ಏಡಿ

ಏಡಿಗಳು
Temporal range: Jurassic–Recent
PreꞒ
O
S
D
C
P
T
J
K
Pg
N
ಲಿಯೊಕಾರ್ಸಿನಸ್ ವರ್ನ್ಯಾಲಿಸ್
Scientific classification
ಸಾಮ್ರಾಜ್ಯ:
Animalia
ವಿಭಾಗ:
ಆರ್ಥ್ರೊಪೋಡಾ
ಉಪವಿಭಾಗ:
ಕ್ರಸ್ಟೇಶಿಯಾ
ವರ್ಗ:
ಮ್ಯಾಲಕೊಸ್ಟ್ರಾಕಾ
ಗಣ:
ಡೆಕಪೋಡಾ
ಉಪಗಣ:
ಪ್ಲೀಯೊಸಯಮ್ಯಾಟಾ
ಕೆಳಗಣ:
ಬ್ರ್ಯಾಕ್ಯೂರಾ

ಲಿನೀಯಸ್, 1758
ವಿಭಾಗಗಳು ಮತ್ತು ಉಪವಿಭಾಗಗಳು [೧]
  • ಡ್ರೋಮಿಯೇಸಿಯಿ
  • ರಾನಿನೊಯ್ಡಾ
  • ಸೈಕ್ಲೊಡೊರಿಪ್ಪೊಯಿಡಾ
  • ಯೂಬ್ರಚ್ಯೂರಾ
    • ಹೆಟರೊಟ್ರೆಮಾಟಾ
    • ಥೊರಾಸೊಟ್ರೆಮಾಟಾ

ನಿಜವಾದ ಏಡಿಗಳು ಬ್ರಾಚ್ಯುರಾ ಎಂಬ ಕೆಳಗಿನ ಗಣಕ್ಕೆ ಸೇರಿದ ದಶಪಾದಿಗಳಾಗಿದ್ದು, ವಿಶಿಷ್ಟವೆಂಬಂತೆ ಅವು ಒಂದು ಅತ್ಯಂತ ಗಿಡ್ಡನೆಯ, ಚಾಚಿಕೊಂಡಿರುವ "ಬಾಲ"ವನ್ನು (Greek: [βραχύς / brachys] Error: {{Lang}}: text has italic markup (help)

= ಗಿಡ್ಡನೆಯ,[೨] [οὐρά / οura] Error: {{Lang}}: text has italic markup (help) = ಬಾಲ[೩]) ಹೊಂದಿರುತ್ತವೆ, ಅಥವಾ ಆ ಭಾಗದಲ್ಲಿ ತಗ್ಗಿಸಿದ ಕಿಬ್ಬೊಟ್ಟೆಯು ಮುಂಡಭಾಗದ ಅಡಿಯಲ್ಲಿ ಸಂಪೂರ್ಣವಾಗಿ ಮುಚ್ಚಿಕೊಂಡಿರುತ್ತದೆ. ಸನ್ಯಾಸಿ ಏಡಿಗಳು, ಅರಸೇಡಿಗಳು, ಹೊಳಪುಳ್ಳ ಏಡಿಗಳು, ಲಾಳದ ಏಡಿಗಳು ಮತ್ತು ಕೂರೆಯಂಥ ಇತರ ಪ್ರಾಣಿಗಳು ನಿಜವಾದ ಏಡಿಗಳಲ್ಲ.

ವಿಕಸನ

ಕೇಂದ್ರೀಯ ಮತ್ತು ದಕ್ಷಿಣ ಅಮೆರಿಕಾಕ್ಕೆ ಸೇರಿದ ಒಂದು ನೆಲ ಏಡಿಯಾದ ಗೆಕಾರ್ಸಿನಸ್‌ ಕ್ವಾಡ್ರೇಟಸ್‌.

ಏಡಿಗಳು ಒಂದು ದಪ್ಪನಾದ ಹೊರಕವಚದಿಂದ ಸಾಮಾನ್ಯವಾಗಿ ಆವರಿಸಲ್ಪಟ್ಟಿರುತ್ತವೆ, ಮತ್ತು ಒಂದು ಏಕ ಜೋಡಿ ಕೊಂಡಿಗಳಿಂದ (ಚಿಮುಟ ಕೊಂಡಿಗಳಿಂದ) ಸಜ್ಜುಗೊಂಡಿರುತ್ತವೆ. ಪ್ರಪಂಚದ ಎಲ್ಲಾ ಸಾಗರಗಳಲ್ಲೂ ಏಡಿಗಳು ಕಂಡುಬರುತ್ತವೆಯಾದರೂ, ಅನೇಕ ಏಡಿಗಳು ಸಿಹಿನೀರಿನಲ್ಲಿ ಮತ್ತು ನೆಲದ ಮೇಲೆ, ಅದರಲ್ಲೂ ನಿರ್ದಿಷ್ಟವಾಗಿ ಉಷ್ಣವಲಯದ ಪ್ರದೇಶಗಳಲ್ಲಿನ ನೆಲದ ಮೇಲೆ ವಾಸಿಸುತ್ತವೆ. ಏಡಿಗಳ ಗಾತ್ರವು ವೈವಿಧ್ಯಮಯವಾಗಿರುತ್ತದೆ; ಕೆಲವೇ ಮಿಲಿಮೀಟರುಗಳಷ್ಟು ಅಗಲವಿರುವ ಬಟಾಣಿ ಏಡಿಯಿಂದ ಮೊದಲ್ಗೊಂಡು 4 metres (13 ft)ರವರೆಗಿನ ಉದ್ದದ ಕಾಲನ್ನು ಹೊಂದಿರುವ ಜಪಾನಿ ಜೇಡ ಏಡಿಯವರೆಗೆ ಏಡಿಗಳ ಗಾತ್ರದ ವೈವಿಧ್ಯತೆಯಿದೆ.[೪]

