ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್

ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್, ಸ್ಟ್ರೆಪ್ಟೊಕಾಕಲ್ ಟಾನ್ಸಿಲೈಟಿಸ್, ಅಥವಾ ಸ್ಟ್ರೆಪ್ಟೊಕಾಕಲ್ ಗಂಟಲು ನೋವು (ಆಡುಮಾತಿನಲ್ಲಿ “ಸ್ಟ್ರೆಪ್ ಗಂಟಲು ಸೋಂಕು” ಎಂದು ಕರೆಯಲಾಗುವ), ಗುಂಪು ಎ ಸ್ಟ್ರೆಪ್ಟೊಕಾಕಲ್ ಸೋಂಕಿನಿಂದ ಉಂಟಾಗುವಂತಹ ಒಂದು ವಿಧದ ಫಾರಿಂಜೈಟಿಸ್.[೧] ಟಾನ್ಸಿಲ್‍ಗಳು ಮತ್ತು ಸಂಭವನೀಯವಾಗಿ ಗಂಟಲಗೂಡು ಇವುಗಳನ್ನು ಒಳಗೊಂಡು ಇದು ಗಂಟಲಕುಳಿಯ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯ ರೋಗಲಕ್ಷಣಗಳುಜ್ವರ, ಸ್ಟ್ರೆಪ್ ಗಂಟಲು ಸೋಂಕು, ಮತ್ತು ಹಿಗ್ಗಿದ ದುಗ್ಧಗ್ರಂಥಿಗಳನ್ನು ಒಳಗೊಳ್ಳುತ್ತವೆ. ಮಕ್ಕಳಲ್ಲಿ [೨] ಕಂಡುಬರುವ ಗಂಟಲು ನೋವಿನ 37%ಕ್ಕೆ ಮತ್ತು ವಯಸ್ಕರಲ್ಲಿ [೩] ಕಂಡುಬರುವ ಗಂಟಲು ಬೇನೆಯ 5-15%ಕ್ಕೆ ಇದು ಕಾರಣವಾಗಿದೆ.

Streptococcal pharyngitis
Classification and external resources
A set of large tonsils in the back of the throat covered in white exudate
A culture positive case of streptococcal pharyngitis with typical tonsillar exudate in a 16 year old.
ICD-10J02.0
ICD-9034.0
DiseasesDB12507
MedlinePlus000639
eMedicinemed/1811

ಸ್ಟ್ರೆಪ್ ಗಂಟಲು ಸೋಂಕು, ಒಂದು ಹರಡುವ ಸೋಂಕು. ಇದು ಸೋಂಕು ತಗಲಿದ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಿಂದ ಹರಡುತ್ತದೆ. ಗಂಟಲು ಸಂಸ್ಕರಣೆ (ತ್ರೋಟ್ ಕಲ್ಚರ್) ಫಲಿತಾಂಶವನ್ನು ಆಧರಿಸಿ ನಿಖರವಾಗಿ ರೋಗಪತ್ತೆಯನ್ನು ಮಾಡಲಾಗುತ್ತದೆ. ಆದರೆ, ಯಾವಾಗಲೂ ಇದರ ಅಗತ್ಯವಿರದು ಏಕೆಂದರೆ ಚಿಕಿತ್ಸೆಯನ್ನು ರೋಗಲಕ್ಷಣಗಳನ್ನು ಆಧರಿಸಿ ಕೂಡ ಮಾಡಬಹುದು. ಸಂಭವನೀಯತೆ ಹೆಚ್ಚಿರುವ ಅಥವಾ ದೃಢೀಕೃತ ಸಂದರ್ಭಗಳಲ್ಲಿ, ಸಂಕೀರ್ಣತೆಗಳನ್ನು ತಡೆಯುವಲ್ಲಿ ಮತ್ತು ಶೀಘ್ರ ಆರೋಗ್ಯಪೂರ್ಣ ಸ್ಥಿತಿಗೆ ಮರಳುವಲ್ಲಿ ಆಂಟಿಬಯಾಟಿಕ್ಸ್ ಪ್ರಯೋಜನಕ್ಕೆ ಬರುತ್ತವೆ.[೪]

ಚಿಹ್ನೆಗಳು ಮತ್ತು ರೋಗಲಕ್ಷಣಗಳು

ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್‍ನ ಸಾಮಾನ್ಯ ರೋಗಲಕ್ಷಣಗಳು ಗಂಟಲು ನೋವು, 38 °C (100 °F) ಹೆಚ್ಚಿನ ಜ್ವರ, ಟಾನ್ಸಿಲ್‍ಗಳಿಂದ ಸ್ರವಿಸುವಿಕೆ ಟಾನ್ಸಿಲ್‍ಗಳ ಮೇಲೆ (ಕೀವು), ಮತ್ತು ದೊಡ್ಡದಾದ ಗ್ರೀವದ ದುಗ್ಧ ಗ್ರಂಥಿಗಳು ಆಗಿವೆ.[೪]

