ಹೈಡ್ರೊಕಾರ್ಬನ್ನುಗಳು

ಹೈಡ್ರೊಕಾರ್ಬನ್ನುಗಳು ಇವು ಅಚಕ್ರೀಯ (Aliphatic), ಚಕ್ರೀಯ (Alicyclic) ಅಥವಾ ಆರೊಮೆಟಿಕ್ (Aromatic) ವರ್ಗಗಳಿಗೆ ಸೇರಿರಬಹುದು. ಅಚಕ್ರೀಯ ಅಥವಾ ಚಕ್ರೀಯ ಸಂಯುಕ್ತಗಳಾಗಿರುವಾಗ ದ್ವಿಬಂಧ, ತ್ರಿಬಂಧಗಳನ್ನೊಡಗೊಂಡು ಅಪರ್ಯಾಪ್ತ (unsaturated) ಸಂಯುಕ್ತಗಳಾಗಿರಬಹುದು ಅಥವಾ ಏಕಬಂಧಗಳನ್ನು ಮಾತ್ರ ಒಳಗೊಂಡ ಪರ್ಯಾಪ್ತ (saturated) ಸಂಯುಕ್ತಗಳಾಗಿರಬಹುದು. ಆರೊಮ್ಯಾಟಿಕ್ ಸಂಯುಕ್ತಗಳು ಒಂದು ವಿಶಿಷ್ಟ ರೀತಿಯ ಅಪರ್ಯಾಪ್ತ ಸಂಯುಕ್ತಗಳು. ಪರ್ಯಾಪ್ತ ಸಂಯುಕ್ತಗಳು ಆಲ್ಕೇನು ಅಥವಾ ಸೈಕ್ಲೋಆಲ್ಕೇನುಗಳೆನ್ನಿಸಿ ಕೊಳ್ಳುತ್ತವೆ. ಅಪರ್ಯಾಪ್ತ ಸಂಯುಕ್ತಗಳು ದ್ವಿಬಂಧವುಳ್ಳವು (ಆರೊಮೆಟಿಕ್ ಸಂಯುಕ್ತಗಳನ್ನು ಬಿಟ್ಟು) ಆಲ್ಕೀನು ಅಥವಾ ಸೈಕ್ಲೋಆಲ್ಕೀನುಗಳು ಮತ್ತು ತ್ರಿಬಂಧವುಳ್ಳ ಸಂಯುಕ್ತಗಳು ಆಲ್ಕೈನುಗಳು.

ಮೀಥೇನ್ ಅಣುವಿನ ಬಾಲ್ ಮತ್ತು ಸ್ಟಿಕ್ ಮಾದರಿ, CH₄. ಮೀಥೇನ್ ಏಕಬಂಧಗಳನ್ನು ಹೊಂದಿರುವ ಆಲ್ಕೇನುಗಳೆಂದು ಕರೆಯಲ್ಪಡುವ ಸಜಾತೀಯ ಶ್ರೇಣಿಯ ಭಾಗವಾಗಿದೆ.

ಎಲ್ಲ ಬಗೆಯ ಹೈಡ್ರೊಕಾರ್ಬನ್ನುಗಳು ಪ್ರಕೃತಿಯಲ್ಲಿ ಪೆಟ್ರೋಲಿಯಂ ಎಣ್ಣೆಯಲ್ಲಿ ದೊರೆಯುತ್ತವೆ. ಆರೊಮೆಟಿಕ್ ಸಂಯುಕ್ತಗಳು ತಕ್ಕಮಟ್ಟಿನ ಪ್ರಮಾಣದಲ್ಲಿ ಕಲ್ಲಿದ್ದಲಿನಲ್ಲಿಯೂ ದೊರೆಯುತ್ತವೆ.

ಬಹು ದ್ವಿಬಂಧಗಳನ್ನುಳ್ಳ ಅನೇಕ ಸಂಯುಕ್ತಗಳು ಸ್ಕ್ವಾಲೀನ್, ಅಲ್ಲೀನ್, ಬ್ಯೂಟಡಯೀನ್, 2, 3 - ಡೈಮೀಥೈಲ್ ಬ್ಯೂಟಡಯೀನ್, ಐಸೋಪ್ರೀನ್, ಕ್ಲೋರೋಪ್ರೀನ್ ಮೊದಲಾದವು-ಕಾರ್ಬಾನು ಸಂಯುಕ್ತ ರಸಾಯನಶಾಸ್ತ್ರದಲ್ಲಿ ಹಲವು ಪ್ರಮುಖ ಸಂಯುಕ್ತಗಳು.