ಲಭ್ಯವಿರುವ ಏಡಿಯ ಜಾತಿಗಳ ಪೈಕಿ ಸುಮಾರು ಜಾತಿಗಳು ಸಿಹಿನೀರಿನ, ಭೂಚರ ಅಥವಾ ಅರೆ-ಭೂಚರ ಜಾತಿಗಳಾಗಿವೆ;[೫] ಪ್ರಪಂಚದ ಉಷ್ಣವಲಯದ ಮತ್ತು ಅರೆ-ಉಷ್ಣವಲಯದ ಪ್ರದೇಶಗಳ ಉದ್ದಗಲಕ್ಕೂ ಅವು ಕಂಡುಬರುತ್ತವೆ. ಅವು ಒಂದು ಏಕ ಜೈವಿಕ ಕುಲದ ಗುಂಪು ಇರಬಹುದೆಂದು ಹಿಂದೆ ಭಾವಿಸಲಾಗುತ್ತಿತ್ತು, ಆದರೆ ಅವು ಕನಿಷ್ಟಪಕ್ಷ ಎರಡು ವಿಶಿಷ್ಟ ವಂಶಾವಳಿಗಳನ್ನು ಪ್ರತಿನಿಧಿಸುತ್ತವೆ ಎಂದು ಈಗ ನಂಬಲಾಗುತ್ತಿದೆ; ಅವುಗಳಲ್ಲಿ ಒಂದು ವಂಶಾವಳಿಯು ಪೂರ್ವಾರ್ಧಗೋಳದಲ್ಲಿದ್ದರೆ, ಮತ್ತೊಂದು ಅಮೆರಿಕಾ ಖಂಡಗಳಲ್ಲಿದೆ.[೬]

ಅತ್ಯಂತ ಮುಂಚಿನ ಅಸಂದಿಗ್ಧ ಏಡಿಯ ಪಳೆಯುಳಿಕೆಗಳು ಜ್ಯುರಾಸಿಕ್‌‌ ಕಾಲಕ್ಕೆ ಸೇರಿವೆಯಾದರೂ, ಕೇವಲ ತನ್ನ ಬೆನ್ನುಚಿಪ್ಪಿನಿಂದ ಚಿರಪರಿಚಿತವಾಗಿರುವ ಕಾರ್ಬನಿಫರಸ್‌ ಕಾಲದ ಇಮೋಕ್ಯಾರಿಸ್‌ ಏಡಿಯು ಒಂದು ಆದಿಮ ಏಡಿಯಿರಬಹುದು ಎನ್ನಲಾಗುತ್ತದೆ.[೭] ಕ್ರಿಟೇಷಿಯ ಅವಧಿಯಯಲ್ಲಿ ಮತ್ತು ನಂತರದಲ್ಲಿ ಕಂಡುಬಂದ ಏಡಿಗಳ ಪ್ರಸರಣವು, ಗೊಂಡ್ವಾನಾದ ಅವನತಿಯೊಂದಿಗೆ ಅಥವಾ ಏಡಿಗಳ ಮುಖ್ಯ ಪರಭಕ್ಷಕಗಳಾದ ಮೂಳೆಮೂಳೆಯ ಮೀನಿನ ಏಕಕಾಲೀನ ಪ್ರಸರಣದೊಂದಿಗೆ ಸಂಬಂಧವನ್ನು ಹೊಂದಿರಬಹುದು.[೮]

ಲೈಂಗಿಕ ದ್ವಿರೂಪತೆ

ಕಿಬ್ಬೊಟ್ಟೆಯ ಆಕಾರದಲ್ಲಿನ ವ್ಯತ್ಯಾಸವನ್ನು ತೋರಿಸುತ್ತಿರುವ ಪ್ಯಾಕಿಗ್ರೇಪಸ್‌ ಮಾರ್ಮೊರೇಟಸ್‌ನ ಒಂದು ಗಂಡು (ಮೇಲ್ಭಾಗ) ಮತ್ತು ಒಂದು ಹೆಣ್ಣಿನ (ಕೆಳಭಾಗ) ಕೆಳಮೇಲ್ಮೈ.