ಇತರ ರೋಗಲಕ್ಷಣಗಳು ಇವುಗಳನ್ನು ಒಳಗೊಳ್ಳುತ್ತವೆ: ತಲೆ ನೋವು, ವಾಕರಿಕೆ ಮತ್ತು ವಾಂತಿ, ಕಿಬ್ಬೊಟ್ಟೆ ನೋವು,[೫], ಸ್ನಾಯು ನೋವು,[೬], ಅಥವಾ ಸ್ಕಾರ್ಲಾಟಿನಿಫಾರ್ಮ್ ದದ್ದು (ಮೈಮೇಲೆ ಚಿಕ್ಕಚಿಕ್ಕ ಕೆಂಪು ಗುಳ್ಳೆಗಳು) ಅಥವಾಅಂಗುಳಿನಲ್ಲಿ ಹುಣ್ಣುಗಳು, ಎರಡನೆಯದು ಸಾಮಾನ್ಯವಾಗಿ ಕಂಡುಬರದು ಆದರೆ ಬಹು ನಿರ್ದಿಷ್ಟ ಪತ್ತೆ.[೪] ಪರಿಪಾಕ ಅವಧಿ ಮತ್ತು ಸ್ಟ್ರೆಪ್ ಗಂಟಲು ಸೋಂಕಿನ ರೋಗಲಕ್ಷಣಗಳ ಆರಂಭದ ನಡುವಿನ ಅವಧಿ ಸಂಪರ್ಕ-ನಂತರ ಒಂದರಿಂದ ಮೂರು ದಿನಗಳಾಗಿರುತ್ತವೆ.[೪] ಜ್ವರ ಇಲ್ಲದ ಪಕ್ಷದಲ್ಲಿ, ಕಣ್ಣು ಕೆಂಪಾಗುವಿಕೆ, ಗಂಟಲುಕಟ್ಟುವಿಕೆ, ಮೂಗಿನಿಂದ ಸುರಿಯುವಿಕೆ, ಅಥವಾ ಬಾಯಿಹುಣ್ಣುಗಳು ಇದ್ದರೆ ಸ್ಟ್ರೆಪ್ ಗಂಟಲು ಸೋಂಕಾಗಿರುವ ಸಾಧ್ಯತೆ ಇಲ್ಲ..[೩]

ಕಾರಣ

ಗಂಟಲು ಕೆರೆತಕ್ಕೆ ಕಾರಣ ಗುಂಪು ಎ ಬೀಟಾ-ಹೆಮೋಲಿಟಿಕ್ ಸ್ಟ್ರೆಪ್ಟೊಕಾಕಸ್ (ಜಿಎಎಸ್).[೭] ಗುಂಪು ಎ ಅಲ್ಲದ ಬೀಟಾ-ಹೆಮೋಲಿಟಿಕ್ ಸ್ಟ್ರೆಪ್ಟೊಕಾಕಿ ಮತ್ತುಫ್ಯುಸೋಬ್ಯಾಕ್ಟೀರಿಯಮ್ ನಂತಹ ಇತರ ಬ್ಯಾಕ್ಟೀರಿಯಾಗಳು ಸಹ ಫಾರಿಂಜೈಟಿಸ್ ಉಂಟು ಮಾಡಬಹುದು.[೪][೬] ಒಬ್ಬ ಸೋಂಕಿತ ವ್ಯಕ್ತಿಯೊಂದಿಗೆ ನೇರ ಮತ್ತು ನಿಕಟ ಸಂಪರ್ಕದಿಂದ ಇದು ಹರಡುತ್ತದೆ ಹೀಗಾಗಿ ಮಿಲಿಟರಿ ಮತ್ತು ಶಾಲೆಗಳಲ್ಲಿ ಕಂಡುಬರುವ ಗುಂಪುಗಟ್ಟುವಿಕೆಯು ಹರಡುವಿಕೆಯ ಗತಿಯನ್ನು ಹೆಚ್ಚಿಸುತ್ತದೆ.[೬][೮] ಧೂಳಿನಲ್ಲಿರುವ ಒಣ ಬ್ಯಾಕ್ಟೀರಿಯಾ ಸೋಂಕನ್ನು ಉಂಟು ಮಾಡುವುದಿಲ್ಲ ಎಂಬುದನ್ನು ಗಮನಿಸಲಾಗಿದೆ, ಆದರೂ ಹಲ್ಲುಜ್ಜುವ ಬ್ರಶ್‍ಗಳು ಅಥವಾ ಅಂಥದೇ ವಸ್ತುಗಳ ಮೇಲಿನ ಒದ್ದೆ ಬ್ಯಾಕ್ಟೀರಿಯಾ ಹದಿನೈದು ದಿನಗಳವರೆಗೆ ಇರುವುದು ಮುಂದುವರೆಯಬಹುದು.[೬] ಅಪರೂಪಕ್ಕೆ, ಕಲುಷಿತ ಆಹಾರವು ರೋಗದಲ್ಲಿ ಫಲಿತವಾಗಬಹುದು.[೬] ಚಿಹ್ನೆಗಳು ಅಥವಾ ರೋಗಲಕ್ಷಣಗಳು ಇಲ್ಲದ ಮಕ್ಕಳ ಪೈಕಿ 12% ತಮ್ಮ ಗಂಟಲಕುಳಿಯಲ್ಲಿ ಜಿಎಎಸ್ ಅನ್ನು ಒಯ್ಯುತ್ತಿರುತ್ತಾರೆ.[೨]

