ಕಜುವೊ ಇಷಿಗುರೊ

ಕಜುವೊ ಇಷಿಗುರೊ ಬ್ರಿಟನ್‌ನ ಕಾದಂಬರಿಕಾರ,ಕವಿ,ಮತ್ತು ಚಿತ್ರಕತೆಗಾರ.ಅವರಿಗೆ 2017ರ ಸಾಹಿತ್ಯದ ನೊಬೆಲ್‌ ಪುರಸ್ಕಾರ ದೊರೆತಿದೆ.[೧]

Kazuo Ishiguro
Ishiguro in October 2005
ಜನನ (1954-11-08) ೮ ನವೆಂಬರ್ ೧೯೫೪ (ವಯಸ್ಸು ೬೯)
ನಾಗಾಸಾಕಿ, ಜಪಾನ್
ವೃತ್ತಿಕಾದಂಬರಿಕಾರ ಸಣ್ಣ ಕಥೆ ಬರಹಗಾರರ ಕಲಾವಿದ ಅಂಕಣಕಾರರ ಬರಹಗಾರ
ಪೌರತ್ವಬ್ರಿಟಿಷ್
ವಿದ್ಯಾಭ್ಯಾಸವಿದ್ಯಾಭ್ಯಾಸಯುನಿವರ್ಸಿಟಿ ಆಫ್ ಕೆಂಟ್ (ಬಿಎ) ಯುನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ (ಎಂಎ)
ಕಾಲ1981–ಪ್ರಸ್ತುತ
ಪ್ರಕಾರ/ಶೈಲಿನಾಟಕ ಇತಿಹಾಸ ಐತಿಹಾಸಿಕ ಕಾಲ್ಪನಿಕ ವಿಜ್ಞಾನ ಕಾಲ್ಪನಿಕ ಕಥಾಕೃತಿಗಳು
ಪ್ರಮುಖ ಕೆಲಸ(ಗಳು)ಎನ್‌ ಆರ್ಟಿಸ್ಟ್‌ ಆಫ್‌ ದಿ ಫ್ಲೋಟಿಂಗ್‌ ವರ್ಲ್ಡ್‌ (1986)

ದ ರಿಮೈನ್ಸ್‌ ಆಫ್‌ ದ ಡೇ (1989)
ದ ಅನ್‌ಕನ್ಸೋಲ್ಡ್‌ (1995)
ವೆನ್‌ ವಿ ವೆರ್‌ ಆರ್ಫನ್ಸ್‌ (2000)

ನೆವರ್‌ ಲೆಟ್‌ ಮಿ ಗೊ (2005)
ಪ್ರಮುಖ ಪ್ರಶಸ್ತಿ(ಗಳು)ವಿನಿಫ್ರೆಡ್ ಹಾಲ್ಟ್ಬಿ ಸ್ಮಾರಕ ಪ್ರಶಸ್ತಿ (1982)

ವಿಟ್ಬ್ರೆಡ್ ಪ್ರೈಜ್ (1986)
ಬೂಕರ್ ಪ್ರಶಸ್ತಿ (1989)
ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ (1995)
ಚೆವಲಿಯರ್ ಡೆ ಎಲ್ ಆರ್ಡ್ರೆ ಡೆಸ್ ಆರ್ಟ್ಸ್ ಎಟ್ ಡೆಸ್ ಲೆಟರ್ಸ್ (1998)

ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ (2017)
ಬಾಳ ಸಂಗಾತಿಲೊರ್ನಾ ಮ್ಯಾಕ್ಡೊಗಾಲ್ (ವಿವಾಹ 1986)
ಮಕ್ಕಳು1

ಬಾಲ್ಯ ಮತ್ತು ಜೀವನ

ಇಷಿಗುರೊ ಜಪಾನ್‌ನ ನಾಗಸಾಕಿಯಲ್ಲಿ ಜನಿಸಿದರು. ಮತ್ತು ಬ್ರಿಟನ್‌ನಲ್ಲಿ ಬೆಳೆದರು.ಇಷಿಗುರೊ ಐದು ವರ್ಷದ ಬಾಲಕನಾಗಿದ್ದಾಗ ಹೆತ್ತವರು ಬ್ರಿಟನ್‌ಗೆ ವಲಸೆ ಹೋದರು.