ಏಡಿಗಳು ಅನೇಕವೇಳೆ ಎದ್ದುಕಾಣುವ ಲೈಂಗಿಕ ದ್ವಿರೂಪತೆಯನ್ನು ತೋರಿಸುತ್ತವೆ. ಗಂಡುಗಳು ಅನೇಕವೇಳೆ ದೊಡ್ಡದಾದ ಚಿಮುಟಕೊಂಡಿಗಳನ್ನು[೯] ಹೊಂದಿರುತ್ತವೆ; ಈ ಪ್ರವೃತ್ತಿಯು ಉಕಾ ಕುಲದ (ಒಸಿಪೊಡಿಡೇ) ಬಾಗಿಕೊಂಡಿರುವ ಕೊಂಡಿಯ ಏಡಿಗಳಲ್ಲಿ ನಿರ್ದಿಷ್ಟವಾಗಿ ಎದ್ದುಕಾಣುತ್ತದೆ. ಬಾಗಿಕೊಂಡಿರುವ ಕೊಂಡಿಯ ಏಡಿಗಳಲ್ಲಿ, ಗಂಡುಗಳು ಒಂದು ಚಿಮುಟಕೊಂಡಿಯನ್ನು ಹೊಂದಿದ್ದು, ಅದು ಮಹತ್ತರವಾಗಿ ಹಿಗ್ಗಿಸಲ್ಪಟ್ಟಿರುತ್ತದೆ; ಈ ಚಿಮುಟಕೊಂಡಿಯು ಸಂವಹನಕ್ಕಾಗಿ, ಅದರಲ್ಲೂ ನಿರ್ದಿಷ್ಟವಾಗಿ ಸಂಗಾತಿಯೊಂದನ್ನು ಆಕರ್ಷಿಸುವುದಕ್ಕಾಗಿ ಬಳಸಲ್ಪಡುತ್ತದೆ.[೧೦] ಮತ್ತೊಂದು ಎದ್ದುಕಾಣುವ ವ್ಯತ್ಯಾಸವು ಪ್ಲಿಯಾನ್‌‌ (ಕಿಬ್ಬೊಟ್ಟೆ) ಸ್ವರೂಪದಲ್ಲಿ ಕಂಡುಬರುತ್ತದೆ; ಬಹುತೇಕ ಗಂಡು ಏಡಿಗಳಲ್ಲಿ ಇದು ಕಿರಿದಾಗಿದ್ದು, ತ್ರಿಕೋನಾಕಾರದ ಸ್ವರೂಪವನ್ನು ಹೊಂದಿದ್ದರೆ, ಹೆಣ್ಣುಗಳು ಒಂದು ಅಗಲವಾದ, ದುಂಡನೆಯ ಕಿಬ್ಬೊಟ್ಟೆಯನ್ನು ಹೊಂದಿರುತ್ತವೆ.[೧೧] ಹೆಣ್ಣು ಏಡಿಗಳು ತಮ್ಮ ಪ್ಲಿಯೋಪಾಡ್‌‌ಗಳ ಭಾಗದಲ್ಲಿ ಫಲೀಕರಿಸಲ್ಪಟ್ಟ ಮೊಟ್ಟೆಗಳ ಮೇಲೆ ಕಾವುಕೂರುವುದರಿಂದ ಸ್ವರೂಪದಲ್ಲಿ ಈ ಬಗೆಯ ಭಿನ್ನತೆ ಕಂಡುಬರುತ್ತದೆ.

ವರ್ತನೆ

ಹವಾಯಿಯಲ್ಲಿ ಹೆಟೆರೋಸೆಂಟ್ರೋಟಸ್‌ ಟ್ರೈಗೋನೇರಿಯಸ್‌ನ್ನು ಕಾರ್ಪಿಲಸ್‌ ಕಾನ್ವೆಕ್ಸಸ್‌ ತಿನ್ನುತ್ತಿರುವುದು.

ಏಡಿಗಳು ವಿಶಿಷ್ಟವೆಂಬಂತೆ ಒಂದು ಪಕ್ಕಕ್ಕೆ[೧೨] ನಡೆಯುತ್ತವೆ (ಈ ಒಂದು ವರ್ತನೆಯಿಂದಾಗಿಯೇ ಏಡಿಯಂತೆ ಪಕ್ಕಕ್ಕೆ ಚಲಿಸುವ ಎಂಬ ಪದ ನಮಗೆ ದೊರೆತಿದೆ). ಅವುಗಳ ಕಾಲುಗಳ ಕೀಲುಜೋಡಣೆಯೇ ಇದಕ್ಕೆ ಕಾರಣ. ಸದರಿ ಕೀಲುಜೋಡಣೆಯು ಒಂದು ಓರೆಯಾದ ನಡೆಯುವ ಭಂಗಿಯನ್ನು ಹೆಚ್ಚು ಪರಿಣಾಮಕಾರಿಯಾಗಿಸುತ್ತದೆ.[೧೩] ಆದಾಗ್ಯೂ, ಕೆಲವೊಂದು ಏಡಿಗಳು ಮುಂದಕ್ಕೆ ಅಥವಾ ಹಿಂದಕ್ಕೆ ನಡೆಯಲು ಪ್ರಾಶಸ್ತ್ಯ ನೀಡುತ್ತವೆ; ರ್ಯಾನಿನಿಡ್‌ಗಳಾದ,[೧೪] ಲಿಬಿನಿಯಾ ಎಮರ್ಜಿನೇಟಾ [೧೫] ಮತ್ತು ಮಿಕ್ಟಿರಿಸ್‌‌ ಪ್ಲಾಟಿಚೆಲೆಸ್‌ ಈ ಗುಂಪಿಗೆ ಸೇರುತ್ತವೆ.[೧೨]. ಕೆಲವೊಂದು ಏಡಿಗಳು, ಅದರಲ್ಲೂ ಗಮನಾರ್ಹವಾಗಿ ಪೊರ್ಚುನಿಡೆ ಮತ್ತು ಮ್ಯಾಟುಟಿಡೆ ವಂಶಕ್ಕೆ ಸೇರಿದ ಏಡಿಗಳು, ಈಜುವಲ್ಲಿಯೂ ಸಮರ್ಥವಾಗಿರುತ್ತವೆ.[೧೬]

ಏಡಿಗಳು ಬಹುತೇಕವಾಗಿ ಕ್ರಿಯಾಶೀಲ ಪ್ರಾಣಿಗಳಾಗಿದ್ದು, ಸಂಕೀರ್ಣ ವರ್ತನೆಯ ಮಾದರಿಗಳನ್ನು ಹೊಂದಿರುತ್ತವೆ. ತಮ್ಮ ಚಿಮುಟಾಂಗಗಳನ್ನು ಬಡಿಯುವ ಅಥವಾ ಬೀಸುವ ಮೂಲಕ ಸಂವಹಿಸುವ ಸಾಮರ್ಥ್ಯವನ್ನು ಅವು ಹೊಂದಿರುತ್ತವೆ. ಪರಸ್ಪರರೆಡೆಗೆ ಆಕ್ರಮಣಕಾರಿಯಾಗಿರುವಂಥ ಒಲವನ್ನು ಏಡಿಗಳು ತೋರುತ್ತವೆ ಮತ್ತು ಹೆಣ್ಣು ಏಡಿಗಳ ಸಂಪರ್ಕವನ್ನು ಗಳಿಸುವುದಕ್ಕಾಗಿ ಗಂಡು ಏಡಿಗಳು ಅನೇಕವೇಳೆ ಹೋರಾಡುತ್ತವೆ.[೧೭] ಹೆಚ್ಚೂಕಮ್ಮಿ ಎಲ್ಲಾ ಗವಿಗಳು ಮತ್ತು ಬಿರುಕುಗಳು ಆಕ್ರಮಿಸಲ್ಪಟ್ಟಿರುವ, ಬಂಡೆಯಿಂದ ಕೂಡಿದ ಸಮುದ್ರತೀರಗಳ ಮೇಲೆ, ರಂಧ್ರಗಳಲ್ಲಿ ಅಡಗಿಕೊಳ್ಳುವುದಕ್ಕಾಗಿಯೂ ಸಹ ಏಡಿಗಳು ಹೋರಾಡಬಹುದು.[೧೮]

