ಲಿವರ್ ಪೂಲ್ ಫುಟ್ ಬಾಲ್ ಕ್ಲಬ್

ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ ಲಿವರ್ ಪೂಲ್ ನಲ್ಲಿರುವ ಒಂದು ಆಂಗ್ಲ ವೃತ್ತಿನಿರತ ಫುಟ್ ಬಾಲ್ ತಂಡವಾಗಿದೆ, ಇದು ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುತ್ತದೆ. 1892 ರಲ್ಲಿ ಈ ಕ್ಲಬ್ ಸ್ಥಾಪಿತವಾದಂದಿನಿಂದ ಅದು ಆನ್ ಫೀಲ್ಡ್ ನಲ್ಲಿ ಆಡುತ್ತಿದೆ ಹಾಗೂ ಸ್ಥಾಪನೆಯಾದ ಮರುವರ್ಷವೇ ಅದನ್ನು ಫುಟ್ ಬಾಲ್ ಲೀಗ್ ಗೆ ಸೇರಿಸಿಕೊಳ್ಳಲಾಯಿತು.

Liverpool
ಪೂರ್ಣ ಹೆಸರುLiverpool Football Club
ಉಪ ಹೆಸರುThe Reds
ಸ್ಥಾಪನೆ15 ಮಾರ್ಚ್ 1892; 48255 ದಿನ ಗಳ ಹಿಂದೆ (1892-೦೩-15)
(by John Houlding)
ಮೈದಾನAnfield
(ಸಾಮರ್ಥ್ಯ: 53,394[೧])
ಮಾಲೀಕರುFenway Sports Group (John W. Henry & Tom Werner)
ಅಧ್ಯಕ್ಷರುTom Werner
ಮ್ಯಾನೇಜರ್Jürgen Klopp
Premier League
2022–23Premier League, 5th
ಕ್ಲಬ್ ನ ಅಧಿಕೃತ ಪುಟ
ದೇಶ ಬಣ್ಣ
ಎರಡನೆಯ ಬಣ್ಣ
ಮೂರನೆಯ ಬಣ್ಣ
Current season

ಇಂಗ್ಲೆಂಡ್ ನ 20 ನೆಯ ಶತಮಾನದ ಅತಿ ಯಶಸ್ವಿ ಕ್ಲಬ್ [೨][೩] ಹಾಗೂ ಇಂಗ್ಲಿಷ್ ಫುಟ್ ಬಾಲ್ ನ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕ್ಲಬ್ ಗಳಲ್ಲಿ ಒಂದಾದ ಲಿವರ್ ಪೂಲ್ ಜಂಟಿಯಾಗಿ ಲೀಗ್ ಪ್ರಶಸ್ತಿಗಳನ್ನು 18 ಬಾರಿ ಗೆದ್ದು ದಾಖಲೆ ನಿರ್ಮಿಸಿದೆ, ಏಳು ಫೆಡರೇಷನ್ ಏಷ್ಯಾ ಕಪ್ ಗಳನ್ನು ಗೆದ್ದಿದೆ ಮತ್ತು ಏಳು ಲೀಗ್ ಕಪ್ ಗಳನ್ನು ಗೆದ್ದು ಮತ್ತೊಂದು ದಾಖಲೆ ನಿರ್ಮಿಸಿದೆ. ಯೂರೋಪಿಯನ್ ಫುಟ್ ಬಾಲ್ ಸ್ಪರ್ಧೆಗಳಲ್ಲೂ ಲಿವರ್ ಪೂಲ್ ಅತ್ಯಂತ ಯಶಸ್ವಿ ತಂಡವಾಗಿದೆ; 2005 ರಲ್ಲಿ ಕಡೆಯ ಬಾರಿ ಗೆದ್ದ ಕಪ್ ಸೇರಿದಂತೆ ಲಿವರ್ ಪೂಲ್ ಐದು ಯೂರೋಪಿಯನ್ ಕಪ್ ಗಳನ್ನು ಗೆದ್ದಿದೆ ಹಾಗೂ ಮೂರು UEFA ಕಪ್ ಗಳಲ್ಲಿ ವಿಜಯ ಸಾಧಿಸಿದೆ.ಈ ಕ್ಲಬ್ ಪ್ರಸ್ತುತದಲ್ಲಿ ಯೂರೋಪ್ ನಲ್ಲಿ ಮೂರನೆಯ ಕ್ರಮಾಂಕದಲ್ಲೂ, ವಿಶ್ವದಲ್ಲಿ ಆರನೆಯ ಕ್ರಮಾಂಕದಲ್ಲೂ ಇದೆ; ಈ ಕ್ಲಬ್ ಅತಿ ಹೆಚ್ಚು ಅಂತರರಾಷ್ಟ್ರೀಯ ಟೈಟಲ್ ಗಳನ್ನು (ಪ್ರಶಸ್ತಿಗಳನ್ನು) ಗೆದ್ದಿರುವ ಹೆಗ್ಗಳಿಕೆಗೆ ಭಾಜನವಾಗಿದೆ.[೪]


ಈ ತಂಡದ ಬೆಂಬಲಿಗರು ಎರಡು ಪ್ರಮುಖ ದುರಂತಗಳಿಗೆ ತುತ್ತಾಗಿದ್ದಾರೆ. ಮೊದಲನೆಯ ದುರಂತವೆಂದರೆ 1985 ರ ಹೇಯ್ಸೆಲ್ ಕ್ರೀಡಾಂಗಣ ದುರಂತ, ಆ ಕ್ರೀಡಾಂಗಣದಲ್ಲಿ ಮುನ್ನುಗ್ಗುತ್ತಿದ್ದ ಲಿವರ್ ಪೂಲ್ ಅಭಿಮಾನಿಗಳ ರಭಸ, ಒತ್ತಡಕ್ಕೆ ಗೋಡೆಯೊಂದು ಕುಸಿದು 39 ಜನ ಜುವೆಂಟಸ್ ಬೆಂಬಲಿಗರು ಅಸುನೀಗಿದರು. 1989ರ ಹಿಲ್ಸ್ ಬರ್ಗ್ ದುರಂತದಲ್ಲಿ 96 ಲಿವರ್ ಪೂಲ್ ಅಭಿಮಾನಿಗಳು ಸುತ್ತಲಿನ ಗೋಡೆಗೆ ಒತ್ತರಿಸಿಕೊಂಡ ಸಲುವಾಗಿ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.

ದೀರ್ಫಕಾಲದಿಂದಲೂ ಲಿವರ್ ಪೂಲ್ ಗೆ ಅಕ್ಕಪಕ್ಕದಲ್ಲಿರುವ ಎವರ್ಟನ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಗಳೊಡನೆ ತೀವ್ರವಾದ ಪೈಪೋಟಿಯಿದೆ. 1964ರಿಂದಲೂ ಈ ತಂಡದ ಸಮವಸ್ತ್ರದ ಬಣ್ಣವು ಸಂಪೂರ್ಣ ಕೆಂಪು; ಅದಕ್ಕೂ ಮುನ್ನ ಕೆಂಪು ಅಂಗಿ ಮತ್ತು ಬಿಳಿಯ ಚಡ್ಡಿ ಇದ್ದುದನ್ನು ಆ ಕಾಲದ (1964ರ) ಮ್ಯಾನೇಜರ್ ಬಿಲ್ ಶಾಂಕ್ಲಿ ಸಂಪೂರ್ಣ ಕೆಂಪಿಗೆ ಬದಲಾಯಿಸಿದರು. ಈ ಕ್ಲಬ್ ನ ಗೀತೆ "ಯೂ ವಿಲ್ ನೆವರ್ ವಾಕ್ ಅಲೋನ್".

ಇತಿಹಾಸ

ಆನ್ ಫೀಲ್ಡ್ ಜಮೀನಿನ ಮಾಲಿಕ ಮತ್ತು ಕ್ಲಬ್ ನ ಅಧ್ಯಕ್ಷರಾದ ಜಾನ್ ಹೌಲ್ಡಿಂಗ್ ಮತ್ತು ಎವರ್ಟನ್ ಫುಟ್ ಬಾಲ್ ಕ್ಲಬ್ ಸಮಿತಿಯ ನಡುವೆ ಉದ್ಭವಿಸಿದ ವಿವಾದವು ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ ನ ಸ್ಥಾಪನೆಗೆ ಕಾರಣವಾಯಿತು. ಎಂಟು ವರ್ಷಗಳ ಕಾಲ ಆ ಕ್ರೀಡಾಂಗಣದಲ್ಲಿ ಆಡಿದ ಎವರ್ಟನ್ 1892ರಲ್ಲಿ ಗೂಡೀಸನ್ ಪಾರ್ಕ್ ಗೆ ಸ್ಥಳಾಂತರಗೊಂಡರು ಹಾಗೂ ಆನ್ ಫೀಲ್ಡ್ ನಲ್ಲಿ ಆಡಲೆಂದು ಹೌಲ್ಡಿಂಗ್ ಲಿವರ್ ಪೂಲ್ ಎಫ್.ಸಿ.ಯನ್ನು ಹುಟ್ಟುಹಾಕಿದರು.[೫][೬]ಮೊದಲಿಗೆ ಎವರ್ಟನ್ ಎಫ್.ಸಿ. ಎಂಡ್ ಅಥ್ಲೆಟಿಕ್ ಗ್ರೌಂಡ್ಸ್ ಲಿಮಿಟೆಡ್ (ಅಥವಾ ಚಿಕ್ಕದಾಗಿ ಎವರ್ಟನ್ ಅಥ್ಲೆಟಿಕ್) ಎಂದು ಕರೆಯಲ್ಪಡುತ್ತಿದ್ದ ಈ ಕ್ಲಬ್ ಜೂನ್ 1892 ರಲ್ಲಿ, ದ ಫುಟ್ ಬಾಲ್ ಅಸೋಸಿಯೇಷನ್ ಈ ಕ್ಲಬ್ ಅನ್ನು ಎವರ್ಟನ್ ಎಂದು ಪರಿಗಣಿಸಲು ನಿರಾಕರಿಸಿದುದರಿಂದ, ಲಿವರ್ ಪೂಲ್ ಎಫ್.ಸಿ. ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿತು.[೭]ತನ್ನ ಮೊದಲ ಋತುವಿನಲ್ಲಿಯೇ ಈ ತಂಡವು ಲಂಕಾಷೈರ್ ಲೀಗ್ ಗೆದ್ದಿತು ಹಾಗೂ 1893–94ರ ಆದಿಯಲ್ಲಿ ಫುಟ್ ಬಾಲ್ ಲೀಗ್ ನ ಎರಡನೆಯ ದರ್ಜೆಕ್ಕೆ ಸರಿಕೊಂಡಿತು. ಅಲ್ಲಿಯೂ ಮೊದಲನೆಯ ಸ್ಥಾನವನ್ನು ಗಳಿಸಿದ ಈ ತಂಡವನ್ನು ಮೊದಲನೆಯ ದರ್ಜೆಗೆ ಏರಿಸಲಾಯಿತು ಹಾಗೂ ಆ ಮಟ್ಟದಲ್ಲಿಯೂ 1901 ಮತ್ತು 1906 ರಲ್ಲಿ ಈ ಕ್ಲಬ್ ಜಯಗಳಿಸಿತು. ಲಿವರ್ ಪೂಲ್ 1922 ಮತ್ತು 1923 ರಲ್ಲಿ ಒಂದರ ಹಿಂದೆ ಒಂದರಂತೆ ಲೀಗ್ ಪಂದ್ಯಾವಳಿಯಲ್ಲಿ ಜಯ ಸಾಧಿಸಿತು, ಆದರೆ ನಂತರದ ವರ್ಷಗಳಲ್ಲಿ ಗೆಲುವು ಮರೀಚಿಕೆಯಾಯಿತು. 1946–47 ರ ಋತು ವಿನಲ್ಲಿ ಮತ್ತೆ ಈ ಕ್ಲಬ್ ಮೊದಲ ದರ್ಜೆಯಲ್ಲಿ ಗೆಲ್ಲುವುದರ ಮೂಲಕ ಈ ಮಟ್ಟದಲ್ಲಿನ ಐದನೆಯ ಜಯವನ್ನು ಸಾಧಿಸಿತು. ಬರ್ನ್ಲೇ ಎಫ್.ಸಿ. ತಂಡದಿಂದ 1–0 ಅಂತರದಿಂದ ತನ್ನ ಮೊದಲ ಎಫ್.ಎ. ಕಪ್ ಅಂತಿಮ ಪಂದ್ಯದಲ್ಲಿ 1914 ರಲ್ಲಿ ಪರಾಭವಗೊಂಡನಂತರ, 1950 ರಲ್ಲಿ ಆರ್ಸೆನಲ್ ತಂಡವು ಲಿವರ್ ಪೂಲ್ ಅನ್ನು ಎರಡನೆಯ ಬಾರಿಗೆ ಫೈನಲ್ ನಲ್ಲಿ ಸೋಲಿಸಿತು.[೮]1953–54 ರ ಋತು ವಿನಲ್ಲಿ ಈ ತಂಡವನ್ನು ಎರಡನೆಯ ದರ್ಜೆಗೆ ತಳ್ಳಲಾಯಿತು.[೯]

ಕೊರಳ ಸುತ್ತ ಸ್ಕಾರ್ಫ್ ಧರಿಸಿ, ಬಾಹುಗಳನ್ನು ಮೇಲಕ್ಕೇರಿಸಿ ನಿಂತ ವ್ಯಕ್ತಿಯೊಬ್ಬನ ಪ್ರತಿಮೆ. ಪ್ರತಿಮೆಯ ಹಿಂದೆ ಸ್ಟ್ಯಾಂಡ್ ಒಂದರ ಹೊರಾಂಗಣವನ್ನು ಕಾಣಬಹುದು.

ಲೀಗ್ ಗೆ ಸೇರಿಲ್ಲದ ವರ್ಸೆಸ್ಟರ್ ಸಿಟಿ ಎಫ್.ಸಿ. ಯ ವಿರುದ್ಧ 2–1 ಅಂತರದಿಂದ 1958–59 ಎಫ್.ಎ. ಕಪ್ ಪಂದ್ಯದಲ್ಲಿ ಪರಾಭವಗೊಂಡ ಕೆಲವೇ ದಿನಗಳಲ್ಲಿ ಬಿಲ್ ಶ್ಯಾಂಕಿಯವರನ್ನು ತಂಡದ ಕಾರ್ಯನಿರ್ವಾಹಕ (ಮ್ಯಾನೇಜರ್) ಆಗಿ ನೇಮಿಸಿತು ಹಾಗೂ 24 ಆಟಗಾರರನ್ನು ಬಿಡುಗಡೆ ಮಾಡಿತು. ಅವರು ಆನ್ ಫೀಲ್ಡ್ ನಲ್ಲಿದ್ದ ಬೂಟ್ ಗಳನ್ನು ಪೇರಿಸಿಡುತ್ತಿದ್ದ ಒಂದು ಕೊಠಡಿಯನ್ನು ತರಬೇತುದಾರರು ವ್ಯೂಹ ಮತ್ತು ತಂತ್ರಗಳನ್ನು ಚರ್ಚಿಸಲು ಬಳಸುವ ಕೊಠಡಿಯಾಗಿ ಪರಿವರ್ತಿಸಿದರು; ಇಲ್ಲಿ ಶ್ಯಾಂಕಿ ಮತ್ತು ಇತರ "ಬೂಟ್ ರೂಮ್" ಸದಸ್ಯರಾದ ಜೋ ಫಾಗನ್, ರೂಬೆನ್ ಬೆನೆಟ್, ಮತ್ತು ಬಾಬ್ ಪೇಯ್ ಸ್ಲೇ ತಂಡದ ಮರುನಿರ್ಮಾಣ ಕಾರ್ಯದಲ್ಲಿ ತೊಡಗಿದರು.[೧೦]ಶ್ಯಾಂಕಿ ಇಬ್ಬರು ಪ್ರಮುಖ (ಸ್ಕಾಟಿಷ್ ಆಟಗಾರರನ್ನು) ತಮ್ಮೊಡನೆ ತಂಡಕ್ಕೆ ಕರೆತಂದರು - ರಕ್ಷಣಾ ಆಟವನ್ನಾಡುವ ರಾನ್ ಯೀಟ್ಸ್ ಮತ್ತು ಆಕ್ರಮಣಕಾರಿ ಆಟವಾಡುವ ಇಯಾನ್ ಸೇಂಟ್ ಜಾನ್; ಇಬ್ಬರೂ ಶೀಘ್ರದಲ್ಲೇ ತಂಡದ ಕೇಂದ್ರಬಿಂದುವಾದರು. 1962 ರಲ್ಲಿ ಈ ತಂಡವನ್ನು ಮೊದಲನೆ ದರ್ಜೆಗೆ ಏರಿಸಲಾಯಿತು ಹಾಗೂ ಆ ಪ್ರಥಮ ದರ್ಜೆಯ ಲೀಗ್ ಅನ್ನು, 17 ವರ್ಷಗಳ ನಂತರ, 1964 ರಲ್ಲಿ ಮೊಟ್ಟಮೊದಲ ಬಾರಿಗೆ ಗೆದ್ದಿತು. ಮರುವರ್ಷ ಲಿವರ್ ಪೂಲ್ ತನ್ನ ಮೊದಲ ಎಫ್.ಎ. ಕಪ್ ಗಳಿಸಿತು ಹಾಗೂ 1966 ರಲ್ಲಿ ಮೊದಲ ದರ್ಜೆಯ ಪಂದ್ಯಾವಳಿಯಲ್ಲೂ ಯಶ ಗಳಿಸಿತು. ಲಿವರ್ ಪೂಲ್ ಲೀಗ್ ಹಾಗೂ UEFA ಕಪ್ ಡಬಲ್ ಅನ್ನು 1972–73 ರ ಋತುವಿನಲ್ಲಿ ಗೆದ್ದಿತು ಮತ್ತು ಒಂದು ವರ್ಷದ ನಂತರ ಪುನಃ ಎಫ್.ಎ. ಕಪ್ ಅನ್ನು ಗೆದ್ದಿತು. ನಂತರದ ಕಲವೇ ದಿನಗಳಲ್ಲಿ ಶ್ಯಾಂಕಿ ನಿವೃತ್ತರಾದರು ಹಾಗೂ ಅವರ ಸ್ಥಾನವನ್ನು ಅವರ ಸಹಾಯಕರೇ ಆಗಿದ್ದ ಬಾಬ್ ಪೇಯ್ ಸ್ಲೇ ತುಂಬಿದರು.[೧೧] ಪೇಯ್ ಸ್ಲೇಯವರ ನಿರ್ವಹಣೆಯಲ್ಲಿ ಈ ಕ್ಲಬ್ ಮತ್ತೊಂದು ಲೀಗ್ ಮತ್ತು UEFA ಕಪ್ ಗಳನ್ನು ಅವರು ಕ್ಲಬ್ಬನ್ನು ಸುಪರ್ದಿಗೆ ತೆಗೆದುಕೊಂಡ ಎರಡನೆಯ ಋತುವಾದ 1976 ರಲ್ಲಿಯೇ ಜಯಿಸಿತು. ಮರುವರ್ಷ ಲಿವರ್ ಪೂಲ್ ಲೀಗ್ ಪ್ರಶಸ್ತಿಯ ಮೇಲಿನ ತನ್ನ ಹಿಡಿತವನ್ನು ಭದ್ರಗೊಳಿಸಿಕೊಂಡಿತು, ಮೊಟ್ಟಮೊದಲ ಬಾರಿಗೆ ಯೂರೋಪಿಯನ್ ಕಪ್ ಗೆದ್ದಿತು, ಆದರೆ ಎಫ್.ಎ.ಕಪ್ ನ ಅಂತಿಮ ಪಂದ್ಯದಲ್ಲಿ ಸೋಲನ್ನು ಅನುಭವಿಸಿತು. . ಅದರ ಮರುವರ್ಷವೂ ಲಿವರ್ ಪೂಲ್ ಯೂರೋಪಿಯನ್ ಕಪ್ ಅನ್ನು ತನ್ನದಾಗಿಯೇ ಇರಿಸಿಕೊಂಡಿತು ಹಾಗೂ 1979 ರಲ್ಲಿ ಮೊದಲ ದರ್ಜೆಯ ಪ್ರಶಸ್ತಿಯನ್ನು ಮತ್ತೆ ಪಡೆದುಕೊಂಡಿತು.[೧೨]ಪೇಯ್ ಸ್ಲೇ ಮ್ಯಾನೇಜರ್ ಆಗಿದ್ದ ಒಂಬತ್ತು ವರ್ಷಗಳಲ್ಲಿ ಲಿವರ್ ಪೂಲ್ 21 ಪ್ರಶಸ್ತಿಗಳನ್ನು ಗೆದ್ದಿತು; ಅದರ ಪೈಕಿ ಮೂರು ಯೂರೋಪಿಯನ್ ಕಪ್ ಗಳು, ಒಂದು UEFA ಕಪ್, ಆರು ಲೀಗ್ ಪ್ರಶಸ್ತಿಗಳು ಹಾಗೂ ಮೂರು ಸತತ ಲೀಗ್ ಕಪ್ ಗಳು ಸೇರಿದ್ದವು. ಎಫ್.ಎ. ಕಪ್ ಮಾತ್ರ ಅವರ ಕೈ ತಪ್ಪಿದ ಏಕೈಕ ದೇಶೀಯ ಪ್ರಶಸ್ತಿಯಾಗಿತ್ತು.[೧೩]


