾನೀಯವಾಗಿದೆ. ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಮೂರು ಸಾಮಾನ್ಯ ವಿಧಗಳಾಗಿ ವಿಂಗಡಿಸಲಾಗಿದೆ: ಸಾರಾಯಿ(ಬಿಯರು)ಗಳು, ದ್ರಾಕ್ಷಾರಸ(ವೈನು)ಗಳು, ಮತ್ತು ಮದ್ಯಸಾರಗಳು. ಇವುಗಳನ್ನು ಕಾನೂನುಬದ್ಧವಾಗಿ ಕೆಲವು ದೇಶಗಳಲ್ಲಿ ಸೇವಿಸುತ್ತಾರೆ, ಮತ್ತು 100ಕ್ಕೂ ಹೆಚ್ಚಿನ ದೇಶಗಳಲ್ಲಿ ಇದರ ತಯಾರಿಕೆ, ಮಾರಾಟ, ಹಾಗೂ ಸೇವನೆಗಳನ್ನು ಕಾನೂನುಬದ್ಧವಾಗಿ ನಿಯಂತ್ರಿಸುತ್ತಾರೆ.[೧] ಈ ಕಾನೂನುಗಳು ಕಾನೂನುಬದ್ಧವಾಗಿ ಆಲ್ಕೊಹಾಲನ್ನು ಕೊಳ್ಳಲು ಅಥವಾ ಸೇವಿಸಲು ವ್ಯಕ್ತಿಯ ಕನಿಷ್ಠ ವಯಸನ್ನು ನಿಗದಿಗೊಳಿಸಿವೆ. ಈ ಕನಿಷ್ಠ ವಯಸ್ಸು ದೇಶ ಮತ್ತು ಮದ್ಯದ ವಿಧವನ್ನಾಧರಿಸಿ 16ರಿಂದ 25 ವರ್ಷಗಳಾಗುತ್ತದೆ. ಹೆಚ್ಚಿನ ದೇಶಗಳು ಇದನ್ನು 18 ವರ್ಷಕ್ಕೆ ನಿಗಧಿಗೊಳಿಸಿವೆ.[೧]

ಮೂಲ ಆಲ್ಕೊಹಾಲ್‌ಯುಕ್ತ ಪಾನೀಯ ಈ ಸಂದರ್ಭದಲ್ಲಿ ಬಾರಿನಲ್ಲಿ ಮದ್ಯ ಸಾರಗಳು.

ಆಲ್ಕೊಹಾಲ್‌ ತಯಾರಿಕೆ ಮತ್ತು ಸೇವನೆಯು ಬೇಟೆಗಾರ ವಂಶದ ಜನರಿಂದ ಸುಧಾರಿತ ರಾಜ್ಯ-ರಾಷ್ಟ್ರದವರೆಗೂ ಪ್ರಪಂಚದ ಎಲ್ಲ ಸಂಸ್ಕೃತಿಯಲ್ಲೂ ಇದೆ.[೨][೩] ಆಲ್ಕೊಹಾಲ್‌ಯುಕ್ತ ಪಾನೀಯವು ಈ ಸಂಸ್ಕೃತಿಯ ಸಾಮಾಜಿಕ ಕಾರ್ಯಕ್ರಮಗಳಲ್ಲೂ ಮುಖ್ಯವಾದ ಭಾಗವಾಗಿದೆ. ಅನೇಕ ಸಂಸ್ಕೃತಿಗಳಲ್ಲಿ ಕುಡಿಯುವುದು, ಮುಖ್ಯವಾಗಿ ಆಲ್ಕೊಹಾಲಿನಿಂದ ನರಗಳ ಮೇಲಾಗುವ ಪರಿಣಾಮಗಳಿಗಾಗಿ ಸಾಮಾಜಿಕ ವರ್ತನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆಲ್ಕೊಹಾಲ್‌ ಮಾನಸಿಕ ಕ್ರಿಯಾಕಾರಿ ಮಾದಕ ವಸ್ತುವಾಗಿದ್ದು ನಿದ್ದೆ ಬರಿಸುವ ಪರಿಣಾಮವನ್ನುಂಟುಮಾಡುತ್ತದೆ. ರಕ್ತದಲ್ಲಿ ಆಲ್ಕೊಹಾಲ್‌ ಸಾಂದ್ರತೆ ಹೆಚ್ಚಿದ್ದರೆ ಅದನ್ನು ಕಾನೂನು ಪ್ರಕಾರ ಕುಡಿದಿರುವ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಇದು ಗಮನವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರತಿಕ್ರಿಯಾ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ. ಆಲ್ಕೊಹಾಲ್‌ ಒಂದು ವ್ಯಸನವಾಗಿದ್ದು, ಆಲ್ಕೊಹಾಲ್‌ನ ಚಟದ ಸ್ಥಿತಿಯನ್ನು ಆಲ್ಕೊಹಾಲಿಸಮ್‌ ಎನ್ನುವರು.

ಆಲ್ಕೊಹಾಲ್ ತಯಾರಿಕೆ

ಬಟ್ಟಿ ಇಳಿಸುವ ಕ್ರಮ

ಹುಳಿಬರಿಸುವ ವಿಧಾನದಿಂದ ದೊರೆತ ಮದ್ಯಸಾರಕ್ಕೆ ವಾಷ್ ಎನ್ನುವರು. ಇದರಲ್ಲಿ ಸಾಮಾನ್ಯವಾಗಿ ೮-೧೦% ಭಾಗ ಆಲ್ಕೊಹಾಲ್ ಇರುತ್ತದೆ. ಇದರಲ್ಲಿರುವ ನೀರಿನ ಭಾಗವನ್ನು ಕಡಿಮೆ ಮಾಡುವುದೇ ಸಾಂದ್ರೀಕರಣದ ಉದ್ದೇಶ. ಆಲ್ಕೊಹಾಲ್ ಮತ್ತು ನೀರಿನ ಕುದಿಯುವ ಬಿಂದುಗಳು ಕ್ರಮವಾಗಿ ೭೮.೩ ಸೆ. ಮತ್ತು ೧೦೦ ಸೆ. ಆಲ್ಕೊಹಾಲ್ ಮತ್ತು ನೀರಿನ ಮಿಶ್ರಣವನ್ನು ೭೮.೩-೧೦೦ ಸೆ. ಉಷ್ಣತೆಯ ಮಿತಿಯಲ್ಲಿ ಕುದಿಸಿದರೆ ಆಲ್ಕೊಹಾಲಿನ ಅಂಶ ಹೆಚ್ಚಾಗಿರುವ ಮಿಶ್ರಣ ಬಟ್ಟಿ ಇಳಿಯುತ್ತದೆ. ಆಲ್ಕೊಹಾಲಿನಲ್ಲಿರುವ ನೀರಿನ ಭಾಗವನ್ನು ಹೆಪ್ಪುಗಟ್ಟಿಸಿಯೂ ತೆಗೆಯಬಹುದು. ಇದಕ್ಕಿಂತ ಮೊದಲನೆಯ ವಿಧಾನ ಉತ್ತಮ. ಬಟ್ಟಿ ಇಳಿಸಿದ ಪಾನೀಯಗಳಲ್ಲಿರುವ ಪ್ರಧಾನ ಅಂಶಗಳು ನೀರು ಮತ್ತು ಆಲ್ಕೊಹಾಲ್. ಆದರೂ ಕೇವಲ ಇವೆರಡರ ಮಿಶ್ರಣ ಮಾತ್ರದಿಂದ ಅವು ಆಕರ್ಷಕ ಪಾನೀಯವಾಗಲಾರವು. ಅವುಗಳಲ್ಲಿರುವ ಇತರ ವಸ್ತುಗಳು ಮದ್ಯಕ್ಕೆ ವಿಶಿಷ್ಟ ಗುಣ ನೀಡುವುವು. ಈ ಅಪ್ರಧಾನ ಅಂಶಗಳಿಗೆ ಸಹಜಾತ ವಸ್ತುಗಳು (ಕಂಜೀನರ್ಸ್) ಎಂದು ಹೆಸರು. ಅವುಗಳಲ್ಲಿ ಉನ್ನತ ಆಲ್ಕೊಹಾಲ್‌ಗಳು ಆಲ್ಡಿಹೈಡುಗಳು, ಈಥರ್‌ಗಳು, ಎಸ್ಟರುಗಳು, ಅವ್ಯಾಸಕ್ತ ಆಮ್ಲಗಳು, ಫರ್‌ಫ್ಯುರಾಲ್ ಮತ್ತು ಇತರ ಆರ್ಗ್ಯಾನಿಕ್ ವಸ್ತುಗಳಿರುತ್ತವೆ. ಮದ್ಯದ ರುಚಿ ಮತ್ತು ಮಾಧುರ್ಯವನ್ನು ಹೆಚ್ಚಿಸುವುದರಲ್ಲಿ, ಇವು ಮಹತ್ತ್ವದ ಪಾತ್ರ ವಹಿಸುತ್ತವೆ. ಅವುಗಳ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿದರೆ ಮದ್ಯಕ್ಕೆ ಅಪೇಕ್ಷಿತ ರುಚಿ ಮತ್ತು ವಾಸನೆಗಳು ಪ್ರಾಪ್ತವಾಗುವುವು. ಸಾಂದ್ರೀಕರಣದ ಮೂಲೋದ್ದೇಶವೂ ಇದೇ ಆಗಿದೆ.

ಪ್ರಾಚೀನ ವಿಧಾನಗಳು

ಕುದಿಯುತ್ತಿರುವ ದ್ರವದಿಂದ ಬಿಸಿಯಾದ ಆವಿ ಹೊರಬೀಳುತ್ತದೆ. ಅದಕ್ಕೆ ತಣ್ಣನೆಯ ಪಾತ್ರೆಯನ್ನು ಹಿಡಿದರೆ ಅದರ ಹೊರಮೈ ಮೇಲೆ ದ್ರವದ ಹನಿಗಳು ಕೂಡಿಕೊಳ್ಳುತ್ತವೆ. ಅವನ್ನು ಆಗಿಂದಾಗ್ಗೆ ಸಂಗ್ರಹಿಸುವುದು ಪದ್ಧತಿಯಾಗಿತ್ತು. ತರುವಾಯ ಇದಕ್ಕಾಗಿ ತಣ್ಣೀರು ತುಂಬಿದ ಬೋಗುಣಿಯನ್ನು ಉಪಯೋಗಿಸುವುದು ಪ್ರಾರಂಭವಾಯಿತು. ಟಿಬೆಟ್ ಮತ್ತು ಭೂತಾನಿನಲ್ಲಿ ಉಪಯೋಗಿಸುತ್ತಿದ್ದ ಮಾದರಿ ಸಾಂದ್ರಕ ಇತ್ತು. ಪೆರು ದೇಶೀಯರು ಇದಕ್ಕೋಸ್ಕರ ನೀಳವಾದ ಕೊಳವೆಯನ್ನು ಬಳಸುತ್ತಿದ್ದರು. ಬಿಸಿಯಾದ ಆವಿ, ಅದರ ಮೂಲಕ ಹಾದು ಬೇರೊಂದು ಸಂಗ್ರಾಹದಲ್ಲಿ ದ್ರವರೂಪ ತಳೆಯುತ್ತಿತ್ತು.

ಸಂಗ್ರಾಹಕವನ್ನು ತಣ್ಣೀರಿನಲ್ಲಿ ಇಟ್ಟಾಗ, ಇನ್ನೂ ಜಾಗ್ರತೆಯಾಗಿ ಹನಿಗೂಡುತ್ತಿದ್ದುವು. ಇದನ್ನು ಜಾರಿಗೆ ತಂದವರು ಸಿಂಹಳೀಯರು. ತಾಹಿತಿಯ ಮೂಲನಿವಾಸಿಗಳು ಮತ್ತೊಂದು ಕ್ರಾಂತಿಕಾರಕ ಬದಲಾವಣೆಯನ್ನು ರೂಪಿಸಿದರು. ಬಿಸಿ ಆವಿ ಹಾಯುತ್ತಿರುವ ನಾಳದ ಸುತ್ತ ತಣ್ಣೀರನ್ನು ಹಾಯಿಸುವುದೇ ಈ ಸುಧಾರಣೆ. ಆಧುನಿಕ ಲೀಬಿಗ್ ಸಾಂದ್ರಕದ ನಿರ್ಮಾಣಕ್ಕೆ ಇದು ನಾಂದಿಯಾಯಿತೆನ್ನಬಹುದು. ದಕ್ಷಿಣ ಭಾರತದಲ್ಲಿ ಅದರಲ್ಲೂ ಮೈಸೂರು ಮಾದರಿ ಎಂದು ಪ್ರಸಿದ್ಧವಾಗಿರುವ ಸಾಂದ್ರಕ ಒಂದು ಮೂಲ ರೂಪವನ್ನು ಹೊಂದಿತ್ತು.

ತಾಹಿತಿ ಮಾದರಿಯ ಮಡಿಕೆ ಸಾಂದ್ರಕಗಳನ್ನು ಫ್ರಾನ್ಸಿನಲ್ಲಿ ಬ್ರಾಂದಿಯನ್ನೂ ಮತ್ತು ಸ್ಕಾಟ್ಲೆಂಡ್, ಐರ್ಲೆಂಡುಗಳಲ್ಲಿ ವಿಸ್ಕಿಯನ್ನೂ ತಯಾರಿಸಲು ಇನ್ನೂ ಉಪಯೋಗಿಸುತ್ತಿದ್ದಾರೆ. ಆದರೆ ಕುದಿಪಾತ್ರೆಯ ಮೇಲೆ ಬಲ್ಬ್ ನಮೂನೆಯ ಶಿರೋಕರಂಡವಿರುತ್ತದೆ. ಇದು ಆವಿಯಲ್ಲಿರುವ ತುಂತುರನ್ನು ಹನಿಗೂಡಿಸಿ ಕುದಿ ಪಾತ್ರೆಗೇ ಬೀಳುವಂತೆ ಮಾಡುತ್ತದೆ. ಆದ್ದರಿಂದ ಸಂಗ್ರಹಿಸಿದ ದ್ರವ ಶುದ್ಧವಾಗಿರುತ್ತದೆ. ಕೆಲವು ಐರಿಷ್ ಸಾಂದ್ರಕಗಳಲ್ಲಿ ಅವ್ಯಾಸಕ್ತ ಅಂಶಗಳು ಮಾತ್ರ ಸಾಂದ್ರಕ ಕೊಳವೆಯನ್ನು ತಲಪುತ್ತವೆ. ಉಳಿದ ಭಾಗವನ್ನು ಕುದಿಪಾತ್ರೆಗೆ ಹಿಂತಿರುಗಿಸುವ ಏರ್ಪಾಡಿರುತ್ತದೆ. ಇದು ಇಂದು ನಾವು ಬಳಸುವ ಅಂಶ ಬಾಷ್ಪೀಕರಣದ ಉಪಕರಣವನ್ನು ಹೋಲುತ್ತದೆ. ಫ್ರೆಂಚ್ ಬ್ರಾಂದಿ ತಯಾರಿಸುವ ಉಪಕರಣದಲ್ಲಿ ಕುದಿಪಾತ್ರೆಗೂ ಸಾಂದ್ರಕಕ್ಕೂ ನಡುವೆ ಎರಡು ಬಲ್ಬುಗಳಿರುವ ಒಂದು ಪಾತ್ರೆ ಇರುತ್ತದೆ. ಒಂದರಲ್ಲಿ ಕುದಿಪಾತ್ರೆಗೆ ಹಾಕಬೇಕಾಗಿರುವ ವೈನ್ ಇರುವುದು. ಇನ್ನೊಂದರಲ್ಲಿ ಅವ್ಯಾಸಕ್ತಿ ಕಡಿಮೆಯಿರುವ ಅಂಶಗಳು ಸಾಂದ್ರೀಕರಿಸುತ್ತವೆ. ಆಗ ಹೊರಬಿದ್ದ ಗುಪ್ತೋಷ್ಣವನ್ನು ವೈನ್ ಹೀರಿಕೊಂಡು ಕುದಿಪಾತ್ರೆಗೆ ಬೀಳುತ್ತದೆ. ಈ ಉಷ್ಣ ವಿನಿಮಯ ತಂತ್ರದಿಂದ ಇಂಧನ ಉಳಿತಾಯವಾಗುವುದು. ಸ್ಕಾಟ್ಲೆಂಡಿನ ವಿಸ್ಕಿ ಕೇಂದ್ರಗಳಲ್ಲಿ ಉಪಯೋಗಿಸುವ ಕುದಿಪಾತ್ರೆಗಳ ರಚನೆ ಇನ್ನೂ ಜಟಿಲವಾಗಿದ್ದು, ಇಂಥ ಹಲವು ಮಧ್ಯವರ್ತಿ ಪಾತ್ರೆಗಳನ್ನು ಒಳಗೊಂಡಿರುತ್ತದೆ. ಇವು ಹಗುರವಾದ ಅಂಶಗಳನ್ನು ಸಾಂದ್ರಕದ ಎಡೆಗೆ ಒಯ್ದು ಶೇಷಾಂಶವನ್ನು ಕುದಿಪಾತ್ರಗೆ ಹಿಂತಿರುಗಿಸುತ್ತವೆ.

ಆಧುನಿಕ ಕಾಫೆ ಸಾಂದ್ರಕ

ಹೀಗೆ ರೂಪಾಂತರ ಹೊಂದುತ್ತ ನಡೆದು ಅಂತಿಮವಾಗಿ ಕಾಫೆ ಸಾಂದ್ರಕ ಜನ್ಮತಾಳಿತು ಎನ್ನಬಹುದು. ೧೮೩೧ರಲ್ಲಿ ಪೇಟೆಂಟ್ ಮಾಡಿಕೊಂಡ ಈ ಉಪಕರಣದಲ್ಲಿ ಪ್ರಧಾನವಾಗಿ ಎರಡು ಗೋಪುರಗಳಿವೆ. ವಿಶ್ಲೇಷಕ ಎಂದು ಕರೆಯಲ್ಪಡುವ ಮೊದಲನೆಯ ಗೋಪುರದ (ಸ್ತಂಭ) ಮೇಲ್ಭಾಗದಿಂದ ಆಲ್ಕೊಹಾಲ್ ದ್ರವವನ್ನೂ, ಬುಡದಿಂದ ಹಬೆಯನ್ನೂ ಹಾಯಿಸುತ್ತಾರೆ. ಗೋಪುರದಲ್ಲಿ ಸರಂಧ್ರ ತಟ್ಟೆಗಳಿರುತ್ತವೆ. ಮೇಲೇರುತ್ತಿರುವ ಹಬೆಯ ದೆಸೆಯಿಂದ ಆಲ್ಕೊಹಾಲ್ ರಂಧ್ರಗಳ ಮೂಲಕ ಕೆಳಗಿನತಟ್ಟೆಗೆ ಸೋರಿಹೋಗುವಂತಿಲ್ಲ. ಸಾಕಷ್ಟು ದ್ರವ ತಟ್ಟೆಯಲ್ಲಿ ಶೇಖರಿಸಿದಾಗ ಹೆಚ್ಚುವರಿ ದ್ರವ ವಿಶೇಷ ನಳಿಗೆಯೊಂದರ ಮೂಲಕ ಅಡಿ ತಟ್ಟೆಯಲ್ಲಿರುವ ಬಟ್ಟಲಿಗೆ ಹರಿದು ಹೋಗುತ್ತದೆ. ಹಬೆಯ ಉಷ್ಣದಿಂದ ಮದ್ಯದಲ್ಲಿರುವ ಆಲ್ಕೊಹಾಲಿನ ಒಂದಂಶ ಆವಿಯಾಗಿ ಹಬೆಯೊಡನೆ ಬೆರೆತು ರೆಕ್ಟಿಫಯರ್ ಎಂಬ ಎರಡನೆಯ ಗೋಪುರವನ್ನು ಬುಡದಿಂದ ಪ್ರವೇಶಿಸುವುದು. ವಿಶ್ಲೇಷಕದಂತೆ ಇಲ್ಲೂ ಸರಂಧ್ರ ತಟ್ಟೆಗಳಿವೆ. ಪ್ರತಿ ತಟ್ಟೆಗಳ ನಡುವೆ ಸುರುಳಿಯಾಕಾರದ ಕೊಳವೆ ಇದೆ. ಇದು ಎರಡು ಕೆಲಸ ನಿರ್ವಹಿಸುವುದು. ವಿಶ್ಲೇಷಕದ ಮೇಲ್ಭಾಗಕ್ಕೆ ಹೋಗುತ್ತಿರುವ ವಾಷನ್ನು ಬಿಸಿ ಮಾಡಿ ಉಷ್ಣವಿನಿಮಯಕ್ಕೆ ಅನುಕೂಲ ಮಾಡಿಕೊಡುವುದು; ಎರಡನೆಯದಾಗಿ ಹಾಯುತ್ತಿರುವ ಹಬೆ ಮತ್ತು ಆಲ್ಕೊಹಾಲ್ ಮಿಶ್ರಣವನ್ನು ತಣಿಸಿ ಭಾಗಶಃ ಸಾಂದ್ರೀಕರಿಸುವುದು. ಅಂತಿಮವಾಗಿ ಮೇಲ್ಭಾಗದಿಂದ ಹೊರಬೀಳುವ ಆವಿಯನ್ನು ತಣಿಸಿದರೆ ಉಂಟಾಗುವ ಮದ್ಯದಲ್ಲಿ ಆಲ್ಕೊಹಾಲಿನ ಅಂಶ ವೃದ್ಧಿಯಾಗಿರುತ್ತದೆ. ಇದನ್ನು ಇತರ ಮದ್ಯಪಾನೀಯಗಳೊಡನೆ ಸೇರಿಸಿ ಸಂಯೋಜಿತ (ಕಾಂಪೌಂಡೆಡ್) ಮತ್ತು ಸಂರಕ್ಷಿತ (ಫಾರ್ಟಿಫೈಡ್) ಮದ್ಯಗಳನ್ನು ತಯಾರಿಸುವರು.

ಹದಗೊಳಿಸುವಿಕೆ (ಮೆಚೂರಿಂಗ್)

ಬಟ್ಟಿ ಇಳಿಸಿದ ಮದ್ಯಗಳು ಪಾನಯೋಗ್ಯವಾಗಬೇಕಾದರೆ ಅವುಗಳನ್ನು ಬಿಳಿ ಓಕ್ ಮರದಿಂದ ಮಾಡಿದ ಪೀಪಾಯಿಗಳು ಅಥವಾ ಜಾಡಿಗಳಲ್ಲಿ ಕೂಡಿಡಬೇಕು. ಕೆಲವು ಮದ್ಯಗಳನ್ನು ಕರಿಯ ಓಕ್ ಮರದ ಪೀಪಾಯಿಗಳಲ್ಲಿಟ್ಟು ಹದಗೊಳಿಸುವರು. ಅಮೆರಿಕನ್ ವಿಸ್ಕಿಯನ್ನು ಕೂಡಿಡುವ ಪೀಪಾಯಿಗಳು ಹೊಸದಾಗಿರಬೇಕು. ಅವನ್ನು ಹಿಂದೆ ಬಳಸಿರಬಾರದು. ಅವುಗಳ ಒಳಭಾಗ ಸುಟ್ಟು ಕಪ್ಪಾಗಿರಬೇಕು. ಕೆಲವು ಬಟ್ಟಿಗಳಲ್ಲಿ ಒಮ್ಮೆ ಉಪಯೋಗಿಸಿರುವ ಪೀಪಾಯಿಗಳಿಗೆ ಪ್ರಾಶಸ್ತ್ಯ ಹೆಚ್ಚು. ಪೀಪಾಯಿಗಳಲ್ಲಿ ಶೇಖರಿಸುವ ಮದ್ಯಕ್ಕೆ ನೀರು ಬೆರೆಸಿ ಆಲ್ಕೊಹಾಲಿನ ಅಂಶವನ್ನು ಕಡಿಮೆ ಮಾಡುವುದು ವಾಡಿಕೆ. ಇದೊಂದು ಪ್ರಾದೇಶಿಕ ಸಂಪ್ರದಾಯ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ೫೧.೫% ಸ್ಕಾಟ್ಲೆಂಡಿನಲ್ಲಿ ೬೨% ಮತ್ತು ಫ್ರಾನ್ಸಿನಲ್ಲಿ ೭೦% ಆಲ್ಕೊಹಾಲನ್ನು ಪೀಪಾಯಿಗಳಲ್ಲಿಟ್ಟು ಭದ್ರಪಡಿಸುತ್ತಾರೆ.

ಸಾಮಾನ್ಯವಾಗಿ ಇಂಥ ಮದ್ಯ ತುಂಬಿದ ಪೀಪಾಯಿಗಳನ್ನು ಗಾಳಿಯ ಹೊಡೆತಕ್ಕೆ ಆಸ್ಪದವಿಲ್ಲದ ಉಗ್ರಾಣಗಳಲ್ಲಿ ಸಾಲಾಗಿ ಹಂತಹಂತವಾಗಿ ಪೇರಿಸಿರುತ್ತಾರೆ. ಆಲ್ಕೊಹಾಲ್ ಸೋರಿ ನಷ್ಟವಾಗುತ್ತಿದ್ದರೆ ತನಿಖೆಮಾಡಲು ಈ ವ್ಯವಸ್ಥೆ ಅನುಕೂಲ. ಹದಗೊಳಿಸುವ ಈ ಅವಧಿಯಲ್ಲಿ ಮದ್ಯದಲ್ಲಿ ಗಣನೀಯ ಬದಲಾವಣೆಗಳಾಗುತ್ತವೆ. ಮರದ ಪೀಪಾಯಿ ಸಾಕಷ್ಟು ಸರಂಧ್ರವಾಗಿರುವುದರಿಂದ ಅದರೊಳಕ್ಕೆ ಗಾಳಿ ತೂರಬಹುದು. ಸ್ವಲ್ಪ ದ್ರವ ಆವಿಯಾಗಿ ಹೊರಕ್ಕೆ ಹೋಗಬಹುದು. ನೀರಿನ ಅಂಶ ನಿರ್ಗಮಿಸಿ ಪೀಪಾಯಿಯಲ್ಲಿರುವ ದ್ರವದಲ್ಲಿ ಆಲ್ಕೊಹಾಲಿನ ಅಂಶ ಹೆಚ್ಚುವುದು ಸರ್ವಸಾಮಾನ್ಯ. ಇದು ಅಮೆರಿಕನ್ ವಿಸ್ಕಿಗೆ ಅನ್ವಯಿಸುತ್ತದೆ. ಆದರೆ ಕೊನ್ಯಾಕ್ ಹೀಗೆ ಶೇಖರಿಸಲ್ಪಟ್ಟಾಗ ಜಲಾಂಶ ವೃದ್ಧಿಯಾಗುವುದು ಕಂಡುಬಂದಿದೆ. ಏತನ್ಮಧ್ಯೆ ಮದ್ಯದಲ್ಲಿರುವ ಅಪ್ರಧಾನ ವಸ್ತುಗಳಲ್ಲಿ ಮುಖ್ಯ ಬದಲಾವಣೆಗಳಾಗುತ್ತವೆ. ಅದರಲ್ಲಿರುವ ಆಮ್ಲಗಳು ಆಲ್ಕೊಹಾಲುಗಳೊಂದಿಗೆ ವರ್ತಿಸಿ ಮಧುರ ಎಸ್ಟರುಗಳಾಗುತ್ತವೆ. ಇದರಿಂದ ಎಸ್ಟರುಗಳ ಅಂಶ ಏರುತ್ತದೆ. ಅಲ್ಲದೆ ಗಾಳಿಯಲ್ಲಿರುವ ಆಕ್ಸಿಜನ್ನಿನ ಸಂಪರ್ಕದಲ್ಲಿ ಆಲ್ಕೊಹಾಲುಗಳು ಆಲ್ಡಿಹೈಡುಗಳಿಗೆ ಉತ್ಕರ್ಷಿತವಾಗುವುವು. ಟ್ಯಾನಿನ್ನುಗಳು ಮತ್ತು ಇನ್ನಷ್ಟು ಪರ್‌ಫ್ಯುರಾಲ್ (ಇದೂ ಒಂದು ಆಲ್ಡಿಹೈಡು) ಮರದ ಪೀಪಾಯಿಯಿಂದ ಮದ್ಯದಲ್ಲಿ ಲೀನವಾಗುವುವು. ಮದ್ಯಕ್ಕೆ ಬಣ್ಣವೂ ಪ್ರಾಪ್ತವಾಗುತ್ತದೆ. ನಿರೀಕ್ಷಿತ ಮಟ್ಟಕ್ಕೆ ಹದಗೊಳ್ಳಲು ಒಂದೊಂದು ಮದ್ಯಕ್ಕೆ ಬೇರೆ ಬೇರೆ ಕಾಲಾವಧಿ ಅಗತ್ಯ. ಕರಿಗಟ್ಟಿಸಿದ ಹೊಸ ಓಕ್ ಮರದ ಪೀಪಾಯಿಗಳಲ್ಲಿ ಮದ್ಯ ಬೇಗ ಹದವಾಗುವಷ್ಟು ಬಳಸಿದ ಜಾಡಿಗಳಲ್ಲಿಟ್ಟರೆ ಆಗುವುದಿಲ್ಲ. ಹೀಗಾಗಲು ಹವಾಗುಣವೂ ಕಾರಣ. ಮದ್ಯ ಹದವಾಗುವ ಕನಿಷ್ಠ ಅವಧಿ ಎರಡು ವರ್ಷಗಳು. ಆದರೆ ನಾಲ್ಕು ವರ್ಷಗಳಿಗೂ ಮೀರಿ ಕೂಡಿಡುವುದು ರೂಢಿ. ಇಂಥ ಮದ್ಯಗಳಲ್ಲಿ ಟ್ಯಾನಿನ್ ಮತ್ತು ಫರ್‌ಫ್ಯುರಾಲ್ ಅಂಶ ಹೆಚ್ಚಾಗಿರುವುದರಿಂದ ತೀಕ್ಷ್ಣವಾದ ಮರದ ರುಚಿ ಹುಟ್ಟುವುದು ಸಹಜ. ಇತರ ಬಟ್ಟಿ ಇಳಿಸಿದ ಮದ್ಯಗಳಿಗಿಂತ ಕೊನ್ಯಾಕ್ ಬ್ರಾಂದಿಯನ್ನು ಸುಮಾರು ೫೦ ವರ್ಷಗಳ ಕಾಲ ಹೀಗೆ ಸುರಕ್ಷಿತವಾಗಿ ಕಾಪಾಡಬಹುದು. ಇಷ್ಟು ದೀರ್ಘಕಾಲ ಕೂಡಿಡುವ ಪ್ರಸಂಗ ಒದಗಿದರೆ ಆಗಿಂದಾಗ್ಗೆ ಹೊಸ ಬ್ರಾಂದಿಯನ್ನು ಅದಕ್ಕೆ ಸೇರಿಸುತ್ತ ಇರಬೇಕು. ಬಟ್ಟಿ ಇಳಿಸಿದ ಮದ್ಯಗಳು ಹಳತಾದಷ್ಟೂ ಹಿತವಾಗಿರುತ್ತವೆ. ಗಾಜಿನ ಪಾತ್ರೆಗಳಲ್ಲಿಟ್ಟ ಮದ್ಯ ಎಂದೂ ಹದವಾಗುವುದಿಲ್ಲ. ಇದು ಗಮನಾರ್ಹ. ಸೀಸೆಗೆ ತುಂಬಿದ ದಿವಸ ಇದ್ದಂತೆಯೇ ಮದ್ಯ ಅದನ್ನು ತೆರೆದ ದಿವಸವೂ ಇರುತ್ತದೆ.

ವಿಧಗಳು

ಆಲ್ಕೊಹಾಲ್‌ ಪ್ರಮಾಣವು ಕಡಿಮೆಯಿರುವ (ಬಿಯರ್‌ ಮತ್ತು ವೈನ್‌) ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ಸಕ್ಕರೆಯ ಅಥವಾ ಸಸ್ಯದ ಪಿಷ್ಟದ ಹುಳಿಯುವಿಕೆಯಿಂದ ತಯಾರಿಸಲಾಗುತ್ತದೆ. ಪಿಷ್ಟವನ್ನು ಸಕ್ಕರೆಗೆ ಮತ್ತೆ ಅದನ್ನು ಆಲ್ಕೊಹಾಲಿಗೆ ಪರಿವರ್ತಿಸುವ ಇಂಥ ಪ್ರೇರಕ ವಸ್ತುಗಳಿಗೆ ಕಿಣ್ವಗಳೆಂದು (ಎನ್‌ಜೈಮ್ಸ್) ಹೆಸರು. ಅವು ದ್ರಾವ್ಯವಾದ ಪ್ರೋಟೀನ್ ವಸ್ತುಗಳು; ವೇಗವರ್ಧಕಗಳಂತೆ ವರ್ತಿಸುತ್ತವೆ. ಹೈಡ್ರೊಸಯನಿಕ್ ಆಮ್ಲ, ಪಾದರಸದ ಲವಣಗಳು ಮತ್ತು ಫಾರ್ಮಲಿನ್ ಇತ್ಯಾದಿಗಳ ಸಂಪರ್ಕದಲ್ಲೂ ಮತ್ತು ಉಷ್ಣ ವ್ಯತ್ಯಾಸದಿಂದಲೂ ನಿಷ್ಕ್ರಿಯವಾಗುತ್ತವೆ. ಒಂದೊಂದು ಕಿಣ್ವವೂ ನಿರ್ದಿಷ್ಟ ವಸ್ತುವಿನ ಮೇಲೆ ಮಾತ್ರ ಪ್ರಭಾವ ಬೀರುತ್ತದೆ. ಅವುಗಳ ವ್ಯಾಪ್ತಿ ಪೂರ್ವ ನಿಯೋಜಿತವಾದಂತಿದೆ. ಪಿಷ್ಟವನ್ನು ಡ್ಯಕ್ಸ್‌ಟ್ರಿನ್ ಮೂಲಕ ಮಾಲ್ಟೋಸ್ ಸಕ್ಕರೆಗೆ ಪರಿವರ್ತಿಸುವ ಅಮೈಲೇಸ್ ಕಿಣ್ವ, ಮಾಲ್ಟೋಸನ್ನು ಡೆಕ್ಸ್‌ಟ್ರೋಸಾಗಿ ಮಾಡುವ ಮಾಲ್ಟೇಸ್ ಕಿಣ್ವ, ಡೆಕ್ಸ್‌ಟ್ರೋಸನ್ನು ಆಲ್ಕೊಹಾಲ್ ಮತ್ತು ಕಾರ್ಬನ್ ಡೈಆಕ್ಸೈಡಿಗೆ ಬದಲಾಯಿಸುವ ಜೈಮೇಸ್ ಕಿಣ್ವಗಳನ್ನು ಪ್ರಕೃತ ಸಂದರ್ಭದಲ್ಲಿ ಉದಾಹರಿಸಬಹುದು. ಈ ಕ್ರಿಯೆಗಳು ಜಲಮಾಧ್ಯಮದಲ್ಲಿ ಸರಾಗವಾಗಿ ನಡೆಯುವುದು ವಿಶೇಷ ಸಂಗತಿ. ಅಮ್ಯಲೇಸ್ ಮತ್ತು ಮಾಲ್ಟೇಸ್ ಕಿಣ್ವಗಳು ಮೊಳೆತ ಧಾನ್ಯಗಳಲ್ಲೂ ಮತ್ತು ಜೈಮೇಸ್ ಕಿಣ್ವ ಯೀಸ್ಟ್ ಸಸ್ಯದಲ್ಲೂ ಇರುವುದರಿಂದ, ಮಿತವ್ಯಯದಿಂದ ಮದ್ಯ ತಯಾರಿಕೆ ಸಾಧ್ಯವಾಗಿದೆ. ಹೆಚ್ಚಿನ ಆಲ್ಕೊಹಾಲ್‌ ಪ್ರಮಾಣವನ್ನು ಹೊಂದಿರುವ ಪಾನೀಯಗಳನ್ನು (ಮದ್ಯಸಾರಗಳು) ಹುಳಿಯುವಿಕೆಯ ನಂತರ ಬಟ್ಟಿ ಇಳಿಸಿ ಪಡೆಯಲಾಗುತ್ತದೆ.

