ಲಿಯೊನೆಲ್‌ ಮೆಸ್ಸಿ

ಲಿಯೋನೆಲ್ ಆಂಡ್ರೇಸ್ ಮೆಸ್ಸಿ (Spanish pronunciation: [ljoˈnel anˈdɾes ˈmesi];ಜನನ 24 ಜೂನ್ 1987) ಅರ್ಜಂಟೀನಾ ಫುಟ್ಬಾಲ್ ಆಟಗಾರ. ಈತ ಸದ್ಯಕ್ಕೆ MLS ದ Inter Miami CF ತಂಡಕ್ಕೆ ಮತ್ತು ಅರ್ಜೇಂಟೀನ ರಾಷ್ಟ್ರೀಯ ತಂಡಕ್ಕೆ ಆಟವಾಡುತ್ತಾನೆ.

Lionel Messi
Personal information
Full nameLionel Andrés Messi[೧][೨]
Date of birth (1987-06-24) ೨೪ ಜೂನ್ ೧೯೮೭ (ವಯಸ್ಸು ೩೬)
Place of birthRosario, Argentina
Height1.69 m (5 ft 7 in)[೧]
Playing positionWinger / Striker
Club information
Current club Inter Miami
Number10
Youth career
1995–2000Newell's Old Boys
2000–2004

Barcelonayouthclubs3. = Paris Saint-German

youthclubs4. = Inter Miami CF
Senior career*
YearsTeamApps(Gls)
2004–2005Barcelona B5(0)
2004–Barcelona304(275)
National team
2005Argentina U207(6)
2008Argentina U235(2)
2005–Argentina97(45)
Honours
  • ಟೆಂಪ್ಲೇಟು:Infobox football biography 2/medal|-! colspan="3" style="text-align:center;vertical-align:middle;background-color:#eeeeee;" class="adr" | Representing  ಅರ್ಜೆಂಟೀನ |-! colspan="3" style="text-align:center;vertical-align:middle;background-color:#eeeeee;" | Men's Football |-| style="text-align:center;vertical-align:middle;" | Gold medal – first place|| style="text-align:center;vertical-align:middle;" | 2008 Beijing || style="text-align:center;vertical-align:middle;" | Team Competition|}
  • Senior club appearances and goals counted for the domestic league only and correct as of 30 January 2010.

† Appearances (Goals).

‡ National team caps and goals correct as of 14 November 2009

ಮೆಸ್ಸಿಯನ್ನು ಅವನ ಪೀಳಿಗೆಯ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿದೆ[೩][೪][೫]. ಇವನು 7 Ballon d'Or (ಚಿನ್ನದ ಚೆಂಡು)ಪ್ರಶಸ್ತಿಯ ಜೊತೆಗೆ FIFA ವರ್ಷದ ವಿಶ್ವ ಆಟಗಾರ ಎಂದು 21ನೇ ವಯಸ್ಸಿಗೆ ನಾಮನಿರ್ದೇಶನಗೊಂಡಿದ್ದಾನೆ.[೬][೭][೮]

ಅವನ ಆಟದ ಶೈಲಿ ಹಾಗು ಸಾಮರ್ಥ್ಯವು ಫುಟ್ಬಾಲ್ ನ ದಂತಕಥೆ ಡೀಗೋ ಮರಡೋನನ ಆಟದ ಶೈಲಿಯನ್ನು ಹೋಲುತ್ತದೆ, ಮರಡೋನ ಮೆಸ್ಸಿಯನ್ನು ತನ್ನ "ಉತ್ತರಾಧಿಕಾರಿ" ಎಂದು ಸ್ವತಃ ಘೋಷಿಸಿದ್ದಾನೆ.[೯][೧೦]

ಮೆಸ್ಸಿ ಚಿಕ್ಕ ವಯಸ್ಸಿನಲ್ಲೇ ಫುಟ್ಬಾಲ್ ಆಡಲು ಪ್ರಾರಂಭಿಸಿದ ಮತ್ತು ಅವನ ಸಾಮರ್ಥ್ಯವನ್ನು ಬಾರ್ಸಿಲೋನಾ ಬೇಗನೆ ಗುರುತಿಸಿತು. ಅವನು 2000ದಲ್ಲಿ ರೊಸಾರಿಯೋ-ಮೂಲದ ನೆವೆಲ್'ಸ್ ಓಲ್ಡ್ ಬಾಯ್'ಸ್ ಯುವ ತಂಡವನ್ನು ತೊರೆದು ತನ್ನ ಕುಟುಂಬದ ಜೊತೆಗೆ ಯುರೋಪ್‌ಗೆ ವಲಸೆ ಹೋದ. ಬಾರ್ಸಿಲೋನಾ ಅವನ ಬೆಳವಣಿಗೆಯ ಹಾರ್ಮೋನ್ ಕೊರತೆಗೆ ಚಿಕಿತ್ಸೆಯನ್ನು ಕೊಡಿಸುವ ಪ್ರಸ್ತಾಪ ಮುಂದಿರಿಸಿತು. ತನ್ನ ಮೊದಲ ಪ್ರದರ್ಶನವನ್ನು 2004-05ರ ಕ್ರೀಡಾಋತುವಿನಲ್ಲಿ ನೀಡಿದ. ಒಂದು ಲೀಗ್ ಪಂದ್ಯದಲ್ಲಿ ಆಡಿದ ಅತಿ ಕಿರಿಯ ಫುಟ್ಬಾಲ್ ಆಟಗಾರ ಎಂದು ಲಾ ಲಿಗಾ ದಾಖಲೆ ಮುರಿಯುವುದರ ಜೊತೆಗೆ ಈತ ಪಂದ್ಯದಲ್ಲಿ ಲೀಗ್ ಗೋಲು ಹೊಡೆದ ಅತ್ಯಂತ ಕಿರಿಯ. ಮೆಸ್ಸಿಯ ಚೊಚ್ಚಲ ಕ್ರೀಡಾಋತುವಿನಲ್ಲಿ ಬಾರ್ಸಿಲೋನಾ ಲಾ ಲಿಗಾ ಗೆದ್ದಾಗ ಮೆಸ್ಸಿಗೆ ಪ್ರಮುಖ ಗೌರವಗಳು ಹಿಂಬಾಲಿಸಿದವು. ಜೊತೆಗೆ ಬಾರ್ಸಿಲೋನಾ ಲೀಗ್‌ನಲ್ಲಿ ಡಬಲ್ ಮತ್ತು 2006ರ UEFA ಚಾಂಪಿಯನ್ಸ್ ಲೀಗ್ ಗೆದ್ದುಕೊಂಡಿತು.

ಅವನಿಗೆ ಪ್ರಮುಖ ಪ್ರಗತಿಯನ್ನು ತಂದುಕೊಟ್ಟಿದ್ದು 2006-07ರ ಕ್ರೀಡಾಋತು: ಅವನು ಎಲ್ ಕ್ಲಾಸಿಕೊ ನಲ್ಲಿ ಮೂರು ಗೋಲು ಗಳನ್ನು ಗಳಿಸಿ ಜೊತೆಗೆ 26 ಲೀಗ್ ಪಂದ್ಯಗಳಲ್ಲಿ 14 ಗೋಲು‌ಗಳೊಂದಿಗೆ ಗುರಿ ಮುಟ್ಟಿ ಮೊದಲ ತಂಡದ ಕಾಯಂ ಆಟಗಾರನಾದ. ಬಹುಶಃ 2008-09ರ ಕ್ರೀಡಾಋತು ಅವನ ಪಾಲಿಗೆ ಅತ್ಯಂತ ಯಶಸ್ವಿಯಾಗಿತ್ತು. ಇದರಲ್ಲಿ ಮೆಸ್ಸಿ 38 ಗೋಲುಗಳನ್ನು ಗಳಿಸುವ ಮೂಲಕ ತ್ರಿವಳಿ ಟ್ರೋಫಿಗಳ ಜಯದ ಅಭಿಯಾನದ ಅವಿಭಾಜ್ಯ ಅಂಗವಾಗಿದ್ದ.

ಮೆಸ್ಸಿ ಆರು ಗೋಲು ಗಳಿಸುವುದರೊಂದಿಗೆ ಅಗ್ರ ಸ್ಥಾನ ಗಳಿಸಿದ. ಇದರಲ್ಲಿ 2005ರ FIFA ವಿಶ್ವ ಯುವ ಚಾಂಪಿಯನ್ ಶಿಪ್ ನ ಕಡೆಯ ಪಂದ್ಯದಲ್ಲಿ ಎರಡು ಗೋಲು ಗಳಿಸಿದ. ಇದಾದ ಸ್ವಲ್ಪ ಸಮಯದಲ್ಲೇ, ಅವನು ಅರ್ಜಂಟೀನಾದ ಸೀನಿಯರ್ ಅಂತಾರಾಷ್ಟ್ರೀಯ ತಂಡದಲ್ಲಿ ಒಬ್ಬ ಸ್ಥಾಪಿತ ಸದಸ್ಯನಾದ. ಇವನು 2006ರಲ್ಲಿ ಅರ್ಜಂಟೀನಾ ಪರ FIFA ವಿಶ್ವ ಕಪ್ ನಲ್ಲಿ ಆಡಿದ ಅತಿ ಕಿರಿಯ ಆಟಗಾರನೆನಿಸಿಕೊಂಡ ಜೊತೆಗೆ ಮರು ವರ್ಷವೇ ಕೊಪಾ ಅಮೆರಿಕಾ ಪಂದ್ಯಾವಳಿಯಲ್ಲಿ ರನ್ನರ್ಸ್‌-ಅಪ್ ಪದಕವನ್ನು ಗೆದ್ದುಕೊಂಡ.

ಇವನು ೨೦೦೮ಬೀಜಿಂಗ್ ಒಲಂಪಿಕ್ ಪಂದ್ಯಾವಳಿಗಳಲ್ಲಿಅರ್ಜೆಂಟಿನಾದ ಒಲಂಪಿಕ್ ಫುಟ್ಬಾಲ್ ತಂಡದ ಪರವಾಗಿ ಒಲಂಪಿಕ್ ಚಿನ್ನದ ಪದಕ ಗೆಲ್ಲುವುದರೊಂದಿಗೆ ಮೊದಲ ಅಂತಾರಾಷ್ಟ್ರೀಯ ಗೌರವಕ್ಕೆ ಪಾತ್ರನಾದ.

ಮತ್ತು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡದೊಂದಿಗೆ ಅರ್ಜೆಂಟೀನಾದ ಅತ್ಯಂತ ಸೋತ ಪಾತ್ರವು 2008 ರಲ್ಲಿ ಬ್ರೆಜಿಲ್ನೊಂದಿಗೆ ಮೂರು ಕೋಪಾ ಅಮೆರಿಕವನ್ನು ಕಳೆದುಕೊಂಡಿತು. 2014 ರ ವಿಶ್ವಕಪ್ ಫೈನಲ್‌ನಲ್ಲಿ ಜರ್ಮನಿ ವಿರುದ್ಧ ಚಿಲಿ 2015 ಮತ್ತು 2016 ರಲ್ಲಿ ಫ್ರಾನ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲಿಸಿತು. 2018 ರಲ್ಲಿ ರಷ್ಯಾದ ವಿಶ್ವಕಪ್‌ನಲ್ಲಿ ಸಹ ಸೋಲನ್ನು ಅನುಭವಿಸಿತು. ಆಗಲೇ ಲಿಯೊನೆಲ್ ಮೆಸ್ಸಿ 3 ಬಾರಿ copa americaದ ಫೈನಲ್ಸ್ ನಲ್ಲಿ ಸೋಲು ಅನುಭವಿಸಿದ್ದ.

2020ರಿಂದ ಮೆಸ್ಸಿಯ ಪ್ರಶಸ್ತಿಗಳ ಬೇಟೆ ಶುರುವಾಯಿತು. 2021ರಲ್ಲಿ Brazilತಂಡವನ್ನು ಸೋಲಿಸಿ copa america ಟ್ರೋಫಿಯನ್ನು ಅರ್ಜೆಂಟೈನಾ ತಂಡಕ್ಕೆ ಗೆಲ್ಲಿಸಿದನು. 2022ರಲ್ಲಿ Italy (ಇಟಲಿ) ತಂಡವನ್ನು ಸೋಲಿಸಿ Finalissima ಪ್ರಶಸ್ತಿ ಗೆಲ್ಲಿಸಿದನು. ನಂತರ 2022ರ ಕತಾರ್ fifa ವಿಶ್ವಕಪ್ ನಲ್ಲಿ ಅರ್ಜೆಂಟೈನಾ ತಂಡಕ್ಕೆ 3ನೇ ವಿಶ್ವಕಪ್ ಗೆಲ್ಲಿಸುವುದರ ಮೂಲಕ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರನೆಂಬ ಹೆಗ್ಗಳಿಕೆ ಪಾತ್ರನಾದನು.ಇತ್ತೀಚಿಗೆ ನಡೆದ‌Leagues cupನಲ್ಲಿ Inter Miami CFತಂಡವನ್ನು ಪ್ರಥಮ ಬಾರಿಗೆ ಕಪ್ ಗೆಲ್ಲಿಸಿಕೊಟ್ಟನು.

