೨೦೦೪ ಹಿಂದೂ ಮಹಾಸಾಗರದ ಭೂಕಂಪ

ಮೆಗಾಸ್ಟ್ರಸ್ಟ್ ಭೂಕ೦ಪನ ಮತ್ತು ನ೦ತರದ ಸುನಾಮಿ ೨೬ ಡಿಸೆ೦ಬರ್ ೨೦೦೪ ರ೦ದು

೨೦೦೪ರ ಹಿಂದೂ ಮಹಾಸಾಗರದ ಭೂಕಂಪ ಸಮುದ್ರದ ನೀರಿನಡಿ ನಡೆದ ರಿಖ್ಟರ್ ಮಾಪನದಲ್ಲಿ ೮.೯ ರಷ್ಟು ಬಲವಾದ ಭೂಕಂಪ. ಇದು ಡಿಸೆಂಬರ್ ೨೬, ೨೦೦೪ ರಂದು ಇಂಡೊನೇಷ್ಯಾದಲ್ಲಿರುವ ಸುಮಾತ್ರ ದ್ವೀಪದ ಬಳಿ ಸಂಭವಿಸಿತು. ಸಮುದ್ರದ ಅಡಿಯಲ್ಲಿ ನಡೆದದ್ದರಿಂದ ಈ ಭೂಕಂಪ ಸಮುದ್ರದಲ್ಲಿ ಎಬ್ಬಿಸಿದ ಅಲೆಗಳು ಭಾರತ, ಶ್ರೀಲಂಕಾ, ಇಂಡೊನೇಷಿಯಾ ಮೊದಲಾದ ದೇಶಗಳಲ್ಲಿ ವಿಕೋಪ ಸೃಷ್ಟಿಸಿದ್ದು ಒಟ್ಟು ಸುಮಾರು ೧,೫೦,೦೦೦ ಜನರು ಮೃತಪಟ್ಟರು. ಸುನಾಮಿ ಅಲೆಗಳೆಂದು ಕರೆಯಲ್ಪಡುವ ಈ ಅಲೆಗಳು ಕೆಲವು ಕಡೆ ೩೩ ಅಡಿಗಳಷ್ಟು ಎತ್ತರವಿದ್ದವು.

ಭೂಕ೦ಪದಿ೦ದೆದ್ದ ಸುನಾಮಿ ಅಲೆಗಳು

ಭೂಕಂಪದ ಶಕ್ತಿ

ಮೊದಲ ವರದಿಗಳ ಪ್ರಕಾರ ರಿಖ್ಟರ್ ಮಾಪನದಲ್ಲಿ ೬.೮ ರಷ್ಟು ಬಲವಾದ ಭೂಕಂಪ, ನಂತರ ರಿಖ್ಟರ್ ೮.೯ ರಷ್ಟು ಇದೆಯೆ೦ದು ನಿಗದಿಪಡಿಸಲಾಯಿತು. ಇದು ವರೆಗೆ ದಾಖಲಾದ ಅತಿ ದೊಡ್ಡ ಭೂಕಂಪ ಚಿಲಿ ದೇಶದಲ್ಲಿ ನಡೆದ ರಿಖ್ಟರ್ ೯.೫ ರಷ್ಟಿತ್ತು. ಈಗ ನಡೆದ ಭೂಕಂಪ ಕಳೆದ ೪೦ ವರ್ಷಗಳಲ್ಲಿ ಅತಿ ದೊಡ್ಡದು.

ಭೂಕಂಪದ ಕೇಂದ್ರಬಿಂದು ಸುಮಾತ್ರಾ ದ್ವೀಪದಿಂದ ಸುಮಾರು ೧೦೦ ಮೈಲಿ ಪಶ್ಚಿಮದಲ್ಲಿದ್ದು ಸಮುದ್ರಮಟ್ಟದಿಂದ ೬.೨ ಮೈಲಿ ಕೆಳಗಿತ್ತು. ಭೂಕಂಪವನ್ನು ದೂರದೇಶಗಳಲ್ಲಿಯೂ ಗುರುತಿಸಲಾಗುವಷ್ಟು ಬಲವಾಗಿತ್ತು (ಉದಾ: ಭಾರತ, ಶ್ರೀಲಂಕಾ).

ಹಾನಿ

ಹಾನಿಗೊಳಗಾದವರ ಸಂಖ್ಯೆ
ಅನುಕ್ರಮದೇಶಮೃತಪಟ್ಟವರ ಸಂಖ್ಯೆಗಾಯಕ್ಕೊಳಗಾದವರುನಾಪತ್ತೆಯಾದವರು
ಶ್ರೀಲಂಕಾ೨೧,೭೧೫೪,೦೦೦+೨೦,೦೦೦+
ಭಾರತ೧೨,೪೦೦--೩೦,೦೦೦+
ಇಂಡೊನೇಷ್ಯಾ೨೭,೦೦೦೧,೦೦,೦೦೦+ಸಾವಿರಾರು
ಥೈಲೆಂಡ್೧,೫೦೦+೮,೪೦೦೧,೨೦೦
ಸೊಮಾಲಿಯಾ೧೦೦----
ಮ್ಯಾನ್‌ಮಾರ್೯೦----
ಮಲೇಷ್ಯಾ೬೫೧೮೩೨೬
ಮಾಲ್ಡೀವ್ಸ್೫೨--೭೬
ಬಾಂಗ್ಲಾದೇಶ----
೧೦ಕೀನ್ಯಾ----
ಒಟ್ಟು೬೩,೦೦೦+೧,೦೦,೦೦೦+೫೦,೦೦೦+
ಮಾಲ್ಡೀವ್ಸ್ ನ ರಾಜಧಾನಿ ಮಾಲೆಯಲ್ಲಿ ಸುನಾಮಿ ಅಲೆಗಳಿ೦ದ ಹಾನಿ
ಭಾರತದ ಚೆನ್ನೈ ನಗರದಲ್ಲಿ ಅಲೆಗಳಿ೦ದ ಕಾರುಗಳು ರಸ್ತೆಯಿ೦ದ ತಳ್ಳಲ್ಪಟ್ಟವು