ಬಿಯರ್

ಬಿಯರ್‌ ಪ್ರಪಂಚದ ಹಳೆಯ[೨] ಮತ್ತು ಹೆಚ್ಚು ಸೇವಿಸಲ್ಪಡುವ[೩] ಆಲ್ಕೊಹಾಲ್‌ಯುಕ್ತ ಪಾನೀಯವಾಗಿದೆ ಮತ್ತು ನೀರು ಮತ್ತು ಟೀಯ ನಂತರ ಅತ್ಯಂತ ಜನಪ್ರಿಯ ಮೂರನೇಯ ಪಾನೀಯವಾಗಿದೆ.[೪] ಇದನ್ನು ಬ್ರೆವಿಂಗ್/ಕುದಿಸುವುದು ಮತ್ತು ಹೆಚ್ಚಾಗಿ ಧಾನ್ಯಗಳ ಪಿಷ್ಟದ ಹುಳಿಯುವಿಕೆಯಿಂದ ತಯಾರಿಸಲಾಗುತ್ತದೆ. ಗೋಧಿ, ಜೋಳ ಮತ್ತು ಅಕ್ಕಿಯನ್ನು ಬಳಸುತ್ತಾರಾದರೂ —ಹೆಚ್ಚಾಗಿ ಮೊಳಕೆ ಬರಿಸಿದ ಜವೆಗೋದಿ/ಬಾರ್ಲಿಯಿಂದ ತಯಾರಿಸುತ್ತಾರೆ. ಆಲ್ಕೊಹಾಲ್‌ಯುಕ್ತ ಪಾನೀಯ ಹುಳಿಯುವಿಕೆಯ ನಂತರ ಬಟ್ಟಿ ಇಳಿಸಿದ, ಧಾನ್ಯಗಳಲ್ಲದ ಅಂದರೆ ದ್ರಾಕ್ಷಿ ಮತ್ತು ಜೇನುತುಪ್ಪದಂತಹ ಅಥವಾ ಮೊಳಕೆಗಟ್ಟದ ಧಾನ್ಯಗಳ ಹುಳಿಯುವಿಕೆಯನ್ನು ಬಿಯರ್ ಎಂದು ಪರಿಗಣಿಸಲಾಗುವುದಿಲ್ಲ‌.

ಬಿಯರ್‌ನ ಎರಡು ಪ್ರಮುಖ ವಿಧಗಳೆಂದರೆ‌ ಲಾಗರ್ ಮತ್ತು ಏಲ್‌. ಏಲ್‌‌ನ್ನು ಬಿಳಿ ಬಣ್ಣದ ಏಲ್‌, ದಪ್ಪವಾದ, ಮತ್ತು ಕಂದು ಬಣ್ಣದ ಏಲ್‌ಗಳೆಂದು ವಿಂಗಡಿಸಲಾಗಿದೆ.

ಹೆಚ್ಚಿನ ಬಿಯರ್ ಹೋಪ್ಸ್‌ ಸುಗಂಧವನ್ನು ಹೊಂದಿದ್ದು ಕಟುತ್ವವನ್ನು ಹೆಚ್ಚಿಸುತ್ತದೆ ಮತ್ತು ನೈಸರ್ಗಿಕವಾದ ರಕ್ಷಕದಂತೆ ವರ್ತಿಸುತ್ತದೆ. ಹಣ್ಣು ಅಥವಾ ಗಿಡಮೂಲಿಕೆಗಳ ಸುಗಂಧಗಳನ್ನೂ ಬಳಸುತ್ತಾರೆ ಬಿಯರ್‌ನಲ್ಲಿ ಆಲ್ಕೊಹಾಲಿನ ಪ್ರಮಾಣವು ಸಾಮಾನ್ಯವಾಗಿ‌ 4%ರಿಂದ 6% ಆಲ್ಕೊಹಾಲ್‌ ಸಾಂದ್ರತೆ(ಎಬಿವಿ)ಯಷ್ಟಿರುತ್ತದೆ, ಆದರೆ 1%ರಿಂದ ಹೆಚ್ಚೆಂದರೆ 20%ದಷ್ಟಿರಬಹುದು.

ಬಿಯರ್‌ ಅನೇಕ ದೇಶಗಳಲ್ಲಿ ಕುಡಿಯುವ ಸಂಸ್ಕೃತಿಯ ಭಾಗವಾಗಿದೆ ಮತ್ತು ಬಿಯರ್‌ ಹಬ್ಬಗಳು, ಪಬ್ ಸಂಸ್ಕೃತಿ, ಪಬ್ ಆಟಗಳು, ಮತ್ತು ಪಬ್ ಕ್ರೌಲ್‌ಗಳಂತಹ ಸಾಮಾಜಿಕ ಸಂಪ್ರದಾಯಗಳನ್ನು ಒಳಗೊಂಡಿದೆ.

ಬಿಯರ್‌ ತಯಾರಿಕೆಯು ರಾಷ್ಟ್ರಗಳ ಮತ್ತು ಸಂಸ್ಕೃತಿಯ ಗಡಿಯನ್ನು ದಾಟಿ ವಿಸ್ತರಿಸಿದೆ. ಮದ್ಯ ಕೈಗಾರಿಕೆಯು ವಿಶ್ವ ಮಟ್ಟದ ಮನ್ನಣೆಯನ್ನು ಪಡೆದಿದ್ದು, ಅನೇಕ ಅಂತರಾಷ್ಟ್ರೀಯ ಕಂಪನಿಗಳು ಮತ್ತು ಸಾವಿರಾರು ತಯಾರಕರಾದ ಸ್ಥಳೀಯರಿಂದ ಸೂಕ್ಷ್ಮತಯಾರಕರವರೆಗೂ ಹಬ್ಬಿದೆ.

ವೈನ್‌

ವೈನ್‌ನ್ನು ದ್ರಾಕ್ಷಿಗಳಿಂದ ತಯಾರಿಸುತ್ತಾರೆ, ಮತ್ತು ಹಣ್ಣಿನ ವೈನ್‌ನ್ನು ಪ್ಲಮ್, ಚೆರ್ರಿ ಮತ್ತು ಸೇಬು ಹಣ್ಣುಗಳಿಂದ ತಯಾರಿಸುತ್ತಾರೆ. ವೈನ್‌ ಸುದೀರ್ಘವಾದ(ಪೂರ್ಣ) ಹುಳಿಯುವಿಕೆಯ ವಿಧಾನ ಮತ್ತು ಸುದೀರ್ಘ ಕೊಳೆಯುವಿಕೆಯನ್ನೊಳಗೊಳ್ಳುತ್ತದೆ (ತಿಂಗಳು ಅಥವಾ ವರ್ಷಗಳು). ಇದರಿಂದಾಗಿ 9%–16% ಎಬಿವಿ ಆಲ್ಕೊಹಾಲ್‌ ಪ್ರಮಾಣವನ್ನು ಹೊಂದುತ್ತದೆ. ಸ್ಪಾರ್ಕ್ಲಿಂಗ್ ವೈನ್‌ನ್ನು ಬಾಟಲಿಗೆ ತುಂಬಿಸುವಾಗ ಸ್ವಲ್ಪ ಸಕ್ಕರೆಯನ್ನು ಬೆರೆಸಿ ತಯಾರಿಸಲಾಗುತ್ತದೆ. ಇದರಿಂದ ಬಾಟಲಿಯಲ್ಲಿ ಎರಡನೇ ಹುಳಿಯುವಿಕೆಯಾಗುತ್ತದೆ.

ಮದ್ಯ ಸಾರಗಳು

ಸಿಹಿಯಿರದ, ಬಟ್ಟಿ ಇಳಿಸದ, 20% ಎಬಿವಿಗಿಂತ ಹೆಚ್ಚು ಆಲ್ಕೊಹಾಲ್‌ ಪ್ರಮಾಣವನ್ನು ಹೊಂದಿರುವ ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಮದ್ಯ ಸಾರಗಳೆಂದು ಕರೆಯಲಾಗುತ್ತದೆ.[೫] ಮದ್ಯ ಸಾರವನ್ನು ಹುಳಿಯುವಿಕೆಯಿಂದ ದೊರೆತ ಪದಾರ್ಥವನ್ನು ಭಟ್ಟಿ ಇಳಿಸಿ ತಯಾರಿಸಲಾಗುತ್ತದೆ. ಭಟ್ಟಿ ಇಳಿಸುವಿಕೆಯು ಆಲ್ಕೊಹಾಲಿನಲ್ಲಿನ ಇತರ ವಸ್ತುಗಳನ್ನು ತೆಗೆದು ಸಾಂದ್ರೀಕರಿಸುತ್ತದೆ.

ಮದ್ಯ ಸಾರವನ್ನು ವೈನ್‌ಗೆ ಸೇರಿಸಿ ಹೆಚ್ಚು ಸಾಂದ್ರೀಕರಿಸಿದ ವೈನ್‌ಗಳಾದ ಪೋರ್ಟ್ ಮತ್ತು ಷೆರಿಗಳನ್ನು ತಯಾರಿಸುತ್ತಾರೆ.

ಇತರೆ ಆಲ್ಕೊಹಾಲ್ ಪಾನೀಯಗಳು

೧. ಟೆಕ್ವಿಲ: ಮೆಕ್ಸಿಕೊ ದೇಶದ ಜನಾನುರಾಗಿ ಪಾನೀಯ. ಶತಮಾನಸಸ್ಯ ಎಂದು ಹೆಸರಾದ, ಅಲ್ಲಿ ಮೆಸ್ಕಲ್ ಎಂದು ಕರೆಯುವ ಗಿಡದ ಜೀವರಸದಿಂದ ಇದನ್ನು ಮಾಡುತ್ತಾರೆ. ಹೊಸದಾದ ಮತ್ತು ನಾಲ್ಕು ವರ್ಷ ಹದ ಮಾಡಿದ ಟೆಕ್ವಿಲ ಮದ್ಯವನ್ನು ( ೪೩-೫೦% ಆಲ್ಕೊಹಾಲ್ ಇರುವುದು) ಮೆಕ್ಸಿಕೊ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಮಾರುವರು.

೨. ಓಕೊಲೆಹೊ: ಹವಾಯ್ ದ್ವೀಪ ನಿವಾಸಿಗಳು ತಯಾರಿಸುವ ಮದ್ಯವಿಶೇಷ. ಕಾಕಂಬಿ, ಅಕ್ಕಿ ಮತ್ತು ಟಿರೂಟ್ ಬೇರಿನ ಸೂಕ್ತ ಮಿಶ್ರಣದ ಹುಳಿಬರಿಸುವಿಕೆಯಿಂದ ಲಭ್ಯವಾದ ಪಾನೀಯ. ಇದರಲ್ಲಿ ೪೦-೫೦% ಆಲ್ಕೊಹಾಲಿರುತ್ತದೆ. ಕಪ್ಪು ಬಣ್ಣ ಮತ್ತು ಧೂಮ ರುಚಿ ಇರುವ (ಬೇಯಿಸಿದ ಟಿರೂಟ್ ಬೇರಿನಿಂದ ಹುಟ್ಟಿದ್ದು) ಈ ಮದ್ಯವನ್ನು ಸುಟ್ಟ ಮರದ ಪೀಪಾಯಿಗಳಲ್ಲಿ ಹಲವು ವರ್ಷಗಳ ಕಾಲ ಕೂಡಿಟ್ಟಿರುತ್ತಾರೆ. ಟಿರೂಟ್ ಬೇರಿನ ಬದಲು ತೆಂಗಿನ ಹಾಲನ್ನು ಬಳಸಿ ಸುಡದಿರುವ ಮರದ ಪೀಪಾಯಿಗಳಲ್ಲಿಟ್ಟು ಹಳತು ಮಾಡಿದರೆ ನಿರ್ವರ್ಣವಾದ ಮದ್ಯ ದೊರೆಯುತ್ತದೆ.

೩. ಎನ್ಜಿಕಾಪಿ ಅಥವಾ ಚೀನಿ ವಿಸ್ಕಿ: ಮಿಲೆಟ್ ಗಂಜಿಯಿಂದ ತಯಾರಿಸಿ ಸುಗಂಧಯುಕ್ತ ಬೇರುಗಳ ಕಷಾಯದಿಂದ ಆಕರ್ಷಕಗೊಳಿಸಿದ ಮದ್ಯಪಾನೀಯ. ಇದರಲ್ಲಿ ೪೮% ಆಲ್ಕೊಹಾಲ್ ಇರುತ್ತದೆ. ಇದನ್ನು ಸಹ ಮರದ ಸಂಪರ್ಕದಲ್ಲಿ ಹದಗೊಳಿಸಬೇಕು.

ಮಧುರಗೊಳಿಸಿದ ಮದ್ಯಗಳು: ಇದರಲ್ಲಿ ಜಿನ್ ಮುಖ್ಯವಾದುದು. ಮದ್ಯವನ್ನು ಮಾಧುರ್ಯಜನಕ ವಸ್ತುವಿನ ಸಂಪರ್ಕದಲ್ಲಿ ಬಟ್ಟಿ ಇಳಿಸಿ ಇವನ್ನು ತಯಾರಿಸಬಹುದು. ಇದಕ್ಕಾಗಿ ಜ್ಯೂನಿಪರ್ ಕಾಯಿ ಇತ್ಯಾದಿಗಳನ್ನು ಬಳಸುವರು. ಸ್ಕಾಂಡಿನೇವಿಯನ್ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಪಾನೀಯವೆಂದರೆ ಅಕ್ವಾವಿಟ್, ಕ್ಯೂಮಿನ್, ಕ್ಯಾರವೇ ಇತ್ಯಾದಿ ಬೀಜಗಳ ಸಂಪರ್ಕದಲ್ಲಿ ಆಲೂಗೆಡ್ಡೆಯಿಂದ ಬಂದ ಮದ್ಯವನ್ನು ಕಾಯಿಸಿದಾಗ ಇದು ಉಂಟಾಗುವುದು. ಡೆನ್ಮಾರ್ಕಿನ ಮದ್ಯ ನಿರ್ವರ್ಣವಾಗಿಯೂ ನಾರ್ವೀಜಿಯನ್ ಮತ್ತು ಸ್ವೀಡಿಷ್ ಮದ್ಯಗಳು ತಿಳಿ ಹಳದಿ ಬಣ್ಣ ಮತ್ತು ಮಸಾಲೆ ವಾಸನೆಯನ್ನೂ ಫಿನ್ಲೆಂಡಿನ ಮದ್ಯ ದಾಲ್ಚಿನ್ನಿಯ ವಾಸನೆಯನ್ನೂ ಹೊಂದಿರುತ್ತವೆ. ಆಕ್ವಾವಿಟ್ ಮದ್ಯದಲ್ಲಿ ೪೧.೫-೪೫% ಆಲ್ಕೊಹಾಲಿರುತ್ತದೆ.

ಮದ್ಯಪಾನಕಗಳು (ಕಾರ್ಡಿಯಲ್ಸ್): ಮಧ್ಯಯುಗದ ವೈದ್ಯರು ಮತ್ತು ರಸವಾದಿಗಳು ರೋಗನಿವಾರಣೆಗಾಗಿ ತಯಾರಿಸಿದ ಈ ಪಾನೀಯಗಳ ಬಳಕೆ ಸುಧಾರಿತ ರೀತಿಯಲ್ಲಿ ವಿಶ್ವವ್ಯಾಪಕವಾಗಿದೆ. ಅಮೆರಿಕ ದೇಶದ ನಿಯಮದ ಪ್ರಕಾರ ಈ ಪಾನಕಗಳಲ್ಲಿ ಕನಿಷ್ಟಪಕ್ಷ ೨.೫% ಸಕ್ಕರೆಯ ಅಂಶವಿರಬೇಕು. ಆಲ್ಕೊಹಾಲಿನ ಅಂಶ ೬-೪೯% ಮಿತಿಯಲ್ಲಿರುವುದು. ಅವುಗಳ ಆಕರ್ಷಕ ಬಣ್ಣ ಮಾಧುರ್ಯ ಮತ್ತು ಅಂಗಾಂಶಗಳ ವೈವಿಧ್ಯಕ್ಕೆ ಕೊನೆಯಿಲ್ಲ.

ಪಾನೀಯಗಳಲ್ಲಿ ಆಲ್ಕೊಹಾಲ್‌‌ನ ಪ್ರಮಾಣ

ಪಾನೀಯಗಳಲ್ಲಿ ಆಲ್ಕೊಹಾಲ್‌ನ ಸಾಂದ್ರತೆಯನ್ನು ಸಾಮಾನ್ಯವಾಗಿ ಆಲ್ಕೊಹಾಲ್‌ ಬೈ ವಾಲ್ಯೂಮ್‌ (ಎಬಿವಿ) ಅಥವಾ ಸಂಯುಕ್ತ ಸಂಸ್ಥಾನಗಳಲ್ಲಿ ಪ್ರೂಫ್‌ಗಳಿಂದ ಅಳೆಯುತ್ತಾರೆ. ಸಂಯುಕ್ತ ಸಂಸ್ಥಾನದಲ್ಲಿ 60 ಡಿಗ್ರೀ ಫ್ಯಾರನ್‌ಹೈಟ್‌ಲ್ಲಿ ಪ್ರೂಫ್‌ ಆಲ್ಕೊಹಾಲ್‌ ಪ್ರಮಾಣದ ಎರಡರಷ್ಟಿರುತ್ತದೆ (ಉದಾ, 80 ಪ್ರೂಫ್= 40% ಎಬಿವಿ). ಯುಕೆಯಲ್ಲಿ ಡಿಗ್ರೀಸ್ ಪ್ರೂಫ್‌‌ ನ್ನು ಮೊದಲು ಬಳಸುತ್ತಿದ್ದರು, 100 ಡಿಗ್ರೀಸ್ ಪ್ರೂಫ್‌ ಎಂದರೆ 57.1% ಎಬಿವಿ. ಇದು ಅತ್ಯಂತ ಕಡಿಮೆ ಸಾಂದ್ರವಾದ ಮದ್ಯ ಸಾರವಾಗಿದ್ದು ಸಿಡಿಮದ್ದಿನ ಸುಡುವಿಕೆಯನ್ನು ತಡೆಯುತ್ತದೆ.

ಸಾಮಾನ್ಯವಾದ ಭಟ್ಟಿ ಇಳಿಸುವಿಕೆಯಿಂದ 95.6% ಎಬಿವಿ (191.2 ಪ್ರೂಫ್)ಗಿಂತ ಹೆಚ್ಚಿನ ಸಾಂದ್ರ ಆಲ್ಕೊಹಾಲನ್ನು ಪಡೆಯಲಾಗುವುದಿಲ್ಲ, ಏಕೆಂದರೆ ಉಳಿದ ಆಲ್ಕೊಹಾಲ್‌ ನೀರಿನೊಂದಿಗೆ ಸ್ಥಿರ ಕುದಿಮಿಶ್ರಣ ರೂಪದಲ್ಲಿ ಮಿಶ್ರವಾಗಿರುತ್ತದೆ. ಹೆಚ್ಚಿನ ಆಲ್ಕೊಹಾಲ್‌ ಪ್ರಮಾಣವನ್ನು ಹೊಂದಿರುವ, ಯಾವುದೇ ಇತರ ಸುಗಂಧದ್ರವ್ಯಗಳನ್ನು ಹೊಂದಿಲ್ಲದ ಮದ್ಯ ಸಾರವನ್ನು ತಟಸ್ಥ ಮದ್ಯ ಸಾರ ಎನ್ನಬಹುದಾಗಿದೆ. ಸಾಮಾನ್ಯವಾಗಿ ಯಾವುದೇ ಬಟ್ಟಿ ಇಳಿಸಿದ ಆಲ್ಕೊಹಾಲ್‌ಯುಕ್ತ ಪಾನೀಯವು 170 ಅಥವಾ ಹೆಚ್ಚಿನ ಪ್ರೂಫ್ ಹೊಂದಿದ್ದರೆ ಅದನ್ನು ತಟಸ್ಥ ಮದ್ಯ ಸಾರ ಎಂದು ಪರಿಗಣಿಸಲಾಗುತ್ತದೆ.[೬]

ಆಲ್ಕೊಹಾಲ್‌ನ ಸಾಂದ್ರತೆಯು 18%ಕ್ಕಿಂತ ಹೆಚ್ಚಾದಾಗ ಹೆಚ್ಚಿನ ಯೀಸ್ಟ್‌ಗಳು ಪುನರುತ್ಪಾದನೆಯಾಗುವುದಿಲ್ಲ. ಇದು ಹುಳಿಯುವಿಕೆಯಿಂದಾದ ಪಾನೀಯಗಳಾದ ವೈನ್‌, ಬಿಯರ್‌, ಮತ್ತು ಸೇಕ್‌ಗಳನ್ನು ತಯಾರಿಸಲು ಪ್ರಾಯೋಗಿಕ ತಡೆಯಾಗಿದೆ. ದ್ರಾವಣದಲ್ಲಿ 25% ಎಬಿವಿ ಸಾಂದ್ರತೆಯವರೆಗೂ ಪಿಷ್ಠದ ಯೀಸ್ಟ್‌ಗಳು‌ ಅಭಿವೃದ್ಧಿಯಾಗುತ್ತದೆ.

ಗುಣಮಟ್ಟದ ಪಾನೀಯಗಳು

ಗುಣಮಟ್ಟದ ಪಾನಿಯಗಳೆಂದರೆ ಶುದ್ಧವಾದ ಆಲ್ಕೊಹಾಲ್‌ನ್ನು ಹೊಂದಿರುವ ಪಾನೀಯವಾಗಿದೆ. ಗುಣಮಟ್ಟದ ಪಾನಿಯವನ್ನು ಆಲ್ಕೊಹಾಲ್‌ ಒಳಸೇರುವ ಪ್ರಮಾಣವನ್ನು ಕಂಡುಹಿಡಿಯಲು ಬಳಸುತ್ತಾರೆ. ಇದನ್ನು ಬಿಯರ್‌, ವೈನ್‌, ಅಥವಾ ಮದ್ಯ ಸಾರಗಳನ್ನು ಅಳೆಯಲು ಬಳಸಲಾಗುತ್ತದೆ. ಆಲ್ಕೊಹಾಲ್‌ಯುಕ್ತ ಪಾನೀಯದ ವಿಧ ಅಥವಾ ಬಳಸುವ ಗಾತ್ರವು ಬೇರೆಯಾಗಿದ್ದರೂ ಆಲ್ಕೊಹಾಲ್‌‌ನ ಪ್ರಮಾಣವು ಯಾವಾಗಲೂ ಒಂದೇ ಆಗಿರುವುದನ್ನ ಗುಣಮಟ್ಟದ ಪಾನೀಯ ಎಂದು ಪರಿಗಣಿಸಲಾಗುತ್ತದೆ.

ಪಾನೀಯದ ಗುಣಮಟ್ಟವು ದೇಶದಿಂದ ದೇಶಕ್ಕೆ ಭಿನ್ನವಾಗಿರುತ್ತದೆ. ಉದಾಹರಣೆಗೆ, ಆಸ್ಟ್ರಿಯಾದಲ್ಲಿ ಆಲ್ಕೊಹಾಲ್‌ ಪ್ರಮಾಣವು 7.62 ಮಿ.ಲೀ (6 ಗ್ರಾಮ್‌ಗಳು), ಆದರೆ ಜಪಾನಿನಲ್ಲಿ ಇದು 25 ಮಿ.ಲೀ (19.75 ಗ್ರಾಮ್‌ಗಳು).

ಯುಕೆಯಲ್ಲಿ, ಆಲ್ಕೊಹಾಲ್‌ ಸೇವನೆಗೆ ಮಾರ್ಗದರ್ಶಿಯಾಗಿ ಆಲ್ಕೊಹಾಲ್‌‌ನ ಘಟಕ ಎಂಬ ಮಾನದಂಡವಿದೆ. ಒಂದು ಆಲ್ಕೊಹಾಲ್‌‌ನ ಘಟಕವನ್ನು 10 ಮಿ.ಲೀ ಎಂದು ವ್ಯಾಖ್ಯಾನಿಸಲಾಗುತ್ತದೆ. ಪಾನೀಯದಲ್ಲಿರುವ ಘಟಕದ ಸಂಖ್ಯೆಯನ್ನು ಬಾಟಲಿಯಲ್ಲಿ ನಮೂದಿಸಿರುತ್ತಾರೆ. ಆಲ್ಕೊಹಾಲ್‌ನ ಸೇವನೆಯ ಪ್ರಮಾಣವನ್ನು ನಿಯಂತ್ರಿಸಲು ಈ ವ್ಯವಸ್ಥೆಯು ಜನರಿಗೆ ಸಹಕಾರಿಯಾಗಿದೆ; ಇದರಿಂದ ಸೇವಿಸುವ ಗಾತ್ರವನ್ನು ಕಂಡುಹಿಡಿಯಲಾಗುವುದಿಲ್ಲ.

ಸಂಯುಕ್ತ ಸಂಸ್ಥಾನಗಳಲ್ಲಿ ಆಲ್ಕೊಹಾಲ್‌‌ನ ಗುಣಮಟ್ಟವು 0.6 US fluid ounces (18 ml)ದಷ್ಟು ಆಲ್ಕೊಹಾಲನ್ನು ಹೊಂದಿದೆ. ಇದು 12-US-fluid-ounce (350 ml) ಗಾಜಿನ ಲೋಟದಲ್ಲಿರುವ ಬಿಯರ್‌, 5-US-fluid-ounce (150 ml) ಗಾಜಿನ ಲೋಟದಲ್ಲಿರುವ ವೈನ್‌, ಅಥವಾ 1.5-US-fluid-ounce (44 ml) ಗಾಜಿನ ಲೋಟದಲ್ಲಿರುವ 40% ಎಬಿವಿ (80 ಪ್ರೂಫ್) ಮದ್ಯ ಸಾರದಲ್ಲಿನ ಆಲ್ಕೊಹಾಲ್‌‌ನ ಪ್ರಮಾಣವಾಗಿದೆ.

ಬಳಕೆಯ ಗಾತ್ರಗಳು

ಯುಕೆಯಲ್ಲಿ ಕಾನೂನುಬದ್ಧವಾದ ಜಾಗಗಳಲ್ಲಿ ಬಳಸುವ ಗಾತ್ರವನ್ನು ವೈಟ್ಸ್ ಆ್ಯಂಡ್‌ ಮೆಸರ್ಸ್ ಆ್ಯಕ್ಟ್‌ (1985)ನಡಿಯಲ್ಲಿ ನಿಯಂತ್ರಿಸಲಾಗುತ್ತದೆ. ಮದ್ಯ ಸಾರ (ಜಿನ್, ವಿಸ್ಕಿ, ರಮ್, ಮತ್ತು ವೊಡ್ಕಾ)ವನ್ನು 25 ಮಿ.ಲೀ ಅಥವಾ 35 ಮಿ.ಲೀ ಅಥವಾ ಅವುಗಳ ಗುಣಾತ್ಮಕವಾಗಿ ನೀಡಲಾಗುತ್ತದೆ.[೭] ಬಿಯರ್‌ನ್ನು ಪಿಂಟ್‌ಗಳಲ್ಲಿ (568 ಮಿ.ಲೀ) ಕೊಡಲಾಗುತ್ತದೆ. ಆದರೆ ಇದನ್ನೂ ಅರ್ಧ ಪಿಂಟ್‌ಗಳು ಮತ್ತು ಮೂರನೇ ಒಂದು ಭಾಗ ಪಿಂಟ್‌ಗಳಷ್ಟನ್ನೂ ಕೊಡಲಾಗುತ್ತದೆ.

ಐರ್ಲ್ಯಾಂಡ್‌ ಗಣಾರಾಜ್ಯದಲ್ಲಿ 37.5 ಮಿ.ಲೀ ಅಥವಾ ಅದರ ಗುಣಾತ್ಮಕ ಘಟಕಗಳನ್ನು ಬಳಸುತ್ತಾರೆ. ಬಿಯರ್‌‌ನ್ನು ಸಾಮಾನ್ಯವಾಗಿ 400 ಅಥವಾ 500 ಮಿ.ಲೀಯಷ್ಟನ್ನು ಲೋಟಗಳಲ್ಲಿ ಬಳಸುತ್ತಾರೆ. ಆದರೆ ಇದು ಒಂದು ಲೀಟರ್‌ ಅಥವಾ ಅದಕ್ಕಿಂತ ಹೆಚ್ಚಿರುತ್ತದೆ.

ನೆದರ್‌ಲ್ಯಾಂಡ್ಸ್ ಮತ್ತು ಬೆಲ್ಜಿಯಮ್‌ಗಳಲ್ಲಿ 250 ಮತ್ತು 500 ಮಿ.ಲೀಯಷ್ಟನ್ನು ಪಿಲ್‍ಸ್ನರ್‌ಗಳಲ್ಲಿ; 300 ಮತ್ತು 330 ಮಿ.ಲೀ ಯಷ್ಟನ್ನು ಏಲ್‌ಗಳಲ್ಲಿ ಬಳಸುತ್ತಾರೆ.

ಸುಗಂಧಗಳು

ಅಗತ್ಯವಾದ ಎಣ್ಣೆ ಮತ್ತು ಕೊಬ್ಬಿನ ಪದಾರ್ಥಗಳೊಂದಿಗೆ ಆಲ್ಕೊಹಾಲ್‌ ಮಧ್ಯಮವಾದ ದ್ರಾವಕವಾಗಿದೆ. ಈ ಗುಣವು ಆಲ್ಕೊಹಾಲ್‌ಯುಕ್ತ ಪಾನೀಯ, ವಿಶೇಷವಾಗಿ ಬಟ್ಟಿ ಇಳಿಸಿದ ಪಾನೀಯಗಳನ್ನು ಸುಂಗಂಧಯುಕ್ತಗೊಳಿಸಲು ಮತ್ತು ಬಣ್ಣ ನೀಡಲು ಉಪಯುಕ್ತವಾಗಿದೆ. ಸುಗಂಧಗಳು ಪಾನೀಯಗಳ ಮೂಲದ್ರವ್ಯಗಳಲ್ಲಿ ಸೈಸರ್ಗಿಕವಾಗಿ ಮೊದಲೇ ಇರಬಹುದಾಗಿದೆ. ಬಿಯರ್‌ ಮತ್ತು ವೈನ್‌ಗಳು‌ ಹುಳಿಯುವಿಕೆಯ ಮೊದಲು ಸುಗಂಧವನ್ನು ಹೊಂದಿರಬಹುದು. ಮದ್ಯ ಸಾರಗಳು ಮೊದಲು, ಭಟ್ಟಿ ಇಳಿಸುವಾಗ ಅಥವಾ ನಂತರ ಸುಗಂಧವನ್ನು ಹೊಂದಿರಬಹುದು.

ಕೆಲವೊಮ್ಮೆ ಪಾನೀಯಗಳನ್ನು ಓಕ್‌ ಪೀಪಾಯಿಗಳಲ್ಲಿ ಹೆಚ್ಚಾಗಿ ಅಮೇರಿಕಾದ ಅಥವಾ ಫ್ರೆಂಚ್‌ ಓಕ್‌ಗಳಲ್ಲಿ ತಿಂಗಳು ಅಥವಾ ವರ್ಷಗಟ್ಟಲೆ ಇಡಲಾಗುತ್ತದೆ.

ಕೆಲವು ಬ್ರಾಂಡಿನ ಮದ್ಯ ಸಾರಗಳನ್ನು ಬಾಟಲಿಯಲ್ಲಿ ತುಂಬುವಾಗ ಹಣ್ಣಿನ ಅಥವಾ ಗಿಡಮೂಲಿಕೆಯನ್ನು ಸೇರಿಸುತ್ತಾರೆ.