ಏಡಿಗಳು ಸರ್ವಾಹಾರಿಗಳಾಗಿದ್ದು, ಪ್ರಧಾನವಾಗಿ ಪಾಚಿಗಳನ್ನು[೧೯] ತಿಂದು ಜೀವಿಸುತ್ತವೆ ಮತ್ತು ಇತರ ಯಾವುದೇ ಆಹಾರವನ್ನು ಅವು ಸೇವಿಸಬಲ್ಲವಾಗಿರುತ್ತವೆ. ಮೃದ್ವಂಗಿಗಳು, ಹುಳುಗಳು, ಇತರ ಕಠಿಣಚರ್ಮಿಗಳು, ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ಅವಶೇಷ ಇವೇ ಮೊದಲಾದವುಗಳು ಏಡಿಗಳ ಆಹಾರದಲ್ಲಿ ಸೇರಿದ್ದು, ಇವುಗಳ ಲಭ್ಯತೆ ಹಾಗೂ ಏಡಿಯ ಜಾತಿಗಳನ್ನು ಅವಲಂಬಿಸಿ ಉದರಪೋಷಣೆಯು ನಡೆಯುತ್ತದೆ. ಅನೇಕ ಏಡಿಗಳಿಗೆ ಸಂಬಂಧಿಸಿದಂತೆ, ಸಸ್ಯ ಮತ್ತು ಪ್ರಾಣಿ ದ್ರವ್ಯದ ಒಂದು ಸಮ್ಮಿಶ್ರ ಆಹಾರಕ್ರಮವನ್ನು ನೀಡಿದಲ್ಲಿ, ಅದು ಅವುಗಳ ಅತಿವೇಗದ ಬೆಳವಣಿಗೆ ಮತ್ತು ಮಹತ್ತರವಾದ ದಾರ್ಢ್ಯತೆಗೆ ಕಾರಣವಾಗುತ್ತದೆ.[೨೦][೨೧]

ತಮ್ಮ ಕುಟುಂಬಕ್ಕಾಗಿ ಆಹಾರ ಮತ್ತು ಸಂರಕ್ಷಣೆಯನ್ನು ಒದಗಿಸಲು, ಹಾಗೂ ಮಿಲನದ ಋತುವಿನ ಅವಧಿಯಲ್ಲಿ, ಹೆಣ್ಣು ಏಡಿಯು ತನ್ನ ಅಂಡಗಳನ್ನು ಬಿಡುಗಡೆ ಮಾಡುವುದಕ್ಕಾಗಿ ಒಂದು ಅನುಕೂಲಕರವಾದ ತಾಣವನ್ನು ಕಂಡುಕೊಳ್ಳಲು, ಏಡಿಗಳು ಒಟ್ಟಾಗಿ ಕೆಲಸಮಾಡುತ್ತವೆ ಎಂಬುದು ಚಿರಪರಿಚಿತ ಸಂಗತಿ.[೨೨]

ಮಾನವ ಬಳಕೆ

ಮೀನುಗಾರಿಕೆ

ಫಿಯಾನ್‍ಫ಼ೋರ್ಟ್, ಸ್ಕಾಟ್‍ಲಂಡ್‍ನಲ್ಲಿ ತಿನ್ನುವ ಏಡಿಗಳನ್ನು ವಿಂಗಡಿಸುತ್ತಿರುವ ಮೀನುಗಾರರು

ವಿಶ್ವವ್ಯಾಪಿಯಾಗಿ ಹಿಡಿಯಲ್ಪಡುವ, ಬೆಳೆಸಲ್ಪಡುವ, ಮತ್ತು ಸೇವಿಸಲ್ಪಡುವ, ಕಡಲಿನಲ್ಲಿ ದೊರೆಯುವ ಎಲ್ಲಾ ಕಠಿಣಚರ್ಮಿಗಳ ಪೈಕಿ ಏಡಿಗಳ ಪಾಲು 20% ನಷ್ಟರವರೆಗಿದ್ದು, ಇದರ ಪ್ರಮಾಣವು ವಾರ್ಷಿಕವಾಗಿ 1½ ದಶಲಕ್ಷ ಟನ್ನುಗಳನ್ನು ಮುಟ್ಟುತ್ತದೆ. ಪೋರ್ಟುನಸ್‌ ಟ್ರೈಟ್ಯುಬರ್ಕ್ಯುಲೇಟಸ್‌ ಎಂಬ ಜಾತಿಯು ಆ ಒಟ್ಟು ಪ್ರಮಾಣದ ಪೈಕಿ ಐದನೇ ಒಂದರಷ್ಟು ಪಾಲನ್ನು ಆಕ್ರಮಿಸಿಕೊಳ್ಳುತ್ತದೆ. ವಾಣಿಜ್ಯ ಸ್ವರೂಪದಲ್ಲಿ ಮುಖ್ಯವಾಗಿರುವ ಇತರ ವರ್ಗಗಳಲ್ಲಿ ಇವು ಸೇರಿವೆ: ಪೋರ್ಟುನಸ್‌ ಪೆಲಾಗಿಕಸ್‌ , ಚಿಯೊನೊಸೆಟೆಸ್‌ ಕುಲದಲ್ಲಿನ ಹಲವಾರು ಜಾತಿಗಳು, ನೀಲಿ ಏಡಿ (ಕ್ಯಾಲಿನೆಕ್ಟೆಸ್‌ ಸ್ಯಾಪಿಡಸ್‌ ), ಚಾರಿಬ್ಡಿಸ್‌ ಜಾತಿ , ಕ್ಯಾನ್ಸರ್‌ ಪ್ಯಾಗರಸ್‌ , ಡಂಗೆನೆಸ್‌ ಏಡಿ (ಮೆಟಾಕಾರ್ಸಿನಸ್‌ ಮ್ಯಾಜಿಸ್ಟರ್‌‌ ) ಹಾಗೂ ಸಿಲ್ಲಾ ಸೆರ್ರಾಟ . ಇವುಗಳ ಪೈಕಿ ಪ್ರತಿಯೊಂದು ಬಗೆಯೂ ವಾರ್ಷಿಕವಾಗಿ 20,000 ಟನ್ನುಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ.[೨೩]