ಬಾಲ್ಯ ಜೀವನ

ಮೆಸ್ಸಿ 24 ಜೂನ್ 1987ರಲ್ಲಿ ಅರ್ಜಂಟೀನಾದ ರೊಸಾರಿಯೊದಲ್ಲಿ ಜನಿಸಿದ. ತಂದೆ ಜೋರ್ಗ್ ಮೆಸ್ಸಿ, ಒಬ್ಬ ಕಾರ್ಖಾನೆ ಕೆಲಸಗಾರ, ಮತ್ತು ತಾಯಿ ಸೆಲಿಯ (ಅಲಿಯಾಸ್ ಕುಚ್ಸಿತಿನಿ), ಒಬ್ಬ ಅರೆ-ಕಾಲಿಕ ಕ್ಲೀನರ್.[೧೧][೧೨]

ಅವನ ತಂದೆಯ ಕುಟುಂಬದ ಮೂಲವು ಅಂಕೋನ ಎಂಬ ಇಟಾಲಿಯನ್ ನಗರಕ್ಕೆ ಸೇರಿದೆ. ಅಲ್ಲಿ ಅವನ ಪೂರ್ವಜ ಅಂಜೆಲೋ ಮೆಸ್ಸಿ, 1883 ರಲ್ಲಿ ಅರ್ಜಂಟೀನಾಕ್ಕೆ ವಲಸೆ ಬಂದಿದ್ದ.[೧೩][೧೪]

ಇವನಿಗೆ ರೋಡ್ರಿಗೋ ಮತ್ತು ಮಾಟಿಯಾಸ್ ಎಂಬ ಇಬ್ಬರು ಅಣ್ಣಂದಿರು ಮತ್ತು ಮರಿಯಾ ಸೋಲ್ ಎಂಬ ಸಹೋದರಿ ಇದ್ದಾರೆ.[೧೫]

ಮೆಸ್ಸಿ ತನ್ನ ಐದನೆಯ ವರ್ಷದಲ್ಲಿ ಗ್ರಾನ್ಡೋಲಿಗಾಗಿ ಫುಟ್ಬಾಲ್ ಆಡಲು ಪ್ರಾರಂಭಿಸಿದ. ಇದು ಒಂದು ಸ್ಥಳೀಯ ಕ್ರೀಡಾ ಕ್ಲಬ್. ಅದರಲ್ಲಿ ಇವನ ತಂದೆ ಜೋರ್ಗ್ ತರಬೇತುದಾರರಾಗಿದ್ದರು.[೧೬] ಮೆಸ್ಸಿ 1995ರಲ್ಲಿ ನೆವೆಲ್'ಸ್ ಓಲ್ಡ್ ಬಾಯ್ಸ್ ತಂಡಕ್ಕೆ ಬದಲಾಯಿಸಿಕೊಂಡ. ಇವರು ಅವನ ತವರು ರೊಸಾರಿಯೋ ನಗರದಲ್ಲಿ ನೆಲೆಗೊಂಡಿತ್ತು.[೧೬] ಅವನ 11ನೇ ವರ್ಷದಲ್ಲಿ, ಅವನಿಗೆ ಹಾರ್ಮೋನ್‌ಗಳ ಬೆಳವಣಿಗೆಯ ಕೊರತೆಯಿರುವುದನ್ನು ಗುರುತಿಸಲಾಯಿತು.[೧೭] ಪ್ರೈಮೆರ ಡಿವಿಷನ್ ಕ್ಲಬ್ ರಿವೆರ್ ಪ್ಲೇಟ್ ಮೆಸ್ಸಿಯ ಪ್ರಗತಿಯ ಬಗ್ಗೆ ಆಸಕ್ತಿ ತೋರಿತು, ಆದರೆ ಚಿಕಿತ್ಸೆಗೆ ಬರಿಸುವಷ್ಟು ಹಣ ಅದರ ಬಳಿ ಇರಲಿಲ್ಲ. ಚಿಕಿತ್ಸೆಗೆ ಪ್ರತಿ ತಿಂಗಳು $900ರಷ್ಟು ಖರ್ಚಾಗುತ್ತಿತ್ತು.[೧೨] ಕಾರ್ಲೆಸ್ ರೆಕ್ಸಚ್, ಬಾರ್ಸಿಲೋನಾದ ಕ್ರೀಡಾ ಅಧ್ಯಕ್ಷರಿಗೆ, ಲೀಡ, ಕ್ಯಾಟಲೋನಿಯ ದಲ್ಲಿರುವ ಮೆಸ್ಸಿಯ ಸಂಬಂಧಿಕರು ಮೆಸ್ಸಿಯ ಪ್ರತಿಭೆಯ ಬಗ್ಗೆ ಅರಿವು ಮಾಡಿಕೊಟ್ಟರು. ಮೆಸ್ಸಿ ಮತ್ತು ಅವರ ತಂದೆ ಒಂದು ಪರೀಕ್ಷೆ ವ್ಯವಸ್ಥೆ ಮಾಡುವಲ್ಲಿ ಯಶಸ್ವಿಯಾದರು.[೧೨] ಬಾರ್ಸಿಲೋನಾ ಅವನ ಆಟವನ್ನು ನೋಡಿ ನಂತರ ಅವನ ಸಹಿ ಪಡೆದುಕೊಂಡಿತು [೧೮] ಜೊತೆಗೆ ಅವನು ಸ್ಪೇನ್ ಗೆ ಸ್ಥಳಾಂತರಿಸಿದರೆ ಮಾತ್ರ ಅವನ ವೈದ್ಯಕೀಯ ವೆಚ್ಚವನ್ನು ಭರಿಸುವ ಪ್ರಸ್ತಾಪವನ್ನು ಮುಂದಿಟ್ಟಿತು.[೧೬] ಅವನ ಕುಟುಂಬವು ಯುರೋಪ್‌ಗೆ ಸ್ಥಳ ಬದಲಾಯಿಸಿತು. ಇವನು ಕ್ಲಬ್‌ನ ಯುವ ತಂಡಗಳಲ್ಲಿ ಆಡಲು ಪ್ರಾರಂಭಿಸಿದ.[೧೮]

ಕ್ಲಬ್ ವೃತ್ತಿ

ಬಾರ್ಸಿಲೋನಾ

ಮೆಸ್ಸಿ ಅನಧಿಕೃತವಾಗಿ ಮೊದಲ ತಂಡದಲ್ಲಿ ತನ್ನ ಚೊಚ್ಚಲ ಪ್ರವೇಶ ನವೆಂಬರ್ 16, 2003ರಂದು(ಆಗ ಅವನಿಗೆ 16 ವರ್ಷ 145 ದಿನಗಳು) ಪೋರ್ಟೊ ವಿರುದ್ಧದ ಒಂದು ಸೌಹಾರ್ದ ಪಂದ್ಯದಲ್ಲಿ ಮಾಡಿದ.[೧೯][೨೦]

ಒಂದು ವರ್ಷಕ್ಕೂ ಕಡಿಮೆ ಅವಧಿಯ ನಂತರ,ಫ್ರಾಂಕ್ ರಿಜ್ಕಾರ್ಡ್ ಅವನನ್ನು 16 ಅಕ್ಟೋಬರ್ 2004ರ ಎಸ್ಪಾನ್ಯೋಲ್ ವಿರುದ್ಧದ ಲೀಗ್ ಚೊಚ್ಚಲ ಪ್ರದರ್ಶನದಲ್ಲಿ ಆಡಲು ಅವಕಾಶ ಮಾಡಿಕೊಟ್ಟ ( ಆಗ ಅವನ ವಯಸ್ಸು 17 ವರ್ಷ 114 ದಿನಗಳು). ಬಾರ್ಸಿಲೋನಾ ತಂಡಕ್ಕೆ ಆಡಿದ ಮೂರನೇ ಅತ್ಯಂತ ಕಿರಿಯ ಆಟಗಾರ ಜೊತೆಗೆ ಲಾ ಲಿಗಾ ಕ್ಕೆ ಆಡಿದ ಅತ್ಯಂತ ಕಿರಿಯ ಕ್ಲಬ್ ಆಟಗಾರ( ಈ ದಾಖಲೆಯನ್ನು ಸೆಪ್ಟೆಂಬರ್ 2007ರಲ್ಲಿ ಅವನ ತಂಡದ ಸಹ ಆಟಗಾರ ಬೋಜನ್ ಕ್ರಿಕ್ ಮುರಿದ).[೧][೧೯]

ಅವನು ಕ್ಲಬ್ ಗಾಗಿ ತನ್ನ ಮೊದಲ ಗೋಲನ್ನು ಅಲ್ಬಸೆಟ್ ವಿರುದ್ಧದ ಪಂದ್ಯದಲ್ಲಿ ಮೇ 1, 2005ರಲ್ಲಿ ಗಳಿಸಿದಾಗ, ಮೆಸ್ಸಿಯ ವಯಸ್ಸು 17 ವರ್ಷ, 10 ತಿಂಗಳು ಮತ್ತು 7 ದಿನ. ಲಾ ಲಿಗಾ ಪಂದ್ಯಕ್ಕೆ 2007ರ ತನಕ ಬಾರ್ಸಿಲೋನಾ[೨೧] ಪರವಾಗಿ ಗೋಲು ಗಳಿಸಿದ ಅತ್ಯಂತ ಕಿರಿಯನೆನಿಸಿಕೊಂಡಿದ್ದ. ಆದರೆ ಇದನ್ನು ಬೋಜನ್ ಕ್ರ್ಕಿಕ್ ಮೆಸ್ಸಿಯ ಸಹಾಯದೊಂದಿಗೆ ಗೋಲು ಗಳಿಸಿ ದಾಖಲೆ ಮುರಿದ.[೨೨]

ಮೆಸ್ಸಿ ತನ್ನ ಮಾಜಿ-ತರಬೇತುದಾರ ಫ್ರಾಂಕ್ ರಿಜ್ಕಾರ್ಡ್ ಬಗ್ಗೆ ಹೇಳುತ್ತಾನೆ: " ರಿಜ್ಕಾರ್ಡ್ ನನ್ನನ್ನು ಬೆಳಕಿಗೆ ತಂದದ್ದನ್ನು ನಾನು ಎಂದಿಗೂ ಮರೆಯುವುದಿಲ್ಲ. ನಾನು ಕೇವಲ ಹದಿನಾರು, ಹದಿನೇಳು ವರ್ಷದವನಾಗಿದ್ದಾಗ ನನ್ನಲ್ಲಿ ಅವರು ಭರವಸೆಯನ್ನು ತುಂಬಿದರು." [೨೩]

2005–06ರ ಕ್ರೀಡಾಋತು

"Messi I think is like me, he is the best in the world along with Ronaldinho."

Diego Maradona.[೨೪]

ಸೆಪ್ಟೆಂಬರ್ 16ರಂದು, ಮೂರು ತಿಂಗಳುಗಳಲ್ಲಿ ಎರಡು ಬಾರಿ, ಬಾರ್ಸಿಲೋನಾ ಮೆಸ್ಸಿಯ ಜೊತೆ ತನ್ನ ಒಪ್ಪಂದವನ್ನು ನವೀಕರಿಸಿತು - ಈ ಬಾರಿ ಅವನಿಗೆ ಮೊದಲ ತಂಡದ ಆಟಗಾರರ ರೀತಿ ಸಂಬಳದಲ್ಲಿ ಸುಧಾರಣೆ ಮಾಡಿತು ಜೊತೆಗೆ ಒಪ್ಪಂದವನ್ನು ಜೂನ್ 2014 ರವರೆಗೂ ವಿಸ್ತರಿಸಿತು.[೧೬]

ಮೆಸ್ಸಿ ಸ್ಪಾನಿಶ್ ಪೌರತ್ವವನ್ನು ಸೆಪ್ಟೆಂಬರ್ 26ರಂದು[೨೫] ಗಳಿಸಿದ ಜೊತೆಗೆ ಅಂತಿಮವಾಗಿ ಕ್ರೀಡಾಋತುವಿನ ಸ್ಪಾನಿಶ್ ಪ್ರಥಮ ವಿಭಾಗದಲ್ಲಿ ತನ್ನ ಪ್ರಥಮ ಪಂದ್ಯ ಆಡಲು ಅರ್ಹನಾದ. ಮೆಸ್ಸಿಯು ಮೊದಲ ಬಾರಿಗೆ UEFA ಚಾಂಪಿಯನ್ಸ್ ಲೀಗ್ ನಲ್ಲಿ ತಾಯ್ನಾಡಿನಿಂದ ಆಚೆ ಭಾಗವಹಿಸಿದ್ದ. ಇದು ಇಟಾಲಿಯನ್ ಕ್ಲಬ್ ಉಡಿನೀಸ್ ವಿರುದ್ಧ ಸೆಪ್ಟೆಂಬರ್ 27ರಂದು ಆಡಿದ ಪಂದ್ಯವಾಗಿತ್ತು.[೧೯]

ಬಾರ್ಸಿಲೋನಾ ಕ್ರೀಡಾಂಗಣದಲ್ಲಿ ಕ್ಯಾಂಪ್ ನೌ ಕ್ರೀಡಾಂಗಣದ ಅಭಿಮಾನಿಗಳು,ಬದಲಿ ಆಟಗಾರನಾಗಿ ಬಂದ ಮೆಸ್ಸಿಗೆ ಎದ್ದು ನಿಂತು ಗೌರವ ಸೂಚಿಸಿದರು. ಏಕೆಂದರೆ ಚೆಂಡಿನ ಮೇಲೆ ಅವನ ಹಿಡಿತ ಮತ್ತು ರೋನಾಲ್ಡಿನೊ ಗೆ ಚೆಂಡನ್ನು ಕಳಿಸುವ ನಡೆಗಳು ಎಲ್ಲವೂ ಬಾರ್ಸಿಲೋನಾ ತಂಡಕ್ಕೆ ಫಲಕಾರಿಯಾಯಿತು.[೨೬]

ಮೆಸ್ಸಿ ಹದಿನೇಳು ಲೀಗ್ ಪಂದ್ಯಗಳಲ್ಲಿ ಆರು ಗೋಲುಗಳನ್ನು ಬಲೆಗೆ ಹಾಕಿಕೊಂಡ, ಜೊತೆಗೆ ಚಾಂಪಿಯನ್ಸ್ ಲೀಗ್ ನ ಆರು ಗೋಲುಗಳಲ್ಲಿ ಒಂದನ್ನು ಗಳಿಸಿದ. ಅವನು ಎರಡನೇ ಸುತ್ತಿನ ಚಾಂಪಿಯನ್ಸ್ ಲೀಗ್ ಸಮ ಪಂದ್ಯದ ಎರಡನೇ ಲೆ‌ಗ್‌ನಲ್ಲಿ ಚೆಲ್ಸಿಯ ವಿರುದ್ಧದ ಪಂದ್ಯದಲ್ಲಿ ಬಲ ತೊಡೆಯ ಸ್ನಾಯು ಹರಿತಕ್ಕೆ ಒಳಗಾದಾಗ,ಅವನ ಕ್ರೀಡಾಋತುವು ಮಾರ್ಚ್ 7, 2006ರಂದು ಅಕಾಲಿಕವಾಗಿ ಕೊನೆಗೊಂಡಿತು.[೨೭]