ಪೇಯ್ ಸ್ಲೇ 1983 ರಲ್ಲಿ ನಿವೃತ್ತರಾದರು ಹಾಗೂ ಅವರ ಸ್ಥಾನವನ್ನು ಅವರ ಸಹಾಯಕರಾಗಿದ್ದ ಜೋ ಫಾಗನ್ ತುಂಬಿದರು.[೧೪] ಫಾಗನ್ ರ ಮೊದಲ ವರ್ಷದಲ್ಲಿಯೇ ಲಿವರ್ ಪೂಲ್ ಲೀಗ್, ಲೀಗ್ ಕಪ್ ಮತ್ತು ಯೂರೋಪಿಯನ್ ಗಳನ್ನು ಗೆದ್ದು ಒಂದೇ ಋತುವಿನಲ್ಲಿ ಮೂರೂ ಪ್ರಶಸ್ತಿಗಳನ್ನು ಗೆದ್ದ ಮೊದಲ ಇಂಗ್ಲಿಷ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.[೧೫] 1985 ರಲ್ಲಿ ಲಿವರ್ ಪೂಲ್ ಮತ್ತೆ ಯೂರೋಪಿಯನ್ ಫೈನಲ್ ತಲುಪಿತು; ಅದು ಹೇಯ್ಸೆಲ್ ಕ್ರೀಡಾಗಣದಲ್ಲಿ ಜುವೆಂಟಸ್ ತಂಡವನ್ನು ಎದುರಿಸಿತು. ಕಿಕ್-ಆಫ್ ಗೆ ಮೊದಲು ಲಿವರ್ ಪೂಲ್ ಅಭಿಮಾನಿಗಳು ಎರಡೂ ತಂಡಗಳನ್ನು ಬೆಂಬಲಿಸುತ ಅಭಿಮಾನಿಗಳ ಗುಂಪಿನ ಮಧ್ಯೆ ಇದ್ದ ಅಡ್ಡಗೋಡೆಯನ್ನು ಒಡೆದರು ಹಾಗೂ ಜುವೆಂಟಸ್ ತಂಡದ ಅಭಿಮಾನಿಗಳತ್ತ ನುಗ್ಗಿದರು. ಮುನ್ನುಗ್ಗಿದ ಜನರ ರಭಸ/ತೂಕ ತಡೆಯಲಾರದೆ ತಡೆಗೋಡೆಯೊಂದು ಕುಸಿದುದರ ಫಲವಾಗಿ ಹೆಚ್ಚಾಗಿ ಇಟಲಿಯವರೇ ಇದ್ದ ಅ ಗುಂಪಿನ 39 ಜನರು ದುರ್ಮರಣಕ್ಕೀಡಾದರು. ಈ ಘಟನೆಯು ಹೇಯ್ಸೆಲ್ ಕ್ರೀಡಾಂಗಣದ ದುರ್ಘಟನೆ ಎಂದೇ ಖ್ಯಾತವಾಯಿತು; ದುರ್ಘಟನೆ ನಡೆದರೂ ಪಂದ್ಯ ಮುಂದುವರೆಯಿತು ಹಾಗೂ ಜುವೆಂಟಸ್ ಲಿವರ್ ಪೂಲ್ ಅನ್ನು 1 -0 ಅಂತರದಿಂದ ಸೋಲಿಸಿತು. ಇದರ ಪರಿಣಾಮವಾಗಿ ಇಂಗ್ಲಿಷ್ ಕ್ಲಬ್ ಗಳು ಯೂರೋಪಿಯನ್ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಐದು ವರ್ಷಗಳ ಕಾಲ ನಿಷೇಧಿಸಲಾಯಿತು, ಲಿವರ್ ಪೂಲ್ ಗೆ ಹತ್ತು ವರ್ಷಗಳ ನಿಷೇಧ ವಿಧಿಸಲಾಗಿ, ನಂತರ ಅದನ್ನು ಆರು ವರ್ಷಗಳಿಗೆ ತಗ್ಗಿಸಲಾಯಿತು. ಅನೈಚ್ಛಿಕವಾಗಿ ಜನರನ್ನು ಹೊಡೆದ ಅಪರಾಧದ ಮೇರೆಗೆ ಹದಿನಾಲ್ಕು ಲಿವರ್ ಪೂಲ್ ಅಭಿಮಾನಿಗಳಿಗೆ ಸಜಾ ವಿಧಿಸಲಾಯಿತು.[೧೬]

ಹಿಲ್ಸ್ ಬರ್ಗ್ ಸ್ಮಾರಕ, ಹಿಲ್ಸ್ ಬರ್ಗ್ ದುರಂತದಲ್ಲಿ ಮೃತರಾದ 96 ಜನರ ಹೆಸರು ಇದರಲ್ಲಿ ಕೆತ್ತಲಾಗಿದೆ.

ಫಾಗನ್ ಈ ದುರ್ಘಟನೆಯ ನಂತರ ತಮ್ಮ ಹುದ್ದೆಗೆ ರಾಜಿನಾಮೆ ಇತ್ತರು ಹಾಗೂ ಕೆನ್ನಿ ಡಾಲ್ ಗ್ಲಿಷ್ ರನ್ನು ಆಟಗಾರ-ಮ್ಯಾನೇಜರ್ ಆಗಿ ನೇಮಿಸಲಾಯಿತು.[೧೭]ಅವರ ಅವಧಿಯಲ್ಲಿ ಲಿವರ್ ಪೂಲ್ ಮೂರು ಲೀಗ್ ಪ್ರಶಸ್ತಿಗಳು ಮತ್ತು ಎರಡು ಎಫ್.ಎ. ಕಪ್ ಗಳನ್ನು ಗೆದ್ದಿತು; ಅದರಲ್ಲಿ 1985-86ರ ಋತುವಿನಲ್ಲಿ ಲೀಗ್ ಮತ್ತು ಕಪ್ ನ "ಡಬಲ್" ವಿಜಯವೂ ಸೇರಿತ್ತು. ಲಿವರ್ ಪೂಲ್ ನ ಈ ವಿಜಯಗಳ ಉತ್ಸಾಹ ಹಿಲ್ಸ್ ಬರ್ಗ್ ದುರಂತrದ ಕರಾಳಛಾಯೆಯಡಿ ಕಾಣಿಸದಂತಾಯಿತು. ಏಪ್ರಿಲ್ 15, 1989ರಂದು ನಾಟಿಂಗ್ ಹ್ಯಾಮ್ ಫಾರೆಸ್ಟ್ ವಿರುದ್ಧ ನಡೆದ ಸೆಮಿ-ಫೈನಲ್ ಪಂದ್ಯದಲ್ಲಿ ನೂರಾರು ಲಿವರ್ ಪೂಲ್ ಅಭಿಮಾನಿಗಳು ಸುತ್ತಲಿನ ಗೋಡೆಗೆ ಆತು ಜಜ್ಜಲ್ಪಟ್ಟು ಮೃತರಾದರು.[೧೮] 94 ಅಭಿಮಾನಿಗಳು ಸ್ಥಳದಲ್ಲೇ ಮೃತರಾದರು; 95ನೆಯವರು ತಮಗೆ ಉಂಟಾದ ಗಾಯಗಳಿಂದ ಚೇತರಿಸಿಕೊಳ್ಳದೆ ನಾಲ್ಕು ದಿನಗಳ ನಂತರ ಆಸ್ಟತ್ರೆಯಲ್ಲಿ ನಿಧನರಾದರು ಹಾಗೂ 96ನೆಯವರು ಮತ್ತೆ ಸ್ಮೃತಿ ಪಡೆಯದೆ ಸುಮಾರು ನಾಲ್ಕು ವರ್ಷಗಳ ನಂತರ ನಿಧನರಾದರು.[೧೯] ಹಿಲ್ಸ್ ಬರ್ಗ್ ದುರಂತದ ನಂತರ ಸರ್ಕಾರವು ಕ್ರೀಡಾಂಗಣದ ಸುರಕ್ಷತೆಯತ್ತ ಗಮನ ಹರಿಸಿತು. ಟೈಲರ್ ವರದಿ ಎಂದೇ ಹೆಸರಾದ ಈ ವರದಿಯು ಉನ್ನತ ಮಟ್ಟದ ತಂಡಗಳು ಎಲ್ಲರೂ ಕುಳಿತೇ ಪಂದ್ಯ ನೋಡಲು ಅನುವಾಗುವಂತಹ ಕ್ರೀಡಾಂಗಣಗಳನ್ನು ಮಾತ್ರ ಹೊಂದಿರಬೇಕೆಂದು ಕಾಯಿದೆ ಹೊರಡಿಸಲು ಅನುಕೂಲಕರವಾಯಿತು. ಪೊಲೀಸರ ಹತೋಟಿಗೆ ಸಿಗದಂತಹ ದಟ್ಟವಾದ ಜನಸಂದಣಿಯೇ ಈ ದುರಂತಕ್ಕೆ ಕಾರಣ ಎಂದು ಈ ವರದಿ ಸಾರಿತು.[೨೦]

ಲಿವರ್ ಪೂಲ್ ಲೀಗ್ ಋತುವಿನ ಬಹಳ ಕಡಿಮೆ ಅಂತರದಲ್ಲಿ ಕೊನೆಗೊಂಡ ಪಂದ್ಯವೊಂದರಲ್ಲಿ ಭಾಗಿಯಾಯಿತು; 1989–90 ರಲ್ಲಿ ಲಿವರ್ ಪೂಲ್ ಹೊಡೆದ ಗೋಲ್ ಗಳ ಸಂಖ್ಯೆಯ ಆಧಾರದ ಮೇಲೆ ಪ್ರಶಸ್ತಿಯನ್ನು ಕಳೆದುಕೊಂಡಿತು ಹಾಗೂ ಋತುವಿನ ಕಡೆಯ ನಿಮಿಷದಲ್ಲಿ ತನ್ನ ನೆಲದಲ್ಲೇ ಆಡಿದ ಪಂದ್ಯದಲ್ಲಿ ಕಡೆಗೆ ಪ್ರಶಸ್ತಿ ಗೆದ್ದ ಆರ್ಸೆನಲ್Arsenal ತಂಡಕ್ಕೆ ಶರಣಾಯಿತು.[೨೧] 1991 ರಲ್ಲಿ ಡಾಲ್ ಗ್ಲಿಷ್ ಹಿಲ್ಸ್ ಬರ್ಗ್ ದುರಂತ ಮತ್ತು ನಂತರದ ಪರಿಣಾಮಗಳನ್ನು ಕಾರಣವಾಗಿಸಿ ತಮ್ಮ ಹುದ್ದೆಗೆ ರಾಜಿನಾಮೆ ಇತ್ತರು. ಅವರ ಸ್ಥಾನಕ್ಕೆ ಮಾಜಿ ಆಟಗಾರರಾದ ಗ್ರೀಮ್ ಸೌನೆಸ್ ಬಂದರು; 1992 ರಲ್ಲಿ ಎಫ್.ಎ. ಕಪ್ ಪ್ರಶಸ್ತಿಯೊಂದನ್ನು ಗೆದ್ದದ್ದಷ್ಟೇ ಇವರ ಸಾಧನೆ; ನಂತರ ಇವರ ಸ್ಥಾನಕ್ಕೆ ರಾಯ್ ಎವಾನ್ಸ್ ಆಯ್ಕೆಯಾದರು. ಲಿವರ್ ಪೂಲ್ 1995 ಲೀಗ್ ಕಪ್ ಗೆದ್ದಿತು ಹಾಗೂನ್ಯೂ ಕ್ಯಾಸಲ್ ಯುನೈಟೆಡ್ ಮೇಲೆ ಆನ್ ಫೀಲ್ಡ್ ನಲ್ಲಿ ಏಪ್ರಿಲ್ ಮೂರು, 1996 ರಂದು ನಡೆದ ಪಂದ್ಯದಲ್ಲಿ 4–3 ಅಂತರದ ಜಯ ಗಳಿಸಿತು; ಈ ಪಂದ್ಯವನ್ನು ಏಪ್ರಿಲ್ 2003 ರಲ್ಲಿ ದಶಮಾನದ ಪಂದ್ಯ ಎಂದು ಪ್ರೀಮಿಯರ್ ಲೀಗ್ 10 ಸೀಸನ್ಸ್ ಅವಾರ್ಡ್ಸ್ ಸಂದರ್ಭದಲ್ಲಿ ಘೋಷಿಸಲಾಯಿತು.[೨೨]

ಮಿಲೆನಿಯಮ್ ಸ್ಟೇಡಿಯಮ್ ನಲ್ಲಿ ವೆಸ್ಟ್ ಹ್ಯಾಂ ಯುನೈಟೆಡ್ ವಿರುದ್ಧ 2006 ರಲ್ಲಿ ನಡೆದ ಎಫ್.ಎ. ಕಪ್ ಫೈನಲ್ ಪಂದ್ಯ.

1998–99 ರ ಅವಧಿಯಲ್ಲಿ ಜೆರಾರ್ಡ್ ಹೌಲ್ಲಿಯರ್ ರನ್ನು ಸಹ-ಪ್ರಬಂಧಕರಾಗಿ ನೇಮಿಸಲಾಯಿತು ಹಾಗೂ ಎವಾನ್ಸ್ ಹುದ್ದೆ ತ್ಯಜಿಸಿದ ನಂತರ, ನವೆಂಬರ್ 1998 ರಲ್ಲಿ ಅವರು ಸಂಪೂ ರ್ಣವಾಗಿ ಮ್ಯಾನೇಜರ್ ಹುದ್ದೆಗೆ ನಿಯಮಿತರಾದರು.[೨೩] 2001 ರಲ್ಲಿ, ಹೌಲ್ಲಿಯರ್ ತಮ್ಮ ಎರಡನೆಯ ಪೂರ್ಣಾವಧಿ ಮ್ಯಾನೇಜರ್ ಗಿರಿಯನ್ನು ನಡೆಸುತ್ತಿದ್ದ ಅವಧಿಯಲ್ಲಿ, ಲಿವರ್ ಪೂಲ್ ಎಫ್.ಎ. ಕಪ್, ಲೀಗ್ ಕಪ್ ಮತ್ತು UEFA ಕಪ್ ಗಳನ್ನು ಗೆದ್ದು ಟ್ರಿಬಲ್ ಪ್ರಶಸ್ತಿ ವಿಜಯದ ದಾಖಲೆ ಸಾಧಿಸಿತು.[೨೪]2001–02 ಋತುವಿನಲ್ಲಿ ಹೌಲ್ಲಿಯರ್ ಪ್ರಮುಖ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದರು; ಲಿವರ್ ಪೂಲ್ ಆರ್ಸೆನಲ್ ಗಿಂತ ಹಿಂದಿನ, ಎರಡನೆಯ ಸ್ಥಾನವನ್ನು ಪಡೆಯುವಲ್ಲಿ ಸಫಲವಾಯಿತು.[೨೫] 2003–04 ಋತುವಿನ ಅಂತ್ಯದಲ್ಲಿ ಹೌಲ್ಲಿಯರ್ ರ ಹುದ್ದೆಗೆ ರಾಫೆಲ್ ಬೆನಿಟೆಝ್ ಆಯ್ಕೆಯಾದರು. ಬೆನಿಟೆಝ್ ರ ಮೊದಲ ವರ್ಷದಲ್ಲಿ ಕ್ಲಬ್ ಐದನೆಯ ಸ್ಥಾನಕ್ಕಿಳಿದರೂ, ಲಿವರ್ ಪೂಲ್ { ಮಿಲಾನ್ ವಿರುದ್ಧ ನಡೆದ ಪಂದ್ಯದಲ್ಲಿ ಪಂದ್ಯವು 3–3 ರಲ್ಲಿ ಅಂತ್ಯವಾದಾಗ ಆಡಿದ ಪೆನಾಲ್ಟಿ ಷೂಟ್ ಔಟ್ ನಲ್ಲಿ 3 - 2 ರ ಅಂತರದಿಂದ ಮುನ್ನಡೆ ಸಾಧಿಸಿ UEFA ಚಾಂಪಿಯನ್ಸ್ ಲೀಗ್ ಅನ್ನು ಗೆದ್ದುಕೊಂಡಿತು[೨೬] ಮರುವರ್ಷ ಲಿವರ್ ಪೂಲ್ ಮೂರನೆಯ ಸ್ಥಾನಕ್ಕೇರಿತು ಹಾಗೂ ವೆಸ್ಟ್ ಹ್ಯಾಂ ಯುನೈಟೆಡ್ ವಿರುದ್ಧದ 2006 ಎಫ್.ಎ. ಕಪ್ ಅಂತಿಮ ಪಂದ್ಯವು 3-3 ಆಗಿ ಸಮ ಸ್ಕೋರ್ ನಲ್ಲಿ ಅಂತ್ಯಗೊಂಡಾಗ ಪೆನಾಲ್ಟಿ ಷೂಟೌಟ್ ನಲ್ಲಿ ಹೆಚ್ಚು ಸ್ಕೋರ್ ಮಾಡಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.[೨೭]

ಅಮೆರಿಕದ ವಾಣಿಜ್ಯೋದ್ಯಮಿಗಳಾದ ಜಾರ್ಜ್ ಜಿಲ್ಲೆಟ್ ಮತ್ತು ಟಾಮ್ ಹಿಕ್ಸ್ 2006–07ರ ಋತುವಿನಲ್ಲಿ ಈ ಕ್ಲಬ್ ಮತ್ತು ಅದರ ಸಾಲಗಳನ್ನು ತುಲನೆ ಮಾಡಿದಾಗ ನಿರ್ಧರಿತವಾದ £218.9 ಮಿಲಿಯನ್ ಅಷ್ಟು ಬೆಲೆ ಬಾಳುವ ಲಿವರ್ ಪೂಲ್ ಕ್ಲಬ್ ನ ಮಾಲಿಕರಾದರು.[೨೮] ಲಿವರ್ ಪೂಲ್ 2007 ರ UEFA ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ, 2005ನೆಯ ಇಸವಿಯ ಪುನರಾವರ್ತನೆಯೋ ಎಂಬಂತೆ, ಮಿಲಾನ್ ಅನ್ನು ಎದುರಿಸಿತು; ಆದರೆ ಈ ಬಾರಿ ಲಿವರ್ ಪೂಲ್ 2–1 ಅಂತರದಿಂದ ಪರಾಭವಗೊಂಡಿತು.[೨೯] 2008–09 ಋತುವಿನಲ್ಲಿ ಲಿವರ್ ಪೂಲ್ 86 ಪಾಯಿಂಟ್ ಗಳನ್ನು ಪಡೆಯಿತು; ಇದು ಲಿವರ್ ಪೂಲ್ ನ ಗರಿಷ್ಠ ಪ್ರೀಮಿಯರ್ ಲೀಗ್ ಅಂಕವಾಗಿತ್ತು. ಲಿವರ್ ಪೂಲ್ ಈ ಋತುವಿನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಗೆ ರನ್ನರ್ ಅಪ್ ಆಯಿತು. ಮರುವರ್ಷ ಕ್ಲಬ್ ಏಳನೆಯ ಸ್ಥಾನಕ್ಕಿಳಿಯಿತು ಹಾಗೂ ಚಾಂಪಿಯನ್ಸ್ ಲೀಗ್ ನಲ್ಲಿ ಭಾಗವಹಿಸುವ ಅರ್ಹತೆಯನ್ನು ಪಡೆಯುವಲ್ಲಿ ವಿಫಲವಾಯಿತು. ಬೆನಿಟೆಝ್ ಪರಸ್ಪರ ಒಪ್ಪಂದದ ಮೇರೆಗೆ ಹುದ್ದೆಯಿಂದ ಹೊರನಡೆದರು[೩೦] ಹಾಗೂ ಅವರ ಜಾಗಕ್ಕೆ ಫುಲ್ ಹ್ಯಾಮ್ ನ ಮ್ಯಾನೇಜರ್ ಆಗಿದ್ದ ರಾಯ್ ಹಾಡ್ಜ್ ಸನ್ ಬಂದರು.[೩೧] 2010 ರಲ್ಲಿ ಕ್ಲಬ್ ಪಾಪರ್ ಆಗುವ ಪರಿಸ್ಥಿತಿ ತಲುಪಿತು, ಕ್ಲಬ್ ನ ಸಾಲಗಾರರು ಉಚ್ಚ ನ್ಯಾಯಾಲಯದಲ್ಲಿ ಕ್ಲಬ್ ಅನ್ನು ಮಾರಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದರು.

ಅಕ್ಟೋಬರ್ 2010 ರಲ್ಲಿ ಬೋಸ್ಟನ್ ರೆಡ್ ಸಾಕ್ಸ್ ನ ಮಾಲಿಕ ಹಾಗೂ ನ್ಯೂ ಇಂಗ್ಲೆಂಡ್ ಸ್ಪೋರ್ಟ್ಸ್ ವೆಂಚರ್ಸ್ ಗೆ ಸೇರಿದಂತಹ ಜಾನ್ ಡಬ್ಲ್ಯೂ. ಹೆನ್ರಿ ಹರಾಜಿನಲ್ಲಿ ಲಿವರ್ ಪೂಲ್ ಅನ್ನು ಕೊಂಡು ಅದರ ಮಾಲಿಕತ್ವವನ್ನು ಪಡೆಯುವಲ್ಲಿ ಯಶಸ್ವಿಯಾದರು.[೩೨] ಜನವರಿ 2011 ರಲ್ಲಿ ಆ ಋತುವಿನ ಕೊನೆಯವರೆಗೆ ಕ್ಲಬ್ ನ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ಹೊರಲು ಮಾಜಿ ಮ್ಯಾನೇಜರ್ ಕೆನ್ನಿ ಡಾಲ್ ಗ್ಲಿಷ್ ರನ್ನು ಕೋರಲಾಯಿತು; ಇದಕ್ಕೆ ಮುನ್ನ ರಾಯ್ ಹಡ್ಜ್ ಸನ್ ಪರಸ್ಪರ ಒಪ್ಪಂದದ ಮೇರೆಗೆ ಕ್ಲಬ್ ನಿಂದ ಹೊರನಡೆಯಲು ಸಮ್ಮತಿಸಿದ್ದರು.[೩೩]

ಲಾಂಛನ

ಈಗ ಎಲ್ಲೆಡೆಯೂ ಜನಜನಿತವಾಗಿರುವ ಲಿವರ್ ಪಕ್ಷಿಯು ಆರ್ಸೆನಲ್ ವಿರುದ್ಧ ಲಿವರ್ ಪೂಲ್ ಆಡಿ ಸೋತ ಪಂದ್ಯದಲ್ಲಿ ಲಿವರ್ ಪೂಲ್ ಆಟಗಾರರ ಎದೆಯ ಎಡಭಾಗದಲ್ಲಿ ಮೊಟ್ಟಮೊದಲ ಬಾರಿಗೆ ಬೀಡುಬಿಟ್ಟಿತು; 1950 ರ ಎಫ್.ಎ. ಕಪ್ ಅಂತಿಮ ಪಂದ್ಯದಲ್ಲಿ ಲಾಂಛನವಾಗಿ ಸ್ಥಾಪಿತವಾದ ಈ ಗುರುತು ಲಿವರ್ ಪೂಲ್ ಎಫ್.ಸಿ. ಪರವಾಗಿ ಆಡುವವರಿಗೆ ಹೆಮ್ಮೆಯ ಲಾಂಛನವಾಗಿ ಮುಂದುವರಿದಿದೆ. ಈ ಲಾಂಛನದ ಆವೃತ್ತಿಯನ್ನು 1969 ರ ವರೆಗೆ ಬಳಸಲಾಯಿತು.

