ಮರಣದಂಡನೆ

ಮರಣದಂಡನೆ ಅಥವಾ ಫಾಸಿಶಿಕ್ಷೆ ಯು ಅಪರಾಧ ಮಾಡಿದ್ದಕ್ಕಾಗಿ ನೀಡುವ ಶಿಕ್ಷೆಯಾಗಿ ನ್ಯಾಯಾಂಗ ಪ್ರಕ್ರಿಯೆ ಮೂಲಕ ವ್ಯಕ್ತಿಯೊಬ್ಬನನ್ನು ಕೊಲ್ಲುವುದು. ಮರಣದಂಡನೆಯಲ್ಲಿ ಕೊನೆಗೊಳ್ಳುವ ಅಪರಾಧಗಳನ್ನು ಮರಣದಂಡನೆಗೆ ಗುರಿಯಾದ ಪಾತಕಗಳು ಅಥವಾ ಮರಣದಂಡನೆಗೆ ಗುರಿಯಾದ ಅಪರಾಧ ಗಳೆಂದು ಹೆಸರಾಗಿವೆ. ಕ್ಯಾಪಿಟಲ್ ಪದವು ಲ್ಯಾಟಿನ್ ಕ್ಯಾಪಿಟಲಿಸ್‌ ನ ಮೂಲವಾಗಿದೆ. ಆದ್ದರಿಂದ ಅಕ್ಷರಶಃ "ತಲೆಗೆ ಸಂಬಂಧಿಸಿದೆ"(ಲ್ಯಾಟಿನ್ ಕಾಪಟ್ ) ಆದ್ದರಿಂದ ಮರಣದಂಡನೆ ಶಿಕ್ಷೆಯೆಂದರೆ ಮೂಲತಃ ಒಬ್ಬ ವ್ಯಕ್ತಿಯ ತಲೆಯನ್ನು ಕಡಿಯುವ ಶಿಕ್ಷೆಯಾಗಿದೆ.

Criminal executed by an elephant, Baroda.
ಮೈರಾದ ಸೇಂಟ್ ನಿಕೋಲಾಸ್ ಮೂವರು ತಪ್ಪಾಗಿ ಶಿಕ್ಷಿತರಾದ ಕೈದಿಗಳನ್ನು ರಕ್ಷಿಸಲು ವಧಕಾರನಿಂದ ಕತ್ತಿಯನ್ನು ಕಸಿದುಕೊಳ್ಳುತ್ತಿರುವುದು(ಇಲ್ಯಾ ರೆಪಿನ್ ಅವರ ತೈಲಚಿತ್ರ,1888, ಸ್ಟೇಟ್ ರಷ್ಯನ್ ವಸ್ತುಸಂಗ್ರಹಾಲಯ)
ಫ್ರಾನ್ಸ್‌ನಲ್ಲಿ 1894ರಲ್ಲಿ ಕ್ರಾಂತಿಕಾರಿಯನ್ನು ಗಿಲ್ಲೋಟಿನ್ (ಶಿರಚ್ಛೇದಕ ಯಂತ್ರ) ಶಿಕ್ಷೆಗೆ ಗುರಿಪಡಿಸಲಾಯಿತು.
ಕ್ರಿಶ್ಚಿಯನ್ ಹುತಾತ್ಮನ ಅಂತಿಮ ಪ್ರಾರ್ಥನೆ, ಜೀನ್-ಲಿಯೋನ್ ಗೆರೋಮ್ ಅವರಿಂದ(1883)ರೋಮನ್ ಕೊಲೋಸಿಯಂ.
ಜಿಯೋವಾನಿ ಬ್ಯಾಟಿಸ್ಟಾ ಬುಗಾಟ್ಟಿ, ಪಪಾಲ್ ಸ್ಟೇಟ್ಸ್‌ನ ವಧಕಾರ(ಮರಣದಂಡನೆ ಕಾರ್ಯಗತಗೊಳಿಸುವವ)1796 ಮತ್ತು 1865ರ ನಡುವೆ, 516 ಮರಣದಂಡನೆ ಕಾರ್ಯಗತಗೊಳಿಸಿದ(ಮರಣದಂಡನೆಗೆ ಗುರಿಯಾದ ಕೈದಿಗೆ ನಶ್ಯವನ್ನು ಕೊಡುತ್ತಿರುವ ಬುಗಾಟ್ಟಿ ಚಿತ್ರ) ವ್ಯಾಟಿಕನ್ ಸಿಟಿ ತನ್ನ ಮರಣದಂಡನೆ ಶಾಸನವನ್ನು 1969ರಲ್ಲಿ ರದ್ದುಮಾಡಿತು.
1916ರಲ್ಲಿ ಮೆಕ್ಸಿಕೊದಲ್ಲಿ ಗುಂಡುಹಾರಿಸುವ ತುಕಡಿಯಿಂದ ಮರಣದಂಡನೆ
The burning of Jakob Rohrbach, a leader of the peasants during the German Peasants' War.
An Aztec adulterer being stoned to death; Florentine Codex.

ಇತಿವೃತ್ತ

  • ಮರಣದಂಡನೆಯನ್ನು ಹಿಂದೆ ಅಕ್ಷರಶಃ ಪ್ರತಿಯೊಂದು ಸಮಾಜ ಆಚರಣೆಗೆ ತಂದಿತ್ತು.ಆದರೂ ಪ್ರಸಕ್ತ ಕೇವಲ ೫೮ ರಾಷ್ಟ್ರಗಳು ಸಕ್ರಿಯವಾಗಿ ಅದನ್ನು ನಿಷೇಧಿಸಿವೆ(ಉಳಿದವು ೧೦ ವರ್ಷಗಳ ತನಕ ಅದನ್ನು ಬಳಸಿಲ್ಲ ಅಥವಾ ಯುದ್ಧಕಾಲ ಮುಂತಾದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅವಕಾಶ ನೀಡಿದೆ).[೧] ಇದು ವಿವಿಧ ರಾಷ್ಟ್ರಗಳಲ್ಲಿ ಮತ್ತು ರಾಜ್ಯಗಳಲ್ಲಿ ಸಕ್ರಿಯವಾಗಿ ವಿವಾದಿತ ವಸ್ತುವಾಗಿದ್ದು, ಒಂದು ರಾಜಕೀಯ ಸಿದ್ಧಾಂತ ಅಥವಾ ಸಾಂಸ್ಕೃತಿಕ ಪ್ರದೇಶದಲ್ಲಿ ಭಿನ್ನ ನಿಲುವುಗಳನ್ನು ಹೊಂದಲಾಗಿದೆ.
  • ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳಲ್ಲಿ, ಐರೋಪ್ಯ ಒಕ್ಕೂಟದ ಮೂಲಭೂತ ಹಕ್ಕುಗಳ ಸನ್ನದಿನ ೨ನೇ ವಿಧಿಯು ಮರಣದಂಡನೆ ಶಿಕ್ಷೆಯ ಬಳಕೆಯನ್ನು ನಿಷೇಧಿಸುತ್ತದೆ.[೨] ಇಂದು, ಬಹುತೇಕ ರಾಷ್ಟ್ರಗಳನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಮರಣದಂಡನೆ ರದ್ದತಿವಾದಿಗಳೆಂದು ಪರಿಗಣಿಸಿದೆ.[೩] ಅವು ಮರಣದಂಡನೆ ರದ್ದಿಗೆ ಉತ್ತೇಜಿಸಲು ಬದ್ಧತೆಗೊಳಗಾಗದ UN ನಿರ್ಣಯದ ಮತದಾನಕ್ಕೆ ಅವಕಾಶ ನೀಡಿದವು.[೪]
  • ಆದಾಗ್ಯೂ, ವಿಶ್ವದ ಜನಸಂಖ್ಯೆಯಲ್ಲಿ ೬೦%ಕ್ಕೂ ಹೆಚ್ಚು ಜನರು ಮರಣದಂಡನೆ ಶಿಕ್ಷೆ ಜಾರಿಯಲ್ಲಿರುವ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ. ವಿಶ್ವದ ನಾಲ್ಕು ಅತ್ಯಂತ ಜನಸಂಖ್ಯೆಯ ರಾಷ್ಟ್ರಗಳು(ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ,ಭಾರತ, ಅಮೆರಿಕ ಮತ್ತು ಇಂಡೊನೇಶಿಯ) ಮರಣ ದಂಡನೆಯನ್ನು ಅಳವಡಿಸಿಕೊಂಡಿದ್ದು, ಮುಂದಿನ ಭವಿಷ್ಯದಲ್ಲಿ ಅದನ್ನು ರದ್ದುಮಾಡುವ ಸಂಭವನೀಯತೆಯಿಲ್ಲ.[೫][೬][೭][೮][೯][೧೦][೧೧][೧೨][೧೩]