ಫ್ರಾಂಕ್ ರಿಜ್ಕಾರ್ಡ್ ರ ಬಾರ್ಸಿಲೋನಾ ಸ್ಪೇನ್ ಮತ್ತು ಯುರೋಪ್ ಚಾಂಪಿಯನ್ಸ್ ಪಟ್ಟ ಗಳಿಸುವುದರೊಂದಿಗೆ ಕ್ರೀಡಾಋತುವನ್ನು ಮುಕ್ತಾಯಗೊಳಿಸಿತು.[೨೮][೨೯]

2006–07ರ ಕ್ರೀಡಾಋತು

ಮೆಸ್ಸಿ 2007ರಲ್ಲಿ ರೇಂಜರ್ಸ್ ವಿರುದ್ಧದ ಪಂದ್ಯದಲ್ಲಿ

26 ಪಂದ್ಯಗಳಲ್ಲಿ 14 ಬಾರಿ ಗೋಲು ಗಳಿಸುವ ಮೂಲಕ ಮೆಸ್ಸಿ 2006–07ರ ಕ್ರೀಡಾಋತುವಿನಲ್ಲಿ ಒಂದು ಕಾಯಂ ಮೊದಲ ತಂಡದ ಆಟಗಾರನಾಗಿ ತನ್ನ ಸ್ಥಾನವನ್ನು ದೃಢಪಡಿಸಿದ.[೩೦]

ನವೆಂಬರ್ 12ರಂದು ರಿಯಲ್ ಸರಗೋಸವಿರುದ್ಧದ ಪಂದ್ಯದಲ್ಲಿ, ಮೆಸ್ಸಿ ಕಾಲಿನ ಐದು ಎಲುಬುಗಳ ಮುರಿತಕ್ಕೆ ಒಳಗಾದ, ಇದು ಅವನನ್ನು ಮೂರು ತಿಂಗಳ ಕಾಲ ಮೈದಾನದಿಂದ ಹೊರಗುಳಿಯುವಂತೆ ಮಾಡಿತು.[೩೧][೩೨]

ಮೆಸ್ಸಿ ಅರ್ಜಂಟೀನಾದಲ್ಲಿ ತನಗಾದ ಪೆಟ್ಟಿನಿಂದ ಚೇತರಿಸಿಕೊಂಡ. ಜೊತೆಗೆ ಫೆಬ್ರವರಿ 11ರಂದು ನಡೆದ ರೇಸಿಂಗ್ ಸಾನ್ಟನ್ಡರ್ ವಿರುದ್ಧದ ಪಂದ್ಯದಲ್ಲಿ,[೩೩] ಅವನ ಮರು ಪ್ರವೇಶವಾಯಿತು. ಇದರಲ್ಲಿ ಅವನು ಉತ್ತರಾರ್ಧದಲ್ಲಿ ಬದಲಿ ಆಟಗಾರನಾಗಿ ಬಂದ. ಮಾರ್ಚ್ 11ರಂದು, ಎಲ್ ಕ್ಲಾಸಿಕೋ ಮೆಸ್ಸಿಯನ್ನು ಅಗ್ರ ಸ್ಥಾನಕ್ಕೇರಿಸಿತು. 10-ಜನರ ಬಾರ್ಸಿಲೋನಾ ತಂಡದ 3-3 ಸಮಾಂಕ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸಿದ. ಮೂರು ಬಾರಿ ಸಮಗೋಲು ಗಳಿಸಿದ ಪಂದ್ಯದಲ್ಲಿ, ಅಂತಿಮ ಸರಿಸಮ ಗೋಲು ಗಾಯಗೊಂಡ ಸಮಯದಲ್ಲಿ ಬಂದಿತು.[೩೪] ಹೀಗೆ ಮಾಡುವುದರೊಂದಿಗೆ ಇವಾನ್ ಜಮೊರನೋ(ಇವಾನ್ 1994-95ರ ಕ್ರೀಡಾಋತುವಿನಲ್ಲಿ ರಿಯಲ್ ಮಾಡ್ರಿಡ್ ಪರವಾಗಿ) ನಂತರ ಎಲ್ ಕ್ಲಾಸಿಕೋ ನಲ್ಲಿ ಹ್ಯಾಟ್‌-ಟ್ರಿಕ್ ಪಡೆದ ಮೊದಲ ಆಟಗಾರನಾದ .[೩೫] ಮೆಸ್ಸಿ ಈ ಪಂದ್ಯದಲ್ಲಿ(ನಿಗದಿತ ಪಂದ್ಯ) ಗೋಲು ಗಳಿಸಿದ ಅತ್ಯಂತ ಕಿರಿಯ ಆಟಗಾರನೂ ಹೌದು. ಕ್ರೀಡಾಋತು ಮುಗಿಯುವ ಹೊತ್ತಿಗೆ ಅವನು ಹೆಚ್ಚೆಚ್ಚು ಗೋಲುಗಳನ್ನು ಗಳಿಸಿದ; ಕ್ರೀಡಾಋತುವಿನ 14 ಲೀಗ್ ಗೋಲುಗಳಲ್ಲಿ 11 ಗೋಲುಗಳು ಕಳೆದ 13 ಪಂದ್ಯಗಳಿಂದ ಬಂದಿದ್ದವು.[೩೬]

ಮೆಸ್ಸಿ ಗೆಟಾಫೇ ವಿರುದ್ಧ ಗೋಲನ್ನು ಪಡೆಯುವ ಸ್ವಲ್ಪ ಮುಂಚೆ

ಮೆಸ್ಸಿಗೆ ನೀಡಿದ "ನ್ಯೂ ಮರಡೋನ" ಎಂಬ ಬಿರುದು ಮೋಸದ ಪ್ರಚಾರವಲ್ಲವೆಂದು ಸಾಬೀತುಪಡಿಸಿದ. ಮರಡೋನರ ಅತ್ಯಂತ ಪ್ರಖ್ಯಾತ ಗೋಲುಗಳನ್ನು ಏಕೈಕ ಕ್ರೀಡಾಋತುವಿನಲ್ಲಿ ದೊರೆತ ಅವಕಾಶದಲ್ಲಿ ಬಹುಮಟ್ಟಿಗೆ ಪುನರಾವರ್ತನೆ ಮಾಡಿದ.[೩೭]

ಏಪ್ರಿಲ್ 18, 2007ರಲ್ಲಿ, ಅವನು ಕೊಪಾ ಡೆಲ್ ರೆಯ್ ಸೆಮಿ-ಫೈನಲ್ ಪಂದ್ಯದಲ್ಲಿ ಗೆಟಾಫೇ ವಿರುದ್ಧ ಎರಡು ಗೋಲು ಗಳಿಸಿದ. ಇದರಲ್ಲಿ ಒಂದು ಮೆಕ್ಸಿಕೋ ನಲ್ಲಿ ನಡೆದ 1986ರ FIFA ವಿಶ್ವ ಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಮೆರಡೋನಾ ಹೊಡೆದ ಪ್ರಖ್ಯಾತ ಗೋಲನ್ನು ಹೋಲುತ್ತದೆ. ಇದನ್ನು ಶತಮಾನದ ಗೋಲು ಎಂದು ಕರೆಯಲಾಗುತ್ತದೆ.[೩೮]

ವರ್ಲ್ಡ್'ಸ್ ಸ್ಪೋರ್ಟ್ಸ್ ಪ್ರೆಸ್ ಮರಡೋನ ಜೊತೆ ಇವನನ್ನು ಹೋಲಿಕೆಗಳನ್ನು ಮಾಡುತ್ತದೆ, ಮತ್ತು ಸ್ಪಾನಿಶ್ ಮಾಧ್ಯಮ ಮೆಸ್ಸಿಗೆ "ಮೆಸ್ಸಿಡೋನ" ಎಂಬ ಹಣೆಪಟ್ಟಿ ಹಚ್ಚಿದೆ.[೩೯] ಅವನು ಹೆಚ್ಚು ಕಡಿಮೆ ಅದೇ ಅಂತರದಲ್ಲಿ ಓಡಿದ,62 metres (203 ft), ಅದೇ ಸಂಖ್ಯೆಯ ಆಟಗಾರರನ್ನು ಸೋಲಿಸಿದ (ಗೋಲು ಕೀಪರ್ ನನ್ನು ಸೇರಿ ಆರು), ಅದೇ ರೀತಿಯ ಸ್ಥಾನದಿಂದ ಗೋಲು ಗಳಿಸಿದ, ಮತ್ತು ಮೂಲೆಯ ಧ್ವಜದ ಹತ್ತಿರಕ್ಕೆ 21 ವರ್ಷದ ಕೆಳಗೆ ಮೆಕ್ಸಿಕೋದಲ್ಲಿ ಮರಡೋನ ಓಡಿದ ರೀತಿಯೇ ಓಡಿದ.[೩೭]

ಪಂದ್ಯದ ನಂತರ ಒಂದು ಪತ್ರಿಕಾಗೋಷ್ಠಿಯಲ್ಲಿ ಮೆಸ್ಸಿಯ ಸಹ ಆಟಗಾರ ಡೆಕೋ ಹೇಳುತ್ತಾನೆ: "ನಾನು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಗೋಲು ಇದಾಗಿದೆ."[೪೦] ಎಸ್ಪಾನ್ಯೋಲ್ವಿರುದ್ಧದ ಪಂದ್ಯದಲ್ಲಿ ಮೆಸ್ಸಿ, ಮರಡೋನ ವರ್ಲ್ಡ್ ಕಪ್ ಕ್ವಾರ್ಟರ್ ಫೈನಲ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ ಗೋಲು ಮಾದರಿಯಲ್ಲೇ ಇವನು ಕೂಡ ಗೋಲು ಗಳಿಸಿದ. ಮೆಸ್ಸಿ ಚೆಂಡಿನೆಡೆಗೆ ಉಪಕ್ರಮಿಸುವುದರ ಜೊತೆಗೆ ತನ್ನ ಕೈಯಿಂದ ಚೆಂಡನ್ನು ಸಂಪರ್ಕಿಸಿ ಚೆಂಡು ಗೋಲು ಕೀಪರ್ ಕಾರ್ಲೋಸ್ ಕಮೆನಿಯನ್ನು ಹಾದು ಹೋಗುವಂತೆ ಮಾಡಿದ.[೪೧] ಎಸ್ಪಾನ್ಯೋಲ್ ಆಟಗಾರರ ವಿರೋಧದ ನಡುವೆ ಜೊತೆಗೆ ಮರು ಪ್ರಸಾರದ ದೃಶ್ಯಗಳಲ್ಲಿ ಅದು ಸ್ಪಷ್ಟವಾಗಿ ಹ್ಯಾಂಡ್ ಬಾಲ್ಎಂದು ಕಂಡುಬರುತ್ತಿದ್ದರೂ, ಅದನ್ನು ಗೋಲು ಎಂದೇ ಪರಿಗಣಿಸಲಾಯಿತು.[೪೧]

2007–08ರ ಕ್ರೀಡಾಋತು

thumb|180px|ಸೆಪ್ಟೆಂಬರ್ 22, 2007ರಂದು ಕ್ಯಾಂಪ್ ನೌ ನಲ್ಲಿ ಸೇವಿಲ್ಲಾ ವಿರುದ್ಧದ ಪಂದ್ಯದಲ್ಲಿ ಬಾರ್ಸಿಲೋನಾ ತಂಡದ 2-0 ಗೋಲುಗಳ ವಿಜಯದಲ್ಲಿ ಮೆಸ್ಸಿ ಬಾರ್ಸಿಲೋನಾ ತಂಡದ ಪರ ಆಡುತ್ತಾನೆ.