1968 ರಲ್ಲಿ ಕ್ಲಬ್ ನ ಲಾಂಛನವಾಗಿ ಮತ್ತಷ್ಟು ಆಧುನಿಕವಾದ ಆವೃತ್ತಿಯನ್ನು ಬಳಸಲು ನಿರ್ಧರಿಸಲಾಯಿತು. ಲಾಂಛನದಲ್ಲಿದ್ದ ಬಿಳಿಯ ಗೋಳಾಕಾರ ಮತ್ತು ಷೀಲ್ಡ್ ಗಳನ್ನು ತೆಗೆದುಹಾಕಿ ಲಿವರ್ ಪಕ್ಷಿಯ ಲಾಂಛನವನ್ನು ನೇರವಾಗಿ ಅಂಗಿಯ ಮೇಲೆ ಕಸೂತಿಯ ರೀತಿಯಲ್ಲಿ ಹಾಕಲಾಯಿತು. ಏಳು ವರ್ಷಗಳ ಕಾಲ ಇದನ್ನು ಶ್ವೇತವರ್ಣದಲ್ಲಿ ಬಳಸಲಾಗುತ್ತಿತ್ತು, ಆದರೆ 1976 ರಿಂದ ಈ ಚಿಹ್ನೆಯನ್ನು ಸುವರ್ಣದ ಬಣ್ಣಕ್ಕೆ ಬದಲಾಯಿಸಲಾಯಿತು ಹಾಗೂ ಅಂಬ್ರೋ ಕಂಪನಿಯನ್ನ ತಮ್ಮ ಕಿಟ್ ಸರಬರಾಜುದಾರರಾಗಿರಿಸಿಕೊಂಡದ್ದನ್ನು ರದ್ದುಗೊಳಿಸಿ, 1985 ರಲ್ಲಿ ಅಡೀಡಸ್ ನೊಡನೆ ಕರಾರು ಒಪ್ಪಂದಕ್ಕೆ ಸಹಿ ಹಾಕಿದಾಗ ಮತ್ತೆ ಶ್ವೇತವರ್ಣವನ್ನೇ ಆಶ್ರಯಿಸಲಾಯಿತು.

1992 ರಲ್ಲಿ ಲಿವರ್ ಪೂಲ್ ತನ್ನ ಶತಮಾನೋತ್ಸವವನ್ನು ಆಚರಿಸುವ ದ್ಯೋತಕವಾರಿ ಒಂದು ಹೊಸ ಲಾಂಛನವನ್ನು ಅಳವಡಿಸಿಕೊಂಡಿತು. ಚಿರಪರಿಚಿತವಾದ ಲಿವರ್ ಪಕ್ಷಿ ಮಧ್ಯದಲ್ಲಿಯೇ ಇದ್ದಿತು, ಆದರೆ ಈಗ ಕೆಂಪು ಮತ್ತು ಬಿಳಿ ಬಣ್ಣದ ಷೀಲ್ಡ್ ಹಿನ್ನೆಲೆಯಾಗಿತ್ತು. ಷೀಲ್ಡ್ ನ ಮೇಲೆ ಶ್ಯಾಂಕಿ ಗೇಟ್ಸ್ ನ ಪ್ರಾತಿನಿಧ್ಯವಿದೆ ಮತ್ತು ಕ್ಲಬ್ ನ ಪ್ರಖ್ಯಾತ ಧ್ಯೇಯವನ್ನುಬ\ ಬಿಂಬಿಸುವ ಶೀರ್ಷಿಕೆಯಾದ "ಯೂ ವಿಲ್ ನೆವರ್ ವಾಕ್ ಅಲೋನ್" ಎಂಬುದು ಕಂಡುಬರುತ್ತದೆ. ಷೀಲ್ಡ್ ನ ಎರಡೂ ಬದಿಗಳಲ್ಲಿರುವ ಜ್ವಾಲಾವರ್ಣವು ಆನ್ ಫೀಲ್ಡ್ ಹೊರಭಾಗದಲ್ಲಿನ ಹಿಲ್ಸ್ ಬರ್ಗ್ ಸ್ಮಾರಕದ ಕುರುಹುಗಳಾಗಿವೆ, ಆನ್ ಫೀಲ್ಡ್ ನಲ್ಲಿ ದುರಂತದಲ್ಲಿ ಮಡಿದವರ ನೆನಪಿಗಾಗಿ ಚಿರಜ್ವಾಲೆಯು ಜ್ವಲಿಸುತ್ತಿರುತ್ತದೆ.[೩೪]1992 ರಿಂದ ಈ ಲಾಂಛನವು ಕೆಲವು ಸಣ್ಣಪುಟ್ಟ ಬದಲಾವಣೆಗಳಿಗೊಳಗಾಗಿದೆ; 1999 ರಲ್ಲಿ ಇದನ್ನು ಕಾಲಕ್ಕೆ ತಕ್ಕಂತೆ ಪರಿವರ್ತಿಸಲಾಯಿತು. ಈಗಿನ ಲಾಂಛನವು ಮೊದಲು ಅಂಗಿಯ ಮೇಲೆ ಕೇವಲ ಎರಡು ವರ್ಣಗಳಲ್ಲಿ ಕಂಡುಬಂದಂದಿನಿಂದಲು ಹೆಚ್ಚಿನ ಬದಲಾವಣೆಗಳನ್ನೇನೂ ಕಂಡಿಲ್ಲ, ಆದರೆ 2002 ರ ನಂತರ ಲಾಂಛನವು ಪೂರ್ಣವರ್ಣದಲ್ಲಿ ಕಾಣಿಸಿಕೊಂಡಿತು.

ಕಿಟ್‌

ಲಿವರ್ ಪೂಲ್ ನ ಇತಿಹಾಸದಲ್ಲಿ ಬಹಳ ಕಾಲ ತಂಡದ ಸಮವಸ್ತ್ರದ ಬಣ್ಣವು ಕೆಂಪು ಆಗಿದ್ದಿತಾದರೂ, ಸರ್ವಕಾಲಕ್ಕೂ ಕೆಂಪೇ ಇರಲಿಲ್ಲ. ಕ್ಲಬ್ ಸ್ಫಾಪಿತವಾದ ಕಾಲದಲ್ಲಿ ಇದರ ಕಿಟ್ ಸಹ ಎವರ್ಟನ್ ರ ಬಣ್ಣಗಳನ್ನು ಹೋಲುವಂತಹುದೇ ಆಗಿದ್ದಿತು. 1894 ರಲ್ಲಿ ನೀಲಿ ಮತ್ತು ಬಿಳಿಯ ಚೌಕಳಿಯ ಅಂಗಿಗಳನ್ನು ಬಳಸಲಾಗುತ್ತಿದ್ದಿತು; ನಂತರ ನಗರದ ಬಣ್ಣವಾದ ಕೆಂಪನ್ನು ಲಿವರ್ ಪೂಲ್ ತನ್ನ ಕಿಟ್ (ಉಡುಪಿನ) ಬಣ್ಣವಾಗಿ ಅಳವಡಿಸಿಕೊಂಡಿತು.[೫]ನಗರದ ಲಾಂಛನವಾದ ಲಿವರ್ ಬರ್ಡ್ ಅನ್ನು ಕ್ಲಬ್ ನ ಲಾಂಛನವಾಗಿ 1901 ರಲ್ಲಿ ಬಳಸಲು ಆರಂಭಿಸಿದರಾದರೂ ಅದನ್ನು ಕಿಟ್ ಗೆ ಅಳವಡಿಸಿಕೊಂಡದ್ದು 1955 ರಲ್ಲಿ. ಲಿವರ್ ಪೂಲ್ 1964 ರವರೆಗೆ ಕೆಂಪು ಅಂಗಿ ಮತ್ತು ಬಿಳಿಯ ಚಡ್ಡಿಯನ್ನು ಧರಿಸುತ್ತಿದ್ದಿತು; 1964 ರಲ್ಲಿ ಆಗಿನ ಮ್ಯಾನೇಜರ್ ಆಗಿದ್ದ ಬಿಲ್ ಶ್ಯಾಂಕಿ ಇದನ್ನು ಸಂಪೂರ್ಣ ಕೆಂಪಿಗೆ ಬದಲಾಯಿಸಲು ನಿರ್ಧರಿಸಿದರು.[೩೫]

ಶ್ಯಾಂಕಿ ತನ್ನ ಆಟಗಾರರು ವಿಶಿಷ್ಟವಾಗಿ ಉಡುಪು ಧರಿಸಿರಬೇಕೆಂಬ ಇಚ್ಚೆಯಿಂದ ಕಿಟ್ ಅನ್ನು ಕಾಲಕ್ಕೆ ತಕ್ಕಂತೆ ಬದಲಾಯಿಸಲು ನಿರ್ಧರಿಸಿ ಬಿಳಿಯ ಚಡ್ಡಿಗಳು ಮತ್ತು ಸಾಕ್ಸ್ ಗಳ ಬದಲು ಕೆಂಪು ಚಡ್ಡಿಗಳು ಮತ್ತು ಸಾಕ್ಸ್ ಗಳನ್ನು ಬಳಸಲು ಆದೇಶಿಸಿದರು. ಇಯಾನ್ ಸೇಂಟ್ ಜಾನ್ ತಮ್ಮ ಆತ್ಮಕಥೆಯಲ್ಲಿ ನೆನೆಸಿಕೊಂಡಿರುವಂತೆ, ಲಿವರ್ ಪೂಲ್ ಆಂಡರ್ಲೆಕ್ಟ್ ವಿರುದ್ಧ ಆಡಿದ ಪಂದ್ಯದಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣ ಕೆಂಪು ವಸ್ತ್ರವನ್ನು ಧರಿಸಿದರು.

He thought the colour scheme would carry psychological impact—red for danger, red for power. He came into the dressing room one day and threw a pair of red shorts to Ronnie Yeats. “Get into those shorts and let’s see how you look,” he said. “Christ, Ronnie, you look awesome, terrifying. You look 7ft tall.” “Why not go the whole hog, boss?” I suggested. “Why not wear red socks? Let’s go out all in red.” Shankly approved and an iconic kit was born.[೩೬]
ತಂಡದ ಉಡುಪುಗಳ ವರ್ಣಗಳ ಇತಿಹಾಸ
(1892–96)[೩೭]
(1896-07) (1910–34)
(1907–1910) (1934–36) (1944–45)
(1936–40) (1945–59)
(1959–64)
(1964 – present)

ಲಿವರ್ ಪೂಲ್ ಬೇರೆಡೆಗೆ ಸಾಗಿದಾಗ ಸಾಮಾನ್ಯವಾಗಿ ಧರಿಸುವ ಉಡುಪೆಂದರೆ ಬಿಳಿಯ ಅಂಗಿ ಮತ್ತು ಕಪ್ಪನೆಯ ಅಥವಾ ಹಳದಿ ಚಡ್ಡಿ. ಆದರೆ,1987 ನಲ್ಲಿ ಒಂದು ಸಂಪೂರ್ಣ ಊದಾ ಬಣ್ನದ ಕಿಟ್ ಅನ್ನು ಪರಿಚಯಿಸಲಾಯಿತು ಹಾಗೂ ಈ ಕಿಟ್ ಅನ್ನು 1991–92 ರ ಶತಮಾನೋತ್ಸವ ವರ್ಷದವರೆಗೆ ಬಳಸಲಾಯಿತು; ನಂತರ ಅದರ ಸ್ಥಾನವನ್ನು ಹಸಿರು ಅಂಗಿ ಮತ್ತು ಬಿಳಿ ಚಡ್ಡಿಗಳು ಆಕ್ರಮಿಸಿದವು. 1990 ರ ದಶಕದಲ್ಲಿ ಹಲವಾರು ಜೋಡಿ-ಬಣ್ಣಗಳನ್ನು ಬಳಸಲಾಯಿತು - ಚಿನ್ನದ ಬಣ್ಣ ಮತ್ತು ಸೇನಾ ನೀಲಿ, ಹೊಳೆಯುವ ಹಳದಿ, ಕಪ್ಪು ಮತ್ತು ಊದಾ ಮತ್ತು ಪೇಲವ ಹಳದಿ ಬಣ್ಣದ ಉಡುಪುಗಳನ್ನು ಧರಿಸಲು ನೀಡಲಾಯಿತು; ಬೇರೆಡೆಯಲ್ಲಿ ಆಡುವ ಸಂದರ್ಭದಲ್ಲಿ ಹಳದಿ ಮತ್ತು ಬಿಳಿ ಕಿಟ್ ಗಳನ್ನು 2008-09ರವರೆಗೆ ಬಳಸಲಾಗುತ್ತಿದ್ದಿತು ಹಾಗೂ 2008-09ರಲ್ಲಿ ಮತ್ತೆ ಊದಾಬಣ್ನದ ಕಿಟ್ ಅನ್ನೇ ಪರಿಚಯಿಸಲಾಯಿತು. ಲಿವರ್ ಪೂಲ್ ನ ಮೂರನೆಯ ಕಿಟ್ ಯೂರೋಪಿಯನ್ ನಲ್ಲಿ ಆಡುವ ಪಂದ್ಯಗಳಿಗಾಗಿ ಮೀಸಲಾಗಿದೆ; ಆದರೆ ದೇಶೀಯ ಪಂದ್ಯಗಳಲ್ಲಿ ಪ್ರಸ್ತುತ ಹೊರದೇಶಗಳಲ್ಲಿ ಬಳಸುವ ಕಿಟ್ ಮತ್ತು ದೇಶೀ ಕಿಟ್ ಗಳು ಒಂದೇ ರೀತಿಯಾದಲ್ಲಿ (ಎದುರಾಳಿಯೂ ಇವರ ಹೊರದೇಶದಲ್ಲುಪಯೊಗಿಸುವ ಬಣ್ಣದ ಕಿಟ್ ಹೊಂದಿದ್ದಲ್ಲಿ) ಈ ಯೂರೋಪಿಯನ್ ಪಂದ್ಯಗಳಿಗಾಗಿರುವ ಕಿಟ್ ಅನ್ನು ಬಳಸಲಾಗುವುದು. ಪ್ರಸ್ತುತದಲ್ಲಿರುವ ಕಿಟ್ ಗಳನ್ನು ವಿನ್ಯಾಸಗೊಳಿಸಿದವರು ಅಡೀಡಸ್;[೩೮] ಆ ಕಂಪನಿಯವರು ಈ ಕ್ಲಬ್ ನ ಕಿಟ್ ಗಳನ್ನು 1985 ರಿಂದ 1996 ರವರೆಗೆ ಉತ್ಪಾದಿಸಿದರು. ಈ ಕ್ಲಬ್ ಬಳಸಿದ ಏಕೈಕ ಇತರ ಕಂಪನಿಯ ಅಂಗಿಯ ತಯಾರಕರು ಅಂಬ್ರೋ; ಅವರ ಬ್ರ್ಯಾಂಡ್ ನ ಅಂಗಿಗಳನ್ನು 1985 ರವರೆಗೆ ಕಂಪನಿಯು ಬಳಸುತ್ತಿತ್ತು; ರೀಬಕ್ ಕಂಪನಿಯು 1996 ರಿಂದ ಹತ್ತು ವರ್ಷಗಳ ಕಾಲ ಈ ಕ್ಲಬ್ ನ ಅಂಗಿಗಳನ್ನು ತಯಾರಿಸಿತು..[೩೯]

1979 ರಲ್ಲಿ ಹಿಟಾಚಿಯೊಡನೆ ಒಂದು ವ್ಯಾವಹಾರಿಕ ಒಪ್ಪಂದಕ್ಕೆ ಬಂದ ನಂತರ ಲಿವರ್ ಪೂಲ್ ತನ್ನ ಆಟಗಾರರ ಅಂಗಿಯ ಮೇಲೆ ಪ್ರಾಯೋಜಕರ ಲಾಂಛನವನ್ನು ಬಳಸಿದ ಮೊದಲ ವೃತ್ತಿನಿರತ ಇಂಗ್ಲಿಷ್ ಕ್ಲಬ್ ಆಯಿತು.[೪೦] ಅಂದಿನಿಂದ ಈ ಕ್ಲಬ್ ಅನ್ನು ಕ್ರೌನ್ ಪೇಂಟ್ಸ್, ಕ್ಯಾಂಡಿ, ಕಾರ್ಲ್ಸ್ ಬರ್ಗ್ ಮತ್ತು ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಗಳು ಪ್ರಾಯೋಜಿಸಿವೆ. 1992 ರಲ್ಲಿ ಕಾರ್ಲ್ಸ್ ಬರ್ಗ್ ರೊಡನೆ ಸಹಿ ಹಾಕಿದ ಕರಾರೇ ಇಂಗ್ಲಿಷ್ ಉನ್ನತ ಮಟ್ಟದ ಫುಟ್ ಬಾಲ್ ನಲ್ಲಿ ಅತಿ ದೀರ್ಘವಾದ ಕರಾರಾಗಿತ್ತು.[೪೧]ಕಾರ್ಲ್ಸ್ ಬರ್ಗ್ ನೊಡನೆ ಇದ್ದ ಸಂಬಂಧವು 2010-11ರ ಆದಿಯಲ್ಲಿ ಕೊನೆಗೊಂಡಿತು ಹಾಗೂ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಕ್ಲಬ್ ನ ಪ್ರಾಯೋಜಕರಾದರು.[೪೨]

ಕಾಲಾವಧಿಕಿಟ್ ತಯಾರಕರುಷರ್ಟ್ ಪ್ರಾಯೋಜಕರು
1973–79ಅಂಬ್ರೋಯಾವುದೂ ಇಲ್ಲ
1979–82ಹಿಟಾಚಿ
1982–85ಕ್ರೌನ್ ಪೇಂಟ್ಸ್
1985–88ಅಡೀಡಸ್
1988–92ಕ್ಯಾಂಡಿ
1992–96ಕಾರ್ಲ್ಸ್ ಬರ್ಗ್
1996–2006ರೀಬಾಕ್
2006–2010ಅಡೀಡಸ್
2010–2012ಸ್ಟಾಂಡರ್ಡ್ ಚಾರ್ಟರ್ಡ್
2012–ವಾರಿಯರ್

ಕಿಟ್ ತಯಾರಕರು

  • 1973–1985: ಅಂಬ್ರೋ
  • 1985–1996: ಅಡೀಡಸ್
  • 1996–2006: ರೀಬಕ್
  • 2006–2012: ಅಡೀಡಸ್
  • 2012 ರಿಂದ ಮುಂದಕ್ಕೆ: ವಾರಿಯರ್

ಷರ್ಟ್ ಪ್ರಾಯೋಜಕರು

  • 1892–1979: ಪ್ರಾಯೋಜಕರಿಲ್ಲ
  • 1979–1982: ಹಿಟಾಚಿ
  • 1982–1988: ಕ್ರೌನ್ ಪೇಂಟ್ಸ್
  • 1988–1992: ಕ್ಯಾಂಡಿ
  • 1992–2010: ಕಾರ್ಲ್ಸ್ ಬರ್ಗ್
  • 2010–2014: ಸ್ಟಾಂಡರ್ಡ್ ಚಾರ್ಟರ್ಡ್

ಕ್ರೀಡಾಂಗಣಗಳು

ಸಾಯಂಕಾಲ ಪಂದ್ಯವೊಂದು ನಡೆಯುತ್ತಿರುವಾಗಿನ ಫುಟ್ ಬಾಲ್ ಸ್ಟೇಡಿಯಂ ನ ಪಿಚ್ ಮತ್ತು ಎರಡು ಸ್ಟ್ಯಾಂಡ್ ಗಳ ನೋಟ.