ರೋಗಪತ್ತೆ

Modified Centor score
PointsProbability of StrepManagement
1 or less<10%ಆಂಟಿಬಯಾಟಿಕ್ ಅಥವಾ ಕಲ್ಚರ್ ಅಗತ್ಯವಿಲ್ಲ
211–17%ಕಲ್ಚರ್ ಅನ್ನು ಆಧರಿಸಿದ ಆಂಟಿಬಯಾಟಿಕ್ ಅಥವಾ ಆರ್‍ಎಡಿಟಿ
328–35%
4 or 552%ಸಂದರ್ಭಸೂಕ್ತ (ಎಂಪಿರಿಕ್) ಆಂಟಿಬಯಾಟಿಕ್‍ಗಳು

ಫಾರಿಂಜೈಟಿಸ್‍ನೊಂದಿಗಿನ ಜನರ ನಿಭಾವಣೆಯನ್ನು ನಿರ್ಧರಿಸುವಲ್ಲಿ ಪರಿವರ್ತಿತ ಸೆಂಟೊರ್ ಮಾನದಂಡ ಬಳಸಬಹುದು. 5 ಕ್ಲಿನಿಕಲ್ ಮಾನದಂಡದ ಆಧಾರಗಳು, ಸ್ಟ್ರೆಪ್ಟೊಕಾಕಲ್ ಸೋಂಕಿನ ಸಾಧ್ಯತೆಯನ್ನು ಸೂಚಿಸುತ್ತವೆ.[೪]

ಪ್ರತಿಯೊಂದು ಮಾನದಂಡಕ್ಕೂ ಒಂದು ಅಂಕವನ್ನು ನೀಡಲಾಗುತ್ತದೆ:[೪]

  • ಕೆಮ್ಮು ಇಲ್ಲದಿರುವುದು
  • ‘ಊದಿದ ಹಾಗೂ ಮೃದುವಾದ ಗ್ರೀವದ ದುಗ್ಧ ಗ್ರಂಥಿಗಳು
  • ತಾಪಮಾನ >38.0 °C (100.4 °F)
  • ಟಾನ್ಸಿಲ್‍ಗಳ ಸ್ರಾವ ಅಥವಾ ಊತ
  • 15ಕ್ಕಿಂತ ಕಡಿಮೆ ವಯಸ್ಸು (ವಯಸ್ಸು >44 ಆಗಿದ್ದರೆ ಒಂದು ಅಂಕವನ್ನು ಕಳೆಯಲಾಗುತ್ತದೆ)

ಆದರೂ ಅಮೇರಿಕಾದ ಸೋಂಕು ರೋಗಗಳ ಸೊಸೈಟಿ ಸಂದರ್ಭಸೂಕ್ತ ಚಿಕಿತ್ಸೆಯ ವಿರುದ್ಧವಾಗಿ ಮತ್ತು ಸಕಾರಾತ್ಮಕ ಪರೀಕ್ಷೆಯ ನಂತರ ಮಾತ್ರ ಆಂಟಿಬಯಾಟಿಕ್‍ಗಳನ್ನು ಪರಿಗಣಿಸುವುದನ್ನು ಶಿಫಾರಸು ಮಾಡುತ್ತದೆ.[೩] ಗುಂಪು ಎ ಸ್ಟ್ರೆಪ್ ಮತ್ತು ಸಂಧಿವಾತ ಜ್ವರ ಎರಡೂ ಅಪರೂಪವಾದ್ದರಿಂದ ರೋಗದೊಂದಿಗಿನ ಒಬ್ಬ ಒಡಹುಟ್ಟಿದವರನ್ನು ಹೊಂದಿರುವ ಸಂದರ್ಭವನ್ನು ಹೊರತುಪಡಿಸಿ, ಮೂರಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪರೀಕ್ಷಣೆ ಅಗತ್ಯವಿಲ್ಲ.[೩]