ಈ ಮಧ್ಯದಲ್ಲಿ 2007-08ರ ಕ್ರೀಡಾಋತುನಲ್ಲಿ, ಮೆಸ್ಸಿ ಒಂದು ವಾರದಲ್ಲಿ ಐದು ಗೋಲು ಗಳಿಸಿದ. ಇದರಿಂದ ಲಾ ಲಿಗಾದಲ್ಲಿ ಬಾರ್ಸಿಲೋನಾ ತಂಡವು ಅಗ್ರ ನಾಲ್ಕನೇ ಸ್ಥಾನ ಪಡೆಯಿತು. ಸೆಪ್ಟೆಂಬರ್ 19ರಂದು ಬಾರ್ಸಿಲೋನಾ ಒಲಂಪಿಕ್ ಲಿಯೋನ್ನಾಯಿಸ್ ತಂಡವನ್ನು ಸ್ವದೇಶದಲ್ಲಿ 3-0 ಗೋಲುಗಳಿಂದ ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಸೋಲಿಸಿದಾಗ ಮೆಸ್ಸಿ ಒಂದು ಗೋಲು ಗಳಿಸಿದ.[೪೨] ಅವನು ಸೆಪ್ಟೆಂಬರ್ 22ರಂದು ಸೆವಿಲ್ಲಾ ವಿರುದ್ಧದ ಪಂದ್ಯದಲ್ಲಿ ಎರಡು ಗೋಲು ಗಳಿಸಿದ[೪೩] ಜೊತೆಗೆ ಸೆಪ್ಟೆಂಬರ್ 26ರಂದು ಮೆಸ್ಸಿ ರಿಯಲ್ ಜರಗೋಜ ವಿರುದ್ಧ 4-1 ಜಯದ ಪಂದ್ಯದಲ್ಲೂ ಕೂಡ ಮತ್ತೆರೆಡು ಗೋಲು ಗಳಿಸಿದ.[೪೪] ಫೆಬ್ರವರಿ 27ರಂದು, ಮೆಸ್ಸಿ ತನ್ನ 100ನೇ ಅಧಿಕೃತ ಪಂದ್ಯವನ್ನು ಬಾರ್ಸಿಲೋನಾ ಪರವಾಗಿ ವಲೆನ್ಸಿಯ ವಿರುದ್ಧ ಆಡಿದ.[೪೫]

ಅವನನ್ನು FIFPro ವಿಶ್ವ XI ಆಟಗಾರ ಪ್ರಶಸ್ತಿಗೆ ಮುಂಚೂಣಿಯ ಆಟಗಾರರ ವಿಭಾಗದಲ್ಲಿ ನಾಮಕರಣ ಮಾಡಲಾಯಿತು.[೪೬]

ಸ್ಪಾನಿಶ್ ದಿನಪತ್ರಿಕೆ ಮಾರ್ಕಾ ತನ್ನ ಆನ್ಲೈನ್ ಆವೃತ್ತಿಯಲ್ಲಿ ನಡೆಸಿದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಮೆಸ್ಸಿಗೆ ಶೇಕಡಾ 77ರಷ್ಟು ಮತಗಳು ಬಂದು,ಒಬ್ಬ ಅತ್ಯುತ್ತಮ ಆಟಗಾರ ಎಂದು ಹೆಸರಿಸಿತು.[೪೭] ಬಾರ್ಸಿಲೋನಾ-ಮೂಲದ ದಿನಪತ್ರಿಕೆಗಳು ಎಲ್ ಮುಂಡೋ ಡಿಪೋರ್ಟಿವ್ ಮತ್ತು ಸ್ಪೋರ್ಟ್ ನ ಅಂಕಣಕಾರರು ಮೆಸ್ಸಿಗೆ Ballon d'Or ಗೌರವವನ್ನು ನೀಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದವು. ಈ ಅಭಿಪ್ರಾಯಕ್ಕೆ ಫ್ರಾನ್ಸ್ ಬೇಕೆನ್ಬುಏರ್ ಕೂಡ ಬೆಂಬಲಿಸಿದರು.[೪೮] ಫ್ರಂಸೆಸ್ಕೋ ಟೊಟ್ಟಿ ಮುಂತಾದ ಹೆಸರಾಂತ ಫುಟ್ಬಾಲ್ ಆಟಗಾರರು ಮೆಸ್ಸಿ ಪ್ರಸ್ತುತ ವಿಶ್ವದಲ್ಲಿರುವ ಅತ್ಯುತ್ತಮ ಫುಟ್ಬಾಲ್ ಆಟಗಾರರಲ್ಲಿ ಒಬ್ಬನೆಂದು ಪರಿಗಣಿಸುವುದಾಗಿ ಘೋಷಿಸಿದರು.[೪೯]

ಮೆಸ್ಸಿಯನ್ನು ಗಾಯಗೊಂಡ ಹಿನ್ನೆಲೆಯಲ್ಲಿ ಆರು ವಾರಗಳ ಕಾಲ ತಂಡದಿಂದ ಹೊರಗಿಡಲಾಗಿತ್ತು. ಇದು ಮಾರ್ಚ್ 4ರಂದು ಚಾಂಪಿಯನ್ಸ್ ಲೀಗ್ ಪಂದ್ಯದಲ್ಲಿ ಸೆಲ್ಟಿಕ್ ವಿರುದ್ಧದ ಪಂದ್ಯದಲ್ಲಿ ಅವನು ಎಡ ತೊಡೆಯ ಸ್ನಾಯು ಹರಿತಕ್ಕೆ ಒಳಗಾಗಿದ್ದರ ಪರಿಣಾಮವಾಗಿತ್ತು. ಮೆಸ್ಸಿ ಇದೇ ರೀತಿಯ ಗಾಯವನ್ನು ಮೂರು ಕ್ರೀಡಾಋತುಗಳಲ್ಲಿ ನಾಲ್ಕು ಬಾರಿ ಅನುಭವಿಸಿದ.[೫೦]

2008–09ರ ಕ್ರೀಡಾಋತು

ಮೆಸ್ಸಿ ಡಿಪೋರ್ಟಿವೋ ವಿರುದ್ಧದ ಪಂದ್ಯದಲ್ಲಿ

ಕ್ಲಬ್‌ನಿಂದ ರೋನಾಲ್ಡಿನೊ ನಿರ್ಗಮಿಸಿದ ಮೇಲೆ, ಮೆಸ್ಸಿ ಅವನ 10ನೇ ಸಂಖ್ಯೆಯ ಜರ್ಸಿಯನ್ನು ಪಡೆದ.[೫೧]

ಅಕ್ಟೋಬರ್ 1, 2008ರ, ಚಾಂಪಿಯನ್ಸ್ ಲೀಗ್ ಶಕ್ತರ್ ಡೊನೆಟ್ಸ್ಕ್ ವಿರುದ್ಧದ ಪಂದ್ಯದಲ್ಲಿ, ಮೆಸ್ಸಿ, ಥಿಯೆರಿ ಹೆನ್ರಿ ಗೆ ಬದಲಿ ಆಟಗಾರನಾಗಿ ಬಂದಾಗ ಕಡೆಯ ಏಳು ನಿಮಿಷಗಳ ಅವಧಿಯಲ್ಲಿ ಎರಡು ಗೋಲು ಗಳಿಸಿದ. ಇದು 1-0 ಗೋಲುಗಳನ್ನು ಹೊಂದಿದ್ದ ಬಾರ್ಸಿಲೋನಾತಂಡವನ್ನು 1-2 ಗೋಲುಗಳಿಂದ ತಿರುವು ನೀಡಿ ಜಯಶಾಲಿಯಾಗುವಂತೆ ಮಾಡಿತು.[೫೨] ಮುಂದಿನ ಲೀಗ್ ಪಂದ್ಯ ಅಟ್ಲೆಟಿಕೋ ಮಾಡ್ರಿಡ್ ವಿರುದ್ಧವಾಗಿತ್ತು. ಈ ಪಂದ್ಯವನ್ನು ಮೆಸ್ಸಿ ಮತ್ತು ಅವನ ಸ್ನೇಹಿತ ಸೇರ್ಗಿಯೋ ಅಗುಎರೋ ನಡುವಿನ ಸೌಹಾರ್ದ ಕದನವೆಂದು ವಿವರಿಸಲಾಗಿತ್ತು.[೫೩]

ಮೆಸ್ಸಿ ಒಂದು ಫ್ರೀ ಕಿಕ್‌ನಿಂದ ಗೋಲು ಗಳಿಸಿ ಇನ್ನೊಂದು ಗೋಲಿಗೆ ನೆರವಾಗುವುದರೊಂದಿಗೆ ಬಾರ್ಸಿಲೋನಾ ಪಂದ್ಯವನ್ನು 6-1 ಗೋಲುಗಳ ಅಂತರದಿಂದ ಜಯಗಳಿಸಿತು.[೫೪]

ಮೆಸ್ಸಿ ಸೇವಿಲ್ಲಾ ವಿರುದ್ಧದ ಪಂದ್ಯದಲ್ಲಿ ಪರಿಣಾಮಕಾರಿ ಅವಳಿ ಗೋಲುಗಳನ್ನು ಗಳಿಸಿದ. ಚೆಂಡು ನೆಲಕ್ಕೆ ತಾಗುವ ಮುಂಚೆ ಅದನ್ನು ಗೋಲಾಗಿಸಿದ23 metres (25 yd) ಮತ್ತು ಗೋಲು‌ಕೀಪರ್ ಹತ್ತಿರ ಚೆಂಡನ್ನು ಸ್ವಲ್ಪ ಸ್ವಲ್ಪವೇ ಉರುಳಿಸುತ್ತಾ ಇನ್ನೊಂದು ಗೋಲನ್ನು ಬಿಗಿಯಾದ ಕೋನದಿಂದ ಬಾರಿಸಿದ.[೫೫]

ಡಿಸೆಂಬರ್ 13, 2008ರ, ಮೊದಲ ಕ್ಲಾಸಿಕೋ ಕ್ರೀಡಾಋತುವಿನಲ್ಲಿ, ರಿಯಲ್ ಮಾಡ್ರಿಡ್ ವಿರುದ್ಧದ ಪಂದ್ಯದಲ್ಲಿ ಬಾರ್ಸಿಲೋನಾ 2-0 ಗೋಲುಗಳಿಂದ ಜಯಗಳಿಸಿತು, ಇದರಲ್ಲಿ ಮೆಸ್ಸಿ ಎರಡನೇ ಗೋಲು ಗಳಿಸಿದ.[೫೬]

ಅವನಿಗೆ 2008ರ FIFA ವರ್ಲ್ಡ್ ವರ್ಷದ ಆಟಗಾರ ಪ್ರಶಸ್ತಿಗಳಲ್ಲಿ 678 ಗೋಲುಗಳೊಂದಿಗೆ ಎರಡನೇ ಸ್ಥಾನ ನೀಡಲಾಯಿತು.[೭]

ಕೊಪಾ ಡೆಲ್ ರೆಯ್ ಟೈನಲ್ಲಿ ಅಟ್ಲೆಟಿಕೋ ಮಾಡ್ರಿಡ್ ವಿರುದ್ಧ ಬಾರ್ಸಿಲೋನಾ 3-1 ಅಂಕ ಗಳಿಸಿ ವಿಜಯಿಯಾದ ಪಂದ್ಯದಲ್ಲಿ ಮೆಸ್ಸಿ 2009ರ ತನ್ನ ಮೊದಲ ಹ್ಯಾಟ್‌-ಟ್ರಿಕ್ ಗಳಿಸಿದ.[೫೭] ಮೆಸ್ಸಿ ಇನ್ನೊಂದು ಪ್ರಮುಖ ಅವಳಿ ಗೋಲುಗಳನ್ನು ಫೆಬ್ರವರಿ 1, 2009ರಲ್ಲಿ ಗಳಿಸಿದ. ಬಾರ್ಸಿಲೋನಾ ರೇಸಿಂಗ್ ಸಾನ್ಟನ್ಡರ್ ತಂಡದ ವಿರುದ್ಧ 1-0ಯಿಂದ ಹಿಂದುಳಿದ ನಂತರ ಪಂದ್ಯದ ಉತ್ತರಾರ್ಧದಲ್ಲಿ ಬದಲಿ ಆಟಗಾರನಾಗಿ ಬಂದು 1-2 ಗೋಲುಗಳಿಂದ ಸೋಲಿಸಲು ನೆರವಾದ. ಎರಡು ಹೊಡೆತಗಳಲ್ಲಿ ಎರಡೆನೆಯದು ಬಾರ್ಸಿಲೋನಾದ 5000ನೇ ಲೀಗ್ ಗೋಲು.[೫೮]

ಲಾ ಲಿಗಾ ಪಂದ್ಯಾವಳಿಗಳ 28ನೇ ಸುತ್ತಿನಲ್ಲಿ, ಮೆಸ್ಸಿ ಕ್ರೀಡಾಋತುವಿನ 30ನೇ ಗೋಲನ್ನು ಎಲ್ಲ ಸ್ಪರ್ಧೆಗಳಿಂದ ಗಳಿಸಿದ. ಈ ಪ್ರಕ್ರಿಯೆಯಲ್ಲಿ ಅವನ ತಂಡವನ್ನು ಮಲಾಗಾ CF ವಿರುದ್ಧದ ಪಂದ್ಯದಲ್ಲಿ 6-0 ಗೋಲುಗಳಿಂದ ಗೆಲ್ಲುವಂತೆ ಮಾಡಿತು.[೫೯]

ಎಪ್ರಿಲ್ 8 2009ರಲ್ಲಿ, ಬಯೇರ್ನ್ ಮುನಿಚ್ ವಿರುದ್ಧ ಚಾಂಪಿಯನ್ಸ್ ಲೀಗ್‌ನಲ್ಲಿ ಎರಡು ಗೋಲು ಗಳಿಸಿದ. ಸ್ಪರ್ಧೆಯಲ್ಲಿ 2 ಗೋಲು ಹೊಡೆದು ವೈಯಕ್ತಿಕ ದಾಖಲೆ ಸೃಷ್ಟಿಸಿದ.[೬೦]

ಏಪ್ರಿಲ್ 18ರಂದು, ಗೆಟಾಫೇ ವಿರುದ್ಧ 1-0 ಜಯದೊಂದಿಗೆ ಮೆಸ್ಸಿ ಕ್ರೀಡಾಋತುವಿನಲ್ಲಿ ತನ್ನ 20ನೇ ಲೀಗ್ ಗೋಲು ಗಳಿಸಿ ಸಾಧನೆ ಮಾಡಿದ. ಇದು ಬಾರ್ಸಿಲೋನಾ ತಂಡ ಲೀಗ್ ಪಟ್ಟಿಯಲ್ಲಿ ಆರು ಅನುಕೂಲದ ಗೋಲುಗಳನ್ನು ಕಾಯ್ದುಕೊಳ್ಳಲು ಅವಕಾಶ ಕಲ್ಪಿಸಿ ರಿಯಲ್ ಮಾಡ್ರಿಡ್ ತಂಡಕ್ಕಿಂತ ಅಗ್ರ ಸ್ಥಾನದಲ್ಲಿ ಉಳಿಯಲು ಯಶಸ್ವಿಯಾಯಿತು.[೬೧]

ಲಿಯೋನೆಲ್ ಮೆಸ್ಸಿಯ 2009ರ UEFA ಚಾಂಪಿಯನ್ಸ್ ಲೀಗ್ ಫೈನಲ್‌ನಲ್ಲಿ ಚೆಂಡನ್ನು ಹೊಡೆಯುವ ವೈಖರಿಯನ್ನು ಮೈಕಲ್ ಕಾರ್ರಿಕ್ (ಹಿನ್ನೆಲೆ)ವೀಕ್ಷಿಸುತ್ತಿದ್ದಾನೆ.