ಆನ್ ಫೀಲ್ಡ್ ಅನ್ನು 1884 ರಲ್ಲಿ ಸ್ಟಾನ್ಲೀ ಪಾರ್ಕ್ ಗೆ ಸೇರಿದಂತಿದ್ದ ಜಮೀನಿನಲ್ಲಿ ನಿರ್ಮಾಣ ಮಾಡಲಾಯಿತು; ಈ ಮೈದಾನವನ್ನು ಮೊದಲು ಎವರ್ಟನ್ ಬಳಸುತ್ತಿದ್ದರು, ಆದರೆ ಈ ಮೈದಾನದ ಮಾಲಿಕರಾದ ಜಾನ್ ಹೌಲ್ಡಿಂಗ್ ರೊಡನೆ ಬಾಡಿಗೆಯ ಬಗ್ಗೆ ವಿವಾದ ಉಂಟಾದುದರಿಂದ ಎವರ್ಟನ್ ಗೂಡೀಸನ್ ಪಾರ್ಕ್ ಗೆ ಸ್ಥಳಾಂತರಗೊಂಡರು.[೪೩] ಖಾಲಿ ಮೈದಾನವನ್ನು ಹೊಂದಿದ ಹೌಲ್ಡಿಂಗ್ 1892 ರಲ್ಲಿ ಲಿವರ್ ಪೂಲ್ ಅನ್ನು ಸ್ಥಾಪಿಸಿದರು ಹಾಗೂ ಈ ಕ್ಲಬ್ ಅಂದಿನಿಂದ ಇಂದಿನವರೆಗೆ ಈ ಆನ್ ಫೀಲ್ಡ್ ಕ್ರೀಡಾಂಗಣದಲ್ಲೇ ಆಡುತ್ತಿದೆ. ಕ್ರೀಡಾಂಗಣ ನಿರ್ಮಾಣವಾದ ದಿನವೇ ಅಲ್ಲಿ 20,000 ರಿಗೆ ಸಾಕಾಗುವಷ್ಟು ಸ್ಥಳವಿದ್ದರೂ, ಆನ್ ಫೀಲ್ಡ್ ನಲ್ಲಿ ನಡೆದ ಮೊದಲ ಲಿವರ್ ಪೂಲ್ ಪಂದ್ಯವನ್ನು ವೀಕ್ಷಿಸಿದ ಪ್ರೇಕ್ಷಕೆ ಸಂಖ್ಯೆ ಕೇವಲ 100.[೪೪]

1906 ರಲ್ಲಿ ಕ್ರೀಡಾಂಗಣದ ಒಂದು ಮೂಲೆಗಿದ್ದ ದಡವೇರಿಸಲ್ಪಟ್ಟ ಸ್ಟ್ಯಾಂಡ್ ಅನ್ನು ಔಪಚಾರಿಕವಾಗಿ ಸ್ಪಿಯಾನ್ ಕಾಪ್ ಎಂದು ಮರುನಾಮಕರಣ ಮಾಡಲಾಯಿತು; ಇದಕ್ಕೆ ಇದೇ ಹೆಸರಿನ ನ್ಯಾಟಲ್ ನಲ್ಲಿರುವ ಬೆಟ್ಟವೊಂದು ಪ್ರೇರಕವಾಗಿದೆ.[೪೫] ಆ ಬೆಟ್ಟದಲ್ಲಿ ಸ್ಪಿಯಾನ್ ಕಾಪ್ ಯುದ್ಧ ವು ಎರಡನೆಯ ಬೊಯರ್ ಯುದ್ಧದ ಒಂದು ಅಂಗವಾಗಿದ್ದು, ಈ ಯುದ್ಧದಲ್ಲಿ 300ಕ್ಕೂ ಲಂಕಾಷೈರ್ ರೆಜಿಮೆಂಟ್ ನ ಯೋಧರು ಹತರಾದರು, ಅವರಲ್ಲಿ ಹಲವಾರು ಯೋಧರು ಲಿವರ್ ಪೂಲ್ ನವರಾಗಿದ್ದರು.[೪೬] ಈ ಕ್ರೀಡಾಂಗಣದಲ್ಲಿ ಗರಿಷ್ಠ28,000 ಪ್ರೇಕ್ಷಕರು ಸೇರಬಹುದುಹಾಗೂ ಇದು ಜಗತ್ತಿನ ಏಕ ಹಂತದ ಬೃಹತ್ ಕ್ರೀಡಾಂಗಣದಲ್ಲಿ ಒಂದಾಗಿದೆ. ಇಂಗ್ಲೆಂಡ್ ನಲ್ಲಿ ಸ್ಪಿಯಾನ್ ಕಾಪ್ ಹೆಸರಿನಲ್ಲಿ ಸ್ಟ್ಯಾಂಡ್ ಗಳನ್ನು ಹೊಂದಿರುವ ಹಲವಾರು ಕ್ರೀಡಾಂಗಣಗಳಿದ್ದವು, ಆದರೆ ಆನ್ ಫೀಲ್ಡ್ ನದು ಆಗಿನ ಕಾಲದಲ್ಲಿ ದೇಶದ ಅತಿ ದೊಡ್ಡ ಕಾಪ್ ಆಗಿದ್ದಿತು; ಕೆಲವು ಕ್ರೀಡಾಂಗಣಗಳಲ್ಲಿ ಹಿಡಿಸುವ ಇಡೀ ಬೆಂಬಲಿಗರ ಸಂಖ್ಯೆಯನ್ನು ಇಲ್ಲಿನ ಒಂದು ಕಾಪ್ ಹಿಡಿಯುತ್ತಿತ್ತು[೪೬]

ಮುಖ್ಯ ಸ್ಟ್ಯಾಂಡ್ ನಿಂದ ಕಾಣಬರುವ ಕಾಪ್ ನ ದೃಶ್ಯ.

ಆನ್ ಫೀಲ್ಡ್ ತನ್ನ ಉತ್ತುಂಗದಲ್ಲಿ 60,000 ಬೆಂಬಲಿಗರಿಗೆ ಸಾಕಾಗುವಷ್ಟು ದೊಡ್ಡದಾಗಿದ್ದಿತು ಹಾಗೂ 11990 ರ ದಶಕದಲ್ಲಿ 55,000 ಜನರಿಗೆ ಸ್ಥಳ ನೀಡುವಷ್ಟು ಸಮರ್ಥವಾಗಿತ್ತು. ಟೈಲರ್ ವರದಿ ಹಾಗೂ ಪ್ರೀಮಿಯರ್ ಲೀಗ್ ನ ಕಟ್ಟಳೆಗಳಿಗೆ ಅನುಗುಣವಾಗಿ ಲಿವರ್ ಪೂಲ್ ಆನ್ ಫೀಲ್ಡ್ ಅನ್ನು ಸರ್ವಾಸೀನ ಕ್ರೀಡಾಂಗಣವಾಗಿ 1993-94ರಲ್ಲಿ ಬದಲಾಯಿಸಬೇಕಾಯಿತು; ತನ್ಮೂಲಕ ಅದರ ಜನಗ್ರಹಣ ಸಾಮರ್ಥ್ಯವು 53,394ಕ್ಕೆ ತಗ್ಗಿತು.[೧]ಟೈಲರ್ ವರದಿಯಲ್ಲಿನ ಉಲ್ಲೇಖಗಳು ಕೆಮ್ಲಿನ್ ರೋಡ್ ಸ್ಟ್ಯಾಂಡ್ ನ ಮರು ಅಭಿವೃದ್ಧಿಗೆ ಕಾರಣವಾದವು. ಆ ಸ್ಟ್ಯಾಂಡ್ ಅನ್ನು 1992 ರಲ್ಲಿ ಮರುನಿರ್ಮಾಣ ಮಾಡಲಾಯಿತು; ಕಾಕತಾಳೀಯವಾಗಿ ಅದು ಕ್ಲಬ್ ನ ಶತಮಾನದ ವರ್ಷದಲ್ಲಿ ಕಟ್ಟಲ್ಪಟ್ಟಿದುದರಿಂದ ಅದಕ್ಕೆ ಸೆಂಟಿನರಿ ಸ್ಟ್ಯಾಂಡ್ ಎಂಬ ಹೆಸರು ನೀಡಲಾಯಿತು. , . 1998 ರಲ್ಲಿ ಆನ್ ಫೀಲ್ಡ್ ರೋಡ್ ಕಡೆಗೆ ಮತ್ತೊಂದು ಅಂತಸ್ತನ್ನು ಸೇರಿಸಲಾಯಿತು, ಇದರಿಂದ ಕ್ರೀಡಾಂಗಣದ ಸಾಮರ್ಥ್ಯವು ಹೆಚ್ಚಾಯಿತು, ಆದರೆ ಉದ್ಘಾಟನೆಯ ಕಾಲದಲ್ಲೇ ಆ ಸ್ಟ್ಯಾಂಡ್ ನಲ್ಲಿ ಕೆಲವು ದೋಷಗಳು ಕಾಣಿಸಿಕೊಂಡವು. 1999–2000 ಋತವಿನ ಪ್ರಾರಂಭದಲ್ಲಿ ನೂತನ ಮಹಡಿಯು ಅದುರುತ್ತಿದೆ ಎಂದು ವರದಿಗಳು ಬಂದ ನಂತರ ಹೆಚ್ಚುವರಿ ಕಂಬಗಳು ಮತ್ತು ತೊಲೆಗಳನ್ನು ಆಸರೆಯಾಗಿ ನೀಡಿ ಕಟ್ಟಡವನ್ನು ಮತ್ತಷ್ಟು ದೃಢಪಡಿಸಲಾಯಿತು.[೪೭]

ಆನ್ ಫೀಲ್ಡ್ ನ ವಿಸ್ತರಣೆಗೆ ಇರುವ ನಿರ್ಬಂಧಗಳನ್ನು ಗಮನದಲ್ಲಿರಿಸಿಕೊಂಡು ಲಿವರ್ ಪೂಲ್ ಸ್ಟಾನ್ಲೀ ಪಾರ್ಕ್ ನಲ್ಲಿ ಒಂದು ಹೊಸ ಕ್ರೀಡಾಂಗಣವನ್ನು ನಿರ್ಮಿಸಿ ಅಲ್ಲಿಗೆ ವರ್ಗಗೊಳ್ಳುವ ಯೋಜನೆಯನ್ನು ಮೇ 2002 ರಲ್ಲಿ ಘೋಷಿಸಿತು.[೪೮] ಜುಲೈ 2004 ರಲ್ಲಿ ಯೋಜನೆಯ ನಕ್ಷೆಗೆ ಪರವಾನಗಿ ದೊರಕಿತು,[೪೯] ಮತ್ತು ಸೆಪ್ಟೆಂಬರ್ 2006 ರಲ್ಲಿ ಲಿವರ್ ಪೂಲ್ ನಗರ ಕೌನ್ಸಿಲ್ ಲಿವರ್ ಪೂಲ್ ಗೆ 999 ವರ್ಷಗಳ ಕಾಲ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಭೋಗ್ಯವಾಗಿ ನೀಡಲು ನೀಡಲು ಒಪ್ಪಿಕೊಂಡಿತು.[೫೦] ಫೆಬ್ರವರಿ 2007 ರಲ್ಲಿ ಕ್ಲಬ್ ಅನ್ನು ಜಾರ್ಜ್ ಜಿಲೆಟ್ ಮತ್ತು ಟಾಮ್ ಹಿಕ್ಸ್ ತೆಗೆದುಕೊಂಡ ನಂತರ ಯೋಜಿತ ಕ್ರೀಡಾಂಗಣವನ್ನು ಮರುವಿನ್ಯಾಸಗೊಳಿಸಲಾಯಿತು. ನವೆಂಬರ್ 2007 ರಲ್ಲಿ ನೂತನ ವಿನ್ಯಾಸವನ್ನು ಕೌನ್ಸಿಲ್ ಅಂಗೀಕರಿಸಿತು ಹಾಗೂ ಜೂನ್ 2008 ರಲ್ಲಿ ನಿವೇಶನವನ್ನು ಸಿದ್ಧಗೊಳಿಸುವ ಕಾರ್ಯವು ಪ್ರಾರಂಭವಾಯಿತು; HKS, Inc. ಎಂಬ ಸಂಸ್ಥೆಗೆ ಈ ಕ್ರೀಡಾಂಗಣ ನಿರ್ಮಾಣದ ಗುತ್ತಿಗೆಯನ್ನು ನೀಡಲಾಯಿತು.[೫೧] ಮೇ 2008 ರಲ್ಲಿ, ಆ ಅಭಿವೃದ್ಧಿಗೆ (ನಿರ್ಮಾಣಕ್ಕೆ) ಬೇಕಾದ £300 ಮಿಲಿಯನ್ ಅನ್ನು ಹೊಂದಿಸುವುದು ಜೆಲ್ಲೆಟ್ ಮತ್ತು ಹಿಕ್ಸ್ ಗರಿಗೆ ಕಷ್ಟಕರವಾದುದರಿಂದ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಯಿತು.[೫೨]

15 ಅಕ್ಟೋಬರ್ 2010 ರಂದು ಈ ಕ್ಲಬ್ ಅನ್ನು ಕೊಂಡ ಬ್ಯೂ ಇಂಗ್ಲೆಂಡ್ ಸ್ಪೋರ್ಟ್ಸ್ ವೆಂಚರ್ಸ್ ಹೊಸ ಕ್ರೀಡಾಂಗಣವನ್ನು ನಿರ್ಮಿಸವು ಬದಲು ಆನ್ ಫೀಲ್ಡ್ ಅನ್ನೇ ತೀವ್ರತರವಾಗಿ ಬದಲಾಯಿಸಿ ಸಾಮರ್ಥ್ಯ ಹೆಚ್ಚಿಸುವುದರ ಸಾಧ್ಯತೆಗಳ ಬಗ್ಗೆ ಆಲೋಚಿಸುತ್ತಿದೆ.[ಸೂಕ್ತ ಉಲ್ಲೇಖನ ಬೇಕು]

ಬೆಂಬಲಿಗರು

ಕಾಪ್ ಸ್ಟ್ಯಾಂಡ್ ನಲ್ಲಿರುವ "ಕಾಪೈಟ್ಸ್"

2009–10 ರ ಋತುವಿನಲ್ಲಿ ಲಿವರ್ ಪೂಲ್ ಇಂಗ್ಲಿಷ್ ಕ್ಲಬ್ ಕಂಡ ನಾಲ್ಕನೆಯ ಗರಿಷ್ಠ ಸರಾಸರಿ ಲೀಗ್ ಹಾಜರಾತಿಯನ್ನು ಹೊಂದಿತ್ತು: 44,392, ಪ್ರೇಕ್ಷಕರ ಹಾಜರಾತಿಯು ಲಭ್ಯ ಆಸನಗಳ 94.4 ಪ್ರತಿಶತವಾಗಿತ್ತು.[೫೩] ಲಿವರ್ ಪೂಲ್ ಅಭಿಮಾನಿಗಳು ತಮ್ಮನ್ನು ತಾವೇ "ಕಾಪೈಟ್ಸ್" ಎಂದು ಕರೆದುಕೊಳ್ಳುತ್ತಾರೆ; ಇದು ಆನ್ ಫೀಲ್ಡ್ ನ ಕಾಪ್ ನಲ್ಲಿ ಅಂದು ನಿಲ್ಲುತ್ತಿದ್ದ, ಹಾಗೂ ಇಂದು ಕುಳಿತುಕೊಳ್ಳುವ ಅಭಿಮಾನಿಗಳನ್ನು ಸೂಚಿಸುವ ಹೆಸರಾಗಿದೆ.[೫೪] 2008 ರಲ್ಲಿ ಭಿಮಾನಿಗಳ ತಂಡವೊಂದು ತಮ್ಮದೇ ಆದ ಎ.ಎಫ್.ಸಿ. ಲಿವರ್ ಪೂಲ್ ಎಂಬ ಭಿನ್ನ ಕ್ಲಬ್ ಒಂದನ್ನು ರಚಿಸಲು ನಿರ್ಧರಿಸಿದರು; ಪ್ರೀಮಿಯರ್ ಲೀಗ್ ಫುಟ್ ಬಾಲ್ ಅನ್ನು ನೋಡಲಾಗದ ರೀತಿಯಲ್ಲಿ ದರ ಹೆಚ್ಚಿಸುವುದರ ಮೂಲಕ ಹೊರಗಿಡಲ್ಪಟ್ಟ ಅಭಿಮಾನಿಗಳಿಗೆ ಪಂದ್ಯ-ಹಾಜರಿಯ ಅನುಭವವನ್ನು ನೀಡಲು ಈ ಕ್ಲಬ್ ಅನ್ನು ಸ್ಥಾಪಿಸಿದರು.[೫೫]

"ಯೂ ವಿಲ್ ನೆವರ್ ವಾಕ್ ಅಲೋನ್" ಮೂಲತಃ ರಾಡ್ಜರ್ಸ್ ಎಂಡ್ ಹ್ಯಾಮರ್ಸ್ಟೀನ್ ರ ಗೀತೆ ಕೆರೌಸಲ್ ದಾಗಿದ್ದು, ನಂತರ ಲಿವರ್ ಪೂಲ್ ನ ಸಂಗೀತಗಾರರಾದ ಗೆರಿ&ದ ಪೇಸ್ ಮೇಕರ್ಸ್ ಧ್ವನಿಮುದ್ರಣ ಮಾಡಿದರು; ಈ ಗೀತೆಯು ಲಿವರ್ ಪೂಲ್ ನ ಕ್ಲಬ್-ಗೀತೆಯಾಯಿತು ಹಾಗೂ 1960 ರ ದಶಕದಿಂದಲೂ ಆನ್ ಫೀಲ್ಡ್ ನ ಪ್ರೇಕ್ಷಕವರ್ಗವು ಈ ಹಾಡನ್ನು ಹಾಡುತ್ತಿದೆ. ಆ ಗೀತೆಯು ಕ್ರಮೇಣ ಜಗತ್ತಿನ ಇತರ ಕ್ಲಬ್ ಗಳ ಅಭಿಮಾನಿಗಳ ಪೈಕಿಯೂ ಜನಪ್ರಿಯವಾಗಿದೆ.[೫೬] ಈ ಹಾಡಿನ ಶೀರ್ಷಿಕೆಯು ಶ್ಯಾಂಕಿ ಗೇಟ್ಸ್ ನ ಮೇಲ್ಬಾಗದಲ್ಲಿ ಬರೆಯಲಾಗಿದೆ ಹಾಗೂ ಇದನ್ನು ಆಗಸ್ಟ್ 2, 1982 ರಂದು ಲಿವರ್ ಪೂಲ್ ನ ಮಾಜಿ ಮ್ಯಾನೇಜರ್ ಬಿಲ್ ಶ್ಯಾಂಕಿಯ ಸ್ಮರಣೆಯ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು. ಶ್ಯಾಂಕಿ ಗೇಟ್ಸ್ ನ "ಯೂ ವಿಲ್ ನೆವರ್ ವಾಕ್ ಅಲೋನ್" ಭಾಗವನ್ನು ಕ್ಲಬ್ ನ ಲಾಂಛನದ ಮೇಲೂ ಚಿತ್ರಿಸಲಾಗಿದೆ.

The Shankly Gates erected in honour of former manager Bill Shankly.

ಲಿವರ್ ಪೂಲ್ ನ ಅಭಿಮಾನಿಗಳು ಎರಡು ದುರಂತಗಳಲ್ಲಿ ಭಾಗಿಯಾಗಿದ್ದಾರೆ. ಮೊದಲನೆಯ, 1985 ರ ಹೇಯ್ಸೆಲ್ ಸ್ಟೇಡಿಯಂ ದುರಂತದಲ್ಲಿ 39 ಜುವೆಂಟಸ್ ಅಭಿಮಾನಿಗಳು ಹತರಾದರು. ಲಿವರ್ ಪೂಲ್ ನ ಅಭಿಮಾನಿಗಳು ಅವರತ್ತ ರಭಸದಿಂದ ನುಗ್ಗಿದುದರಿಂದ ಅವರು ಮೂಲೆಗೆ ಹುದುಗಿಕೊಂಡಂತಾಯಿತು; ಹೀಗೆ ಮೂಲೆಗೆ ಒತ್ತರಿಸಲ್ಪಟ್ಟ ಅಭಿಮಾನಿಗಳ ಸಂಖ್ಯೆ ಅಪಾರವಾಗಿದ್ದುದರಿಂದ ಒತ್ತಡ ತಡೆಯಲಾರದೆ ಗೋಡೆ ಕುಸಿಯಿತು. UEFA ಈ ದುರಂತಕ್ಕೆ ಲಿವರ್ ಪೂಲ್ ನ ಅಭಿಮಾನಿಗಳೇ ಕಾರಣ ಎಂದು ಎಲ್ಲಾ ತಪ್ಪನ್ನು ಅವರ ಮೇಲೆಯೇ ಹೊರಿಸಿತು,[೫೭] ಹಾಗೂ ಇಂಗ್ಲಿಷ್ ಕ್ಲಬ್ ಗಳು ಯೂರೋಪಿಯನ್ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಐದು ವರ್ಷಗಳ ಕಾಲ ನಿಷೇಧಿಸಿತು.[note ೧][೫೮] 27 ಅಭಿಮಾನಿಗಳನ್ನು ಹಲ್ಲೆಯ ಗುಮಾನಿಯ ಮೇಲೆ ಬಂಧಿಸಲಾಯಿತು ಹಾಗೂ ಅವರನ್ನು ಬೆಲ್ಜಿಯಂನಲ್ಲಿ ಮೊಕದ್ದಮೆ ಎದುರಿಸಲು 1987 ರಲ್ಲಿ ದೇಶದಿಂದ ಹೊರಕ್ಕೆ ಬಂಧಿಸಿ ಕರೆದೊಯ್ಯಲಾಯಿತು.[೫೯] ೧೯೮೯ರಲ್ಲಿ, ಬೆಲ್ಜಿಯಂ ನಲ್ಲಿ ನಡೆದ 5 ತಿಂಗಳ ವಿಚಾರಣೆಯ ನಂತರ, 14 ಲಿವರ್ ಪೂಲ್ ಅಭಿಮಾನಿಗಳಿಗೆ ಅನೈಚ್ಛಿಕ ಹಲ್ಲೆ ಮಾಡಿದ ಅಪರಾಧಕ್ಕೆ ಮೂರು ವರ್ಷಗಳ ಸಜಾ ವಿದಿಸಲಾಯಿತು;[೬೦] ನಂತರ ಸಜಾದ ಅರ್ಧ ಅವಧಿಯನ್ನು ಮನ್ನಾ ಮಾಡಲಾಯಿತು.[೬೧]

1989 ರ ಏಪ್ರಿಲ್ 15 ರಂದು ಷೆಫೀಲ್ಡ್ ನ ಹಿಲ್ಸ್ ಬರೋ ಸ್ಟೇಡಿಯಂ ನಲ್ಲಿ ಲಿವರ್ ಪೂಲ್ ಮತ್ತು ನಾಟಿಂಗ್ ಹ್ಯಾಮ್ ಫಾರೆಸ್ಟ್ ತಂಡಗಳ ನಡುವೆ ನಡೆದ ಎಫ್.ಎ. ಕಪ್ ಸೆಮಿಫೈನಲ್ ನಲ್ಲಿ ಎರಡನೆಯ ದುರಂತವು ಸಂಭವಿಸಿತು. 96 ಲಿವರ್ ಪೂಲ್ ಅಭಿಮಾನಿಗಳು ಲೆಪ್ಪಿಂಗ್ಸ್ ಲೇನ್ ತುದಿಯಲ್ಲಿ ಉಂಟಾದ ಅತೀವ ಜನಸಂದಣಿಯ ಫಲವಾಗಿ ಸಾವನ್ನಪ್ಪಿದರು, ಇದನ್ನು ಹಿಲ್ಸ್ ಬರೋ ದುರಂತ ಎಂದೇ ಕರೆಯಲಾಯಿತು.. ದ ಸನ್ ಪತ್ರಿಕೆಯು ದ ಟ್ರೂಥ್ ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ಲೇಖನದಲ್ಲಿ ಲಿವರ್ ಪೂಲ್ ಅಭಿಮಾನಿಗಳು ಸತ್ತವರನ್ನು ದೋಚಿದ್ದರು ಮತ್ತು ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು ಹಾಗೂ ಪೊಲೀಸರ ಮೇಲೆ ಆಕ್ರಮಣ ಮಾಡಿದ್ದರು ಎಂದು ಘೋಷಿಸಿತು.[೬೨]ನಂತರದ ತನಿಖೆಗಳು ಇವೆಲ್ಲಾ ನಿರಾಧಾರವಾದ ಹೇಳಿಕೆಗಳೆಂಬುದನ್ನು ಸಾಬೀತುಗೊಳಿಸಿದವು ಹಾಗೂ ಲಿವರ್ ಪೂಲ್ ನಗರದಲ್ಲಿ ಮತ್ತು ಅದೇ ನಗರದಲ್ಲಿ ವಾಸಿಸುತ್ತಿದ್ದ ಕ್ಲಬ್ ನ ಅಭಿಮಾನಿಗಳ ಮನೆಗಳಲ್ಲಿ ಆ ಪತ್ರಿಕೆಯ ಮೇಲೆ ನಿಷೇಧ ಜಾರಿಯಾಯಿತು; ಆ ಘಟನೆಯಾದ 20 ವರ್ಷಗಳ ನಂತರವೂ ಲಿವರ್ ಪೂಲ್ ಅಭಿಮಾನಿಗಳು ದ ಸನ್ ಪತ್ರಿಕೆಯನ್ನು ಕೊಳ್ಳಲು ನಿರಾಕರಿಸುತ್ತಾರೆ.[೬೩] ಈ ದುರಂತದ ಪರಿಣಾಮವಾಗಿ ಹಲವಾರು ಸಂಘ ಸಂಸ್ಥೆಗಳು ಹುಟ್ಟಿಕೊಂಡವು; ಅದರಲ್ಲಿ ಒಂದಾದ ಹಿಲ್ಸ್ ಬರೋ ಜಸ್ಟಿಸ್ ಕ್ಯಾಂಪೇಯ್ನ್ ಮೃತರ ಕುಟುಂಬಗಳು, ದುರಂತದಲ್ಲಿ ಉಳಿದುಕೊಂಡವರು, ಹಾಗೂ ಬೆಂಬಲಿಗರಿಗೆ ನ್ಯಾಯ ಒದಗಿಸಲು ತನ್ನ ಸಹಾಯವನ್ನು ನೀಡಿತು.[೬೪]