ಇತಿಹಾಸ

  • ಅಪರಾಧಕ್ಕೆ ಶಿಕ್ಷೆ ವಿಧಿಸಲು ಮತ್ತು ರಾಜಕೀಯ ವಿರೋಧವನ್ನು ದಮನ ಮಾಡುವುದಕ್ಕಾಗಿ ಬಹುತೇಕ ಎಲ್ಲ ಸಮಾಜಗಳು ಕ್ರಿಮಿನಲ್‌ಗಳು ಮತ್ತು ರಾಜಕೀಯ ವಿರೋಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು ಬಳಕೆಗೆ ತಂದಿದ್ದವು. ಮರಣದಂಡನೆ ಶಿಕ್ಷೆಯನ್ನು ಜಾರಿಗೆ ತಂದಿರುವ ಬಹುತೇಕ ಸ್ಥಳಗಳಲ್ಲಿಹತ್ಯೆ,ಬೇಹುಗಾರಿಕೆ,ದೇಶದ್ರೋಹ ಅಥವಾ ಮಿಲಿಟರಿ ನ್ಯಾಯದ ಭಾಗವಾಗಿ ಮೀಸಲಾಗಿತ್ತು.
  • ಕೆಲವು ರಾಷ್ಟ್ರಗಳಲ್ಲಿ ಅತ್ಯಾಚಾರ,ವ್ಯಭಿಚಾರ,ರಕ್ತಸಂಬಂಧಿ ಲೈಂಗಿಕತೆ ಹಾಗೂ ಗುದಸಂಭೋಗ ಮುಂತಾದ ಲೈಂಗಿಕ ಅಪರಾಧಗಳಿಗೆ ಮರಣದಂಡನೆ ವಿಧಿಸುತ್ತಾರೆ. ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಧಾರ್ಮಿಕ ಅಪರಾಧಗಳಾದ ಧರ್ಮಭ್ರಷ್ಟತೆ ಮುಂತಾ ದವು (ರಾಷ್ಟ್ರ ಧರ್ಮವನ್ನು ಔಪಚಾರಿಕವಾಗಿ ತೊರೆಯುವುದು)ಮರಣದಂಡನೆಗೆ ಗುರಿಯಾಗುತ್ತವೆ.
  • ಅನೇಕ ಮರಣದಂಡನೆ ಶಿಕ್ಷೆ ಜಾರಿಯಾಗುವ ರಾಷ್ಟ್ರಗಳಲ್ಲಿ ಮಾದಕವಸ್ತು ಕಳ್ಳಸಾಗಣೆ ಕೂಡ ಮರಣದಂಡನೆಗೆ ಅರ್ಹವಾದ ಅಪರಾಧವಾಗಿದೆ. ಚೀನಾದಲ್ಲಿ ಮಾನವ ಕಳ್ಳಸಾಗಣೆ ಮತ್ತು ಭ್ರಷ್ಟಾಚಾರದ ಗಂಭೀರ ಪ್ರಕರಣಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುತ್ತದೆ. ವಿಶ್ವಾದಾದ್ಯಂತ ಮಿಲಿಟರಿಗಳಲ್ಲಿ ಮಿಲಿಟರಿ ಕೋರ್ಟ್ ಗಳು ಹೇಡಿತನ, ಸೈನ್ಯತೊರೆಯುವುದು,ಆದೇಶ ಉಲ್ಲಂಘನೆ ಮತ್ತು ದಂಗೆ ಮುಂತಾದ ಅಪರಾಧಗಳಿಗೆ ಮರಣದಂಡನೆ ವಿಧಿಸಿವೆ.
  • ಕ್ರಮಬದ್ಧ ಮರಣದಂಡನೆಗಳ ಬಳಕೆಯು ದಾಖಲಿತ ಇತಿಹಾಸದ ಆರಂಭದಲ್ಲಿಯೇ ಚಾಚಿಕೊಂಡಿದೆ. ಬಹುತೇಕ ಐತಿಹಾಸಿಕ ದಾಖಲೆಗಳು ಮತ್ತು ಅನೇಕ ಪುರಾತನ ಬುಡಕಟ್ಟು ಪದ್ಧತಿಗಳು ಮರಣದಂಡನೆಯು ಅವುಗಳ ನ್ಯಾಯವ್ಯವಸ್ಥೆಯ ಭಾಗವೆಂಬುದನ್ನು ಸೂಚಿಸಿವೆ. ತಪ್ಪಿಗೆ ಸಮುದಾಯದ ಶಿಕ್ಷೆಯು ಸಾಮಾನ್ಯವಾಗಿ ತಪ್ಪುಮಾಡಿದವನು ಪರಿಹಾರ ನೀಡುವುದು,ದೈಹಿಕ ಶಿಕ್ಷೆ,ಬಹಿಷ್ಕಾರ ಗಡೀಪಾರು ಮತ್ತು ಫಾಸಿಶಿಕ್ಷೆ ಸೇರಿವೆ. ಸಾಮಾನ್ಯವಾಗಿ ನ್ಯಾಯದ ರೂಪವಾಗಿ ಪರಿಹಾರ ಮತ್ತು ಬಹಿಷ್ಕಾರ ಸಾಕಾಗುತ್ತಿತ್ತು.[೧೪] ನೆರೆಯ ಬುಡಕಟ್ಟು ಜನರು ಅಥವಾ ಸಮುದಾಯಗಳು ಎಸಗುವ ಅಪರಾಧಕ್ಕೆ ಔಪಚಾರಿಕ ಕ್ಷಮೆ,ಪರಿಹಾರ ಅಥವಾ ಕುಲವೈರದ ರೂಪದಲ್ಲಿ ಪ್ರತಿಕ್ರಿಯೆ ಸಿಗುತ್ತಿತ್ತು.
  • ಕುಲವೈರ ಅಥವಾ ದ್ವೇಷವು ಕುಟುಂಬಗಳು ಅಥವಾ ಬುಡಕಟ್ಟುಗಳ ನಡುವೆ ಪಂಚಾಯ್ತಿ ವಿಫಲವಾದಾಗ ಅಥವಾ ನ್ಯಾಯಪಂಚಾಯ್ತಿ ವ್ಯವಸ್ಥೆ ಅಸ್ತಿತ್ವದಲ್ಲಿ ಇಲ್ಲದಿದ್ದಾಗ ಸಂಭವಿಸುತ್ತಿತ್ತು. ಈ ಸ್ವರೂಪದ ನ್ಯಾಯವ್ಯವಸ್ಥೆ ರಾಜ್ಯ ಅಥವಾ ಸಂಘಟಿತ ಧರ್ಮ ಆಧಾರದ ಪಂಚಾಯ್ತಿ ವ್ಯವಸ್ಥೆ ಹೊರಹೊಮ್ಮುವ ಮುಂಚೆ ಸಾಮಾನ್ಯವಾಗಿತ್ತು. ಇದು ಅಪರಾಧ,ಭೂವಿವಾದಗಳು ಅಥವಾ ಸದಾಚಾರ ಸಂಹಿತೆಯಿಂದ ಉದ್ಭವಿಸಿರಬಹುದು.
  • "ಪ್ರತೀಕಾರದ ಕ್ರಮಗಳು ಸಾಮಾಜಿಕ ಸಮೂಹವು ಸ್ವತಃ ರಕ್ಷಿಸಿಕೊಳ್ಳುವ ಸಾಮರ್ಥ್ಯ ಹೊಂದಿರುವುದನ್ನು ಒತ್ತಿಹೇಳುತ್ತವೆ ಮತ್ತು ಆಸ್ತಿ,ಹಕ್ಕುಗಳು ಅಥವಾ ವ್ಯಕ್ತಿಗೆ ಉಂಟಾದ ಹಾನಿಗೆ ಶಿಕ್ಷಿಸದೇ ಬಿಡುವುದಿಲ್ಲವೆಂದು ಶತ್ರುಗಳಿಗೆ(ಜತೆಗೆ ಸಮರ್ಥ ಮಿತ್ರಕೂಟಗಳಿಗೆ)ತೋರಿಸುವುದಾಗಿದೆ".[೧೫] ಆದಾಗ್ಯೂ ಬಳಕೆಯಲ್ಲಿ ದ್ವೇಷದ ಯುದ್ಧ ಮತ್ತು ವಿಜಯ ಗಳಿಸುವ ಯುದ್ಧದ ನಡುವೆ ವ್ಯತ್ಯಾಸ ತಿಳಿಯುವುದು ಕಷ್ಟ.
  • ಅನೇಕ ಐತಿಹಾಸಿಕ ದಂಡನೆಗಳು ಬ್ರೇಕಿಂಗ್ ವೀಲ್,ಕುದಿಯುವ ಪಾತ್ರೆಯಲ್ಲಿ ಮರಣದಂಡನೆ,ಚರ್ಮಸುಲಿಯುವುದು,ನಿಧಾನವಾಗಿ ಕತ್ತರಿಸುವುದು,ಹೊಟ್ಟೆಯ ಕರುಳು ತೆಗೆಯುವುದು,ಶಿಲುಬೆಗೇರಿಸುವುದು,ಶೂಲಕ್ಕೇರಿಸುವುದು,ನಜ್ಜುಗುಜ್ಜಾಗಿ ಸುವುದು(ಆನೆಯ ಕಾಲಿನಿಂದ ತುಳಿಸುವುದು ಸೇರಿದೆ), ಕಲ್ಲಿನಿಂದ ಹೊಡೆಯುವುದು, ದಹಿಸುವ ಮೂಲಕ ಮರಣದಂಡನೆ, ಅಂಗಾಂಗ ಛೇದನ, ಕತ್ತರಿಸುವುದು, ಶಿರಚ್ಛೇದ,ಸ್ಕಾಫಿಸಮ್(ನಗ್ನ ದೇಹವನ್ನು ದೋಣಿಗೆ ಕಟ್ಟಿ ಬಿಡುವುದು), ನೆಕ್ಲೇಸಿಂಗ್ (ಗ್ಯಾಸೋಲಿನ್ ತುಂಬಿದ ರಬ್ಬರ್ ಟೈರ್‌ ಕತ್ತಿಗೆ ಹಾಕಿ ಬೆಂಕಿಹೊತ್ತಿಸುವ ಶಿಕ್ಷೆ)ಸೇರಿವೆ.
  • ವೈರಗಳ ಬಗ್ಗೆ ಬುಡಕಟ್ಟು ಪಂಚಾಯ್ತಿಯ ಪರ್ಯಾಲೋಚನೆ ಸಭೆಗಳಲ್ಲಿ ಶಾಂತಿ ಇತ್ಯರ್ಥಗಳು ಸೇರಿದ್ದು,ಧಾರ್ಮಿಕ ಸನ್ನಿವೇಶ ಮತ್ತು ಪರಿಹಾರ ವ್ಯವಸ್ಥೆ ಮೂಲಕ ಏರ್ಪಡಿಸಲಾಗುತ್ತಿತ್ತು. ಪರಿಹಾರವು ಬದಲೀ ತತ್ವವನ್ನು ಆಧರಿಸಿದ್ದು,ಅವು ವಸ್ತುವಿನ (ಉದಾ.ಜಾನು ವಾರು, ಗುಲಾಮ)ಪರಿಹಾರ,ವಧು ಅಥವಾ ವರರ ವಿನಿಮಯ ಅಥವಾ ರಕ್ತದ ಋಣವನ್ನು ತೀರಿಸುವುದು.
  • ಇತ್ಯರ್ಥದ ನಿಯಮಗಳಲ್ಲಿ ಮಾನವ ರಕ್ತದ ಬದಲಿಗೆ ಪ್ರಾಣಿ ರಕ್ತಕ್ಕೆ ಅವಕಾಶ,ಆಸ್ತಿಗಳ ವರ್ಗಾವಣೆಗಳು ಅಥವಾ ರಕ್ತದ ಹಣ(ಮೃತರ ಕುಟುಂಬಕ್ಕೆ ಪರಿಹಾರ)ಅಥವಾ ಕೆಲವು ಪ್ರಕರಣದಲ್ಲಿ ವ್ಯಕ್ತಿಯನ್ನು ಮರಣದಂಡನೆಗೆ ಅರ್ಪಿಸು ವುದು. ಮರಣದಂಡನೆಗೆ ಅರ್ಪಿಸಿದ ವ್ಯಕ್ತಿ ಅಪರಾಧದ ಮೂಲ ಕರ್ತೃವಾಗಿರಬೇಕಿಲ್ಲ.ಏಕೆಂದರೆ ಈ ವ್ಯವಸ್ಥೆಯು ಬುಡಕಟ್ಟು ಜನಾಂಗಗಳನ್ನು ಆಧರಿಸಿದೆಯೇ ಹೊರತು ವ್ಯಕ್ತಿಗಳನ್ನು ಆಧರಿಸಿಲ್ಲ.
  • ಕುಲವೈರಗಳನ್ನು ವೈಕಿಂಗ್ ಕೂಟಗಳು ಮುಂತಾದ ಸಭೆಗಳಲ್ಲಿ ನಿಯಂತ್ರಿಸಲಾಗುತ್ತಿತ್ತು.[೧೬] ಕುಲವೈರಗಳಿಂದ ಹುಟ್ಟಿದ ವ್ಯವಸ್ಥೆಗಳು ಹೆಚ್ಚು ಸುಧಾರಿತ ಕಾನೂನು ವ್ಯವಸ್ಥೆಯ ಜತೆ ಉಳಿದುಕೊಂಡವು ಅಥವಾ ನ್ಯಾಯಾಲಯಗಳು ಅವಕ್ಕೆ ಮನ್ನಣೆ ನೀಡಿದವು(ಉದಾ.ಕಾಳಗದ ಮೂಲಕ ವಿಚಾರಣೆ) ಕುಲವೈರದ ಹೆಚ್ಚು ಆಧುನಿಕ ಪರಿಷ್ಕಾರಗಳಲ್ಲಿ ದ್ವಂದ್ವಯುದ್ಧ ಕೂಡ ಸೇರಿದೆ.
  • ವಿಶ್ವದ ಕೆಲವು ಭಾಗಗಳಲ್ಲಿ, ಪ್ರಾಚೀನ ಗಣರಾಜ್ಯಗಳ ರೂಪದಲ್ಲಿರುವ ರಾಷ್ಟ್ರಗಳಲ್ಲಿ, ರಾಜಪ್ರಭುತ್ವಗಳು ಅಥವಾ ಬುಡಕಟ್ಟು ಆಡಳಿತ ಹೊರಹೊಮ್ಮಿದವು. ಈ ರಾಷ್ಟ್ರಗಳು ಸಾಮಾನ್ಯವಾಗಿ ಸಮಾನ ಭಾಷಾ,ಧರ್ಮ ಅಥವಾ ಕುಟುಂಬದ ಸಂಬಂಧಗಳಿಂದ ಒಂದುಗೂಡಿವೆ. ಇಷ್ಟೇ ಅಲ್ಲದೇ,ಈ ರಾಷ್ಟ್ರಗಳ ವಿಸ್ತರಣೆಯು ನೆರೆಯ ಬುಡಕಟ್ಟುಪ್ರದೇಶಗಳು ಅಥವಾ ರಾಷ್ಟ್ರಗಳ ಮೇಲೆ ವಿಜಯದಿಂದ ಸಂಭವಿಸಿದವು. ತರುವಾಯ ರಾಜಪ್ರಭುತ್ವ, ಗಣ್ಯರು,ಅನೇಕ ಜನಸಾಮಾನ್ಯರು ಮತ್ತು ಗುಲಾಮರ ವಿವಿಧ ವರ್ಗಗಳು ಹೊರಹೊಮ್ಮಿದವು.
  • ಈ ಪ್ರಕಾರ,ಬುಡಕಟ್ಟು ಪಂಚಾಯ್ತಿಯು ಹೆಚ್ಚು ನ್ಯಾಯದ ಏಕೀಕೃತ ವ್ಯವಸ್ಥೆಯಲ್ಲಿ ಲೀನವಾಗಿ,"ಬುಡಕಟ್ಟು"ಗಳಿಗಿಂತ ಹೆಚ್ಚಾಗಿ ವಿವಿಧ "ವರ್ಗಗಳ" ನಡುವೆ ಸಂಬಂಧವನ್ನು ರೂಪಿಸಿದವು. ಅತ್ಯಂತ ಮುಂಚಿನ ಮತ್ತು ಅತೀ ಪ್ರಖ್ಯಾತ ಉದಾಹರಣೆಯಲ್ಲಿ ಹಮ್ಮುರಬಿ ಸಂಹಿತೆ. ಇದು ಬಲಿಪಶುಗಳು ಮತ್ತು ಅಪರಾಧಕರ್ತೃರ ವಿವಿಧ ವರ್ಗ/ಗುಂಪಿಗೆ ಅನುಗುಣವಾಗಿ ಭಿನ್ನ ಶಿಕ್ಷೆ ಮತ್ತು ಪರಿಹಾರವನ್ನು ನಿರ್ಧರಿಸಿದವು.
  • ಪೆಂಟಾಟ್ಯೂಚ್(ಕ್ರೈಸ್ತ ಹಳೆಯ ಒಡಂಬಡಿಕೆಯ ಪ್ರಥಮ ಐದು ಪುಸ್ತಕಗಳು)ಎಂದು ಕೂಡ ಹೆಸರಾದ ತೋರಾ(ಯಹೂದಿ ಕಾನೂನು)ಹತ್ಯೆ,ಅಪಹರಣ,ಮಾಟ,ಸಬ್ಬತ್ ಉಲ್ಲಂಘನೆ,ದೈವನಿಂದನೆ,ವ್ಯಾಪಕ ಸ್ತರಗಳ ಲೈಂಗಿಕ ಅಪರಾಧಗಳಿಗೆ ಮರಣ ದಂಡನೆ ಶಿಕ್ಷೆಯನ್ನು ಜಾರಿಮಾಡಿತ್ತು. ಆದರೂ ವಾಸ್ತವಿಕ ಮರಣದಂಡನೆಗಳು ಬಹಳ ಅಪರೂಪದ್ದಾಗಿತ್ತು ಎಂದು ನಿದರ್ಶನಗಳು ಹೇಳಿವೆ.[೧೭] ಪ್ರಾಚೀನ ಗ್ರೀಸ್‌ನಿಂದ ಮತ್ತಷ್ಟು ಉದಾಹರಣೆ ಸಿಗುತ್ತದೆ.ಅಥೇನಿಯನ್ ಕಾನೂನು ವ್ಯವಸ್ಥೆಯನ್ನು ಮೊದಲಿಗೆ ಡ್ರಾಕೊ ೬೨೧ನೇ BCಯಲ್ಲಿ ಬರೆದ: ವಿಶೇಷವಾಗಿ ವಿವಿಧ ಸ್ತರದ ಅಪರಾಧಗಳಿಗೆ ಮರಣದಂಡನೆಯನ್ನು ಅಳವಡಿಸಲಾಯಿತು.
  • ಆದರೂ ಸೋಲೊನ್ ನಂತರ ಡ್ರಾಕೊನ ನರಹತ್ಯೆ ಶಾಸನಗಳನ್ನು ಮಾತ್ರ ಉಳಿಸಿಕೊಂಡು ಡ್ರಾಕೊ ಸಂಹಿತೆಯನ್ನು ರದ್ದುಮಾಡಿ ಹೊಸ ಕಾನೂನುಗಳನ್ನು ಪ್ರಕಟಿಸಿದ.[೧೮] ಡ್ರಾಕೋನಿಯನ್ ಪದವು ಡ್ರಾಕೊ ಕಾನೂನುಗಳಿಂದ ಹುಟ್ಟಿಕೊಂಡಿದೆ. ವ್ಯಾಪಕ ಸ್ತರದ ಅಪರಾಧಗಳಿಗೆ ರೋಮನ್ನರು ಕೂಡ ಮರಣದಂಡನೆಯನ್ನು ಬಳಸಿಕೊಂಡರು.[೧೯][೨೦]
  • ಒಟ್ಟಾರೆಯಾಗಿ ಇಸ್ಲಾಂ ಮರಣದಂಡನೆಯನ್ನು ಅಂಗೀಕರಿಸಿದೆ.[೨೧] ಅಲ್-ಮುತಾದಿದ್ ಮುಂತಾದ ಬಾಗ್ದಾದ್‌ನ ಅಬ್ಬಾಸಿದ್ ಕಲೀಫರು ಸಾಮಾನ್ಯವಾಗಿ ಕ್ರೂರವಾದ ಶಿಕ್ಷೆಗಳನ್ನು ನೀಡುತ್ತಿದ್ದರು.[೨೨]
  • ಮಧ್ಯಕಾಲೀನ ಇಸ್ಲಾಮಿಕ್ ವಿಶ್ವದಲ್ಲಿ ಮರಣದಂಡನೆ ಶಿಕ್ಷೆಗೆ ವಿರೋಧಿಸಿದವರಲ್ಲಿ ಕೇವಲ ಬೆರಳೆಣಿಕೆಯಷ್ಟು ಷೇಕರಿದ್ದರು. ಅರೇಬಿಯನ್ ನೈಟ್ಸ್ ಎಂದು ಕೂಡ ಹೆಸರಾದ ಒನ್ ತೌಸಂಡ್ ಎಂಡ್ ಒನ್ ನೈಟ್ಸ್‌ ನಲ್ಲಿ,ಕಾಲ್ಪನಿಕ ಕಥೆಹೇಳುವ ಶೆಹೆರಾಜಾದೆಯನ್ನು "ವಿವೇಕದ ಹಾಗೂ ಕರುಣೆಯ ಧ್ವನಿ" ಎಂದು ಬಿಂಬಿಸಲಾಯಿತು. ಮರಣದಂಡನೆ ಶಿಕ್ಷೆಗೆ ಸಾಮಾನ್ಯವಾಗಿ ವಿರೋಧಿಸುವುದು ಅವಳ ತಾತ್ವಿಕ ನಿಲುವು ಆಗಿತ್ತು.
  • ತನ್ನ ಹಲವಾರು ಕಥೆಗಳ ಮೂಲಕ ಈ ಚಿಂತನೆಯನ್ನು ಅವಳು ವ್ಯಕ್ತಪಡಿಸಿದಳು."ದಿ ಮರ್ಚೆಂಟ್ ಎಂಡ್ ದಿ ಜಿನ್ನಿ", "ದಿ ಫಿಷರ್‌ಮ್ಯಾನ್ ಎಂಡ್ ದಿ ಜಿನ್ನಿ","ದಿ ತ್ರೀ ಆಪಲ್ಸ್" ಮತ್ತು "ದಿ ಹಂಚ್‌ಬ್ಯಾಕ್" ಇವುಗಳಲ್ಲಿ ಸೇರಿವೆ.[೨೩] ಇದೇ ರೀತಿ ಮಧ್ಯಕಾಲೀನ ಮತ್ತು ಪೂರ್ವ ಆಧುನಿಕ ಯುರೋಪ್‌ನಲ್ಲಿ ಆಧುನಿಕ ಬಂಧೀಖಾನೆ ವ್ಯವಸ್ಥೆಗಳು ಅಭಿವೃದ್ಧಿಯಾಗುವ ಮುಂಚೆ,ಮರಣದಂಡನೆಯನ್ನು ಸಾಮಾನ್ಯ ಸ್ವರೂಪದ ಶಿಕ್ಷೆಯಾಗಿ ಬಳಸಲಾಯಿತು.
  • ಉದಾಹರಣೆಗೆ, ೧೭೦೦ರಲ್ಲಿ ಬ್ರಿಟನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾದ ೨೨೨ ಅಪರಾಧಗಳಿದ್ದವು. ಅವುಗಳಲ್ಲಿ ಮರವೊಂದನ್ನು ಕಡಿದಿದ್ದು ಅಥವಾ ಪ್ರಾಣಿಯನ್ನು ಕಳ್ಳತನ ಮಾಡಿದ್ದು ಸಹ ಮರಣದಂಡನೆಗೆ ಗುರಿಯಾದ ಅಪರಾಧಗಳಲ್ಲಿ ಸೇರಿದ್ದವು.[೨೪]
  • ಕುಖ್ಯಾತ ಬ್ಲಡಿ ಕೋಡ್‌ನಿಂದ ೧೮ನೇ ಶತಮಾನ(೧೯ನೇ ಶತಮಾನದ ಪೂರ್ವಕಾಲ)ಬ್ರಿಟನ್ ವಾಸಿಸಲು ಅಪಾಯಕಾರಿ ಸ್ಥಳವೆನಿಸಿತು. ಉದಾಹರಣೆಗೆ ಸೆಪ್ಟೆಂಬರ್ ೨೮,೧೭೦೮ರಂದು ಕಳ್ಳತನದ ಅಪರಾಧಕ್ಕಾಗಿ ಕ್ರಮವಾಗಿ ೭ಮತ್ತು ೧೧ರ ವಯೋಮಾನದ ಮೈಕೆಲ್ ಹ್ಯಾಮಂಡ್ ಮತ್ತು ಅವನ ಸಹೋದರಿ ಆನ್‌ಗೆ ಲಿನ್ ರಾಜನ ಪ್ರಭುತ್ವದಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತೆಂದು ವರದಿಯಾಗಿತ್ತು. ಆದಾಗ್ಯೂ, ಸ್ಥಳೀಯ ಮಾಧ್ಯಮವು ಇಬ್ಬರು ಮಕ್ಕಳ ಮರಣದಂಡನೆ ಸುದ್ದಿಯನ್ನು ಪ್ರಕಟಣೆಗೆ ಅರ್ಹವೆಂದು ಪರಿಗಣಿಸಲಿಲ್ಲ.[೨೫]
  • ಆಧುನಿಕ ಯುಗದಲ್ಲಿ ಚೀನಾದಲ್ಲಿ ಪ್ರತಿವರ್ಷ ಅನೇಕ ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದರೂ,ಚೀನಾದ ಟ್ಯಾಂಗ್ ರಾಜಪ್ರಭುತ್ವದಲ್ಲಿ ಮರಣದಂಡನೆಯನ್ನು ರದ್ದುಮಾಡಿದ ಕಾಲವೊಂದಿತ್ತು.[೨೬]
  • ಇದು ೭೪೭ರ ವರ್ಷದಲ್ಲಿ ಸಂಭವಿಸಿದ್ದು,ಟಾಂಗ್‌ನ ಟೈಜಾಂಗ್ ಚಕ್ರವರ್ತಿ(r. ೭೧೨–೭೫೬) ಕಾಯಿದೆ ರೂಪಿಸಿದ. ಅದಕ್ಕೆ ಮುಂಚೆ ಕ್ರಿಮಿನಲ್‌ಗಳಿಗೆ ಮರಣದಂಡನೆ ಶಿಕ್ಷೆ ನೀಡುವ ಅಧಿಕಾರ ಚೀನಾದಲ್ಲಿ ಅವನೊಬ್ಬನಿಗೆ ಮಾತ್ರವಿತ್ತು. ಆಗ ಕೂಡ ಮರಣದಂಡನೆಗೆ ಸಂಬಂಧಿಸಿ ದಂತೆ ಅಪರೂಪದ್ದಾಗಿದ್ದು, ೭೩೦ನೇ ವರ್ಷದಲ್ಲಿ ೨೪ ಮರಣದಂಡನೆಗಳು ಮತ್ತು ೭೩೬ನೇ ವರ್ಷದಲ್ಲಿ ೫೮ ಮರಣದಂಡನೆಗಳು ಜಾರಿಯಾಗಿದ್ದವು.[೨೬] ೨೦೦ ವರ್ಷಗಳ ಬಳಿಕ,ಲಿಂಗ್ ಚಿ(ನಿಧಾನವಾಗಿ ಕತ್ತರಿಸುವುದು) ಅಥವಾ ಸಾವಿರ ಛೇದನ ಗಳಿಂದ ಸಾವು ಎಂದು ಹೆಸರಾದ ಒಂದು ಸ್ವರೂಪದ ಮರಣದಂಡನೆ ಜಾರಿಯಲ್ಲಿತ್ತು.ಇದು ಸುಮಾರು ೯೦೦ CEಯಿಂದ ೧೯೦೫ರಲ್ಲಿ ಅದು ರದ್ದಾಗುವ ತನಕ ಜಾರಿಯಲ್ಲಿತ್ತು.
  • ಅದರ ವ್ಯಾಪಕ ಬಳಕೆ ನಡುವೆಯೂ ಸುಧಾರಣೆಗೆ ಕರೆಗಳು ಅಜ್ಞಾತವಾಗುಳಿದಿಲ್ಲ. ೧೨ನೇ ಶತಮಾನದ ಸೆಫಾರ್ಡಿಕ್ ಕಾನೂನು ಪಂಡಿತ ಮೋಸಸ್ ಮೈಮೋನೈಡ್ಸ್ ಬರೆಯುತ್ತಾರೆ"ಒಬ್ಬ ನಿರ್ದೋಷಿ ವ್ಯಕ್ತಿಗೆ ಮರಣದಂಡನೆ ವಿಧಿಸುವುದಕ್ಕಿಂತ ಸಾವಿರ ತಪ್ಪಿತಸ್ಥ ಜನರನ್ನು ದೋಷಮುಕ್ತಿಗೊಳಿಸುವುದು ಉತ್ತಮ ಮತ್ತು ತೃಪ್ತಿದಾಯಕ" ಆರೋಪಿತ ಕ್ರಿಮಿನಲ್‌ನನ್ನು ಸಂಪೂರ್ಣ ಖಾತರಿಯಿಲ್ಲದೇ ಮರಣದಂಡನೆಗೆ ಗುರಿಮಾಡುವುದರಿಂದ ಜಾರುವ ಇಳಿಜಾರಿನಂತೆ ಸಾಕ್ಷ್ಯಾಧಾರದ ಹೊಣೆ ಇಳಿಮುಖವಾಗುತ್ತದೆ.
  • ಅಲ್ಲಿವರೆಗೆ ನಾವು ಕೇವಲ ನ್ಯಾಯಾಧೀಶರ ಇಚ್ಛೆಯಂತೆ ಶಿಕ್ಷೆ ವಿಧಿಸುತ್ತೇವೆ" ಎಂದು ವಾದಿಸಿದರು. ಕಾನೂನಿಗೆ ಜನಪ್ರಿಯ ಗೌರವವನ್ನು ಕಾಯ್ದುಕೊಳ್ಳುವುದು ಅವರ ಕಳಕಳಿಯಾಗಿತ್ತು. ಸೇರಿಸಿರುವ ತಪ್ಪುಗಳು ಸೇರಿಸಿರದ ತಪ್ಪುಗಳಿಗಿಂತ ಹೆಚ್ಚು ಅಪಾಯಕಾರಿಯೆಂದು ಅವರು ಕಂಡು ಕೊಂಡರು. ಕಳೆದ ಅನೇಕ ಶತಮಾನಗಳವರೆಗೆ,ಆಧುನಿಕ ರಾಷ್ಟ್ರ- ರಾಜ್ಯಗಳ ಹೊಮ್ಮುವಿಕೆಯನ್ನು ಕಂಡಿತು. ರಾಷ್ಟ್ರ ರಾಜ್ಯದ ಪರಿಕಲ್ಪನೆಗೆ ಬಹುತೇಕ ಮೂಲಭೂತವಾಗಿದ್ದು, ಪೌರತ್ವದ ಕಲ್ಪನೆ.
  • ಇದರಿಂದ ನ್ಯಾಯವು ಹೆಚ್ಚೆಚ್ಚು ಸಮಾನತೆ ಮತ್ತು ಸಾರ್ವತ್ರಿಕತ್ವದ ಜತೆ ಸಂಬಂಧ ಹೊಂದಿದವು.ಇದು ಯುರೋಪ್‌ನಲ್ಲಿ ಸಾಮಾನ್ಯ ಹಕ್ಕುಗಳ ಪರಿಕಲ್ಪನೆ ಹೊರಹೊಮ್ಮಲು ಕಾರಣವಾದವು. ಇನ್ನೊಂದು ಪ್ರಮುಖ ಅಂಶವು ಗೌರವಾನ್ವಿತ ಪೊಲೀಸ್ ಪಡೆಗಳು ಮತ್ತು ಕಾಯಂ ಕಾರಾಗೃಹ ಕೇಂದ್ರಗಳು ಹೊಮ್ಮಿದವು. ಕಳ್ಳತನ ಮುಂತಾದ ಸಣ್ಣ ಅಪರಾಧಗಳ ನಿವಾರಣೆಗೆ ಮರಣದಂಡನೆಯು ಹೆಚ್ಚೆಚ್ಚು ಅನವಶ್ಯಕ ತಡೆಯೆನಿಸಿತು.
  • ತಡೆಗಿಂತ ಹೆಚ್ಚಾಗಿ ಯೋಗ್ಯದಂಡನೆಯು ಶಿಕ್ಷೆಗೆ ಮುಖ್ಯ ಸಮರ್ಥನೆಯಾಗಿದೆ ಎಂಬ ವಾದವುವಿವೇಚನಾಶೀಲ ಆಯ್ಕೆ ಸಿದ್ಧಾಂತದ ಹೆಗ್ಗುರುತಾಗಿದೆ. ಇದರ ಕುರುಹು ಸೀಸರ್ ಬೆಕಾರಿಯ ಅವರ ಹೆಸರಾಂತ ಪ್ರಬಂಧ ಆನ್ ಕ್ರೈಮ್ಸ್ ಎಂಡ್ ಪನಿಶ್‌ಮೆಂಟ್ಸ್‌(೧೭೬೪)ನಲ್ಲಿ ಸಿಗುತ್ತದೆ. ಅದರಲ್ಲಿ ಅವನು ಚಿತ್ರಹಿಂಸೆ ಮತ್ತು ಮರಣದಂಡನೆಯನ್ನು ಖಂಡಿಸಿದ್ದಾನೆ ಹಾಗೂ ಜೆರೆಮಿ ಬೆಂಥಾಮ್ ಎರಡು ಬಾರಿ ಮರಣದಂಡನೆ ವಿರುದ್ಧ ಟೀಕಿಸಿದ್ದಾನೆ.[೨೭]
  • ಹೆಚ್ಚುವರಿಯಾಗಿ,ಬ್ರಿಟನ್ ಮುಂತಾದ ರಾಷ್ಟ್ರಗಳಲ್ಲಿ ನ್ಯಾಯದರ್ಶಿ ಮಂಡಳಿ ಮರಣದಂಡನೆಯಲ್ಲಿ ಕೊನೆಗೊಳ್ಳುವ ಶಿಕ್ಷೆಯ ಬದಲಿಗೆ ಹಿಂಸಾತ್ಮಕವಲ್ಲದ ಪಾತಕಿಗಳನ್ನು ದೋಷಮುಕ್ತಿಗೊಳಿಸುವತ್ತ ಒಲವು ತೋರಿದಾಗ, ಕಾನೂನು ಜಾರಿ ಅಧಿಕಾರಿಗಳು ಎಚ್ಚೆತ್ತರು. ಕಾರಾಗೃಹಗಳ ಒಳಗೆ ಸಾರ್ವಜನಿಕ ದೃಷ್ಟಿಯಿಂದ ದೂರವಾಗಿ ಮರಣದಂಡನೆ ವಿಧಿಸುವ ಈ ವಿದ್ಯಮಾನವು ಅಧಿಕೃತ ಮನ್ನಣೆಯಿಂದ ಪ್ರೇರಿತವಾಗಿದೆ ಹಾಗೂ ಇಟಲಿಯ ಬೆಕಾರಿಯದಲ್ಲಿ ಮೊದಲಿಗೆ ವರದಿಯಾಗಿದೆ. ನಂತರ ಆ ಕಾಲದ ಹೆಚ್ಚಿದ ಹಿಂಸಾತ್ಮಕ ಅಪರಾಧಗಳು ಮತ್ತು ಮರಣದಂಡನೆ ಸ್ಥಳಗಳ ಬಗ್ಗೆ ಚಾರ್ಲ್ಸ್ ಡಿಕನ್ಸ್ ಮತ್ತು ಕಾರ್ಲ್ ಮಾರ್ಕ್ಸ್ ವರದಿಮಾಡಿದ್ದರು.
  • ೨೦ನೇ ಶತಮಾನವು ಮಾನವ ಇತಿಹಾಸದಲ್ಲಿ ಅತ್ಯಂತ ರಕ್ತಸಿಂಚಿತವಾಗಿತ್ತು. ರಾಷ್ಟ್ರ-ರಾಜ್ಯಗಳ ನಡುವೆ ಯುದ್ಧದ ನಿರ್ಣಯದಿಂದ ಅಪಾರ ಹತ್ಯೆಗಳು ಸಂಭವಿಸಿದವು. ಮರಣದಂಡನೆಯ ದೊಡ್ಡ ಭಾಗವು ಶತ್ರು ಸೈನಿಕರಿಗೆ ಕ್ಷಿಪ್ರಗತಿಯ ಮರಣದಂಡನೆ ನೀಡುವುದಾಗಿತ್ತು. ಅಲ್ಲದೇ, ಆಧುನಿಕ ಮಿಲಿಟರಿ ಸಂಘಟನೆಗಳು ಮಿಲಿಟರಿ ಶಿಸ್ತನ್ನು ಕಾಯ್ದುಕೊಳ್ಳುವ ಕ್ರಮವಾಗಿ ಮರಣದಂಡನೆಯನ್ನು ಅನುಸರಿಸಿದವು. ಉದಾಹರಣೆಗೆ ಸೋವಿಯಟ್ಟರು ವರ್ಲ್ಡ್ ವಾರ್ IIನಲ್ಲಿ ಯುದ್ಧವನ್ನು ತೊರೆದುಹೋದ ಕಾರಣಕ್ಕಾಗಿ ೧೫೮,೦೦೦ ಸೈನಿಕರನ್ನು ಮರಣ ದಂಡನೆಗೆ ಗುರಿಪಡಿಸಿದರು.
  • ಈ ಹಿಂದೆ ಹೇಡಿತನ, ರಜಾರಹಿತ ಗೈರು, ಸೈನ್ಯವನ್ನು ತೊರೆಯುವುದು, ಅವಿಧೇಯತೆ, ಲೂಟಿ, ಶತ್ರುಗಳ ಗುಂಡಿನ ದಾಳಿಗೆ ಪಲಾಯನ ಮತ್ತು ಆದೇಶಗಳ ಪಾಲನೆಯಲ್ಲಿ ಅವಿಧೇಯತೆ ಮುಂತಾದವು ಮರಣದಂಡನೆ ಶಿಕ್ಷೆಗೆ ಅರ್ಹವಾದ ಅಪರಾಧಗಳು (ಡೆಸಿಮೇಶನ್(ಹತ್ತರಲ್ಲೊಬ್ಬನನ್ನು ಕೊಲ್ಲುವ ಶಿಕ್ಷೆ) ಮತ್ತು ರನ್ನಿಂಗ್ ದಿ ಗಾಂಟ್‌ಲೆಟ್(ಎದುರುಬದುರು ನಿಂತಿರುವವರ ಸಾಲಿನಲ್ಲಿ ಏಟುಗಳಿಗೆ ಗುರಿಯಾಗಿ ಓಡುವ ಶಿಕ್ಷೆ ನೋಡಿ). ಬಂದೂಕುಗಳು ಸಾಮಾನ್ಯ ಬಳಕೆಗೆ ಬಂದ ಬಳಿಕ ಬಹುತೇಕ ಏಕರೂಪವಾಗಿ ಗುಂಡುಹಾರಿಸುವ ತುಕಡಿಯ ಒಂದು ವಿಧದ ಮರಣದಂಡನೆಯು ಜಾರಿಗೆ ಬಂತು.
  • ಅಷ್ಟೇ ಅಲ್ಲದೇ,ವಿವಿಧ ನಿರಂಕುಶ ಆಡಳಿತದ ರಾಷ್ಟ್ರಗಳು-ಉದಾಹರಣೆಗೆ ಫ್ಯಾಸಿಸ್ಟ್ ಅಥವಾ ಕಮ್ಯುನಿಸ್ಟ್ ಸರ್ಕಾರಗಳು-ರಾಜಕೀಯ ದಮನದ ಪರಿಣಾಮಕಾರಿ ಮಾರ್ಗವಾಗಿ ಮರಣದಂಡನೆಯನ್ನು ಅಳವಡಿಸಿಕೊಂಡವು. ಆಂಶಿಕವಾಗಿ ಇಂತಹ ಮಿತಿಮೀರಿದ ಶಿಕ್ಷೆಗೆ ಪ್ರತಿಕ್ರಿಯೆಯಾಗಿ ನಾಗರಿಕ ಸಂಘಟನೆಗಳು ಮಾನವ ಹಕ್ಕುಗಳ ಪರಿಕಲ್ಪನೆ ಮತ್ತು ಮರಣದಂಡನೆ ರದ್ದಿಗೆ ಹೆಚ್ಚು ಮಹತ್ವ ನೀಡಲು ಆರಂಭಿಸಿದವು. ವಿಶ್ವಾದ್ಯಂತ ರಾಷ್ಟ್ರಗಳ ನಡುವೆ, ಬಹುತೇಕ ಎಲ್ಲ ಐರೋಪ್ಯ ಮತ್ತು ಅನೇಕ ಪೆಸಿಫಿಕ್ ಪ್ರದೇಶದ ರಾಷ್ಟ್ರಗಳಲ್ಲಿ(ಆಸ್ಟ್ರೇಲಿಯ, ನ್ಯೂಜಿಲೆಂಡ್ ಸೇರಿ)ಹಾಗೂ ಟಿಮೋರ್ ಲೆಸ್ಟೆ ಮತ್ತು ಕೆನಡಾ ಮರಣದಂಡನೆಯನ್ನು ರದ್ದುಮಾಡಿದವು.
  • ಲ್ಯಾಟಿನ್ ಅಮೆರಿಕದಲ್ಲಿ ಬಹುತೇಕ ರಾಷ್ಟ್ರಗಳು ಮರಣದಂಡನೆ ಜಾರಿಯನ್ನು ಸಂಪೂರ್ಣವಾಗಿ ರದ್ದುಮಾಡಿವೆ. ಕೆಲವು ರಾಷ್ಟ್ರಗಳಾದ ಬ್ರೆಜಿಲ್ ಮುಂತಾದವು, ಯುದ್ಧಕಾಲದಲ್ಲಿ ದೇಶದ್ರೋಹ ಮುಂತಾದ ಕೆಲವು ಅಪವಾದಾತ್ಮಕ ಪರಿಸ್ಥಿತಿಗಳಲ್ಲಿ ಮರಣ ದಂಡನೆಗೆ ಅವಕಾಶ ನೀಡಿತ್ತು. ಯುನೈಟೆಡ್ ಸ್ಟೇಟ್ಸ್(ಫೆಡರಲ್ ಸರ್ಕಾರ ಮತ್ತು ೩೫ ರಾಜ್ಯಗಳು),ಗೌಟೆಮಾಲಾ,ಕ್ಯಾರಿಬಿಯನ್ ಬಹುತೇಕ ಮತ್ತು ಏಷ್ಯಾದ ಬಹುತೇಕ ಪ್ರಜಾಪ್ರಭುತ್ವಗಳು(ಉದಾ.ಜಪಾನ್ ಮತ್ತು ಭಾರತ)ಹಾಗೂ ಆಫ್ರಿಕ(ಉದಾ.ಬೋಟ್ಸ್ವಾನಾ ಮತ್ತು ಜಾಂಬಿಯ ಮರಣದಂಡನೆ ಶಿಕ್ಷೆಯನ್ನು ಉಳಿಸಿಕೊಂಡಿದೆ. ಬಹುಶಃ ಅತ್ಯಂತ ಅಭಿವೃದ್ಧಿ ಹೊಂದಿದ ಹಾಗೂ ೧೯೯೪ರಿಂದೀಚೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದ ದಕ್ಷಿಣ ಆಫ್ರಿಕಾದಲ್ಲಿ ಮರಣದಂಡನೆ ಶಿಕ್ಷೆಯ ಕಾನೂನಿಲ್ಲ.
  • ಹತ್ಯೆ ಮತ್ತು ಅತ್ಯಾಚಾರ ಸೇರಿದಂತೆ ಹಿಂಸಾತ್ಮಕ ಅಪರಾಧಗಳು ವ್ಯಾಪಕ ಮಟ್ಟಗಳಲ್ಲಿ ಜರುಗುತ್ತಿದ್ದು,ಮರದಂಡನೆ ಇಲ್ಲದಿರುವ ಸತ್ಯಾಂಶವು ಪ್ರಸಕ್ತ ಆ ರಾಷ್ಟ್ರದಲ್ಲಿ ಕೊಂಚ ವಿವಾದಕ್ಕೆ ಗುರಿಯಾಗಿದೆ.[೨೮] ಮರಣದಂಡನೆ ಸಮರ್ಥಕರು ಇದು ಅಪರಾಧವನ್ನು ತಡೆಯುತ್ತದೆ.
  • ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳಿಗೆ ಒಳ್ಳೆಯ ಅಸ್ತ್ರವಾಗಿದೆ(ಉದಾಹರಣೆಗೆ ಅಪರಾಧಿ ತಪ್ಪನ್ನು ಒಪ್ಪಿಕೊಳ್ಳುವ ಅವಕಾಶ),[೨೯] ಶಿಕ್ಷೆಗೊಳಗಾದ ಕ್ರಿಮಿನಲ್‌ಗಳು ಪುನಃ ಅಪರಾಧ ಕೃತ್ಯ ಎಸಗದಿರು ವುದನ್ನು ಖಾತರಿ ಮಾಡುವ ಮೂಲಕ ಸಮುದಾಯ ಸುಧಾರಣೆಯಾಗುತ್ತದೆ. ಬದುಕುಳಿದ ಬಲಿಪಶುಗಳು ಅಥವಾ ಪ್ರೀತಿಪಾತ್ರರಿಗೆ ಪ್ರಕರಣ ಇತ್ಯರ್ಥಗೊಳ್ಳುತ್ತದೆ ಮತ್ತು ಅಪರಾಧಕ್ಕೆ ನ್ಯಾಯವಾದ ದಂಡನೆ ಸಿಗುತ್ತದೆಂದು ವಾದ ಮಂಡಿಸುತ್ತಾರೆ.
  • ತಪ್ಪಾಗಿ ಶಿಕ್ಷೆಗೊಳಗಾದ ಕೈದಿಗಳ ಮರಣದಂಡನೆಗೆ ಇದು ದಾರಿಕಲ್ಪಿಸುತ್ತದೆ, ಅಲ್ಪಸಂಖ್ಯಾತರು ಮತ್ತು ಬಡವರ ವಿರುದ್ಧ ತಾರತಮ್ಯವೆಸಗುತ್ತದೆ, ಜೀವಾವಧಿ ಶಿಕ್ಷೆಗಿಂತ ಹೆಚ್ಚು ಅನುಭವಿಸುವ ಕ್ರಿಮಿನಲ್‌ಗಳು ಅಪರಾಧ ಮಾಡದಂತೆ ತಡೆಯುವು ದಿಲ್ಲ, ಇದು ಹಿಂಸೆಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತದೆ,ಏಕೆಂದರೆ ಇದು ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರಿಂದ ಜೀವಾವಧಿ ಶಿಕ್ಷೆಗಿಂತ ಹೆಚ್ಚು ದುಬಾರಿ ಎಂದು ಮರಣದಂಡನೆ ವಿರೋಧಿಗಳು ವಾದಿಸುತ್ತಾರೆ.[೩೦]

