ವಿಕಿಮೇನಿಯಾ

ವಿಕಿಮೇನಿಯಾ(ವಿಕಿಮಾನಿಯಾ ಎಂದೂ ಕರೆಯುತ್ತಾರೆ.) ವಿಕಿಮೀಡಿಯಾ ಚಳುವಳಿಯ ವಾರ್ಷಿಕ ಸಮ್ಮೇಳನವಾಗಿದ್ದು, ಸ್ವಯಂಸೇವಕ ಸಮುದಾಯಗಳು ಮತ್ತು ಮತ್ತು ವಿಕಿಮೀಡಿಯಾ ಫೌಂಡೇಶನ್- ಇವೆರಡೂ ಸೇರಿ ಆಯೋಜಿಸುವ ಒಂದು ಬೃಹತ್ ಕಾರ್ಯಕ್ರಮವಾಗಿದೆ. ಪ್ರತಿ ವರ್ಷ ವಿಶ್ವದ ನಾನಾ ಭಾಗಗಳಲ್ಲಿ ನಡೆಯುವ ಈ ಸಮ್ಮೇಳನದಲ್ಲಿ, ವಿಕಿಪೀಡಿಯ ಅಲ್ಲದೆ ವಿಕಿಮೀಡಿಯಾ ಪ್ರತಿಷ್ಠಾನವು ನಿರ್ವಹಿಸುವ ಇತರೆ ಯೋಜನೆಗಳು (ವಿಕಿಕೋಟ್ಸ್, ವಿಕಿವಾಯೇಜ್, ವಿಕಿಸೋರ್ಸ್, ವಿಕಿನ್ಯೂಸ್, ವಿಕಿಬುಕ್ಸ್ ಇತ್ಯಾದಿ), ಮುಕ್ತ ತಂತ್ರಾಂಶಗಳು, ಮುಕ್ತ ಜ್ಞಾನ ಮತ್ತು ಮತ್ತು ಇವುಗಳಿಗೆ ಸಂಬಂಧಿಸಿದ ಸಾಮಾಜಿಕ ಮತ್ತು ತಾಂತ್ರಿಕ ಅಂಶಗಳ ಬಗ್ಗೆ ಪರಸ್ಪರ ಚರ್ಚಿಸಲಾಗುತ್ತದೆ.

ವಿಕಿಮೇನಿಯಾ ಚಿಹ್ನೆ

೨೦೨೧ನೇ ಇಸವಿಯ ವಿಕಿಮೇನಿಯಾವನ್ನು ೨೦೨೧ರ ಅಗಸ್ಟ್ ೧೩ ರಿಂದ ೧೭ವರೆಗೆ ಆನ್‌ಲೈನ್ ವೇದಿಕೆಯ ಮೂಲಕ ನಡೆಸಲಾಗುತ್ತದೆ[೧]. ಮೂಲತಃ ಅಗಸ್ಟ್ ೨೦೨೦ರಂದು, ಥೈಲ್ಯಾಂಡ್‌ಬ್ಯಾಂಕಾಕ್‌ನಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು ಮತ್ತು ಕೊನೆಗೆ ಈ ಸಮ್ಮೇಳನವನ್ನು ರದ್ದುಗೊಳಿಸಲಾಯಿತು.