ಪೈಪೋಟಿಗಳು

ಆನ್ ಫೀಲ್ಡ್ ನಲ್ಲಿ 2006 ರಲ್ಲಿ ಮೆರ್ಸೇಸೈಡ್ ಡರ್ಬಿ

ಲಿವರ್ ಪೂಲ್ ನ ದೀರ್ಘಕಾಲದಿಂದಲೂ ಸ್ಥಾಪಿತವಾದ ಪೈಪೋಟಿಯು ತನ್ನೋರಿಗೆಯದೇ ಆದ ಮೆರ್ಸೇಸೈಡ್ ತಂಡವಾದ ಎವರ್ಟನ್ ನೊಡನೆ ಇರುವಂತಹುದಾಗಿದೆ; ಈ ತಂಡದ ವಿರುದ್ದ ಲಿವರ್ ಪೂಲ್ ಮೆರ್ಸೇಸೈಡ್ ಡರ್ಬಿ ಸ್ಪರ್ಧೆಯಲ್ಲಿ ಭಾಗವಹಿಸುತ್ತದೆ. ಈ ಪೈಪೋಟಿಯು ಲಿವರ್ ಪೂಲ್ ನ ಸ್ಥಾಪನೆಯಿಂದಲೂ, ಎವರ್ಟನ್ ಅಧಿಕಾರಿಗಳೊಡನೆ ನಡೆದ ವಿವಾದದಿಂದಲೂ, ನಂತರ ಆನ್ ಫೀಲ್ಡ್ ನ ಮಾಲಿಕರೊಡನೆ ನಡೆದ ವಿವಾದದಿಂದಲೂ ಜನ್ಮ ತಾಳಿದುದಾಗಿದೆ. ಧಾರ್ಮಿಕ ವಿಧಿಗಳ ವಿಭಿನ್ನತೆಯೇ ಈ ವಿಧವಾಗಿ ಭಿನ್ನವಾಗುವುದಕ್ಕೆ ಕಾರಣ ಎಂದು ಹೇಳವರಾದರೂ, ಎರಡೂ ತಂಡಗಳ ಮೂಲ ಧರ್ಮ ಮೆಥಾಡಿಸ್ಟ್ ಮೂಲದ್ದೇ ಆಗಿದ್ದು, ಅದು ಕ್ಯಾಥೊಲಿಕ್-ಪ್ರೊಟೆಸ್ಟೆಂಟ್ ಬೇರೆಯಾಗುವಂತಹ ಚಿಂತನೆಯನ್ನು ಅಲ್ಲಗಳೆಯುತ್ತದೆ.[೬೫] ಸಾಮಾನ್ಯವಾಗಿ ಮೆರ್ಸೇಸೈಡ್ ಡರ್ಬಿ ಎಂದರೆ ಕ್ರೀಡಾಂಗಣ ಕಿಕ್ಕಿರಿದಿರುತ್ತದೆ. ಅಭಿಮಾನಿಗಳ ತಾರತಮ್ಯವಿಲ್ಲದೆ ನಡೆಯುವ ಕಲವೇ ಸ್ಥಳೀಯ ಡರ್ಬಿಗಳಲ್ಲಿ ಒಂದಾದ ಇದನ್ನು "ಫ್ರೆಂಡ್ಲಿ ಡರ್ಬಿ" ಎಂದು ಕರೆಯಲಾಗುತ್ತದೆ..[೬೬] 1980 ರ ದಶಕದ ಮಧ್ಯಭಾಗದಿಂದಲೂ ಪೈಪೋಟಿಯು ಕ್ರೀಂಡಾಂಗಣದ ಹೊರಗೂ, ಒಳಗೂ ತೀವ್ರಗೊಂಡಿದೆ ಮತ್ತು 1992 ರಲ್ಲಿ ಪ್ರೀಮಿಯರ್ ಲೀಗ್ ಆರಂಭವಾದಂದಿನಿಂದ ಮೆರ್ಸೇಸೈಡ್ ಡರ್ಬಿಯಲ್ಲಿ ಬೇರಾವುದೇ ಪ್ರೀಮಿಯರ್ ಲೀಗ್ ಡರ್ಬಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಟಗಾರರನ್ನು ಹೊರಕ್ಕೆ ಅಟ್ಟಲಾಗಿದೆಯಾದ್ದರಿಂದ ಇದನ್ನು "ಪ್ರೀಮಿಯರ್ ಲೀಗ್ ನ ಅತ್ಯಂತ ಅಶಿಸ್ತಿನ ಹಾಗೂ ಸ್ಫೋಟಕವಾದ ಪಂದ್ಯ" ಎಂದು ಕರೆಯಲಾಗುತ್ತದೆ.[೬೭][೬೮]

ಲಿವರ್ ಪೂಲ್ ಮ್ಯಾಚೆಸ್ಟರ್ ಯುನೈಟೆಡ್ ಜೊತೆಯೂ ಪೈಪೋಟಿಯನ್ನು ಹೊಂದಿದೆ. ಹಲವಾರು ಲಿವರ್ ಪೂಲ್ ಅಭಿಮಾನಿಗಳ ಪ್ರಕಾರ ಈ ಪೈಪೋಟಿಯು ಅದೇ ನಗರದಲ್ಲಿರುವ ಎವರ್ಟನ್ ನೊಡನೆ ಹೊಂದಿರುವ ಪೈಪೋಟಿಗಿಂತಲೂ ತೀವ್ರವಾದುದಾಗಿದೆ. ಹಲವಾರು ಯುನೈಟೆಡ್ ಅಭಿಮಾನಿಗಳೂ ಸಹ ಇದೇ ಅಭಿಪ್ರಾಯ ಹೊಂದಿದ್ದು, ಲಿವರ್ ಪೂಲ್ ನೊಡನೆ ಅದು ಹೊಂದಿರುವ ಪೈಪೋಟಿಯು ಯುನೈಟೆಡ್ ಇರುವ ನಗರದಲ್ಲೇ ಇರುವ ಮ್ಯಾಂಚೆಸ್ಟರ್ ಸಿಟಿಯೊಡನೆ ಹೊಂದಿರುವ ಪೈಪೋಟಿಗಿಂತಲೂ ತೀವ್ರವಾದುದು ಎನ್ನುತ್ತಾರೆ. ನಗರವು ಕೈಗಾರಿಕೋದ್ಯಮದತ್ತ ಕಾಲಿಟ್ಟ ಕಾಲದಲ್ಲಿದ್ದ ಪೈಪೋಟಿಯೇ ಈ ನಗರಗಳ ನಡುವಣ ಪೈಪೋಟಿಯಾಗಿ ಮುಂದುವರಿದಿದೆ ಎನ್ನಲಾಗುತ್ತದೆ; ಕೈಗಾರಿಕಾ ಬೆಳವಣಿಗೆಯ ಕಾಲದಲ್ಲಿ ನೈಋತ್ಯದ ಪ್ರಭುತ್ವವನ್ನು ಪಡೆಯಲು ಈ ಎರಡೂ ನಗರಗಳಲ್ಲಿ ಪೈಪೋಟಿ ಇದ್ದಿತು - ಲಿವರ್ ಪೂಲ್ ಜಗತ್ತಿನ ಪ್ರಮುಖವಾದ ಬಂದರುಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು, ಮ್ಯಾಂಚೆಸ್ಟರ್ ತನ್ನ ಕೈಗಾರಿಕೋದ್ಯಮಕ್ಕೆ ಹೆಸರುವಾಸಿಯಾಗಿತ್ತು.[೬೯]1960 ರ ದಶಕದ ಪೂರ್ವಭಾಗದಲ್ಲಿ ಈ ನಗರಗಳ ನಡುವಣ ಪೈಪೋಟಿಯ ತೀವ್ರತೆ ಹೆಚ್ಚಿತು. 1968 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಯೂರೋಪಿಯನ್ ಕಪ್ ಗೆದ್ದ ಮೊದಲ ಇಂಗ್ಲಿಷ್ ತಂಡವಾಯಿತು, ಅವರ ಸಾಧನೆಯನ್ನು ಅನತಿ ಕಾಲದಲ್ಲೇ ಲಿವರ್ ಪೂಲ್ ಹತ್ತಿಕ್ಕಿ 1970 ಮತ್ತು 1980 ರ ದಶಕಗಳಲ್ಲಿ ನಾಲ್ಕು ಬಾರಿ ಯೂರೋಪಿಯನ್ ಕಪ್ ಗೆದ್ದಿತು. ನಂತರ 1990 ರ ದಶಕದಲ್ಲಿ ಮ್ಯಾಂಚೆಸ್ಟರ್ ಯನೈಟೆಡ್ ಇಂಗ್ಲಿಷ್ ಫುಟ್ ಬಾಲ್ ನಲ್ಲಿ ಹೆಚ್ಚಿನ ಪ್ರಭುತ್ವ ಸಾಧಿಸಲು ಆರಂಭಿಸಿತು ಹಾಗೂ ಈ ನಗರಗಳ ಮಧ್ಯದ ಪೈಪೋಟಿ ಮತ್ತೂ ತೀವ್ರವಾಯಿತು.[೭೦] ಈ ಪೈಪೋಟಿಯು ಎಷ್ಟು ತೀವ್ರವಾದುದೆಂದರೆ ಈ ಎರಡು ತಂಡಗಳ ನಡುವೆ ಒಂದು ತಂಡದಿಂದ ಇನ್ನೊಂದು ತಂಡಕ್ಕೆ ವರ್ಗವಾದ ಕಡೆಯ ಆಟಗಾರನೆಂದರೆ 1964 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ನಿಂದ ಲಿವರ್ ಪೂಲ್ ಗೆ ವಲಸೆ ಬಂದ ಫಿಲ್ ಚಿಸ್ನಾಲ್. (ನಂತರ ಯಾವುದೆ ಆಟಗಾರ ಪರಸ್ಪರ ವರ್ಗವಾಗಿಲ್ಲ).[೭೧]

ಒಡೆತನ ಮತ್ತು ಹಣಕಾಸು

ಆನ್ ಪೀಲ್ಡ್ ಮಾಲಕರು ಮತ್ತು ಕ್ಲಬ್ ನ ಸ್ಥಾಪಕರು ಆದ ಜಾನ್ ಹೌಲ್ಡಿಂಗ್ ಈ ಕ್ಲಬ್ ನ ಮೊದಲ ಅಧ್ಯಕ್ಷರಾಗಿದ್ದರು. ಕ್ಲಬ್ ಸ್ಥಾಪನೆಯಾದ ಇಸವಿಯಾದ 1892 ರಿಂದ 1904 ರವರೆಗೆ ಅವರೇ ಅಧ್ಯಕ್ಷರಾಗಿದ್ದರು, ನಂತರ ಜಾನ್ ಮೆಕ್ಕೆನ್ನಾ ಅಧ್ಯಕ್ಷರಾಗಲೆಂದು ಅವರು ತಮ್ಮ ಸ್ಥಾನವನ್ನು ತೆರವುಗೊಳಿಸಿದರು.[೭೨] ಮೆಕ್ಕೆನ್ನಾ ನಂತರ ಫುಟ್ ಬಾಲ್ ಲೀಗ್ ಮತ್ತು ಫುಟ್ ನಾಲ್ ಅಸೋಸಿಯೇಷನ್ ಗಳೆರಡರಲ್ಲೂ ಅಧ್ಯಕ್ಷೀಯ ಆಡಳಿತಗಳನ್ನು ನಡೆಸಿದರು.[೭೩] ಜಾನ್ ಸ್ಮಿತ್ ಅಧ್ಯಕ್ಷೀಯ ಸ್ಥಾನವನ್ನು 1073 ರಲ್ಲಿ ಅಲಂಕರಿಸುವವರೆಗೆ ಆ ಸ್ಥಾನವು ಹಲವಾರು ಕೈಗಳು ಬದಲಾದುದನ್ನು ಕಂಡಿತು; ಸ್ಮಿತ್ ರ ತಂದೆ ಈ ಕ್ಲಬ್ ನ ಷೇರು ಹೂಡಿಕೆದಾರರಲ್ಲಿ ಒಬ್ಬರಾಗಿದ್ದರು. ಅವರು ಕ್ಲಬ್ ತನ್ನ ಇತಿಹಾಸದಲ್ಲೇ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅದರ ಮೇಲ್ವಿಚಾರಣೆ ನಡೆಸಿದರು ಹಾಗೂ 1990 ರಲ್ಲಿ ಪೀಠದಿಂದ ಇಳಿದುಬಿಟ್ಟರು.[೭೪]

ಸ್ಮಿತ್ ರಾಜಿನಾಮೆ ಇತ್ತ ನಂತರ ಡೇವಿಡ್ ಮೂರ್ಸ್ ಅಧ್ಯಕ್ಷೀಯ ಪಾತ್ರವನ್ನು ವಹಿಸಿದರು; ಅವರ ಕುಟುಂಬವು ಕ್ಲಬ್ ನ ಮಾಲಿಕತ್ವವನ್ನು 50 ವರ್ಷಗಳಿಗೂ ಹೆಚ್ಚು ಕಾಲ ಹೊಂದಿದ್ದಿತು. ಅವರ ಚಿಕ್ಕಪ್ಪ ಜಾನ್ ಮೂರ್ಸ್ ಸಹ ಕ್ಲಬ್ ನ ಷೇರು ಹೊಂದಿದ್ದವರಾಗಿದ್ದರು ಹಾಗೂ ಎವರ್ಟನ್ ನ ಅಧ್ಯಕ್ಷಪೀಠವನ್ನು 1961 ರಿಂದ 1973 ರವರೆಗೆ ಅಲಂಕರಿಸಿದ್ದರು. ಮೂರ್ಸ್ ಕ್ಲಬ್ ನ 51% ಮಾಲಿಕತ್ವವನ್ನು ಹೊಂದಿದ್ದರುಹಾಗೂ 2004 ರಲ್ಲಿ ಅವರು ಕ್ಲಬ್ ಅನ್ನು ಯಾರಾದರೂ ತೆಗೆದುಕೊಳ್ಳಬೇಕೆನಿಸಿದರೆ ಅದನ್ನು ತಾನು ಸ್ವಾಗತಿಸುವುದಾಗಿ ಹೇಳಿದರು.[೭೫] ಸಹ-ಷೇರುಹೂಡಿಕೆದಾರ ಸ್ಟೀವ್ ಮಾರ್ಗನ್, 5% ಕ್ಲಬ್ ಷೇರುಗಳನ್ನು ಹೊಂದಿದ್ದರು, ಮತ್ತು ಅಂದಿನ ಥೈಲ್ಯಾಂಡ್ ನ ಪ್ರಧಾನಿ ಥಾಕ್ಸಿನ್ ಶಿನವತ್ರ ತಮ್ಮ ಯೋಜಿತ ಖರೀದಿ ದರವನ್ನು ಮಂಡಿಸಿದರಾದರೂ ಇಬ್ಬರೂ ಸೂಚಿಸಿದ ಖರೀದಿ ಮೌಲ್ಯಗಳೂ ಅಂಗೀಕೃತವಾಗಲಿಲ್ಲ.[೭೬]

ಜಿಲೆಟ್ ಮತ್ತು ಹಿಕ್ಸ್ ರಿಗೆ ಮಾರಾಟ

ಮೂರ್ಸ್ ಕಡೆಗೆ ಕ್ಲಬ್ ಅನ್ನು ಅಮೆರಿಕದ ವಾಣಿಜ್ಯೋದ್ಯಮಿಗಳಾದ ಜಾರ್ಜ್ ಜಿಲೆಟ್ ಮತ್ತು ಟಾಮ್ ಹಿಕ್ಸ್ ರಿಗೆ ಮಾರಿದರು; ಅವರು ಫೆಬ್ರವರಿ 6, 2007 ರಂದು ಕ್ಲಬ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ಈ ವ್ಯವಹಾರದ ರೀತ್ಯ ಕ್ಲಬ್ ಮತ್ತು ಅದರ ಸಾಲಗಳ ಒಟ್ಟು ಮೌಲ್ಯ £218.9 ಮಿಲಿಯನ್. ಈರ್ವರೂ ಪ್ರತಿ ಷೇರ್ ಗೆ £5,000, ಅಥವಾ £174.1ಮಿಲಿಯನ್ ಅನ್ನು ಕ್ಲಬ್ ನ ಸಂಪೂರ್ಣ ಷೇರುಹೂಡಿಕೆಗೆ ಹಣ ನೀಡಿದರು, ಮತ್ತು £44.8ಮಿಲಿಯನ್ ಅನ್ನು ಕ್ಲಬ್ ನ ಸಾಲದ ಬಾಬ್ತಿಗಾಗಿ ತೆತ್ತರು.[೭೭] ಜಿಲೆಟ್ ಮತ್ತು ಹಿಕ್ಸ್ ರ ನಡುವ ಭಿನ್ನಾಭಿಪ್ರಾಯಗಳು ಮತ್ತು ಅಭಿಮಾನಿಗಳ ಬೆಂಬಲದ ಕೊರತೆಗಳು ಇವರಿಬ್ಬರೂ ಕ್ಲಬ್ ಅನ್ನು ತೆಗೆದುಕೊಳ್ಳುವ ಮುನ್ನ ಅದನ್ನು ಕೊಳ್ಳಲು ಬಯಸಿದ್ದ ದುಬೈ ಅಂತರರಾಷ್ಟ್ರೀಯ ರಾಜಧಾನಿ (DIC), ಕ್ಲಬ್ ಕೊಳ್ಳು ಮುಂದೆ ಬರುವುದೆಂಬ ವದಂತಿಗಳ ಬೆಂಕಿಗೆ ಗಾಳಿ ಹಾಕಿತು.[೭೮]ಮತ್ತೊಂದು ಗುಂಪು, ಷೇರ್ ಲಿವರ್ ಪೂಲ್ ಎಫ್.ಸಿ. ಸಹ ಈ ಕ್ಲಬ್ ಖರೀದಿದಲು ಆಸಕ್ತಿ ತೋರಿಸಿತು. ಅದು £500 ಮಿಲಿಯನ್ ನೀಡುವುದಾಗಿಯೂ, ಈ ಹಣವನ್ನು 100,000 ಅಭಿಮಾನಿಗಳು ತಲಾ £5,000 ಅನ್ನು ಕ್ಲಬ್ ನ ಷೇರ್ ಆಗಿ ಕೊಳ್ಳುವುದರಿಂದ ಪಡೆದು ಇವರಿಗೆ ನೀಡಲಾಗುವುದೆಂದೂ ಹೇಳಿತು. ಆದರೆ ಈ ಕ್ಲಬ್ ಕೊಳ್ಳಲು ಬೇಕಾದ ಹಣವನ್ನು ಅವರಿಗೆ ಹೊಂದಿಸಲಾಗಲಿಲ್ಲ..[೭೯]

ಏಪ್ರಿಲ್ 2010 ರಲ್ಲಿ ವಾಣಿಜ್ಯ ಪತ್ರಿಕೆಯಾದ ಫೋರ್ಬ್ಸ್ ಲಿವರ್ ಪೂಲ್ ಅನ್ನು ಜಗತ್ತಿನ ಅತ್ಯಂತ ಬೆಲೆಬಾಳುವ ತಂಡಗಳಲ್ಲಿ ಆರನೆಯದೆಂದು ಪಟ್ಟಿ ಮಾಡಿತು. ಮೊದಲ ಐದು ತಂಡಗಳ ಪೈಕಿ ಮೂರು ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಮತ್ತು ಆರ್ಸೆನಲ್; ಫೋರ್ಬ್ಸ್ ಈ ಕ್ಲಬ್ ನ ಬೆಲೆಯನ್ನು, ಸಾಲದ ಬಾಬ್ತಿನ ಹೊರತಾಗಿ, (£532ಮಿಲಿಯನ್) ಎಂದು ನಿಷ್ಕರ್ಷೆ ಮಾಡಿತು.[೮೦]ಲೆಕ್ಕಶೋಧಕರಾದ ಡಿಯೋಲಾಯ್ಟ್ ಲಿವರ್ ಪೂಲ್ ಡಿಯೋಲಾಯ್ಟ್ ಫುಟ್ ಬಾಲ್ ಮನಿ ಲೀಗ್ ನ ಏಳನೆಯ ಸ್ಥಾನದಲ್ಲಿದೆ ಎಂದರು; ಈ ಲೀಗ್ ವಿಶ್ಚದ ಫುಟ್ ಬಾಲ್ ಕ್ಲಬ್ ಗಳನ್ನು ಅವರ ಆರ್ಥಿಕ ಸಾಮರ್ಥ್ಯದ ಆಧಾರದ ಮೇರೆಗೆ ಶ್ರೇಣೀಕರಿಸುತ್ತದೆ.[೮೧] 2008–09 ವರ್ಷದಲ್ಲಿ ಲಿವರ್ ಪೂಲ್ £184.8ಮಿಲಯನ್ ಸಂಪಾದಿಸಿತು .[೮೧]