ಮಾನವೀಯ ಮರಣದಂಡನೆಯತ್ತ ಕ್ರಮಗಳು

  • ಮುಂಚಿನ ನ್ಯೂ ಇಂಗ್ಲೆಂಡ್‌ನಲ್ಲಿ, ಸಾರ್ವಜನಿಕ ಮರಣದಂಡನೆಯು ಗಂಭೀರ ಮತ್ತು ದುಃಖಪೂರಿತ ಸಂದರ್ಭವಾಗಿತ್ತು.ಕೆಲವೊಮ್ಮೆ ದೊಡ್ಡ ಜನರ ಗುಂಪು ಹಾಜರಾಗಿ,ಏಸುವಿನ ಸುವಾರ್ತೆಯ ಸಂದೇಶವನ್ನು ಹಾಗೂ ಸ್ಥಳೀಯ ಬೋಧಕರು ಮತ್ತು ರಾಜಕಾರಣಿಗಳ ಪ್ರತಿಕ್ರಿಯೆಗಳನ್ನು ಆಲಿಸುತ್ತಾರೆ.[೩೧] ಇಂತಹ ಒಂದು ಸಾರ್ವಜನಿಕ ಮರಣದಂಡನೆ ಡಿಸೆಂಬರ್ ೧,೧೯೦೩ರಲ್ಲಿ ಸಂಭವಿಸಿದ್ದನ್ನು ಕನೆಕ್ಟಿಕಟ್ ಕೌರಾಂಟ್ ದಾಖಲಿಸಿದ್ದು, ಕೆಳಕಂಡಂತೆ ತಿಳಿಸಿದೆ,ಇಡೀ ಜನರಗುಂಪು ಅತ್ಯಂತ ವ್ಯವಸ್ಥಿತ ಮತ್ತು ಗಂಭೀರ ರೀತಿಯದ್ದಾಗಿತ್ತು.
  • ಈ ರಾಷ್ಟ್ರವಲ್ಲದೇ ಇತರೆ ರಾಷ್ಟ್ರಗಳ ಬಗ್ಗೆ ಪರಿಚಯವಿರುವ ಗುಂಪನ್ನು ವೀಕ್ಷಿಸಿದ ವ್ಯಕ್ತಿಯೊಬ್ಬ,ಇಂತಹ ಶಿಷ್ಟಾಚಾರದ, ಗಂಭೀರ ಜನರಗುಂಪನ್ನು ನ್ಯೂ ಇಂಗ್ಲೆಂಡ್ ಬಿಟ್ಟರೆ ಬೇರೆಲ್ಲೂ ಸೇರಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದ.[೩೨] ಕಡಿಮೆ ನೋವಿನ ಅಥವಾ ಮಾನವೀಯ ಸ್ವರೂಪದ ಮರಣದಂಡನೆಗಳನ್ನು ಜಾರಿಗೆ ತರುವ ಪ್ರವೃತ್ತಿಗಳು ವಿಶ್ವದ ಬಹುತೇಕ ಕಡೆ ಚಾಲ್ತಿಗೆ ಬಂತು.
  • ೧೮ನೇ ಶತಮಾನದ ಅಂತಿಮ ವರ್ಷಗಳಲ್ಲಿ ಈ ಕಾರಣಕ್ಕೆ ಫ್ರಾನ್ಸ್ ಗಿಲ್ಲೋಟಿನ್ ಅಭಿವೃದ್ಧಿಮಾಡಿತು ಮತ್ತು ಬ್ರಿಟನ್ ೧೯ನೇ ಶತಮಾನದ ಪೂರ್ವದಲ್ಲಿ ಡ್ರಾಯಿಂಗ್ ಎಂಡ್ ಕ್ವಾರ್ಟರಿಂಗ್(ಎಳೆದುಕೊಂಡು ಹೋಗಿ, ನೇಣಿಗೇರಿಸಿ ತಲೆಕತ್ತರಿಸುವುದು)ಶಿಕ್ಷೆಯನ್ನು ನಿಷೇಧಿಸಿತು. ಬಲಿಪಶು ನಿಂತಿದ್ದ ಏಣಿಯನ್ನು ತೆಗೆಯುವುದು ಅಥವಾ ಅವನು ನಿಂತಿರುವ ಸ್ಟೂಲ್ ಅಥವಾ ಬಕೆಟ್ ಒದೆಯುವ ಮೂಲಕ,ಉಸಿರುಗಟ್ಟಿ ಸಾವನ್ನಪ್ಪುವ ನೇಣು ಶಿಕ್ಷೆಯ ಬದಲಿಗೆ, ಲಾಂಗ್ ಡ್ರಾಪ್ "ಹ್ಯಾಂಗಿಂಗ್"‌ನಲ್ಲಿ ಅಪರಾಧಿಯನ್ನು ಎತ್ತರದಿಂದ ಬೀಳಿಸಿ ಕುತ್ತಿಗೆ ಮುರಿಯು ವುದು ಹಾಗೂ ಮಿದುಳು ಬಳ್ಳಿ ಕತ್ತರಿಸುವುದು ಜಾರಿಗೆ ಬಂತು. U.S.ನಲ್ಲಿ ವಿದ್ಯುತ್ ಕುರ್ಚಿ ಮತ್ತು ಅನಿಲ ಚೇಂಬರ್ ಶಿಕ್ಷೆಯನ್ನು ಹೆಚ್ಚು ಮಾನವೀಯ ಪರ್ಯಾಯಗಳಾಗಿ ಜಾರಿಗೆ ತರಲಾಯಿತು.
  • ಆದರೆ ಅವು ಮಾರಕ ಚುಚ್ಚುಮದ್ದು ಶಿಕ್ಷೆ ಸಂಪೂರ್ಣವಾಗಿ ಅವುಗಳ ಸ್ಥಾನ ಆಕ್ರಮಿಸಿದವು.ಮಾರಕ ಚುಚ್ಚುಮದ್ದು ಶಿಕ್ಷೆ ಅತ್ಯಂತ ನೋವಿನದು ಎಂಬ ಟೀಕೆಗೆ ಗುರಿಯಾಯಿತು. ಅದೇನೇ ಇದ್ದರೂ, ಕೆಲವು ರಾಷ್ಟ್ರಗಳು ಇನ್ನೂ ನಿಧಾನ ನೇಣಿನ ವಿಧಾನಗಳನ್ನು,ಕತ್ತಿಯಿಂದ ತಲೆ ಕತ್ತರಿಸುವುದು ಮತ್ತು ಕಲ್ಲುಹೊಡೆಯುವ ಶಿಕ್ಷೆಯನ್ನು ಕೂಡ ಅನುಸರಿಸುತ್ತವೆ.ಆದರೆ ಕೊನೆಯ ಶಿಕ್ಷೆ ಅಪರೂಪವಾಗಿ ಬಳಕೆಯಾಗುತ್ತಿದೆ.