ಉಪಯೋಗಗಳು

ಅನೇಕ ದೇಶಗಳಲ್ಲಿ, ಜನರು ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ಮಧ್ಯಾಹ್ನದ ಊಟದ ವೇಳೆ ಮತ್ತು ರಾತ್ರಿಯ ಊಟದ ಸಮಯದಲ್ಲಿ ಕುಡಿಯುತ್ತಾರೆ. ಅಧ್ಯಯನದ ಪ್ರಕಾರ ಆಲ್ಕೊಹಾಲ್‌ಗಿಂತ ಮೊದಲು ಸೇವಿಸಿದ ಊಟವು ಆಲ್ಕೊಹಾಲ್ ಸೇವನೆಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ [೮] ಮತ್ತು ರಕ್ತದಲ್ಲಿ ಆಲ್ಕೊಹಾಲ್‌ನ ಹೊರಹೋಗುವ ಪ್ರಮಾಣವು ಹೆಚ್ಚಿರುತ್ತದೆ‌. ಆಲ್ಕೊಹಾಲ್‌ ಹೊರಹಾಕುವ ಪ್ರಮಾಣವು ಸೇವಿಸಿದ ಆಹಾರವನ್ನವಲಂಬಿಸಿರುವಂತೆ ಕಾಣುವುದಿಲ್ಲ. ಆಹಾರವು ರಕ್ತದಲ್ಲಿ ಆಲ್ಕೊಹಾಲ್‌ನ್ನು ಜೀರ್ಣಗೊಳಿಸುವ ಚಯಾಪಚಯ ಕಿಣ್ವಗಳನ್ನು ಮತ್ತು ಯಕೃತ್ತಿನಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.[೮]

ಸಾರ್ವಜನಿಕ ನಿರ್ಮಲೀಕರಣ ಕಡಿಮೆಯಿರುವ ಸಂದರ್ಭ ಮತ್ತು ಸಮಯದಲ್ಲಿ (ಅದೆಂದರೆ ಯೂರೋಪಿನ ಮಧ್ಯಕಾಲೀನ) ನೀರಿನಿಂದ ಹರಡಬಹುದಾದ ಸಾಂಕ್ರಾಮಿಕ ರೋಗವಾದ ಕಾಲರಾವನ್ನು ತಡೆಯಲು ಸೇವಿಸುತ್ತಿದ್ದರು. ಚಿಕ್ಕ ಬಿಯರ್‌ ಮತ್ತು ಫೊ ವೈನ್‌ಗಳನ್ನು ವಿಶೇಷವಾಗಿ ಈ ಉದ್ದೇಶಕ್ಕೆ ಬಳಸಲಾಗುತಿತ್ತು. ಆಲ್ಕೊಹಾಲ್‌ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದಾದರೂ ಪಾನೀಯದಲ್ಲಿರುವ ಇದರ ಕಡಿಮೆ ಸಾಂದ್ರತೆಯು ಸೀಮಿತ ಪರಿಣಾಮಗಳನ್ನು ಹೊಂದಿದೆ. ಪ್ರಮುಖವಾಗಿ ಕುದಿಯುವ ನೀರು (ಬಿಯರ್‌ ತಯಾರಿಕೆಯಲ್ಲಿ ಅಗತ್ಯವಿರುವ) ಮತ್ತು ಯೀಸ್ಟ್‌ನ ಬೆಳವಣಿಗೆ (ಬಿಯರ್‌ನ ಮತ್ತು ವೈನ್‌ನ‌ ಹುಳಿಯುವಿಕೆಗೆ ಅಗತ್ಯವಿರುವ) ಹಾನಿಕಾರಕವಾದ ಸೂಕ್ಷ್ಮ ಜೀವಿಗಳನ್ನು ಕೊಲ್ಲುತ್ತದೆ. ಪಾನೀಯಗಳಲ್ಲಿನ ಆಲ್ಕೊಹಾಲ್‌ ಪ್ರಮಾಣವು ಮರದ ಅಥವಾ ಮಣ್ಣಿನ ಪಾತ್ರೆಯಲ್ಲಿಟ್ಟರೂ ಹಾಳಾಗದೆ ಉಳಿಯಲು ಕಾರಣವಾಗಿದೆ. ಈ ಕಾರಣಕ್ಕಾಗಿಯೇ ವಿದೇಶಿ ಹಾಯಿಗಳ ಸಹಾಯದಿಂದ ಚಲಿಸುವ ಹಡಗುಗಳು ವಿಶೇಷವಾಗಿ ಪ್ರಾರಂಭಿಕ ಆಧುನಿಕ ಸಮಯದ ಯಾನದಲ್ಲಿ ಇದನ್ನು ಪ್ರಮುಖವಾದ (ಅಥವಾ ಅವಿಬಾಜ್ಯ ಅಂಗದಂತೆ) ಜಲಸಂಚಯ ಮೂಲವಾಗಿ ಸಂಗ್ರಹಸಿಟ್ಟುಕೊಂಡಿರುತ್ತಿದ್ದರು.

ತಂಪಾದ ಪಾನೀಯದಲ್ಲಿ, ಸಮಂಜಸವಾದ ಆಲ್ಕೊಹಾಲ್‌ಯುಕ್ತ ಪಾನೀಯವೆಂದರೆ ವೊಡ್ಕಾ. ಇದನ್ನು ಸಾಮಾನ್ಯವಾಗಿ ದೇಹವನ್ನು ಬಿಸಿಗೊಳಿಸುವ ಪಾನೀಯವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಆಲ್ಕೊಹಾಲ್‌ ದೇಹದಲ್ಲಿ ಶಕ್ತಿಯ ಮೂಲವಾಗಿ ಬಹಳ ಬೇಗ ಸೇರಿಕೊಳ್ಳುತ್ತದೆ, ಮತ್ತು ಇದು ಸುತ್ತಮುತ್ತಲಿನ ರಕ್ತನಾಳಗಳನ್ನು ಹಿಗ್ಗಿಸುತ್ತದೆ. (ಸುತ್ತಲಿನ ನಾಳದ ಹಿಗ್ಗುವಿಕೆ). ಇದು ಒಂದು ತಪ್ಪು ತಿಳುವಳಿಕೆಯಾಗಿದ್ದು, "ಶಾಖ"ವು ದೇಹದ ಒಳಭಾಗದಿಂದ ಅದರ ಹೊರಭಾಗಕ್ಕೆ ಬದಲಾವಣೆಯಾಗುತ್ತದೆ ಮತ್ತು ಈ ಶಾಖವು ವಾತಾವರಣದಲ್ಲಿ ಬಹಳ ಬೇಗ ಲೀನವಾಗುತ್ತದೆ. ಲಘು ಉಷ್ಣತೆಗಿಂತ ಹಾಯಾಗಿಸುತ್ತದೆ ಎನ್ನುವುದೇ ಮುಖ್ಯ ಕಾರಣವಾಗಿರುತ್ತದೆ. ಇದು ಕಳವಳ ಪಡುವಂತಹ ವಿಷಯವಾಗಿದೆ.

ದೇಶಗಳಲ್ಲಿ ಆಲ್ಕೊಹಾಲ್‌ ಸೇವನೆ

ದೇಶದಲ್ಲಿ ಪ್ರತಿ ವರ್ಷಕ್ಕೆ ಲೀಟರಿನಲ್ಲಿ ಶುದ್ಧ ಆಲ್ಕೊಹಾಲ್‌‌ನ ತಲಾ ಸೇವನೆ(15 ಅಥವಾ ಹೆಚ್ಚಿನ ವಯಸ್ಸು).[೯]

ಆಲ್ಕೊಹಾಲ್‌‌ ಅನ್ನು ಪೂರ್ಣವಾಗಿ ನಿಷೇಧಿಸಿರುವ ದೇಶಗಳು

ಕೆಲವು ದೇಶಗಳು ಆಲ್ಕೊಹಾಲ್‌ಯುಕ್ತ ಪಾನೀಯವನ್ನು ನಿಷೇಧಿಸಿವೆ ಅಥವಾ ಹಿಂದೆ ನಿಷೇಧಿಸಿದ್ದವು.

ಭಾರತ

ಭಾರತದ ಕೆಲವು ರಾಜ್ಯಗಳಲ್ಲಿ ಆಲ್ಕೊಹಾಲ್‌ಯುಕ್ತ ಪಾನೀಯಗಳನ್ನು ನಿಷೇಧಿಸಲಾಗಿದೆ, ಉದಾ: ಗುಜರಾತ್ ಮತ್ತು ಮಿಜೊರಾಮ್. ಕೆಲವು ರಾಷ್ಟ್ರೀಯ ದಿನಗಳಾದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿ ( ಮಹಾತ್ಮ ಗಾಂಧಿಯವರ ಜನ್ಮ ದಿನ) ಯನ್ನು ದೇಶದಾದ್ಯಂತ ಪಾನನಿರೋಧವಿರುವ ದಿನವನ್ನಾಗಿ ಆಚರಿಸಲಾಗುತ್ತದೆ. ಆಂಧ್ರ ಪ್ರದೇಶದ ಮುಖ್ಯ ಮಂತ್ರಿಗಳಾದ ಎನ್.ಟಿ ರಾಮ ರಾವ್‌ರವರು ನಿಷೇಧ ವಿಧಿಸಿದರು, ಆದರೆ ಆನಂತರ ತೆಗೆಯಲಾಯಿತು. ಮತದಾನದ ದಿನವನ್ನೂ ಸಹ ಪಾನ ನಿಷೇಧ ದಿನವನ್ನಾಗಿ ಆಚರಿಸಲಾಗುತ್ತದೆ. 1996ರಿಂದ 1998ರ ವರೆಗೆ ಹರಿಯಾಣದಲ್ಲಿ ನಿಷೇಧ ಜಾರಿಯಲ್ಲಿತ್ತು. ಅಕ್ರಮವಾಗಿ ಮಾರಾಟ ಮಾಡಿದ ಕಳ್ಳಭಟ್ಟಿ ಸೇವನೆಯಿಂದ ಜುಲೈ2009 ಘಟನೆಯ ನಂತರ ಗುಜರಾತಿನಲ್ಲಿ ಪಾನ ನಿಷೇಧವು ವಿವಾದಾಸ್ಪದವಾಯಿತು.[೧೦] ಭಾರತದ ಎಲ್ಲಾ ರಾಜ್ಯಗಳಲ್ಲೂ ಅಲ್ಲಿನ ಪ್ರಸಿದ್ಧ ಹಬ್ಬಗಳ/ವಿಶೇಷ-ಘಟನೆಯ ದಿನದಂದು ಪಾನ ನಿಷೇಧವನ್ನು ಆಚರಿಸಲಾಗುತ್ತದೆ.

ಉತ್ತರ ಭಾಗದ ರಾಷ್ಟ್ರಗಳು

ಎರಡು ನಾರ್ಡಿಕ್ ರಾಷ್ಟ್ರಗಳಾದ (ಫಿನ್‌ಲ್ಯಾಂಡ್[೧೧], ಮತ್ತು ನಾರ್ವೆ[೧೨])20ನೇ ಶತಮಾನದ ಸಮಯದಲ್ಲಿ ಆಲ್ಕೊಹಾಲ್‌‍ನ್ನು ನಿಷೇಧಗೊಳಿಸಿದ್ದವು. ಇದು ಸಮಾಜಿಕ ಪಜಾಪ್ರಭುತ್ವದ ಚಳುವಳಿಗಳ ಫಲವಾಗಿದೆ. ನಿಷೇಧವು ಜನಪ್ರಿಯವಾದ ಬೆಂಬಲವನ್ನು ಪಡೆಯಲಿಲ್ಲ ಮತ್ತು ದೊಡ್ಡ ಪ್ರಮಾಣದ ಕಳ್ಳಸಾಗಣೆಗೆ ಮೂಲವಾಯಿತು.

ಸ್ವೀಡನ್‌ನಲ್ಲಿ ನಿಷೇಧವನ್ನು ಬಹಳವಾಗಿ ಚರ್ಚಿಸಲಾಯಿತಾದರೂ ಜಾರಿಗೆ ಬರಲಿಲ್ಲ, ಆದರೆ ನಿಯಂತ್ರಿತ ವಿತರಣೆ ಮಾಡಲಾಯಿತಾದರೂ ನಂತರ ನಿಯಂತ್ರಣ ಸಡಿಲವಾಯಿತು. ನಂತರ ಆಲ್ಕೊಹಾಲ್‌‌ನ್ನು ಶನಿವಾರದಂದು ಮಾರಾಟ ಮಾಡಲು ಅನುಮತಿಸಲಾಯಿತು.

ನಿಷೇಧವು ಕೊನೆಗೊಂಡ ನಂತರ, ಸರ್ಕಾರವು ಆಲ್ಕೊಹಾಲ್‌ ಏಕಸ್ವಾಮ್ಯವನ್ನು ಪಡೆಯಿತು ಮತ್ತು ವಿವರವಾದ ಸೂಚನೆಗಳನ್ನು ನೀಡಿ ಹೆಚ್ಚಿನ ಸುಂಕವನ್ನು ವಿಧಿಸಿತು. ಕೆಲವು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಉದಾ: ಫಿನ್‌ಲ್ಯಾಂಡಿನ ಸೂಪರ್‌ಮಾರ್ಕೇಟುಗಳಲ್ಲಿ 4.7% ಎಬಿವಿಯ ವರೆಗಿನ ಆಲ್ಕೊಹಾಲ್‌ ಪ್ರಮಾಣವನ್ನು ಹೊಂದಿರುವ ಪಾನೀಯಗಳ ಮಾರಾಟವನ್ನು ಅನುಮತಿಸಲಾಗಿದೆ, ಆದರೆ ಸರ್ಕಾರೀ ಸ್ವಾಮ್ಯದ ಆಲ್ಕೊಗೆ ಮಾತ್ರ ವೈನ್‌ ಮತ್ತು ಮದ್ಯ ಸಾರಗಳನ್ನು ಮಾರಲು ಅನುಮತಿಸಲಾಗಿದೆ. ಸ್ವೀಡಿಷ್‌ನ ಸಿಸ್ಟಮ್‌ಬೊಲಗೆಟ್ ಮತ್ತು ನಾರ್ವೆಯ ವಿನ್‌ಮೊನೊಪೊಲೆಟ್‌ಗಳೂ ಇದೇ ಮಾದರಿಯಲ್ಲಿವೆ.

ಅಮೆರಿಕಾ ಸಂಯುಕ್ತ ಸಂಸ್ಥಾನ

ನಿಷೇಧದ ಯುಗದಲ್ಲಿ ಡೆಕ್ಟ್ರೊಯಿಟ್ ಪೋಲೀಸ್ ಗುಪ್ತ ಬಟ್ಟಿಮನೆಯಲ್ಲಿರುವ ಸಾಧನಗಳನ್ನು ಪರಿಶೀಲಿಸುತ್ತಿರುವುದು.

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ 1920ರಿಂದ 1933ರ ವರೆಗೂ ಆಲ್ಕೊಹಾಲ್‌ಯುಕ್ತ ಪಾನೀಯಗಳ ರಾಷ್ಟ್ರೀಯ ಮಾರಾಟ ಮತ್ತು ತಯಾರಿಕೆಯನ್ನು ನಿಷೇಧಿಸುವ ಪ್ರಯತ್ನವು ನಡೆದಿತ್ತು. ಈ ಕಾಲವನ್ನು ನಿಷೇಧಯುಗ ವೆಂದು ಕರೆಯಲಾಯಿತು. ಆ ಸಮಯದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಸಂವಿಧಾನದ 18ನೇ ತಿದ್ದುಪಡಿಯಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದಾದ್ಯಂತ ಆಲ್ಕೊಹಾಲ್‌ಯುಕ್ತ ಪಾನೀಯಗಳ ತಯಾರಿಕೆ, ಮಾರಾಟ ಮತ್ತು ಸಾಗಣೆಯನ್ನು ಕಾನೂನು ಬಾಹಿರವನ್ನಾಗಿಸಿದರು.

ನಿಷೇಧವು ಕಾನೂನನ್ನು ಅಗೌರವ ತೋರುವ ಅನುದ್ದಿಷ್ಟ ಘಟನೆಗಳಿಗೆ ಕಾರಣವಾಯಿತು. ಅನೇಕರು ಅಕ್ರಮ ಮೂಲಗಳಿಂದ ಆಲ್ಕೊಹಾಲ್‌ಯುಕ್ತ ಪಾನೀಯವನ್ನು ತರಿಸಿಕೊಂಡರು. ಈ ರೀತಿಯಾಗಿ ಲಾಭಕರ ವ್ಯವಹಾರವು ಅಕ್ರಮ ತಯಾರಕರನ್ನು ಮತ್ತು ಆಲ್ಕೊಹಾಲ್‌ ಮಾರಾಟಗಾರರನ್ನು ತಯಾರಿಸಿತು ಮತ್ತು ವ್ಯವಸ್ಥಿತ ಅಪರಾಧ ಕೃತ್ಯಗಳನ್ನು ಬೆಳೆಸಿತು. ಹೀಗಾಗಿ ನಿಷೇಧವು ಅಪಖ್ಯಾತಿಯನ್ನು ಪಡೆಯಿತು ಮತ್ತು 1933ರಲ್ಲಿ 18ನೇ ತಿದ್ದುಪಡಿಯನ್ನು ತೆಗೆದುಹಾಕುವಂತೆ ಮಾಡಿತು.

19ನೇ ಶತಮಾನದ ಕೊನೆಯ ಆರಂಭದಲ್ಲಿ ನಿಷೇಧಕ್ಕಿಂತ ಮೊದಲು ಅನೇಕ ರಾಜ್ಯಗಳು ಮತ್ತು ಸ್ಥಳೀಯರು ತಮ್ಮ ಪ್ರದೇಶಗಳಲ್ಲಿ ನಿಷೇಧವನ್ನು ಜಾರಿಗೊಳಿಸಿದ್ದರು. 18ನೇ ತಿದ್ದುಪಡಿಯನ್ನು ರದ್ದುಗೊಳಿಸಿದ ನಂತರ ಕೆಲವು ಸ್ಥಳೀಯರು (ಪಾನನಿಷೇಧ ದೇಶ/ಡ್ರೈ ಕಂಟ್ರೀಸ್‌ಗಳೆಂದು ಪ್ರಸಿದ್ಧವಾದ) ಆಲ್ಕೊಹಾಲ್‌ ಮಾರಾಟ ನಿಷೇಧವನ್ನು ಮುಂದುವರೆಸಿದರು.

ಇತರ ದೇಶಗಳು

ಇಸ್ಲಾಂ ನಿಷೇಧಿಸುವುದರಿಂದ, ಕೆಲವು ಮುಸ್ಲಿಮ್‌ ರಾಷ್ಟ್ರಗಳಾದ ಸೌದಿ ಅರೇಬಿಯಾ, ಕುವೈತ್, ಸುಡಾನ್, ಮತ್ತು ಲಿಬ್ಯಾ ಆಲ್ಕೊಹಾಲ್‌ಯುಕ್ತ ಪಾನೀಯಗಳ ತಯಾರಿಕೆ, ಮಾರಾಟ, ಮತ್ತು ಸೇವನೆಯನ್ನು ನಿಷೇಧಿಸುತ್ತವೆ.

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ನಿಷೇಧ

ಆಸ್ಟ್ರೇಲಿಯಾದ ವಿಕ್ಟೋರಿಯಾದ ಸಾರ್ವಜನಿಕ ಸ್ಥಳಗಳಲ್ಲಿ ಆಲ್ಕೊಹಾಲ್‌ ಸೇವನೆಯ ನಿಷೇಧದ ಚಿಹ್ನೆ

ಡೆನ್ಮಾರ್ಕ್‌

ಸಾಮಾನ್ಯವಾಗಿ ಮದ್ಯಪಾನದಂತಹ ಅಲ್ಕೋಹಾಲ್ ಉಳ್ಳ ಪಾನೀಯಗಳನ್ನು ಬೀದಿಯಲ್ಲಿ ಕುಡಿಯುವುದು ಕಾನೂನು ಸಮ್ಮತವೇ. ಆದರೆ, ನೀವು 18ವರ್ಷ ತುಂಬಿದವರಾಗಿರಬೇಕು. ಸಮಸ್ಯಾಸ್ಪದ ಪ್ರದೇಶಗಳಲ್ಲಿ ಕೆಲವೊಮ್ಮೆ ಇನ್ನೂ ಹೆಚ್ಚಿನ ನಿರ್ಬಂಧಗಳು ಸ್ಥಳೀಯ ಪ್ರಾಧಿಕಾರಗಳಿಂದ ವಿಧಿಸಲ್ಪಡುತ್ತವೆ. ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಾಮಾನ್ಯವಾಗಿ ಅಲ್ಕೋಹಾಲ್ ಕುಡಿಯಲು ಅನುಮತಿಯಿದ್ದರೂ ಕುಡಿತದ ನಂತರದ ಮಿತಿಮೀರಿದ ನಡವಳಿಕೆಯು ನಿರ್ಬಂಧಕ್ಕೊಳಪಟ್ಟಿದೆ.

ಭಾರತ

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ನಿಷೇಧಿಸಲ್ಪಟ್ಟಿದೆ.

ಜಪಾನ್‌

ಸಾರ್ವಜನಿಕ ಪ್ರದೇಶಗಳಾದ ಕೆಲವು ರಸ್ತೆಗಳು, ರೈಲುಗಳಲ್ಲಿ ಮದ್ಯತುಂಬಿದ ತೆರೆದ ಪಾತ್ರೆಗಳಲ್ಲಿ ಮದ್ಯ ಮಾರಾಟಕ್ಕೆ ಜಪಾನ್ ಅನುಮತಿ ನೀಡಿದೆ ಹಾಗೂ ರಾತ್ರಿ ವೇಳೆ ನಿಗದಿತ ಸಮಯದಲ್ಲಿ ಮುಚ್ಚಲ್ಪಡುವ ಮಾರಾಟಗಾರ ಯಂತ್ರಗಳ ಮೂಲಕ ಆಲ್ಕೋಹಾಲ್ ಬೆರೆತ ಪಾನೀಯಗಳನ್ನು ಮಾರಲಾಗುತ್ತಿದೆ. ಜಪಾನ್‌ನಲ್ಲಿ ಸಾರ್ವಜನಿಕ ಕುಡಿತವೊಂದು ವಿವಾದಾತ್ಮಕ ಅಂಶವೇ ಅಲ್ಲ.

ನೆದರ್‌ಲ್ಯಾಂಡ್ಸ್

ರಾಷ್ಟ್ರೀಯ ಕಾನೂನು ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಕುಡಿತವು ನಿಷೇಧಕ್ಕೊಳಪಟ್ಟಿಲ್ಲ. ಆದರೆ ಹೆಚ್ಚಿನ ನಗರ ಮತ್ತು ಪಟ್ಟಣಗಳು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಯುಕ್ತ ಪಾನೀಯಗಳನ್ನು ತೆರೆದ ಸೀಸೆಗಳಲ್ಲಿ ತುಂಬಿಡುವುದನ್ನು ನಿಷೇಧಿಸಿವೆ.

ಯುನೈಟೆಡ್ ಕಿಂಗ್‍ಡಂ

ರಾಷ್ಟ್ರೀಯ ಕಾನೂನು ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಕುಡಿತವು ನಿಷೇಧಕ್ಕೊಳಪಟ್ಟಿಲ್ಲ. ಆದರೆ ಹೆಚ್ಚಿನ ನಗರ ಮತ್ತು ಪಟ್ಟಣಗಳು ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಯುಕ್ತ ಪಾನೀಯಗಳನ್ನು ತೆರೆದ ಸೀಸೆಗಳಲ್ಲಿ ತುಂಬಿಡುವುದನ್ನು ನಿಷೇಧಿಸಿವೆ.

ಅಮೆರಿಕಾ ಸಂಯುಕ್ತ ಸಂಸ್ಥಾನ

ಸಾರ್ವಜನಿಕ ಸ್ಥಳಗಳಾದ ರಸ್ತೆಗಳು ಮತ್ತು ಪಾರ್ಕ್‌ಗಳಲ್ಲಿ ಅಲ್ಕೋಹಾಲ್ ಕುಡಿಯುವುದು ಹೆಚ್ಚಿನ ಸಂಯುಕ್ತ ಸಂಸ್ಥಾನಗಳಲ್ಲಿ ಕಾನೂನಿಗೆ ವಿರೋಧ. ಅಲ್ಲದೆ, (ನೇವಾಡಾ, ಲ್ಯೂಸಿಯಾನಾ, ಮತ್ತು ಮಿಸ್ಸೌರಿ) ಇಂತಹ ನಿಷೇಧ ಹೇರದ ರಾಜ್ಯಗಳಲ್ಲಿ ಅದರ ಹೆಚ್ಚಿನ ಎಲ್ಲಾ ಜಿಲ್ಲೆಗಳು [ಕೌಂಟಿ] ಮತ್ತು ನಗರಗಳು ಈ ಕೆಲಸವನ್ನು ಮಾಡುತ್ತವೆ.

ಈ ಕೆಳಗಿನ ಸ್ಥಳಗಳಲ್ಲಿ 21ವರ್ಷಕ್ಕೆ ಮೇಲ್ಪಟ್ಟ ವ್ಯಕ್ತಿಗಳು ರಸ್ತೆಗಳಲ್ಲಿ ಮದ್ಯ ತುಂಬಿದ ಪ್ಲಾಸ್ಟಿಕ್ ಕಪ್‌ಗಳನ್ನು ಹೊಂದಿರಬಹುದಾಗಿದೆ.

  • ಸಿಟಿ ಆಫ್ ನ್ಯೂ ಒರ್ಲೀನ್ಸ್‌ನಲ್ಲಿ
  • ಮಿಸ್ಸೌರಿಯ ಕನ್ಸಾಸ್ ನಗರದ ಪವರ್ ಮತ್ತು ಲೈಟ್ ಜಿಲ್ಲೆಗಳಲ್ಲಿ
  • ಟೆನೆಸ್ಸೀ ರಾಜ್ಯದ ಮೆಂಫಿಸ್ ನಗರದ ಬೀಲೆ ರಸ್ತೆಗಳಲ್ಲಿ
  • ಜಿಯಾರ್ಜಿಯದ ಸವನ್ನಾ
  • ನೆವಾಡದ ಲಾಸ್ ವೇಗಸ್ ನಗರದ ಲಾಸ್ ವೇಗಸ್ ಸ್ಟ್ರಿಪ್

ವಯಸ್ಸಿನ ನಿರ್ಬಂಧಗಳು

ಹೆಚ್ಚಿನ ದೇಶಗಳಲ್ಲಿ ಮದ್ಯಕುಡಿತಕ್ಕೆ ಸಂಬಂಧಿಸಿದಂತೆ ಕಾನೂನು ಸಮ್ಮತ ವಯಸ್ಸನ್ನು ನಿಗದಿಪಡಿಸಿದ್ದು ಅಲ್ಕೋಹಾಲ್‌ಯುಕ್ತ ಪಾನೀಯಗಳನ್ನು ಅಪ್ರಾಪ್ತವಯಸ್ಕರಿಗೆ ಮಾರಾಟಮಾಡುವುದನ್ನು ನಿಷೇಧಿಸಲಾಗಿದೆ. ಈ ನಿಷೇಧವು ಕೊನೆಗೊಳ್ಳುವ ವಯಸ್ಸು ಹಾಗೂ ಹೇರಲಾದ ಈ ನಿಷೇಧದ ಪ್ರಮಾಣವು ದೇಶದಿಂದ ದೇಶಕ್ಕೆ ಗಮನಾರ್ಹವಾಗಿ ಭಿನ್ನವಾಗಿದೆ.

ಅರ್ಜೈಂಟೈನಾ

ಅರ್ಜೆಂಟೈನದಲ್ಲಿ ಅಲ್ಕೋಹಾಲ್ ಕೊಂಡುಕೊಳ್ಳುವ ಕನಿಷ್ಟ ವಯಸ್ಸು 18ವರ್ಷಗಳು. ಈ ವಯಸ್ಸಿಗಿಂತ ಕಡಿಮೆ ವಯಸ್ಸಿನ ಜನರಿಗೆ ಮದ್ಯಯುಕ್ತ ಪಾನೀಯಗಳನ್ನು ಮಾರಾಟಮಾಡುವುದು ಕಾನೂನುಬಾಹಿರ.[೧೩] ಆದರೂ ಇದನ್ನು ಬಳಸುವುದಕ್ಕೆ ವಯಸ್ಸಿನ ನಿರ್ಬಂಧವಿಲ್ಲ.

ಆಸ್ಟ್ರೇಲಿಯಾ

ಆಸ್ಟ್ರೇಲಿಯದಲ್ಲಿ ಅಲ್ಕೋಹಾಲ್ ಕೊಂಡುಕೊಳ್ಳುವ (ಕುಡಿಯುವುದಕ್ಕೆ ಅಲ್ಲ) ಕನಿಷ್ಟ ವಯಸ್ಸು 18ವರ್ಷಗಳು.

ನ್ಯೂ ಸೌತ್ ವೇಲ್ಸ್ ಮತ್ತು ಕ್ವೀನ್ಸ್‌ಲ್ಯಾಂಡ್‌ನಲ್ಲಿ 18ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ ಮದ್ಯ ಮಾರಾಟ ಮಾಡುವುದು ಕಾನೂನು ಬಾಹಿರ.

ವಿಕ್ಟೋರಿಯದಲ್ಲಿ ಯಾವುದೇ ವಯಸ್ಸಿನ ವ್ಯಕ್ತಿಯು ತನ್ನ ಖಾಸಗಿ ಆಸ್ತಿಯಲ್ಲಿ ಮದ್ಯಪಾನ ಮಾಡಬಹುದು. ಹೆತ್ತವರ ಒಪ್ಪಿಗೆಯಿಲ್ಲದೇ ಅಥವಾ ಅವರ ಗಮನಕ್ಕೆ ತಾರದೇ 18ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ ಖಾಸಗಿ ಆಸ್ತಿಯಲ್ಲಿ ಮದ್ಯಮಾರಾಟ ಮಾಡುವುದು ಕೂಡಾ ವಿಕ್ಟೋರಿಯದಲ್ಲಿ ಕಾನೂನು ಸಮ್ಮತವಾಗಿದೆ.

ಕೆನಡಾ

ಕೆನಡದ ಅಲ್ಬರ್ಟ, ಮನಿಟೋಬ ಮತ್ತು ಕ್ವಿಬೆಕ್‌ ಪ್ರಾಂತ್ಯಗಳಲ್ಲಿ ಮದ್ಯಪಾನ ಮಾಡುವ ಕಾನೂನು ಸಮ್ಮತ ವಯಸ್ಸು 18ವರ್ಷಗಳು ಮತ್ತು ಇನ್ನುಳಿದ ಪ್ರಾಂತ್ಯಗಳಲ್ಲಿ ಅದು 19ವರ್ಷಗಳು.[೧]

ಯುರೋಪ್‌

ಯುರೋಪ್‌ನಲ್ಲಿ ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು ಮತ್ತು ಮದ್ಯಯುಕ್ತ ಪಾನೀಯಗಳನ್ನು ಕೊಂಡುಕೊಳ್ಳುವ ವಯಸ್ಸಿನ ಪರಿಮಿತಿಯು ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಕಾನೂನುಬದ್ಧ ಮದ್ಯಪಾನ ಮಾಡುವ ವಯಸ್ಸು ಸಾಮಾನ್ಯವಾಗಿ 16 ರಿಂದ 18ವರ್ಷಗಳು.

ಕೆಲವೊಂದು ದೇಶಗಳು ಪ್ರಬಲ ಮದ್ಯಯುಕ್ತ ಪಾನೀಯಗಳನ್ನು ವೃದ್ಧ ವಯಸ್ಕರಿಗೆ ಮಾರುವುದರ ಮಿತಿಯನ್ನು ನಿಗದಿಪಡಿಸಲು ಹಲವು ಶ್ರೇಣಿಗಳುಳ್ಳ ರಚನಾಸೂತ್ರಗಳನ್ನು ಹೊಂದಿವೆ. (ವಿಶಿಷ್ಟವಾಗಿ ಎಬಿವಿ ಯ ಶೇಕಡಾವಾರು ಪ್ರಮಾಣದ ಅಧಾರದ ಮೇಲೆ). ಉದಾಹರಣೆಗೆ, ಆಸ್ಟ್ರಿಯಾ, ಬೆಲ್ಜಿಯಂ ಮತ್ತು ಜರ್ಮನಿ[೧೪], ನೆದರ್‌ಲ್ಯಾಂಡ್ಸ್, ಮತ್ತು ಸ್ವಿಟ್ಜರ್‌ಲ್ಯಾಂಡ್‌ಗಳಲ್ಲಿ ಬಿಯರ್ ಅಥವಾ ಮದ್ಯವನ್ನು ಕೊಂಡುಕೊಳ್ಳುವವರು 16ವರ್ಷಗಳು ಮತ್ತು ವಯಸ್ಸಿನವರಾಗಿರಬೇಕು ಮತ್ತು ಸ್ಪಿರಿಟ್ ಕೊಳ್ಳಲು 18 ವರ್ಷ ವಯಸ್ಸಾಗಿರಬೇಕು.

ಜರ್ಮನಿಯ ಕಾನೂನುಗಳು ಅಲ್ಕೋಹಾಲ್ ಪಾನೀಯಗಳ ಮಾರಾಟಗಾರರನ್ನು ನಿಯಂತ್ರಿಸಲು ರಚಿತವಾಗಿದ್ದು ಇದು ಕಿರಿಯ ವಯಸ್ಸಿನವರಿಗಲ್ಲ. ಜರ್ಮನಿಯ ಕಾನೂನುಗಳು ಆಲ್ಕೋಹಾಲ್ ಪಾನೀಯಗಳ ಬಳಕೆಯ ನಿಯಂತ್ರಣವನ್ನು ಹೆತ್ತವರ ಮತ್ತು ರಕ್ಷಕರ ಕೈಯಲ್ಲಿಟ್ಟಿದೆ.[೧೫]

ಜೆಕ್ ಗಣರಾಜ್ಯದಲ್ಲಿ, ಐರ್‌ಲ್ಯಾಂಡ್, ಪೋಲಂಡ್ ಮತ್ತು ಸ್ಲೊವೇಕಿಯ ಗಣರಾಜ್ಯಗಳಲ್ಲಿ ಕಾನೂನು ಸಮ್ಮತ ಮದ್ಯಪಾನ ಮಾಡುವ ವಯಸ್ಸು 18ವರ್ಷಗಳು.