ಪ್ರಯೋಗಾಲಯ ಪರೀಕ್ಷಣೆ

90–95%ದ ಸಂವೇದನಾಶೀಲತೆಯೊಂದಿಗಿನ ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್ ರೋಗಪತ್ತೆಗೆ [೯].[೪] ಒಂದು ಗಂಟಲು ಸಂಸ್ಕರಣೆ (ತ್ರೋಟ್ ಕಲ್ಚರ್) ಗೋಲ್ಡ್ ಸ್ಟಾಂಡರ್ಡ್ (ಪರೀಕ್ಷೆ)ಗೋಲ್ಡ್ ಸ್ಟಾಂಡರ್ಡ್ ಆಗಿದೆ. ಒಂದು ಕ್ಷಿಪ್ರ ಸ್ಟ್ರೆಪ್ ಟೆಸ್ಟ್ (ರ್ಯಾಪಿಡ್ ಆಂಟಿಜನ್ ಡಿಟೆಕ್ಷನ್ ಟೆಸ್ಟಿಂಗ್ ಅಥವಾ ಆರ್‍ಎ‍ಡಿ‍ಟಿ) ಅನ್ನು ಸಹ ಬಳಸಬಹುದು. ರ್ಯಾಪಿಡ್ ಸ್ಟ್ರೆಪ್ ಟೆಸ್ಟ್ ಬಲುಬೇಗನೇ ಆದರೂ, ಇದು ಕಡಿಮೆ ಸಂವೇದನಾಶೀಲತೆ (ಪರೀಕ್ಷೆಗಳು)ಸಂವೇದನಾಶೀಲತೆ (70%) ಹೊಂದಿದೆ ಮತ್ತು ಅಂಕಿಅಂಶಗಳ ಪ್ರಕಾರ ಗಂಟಲು ಸಂಸ್ಕರಣೆಗೆ ನಿರ್ದಿಷ್ಟತೆ (98%) ಸಮಾನವಾಗಿದೆ.[೪]

ರೋಗಪತ್ತೆ ಸಂದೇಹಾಸ್ಪದವಾಗಿರುವಂತಹ ಸಂದರ್ಭಗಳಲ್ಲಿ ರೋಗಲಕ್ಷಣಗಳ ಸಹಿತ ಒಂದು ಸಕಾರಾತ್ಮಕ ತ್ರೋಟ್ ಕಲ್ಚರ್ ಅಥವಾ ಆರ್‍ಎಡಿಟಿ, ಒಂದು ಸಕಾರಾತ್ಮಕ ರೋಗಪತ್ತೆಯನ್ನು ಸ್ಥಾಪಿಸುತ್ತದೆ.[೧೦] ವಯಸ್ಕರಲ್ಲಿ ರೋಗಪತ್ತೆಯನ್ನು ತಳ್ಳಿಹಾಕಲು ಒಂದು ನಕಾರಾತ್ಮಕ ಆರ್‍ಎಡಿಟಿ ಸಾಕು, ಆದರೆ ಮಕ್ಕಳಲ್ಲಿ ಫಲಿತಾಂಶವನ್ನು ದೃಢೀಕರಿಸಲು ಒಂದು ತ್ರೋಟ್ ಕಲ್ಚರ್ ಅನ್ನು ಶಿಫಾರಸು ಮಾಡಲಾಗುತ್ತದೆ.[೩] ರೋಗಲಕ್ಷಣವಿಲ್ಲದ ವ್ಯಕ್ತಿಗಳನ್ನು ತ್ರೋಟ್ ಕಲ್ಚರ್ ಅಥವಾ ಆರ್‍ಎಡಿಟಿಯೊಂದಿಗೆ ಸುಮ್ಮನೆ ಪರೀಕ್ಷೆ ಮಾಡಬಾರದು ಏಕೆಂದರೆ ಸ್ವಲ್ಪ ಶೇಕಡಾವಾರು ಜನಸಂಖ್ಯೆ ಯಾವುದೇ ಹಾನಿಕಾರಕ ಫಲಿತಾಂಶ ನೀಡದೆ ಸ್ಟ್ರೆಪ್ಟೊಕಾಕಲ್ ಬ್ಯಾಕ್ಟೀರಿಯಾವನ್ನು ತಮ್ಮ ಗಂಟಲಿನಲ್ಲಿ ಯಾವಾಗಲೂ “ಒಯ್ಯುತ್ತಾರೆ”.[೧೦]