ಬಾರ್ಸಿಲೋನಾ ಕ್ರೀಡಾಋತುವು ಮುಕ್ತಾಯದ ಹಂತದಲ್ಲಿದ್ದಾಗ, ಮೆಸ್ಸಿ ಎರಡು ಗೋಲು ಗಳಿಸಿದ( ಎಲ್ಲಾ ಸ್ಪರ್ಧೆಗಳಿಂದ ಅವನ 35ನೇ ಮತ್ತು 36ನೇ ಗೋಲುಗಳು). ಇದರಿಂದ ಸಾಂಟಿಯಾಗೋ ಬೇರನ್ಬ್ಯೂ[೬೨] ನಲ್ಲಿ ನಡೆದ ರಿಯಲ್ ಮಾಡ್ರಿಡ್ ವಿರುದ್ಧದ ಪಂದ್ಯದಲ್ಲಿ ತಂಡ 6-2 ಗೋಲುಗಳಿಂದ ವಿಜಯಿಯಾಗಿ, ರಿಯಲ್‌ಗೆ 1930ರಿಂದೀಚೆಗೆ ಭಾರೀ ಸೋಲೆನಿಸಿತು.[೬೩] ಪ್ರತಿ ಗೋಲು ಗಳಿಸಿದ ನಂತರ ಅವನು ಅಭಿಮಾನಿಗಳು ಮತ್ತು ಕ್ಯಾಮರಾಗಳ ಕಡೆ ಓಡಿ ತನ್ನ ಬಾರ್ಸಿಲೋನಾ ಜರ್ಸಿಯನ್ನು ಎತ್ತಿ ತೋರಿಸುತ್ತಿದ್ದ ಜೊತೆಗೆ ಸಿಂಡ್ರೋಮ್ X ಫ್ರಾಜಿಲ್ ಎಂದು ಬರೆದ ಇನ್ನೊಂದು ಟೀ-ಶರ್ಟ್ ಅನ್ನು ತೋರಿಸುತ್ತಿದ್ದ. ಇದು ಫ್ರಾಜೈಲ್ X ಸಿಂಡ್ರೋಮ್‌(ವಂಶವಾಹಿ ಕಾಯಿಲೆ)ನ ಕೆಟಾಲನ್ ಭಾಷೆ. ಇದು ಯಾತನೆಯಿಂದ ನರಳುವ ಮಕ್ಕಳಿಗೆ ಅವನ ಬೆಂಬಲ ಸೂಚಿಸುತ್ತದೆ.[೬೪] ಮೆಸ್ಸಿ ಚೆಲ್ಸಿಯ ವಿರುದ್ಧ ಚಾಂಪಿಯನ್ಸ್ ಲೀಗ್ ಸೆಮಿಫೈನಲ್‌ನಲ್ಲಿ ಅಂಡ್ರೆಸ್ ಇನಿಎಸ್ಟಗಾಯಗೊಂಡ ಸಮಯದ ಗೋಲಿಗೆ ನೆರವು ನೀಡಿದ. ಇದರಿಂದ ಬಾರ್ಸಿಲೋನಾ ತಂಡವು ಮಾನ್ಚೆಸ್ಟೆರ್ ಯುನೈಟೆಡ್ ತಂಡವನ್ನು ಫೈನಲ್ ನಲ್ಲಿ ಎದುರುಗೊಂಡಿತು. ಅವನು ತನ್ನ ಮೊದಲ ಕೊಪಾ ಡೆಲ್ ರೆಯ್‌ಯನ್ನು ಮೇ 13ರಂದು ಗೆದ್ದ. ಇದರಲ್ಲಿ ಒಂದು ಗೋಲು ಅನ್ನು ಗಳಿಸಿ ಮತ್ತೆರೆಡು ಗೋಲುಗಳನ್ನು ಹೊಡೆಯಲು ನೆರವಾದ. ಇದರಿಂದ ತಂಡವು ಅಥ್ಲೆಟಿಕ್ ಬಿಲ್ಬಾವ್ ವಿರುದ್ಧ 4-1 ಗೋಲುಗಳ ಜಯ ಗಳಿಸಿತು.[೬೫]

ಅವನ ತಂಡವು ಲಾ ಲಿಗಾ ಗೆಲ್ಲುವ ಮೂಲಕ ಅವಳಿ ಪಂದ್ಯಾವಳಿಗಳಲ್ಲಿ ಗೆಲ್ಲಲು ನೆರವಾದ. ಮೇ 27ರಂದು ಅವನು 2009ರ UEFA ಚಾಂಪಿಯನ್ಸ್ ಲೀಗ್ಫೈನಲ್‌ನಲ್ಲಿ ಬಾರ್ಸಿಲೋನಾ ತಂಡ ಗೆಲ್ಲಲು ಸಹಾಯ ಮಾಡಿದ. ಇದರಲ್ಲಿ 70ನೇ ನಿಮಿಷದಲ್ಲಿ ಎರಡನೇ ಗೋಲು ಗಳಿಸಿ ಬಾರ್ಸಿಲೋನಾ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸುವಂತೆ ಮಾಡಿದ. ಇವನು ಚಾಂಪಿಯನ್ಸ್ ಲೀಗ್‌ನಲ್ಲಿ ಒಂಬತ್ತು ಗೋಲು‌ಗಳನ್ನು ಗಳಿಸಿದ ಅಗ್ರ ಆಟಗಾರನಾದ.[೬೬] ಮೆಸ್ಸಿ UEFA ಕ್ಲಬ್ ನ ವರ್ಷದ ಮುಂಚೂಣಿಯ ಆಟಗಾರ: ಮತ್ತು UEFA ಕ್ಲಬ್ ವರ್ಷದ ಫುಟ್ಬಾಲ್ ಆಟಗಾರ ಎಂಬ ಗೌರವಕ್ಕೆ ಪಾತ್ರನಾಗಿ ಯುರೋಪ್‌ನಲ್ಲಿ ಅದ್ಭುತ ವರ್ಷವನ್ನು ಮುಗಿಸಿದ.[೬೭]


ಈ ಜಯದಿಂದಾಗಿ ಬಾರ್ಸಿಲೋನಾ ತಂಡ ಕೊಪಾ ಡೆಲ್ ರೆಯ್, ಲಾ ಲಿಗಾ ಮತ್ತು UEFA ಚಾಂಪಿಯನ್ಸ್ ಲೀಗ್ ಮೂರನ್ನು ಒಂದೇ ಕ್ರೀಡಾಋತುವಿನಲ್ಲಿ ಗೆದ್ದಿತು ಜೊತೆಗೆ ಸ್ಪಾನಿಶ್‌ನ ಯಾವುದೇ ಕ್ಲಬ್ ಮೊದಲ ಬಾರಿಗೆ ತ್ರಿವಳಿ ಪಂದ್ಯಾವಳಿಗಳನ್ನು ಗೆದ್ದ ಕೀರ್ತಿಗೆ ಪಾತ್ರವಾಯಿತು.[೬೮]

2009-10ರ ಕ್ರೀಡಾಋತು

ಬಾರ್ಸಿಲೋನಾ ತಂಡದ ಲಿಯೋನೆಲ್ ಮೆಸ್ಸಿ ಕ್ಯಾಂಪ್ ನೌ ಕ್ರೀಡಾಂಗಣದಲ್ಲಿ ಜೋಅನ್ ಗಮ್ಪರ್ ಟ್ರೋಫಿ ಪಂದ್ಯಾವಳಿಯಲ್ಲಿ ಬಾರ್ಸಿಲೋನಾ ಮತ್ತು ಮ್ಯಾನ್ಚೆಸ್ಟರ್ ಸಿಟಿ ತಂಡದ ನಡುವಿನ ಪಂದ್ಯದಲ್ಲಿ ಆಡುತ್ತಿರುವ ವೈಖರಿ.

ಈ ನಡುವೆ 2009ರ UEFA ಸೂಪರ್ ಕಪ್ ಗೆದ್ದ ನಂತರ, ಬಾರ್ಸಿಲೋನಾ ತಂಡದ ಮ್ಯಾನೇಜರ್ ಜೋಸೆಪ್ ಗ್ವಾರ್ಡಿಯೋಲ ಬಹುಶಃ ಮೆಸ್ಸಿ ತಾವು ಕಂಡ ಅತ್ಯುತ್ತಮ ಆಟಗಾರರಲ್ಲಿ ಒಬ್ಬನೆಂದು ಪ್ರತಿಪಾದಿಸಿದರು.[೬೯]

ಸೆಪ್ಟೆಂಬರ್ 18ರಂದು, ಮೆಸ್ಸಿ ಬಾರ್ಸಿಲೋನಾ ತಂಡದ ಜೊತೆಗೆ 2016ರ ತನಕ ಮುಂದುವರೆಯುವ ಒಂದು ಹೊಸ ಒಪ್ಪಂದಕ್ಕೆ ಸಹಿ ಹಾಕುತ್ತಾನೆ. ಇದರಲ್ಲಿ ಅವನನ್ನು €250 ದಶಲಕ್ಷಕ್ಕೆ ಖರೀದಿ ಮಾಡಿದ ಕಲಂ ಕೂಡ ಸೇರಿದೆ. ವಾರ್ಷಿಕ ಆದಾಯ ಸುಮಾರು €9.5 ದಶಲಕ್ಷದೊಂದಿಗೆ ಮೆಸ್ಸಿಯನ್ನುಸ್ಲಟನ್ ಇಬ್ರಾಹಿಮೊವಿಕ್ ಜತೆಗೆ ಲಾ ಲಿಗಾ ದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಆಟಗಾರರ ಸಾಲಿನಲ್ಲಿ ಸೇರಿಸಿತು.[೭೦][೭೧] ನಾಲ್ಕು ದಿನಗಳ ಬಳಿಕ, ಸೆಪ್ಟೆಂಬರ್ 22ರಂದು, ಮೆಸ್ಸಿ ಎರಡು ಗೋಲನ್ನು ಗಳಿಸಿ ಮತ್ತೊಬ್ಬ ಆಟಗಾರನಿಗೆ ಗೋಲು ಹೊಡೆಯಲು ಸಹಾಯ ಮಾಡಿದ. ಪರಿಣಾಮವಾಗಿ ಲಾ ಲಿಗಾ ದಲ್ಲಿ ರೇಸಿಂಗ್ ಸಾನ್ಟನ್ಡರ್ ವಿರುದ್ಧ ಬಾರ್ಸಿಲೋನಾ ತಂಡ 4-1 ಗೋಲುಗಳ ಜಯ ಗಳಿಸಿತು.[೭೨] ಮೆಸ್ಸಿ ಕ್ರೀಡಾಋತುವಲ್ಲಿ ಮೊದಲ ಯುರೋಪಿಯನ್ ಗೋಲನ್ನು ಸೆಪ್ಟೆಂಬರ್ 29ರಂದು ಗಳಿಸಿದ. ಡೈನಮೋ ಕ್ಯಿವ್ ವಿರುದ್ಧ 2-0 ಗೋಲುಗಳ ಅಂತರದಿಂದ ತಂಡವು ಜಯ ಗಳಿಸಿತು.[೭೩] 6-1 ಗೋಲುಗಳ ಅಂತರದಿಂದ ಕ್ಯಾಂಪ್ ನೌ ನಲ್ಲಿ ರಿಯಲ್ ಜರಗೋಜ ತಂಡವನ್ನು ನೆಲಸಮ ಮಾಡುವುದರೊಂದಿಗೆ, ಮೆಸ್ಸಿ ಲಾ ಲಿಗಾದ ಏಳು ಪಂದ್ಯಗಳಲ್ಲಿ ತನ್ನ ಗೋಲುಗಳ ಟ್ಯಾಲಿಯನ್ನು ಆರು ಗೋಲುಗಳಿಗೆ ಕೊಂಡೊಯ್ದ.[೭೪] ಮತ್ತು ನವೆಂಬರ್ 7ರಂದು ಕ್ಯಾಂಪ್ ನೌ ನಲ್ಲಿ ನಡೆದ ಮಲ್ಲೋರ್ಕಾವಿರುದ್ಧ ಬಾರ್ಸಿಲೋನಾ 4-2 ಗೋಲುಗಳ ಜಯ ಗಳಿಸಿದ ಪಂದ್ಯದಲ್ಲಿ ಒಂದು ಪೆನಾಲ್ಟಿಯನ್ನು ಗಳಿಸಿದ.[೭೫]

ಡಿಸೆಂಬರ್ 1, 2009ರಲ್ಲಿ, ಮೆಸ್ಸಿಯನ್ನು 2009ರ Ballon d'Or(ಚಿನ್ನದ ಫುಟ್ಬಾಲ್) ವಿಜೇತ ಎಂದು ಘೋಷಿಸಲಾಯಿತು. ಮೆಸ್ಸಿ ರನ್ನರ್‌ಅಪ್ ಕ್ರಿಸ್ಟಿಯಾನೊ ರೋನಾಲ್ಡೊರನ್ನು 473-233 ಭಾರೀ ಅಂತರದಿಂದ ಸೋಲಿಸಿದ.[೭೬][೭೭][೭೮] ಇದಾದ ನಂತರ, ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕ ಮೆಸ್ಸಿಯ ಹೇಳಿಕೆಯನ್ನು ಹೀಗೆ ವರದಿ ಮಾಡುತ್ತದೆ: "ಇದನ್ನು ನನ್ನ ಕುಟುಂಬಕ್ಕೆ ಅರ್ಪಿಸುತ್ತೇನೆ. ಅವರ ಅಗತ್ಯ ಕಂಡುಬಂದಾಗಲೆಲ್ಲ ಸದಾ ಜತೆಗಿದ್ದರು. ಕೆಲವೊಂದು ಸಲ ಅವರು ನನಗಿಂತ ಹೆಚ್ಚು ಭಾವುಕರಾಗಿದ್ದರೆಂದು ಅನಿಸುತ್ತದೆ."[೭೯]

ಡಿಸೆಂಬರ್ 19ರಂದು, ಮೆಸ್ಸಿ 2009ರ FIFA ಕ್ಲಬ್ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಎಸ್ಟುಡಿಯಂಟ್ಸ್ ವಿರುದ್ಧ ಅಬು ಧಾಬಿಯಲ್ಲಿ ಗೆಲುವಿನ ಗೋಲನ್ನು ಗಳಿಸಿ ತಂಡ ಜಯಗಳಿಸುವಂತೆ ಮಾಡಿದ.[೮೦]

