ಸಿಬುವಾನೊ ಭಾಷೆ

ಐಎಸ್ಒ 639-3

ಸಿಬುವಾನೊ (Cebuano), ಅನೇಕರು ಈ ಭಾಷೆಯನ್ನು ಬಿಸಾಯಾ, (Bisaya) ಎಂದು ಕರೆಯುತ್ತಾರೆ. ಆಗ್ನೇಯ ಏಷ್ಯಾಫಿಲಿಪ್ಪೀನ್ಸ್ ದೇಶದಲ್ಲಿ ಮಾತನಾಡುವ ಭಾಷೆಯಾಗಿದ್ದು, ಆಸ್ಟ್ರೋನೇಶ್ಯದ ಭಾಷಾ ಕುಟುಂಬದ ಮಲಯ್ ಪಾಲಿನೇಶ್ಯನ್ ಶಾಖೆಯ ಭಾಷೆಯಾಗಿದೆ. ಇದನ್ನು 2007 ರಲ್ಲಿ ಸುಮಾರು 2.1 ಕೋಟಿ ಜನರು ಮಾತನಾಡುತ್ತಿದ್ದರು ಮತ್ತು ಟ್ಯಾಗಲೋಗ್ ಭಾಷೆಯ ನಂತರ ಇದು ಫಿಲಿಪ್ಪೀನ್ಸ್ ದೇಶದ ಎರಡನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದೆ. [೧]

ಸಿಬುವಾನೋಗೆ ಸಿಬು ದ್ವೀಪದ ಹೆಸರನ್ನು ಇಡಲಾಗಿದೆ ಮತ್ತು ಭಾಷೆ ಅಲ್ಲಿಂದ ಹರಡಿತು ಎಂದು ನಂಬಲಾಗಿದೆ. ಪ್ರಸ್ತುತ ದಿನಗಳಲ್ಲಿ ಇದನ್ನು ಮಧ್ಯ ಬಿಸಾಯಾ, ಪೂರ್ವ ನೆಗ್ರೋಸ್ ದ್ವೀಪ ಪ್ರದೇಶ, ಪೂರ್ವ ವಿಸಾಯಾದ ಪಶ್ಚಿಮ ಭಾಗ ಮತ್ತು ಮಿಂಡ್ನಾವೊದಲ್ಲಿ ಮಾತನಾಡಲಾಗುತ್ತದೆ . ಇದು ವಿಸಾಯಾ ಭಾಷೆಗಳಲ್ಲಿ ಹೆಚ್ಚು ಮಾತನಾಡುವ ಉಪಭಾಷೆಯಾಗಿದ್ದು, ಈ ಕಾರಣದಿಂದಾಗಿ ಮತ್ತೊಂದು ಹೆಸರು " ಬಿಸಾಯಾ " ಆಗಿ ಮಾರ್ಪಟ್ಟಿದೆ. [೨] [೩]

ಉಲ್ಲೇಖಗಳು