Differential diagnosis

ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್ ರೋಗಲಕ್ಷಣಗಳು ಮತ್ತು ಇತರ ಸ್ಥಿತಿಗಳು ಒಂದರ ಮೇಲೆ ಒಂದು ಕಂಡುಬರುವುದರಿಂದ ಕ್ಲಿನಿಕಲ್ ಆಗಿ ರೋಗಪತ್ತೆ ಮಾಡುವುದು ಕಷ್ಟವಾಗಬಹುದು.[೪] ಕೆಮ್ಮು, ಮೂಗಿನಿಂದ ಸುರಿಯುವಿಕೆ, ಅತಿಸಾರ, ಮತ್ತು ಕೆಂಪಾದ, ಕಿರಿಕಿರಿ ಹೊಂದಿರುವ ಕಣ್ಣುಗಳು ಹೊಂದಿದ್ದು ಜೊತೆಯಲ್ಲಿ ಜ್ವರ ಮತ್ತು ಗಂಟಲು ನೋವೂ ಇದ್ದರೆ ಅದು ಸ್ಟೆಪ್ ಗಂಟಲು ಸೋಂಕಿಗಿಂತ ವೈರಲ್ ಗಂಟಲು ನೋವನ್ನು ಸೂಚಿಸುತ್ತದೆ.[೪]ಸೋಂಕಾಗಬಲ್ಲ ಮಾನೊನ್ಯೂಕ್ಲಿಯಾಸಿಸ್ ಆದಾಗಲೂ ಸಹ ಗಂಟಲು ನೋವಿನ ಜೊತೆ ಗುರುತಿಸಬಹುದಾದಷ್ಟು ದೊಡ್ಡದಾದ ದುಗ್ಧಗ್ರಂಥಿಗಳು, ಜ್ವರ ಮತ್ತು ದೊಡ್ಡದಾದ ಟಾನ್ಸಿಲ್ ಗಳ ಪ್ರಸ್ತುತಿ ಇರಬಹುದು.[೧೧]

ನಿವಾರಣೆ

(ಒಂದು ವರ್ಷಕ್ಕೆ ಮೂರಕ್ಕಿಂತ ಹೆಚ್ಚು ಬಾರಿ) ಆಗಾಗ ಗಂಟಲು ಸೋಂಕುಗಳನ್ನು ಹೊಂದುವವರಿಗೆ ಟಾನ್ಸಿಲೆಕ್ಟಮಿ ಒಂದು ಸೂಕ್ತ ನಿವಾರಣಾ ಉಪಾಯವಾಗಬಹುದು. .[೧೨] ಇಷ್ಟೆಲ್ಲಾ ಆದರೂ ಪ್ರಯೋಜನ ಕಡಿಮೆಯೇ ಹಾಗು ಯಾವುದೇ ಕ್ರಮ ತೆಗೆದುಕೊಂಡರೂ ಸಮಯ ಕಳೆದಂತೆ ಘಟನೆಗಳು ಕಡಿಮೆಯಾಗುತ್ತವೆ.[೧೩][೧೪] GAS ಸಕಾರಾತ್ಮಕ ಪರೀಕ್ಷೆ ಫಲಿತಾಂಶದೊಂದಿಗೆ ಪುನರಾವರ್ತಿತ ಫಾರಿಂಜೈಟಿಸ್ ಘಟನೆಗಳೊಂದಿಗಿನವರು, ಪುನರಾವರ್ತಿತವಾಗಿ ವೈರಲ್ ಸೋಂಕುಗಳನ್ನು ಪಡೆಯುತ್ತಿರುವ, ದೀರ್ಘಕಾಲದಿಂದ GAS ಒಯ್ಯುತ್ತಿರುವ ವ್ಯಕ್ತಿಯೂ ಆಗಿರಬಹುದು.[೩] ಒಡ್ಡಲ್ಪಟ್ಟ ಆದರೆ ರೋಗಲಕ್ಷಣಗಳನ್ನು ಹೊಂದಿರದ ಜನರಿಗೆ ಚಿಕಿತ್ಸೆ ನೀಡುವುದನ್ನು ಶಿಫಾರಸು ಮಾಡಲಾಗುವುದಿಲ್ಲ.[೩] ಹರಡುವಿಕೆಯ ಅಪಾಯ ಕಡಿಮೆ ಇದ್ದು ಸಂಕೀರ್ಣತೆಗಳ ಮಟ್ಟ ಕಡಿಮೆ ಇರುತ್ತದಾದ್ದರಿಂದ, GAS ಒಯ್ಯುತ್ತ್ತಿರುವ ಜನರಿಗೆ ಚಿಕಿತ್ಸೆ ನೀಡುವುದನ್ನು ಶಿಫಾರಸು ಮಾಡಲಾಗುವುದಿಲ್ಲ.[೩]

