ಆರಿಜೋನ

ಆರಿಜೋನ (ಉಚ್ಛಾರ ) ಅಮೇರಿಕ ಸಂಯುಕ್ತ ಸಂಸ್ಥಾನನೈರುತ್ಯ ಭಾಗದಲ್ಲಿನ ಒಂದು ರಾಜ್ಯ. ಇದರ ರಾಜಧಾನಿ ಫೀನಿಕ್ಸ್. 31 ಡಿಗ್ರಿ 20'37 ಡಿಗ್ರಿಉ. ಅಕ್ಷಾಂಶ, 109 ಡಿಗ್ರಿ 2'- 114 ಡಿಗ್ರಿ 45' ಪ. ರೇಖಾಂಶಗಳಿಂದ ಸೀಮಿತವಾಗಿದೆ. ಅ.ಸಂ.ಸಂಸ್ಥಾನದ ನೈರುತ್ಯದಲ್ಲಿದ್ದು, ಉತ್ತರಕ್ಕೆ ಉಟ್ಹಾ, ಪೂರ್ವಕ್ಕೆ ನ್ಯೂಮೆಕ್ಸಿಕೊ, ದಕ್ಷಿಣಕ್ಕೆ ಮೆಕ್ಸಿಕೊದೇಶದ ಸೊನೊರ ಪ್ರಾಂತ್ಯ ಹಾಗೂ ಪಶ್ಚಿಮಕ್ಕೆ ಕೊಲೊರಾಡೊ ನದಿಗಳಿವೆ. ಫೀನಿಕ್ಸ್ರಾಜಧಾನಿ. ಟಸ್ಕಾನ್ ಮತ್ತು ಟೆಂಪೆ ಇತರ ಮುಖ್ಯ ನಗರಗಳು. ವಿಸ್ತೀರ್ಣ 2,95,260ಚ.ಕಿಮೀ. ಅಪಾಚೀ ಇಂಡಿಯನ್ ಜನರ ನೆ¯ಯಾದ್ದರಿಂದ ಅಪ್ಯಾಚೀ ಪ್ರಾಂತ್ಯವೆ.ದೂಪ್ರಪಂಚದ ಅತಿ ದೊಡ್ಡ ಹಿತ್ತಾಳೆ ಗಣಗಳನ್ನು ಹೊಂದಿರುವುದರಿಂದ ಹಿತ್ತಾಳೆ ಪ್ರಾಂತ್ಯವೆ.ದೂಹೆಸರು ಪಡೆದಿದೆ. ಜನಸಂಖ್ಯೆ 47,78332 (2009). ಬಿಳಿಯರು, ಉಳಿದರವರುನೀಗೋಗಳು, ಆದಿವಾಸಿ ಇಂಡಿಯನ್ನರು ಇತ್ಯಾದಿ. ವಿಸ್ತೀರ್ಣದಲ್ಲಿ ಸಂಯುಕ್ತ ಸಂಸ್ಥಾನಗಳಲ್ಲಿ6ನೆಯ ಸ್ಥಾನ ಪಡೆದಿರುವ ಅರಿಜೋನ ಒಟ್ಟು ಜನಸಂಖ್ಯೆಯಲ್ಲಿ ಶೇ. 84 ಭಾಗನಗರವಾಸಿಗಳು ಉಳಿದ ಶೇ 16 ಭಾಗಮಾತ್ರ ಗ್ರಾಮೀಣರು.(ಕೆ . ಆರ್)