ನ್ಯೂ ಇಂಗ್ಲೆಂಡ್ ಸ್ಪೋರ್ಟ್ಸ್ ವೆಂಚರ್ಸ್ ಗೆ ಮಾರಾಟ

16 ಏಪ್ರಿಲ್ 2010 ರಂದು ಕ್ಲಬ್ ನ ಮಾಲಿಕರಾದ ಟಾಮ್ ಹಿಕ್ಸ್ ಮತ್ತು ಜಾರ್ಜ್ ಜಿಲೆಟ್ ಕಂಪನಿಯ ಮಾರಾಟದ ವ್ಯವಹಾರವನ್ನು ನೋಡಿಕೊಳ್ಳುವ ಸಲುವಾಗಿ ಮಾರ್ಟಿನ್ ಬ್ರೌಟನ್ ರನ್ನು ಅಧ್ಯಕ್ಷರನ್ನಾಗಿ ನೇಮಿಸಿದರು.[೮೨] ಮೇ ತಿಂಗಳಲ್ಲಿ ಪ್ರಸ್ತುತಪಡಿಸಿದ ವಿತ್ತವರದಿಯ ಪ್ರಕಾರ ಲಿವರ್ ಪೂಲ್ ನ ಸಾಲದ ಮೊತ್ತ £350 ಮಿಲಿಯನ್ ಹಾಗೂ ನಷ್ಟ £55 ಮಿಲಿಯನ್ ಇದ್ದಿತು; ಲೆಕ್ಕಪತ್ರಶೋಧಕರಾದ KPMG ತಮ್ಮ ವಿತ್ತವರದಿಯ ಅಭಿಪ್ರಾಯವನ್ನು ಗುಣಾತ್ಮಕವಾಗಿ ಮಂಡಿಸಬೇಕಾಗಿ ಬಂದಿತು.[೮೩]


ರಾಯಲ್ ಬ್ಯಾಂಕ್ ಆಫ್ ಸ್ಕಾಂಟ್ಲೆಂಡ್ ಸೇರಿದಂತೆ, ಕ್ಲಬ್ ಗೆ ಸಾಲ ನೀಡಿದ್ದವರು ಜಿಲೆಟ್ ಮತ್ತು ಹಿಕ್ಸ್ ಮತ್ತೆ ಕ್ಲಬ್ಬನ್ನು ಮಾರಲು ಅನುಮತಿಸಬೇಕೆಂದು ಕೋರಿ ಕೋರ್ಟಿನಲ್ಲಿ ದಾವೆ ಹೂಡಿದರು. ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಟಿಸ್ ಫ್ಲಾಯ್ಡ್ ಕಡೆಗೆ ಸಾಲಗಾರರ ಪರವಾಗಿಯೇ ತೀರ್ಪು ನೀಡಿದರು ಹಾಗೂ ತನ್ಮೂಲಕ ಕ್ಲಬ್ ಅನ್ನು ನ್ಯೂ ಇಂಗ್ಲೆಂಡ್ ಸ್ಪೋರ್ಟ್ಸ್ ವೆಂಚರ್ಸ್ ಗೆ ಮಾರಲು ಅನುವು ಮಾಡಿಕೊಟ್ಟರು; ಆದಾಗ್ಯೂ ಗಿಲ್ ಮತ್ತು ಹಿಕ್ಸ್ ತೀರ್ಪಿನ ವಿರುದ್ಧವಾಗಿ ಅಪೀಲು ಹಾಕಬಹುದಾಗಿತ್ತು.[೮೪] ಆದರೆ, ಬ್ಯಾಂಕ್ ನೇಮಿಸಿದ್ದ ಹಂಗಾಮಿ ಮಂಡಳಿಯು $477.2 ಮಿಲಿಯನ್ ಬೆಲೆಯ ಮಾರಾಟವನ್ನು ಮುಗಿಸಲು ನಿರ್ಧರಿಸುವುದಕ್ಕೆ ಸ್ವಲ್ಪ ಸಮಯ ಮುಂಚೆ, ಜಿಲೆಟ್ ಮತ್ತು ಹಿಕ್ಸ್ ಗೆ, ಕಡೆಯ ಘಳಿಗೆಯಲ್ಲಿ, ಟೆಕ್ಸಾಸ್ ಜಿಲ್ಲಾ ನ್ಯಾಯಾಲಯದಿಂದ ತಾತ್ಕಾಲಿಕವಾಗಿ ಮಾರಾಟದ ವಿರುದ್ಧ ತಡೆ ದೊರಕಿತು. ಈ ಇಬ್ಬರೂ ಮಾಲಿಕೆರು ಕ್ಲಬ್ ನ ಮಂಡಳಿಯು ಕ್ಲಬ್ ನ ನಿಜ ಬೆಲೆಗಿಂತಲೂ ಬಹಳ ಕಡಿಮೆ ಮೊತ್ತಕ್ಕೆ ಮಾರುವುದರ ಮೂಲಕ "ಬೃಹತ್ ವಂಚನೆ"ಗೆ ಕಾರಣವಾಗಿದೆ ಎಂದು ಹೇಳಿಕೆ ನೀಡಿದುದನ್ನು ಗಮನಕ್ಕೆ ತೆಗೆದುಕೊಂಡ ಟೆಕ್ಸಾಸ್ ನ್ಯಾಯಾಲಯವು ಹಿಂದಿನ ಆದೇಶದ ಮೇಲೆ ತಡೆಯೊಡ್ಡಿತು. ನಂತರ ಕ್ಲಬ್ ಒಂದು ಹೇಳಿಕೆಯನ್ನು ನೀಡುತ್ತಾ "ಸ್ವತಂತ್ರ ನಿರ್ದೇಶಕರು ಈ ತಡೆಯಾಜ್ಞೆಯು ಅನಗತ್ಯವಾದುದೆಂದೂ, ಕ್ಲಬ್ ನ ಘನತೆಗೆ ಕುಂದುಂಟಾಗುವುದೆಂದು ಹಾಗೂ ಆ ತಡೆಯಾಜ್ಞೆಯನ್ನು ನಿಷೇಧಿಸಲು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವುದಾಗಿಯೂ" ತನ್ನ ಉದ್ದೇಶವನ್ನು ಮಂಡಿಸಿತು. ಫಿನಾನ್ಷಿಯಲ್ ಟೈಮ್ಸ್ ಪತ್ರಿಕೆಯು ಟೆಕ್ಸಾಸ್ ನ್ಯಾಯಾಲಯದ ಪರಿಧಿಗೆ ಈ ಕೇಸ್ ಬರುವುದೇ ಎಂದು ಬ್ರಿಟಿಷ್ ನ್ಯಾಯಾಲಯವನ್ನು ಮಂಡಳಿಯು ಕೇಳಬಹುದೆಂದು ಹೇಳಿಕೆ ನೀಡಿತು. ತೀರ್ಪು ಬರುವುದಕ್ಕೆ ಕಾಯುವುದರ ಹೊರತಾಗಿ, ಲಿವರ್ ಪೂಲ್ ಸಾಲ ಕೊಡಬೇಕಾಗಿದ್ದ ಗಡುವು 15 ಅಕ್ಟೋಬರ್ 2010 ಆಗಿದ್ದಿತು; ಅದನ್ನು ತೀರಿಸದಿದ್ದರೆ ಕ್ಲಬ್ ಅನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರು ಮತ್ತು ತತ್ಕಾರಣವಾಗಿ ಲೀಗ್ ಗೆ ಒಂಬತ್ತು ಪಾಯಿಂಟ್ ಗಳ ದಂಡ ತೆರಬೇಕಾಗುತ್ತಿತ್ತು.[೮೫]ಅನತಿ ಕಾಲದಲ್ಲೇ ಉಚ್ಚ ನ್ಯಾಯಾಲಯವು ದಾವೆ-ವಿರೋಧಿ ತಡೆಯಾಜ್ಷೆಯನ್ನು ಟೆಕ್ಸಾಸ್ ನ್ಯಾಯಾಲಯದ ತಡೆಯಾಜ್ಞೆಯ ವಿರುದ್ಧ ನೀಡಿತು; ಹೀಗಾಗಿ ಜಿಲೆಟ್ ಮತ್ತು ಹಿಕ್ಸ್ ರಿಗೆ ತಡೆಯಾಜ್ಞೆಯನ್ನು ನಿಷೇಧಿಸುವ ಕಾರ್ಯವೆಸಗಲು ಅಥವಾ ಕಂಟೆಂಪ್ಟ್ ಆಫ್ ಕೋರ್ಟ್ ಎದುರಿಸಲು ಅಕ್ಟೋಬರ್ 15 ರ ವರೆಗೆ ಸಮಯ ದೊರೆತಂತಾಯಿತು.[೮೬] ಈ ಜಂಟಿ ಮಾಲಿಕೆ ಕೋರಿಕೆಯನ್ನು ಮನ್ನಿಸಿದ ಟೆಕ್ಸಾಸ್ ನ್ಯಾಯಾಲಯವು ಅಕ್ಟೋಬರ್ ಹದಿನೈದರಂದು ತಡೆಯಾಜ್ಞೆಯನ್ನು ರದ್ದುಗೊಳಿಸಿತು, ಇದರಿಂದ ಕ್ಲಬ್ ನ ಮಾರಾಟದ ಹಾದಿ ಸುಗಮವಾಯಿತು. ಆದರೂ, ಹಿಕ್ಸ್ ನಿರ್ದೇಶಕ ಮಂಡಳಿಯ ವಿರುದ್ಧ $1.6 ಬಿಲಿಯನ್ ಗಳ ನಷ್ಟಪರಿಹಾರ ದಾವೆಯನ್ನು ಮುಂದುವರಿಸುವ ಆಲೋಚನೆ ಹೊಂದಿದ್ದರು.[೮೭]

ಅಕ್ಟೋಬರ್ 15 ರಂದು ಕ್ಲಬ್ ಒಂದು ಹೇಳಿಕೆಯನ್ನು ನೀಡುವುದರ ಮೂಲಕ ನ್ಯೂ ಇಂಗ್ಲೆಂಡ್ ಸ್ಪೋರ್ಟ್ಸ್ ವೆಂಚರ್ಸ್r £300 ಮಿಲಿಯನ್ ಗಳಿಗೆ ಕಂಪನಿಯನ್ನು ತೆಗೆದುಕೊಂಡಿದೆ ಎಂದು ದೃಢಪಡಿಸಿದರು.[೮೮]


ಈ ಕ್ಲಬ್ ಅನ್ನು ಕೊಳ್ಳಲು ಮತ್ತೊಬ್ಬರೂ ಮುಂದೆ ಬಂದಿದ್ದರು; ಸಿಂಗಪುರದ ಪೀಟರ್ ಲಿಮ್, ತಾವು ಮೊದಲು ಮಂಡಿಸಿದ್ದ ಬೆಲೆಯಾದ [clarification needed] ಅನ್ನು $507 ಮಿಲಿಯನ್ ಗೆ ಏರಿಸಿದರು.[೮೯] ಆದರೆ ಲಿಮ್ ಕ್ಲಬ್ ಖರೀದಿಯ ಬಾಬ್ತಿನಿಂದ 14 ಅಕ್ಟೋಬರ್ 2010 ರಂದು ಹಿಂದಕ್ಕೆ ಸರಿದರು.[೯೦]

ಏಪ್ರಿಲ್ 2011 ರಿಂದ ಜಾಗತಿಕ ಮಟ್ಟದಲ್ಲಿ ಫೆನ್ವೇ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ನ ಏಕೈಕ ಮಾರಾಟಗಾರರಾಗುವ ಹಕ್ಕನ್ನು ನೀಡುವಂತಹ ಹಕ್ಕಿಗೆ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದುದರ ಪ್ರತಿಫಲವಾಗಿ ಹಾಗೂ ಅದೇ ಒಪ್ಪಂದದ ಅಂಗವಾಗಿ NBA ತಾರೆ ಲೆಬ್ರಾನ್ ಜೇಮ್ಸ್ ಮತ್ತು ಅವರ ವ್ಯವಸ್ಥಾಪಕರಾದ ಮ್ಯಾವೆರಿಕ್ ಕಾರ್ಟರ್ ಈ ಕ್ಲಬ್ ನ ಅಲ್ಪಪ್ರಮಾಣದ ಪಾಲುದಾರರಾದರು.[೯೧][೯೨]

ಜನಪ್ರಿಯ ಸಂಸ್ಕೃತಿಯಲ್ಲಿ ಲಿವರ್ ಪೂಲ್ ಫುಟ್ ಬಾಲ್

ಇಂಗ್ಲಿಷ್ ಫುಟ್ ಬಾಲ್ ಇತಿಹಾಸದಲ್ಲೇ ಅತಿ ಹೆಚ್ಚು ಲೀಗ್ ಪ್ರಶಸ್ತಿಗಳನ್ನು ಜಂಟಿಯಾಗಿ ಹೊಂದಿರುವ (ಇಷ್ಟೇ ಪ್ರಶಸ್ತಿಗಳನ್ನು ಮತ್ತೊಂದು ತಂಡವೂ ಪಡೆದಿದೆ) ಲಿವರ್ ಪೂಲ್ ಬ್ರಿಟಿಷ್ ಸಂಸ್ಕೃತಿಯಲ್ಲಿ ಫುಟ್ ಬಾಲ್ ನ ಉಲ್ಲೇಖವಾದಾಗಲೆಲ್ಲಾ ಸಾಮಾನ್ಯವಾಗಿ ಉಲ್ಲೇಖಿಸಲಾಗುತ್ತದೆ ಹಾಗೂ ಹಲವಾರು ಮಾಧ್ಯಮದ "ಮೊದಲು" ಗಳಲ್ಲಿ ಲಿವರ್ ಪೂಲ್ ಕಾಣಿಸಿಕೊಂಡಿದೆ. ಈ ಕ್ಲಬ್ ಬಿಬಿಸಿಯ ಮ್ಯಾಚ್ ಆಫ್ ದ ಡೇ ಕಾರ್ಯಕ್ರಮದ ಮೊದಲ ಸಂಚಿಕೆಯಲ್ಲಿ ಕಾಣಿಸಿಕೊಂಡಿತು; ಈ ಸಂದರ್ಭದಲ್ಲಿ ಆರ್ಸೆನಲ್ ವಿರುದ್ಧ ಆನ್ ಫೀಲ್ಡ್ ನಲ್ಲಿ ಆಗಸ್ಟ್ 22 1964 ರಂದು ನಡೆದ ಪಂದ್ಯದ ಪ್ರಮುಖ ಅಂಶಗಳನ್ನು ಬಿತ್ತರಿಸಲಾಯಿತು. ಲಿವರ್ ಪೂಲ್ ಟೆಲಿಚಿಷನ್ ಬಿತ್ತರಿಸಿದ ಮೊದಲ ವರ್ಣಮಯ ಫುಟ್ ಬಾಲ್ ಪ್ರಸಾರದ ವಸ್ತುವೂ ಆಗಿತ್ತು; ಅಂದು ಲಿವರ್ ಪೂಲ್ ಮತ್ತು ವೆಸ್ಟ್ ಹ್ಯಾಂ ಯುನೈಟೆಡ್ ನಡುವಣ ಪಂದ್ಯದ ನೇರಪ್ರಸಾರ ಮಾಡಲಾಯಿತು.[೯೩] ಪಿಂಕ್ ಫ್ಲಾಯ್ಡ್ ನ ಹಾಡು "ಫಿಯರ್ಲೆಸ್" ನಲ್ಲಿ ಲಿವರ್ ಪೂಲ್ ನ ಅಭಿಮಾನಿಗಳು ಕಾಣಿಸಿಕೊಂಡಿದ್ದಾರೆ; ಅದರಲ್ಲಿ ಅವರು "ಯೂ ವಿಲ್ ನೆವರ್ ವಾಕ್ ಅಲೋನ್" ನ ತುಣುಕುಗಳನ್ನು ಹಾಡಿದ್ದಾರೆ.[೯೪]1988 ರ ಎಫ್.ಎ. ಕಪ್ ಫೈನಲ್ ನಲ್ಲಿ ಆಡಿದುದನ್ನು ಹೆಗ್ಗುರುತಾಗಿ ಹೊಂದುವ ಸಲುವಾಗಿ ಲಿವರ್ ಪೂಲ್ ದ "ಆನ್ ಫೀಲ್ಡ್ ರಾಪ್" ಎಂಬ ಹಾಡೊಂದನ್ನು ಬಿಡುಗಡೆ ಮಾಡಿತು; ಈ ಹಾಡಿನಲ್ಲಿ ಜಾನ್ ಬ್ಯಾರ್ನ್ಸ್ ಮತ್ತು ತಂಡದ ಇತರ ಸದಸ್ಯರು ಪಾಲ್ಗೊಂಡಿದ್ದರು.[೯೫]

ಹಿಲ್ಡ್ ಬರೋ ದುರಂತದ ಬಗ್ಗೆ ಜಿಮ್ಮಿ ಮ್ಯಾಕ್ ಗೋವರ್ನ್ ಬರೆದ ಸಾಕ್ಷ್ಯಚಿತ್ರ-ನಾಟಕವೊಂದು 1996 ರಲ್ಲಿ ಪರದೆಯ ಮೇಲೆ ಪ್ರದರ್ಶಿತವಾಯಿತು. ಟ್ರೆವರ್ ಹಿಕ್ಸ್ ಕೇಂದ್ರಬಿಂದುವಾಗಿದ್ದ ಈ ಚಿತ್ರಕಥೆಯಲ್ಲಿ ಆ ಪಾತ್ರದಲ್ಲಿ ಕ್ರಿಸ್ತೋಫರ್ ಎಕ್ಲೆಸ್ಟನ್ ಅಭಿನಯಿಸಿದರು. ಆ ದುರಂತದಲ್ಲಿ ತನ್ನ ಇಬ್ಬರು ಪುತ್ರಿಯರನ್ನು ಕಳೆದುಕೊಂಡ ಹಿಕ್ಸ್ ಸುರಕ್ಷಿತ ಕ್ರೀಡಾಂಗಣಗಳಿಗಾಗಿ ಚಳುವಳಿಯನ್ನೇ ಆರಂಭಿಸಿದರು ಮತ್ತು ಹಿಲ್ಸ್ ಬರೋ ಫ್ಯಾಮಿಲೀಸ್ ಸಪೋರ್ಟ್ ಗ್ರೂಪ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು.[೯೬] ಈ ಸಂಘವು ದ 51st ಸ್ಟೇಟ್ ನಲ್ಲಿ ತೋರಿಸಲ್ಪಟ್ಟಿದೆ(ಆ ಚಿತ್ರವನ್ನು ಫಾರ್ಮಲಾ 51 ಎಂದೂ ಕರೆಯುತ್ತಾರೆ). ಮಾಜಿ ಪೈಲ್ವಾನ್ ಫೆಲಿಕ್ಸ್ ಡಿಸೌಝಾ (ರಾಬರ್ಟ್ ಕಾರ್ಲೈಲ್) ಈ ತಂಡದ ಕಟ್ಟಾ ಅಭಿಮಾನಿಯಾಗಿದ್ದಾರೆ ಹಾಗೂ ಚಿತ್ರದ ಕೊನೆಯ ದೃಶ್ಯವು ಲಿವರ್ ಪೂಲ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ನಡುವಣ ಪಂದ್ಯದಲ್ಲಿ ಚಿತ್ರಿತವಾಗಿದೆ.[೯೭] ಈ ಕ್ಲಬ್ ಅನ್ನು ಮಕ್ಕಳ ಟೆಲಿವಿಷನ್ ಷೋ ಆದ ಸ್ಕಲ್ಲಿ ಯಲ್ಲಿ ತೋರಿಸಲಾಗಿದೆ; ತಲಿವರ್ ಪೂಲ್ ವಿರುದ್ಧ ಒಂದು ಮೊಕದ್ದಮೆಯನ್ನು ಗೆಲ್ಲಲು ಯತ್ನಿಸಿದ ಫ್ರ್ಯಾನ್ಸಿಸ್ ಸ್ಕಲ್ಲಿ ಎಂಬ ಚಿಕ್ಕ ಹುಡುಗನ ಬಗ್ಗೆ ಕಥೆಯು ಕೇಂದ್ರಿತವಾಗಿದೆ. ಈ ಕಾರ್ಯಕ್ರಮದಲ್ಲಿ ಕೆನ್ನಿ ಡಾಲ್ ಗ್ಲಿಷ್ ರಂತಹ ಹಲವಾರು ಪ್ರಮುಖ ಲಿವರ್ ಪೂಲ್ ಆಟಗಾರರು ಕಾಣಿಸಿಕೊಂಡರು.[೯೮]

ಅಂಕಿಅಂಶಗಳು ಮತ್ತು ದಾಖಲೆಗಳು

ಲಿವರ್ ಪೂಲ್ ಲಂಕಾಷೈರ್ ಲೀಗ್ ನಲ್ಲಿ ಹೈಯರ್ ವ್ಯಾಟನ್ ವಿರುದ್ಧ 8-0 ಅಂತರದಿಂದ ತನ್ನ ಚೊಚ್ಚಲ ಸ್ಪರ್ಧಾತ್ಮಕ ಪಂದ್ಯವನ್ನು ಗೆದ್ದುಕೊಂಡಿತು.[೯೯]

ಇಯಾನ್ ಕ್ಯಾಲಗನ್ ಲಿವರ್ ಪೂಲ್ ಅನ್ನು ಅತಿ ಹೆಚ್ಚು ಸಾರಿ ಪ್ರತಿನಿಧಿಸಿರುವ ದಾಖಲೆ ಹೊಂದಿದ್ದಾರೆ— ಅವರು 1958 ರಿಂದ 1978 ರವರೆಗಿನ 19 ಋತುಗಳಲ್ಲಿ 857 ಪಂದ್ಯಗಳನ್ನು ಆಡಿದರು —[೧೦೦] ಹಾಗೂ ಲೀಗ್ ಪಂದ್ಯಗಳಲ್ಲಿನ ಗರಿಷ್ಠವಾದ 640 ಪಂದ್ಯಗಳನ್ನು ಆಡಿದರು.[೧೦೧]ಈಗಿನ ತಂಡದ ಪೈಕಿ, ಜೇಮಿ ಕರಾಘರ್ ಅತಿ ಹೆಚ್ಚು ಪಂದ್ಯಗಳನ್ನಾಡಿದ್ದಾರೆ; 2010 ರ ಆದಿಯಲ್ಲಿ ಅವರು ಈ ಕ್ಲಬ್ ಪರವಾಗಿ 600 ನೆಯ ಪಂದ್ಯವನ್ನು ಆಡಿದರು.[೧೦೨]