ನಿರ್ಮೂಲನೆ

  • ಚೀನಾದಲ್ಲಿ ೭೪೭ ಮತ್ತು ೭೫೯ರ ನಡುವೆ ಮರಣದಂಡನೆ ಶಿಕ್ಷೆಯನ್ನು ನಿಷೇಧಿಸಲಾಗಿತ್ತು. ಇಂಗ್ಲೆಂಡ್‌ನಲ್ಲಿ ೧೩೯೫ರಲ್ಲಿ ಬರೆದ ದಿ ಟೆಲ್ವ್ ಕನ್‌ಕ್ಲೂಷನ್ಸ್ ಆಫ್ ದಿ ಲೊರಾರ್ಡ್ಸ್‌ನಲ್ಲಿ ಸಾರ್ವಜನಿಕ ವಿರೋಧದ ಹೇಳಿಕೆಯನ್ನು ಸೇರಿಸ ಲಾಯಿತು. ಥಾಮಸ್ ಮೋರ್ ಅವರ ಉಟೋಪಿಯ ೧೫೧೬ರಲ್ಲಿ ಪ್ರಕಟವಾಗಿ ಮರಣದಂಡನೆಯ ಅನುಕೂಲಗಳನ್ನು ಮಾತುಕತೆಯ ಸ್ವರೂಪದಲ್ಲಿ ಚರ್ಚಿಸಿ ಯಾವುದೇ ದೃಢ ತೀರ್ಮಾನಕ್ಕೆ ಬರಲು ವಿಫಲವಾಯಿತು.
  • ಮರಣದಂಡನೆಗೆ ಇತ್ತೀಚಿನ ವಿರೋಧವು ೧೭೬೪ರಲ್ಲಿ ಪ್ರಕಟವಾದ ಇಟಲಿಯ ಸಿಸೇರ್ ಬೆಕಾರಿಯ,ಡೈ ಡೆಲ್ಲಿಟಿ ಎ ಡೆಲ್ಲೆ ಪೆನೆ ,(ಆನ್ ಕ್ರೈಮ್ಸ್ ಎಂಡ್ ಪನಿಷ್‌ಮೆಂಟ್ಸ್‌) ಪುಸ್ತಕದಿಂದ ಹುಟ್ಟಿಕೊಂಡಿತು. ಈ ಪುಸ್ತಕದಲ್ಲಿ ಬೆಕಾರಿಯ ಚಿತ್ರಹಿಂಸೆ ಮತ್ತು ಮರಣ ದಂಡನೆಯಿಂದ ಅನ್ಯಾಯವನ್ನು ಮಾತ್ರವಲ್ಲದೇ ಸಾಮಾಜಿಕ ಏಳಿಗೆಯ ದೃಷ್ಟಿಕೋನದಿಂದ ನಿರುಪಯುಕ್ತತೆಯನ್ನು ತೋರಿಸುವ ಗುರಿಯನ್ನು ಹೊಂದಿದ್ದನು.
  • ಈ ಪುಸ್ತಕದಿಂದ ಪ್ರಭಾವಿತನಾಗಿ, ಪ್ರಖ್ಯಾತ ಪ್ರಬುದ್ಧ ರಾಜ ಹಾಗೂ ಆಸ್ಟ್ರಿಯದ ಭವಿಷ್ಯದ ಚಕ್ರವರ್ತಿ ಹ್ಯಾಬ್ಸ್‌ಬರ್ಗ್‌ನ ಗ್ರಾಂಡ್ ಡ್ಯೂಕ್ ಲೆಪಾಲ್ಡ್ II ಆಗಿನ ಸ್ವತಂತ್ರ ಟುಸ್ಕಾನಿಯ ಗ್ರಾಂಡ್ ಡುಚಿಯಲ್ಲಿ ಮರಣದಂಡನೆಯನ್ನು ರದ್ದು ಮಾಡಿದ. ಅದು ಆಧುನಿಕ ಕಾಲದ ಪ್ರಥಮ ಕಾಯಂ ಮರಣದಂಡನೆ ನಿರ್ಮೂಲನೆಯಾಗಿತ್ತು. ಮರಣದಂಡನೆಗಳಿಗೆ ನೈಜ ತಡೆಯನ್ನು(೧೭೬೯ರಲ್ಲಿ ಕೊನೆಯದು) ನವೆಂಬರ್ ೩೦,೧೭೮೬ರಲ್ಲಿ ಒಡ್ಡಿದ ನಂತರ, ಲೆಪೋಲ್ಡ್ ದಂಡನೆ ಸಂಹಿತೆಯ ಸುಧಾರಣೆಯನ್ನು ಘೋಷಿಸಿದ.ಅದು ಮರಣದಂಡನೆಯನ್ನು ರದ್ದುಮಾಡಿ ಅವನ ನೆಲದಲ್ಲಿ ಮರಣದಂಡನೆಗಿದ್ದ ಎಲ್ಲ ಉಪಕರಣಗಳನ್ನು ನಾಶ ಮಾಡುವಂತೆ ಆದೇಶಿಸಿದ.
  • ಟುಸ್ಕಾನಿಯ ಪ್ರಾದೇಶಿಕ ಆಡಳಿತವು ೨೦೦೦ದ ನವೆಂಬರ್ ೩೦ರಂದು ಈ ವಿದ್ಯಮಾನದ ಸ್ಮರಣೆಗಾಗಿ ವಾರ್ಷಿಕ ರಜೆಯನ್ನು ಮಂಜೂರು ಮಾಡಿತು. ಈ ಘಟನೆಯನ್ನು ಆ ದಿನ ವಿಶ್ವದಾದ್ಯಂತ ೩೦೦ ನಗರಗಳು ಸ್ಮರಿಸಿಕೊಂಡು ಸಿಟೀಸ್ ಫಾರ್ ಲೈಫ್ ಡೇ ಆಚರಿಸಿದವು.

ರೋಮನ್ ರಿಪಬ್ಲಿಕ್ ೧೮೪೯ರಲ್ಲಿ ಮರಣದಂಡನೆ ಶಿಕ್ಷೆಗೆ ನಿಷೇಧ ವಿಧಿಸಿತು. ವೆನೆಜುವೆಲಾ ಕೂಡ ಅದನ್ನು ಅನುಸರಿಸಿ ೧೮೬೩ರಲ್ಲಿ ಮರಣದಂಡನೆಯನ್ನು ರದ್ದುಮಾಡಿತು ಮತ್ತು ೧೮೬೫ರಲ್ಲಿ ಸಾನ್ ಮಾರಿನೊ ಅದೇ ರೀತಿ ಮಾಡಿತು.

  • ಸಾನ್ ಮ್ಯಾರಿನೊನಲ್ಲಿ ೧೪೬೮ರಲ್ಲಿ ಜಾರಿ ಮಾಡಿದ ಮರಣದಂಡನೆ ಕೊನೆಯದಾಗಿತ್ತು. ಪೋರ್ಚುಗಲ್‌ನಲ್ಲಿ ೧೮೫೨ ಮತ್ತು ೧೮೬೩ರಲ್ಲಿ ಶಾಸಕಾಂಗದ ಪ್ರಸ್ತಾವನೆಗಳ ನಂತರ,೧೮೬೭ರಲ್ಲಿ ಅದು ರದ್ದಾಯಿತು.

ಯುನೈಟೆಡ್ ಕಿಂಗ್ಡಮ್‌ನಲ್ಲಿ ಐದು ವರ್ಷಗಳ ಪ್ರಯೋಗವಾಗಿ ೧೯೬೫ರಲ್ಲಿ ಹಾಗೂ ೧೯೬೯ರಲ್ಲಿ ಕಾಯಂ ಆಗಿ ಹತ್ಯೆ ಮಾಡಿದ ಅಪರಾಧಿಗೆ ಮರಣದಂಡನೆ ರದ್ದುಮಾಡಿ(ದೇಶದ್ರೋಹ, ಹಿಂಸೆಯೊಂದಿಗೆ ಕಡಲ್ಗಳ್ಳತನ, ರಾಜಪ್ರಭುತ್ವದ ಹಡಗುಧಕ್ಕೆಯಲ್ಲಿ ಬೆಂಕಿಹಚ್ಚುವುದು ಮತ್ತು ಅನೇಕ ಯುದ್ಧಕಾಲದ ಮಿಲಿಟರಿ ಅಪರಾಧಗಳಿಗೆ ಮರಣದಂಡನೆ ಉಳಿದುಕೊಂಡವು). ಕೊನೆಯ ಮರಣದಂಡನೆಯು ೧೯೬೪ರಲ್ಲಿ ಜಾರಿ ಮಾಡಲಾಗಿತ್ತು. ಮರಣದಂಡನೆಯನ್ನು ಶಾಂತಿಕಾಲದ ಎಲ್ಲ ಅಪರಾಧಗಳಿಗೆ ೧೯೯೮ರಲ್ಲಿ ರದ್ದುಮಾಡಲಾಯಿತು.[೩೩]

  • ಕೆನಡಾ ೧೯೭೬ರಲ್ಲಿ ಅದನ್ನು ರದ್ದುಮಾಡಿತು, ಫ್ರಾನ್ಸ್ ೧೯೮೧ರಲ್ಲಿ ಮತ್ತು ಆಸ್ಟ್ರೇಲಿಯ ೧೯೮೫ರಲ್ಲಿ ರದ್ದುಮಾಡಿತು. ವಿಶ್ವಸಂಸ್ಥೆ ಸಾಮಾನ್ಯ ಸಭೆಯು ೧೯೭೭ರಲ್ಲಿ ಮರಣದಂಡನೆ ಶಿಕ್ಷೆಯನ್ನು ರದ್ದುಮಾಡುವ ಇಚ್ಛೆಯಿಂದ ಮರಣದಂಡನೆಗೆ ಒಳಪಡುವ ಅಪರಾಧಗಳ ಸಂಖ್ಯೆಯನ್ನು ಹಂತ ಹಂತವಾಗಿ ನಿರ್ಬಂಧಿಸುವುದು ಅಪೇಕ್ಷಣೀಯ ಎಂದು ಔಪಚಾರಿಕ ನಿರ್ಣಯದಲ್ಲಿ ದೃಢಪಡಿಸಿತು.[೩೪] ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಿಚಿಗನ್ ೧೮೪೬ ಮೇ ೧೮ರಂದು ಮರಣದಂಡನೆಗೆ ನಿಷೇಧ ವಿಧಿಸಿದ ಪ್ರಥಮ ರಾಜ್ಯವೆನಿಸಿತು.[೩೫] ಮರಣದಂಡನೆಯನ್ನು ಫರ್‌ಮ್ಯಾನ್ v.ಜಾರ್ಜಿಯ ಪ್ರಕರಣದ ಆಧಾರದ ಮೇಲೆ ೧೯೭೨-೧೯೭೬ರಲ್ಲಿ ಅಸಂವಿಧಾನಿಕ ಎಂದು ಘೋಷಿಸಲಾಯಿತು.
  • ಆದರೆ ೧೯೭೬ರಲ್ಲಿ ಗ್ರೆಗ್ v.ಜಾರ್ಜಿಯ ಪ್ರಕರಣವು ಮತ್ತೊಮ್ಮೆ ಕೆಲವು ಸಂದರ್ಭಗಳಲ್ಲಿ ಅದಕ್ಕೆ ಅನುಮತಿ ನೀಡಿತು. ಆಟ್ಕಿನ್ಸ್ v.ವಿರ್ಜಿನಿಯ ಪ್ರಕರಣದಲ್ಲಿ ಅದಕ್ಕೆ ಇನ್ನಷ್ಟು ಮಿತಿಗಳನ್ನು ಹೇರಲಾಯಿತು.(ಮನೋವೈಕಲ್ಯಕ್ಕೆ ಎಲ್ಲೆಯಾದ ೭೦ಕ್ಕಿಂತ ಕಡಿಮೆ IQ ಹೊಂದಿ ರುವ ವ್ಯಕ್ತಿಗಳಿಗೆ ಮರಣದಂಡನೆ ಅಸಂವಿಧಾನಿಕ) ಹಾಗೂ ರೋಪರ್ v.ಸಿಮ್ಮನ್ಸ್ ಪ್ರಕರಣದಲ್ಲಿ (ಅಪರಾಧ ಘಟಿಸಿದಾಗ ಅಪರಾಧಿಯ ವಯಸ್ಸು ೧೮ಕ್ಕಿಂತ ಕಡಿಮೆ ವಯಸ್ಸಿನಲ್ಲಿದ್ದರೆ ಮರಣದಂಡನೆ ಅಸಂವಿಧಾನಿಕ). ಪ್ರಸಕ್ತ, ಮಾರ್ಚ್ ೧೮, ೨೦೦೯ರಲ್ಲಿ U.S.ನ ೧೫ ರಾಜ್ಯಗಳು ಮತ್ತು ಕೊಲಂಬಿಯ ಜಿಲ್ಲೆ ಶಿಕ್ಷೆಗೆ ನಿಷೇಧ ಹೇರಿದವು. ಅದಕ್ಕೆ ಅನುಮತಿ ಸಿಕ್ಕಿದ ರಾಜ್ಯಗಳ ಪೈಕಿ ಕ್ಯಾಲಿಫೋರ್ನಿಯದಲ್ಲಿ ಮರಣದಂಡನೆ ಸಾಲಿನಲ್ಲಿ ದೊಡ್ಡ ಸಂಖ್ಯೆಯ ಕೈದಿಗಳಿದ್ದರು.
  • ಟೆಕ್ಸಾಸ್ ಮರಣದಂಡನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಅತ್ಯಂತ ಸಕ್ರಿಯವಾಗಿತ್ತು(ಪದ್ಧತಿಯನ್ನು ಕಾನೂನುಬದ್ಧಗೊಳಿಸುವ ತನಕ ಎಲ್ಲ ಮರಣದಂಡನೆಗಳ ಪೈಕಿ ಅಂದಾಜು ೧/೩ರಷ್ಟು). ಇತ್ತೀಚಿನ ರಾಷ್ಟ್ರವಾದ ಟೊಗೊ ೨೦೦೯ ಜೂನ್ ೨೩ರಂದು ಎಲ್ಲ ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯನ್ನು ರದ್ದುಮಾಡಿತು.[೩೬] ಮಾನವ ಹಕ್ಕು ರಕ್ಷಣೆ ಕಾರ್ಯಕರ್ತರು ಅದಕ್ಕೆ ವಿರೋಧ ಸೂಚಿಸಿ, ಅದು "ಕ್ರೂರ, ಅಮಾನ ವೀಯ, ಹೀನ ಶಿಕ್ಷೆ" ಎಂದು ಕರೆದರು. ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಮರಣದಂಡನೆಯನ್ನು "ಮಾನವ ಹಕ್ಕುಗಳ ಕಟ್ಟಕಡೆಯ ನಿರಾಕರಣೆ" ಎಂದು ಪರಿಗಣಿಸಿತು.[೩೭]

ಸಮಕಾಲೀನ ಬಳಕೆ

ಜಾಗತಿಕ ವಿತರಣೆ

ವಿಶ್ವ ಮಹಾಯುದ್ಧ II ಸಂಭವಿಸಿದಾಗಿನಿಂದ,ಮರಣದಂಡನೆಯನ್ನು ರದ್ದುಮಾಡುವ ಬಗ್ಗೆ ಸ್ಥಿರ ಪ್ರವತ್ತಿ ಕಂಡುಬಂತು. ೧೯೭೭ರಲ್ಲಿ ಮರಣದಂಡನೆ ರದ್ದುಮಾಡಿದ ರಾಷ್ಟ್ರಗಳು ೧೬. ಪ್ರಸಕ್ತ ಈಗ,೯೫ ರಾಷ್ಟ್ರಗಳು ಮರಣದಂಡನೆ ರದ್ದುಮಾಡಿವೆ. ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲ ಅಪರಾಧಗಳಿಗೆ ೯ ರಾಷ್ಟ್ರಗಳು ಅದನ್ನು ರದ್ದುಮಾಡಿವೆ. ೩೫ ರಾಷ್ಟ್ರಗಳು ಕನಿಷ್ಠ ೧೦ ವರ್ಷಗಳ ತನಕ ಅದನ್ನು ಬಳಸಿಲ್ಲ ಅಥವಾ ಅವು ಸ್ಥಗಿತಗೊಳಿಸಿದ್ದವು. ಉಳಿದ ೫೮ ರಾಷ್ಟ್ರಗಳು ಸಕ್ರಿಯವಾಗಿ ಮರಣದಂಡನೆಯನ್ನು ಉಳಿಸಿಕೊಂಡಿವೆ.[೩೮]ಟೆಂಪ್ಲೇಟು:Criminal procedure (trial)ಹ್ಯಾಂಡ್ಸ್ ಆಫ್ ಕೇನ್ ಪ್ರಕಾರ, ೨೦೦೮ರಲ್ಲಿ ಕನಿಷ್ಠ ೫,೭೨೭ ಮರಣದಂಡನೆಗಳನ್ನು ೨೬ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಲಾಯಿತು.[೩೯]