ಸ್ಟೇಟ್ ಆಫ್ ಆರಿಜೋನ
Flag of ಆರಿಜೋನ[[Image:|100px|State seal of ಆರಿಜೋನ]]
ಧ್ವಜಮುದ್ರೆ
ಅಡ್ಡಹೆಸರು: The Grand Canyon State,
The Copper State
ಧ್ಯೇಯ: Ditat Deus
Map of the United States with ಆರಿಜೋನ highlighted
Map of the United States with ಆರಿಜೋನ highlighted
ಅಧಿಕೃತ ಭಾಷೆ(ಗಳು)ಆಂಗ್ಲ
ಭಾಷೆಗಳುಆಂಗ್ಲ 74.1%,
ಸ್ಪ್ಯಾನಿಷ್ 19.5%,
ನವಾಹೊ 1.9%
ರಾಜಧಾನಿಫೀನಿಕ್ಸ್
ಅತಿ ದೊಡ್ಡ ನಗರಫೀನಿಕ್ಸ್
ವಿಸ್ತಾರ Ranked 6th in the US
 - ಒಟ್ಟು113,998 sq mi
(295,254 km²)
 - ಅಗಲ310 miles (500 km)
 - ಉದ್ದ400 miles (645 km)
 - % ನೀರು0.32
 - Latitude31° 20′ N to 37° N
 - Longitude109° 3′ W to 114° 49′ W
ಜನಸಂಖ್ಯೆ 14thನೆಯ ಅತಿ ಹೆಚ್ಚು
 - ಒಟ್ಟು6,500,180 (2008 est.)[೧]
 - ಜನಸಂಖ್ಯಾ ಸಾಂದ್ರತೆ55.8/sq mi  (21.54/km²)
33rdನೆಯ ಸ್ಥಾನ
ಎತ್ತರ 
 - ಅತಿ ಎತ್ತರದ ಭಾಗHumphreys Peak[೨]
12,637 ft  (3,851 m)
 - ಸರಾಸರಿ4,100 ft  (1,250 m)
 - ಅತಿ ಕೆಳಗಿನ ಭಾಗColorado River[೨]
70 ft  (22 m)
ಸಂಸ್ಥಾನವನ್ನು ಸೇರಿದ್ದು February 14, 1912 (48th)
GovernorJan Brewer (R)
Lieutenant GovernorNone[೩]
U.S. SenatorsJohn McCain (R)
Jon Kyl (R)
Congressional Delegation5 Democrats, 3 Republicans (list)
Time zones 
 - Most of StateMountain: UTC-7
 - Navajo NationMountain: UTC-7/-6
AbbreviationsAZ Ariz. US-AZ
Websitewww.az.gov

ಮೇಲ್ಮೈಲಕ್ಷಣ

ಅರಿಜೋನ ಸಮುದ್ರಮಟ್ಟದಿಂದ ಅಷ್ಟೊಂದು ಎತ್ತರವಾಗಿರದಭೂಸ್ವರೂಪಗಳನ್ನು ಹೊಂದಿದೆ. ನೈರುತ್ಯ ಭಾಗ 30 ಮೀ ಎತ್ತರವಾಗಿದೆ. ಆದರೆ ಉತ್ತರಭಾಗ 3,6600 ಮೀ. ಎತ್ತರವಾಗಿದೆ. ಉತ್ತರ ಮತ್ತು ಈಶಾನ್ಯ ಭಾಗಗಳು ಕೊಲೊರಾಡೊಪ್ರಸ್ಥಭೂಮಿಯಲ್ಲಿವೆ. ಈ ಭಾಗವು ಲಕ್ಷಾಂತರ ವರ್ಷಗಳಿಂದ ಕೊಲೊರಾಡೊ ನದಿಯಸರ್ವೆಗೊಳಪಟ್ಟ ಅತ್ಯಂತ ಆಳವಾದ ಗ್ರಾಂಡ್‍ಕ್ಯಾನಿಯನ್ (ಕಂದಕ) ಮತ್ತು ಕೊರಕಲುಗಳನ್ನುಹೊಂದಿದೆ. ಅನೇಕ ಉನ್ನತಶಿಖರಗಳಿವೆ. ಅವುಗಳಲ್ಲಿ ಹಂಪ್ರಿಶಿಖರ ಅತಿ ಎತ್ತರವಾದುದು(3,862ಮೀ) ನೈರುತ್ಯಭಾಗವು ತಗ್ಗಾಗಿದೆ. ಅಲ್ಲಲ್ಲಿ ಚದುರಿದಂತಹ ಕೆಲವು ಬೆಟ್ಟಗುಡ್ಡಗಳಿವೆ.ಕೊಲೊರಾಡೊ ಅರಿಜೋನದ ಪ್ರಮುಖ ನದಿವ್ಯೂಹ. ಲಿಟ್ಲ್ ಕೊಲೊರಾಡೊ, ಬಿಲ್ವಿಲಿಯಂ ಮತ್ತು ಗಿಲಗಳು ಇದರ ಮುಖ್ಯ ಉಪನದಿಗಳು.