ಚಿಕಿತ್ಸೆ

ಚಿಕಿತ್ಸೆಯಿಲ್ಲದ ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್ ಸಾಮಾನ್ಯವಾಗಿ ಕೆಲವು ದಿನಗಳಲ್ಲಿ ಶಮನಗೊಳ್ಳುತ್ತದೆ.[೪] ಆಂಟಿಬಯಾಟಿಕ್ ಗಳೊಂದಿಗಿನ ಚಿಕಿತ್ಸೆಯು ತೀವ್ರ ಅಸೌಖ್ಯದ ಸಮಯಾವಧಿಯನ್ನು ಸುಮಾರು 16 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.[೪] ಸಂಧಿವಾತ ಜ್ವರ ಮತ್ತು ಗಂಟಲಕುಳಿಯ ಹಿಂಭಾಗದ ಕುರು (ರಿಟ್ರೊಫಾರಿಂಜಿಯಲ್ ಕುರು)ಗಳಂತಹ ಸಂಕೀರ್ಣತೆಯ ಅಪಾಯಗಳನ್ನು ಕಡಿಮೆ ಮಾಡುವುದೇ ಆಂಟಿಬಯಾಟಿಕ್ ಗಳೊಂದಿಗಿನ ಚಿಕಿತ್ಸೆಯ ಮೂಲ ಕಾರಣ [೪] ಮತ್ತು ರೋಗಲಕ್ಷಣಗಳು ಆರಂಭವಾದ 9 ದಿನಗಳ ಒಳಗೆ ನೀಡಲಾದರೆ ಅವು ಪರಿಣಾಮಕಾರಿಯಾಗುತ್ತವೆ.[೭]

ನೋವು ಶಮನಕಾರಿಗಳು

ಸ್ಟೆರಾಯ್ದೇತರ ಉರಿಯೂತ-ನಿರೋಧಕ ಔಷಧಗಳು (NSAIDಗಳು) ಮತ್ತು ಪ್ಯಾರಾಸೆಟಮಾಲ್ (ಅಸೆಟಮಿನೊಫೆನ್) ಗಳಂತಹ ನೋವು ಶಮನಕಾರಿಗಳು ಸ್ಟ್ರೆಪ್ ಗಂಟಲು ಸೋಂಕಿನೊಂದಿಗೆ ಸಂಬಂಧಿಸಿದ ನೋವಿನ ನಿರ್ವಹಣೆಯಲ್ಲಿ ಬಹಳಷ್ಟು ಸಹಾಯ ಮಾಡುತ್ತವೆ.[೧೫] ವಿಸ್ಕೌಸ್ ಲಿಡೊಕೈನ್ ಸಹ ಪ್ರಯೋಜನಕಾರಿಯಾಗಬಹುದು.[೧೬] ನೋವನ್ನು ಕಡಿಮೆ ಮಾಡುವಲ್ಲಿ ಸ್ಟೆರಾಯ್ಡ್‍ಗಳು ಸಹಾಯ ಮಾಡಿದರೂ[೭][೧೭] ಸಾಮಾನ್ಯವಾಗಿ ಅವುಗಳನ್ನು ಶಿಫಾರಸು ಮಾಡಲಾಗುವುದಿಲ್ಲ.[೩] ವಯಸ್ಕರು ಆಸ್ಪಿರಿನ್ ಬಳಸಬಹುದು ಆದರೆ ರೇಯರ ಸಿಂಡ್ರೋಮ್ ಅಪಾಯದಿಂದ ಇದನ್ನು ಮಕ್ಕಳಿಗೆ ಶಿಫಾರಸು ಮಾಡಲಾಗುವುದಿಲ್ಲ.[೭]