ಪಾಕಶಾಸ್ತ್ರ

ಕರ್ನಾಟಕದ ಏಡಿ ಮಸಾಲಾ

ಪ್ರಪಂಚದ ಉದ್ದಗಲಕ್ಕೂ ಹಲವಾರು ವಿಭಿನ್ನ ವಿಧಾನಗಳಲ್ಲಿ ಏಡಿಗಳನ್ನು ಒಂದು ಆಹಾರಭಕ್ಷ್ಯವಾಗಿ ಸಿದ್ಧಪಡಿಸಿ ತಿನ್ನಲಾಗುತ್ತದೆ. ಕೆಲವೊಂದು ಜಾತಿಗಳನ್ನು ಇಡಿಯಾಗಿ ತಿನ್ನಲಾಗುತ್ತದೆ. ಮೃದು-ಚಿಪ್ಪಿನ ಏಡಿಯನ್ನು ಆಹಾರದಲ್ಲಿ ಬಳಸುವಾಗ ಅದರ ಚಿಪ್ಪನ್ನೂ ತಿನ್ನಲಾಗುತ್ತದೆ; ಇನ್ನುಳಿದ ಜಾತಿಗಳ ಏಡಿಗಳನ್ನು ಬಳಸುವಾಗ, ಕೇವಲ ಚಿಮುಟಕೊಂಡಿಗಳನ್ನು ಮತ್ತು/ಅಥವಾ ಕಾಲುಗಳನ್ನು ತಿನ್ನಲಾಗುತ್ತದೆ. ಕೇವಲ ಚಿಮುಟಕೊಂಡಿಗಳನ್ನು ಮತ್ತು/ಅಥವಾ ಕಾಲುಗಳನ್ನು ತಿನ್ನುವ ಪರಿಪಾಠವು, ಹಿಮದ ಏಡಿಯಂಥ ದೊಡ್ಡದಾದ ಏಡಿಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಸಾಮಾನ್ಯವಾಗಿರುತ್ತದೆ. ಬಹುತೇಕವಾಗಿ ಪೂರ್ವದೇಶಗಳ ಸಂಸ್ಕೃತಿಗಳಲ್ಲಿ ಹೆಣ್ಣು ಏಡಿಯ ಹಿಂಡುಮೊಟ್ಟೆಗಳನ್ನೂ ಸಹ ತಿನ್ನಲಾಗುತ್ತದೆ; ಇವು ಸಂತಾನಶೀಲ ಏಡಿಗಳಲ್ಲಿ ಕಿತ್ತಳೆ ಬಣ್ಣದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ.

ಕೆಲವೊಂದು ಪ್ರದೇಶಗಳಲ್ಲಿ ಮಸಾಲೆಗಳು ಪಾಕಶಾಲೆಯಲ್ಲಿನ ಅಡುಗೆಯ ಅನುಭವವನ್ನು ಸುಧಾರಿಸುತ್ತವೆ. ಏಷ್ಯಾದಲ್ಲಿ, ಮಸಾಲಾ ಏಡಿ ಮತ್ತು ಮೆಣಸಿನಕಾಯಿ ಏಡಿಗಳು ಅತೀವವಾಗಿ ಮಸಾಲೆಭರಿತ ಆಹಾರಭಕ್ಷ್ಯಗಳ ಉದಾಹರಣೆಗಳಾಗಿವೆ. ಮೆರಿಲ್ಯಾಂಡ್‌ನಲ್ಲಿ, ನೀಲಿ ಏಡಿಯನ್ನು ಅನೇಕವೇಳೆ ಹಳೆಯ ಬೇ ಎಲೆಯ ಮಸಾಲೆಯೊಂದಿಗೆ ತಿನ್ನಲಾಗುತ್ತದೆ.

ಬ್ರಿಟಿಷರ ಆಹಾರಭಕ್ಷ್ಯವಾದ ಕ್ರೋಮರ್‌‌ ಏಡಿಯನ್ನು ಸಿದ್ಧಪಡಿಸುವಾಗ, ಏಡಿ ಮಾಂಸದ ಸಾರವನ್ನು ತೆಗೆಯಲಾಗುತ್ತದೆ ಮತ್ತು ಅದನ್ನು ಗಡುಸಾದ ಚಿಪ್ಪಿನ ಒಳಗಡೆ ಇರಿಸಲಾಗುತ್ತದೆ. ಏಡಿ ಮಾಂಸದ ಸಾರತೆಗೆದು, ಅದಕ್ಕೆ ಒಂದು ಹಿಟ್ಟಿನ ಮಿಶ್ರಣವನ್ನು ಸೇರ್ಪಡೆಮಾಡಿ, ಒಂದು ಏಡಿ ಕೇಕನ್ನು ಸಿದ್ಧಪಡಿಸುವುದು ಅಮೆರಿಕನ್ನರ ಒಂದು ಪಾಕವಿಧಾನವಾಗಿದೆ.