ಎರಡು ದಿನಗಳ ನಂತರ, ಅವನಿಗೆ FIFA ವರ್ಷದ ವಿಶ್ವ ಆಟಗಾರ ಎಂಬ ಪ್ರಶಸ್ತಿ ನೀಡಲಾಯಿತು; ಪ್ರಶಸ್ತಿಗಾಗಿ ಪೈಪೋಟಿಯಲ್ಲಿದ್ದ ಕ್ರಿಸ್ಟಿಯಾನೋ ರೋನಾಲ್ಡೊ, ಕ್ಸವಿ, ಕಾಕಾ ಮತ್ತು ಅಂಡ್ರೆಸ್ ಇನಿಎಸ್ಟ ಎಲ್ಲರನ್ನು ಹಿಂದಿಕ್ಕಿ ಪ್ರಶಸ್ತಿ ತನ್ನದಾಗಿಸಿಕೊಂಡ. ಅವನು ಇದೆ ಮೊದಲ ಬಾರಿಗೆ ಪ್ರಶಸ್ತಿಯನ್ನು ಪಡೆದಿದ್ದ, ಜೊತೆಗೆ ಅರ್ಜಂಟೀನಾ ದೇಶದ ಪರವಾಗಿ ಈ ಗೌರವಕ್ಕೆ ಪಾತ್ರನಾದ ಮೊದಲ ಆಟಗಾರ.[೮೧]

ಜನವರಿ 10, 2010ರಲ್ಲಿ, ಮೆಸ್ಸಿ ತನ್ನ ಮೊದಲ ಹ್ಯಾಟ್-ಟ್ರಿಕ್ ಗಳನ್ನು ಗಳಿಸಿದ ಜೊತೆಗೆ ಕ್ರೀಡಾಋತುವಿನ ಮೊದಲ ಹ್ಯಾಟ್ರಿಕ್‌ನ್ನು CD ಟೆನೆರಿಫ್ ವಿರುದ್ಧದ ಪಂದ್ಯದಲ್ಲಿ 0-5 ಅಂತರದ ಜಯದಿಂದ ಗಳಿಸಿದ.[೮೨]

ಜನವರಿ 17ರಂದು, ಮೆಸ್ಸಿ ಕ್ಲಬ್ ಪರವಾಗಿ ತನ್ನ 100ನೇ ಗೋಲನ್ನು ಸೆವಿಲ್ಲಾ ವಿರುದ್ಧದ ಪಂದ್ಯದಲ್ಲಿ 4-0 ಅಂತರದಿಂದ ಜಯದಿಂದ ಗಳಿಸಿದ.[೮೩]

ಅಂತಾರಾಷ್ಟ್ರೀಯ ವೃತ್ತಿಜೀವನ

ಜೂನ್ 2004ರಲ್ಲಿ, ಅವನು ಅರ್ಜಂಟೀನಾ ಪರವಾಗಿ ತನ್ನ ಮೊದಲ ಪಂದ್ಯವನ್ನು ಆಡಿದ. ಇದರಲ್ಲಿ ಪೆರಗ್ವೆ ವಿರುದ್ಧ ಸೌಹಾರ್ದ ಪಂದ್ಯದಲ್ಲಿ 20-ವರ್ಷ ಕೆಳಗಿನವರ ವಿಭಾಗದಲ್ಲಿ ಆಡಿದ.[೮೪]

2005ರಲ್ಲಿ ನೆದರ್ಲ್ಯಾಂಡ್ಸ್ ನಲ್ಲಿ ನಡೆದ 2005 FIFA ವಿಶ್ವ ಯುವ ಚಾಂಪಿಯನ್ ಶಿಪ್ ನಲ್ಲಿ ಗೆಲುವು ಗಳಿಸಿದ ತಂಡದ ಒಬ್ಬ ಆಟಗಾರನಾಗಿದ್ದ. ಅಲ್ಲಿ ಅವನು, ಚಿನ್ನದ ಚೆಂಡು ಮತ್ತು ಚಿನ್ನದ ಬೂಟು ಗೆದ್ದುಕೊಂಡ.[೮೫]

ಅವನು ಸಂಪೂರ್ಣವಾದ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಗಸ್ಟ್ 17, 2005 ರಂದು ಹಂಗೇರಿ ವಿರುದ್ಧದ ಪಂದ್ಯದಲ್ಲಿ 18 ವರ್ಷದವನಿದ್ದಾಗ ಆಡಿದ. ಅವನನ್ನು 63ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕೆ ಕಳಿಸಲಾಯಿತು, ಆದರೆ ಅವನನ್ನು 65ನೇ ನಿಮಿಷದಲ್ಲಿ ವಾಪಸ್ಸು ಕಳಿಸಲಾಯಿತು, ಏಕೆಂದರೆ ರೆಫ್ರೀ, ಮಾರ್ಕಸ್ ಮೆರ್ಕ್ ರಕ್ಷಕ ವಿಲ್ಮೊಸ್ ವಾನ್ಸಕ್ ನನ್ನು ಮೊಣಕೈನಿಂದ ತಳ್ಳಿದ್ದು ಪತ್ತೆ ಮಾಡಿದರು. ವಿಲ್ಮೊಸ್ ಮೆಸ್ಸಿಯ ಅಂಗಿಯನ್ನು ಹಿಡಿದು ಎಳೆದಿದ್ದ. ತೀರ್ಮಾನವು ವಿವಾದಾಸ್ಪದವಾಗಿತ್ತು ಜೊತೆಗೆಮರಡೋನ ಕೂಡ ತೀರ್ಮಾನವನ್ನು ಪೂರ್ವನಿಯೋಜಿತವೆಂದು ವಾದಿಸಿದ.[೮೬][೮೭] ಸೆಪ್ಟೆಂಬರ್ 3ರಂದು ಪೆರುಗ್ವೆ ವಿರುದ್ಧ ಅರ್ಜಂಟೀನಾದ 1-0 ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದ ಸೋಲಿನ ಸಂದರ್ಭದಲ್ಲಿ ತಂಡಕ್ಕೆ ಹಿಂತಿರುಗಿದ್ದ. ಪಂದ್ಯಕ್ಕೆ ಮುಂಚೆ ಅವನು "ಇದು ನನಗೆ ಮತ್ತೊಂದು ಚೊಚ್ಚಲ ಪ್ರದರ್ಶನವೆಂದು ಹೇಳಿದ್ದನು.

ಮೊದಲನೆಯದು ಸ್ವಲ್ಪ ಚಿಕ್ಕದಾಗಿತ್ತು."[೮೮] ನಂತರ ಅವನು ತನ್ನ ಮೊದಲ ಪಂದ್ಯವನ್ನು ಅರ್ಜಂಟೀನಾ ಪರವಾಗಿ ಪೆರು ವಿರುದ್ಧ ಆಡುತ್ತಾನೆ. ಪಂದ್ಯದ ನಂತರ ಪೆಕರ್‌ಮ್ಯಾನ್ಮೆಸ್ಸಿಯನ್ನು "ಅಮೂಲ್ಯ ರತ್ನ" ವೆಂದು ವರ್ಣಿಸುತ್ತಾನೆ.[೮೯]

ಮಾರ್ಚ್ 28, 2009ರಂದು, ವೆನೆಜುವೆಲ ವಿರುದ್ಧ ವಿಶ್ವ ಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ, ಮೆಸ್ಸಿ ಅರ್ಜಂಟೀನಾ ತಂಡದ 10ನೇ ಸಂಖ್ಯೆಯ ಜೆರ್ಸಿಯನ್ನು ಮೊದಲ ಬಾರಿಗೆ ಧರಿಸುತ್ತಾನೆ. ಈ ಪಂದ್ಯವು ಡೀಗೋ ಮರಡೋನಗೆ ಅರ್ಜಂಟೀನಾ ತಂಡದ ತರಬೇತುದಾರನಾಗಿ ಮೊದಲ ಅಧಿಕೃತ ಪಂದ್ಯವಾಗಿತ್ತು. ಅರ್ಜಂಟೀನಾ ಪಂದ್ಯವನ್ನು 4-0 ಗೋಲುಗಳ ಅಂತರದಿಂದ ಗೆದ್ದಿತು. ಲಿಯೋನೆಲ್ ಮೆಸ್ಸಿ ಆರಂಭಿಕ ಗೋಲನ್ನು ಗಳಿಸಿದ.[೯೦]

2006ರ FIFA ವಿಶ್ವ ಕಪ್‌

ಮೆಸ್ಸಿಯು ತನಗಾದ ಗಾಯದಿಂದ 2005–06 ರ ಅಂತ್ಯದಲ್ಲಿ ಕ್ರೀಡಾಋತುವಿನಿಂದ ಎರಡು ತಿಂಗಳುಗಳ ಕಾಲ ಹೊರಗುಳಿಯಬೇಕಾಯಿತು. ಇದರಿಂದ ವಿಶ್ವ ಕಪ್ ನಲ್ಲಿ ಅವನ ಉಪಸ್ಥಿತಿಗೆ ಹಾನಿವುಂಟುಮಾಡಿತು. ಆದಾಗ್ಯೂ, ಮೆಸ್ಸಿಯನ್ನು ಮೇ 15, 2006ರ ಪಂದ್ಯಾವಳಿಗೆ ಅರ್ಜಂಟೀನಾ ತಂಡಕ್ಕೆ ಆಯ್ಕೆ ಮಾಡಲಾಯಿತು. ಅವನು ವಿಶ್ವಕಪ್‌ಗೆ ಮುಂಚೆ ಅರ್ಜಂಟೀನಾ U-20 ತಂಡದ ವಿರುದ್ಧ ಅಂತಿಮ ಪಂದ್ಯದಲ್ಲಿ 15 ನಿಮಿಷಗಳ ಕಾಲ ಆಟ ಆಡಿದ ಜೊತೆಗೆ 64ನೇ ನಿಮಿಷದಿಂದ ಅಂಗೋಲ ವಿರುದ್ಧ ಸೌಹಾರ್ದ ಪಂದ್ಯವನ್ನು ಆಡಿದ.[೯೧][೯೨]

ಅವನು ಐವರಿ ಕೋಸ್ಟ್ ವಿರುದ್ಧ ಅರ್ಜಂಟೀನಾತಂಡದ ಆರಂಭದ ಪಂದ್ಯದ ಗೆಲುವನ್ನು ಬದಲಿ ಆಟಗಾರನ ಸ್ಥಾನದಲ್ಲಿ ಕುಳಿತು ವೀಕ್ಷಿಸಿದ.[200] ಸೆರ್ಬಿಯವಿರುದ್ಧದ ಮುಂದಿನ ಪಂದ್ಯದಲ್ಲಿ, ಮೆಸ್ಸಿ ವಿಶ್ವಕಪ್‌ನಲ್ಲಿ ಅರ್ಜಂಟೀನಾವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ. ಅವನು 74ನೇ ನಿಮಿಷದಲ್ಲಿ ಮಾಕ್ಸಿ ರೋಡ್ರಿಗ್ಸ್ ನ ಬದಲಿ ಆಟಗಾರನಾಗಿ ಬಂದ. ಅವನು ಮೈದಾನಕ್ಕೆ ಪ್ರವೇಶಿಸಿದ ಕೆಲವೇ ನಿಮಿಷಗಳಲ್ಲಿ ಹರ್ನಾನ್ ಕ್ರೆಸ್ಪೋಗೆ ಗೋಲು ಹೊಡೆಯಲು ಸಹಾಯ ಮಾಡಿ 6-0 ಗೆಲುವಿನ ಪಂದ್ಯದಲ್ಲಿ ಕಡೆಯ ಗೋಲು ಗಳಿಸುತ್ತಾನೆ. ಈ ಮೂಲಕ ಅವನು ಪಂದ್ಯಾವಳಿಯಲ್ಲಿ ಗೋಲು ಹೊಡೆದ ಅತ್ಯಂತ ಕಿರಿಯ ಜೊತೆಗೆ ವಿಶ್ವ ಕಪ್ ಇತಿಹಾಸದಲ್ಲಿ ಗೋಲು ಗಳಿಸಿದ ಆರನೇ ಅತ್ಯಂತ ಕಿರಿಯ ಆಟಗಾರನೆನಿಸಿಕೊಂಡಿದ್ದಾನೆ.[೯೩] ಮೆಸ್ಸಿ ನೆದರ್ಲ್ಯಾಂಡ್ಸ್ ವಿರುದ್ಧ ಅರ್ಜಂಟೀನಾ 0-0 ಸಮಾಂಕಗಳ ಪಂದ್ಯದ ಹಿನ್ನೆಲೆಯಲ್ಲಿ ಅರ್ಜಂಟೀನಾದಲ್ಲಿ ಶುರು ಮಾಡಿದ.[೯೪]ಅದರ ನಂತರ ಮೆಕ್ಸಿಕೋ ವಿರುದ್ಧದ ಪಂದ್ಯದಲ್ಲಿ, ಮೆಸ್ಸಿ 84ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಬಂದ ಜೊತೆಗೆ ಪಂದ್ಯವು 1-1 ಸಮಾಂಕಗಳನ್ನು ಗಳಿಸಿತು. ಅರ್ಜಂಟೀನಾಗೆ ಹೆಚ್ಚುವರಿ ಸಮಯದಲ್ಲಿ ಗೋಲೊಂದರ ಅಗತ್ಯವಿತ್ತು. ಅವನು ಗೋಲು ಗಳಿಸಿದಂತೆ ಕಂಡುಬಂದರೂ,ಆಫ್‌ಸೈಡ್ ಎಂದು ತೀರ್ಮಾನಿಸಲಾಯಿತು.