ಆಂಟಿಬಯಾಟಿಕ್‍ಗಳು

ಸುರಕ್ಷತೆ, ವೆಚ್ಚ ಮತ್ತು ಪರಿಣಾಮಕಾರಿತ್ವದ ಕಾರಣ ಯುನೈಟೆಡ್ ಸ್ಟೇಟ್ಸ್‍ನಲ್ಲಿ ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್‍ಗಾಗಿ ಪೆನ್ಸಿಲಿನ್ V ಆಯ್ಕೆಯ ಆಂಟಿಬಯಾಟಿಕ್ ಆಗಿದೆ.[೪] ಯೂರೋಪ್‍ನಲ್ಲಿ ಅಮಾಕ್ಸಿಸಿಲಿನ್ ಗೆ ಆದ್ಯತೆ ನೀಡಲಾಗುತ್ತದೆ.[೧೮] ಸಂಧಿವಾತ ಜ್ವರದ ಅಪಾಯ ಹೆಚ್ಚಾಗಿರುವಂತಹ ಭಾರತದಲ್ಲಿ, ಚಿಕಿತ್ಸೆಗಾಗಿ ಮೊದಲ ಆಯ್ಕೆ, ಅಂತರ್ಸ್ನಾಯುಸಂಬಂಧಿತ ಬೆನ್ಜಥೈನ್ ಪೆನ್ಸಿಲಿನ್ ಜಿ ಆಗಿದೆ.[೭] ಸರಾಸರಿ 3-5 ದಿನಗಳ ಸಮಯಾವಧಿಯ ರೋಗಲಕ್ಷಣಗಳನ್ನು ಸೂಕ್ತವಾದ ಆಂಟಿಬಯಾಟಿಕ್‍ಗಳು ಸುಮಾರು ಒಂದು ದಿನಕ್ಕೆ ಇಳಿಸುತ್ತವೆ, ಮತ್ತು ಹರಡುವಿಕೆಯನ್ನು ಸಹ ಕಡಿಮೆ ಮಾಡುತ್ತವೆ.[೧೦] ಮೂಲತಃ ಸಂಧಿವಾತ ಜ್ವರr ಮತ್ತು ಟಾನ್ಸಿಲ್ ಸುತ್ತಲಿನ ಕುರುನಂತಹ ಅಪರೂಪದ ಸಂಕೀರ್ಣತೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅವುಗಳನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ.[೧೯] ಆಂಟಿಬಯಾಟಿಕ್‍ಗಳ ಪರ ಮಾತನಾಡುವ ವಾದವನ್ನು ಸಂಭವನೀಯ ಅಡ್ಡಪರಿಣಾಮಗಳನ್ನು ಪರಿಗಣಿಸುವುದರೊಂದಿಗೆ ಸರಿತೂಗಿಸಬೇಕಾಗುತ್ತದೆ,[೬] ಮತ್ತು ಔಷಧೋಪಚಾರಕ್ಕೆ ಪ್ರತಿಕೂಲ ಪ್ರತಿಕ್ರಿಯೆಗಳನ್ನು ಹೊಂದಿರುವಂತಹ ಆರೋಗ್ಯವಂತ ವಯಸ್ಕರಿಗೆ ಯಾವುದೇ ಆಂಟಿಮೈಕ್ರೋಬಿಯಲ್ (ಸೂಕ್ಷ್ಮಜೀವಿ-ನಿರೋಧಕ) ಚಿಕಿತ್ಸೆ ನೀಡಬಾರದು ಎಂಬ ಸಲಹೆ ತಾರ್ಕಿಕವಾದುದು.[೧೯] ಸ್ಟ್ರೆಪ್ ಗಂಟಲು ಸೋಂಕಿನ ಪ್ರಸ್ತುತಿಯ ಮಟ್ಟದ ದೃಷ್ಟಿಯಿಂದ ಎಷ್ಟು ನಿರೀಕ್ಷಿಸಬಹುದೋ ಆ ನಿರೀಕ್ಷೆಗಿಂತ ಹೆಚ್ಚು ಆಂಟಿನಯಾಟಿಕ್‍ಗಳ ಸೇವನೆಯ ಸಲಹೆ ನೀಡಲಾಗುತ್ತಿದೆ.[೨೦] ಎರಿತ್ರೋಮೈಸಿನ್ ಮತ್ತು ಇತರಮ್ಯಾಕ್ರೊಲೈಡ್‍ಗಳು ಅಥವಾ ಕ್ಲಿಂಡಾಮೈಸಿನ್ ಅನ್ನು ತೀವ್ರ ಪೆನ್ಸಿಲಿನ್ ಅಲರ್ಜಿಗಳು ಹೊಂದಿರುವ ಜನರಿಗೆ ಶಿಫಾರಸು ಮಾಡಲಾಗುತ್ತದೆ.[೩][೪] ಮೊದಲಿಗೆ, ಅಲರ್ಜಿ ತೀವ್ರತೆ ಕಡಿಮೆ ಇರುವವರು ಸಾಮಾನ್ಯ ಸೆಫಲೊಸ್ಪಾರಿನ್ಸ್ ಅನ್ನು ಬಳಸಬಹುದು.[೪] ಸ್ಟ್ರೆಪ್ಟೊಕಾಕಲ್ ಸೋಂಕುಗಳು ತೀವ್ರ ಗ್ಲೋಮೆರುಲೊನೆಫ್ರೈಟಿಸ್ಗೆ ಸಹ ಎಡೆ ಮಾಡಿಕೊಡಬಹುದು, ಹಾಗು ಈ ಅಡ್ಡಪರಿಣಾಮದ ಉಂಟಾಗುವಿಕೆಯು ಆಂಟಿಬಯಾಟಿಕ್‍ಗಳ ಬಳಕೆಯಿಂದ ಕಡಿಮೆಯಾಗುವುದಿಲ್ಲ.[೭]