ದೇಶಕ್ರಮ ಸಂಖ್ಯೆ
ಚೀನಾಕನಿಷ್ಠ ೧೭೦೦[೪೦] - ೫೦೦೦ [೪೧]
ಇರಾನ್ಕನಿಷ್ಠ ೩೪೬
ಸೌದಿ ಅರೇಬಿಯಕನಿಷ್ಠ ೧೦೨
ಉತ್ತರ ಕೊರಿಯಕನಿಷ್ಠ ೬೩
[5] ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ೩೭
ಪಾಕಿಸ್ತಾನಕನಿಷ್ಠ ೩೬
ಇರಾಕ್ಕನಿಷ್ಠ ೩೪
[36] ವಿಯೆಟ್ನಾಂಕನಿಷ್ಠ ೧೯
ಆಫ್ಘಾನಿಸ್ತಾನಕನಿಷ್ಠ ೧೭
[64] ಜಪಾನ್‌೧೫
ಯೆಮನ್ಕನಿಷ್ಠ ೧೩
[37] ಇಂಡೋನೇಷಿಯಾ೧೦
ಲಿಬ್ಯಾಕನಿಷ್ಠ ೮
ಸೂಡಾನ್ಕನಿಷ್ಠ ೫
ಬಾಂಗ್ಲಾದೇಶ
ಬೆಲಾರಸ್
ಸೊಮಾಲಿಯಕನಿಷ್ಠ ೩
ಈಜಿಪ್ಟ್ಕನಿಷ್ಠ ೨
ಸಂಯುಕ್ತ ಅರಬ್ ಒಕ್ಕೂಟಕನಿಷ್ಠ ೧
[33] ಮಲೇಷಿಯಾಕನಿಷ್ಠ ೧
ಮಂಗೋಲಿಯಕನಿಷ್ಠ ೧
[32] ಸಿಂಗಪೂರ್‌ಕನಿಷ್ಠ ೧
ಸಿರಿಯಕನಿಷ್ಠ ೧
ಬಹರೇನ್
ಬೋಟ್ಸ್ವಾನ
ಸೇಂಟ್ ಕಿಟ್ಸ್ ಆಂಡ್ ನೆವಿಸ್
  • ಮರಣದಂಡನೆ ಉಳಿಸಿಕೊಂಡಿರುವ ರಾಷ್ಟ್ರಗಳಲ್ಲಿ ಅದರ ಬಳಕೆಯನ್ನು ಹೆಚ್ಚೆಚ್ಚು ನಿರ್ಬಂಧಿಸಲಾಯಿತು. ಅದನ್ನು ಉಳಿಸಿಕೊಂಡ ರಾಷ್ಟ್ರಗಳಲ್ಲಿ ಸಿಂಗಪುರ, ಜಪಾನ್ ಮತ್ತು U.S.ಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು. ಬಡ ಮತ್ತು ನಿರಂಕುಶ ಆಡಳಿತದ ರಾಷ್ಟ್ರಗಳಲ್ಲಿ ಮರಣ ದಂಡನೆಯನ್ನು ಅಗಾಧ ಪ್ರಮಾಣದಲ್ಲಿ ಜಾರಿಗೆ ತರಲಾಯಿತು.ಅದನ್ನು ಸಾಮಾನ್ಯವಾಗಿ ರಾಜಕೀಯ ದಮನದ ಅಸ್ತ್ರವಾಗಿ ಅವು ಅಳವಡಿಸಿಕೊಂಡವು.
  • ಇಸವಿ ೧೯೮೦ರ ದಶಕದಲ್ಲಿ, ಲ್ಯಾಟಿನ್ ಅಮೆರಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಂದಿದ್ದರಿಂದ ಮರಣದಂಡನೆ ರದ್ದುಮಾಡಿದ ರಾಷ್ಟ್ರಗಳ ಪಟ್ಟಿ ಬೆಳೆಯಿತು. ಇದರ ಬೆನ್ನಹಿಂದೆಯೇ ಮಧ್ಯ ಮತ್ತು ಪೂರ್ವ ಯುರೋಪ್‌ನಲ್ಲಿ ಸಮತಾವಾದ ಪತನ ಹೊಂದಿ ನಂತರ ಅವು EUಗೆ ಸೇರ್ಪಡೆಯಾಗುವ ಆಕಾಂಕ್ಷೆ ವ್ಯಕ್ತಪಡಿಸಿದವು.ಈ ರಾಷ್ಟ್ರಗಳಲ್ಲಿ ಮರಣದಂಡನೆಗೆ ಸಾರ್ವಜನಿಕ ಬೆಂಬಲ ಭಿನ್ನವಾಗಿದ್ದರೂ, ಕುಂಠಿತಗೊಳ್ಳುತ್ತಿದೆ.[೪೨]
  • ಐರೋಪ್ಯ ಒಕ್ಕೂಟ ಮತ್ತು ಯುರೋಪ್ ಮಂಡಳಿ ಎರಡೂ ತನ್ನ ಸದಸ್ಯ ರಾಷ್ಟ್ರಗಳು ಮರಣದಂಡನೆ ಪದ್ಧತಿಯನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದು ಅಗತ್ಯವಾಗಿದೆ.(ಯುರೋಪ್‌ನಲ್ಲಿ ಮರಣದಂಡನೆ ನೋಡಿ) ಇನ್ನೊಂದು ರೀತಿಯಲ್ಲಿ,ಏಷ್ಯಾದಲ್ಲಿ ಕ್ರಿಪ್ರಗತಿಯ ಕೈಗಾರೀಕರಣದಿಂದ ಮರಣದಂಡನೆ ಉಳಿಸಿಕೊಂಡ ಅಭಿವೃದ್ದಿಹೊಂದಿದ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸುತ್ತಿವೆ. ಈ ರಾಷ್ಟ್ರಗಳಲ್ಲಿ,ಮರಣದಂಡನೆಯು ದೃಢವಾದ ಸಾರ್ವಜನಿಕ ಬೆಂಬಲವನ್ನು ಗಳಿಸಿಕೊಂಡಿದ್ದು,ಈ ವಿಷಯವು ಸರ್ಕಾರ ಅಥವಾ ಮಾಧ್ಯಮದಲ್ಲಿ ಹೆಚ್ಚು ಗಮನಸೆಳೆದಿಲ್ಲ.
  • ಈ ಪ್ರವೃತ್ತಿಯನ್ನು ಕೆಲವು ಆಫ್ರಿಕ ಮತ್ತು ಮಧ್ಯಪೂರ್ವ ರಾಷ್ಟ್ರಗಳು ಅನುಸರಿಸಿದ್ದು,ಅಲ್ಲಿ ಮರಣದಂಡನೆಗೆ ಬೆಂಬಲ ಅಧಿಕವಾಗಿದೆ. ಕೆಲವು ರಾಷ್ಟ್ರಗಳು ಸುದೀರ್ಘ ಕಾಲದವರೆಗೆ ರದ್ದುಮಾಡಿದ ನಂತರ ಈ ಪದ್ಧತಿಯನ್ನು ಮತ್ತೆ ಆರಂಭಿಸಿವೆ. ಅಮೆರಿಕ ೧೯೬೭ರಲ್ಲಿ ಮರಣದಂಡನೆಗಳನ್ನು ಸ್ಥಗಿತಗೊಳಿಸಿದರೂ ೧೯೭೭ರಲ್ಲಿ ಪುನಾರಂಭಿಸಿತು. ಭಾರತದಲ್ಲಿ ೧೯೯೫ ಮತ್ತು ೨೦೦೪ರ ನಡುವೆ ಯಾವುದೇ ಮರಣದಂಡನೆ ಶಿಕ್ಷೆ ಇರಲಿಲ್ಲ.
  • ಶ್ರೀಲಂಕಾ ಇತ್ತೀಚೆಗೆ ಮರಣದಂಡನೆ ನಿಷೇಧವನ್ನು ಕೊನೆಗೊಳಿಸಿದ್ದಾಗಿ ಘೋಷಿಸಿದ್ದರೂ, ಯಾವುದೇ ಮರಣದಂಡನೆಗಳನ್ನು ಕಾರ್ಯರೂಪಕ್ಕೆ ತಂದಿಲ್ಲ. ಫಿಲಿಪೈನ್ಸ್ ಮರಣದಂಡನೆಯನ್ನು ೧೯೮೭ರಲ್ಲಿ ರದ್ದುಮಾಡಿದ ನಂತರ ೧೯೯೩ರಲ್ಲಿ ಪುನಾರಂಭಿಸಿತು. ಆದರೆ ೨೦೦೬ರಲ್ಲಿ ಪುನಃ ರದ್ದುಮಾಡಿತು.

ಮಾದಕವಸ್ತು-ಸಂಬಂಧಿತ ಅಪರಾಧಗಳಿಗೆ ಮರಣದಂಡನೆ

ಹತ್ಯೆ ಮತ್ತಿತರ ಹಿಂಸಾತ್ಮಕ ಅಪರಾಧಗಳಿಗೆ ಮರಣದಂಡನೆ ಶಿಕ್ಷೆಯನ್ನು ಉಳಿಸಿಕೊಂಡ ಕೆಲವು ರಾಷ್ಟ್ರಗಳು ಮಾದಕವಸ್ತು ಸಂಬಂಧಿತ ಅಪರಾಧಗಳಿಗೆ ಮರಣದಂಡನೆ ಜಾರಿಗೆ ತರಲಿಲ್ಲ. ಮಾದಕವಸ್ತು ಸಂಬಂಧಿತ ಅಪರಾಧಗಳಿಗೆ ಮರಣದಂಡನೆ ವಿಧಿಸುವ ಬಗ್ಗೆ ಶಾಸನಬದ್ಧ ನಿಯಮಗಳನ್ನು ಪ್ರಸಕ್ತ ಹೊಂದಿರುವ ರಾಷ್ಟ್ರಗಳ ಪಟ್ಟಿ ಕೆಳಗಿನಂತಿವೆ. ಆಫ್ಘಾನಿಸ್ತಾನ
ಬಾಂಗ್ಲಾದೇಶ
[34] ಬ್ರೂನೈ
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ[೪೩]
ರಿಪಬ್ಲಿಕ್ ಆಫ್ ಚೀನಾ[೪೪]
ಈಜಿಪ್ಟ್/೧}
ಭಾರತ (ಇಂತಹ ಅಪರಾಧಗಳಿಗೆ ಯಾವುದೇ ಮರಣದಂಡನೆ ವಿಧಿಸಿಲ್ಲ.[ಸೂಕ್ತ ಉಲ್ಲೇಖನ ಬೇಕು])
ಇಂಡೊನೇಶಿಯ
ಇರಾನ್
ಇರಾಕ್
ಕುವೈಟ್
ಲಾವೋಸ್
[33] ಮಲೇಶಿಯಾ
ಓಮನ್
ಪಾಕಿಸ್ತಾನ
ಸೌದಿ ಅರೇಬಿಯ
[32] ಸಿಂಗಪೂರ್‌
ಥಾಯ್ಲೆಂಡ್
[36] ವಿಯೆಟ್ನಾಂ
ಜಿಂಬಾಬ್ವೆ

ನಿರ್ದಿಷ್ಟ ರಾಷ್ಟ್ರಗಳಲ್ಲಿ

ವಿಶ್ವಾದ್ಯಂತ ಮರಣದಂಡನೆಯ ಬಳಕೆ(ಜೂನ್ 2009ರಲ್ಲಿದ್ದಂತೆ).[121][122][123][124]*ಗಮನಿಸಿ,U.S.ರಾಜ್ಯಗಳಲ್ಲಿ ಕಾನೂನು ಭಿನ್ನವಾಗಿದ್ದರೂ,ಅದನ್ನು ಮರಣದಂಡನೆ ಉಳಿಸಿಕೊಂಡ ರಾಷ್ಟ್ರವೆಂದೇ ಪರಿಗಣಿತವಾಗಿದೆ,ಏಕೆಂದರೆ ಫೆಡರಲ್ ಮರಣದಂಡನೆಯು ಈಗಲೂ ಸಕ್ರಿಯ ಬಳಕೆಯಲ್ಲಿದೆ.

ಈ ರಾಷ್ಟ್ರಗಳಲ್ಲಿ ಅಥವಾ ಪ್ರದೇಶಗಳಲ್ಲಿ ಮರಣದಂಡನೆ ಕುರಿತ ಇನ್ನಷ್ಟು ಮಾಹಿತಿಗೆ ನೋಡಿ: ಆಸ್ಟ್ರೇಲಿಯ. ಕೆನಡಾ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ(ಹಾಂಕಾಂಗ್ ಮತ್ತು ಮಾಕೌ ಹೊರತುಪಡಿಸಿ).ಯುರೋಪ್, ಭಾರತ, ಇರಾನ್, ಇರಾಕ್, ಜಪಾನ್, ನ್ಯೂಜಿಲೆಂಡ್, ಪಾಕಿಸ್ತಾನ, ಫಿಲಿಪೈನ್ಸ್, ರಷ್ಯಾ, ಸಿಂಗಪುರ, ಟೈವಾನ್, ಯುನೈಟೆಡ್ ಕಿಂಗ್ಡಮ್, ಅಮೆರಿಕ ಸಂಯುಕ್ತ ಸಂಸ್ಥಾನಗಳು.

ಬಾಲಾಪರಾಧಿಗಳು

  • ಬಾಲಾಪರಾಧಿಗಳಿಗೆ ಮರಣದಂಡನೆ(ಅಪರಾಧ ನಡೆದ ಸಂದರ್ಭದಲ್ಲಿ ೧೮ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದ ಕ್ರಿಮಿನಲ್‌ಗಳಿಗೆ)ಹೆಚ್ಚೆಚ್ಚು ಅಪರೂಪವಾಗುತ್ತಿದೆ. ೯ ರಾಷ್ಟ್ರಗಳು ಅಪರಾಧ ನಡೆದ ಸಂದರ್ಭದಲ್ಲಿ ಬಾಲಕರಾಗಿದ್ದ ಅಪರಾಧಿಗಳಿಗೆ ೧೯೯೦ರಿಂದೀಚೆಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿವೆ: ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ,ಡಿಮೋಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೊ, ಇರಾನ್, ನೈಜೀರಿಯ,ಪಾಕಿಸ್ತಾನ, ಸೌದಿ ಅರೇಬಿಯ,ಸೂಡಾನ್, ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಯೆಮೆನ್ [೪೫] PRC,ಪಾಕಿಸ್ತಾನ, ಅಮೆರಿಕ ಮತ್ತು ಯೆಮನ್ ನಂತರ ಕನಿಷ್ಠ ವಯೋಮಿತಿಯನ್ನು ೧೮ವರ್ಷಗಳಿಗೆ ಏರಿಸಿತು.[೪೬]
  • ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆಗಿನಿಂದ ಬಾಲಾಪರಾಧಿಗಳು ಮತ್ತು ಪ್ರೌಢವಯಸ್ಕರ ೬೧ ಪರೀಕ್ಷಿಸಿದ ಮರಣದಂಡನೆಗಳನ್ನು ಅನೇಕ ರಾಷ್ಟ್ರಗಳಲ್ಲಿ ದಾಖಲಿಸಿದ್ದು, ಅವರು ಬಾಲಕರಾಗಿ ಅಪರಾಧಗಳನ್ನು ಎಸಗಿದ್ದಕ್ಕೆ ಶಿಕ್ಷೆಗೊಳಗಾಗಿದ್ದರು.[೪೭] PRC ೧೮ರ ವಯಸ್ಸಿನ ಒಳಗಿನವರ ಮರಣದಂಡನೆಗೆ ಅವಕಾಶ ನೀಡುವುದಿಲ್ಲ.ಆದರೆ ಮಕ್ಕಳ ಮರಣದಂಡನೆ ಜಾರಿಮಾಡಿದ್ದಾಗಿ ವರದಿಯಾಗಿತ್ತು.[೪೮]
  • ಬ್ರಿಟಿಷ್ ಅಮೆರಿಕದಲ್ಲಿ ೧೬೪೨ರಲ್ಲಿ ಆರಂಭವಾಗಿ,ಅಂದಾಜು ೩೬೫[೪೯] ಬಾಲಾಪರಾಧಿಗಳು ಅಮೆರಿಕದ ರಾಜ್ಯಗಳು ಮತ್ತು ಫೆಡರಲ್ ಸರ್ಕಾರದಿಂದ ಮರಣದಂಡನೆಗೆ ಗುರಿಯಾದರು.[೫೦]
  • ಅಮೆರಿಕದ ಸುಪ್ರೀಂಕೋರ್ಟ್ ಥಾಮ್ಸನ್ v.ಓಕ್ಲಹಾಮಾ (೧೯೮೮)ಪ್ರಕರಣದಲ್ಲಿ ೧೬ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲ ಅಪರಾಧಿಗಳಿಗೆ ಮರಣದಂಡನೆಯನ್ನು ರದ್ದು ಮಾಡಿತು ಮತ್ತು ರೋಪರ್ v.ಸಿಮ್ಮನ್ಸ್ ಪ್ರಕರಣದಲ್ಲಿ(೨೦೦೫) ಎಲ್ಲ ಬಾಲಾಪರಾಧಿ ಗಳಿಗೆ ಮರಣದಂಡನೆ ರದ್ದುಮಾಡಿತು. ಇದರ ಜತೆಗೆ,೨೦೦೨ರಲ್ಲಿ,ಅಮೆರಿಕ ಸುಪ್ರೀಂಕೋರ್ಟ್ ಆಟ್ಕಿನ್ಸ್ v. ವಿರ್ಜಿನಿಯ ಪ್ರಕರಣದಲ್ಲಿ ಮನೋವೈಕಲ್ಯ ಹೊಂದಿರುವ ವ್ಯಕ್ತಿಗಳ ಮರಣದಂಡನೆ ಅಸಂವಿಧಾನಿಕ ಎಂದು ಘೋಷಿಸಿತು.
  • ಇರಾನ್, ಪಾಕಿಸ್ತಾನ,ಸೌದಿ ಅರೇಬಿಯ,ಸೂಡಾನ್ ಮತ್ತು ಯೆಮನ್ ೨೦೦೫ ಮತ್ತು ಮೇ ೨೦೦೮ರ ನಡುವೆ ಬಾಲಾಪರಾಧಿಗಳಿಗೆ ಮರಣದಂಡನೆ ವಿಧಿಸಿದೆಯೆಂದು ವರದಿಯಾಗಿದ್ದು, ಬಹುತೇಕ ಮಂದಿ ಇರಾನ್‌ಗೆ ಸೇರಿದವರು.[೫೧] ಬಾಲಾಪರಾಧಿಗಳಿಗೆ ೩೭(ಎ)ವಿಧಿಯನ್ವಯ ಮರಣದಂಡನೆ ನಿಷೇಧಿಸುವ ವಿಶ್ವಸಂಸ್ಥೆ ಮಕ್ಕಳ ಹಕ್ಕುಗಳನ್ನು ಕುರಿತ ಒಪ್ಪಂದದಲ್ಲಿ ಸೊಮಾಲಿಯ ಮತ್ತು ಅಮೆರಿಕ (ಪದ್ಧತಿಯನ್ನು ರದ್ದುಮಾಡಬೇಕೆಂದು ಅಮೆರಿಕದ ಸುಪ್ರೀಂಕೋರ್ಟ್ ನಿರ್ಧಾರಗಳಿದ್ದರೂ) ಹೊರತುಪಡಿಸಿ ಎಲ್ಲ ರಾಷ್ಟ್ರಗಳು ಸಹಿ ಹಾಕಿ ಅನುಮೋದಿಸಿದವು.[೫೨] ಮಾನವ ಹಕ್ಕುಗಳ ಉತ್ತೇಜನ ಮತ್ತು ರಕ್ಷಣೆ ಕುರಿತ UN ಉಪ-ಸಮಿತಿಯು ಬಾಲಾಪರಾಧಿಗಳಿಗೆ ಮರಣದಂಡನೆಯು ಸಾಂಪ್ರದಾಯಿಕ ಅಂತಾರಾಷ್ಟ್ರೀಯ ಕಾನೂನಿನಮೂಲಭೂತ ತತ್ವಕ್ಕೆ ವ್ಯತಿರಿಕ್ತವಾಗಿದೆಯೆಂದು ಪ್ರತಿಪಾದಿಸಿದೆ. U.N. ನಾಗರಿಕ ಮತ್ತು ರಾಜಕೀಯ ಹಕ್ಕುಗಳನ್ನು ಕುರಿತ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಬಹುತೇಕ ರಾಷ್ಟ್ರಗಳು ಸಹಭಾಗಿಯಾಗಿವೆ. (ಅದರ ವಿಧಿ ೬.೫ರಲ್ಲಿ ಹೀಗೆ ಹೇಳಲಾಗಿದೆ "೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಎಸಗುವ ಅಪರಾಧಗಳಿಗೆ ಮರಣದಂಡನೆ ವಿಧಿಸಬಾರದು..")
  • ಜಪಾನ್‌ನಲ್ಲಿ ಮರಣದಂಡನೆ ವಿಧಿಸಲು ಕನಿಷ್ಠ ವಯಸ್ಸು ಅಂತಾರಾಷ್ಟ್ರೀಯ ಮಾನದಂಡಗಳ ಆದೇಶದನ್ವಯ ೧೮ವರ್ಷಗಳಾಗಿವೆ. ಆದರೆ ಜಪಾನ್ ಕಾನೂನಿನ್ವಯ,೨೦ರ ವಯೋಮಿತಿಯ ಕೆಳಗಿನ ಯಾರೇ ಆದರೂ ಬಾಲಕರು ಎಂದು ಪರಿಗಣಿತರಾಗುತ್ತಾರೆ. ಮರಣದಂಡನೆ ಸಾಲಿನಲ್ಲಿ ಪ್ರಸಕ್ತ ಮೂವರು ವ್ಯಕ್ತಿಗಳಿದ್ದು,೧೮ ಮತ್ತು ೧೯ರ ವಯಸ್ಸಿನಲ್ಲಿ ಈ ಅಪರಾಧಗಳನ್ನು ಅವರು ಎಸಗಿದ್ದಾರೆ.