ತರಬೇತುದಾರ ಜೋಸ್ ಪೆಕರ್ಮಾನ್ ಜರ್ಮನಿ ವಿರುದ್ಧದ ಕ್ವಾರ್ಟರ್-ಫೈನಲ್ ಪಂದ್ಯದಲ್ಲಿ ಮೆಸ್ಸಿಯನ್ನು ಆಡಲಿಳಿಸದೇ ವಿಶ್ರಾಂತಿ ನೀಡಿದ. ಈ ಪಂದ್ಯದಲ್ಲಿ ತಂಡ ಪೆನಾಲ್ಟಿ ಶೂಟ್ ಔಟ್ ನಿಂದಾಗಿ 4-2 ಗೋಲುಗಳಿಂದ ಸೋತಿತು.[೯೫]

2007 ಕೊಪಾ ಅಮೇರಿಕಾ

ಮೆಸ್ಸಿ 2007ರ ಕೊಪಾ ಅಮೇರಿಕಾ ಪಂದ್ಯದಲ್ಲಿ

ಮೆಸ್ಸಿ ತನ್ನ ಮೊದಲ ಪಂದ್ಯವನ್ನು ಜೂನ್ 29ರಂದು 2007ರಂದು ಕೊಪಾ ಅಮೆರಿಕಾ 2007 ಪಂದ್ಯಾವಳಿಯಲ್ಲಿ ಆಡಿದ. ಇದರಲ್ಲಿ ಅರ್ಜಂಟೀನಾ ಯುನೈಟೆಡ್ ಸ್ಟೇಟ್ಸ್ ತಂಡವನ್ನು ಮೊದಲ ಪಂದ್ಯದಲ್ಲಿ 4-1 ಗೋಲುಗಳಿಂದ ಪರಾಭವಗೊಳಿಸಿತು. ಈ ಪಂದ್ಯದಲ್ಲಿ, ಅವನು ಗೋಲನ್ನು ಗಳಿಸುವ ಒಬ್ಬ ಸಮರ್ಥ ಆಟಗಾರನ ಲಕ್ಷಣವನ್ನು ತೋರಿದ. ಅವನು ತನ್ನ ಸಹ ಆಟಗಾರ ಹರ್ನಾನ್ ಕ್ರೆಸ್ಪೋಗೆ ಗೋಲು ಹೊಡೆಯಲು ಅವಕಾಶ ಮಾಡಿಕೊಡುವುದರ ಜೊತೆಗೆ ಹಲವಾರು ಹೊಡೆತಗಳಿಗೆ ಗುರಿ ಇರಿಸಿದ.

ಟೆವೆಸ್ ಮೆಸ್ಸಿಗೆ ಬದಲಿ ಆಟಗಾರನಾಗಿ 79ನೆ ನಿಮಿಷದಲ್ಲಿ ಮೈದಾನಕ್ಕೆ ಬಂದು ಕೆಲವು ನಿಮಿಷಗಳ ನಂತರ ಗೋಲನ್ನು ಗಳಿಸಿದ.[೯೬]

ಅವನ ಎರಡನೇ ಪಂದ್ಯವು ಕೊಲಂಬಿಯ ವಿರುದ್ಧವಾಗಿತ್ತು. ಇದರಲ್ಲಿ ಅವನು ಒಂದು ಪೆನಾಲ್ಟಿಯನ್ನು ಗಳಿಸಿದ. ನಂತರ ಕ್ರೆಸ್ಪೋ ಇದನ್ನು 1-1 ಸಮಾಂಕಗಳಿಗೆ ಪಂದ್ಯವನ್ನು ಮಾರ್ಪಡಿಸಿದ. ಅವನು ಅರ್ಜಂಟೀನಾದ ಎರಡನೇ ಗೋಲನ್ನು ಗಳಿಸುವಲ್ಲಿ ಕೂಡ ಪಾತ್ರ ವಹಿಸಿದ. ಇದರಲ್ಲಿ ಅವನನ್ನು ಗೆರೆ ದಾಟಿ ಆಟದ ನಿಯಮ ಉಲ್ಲಂಘನೆ ಮಾಡಿದ್ದಾನೆಂದು ಹೇಳಲಾಯಿತು. ಇದರಿಂದ ಜುಆನ್ ರೋಮನ್ ರಿಕ್ಎಲ್ಮ್ ಒಂದು ಫ್ರೀ ಕಿಕ್‌ನಿಂದ ಗೋಲು ಗಳಿಸಲು ಅವಕಾಶ ನೀಡಿತು ಮತ್ತು ಅರ್ಜಂಟೀನಾ 3-1 ಮುನ್ನಡೆ ಸಾಧಿಸಿತು.

ಪಂದ್ಯದ ಅಂತಿಮ ಸ್ಕೋರ್ 4-2 ಗೋಲುಗಳು ಅರ್ಜಂಟೀನಾ ಪರವಾಗಿ ಇತ್ತು ಜೊತೆಗೆ ತಂಡಕ್ಕೆ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ಸ್‌ನಲ್ಲಿ ಅವಕಾಶವನ್ನು ಖಾತರಿ ಮಾಡಿತು.[೯೭]

ಪೆರುಗ್ವೆ ವಿರುದ್ಧದ ಮೂರನೇ ಪಂದ್ಯದಲ್ಲಿ, ಕ್ವಾರ್ಟರ್-ಫೈನಲ್ಸ್‌ನಲ್ಲಿ ಈಗಾಗಲೇ ಆಡಲು ತಂಡವು ಅರ್ಹತೆ ಪಡೆದಿದ್ದ ಹಿನ್ನೆಲೆಯಲ್ಲಿ ಮೆಸ್ಸಿಗೆ ತರಬೇತುದಾರ ವಿಶ್ರಾಂತಿ ನೀಡಿದ. ಅವನು 64ನೇ ನಿಮಿಷದಲ್ಲಿ ಎಸ್ಟೆಬನ್ ಕಮ್ಬಿಅಸ್ಸೊಗೆ ಬದಲಿ ಆಟಗಾರನಾಗಿ ಬಂದ. ಆಗ ತಂಡದ ಸ್ಕೋರ್ 0-0 ಗೋಲುಗಳಾಗಿತ್ತು. ಅವನು 79ನೇ ನಿಮಿಷದಲ್ಲಿ ಜೇವಿಯರ್ ಮಾಸ್ಕರಾನೋಗೆ ಗೋಲು ಹೊಡೆಯಲು ಅವಕಾಶ ಸೃಷ್ಟಿಸಿಕೊಟ್ಟ.[೯೮]

ಕ್ವಾರ್ಟರ್-ಫೈನಲ್ಸ್‌ನಲ್ಲಿ, ಅರ್ಜಂಟೀನಾ ಪೆರು ತಂಡವನ್ನು ಎದುರುಗೊಂಡಾಗ, ಮೆಸ್ಸಿ ಪಂದ್ಯದ ಎರಡನೇ ಗೋಲನ್ನು ರಿಕ್ಎಲ್ಮ್ ಚೆಂಡಿನ ವರ್ಗಾವಣೆಯಿಂದ ಗಳಿಸಿದ. ತಂಡವು 4-0 ಗೋಲುಗಳಿಂದ ವಿಜಯ ಸಾಧಿಸಿತು.[೯೯] ಮೆಕ್ಸಿಕೋ ವಿರುದ್ಧದ ಸೆಮಿ-ಫೈನಲ್ ಪಂದ್ಯದಲ್ಲಿ, ಮೆಸ್ಸಿ ಒಸ್ವಾಲ್ಡೋ ಸಾಂಚೆಸ್ ವಿರುದ್ಧ ಎತ್ತರದಲ್ಲಿ ಚೆಂಡನ್ನು ಬಾರಿಸಿದ. ಇದರಿಂದ ಅರ್ಜಂಟೀನಾ ತಂಡವು 3-0 ಅಂತರದಿಂದ ಜಯಗಳಿಸಿ ಫೈನಲ್ ಪ್ರವೇಶಿಸಿತು.[೧೦೦] ಆದರೆ ಫೈನಲ್ ನಲ್ಲಿ ಅರ್ಜಂಟೀನಾ ಬ್ರೆಜಿಲ್ ವಿರುದ್ಧ 3-0 ಗೋಲುಗಳ ಅಂತರದಿಂದ ಪರಾಭವಗೊಂಡಿತು.[೧೦೧]

ಮೆಸ್ಸಿ 2008ರ ಒಲಂಪಿಕ್ಸ್‌ನಲ್ಲಿ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ

2008 ಬೇಸಿಗೆ ಒಲಿಂಪಿಕ್ಸ್‌

ಮೆಸ್ಸಿಯನ್ನು 2008ರ ಒಲಂಪಿಕ್ಸ್ನಲ್ಲಿ ಅರ್ಜಂಟೀನಾ ಪರ ಆಡಲು ನಿಷೇಧಿಸಿದ್ದ ಬಾರ್ಸಿಲೋನಾ[೧೦೨], ಜೋಸೆಫ್ ಗಾರ್ಡಿಯೋಲಾ ಜತೆ ಮಾತುಕತೆ ನಡೆಸಿದ ನಂತರ ಅವನಿಗೆ ಅವನಿಗೆ ಆಡಲು ಅವಕಾಶ ಕಲ್ಪಿಸಿತು.[೧೦೩] ಅವನು ಅರ್ಜಂಟೀನಾ ತಂಡ ಸೇರಿ ಐವರಿ ಕೋಸ್ಟ್ ವಿರುದ್ಧದ ಪಂದ್ಯದಲ್ಲಿ 2-1 ಗೋಲುಗಳ ಜಯ ಗಳಿಸುವುದರೊಂದಿಗೆ ತಂಡಕ್ಕೆ ಮೊದಲ ಗೋಲನ್ನು ಗಳಿಸಿಕೊಟ್ಟ.[೧೦೩]

ಅವನು ನಂತರ ಪ್ರಾರಂಭಿಕ ಗೋಲನ್ನು ಗಳಿಸುವುದರ ಜೊತೆಗೆ ಏಂಜಲ್ ಡಿ ಮರಿಯಾಗೆ ಎರಡನೇ ಗೋಲು ಹೊಡೆಯಲು ಸಹಾಯಮಾಡಿದ. ಇದರಿಂದ ತಂಡವು ಹೆಚ್ಚುವರಿ ಅವಧಿಯ ಆಟದಲ್ಲಿ 2-1 ಗೋಲುಗಳಿಂದ ನೆದರ್ಲ್ಯಾಂಡ್ಸ್ ವಿರುದ್ಧ ಜಯಗಳಿಸಿತು.[೧೦೪] ಅವನು ಅರ್ಜಂಟೀನಾದ ಎದುರಾಳಿ ಬ್ರೆಜಿಲ್ ವಿರುದ್ಧದ ಪಂದ್ಯದಲ್ಲಿ ಆಟವಾಡಿದ. ಇದರಲ್ಲಿ ಅರ್ಜಂಟೀನಾ 3-0 ಗೋಲುಗಳಿಂದ ಜಯಗಳಿಸುವುದರೊಂದಿಗೆ ಫೈನಲ್ ಪ್ರವೇಶಿಸಿತು.[೧೦೫]

ಚಿನ್ನದ ಪದಕದ ಪಂದ್ಯದಲ್ಲಿ, ಮೆಸ್ಸಿ ಮತ್ತೊಮ್ಮೆ ಡಿ ಮರಿಯಾನಿಗೆ ಏಕೈಕ ಗೋಲು ಹೊಡೆಯಲು ಸಹಾಯಮಾಡುತ್ತಾನೆ. ಇದರಲ್ಲಿ ತಂಡವು ನೈಜೀರಿಯ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಗಳಿಸಿತು.[೧೦೬]

ವೈಯಕ್ತಿಕ ಜೀವನ

ಮೆಸ್ಸಿ ಒಂದು ಹಂತದಲ್ಲಿ ಮಕಾರೆನ ಲೆಮೊಸ್ ಜೊತೆ ಪ್ರೇಮ ಸಂಬಂಧ ಹೊಂದಿದ್ದ. ಅವಳೂ ಕೂಡ ಅವನ ತವರೂರು ರೊಸಾರಿಯೋ ದವಳಾಗಿದ್ದಳು. ಅವನು ಹೇಳುವಂತೆ ಹುಡುಗಿಯ ತಂದೆಯಿಂದ ಅವಳ ಪರಿಚಯವಾಯಿತು. 2006ರ ವಿಶ್ವ ಕಪ್ ಗೆ ಕೆಲ ದಿನಗಳ ಮುಂಚೆ ಅವನು ತನಗಾದ ಗಾಯದಿಂದ ಚೇತರಿಸಿಕೊಳ್ಳಲು ರೊಸಾರಿಯೋಗೆ ಹಿಂದಿರುಗಿದಾಗ ಅವಳನ್ನು ಪರಿಚಯಿಸಲಾಯಿತು.[೧೦೭][೧೦೮] ಅವನಿಗೆ ಇದಕ್ಕೂ ಮುಂಚೆ ಅರ್ಜಂಟೀನಾದ ರೂಪದರ್ಶಿಯ ಲೂಸಿಯಾನ ಸಲಸರ್ ಜೊತೆ ಸಂಪರ್ಕವಿತ್ತು.[೧೦೯][೧೧೦]

ಜನವರಿ 2009ರಲ್ಲಿ ಕೆನಾಲ್ 33 ವಾಹಿನಿಯ "ಹ್ಯಾಟ್ ಟ್ರಿಕ್ ಬಾರ್ಸ" ಕಾರ್ಯಕ್ರಮದಲ್ಲಿ ಅವನು ಹೇಳುತ್ತಾನೆ: "ನನಗೆ ಒಬ್ಬಳು ಗೆಳತಿ ಇದ್ದಾಳೆ ಮತ್ತು ಅವಳು ಅರ್ಜಂಟೀನಾದಲ್ಲಿ ವಾಸಿಸುತ್ತಾಳೆ, ನಾನು ಆರಾಮವಾಗಿದ್ದೇನೆ ಜೊತೆಗೆ ಖುಷಿಯಿಂದಿದ್ದೇನೆ".[೧೧೦] ಅವನು ಅಂಟೋನೆಲ್ಲ ರೋಕ್ಕುಸ್ಸೋ[೧೧೧] ಎಂಬ ಹುಡುಗಿಯ ಜೊತೆಗೆ ಬಾರ್ಸಿಲೋನಾ-ಎಸ್ಪಾನ್ಯೋಲ್ ಕುದುರೆ ಪಂದ್ಯದ ನಂತರ ಸಿಟ್ಗೆಸ್ ಉತ್ಸವದಲ್ಲಿ ಕಾಣಿಸಿಕೊಂಡಿದ್ದ.