ಮುಂಗಾಣುವಿಕೆ

ಸ್ಟ್ರೆಪ್ ಗಂಟಲು ಸೋಂಕಿನ ರೋಗಲಕ್ಷಣಗಳು ಸಾಮಾನ್ಯವಾಗಿ ಮೂರರಿಂದ ಐದು ದಿನಗಳ ಒಳಗೆ ಚಿಕಿತ್ಸೆಯೊಂದಿಗೆ ಅಥವಾ ಚಿಕಿತ್ಸೆ ಇಲ್ಲದೆ ಗುಣವಾಗುತ್ತವೆ.[೧೦] ಆಂಟಿಬಯಾಟಿಕ್‍ಗಳೊಂದಿಗೆ ಚಿಕಿತ್ಸೆಯು, ಸಂಕೀರ್ಣತೆಗಳ ಮತ್ತು ಹರಡುವಿಕೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ; ಆಂಟಿಬಯಾಟಿಕ್‍ಗಳ ನಿರ್ವಹಣೆಯಾದ 24 ಗಂಟೆಗಳ ನಂತರ ಮಕ್ಕಳು ಶಾಲೆಗೆ ತೆರಳಬಹುದು.[೪] ವಯಸ್ಕರಲ್ಲಿ ಸಂಕೀರ್ಣತೆಗಳ ಅಪಾಯ ಕಡಿಮೆ.[೩] ಅಭಿವೃದ್ಧಿ ಹೊಂದಿದ ಬಹಳಷ್ಟು ರಾಷ್ಟ್ರಗಳಲ್ಲಿನ ಮಕ್ಕಳಲ್ಲಿ ತೀವ್ರ ಸಂಧಿವಾತ ಜ್ವರ ಅಪರೂಪ ಆದರೆ ಭಾರತ, ಸಬ್-ಸಹಾರಾ ಆಫ್ರಿಕ ಮತ್ತು ಆಸ್ಟ್ರೇಲಿಯಾದ ಕೆಲಭಾಗಗಳಲ್ಲಿ ಹೊರಗಿನ ಕಾರಣಗಳಿಂದ ಉಂಟಾದ ಹೃದಯ ರೋಗಕ್ಕೆ ಇದು ಮುಂಚೂಣಿಯಲ್ಲಿರುವ ಕಾರಣವಾಗಿದೆ.[೩]

ಸ್ಟ್ರೆಪ್ಟೊಕಾಕಲ್ ಗಂಟಲು ಸೋಂಕುಗಳಿಂದ ಉಂಟಾಗುವ ಸಂಕೀರ್ಣತೆಗಳು ಒಳಗೊಳ್ಳುತ್ತವೆ:

ಯುನೈಟೆಡ್ ಸ್ಟೇಟ್ಸ್ ನಲ್ಲಿನ ಮಕ್ಕಳಿಗಾಗಿ ಈ ರೋಗದ ಆರ್ಥಿಕ ವೆಚ್ಚ ~$350 ಮಿಲಿಯನ್.[೩]

ಸೋಂಕುಶಾಸ್ತ್ರ

ಫಾರಿಂಜೈಟಿಸ್, ಯುನೈಟೆಡ್ ಸ್ಟೇಟ್ಸ್‍ನಲ್ಲಿ ಸ್ಟ್ರೆಪ್ಟೊಕಾಕಲ್ ಫಾರಿಂಜೈಟಿಸ್ ಯಾವ ವರ್ಗೀಕರಣಕ್ಕೆ ಸೇರಿದೆಯೋ ಆ ವಿಶಾಲ ಶ್ರೇಣಿಯನ್ನು, ವರ್ಷಕ್ಕೆ 11 ಮಿಲಿಯನ್ ಜನರಲ್ಲಿ ರೋಗಪತ್ತೆ ಮಾಡಲಾಗುತ್ತದೆ.[೪] ಬಹಳಷ್ಟು ಕೇಸ್‍ಗಳು ವೈರಲ್ ಆಗಿದ್ದರೂ, ಫಾರಿಂಜೈಟಿಸ್ ಕೇಸ್‍ಗಳ ಪೈಕಿ ಮಕ್ಕಳಲ್ಲಿ 15–30% ಮತ್ತು ವಯಸ್ಕರಲ್ಲಿ 15–30% ಜನರಿಗೆ ಒಂದು ಬೀಟಾ-ಹೆಮೊಲೇಟಿಕ್ ಸ್ಟ್ರೆಪ್ಟೊಕಾಕಸ್ ಕಾರಣವಾಗಿರುತ್ತದೆ.[೪] ಸಾಮಾನ್ಯವಾಗಿ ಕೇಸ್‍ಗಳು ಚಳಿಗಾಲದ ಕೊನೆಯಲ್ಲಿ ಮತ್ತು ಆರಂಭದ ಬೇಸಿಗೆಯಲ್ಲಿ ಕಂಡುಬರುತ್ತವೆ.[೪]

ಪರಾಮರ್ಶೆಗಳು