ಫ್ರಾನ್ಸ್‌‌

2009ರ ಜುಲೈ 23ರಂದು ಫ್ರಾನ್ಸ್‌ನಲ್ಲಿ ಮದ್ಯ ಕೊಂಡುಕೊಳ್ಳುವ ಕಾನೂನುಬದ್ಧ ವಯಸ್ಸು 17 ರಿಂದ 18ವರ್ಷಗಳಿಗೆ ವಿಸ್ತರಿಸಲ್ಪಟ್ಟಿತು.

ಹಾಂಕಾಂಗ್

ಹಾಂಗ್‌ಕಾಂಗ್‌ನಲ್ಲಿ ಮದ್ಯ ಕೊಂಡುಕೊಳ್ಳುವ, ಮದ್ಯವನ್ನು ಇಟ್ಟುಕೊಳ್ಳುವ, ಮತ್ತು ಮದ್ಯ ಸೇವಿಸುವ ಕಾನೂನುಬದ್ಧ ವಯಸ್ಸು 18ವರ್ಷಗಳು.

ಭಾರತ

ಭಾರತದಲ್ಲಿ ಮದ್ಯ ಕೊಂಡುಕೊಳ್ಳುವ ಮತ್ತು ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು ಬೇರೆ ಬೇರೆ ರಾಜ್ಯಗಳಿಗನುಗುಣವಾಗಿ 18 ರಿಂದ 25ವರ್ಷಗಳು.[೧]

ಸಾಮಾನ್ಯವಾಗಿ ಭಾರತದಲ್ಲಿನ ಬಾರ್ ಮತ್ತು ಪಬ್‌ಗಳಲ್ಲಿ ಸೂಚನಾ ಫಲಕದಲ್ಲಿ ಕಾನೂನು ಒಪ್ಪಿಗೆ ನೀಡಿದ ವಯಸ್ಸಿನವರಿಗೆ ಮಾತ್ರ ಪ್ರವೇಶ ಎಂದು ಸೂಚಿಸಲಾಗಿರುತ್ತದೆ. ಆದರೆ ಕಾನೂನನ್ನು ಪಾಲಿಸುವುದು ಕಡಿಮೆ ಪ್ರಮಾಣದಲ್ಲಿರುತ್ತದೆ. ಏಕೆಂದರೆ ಹೆಚ್ಚಿನ ಎಲ್ಲ ಯುವ ಸಮುದಾಯದವರು ಇಲ್ಲಿಯೇ ತಮ್ಮ ಜನ್ಮದಿನಾಚರಣೆಯ ಸಂಭ್ರಮವನ್ನು ಆಚರಿಸುತ್ತಾರೆ.

ಇಟಲಿ

ಇಟಲಿಯಲ್ಲಿ ಮದ್ಯ ಕೊಂಡುಕೊಳ್ಳುವ ಮತ್ತು ಮದ್ಯ ಮಾರಾಟಮಾಡುವ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾನೂನುಬದ್ಧ ವಯಸ್ಸು 16 ವರ್ಷಗಳು. ಆದರೂ, ಇಟಲಿಯಲ್ಲಿ ಕಾನೂನುಬದ್ಧವಾಗಿ ಮದ್ಯ ಕುಡಿಯುವ ಕನಿಷ್ಠ ವಯಸ್ಸು 14 ವರ್ಷಗಳು. ಇಲ್ಲಿ ಗಮನಿಸಲೇಬೇಕಾದ ಅಂಶವೇನೆಂದರೆ, ಈ ಕಾನೂನುಗಳನ್ನು ಅಪರೂಪಕ್ಕೆ ವಿಧಿಸಲಾಗುತ್ತದೆ. ಮದ್ಯಯುಕ್ತ ಪಾನೀಯಗಳ ಮಾರಾಟವು ನಿಷೇಧಕ್ಕೊಳಪಟ್ಟಿಲ್ಲ ಮತ್ತು ಇವು ಕೊಳ್ಳುಗರ ವಯಸ್ಸಿನ ಪರಿಮಿತಿಯನ್ನು ಕೇಳದೇ ಇರುವಂತಹ ಸಾಮಾನ್ಯ ದಿನಸಿ ಅಂಗಡಿಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಇದನ್ನು ಮಾರಲಾಗುತ್ತದೆ.

ಬಾರ್‌ಗಳಲ್ಲಿ ಮಾರಾಟಮಾಡುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಯುಕ್ತ ಪಾನೀಯಗಳನ್ನು ಮಾರಲು ಪರವಾನಗಿ ಹೊಂದಿರಬೇಕಾಗುತ್ತದೆ.

ಜಪಾನ್‌

ಜಪಾನ್‌ನಲ್ಲಿ ಮದ್ಯ ಕೊಂಡುಕೊಳ್ಳುವ ಮತ್ತು ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು 20 ವರ್ಷಗಳು.

ಕೊರಿಯಾ

ಕೊರಿಯದಲ್ಲಿ ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು 19ವರ್ಷಗಳು. ಆದರೂ, ಪ್ರೌಢಶಿಕ್ಷಣ ಪದವೀಧರರ ವಯಸ್ಸು 18ವರ್ಷ ಮೇಲ್ಪಟ್ಟಿದ್ದರೂ ಇಲ್ಲಿ ಪ್ರೌಢಶಿಕ್ಷಣ ಪದವಿಯನ್ನು ಪಡೆದವರು ಮದ್ಯಪಾನ ಮಾಡುವುದು ಎಲ್ಲರೂ ಒಪ್ಪತಕ್ಕ ವಿಷಯ.

ಉತ್ತರ ಭಾಗದ ರಾಷ್ಟ್ರಗಳು

ಉತ್ತರ ಭಾಗದ ದೇಶಗಳಲ್ಲಿ (ಡೆನ್ಮಾರ್ಕ್‌ನ ಹೊರತಾಗಿ) ಮದ್ಯಪಾನ ಮಾಡುವ ಕಾನೂನುಬದ್ಧ ವಯಸ್ಸು 18ವರ್ಷಗಳು, ಆದರೆ, ಈ ಹಕ್ಕುಗಳು ಸುಮಾರು 20ವರ್ಷಗಳವರೆಗೂ ಸೀಮಿತಗೊಳಿಸಲ್ಪಡುತ್ತವೆ.

ಐಸ್‌ಲ್ಯಾಂಡ್ ಮತ್ತು ಸ್ವೀಡನ್‌ಗಳಲ್ಲಿ ಮದ್ಯಯುಕ್ತ ಪಾನೀಯಗಳನ್ನು ಕೊಂಡುಕೊಳ್ಳುವವರು ಮತ್ತು ಅದನ್ನು ಇಟ್ಟುಕೊಳ್ಳುವವರು 20ವರ್ಷ ವಯಸ್ಸಿನವರಾಗಿರಲೇಬೇಕು, ಆದರೂ 18-ಮತ್ತು 19-ವರ್ಷ ಪ್ರಾಯದ ವ್ಯಕ್ತಿಗಳು ಮದ್ಯಪಾನ ಮಾಡಬಹುದಾಗಿದೆ. ಅಲ್ಲದೆ, ಸ್ವೀಡನ್‌ನಲ್ಲಿ 18 ವರ್ಷ ವಯಸ್ಸಿನವರು ರಾಜ್ಯಸರಕಾರ ನಿರ್ವಹಿಸುವ ಅಂಗಡಿಗಳ ವಿನಹ ಇತರ ದಿನಸಿ ಅಂಗಡಿಗಳಲ್ಲಿ ಮಾರಾಟ ಮಾಡುವ ಮದ್ಯಯುಕ್ತ ಪಾನೀಯಗಳನ್ನು ಕಾನೂನುಬದ್ಧವಾಗಿ ಕೊಂಡುಕೊಳ್ಳಬಹುದು.

ಫಿನ್‌ಲ್ಯಾಂಡ್‌ ಮತ್ತು ನಾರ್ವೆಯಲ್ಲಿ 22% ಎಬಿವಿ ಉಳ್ಳ ಮದ್ಯಯುಕ್ತ ಪಾನೀಯಗಳನ್ನು ಕೊಂಡುಕೊಳ್ಳುವ ಮತ್ತು ಇಟ್ಟುಕೊಳ್ಳುವ ಹಕ್ಕು 18ವರ್ಷ ಪ್ರಾಯದಲ್ಲಿ ಪ್ರಾರಂಭವಾಗಿದ್ದು, ಪ್ರಬಲ ಮದ್ಯಯುಕ್ತ ಪಾನೀಯಗಳಿಗೆ ಅದು 20ವರ್ಷ ಪ್ರಾಯದಿಂದ ಪ್ರಾರಂಭವಾಗುತ್ತದೆ. ಫಿನ್‌ಲ್ಯಾಂಡ್‌ ಮತ್ತು ಸ್ವೀಡನ್‍ನ ಹೊಟೇಲ್‌ಗಳಲ್ಲಿ (ನಾರ್ವೆಯಲ್ಲಿ ಅಲ್ಲ) 22% ಎಬಿವಿಗಿಂತ ಪ್ರಬಲತೆ ಹೊಂದಿದ ಪಾನೀಯಗಳನ್ನು ಆದೇಶಿಸಲು 18 ವರ್ಷ ವಯಸ್ಸು ಮೀರಿರಬೇಕು.

ಡೆನ್ಮಾರ್ಕ್‌

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರಿಗೆ ಮದ್ಯಯುಕ್ತ (1.2% ಎಬಿವಿಗಿಂತ ಪ್ರಭಲವಾದ) ಪಾನೀಯಗಳನ್ನು ಮಾರಾಟ ಮಾಡುವುದನ್ನು ಡೆನ್ಮಾರ್ಕ್ ನಿಷೇಧಿಸಿದೆ.[೧೬] ಅಂಗಡಿಗಳಲ್ಲಿ ಆಲ್ಕೋಹಾಲ್ ಕೊಂಡುಕೊಳ್ಳುವ ಕಾನೂನುಬದ್ಧ ವಯಸ್ಸು 16 ವರ್ಷಗಳು ಹಾಗೂ ಹೊಟೇಲ್ ಮತ್ತು ಬಾರ್‌ನಲ್ಲಿ ಕೊಂಡುಕೊಳ್ಳುವ ವಯಸ್ಸು 18 ವರ್ಷಗಳು.

ಪೋರ್ಚುಗಲ್

ಪೋರ್ಚುಗಲ್‌ನಲ್ಲಿ ಮದ್ಯಯುಕ್ತ ಪಾನೀಯಗಳನ್ನು ಖರೀದಿಸಲು ಜನರು ಕನಿಷ್ಟ 16 ವರ್ಷ ವಯಸ್ಸಿನವರಾಗಿರಬೇಕು.

ಯುನೈಟೆಡ್‌ ಕಿಂಗ್‌ಡಮ್

ಯುನೈಟೆಡ್ ಕಿಂಗ್‍ಡಮ್‍ನಲ್ಲಿ ಆಲ್ಕೋಹಾಲ್ ಕುಡಿಯಲು ಕನಿಷ್ಠ ವಯಸ್ಸು 5 ವರ್ಷಗಳು (ಖಾಸಗಿಯಾಗಿ). ಪರವಾನಿಗಿ ಹೊಂದಿದ ಪ್ರದೇಶಗಳಲ್ಲಿ (ಪಬ್/ಬಾರ್/ಹೊಟೇಲ್) ಊಟದೊಂದಿಗೆ ಕುಡಿಯಲು 16 ಅಥವಾ 17 ವರ್ಷಗಳಾಗಿರಬೇಕು. ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಪ್ರೌಢ ವಯಸ್ಕರಿಗೆ ಮಾತ್ರ ಆದೇಶಿಸಬಹುದು, ಸ್ಕಾಟ್‌ಲ್ಯಾಂಡ್‌ನಲ್ಲಿ ಪ್ರೌಢ ವಯಸ್ಕರಿರಬೇಕೆಂದೇನೂ ಇಲ್ಲ.

ಪರವಾನಿಗಿ ಹೊಂದಿರದ ಅಂಗಡಿಗಳಿಂದ ಅಥವಾ ಸೂಪರ್‌ಮಾರ್ಕೆಟ್‍ಗಳಿಂದ ಮದ್ಯ ಖರೀದಿಸಲು ಕನಿಷ್ಠ ವಯಸ್ಸು 18 ವರ್ಷಗಳು.

18 ವರ್ಷಕ್ಕಿಂತ ಕೆಳಗಿನ ಅಂಗಡಿ ಕೆಲಸಗಾರರು ಕಾನೂನುಬದ್ಧವಾಗಿ ಮದ್ಯ ಮಾರಾಟಮಾಡಬಾರದು.

ಸಂಪೂರ್ಣ ಮಾಹಿತಿಗಾಗಿ, "ಲೀಗಲ್ ಡ್ರಿಂಕಿಂಗ್ ಏಜ್-ಯುರೋಪ್" ನ್ನು ನೋಡಿ.

ಅಮೆರಿಕಾ ಸಂಯುಕ್ತ ಸಂಸ್ಥಾನ

ಜನವರಿ 1, 2007ರಂತೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಕನಿಷ್ಠ 18 ವರ್ಷಗಳ ಆಲ್ಕೊಹಾಲ್‌ ಸೇವನೆಯ ವಿನಾಯಿತಿ.

ತಮ್ಮ ಸರಕಾರದ ಹೆದ್ದಾರಿಗೆ ಬಳಸಲಾದ ನಿಧಿ ಉಪಯೋಗಿಸುವ ನಿರ್ಬಂಧಕ್ಕೊಳಪಟ್ಟ ರಾಜ್ಯಗಳು ಮದ್ಯಪಾನದ ಕನಿಷ್ಠ ವಯಸ್ಸನ್ನು 21 ವರ್ಷಕ್ಕೆ ಸೀಮಿತಗೊಳಿಸುವಂತೆ ಆದೇಶ ಜಾರಿಗೊಳಿಸಿದ "ಕುಡಿತದ ಕನಿಷ್ಠ ವಯಸ್ಸಿನ ರಾಷ್ಟ್ರೀಯ ಕಾಯಿದೆ - 1984 (ನ್ಯಾಷನಲ್ ಮಿನಿಮಮ್ ಡ್ರಿಂಕಿಂಗ್ ಏಜ್ ಆಕ್ಟ್ - 1984)" ಯು ಜಾರಿಗೆ ಬಂದ ತಕ್ಷಣ ಮದ್ಯವನ್ನು ಖರೀದಿಸುವ ಮತ್ತು ಇಟ್ಟುಕೊಳ್ಳುವ ಕನಿಷ್ಟ ಕಾನೂನುಬದ್ಧ ವಯಸ್ಸು ಎಲ್ಲಾ ರಾಜ್ಯಗಳಲ್ಲಿ 21ವರ್ಷಗಳಿಗೆ ನಿಗದಿಗೊಳಿಸಲ್ಪಟ್ಟಿತು.

17 ರಾಜ್ಯಗಳು (ಅರ್ಕನ್ಸಾಸ್, ಕ್ಯಾಲಿಫೋರ್ನಿಯ, ಕನೆಕ್ಟಿಕಟ್, ಫ್ಲೋರಿಡ, ಕೆಂಟಕಿ, ಮೆರಿಲ್ಯಾಂಡ್, ಮಸ್ಸಾಚುಸೆಟ್ಸ್, ಮಿಸ್ಸಿಸ್ಸಿಪ್ಪಿ, ಮಿಸ್ಸೌರಿ, ನೆವಾಡ, ನ್ಯೂ ಹ್ಯಾಂಪ್‍ಶಯರ್, ನ್ಯೂ ಮೆಕ್ಸಿಕೋ, ನ್ಯೂಯಾರ್ಕ್, ಒಕ್ಲಹಾಮ, ರೋಡ್‍ಐಲ್ಯಾಂಡ್, ಸೌತ್ ಕೆರೊಲಿನ ಮತ್ತು ವಯೋಮಿಂಗ್) ಮತ್ತು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯ ಅಪ್ರಾಪ್ತ ವಯಸ್ಕರು ಮದ್ಯವನ್ನು ಹೊಂದಿರುವುದರ ವಿರುದ್ಧ ಕಾನುನು ಜಾರಿಗೊಳಿಸಿವೆ. ಆದರೆ, ಅಪ್ರಾಪ್ತ ವಯಸ್ಕರು ಮದ್ಯವನ್ನು ಬಳಸುವುದನ್ನು ನಿಷೇಧಿಸಿಲ್ಲ.

ಹದಿಮೂರು ರಾಜ್ಯಗಳು (ಅಲಸ್ಕ, ಕೊಲರೇಡೊ, ಡೆಲವೇರ್, ಇಲಿನಾಯ್, ಲುಯಿಸಿಯಾನ,ಮೈನ್ ಮಿನ್ನೆಸೊಟ, ಮಿಸ್ಸೌರಿ, ಮೊಂಟಾನ, ಒಹಯೊ, ಒರಿಗನ್, ಟೆಕ್ಸಾಸ್ ಮತ್ತು ವಿಸ್ಕೋನ್‍ಸನ್) ಅಪ್ರಾಪ್ತವಯಸ್ಕರು, ತಮ್ಮ ಹೆತ್ತವರಿಂದ ಅಥವಾ, ಹೆತ್ತವರಿಂದ ಅನುಮೋದಿಸಲ್ಪಟ್ಟ ವ್ಯಕ್ತಿಗಳಿಂದ ನೀಡಲ್ಪಟ್ಟ ಮದ್ಯಯುಕ್ತ ಪಾನೀಯಗಳನ್ನು ಕುಡಿಯಲು ತನ್ನ ನಿರ್ದಿಷ್ಟ ಅನುಮತಿಯನ್ನು ನೀಡಿವೆ.

21 ವರ್ಷ ವಯಸ್ಸಿನ ಕೆಳಗಿನ ವ್ಯಕ್ತಿಗಳು ಯಾವುದೇ ಧಾರ್ಮಿಕ ಅಥವಾ ಆರೋಗ್ಯದ ಕಾರಣಗಳಿಗಾಗಿ ಮದ್ಯಪಾನ ಮಾಡುವುದಕ್ಕೆ ಹೆಚ್ಚಿನ ಎಲ್ಲಾ ರಾಜ್ಯಗಳು ತಮ್ಮ ಅನುಮತಿಯನ್ನು ನೀಡಿವೆ.

ಯುನೈಟೆಡ್ ಸ್ಟೇಟ್ಸ್‌ನ ಭೂಪ್ರದೇಶದ ಪ್ಯೂರ್ಟೋ ರಿಕೊ, ಮದ್ಯಪಾನ ಮಾಡುವ ಕನಿಷ್ಠ ವಯಸ್ಸನ್ನು 18 ವರ್ಷಕ್ಕೆ ಸೀಮಿತಗೊಳಿಸಿದೆ.

ಯುನೈಟೆಡ್ ಸ್ಟೇಟ್ಸ್‌ನ ಕಸ್ಟಮ್ಸ್ ಕಾನೂನುಗಳು 21ವರ್ಷಗಳಿಗಿಂತ ಕಡಿಮೆ ವಯಸ್ಸಿನ ಜನರು ಯಾವುದೇ ವಿಧದ ಮತ್ತು ಯಾವುದೇ ಪ್ರಮಾಣದ ಆಲ್ಕೋಹಾಲ್‌ನ್ನು ತಮ್ಮ ದೇಶದೊಳಗೆ ತರುವುದನ್ನು ನಿಷೇಧಿಸಿವೆ.[೧೭]

ಉತ್ಪಾದನೆಯ ಮೇಲೆ ಹೇರಿದ ನಿರ್ಬಂಧಗಳು

ಹೆಚ್ಚಿನ ರಾಷ್ಟ್ರಗಳಲ್ಲಿ ಆಲ್ಕೋಹಾಲ್ ಪಾನೀಯಗಳ ವಾಣಿಜ್ಯ ಉತ್ಪಾದನೆಗೆ ಸರಕಾರದಿಂದ ಪರವಾನಿಗಿ ಪಡೆದಿರಬೇಕು ಹಾಗೂ ಈ ಪಾನೀಯಗಳ ಉತ್ಪಾದನೆಯ ಮೇಲೆ ನಿಗದಿತ ಸುಂಕ ವಿಧಿಸಲ್ಪಡುತ್ತದೆ. ಇನ್ನೂ ಹೆಚ್ಚಿನ ರಾಷ್ಟ್ರಗಳಲ್ಲಿ ಮದ್ಯಯುಕ್ತ ಪಾನೀಯಗಳು ವೈಯಕ್ತಿಕ ಬಳಕೆಗೆ ಉಪಯೋಗಿಸುವಂತೆ, ಯಾವುದೇ ಪರವಾನಿಗಿಯಿಲ್ಲದೇ, ತೆರಿಗೆರಹಿತವಾಗಿ ಮನೆಯಲ್ಲೇ ತಯಾರಾಗುತ್ತವೆ.

ಡೆನ್ಮಾರ್ಕ್‌

ವೈನ್ ಮತ್ತು ಬಿಯರ್‌ಗಳನ್ನು ಮನೆಯಲ್ಲೇ ತಯಾರಿಸುವುದು ಯಾವುದೇ ನಿರ್ಬಂಧಕ್ಕೊಳಪಟ್ಟಿಲ್ಲ. ಮನೆಯಲ್ಲಿ ಸ್ಪಿರಿಟ್‌‍‌ಗಳ ಬಟ್ಟಿಯಿಳಿಸುವಿಕೆಯು ಕಾನೂನು ಸಮ್ಮತವೇ ಆದರೂ ಇದಕ್ಕೆ ವಾಣಿಜ್ಯ ಕ್ಷೇತ್ರದಲ್ಲಿ ಮಾರಲ್ಪಡುವ ಸ್ಪಿರಿಟ್‌ನಷ್ಟೇ ತೆರಿಗೆಯನ್ನು ಕಟ್ಟಬೇಕಾದುದರಿಂದ ಸಾಮಾನ್ಯವಾಗಿ ಈ ತಯಾರಿಕೆ ಅಪರೂಪ. ಡಾನಿಶ್ ಆಲ್ಕೋಹಾಲ್ ತೆರಿಗೆಗಳು ಸ್ವೀಡನ್ ಮತ್ತು ನಾರ್ವೆಗಳಲ್ಲಿನ ತೆರಿಗೆಗಳಿಗಿಂತ ಕಡಿಮೆಯಾಗಿದ್ದು, ಇದು ಇತರ ಯುರೋಪಿನ ರಾಷ್ಟ್ರಗಳ ತೆರಿಗೆಗಿಂತ ಅಧಿಕವಾಗಿದೆ.

ನ್ಯೂಜಿಲೆಂಡ್‌

ವೈಯಕ್ತಿಕ ಬಳಕೆಗಾಗಿ ಸ್ಪಿರಿ‍ಟ್‌‌ನೊಂದಿಗೆ ಇತರ ಯಾವುದೇ ರೀತಿಯ ಮದ್ಯವನ್ನು ತಯಾರಿಸುವುದು ಕಾನೂನು ಸಮ್ಮತವೆಂದು ಪರಿಗಣಿಸಿದ ಹಲವು ರಾಷ್ಟ್ರಗಳಲ್ಲಿ ನ್ಯೂಜಿಲ್ಯಾಂಡ್ ಕೂಡಾ ಒಂದು. ಉತ್ಪಾದಿತ ಪಾನೀಯಗಳು ಪರವಾನಿಗಿ ಪಡೆದಿರಬೇಕಾಗಿಲ್ಲ ಹಾಗೂ ಇದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ಈ ಸನ್ನಿವೇಶವು ಮನೆಯಲ್ಲಿ ಬಳಸಬಹುದಾದ ಬಟ್ಟಿಯಿಳಿಸುವ ಯಂತ್ರವನ್ನು ಜನಪ್ರಿಯಗೊಳಿಸಿತು.

ಯುನೈಟೆಡ್‌ ಕಿಂಗ್‌ಡಮ್

ಯುನೈಟೆಡ್ ಕಿಂಗ್‍ಡಂನಲ್ಲಿ ಕಸ್ಟಮ್ಸ್ ಮತ್ತು ಎಕ್ಸೈಸ್ ತೆರಿಗೆ ಇಲಾಖೆಗಳು ಬಟ್ಟಿಯಿಳಿಸುವ ಪರವಾನಿಗಿಯನ್ನು ನೀಡುತ್ತವೆ.

ಅಮೆರಿಕಾ ಸಂಯುಕ್ತ ಸಂಸ್ಥಾನ

ಬಟ್ಟಿಯಿಳಿಸಿದ ಪಾನೀಯಗಳ ಉತ್ಪಾದನೆಯು ಸರಕಾರದ ನಿಯಂತ್ರಣಕ್ಕೊಳಪಟ್ಟು ತೆರಿಗೆಯನ್ನು ಕೂಡಾ ವಿಧಿಸಲಾಯಿತು.[೧೮] ಮದ್ಯ, ತಂಬಾಕು, ಫಿರಂಗಿ ಮತ್ತು ಸ್ಪೋಟಕಗಳ ಇಲಾಖೆ, ಹಾಗೂ ಮದ್ಯ ಮತ್ತು ತಂಬಾಕು ತೆರಿಗೆ ಮತ್ತು ವ್ಯಾಪಾರ ಇಲಾಖೆಗಳು (ಹಿಂದೆ ಇವುಗಳು ಒಂದೇ ಸಂಸ್ಥೆಯಾಗಿದ್ದು ಮದ್ಯ, ತಂಬಾಕು ಮತ್ತು ಫಿರಂಗಿಗಳ ಇಲಾಖೆ ಎಂದು ಕರೆಯಲ್ಪಡುತ್ತಿತ್ತು.) ಮದ್ಯಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ನಿಬಂಧನೆಗಳನ್ನು ವಿಧಿಸಿತು. ಎಲ್ಲಾ ಮದ್ಯಯುಕ್ತ ಉತ್ಪನ್ನಗಳನ್ನು ಕಟ್ಟುವಾಗ (ಪ್ಯಾಕಿಂಗ್) ಅದರಲ್ಲಿ ಪ್ರಧಾನ ವೈದ್ಯಾಧಿಕಾರಿಗಳಿಂದ ದೃಢೀಕರಿಸಿದ ಆರೋಗ್ಯದ ಎಚ್ಚರಿಕೆಗಳನ್ನು ಹೊಂದಿರಬೇಕು.

ಹೆಚ್ಚಿನ ಅಮೇರಿಕನ್ ರಾಜ್ಯಗಳಲ್ಲಿ ವೈಯಕ್ತಿಕ ಬಳಕೆಗಾಗಿ ಯಾವುದೇ ವ್ಯಕ್ತಿಯು ಒಂದು ವರ್ಷಕ್ಕೆ ಒಬ್ಬ ಪ್ರೌಢ ವ್ಯಕ್ತಿಗೆ ಸುಮಾರು 100 ಗ್ಯಾಲನ್‌ಗಳಷ್ಟು ಮದ್ಯ ಮತ್ತು ಬಿಯರ್‌ಗಳನ್ನು ತಯಾರಿಸಬಹುದು (ಆದರೆ, ಮಾರಾಟಕ್ಕಲ್ಲ). ಆದರೆ, ಇದು ಒಂದು ವರ್ಷಕ್ಕೆ, ಒಂದು ಮನೆಗೆ 200ಗ್ಯಾಲನ್‌ ಮೀರಬಾರದು.

ಸಾಮಾನ್ಯವಾಗಿ ಕಾನೂನುಬಾಹಿರ (ಅಂದರೆ, ಪರವಾನಿಗಿರಹಿತ) ಲಿಕರ್‌ಗಳ ಉತ್ಪಾದನೆಯು ಯುನೈಟೆಡ್ ಸ್ಟೇಟ್ಸ್‌ನಲ್ಲಿ "ಮೂನ್‌ಶೈನಿಂಗ್" ಎಂದು ಸೂಚಿಸಲ್ಪಟ್ಟಿದೆ. ಅಕ್ರಮ ತಯಾರಿಕೆಯಿಂದ ತಯಾರಾಗುವ ಲಿಕ್ಕರ್‌ಗಳು( "ವೈಟ್ ಲೈಟ್‌ನಿಂಗ್ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ) ಹೊಸದಾಗಿದ್ದು ಹೆಚ್ಚಿನ ಶೇಕಡಾವಾರು ಆಲ್ಕೋಹಾಲ್ ಪ್ರಮಾಣವನ್ನು ಹೊಂದಿರುತ್ತವೆ.

ಮಾರಾಟ ಮತ್ತು ಸ್ವಾಮ್ಯದ ಮೇಲಿನ ನಿರ್ಬಂಧಗಳು

ಕೆನಡಾ

ಕೆನಡದ ಹೆಚ್ಚಿನ ಪ್ರಾಂತ್ಯಗಳಲ್ಲಿ ಆಲ್ಕೋಹಾಲ್ ಮಾರಾಟವು ಸರಕಾರದ ಏಕಸ್ವಾಮ್ಯಕ್ಕೊಳಪಟ್ಟಿದೆ. ಓಂಟಾರಿಯೋದ ಲಿಕ್ಕರ್ ಕಂಟ್ರೋಲ್ ಬೋರ್ಡ್ ಮತ್ತು ಬ್ರಿಟಿಷ್ ಕೊಲಂಬಿಯಾದ ಲಿಕ್ಕರ್ ಡಿಸ್ಟ್ರಿಬ್ಯೂಷನ್ ಶಾಖೆಗಳು ಇದಕ್ಕೆ ಎರಡು ಉದಾಹರಣೆಗಳು. ಮದ್ಯ ಮಾರಾಟದ ಮೇಲಿನ ಸರಕಾರದ ನಿರ್ಬಂಧ ಮತ್ತು ಮೇಲ್ವಿಚಾರಣೆಯು ಕೆನಡದಲ್ಲಿನ ನಿರ್ಬಂಧಗಳನ್ನು ಕೊನೆಗೊಳಿಸಲು 1920ರಲ್ಲಿ "ಡ್ರೈ" ಮತ್ತು "ವೆಟ್ಸ್" ಮಧ್ಯೆ ನಡೆದ ಒಪ್ಪಂದದ ತಂತ್ರವಾಗಿದೆ. ಕೆಲವು ಪ್ರಾಂತ್ಯಗಳು ಸರಕಾರದ ಈ ಏಕಸ್ವಾಮ್ಯದಿಂದ ಹೊರಬಂದಿವೆ. ಆಲ್ಬರ್ಟದಲ್ಲಿ ಖಾಸಗಿ ಅಧೀನಕ್ಕೊಳಪಟ್ಟ ಲಿಕ್ಕರ್ ಅಂಗಡಿಗಳು ಕಂಡುಬಂದಿದ್ದು ಕ್ವಿಬೆಕ್‌ನಲ್ಲಿ ಕೆಲವೇ ಸಂಖ್ಯೆಯ ಮದ್ಯ ಮತ್ತು ಲಿಕ್ಕರ್‌ ಅನ್ನು ಸಾಮಾನ್ಯ ವರ್ತಕರ ಮಾರಾಟ ಮಳಿಗೆ ಮತ್ತು ದಿನಸಿ ಅಂಗಡಿಗಳಿಂದ ಖರೀದಿಸಬಹುದಾಗಿದೆ.

ಕೆನಡವು ಜಗತ್ತಿನಲ್ಲೇ ಆಲ್ಕೋಹಾಲ್ ಮೇಲೆ ಅಧಿಕ ವಾಣಿಜ್ಯ ತೆರಿಗೆ ಹೊಂದಿರುವ ರಾಷ್ಟ್ರವಾಗಿದೆ. ಈ ತೆರಿಗೆಗಳು ಸರಕಾರದ ಆದಾಯದ ಮುಖ್ಯ ಸಂಪನ್ಮೂಲಗಳಾಗಿದೆ ಮತ್ತು ಕುಡಿತವನ್ನು ನಿರ್ಭೀತಗೊಳಿಸುತ್ತಿದೆ.

ಆಲ್ಕೋಹಾಲ್ ಮಾರಾಟದ ಮೇಲಿನ ನಿರ್ಬಂಧಗಳು ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ವೈವಿಧ್ಯವನ್ನು ಹೊಂದಿವೆ. 2008 ರಲ್ಲಿ ಆಲ್ಬರ್ಟದಲ್ಲಿ ಉಂಟಾದ ಬದಲಾವಣೆಗಳಲ್ಲಿ ಬಾರ್ ಮತ್ತು ಪಬ್‌ಗಳಲ್ಲಿ ಮುಂಜಾವಿನ ಒಂದು ಗಂಟೆಯ ನಂತರದ "ಸಂತೋಷದ ಸಮಯ" ("ಹ್ಯಾಪಿ ಅವರ್")ದ ಮೇಲಿನ ನಿರ್ಬಂಧ, ಕನಿಷ್ಠ ಬೆಲೆ, ಮತ್ತು ಒಬ್ಬ ವ್ಯಕ್ತಿ ಖರೀದಿಸಬಹುದಾದ ಪಾನೀಯದ ಸಂಖ್ಯೆಗಳ ಪರಿಮಿತಿ ಇವೆಲ್ಲವೂ ಸೇರಿವೆ.[೧೯]

ಉತ್ತರ ಭಾಗದ ದೇಶಗಳು

ಡೆನ್ಮಾರ್ಕ್‌ನ ಹೊರತಾದ ನಾರ್ಡಿಕ್‌ನ ಪ್ರತಿಯೊಂದು ರಾಷ್ಟ್ರಗಳಲ್ಲಿಯೂ ಲಿಕ್ಕರ್ ಮಾರಾಟದ ಮೇಲೆ ಸರಕಾರವು ಸಂಪೂರ್ಣ ಏಕಸ್ವಾಮ್ಯವನ್ನು ಹೊಂದಿದೆ.