ಲಿವರ್ ಪೂಲ್ ನ ಎಲ್ಲಾ ಪಂದ್ಯಾಗಳಿಗಳಲ್ಲಿ ಸರ್ವಕಾಲಿಕವಾಗಿ ಅತಿ ಹೆಚ್ಚು ಸ್ಕೋರ್ ಗಳನ್ನು ಗಳಿಸಿದವರೆಂದರೆ ಇಯಾನ್ ರಷ್; ಅವರು ಕ್ಲಬ್ ಅನ್ನು ಪ್ರತಿನಿಧಿಸಿದ್ದ ಎರಡು ಅವಧಿಗಳಾದ 1980 ರಿಂದ 1987 ಮತ್ತು 1988 ರಿಂದ 1996,[೧೦೩] ರಲ್ಲಿ ಒಟ್ಟು 346 ಗೋಲ್ ಗಳನ್ನು ಹೊಡೆದರುಹಾಗೂ 1983–84ರಲ್ಲಿ 47 ಗೋಲ್ ಗಳನ್ನು ಹೊಡೆಯುವುದರ ಮೂಲಕ ಒಂದು ಋತುವಿನಲ್ಲಿ ಅತಿ ಹೆಚ್ಚು ಗೋಲ್ ಗಳನ್ನು ಹೊಡೆದ ದಾಖಲೆಯನ್ನೂ ಹೊಂದಿದ್ದಾರೆ. . ಆದರೆ ರಷ್ ರೋಜರ್ ಹಂಟ್ ರ 245 ಗೋಲ್ ಗಳ ದಾಖಲೆಯನ್ನು ಮುರಿಯಲಾಗಲಿಲ್ಲ.[೧೦೪]1961–62 ರ ಋತುವಿನಲ್ಲಿ ಹಂಟ್ 41ಗೋಲ್ ಗಳನ್ನು ಹೊಡೆದರು; ಇದು ಒಂದು ಋತುವಿನಲ್ಲಿ ಸ್ಕೋರ್ ಮಾಡಿದ ಅತಿ ಹೆಚ್ಚು ಲೀಗ್ ಗೋಲ್ ಗಳ ಸಂಖ್ಯೆ ಎಂದು ದಾಖಲಾಗಿದೆ.[೧೦೫] ಗೋಲ್ ಬಾರಿಸುವುದರಲ್ಲಿ ಕ್ಲಬ್ ನ ಪಟ್ಟಿಯಲ್ಲಿ ಮೂರನೆಯ ಕ್ರಮಾಂಕದಲ್ಲಿರುವ ಗಾರ್ಡನ್ ಹಾಡ್ಜ್ ಸನ್ 240 ಗೋಲ್ [೧೦೬] ಗಳನ್ನು ಬಾರಿಸಿರುವುದಲ್ಲದೆ ಕ್ಲಬ್ ಮಟ್ಟಕ್ಕೆ ದಾಖಲೆಯಾದ 17 ಹ್ಯಾಟ್ ಟ್ರಿಕ್ ಗಳನ್ನೂ ಪಡೆದಿದ್ದಾರೆ.[೧೦೩]ಒಬ್ಬ ಆಟಗಾರನು ಒಂದು ಪಂದ್ಯದಲ್ಲಿ ಹೊಡೆದಿರುವ ಗೋಲ್ ಗಳ ಗರಿಷ್ಠ ಸಂಖ್ಯೆ 5; ಜಾನ್ ಮಿಲ್ಲರ್, ಆಂಡಿ ಮೆಕ್ ಗಿಗನ್, ಜಾನ್ ಎವಾನ್ಸ್, ಇಯಾನ್ ರಷ್ ಮತ್ತು ರಾಬ್ಬೀ ಫೌಲರ್ ಈ ಸಾಧನೆಯನ್ನು ಗೈದಿದ್ದಾರೆ.[೧೦೭] ಫೌಲರ್ ತಂಡ (ಕ್ಲಬ್) ಮತ್ತು ಪ್ರೀಮಿಯರ್ ಲೀಗ್ ನ ಬಹಳ ಬೇಗ ಹ್ಯಾಟ್ರಿಕ್ ಪಡೆದ ದಾಖಲೆಯನ್ನೂ ಹೊಂದಿದ್ದಾರೆ: 1994-95ರಲ್ಲಿ ಅರ್ಸೆನಲ್ ವಿರುದ್ಧ ಅವರು ಕೇವಲ ನಾಲ್ಕು ನಿಮಿಷ, ಮೂವತ್ತೆರಡು ಸೆಕೆಂಡ್ ಗಳಲ್ಲಿ ಮೂರು ಗೋಲ್ ಗಳನ್ನು ಬಾರಿಸಿದರು.[೧೦೮] ಯೂರೋಪಿನ್ ಪಂದ್ಯಗಳಲ್ಲಿ ಲಿವರ್ ಪೂಲ್ ಪರವಾಗಿ ೩೪ ಗೋಲ್ ಗಳನ್ನು ಬಾರಿಸುವುದರ ಮೂಲಕ ತಂಡದ ಅತಿ ಹೆಚ್ಚು ಗೋಲ್ ಗಳನ್ನು ಹೊಡೆದ ದಾಖಲೆ ಸ್ಟೀವ್ ಜೆರ್ರಾರ್ಡ್ ರ ಹೆಸರಿನಲ್ಲಿದೆ.[೧೦೩]


ಲಿವರ್ ಪೂಲ್ ತನ್ನ ನೆಲದಲ್ಲೇ ಆಕರ್ಷಿಸಿರುವ ಅತಿ ದೊಡ್ಡ ಗುಂಪು 2 ಫೆಬ್ರವರಿ 1952 ರಂದು ವುಲ್ ವ್ಸ್ ವಿರುದ್ಧ ಆಡಿದ ಎಫ್.ಎ. ಕಪ್ ಪಂದ್ಯದಲ್ಲಿ ಸೇರಿದುದಾಗಿತ್ತು; ಆ ಗುಂಪಿನಲ್ಲಿ ದಾಖಲಾರ್ಹವಾದ 61,905 ವೀಕ್ಷಕರಿದ್ದರು. ಆಧುನಿಕ ಕಾಲದಲ್ಲಿ (ಎಲ್ಲರೂ ಆಸನಗಳಲ್ಲಿರುವಂತೆ) ಕಂಡ ಗರಿಷ್ಠ ಹಾಜರಾತಿಯಾದ 44,983 ಟೋಟೆನ್ ಹ್ಯಾಂ ಹಾಟ್ ಸ್ಪರ್ ವಿರುದ್ಧ 14 ಜನವರಿ 2006 ರಂದು ನಡೆದ ಪಂದ್ಯದಲ್ಲಿ ಕಂಡುಬಂದಿತು[೧೦೯]ಈ ಕ್ಲಬ್ ನ ಕನಿಷ್ಠ ವೀಕ್ಷಕ ಹಾಜರಾತಿ 1,000; ಲೌಗ್ ಬರೋ ವಿರುದ್ಧದ 1895–96 ರ ಋತುವಿನ ಪಂದ್ಯದಲ್ಲಿ ಈ ಕನಿಷ್ಠ ಹಾಜರಾರಿ ಕಂಡುಬಂದಿತು.[೧೧೦]

ಲಿವರ್ ಪೂಲ್ ನ ಅತಿ ದೊಡ್ಡ ವಿಜಯವು 1974 ರಲ್ಲಿ ಸಂಭವಿಸಿತು; ಲಿವರ್ ಪೂಲ್ 11–0 ಅಂತರದಿಂದ ಸ್ಟ್ರಾಮ್ಸ್ ಗಾಡ್ಸೆಟ್ IF ಮೇಲೆ ಈ ವಿಕ್ರಮವನ್ನು ಸಾಧಿಸಿತು.[೧೧೧] 1896 ರಲ್ಲಿ ರಾದರ್ಹ್ಯಾಮ್ ಟೌನ್ ಅನ್ನು ೧೦ - ೧ ಅಂತರದಿಂದ ಸೋಲಿಸಿದುದು ಲಿವರ್ ಪೂಲ್ ನ ಅತಿ ದೊಡ್ಡ ಲೀಗ್ ಗೆಲುವಾಗಿದೆ.[೧೦೫]ಈ ವಿಜಯದ ಅಂತರವನ್ನು ಕ್ರಿಸ್ಟಲ್ ಪ್ಯಾಲೇಸ್ ಅನ್ನು 9–0 ಅಂತರದ ಮೂಲಕ ಆನ್ ಫೀಲ್ಡ್ ನಲ್ಲಿ, 1989 ರಲ್ಲಿ, ಸೋಲಿಸುವುದರ ಮೂಲಕ ಸರಿಗಟ್ಟಲಾಯಿತು.[೧೧೨] 1954 ರಲ್ಲಿ ಬರ್ಮಿಂಗ್ ಹ್ಯಾಂ ಸಿಟಿಯ ವಿರುದ್ಧ 1 - 9 ಅಂತರದಿಂದ ಪರಾಭವಗೊಂಡದ್ದೇ ಲಿವರ್ ಪೂಲ್ ಅನುಭವಿಸಿರುವ ಅತಿ ಹೀನಾಯವಾದ ಸೋಲು.[೧೧೧] ಲಿವರ್ ಪೂಲ್ 8–0 ಅಂತರದಿಂದ ಬೆಸಿಕ್ಟಾಸ್ ಜೆಕೆ. ವಿರುದ್ಧ ಚಾಂಪಿಯನ್ಸ್ ಲೀಗ್ ನಲ್ಲಿ ಪಡೆದ ಗೆಲುವು ಆ ಸ್ಪರ್ಧೆಯ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದ ಗೆಲುವೆನಿಸಿದೆ (ನವೆಂಬರ್ 2007).[೧೧೩]

ಪ್ರಸ್ತುತ ತಂಡ

24 ಮಾರ್ಚ್ 2023 ರಂತೆ.[೧೧೪]

ಪ್ರೀಮಿಯರ್ ಲೀಗ್ ತಂಡ

  • 21 ಕ್ಕಿಂತಲೂ ಚಿಕ್ಕ ಹರೆಯದವರ ಹೆಸರನ್ನು ಉಲ್ಲೇಖಿಸುವ ಅಗತ್ಯವಿಲ್ಲ ಹಾಗೂ ಅವರನ್ನು ಬೇಕಿದ್ದಾಗ ಬಳಸಿಕೊಳ್ಳಬಹುದು.

Note: Flags indicate national team as has been defined under FIFA eligibility rules. Players may hold more than one non-FIFA nationality.

No.PositionPlayer
1 GKAlisson Becker
2 DFJoe Gomez
3 MFFabinho
4 DFVirgil van Dijk
5 DFIbrahima Konaté
6 MFThiago Alcântara
7 MFJames Milner (vice-captain)[೧೧೫]
8 MFNaby Keïta
9 FWRoberto Firmino
11 FWMohamed Salah
13 GKAdrián
14 MFJordan Henderson (captain)[೧೧೬]
15 MFAlex Oxlade-Chamberlain
17 MFCurtis Jones
18 FWCody Gakpo
No.PositionPlayer
19 MFHarvey Elliott
20 FWDiogo Jota
21 DFKostas Tsimikas
22 DFCalvin Ramsay
23 FWLuis Díaz
26 DFAndrew Robertson
27 FWDarwin Núñez
28 FWFábio Carvalho
29 MFArthur Melo (on loan from Juventus)
32 DFJoël Matip
43 MFStefan Bajcetic
46 DFRhys Williams
47 DFNat Phillips
62 GKCaoimhín Kelleher
66 DFTrent Alexander-Arnold

ಔಟ್ ಆನ್ ಲೋನ್

Note: Flags indicate national team as has been defined under FIFA eligibility rules. Players may hold more than one non-FIFA nationality.

No.PositionPlayer
72 DFSepp van den Berg (at Schalke 04 until 30 June 2023)[೧೧೭]
97 GKMarcelo Pitaluga (at Macclesfield until 30 June 2023)[೧೧೮]

ಮಾಜಿ ಆಟಗಾರರು

ಮಾಜಿ ಆಟಗಾರರ ಬಗ್ಗೆ ವಿವರವಾದ ಮಾಹಿತಿಗಾಗಿ ನೋಡಿ - ಲಿವರ್ ಪೂಲ್ ಎಫ್.ಸಿ. ಆಟಗಾರರ ಪಟ್ಟಿಮತ್ತು ವರ್ಗ:Liverpool F.C. players.

ಲಿವರ್ ಪೂಲ್ ಎಫ್.ಸಿ. ಹಾಲ್ ಆಫ್ ಫೇಮ್ [೧೧೯]ಈ ಪಟ್ಟಿಯು 1892–2000 ರವರೆಗಿನ ಪ್ರತಿ ದಶಕದಲ್ಲಿನ ಕೇವಲ ಇಬ್ಬರು ಆಟಗಾರರನ್ನು ಮಾತ್ರ ಹೊಂದಿದ್ದು, ತಾರಾಭರಿತ ಮಂಡಳಿಯಿಂದ ಆಯ್ಕೆಗೊಂಡವರ ಪಟ್ಟಿಯಾದ ಇದರಲ್ಲಿನ ವ್ಯಕ್ತಿಗಳ ಸಾಧನೆ, ತಾರಾಮೌಲ್ಯ ಮತ್ತು ಪ್ರೇರಕ ಗುಣಗಳು ಇವರನ್ನು ಆನ್ ಫೀಲ್ಡ್ ನ ಶ್ರೇಷ್ಠರ ಸಾಲಿನಲ್ಲಿ ಹೆಸರಿಸಲು ಪೂರಕವಾಗಿವೆ.

ದಶಕಹೆಸರುರಾಷ್ಟ್ರೀಯತೆಸ್ಥಾನಮಾನಲಿವರ್‌ಪೂಲ್
ಕ್ರೀಡಾ ವೃತ್ತಿಜೀವನ
ಸ್ಪರ್ಧಿಸಿದ್ದುಗೋಲ್ ಗಳು
1890ಮ್ಯಾಟ್ ಕ್ವೀನ್ GK1892–991057
1890ಹ್ಯಾರಿ ಬ್ರಾಡ್ ಷಾ FW1893–9813851
1900ಜೇಕ್ ಕಾಕ್ಸ್ MF1897–0936081
1900ಅಲೆಕ್ಸ್ ರೈಸ್ ಬೆಕ್ DF1902–0934119
1910


ಆರ್ಥರ್ ಗೊಡಾರ್ಡ್ MF1902–1441477
1910ಎಫ್ರೈಮ್ ಲಾಂಗ್ ವರ್ತ್ DF1910–283715
1920ಡೊನಾಲ್ಡ್ ಮೆಕಿನ್ಲೇ DF1910–2943434
1920ಎಲಿಷಾ ಸ್ಕಾಟ್ GK1912–34468
1930ಗಾರ್ಡನ್ ಹಾಡ್ಜ್ ಸನ್ FW


1925–36377241
1930ಜಿಮ್ಮಿ ಮೆಕ್ ಡೌಗಲ್ DF1928–3835612
1940ಜ್ಯಾಕ್ ಬಾಮರ್ FW1932–52312111
1940ಬಿಲ್ಲಿ ಲಿಡ್ಡೆಲ್ FW1939–61


534228
1950ಆಲ್ಬರ್ಟ್ ಸ್ಟಬ್ಬಿನ್ಸ್ FW1946–5317883
1950ಅಲನ್ ಅಕೋರ್ಟ್ MF1952–6438163
1960ರೋಜರ್ ಹಂಟ್ FW1958–69492286
1960ರಾನ್ ಯೀಟ್ಸ್ CB1961–7145416
1970ಇಯಾನ್ ಕ್ಯಾಲಗನ್ MF1960–7885768
1970ರೇ ಕ್ಲೆಮೆನ್ಸ್ GK1967–81665
1980ಕೆನ್ನಿ ಡಾಲ್ ಗ್ಲಿಷ್ FW1977–91515172
1980ಅಲನ್‌ ಹ್ಯಾನ್‌ಸೆನ್‌ CB1977–9162014
1990ಇಯಾನ್ ರಷ್ FW1980–96660346
1990ಜಾನ್ ಬಾರ್ನ್ಸ್ MF1987–97407108


ಇಂಗ್ಲಿಷ್ ಫುಟ್ ಬಾಲ್ ಹಾಲ್ ಆಫ್ ಫೇಮ್ ನ ಸದಸ್ಯರು

ಲಿವರ್ ಪೂಲ್ ನ ಹಲವಾರು ಆಟಗಾರರು ಮತ್ತು ಮಾಜಿ ಮ್ಯಾನೇಜರ್ ಗಳನ್ನು ಇಂಗ್ಲಿಷ್ ಫುಟ್ ಬಾಲ್ ಹಾಲ್ ಆಫ್ ಫೇಮ್ ಗೆ ಸೇರಿಸಿಕೊಳ್ಳಲಾಗಿದೆ:[೧೨೦]

ಫುಟ್ ಬಾಲ್ ಲೀಗ್ ನ 100 ದಂತಕಥೆಗಳುಫುಟ್ ಬಾಲ್ ಲೀಗ್ ನ 100 ದಂತಕಥೆಗಳು ಎಂಬುದು "ದಂತಕಥೆಗಳೇ ಆದ 100 ಫುಟ್ ಬಾಲ್ ಆಟಗಾರರ ಪಟ್ಟಿ"; ಲೀಗ್ ಫುಟ್ ಬಾಲ್ ನ ನೂರನೆಯ ವರ್ಷವನ್ನು ಸಂಭ್ರಮದಿಂದ ಆಚರಿಸುವುದರ ಅಂಗವಾರಿ, 1998 ರಲ್ಲಿ, ದ ಫುಟ್ ಬಾಲ್ ಲೀಗ್ ಈ ಪಟ್ಟಿಯನ್ನು ತಯಾರಿಸಿತು.[೧೨೨]

ಈಗಿನ ತಾಂತ್ರಿಕ ಸಿಬ್ಬಂದಿ

22 ಮಾರ್ಚ್ 2011 ರಂತೆ. [೧೨೩]
ಹೆಸರುಹುದ್ದೆ
ಕೆನ್ನಿ ಡಾಲ್ ಗ್ಲಿಷ್ಕಾರ್ಯನಿರ್ವಾಹಕ
ಸ್ಯಾಮಿ ಲೀಸಹಾಯಕ ಪ್ರಬಂಧಕ
ಸ್ಟೀವ್ ಕ್ಲಾರ್ಕ್ಪ್ರಥಮ ತಂಡದ ತರಬೇತುದಾರ
ಜಾನ್ ಆಕ್ಟೆನ್ ಬರ್ಗ್ಗೋಲುರಕ್ಷಣೆ ತರಬೇತುದಾರ
ಜೋಸ್ ಸೆಗೂರಾಬೆಂಗಾವಲು ಪಡೆ ಯ ಮ್ಯಾನೇಜರ್

| ಮೈಕ್ ಮೆಕ್ ಗ್ಲಿನ್| ಸಹಾಯಕ ಪ್ರಮುಖ ಸ್ಕೌಟ್|-

| ಪೀಟರ್ ಬ್ರುಕ್ನರ್| ಕ್ರೀಡಾ ಔಷಧ ಮತ್ತು ಕ್ರೀಡಾ ವಿಜ್ಞಾನದ ಮುಖ್ಯಸ್ಥರು.|-| ಝಾಫ್ ಇಕ್ಬಾಲ್ಕ್ಲಬ್ ವೈದ್ಯ|-| ಡಾರೆನ್ ಬರ್ಜೆಸ್| ದೈಹಿಕ ಯುಕ್ತತೆ ಮತ್ತು ಸ್ಥಿತಿಸ್ಥಾಪನ ವಿಭಾಗದ ಮುಖ್ಯಸ್ಥ|-| ಫಿಲ್ ಕೋಲ್ಸ್| ಶಾರೀರಿಕ ಚಿಕಿತ್ಸೆಗಳು ವಿಭಾಗದ ಮುಖ್ಯಸ್ಥರು|-

| ಜೋರ್ಡಾನ್ ಮಿಲ್ಸಮ್| ದೈಹಿಕ ಪುನಶ್ಚೇತನ ಯುಕ್ತತೆಯ ತರಬೇತುದಾರ |-

| ಬ್ಯಾರಿ ಡ್ರಸ್ಟ್| ಕ್ರೀಡಾ ವಿಜ್ಞಾನ ಸಲಹೆಗಾರ|-

| ರಾಬ್ ಪ್ರೈಸ್| ಹಿರಿಯ ಅಂಗಮರ್ದನತಜ್ಞ|-

| ಆಂಡ್ರೂ ನೀಲನ್| ಹಿರಿಯ ಅಂಗಮರ್ದನತಜ್ಞ|-

| ಕ್ರಿಸ್ ಮಾರ್ಗನ್ಅಂಗಮರ್ದನ ತಜ್ಞ|-

| ಮ್ಯಾಟ್ ಕೋನೋಪಿಂಸ್ಕಿ| ಬೆಂಗಾವಲು ಅಂಗಮರ್ದನತಜ್ಞ|-

| ಅಲನ್ ಮೆಕ್ಕಾಲ್| ಕ್ರೀಡಾ ವಿಜ್ಞಾನಿ|-

| ಇವಾನ್ ಆರ್ಟೆಗಾ| ಕ್ರೀಡಾ ಚಿಕಿತ್ಸಾತಜ್ಞ|-

| ಪಾಲ್ ಸ್ಮಾಲ್| ಮಸಾಜ್ ಮಾಡುವವ|-

| ಸಿಲ್ವನ್ ರಿಚರ್ಡ್ಸನ್| ಮಸಾಜ್ ಮಾಡುವವ|}


ಕ್ಲಬ್‌ನ ಅಧಿಕಾರಿಗಳು

ಫೆನ್ವೇ ಸ್ಪೋರ್ಟ್ಸ್ ಗ್ರೂಪ್ ಎಂಬ ವ್ಯಾವಹಾರಿಕ ಸಂಸ್ಥೆಯ ಹೆಸರಿನಡಿಯಲ್ಲಿ ನ್ಯೂ ಇಂಗ್ಲೆಂಡ್ ಸ್ಪೋರ್ಟ್ಸ್ ವೆಂಚರ್ಸ್ ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ ಎಂಡ್ ಅಥ್ಲೆಟಿಕ್ ಗ್ರೌಂಡ್ಸ್ ಲಿಮಿಟೆಡ್ ನ ಸಂಪೂರ್ಣ ಮಾಲಿಕತ್ವವನ್ನು ಹೊಂದಿದ್ದಾರೆ.