ಸರಳ ಹೈಡ್ರೋಕಾರ್ಬನ್ಗಳು ಮತ್ತು ಅವುಗಳ ವ್ಯತ್ಯಾಸಗಳು

ಕಾರ್ಬಾನು ಅಣುಗಳ ಸಂಖ್ಯೆಅಲ್ಕೇನು (ಏಕಬಂಧ)ಅಲ್ಕೀನು (ದ್ವಿಬಂಧ)ಅಲ್ಕೈನು (ತ್ರಿಬಂಧ)ಸೈಕ್ಲೊಅಲ್ಕೇನುಅಲ್ಕಡೀನ್
1ಮೀಥೇನ್----
2ಈಥೇನ್ಈಥೀನ್ (ಎಥಿಲೀನ್)ಈಥೈನ್ (ಅಸಿಟಿಲೀನ್)
3ಪ್ರೋಪೇನ್ಪ್ರೋಪೀನ್ (ಪ್ರೊಪಿಲೀನ್)ಪ್ರೊಪೈನ್ (ಮೀಥೈಲ್ಅಸಿಟಿಲೀನ್)CyclopropanePropadiene (allene)
4ಬ್ಯೂಟೇನ್ಬ್ಯೂಟೀನ್ (ಬ್ಯುಟಿಲಿನ್)ಬ್ಯೂಟೈನ್CyclobutaneButadiene
5ಪೆಂಟೇನ್ಪೆಂಟೀನ್ಪೆಂಟೈನ್CyclopentanePentadiene (piperylene)
6ಹೆಕ್ಸೇನ್ಹೆಕ್ಸೀನ್ಹೆಕ್ಸೈನ್CyclohexaneHexadiene
7ಹೆಪ್ಟೇನ್ಹೆಪ್ಟೀನ್ಹೆಪ್ಟೈನ್CycloheptaneHeptadiene
8ಆಕ್ಟೇನ್ಆಕ್ಟೀನ್ಆಕ್ಟೈನ್CyclooctaneOctadiene
9ನೊನೆನ್ನೊನೀನ್ನೊನೈನ್CyclononaneNonadiene
10ಡೆಕೆನ್ಡೆಕೀನ್ಡೆಕೈನ್CyclodecaneDecadiene

ತ್ರ್ರಿಬಂಧವುಳ್ಳ ಆ್ಯಲಿಫ್ಯಾಟಿಕ್ ಸಂಯುಕ್ತಗಳು ಅಸಿಟಲೀನ್ ಅಥವಾ ಆಲ್ಕೈನ್ಗಳು. ಪ್ರಕೃತಿಯಲ್ಲ್ಲಿ ಅಲ್ಲಲ್ಲಿ ತ್ರಿಬಂಧಪೂರಿತ ಸಂಯುಕ್ತಗಳು ದೊರೆಯುವುವಾದರೂ ಅವು ಬಲು ವಿರಳ. ಸಾಮಾನ್ಯವಾಗಿ ಇವನ್ನು ಕೃತಕವಾಗಿ ಸಂಯೋಜಿಸಲಾಗುತ್ತದೆ. ಅತಿ ಸರಳ ಆಲ್ಕೈನ್ ಗುಂಪಿನ ಹೈಡ್ರೊಕಾರ್ಬನ್ ಆದ ಅಸಿಟಲೀನನ್ನು ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರಿನ ವರ್ತನೆಯಿಂದ ಪಡೆಯಬಹುದು. ದ್ವಿಬಂಧ ಸಂಯುಕ್ತಗಳಿಂದ ತ್ರಿಬಂಧ ಸಂಯುಕ್ತಗಳನ್ನು ತಯಾರಿಸಬಹುದು. ತ್ರಿಬಂಧ ಸಂಯುಕ್ತಗಳು ದ್ವಿಬಂಧ ಸಂಯುಕ್ತಗಳಿಗಿಂತಲೂ ಬಲು ಅಸ್ಥಿರ ಅಥವಾ ಪಟು. ಆಲ್ಕೀನುಗಳಂತೆಯೇ ಆಲ್ಕೈನುಗಳೂ ಸಂಕಲನ ಕ್ರಿಯೆಗಳಲ್ಲಿ ಭಾಗವಹಿಸಬಲ್ಲವು. ತ್ರಿಬಂಧ ಇಂಗಾಲಕ್ಕೆ ಸೇರಿದ ಹೈಡ್ರೊಜನ್ ಪರಮಾಣು ಬಲು ಪಟು. ಇದನ್ನು ಸುಲಭವಾಗಿ ಸೋಡಿಯಂನಂಥ ಪಟು ಲೋಹಗಳ ಪರಮಾಣುಗಳಿಂದ ಪಲ್ಲಟಿಸಬಹುದು. ಹಾಗೆ ದೊರೆತ ಅಸಿಟಲೈಡುಗಳೆಂಬ ಆರ್ಗ್ಯನೋಲೋಹ ಸಂಯುಕ್ತಗಳು ಆನೇಕ ರಾಸಾಯನಿಕ ಸಂಯೋಜನೆಗಳಲ್ಲಿ ಬಲು ಉಪಯುಕ್ತ ಮಧ್ಯವರ್ತಿಗಳು.[೧]

ಉಲ್ಲೇಖ