ಇರಾನ್‌

ಮಕ್ಕಳ ಹಕ್ಕುಗಳ ಒಪ್ಪಂದ ಮತ್ತು ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದವನ್ನು ಇರಾನ್ ಅನುಮೋದಿಸಿದ್ದರೂ ಸಹ,ಬಾಲಪರಾಧಿಗಳಿಗೆ ಮರಣದಂಡನೆ ವಿಧಿಸುವುದರಲ್ಲಿ ಇರಾನ್ ಮೇಲುಗೈ ಪಡೆದಿದೆ, ಅದಕ್ಕಾಗಿ ಅಂತಾರಾಷ್ಟ್ರೀಯ ಖಂಡನೆಯನ್ನು ಎದುರಿಸಿದೆ; ಮರಣದಂಡನೆಯಲ್ಲಿ ದೇಶದ ಈ ದಾಖಲೆಯು ಮಕ್ಕಳ ಮರಣದಂಡನೆ ನಿಲ್ಲಿಸಿ ಅಭಿಯಾನದ ಗಮನಸೆಳೆದಿದೆ. ಇಂತಹ ಮರಣದಂಡನೆಗಳ ಒಟ್ಟು ಜಾಗತಿಕ ಮೊತ್ತದಲ್ಲಿ ಇರಾನ್ ಪಾಲು ಮೂರನೇ ಎರಡರಷ್ಟಿದೆ ಹಾಗೂ ಪ್ರಸಕ್ತ ಬಾಲಾಪರಾಧಿಗಳಾಗಿ(೨೦೦೭ರಲ್ಲಿ ೭೧ಕ್ಕಿಂತ ಹೆಚ್ಚು)ಎಸಗಿದ ಅಪರಾಧಗಳಿಗೆ ಮರಣದಂಡನೆ ಸಾಲಿನಲ್ಲಿ ಸುಮಾರು ೧೪೦ ಜನರಿದ್ದಾರೆ.[೫೩][೫೪] ಮೊಹಮದ್ ಅಸ್ಗಾರಿ,ಅಯಾಜ್ ಮರೋನಿ ಮತ್ತು ಮಕ್ವಾನ್ ಮಲೌಡ್‌ಜಾಡೆಗೆ ಹಿಂದಿನ ಫಾಸೀಶಿಕ್ಷೆಗಳಿಂದ ಇರಾನ್‌ನ ಬಾಲಾಪರಾಧಿಗಳ ಮರಣದಂಡನೆ ಮತ್ತು ಇಂತಹ ಶಿಕ್ಷೆಗಳನ್ನು ನೀಡುವ ನ್ಯಾಯಾಂಗ ವ್ಯವಸ್ಥೆಯು ಅಂತಾರಾಷ್ಟ್ರೀಯ ಕುರುಹುಗಳಾಯಿತು.[೫೫][೫೬]

ಸೊಮಾಲಿಯಾ

  • ಇಸ್ಲಾಮಿಕ್ ನ್ಯಾಯಾಲಯಗಳ ಒಕ್ಕೂಟದ ನಿಯಂತ್ರಣದಲ್ಲಿರುವ ಸೊಮಾಲಿಯದಲ್ಲಿ ಮಕ್ಕಳ ಮರಣದಂಡನೆಗಳು ಘಟಿಸಿದ್ದಕ್ಕೆ ಸಾಕ್ಷ್ಯಾಧಾರವಿದೆ. ಅಕ್ಟೋಬರ್ ೨೦೦೮ರಲ್ಲಿ ಬಾಲಕಿ ಐಶೊ ಇಬ್ರಾಹಿಂ ಧುಲೋವ್‌ಳನ್ನು ಫುಟ್ಬಾಲ್ ಸ್ಟೇಡಿಯಂನಲ್ಲಿ ಕುತ್ತಿಗೆಯ ಮಟ್ಟದವರೆಗೆ ಹೂಳಿ,೧೦೦೦ಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಕಲ್ಲು ಹೊಡೆದು ಸಾಯಿಸಲಾಯಿತು. ಇಸ್ಲಾಂ ಬಂಡುಕೋರರ ನಿಯಂತ್ರಣದಲ್ಲಿದ್ದ ಕಿಸ್ಮಾಯೊದ ಶರಿಯತ್ ಕೋರ್ಟ್‌ನಲ್ಲಿ ವ್ಯಭಿ ಚಾರ ಕುರಿತು ತಪ್ಪೊಪ್ಪಿಕೊಂಡ ನಂತರ ಅವಳಿಗೆ ಕಲ್ಲುಹೊಡೆಯಲಾಯಿತು. ಶರಿಯತ್ ಕಾನೂನನ್ನು ಜಾರಿಗೆ ತರಲು ಅವಳು ಬಯಸಿದ್ದಳೆಂದು ಬಂಡುಕೋರರು ಹೇಳಿದ್ದರು.[೫೭]
  • ಆದಾಗ್ಯೂ, ಅವಳು ಅಳುತ್ತಿದ್ದು,ದಯೆ ನೀಡುವಂತೆ ಬೇಡುತ್ತಿದ್ದಳು ಎಂದು ಇತರೆ ಮೂಲಗಳು ತಿಳಿಸಿವೆ.ಅವಳ ಕುತ್ತಿಗೆಮಟ್ಟದವರೆಗೆ ನೆಲದಲ್ಲಿ ಹೂಳುವ ಮುನ್ನ ಹಳ್ಳದೊಳಕ್ಕೆ ಅವಳನ್ನು ಬಲಪ್ರಯೋಗದಿಂದ ತಳ್ಳಲಾಯಿತು ಎಂದು ಹೇಳಿವೆ.[೫೮] ಬಾಲಕಿ ವಾಸ್ತವವಾಗಿ ೧೩ ವರ್ಷದವಳಾಗಿದ್ದಳೆಂದು,ಮೂವರು ಪುರುಷರಿಂದ ಸಾಮೂಹಿಕ ಅತ್ಯಾಚಾರಕ್ಕೆ ಗುರಿಯಾದ ನಂತರ ಅಲ್-ಸಭಾ ಉಗ್ರಗಾಮಿಗಳು ಅವಳನ್ನು ಬಂಧಿಸಿದ್ದರೆಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ಗೆ ನಂತರ ತಿಳಿಯಿತು.[೫೯]
  • ಆದಾಗ್ಯೂ, ಸೊಮಾಲಿಯದ ಇತ್ತೀಚೆಗೆ ಸ್ಥಾಪನೆಯಾದ ಪರಿವರ್ತನೀಯ ಫೆಡರಲ್ ಸರ್ಕಾರ ಮಕ್ಕಳ ಹಕ್ಕುಗಳ ಒಪ್ಪಂದವನ್ನು ಅನುಮೋದಿಸಲು ಯೋಜಿಸಿರುವುದಾಗಿ ನವೆಂಬರ್ ೨೦೦೯ರಲ್ಲಿ ಪ್ರಕಟಿಸಿತು. ಈ ಕ್ರಮವನ್ನು UNICEF ರಾಷ್ಟ್ರದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಸ್ವಾಗತಾರ್ಹ ಪ್ರಯತ್ನವೆಂದು ಶ್ಲಾಘಿಸಿತು.[೬೦]

ವಿಧಾನಗಳು

ಮರಣದಂಡನೆಯ ವಿಧಾನಗಳಲ್ಲಿ ವಿದ್ಯುದಾಘಾತ, ಗುಂಡುಹಾರಿಸುವ ತುಕಡಿ ಅಥವಾ ಇತರೆ ಸ್ವರೂಪದ ಗುಂಡುಹಾರಿಸುವಿಕೆ, ಇಸ್ಲಾಮಿಕ್ ದೇಶಗಳಲ್ಲಿ ಕಲ್ಲುಹೊಡೆದು ಸಾಯಿಸುವುದು,ಅನಿಲ ಚೇಂಬರ್, ನೇಣುಶಿಕ್ಷೆ ಮತ್ತು ಮಾರಕ ಚುಚ್ಚು ಮದ್ದು ಸೇರಿವೆ.

ವಿವಾದ ಮತ್ತು ಚರ್ಚೆ

  • ಮರಣದಂಡನೆಯು ಸಾಮಾನ್ಯವಾಗಿ ವಿವಾದಿತ ವಿಷಯವಾಗಿದೆ. ನಿರ್ದೋಷಿ ಜನರ ಮರಣದಂಡನೆಗೆ ದಾರಿಕಲ್ಪಿಸುತ್ತಿದೆಯೆಂದು ಮರಣದಂಡನೆ ವಿರೋಧಿಗಳು ವಾದಿಸಿದರೆ,ಅದರ ಮುಖ್ಯ ಉದ್ದೇಶವು ನ್ಯಾಯ ನೀಡುವುದಲ್ಲ, ಆದರೆ ಸೇಡು ತೀರಿಸಲು ಹಾಗೂ ಹಣ ಉಳಿಸುವುದಾಗಿದೆ. ಜೀವಾವಧಿ ಶಿಕ್ಷೆಯು ಪರಿಣಾಮಕಾರಿ ಮತ್ತು ಕಡಿಮೆ ಖರ್ಚಿನ ಪರ್ಯಾಯವಾಗಿದೆ.
  • ಮರಣದಂಡನೆ ಶಿಕ್ಷೆ ನೀಡುವಾಗ ಅಲ್ಪಸಂಖ್ಯಾತರು ಮತ್ತು ಬಡವರ ವಿರುದ್ಧ ತಾರತಮ್ಯ ಮಾಡಲಾಗುತ್ತಿದ್ದು, ಅದು ಅಪರಾಧಿಯ ಜೀವಿಸುವ ಹಕ್ಕನ್ನು ಉಲ್ಲಂಘಿಸುತ್ತದೆಂದು ವಾದಿಸುತ್ತಾರೆ.[೬೧] ಹತ್ಯೆಕೋರರಿಗೆ ಮರಣದಂಡನೆ ಶಿಕ್ಷೆಯು ಪ್ರತೀಕಾರದ ತತ್ವದಿಂದ ಸಮರ್ಥಿಸಿಕೊಳ್ಳಬಹುದು, ಜೀವಾವಧಿ ಶಿಕ್ಷೆಯು ಸಮಾನವಾದ ಪರಿಣಾಮಕಾರಿ ತಡೆಯಲ್ಲ, ಜೀವಿಸುವ ಹಕ್ಕನ್ನು ಕಠೋರ ರೂಪದಲ್ಲಿ ಉಲ್ಲಂಘಿಸುವವರಿಗೆ ಶಿಕ್ಷಿಸುವ ಮೂಲಕ ಮರಣದಂಡನೆಯು ಜೀವಿಸುವ ಹಕ್ಕನ್ನು ದೃಢೀಕರಿಸುತ್ತದೆ ಎಂದು ಅದರ ಬೆಂಬಲಿಗರು ನಂಬಿದ್ದಾರೆ.

ನ್ಯಾಯಬಾಹಿರ ಮರಣದಂಡನೆಗಳು

  • ನ್ಯಾಯಬಾಹಿರ ಮರಣದಂಡನೆಯು ನ್ಯಾಯವ್ಯವಸ್ಥೆಯ ವೈಫಲ್ಯವಾಗಿದ್ದು,ಮರಣದಂಡನೆ ಮೂಲಕ ಅಮಾಯಕ ವ್ಯಕ್ತಿಯನ್ನು ಸಾವಿಗೀಡು ಮಾಡಿದರೆ ಅದು ಘಟಿಸುತ್ತದೆ.[೬೨] ಅನೇಕ ಜನರು ಮರಣದಂಡನೆಗೆ ಗುರಿಯಾದ ಅಮಾಯಕ ಬಲಿಪಶುಗಳೆಂದು ಹೇಳಲಾಗಿದೆ.[೬೩][೬೪][೬೫] ನಿರ್ದೋಷಿತ್ವದ ಬಲವಾದ ಸಾಕ್ಷ್ಯಾಧಾರ ಅಥವಾ ತಪ್ಪು ಮಾಡಿದ ಬಗ್ಗೆ ಗಂಭೀರ ಅನುಮಾನವಿದ್ದರೂ,೩೯ ಮರಣದಂಡನೆಗಳನ್ನು U.S.ನಲ್ಲಿ ಜಾರಿಮಾಡಲಾಗಿದೆ ಎಂದು ಕೆಲವರು ವಾದಿಸಿದ್ದಾರೆ.
  • ಹೊಸದಾಗಿ ಲಭ್ಯವಾದ DNA ಸಾಕ್ಷ್ಯಾಧಾರವು U.S.ನಲ್ಲಿ ೧೯೯೨ರಿಂದೀಚೆಗೆ ೧೫ಕ್ಕೂ ಹೆಚ್ಚು ಮರಣದಂಡನೆಗೆ ಕಾಯುತ್ತಿದ್ದ ಕೈದಿಗಳನ್ನು ದೋಷಮುಕ್ತಗೊಳಿಸಲಾಯಿತು.ಆದರೆ ಕೆಲವೇಕೆಲವು ಮರಣದಂಡನೆ ಪ್ರಕರಣಗಳಲ್ಲಿ DNA ಸಾಕ್ಷ್ಯಾಧಾರ ಲಭ್ಯವಿತ್ತು.[೬೬]
  • UKಯಲ್ಲಿ ಕ್ರಿಮಿನಲ್ ಪ್ರಕರಣ ಪರಾಮರ್ಶೆ ಆಯೋಗದ ಪುನರ್‌ಪರಿಶೀಲನೆಗಳಿಂದ ೧೯೫೦ ಮತ್ತು ೧೯೫೩ರ ನಡುವೆ ಮರಣದಂಡನೆಗೆ ಗುರಿಯಾದವರ ಬಂಧುಗಳಿಗೆ ಪರಿಹಾರ ನೀಡುವುದರೊಂದಿಗೆ ಒಂದು ಪ್ರಕರಣದಲ್ಲಿ ಕ್ಷಮೆ ಮತ್ತು ಮೂರು ದೋಷಮುಕ್ತಿಗಳಿಂದ ಕೊನೆಗೊಂಡಿತು. ಆ ಸಂದರ್ಭದಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮರಣದಂಡನೆ ಪ್ರಮಾಣ ಪ್ರತಿ ವರ್ಷ ೧೭ ಸರಾಸರಿಯಲ್ಲಿತ್ತು.

ಸಾರ್ವಜನಿಕ ಅಭಿಪ್ರಾಯ

  • ಕೆನಡಾ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತು ಲ್ಯಾಟಿನ್ ಅಮೆರಿಕ, ಪಶ್ಚಿಮ ಯುರೋಪ್‌ನಲ್ಲಿ ಮರಣದಂಡನೆಯು ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಜನಪ್ರಿಯವಲ್ಲ. ಆದರೆ ಸಾಮೂಹಿಕ ಹತ್ಯಾಕಾಂಡ, ಭಯೋತ್ಪಾದನೆ,ಮಕ್ಕಳ ಹತ್ಯೆ ಮುಂತಾದ ಕೆಲವು ಪ್ರಕರಣಗಳು ಮರಣದಂಡನೆ ಮರುಸ್ಥಾಪನೆಗೆ ಬೆಂಬಲದ ಅಲೆಯನ್ನು ಉಕ್ಕಿಸಿವೆ. ಗ್ರೇಹೌಂಡ್ ಬಸ್ ತಲೆಕತ್ತರಿಸಿದ ಪ್ರಕರಣ, ಪೋರ್ಟ್ ಆರ್ಥರ್ ಹತ್ಯಾಕಾಂಡ ಮತ್ತು ಬಾಲಿ ಬಾಂಬಿಂಗ್ ಪ್ರಕರಣ ಮುಂತಾದವು ಭಾವಾನಾತ್ಮಕ ಆಧಾರಿತ ವಾಗಿದ್ದು, ಮನಸ್ಸಿನಿಂದ ಮಾಸಿಹೋಗುತ್ತವೆ.
  • ಕೆನಡಾದಲ್ಲಿ ೨೦೦೦ ಮತ್ತು ೨೦೧೦ರ ನಡುವೆ,ಮರಣದಂಡನೆ ವಾಪಸಿಗೆ ಬೆಂಬಲವು ೪೪% ನಿಂದ ೪೦%ಗೆ ಕುಸಿಯಿತು.ಅದರ ವಾಪಸಾತಿಗೆ ವಿರೋಧವು ೪೩% ರಿಂದ ೪೬%ಕ್ಕೆ ಏರಿಕೆಯಾಗಿ ಬಹುಮತದ ಬೆಂಬಲದಿಂದ ಬಹುಮತದ ವಿರೋಧಕ್ಕೆ ಸ್ಥಳಾಂತರವಾಗಿದ್ದನ್ನು ನಿರೂಪಿಸಿತು.[೬೭] ರಾಜಕೀಯ ಬದಲಾವಣೆಗಳಿಂದ ಸಾಮಾನ್ಯವಾಗಿ ಮರಣದಂಡನೆ ರದ್ದನ್ನು ಅಳವಡಿಸಲಾಯಿತು.
  • ರಾಷ್ಟ್ರಗಳು ನಿರಂಕುಶ ಆಡಳಿತದಿಂದ ಪ್ರಜಾಪ್ರಭುತ್ವ ಆಡಳಿತಕ್ಕೆ ಬದಲಾದಾಗ,ಅಥವಾ ಐರೋಪ್ಯ ಒಕ್ಕೂಟದ ಪ್ರವೇಶಕ್ಕೆ ಅದು ಒಂದು ಷರತ್ತಾಗಿದ್ದಾಗ ಮರಣದಂಡನೆ ರದ್ದನ್ನು ಅಳವಡಿಸಲಾಯಿತು. ಅಮೆರಿಕವು ಇದಕ್ಕೆ ಗಮನಾರ್ಹವಾದ ಅಪವಾದ: ಕೆಲವು ರಾಜ್ಯಗಳು ದಶಕಗಳವರೆಗೆ ಮರಣದಂಡನೆಗೆ ನಿಷೇಧ ಹೇರಿದ್ದವು.(ಅತ್ಯಂತ ಮುಂಚಿನದು ಮಿಚಿಗನ್,ಅಲ್ಲಿ ೧೮೪೭ರಲ್ಲೇ ಮರಣದಂಡನೆ ರದ್ದಾಗಿತ್ತು, ಉಳಿದ ರಾಜ್ಯಗಳು ಇಂದು ಸಕ್ರಿಯವಾಗಿ ಅದನ್ನು ಬಳಸುತ್ತಿವೆ.
  • ಮರಣದಂಡನೆಯು ಒಂದು ವಿವಾದಾತ್ಮಕ ವಿಷಯವಾಗಿ ಉಳಿದಿದ್ದು, ತೀಕ್ಷ್ಣವಾದ ಚರ್ಚೆಗೆ ಆಸ್ಪದ ಕಲ್ಪಿಸಿದೆ. ಉಳಿದ ಕಡೆ,ಮರಣದಂಡನೆ ಅರ್ಹತೆಗಳ ಬಗ್ಗೆ ಸಕ್ರಿಯ ಸಾರ್ವಜನಿಕ ಚರ್ಚೆಯ ಫಲವಾಗಿ ಮರಣದಂಡನೆ ರದ್ದಾಗುವುದು ಅಪರೂಪ. ರದ್ದಾದ ರಾಷ್ಟ್ರಗಳಲ್ಲಿ,ವಿಶೇಷವಾಗಿ ನಿರ್ದಯ ಹತ್ಯೆಗಳ ನಂತರ ಚರ್ಚೆಯು ಕೆಲವು ಬಾರಿ ಜೀವಂತಿಕೆ ಪಡೆಯಿತು.ಆದರೂ ಕೆಲವು ರಾಷ್ಟ್ರಗಳು ಅದನ್ನು ರದ್ದುಮಾಡಿದ ನಂತರ ವಾಪಸು ತಂದವು.
  • ಆದಾಗ್ಯೂ ಹತ್ಯೆಗಳು ಅಥವಾ ಭಯೋತ್ಪಾದನೆ ದಾಳಿಗಳು ಮುಂತಾದ ಗಂಭೀರ, ಹಿಂಸಾತ್ಮಕ ಅಪರಾಧಗಳ ಹೆಚ್ಚಳದಿಂದ ಶ್ರೀಲಂಕಾ ಮತ್ತು ಜಮೈಕಾ ಮುಂತಾದ ರಾಷ್ಟ್ರಗಳಿಗೆ ಮರಣದಂಡನೆ ರದ್ದತಿಯನ್ನು ಪರಿಣಾಮಕಾರಿಯಾಗಿ ಅಂತ್ಯಗೊಳಿಸಲು ಪ್ರೇರಣೆ ನೀಡಿತು. ಮರಣದಂಡನೆ ಉಳಿಸಿಕೊಂಡ ರಾಷ್ಟ್ರಗಳಲ್ಲಿ,ಕೆಲವು ವೇಳೆ ನ್ಯಾಯವ್ಯವಸ್ಥೆಯ ವೈಫಲ್ಯದಿಂದ ಚರ್ಚೆಯು ಪುನಃ ಜೀವಂತಿಕೆ ಪಡೆಯಿತು.ಆದರೂ ಇದು ಮರಣದಂಡನೆ ರದ್ದಿಗೆ ಬದಲಾಗಿ ನ್ಯಾಯಾಂಗ ಪ್ರಕ್ರಿಯೆ ಸುಧಾರಿಸುವ ಶಾಸಕಾಂಗ ಪ್ರಯತ್ನಗಳಿಗೆ ಕಾರಣವಾಯಿತು.
  • ಇಸವಿ ೨೦೦೦ದಲ್ಲಿ ನಡೆದ ಗ್ಯಾಲಪ್ ಅಂತಾರಾಷ್ಟ್ರೀಯ ಸಮೀಕ್ಷೆಯಲ್ಲಿ,"ಮರಣದಂಡನೆ ಪರವಾಗಿ ವಿಶ್ವವ್ಯಾಪಿ ಬೆಂಬಲ ವ್ಯಕ್ತವಾಗಿದ್ದು,ಈ ಸ್ವರೂಪದ ಶಿಕ್ಷೆಯ ಪರವಾಗಿರುವುದಾಗಿ ಅರ್ಧಕ್ಕೂ ಹೆಚ್ಚು ಜನರು(೫೨%)ಸೂಚಿಸಿದ್ದರು". ವಿವಿಧ ಫಲಿತಾಂಶಗಳೊಂದಿಗೆ ಇತ್ತೀಚಿನ ವರ್ಷಗಳಲ್ಲಿ ಇನ್ನೂ ಅನೇಕ ಸಮೀಕ್ಷೆಗಳು ಮತ್ತು ಅಧ್ಯಯನಗಳನ್ನು Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ. ನಡೆಸಲಾಯಿತು.ಗ್ಯಾಲಪ್ ಅಕ್ಟೋಬರ್ ೨೦೦೮ರಲ್ಲಿ ಮುಗಿಸಿದ ಸಮೀಕ್ಷೆಯಲ್ಲಿ, ಹತ್ಯೆಯಿಂದ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಮರಣದಂಡನೆಯನ್ನು ೬೪% ಅಮೆರಿಕನ್ನರು ಬೆಂಬಲಿಸಿದರೆ, ೩೦% ಅದಕ್ಕೆ ವಿರೋಧವಾಗಿದ್ದರು ಮತ್ತು ೫% ಯಾವ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ.[೬೮]
  • ಬಹಳ ಹಿಂದೆಯೇ U.S.ನಲ್ಲಿ ನಡೆಸಿದ ಸಮೀಕ್ಷೆಗಳು ಬಹುತೇಕ ಜನರು ಮರಣದಂಡನೆ ಪರವಾಗಿದ್ದಾರೆಂದು ತೋರಿಸಿದೆ. ಜುಲೈ ೨೦೦೬ರಲ್ಲಿ ನಡೆಸಿದ ABC ನ್ಯೂಸ್ ಸಮೀಕ್ಷೆಯಲ್ಲಿ ಮರಣದಂಡನೆ ಪರವಾಗಿ ೬೫ ಶೇಕಡ ಜನರಿದ್ದು,೨೦೦೦ದಲ್ಲಿ ನಡೆದ ಇನ್ನೊಂದು ಸಮೀಕ್ಷೆ ಯೊಂದಿಗೆ ಹೊಂದಿಕೆಯಾಗಿತ್ತು.[೬೯] ಮೇ ೨೦೦೬ರಲ್ಲಿ ನಡೆದ ಗ್ಯಾಲಪ್ ಸಮೀಕ್ಷೆಯ ಪ್ರಕಾರ, ಮರಣದಂಡನೆಯನ್ನು ಆಗಾಗ್ಗೆ ಹೇರಬಾರದು ಎಂದು ಅರ್ಧದಷ್ಟು ಅಮೆರಿಕದ ಸಾರ್ವಜನಿಕರು ಅಭಿಪ್ರಾಯಪಟ್ಟರೆ, ೬೦ ಶೇಕಡ ಜನರು ಅದನ್ನು ನ್ಯಾಯಯುತವಾಗಿ ಅಳವಡಿಸಬೇಕೆಂದು ನಂಬಿದ್ದಾರೆ.[೭೦]