ಕಾದಂಬರಿ

ಅವರ ‘ರಿಮೈನ್ಸ್‌ ಆಫ್‌ ದ ಡೇ’ ಎಂಬ ಕಾದಂಬರಿ 1989ರಲ್ಲಿ ಮ್ಯಾನ್‌ ಬೂಕರ್‌ ಪ್ರಶಸ್ತಿಗೆ ಪಾತ್ರವಾಗಿತ್ತು. ಎರಡನೇ ಮಹಾಯುದ್ಧದ ಬಳಿಕದ ಬ್ರಿಟನ್‌ನಲ್ಲಿ ಜೀವಿಸಿದ್ದ ಸೂಕ್ಷ್ಮ ಮನಸ್ಥಿತಿಯ ದಮನಕ್ಕೊಳಗಾದ ಬಾಣಸಿಗನೊಬ್ಬನ ಕತೆ ಹೇಳುವ ಈ ಕಾದಂಬರಿ ಅದೇ ಹೆಸರಿನಲ್ಲಿ ಸಿನಿಮಾ ಆಗಿತ್ತು. ಆಸ್ಕರ್‌ಗೆ ನಾಮ ನಿರ್ದೇಶನಗೊಂಡಿತ್ತು.

ಬರಹ

ಇಷಿಗುರೊ ಅವರು ಈಸ್ಟ್‌ ಆ್ಯಂಗ್ಲಿಯಾ ವಿಶ್ವವಿದ್ಯಾಲಯದಲ್ಲಿ ಸೃಜನಶೀಲ ಬರವಣಿಗೆಯನ್ನು ಅಭ್ಯಾಸ ಮಾಡಿದ್ದಾರೆ. *1982ರಲ್ಲಿ ಅವರ ಮೊದಲ ಕಾದಂಬರಿ ‘ಎ ಪೇಲ್‌ ವ್ಯೂ ಆಫ್‌ ದ ಹಿಲ್ಸ್‌’ ಪ್ರಕಟವಾಯಿತು. ಬಳಿಕ ಅವರು ಬರವಣಿಗೆಯನ್ನೇ ವೃತ್ತಿಯಾಗಿ ಮಾಡಿಕೊಂಡರು. ‌

ಪ್ರತಿ ಮಾರಾಟ

ದ ರಿಮೈನ್ಸ್‌ ಆಫ್‌ ದ ಡೇ ಮತ್ತು ನೆವರ್‌ ಲೆಟ್‌ ಮಿ ಗೊ ಇಷಿಗುರೊ ಅವರ ಅತ್ಯಂತ ಜನಪ್ರಿಯ ಕಾದಂಬರಿಗಳು. ಈ ಎರಡೂ ಕೃತಿಗಳ ಹತ್ತು ಲಕ್ಷಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿವೆ. ಇಷಿಗುರೊ ಕವಿಯೂ ಹೌದು. ಜತೆಗೆ ಸಿನಿಮಾಗಳಿಗೆ ಚಿತ್ರಕತೆ ಬರೆದಿದ್ದಾರೆ

ಕಾದಂಬರಿಗಳು

  • ಎ ಪೇಲ್‌ ವ್ಯೂ ಆಫ್‌ ಹಿಲ್ಸ್‌ (1982)
  • ಎನ್‌ ಆರ್ಟಿಸ್ಟ್‌ ಆಫ್‌ ದಿ ಫ್ಲೋಟಿಂಗ್‌ ವರ್ಲ್ಡ್‌ (1986)
  • ದ ರಿಮೈನ್ಸ್‌ ಆಫ್‌ ದ ಡೇ (1989)
  • ದ ಅನ್‌ಕನ್ಸೋಲ್ಡ್‌ (1995)
  • ವೆನ್‌ ವಿ ವೆರ್‌ ಆರ್ಫನ್ಸ್‌ (2000)
  • ನೆವರ್‌ ಲೆಟ್‌ ಮಿ ಗೊ (2005)
  • ದ ಬರೀಡ್‌ ಜೈಂಟ್‌ (2015)

ಬಾಹ್ಯ ಕೊಂಡಿಗಳು

ಉಲ್ಲೇಖಗಳು