ಫ್ರೆಂಚ್‌ ಮೂಲದ ಒಂದು ಜಾಗತಿಕ ಆಹಾರಭಕ್ಷ್ಯವಾದ ಬಾಡಿನ ಸಾರಿನಲ್ಲಿ ಕೂಡಾ ಏಡಿಗಳನ್ನು ಬಳಸಲಾಗುತ್ತದೆ.

ನೋವು

ಜೀವಂತ ಏಡಿಗಳನ್ನು ಅನೇಕವೇಳೆ ಬೇಯಿಸಲಾಗುತ್ತದೆ. ಕಡಲೇಡಿಗಳು ನೋವನ್ನು ಅನುಭವಿಸಲಾರವು ಎಂಬುದಾಗಿ 2005ರಲ್ಲಿ ನಾರ್ವೆ ದೇಶದ ವಿಜ್ಞಾನಿಗಳು ತೀರ್ಮಾನಿಸಿದರು.[೨೪] ಆದಾಗ್ಯೂ, ನಂತರದಲ್ಲಿ ನಡೆದ ಸಂಶೋಧನೆಯು ಸೂಚಿಸಿದ ಪ್ರಕಾರ, ಕಠಿಣಚರ್ಮಿಗಳು ನಿಶ್ಚಯವಾಗಿ ನೋವನ್ನು ಅನುಭವಿಸಬಲ್ಲವು ಮತ್ತು ನೆನಪಿಸಿಕೊಳ್ಳಬಲ್ಲವು ಎಂಬುದು ತಿಳಿದುಬಂತು.[೨೫]

ವರ್ಗೀಕರಣ

ಬ್ರಾಚ್ಯುರಾ ಎಂಬ ಕೆಳಗಿನ ಗಣವು 93 ವಂಶಗಳಲ್ಲಿ[೧೬] 6,793 ಜಾತಿಗಳನ್ನು ಒಳಗೊಂಡಿದ್ದು, ಅವುಗಳಲ್ಲಿ ಬಹುಪಾಲು ದಶಪಾದಿಗಳ ಉಳಿಕೆಗಳಾಗಿವೆ.[೨೬] ಒಂದು ಬೆಳೆಯುತ್ತಾ ಗಟ್ಟಿಮುಟ್ಟಾದ ಶರೀರ, ಮತ್ತು ಕಿಬ್ಬೊಟ್ಟೆಯಲ್ಲಿನ ಒಂದು ಸಂಕೋಚನ ಅಥವಾ ತಗ್ಗಿರುವಿಕೆಯ ಲಕ್ಷಣಗಳಿಂದ ಏಡಿಗಳ ವಿಕಸನವು ನಿರೂಪಿಸಲ್ಪಟ್ಟಿದೆ. ಇತರ ಅನೇಕ ಗುಂಪುಗಳು ಇದೇರೀತಿಯ ಸಂಸ್ಕರಣಗಳಿಗೆ ಒಳಗಾಗಿವೆಯಾದರೂ, ಕಾರ್ಸಿನೈಸೇಷನ್‌ ಎಂಬುದು ಏಡಿಗಳಲ್ಲಿ ಅತ್ಯಂತ ಮುಂದುವರಿದ ಸಂಸ್ಕರಣವಾಗಿದೆ. ಉದರದ ಕೊನೆಯ ಖಂಡವು ಏಡಿಗಳಲ್ಲಿ ಕೆಲಸ ಮಾಡಬಲ್ಲ ಸ್ಥಿತಿಯಲ್ಲಿರುವುದಿಲ್ಲ, ಮತ್ತು ಯುರೋಪಾಡ್‌‌ಗಳ ಗೈರುಹಾಜರಿಯು ಇಲ್ಲಿ ಎದ್ದುಕಾಣುವಂತಿರುತ್ತದೆ; ಎದೆಮೂಳೆಗೆ ಎದುರಾಗಿ ತಗ್ಗಿಸಿದ ಕಿಬ್ಬೊಟ್ಟೆಯನ್ನು ಬಿಗಿಯಾದ ಹಿಡಿದುಕೊಳ್ಳುವುದಕ್ಕೆ ಸಂಬಂಧಿಸಿದ ಸಣ್ಣ ಸಾಧನಗಳಾಗಿ ಪ್ರಾಯಶಃ ಅವು ವಿಕಸನಗೊಂಡಿರಬಹುದು.