ರಾಜ್ಯ ಸರಕಾರ ನಿರ್ವಹಿಸುತ್ತಿರುವ ಮಾರಾಟಗಾರರು ಸ್ವೀಡನ್‌ನಲ್ಲಿ ಸಿಸ್ಟಮ್‌ಬೊಲಗೆಟ್, ನಾರ್ವೆಯಲ್ಲಿ ವಿನ್ಮೊನೊಪೊಲೆಟ್, ಫಿನ್‌ಲ್ಯಾಂಡ್‌ನಲ್ಲಿ ಅಲ್ಕೋ, ಐಸ್‌ಲ್ಯಾಂಡ್‌ನಲ್ಲಿ ವಿನ್‌ಬ್ಯೂ ಮತ್ತು ಫಾರ್ ಐಲ್ಯಾಂಡ್‌ನಲ್ಲಿ ರುಸ್‌ಡ್ರೆಕ್ಕಸೊಲ ಲಾಂಡ್‌ಸಿನ್ ಎಂದು ಕರೆಯಲ್ಪಡುತ್ತಿದೆ. ಇಂತಹ ಏಕಸ್ವಾಮ್ಯಗಳಲ್ಲಿ ಮೊದಲನೆಯದು 19ನೇ ಶತಮಾನದಲ್ಲಿನ ಫಾಲುನ್‌ನಲ್ಲಿದ್ದುದು.

ಆಲ್ಕೋಹಾಲ್ ಬಳಕೆಯನ್ನು ಕಡಿಮೆಗೊಳಿಸುವುದು ಈ ಏಕಸ್ವಾಮ್ಯದ ಉದ್ದೇಶಗಳು ಎಂದು ಈ ರಾಷ್ಟ್ರಗಳ ಸರಕಾರಗಳು ಹೇಳಿವೆ. ನಾರ್ಡಿಕ್ ರಾಷ್ಟ್ರಗಳಲ್ಲಿ ಪಾನಕೇಳಿ (ಮದ್ಯಪಾನ ಕೂಟ, ಬಿಂಜ್) ಒಂದು ಪುರಾತನ ಸಂಪ್ರದಾಯ. ಹಿಂದಿನ ಕಾಲದಲ್ಲಿ ಈ ಏಕಸ್ವಾಮ್ಯಗಳು ಉತ್ತಮ ಯಶಸ್ಸನ್ನೇ ಕಂಡಿದ್ದು, ಯುರೊಪಿಯನ್ ಯೂನಿಯನ್‌ಗೆ ಸೇರಿದ ನಂತರ ಇಯು ರಾಷ್ಟ್ರಗಳಿಂದ ಆಮದಾಗುವ ಕಾನೂನುಬದ್ಧ ಅಥವಾ ಅಕ್ರಮ ಲಿಕ್ಕರ್‌ನ ಮೇಲೆ ನಿಯಂತ್ರಣ ಸಾಧಿಸಲು ಇದಕ್ಕೆ ಕಷ್ಟವಾಯಿತು. ಇದರಿಂದ ಮಿತಿಮೀರಿದ ಮದ್ಯ ಸೇವನೆಯ ಮೇಲೆ ನಿಯಂತ್ರಣ ಸಾಧಿಸಲು ಈ ಏಕಸ್ವಾಮ್ಯವು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿತು.

ರಾಜ್ಯಸರಕಾರದ ನಿರ್ವಹಣೆಯಿಂದ ನಡೆಸಲ್ಪಡುವ ಈ ಏಕಸ್ವಾಮ್ಯವನ್ನು ಉಳಿಸುವ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ.

ನಾರ್ವೆ

ನಾರ್ವೆಯಲ್ಲಿ 4.74% ಅಥವಾ ಇದಕ್ಕಿಂತ ಕಡಿಮೆ ಪ್ರಮಾಣದ ಆಲ್ಕೋಹಾಲ್ ಹೊಂದಿರುವ ಬಿಯರ್‌ಗಳನ್ನು ದಿನಸಿ ಅಂಗಡಿಗಳಲ್ಲಿ ಮಾರುವುದು ಕಾನೂನುಬದ್ಧ ಎಂದು ಪರಿಗಣಿಸಲ್ಪಟ್ಟಿದೆ. ಪ್ರಬಲವಾದ ಬಿಯರ್‌ಗಳು ಮತ್ತು ಸ್ಪಿರಿಟ್‌ಗಳನ್ನು ಸರಕಾರದ ಸ್ವಾಮ್ಯಕ್ಕೊಳಪಟ್ಟ ಮಾರಾಟಗಾರರಲ್ಲಿ ಮಾತ್ರ ಖರೀದಿಸಬಹುದಾಗಿತ್ತು. ಎಲ್ಲಾ ಆಲ್ಕೋಹಾಲ್‌ಯುಕ್ತ ಪಾನೀಯಗಳನ್ನು ಪರವಾನಿಗಿ ಹೊಂದಿದ ಬಾರ್ ಮತ್ತು ಹೊಟೇಲ್‌ಗಳಲ್ಲಿ ಮಾತ್ರ ಖರೀದಿಸಬಹುದಾಗಿದ್ದು ಇವನ್ನು ಈ ಪ್ರದೇಶದಲ್ಲಿ ಮಾತ್ರ ಬಳಸಬೇಕಾಗಿತ್ತು.

ನಾರ್ವೆಯು ಆಲ್ಕೋಹಾಲ್‌ಯುಕ್ತ ಪಾನೀಯಗಳ ಮೇಲೆ ಅದರಲ್ಲೂ, ಸ್ಪಿರಿಟ್ ಮೇಲೆ ಜಗತ್ತಿನಲ್ಲೇ ಅಧಿಕಪ್ರಮಾಣದ ತೆರಿಗೆ ವಿಧಿಸುವ ರಾಷ್ಟ್ರವಾಗಿದೆ. ಈ ತೆರಿಗೆಯು ಎಲ್ಲಾ ಸಾಮಾನು, ಸರಂಜಾಮು ಮತ್ತು ಇತರ ಸೇವೆಗಳ ಮೇಲೆ 25% ವ್ಯಾಟ್ ತೆರಿಗೆಯನ್ನೂ ಹೊಂದಿದೆ. ಉದಾಹರಣೆಗೆ, 700 ಮಿಲಿಲೀಟರ್ ಎಬ್‌ಸಾಲ್ಟ್ ವೋಡ್ಕವು ಈಗ 275ಎನ್‌ಒಕೆ ಬೆಲೆಯದ್ದಾಗಿದ್ದು 54 ಯುಎಸ್ ಡಾಲರ್‌ಗೆ ಮಾರಲ್ಪಡುತ್ತದೆ.

ಸ್ವೀಡನ್‌‌

ಸ್ವೀಡನ್‌ನಲ್ಲಿ ಕಡಿಮೆ ಮಟ್ಟದ ಆಲ್ಕೋಹಾಲ್ ಹೊಂದಿರುವ ಬಿಯರ್ (ಫೋಲ್‌ಕೋಲ್, ಭಾರದಲ್ಲಿ 2.25% ರಿಂದ 3.5% ಆಲ್ಕೋಹಾಲ್‌ನ್ನು ಹೊಂದಿದೆ) ಸಾಮಾನ್ಯ ಅಂಗಡಿಗಳಲ್ಲಿ 18 ವರ್ಷ ಮೇಲ್ಪಟ್ಟ ಯಾರಿಗಾದರೂ ಮಾರಬಹುದಾಗಿತ್ತು. ಆದರೆ, ಅಧಿಕ ಪ್ರಮಾಣದ ಅಲ್ಕೋಹಾಲ್ ಹೊಂದಿರುವ ಪಾನೀಯಗಳನ್ನು 20ವರ್ಷ ಮೇಲ್ಪಟ್ಟವರು ಮಾತ್ರ ಸರಕಾರದಿಂದ ನಿರ್ವಹಿಸಲ್ಪಡುವ ಮಾರಾಟಗಾರರರಿಂದ ಅಥವಾ 18 ವರ್ಷ ಮೇಲ್ಪಟ್ಟವರು ಇತರ ಪರವಾನಿಗಿ ಹೊಂದಿದ ಬಾರ್, ಹೊಟೇಲ್‌ಗಳಿಂದಲೇ ಖರೀದಿಸಬೇಕಾಗಿತ್ತು. ಪರವಾನಿಗಿ ಹೊಂದಿದ ಪ್ರದೇಶಗಳಿಂದ ಖರೀದಿಸಿದ ಈ ಆಲ್ಕೋಹಾಲ್ ಉಳ್ಳ ಪಾನೀಯಗಳನ್ನು ಅವೇ ಸ್ಥಳಗಳಲ್ಲಿ ಸೇವಿಸಬೇಕಾಗಿದ್ದು, ಬೇರೆ ಕಡೆ ಖರೀದಿಸಿದ ಆಲ್ಕೋಹಾಲ್ ಪಾನೀಯಗಳನ್ನು ಈ ಪ್ರದೇಶದಲ್ಲಿ ಬಳಸುವುದನ್ನು ನಿಷೇಧಿಸಲಾಗಿದೆ.

ಅಮೆರಿಕಾ ಸಂಯುಕ್ತ ಸಂಸ್ಥಾನ

ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಅಪ್ರಾಪ್ತ ವಯಸ್ಕರಿಗೆ ಮಾರಾಟ ಮಾಡಿದ್ದಕ್ಕಾಗಿ ಮಿಚಿಗನ್‌ನ ಮಳಗೆಯನ್ನು ಎರಡು ವಾರಗಳ ಕಾಲ ಅಮಾನತ್ತುಗೊಳಿಸಿರುವುದು.
ಸೆಪ್ಟೆಂಬರ್ 2007ರಲ್ಲಿನ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ರಾಜ್ಯವಾರು ಒಪನ್ ಕಂಟೈರ್ ಕಾನೂನಿನ ನಕ್ಷೆ

ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಆಲ್ಕೊಹಾಲ್‌ಯುಕ್ತ ಪಾನೀಯ ಮಾರಾಟವು ಪ್ರತಿಯೊಂದು ರಾಜ್ಯದೊಳಗಡೆಯು ಸ್ವತಂತ್ರ ಅಧಿಕಾರ ಹೊಂದಿದ ಕೌಂಟೀಸ್ ಅಥವಾ ಪಾದ್ರಿಯಾಡಳಿತ ಪ್ರದೇಶಗಳಿಂದ ಮತ್ತು ಸ್ಥಳೀಯ ಕಾನೂನು ವ್ಯಾಪ್ತಿಯಿಂದ ನಿಯಂತ್ರಿಸಲ್ಪಡುತ್ತದೆ. ಆಲ್ಕೊಹಾಲ್‌ ಮಾರಾಟವನ್ನು ನಿಷೇಧಿಸಿದ ಕೌಂಟಿಯನ್ನು ಡ್ರೈ ಕೌಂಟಿ ಎಂದು ಕರೆಯಲಾಗುತ್ತದೆ. ಬ್ಲ್ಯೂ ಕಾನೂನು ಮೂಲಕ ಭಾನುವಾರ ಕೆಲವು ರಾಜ್ಯಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ಮದ್ಯ ಮಾರಾಟ ಮಾಡುವುದು ಮತ್ತು ಆಲ್ಕೋಹಾಲ್ ಹೊಂದಿರುವುದು ಇತರೆ ಎಲ್ಲಾ ರೀತಿಯ ಆಲ್ಕೋಹಾಲ್ ನಿರ್ಬಂಧದಂತೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದೆ. ನೇವಾಡಾ, ಲ್ಯೂಸಿಯಾನಾ, ಮಿಸ್ಸೌರಿ, ಮತ್ತು ಕನೆಕ್ಟಿಕಟ್‍ನಂತಹ ರಾಜ್ಯಗಳಲ್ಲಿ ಆಲ್ಕೊಹಾಲ್‌‌ಗೆ ಸಂಬಂಧಪಟ್ಟಂತೆ ಹಲವಾರು ಉದಾರವಾದ ಕಾನೂನುಗಳಿವೆ, ಆದರೆ ಕಾನ್ಸಾಸ್ ಮತ್ತು ಓಕ್ಲಹಾಮಾ ರಾಜ್ಯಗಳಲ್ಲಿ ಆಲ್ಕೊಹಾಲ್‌‌ಗೆ ಸಂಬಂಧಪಟ್ಟಂತೆ ತುಂಬಾ ಕಟ್ಟುನಿಟ್ಟಾದ ಕಾನೂನುಗಳಿವೆ.

ಉದಾಹರಣೆಗೆ, ನಾರ್ತ್ ಕೆರೋಲಿನಾದಲ್ಲಿನ ಹೆಚ್ಚಿನ ಭಾಗಗಳಲ್ಲಿ, ರಿಟೇಲ್ ಅಂಗಡಿಗಳಲ್ಲಿ ಬಿಯರ್‌ ಮತ್ತು ವೈನ್‌‍ಗಳನ್ನು ಖರೀದಿ ಮಾಡಬಹುದು, ಆದರೆ ಬಟ್ಟಿ ಇಳಿಸಿದ ಮದ್ಯಸಾರಗಳು ರಾಜ್ಯದ ಎಬಿಸಿ (ಆಲ್ಕೊಹಾಲ್‌ ಪಾನೀಯ ಅಧಿಕಾರ) ಅಂಗಡಿಗಳಲ್ಲಿ ಮಾತ್ರ ದೊರೆಯುತ್ತದೆ. ಮೇರಿಲ್ಯಾಂಡ್‌ನಲ್ಲಿ, ಬಟ್ಟಿ ಇಳಿಸಿದ ಮದ್ಯಸಾರಗಳು ಮದ್ಯದಂಗಡಿಗಳಲ್ಲಿ ದೊರೆಯುತ್ತವೆ, ಮೊಂಟೊಮೇರಿ ಕೌಂಟಿ ಹೊರತು ಪಡಿಸಿ ಇದರಿಂದಾಗಿ ಕೌಂಟಿಯಿಂದ ಮಾತ್ರ ಮಾರಾಟವಾಗುತ್ತವೆ.

ಹಲವಾರು ರಾಜ್ಯಗಳಲ್ಲಿ ಮದ್ಯವನ್ನು ಕೇವಲ ಮದ್ಯದಂಗಡಿಗಳಲ್ಲಿ ಮಾತ್ರ ಮಾರಾಟವಾಗುವುವಂತೆ ಅಪ್ಪಣೆ ಮಾಡಬಹುದು. ಹತ್ತೊಂಭತ್ತು ಆಲ್ಕೊಹಾಲ್‌ಯುಕ್ತ ಪಾನೀಯ ನಿಯಂತ್ರಣ ರಾಜ್ಯಗಳಲ್ಲಿ, ಮದ್ಯ ಮಾರಾಟದ ಮೇಲೆ ರಾಜ್ಯವು ಏಕಸಾಮ್ಯ ಹೊಂದಿದೆ. ಎಲ್ಲಿ ಮದ್ಯ ಮಾರಾಟ ಮಾಡಬೇಕೆಂಬುದನ್ನು ನೇವಾಡಾ, ಮಿಸ್ಸೌರಿ, ಮತ್ತು ಲ್ಯೂಸಿಯಾನಾ, ರಾಜ್ಯಗಳ ಕಾನೂನು ನಿರ್ದಿಷ್ಟವಾಗಿ ಸೂಚಿಸಿಲ್ಲ.

ಹೆಚ್ಚಿನ ಎಲ್ಲ ರಾಜ್ಯಗಳು ಮೂರು ಶ್ರೇಣಿ ವ್ಯವಸ್ಥೆಯನ್ನು ಅನುಸರಿಸುತ್ತವೆ. ಇದರಲ್ಲಿ ಉತ್ಪಾದಕರು ಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ಮಾರಾಟ ಮಾಡುವಂತಿಲ್ಲ, ಇದಕ್ಕೆ ಬದಲಾಗಿ ಕಡ್ಡಾಯವಾಗಿ ಹಂಚಿಕೆದಾರರಿಗೆ ಮಾರಾಟ ಮಾಡಬೇಕು. ಇವರು ಚಿಲ್ಲರೆ ಮಾರಾಟಗಾರರಿಗೆ ಮಾರಾಟ ಮಾಡಬೇಕು. ಬಟ್ಟಿ ಇಳಿಸುವ ಪಬ್‌ಗಳು (ಪಬ್‌ಗಳು ತಮ್ಮದೇ ಆದ ಬಿಯರ್ ತಯಾರಿಸುತ್ತವೆ) ಮತ್ತು ವೈನ್ ಸ್ಥಾವರಗಳಿಗೆ ಮೂರು ಶ್ರೇಣಿ ವ್ಯವಸ್ಥೆ ಅನ್ವಯಿಸುವುದಿಲ್ಲ. ಇವರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು.

ಚಲಿಸುತ್ತಿರುವ ವಾಹನಗಳೊಳಗೆ ತೆರೆದ ಪಾತ್ರೆಗಳಲ್ಲಿ ಆಲ್ಕೊಹಾಲ್ ಸಾಗಿಸಲು ಹಲವಾರು ರಾಜ್ಯಗಳು ಅನುಮತಿ ನೀಡುವುದಿಲ್ಲ. 1999ರಲ್ಲಿ ಜಾರಿಯಾದ ಟ್ವೆಂಟಿ ಫಸ್ಟ್ ಸೆಂಚುರಿ ಟ್ರಾನ್ಸ್‌ಪೋರ್ಟ್ ಇಕ್ವಿಟಿ ಆ್ಯಕ್ಟ್‌ನ ಅಧಿಕೃತ ಆದೇಶದ ಪ್ರಕಾರ ಚಲಿಸುತ್ತಿರುವ ವಾಹನಗಳೊಳಗೆ ತೆರೆದ ಪಾತ್ರೆಗಳಲ್ಲಿ ಆಲ್ಕೊಹಾಲ್ ಸಾಗಿಸುವುದನ್ನು ನಿಷೇಧಿಸದಿದ್ದರೇ, ಪ್ರತಿ ವರ್ಷದ ಆಲ್ಕೊಹಾಲ್ ಶಿಕ್ಷಣ ಯೋಜನೆಗೆ ಬದಲಾಗಿ ಇದರ ಸಂಯುಕ್ತ ಹೆದ್ದಾರಿ ನಿಧಿಗೆ ವರ್ಗಾವಣೆಯಾಗಬಹುದು. ನವೆಂಬರ್, 2007ರ ಪ್ರಕಾರ, (ಮಿಸ್ಸಿಸಿಪ್ಪಿ) ರಾಜ್ಯ ಮಾತ್ರ ವಾಹನ ಚಾಲಿಸುತ್ತಿರುವಾಗ ಚಾಲಕನಿಗೆ (0.08%ಕ್ಕಿಂತ ಕಡಿಮೆ) ಆಲ್ಕೊಹಾಲ್ ಬಳಸಲು ಅನುಮತಿ ನೀಡಿದೆ, (ಅರ್ಕಾನ್ಸಾಸ್, ಕನೆಕ್ಟಿಕಟ್, ದಿಲಾವರ್, ಮಿಸ್ಸಿಸಿಪ್ಪಿ, ಮಿಸ್ಸೌರಿ, ವರ್ಜೀನಿಯಾ, ಮತ್ತು ಪಶ್ಚಿಮ ವರ್ಜೀನಿಯಾ) ಈ ಏಳು ರಾಜ್ಯಗಳು ಮಾತ್ರ ಪ್ರಯಾಣಿಕರು ವಾಹನದಲ್ಲಿ ಪ್ರಯಾಣಿಸುತ್ತಿರುವಾಗ ಆಲ್ಕೊಹಾಲ್ ಸೇವಿಸಲು ಅನುಮತಿ ನೀಡಿವೆ.

ಸಂಯುಕ್ತ ಸಂಸ್ಥಾನದ ಕೊಲರಾಡೊ, ಕನ್ಸಾಸ್, ಮಿನ್ನೆಸೊಟಾ, ಓಕ್ಲಹಾಮಾ, ಮತ್ತು ಉತಾಹ್ ಈ ಐದು ರಾಜ್ಯಗಳು ಕಿರಾಣಿ ಅಂಗಡಿಗಳು ಮತ್ತು ಅನಿಲ ಸ್ಟೇಷನ್‌ಗಳಲ್ಲಿ ಬಿಯರ್‌ 3.2%ಕ್ಕಿಂತ ಕಡಿಮೆ ಪ್ರಮಾಣದ ಆಲ್ಕೊಹಾಲ್‌ ಮಾರಾಟ ಮಾಡಬಹುದು. ಈ ರಾಜ್ಯಗಳ ಮದ್ಯದಂಗಡಿಗಳಲ್ಲಿ ತೀಕ್ಷ್ಣವಾದ ಪಾನೀಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಒಕ್ಲಹೋಮದಲ್ಲಿ ಮದ್ಯದಂಗಡಿಗಳು 3.2%ಕ್ಕಿಂತ ಹೆಚ್ಚಿನ ಪ್ರಮಾಣದ ಆಲ್ಕೊಹಾಲ್ ಅಂಶ ಹೊಂದಿರುವ ಯಾವುದೇ ಪಾನೀಯಗಳನ್ನು ತಂಪುಗೊಳಿಸುವುದಿಲ್ಲ‌. ಮಿಸ್ಸೌರಿ ಕೂಡ 3.2% ಬಿಯರ್‌ ಒದಗಿಸುತ್ತದೆ, ಆದರೆ ಇದರ ಉದಾರವಾದ ಆಲ್ಕೊಹಾಲ್‌ ಕಾನೂನು (ಇತರೆ ರಾಜ್ಯಗಳಿಗೆ ಹೋಲಿಸಿದಾಗ) ಈ ರೀತಿಯ ಬಿಯರ್ ತಯಾರಿಸಲು ಅನುಮತಿಸುವುದು ತುಂಬಾ ಅಪರೂಪ.

ವಾಹನ ಚಲಾವಣೆ ಮತ್ತು ಮದ್ಯಪಾನ ಕಾನೂನು

ಕುಡಿದು ವಾಹನ ಚಲಾಯಿಸುವುದರ ವಿರುದ್ಧ ಹೆಚ್ಚಿನ ಎಲ್ಲಾ ದೇಶಗಳು ಕಾನೂನು ಹೊಂದಿವೆ. ಉದಾಹರಣೆಗೆ ವಾಹನ ಚಲಾಯಿಸುವಾಗ ರಕ್ತದಲ್ಲಿ ಕೆಲವು ಪ್ರಮಾಣದ ಆಲ್ಕೊಹಾಲ್ ಅಂಶವಿದ್ದರೆ ಅಥವಾ ಆಲ್ಕೊಹಾಲ್‌ನಿಂದ ದುರ್ಬಲಗೊಂಡಿದ್ದರೇ ಈ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬಹುದಾಗಿದೆ. ಕಾನೂನು ಭಂಗ ಮಾಡಿದ್ದಕ್ಕಿರುವ ದಂಡನೆಗಳು: ದಂಡ, ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ವಾಹನ ಚಾಲನೆಯ ಪರವಾನಿಗೆ ರದ್ದು ಮಾಡುವುದು, ಮತ್ತು ಜೈಲು ಶಿಕ್ಷೆ. ಕುಡಿದು ತೇಲುವುದು, ಕುಡಿದು ಸೈಕಲ್ ಚಲಾಯಿಸುವುದು, ಮತ್ತು ರೋಲರ್‌ಬ್ಲಾಡಿಂಗ್ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ.

ರಕ್ತದಲ್ಲಿ ಆಲ್ಕೊಹಾಲ್‌ ಅಂಶವು 0.0% ರಿಂದ 0.08% ಇದ್ದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ (eight hundredths of one percent).

ಅಮೆರಿಕಾ ಸಂಯುಕ್ತ ಸಂಸ್ಥಾನದ ಹಲವು ಸ್ಥಳಗಳಲ್ಲಿ ವಾಹನದ ಪ್ರಯಾಣಿಕರ ಬೋಗಿಗಳಲ್ಲಿ ತೆರೆದ ಪಾತ್ರೆಗಳಲ್ಲಿ ಆಲ್ಕೊಹಾಲ್‌ಯುಕ್ತ ಪಾನೀಯ ಸಾಗಿಸುವುದು ಕಾನೂನು ಬಾಹಿರವಾಗಿದೆ.

ಆರೋಗ್ಯದ ಮೇಲೆ ಆಲ್ಕೊಹಾಲ್‌ ಸೇವನೆಯ ಪರಿಣಾಮಗಳು

ಆಲ್ಕೊಹಾಲ್‌ನ ಬಳಕೆಯಿಂದ ಉಂಟಾಗುವ ಕಡಿಮೆ ಅವಧಿಯ ಪರಿಣಾಮಗಳು‌ ಮತ್ತು ಬರುವುದು ಮತ್ತು ನಿರ್ಜಲೀಕರಣ. ಆಲ್ಕೊಹಾಲ್‌ ಬಳಕೆಯ ದೀರ್ಘಕಾಲದ ಪರಿಣಾಮಗಳು ಜಠರದ ಚಯಾಪಚಯ ಕ್ರಿಯೆಯಲ್ಲಿ ಮತ್ತು ಮೆದುಳಿನಲ್ಲಿ ಬದಲಾವಣೆ ಮತ್ತು ಮದ್ಯದ ಗೀಳು (ಆಲ್ಕೊಹಾಲಿಗೆ ಅಂಟಿಕೊಳ್ಳುವುದು).

ಆಲ್ಕೊಹಾಲ್ ಸೇವನೆಯಿಂದ ಮೆದುಳಿನ ಮೇಲೆ ಪರಿಣಾಮ ಬೀರಿ ತೊದಲುತ್ತ ಮಾತನಾಡುವುದು, ಮುಜುಗರ, ಮತ್ತು ಪ್ರತಿಕ್ರಿಯಿಸಲು ನಿಧಾನ ಮಾಡುವುದು ಈ ಎಲ್ಲಾ ತೊಂದರೆಗಳು ಉಂಟಾಗುತ್ತವೆ. ಆಲ್ಕೊಹಾಲ್ ಇನ್ಸುಲಿನ್ ಉತ್ಪಾದನೆಯಾಗಲು ಪ್ರಚೋದನೆ ನೀಡುತ್ತದೆ ಇದರಿಂದಾಗಿ ಗ್ಲುಕೋಸ್ ಚಯಾಪಚಯ ಕ್ರಿಯೆ ಹೆಚ್ಚಾಗಿ ರಕ್ತದಲ್ಲಿ ಸಕ್ಕರೆಯಂಶವು ಕಡಿಮೆಯಾಗುತ್ತದೆ, ಇದರ ಪರಿಣಾಮವಾಗಿ ಮುಂಗೋಪ ಉಂಟಾಗುವುದು (ಸಕ್ಕರೆ ಕಾಯಿಲೆಯವರು) ಮತ್ತು ಸಾವಿಗೂ ಕಾರಣವಾಗಬಹುದು. ತೀಕ್ಷ್ಣವಾದ ಆಲ್ಕೊಹಾಲ್‌ನಿಂದಾಗಿ ಸಾವು ಬರಬಹುದು.‌

ಪ್ರಯೋಗಕ್ಕೊಳಪಡಿಸಿದ ಪ್ರಾಣಿಗಳ ರಕ್ತದಲ್ಲಿರುವ .45%ದಷ್ಟು ಆಲ್ಕೊಹಾಲ್‌ ಅಂಶದಲ್ಲಿರುವ LD50ಯಿಂದಾಗಿ ಸಾವು ಸಂಭವಿಸುತ್ತದೆ. ಅಂದರೆ ರಕ್ತದಲ್ಲಿ .45% ಆಲ್ಕೊಹಾಲ್ ‌ಪ್ರಮಾಣ ಇದ್ದಾಗ ಪ್ರಯೋಗಕ್ಕೊಳಪಡಿಸಿದ 50%ರಷ್ಟು ಪ್ರಾಣಿಗಳು ಮರಣ ಹೊಂದಿವೆ. ಆಲ್ಕೊಹಾಲ್‌ ಸೇವನೆ ತಡೆದುಕೊಳ್ಳದ ವ್ಯಕ್ತಿಗಳಲ್ಲಿ ಸಾಮಾನ್ಯಕ್ಕಿಂತ ಆರರಷ್ಟು ಹೆಚ್ಚಿಗೆ ಮತ್ತು ಬರುವುದುರಿಂದ (0.08%) ವಾಂತಿ ಮತ್ತು ಪ್ರಜ್ಞೆ ಕಳೆದುಕೊಳ್ಳುವಿಕೆ ಬೇಗ ಕಾಣಿಸಿಕೊಳ್ಳಬಹುದು.[೨೦] ಕಾಯಂ ಆಗಿ ಹೆಚ್ಚು ಮದ್ಯ ಸೇವಿಸುವ ಕುಡುಕರಲ್ಲಿ .40%ಕ್ಕಿಂತ ಹೆಚ್ಚಿದ್ದಾಗಲು ಅವರು ಪ್ರಜ್ಞೆಯಲ್ಲಿಯೇ ಇರಬಹುದು ಆದರೆ ಈ ಮಟ್ಟದಲ್ಲಿ ತೀವ್ರವಾದ ಅನಾರೋಗ್ಯಕ್ಕೆ ತುತ್ತಾಗಬಹುದು.

ಆಲ್ಕೊಹಾಲ್‌ ಸೇವನೆಯು ಮಸ್ತಿಷ್ಕನಿಮ್ನಾಂಗ ಮತ್ತು ಹಿಂಭಾಗದ ಪಿಟ್ಯೂಟರಿ ಗ್ರಂಥಿಯಿಂದ ವ್ಯಾಸೊಪ್ರೆಷನ್ (ಒಂದು ಪಿಟ್ಯೂಟರಿ ಹಾರ್ಮೋನು (ಎಡಿಎಚ್)) ಎಂಬ ಹಾರ್ಮೋನ್ ಉತ್ಪಾದನೆಯಾಗದ ಹಾಗೆ ನಿಯಂತ್ರಿಸುತ್ತದೆ. ಹೆಚ್ಚಿನ ಪ್ರಮಾಣದ ಆಲ್ಕೊಹಾಲ್ ಸೇವನೆಯಿಂದಾಗಿ ತೀವ್ರವಾದ ನಿರ್ಜಲೀಕರಣ ಉಂಟಾಗುತ್ತದೆ. ಮೂತ್ರದಲ್ಲಿ ಹೆಚ್ಚಿನ ಪ್ರಮಾಣದ ನೀರಿರುತ್ತದೆ ಮತ್ತು ವಾಂತಿ ಮತ್ತು ತೀವ್ರವಾದ ಬಾಯಾರಿಕೆಯಿಂದಾಗಿ ಆಲಸ್ಯ ಉಂಟಾಗುತ್ತದೆ.

ಮದ್ಯದ ಗೀಳು

ಮದ್ಯದ ಗೀಳಿನ ಪ್ರವೃತ್ತಿಗೆ ಬಹುಶಃ ವಂಶವಾಹಿನಿ ಕಾರಣವಿರಬಹುದು. ಆಲ್ಕೊಹಾಲ್ ಸೇವನೆಯ ಕುರಿತಾದ ಇಚ್ಚೆಯನ್ನು ವ್ಯಕ್ತಪಡಿಸುವವನು ವಿಶಿಷ್ಟವಾದ ಜೀವರಾಸಾಯನಿಕ ಪ್ರತಿಕ್ರೆಯೆಯನ್ನು ವ್ಯಕ್ತಪಡಿಸುವವನಾಗಿರುತ್ತಾನೆ. ಇದು ಇನ್ನೂ ಚರ್ಚಿತವಾಗುತ್ತಿರುವ ವಿಷಯವಾಗಿದೆ.

ಮದ್ಯದ ಗೀಳು ಜೀರ್ಣಕ್ರಿಯೆ ಮತ್ತು ಚಯಾಪಚಯ ಕ್ರಿಯೆಯ ಹೆಚ್ಚಿನ ಪೌಷ್ಟಿಕಾಂಶವನ್ನು ಬದಲಾಯಿಸಿ ಅಪೌಷ್ಟಿಕತೆ ಉಂಟುಮಾಡಬಹುದು. ಗಂಬೀರವಾದ ಥಯಾಮಿನ್(ವಿಟಮಿನ್ B1) ಕೊರತೆ ಸಾಮಾನ್ಯ ಹಾಗೆಯೇ ಫೊಲೇಟ್ (ವಿಟಮಿನ್ Bc), ರಿಬೊಫ್ಲೇವಿನ್(ವಿಟಮಿನ್ B2), ವಿಟಮಿನ್ ಬಿ6, ಸೆಲೀನಿಯಂ ಕೊರತೆ ಉಂಟಾಗುತ್ತದೆ, ಇದರಿಂದ ಕೊರ್ಸಾಕೋಫ್ಸ್ ಸಿಂಡ್ರೋಮ್ ಉಂಟಾಗಬಹುದು. ಮದ್ಯದ ಗೀಳು ವೆರ್ನಿಕಲ್-ಕೊರ್ಸಾಕೋಫ್ಸ್ ಸಿಂಡ್ರೋಮ್ ಎಂದು ಕರೆಯುವ ಬುದ್ಧಿಮಾಂದ್ಯತೆಯನ್ನು ಹೊಂದಿದೆ, ಇದಕ್ಕೆ ಮುಖ್ಯ ಕಾರಣ ಥಯಾಮಿನ್ (ವಿಟಮಿನ್ ಬಿ1) ಕೊರತೆ.[೨೧]

ಮದ್ಯದ ಗೀಳಿನ ಸಾಮಾನ್ಯ ಚಿಹ್ನೆಗಳು ಸ್ನಾಯು ಸೆಳೆತ, ಹೊಟ್ಟೆ ತೊಳಸುವಿಕೆ, ಹಸಿವಾಗದಿರುವುದು, ನರ ದೌರ್ಬಲ್ಯ, ಮತ್ತು ಖಿನ್ನತೆ. ವಿಟಮಿನ್ ಡಿ ಕೊರತೆಯಿಂದಾಗಿ ಅಸ್ಥಿರಂಧ್ರತೆ ಮತ್ತು ಮೂಳೆಮುರಿತ ಉಂಟಾಗಬಹುದು.