ವಿಕಿಮೇನಿಯಾ ನಡೆದ ದೇಶ ಮತ್ತು ನಗರಗಳ ನಕಾಶೆ

ಈ ಹಿಂದೆ ನಡೆದಿದ್ದ ಸಮ್ಮೇಳನಗಳ ಪಟ್ಟಿ

ಈ ಕೆಳಗಿನ ಪಟ್ಟಿಯಲ್ಲಿನ ಕೊಂಡಿಗಳು ಆಂಗ್ಲ ವಿಕಿಗೆ ಕರೆದೊಯ್ಯುತ್ತವೆ.
ಚಿಹ್ನೆಸಮ್ಮೇಳನದಿನಾಂಕನಡೆದ ಸ್ಥಳಹಾಜರಿದ್ದ ಒಟ್ಟು ಸದಸ್ಯರುಪ್ರಸ್ತುತಿಯ ವಿವರಗಳು
ವಿಕಿಮೇನಿಯಾ ೨೦೦೫೨೦೦೫ರ ಆಗಸ್ಟ್ ೪ರಿಂದ ೮ರವರೆಗೆಫ್ರಾಂಕ್‌ಫರ್ಟ್, ಜರ್ಮನಿ೩೮೦[೨]ಸ್ಲೈಡ್ ಮತ್ತು ವಿಡಿಯೋ
ವಿಕಿಮೇನಿಯಾ ೨೦೦೬೨೦೦೬ರ ಆಗಸ್ಟ್ ೪ರಿಂದ ೬ರವರೆಗೆಕೇಂಬ್ರಿಜ್ (ಮಸಾಚುಸೆಟ್ಸ್), ಅಮೇರಿಕ ಸಂಯುಕ್ತ ಸಂಸ್ಥಾನ೪೦೦ಸ್ಲೈಡುಗಳು, ಕಾಗದ ಪತ್ರಗಳು, ವಿಡಿಯೋ
ವಿಕಿಮೇನಿಯಾ ೨೦೦೭೨೦೦೭ರ ಆಗಸ್ಟ್ ೩ರಿಂದ ೫ರವರೆಗೆಥೈಪೆ, ತೈವಾನ್೪೪೦ಗ್ಯಾಲರಿ
ವಿಕಿಮೇನಿಯಾ ೨೦೦೮೨೦೦೮ರ ಜುಲೈ ೧೭ರಿಂದ ೧೯ರವರೆಗೆಅಲೆಕ್ಸಾಂಡ್ರಿಯಾ, ಈಜಿಪ್ಟ್೬೫೦[೩]ಸಾರಾಂಶಗಳು, ಸ್ಲೈಡುಗಳು ವಿಡಿಯೋ
ವಿಕಿಮೇನಿಯಾ ೨೦೦೯೨೦೦೯ರ ಆಗಸ್ಟ್ ೨೬ರಿಂದ ೨೮ರವರೆಗೆಬ್ಯೂನಾಸ್ ಐರಿಸ್, ಅರ್ಜೆಂಟೈನಾ೫೫೯[೪]ಸ್ಲೈಡುಗಳು, ವಿಡಿಯೋ
ವಿಕಿಮೇನಿಯಾ ೨೦೧೦೨೦೧೦ರ ಜುಲೈ ೯ರಿಂದ ೧೧ರವರೆಗೆಗ್ಡಾನ್ಸಿಕ್, ಪೋಲೆಂಡ್೫೦೦[೫]ಸ್ಲೈಡುಗಳು
ವಿಕಿಮೇನಿಯಾ ೨೦೧೧೨೦೧೧ರ ಆಗಸ್ಟ್ ೪ರಿಂದ ೭ರವರೆಗೆಹೈಫಾ, ಇಸ್ರೇಲ್೭೨೦[೬]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೨೨೦೧೨ರ ಜುಲೈ ೧೨ರಿಂದ ೧೫ವಾಷಿಂಗ್ಟನ್, ಅಮೇರಿಕ ಸಂಯುಕ್ತ ಸಂಸ್ಥಾನ೧೪೦೦[೭][೮]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೩೨೦೧೩ರ ಆಗಸ್ಟ್ ೭ರಿಂದ ೧೧ರವರೆಗೆಹಾಂಗ್ ಕಾಂಗ್, ಚೀನಾ೭೦೦[೯]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೪ಆಗಸ್ಟ್ ೬ರಿಂದ ೧೦ಲಂಡನ್ ಯುನೈಟೆಡ್ ಕಿಂಗ್‌ಡಮ್೧೭೬೨[೧೦]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೫೨೦೧೫ರ ಜುಲೈ ೧೫ರಿಂದ ೧೯ರವರೆಗೆಮೆಕ್ಸಿಕೊ ನಗರ, ಮೆಕ್ಸಿಕೊ೮೦೦ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೬೨೦೧೬ರ ಜೂನ್ ೨೧ರಿಂದ ೨೮ರವರೆಗೆಎಸಿನೊ ಲಾರ್ಜೋ, ಇಟಲಿ೧೨೦೦[೧೧]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೭೨೦೧೭ರ ಆಗಸ್ಟ್ ೯ರಿಂದ ೧೩ರವರೆಗೆಮಾಂಟ್ರಿಯಲ್, ಕ್ವಿಬೆಕ್, ಕೆನಡಾ೧೦೦೦[೧೨][೧೩]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೮೨೦೧೮ರ ಜುಲೈ ೧೮ರಿಂದ ೨೨ರವರೆಗೆಕೇಪ್ ಟೌನ್, ದಕ್ಷಿಣ ಆಫ್ರಿಕ೭೦೦[೧೪]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೧೯೨೦೧೯ರ ಆಗಸ್ಟ್ ೧೪ರಿಂದ ೧೮ರವರೆಗೆಸ್ಟಾಕ್‌ಹೋಮ್, ಸ್ವೀಡನ್೮೦೦[೧೫]ಪ್ರಸ್ತುತಿಗಳು, ವಿಡಿಯೋ
ವಿಕಿಮೇನಿಯಾ ೨೦೨೧೨೦೨೧ರ ಆಗಸ್ಟ್ ೧೩ರಿಂದ ೧೭ರವರೆಗೆಅಂತರಜಾಲ ವೇದಿಕೆ

ಸಮ್ಮೇಳನಗಳ ಪಕ್ಷಿನೋಟ

ಉಲ್ಲೇಖಗಳು