ಬಹುತೇಕ ದಶಪಾದಿಗಳಲ್ಲಿ, ಗೊನೊರಂಧ್ರಗಳು (ಲೈಂಗಿಕ ದ್ವಾರಗಳು) ಕಾಲುಗಳ ಮೇಲೆ ಕಂಡುಬರುತ್ತವೆ. ಆದಾಗ್ಯೂ, ಪ್ಲಿಯೋಪಾಡ್‌‌‌ಗಳ (ಕಿಬ್ಬೊಟ್ಟೆಯ ಉಪಾಂಗಗಳು) ಮೊದಲ ಎರಡು ಜೋಡಿಗಳನ್ನು ಏಡಿಗಳು ವೀರ್ಯ ವರ್ಗಾವಣೆಗಾಗಿ ಬಳಸುವುದರಿಂದ, ಈ ವ್ಯವಸ್ಥೆಯು ಬದಲಾವಣೆಗೊಳಗಾಗಿದೆ. ಗಂಡು ಏಡಿಯ ಕಿಬ್ಬೊಟ್ಟೆಯು ಒಂದು ಕಿರಿದಾಗಿರುವ ಆಕಾರವಾಗಿ ವಿಕಸನಗೊಂಡಿರುವುದರಿಂದ, ಗೊನೊರಂಧ್ರಗಳು ಮಧ್ಯರೇಖೆಯ ಕಡೆಗೆ ಚಲಿಸಿರುತ್ತವೆ; ಇದು ಕಾಲುಗಳಿಂದ ಆಚೆಗಿದ್ದು, ಎದೆಮೂಳೆಯ ಮೇಲಿರುತ್ತದೆ.[೨೭] ಹೆಣ್ಣು ಗೊನೊರಂಧ್ರಗಳಿಗೆ ಸಂಬಂಧಿಸಿದಂತೆಯೂ ಇದೇರೀತಿಯ ಬದಲಾವಣೆಯೊಂದು ಸ್ವತಂತ್ರವಾಗಿ ಸಂಭವಿಸಿತು. ಎದೆಮೂಳೆಯೆಡೆಗಿನ ಹೆಣ್ಣು ಗೊನೊರಂಧ್ರದ ಚಲನೆಯು ಯೂಬ್ರಾಚ್ಯುರಾ ಎಂಬ ಏಕಮೂಲ ವರ್ಗವನ್ನು ವಿಶದೀಕರಿಸುತ್ತದೆ ಅಥವಾ ವ್ಯಾಖ್ಯಾನಿಸುತ್ತದೆ, ಮತ್ತು ಗಂಡು ಗೊನೊರಂಧ್ರದ ಸ್ಥಾನದಲ್ಲಿನ ನಂತರದ ಬದಲಾವಣೆಯು ಥೊರಾಕೊಟ್ರೆಮೇಟಾವನ್ನು ವಿಶದೀಕರಿಸುತ್ತದೆ. ಹೆಣ್ಣು ಗೊನೊರಂಧ್ರಗಳು ಎದೆಮೂಳೆಯ ಮೇಲೆ ನೆಲೆಗೊಂಡಿರುವಂಥ ಏಡಿಗಳು ಒಂದು ಏಕ ಜೈವಿಕ ಕುಲದ ಗುಂಪನ್ನು ರೂಪಿಸುತ್ತವೆಯೇ ಎಂಬುದು ಈಗಲೂ ಸಹ ಒಂದು ಚರ್ಚಾವಿಷಯವಾಗಿದೆ.[೨೬]

ಮಹಾವಂಶಗಳು

ಡ್ರೋಮಿಯಾ ಪರ್ಸೋನೇಟಾ (ಡ್ರೋಮಿಯೇಸಿ: ಡ್ರೋಮಿಡೇ)
ರ್ಯಾನಿನಾ ರ್ಯಾನಿನಾ (ರ್ಯಾನಿನೋಯ್ಡಾ: ರ್ಯಾನಿನಿಡೇ)
ಕೋರಿಸ್ಟಸ್‌ ಕ್ಯಾಸಿವೆಲೌನಸ್‌ (ಹೆಟೆರೊಟ್ರೆಮೇಟಾ: ಕೋರಿಸ್ಟಿಡೇ)
ಓಸಿಪೋಡೆ ಕ್ವಾಡ್ರೇಟಾ (ಥೊರಾಕೊಟ್ರೆಮೇಟಾ: ಒಸಿಪೊಡಿಡೇ)

ಉಪಲಬ್ಧ ಮತ್ತು ನಿರ್ನಾಮವಾದ (†) ಜಾತಿಗಳ ಸಂಖ್ಯೆಗಳನ್ನು ಆವರಣಗಳಲ್ಲಿ ನೀಡಲಾಗಿದೆ.[೧೬]