ಹೃದಯ ಕಾಯಿಲೆ (ಹೃದ್ರೋಗ)

ಒಬ್ಬ ವ್ಯಕ್ತಿಯು ವಾರದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಒಂದು ನಿಯಮಿತ ಪ್ರಮಾಣದಲ್ಲಿ ಆಲ್ಕೊಹಾಲ್ ಸೇವನೆ ಮಾಡಿದರೆ ಆಲ್ಕೊಹಾಲ್ ಸೇವನೆ ಮಾಡದವರಿಗಿಂತ 35%ಕ್ಕಿಂತ ಕಡಿಮೆ ಹೃದಯಾಘಾತಕ್ಕೊಳಗಾಗುತ್ತಾರೆ ಎಂದು ಒಂದು ಅಧ್ಯಯನ ತಿಳಿಸಿದೆ, ಮತ್ತು ಪ್ರತಿನಿತ್ಯ ಕುಡಿಯುವವರು ತಮ್ಮ ಕುಡಿತದ ಪ್ರಮಾಣ ಹೆಚ್ಚು ಮಾಡಿದರೆ ಅವರಲ್ಲಿ ಹೃದಯಾಘಾತದ ಪ್ರಮಾಣ 22%ರಷ್ಟು ಕಡಿಮೆ ಎಂದು 12 ವರ್ಷ ಅಧ್ಯಯನ ನಡೆಸಿ ಕಂಡುಕೊಳ್ಳಲಾಗಿದೆ.[೨೨]

40ಕ್ಕಿಂತ ಮೇಲ್ಪಟ್ಟ ಪುರುಷರು ಪ್ರತಿನಿತ್ಯ ಒಂದು ಅಥವಾ ಎರಡು ಆಲ್ಕೊಹಾಲ್‌ ಅಂಶವನ್ನು ತೆಗೆದುಕೊಂಡರೆ (ಅರ್ಧ ಅಥವಾ ಪೂರ್ತಿ ಒಂದು ಗ್ಲಾಸ್ ವೈನ್‌) ಪರಿಧಮನಿಯ ಹೃದಯಾಘಾತದ ಪ್ರಮಾಣ ಕಡಿಮೆ, ಮತ್ತು ಮಹಿಳೆಯರಲ್ಲಿ ರಜೋನಿವೃತ್ತಿ ಮೂಲಕ ಹೃದಯಾಘಾತದ ಪ್ರಮಾಣ ಕಡಿಮೆ.[೨೩] ಆಲ್ಕೊಹಾಲ್‌ನಲ್ಲಿಯ ಉತ್ತಮ ಅಂಶಗಳಿಗೂ ಹೊರತಾಗಿ, ಮಹಿಳೆಯರು ಪ್ರತಿ ತಿಂಗಳು ಒಂದು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಕುಡಿದರೆ ಹೃದಯಾಘಾತದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿರುವುದು ಕಂಡುಬರುತ್ತದೆ.[೨೪]

ಆಲ್ಕೊಹಾಲ್ ಬಳಸುವುದರಿಂದಾಗಿ ಪರಿಧಮನಿಯ ಹೃದಯಾಘಾತದಿಂದ ಮರಣದ ಪ್ರಮಾಣ ಕಡಿಮೆಯಾಗಿ ದೀರ್ಘಾಯುಸ್ಸು ಉಂಟಾಗುತ್ತದೆ.[೨೫]

ಬುದ್ಧಿಮಾಂದ್ಯತೆ

ದೀರ್ಘಕಾಲ ಹದವಾಗಿ ಅಥವಾ ಕಡಿಮೆ ಸಮಯದಲ್ಲಿ ಅಳತೆಮೀರಿದ (ಪಾನಗೋಷ್ಠಿ) ಆಲ್ಕೊಹಾಲ್ ಸೇವನೆಯಿಂದ ಬುದ್ಧಿಮಾಂದ್ಯತೆ ಉಂಟಾಗುತ್ತದೆ; 10% ರಿಂದ 24% ಬುದ್ಧಿಮಾಂದ್ಯತೆ ಉಂಟಾಗಲು ಕಾರಣ ಆಲ್ಕೊಹಾಲ್ ಬಳಕೆ, ಪುರುಷರಿಗಿಂತ ಮಹಿಳೆಯರಲ್ಲಿ ಇದರ ಪ್ರಭಾವ ಹೆಚ್ಚು.[೨೬][೨೭]

ಮದ್ಯದ ಗೀಳು ವೆರ್ನಿಕಲ್-ಕೊರ್ಸಾಕೋಫ್ಸ್ ಸಿಂಡ್ರೋಮ್ ಎಂದು ಕರೆಯುವ ಬುದ್ಧಿಮಾಂದ್ಯತೆಯನ್ನು ಹೊಂದಿದೆ, ಇದಕ್ಕೆ ಮುಖ್ಯ ಕಾರಣ ಥಯಾಮಿನ್ (ವಿಟಮಿನ್ ಬಿ1) ಕೊರತೆ.[೨೧]

ನರಗಳ ಮೇಲೆ ತೊಂದರೆ ಉಂಟುಮಾಡುವಂತಹ ಪ್ರಭಾವವು, ಮೆದುಳಿನ ಮೇಲೆ ಆಲ್ಕೊಹಾಲ್ ಪ್ರತಿಕ್ರಿಯಿಸುವುದರಿಂದ ಉಂಟಾಗುತ್ತದೆ. ಆಲ್ಕೋಹಾಲ್ ಸೇವನೆಯಿಂದ ಪೋಷಣಾ ತೊಂದರೆ ಉಂಟಾಗಬಹುದು ಅಲ್ಲದೆ ಆಲ್ಕೊಹಾಲ್ ಸೇವನೆಯನ್ನು ಬಿಡುವುದರಿಂದ ನರಗಳ ತೊಂದರೆ ಉಂಟಾಗಬಹುದಾಗಿದೆ.[೨೮] ಇಲಿಗಳಲ್ಲಿ ಆಲ್ಕೊಹಾಲ್ ಹೆಚ್ಚಿಗೆ ಬಳಸಿದ್ದರಿಂದ ಅವುಗಳ "ದೇಹದಲ್ಲಿ ಯಾವುದೇ ಕೊರತೆ ಉತ್ಪನ್ನವಾಗಲಿಲ್ಲ", ಆದರೆ ಆಲ್ಕೊಹಾಲ್ ಕೊಡದೆ ಇದ್ದರೆ ಅವುಗಳ ನರಕೋಶಕ್ಕೆ ಹಾನಿಯುಂಟಾಗುತ್ತದೆ.[೨೮] ನರಪ್ರೇಕ್ಷಕ ಗ್ಲುಟಾಮೇಟ್‌ ನಡುವೆ ಆಲ್ಕೊಹಾಲ್ ಮಧ್ಯ ಪ್ರವೇಶಿಸಿದರೆ ಮೆದುಳಿನಲ್ಲಿನ (ಅಪ್‌ರೆಗ್ಯುಲೇಶನ್) ಗ್ಲುಟಾಮೇಟ್ ಗ್ರಾಹಿಗಳ ಸಂಖೆಯಲ್ಲಿ ಹೆಚ್ಚಳವಾಗುತ್ತದೆ. ಆಲ್ಕೊಹಾಲ್ ತೆಗೆದುಕೊಳ್ಳುವ ಪ್ರಮಾಣ ಕಡಿಮೆ ಆದರೆ ಗ್ಲುಟಾಮೇಟ್ ಗ್ರಾಹಿಗಳು ಹೆಚ್ಚು ಪ್ರತಿಕ್ರಿಯಿಸುತ್ತವೆ ಮತ್ತು ನ್ಯೂರೊಟಾಕ್ಸಿನ್‌ಗಳಾಗುತ್ತವೆ.[೨೧]

ಅದಲ್ಲದೆ ಇನ್ನುಳಿದಂತೆ ಆಲ್ಕೊಹಾಲ್ ಸೇವನೆ ಒಂದು ಚಟವಾಗಿರಿಸಿಕೊಂಡವನು ಅದನ್ನು ತಕ್ಷಣಕ್ಕೆ ಬಿಡಲು ಪ್ರಯತ್ನಿಸಿದ್ದಲ್ಲಿ ದುಷ್ಪರಿಣಾಮ ಉಂಟುಮಾಡುತ್ತದೆ. ಗಾಬಾ ಹರಿವನ್ನು ಸುಲಭಗೊಳಿಸುವುದು, ವಿದ್ಯುತ್‌ ಕಾಂತೀಯ ಕ್ಯಾಲ್ಸಿಯಂ ಹರಿವಿನಲ್ಲಿ ಹೆಚ್ಚುವಿಕೆಯನ್ನು ಮತ್ತು ಡೋಪಮೈನ್ ಬಿಡುಗಡೆಯನ್ನು ಹೆಚ್ಚಿಗೆಗೊಳಿಸುವ ಮೂಲಕ ಸಮಸ್ಯೆ ಉಂಟು ಮಾಡುತ್ತದೆ.[೨೮]

55 ಅಥವಾ ಅದಕ್ಕಿಂತ ಹೆಚ್ಚಿಗೆ ವಯಸ್ಸಾದ ಜನರು ಪ್ರತಿನಿತ್ಯ ಕಡಿಮೆ ಪ್ರಮಾಣದಲ್ಲಿ ಹದವಾಗಿ ಆಲ್ಕೊಹಾಲ್ ತೆಗೆದುಕೊಂಡರೆ (ಒಂದು ಅಥವಾ ಮೂರು ಗ್ಲಾಸ್) 42%ರಷ್ಟು ಬುದ್ಧಿಮಾಂದ್ಯತೆ ಬೆಳೆಯುವುದು ಕಡಿಮೆಯಾಗುವುದು ಮತ್ತು 70%ರಷ್ಟು ನರದ ಬುದ್ಧಿಮಾಂದ್ಯತೆ ಕಡಿಮೆಯಾಗುವುದು.[೨೯] ಮೆದುಳಿನ ಹಿಪೊಕ್ಯಾಂಪಸ್ ಪ್ರದೇಶದಲ್ಲಿನ ಅಸೆಟೈಕೊಲೈನ್ ಬಿಡುಗಡೆಯಾಗಲು ಆಲ್ಕೊಹಾಲ್ ಪ್ರಚೋದಿಸಬಹುದು ಎಂದು ಸಂಶೋಧಕರು ಸೂಚಿಸಿದ್ದಾರೆ.[೨೯]

ಕ್ಯಾನ್ಸರ್

ಆಲ್ಕೊಹಾಲ್ ಸೇವನೆಯು ಬಾಯಿ ಹುಣ್ಣು/ಕ್ಯಾನ್ಸರ್, ಗಂಟಲು ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ದನಿ ಪೆಟ್ಟಿಗೆಯ ಕ್ಯಾನ್ಸರ್, ಸ್ತನ/ಎದೆಯ ಕ್ಯಾನ್ಸರ್, ಕರುಳಿನ ಕ್ಯಾನ್ಸರ್, ಕಿಡ್ನಿ/ಯಕೃತ್ತಿನ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗುತ್ತದೆ.[೩೦] ಅತಿಯಾದ ಕುಡಿತ ಯಕೃತ್ ಕ್ಯಾನ್ಸರ್‌ನ ತೀವ್ರತೆಯನ್ನು ಹೆಚ್ಚಿಸುತ್ತದೆ.[೩೦]

ದಿನವೊಂದಕ್ಕೆ 3 ಗುಟುಕು ಆಲ್ಕೊಹಾಲ್ (ಒಂದು ಪಿಂಟ್ ತುಂಬಿದ ಅಥವಾ ವೈನ್ ತುಂಬಿದ ದೊಡ್ಡ ಬಟ್ಟಲು) ಸೇವನೆಯಿಂದಲೂ ಸಹ ಕ್ಯಾನ್ಸರ್‌ನ ಬೆಳವಣಿಗೆ ತೀವ್ರತೆಯನ್ನು ಪಡೆದುಕೊಳ್ಳುತ್ತದೆ.[೩೦]

ಒಂದು ಜಾಗತಿಕ ಅಧ್ಯಯನದ ಪ್ರಕಾರ ಶೇ 3.6 ರಷ್ಟು ಕ್ಯಾನ್ಸರ್ ಪೀಡಿತರು ಆಲ್ಕೊಹಾಲ್‌ ಸೇವನೆಯಿಂದಲೆ ಈ ಕಾಯಿಲೆಗೆ ತುತ್ತಾಗಿದ್ದು 3.5 ಶೇಕಡವಾರು ಜನರ ಮರಣೊತ್ತರ ಅಧ್ಯಯನದಲ್ಲಿ ಇದು ತಿಳಿದು ಬಂದಿದೆ.[೩೧] ಯುಕೆ ಯಲ್ಲಿ ನಡೆದ ಸಮೀಕ್ಷೆಯ ಪ್ರಕಾರ ಪ್ರತಿಶತ 6 ಜನ ಕ್ಯಾನ್ಸರ್ ಕಾರಣದಿಂದ ಮೃತಪಡುತ್ತಿದ್ದಾರೆ (ಪ್ರತಿವರ್ಷ 9000 ಜನ).[೩೦] ಮಹಿಳೆ ಮತ್ತು ಪುರುಷರಿಬ್ಬರೂ ಪ್ರತಿನಿತ್ಯವೂ 2 ಕ್ಕಿಂತ ಹೆಚ್ಚು ಬಾರಿ ಆಲ್ಕೊಹಾಲ್‌ ಸೇವನೆಗೆ ಒಳಗಾದಲ್ಲಿ ಗಂಟಲು ಕ್ಯಾನರ್‌ ಶೇ 22 ರಷ್ಟು ವೃದ್ಧಿಯಾಗುತ್ತದೆ.[೩೨]

ದಿನ ನಿತ್ಯದ ಮಿತ ಆಲ್ಕೊಹಾಲ್‌ ಸೇವನೆಯಿಂದಲೂ ಮಹಿಳೆಯರಲ್ಲಿ ಮೇಲಿನ ಭಾಗದ ಜೀರ್ಣ ಕ್ರಿಯೆಯ ಮಾರ್ಗ, ದೊಡ್ಡ ಕರುಳಿನ ಕೆಳ ತುದಿ, ಕಿಡ್ನಿ, ಸ್ತನದ ಕ್ಯಾನ್ಸರ್ ಹೆಚ್ಚಾಗುತ್ತದೆ.[೩೩][೩೪].

ರೆಡ್ ವೈನ್‌ನಲ್ಲಿ ಕೆಲವು ಪ್ರಮಾಣದ ರಿಸ್ವೆರಟ್ರಾಲ್ ಕ್ಯಾನ್ಸರ್ ರೋಗ ನಿರೋಧಕವನ್ನು ಹೊಂದಿರುವುದಾದರೂ, ಅಧ್ಯಯನದ ಪ್ರಕಾರ ರೆಡ್ ವೈನ್ ಕ್ಯಾನ್ಸರ್‌ನಿಂದ ಮಾನವನನ್ನು ರಕ್ಷಿಸಿದ ಸಾಕ್ಷಿಗಳಿಲ್ಲ.[೩೫]

ಮಧುಮೇಹ

ವಯಸ್ಸಾದ ಮಹಿಳೆಯರಲ್ಲಿ ನಿಯಮಿತ ಆಲ್ಕೊಹಾಲ್ ಸೇವನೆಯಿಂದ ಅವರ ರಕ್ತದಲ್ಲಿರುವ ಗ್ಲೂಕೊಸ್ ಪ್ರಮಾಣ ಕಮ್ಮಿಯಾಗಬಲ್ಲದು.[೩೬] ಸಂಶೋಧಕರ ಎಚ್ಚರಿಕೆಯಂತೆ ಈ ಅಧ್ಯಯನ ಶುದ್ಧ ಆಲ್ಕೊಹಾಲ್ ಮತ್ತು ಆಲ್ಕೊಹಾಲ್‌ಯುಕ್ತ ಪಾನೀಯದೊಂದಿಗೆ ನಡೆಸಲಾಗಿದ್ದು, ಇದರೊಂದಿಗೆ ಸಕ್ಕರೆ ಮಿಶ್ರಣದಿಂದ ಈ ಪ್ರಮಾಣವನ್ನು ಕಡಿಮೆ ಮಾಡಬಹುದು.[೩೬]

ಸಕ್ಕರೆ ಕಾಯಿಲೆಯುಳ್ಳವರು ಸಿಹಿ ವೈನ್‌ಗಳು ಮತ್ತು ಮದ್ಯ ಸೇವಿಸುವುದನ್ನು ಕಡಿತಗೊಳಿಸಿವುದು ಒಳ್ಳೆಯದು.[೩೭]

ಪಾರ್ಶ್ವವಾಯು

ಒಂದು ಅಧ್ಯಯನದಂತೆ ತಮ್ಮ ಜೀವಿತಾವಧಿಯಲ್ಲೆ ಆಲ್ಕೊಹಾಲ್‌ ಸೇವಿಸದ ಮಂದಿ ನಿಯಮಿತವಾಗಿ ಸೇವಿಸುವ ಜನರಿಗಿಂತಲೂ 2.36 ಗಳಷ್ಟು ಬಾರಿಪಾರ್ಶ್ವವಾಯು ಹೊಡೆತಕ್ಕೆ ಒಳಗಾಗುತ್ತಾರೆ ಎಂದು ತಿಳಿಸಿದೆ. ಅತಿಯಾಗಿ ಕುಡಿಯುವ ಜನರು ಮಿತ ಪಾನಿಯರಿಗಿಂತ 2.88 ಬಾರಿ ಹೆಚ್ಚು ಪ್ರಮಾಣದಲ್ಲಿ ಪಾರ್ಶ್ವವಾಯುಗೆ ಒಳಗಾಗುತ್ತಾರೆ.[೩೮]

ದೀರ್ಘಾಯುಷ್ಯ

ವಯ್ಯಸ್ಸಾದ ನಂತರದಲ್ಲಿ ಆಲ್ಕೊಹಾಲ್‌ ಸೇವನೆಯಿಂದ ದೀರ್ಘಾಯುಷ್ಯದ ಪ್ರಮಾಣ ಹೆಚ್ಚಾಗುತ್ತದೆ, ಅದರಲ್ಲೂ ಹೃದಯ ಸಂಬಂಧಿ ಕಾಯಿಲೆ ಇರುವವರು.[೨೫] ಬ್ರಿಟಿಷ್ ಅಧ್ಯಯನ ಒಂದರ ಪ್ರಕಾರ ಡಾಕ್ಟರ್ ಅವರಿಂದ 2 ಗುಟುಕು ಆಲ್ಕೊಹಾಲ್ ದಿನವೊಂದರಂತೆ ಸೇವಿಸಿದಾಗ (ಸಾಮಾನ್ಯ ಬಟ್ಟಲಿನ ವೈನ್)ಹೃದಯ ಸಂಬಂಧಿ ರಕ್ತ ಕೊರತೆ ಮತ್ತು ಉಸಿರಾಟದ ತೊದರೆಯಿಂದ ದೂರವಾಗಿ 48+ ವರ್ಷಗಳ ಕಾಲ ಆಯಸ್ಸು ವೃದ್ದಿಸಿರುವುದಾಗಿ ತಿಳಿಸಿದೆ.[೩೯] ಆಲ್ಕೊಹಾಲ್ ಸೇವನೆಗೆ ಸಂಬಂಧಿಸಿದಂತೆ ಸಾಯುವವರ ಸಂಖ್ಯೆಯಲ್ಲಿ ಕೇವಲ ಶೇಕಡ 5ರಷ್ಟು ಜನರಷ್ಟೇ ಸೇರಿದ್ದು ದಿನ ಒಂದಕ್ಕೆ ಯಾರು 2 ಯುನಿಟ್ ಗಳಿಗೂ ಅಧಿಕವಾಗಿ ಆಲ್ಕೊಹಾಲ್ ಸೇವಿಸುವವರಲ್ಲಿ ಅವರ ಸಂಖ್ಯೆ ಹೆಚ್ಚಾಗಲಿದೆ.[೩೯]

2010ರಲ್ಲಿ ನಡೆಸಲಾದ ದೀರ್ಘಾವಧಿಯ ಅಧ್ಯಯನದಂತೆ ಹಳೆ ತಲೆ ಮಾರಿನ ಜನ ಹಿತಕರವಾಗಿ ಮಿತಿ ಮೀರದಂತೆ ಪಾನಮತ್ತರಾಗಲು ಶ್ರಮವಹಿಸುತ್ತಿದ್ದರು ಅಂತೆಯೆ ಸಾವಿನ ಪ್ರಮಾಣದಲ್ಲಿ ಪೂರ್ಣವಾಗಿ ನಿರಾಕರಿಸಿದವರು ಹಾಗೂ ಅತಿ ಪಾನಿಯರೂ ಸೇರಿದಂತೆ ಶೇ 50 ರಷ್ಟು ಪ್ರಮಾಣ ಹೆಚ್ಚಿದೆ.[೪೦]

ಮರಣ ಪ್ರಮಾಣ

ಯುನೈಟೆಡ್ ಸ್ಟೇಟ್ಸ್ ರೋಗ ನಿಯಂತ್ರಣ ಕೇಂದ್ರದ ಒಂದು ವರದಿಯ ಪ್ರಕಾರ ಸಂಯುಕ್ತ ಸಂಸ್ಥಾನದಲ್ಲಿ ಕಡಿಮೆ ಮತ್ತು ಹೆಚ್ಚು ಪ್ರಮಾಣದ ಆಲ್ಕೊಹಾಲ್ ಸೇವನೆಯಿಂದಾಗಿ 75,754 ಜನರ ಪ್ರಾಣ ಹಾನಿ 2001ರಲ್ಲಿ ಸಂಭವಿಸಿದ್ದಿತು. ಕಡಿಮೆ ಪ್ರಮಾಣದ ಆಲ್ಕೊಹಾಲ್ ಬಳಕೆಯಿಂದ ಪ್ರಯೋಜನವಾಗುವ ಅಂಶವೂ ಇದೆ. ಹಾಗೆಯೆ 59,180 ಜನರು ಆಲ್ಕೊಹಾಲ್‍ಗೆ ಬಲಿಯಾದರು.[೪೧]

ಯುಕೆ ಅಂತಹ ರಾಷ್ಟ್ರದಲ್ಲಿ ವರ್ಷಕ್ಕೆ ಸರಾಸರಿ 33,000 ದಷ್ಟು ಜನರು ಅತಿಯಾದ ಕುಡಿತದಿಂದಾಗಿ ಮರಣವನ್ನಾಪ್ಪುತ್ತಿದ್ದಾರೆ.[೪೨]

ಸ್ವೀಡನ್‍ನಲ್ಲಿ ನಡೆಸಲಾದ ಅಧ್ಯಯನದ ವರದಿಯಂತೆ ಶೇ 29 ರಿಂದ ಶೇ 44ರಷ್ಟು ಜನರು ಅಸ್ವಾಭಾವಿಕವಾಗಿ ಸಾವಿಗೀಡಾಗುತ್ತಿದ್ದರು (ಯಾವೂದೇ ಕಾಯಿಲೆಗಳಿಂದ ಅಲ್ಲ) ಆದರೆ ಅದು ಆಲ್ಕೊಹಾಲ್‌ಗೆ ಸಂಬಂಧಿಸಿದ್ದಾಗಿತ್ತು. ಅಲ್ಲದೆ ಕೊಲೆ, ಆತ್ಮಹತ್ಯೆ, ರಸ್ತೆ ಅಪಘಾತ, ಉಸಿರಾಟದ ತೊಂದರೆ, ಮತ್ತು ಬರುವುದು.[೪೩]

ಜಾಗತಿಕ ಸಮೀಕ್ಷೆಯೊಂದರಂತೆ ಜಗತ್ತಿನಾದ್ಯಂತ ಇರುವ ಕ್ಯಾನ್ಸರ್ ಪೀಡಿತರಲ್ಲಿ ಶೇ 3.6 ರಷ್ಟು ಜನರು ಆಲ್ಕೊಹಾಲ್ ಸೇವನೆಯಿಂದಾಗಿಯೆ ರೋಗಗ್ರಸ್ಥರಾಗಿದ್ದಾರೆ. ಅಲ್ಲದೆ ಮರಣೋತ್ತರದಲ್ಲಿ ಶೇ 3.5ರಷ್ಟು ಜನರು ಈ ಕಾರಣದಿಂದಾಗಿಯೇ ಅಸುನೀಗಿದ್ದಾರೆಂದು ವರದಿ ತಿಳಿಸಿದೆ.[೩೧] ಯುಕೆಯಲ್ಲಿ ನಡೆಸಿದ ಅಧ್ಯಯನದಲ್ಲಿ ಕಂಡು ಹಿಡಿದಂತೆ ಆಲ್ಕೊಹಾಲ್ ಸೇವಿತರಲ್ಲಿ ಶೇ 6 ರಷ್ಟು ಜನರು ಕ್ಯಾನ್ಸರ್‌ನಿಂದಲೆ ಸಾಯುತ್ತಿದ್ದು ಯುಕೆ ಒಂದರಲ್ಲೆ (ಪ್ರತಿ ವರ್ಷ 9,000 ಜನ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ)[೩೦]

ಆಲ್ಕೊಹಾಲ್‌‌ನ ಅಪೇಕ್ಷೆ

ಆಲ್ಕೊಹಾಲ್ ಜನರ ನಂಬಿಕೆ ಮತ್ತು ಮನೋಭಾವವನ್ನು ಎದುರುನೋಡುತ್ತದೆ. ಜನರು ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಸೇವಿಸಿದಾಗ ಅದರ ಪರಿಣಾಮವನ್ನು ಸ್ವತಃ ಅನುಭವಿಸುತ್ತಾರೆ. ಆಲ್ಕೊಹಾಲ್ ಸೇವಿಸಿದಾಗ ಅದು ಸೇವಿಸಿದವರ ನಡತೆ, ಸಾಮರ್ಥ್ಯ ಮತ್ತು ಮಾನಸಿಕ ಉದ್ವೇಗಗಳ ಮೇಲೆ ಅದು ಬೀರುವ ಪರಿಣಾಮವನ್ನು ಅವರು ಬಲವಾಗಿ ನಂಬುತ್ತಾರೆ. ಇನ್ನೂ ಕೆಲವರು ನಂಬುವಂತೆ ಆಲ್ಕೊಹಾಲ್‌ನ ಆಪೇಕ್ಷೆ ಬದಲಾದಂತೆಲ್ಲ ನಿಂದಿಸುತ್ತಾರೆ ನಿರ್ದಿಷ್ಟವಾಗಿರುವಂತೆ ಒತ್ತಾಯಿಸುತ್ತಾರೆ.[೪೪]

ಆಲ್ಕೋಹಾಲ್‍ನ ಆಪೇಕ್ಷೆಯ ಅದ್ಬುತ ಚಮತ್ಕಾರವೆಂದರೆ ಮತ್ತು ಬಂದಾಗ ಸಮಯ, ಸ್ಥಳ ಗ್ರಹಿಕೆ ಹಾಗೂ ಸ್ವಯಂ ಚಾಲಿತ ಮನೋಶಕ್ತಿಗೆ ಸಂಬಂಧಿಸಿದ ಜಾಣ್ಮೆ ಮತ್ತು ಸಮತೋಲನ ಏರುಪೇರಾದ ಸ್ಥಿತಿಯಿರುತ್ತದೆ.[೪೫] ಆಲ್ಕೊಹಾಲ್ ಸೇವನೆಯಿಂದ ವಿಧಿ ವಿಧಾನಗಳು ಹಾಗೂ ಸ್ಥಾನ ಮಾನಗಳ ಬಗೆಗೆ ಮಾನಸಿಕವಾಗಿ ಪರಿಣಾಮಗಳನ್ನು ಅಮಲಿನಲ್ಲಿ ಎದುರಿಸಬೇಕಾಗುತ್ತದೆ ಈ ಕಾರ‍ಣದಿಂದಾಗಿ ಆತನ ನಡತೆಯಲ್ಲಿ ಅಸ್ಪಷ್ಟತೆ ಇರುತ್ತದೆ.

ಸಮಾಜವು ಪಾನಮತ್ತರಿಂದಾಗುವ ಲೈಂಗಿಕ ನಡತೆ, ರೌಡಿತನ ಅಥವಾ ದಾಳಿ ಮಾಡುವ ಮನೋ ವಿಲಕ್ಷಣಕ್ಕೆ ಅದರ ಅಮಲೇ ಕಾರಣ ಎಂದು ನಂಬುತ್ತದೆ. ಆದರೆ ಸಮಾಜವು ಕುಡಿತದ ಅಮಲಿನಿಂದ ಶಾಂತತೆ ಮತ್ತು ನೋವು ಶಮನವಾಗುತ್ತದೆ ಎಂಬ ಅಭಿಪ್ರಾಯವನ್ನು ಸಹ ಹೊಂದಿದೆ. ಆದರೆ ಇದು ಖಂಡಿತವಾದ / ಸತ್ಯಾಂಶದಿಂದ ಕೂಡಿದ ಅಭಿಪ್ರಾಯವಲ್ಲ.[೪೬]

ಜನರು ಸಮಾಜದ ಅಭಿಲಾಶೆಗೆ ತಕ್ಕಂತೆ, ಹಾಗೆಯೆ ಕೆಲವು ವರ್ಗಗಳ ಹಿತಾಸಕ್ತಿಯಿಂದ ಆಲ್ಕೊಹಾಲ್ ಸೇವನೆಗೆ ವಿರೊಧವನ್ನು ಒಡ್ಡುವುದಿಲ್ಲ. ಅದೇನೇ ಇದ್ದರೂ ಪಾನ ಮತ್ತಿನ ಅಮಲಿನಿಂದ ಜನರ ವರ್ತನೆಯಲ್ಲಾಗುವ ಬದಲಾವಣೆಯ ಕಾರಣ ಪ್ರಮುಖವಾಗುತ್ತದೆ.[೪೫]

ಆಲ್ಕೊಹಾಲ್‌ ತನ್ನ ಪರಿಣಾಮವನ್ನು ತನ್ನ ಅನುಪಸ್ಥಿತಿಯಲ್ಲೂ ಬೀರಬಲ್ಲದು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ನಡೆಸಲಾದ ಸಮೀಕ್ಷೆಯೊಂದರಂತೆ ತಾವು ಪಾನಮತ್ತರಾಗಿದ್ದೇವೆ ಎಂಬ ಕಲ್ಪನೆ ಆಧಾರದಿಂದಲೆ ಬಹುತೇಕರು ಲೈಂಗಿಕ ವಿಷಯದಲ್ಲಿ ಆಸಕ್ತರಾಗುತ್ತಾರೆ. ಮಹಿಳಾ ವರದಿಯೊಂದರಂತೆ ಬಹಳಷ್ಟು ಮಹಿಳೆಯರು ತಾವು ಆಲ್ಕೊಹಾಲ್ ಸೇವಿಸಿದ್ದೇವೆ ಎಂಬ ಕಲ್ಪನೆಯಿಂದಲೆ ಲೈಂಗಿಕ ಕ್ರಿಯೆಯೆಲ್ಲಿ ತೊಡಗುತ್ತಾರೆ. (ಆದಾಗ್ಯೂ ಒಂದು ಮಾನದಂಡದಂತೆ ಮಹಿಳೆಯರು ಮಾನಸಿಕವಾಗಿ ಕಡಿಮೆ ಆಸಕ್ತರಾಗಿರುತ್ತಾರೆ)

ಪ್ರಯೋಗಾಲಯದ ಅಧ್ಯಯನದಂತೆ ಪುರುಷರು ಅತಿ ಹೆಚ್ಚು ಜಗಳಗಂಟರಾಗಿರಲು ಅವರು ತೆಗೆದು ಕೊಳ್ಳುವ ಔಷಧಿಯು ಕಾರಣವಾಗಿರುತ್ತದೆ, ಕಾರಣ ಅದರಲ್ಲಿರುವ ಆಲ್ಕೊಹಾಲಿನ ಪ್ರಮಾಣ. ಆದರೆ ಅವರು ಅದು ನೀರಿನಿಂದ ಕೂಡಿದ ಔಷದಿಯೆಂದೇ ಅವರು ಭಾವಿಸಿರುತ್ತಾರೆ. ಅವರು ಸಹ ಆಲ್ಕೊಹಾಲ್‍ಯುಕ್ತ ಔಷಧಿ ಕುಡಿಯುತ್ತಿರುವ ಸತ್ಯವನ್ನು ಅರಿಯದೆ ಸಂಯಮದಿಂದಿರುತ್ತಾರೆ.[೪೪]

ಆಲ್ಕೊಹಾಲ್‌ ಮತ್ತು ಧರ್ಮ

ಈ ಕೆಳಕಂಡ ಧರ್ಮಗಳಲ್ಲಿ ಇಸ್ಲಾಂ, ಜೈನ, ಭಹಾ’ಸ್ ನಂಬಿಕೆಯಂತೆ ಸಂತ ಲೆಟ್ಟರ್-ಡೇ ಜೀಸಸ್ ಕ್ರೈಸ್ತ್ ಚರ್ಚ್, ಸೆವೆಂತ್ ಡೇ-ಅಡ್ವೆಂಟಿಸ್ಟ್ ಚರ್ಚ್, ಕ್ರೈಸ್ತ್ ಸೈಂಟಿಸ್ಟ್ ಚರ್ಚ್,ಇಂಟರ್‌ನ್ಯಾಷನಲ್ ಯುನೈಟೆಡ್ ಪೆಂಟಕೊಸ್ಟಾಲ್ ಚರ್ಚ್, ತೆರವಾಡ, ಮಹಾಯಾನ, ಬೌದ್ಧ ಶಾಲಗಳು ಕೆಲವು ಪ್ರೊಟೆಸ್ಟೆಂಟ್ ಪಂಗಡದ ಕ್ರೈಸ್ತ ಧರ್ಮಿಯರು ಕೆಲವು ಹಿಂದೂ ಧರ್ಮದ ಪಂಗಡಗಳು ಸೇರಿದಂತೆ ಅನೇಕ ಧರ್ಮಗಳು ಅನೇಕ ಕಾರಣಗಳಿಂದಾಗಿ ಆಲ್ಕೊಹಾಲ್‌ಯುಕ್ತ ಪಾನಿಯವನ್ನು ನಿಷೇಧಿಸಿವೆ.