ರೋಕ್ಕುಸ್ಸೋಗೆ ಕೂಡ ರೊಸಾರಿಯೋ ತವರೂರು.[೧೧೨] ಅವರು 2010ರ ಕೊನೆಯಲ್ಲಿ ವಿವಾಹ ಮಾಡಿಕೊಳ್ಳಲು ಯೋಜಿಸಿದ್ದಾರೆ.[೧೧೧]

ಅವನು ಪ್ರೊ ಈವಲ್ಯೂಶನ್ ಸಾಕರ್ 2009ರ ವಿಡಿಯೋ ಗೇಮ್‌ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾನೆ ಜೊತೆಗೆ ಆಟದ ಪ್ರಚಾರ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾನೆ.[೧೧೩][೧೧೪] ಫಾರ್ನಾನ್ಡೋ ಟಾರ್ರೆಸ್ ಜೊತೆ ಮೆಸ್ಸಿ ಕೂಡ ಪ್ರೊ ಈವಲ್ಯೂಶನ್ ಸಾಕರ್ 2010ರ ಮುಖಪುಟದಲ್ಲಿ ಕಾಣಿಸಿಕೊಂಡಿದ್ದಾನೆ ಜೊತೆಗೆ ಚಲನೆಗಳ ಛಾಯಾಗ್ರಹಣ ಮತ್ತು ಚಲನಚಿತ್ರ ಜಾಹಿರಾತಿನ ತುಣುಕುಗಳಲ್ಲಿ ಭಾಗವಹಿಸಿದ್ದಾರೆ.[೧೧೫][೧೧೬][೧೧೭] ಮೆಸ್ಸಿಯನ್ನು ಜರ್ಮನ್ ಸ್ಪೋರ್ಟ್ಸ್ ವೇರ್ ಕಂಪನಿ ಅಡಿಡಾಸ್ ಪ್ರಾಯೋಜಿಸುತ್ತಿದೆ ಜೊತೆಗೆ ಅವರ ಕಿರುತೆರೆಯ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾನೆ.[೧೧೮]

ಫುಟ್ಬಾಲ್ ಆಟದಲ್ಲಿ ಅವನ ಇಬ್ಬರು ಸೋದರ ಸಂಬಂಧಿಗಳಾದ ಮಾಕ್ಸಿ ಮತ್ತು ಎಮಾನ್ಯುಯೆಲ್ ಬಿಯನ್ಕುಚ್ಚಿ ಇದ್ದಾರೆ.[೧೧೯][೧೨೦]

ಕ್ಲಬ್‌‌ನ ಅಂಕಿಅಂಶಗಳು

ಜನವರಿ 30, 2010ರ ತನಕ[೧೨೧]

ಕ್ಲಬ್ಕ್ರೀಡಾಋತುಲೀಗ್‌ ಪಂದ್ಯಗಳು

ಕಪ್[nb ೧]

ಯುರೋಪ್[nb ೨]

ಕ್ಲಬ್ ವಿಶ್ವ ಕಪ್ಒಟ್ಟು
ಆಡಿದ ಪಂದ್ಯಗಳುಗೋಲುಗಳು

ನೆರವುಗಳು

ಆಡಿದ ಪಂದ್ಯಗಳುಗೋಲುಗಳು

ಗೋಲಿಗೆ ನೆರವು

ಆಡಿದ ಪಂದ್ಯಗಳುಗೋಲುಗಳು

ಗೋಲಿಗೆ ನೆರವು

ಆಡಿದ ಪಂದ್ಯಗಳುಗೋಲುಗಳು

ಗೋಲಿಗೆ ನೆರವು

ಆಡಿದ ಪಂದ್ಯಗಳುಗೋಲುಗಳುಗೋಲಿಗೆ ನೆರವು
ಬಾರ್ಸಿಲೋನಾ2004–05710100100---910
2005/061763210611---2584
2006–072614242161000036173
2007–08281012300961---401613
2008–093123118621295---513818
2009–101715743062122029228
ವೃತ್ತಿ ಜೀವನದ ಒಟ್ಟು ಸಾಧನೆ1266935221234019822019010246

ಅಂತಾರಾಷ್ಟ್ರೀಯ ಗೋಲುಗಳು

#ದಿನಾಂಕಸ್ಥಳಎದುರಾಳಿಸ್ಕೋರುಫಲಿತಾಂಶಸ್ಪರ್ಧೆ
11 ಮಾರ್ಚ್ 2006.ಬೇಸಲ್, ಸ್ವಿಟ್ಜರ್‌ಲ್ಯಾಂಡ್  Croatia2 – 3ಸೋಲುಸೌಹಾರ್ದ
216 ಜೂನ್ 2006

ಗೆಲ್ಸೇನ್ಕಿರ್ಚೆನ್ , ಜರ್ಮನಿ

 Serbia and Montenegro6 – 0ಜಯ2006 ವಿಶ್ವಕಪ್
35 ಜೂನ್ 2007ಬಾರ್ಸಿಲೋನಾ, ಸ್ಪೇನ್  ಅಲ್ಜೀರಿಯ4 – 3ಜಯಸೌಹಾರ್ದ
45 ಜೂನ್ 2007ಬಾರ್ಸಿಲೋನಾ, ಸ್ಪೇನ್

ಅಲ್ಜೀರಿಯ

4 – 3ಜಯಸೌಹಾರ್ದ
58 ಜುಲೈ 2007

ಬಾರ್ಕ್ವಿಸಿಮೆಟೋ, ವೆನಿಜುವೆಲ

 ಪೆರು4 – 0ಜಯ2007 ಕೊಪಾ ಅಮೇರಿಕಾ
611 ಜುಲೈ 2007

ಪೋರ್ಟೊ ಒರ್ಡಾಸ್, ವೆನೆಜುವೆಲ

 ಮೆಕ್ಸಿಕೋ0-3ಜಯ

2007 ಕೊಪಾ ಅಮೇರಿಕಾ

716 ಅಕ್ಟೋಬರ್ 2007ಮರಾಕೈಬೊ, ವೆನೆಜುವೆಲಾ  ವೆನೆಜುವೆಲಾ0 – 2ಜಯ2010 ವಿಶ್ವಕಪ್‌ಗೆ ಅರ್ಹತಾಪಂದ್ಯ
820 ನವೆಂಬರ್‌ 2007ಬೊಗೋಟಾ, ಕೊಲಂಬಿಯ  ಕೊಲೊಂಬಿಯ2-1ಸೋಲು

2010ರ ವಿಶ್ವಕಪ್ ಗೆ ಅರ್ಹತಾಪಂದ್ಯ

94 ಜೂನ್ 2008

ಸಾನ್ ಡಿಗೋ, ಯುನೈಟೆಡ್ ಸ್ಟೇಟ್ಸ್

ಮೆಕ್ಸಿಕೊ1-4ಜಯಸೌಹಾರ್ದ
1011 ಅಕ್ಟೋಬರ್ 2008ಬ್ಯುನಸ್ ಏರ್ಸ್, ಅರ್ಜೆಂಟಿನಾ  ಉರುಗ್ವೆ2-1ಜಯ

2010ರ ವಿಶ್ವಕಪ್ ಗೆ ಅರ್ಹತಾಪಂದ್ಯ

1111 ಫೆಬ್ರವರಿ 2009

ಮಾರ್ಸಿಲೆ,ಫ್ರಾನ್ಸ್

 France0 – 2ಜಯಸೌಹಾರ್ದ
1228 ಮಾರ್ಚ್ 2009ಬ್ಯುನಸ್ ಏರ್ಸ್, ಅರ್ಜಂಟೀನಾ

ವೆನೆಜುವೆಲಾ

4 – 0ಜಯ

2010ರ ವಿಶ್ವ ಕಪ್ ಗೆ ಅರ್ಹತೆ

1314 ನವೆಂಬರ್ 2009

ಮಾಡ್ರಿಡ್,ಸ್ಪೇನ್

 Spain1-2ಸೋಲುಸೌಹಾರ್ದ

ಗೌರವಗಳು

ಬಾರ್ಸಿಲೋನಾ

ಸ್ಪಾನಿಶ್ ಲೀಗ್(3): 2004–05, 2005–06, 2008–09

ಸ್ಪಾನಿಶ್ ಕಪ್: 2008–09

ಸ್ಪಾನಿಶ್ ಸೂಪರ್ ಕಪ್(3): 2005, 2006, 2009

UEFA ಚಾಂಪಿಯನ್ಸ್ ಲೀಗ್(2): 2005–06, 2008–09

UEFA ಸೂಪರ್ ಕಪ್(1): 2009

FIFA ಕ್ಲಬ್ ವಿಶ್ವ ಕಪ್(1): 2009

ಅಂತಾರಾಷ್ಟ್ರೀಯ

FIFA U-20 ವಿಶ್ವ ಕಪ್: 2005

Copa America : 2020

Finalossima : 2021

FIFA World Cup : [[2022

ಒಲಂಪಿಕ್ ಚಿನ್ನದ ಪದಕ:2008

ವೈಯಕ್ತಿಕ ಸಾಧನೆ

  • FIFA U-20 ವಿಶ್ವ ಕಪ್ ಅಗ್ರ ಸ್ಕೋರರ್: 2005
  • FIFA U-20 ವಿಶ್ವಕಪ್‌ನ ಕ್ರೀಡಾ ಕ್ರೀಡಾಋತುವಿನ ಶ್ರೇಷ್ಠ ಆಟಗಾರ: 2005
  • ಕೊಪಾ ಅಮೇರಿಕಾ ಕ್ರೀಡಾ ಕ್ರೀಡಾಋತುವಿನ ಶ್ರೇಷ್ಠ ಕಿರಿಯ ಆಟಗಾರ: 2007
  • U-21 ಯುರೋಪಿಯನ್ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ: 2007
  • ಅರ್ಜಂಟೀನಾದ ವರ್ಷದ ಶ್ರೇಷ್ಠ ಆಟಗಾರ: 2005, 2007, 2009
  • FIFPro ವಿಶೇಷ ವರ್ಷದ ಶ್ರೇಷ್ಠ ಕಿರಿಯ ಆಟಗಾರ: 2006–2007, 2007–2008
  • FIFPro ವಿಶ್ವದ ವರ್ಷದ ಶ್ರೇಷ್ಠ ಕಿರಿಯ ಆಟಗಾರ: 2005–2006, 2006–2007, 2007–2008
  • ವಿಶ್ವ ಸಾಕರ್ ವರ್ಷದ ಶ್ರೇಷ್ಠ ಕಿರಿಯ ಆಟಗಾರ: 2005–2006, 2006–2007, 2007–2008
  • ಪ್ರೆಮಿಯೋ ಡಾನ್ ಬಲೋನ್ (ಲಾ ಲಿಗಾ ದ ಅತ್ಯುತ್ತಮ ವಿದೇಶಿ ಆಟಗಾರ): 2006–2007, 2008–2009
  • EFE ಟ್ರೋಫಿ (ಲಾ ಲಿಗಾದ ಅತ್ಯುತ್ತಮ ಇಬೆರೋ-ಅಮೆರಿಕನ್ ಆಟಗಾರ): 2006–2007, 2008–2009
  • FIFPro ವಿಶ್ವ XI: 2006–2007, 2007–2008, 2008–2009
  • UEFA ವರ್ಷದ ಶ್ರೇಷ್ಠ ತಂಡ: 2007–2008, 2008–2009
  • FIFA ವರ್ಷದ ಶ್ರೇಷ್ಠ ತಂಡ: 2008, 2009
  • UEFA ಚಾಂಪಿಯನ್ಸ್ ಲೀಗ್‌ನ ಅಗ್ರ ಸ್ಕೋರರ್: 2008–2009
  • ಟ್ರೋಫೆಒ ಅಲ್ಫ್ರೆಡೋ ಡಿ ಸ್ಟೆಫಾನೋ:2008–2009
  • UEFA ಕ್ಲಬ್‌ನ ವರ್ಷದ ಮುಂಚೂಣಿಯ ಆಟಗಾರ: 2008–2009
  • UEFA ಕ್ಲಬ್‌ನ ವರ್ಷದ ಶ್ರೇಷ್ಠ ಫುಟ್ಬಾಲ್ ಆಟಗಾರ: 2008-09
  • LFP ಅತ್ಯುತ್ತಮ ಆಟಗಾರ : 2008–2009
  • LFP ಅತ್ಯುತ್ತಮ ಗೋಲು ಹೊಡೆವ ಆಟಗಾರ: 2008–2009
  • Onze d'Or: 2009
  • Ballon d'Or: 2009
  • ವಿಶ್ವ ಸಾಕರ್‌ನ ವರ್ಷದ ಶ್ರೇಷ್ಠ ಆಟಗಾರ: 2009
  • FIFA ಕ್ಲಬ್ ವಿಶ್ವ ಕಪ್‌ನ ಚಿನ್ನದ ಚೆಂಡು: 2009
  • ಟೊಯೋಟ ಪ್ರಶಸ್ತಿ: 2009
  • FIFA ವರ್ಲ್ಡ್ ವರ್ಷದ ಶ್ರೇಷ್ಠ ಆಟಗಾರ: 2009
  • FIFPro ವರ್ಷದ ವಿಶ್ವ ಶ್ರೇಷ್ಠಆಟಗಾರ: 2008-09
  • FIFA WORLD CUP GOLDEN BALL WINNER :2014

ಟಿಪ್ಪಣಿಗಳು

ಆಕರಗಳು

ಬಾಹ್ಯ ಕೊಂಡಿಗಳು