  • ಗುಂಪು ಡ್ರೋಮಿಯೇಸಿ
    • ಡಕೋಟಿಕ್ಯಾನ್‌ಕ್ರೋಯ್ಡಿಯಾ (6†)
    • ಡ್ರೋಮಿಯೋಯ್ಡಿಯಾ (147, 85†)
    • ಇಯೋಕಾರ್ಸಿನೋಯ್ಡಿಯಾ (1†)
    • ಗ್ಲೇಸ್‌ನೆರೊಪ್ಸೋಯ್ಡಿಯಾ (45†)
    • ಹೊಮೊಲೊಡ್ರೋಮಿಯೋಯ್ಡಿಯಾ (24, 107†)
    • ಹೊಮೊಲೊಯ್ಡಿಯಾ (73, 49†)
  • ಗುಂಪು ರ್ಯಾನಿನೋಯ್ಡಾ (46, 196†)
  • ಗುಂಪು ಸೈಕ್ಲೋಡೋರಿಪೋಯ್ಡಾ (99, 27†)
  • ಗುಂಪು ಯೂಬ್ರಾಚ್ಯುರಾ
    • ಉಪಗುಂಪು ಹೆಟೆರೊಟ್ರೆಮೇಟಾ
    • ಏಥ್ರೋಯ್ಡಿಯಾ (37, 44†)
    • ಬೆಲ್ಲೋಯ್ಡಿಯಾ (7)
    • ಬೈಥೋಗ್ರೇಯ್ಡಿಯಾ (14)
    • ಕ್ಯಾಲಪ್ಪೋಯ್ಡಿಯಾ (101, 71†)
    • ಕ್ಯಾನ್‌ಕ್ರೋಯ್ಡಿಯಾ (57, 81†)
    • ಕ್ಯಾರ್ಪಿಲಿಯೋಯ್ಡಿಯಾ (4, 104†)
    • ಚೆರಾಗೊನೊಯ್ಡಿಯಾ (3, 13†)
    • ಕೋರಿಸ್ಟೊಯ್ಡಿಯಾ (10, 5†)
    • ಕೊಂಪೊನೊಕ್ಯಾನ್‌ಕ್ರೋಯ್ಡಿಯಾ (1†)
    • ಡೈರೋಯ್ಡಿಯಾ (4, 8†)
    • ಡೋರಿಪ್ಪೊಯ್ಡಿಯಾ (101, 73†)
    • ಎರಿಫಿಯೊಯ್ಡಿಯಾ (67, 14†)
    • ಗೆಕಾರ್ಸಿನ್ಯುಕೋಯ್ಡಿಯಾ (349)
    • ಗೊನೆಪ್ಪ್ಲಾಕೋಯ್ಡಿಯಾ (182, 94†)
    • ಹೆಕ್ಸಾಪೊಡೊಯ್ಡಿಯಾ (21, 25†)
    • ಲ್ಯೂಕೋಸಿಯೋಯ್ಡಿಯಾ (488, 113†)
    • ಮಜೋಯ್ಡಿಯಾ (980, 89†)
    • ಒರಿಥಿಯೋಯ್ಡಿಯಾ (1)
    • ಪ್ಯಾಲಿಕೋಯ್ಡಿಯಾ (63, 6†)
    • ಪಾರ್ಥೆನೋಪೋಯ್ಡಿಯಾ (144, 36†)
    • ಪಿಲುಮ್ನೋಯ್ಡಿಯಾ (405, 47†)
    • ಪೋರ್ಟುನೋಯ್ಡಿಯಾ (455, 200†)
    • ಪೊಟಾಮೋಯ್ಡಿಯಾ (662, 8†)
    • ಸ್ಯೂಡೋಥೆಲ್ಫುಸೋಯ್ಡಿಯಾ (276)
    • ಸ್ಯೂಡೋಝಿಯೋಯ್ಡಿಯಾ (22, 6†)
    • ರೆಟ್ರೊಪ್ಲೂಮೋಯ್ಡಿಯಾ (10, 27†)
    • ಟ್ರೆಪೆಝಿಯೋಯ್ಡಿಯಾ (58, 10†)
    • ಟ್ರೈಕೋಡ್ಯಾಕ್ಟೈಲೋಯ್ಡಿಯಾ (50)
    • ಕ್ಸಾಂಥೋಯ್ಡಿಯಾ (736, 134†)
    • ಉಪಗುಂಪು ಥೊರಾಕೊಟ್ರೆಮೇಟಾ
    • ಕ್ರಿಪ್ಟೋಕಿರೋಯ್ಡಿಯಾ (46)
    • ಗ್ರೇಪ್ಸೋಯ್ಡಿಯಾ (493, 28†)
    • ಒಸಿಪೊಡೋಯ್ಡಿಯಾ (304, 14†)
    • ಪಿನ್ನೊಥೆರೊಯ್ಡಿಯಾ (304, 13†)

ಸಾಂಸ್ಕೃತಿಕ ಪ್ರಭಾವಗಳು

ನಕ್ಷತ್ರಪುಂಜವಾದ ಕರ್ಕಾಟಕ ಮತ್ತು ಜ್ಯೋತಿಷ್ಯಶಾಸ್ತ್ರದ ರಾಶಿಯಾದ ಕಟಕ‌ ಈ ಎರಡಕ್ಕೂ ಸಹ ಏಡಿಯ ಹೆಸರನ್ನೇ ಇಡಲಾಗಿದೆ, ಮತ್ತು ಒಂದು ಏಡಿಯ ರೀತಿಯಲ್ಲಿಯೇ ಅವನ್ನು ಚಿತ್ರಿಸಲಾಗಿದೆ. ಜಾನ್ ಬೆವಿಸ್‌ ಎಂಬಾತ 1731ರಲ್ಲಿ ಮೊದಲ ಬಾರಿಗೆ ಏಡಿ ನೀಹಾರಿಕೆಯನ್ನು ವೀಕ್ಷಿಸಿದ ಮತ್ತು ಅದು ಈ ಪ್ರಾಣಿಯನ್ನು ಹೋಲುವಂತಿರುವುದನ್ನು ಕಂಡುಕೊಂಡ. ಏಡಿ ಸ್ಪಂದತಾರೆಯು ನೀಹಾರಿಕೆಯ ಮಧ್ಯಭಾಗದಲ್ಲಿ ನೆಲೆಗೊಂಡಿದೆ.

ಪ್ರಾಚೀನ ಪೆರುವಿನ ಮೊಚೆ ಜನರು ಪ್ರಕೃತಿಯನ್ನು, ಅದರಲ್ಲೂ ವಿಶೇಷವಾಗಿ ಸಮುದ್ರವನ್ನು[೨೮] ಪೂಜಿಸುತ್ತಿದ್ದರು ಮತ್ತು ಅನೇಕವೇಳೆ ತಮ್ಮ ಕಲೆಯಲ್ಲಿ ಏಡಿಗಳನ್ನು ಅವರು ಚಿತ್ರಿಸಿದರು.[೨೯] ಗ್ರೀಕ್‌ ಪುರಾಣದಲ್ಲಿ, ಕಾರ್ಕಿನೋಸ್‌ ಎಂಬುದು ಒಂದು ಏಡಿಯಾಗಿದ್ದು, ಅದು ಹೆರಾಕಲ್ಸ್‌ ಜೊತೆಯಲ್ಲಿ ಸೆಣಸಾಡಿ ಲೆರ್ನೆಯನ್‌ ಹೈಡ್ರಾ ಸಹಾಯಕ್ಕೆ ಬಂತು ಎಂದು ವಿವರಿಸಲಾಗಿದೆ.

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Page ಮಾಡ್ಯೂಲ್:Portal/styles.css has no content. Media related to Brachyura at Wikimedia Commons Data related to Brachyura at Wikispecies

ಟೆಂಪ್ಲೇಟು:Edible crustaceans