ಬಹುತೇಕ ಕ್ರಿಶ್ಚಿಯನ್ ಪಂಗಡದವರು ಎಚರಿಸ್ಟ್ ಕಮ್ಮ್ಯುನಿಯನ್ ಪಂಗಡಗಳಲ್ಲಿ ಮಧ್ಯ ಸೇವನೆಗೆ ಉದಾರತೆಯನ್ನು ತೋರಿವೆ. ಉಳಿದಂತೆ ಇನ್ನುಳಿದ ಕ್ರಿಶ್ಚಿಯನ್ನ್ ಪಂಗಡಗಳು ಹುಳಿ ಇಲ್ಲದ ದ್ರಾಕ್ಷಾ ರಸವನ್ನು ಬಳಸಲು ಅನುಮತಿಸಿವೆ.

ಯೆಹೂದಿಯರು ತಮ್ಮ ಶಾಬ್ಬತ್ ಔತನ ಕೂಟಗಳಲ್ಲಿ ಹಾಗೂ ಪಾಸ್ಸೊವರ್ ಪುರಿಮ್ ಹಬ್ಬಗಳಲ್ಲಿ, ವ್ರತಾಚರಣೆಗಳಲ್ಲಿ ವೈನ್ ಅನ್ನು ಸಾಮಾನ್ಯವಾಗಿ ಬಳಸುತ್ತಾರೆ. ಕೆಲವು ಯೆಹೂದಿಯರು ತಲ್ಮುಡ್ ಮತ್ತು ಪುರಿಮ್ ಹಬ್ಬಗಳಂಥಹ ವಿಶೇಷ ಸಂದರ್ಭಗಳಲ್ಲಿ ಹೆಚ್ಚೇ ವೈನ್ ಸೇವಿಸಲು ಉತ್ತೇಜಿಸುತ್ತಾರೆ.

ಬೌದ್ದ ಧರ್ಮದ ಗ್ರಂಥದಲ್ಲಿರುವಂತೆ ಮಾದಕ ವಸ್ತುಗಳು ಹಾಗು ಆಲ್ಕೊಹಾಲ್ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇದಿಸಲಾಗಿದೆ.

ಕೆಲವು ಕ್ಷುದ್ರ ಧರ್ಮದವರಲ್ಲಿ ಆಲ್ಕೊಹಾಲ್ ಮತ್ತು ಮದ್ಯವ್ಯಸನಿಗಳ ಈ ಆಚಾರ ಸಂಪೂರ್ಣ ವಿರುದ್ಧವಾಗಿದೆ. ಅವರು ತಮ್ಮ ಬೆಳವಣಿಗೆಗೆ ಇದು ಫಲವತ್ತಾದುದು ಎಂದು ಇದನ್ನು ಬಿಂಬಿಸುತ್ತಾರೆ. ಆಲ್ಕೊಹಾಲ್ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಪರರನ್ನು ಲೈಂಗಿಕ ಕ್ರಿಯೆಗೆ ಸುಲಭವಾಗಿ ಆಹ್ವಾನಿಸಬಹುದೆಂಬುದಾಗಿ ಅವರು ನಂಬಿದ್ದಾರೆ. ಉದಾಹರಣೆಗೆ ನೊರ್ಸ್ ವಿಗ್ರಹಾರಧಕರು ಆಲ್ಕೊಹಾಲ್ ಅನ್ನು ವಿಶ್ವ ವೃಕ್ಷದಿಂದಾದ ಸಸ್ಯರಸವೆಂದೇ ಭಾವಿಸುತ್ತಾರೆ. ಮದ್ಯವ್ಯಸನಿಗಳು ಸಂಪೂರ್ಣ ಸ್ವಾತಂತ್ರ್ಯವನ್ನು ಈ ಧರ್ಮದಲ್ಲಿ ಹೊಂದಿದ್ದಾರೆ.

ಇತಿಹಾಸ

ಆಲ್ಕೊಹಾಲ್ ಅನ್ನು ಪ್ರಪಾಂಚದಾದ್ಯಂತ ಜನರು ಸಮತೋಲನ ಆಹಾರದಲ್ಲಿ ಸ್ವಚ್ಛ/ ಆರೋಗ್ಯ ಕಾರಣಗಳಿಂದಾಗಿ ಬಳಸುತ್ತಿದ್ದಾರೆ. ಆರಾಮದಾಯಕ ಮತ್ತು ಉಲ್ಲಾಸದ ಪರಿಣಾಮಗಳಿಗಾಗಿ, ವಿನೋದಾತ್ಮಕ ರಂಜನೆಗಾಗಿ, ಕಲಾತ್ಮಕ ಪ್ರೇರಣೆಗಾಗಿ, ಕಾಮೊತ್ತೇಜಕ ಮತ್ತು ಇನ್ನಿತರ ಕಾರಣಗಳಿಂದಾಗಿ ಬಳಸಲ್ಪಡುತ್ತಿದೆ. ಕೆಲವು ಮದ್ಯಗಳು ಧಾರ್ಮಿಕವಾಗಿ ಪ್ರಾಮುಖ್ಯವನ್ನು ಪಡೆದುಕೊಂಡಿರುವುದು ಒಗಟಾಗಿ ಕಾಣುತ್ತದೆ. ಗ್ರೀಕ್-ರೋಮನ್ ಧರ್ಮದಲ್ಲಿ ಎಕ್ಸ್ಟಟಿಕ್ ಡಿಯೋನಿಸಸ್ ಭಾವ ಪರವಶಗೊಳ್ಳುವ ಅಥವ ವೈನ್ ಗಳ ದೇವರೆಂದೆ ಕರೆಯಲ್ಪಡುತ್ತಿದ್ದರು. ಕ್ರಿಶ್ಚಿಯನ್ನರಲ್ಲಿ ಧಾರ್ಮಿಕ ಮುಖಂಡರ, ಯೆಹೂದಿಗಳಿಗೆ ಸಂಬಂಧಿಸಿದಂತೆ ಧಾರ್ಮಿಕ ಔತಣಗಳಲ್ಲಿ ಹಾಗೂ ಹಬ್ಬಗಳಲ್ಲಿ (ಮುಖ್ಯವಾಗಿ ಪಸ್ಸವರ್ ಹಬ್ಬದಲ್ಲಿ)

ಹುದುಗು ಬರಿಸಿದ ಪಾನೀಯ

9000 ಸಾವಿರ ವರ್ಷಗಳ ಹಿಂದೆಯೆ ಇಂತಹದ್ದೊಂದು ರಾಸಯನಿಕ ಅನ್ವೇಷಣೆ ನಡೆದಿತ್ತು. ನವ ಶಿಲಾಯುಗದ ಸಂದರ್ಭದಲ್ಲಿ ಹೆನೆನ್ ಪ್ರಾಂತ್ಯದ ಉತ್ತರ ಚೀನದ ಜಿಹೂ ಹಳ್ಳಿಯಲ್ಲಿ ಅನ್ನ, ಜೇನು ಮತ್ತು ಹಣ್ಣುಗಳಿಂದ ಮಾಡಲ್ಪಟ್ಟ ರಸ/ ಪಾನಿಯ ತಯಾರಾಗಿದ್ದಿತು. ಭಾಗಶಃ ಇದೇ ಸಮಯದಲ್ಲೆ ಮಧ್ಯ ಪೂರ್ವದಲ್ಲಿ ಬಾರ್ಲಿಯ ಬಿಯರ್ ಮತ್ತು ದ್ರಾಕ್ಷಾ ರಸ ಸಹ ಪ್ರಾರಂಭವಾದವು. ರೆದಿಪ್ಸ್ ಮೆಸೊಪೊಟೋಮಿಯದಲ್ಲಿ ಕಂಡುಹಿಡಿದಂತೆ ಬೀರ್ ಪಾನಿಯವನ್ನು ಸೇವಿಸಲು ಪ್ರತಿಯೊಬ್ಬರು ಬೇರೆಯದೇ ಆದ ಸ್ಟ್ರಾಗಳನ್ನು ಬಳಸುತ್ತಿದ್ದುದು ಕಾಣಬಹುದಾಗಿದೆ. ಹಿಂದೂ ಆಯುರ್ವೇದ ಗ್ರಂಥ ಆಧಾರವಾಗಿ ಗಮನಿಸಿದಾಗ ಆಲ್ಕೊಹಾಲ್‌ಯುಕ್ತ ಪಾನಿಯಗಳ ಸೇವನೆಯಿಂದಾಗುವ ಉಪಯುಕ್ತತೆ ಹಾಗೂ ಅದರಿಂದಾಗುವ ಅಪಾಯದ ಪರಿಣಾಮಗಳ ಮೇಲೂ ಬೆಳಕು ಚೆಲ್ಲುತ್ತದೆ. ಚೀನವೂ ಸೇರಿದಂತೆ ಭಾರತದಲ್ಲಿನ ಬಹುತೇಕ ಜನರು ತಮ್ಮ ಆಹಾರ ಧಾನ್ಯಗಳನ್ನು ಹುದಿಗಿಸಿಟ್ಟು ಆಲ್ಕೊಹಾಲ್ ಅನ್ನು ತಯಾರಿಸುತ್ತಿದ್ದರು. 5ಮತ್ತು 6ನೇ ಶತಮಾನದ ವೇಳೆಗಾಗಲೆ ಭಾರತದೇಶದಾದ್ಯಂತ ಹರಡಿದ್ದ ಬೌದ್ದಧರ್ಮವು ಪೂರ್ವ ಮತ್ತು ದಕ್ಷಿಣ ಏಷ್ಯಗಳಲ್ಲಿ ಹಿಂದೂ ಮತ್ತು ಸಿಖ್ಖ್‌ರ ಮೂಲಕ ಈ ಸಮಯದಲ್ಲಿ ಹರಡಿಕೊಳ್ಳುತ್ತಿತ್ತು.


ಮೆಸೊಪೊಟಮಿಯಾ ಮತ್ತು ಈಜಿಪ್ಟ್‌ಗಳು ಬಿಯರ್ ಹಾಗೂ ವೈನ್‌ಗಳ ಮೂಲ ನೆಲೆಯಾಗಿದ್ದಿತು. ಈಗ ಇಸ್ಲಾಂ ಒಂದು ಪ್ರಬಲ ಧರ್ಮವಾಗಿದ್ದು ಇದೂ ಸಹ ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಸೇವಿಸುವುದು ಹಾಗೂ ಬಳಸುವುದನ್ನೇ ನಿಷೇದಿಸಿದೆ.

ಪ್ರಾಚೀನ ಗ್ರೀಸ್‌‌ನಲ್ಲಿ ಬೆಳಗಿನ ಉಪಹಾರದ ಸಮಯದಲ್ಲಿ ಅಥವಾಸಿಂಪೋಸಿಯಾದಲ್ಲಿ ವೈನ್‌‍ನ್ನು ಸೇವಿಸಲಾಗುತ್ತಿತ್ತು, ಮತ್ತು ಕ್ರಿ.ಶ. 1ನೇಯ ಶತಮಾನದಲ್ಲಿ ರೋಮನ್ ನಾಗರಿಕರ ಡಯಟ್‌ನ ಒಂದು ಭಾಗವಾಗಿತ್ತು. ಸಾಮಾನ್ಯವಾಗಿ ಗ್ರೀಕ್ ಮತ್ತು ರೋಮನ್ನರು ಕಡಿಮೆ ಸಾಂದ್ರತೆಯ ವೈನ್ ಬಳಸುತ್ತಿದ್ದರು (ಒಂದು ಭಾಗ ವೈನ್ ಮತ್ತು ಒಂದು ಭಾಗ ನೀರು ಅಥವಾ ಒಂದು ಭಾಗ ನೀರು ಮತ್ತು ನಾಲ್ಕು ಭಾಗ ನೀರು ಬೆರೆಸಿ ಸೇವಿಸುತ್ತಿದ್ದರು.) ಸಾನಾದಲ್ಲಿ ನಡೆದ ಮದುವೆಯಲ್ಲಿ ನೀರನ್ನು ವೈನ್ ಆಗಿ ಪರಿವರ್ತಿಸಿದ್ದು ಜೀಸಸ್‌ರಿಂದಾದ ಮೊಟ್ಟಮೊದಲ ಪವಾಡ ಎಂದು ಹೊಸ ಒಡಂಬಡಿಕೆಯಲ್ಲಿ ಹೇಳಲಾಗಿದೆ. ಅಲ್ಲದೆ ಅವರ ಕೊನೆಯ ಔತಣಕೂಟದಲ್ಲಿ ವೈನ್ ಬಳಸಿದ್ದು ಯೂಚರಿಸ್ಟ್‌ ಸಂಪ್ರದಾಯದ ಕ್ರಿಶ್ಚನ್‌ರು ವೈನ್ ಅನ್ನು ತಮ್ಮ ಸಂಪ್ರದಾಯದ ಅವಿಭಾಜ್ಯ ಅಂಗವಾಗಿ ಉಪಯೋಗಿಸುತ್ತಾರೆ.

ಮಧ್ಯ ಯುಗದ ಯೂರೋಪಿನಲ್ಲಿ ಕುಟುಂಬದ ಸದಸ್ಯರೆಲ್ಲರು ಬಿಯರ್ ಸೇವಿಸುತ್ತಿದ್ದರು, ಮೂರು ಬಾರಿಯ ಹುದುಗು ಬರಿಸುವ ಪ್ರಕ್ರಿಯೆಯ ಮೂಲಕ -ತೀಕ್ಷ್ಣವಾದದ್ದನ್ನು ಗಂಡಸರು, ನಂತರ ಮಹಿಳೆಯರು ನಂತರ ಮಕ್ಕಳು. ನನ್‌ಗಳು ಒಂದು ದಿನಕ್ಕೆ ಏಲ್‌ನ್ನು ಆರು ಪಿಂಟ್ಸ್‌‌ನಷ್ಟು ಸೇವಿಸಲು ಅವಕಾಶವಿತ್ತೆಂದು ಆ ಸಮಯದ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ. ಸಿಡರ್ ಮತ್ತು ಪೊಮ್ಯಾಸ್ ವೈನ್‌ ಕೂಡ ವ್ಯಾಪಕವಾಗಿ ಲಭ್ಯವಿತ್ತು. ದ್ರಾಕ್ಷಾ ವೈನ್‌ಗಳು ವಿಶೇಷಾಧಿಕಾರ ಹೊಂದಿದ್ದ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು.

15ನೇಯ ಶತಮಾನದಲ್ಲಿ ಯೂರೋಪಿನವರು ಅಮೆರಿಕಾ ತಲುಪಿದ ಸಮಯದಲ್ಲಿ, ಹಲವಾರು ಸ್ಥಳೀಯ ನಾಗರಿಕರು ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಅಭಿವೃದ್ಧಿ ಪಡಿಸಿದ್ದರು. ಆಜ್ಟೆಕ್ ವಿಜಯದ ನಂತರದ ದಾಖಲೆಗಳ ಪ್ರಕಾರ ಸ್ಥಳೀಯ "ವೈನ್‌" ಆದ ಪಲ್ಗ್‌ ನ್ನು ಧಾರ್ಮಿಕವಾದ ಆಚರಣೆಗಳಿಗೆ ನಿಷೇಧಿಸಲಾಗಿತ್ತು. ಆದರೆ 70 ವರ್ಷದ ಜನರಿಗೆ ಉಚಿತವಾಗಿ ಒದಗಿಸಲಾಗುತ್ತಿತ್ತು. ದಕ್ಷಿಣ ಅಮೇರಿಕಾದ ಸ್ಥಳೀಯರು ಮರಗೆಣಸು ಅಥವಾ ಮೆಕ್ಕೆ ಜೋಳ (cauim , chicha )ಗಳಿಂದ ಬಿಯರ್‌ನಂತಹ ಉತ್ಪನ್ನ ತಯಾರಿಸುತ್ತಾರೆ, ಹುಳಿಬರಿಸುವುದಕ್ಕಿಂತ ಮೊದಲಿಗೆ ಅರೆಯುವುದರಿಂದ ಪಿಷ್ಟವು ಸಕ್ಕರೆಯಾಗಿ ರೂಪಾಂತರವಾಗುತ್ತದೆ. ಅಕ್ಕಿ ಮತ್ತು ಇತರ ಪಿಷ್ಟ ಹೊಂದಿದ ಪದಾರ್ಥಗಳಿಂದ ಜಪಾನರ ಅಕ್ಕಿ ಮದ್ಯ ತಯಾರಿಸಲು ಈ ಅರೆಯುವ ಪದ್ಧತಿಯನ್ನು ಪ್ರಾಚೀನ ಜಪಾನಿನಲ್ಲೂ ಬಳಸಲಾಗುತ್ತಿತ್ತು.

ಕ್ರಿ.ಪೂ. 2100 ಅಥವಾ ಅದಕ್ಕಿಂತ ಪೂರ್ವದಲ್ಲಿ ಸುಮೇರಿಯನ್ ಮತ್ತು ಈಜಿಪ್ಟಿಯನ್ ಗ್ರಂಥಗಳಲ್ಲಿ ಆಲ್ಕೊಹಾಲನ್ನು ಔಷಧಿಯ ಉದ್ದೇಶಕ್ಕಾಗಿ ಬಳಸಿರುವುದನ್ನು ಉಲ್ಲೇಖಿಸಲಾಗಿದೆ. ಸಾಯುತ್ತಿರುವವರಿಗೆ ಮತ್ತು ಖಿನ್ನತೆಯಿಂದ ಬಳಲುತ್ತಿರುವವರಿಗೆ ತಮ್ಮ ನೋವನ್ನು ಮರೆಯಲು ಆಲ್ಕೊಹಾಲ್ ನೀಡಬಹುದು ಎಂದು ಹಿಬ್ರೂ ಬೈಬಲ್ ಸೂಚಿಸಿದೆ. (ಪ್ರೊವರ್ಬ್ಸ್ 31:6-7).

ಬಟ್ಟಿ ಇಳಿಸಿದ ಮದ್ಯಗಳು

ಯೂರೋಪಿನಲ್ಲಿ 12ನೇಯ ಶತಮಾನದ ಮಧ್ಯಭಾಗದಲ್ಲಿ ಮೊದಲ ದಾಖಲೆ ಕಂಡುಬರುತ್ತದೆ. 14ನೇಯ ಶತಮಾನದ ಮೊದಲಿಗೆ ಖಂಡದ ಪೂರ್ತಿ ವ್ಯಾಪಿಸಿತು.[೪೭] ಇದು ಪೂರ್ವಭಾಗಕ್ಕೆ ಮುಖ್ಯವಾಗಿ ಮಂಗೋಲಿಯನ್ನರಿಗೆ ಹರಡಿತು, ಮತ್ತು ಚೀನಾದಲ್ಲಿ 14ನೇಯ ಶತಮಾನಕ್ಕಿಂತ ಮೊದಲಿಗೆ ಪ್ರಾರಂಭವಾಗಿರಲಿಲ್ಲ. ಪ್ಯಾರಾಸೆಲ್ಸಸ್ ಆಲ್ಕೊಹಾಲ್‍ಗೆ‌ ಆಧುನಿಕ ಹೆಸರನ್ನು ನೀಡಿದನು. ಇದನ್ನು ಅರೇಬಿಕ್ ಶಬ್ದದಿಂದ ತೆಗೆದುಕೊಳ್ಳಲಾಗಿದ್ದು ಇದರರ್ಥ "ಅಂತಿಮವಾಗಿ ವಿಭಜಿಸಿದ್ದು" ,ಅಂದರೆ ಬಟ್ಟಿ ಇಳಿಸಿದ್ದು ಎಂದು.

ಅಮೆರಿಕಾದ ಇತಿಹಾಸದಲ್ಲಿ ಆಲ್ಕೊಹಾಲ್‌ಯುಕ್ತ ಪಾನೀಯ

19ನೇಯ ಶತಮಾನದ ಮೊದಲಿಗೆ ಅಮೆರಿಕಾದವರು ವಂಶಪಾರಂಪರ್ಯವಾಗಿಯೇ ಆದರಪೂರ್ವಕವಾದ ಕುಡಿತದ ಸಂಪ್ರದಾಯ ಹೊಂದಿದ್ದಾರೆ. ಹಲವಾರು ವಿಧವಾದ ಆಲ್ಕೊಹಾಲ್‌ಯುಕ್ತ ಪಾನೀಯವನ್ನು ಸೇವಿಸುತ್ತಾರೆ. ಇಲ್ಲಿನವರು ಅತಿ ಹೆಚ್ಚು ಕುಡಿಯಲು ಕಾರಣ ಪಶ್ಚಿಮ ಪ್ರದೇಶದಲ್ಲಿ ಸಮೃದ್ಧವಾಗಿ ಜೋಳ ಬೆಳೆಯುವುದೇ ಆಗಿರಬಹುದು. ಸಮೃದ್ಧವಾಗಿ ಜೋಳ ಬೆಳೆಯುವುದು ವ್ಯಾಪಕವಾಗಿ ಕಡಿಮೆ ವೆಚ್ಚದಲ್ಲಿ ವಿಸ್ಕಿ ತಯಾರಿಸಲು ಉತ್ತೇಜಿಸುತ್ತದೆ. ಇವತ್ತಿನ ದಿನದಲ್ಲಿ ಅಮೆರಿಕಾದಲ್ಲಿ ಆಲ್ಕೊಹಾಲ್‌ಯುಕ್ತ ಪಾನೀಯಗಳು ಡಯಟ್‌ನ ಪ್ರಮುಖ ಅಂಗವಾಗಿವೆ. 1820ರ ಮಧ್ಯ ಅವಧಿಯಲ್ಲಿ, ಅಮೆರಿಕಾದ ಪ್ರತಿಯೊಬ್ಬರು ವರ್ಷದಲ್ಲಿ ಏಳು ಗ್ಯಾಲನ್ ಆಲ್ಕೊಹಾಲ್ ಸೇವಿಸಿದ್ದಾರೆ.[೪೮][೪೯]

19ನೇಯ ಶತಮಾನದ ಸಮಯದಲ್ಲಿ, ಅಮೆರಿಕಾದವರು ಸಮೃದ್ಧವಾಗಿ ಆಲ್ಕೊಹಾಲ್‌ ಬಳಸಿದ್ದಾರೆ ಮತ್ತು ಎರಡು ವಿಭಿನ್ನ ರೀತಿಯಲ್ಲಿ ಸೇವಿಸಿದ್ದಾರೆ.

ಮೊದಲನೇಯ ವಿಧ, ಮನೆಯಲ್ಲಿ ಅಥವಾ ಏಕಾಂಗಿಯಾಗಿ ಪ್ರತಿನಿತ್ಯವು ಒಂದು ಪ್ರಮಾಣದಲ್ಲಿ ನಿರಂತರವಾಗಿ ಸೇವಿಸುವುದು. ಇನ್ನೊಂದು ವಿಧ ಸಾಮುದಾಯಿಕ ಪಾನಗೋಷ್ಠಿಗಳು. ಚುನಾವಣೆಗಾಗಿ, ನ್ಯಾಯಾಲಯ ಸಭೆ, ಮಿಲಿಟರಿ ಮಸ್ಟರ್‌ಗಳು, ರಜಾದಿನಗಳ ಸಂಭ್ರಮಾಚರಣೆಗಳು, ಸ್ನೇಹದ ಹಬ್ಬಗಳಲ್ಲಿ ಹಲವಾರು ಜನರು ಸಾರ್ವಜನಿಕವಾಗಿ ಸೇರಿ ಕುಡಿಯುತ್ತಾರೆ. ಇದರಲ್ಲಿ ಭಾಗವಹಿಸಿದವರು ಮತ್ತೆರುವ ತನಕ ಕುಡಿಯುತ್ತಾರೆ.

ರಸಾಯನ ವಿಜ್ಞಾನ ಮತ್ತು ವಿಷವಿಜ್ಞಾನ

ಎಥೆನಾಲ್ (CH3CH2OH), ಅಲ್ಕೊಹಾಲ್‌ನಲ್ಲಿರುವ ಒಂದು ಕ್ರಿಯಾತ್ಮಕ ಪದಾರ್ಥವಾಗಿದೆ. ಆಮ್ಲಜನಕ ಇಲ್ಲದಿರುವಲ್ಲಿ ಕೆಲವೊಂದು ಬಗೆಯ ಯೀಸ್ಟ್‌ಗಳಿಂದ ಕಾರ್ಬೊಹೈಡ್ರೇಟ್ ಚಯಾಪಚಯ ನಡೆದು ಹುದುಗುಬರಿಸಿ ಉತ್ಪಾದಿಸಿ ಬಳಸಲಾಗುತ್ತದೆ. ಆಲ್ಕೊಹಾಲ್ ಉತ್ಪಾದಿಸಲು ಯೀಸ್ಟ್ ಬೆಳೆಸುವ ಪ್ರಕ್ರಿಯೆಯಿಂದ ಬಟ್ಟಿ ಇಳಿಸಲಾಗುತ್ತದೆ. ಈ ಸ್ಥಳದಲ್ಲಿ ಇದೆ ತೆರನಾದ ಪ್ರಕ್ರಿಯೆಯಿಂದ ಕಾರ್ಬನ್ ಡೈಯಾಕ್ಸೈಡ್ ಉತ್ಪಾದಿಸಲಾಗುತ್ತದೆ, ಮತ್ತು ಕಾರ್ಬೊನೆಟ್ ಬೆರೆಸಲು ಬಳಸಬಹುದು. ಆದರೆ ಕೈಗಾರಿಕಾ ಮಾಪನದ ಪ್ರಕಾರ ಈ ವಿಧಾನದಲ್ಲಿ ಯೀಸ್ಟ್‌ಗಳು ಹಾಗೇ ಉಳಿಯುತ್ತವೆ, ಇಂಗಾಲದ ಡೈಯಾಕ್ಸೈಡನ್ನು ಪ್ರತ್ಯೇಕವಾಗಿ ಬೇರ್ಪಡಿಸಲಾಗುತ್ತದೆ.

ಪಾನೀಯದಲ್ಲಿ 50 ಕ್ಕಿಂತ ಹೆಚ್ಚಿಗೆ ಎಥೆನಾಲ್ ಅಂಶವಿರುತ್ತದೆ (100 US proof) ಇದರಿಂದಾಗಿ ಸುಲಭವಾಗಿ ಹೊತ್ತಿ ಉರಿಯುವ ದ್ರವವಾಗುವುದರಿಂದ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಉದ್ದೇಶಪೂರ್ವಕವಾಗಿ ಬಿಸಿಮಾಡುವ ಮೂಲಕ ಕೆಲವೊಂದು ಬಗೆಯ ಪಾನೀಯಗಳು ವಿನೂತನವಾದ ವಿಶಿಷ್ಟ ರುಚಿ ಪಡೆದುಕೊಳ್ಳುತ್ತವೆ, ಉದಾಹರಣೆಗೆ ಫ್ಲೆಮ್ಮಿಂಗ್ ಡಾ ಪೆಪ್ಪರ್. ಹೆಚ್ಚಿಗೆ ಎಥೆನಾಲ್ ಅಂಶ ಹೊಂದಿರುವ ಸ್ಪಿರಿಟ್‌ಗಳು ಸ್ಪಲ್ಪವೇ ಬಿಸಿ ಮಾಡುವ ಮೂಲಕ ಸುಲಭವಾಗಿ ಹೊತ್ತಿಕೊಳ್ಳುತ್ತದೆ, ಉದಾಹರಣೆಗೆ ಒಂದು ಬಿಸಿ ಮಾಡಿದ ಗ್ಲಾಸ್‌ನಲ್ಲಿ ಸ್ಪಿರಿಟ್ ಸೇರಿಸಿ.

ಜಠರದಲ್ಲಿನ ಎಂಜೈಮ್ ಆಲ್ಕೊಹಾಲ್ ಡಿಹೈಡ್ರೋಜಿನೈಸ್ ಆಕ್ಸಿಡೈಜ್ಸ್ ಎಥೆನಾಲ್ ಅನ್ನು ಅಸಿಟಾಲ್‍ಡಿಹೈಡ್ ಆಗಿ ಪರಿವರ್ತಿಸುತ್ತದೆ. ಇದು ನಂತರ ಅಸಿಟಾಲ್‌ಡಿಹೈಡ್ ಡಿಹೈಡ್ರೊಜಿನೈಸ್ ಆಗಿ ಪರಿವರ್ತಿಸುತ್ತದೆ. ಎಥೆನಾಲ್ ಅನ್ನು ಅಸಿಟಾಲ್‍ಡಿಹೈಡ್ ಆಗಿ ಚಯಾಪಚಯ ಕ್ರಿಯೆಗೊಳಪಡಿಸುತ್ತದೆ. ನಂತರ ಇದು ಅಸಿಟಿಕ್ ಆಸಿಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಅಸಿಟಿಕ್ ಆಸಿಡ್ ಇದನ್ನು ಸಹಎಂಜೈಮ್ ಎ ಜೊತೆ ಪ್ರಕ್ರಿಯೆಗೊಳಪಡಿಸುವ ಮೂಲಕ ಅಸಿಟೈಲ್ CoA ಅನ್ನು ತಯಾರು ಮಾಡುತ್ತದೆ. ಅಸಿಟೈಲ್ CoAಯು ಅಸಿಟೈಲ್ ಮೊಯಿಟಿಯನ್ನು ಸಿಟ್ರಿಕ್ ಆಸಿಡ್ ಚಕ್ರವಾಗಿ ಪರಿವರ್ತಿಸುತ್ತದೆ. ಇದು ಅಸಿಟೈಲ್ ಮೊಯಿಟಿಯನ್ನು ಕಾರ್ಬನ್ ಡೈ ಆಕ್ಸೈಡ್ ಆಗಿ ಪರಿವರ್ತಿತಗೊಳಿಸುತ್ತದೆ. ಅಸಿಟೈಲ್ CoA ಅನ್ನು ಜೈವಿಕ ಸಂಶ್ಲೇಷಣೆಗೆ ಬಳಸಲಾಗುತ್ತದೆ. ಅಸಿಟೈಲ್ CoA ಸಕ್ಕರೆ ಮತ್ತು ಕೊಬ್ಬಿನ ಸಂಯೋಜನೆಯ ನಡುವೆ ಕಂಡುಬರುವ ಸಾಮಾನ್ಯ ರಾಸಾಯನಿಕವಾಗಿದೆ. ಮತ್ತು ಇದು ಗ್ಲೂಕೋಸ್‌ನ ರಾಸಾಯನಿಕ ಕ್ರಿಯೆಯಲ್ಲಿ ದೊರೆಯುವ ಗ್ಲೈಕೊಲೈಸಿಸ್‌ನಿಂದ ದೊರೆಯುವ ವಸ್ತುವಾಗಿದೆ.