ಆದರೂ ಸಮೀಕ್ಷೆಗಳಲ್ಲಿ ಮರಣದಂಡನೆ ಅಥವಾ ಪೆರೋಲ್ ರಹಿತ ಜೀವಾವಧಿ ನಡುವೆ ಆಯ್ಕೆ ಮಾಡುವಂತೆ ಕೇಳಿದಾಗ, ಅಥವಾ ಬಾಲಾಪರಾಧಿಗಳನ್ನು ನಿಭಾಯಿಸುವ ವಿಧಾನ ಕುರಿತು ಕೇಳಿದಾಗ ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯಗಳಿದ್ದವು.[೭೧] ಸರಿಸುಮಾರು ೧೦ರಲ್ಲಿ ೬ ಜನರು ಮರಣದಂಡನೆ ಹತ್ಯೆಯನ್ನು ತಡೆಯುತ್ತೆಂದು ತಮಗೆ ನಂಬಿಕೆಯಿಲ್ಲವೆಂದು ತಿಳಿಸಿದ್ದಾರೆ.ಕಳೆದ ಐದು ವರ್ಷಗಳಲ್ಲಿ ಕನಿಷ್ಠ ಒಬ್ಬ ನಿರ್ದೋಷಿಯನ್ನು ಮರಣದಂಡನೆಗೆ ಗುರಿಪಡಿಸಲಾಗಿದೆಯೆಂದು ಬಹುತೇಕರು ನಂಬಿದ್ದಾರೆ.[೭೨]

ಅಂತಾರಾಷ್ಟ್ರೀಯ ಸಂಸ್ಥೆಗಳು

ಐರೋಪ್ಯ ಒಕ್ಕೂಟದ ಮೂಲಭೂತ ಹಕ್ಕುಗಳ ಸನ್ನದಿನ ವಿಧಿ 2 EUನಲ್ಲಿ ಮರಣದಂಡನೆ ನಿಷೇಧವನ್ನು ದೃಢೀಕರಿಸಿದೆ.
  • ವಿಶ್ವಸಂಸ್ಥೆಯು ಪ್ರಧಾನ ಸಭೆಯ ೬೨ನೇ ಅಧಿವೇಶನದಲ್ಲಿ ಮರಣದಂಡನೆಗೆ ಸಾರ್ವತ್ರಿಕ ನಿಷೇಧ ಹೇರಿ ನಿರ್ಣಯವೊಂದನ್ನು ಮಂಡಿಸಿತು.[೭೩][೭೪]
  • ಮಾನವ ಹಕ್ಕು ವಿಷಯಗಳನ್ನು ನಿರ್ವಹಿಸುವ ಪ್ರಧಾನ ಸಭೆಯ ಮೂರನೇ ಸಮಿತಿಯಲ್ಲಿ ಕರಡು ನಿರ್ಣಯದ ಅನುಮೋದನೆಗೆ ೨೦೦೭ರ ನವೆಂಬರ್ ೧೫ರಂದು ನಿರ್ಣಯದ ಪರವಾಗಿ ೯೯-೫೨ ಮತಗಳು ಲಭಿಸಿ,೩೩ ರಾಷ್ಟ್ರಗಳು ಗೈರುಹಾಜರಿಯಾಗಿದ್ದವು. ನಿರ್ಣಯವನ್ನು ಡಿ.೧೮ರಂದು ಪ್ರಧಾನ ಸಭೆಯಲ್ಲಿ ಮತಕ್ಕೆ ಹಾಕಲಾಯಿತು.[೭೫][೭೬][೭೭]
  • ಪುನಃ ೨೦೦೮ರ ನವೆಂಬರ್ ೨೦ರಂದು,UN ಪ್ರಧಾನ ಸಭೆ(ಮೂರನೇ ಸಮಿತಿ)ಯಲ್ಲಿ ಮರಣದಂಡನೆ ಬಳಕೆಯನ್ನು ಸ್ಥಗಿತಗೊಳಿಸುವ ಎರಡನೇ ನಿರ್ಣಯವನ್ನು ಅಂಗೀಕರಿಸಿದವು. ಕರಡು ನಿರ್ಣಯದ ಪರವಾಗಿ ೧೦೫ ರಾಷ್ಟ್ರಗಳು ಮತಚಲಾಯಿಸಿದರೆ,೪೮ ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದವು ಮತ್ತು ೩೧ ಮಂದಿ ಗೈರುಹಾಜರಾಗಿದ್ದರು. ಮರಣದಂಡನೆ ಪರ ಅಲ್ಪಸಂಖ್ಯಾತ ರಾಷ್ಟ್ರಗಳು ಪ್ರಸ್ತಾಪಿಸಿದ ತಿದ್ದುಪಡಿಗಳ ಸಾಲಿಗೆ ಪ್ರಚಂಡ ಸೋಲು ಉಂಟಾಯಿತು. ಅದು ೨೦೦೭ರಲ್ಲಿ ಬದ್ಥತೆಗೊಳಗಾಗದ ನಿರ್ಣಯವನ್ನು ಅಂಗೀಕರಿಸಿ(೧೦೪ರಿಂದ ೫೪,೨೯ ಗೈರುಹಾಜರಿಗಳು)ಮರಣದಂಡನೆ ನಿರ್ಮೂಲನೆ ದೃಷ್ಟಿಯಿಂದ ಅವುಗಳಿಗೆ ನಿಷೇಧ ಹೇರಬೇಕೆಂದು ಸದಸ್ಯ ರಾಷ್ಟ್ರಗಳಿಗೆ ಕೋರಿತು.[೭೮]
  • ಅನೇಕ ಪ್ರಾದೇಶಿಕ ಒಡಂಬಡಿಕೆಗಳು ಮರಣದಂಡನೆಯನ್ನು ನಿಷೇಧಿಸಿವೆ.೬ನೇ ಒಪ್ಪಂದ(ಶಾಂತಿಯ ಕಾಲದಲ್ಲಿ ರದ್ದು)ಮತ್ತು ೧೩ನೇ ಒಪ್ಪಂದದಿಂದ(ಎಲ್ಲ ಸಂದರ್ಭಗಳಲ್ಲಿ ರದ್ದು)ಮಾನವ ಹಕ್ಕುಗಳ ಐರೋಪ್ಯ ಒಡಂಬಡಿಕೆವರೆಗೆ ಅತ್ಯಂತ ಗಮನಾರ್ಹವಾಗಿದೆ. ಮಾನವ ಹಕ್ಕುಗಳನ್ನು ಕುರಿತ ಅಮೆರಿಕ ಒಡಂಬಡಿಕೆಯ ಎರಡನೇ ಒಪ್ಪಂದದಲ್ಲಿ ಇದೇ ರೀತಿಯಲ್ಲಿ ಹೇಳಲಾಗಿದೆ.ಆದರೆ ಅಮೆರಿಕ ಖಂಡದ ಎಲ್ಲ ರಾಷ್ಟ್ರಗಳು ಅವುಕ್ಕೆ ಅನುಮೋದನೆ ನೀಡಲಿಲ್ಲ. ಅವುಗಳಲ್ಲಿ ಮುಖ್ಯವಾದವು ಕೆನಡಾ ಮತ್ತು ಅಮೆರಿಕ.
  • ಪ್ರಸಕ್ತ ಕಾರ್ಯರೂಪದಲ್ಲಿರುವ ಬಹುತೇಕ ಅಂತಾರಾಷ್ಟ್ರೀಯ ಒಪ್ಪಂದಗಳು ಗಂಭೀರ ಅಪರಾಧದ ಪ್ರಕರಣಗಳಲ್ಲಿ ಮರಣದಂಡನೆ ನಿಷೇಧ ಅಗತ್ಯವಿಲ್ಲವೆಂದು ತಿಳಿಸಿದ್ದು, ಅಂತಾರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಡಂಬಡಿಕೆಅವುಗಳಲ್ಲಿ ಗಮನಾರ್ಹವಾಗಿದೆ. ಇದರಲ್ಲಿ,ಇತರೆ ಎಲ್ಲ ಒಪ್ಪಂದಗಳಿಗೆ ಸಮಾನವಾಗಿ ಮರಣದಂಡನೆ ನಿಷೇಧಿಸುವ ಮತ್ತು ವ್ಯಾಪಕ ನಿಷೇಧಕ್ಕೆ ಉತ್ತೇಜಿಸುವ ಐಚ್ಛಿಕ ಒಪ್ಪಂದವಿದೆ.[೭೯]
  • ಅನೇಕ ಅಂತಾರಾಷ್ಟ್ರೀಯ ಸಂಘಟನೆಗಳು ಸದಸ್ಯತ್ವ ಪಡೆಯಲು ಮರಣದಂಡನೆ ನಿರ್ಮೂಲನೆಯನ್ನು(ಶಾಂತಿಯ ಕಾಲದಲ್ಲಿ) ಅಗತ್ಯವೆಂದು ಪರಿಗಣಿಸಿದ್ದು, ಅದರಲ್ಲಿ ಅತ್ಯಂತ ಗಮನಾರ್ಹ ಐರೋಪ್ಯ ಒಕ್ಕೂಟ(EU)ಮತ್ತು ಐರೋಪ್ಯ ಮಂಡಳಿ. EUಮತ್ತು ಯುರೋಪ್ ಮಂಡಳಿ ಮಧ್ಯಂತರ ಕ್ರಮವಾಗಿ ಮರಣದಂಡನೆ ತಾತ್ಕಾಲಿಕ ಸ್ಥಗಿತಕ್ಕೆ ಒಪ್ಪಿಕೊಳ್ಳಲು ಇಚ್ಚಿಸಿದವು.
  • ರಷ್ಯಾ ಯುರೋಪ ಮಂಡಳಿಯ ಸದಸ್ಯ ರಾಷ್ಟ್ರವಾಗಿದ್ದು, ಕಾನೂನಿನಲ್ಲಿ ಮರಣದಂಡನೆಯನ್ನು ಅನುಸರಿಸಿದ್ದರೂ, ಮಂಡಳಿಯ ಸದಸ್ಯ ರಾಷ್ಟ್ರವಾದಾಗಿನಿಂದ ಅದನ್ನು ಸಾರ್ವಜನಿಕವಾಗಿ ಬಳಕೆಗೆ ತಂದಿಲ್ಲ. ಇತರೆ ರಾಷ್ಟ್ರಗಳು,ಕಾನೂನು ರೀತ್ಯ ಶಾಂತಿಯ ಕಾಲದಲ್ಲಿ ಮರಣದಂಡನೆ ರದ್ದುಮಾಡಿ, ನೈಜವಾಗಿ ಎಲ್ಲ ಸಂದರ್ಭಗಳಲ್ಲಿ ಒಪ್ಪಂದ ಸಂಖ್ಯೆ 13 ನ್ನು ಅನುಮೋದಿಸಿಲ್ಲ. ಆದ್ದರಿಂದ ಯುದ್ಧದ ಸಂದರ್ಭದಲ್ಲಿ ಅಥವಾ ಯುದ್ಧದ ಬೆದರಿಕೆ ಸನ್ನಿಹಿತವಾದ ಸಂದರ್ಭದಲ್ಲಿ(ಆರ್ಮೇನಿಯ, ಲ್ಯಾಟ್ವಿಯ,ಪೋಲೆಂಡ್ ಮತ್ತು ಸ್ಪೇನ್)ಮರಣದಂಡನೆಯನ್ನು ಬಳಸುವುದನ್ನು ತಡೆಯುವ ಯಾವುದೇ ಅಂತಾರಾಷ್ಟ್ರೀಯ ಕರಾರಿಗೆ ಒಳಪಟ್ಟಿಲ್ಲ.[೮೦]
  • ಇಟಲಿ ಅದಕ್ಕೆ ಮಾರ್ಚ್ ೩,೨೦೦೯ರಲ್ಲಿ ಅನುಮೋದನೆ ನೀಡಿದ ರಾಷ್ಟ್ರಗಳ ಪೈಕಿ ಇತ್ತೀಚಿನದಾಗಿದೆ. ಟರ್ಕಿ ಇತ್ತೀಚೆಗೆ,EU ಸದಸ್ಯತ್ವ ಪಡೆಯುವ ಕ್ರಮವಾಗಿ ತನ್ನ ಕಾನೂನು ವ್ಯವಸ್ಥೆಯಲ್ಲಿ ಸುಧಾರಣೆಗೆ ಒಳಗಾಯಿತು. ಇದಕ್ಕೆ ಮುಂಚೆ, ಟರ್ಕಿಯಲ್ಲಿ ಕಟ್ಟಕಡೆಯ ಮರಣದಂಡನೆ ೧೯೮೪ರಲ್ಲಿ ಜಾರಿಯಾದ್ದರಿಂದ ಅಲ್ಲಿ ಮರಣದಂಡನೆಗೆ ವಾಸ್ತವ ನಿಷೇಧವಿತ್ತು. ಮರಣದಂಡನೆಯನ್ನು ಶಾಂತಿಕಾಲದ ಕಾನೂನಿನಿಂದ ಆಗಸ್ಟ್ ೨೦೦೨ರಲ್ಲಿ ತೆಗೆಯಲಾಯಿತು ಹಾಗೂ ಮೇ ೨೦೦೪ರಲ್ಲಿ ಟರ್ಕಿ ಎಲ್ಲ ಸಂದರ್ಭಗಳಲ್ಲೂ ಅದನ್ನು ತೆಗೆದುಹಾಕಲು ಸಂವಿಧಾನಕ್ಕೆ ತಿದ್ದುಪಡಿ ಮಾಡಿತು. ಫೆಬ್ರವರಿ ೨೦೦೬ರಲ್ಲಿ ಮಾನವ ಹಕ್ಕುಗಳ ಐರೋಪ್ಯ ಒಡಂಬಡಿಕೆಯ ಒಪ್ಪಂದ ನಂ.೧೩ನ್ನು ಟರ್ಕಿ ಅನುಮೋದಿಸಿತು.
  • ಇದರ ಫಲವಾಗಿ,ಯುರೋಪ್ ಮರಣದಂಡನೆ ಆಚರಣೆಯಿಂದ ಮುಕ್ತವಾದ ಖಂಡವಾಯಿತು.ಆದರೆ ರಷ್ಯಾ ಬಿಟ್ಟರೆ ಎಲ್ಲ ರಾಷ್ಟ್ರಗಳು ಮಾನವ ಹಕ್ಕುಗಳ ಐರೋಪ್ಯ ಒಡಂಬಡಿಕೆಯ ೬ನೇ ಒಪ್ಪಂದಕ್ಕೆ ಅನುಮೋದಿಸುವ ಮೂಲಕ ನಿಷೇಧಕ್ಕೆ ಪ್ರವೇಶಿಸಿತು.ಆದರೆ ಯುರೋಪ್ ಮಂಡಳಿಯ ಸದಸ್ಯ ರಾಷ್ಟ್ರವಲ್ಲದ ಬೆಲಾರಸ್ ಏಕೈಕ ಅಪವಾದವಾಯಿತು. ಐರೋಪ್ಯ ಮಂಡಳಿಯ ಸಂಸದೀಯ ಅಸೆಂಬ್ಲಿಯು ಮರಣದಂಡನೆಯನ್ನು ಜಾರಿಗೆ ತಂದಿರುವ ಯುರೋಪ್ ಮಂಡಳಿ ವೀಕ್ಷಕ ರಾಷ್ಟ್ರಗಳಾದ U.S ಮತ್ತು ಜಪಾನ್ ಮೇಲೆ ಒತ್ತಡ ಹೇರುತ್ತಿದ್ದು, ಅದನ್ನು ನಿಷೇಧಿಸುವಂತೆ ಅಥವಾ ಅವರ ವೀಕ್ಷಕ ಸ್ಥಾನಮಾನವನ್ನು ಕಳೆದುಕೊಳ್ಳುವಂತೆ ಸೂಚಿಸಿದೆ.
  • EU ಸದಸ್ಯ ರಾಷ್ಟ್ರಗಳಿಗೆ ಮರಣದಂಡನೆ ನಿಷೇಧಿಸುವುದರ ಜತೆಗೆ,EU ಬಂಧಿತ ವ್ಯಕ್ತಿಯನ್ನು ಸ್ವೀಕರಿಸುವ ರಾಷ್ಟ್ರ ಮರಣದಂಡನೆ ಕೋರಬಹುದಾದ ಕಾರಣ ಬಂಧಿತ ವ್ಯಕ್ತಿಯ ವರ್ಗಾವಣೆಗಳನ್ನು ಕೂಡ ನಿಷೇಧಿಸಿತು.ಸರ್ಕಾರೇತರ ಸಂಘಟನೆಗಳ ಪೈಕಿ(NGOs)ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ಮಾನವ ಹಕ್ಕುಗಳ ಕಾವಲು ಸಮಿತಿ ಮರಣದಂಡನೆ ವಿರೋಧಿಸುವುದರಲ್ಲಿ ಗಮನಸೆಳೆದಿವೆ. ಇಂತಹ ಅನೇಕ NGOಗಳು ಜತೆಗೆ ಕಾರ್ಮಿಕ ಸಂಘಟನೆಗಳು, ಸ್ಥಳೀಯ ಮಂಡಳಿಗಳು ಮತ್ತು ವಕೀಲರ ಸಂಘಗಳು ೨೦೦೨ರಲ್ಲಿ ಮರಣದಂಡನೆ ವಿರುದ್ಧ ವಿಶ್ವ ಸಮ್ಮಿಶ್ರಕೂಟವನ್ನು ರಚಿಸಿದವು.