ವಾಯುಗುಣ

ನೈರುತ್ಯಬಾಗ ಬೇಸಗೆಯಲ್ಲಿ ಅಧಿಕ ಉಷ್ಣಾಂಶದಿಂದಾಗಿ 38 ಸೆಂ.(100) ಶುಷ್ಕವಾಗಿರುತ್ತದೆ. ಹಗಲಿಗಿಂತ ರಾತ್ರಿ ತಂಪು. ಪೂರ್ವ-ಮಧ್ಯ ದ ಉನ್ನತ ಭಾಗಗಳಲ್ಲಿಚಳಿಗಾಲದ ಉಷ್ಣಾಂಶ 300 ಸೆಂ ಗೆ ಇಳಿಯುತ್ತದೆ. ಮಳೆಯ ಹಂಚಿಕೆ ಕಡಿಮೆ.ಸರಾಸರಿ ವಾರ್ಷಿಕ ಮಳೆ 8 ಸೆಂಮೀಗಳು.

ಸಸ್ಯ ಮತ್ತು ಪ್ರಾಣಿವರ್ಗ

ಮಳೆಯ ಕೊರತೆಯಿಂದ ಸಸ್ಯವರ್ಗ ಮರುಭೂಮಿಯಂತಹದ್ದು. ಕಳ್ಳಿಯಂತಹ ಗಿಡ-ಮರಗಳು ಬೆಳೆಯುತ್ತವೆ. ಸಿಂಹ, ಜಿಂಕೆ, ಚಿರತೆಕಾಡುಬೆಕ್ಕು ಪ್ರಮುಖ ವನ್ಯ ಪ್ರಾಣಗಳು, ವೈನ್, ಫರ್ ಮತ್ತು ಸ್ರ್ಪೂಸ್ ಮುಖ್ಯ ಮರಗಳು.

ನೈಸರ್ಗಿಕ ಸಂಪತ್ತು

ಅರಿಜೋನವು ಪ್ರಮುಖವಾಗಿ ತಾಮ್ರ ಉತ್ಪಾದಿಸುವ ಪ್ರಾಂತ್ಯ.ಜೊತೆಗೆ ಚಿನ್ನ, ಸೀಸ, ಬೆಳ್ಳಿ, ಸತು ಮತ್ತು ಕಲ್ನಾರುಗಳನ್ನು ಉತ್ಪಾದಿಸುತ್ತದೆ.

ಕೃಷಿ

ಒಣಹವೆ. ಮರುಭೂಮಿಯಂತಹ ಭೂಭಾಗವಿದ್ದರೂ ನೀರಾವರಿ ಸಹಾಯದಿಂದ ಕೃಷಿ ಸಾಗುತ್ತದೆ. ಹತ್ತಿ ಮತ್ತು ಹಣ್ಣು ಬೆಳೆ ಮುಖ್ಯವಾದವು. ಸಾರಿಗೆ-ಸಂಪರ್ಕದವ್ಯವಸ್ಥೆ ಸಾಧಾರಣ. ಕೈಗಾರಿಕೋದ್ಯಮ ಬಹಳಷ್ಟು ಮಟ್ಟಿಗೆ ಸ್ಥಳೀಯವಾಗಿ ದೊರೆಯುವಲೋಹಾಂಶ ಖನಿಜಗಳನ್ನಾಧರಿಸಿದೆ. ಅವುಗಳಲ್ಲಿ ತಾಮದ ಲೋಹತಯಾರಿಕೆ ಮುಖ್ಯ.ಒಟ್ಟಾರೆ ಅರಿಜೊನದ ಆರ್ಥಿಕತೆಯು ಐದು ಅಂಶಗಳನ್ನಾಧರಿಸಿದೆ: ತಾಮ್ರ, ಹತ್ತಿ,ವಾಯುಗುಣ, ದನಗಳು ಮತ್ತು ಹುಳಿಹಣ್ಣುಗಳು.

ಉಲ್ಲೇಖಗಳು