ಇತರೆ ಆಲ್ಕೊಹಾಲ್‌ಗೆ ಹೋಲಿಸಿದಾಗ ಎಥೆನಾಲ್‌ನಲ್ಲಿ ಸ್ವಲ್ಪ ಮಾತ್ರವೇ ವಿಷದ ಅಂಶ ಇರುತ್ತದೆ. ಮಾನವರಲ್ಲಿ ಇದು 1400 mg/kg ಇರುತ್ತದೆ. (ನೂರು ಕೇಜಿ ತೂಗುವ ಮನುಷ್ಯನಲ್ಲಿ ಇದು 20ರ ಪ್ರಮಾಣದಲ್ಲಿರುತ್ತದೆ.) ಮತ್ತು LD50 9000 mg/kg (ಬಾಯಿ ಮೂಲಕ ತೆಗೆದುಕೊಳ್ಳುವುದು). ಆದರೆ ಮಹಿಳೆಯರು, ತೂಕ ಕಡಿಮೆ ಇರುವ ವ್ಯಕ್ತಿಗಳು, ಮಕ್ಕಳು ಅಕಾಸ್ಮಾತ್ ಆಗಿ ಹೆಚ್ಚು ಅಲ್ಕೊಹಾಲ್ ಅಂಶವಿರುವ ಪಾನೀಯ ಸೇವಿಸಿದರೆ ತುಂಬಾ ಆಪಾಯ ಉಂಟಾಗುತ್ತದೆ. ಇಂಥಹ ವ್ಯಕ್ತಿಗಳ ದೇಹದಲ್ಲಿ ಕಡಿಮೆ ಪ್ರಮಾಣದ ನೀರಿನಂಶವಿದ್ದು ಇದರಿಂದಾಗಿ ಅಲ್ಕೊಹಾಲ್ ಕಡಿಮೆ ಪ್ರಮಾಣದಲ್ಲಿ ದುರ್ಬಲವಾಗುತ್ತದೆ. ರಕ್ತದಲ್ಲಿ ಆಲ್ಕೊಹಾಲ್ ಅಂಶವು 50 ಯಿಂದ 100 mg/dL ಇದ್ದರೆ ಕಾನೂನಿನಲ್ಲಿ ಕುಡಿದು ಅಮಲೆರಿದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ (ಇದರ ವ್ಯಾಪ್ತಿಯು ಬೇರೆ ಬೇರೆಯಾಗಿರುತ್ತದೆ). 22 mg/dL ದೇಹದೊಳಗೆ ಸೇರಿದಾಗ ಇದರ ಪರಿಣಾಮ ಆರಂಭವಾಗುತ್ತದೆ.[೫೦]

ಆಲ್ಕೊಹಾಲ್‌ ಗಾಮಾ ಎಮಿನೊಬ್ಯುಟೈರಿಕ್ ಆ‍ಯ್‌ಸಿಡ್ (ಜಿಎಬಿಎ) ಗ್ರಾಹಿಗಳ ಮೇಲೆ ಪರಿಣಾಮ ಬೀರಿ ಸೆಡೆಟಿವ್ ಪರಿಣಾಮವನ್ನು ಉಂಟುಮಾಡುತ್ತದೆ. ಆಲ್ಕೊಹಾಲ್ ಬಾರ್ಬಿಟರೆಟ್ಸ್ ಮತ್ತು ಬೆಂಜೊಡೈಜೆಪೈನ್ಸ್ ನಂತಹ ಸೆಡೆಟಿವ್ ಹಿಪ್ನಾಟಿಕ್ಸ್‌ಗೆ ಆಲ್ಕೊಹಾಲ್ ಹೋಲಿಸಬಹುದು. ಈ ಎರಡು ಸೆಡೆಟಿವ್‌ಗಳು GABAA ಮೇಲೆ ಪರಿಣಾಮ ಬೀರುತ್ತದೆ. ಆದರೂ ಇದರ ಔಷಧಿಯ ಗುಣಗಳನ್ನು ಇನ್ನೂ ಗುರುತಿಸಿಲ್ಲ. ಇದೊಂದು ಕೋಪಶಮನಕಾರಿ, ಸೆಳವು ನಿರೋಧಕ, ಸಂಮೋಹಕ, ಮತ್ತು ಸೆಡೆಟಿವ್‌ಗಳು. ಇತರೆ ಹಲವಾರು ರೀತಿಯ ಸೆಡೆಟಿವ್-ಹಿಪ್ನಾಟಿಕ್ ಔಷಧದಂತಹ ಪರಿಣಾಮ ಉಂಟಾಗುತ್ತದೆ. ಆಲ್ಕೊಹಾಲ್ ಇದು ಬೆಂಜಾಡಿಯಾಜೆಪೈನ್ಸ್ ಮತ್ತು ಬಾರ್ಬಿಟ್ಯುರೇಟ್ಸ್ ಜೊತೆಗೆ ಹೊಂದಾಣಿಕೆಯನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.[೫೧]

ಮಿತಿಮೀರಿದ ಅಲ್ಕೊಹಾಲ್ ಕುಡಿತವು ನಿಧಾನವಾಗಿ ವಿಷ ಏರುವುದನ್ನು ಉತ್ತೇಜಿಸುತ್ತದೆ ಇದನ್ನು ಹ್ಯಾಂಗೋವರ್ ಎಂದು ಕರೆಯುತ್ತಾರೆ (ಲ್ಯಾಟಿನ್‌ನಲ್ಲಿ ಕ್ರ್ಯಾಪುಲಾ ಟಾಕ್ಸಿಕೇಶನ್ ಮತ್ತು ಹ್ಯಾಂಗೋವರ್ ಎಂಬುದನ್ನು ಸೂಚಿಸುತ್ತದೆ. ಇದಲ್ಲದೆ ಇನ್ನೂ ಹಲವಾರು ಕಾರಣಗಳು ಇಲ್ಲಿ ಕಂಡುಬರುತ್ತವೆ. ಎಥೆನಾಲ್ ವಿಷಕಾರಕವಾದ ಅಸಿಟಾಲ್ಡಿಹೈಡ್ ಅನ್ನು ಹೊಂದಿರುತ್ತದೆ. ಇದು ಕಾಂಜಿನರ್ ಎನ್ನುವ ಅಶುದ್ಧ ವಿಷಕಾರಕವನ್ನು ಬಿಡುಗಡೆ ಮಾಡುತ್ತದೆ. ಅಲ್ಲದೆ ಅದು ನಿರ್ಜಲೀಕರಣಕ್ಕೆ ಕೂಡ ಕಾರಣವಾಗುತ್ತದೆ. ಬೆಳಿಗ್ಗೆ ಮತ್ತು ಸಂಜೆ ಅಲ್ಕೊಹಾಲ್ ಕುಡಿದ ನಂತರ ಉತ್ಸಾಹಯುತ ಪರಿಣಾಮ ಬೀರಿ ಕ್ರಮೇಣ ಕಡಿಮೆಯಾಗಿ ಹ್ಯಾಂಗೊವರ್ ಪ್ರಾರಾಂಭವಾಗುತ್ತದೆ. ಆದರೆ ರಕ್ತದಲ್ಲಿರುವ ಆಲ್ಕೊಹಾಲ್ ಅಂಶವು ಜಾಸ್ತಿ ಪ್ರಮಾಣದಲ್ಲಿದ್ದಾಗ ಅಥವಾ ಮಿತಿಗಿಂತ ಜಾಸ್ತಿಯಿದ್ದಾಗ ಅಪಾಯಕಾರಿ ಉಪಕರಣಗಳ ಜೊತೆಗೆ ಇದ್ದಾಗ ಚಾಲಕರು ಮತ್ತು ಆಪರೇಟರ್‌ಗಳ ಮೇಲೆ ಪರಿಣಾಮ ಬೀರಿತ್ತದೆ. ಹ್ಯಾಂಗೋವರ್‌ನ ಪರಿಣಾಮ ಇಳಿಯಲು ಹೆಚ್ಚಿನ ಸಮಯ ಬೇಕು. ಹ್ಯಾಂಗೋವರ್ ಕಡಿಮೆ ಮಾಡಲು ಹಲವಾರು ರೀತಿಯ ಚಿಕಿತ್ಸೆಗಳನ್ನು ಸೂಚಿಸಲಾಗಿದ್ದು ಇವುಗಳಲ್ಲಿ ಕೆಲವು ವೈಜ್ಞಾನಿಕವಾಗಿಲ್ಲ.

ರಸಾಯನಶಾಸ್ತ್ರದಲ್ಲಿ, ಕಾರ್ಬನ್ ಅಣುವಿನೊಂದಿಗೆ ಸಂಯೋಜನೆ ಹೊಂದಿದ ಹೈಡ್ರಾಕ್ಸಲ್ ಗುಂಪಿನಲ್ಲಿ (-OH) ಜೈವಿಕ ಅಂಶ ಹೊಂದಿರುವ ಯಾವುದೇ ಮಿಶ್ರಣವನ್ನು ಆಲ್ಕೊಹಾಲ್‌ ಎಂದು ಕರೆಯಲಾಗುತ್ತದೆ. ಇದು ಪರಿವರ್ತನೆ ಹೊಂದಿ ಇತರೆ ಕಾರ್ಬನ್ ಅಣುಗಳು ಮತ್ತು ಹೆಚ್ಚಿನ ಜಲಜನಕದೊಂದಿಗೆ ಸಂಯೋಗವಾಗಬಹುದು. ಪ್ರೊಪಿಲೈನ್ ಗ್ಲೈಕೋಲ್ ಮತ್ತು ಶುಗರ್ ಆಲ್ಕೊಹಾಲ್ ನಂತಹ ಆಲ್ಕೊಹಾಲ್‌ಗಳು ಆಹಾರದಲ್ಲಿ ಅಥವಾ ಪಾನೀಯದಲ್ಲಿ ನಿಯತವಾಗಿ ಕಂಡುಬರಬಹುದು, ಆದರೆ ಇವುಗಳು "ಕುಡುಕನಾಗಿ ಮಾಡುವುದಿಲ್ಲ. ಮೆಥನಾಲ್ (ಒಂದು ಕಾರ್ಬನ್ ಹೊಂದಿರುವ), ಪ್ರೊಪನಲ್ (ಮೂರು ಕಾರ್ಬನ್‌ಗಳು ಎರಡು ಒಂದೇ ಅಣುಸೂತ್ರವಿರುವ ಆದರೆ ಪರಮಾಣುಗಳ ಜೋಡಣೆ ಭಿನ್ನವಾಗಿರುವ ರಾಸಾಯನಿಕ ಸಂಯುಕ್ತಗಳನ್ನು ನೀಡುತ್ತವೆ), ಮತ್ತು ಬ್ಯುಟನಲ್‌ಗಳು (ನಾಲ್ಕು ಕಾರ್ಬನ್‌ಗಳು,ನಾಲ್ಕು ಒಂದೇ ಅಣುಸೂತ್ರವಿರುವ ಆದರೆ ಪರಮಾಣುಗಳ ಜೋಡಣೆ ಭಿನ್ನವಾಗಿರುವ ರಾಸಾಯನಿಕ ಸಂಯುಕ್ತ) ಆಲ್ಕೊಹಾಲ್‌ನಲ್ಲಿರುತ್ತವೆ, ಮತ್ತು ಇವುಗಳನ್ನು ಹೊರತುಪಡಿಸಿ ಯಾವುದೇ ರೀತಿಯಲ್ಲು ಬಳಸಲಾಗುವುದಿಲ್ಲ. ಆಲ್ಕೊಹಾಲ್ ಆಲ್ಡಿಹೈಡ್ಸ್ ಜೊತೆಗೆ ಹೊಂದಿಕೊಂಡು ನಂತರ ಕಾರ್ಬೊಕ್ಸಿಲಿಕ್ ಆ‍ಮ್ಲದ ಜೊತೆಗೆ ಹೊಂದಿಕೊಂಡು ವಿಷವಾಗುತ್ತದೆ. ಈ ಚಯಾಪಚಯ ಉತ್ಪನ್ನಗಳು ವಿಷಾವಾಗುವಿಕೆಗೆ ಮತ್ತು ಆಮ್ಲವ್ಯಾಧಿಗೆ ಕಾರಣವಾಗುತ್ತವೆ. ಇಥೆನಾಲ್‌ ಹೊರತು ಪಡಿಸಿ ಇತರೆ ಆಲ್ಕೊಹಾಲ್‌ಗಳಾದ ಆಲ್ಡಿಹೈಡ್ಸ್ ಮತ್ತು ಕಾರ್ಬೊಕ್ಸಿಲಿಕ್ ಆಮ್ಲಗಳು ವಿಷಕಾರಿ ಮತ್ತು ಆಮ್ಲವ್ಯಾಧಿಗೆ ಕಾರಣವಾಗಿ ಮರಣವನ್ನು ತರಬಹುದು. ಎಥೆನಾಲ್ ಹೆಚ್ಚುವರಿ ಡೋಸ್‌ನಲ್ಲಿ ಪ್ರಮುಖವಾಗಿದ್ದು ಪ್ರಜ್ಞೆತಪ್ಪಲು ಕಾರಣವಾಗುತ್ತವೆ ಅಥವಾ ತೀವ್ರವಾಗಿ ಇದಕ್ಕೆ ಅಂಟಿಕೊಳ್ಳುವಂತೆ ಮಾಡುತ್ತದೆ.

ಆಲ್ಕೊಹಾಲ್‌ಯುಕ್ತ ಪಾನೀಯದಲ್ಲಿರುವ ಕಚ್ಚಾ ವಸ್ತುಗಳು

ಹುದುಗು ಬರಿಸಿದ ಪದಾರ್ಥಗಳ ಆಧಾರದ ಮೇಲೆ ಕೆಲವು ಪಾನಿಯಗಳಿಗೆ ಹೆಸರನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಅತಿ ಹೆಚ್ಚು ಪಿಷ್ಟದ ಅಂಶ ಹೊಂದಿರುವ ( ಧಾನ್ಯ ಅಥವಾ ಆಲೂಗಡ್ಡೆ)ವಸ್ತುಗಳನ್ನು ಹುದುಗುಬರಿಸಲಾಗುತ್ತದೆ, ಮೊದಲು ಪಿಷ್ಟದಲ್ಲಿರುವ ಸಕ್ಕರೆಯ ಅಂಶವನ್ನು ಹೊರತೆಗೆಯಲಾಗುತ್ತದೆ (ಉದಾಹರಣೆಗೆ ಮೊಳಕೆ ಧಾನ್ಯಸಾರ). ಇದನ್ನು ಬಿಯರ್ ಎಂದು ಕರೆಯಲಾಗುತ್ತದೆ; ಇದನ್ನು ರುಬ್ಬಿ ಬಟ್ಟಿ ಇಳಿಸಲಾಗುತ್ತದೆ ಇದರಿಂದ ಕೊನೆಯದಾಗಿ ಹೊರ ತೆಗೆದ ವಸ್ತುವೇ ಸ್ಪಿರಿಟ್. ಹುದುಗು ಬರಿಸಿದ ದ್ರಾಕ್ಷಿಯ ರಸದಿಂದ ವೈನ್‌ ತಯಾರಿಸಲಾಗುತ್ತದೆ.

ಬ್ರಾಂಡೀ ಮತ್ತು ವೈನ್‌‌ಗಳನ್ನು ಕೇವಲ ದ್ರಾಕ್ಷಿಯಿಂದ ತಯಾರಿಸಲಾಗುತ್ತದೆ. ಇತರೆ ಪ್ರಕಾರದ ಹಣ್ಣುಗಳಿಂದ ಕೂಡ ಆಲ್ಕೊಹಾಲ್‌ಯುಕ್ತ ಪಾನೀಯವನ್ನು ತಯಾರಿಸಲಾಗುತ್ತದೆ, ಇದನ್ನು ಬೇರ್ಪಡಿಸಿ ಹಣ್ಣಿನ ಬ್ರಾಂಡೀ ಅಥವಾ ಹಣ್ಣಿನ ವೈನ್ ಎಂದು ಕರೆಯಲಾಗುತ್ತದೆ‌. ಹಣ್ಣಿನಿಂದ ತಯಾರಿಸಲಾದವುಗಳನ್ನು "ಚೆರ್ರಿ ಬ್ರಾಂಡೀ" ಅಥವಾ "ಪ್ಲಮ್ ವೈನ್‌" ಎಂದು ಸ್ಪಷ್ಟಪಡಿಸಬಹುದು.

ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾದಲ್ಲಿ, ಹುದುಗು ಬರಿಸದ ಸೇಬಿನ ರಸದಿಂದ ಸಿಡರ್ ತಯಾರಿಸಲಾಗುತ್ತದೆ. ಸಿಡರ್‌ನ್ನು ಹುಳಿಬರಿಸಿದರೆ ಅದನ್ನು ಹಾರ್ಡ್ ಸಿಡರ್ ಎಂದು ಕರೆಯಲಾಗುತ್ತದೆ. ಹುದುಗು ಬರಿಸದ ಸಿಡರ್‌ ನ್ನು ಕೆಲವೊಮ್ಮೆ ಸಿಹಿ ಸಿಡರ್ ಎಂದು ಕರೆಯಲಾಗುತ್ತದೆ. ಯುಕೆಯಲ್ಲಿ, ಸಿಡರ್‌ ನ್ನು ಕುಡಿತದ ಪಾನೀಯವೆಂದೇ ಹೇಳಲಾಗುತ್ತದೆ ಆದರೆ ಆಸ್ಟ್ರೇಲಿಯಾದಲ್ಲಿ ಇದರರ್ಥ ಅಸ್ಪಷ್ಟವಾಗಿದೆ.

ಬಿಯರ್‌‍ನ್ನು ಸಾಮಾನ್ಯವಾಗಿ ಬಾರ್ಲಿಯಿಂದ ತಯಾರಿಸಲಾಗುತ್ತದೆ, ಆದರೆ ಕೆಲವೊಮ್ಮೆ ಹಲವಾರು ರೀತಿಯ ಮಿಶ್ರ ಕಾಳುಗಳನ್ನು ಹೊಂದಿರುತ್ತದೆ. ವಿಸ್ಕಿ ಯನ್ನು ಕೆಲವೊಮ್ಮೆ ಭಿನ್ನ ಭಿನ್ನವಾದ ಧಾನ್ಯಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ, ಮುಖ್ಯವಾಗಿ ಐರಿಷ್ ವಿಸ್ಕಿಯು ಹಲವಾರು ರೀತಿಯ ಧಾನ್ಯಗಳನ್ನು ಒಳಗೊಂಡಿರುತ್ತದೆ. ವಿಸ್ಕಿಯ ಶೈಲಿಯು (ಸ್ಕಾಚ್, ರೇ, ಬೊರ್ಬನ್, ಕಾರ್ನ್) ಅದರಲ್ಲಿ ಬಳಸಿದ ಧಾನ್ಯಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇದರ ಮಿಶ್ರಣಕ್ಕೆ ಹೆಚ್ಚಿನದಾಗಿ ಧಾನ್ಯಗಳನ್ನು ಸೇರಿಸಲಾಗುತ್ತದೆ (ಹೆಚ್ಚಿನದಾಗಿ ಬಾರ್ಲಿ, ಕೆಲವೊಮ್ಮೆ ಓಟ್ಸ್ ಬಳಸಲಾಗುತ್ತದೆ). ಅಮೆರಿಕಾದ ಬೊರ್ಬನ್ ಮತ್ತು ರೇ ವಿಸ್ಕಿಗಳಲ್ಲಿ 51%ರಷ್ಟು ಅನುಕ್ರಮವಾಗಿ ಹುಳಿಬರಿಸಿದ ಅಂಶಗಳಿರುತ್ತವೆ. ಕಾರ್ನ್ ವಿಸ್ಕಿ (ಇದು ಬೊರ್ಬನ್ ವಿಸ್ಕಿ ತಯಾರಿಕೆಗೆ ವಿರುದ್ಧವಾಗಿದೆ) 81%ರಷ್ಟು ಹುಳಿಬರಿಸಿದ ಅಂಶಗಳಿರುತ್ತದೆ- ಅಮೆರಿಕಾದ ಕಾನೂನು ಫ್ರೆಂಚ್‌ನ ಎ.ಒ.ಸಿ (ಅಪೆಲೆಶನ್ ಡಿ‘ಒರಿಜಿನ್ ಕಂಟ್ರೋಲ್) ಹೋಲುತ್ತದೆ.

ಬಟ್ಟಿ ಇಳಿಸಿ ತಯಾರಿಸಲಾದ ಎರಡು ಸಾಮಾನ್ಯ ಪಾನೀಯಗಳು ವೊಡ್ಕಾ ಮತ್ತು ಜಿನ್. ವೊಡ್ಕಾವನ್ನು ಧಾನ್ಯ ಮತ್ತು ಆಲೂಗಡ್ಡೆಗಳನ್ನು ಹುದುಗು ಬರಿಸಿ ಬಟ್ಟಿ ಇಳಿಸಲಾಗುತ್ತದೆ. ಇದನ್ನು ಹೆಚ್ಚು ಬಟ್ಟಿ ಇಳಿಸುವುದರಿಂದ ಮೂಲವಸ್ತುವಿನ ಸುವಾಸನೆಯನ್ನು ಕಡಿಮೆ ಪ್ರಮಾಣದಲ್ಲಿ ಪ್ರಕಟಗೊಳಿಸುತ್ತದೆ. ಜಿನ್‌ನ್ನು ಮೂಲಿಕೆಗಳು ಮತ್ತು ಸಸ್ಯಗಳ ಇತರೆ ಉತ್ಪನ್ನಗಳನ್ನು ಬಟ್ಟಿ ಇಳಿಸಿ ಮುಖ್ಯವಾಗಿ ಜುನಿಪರ್ ಹಣ್ಣುಗಳಿಂದ ತಯಾರಿಸಲಾಗುತ್ತದೆ.

ಸ್ಥಿರಿಕರಿಸಿದ ಬಟ್ಟಿ ಇಳಿಸುವಿಕೆಯಿಂದ ಆ್ಯಪಲ್‌ಜ್ಯಾಕ್ ತಯಾರಿಸಲಾಗುತ್ತದೆ.

ಪದಾರ್ಥ ಅಂಶಗಳು

ಧಾನ್ಯಗಳು

ಮೂಲಹುದುಗಿದ ಪಾನೀಯದ ಹೆಸರುಬಟ್ಟಿ ಇಳಿಸಿದ ಪಾನೀಯದ ಹೆಸರು
ಬಾರ್ಲಿಬಿಯರ್‌, ಏಲ್‌, ಬಾರ್ಲಿ ವೈನ್‌ಸ್ಕಾಚ್ ವಿಸ್ಕೀ, ಐರಿಷ್ ವಿಸ್ಕೀ, ಶೊಚು (ಮಿಗೊಜೊಚು) (ಜಪಾನ್)
ರಾಯ್ರಾಯ್ ಬಿಯರ್‌, ಕ್ವಾಸ್ರಾಯ್ ವಿಸ್ಕೀ, ವೊಡ್ಕಾ (ಪೊಲ್ಯಾಂಡ್‌), ರೊಗನ್ ಕೊರ್ನ್ (ಜರ್ಮನಿ)
ಜೋಳಚಿಚ, ಜೋಳದ ಬಿಯರ್‌, ಟೆಸ್ಗಿನೊಬೊರ್ಬನ್ ವಿಸ್ಕೀ; ಮತ್ತು ವೊಡ್ಕಾ (ಅಪರೂಪವಾಗಿ)
ಸೋರ್ಗಮ್ಬುರುಕೊಟೊ (ನೈಜೀರಿಯಾ), ಪಿಟೊ (ಘಾನಾ), ಮೆರಿಸಾ (ಸೌದರ್ನ್ ಸುಡಾನ್), ಬಿಲಿಬಿಲಿ (ಚಾಡ್, ಸೆಂಟ್ರಲ್ ಆಫ್ರಿಕನ್ ತ್ರಿಪಬ್ಲಿಕ್, ಕ್ಯಾಮೆರೂನ್)ಮೌಟಾಯ್, ಗೌಲಿಯಾಂಗ್, ನ್ನಿತರ ವಿಧದ ಬೈಜಿಯು (ಚೀನಾ).
ಗೋಧಿಗೋಧಿ ಬಿಯರ್‌ವೊಡ್ಕಾ, ಗೋಧಿ ವಿಸ್ಕೀ, ವೈಜೆನ್‌ಕಾರ್ನ್ (ಜರ್ಮನಿ)
ಅಕ್ಕಿಬಿಯರ್‌, ಬ್ರೆಮ್ (ಬಾಲಿ), ಹ್ಯುಯಾಜಿಯು ಮತ್ತು ಚೌಜಿಯು (ಚೀನಾ), ರೌ ಗೌ (ವಿಯೆಟ್ನಾಂ), ಸಾಕೆ (ಜಪಾನ್), ಸೊಂಟಿ (ಭಾರತ), ಮಕ್ಗೆಯೊಲಿ (ಕೊರಿಯಾ), ಟೌಕ್ (ಬೊರ್ನೆಯೊ ದ್ವೀಪ), ಥೌನ್ (ನೇಪಾಳ)ಐಲ (ನೇಪಾಳ), ಅಕ್ಕಿ ಬೈಜಿಯು (ಚೀನಾ), ಶೊಚು (ಕೊಮೆಜೊಚು) ಮತ್ತು ಅವಮೊರಿ (ಜಪಾನ್), ಸೊಜು (ಕೊರಿಯಾ)
ಪೈರಿನ ಹುಲ್ಲುಪೈರಿನ ಹುಲ್ಲಿನ ಬಿಯರ್‌ (ಸಬ್-ಸಹರನ್ ಆಫ್ರಿಕಾ), ಟೊಂಗ್ಬ (ನೇಪಾಳ, ಟಿಬೆಟ್)
ಹುರುಳಿಶೊಚು(ಸೊಬಜೊಚು) (ಜಪಾನ್)

ಹಣ್ಣಿನ ರಸಗಳು

ಮೂಲಹುದುಗಿದ ಪಾನೀಯದ ಹೆಸರುಬಟ್ಟಿ ಇಳಿಸಿದ ಪಾನೀಯದ ಹೆಸರು
ದ್ರಾಕ್ಷಿ ಹಣ್ಣಿನ ರಸವೈನ್‌ಬ್ರಾಂಡೀ, ಕೊಹ್ನಾಕ್ (ಫ್ರಾನ್ಸ್‌), ವೆರ್ಮೊತ್, ಅರ್ಮನ್ಯಾಕ್ (ಫ್ರಾನ್ಸ್‌), ಬ್ರಾಂಟ್‌ವೈನ್(ಜರ್ಮನಿ), ಪಿಸ್ಕೊ (ಚೀಲೆ ಮತ್ತು ಪೆರು), ರಾಕಿಯ (ದ ಬಾಲ್ಕನ್ಸ್,ಟರ್ಕಿ), ಸೊಂಗಾನಿ (ಬೊಲಿವಿಯಾ), ಅರಾಕ್ (ಸಿರಿಯಾ, ಲೆಬೆನಾನ್, ಜೊರ್ಡಾನ್), ಟೊರ್ಕೊಲೈಪಲಿಂಕ (ಹಂಗೇರಿ)
ಸೇಬಿನ ರಸಸೈಡರ್ (ಸಂಯುಕ್ತ ಸಂಸ್ಥಾನ: "ಹಾರ್ಡ್ ಸೈಡರ್"), ಅಪೆಲ್ವಿನ್ಆ್ಯ‌ಪಲ್‌ಜಾಕ್ (ಅಥವಾ ಆ್ಯಪಲ್ ಬ್ರಾಂಡೀ), ಕಲ್ವಡೋಸ್, ಸೈಡರ್
ಸೀಬೆಕಾಯಿಯ ರಸಪೆರ್ರಿ, ಅಥವಾ ಪಿಯರ್ ಸೈಡರ್; ಪೊಯಿರೆ (ಫ್ರಾನ್ಸ್‌)ಪೊಯಿರೆ ವಿಲಿಯಮ್ಸ್, ಪಿಯರ್ ಬ್ರಾಂಡೀ, ಇಯು-ಡಿ-ವಿಯೆ (ಫ್ರಾನ್ಸ್‌), ಪಲಿಂಕ (ಹಂಗೇರಿ)
ಪ್ಲಮ್‌ಗಳ ರಸಪ್ಲಮ್‌ ವೈನ್‌ಸ್ಲಿವೊವಿಜ್, ಜುಯಿಕ(tzuica), ಪಾಲಿಂಕ, ಉಮೆಶು, ಪಾಲಿಂಕ
ಅನಾನಸ್‌ ಹಣ್ಣಿನ ರಸಟೆಪಚೆ (ಮೆಕ್ಸಿಕೊ)
ಬಾಳೆಹಣ್ಣು ಅಥವಾ ಬಾಳೆಚುಒಯಿ ಹಾಟ್ (ವಿಯೆಟ್ನಾಂ), ಉರ್ಗ್ವಾಗ್ವಾ (ಉಗಾಂಡಾ, ರ್ವಾಂಡ), ಎಂಬೀಜ್(mbege) (ಹುದುಗು ಹಾಕಿದ ಧಾನ್ಯ; ತಾಂಜಾನಿಯಾ), ಕಸಿಕಿಸಿ (ಹುದುಗು ಬರಿಸಿದ ಸೋರ್ಗಮ್; ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ)
ಗೌಂಕಿಗೌಂಕಿ ಜಿಯು (ಚೀನಾ)ಗೌಂಕಿ ಜಿಯು (ಚೀನಾ)
ತೆಂಗಿನಕಾಯಿಟಾಡಿ(ಶ್ರಿಲಂಕಾ)ಅರ್ಯಾಕ್, ಲಬಾಂಗ್( ಶ್ರಿಲಂಕಾ, ಭಾರತ, ಫಿಲಿಪಿನ್)
ಶುಂಠಿ ಸಕ್ಕರೆಯೊಂದಿಗೆ, ಒಣದ್ರಾಕ್ಷಿಯೊಂದಿಗೆ ಶುಂಠಿಶುಂಠಿಯ ಏಲ್‌, ಶುಂಠಿಯ ಬಿಯರ್‌, ಶುಂಠಿಯ ವೈನ್‌
ಮೈರಿಕ ರುಬ್ರಯಂಜ್ಮೆಯಿ ಜಿಯು (ಚೀನಾ)ಯಂಜ್ಮೆಯಿ ಜಿಯು(yangmei jiu) (ಚೀನಾ)
ಪಮೆಸ್ಪಮೆಸ್ ವೈನ್‌ರಾಕಿ/ಔಜೊ/ಪಾಸ್ಟಿಸ್/ಸಂಬುಕ (ಟರ್ಕಿ/ಗ್ರೀಸ್/ಫ್ರಾನ್ಸ್‌/ಇಟಲಿ), ಸೊಪೌರೊ/ಸೊಕೌಡಿಯ (ಗ್ರೀಸ್‌), ಗ್ರಪ್ಪ (ಇಟಲಿ‌), ಟ್ರೆಸ್ಟರ್ (ಜರ್ಮನಿ), ಮಾರ್ಕ್ (ಫ್ರಾನ್ಸ್‌), ಜಿವಾನಿಯಾ (ಸೈಪ್ರಸ್‌), ಅಗ್ವರ್ಡೆಂಟೆ (ಪೊರ್ಚುಗಲ್‌), ಟೆಸ್ಕೊವಿನ (ರೊಮೇನಿಯಾ), ಅರಾಕ್ (ಇರಾಕ್‌)

ತರಕಾರಿಗಳು

ಮೂಲಹುದುಗಿದ ಪಾನೀಯದ ಹೆಸರುಬಟ್ಟಿ ಇಳಿಸಿದ ಪಾನೀಯದ ಹೆಸರು
ಶುಂಠಿಯ ಬೇರಿನ ರಸಶುಂಠಿ ಬಿಯರ್‌ (ಬೊಟ್ಸ್‌ವಾನ)
ಆಲೂಗಡ್ಡೆ ಅಥವಾ ಧಾನ್ಯಆಲೂಗಡ್ಡೆ ಬಿಯರ್‌ವೊಡ್ಕಾ: ಅಲೂಗಡ್ಡೆಗಳನ್ನು ಹೆಚ್ಚಾಗಿ ಪೊಲ್ಯಾಂಡ್‌ ಮತ್ತು ಜರ್ಮನಿಯಲ್ಲಿ ಬಳಸುತ್ತಾರೆ, ಇಲ್ಲವಾದರೆ ಆಲೂಗಡ್ಡೆಗಳು ಅಥವಾ ಧಾನ್ಯಗಳು. ಆಲೂಗಡ್ಡೆಗಳು ಅಥವಾ ಧಾನ್ಯಗಳಿಂದ ಮಾಡಲಾದ ಸಾಂದ್ರವಾದ ಪೇಯವಾದ ಅಕ್ವವಿಟ್, ಸ್ಕಾಂಡಿನೇವಿಯಾದಲ್ಲಿ ಪ್ರಸಿದ್ಧವಾಗಿದೆ . ಐರ್ಲೆಂಡ್‌ನಲ್ಲಿ ಪೊಯಿಟಿನ್ (ಅಥವಾ ಪೊಟೀನ್) ಆಲೂಗಡ್ಡೆಯಿಂದ ಮಾಡಲಾದ ಸಾಂಪ್ರದಾಯಿಕ ಮದ್ಯವಾಗಿದೆ, ಆದರೆ ಇದು 1661ರಿಂದ 1997ರ ವರೆಗೆ ಕಾನೂನುಬಾಹಿರವಾಗಿತ್ತು.
ಸಿಹಿ ಆಲೂಗಡ್ಡೆಶೊಚು (ಇಮೊಜೊಚು) (ಜಪಾನ್), ಸೊಜು (ಕೊರಿಯಾ)
ಮರಗೆಣಸು/ಮ್ಯಾನಿಯಾಕ್/ಯುಕನಿಹಮಂಚಿ (ದಕ್ಷಿಣ ಅಮೇರಿಕಾ), ಕಸಿರಿ (ಸಬ್-ಸಹರನ್ ಆಫ್ರಿಕಾ), ಚಿಚ (ಎಕ್ವಡೋರ್)
ಕಬ್ಬಿನ, ಅಥವಾ ಕಾಕಂಬಿಯ ರಸಬಸಿ, ಬೆಟ್ಸ-ಬೆಟ್ಸ್ (ಪ್ರಾದೇಶಿಕ)ರಮ್ (ಕೆರಿಬಯನ್), ಪಿಂಗ ಅಥವಾ ಕಶಸ (ಬ್ರೆಸಿಲ್‌), ಅಗ್ವರ್ಡಿಯೆಂಟೆ, ಗ್ವಾರೊ
ಭೂತಾಳೆ ರಸಪುಲ್ಕೆಟೆಕ್ವಿಲ್ಲ, ಮೆಜ್ಕಲ್, ರೈಸಿಲ್ಲ

ಇತರೆ

ಮೂಲಹುದುಗಿದ ಪಾನೀಯದ ಹೆಸರುಬಟ್ಟಿ ಇಳಿಸಿದ ಪಾನೀಯದ ಹೆಸರು
ಪಾಮ್ ಸಸ್ಯರಸಕೊಯಲ್ ವೈನ್‌ (ಮಧ್ಯ ಅಮೇರಿಕಾ), ಟೆಂಬೊ (ಸಬ್-ಸಹರನ್ ಆಫ್ರಿಕಾ), ಟಾಡಿ (ಭಾರತದ ಉಪಖಂಡ)
ಅರೆಂಗ ಪಿನ್ನಾಟದ , ತೆಂಗಿನ, ಬರಸ್ಸಸ್ ಪ್ಲಬೆಲಿಫೆರ್‌ಗಳ ಸಸ್ಯರಸಟುಆಕ್ (ಇಂಡೋನೇಷ್ಯಾ)ಅರಾಕ್
ಜೇನುತುಪ್ಪಮೀಡ್, ಟೆಜ್ (ಇಥಿಯೋಪಿಯಾ)ಬಟ್ಟಿ ಇಳಿಸಿದ ಮೀಡ್ (ಮೀಡ್ ಬ್ರಾಂಡೀ ಅಥವಾ ಜೇನುತುಪ್ಪದ ಬ್ರಾಂಡೀ)
ಹಾಲುಕುಮಿಸ್, ಕೆಫಿರ್, ಬ್ಲಾಂಡ್
ಸಕ್ಕರೆಕಿಲ್ಜು ಮತ್ತು ಮೀಡ್ ಅಥವಾ ಸಿಮ (ಫಿನ್‌ಲ್ಯಾಂಡ್)ಶೊಚು (ಕೊಕುಟೊ ಶೊಚು): ಬ್ರೌನ್‌ಶುಗರ್‌‌ನಿಂದ ಮಾಡಲಾಗಿದೆ (ಜಪಾನ್)

ಉಲ್ಲೇಖಗಳು

ಬಾಹ್ಯ ಕೊಂಡಿಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: