ಡ್ರ್ಯಾಗನ್ ಹಣ್ಣು

ಅಮೇರಿಕಾ ಮೂಲವಾಗಿರುವ [೧], ಕಳ್ಳಿ ಜಾತಿಗೆ ಸೇರಿದೆ. ಪಿಟಾಯಾ ಅಥವಾ ಪಿಟಾಹಯಾ ಎಂದು ಕರೆಯಲ್ಪಡುವ ಇದು ಹೈಲೋಸೀರಿಯಸ್ ಹಣ್ಣಿನ ಕುಲಕ್ಕೆ ಸೇರಿದೆ.

Siem Reap Markets (6042425125)

ಡ್ರ್ಯಾಗನ್ ಹಣ್ಣಿನ ವಿಧಗಳು

  • ಕೆಂಪು ಡ್ರ್ಯಾಗನ್ ಹಣ್ಣು

ಇದು ಸಾಮಾನ್ಯವಾಗಿ ಕಂಡು ಬರುವ ಡ್ರ್ಯಾಗನ್ ಹಣ್ಣು. ಗುಲಾಬಿ ಬಣ್ಣದ ಸಿಪ್ಪೆಯನ್ನು ಹೊಂದಿದ ಇದು ಬಿಳಿ ತಿರುಳನ್ನು ಹೊಂದಿದೆ.

  • ಬಿಳಿ ಡ್ರ್ಯಾಗನ್ ಹಣ್ಣು

ಈ ಹಣ್ಣು ಬಿಳಿ ಸಿಪ್ಪೆ ಹಾಗೂ ಬಿಳಿ ತಿರುಳನ್ನು ಹೊಂದಿದೆ.

  • ಹಳದಿ ಡ್ರ್ಯಾಗನ್ ಹಣ್ಣು

ಹಳದಿ ಸಿಪ್ಪೆ ಮತ್ತು ಬಿಳಿ ತಿರುಳನ್ನು ಈ ಹಣ್ಣು ಹೊಂದಿದೆ.ಸಾಮಾನ್ಯವಾಗಿ ಈ ಹಣ್ಣು ೧೫೦ ರಿಂದ ೬೦೦ ಗ್ರಾಂ ತೂಗುತ್ತದೆ. ಅಪರೂಪಕ್ಕೆ ಕೆಲವೊಂದು ೧ ಕಿಲೋ ಗ್ರಾಂ ಕೂಡಾ ತಲುಪಬಹುದು.

ಬೇಸಾಯ ಕ್ರಮಗಳು

ಸಸ್ಯಾಭಿವೃದ್ಧಿ

ಚೆನ್ನಾಗಿ ಕಳಿತ ಹಣ್ಣಿನಿಂದ ಬೀಜಗಳನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿ ಚೆನ್ನಾಗಿ ಒಣಗಿಸಿ ಶೇಖರಿಸಿಟ್ಟ ಬೀಜಗಳನ್ನು ನಾಟಿ ಮಾಡಲು ಉಪಯೋಗಿಸಬಹುದು. ಹಣ್ಣಿನ ಹಣ್ಣಿನ ತಿರುಳಿನಿಂದ ಬೀಜಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ, ಒಣಗಿದಾಗ ಬೀಜಗಳನ್ನು ಶೇಖರಿಸಿಡಬಹುದು. ಗೊಬ್ಬರ ಮಿಶ್ರಿತ ಮಣ್ಣಿನಲ್ಲಿ ಹಾಕಿದ ಬೀಜ ೧೧ ರಿಂದ ೧೪ ದಿನಗಳಲ್ಲಿ ಮೊಳಕೆಯೊಡೆಯುತ್ತದೆ. ಕ್ಯಾಕ್ಟಸ್ ಜಾತಿಯ ಗಿಡವಾದರೂ ಬಳ್ಳಿಯಂತೆ ಹಬ್ಬುವುದರಿಂದ ಆಧಾರ ಕೊಡುವುದು ಬಹು ಮುಖ್ಯ. ಇದನ್ನು ಒಳಾಂಗಣ ಸಸ್ಯವಾಗಿಯೂ ಬಳಸಬಹುದು. ಆರೋಗ್ಯವಂತ ಕಾಂಡದಿಂದಲೂ ಸಸ್ಯಾಭಿವೃದ್ಧಿ ಮಾಡಬಹುದು.

ಹವಾಮಾನ

ಮಧ್ಯಮ ಪ್ರಮಾಣದ ಮಳೆಯಾಗುವ ಶುಷ್ಕ ವಲಯ ಈ ಬೆಳೆಗೆ ಸೂಕ್ತವಾದ ಪ್ರದೇಶ. ಈ ಸಸ್ಯ ೪೦`c ನಷ್ಟು ಉಷ್ಣಾಂಶದಲ್ಲೂ ಬೆಳೆಯಬಲ್ಲುದು.

ಕೀಟ ಮತ್ತು ರೋಗಗಳು

ಅತಿಯಾದ ಮಳೆ ಈ ಸಸ್ಯಕ್ಕೆ ಮಾರಕ. ಇದು ಹೂ ಉದುರಲು ಮತ್ತು ಹಣ್ಣು ಕೊಳೆಯಲು ಕಾರಣವಾಗಬಹುದು. ಇತರ ಹಣ್ಣುಗಳಂತೆ ಹಕ್ಕಿಗಳು ಕೂಡಾ ಈ ಹಣ್ಣನ್ನು ಹಾಳು ಮಾಡುತ್ತವೆ. ಮಾತ್ರವಲ್ಲದೆ ಕ್ಸಂಥೋಮೊನಾಸ್ ಕಾಮ್ಮೆಸ್ಟ್ರಿಸ್ ಎಂಬ ಬ್ಯಾಕ್ಟಿರಿಯಾ ಕಾಂಡ ಕೊರೆತಕ್ಕೆ ಕಾರಣವಾಗಬಲ್ಲುದು. ಡೋತಿಯೋರೆಲ್ಲಾ ಎಂಬ ಶಿಲೀಂದ್ರ ಹಣ್ಣಿನ ಮೇಲೆ ಕಪ್ಪು ಚುಕ್ಕೆಗೆ ಕಾರಣವಾಗಬಹುದು.

ಉಪಯೋಗಗಳು

ತಿನ್ನಲು ರುಚಿಕರವಾಗಿರುವ ಈ ಹಣ್ಣಿನ ತಿರುಳು ಸಿಹಿಯಾಗಿರುತ್ತದೆ. ಈ ಹಣ್ಣಿನ ರಸ ಕೂಡಾ ಉಪಯೋಗಿಸಬಹುದು. ಇದರ ರಸವನ್ನು ವೈನ್ ಅಥವಾ ಇತರ ಪಾನೀಯಗಳಲ್ಲೂ ಪರಿಮಳಕ್ಕಾಗಿ ಉಪಯೋಗಿಸುತ್ತಾರೆ. ಇದರ ಹೂ ಕೂಡಾ ತಿನ್ನಲು ಉಪಯುಕ್ತವಾಗಿದೆ ಮಾತ್ರವಲ್ಲದೆ ಚಹಾ ತಯಾರಿಸಲು ಕೂಡಾ ಉಪಯೋಗಿಸಬಹುದು.

ಉಲ್ಲೇಖಗಳು