ಹಿರಿಯ ವ್ಯವಸ್ಥಾಪಕವರ್ಗ

  • ಪ್ರದಾನ ಮಾಲಿಕ: ಜಾನ್ ಡಬ್ಲ್ಯೂ, ಹೆನ್ರಿ
  • ಅಧ್ಯಕ್ಷ: ಟಾಮ್ ವರ್ನರ್
  • ಉಪಾಧ್ಯಕ್ಷ: ಡೇವಿಡ್ ಗಿನ್ಸ್ ಬರ್ಗ್
  • ಪ್ರಧಾನ ಕಾರ್ಯದರ್ಶಿ: ಇಯಾನ್ ಐರೆ
  • ಪ್ರಧಾನ ವಿತ್ತಾಧಿಕಾರಿ: ಫಿಲಿಪ್ ನ್ಯಾಷ್
  • ಫುಟ್ ಬಾಲ್ ನಿರ್ದೇಶಕ: ಡೇಮಿಯನ್ ಕೋಮೋಲೈ
  • ನಿರ್ದೇಶಕರು: ಜಾನ್ ಡಬ್ಲ್ಯೂ, ಹೆನ್ರಿ, ಟಾಮ್ ವರ್ನರ್, ಡೇವಿಡ್ ಗಿನ್ಸ್ ಬರ್ಗ್ , ಇಯಾನ್ ಐರೆ, ಫಿಲಿಪ್ ನ್ಯಾಷ್, ಮೈಕಲ್ ಗಾರ್ಡನ್, ಜೆಫ್ರಿ ವಿಂಕ್ಲ್ , ಡೇಮಿಯನ್ ಕೋಮೋಲೈ
  • ಆಜೀವ ಗೌರವಾಧ್ಯಕ್ಷ: ಡೇವಿಡ್ ಮೂರ್ಸ್
  • ಆಜೀವ ಗೌರವ ಉಪಾಧ್ಯಕ್ಷರು: ನೊಯೆಲ್ ವೈಟ್, ಟೆರಿ ಸ್ಮಿತ್, ಕೀತ್ ಕ್ಲೇಟನ್, ಜ್ಯೂಲ್ಸ್ ಬರ್ನ್ಸ್
  • ಕ್ಲಬ್ ನ ಕಾರ್ಯದರ್ಶಿ: ಇಯಾನ್ ಸಿಲ್ವೆಸ್ಟರ್
  • ಪ್ರಧಾನ ಕ್ರೀಡಾಂಗಣ ಮೇಲ್ವಿಚಾರಕ: ಟೆರಿ ಫೋರ್ಸಿತ್
  • ಕ್ರೀಡಾಂಗಣ ಕಾರ್ಯನಿರ್ವಾಹಕ: ಜೆಡ್ ಪಾಯ್ನ್ ಟನ್
  • ವಾರ್ತಾ ಅಧಿಕಾರಿ: ಇಯಾನ್ ಕಾಟನ್

ವ್ಯವಸ್ಥಾಪನೆಯ ಇತಿಹಾಸ

ಕಾಲಾವಧಿಹೆಸರುಪ್ರಶಸ್ತಿಗಳುಒಟ್ಟುಟಿಪ್ಪಣಿಗಳು
ದೇಶೀಯಅಂತಾರಾಷ್ಟ್ರೀಯ
ಎಲ್ ಜಿಎಫ್ಎಸಿಎಲ್ ಸಿಸಿಎಸ್ಇಸಿ/ಸಿಎಲ್ಯುಸಿಎಸ್ ಸಿ
1892–1896 ಡಬ್ಲ್ಯೂ.ಇ. ಬಾರ್ಕ್ಲೇ, ಜಾನ್ ಮೆಕ್ಕೆನ್ನಾ000ಜಂಟಿ ಪ್ರಬಂಧಕರು, ಬಾರ್ಕ್ಲೇ ಎವರ್ಟನ್ ರ ಮೊದಲ ಕಾರ್ಯನಿರ್ವಾಹಕರು ಸಹ ಆಗಿದ್ದರು.
1896–1915 ಟಾಂ ವಾಟ್ಸನ್2013ಲಿವರ್ ಪೂಲ್ ಗೆ ಅತ್ಯಂತ ದೀರ್ಘ ಕಾಲ ಸೇವೆ ಸಲ್ಲಿಸಿದ ಕಾರ್ಯನಿರ್ವಾಹಕ
1919–1923 ಡೇವಿಡ್ ಆಷ್ ವರ್ತ್1001
1923–1928 ಮ್ಯಾಟ್ ಕ್ವೀನ್1001
1928–1936 ಜಾರ್ಜ್ ಪ್ಯಾಟರ್ಸನ್0000
1936–1951 ಜಾರ್ಜ್ ಕೇ1001
1951–1956 ಡಾನ್ ವೆಲ್ಷ್0000ವಜಾ ಮಾಡಲ್ಪಟ್ಟ ಮೊದಲ ಲಿವರ್ ಪೂಲ್ ಪ್ರಬಂಧಕ
1956–1959 ಫಿಲ್ ಟೈಲರ್000000
1959–1974 ಬಿಲ್ ಶ್ಯಾಂಕ್ಲಿ32020108ಅವರ ಅವಧಿಯಲ್ಲಿ ಅತ್ಯಂತ ಹೆಚ್ಚು ಪಂದ್ಯಗಳ ಮ್ಯಾನೇಜರ್ ಆಗಿದ್ದರು.
1974–1983 ಬಾಬ್ ಪೇಯ್ಸ್ಲೇ603631120ಲಿವರ್ ಪೂಲ್ ಇತಿಹಾಸದಲ್ಲಿ ಅರಿ ಹೆಚ್ಚು ಪುರಸ್ಕಾರಗಳನ್ನು ಸಂಪಾದಿಸಿದರು.
1983–1985 ಜೋ ಫಾಗನ್10101003
1985–1991 ಕೆನ್ನಿ ಡಾಲ್ ಗ್ಲಿಷ್32049
1991–1994 ಗ್ರೀಮ್ ಸೌನೆಸ್01000001
1994–1998 ರಾಯ್ ಎವಾನ್ಸ್00100001
1998 ರಾಯ್ ಎವಾನ್ಸ್, ಜೆರಾರ್ಡ್ ಹೌಲ್ಲಿಯರ್00000000ನಾಲ್ಕು ತಿಂಗಳ ಕಾಲ ಸಹಪ್ರಬಂಧಕರಾಗಿದ್ದರು
1998–2004 ಜೆರಾರ್ಡ್ ಹೌಲ್ಲಿಯರ್01210116
2004–2010 ರಾಫಾ ಬೆನಿಟೆಝ್01011014
2010–2011 ರಾಯ್ ಹಾಡ್ಜ್ ಸನ್00000000ಅತಿ ಕಡಿಮೆ ಅವಧಿ ಮ್ಯಾನೇಜರ್ ಆಗಿದ್ದವರು
2003ರಿಂದ–ಇಲ್ಲಿಯವರೆಗೆ ಕೆನ್ನಿ ಡಾಲ್ ಗ್ಲಿಷ್00000000ಎರಡನೆಯ ಅವಧಿಗೆ ಆಯ್ಕೆಯಾದ/ಸೇವೆ ಸಲ್ಲಿಸಿದ ಮೊದಲ ಲಿವರ್ ಪೂಲ್ ಮ್ಯಾನೇಜರ್
ಒಟ್ಟು1998–ಇಂದಿನವರೆಗೆ18771553358

ಅಧ್ಯಕ್ಷರ ಚರಿತೆ

 
ಹೆಸರುರಾಷ್ಟ್ರೀಯತೆವರ್ಷಗಳು (ಅವಧಿ)
ಜಾನ್ ಹೌಲ್ಡಿಂಗ್ 1892–1902
ವಿಲಿಯಮ್ ಹೌಲ್ಡಿಂಗ್ 1902–1904
ಎಡ್ವಿನ್ ಬೆರಿ 1904–1909
ಜಾನ್ ಮೆಕ್ಕೆನ್ನಾ 1909–1914
ಜಾನ್ ಆಸ್ಟ್ ಬರಿ 1914–1917
ಜಾನ್ ಮೆಕ್ಕೆನ್ನಾ 1917–1919
ವಾಲ್ಟರ್ ಆರ್. ವಿಲಿಯಮ್ಸ್ 1919–1924
ಆರ್.ಎಲ್. ಮಾರ್ಟಿಂಡೇಲ್ ಸೀನಿಯರ್ 1924–1926
ಟಾಮ್ ಕ್ರಾಂಪ್ಟನ್ 1926–1932
ವಾಲ್ಟರ್ ಹೆಚ್. ಕಾರ್ಟ್ ರೈಟ್ 1932–1935
ಡಬ್ಲ್ಯೂ.ಜೆ.ಹರ್ರಾಪ್ 1935–1941
ಆರ್.ಎಲ್. ಮಾರ್ಟಿಂಡೇಲ್ ಸೀನಿಯರ್ 1941–1944
ಬಿಲ್ ಮೆಕ್ಕಾನೆಲ್ 1944–1947
 
ಹೆಸರುರಾಷ್ಟ್ರೀಯತೆವರ್ಷಗಳು (ಅವಧಿ)
ಸ್ಯಾಮುಯೆಲ್ ಆರ್. ವಿಲಿಯಮ್ಸ್ 1947–1950
ಜಾರ್ಜ್ ಎ. ರಿಚರ್ಡ್ಸ್ 1950–1953
ಡಬ್ಲ್ಯೂ.ಜೆ.ಹರ್ರಾಪ್ 1953–1956
ಥಾಮಸ್ ವಿ. ವಿಲಿಯಮ್ಸ್ 1956–1964
ಸಿಡ್ನಿ ಸಿ. ರೀಕ್ಸ್ 1964–1967
ಹೆರಾಲ್ಡ್ ಕಾರ್ಟ್ ರೈಟ್ 1967–1969
ಹೆಚ್.ಇ.ರಾಬರ್ಟ್ಸ್ 1969–1970
ಜಾನ್‌ ಸ್ಮಿತ್‌ 1973–1990
ನೊಯೆಲ್ ವೈಟ್ 1990–1991
ಡೇವಿಡ್ ಮೂರ್ಸ್ 1991–2007
ಟಾಮ್ ಹಿಕ್ಸ್
ಜಾರ್ಜ್ ಜಿಲ್ಲೆಟ್

2007–2010
ಮಾರ್ಟಿನ್ ಬ್ರಾಟನ್ 2010
ಟಾಮ್ ವೆರ್ನರ್ 2010–ಪ್ರಸಕ್ತ

ಗೌರವಗಳು

ಲಿವರ್ ಪೂಲ್ ಗೆದ್ದ ಮೊದಲ ಪ್ರಶಸ್ತಿ ಲಂಕಾಷೈರ್ ಲೀಗ್ ನದಾಗಿತ್ತು; ಇದನ್ನು ಲಿವರ್ ಪೂಲ್ ತನ್ನ ಮೊದಲ ಋತುವಿನಲ್ಲೇ ಗೆದ್ದುಕೊಂಡಿತು.[೧೨೪] 1901 ರಲ್ಲಿ ಲಿವರ್ ಪೂಲ್ ತನ್ ಮೊದಲ ಲೀಗ್ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಹಾಗೂ ಮೊದಲ s in the ೆಫ್.ಎ. ಕಪ್ ಯಶ1965 ರಲ್ಲಿ ದೊರಕಿತು. 1980 ರ ದಶಕದಲ್ಲಿ ಲಿವರ್ ಪೂಲ್ ತನ್ನ ಇತಿಹಾಸದಲ್ಲಿನ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದಿತು; ಆರು ಲೀಗ್ ಪ್ರಶಸ್ತಿಗಳು, ಎರಡು ಎಫ್.ಎ.ಕಪ್ ಗಳು, ನಾಲ್ಕು ಲೀಗ್ ಕಪ್ ಗಳು, ಐದು ಚಾರಿಟಿ ಷೀಲ್ಡ್ ಗಳು (ಒಂದು ಹಂಚಿಕೊಂಡದ್ದು) ಮತ್ತು ಎರಡು ಯೂರೋಪಿಯನ್ ಕಪ್ ಗಳನ್ನು ಆ ದಶಕದಲ್ಲಿ ಲಿವರ್ ಪೂಲ್ ಗೆದ್ದುಕೊಂಡಿತು. ಲಿವರ್ ಪೂಲ್ ಇಂಗ್ಲಿಷ್ ಪ್ರೀಮಿಯರ್ ಚಾಂಪಿನ್ ಷಿಪ್ ಅನ್ನು ಹದಿನೆಂಟು ಬಾರಿ ಗೆದ್ದಿದೆ (ಈ ದಾಖಲೆಯನ್ನು ಲಿವರ್ ಪೂಲ್ ಮ್ಯಾಂಚೆಸ್ಟರ್ ಯುನೈಟೆಡ್ ನೊಡನೆ ಹಂಚಿಕೊಂಡಿದೆ),[೧೨೫] ಎಫ್ಎ ಕಪ್ ಅನ್ನು ಏಳು ಬಾರಿ ಹಾಗೂ ಲೀಗ್ ಕಪ್ ಅನ್ನು ದಾಖಲೆ ಏಳು ಬಾರಿ ಜಯಿಸಿದೆ. 1986 ರಲ್ಲಿ ಲಿವರ್ ಪೂಲ್ ಲೀಗ್ ಮತ್ತು ಎಫ್.ಎ. ಕಪ್ "ಡಬಲ್" ಸಾಧಿಸಿತು, ಹಾಗೂ ಲೀಗ್ ಮತ್ತು ಯೂರೋಪಿಯನ್ ಕಪ್ ಡಬಲ್ ಗಳನ್ನು ಎರಡು ಬಾರಿ ಗೆದ್ದುಕೊಂಡಿದೆ,1977 ಮತ್ತು 1984 ರಲ್ಲಿ. 1984 ರಲ್ಲಿ ಲಿವರ್ ಪೂಲ್ ಲೀಗ್ ಕಪ್ ಅನ್ನೂ ಗೆದ್ದು ಅದ್ವಿತೀಯವಾದ ಟ್ರಿಬಲ್ ಅನ್ನು ಸಾಧಿಸಿತು; 2001 ರಲ್ಲಿ ಇದರ ಪುನರಾವರ್ತನೆಯಾಯಿತ (ಪ್ರಶಸ್ತಿಗಳು ಬೇರೆಬೇರೆಯವಷ್ಟೆ); ಆಗ ಲಿವರ್ ಪೂಲ್ ಗಳಿಸಿದ ಪ್ರಶಸ್ತಿಗಳೆಂದರೆ ಎಫ್.ಎ.ಕಪ್. ಲೀಗ್ ಕಪ್ ಮತ್ತು UEFA ಕಪ್.[೧೨೬]

ಲಿವರ್ ಪೂಲ್ ಐತಿಹಾಸಿಕವಾಗಿ ಉನ್ನತ ಮಟ್ಟದ ದಾಖಲೆಗಳಲ್ಲಿ ಒಂದನ್ನು ಹೊಂದಿರುವ ಕ್ಲಬ್ ಆಗಿದೆ; ಇದು 95 ಋತುಗಳಲ್ಲಿ ಕೇವಲ 12 ಬಾರಿ ಮಾತ್ರ ಹದಿನಾಲ್ಕನೆಯ ಶ್ರೇಣಿಗಿಂತ ಕೆಳಕ್ಕೆ ಇಳಿದಿತ್ತು. ಈ ಕ್ಲಬ್ ಬೇರಾವುದೇ ಇಂಗ್ಲಿಷ್ ತಂಡಕ್ಕಿಂತಲೂ ಹೆಚ್ಚಿನ ಉನ್ನತ ಮಟ್ಟದ ವಿಜಯಗಳನ್ನು ಒಟ್ಟುಹಾಕಿದೆ.[೧೨೭] ಲಿವರ್ ಪೂಲ್ 1900 ರಿಂದ 1999 ರವರೆಗಿನ ಅವಧಿಯಲ್ಲಿ ಎರಡನೆಯ ಗರಿಷ್ಠ ಸರಾಸರಿ ಲೀಗ್ ಸಮಾರೋಪ ಸ್ಥಾನವನ್ನು ಸಹ ಗಳಿಸಿದೆ; ಇದರ ಸರಾಸರಿ ಲೀಗ್ ಸ್ಥಾನ 8.7.[೧೨೮] ಲಿವರ್ ಪೂಲ್ ಯೂರೋಪ್ ನ ಪ್ರಮುಖ ಕಪ್ ಆದ ಯೂರೋಪಿಯನ್ ಕಪ್ ಅನ್ನು ಐದು ಬಾರಿ ಜಯಿಸಿರುವುದೂ ಸಹ ಒಂದು ಇಂಗ್ಲಿಷ್ ದಾಖಲೆ. ಕೇವಲ ರಿಯಲ್ ಮ್ಯಾಡ್ರಿಡ್ ಮತ್ತು ಮಿಲಾನ್ ಮಾತ್ರ ಇದಕ್ಕಿಂತಲೂ ಹೆಚ್ಚು ಬಾರಿ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿವೆ. ಲಿವರ್ ಪೂಲ್ ಐದನೆಯ ಬಾರಿ ಗೆದ್ದಾಗ ಈ ಕ್ಲಬ್ ಆ ಪ್ರಶಸ್ತಿಯನ್ನು ಸಂಪೂರ್ಣವಾಗಿ ಜಯಿಸಿದಂತಾಯಿತು ಹಾಗೂ ಕ್ಲಬ್ ಗೆ ಮಲ್ಟಿಪಲ್-ವಿನ್ನರ್ ಬ್ಯಾಡ್ಸ್ ಅನ್ನು ನೀಡಿ ಗೌರವಿಸಲಾಯಿತು.[೧೨೯]

ಲಿವರ್ ಪೂಲ್ಯೂರೋಪ್ ನ ದ್ವಿತೀಯ ಮಟ್ಟದ ಕ್ಲಬ್ ಸ್ಪರ್ಧೆಯಾದ UEFA ಕಪ್ ಅನ್ನು ಮೂರು ಬಾರಿ ಗೆದ್ದಿದೆ;  ಜುವೆಂಟಸ್ ಮತ್ತು ಇಂಟೆಮಾಝಿಯೋನೇಲ್ ಸಹ ತಲಾ ಮೂರು ಬಾರಿ ಗೆದ್ದಿರುವುದರಿಂದ ಈ ದಾಖಲೆಯನ್ನೂ ಮೂರೂ ತಂಡಗಳು ಹಂಚಿಕೊಂಡಿವೆ.[೧೩೦]

ದೇಶೀಯ

ಲೀಗ್‌‌

  • ಫುಟ್ ಬಾಲ್ ಲೀಗ್ ಪ್ರಥಮ ದರ್ಜೆ (ಇಂಗ್ಲಿಷ್ ಫುಟ್ ಬಾಲ್ ವಿಜೇತರು):[note ೨] 18
    • 1900–01, 1905–06, 1921–22, 1922–23, 1946–47, 1963–64, 1965–66, 1972–73, 1975–76, 1976–77, 1978–79, 1979–80, 1981–82, 1982–83, 1983–84, 1985–86, 1987–88, 1989–90
  • ದ್ವಿತೀಯ ದರ್ಜೆ: [note ೨]4
    • 1893–94, 1895–96, 1904–05, 1961–62


  • ಲಂಕಾಷೈರ್ ಲೀಗ್: 1
    • 1892–93


ಕಪ್ ಗಳು

  • FA ಕಪ್‌: 7
    • 1965, 1974, 1986, 1989, 1992, 2001, 2006


  • ಲೀಗ್‌ ಕಪ್‌: 7
    • 1981, 1982, 1983, 1984, 1995, 2001, 2003


  • FA ಚಾರಿಟಿ ಷೀಲ್ಡ್/FA ಕಮ್ಯುನಿಟಿ ಸೀಲ್ಡ್: 15 (10 ಸಂಪೂರ್ಣ, 5 ಜಂಟಿ)
    • 1964 (ಜಂಟಿ), 1965 (ಜಂಟಿ), 1966, 1974, 1976, 1977 (ಜಂಟಿ), 1979, 1980, 1982, 1986 (ಜಂಟಿ), 1988, 1989, 1990 (ಜಂಟಿ), 2001, 2006


ಯುರೋಪಿಯನ್


  • UEFA ಕಪ್
    • 1973, 1976, 2001


  • UEFA ಸೂಪರ್ ಕಪ್: 3
    • 1977, 2001, 2005


ಡಬಲ್‌ಗಳು ಮತ್ತು ಟ್ರಿಬಲ್‌ಗಳು


ವಿಶೇಷತಃ ಚಿಕ್ಕ ಸ್ಪರ್ಧೆಗಳಾದ ಚಾರಿಟಿ ಕಮ್ಯುನಿಟಿ ಷೀಲ್ಡ್ ಮತ್ತು ಸೂಪರ್ ಕಪ್ ಗಳನ್ನು ಸಾಮಾನ್ಯವಾಗಿ ದಬಲ್ ಅಥವಾ ಟ್ರಿಬಲ್ ಸಾಧನೆಗಾಗಿ ಗಣನೆಗೆ ತೆಗೆದುಕೊಳ್ಳುವಂತಹವಲ್ಲವೆಂದು ಪರಿಗಣಿಸಲಾಗಿದೆ.[೧೩೧]

ಟಿಪ್ಪಣಿಗಳು

ಉಲ್ಲೇಖಗಳು‌‌

ಟಿಪ್ಪಣಿಗಳು
ಗ್ರಂಥಸೂಚಿ

ಬಾಹ್ಯ ಕೊಂಡಿಗಳು‌‌