ಧಾರ್ಮಿಕ ದೃಷ್ಟಿಕೋನಗಳು

ಬೌದ್ಧಧರ್ಮ

ಬೌದ್ಧಧರ್ಮ ಮರಣದಂಡನೆಯನ್ನು ನಿಷೇಧಿಸುತ್ತದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಬೌದ್ಧಧರ್ಮೀಯರಲ್ಲಿ ಭಿನ್ನಾಭಿಪ್ರಾಯವಿದೆ. ಐದು ಉಪದೇಶಗಳಲ್ಲಿ(ಪಂಕ-ಸಿಲಾ)ಮೊದಲನೆಯದು ಜೀವನಾಶದಿಂದ ದೂರವುಳಿಯುವುದು.ಧಮ್ಮಪದದ ಅಧ್ಯಾಯ ೧೦ ಹೀಗೆ ಹೇಳುತ್ತದೆ:

ಪ್ರತಿಯೊಬ್ಬರು ಶಿಕ್ಷೆಗೆ ಭಯಪಡುತ್ತಾರೆ; ಪ್ರತಿಯೊಬ್ಬರೂ ಸಾವಿಗೆ ಭಯಪಡುತ್ತಾರೆ,ನಿಮ್ಮ ರೀತಿಯಲ್ಲಿಯೇ. ಆದ್ದರಿಂದ ಹತ್ಯೆ ಮಾಡಬೇಡಿ ಅಥವಾ ಹತ್ಯೆಗೆ ಕಾರಣಕರ್ತರಾಗಬೇಡಿ. ಪ್ರತಿಯೊಬ್ಬರು ಶಿಕ್ಷೆಗೆ ಹೆದರುತ್ತಾರೆ; ಪ್ರತಿಯೊಬ್ಬರೂ ಜೀವನ ಪ್ರೀತಿಸುತ್ತಾರೆ, ನಿಮ್ಮ ರೀತಿಯಲ್ಲೇ. ಆದ್ದರಿಂದ ಹತ್ಯೆಮಾಡಬೇಡಿ,ಅಥವಾ ಅದಕ್ಕೆ ಕಾರಣಕರ್ತರಾಗಬೇಡಿ.

ಅಧ್ಯಾಯ ೨೬, ಧಮ್ಮಪದದ ಅಂತಿಮ ಅಧ್ಯಾಯ ಹೀಗೆ ಹೇಳುತ್ತದೆ,"ಶಸ್ತ್ರಾಸ್ತ್ರಗಳನ್ನು ಬದಿಗಿರಿಸಿ, ಎಲ್ಲ ಜೀವಿಗಳ ವಿರುದ್ಧ ಹಿಂಸೆಯನ್ನು ತ್ಯಜಿಸಿದರೆ ಅವರನ್ನು ನಾನು ಬ್ರಾಹ್ಮಣ ಎಂದು ಕರೆಯುತ್ತೇನೆ. ಅವನು ಹತ್ಯೆ ಮಾಡುವುದಿಲ್ಲ ಅಥವಾ ಹತ್ಯೆಗೆ ಇತರರಿಗೆ ನೆರವಾಗು ವುದಿಲ್ಲ." ಈ ವಾಕ್ಯಗಳನ್ನು ಅನೇಕ ಬೌದ್ಧಮತೀಯರು ಮರಣದಂಡನೆಗೆ ದಾರಿ ಕಲ್ಪಿಸುವ ಯಾವುದೇ ಕಾನೂನಿನ ಕ್ರಮವನ್ನು ಬೆಂಬಲಿಸುವುದರ ವಿರುದ್ಧ ಆಣತಿ ಎಂದು ವ್ಯಾಖ್ಯಾನಿಸಿದ್ದಾರೆ(ವಿಶೇಷವಾಗಿ ಪಶ್ಚಿಮದಲ್ಲಿ). ಆದಾಗ್ಯೂ, ಧಾರ್ಮಿಕ ಗ್ರಂಥದ ವ್ಯಾಖ್ಯಾನದೊಂದಿಗೆ ಸಾಮಾನ್ಯ ವಾಗಿ ಈ ವಿಷಯದಲ್ಲಿ ವಿವಾದ ಉಂಟಾಗಿದೆ. ಐತಿಹಾಸಿಕವಾಗಿ,ಅಧಿಕೃತ ಧರ್ಮ ಬೌದ್ಧಧರ್ಮವಾಗಿರುವ ಅನೇಕ ರಾಜ್ಯಗಳು ಕೆಲವು ಅಪರಾಧಗಳಿಗೆ ಮರಣದಂಡನೆಯನ್ನು ಹೇರಿವೆ. ಒಂದು ಗಮನಾರ್ಹ ಅಪವಾದವೆಂದರೆ ೮೧೮ರಲ್ಲಿ ಜಪಾನ್ ಚಕ್ರವರ್ತಿ ಸಾಗಾ ಮರಣದಂಡನೆಯನ್ನು ರದ್ದುಮಾಡಿರುವುದು. ಇದು ೧೧೬೫ರವರೆಗೆ ಉಳಿದುಕೊಂಡಿತು.ಆದರೂ ಖಾಸಗೀ ಜಹಗೀರುಗಳಲ್ಲಿ ಪ್ರತೀಕಾರದ ರೂಪವಾಗಿ ಮರಣದಂಡನೆಗಳು ಮುಂದುವರಿಯಿತು. ಜಪಾನ್ ಈಗಲೂ ಮರಣದಂಡನೆಯನ್ನು ಹೇರಿದೆ.ಆದರೂ ಕೆಲವು ಇತ್ತೀಚಿನ ನ್ಯಾಯಖಾತೆ ಸಚಿವರು ತಮ್ಮ ಬೌದ್ದಧರ್ಮದ ನಂಬಿಕೆಗಳ ಕಾರಣವನ್ನು ಉದಾಹರಿಸಿ ಸಾವಿನ ವಾರಂಟ್‌ಗಳಿಗೆ ಅಂಕಿತ ಹಾಕಲು ನಿರಾಕರಿಸಿದ್ದಾರೆ.[೮೧] ಇತರೆ ಬೌದ್ಧಮತೀಯ ಬಹುತೇಕ ರಾಷ್ಟ್ರಗಳು ತನ್ನ ನೀತಿಯಲ್ಲಿ ಭಿನ್ನವಾಗಿವೆ. ಉದಾಹರಣೆಗೆ,ಭೂತಾನ್ ಮರಣದಂಡನೆಯನ್ನು ನಿಷೇಧಿಸಿದೆ.ಆದರೆ ಥಾಯ್ಲೆಂಡ್ ಇನ್ನೂ ಉಳಿಸಿಕೊಂಡಿದೆ. ಎರಡೂ ರಾಷ್ಟ್ರಗಳಲ್ಲಿ ಬೌದ್ಧಧರ್ಮ ಅಧಿಕೃತ ಧರ್ಮವಾಗಿದೆ.

ಜುಡೈಸಮ್

  • ಜುಡೈಸಮ್‌ನ ಅಧಿಕೃತ ಬೋಧನೆಗಳು ಮರಣದಂಡನೆಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುತ್ತವೆ. ಆದರೆ ಮರಣದಂಡನೆಗೆ ಅಗತ್ಯವಾದ ಸಾಕ್ಷ್ಯಾಧಾರದ ಮಟ್ಟ ತೀವ್ರ ಕಠಿಣವಾಗಿದೆ. ಬಳಕೆಯಲ್ಲಿ ವಿವಿಧ ಟಾಲ್ಮುಡಿಕ್ ನಿರ್ಧಾರಗಳಲ್ಲಿ ಅದನ್ನು ನಿಷೇಧಿಸಲಾಗಿದ್ದು ಪರಿಣಾಮಕಾರಿಯಾಗಿ,ಮರಣದಂಡನೆ ಅನುಮೋದಿಸಲು ಸಾಧ್ಯವಾಗುವ ಪರಿಸ್ಥಿತಿಗಳನ್ನು ಅಸಾಧ್ಯ ಮತ್ತು ಕಾಲ್ಪನಿಕವಾಗಿಸಿದೆ. ಸಾಮಾನ್ಯ ಮೂವರು ನ್ಯಾಯಾಧೀಶರ ಬೇಟ್ ಡಿನ್ ‌(ಕೋರ್ಟ್)ನಿಂದ ಮರಣದಂಡನೆ ಪ್ರಕರಣವನ್ನು ವಿಚಾರಣೆ ಮಾಡಲು ಸಾಧ್ಯವಿಲ್ಲ.
  • ಅದನ್ನು ಕನಿಷ್ಠ ೨೩ನ್ಯಾಯಾಧೀಶರ ಸಾನೇಡ್ರಿನ್ ನ್ಯಾಯತೀರ್ಮಾನ ಮಾಡಬೇಕು.[೮೨] ಜರೂಸಲೇಂ ಮಂದಿರ ನಾಶವಾದ ೭೦ CEಗೆ ೪೦ ವರ್ಷಗಳ ಮುಂಚೆ ಅಂದರೆ ೩೦ CEನಲ್ಲಿ,ಸಾನೆಡ್ರಿನ್ ಪರಿಣಾಮಕಾರಿಯಾಗಿ ಮರಣದಂಡನೆಯನ್ನು ರದ್ದುಮಾಡಿತು. ಅದನ್ನು ಶಿಕ್ಷೆಯ ತೀವ್ರತೆಯಲ್ಲಿ ಕಾಲ್ಪನಿಕವಾಗಿ ಗರಿಷ್ಠ ಮಿತಿಯಲ್ಲಿರಿಸಿತು.
  • ಅಂತಿಮವಾಗಿ ದೇವರಿಗೆ ಮಾತ್ರ ಅದನ್ನು ಬಳಸಲು ಯೋಗ್ಯವಾಗಿಸಿ, ತಪ್ಪು ಮಾಡುವ ಮನುಷ್ಯ ರಿಗಲ್ಲವೆಂದು ಹೇಳಿತು.[೮೩] ಜುಡೈಸಿಮ್ ಬಹುತೇಕ ಅನುಯಾಯಿಗಳು ಮರಣದಂಡನೆಯನ್ನು ಸಂಪೂರ್ಣ ನಿಷೇಧಿಸಿ ದರು ಅಥವಾ ನರಹತ್ಯೆಯ ಸಮಗ್ರ ದಾಖಲೆಯಿರುವ ಪ್ರಕರಣಗಳಲ್ಲಿ ಸಂಪೂರ್ಣ ಸಾಕ್ಷ್ಯಾಧಾರದೊಂದಿಗೆ ಕೆಲವು ಪರಮಾವಧಿಯ ಪ್ರಕರಣಗಳಲ್ಲಿ ಬೆಂಬಲಿಸಿದರು. ಕಾನೂನುಶಾಲೆಗಳಲ್ಲಿ ಎಲ್ಲಕಡೆ,೧೨ನೇ ಶತಮಾನದ ಕಾನೂನು ಪಂಡಿತ ಮೈಮೋನೈಡ್ಸ್ ಅವರ ಪ್ರಖ್ಯಾತ ಉಕ್ತಿಯನ್ನು ಓದುತ್ತಾರೆ,
"ಒಬ್ಬ ನಿರ್ದೋಷಿ ವ್ಯಕ್ತಿಗೆ ಮರಣದಂಡನೆ ವಿಧಿಸುವುದಕ್ಕಿಂತ ಸಾವಿರ ಮಂದಿ ತಪ್ಪಿತಸ್ಥರನ್ನು ದೋಷಮುಕ್ತಗೊಳಿಸುವುದು ಒಳ್ಳೆಯದು ಹಾಗೂ ತೃಪ್ತಿಕರ."ಸಂಪೂರ್ಣ ಖಾತರಿಗಿಂತ ಕಡಿಮೆ ಸಾಕ್ಷ್ಯಗಳಿರುವಾಗ ಆರೋಪಿಗೆ ಮರಣದಂಡನೆ ವಿಧಿಸುವುದು ರುಜುವಾತಿನ ಹೊಣೆಯನ್ನು ಕಡಿಮೆ ಮಾಡುವ ಜಾರುವ ಇಳಿಜಾರಿಗೆ ದಾರಿ ಕಲ್ಪಿಸುತ್ತದೆ,ಅಲ್ಲಿಯವರೆಗೆ ನಾವು ಕೇವಲ "ನ್ಯಾಯಾಧೀಶರ ಇಚ್ಛೆಗೆ ಅನುಗುಣವಾಗಿ ಶಿಕ್ಷೆ ವಿಧಿಸುತ್ತೇವೆ" ಎಂದು ಮೈಮೋನೈಡ್ಸ್ ವಾದಿಸಿದ್ದಾರೆ. ಸಾರ್ವಜನಿಕ ಪರಿಕಲ್ಪನೆಗಳ ಗಾಂಭೀರ್ಯವನ್ನು ರಕ್ಷಿಸಿ ಜನರ ಗೌರವವನ್ನು ಉಳಿಸಿಕೊಳ್ಳುವುದಕ್ಕಾಗಿ ಕಾನೂನು ಸ್ವಯಂ ಹದ್ದುಗಣ್ಣಿನಿಂದ ಕಾಯುವ ಅಗತ್ಯದ ಬಗ್ಗೆ ಮೈಮೋನೈಡ್ಸ್ ಕಳಕಳಿ ವಹಿಸಿದ್ದರು.

ಇಸ್ಲಾಂ

  • ಇಸ್ಲಾಂ ಪಂಡಿತರು ಅದು ಸ್ವೀಕಾರಾರ್ಹವೆಂದು ಹೇಳಿದರೂ,ಬಲಿಪಶು ಅಥವಾ ಬಲಿಪಶುವಿನ ಕುಟುಂಬಕ್ಕೆ ಕ್ಷಮೆ ನೀಡುವ ಅಧಿಕಾರವಿದೆ.ಇಸ್ಲಾಮಿಕ್ ತತ್ವ(ಫಿಕ್) ನಲ್ಲಿ ನಿಷೇಧ ಮಾಡಬಾರದ್ದರ ನಿಷೇಧವನ್ನು ನಿಷೇಧಿಸಲಾಗಿದೆ. ಇದರ ಪರಿಣಾಮವಾಗಿ,ಸ್ಪಷ್ಟವಾಗಿ ದೃಢೀಕರಿಸಲಾದ ಮರಣದಂಡನೆಯನ್ನು ರದ್ದು ಮಾಡುವುದು ಅಸಾಧ್ಯ. ಷರಿಯತ್ ಕಾನೂನು ಅಥವಾ ಇಸ್ಲಾಮಿಕ್ ಕಾನೂನಿಗೆ ಮರಣದಂಡನೆ ಅಗತ್ಯವಾಗಿರಬಹುದು. ಆದರೆ ವಾಸ್ತವಿಕ ಮರಣದಂಡನೆ ಸ್ವರೂಪದ ಬಗ್ಗೆ ಇಸ್ಲಾಮಿಕ್ ರಾಷ್ಟ್ರಗಳಲ್ಲಿ ದೊಡ್ಡ ವ್ಯತ್ಯಾಸಗಳಿವೆ. *ಇಸ್ಲಾಂನಲ್ಲಿ ಧರ್ಮಭ್ರಷ್ಟತೆ ಮತ್ತು ಇಸ್ಲಾಂನಲ್ಲಿ ಕಲ್ಲುಹೊಡೆದು ಸಾಯಿಸುವುದು ವಿವಾದಾತ್ಮಕ ವಿಷಯಗಳಾಗಿವೆ.ಇಷ್ಟೇ ಅಲ್ಲದೇ,ಕುರಾನ್‌ನಲ್ಲಿ ವ್ಯಕ್ತವಾಗಿರುವಂತೆ,ಮರಣದಂಡನೆಯನ್ನು ಮನ್ನಿಸಲಾಗಿದೆ. ಕುರಾನ್ ಅನೇಕ ಹ್ಯಾಡ್ (ಸ್ಥಿರ)ಅಪರಾಧಗಳಿಗೆ, ಅತ್ಯಾಚಾರ ಸೇರಿ ಮರಣದಂಡನೆ ನಿಗದಿಮಾಡಿದ್ದರೂ,ಹತ್ಯೆ ಅವುಗಳಲ್ಲಿ ಸೇರಿಕೊಂಡಿಲ್ಲ. ಬದಲಾಗಿ ಹತ್ಯೆಯನ್ನು ನಾಗರಿಕ ಅಪರಾಧ ಎಂದು ಪರಿಗಣಿಸಿ ಕಿಸಾಸ್ (ಪ್ರತೀಕಾರ)ಕಾನೂನಿನ ವ್ಯಾಪ್ತಿಗೆ ತರಲಾಗಿದೆ.
  • ಅಪರಾಧಿಗೆ ಆಡಳಿತವು ಮರಣದಂಡನೆ ಶಿಕ್ಷೆಯನ್ನು ನೀಡಬೇಕೇ ಅಥವಾ ಅಪರಾಧಿ ದಿಯಾ (ಪರಿಹಾರ ಧನ)ವನ್ನು ಪರಿಹಾರವಾಗಿ ನೀಡಬೇಕೆ ಎನ್ನುವುದನ್ನು ಬಲಿಪಶುವಿನ ಬಂಧುಗಳು ನಿರ್ಧರಿಸುತ್ತಾರೆ.[೮೪] "ಯಾರೇ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯನ್ನು ಕೊಂದರೆ-ಅದು ಹತ್ಯೆಗಾಗಿ ಕೊಂದ ಹೊರತು ಅಥವಾ ನೆಲದಲ್ಲಿ ಕಿಡಿಗೇಡಿತನ ಹಬ್ಬಿಸಲು ಕೊಂದಿದ್ದರೆ, ಅವನು ಎಲ್ಲ ವ್ಯಕ್ತಿಯನ್ನು ಕೊಂದ ರೀತಿಯಲ್ಲೇ ಭಾವಿಸಲಾಗುವುದು. ವ್ಯಕ್ತಿಯೊಬ್ಬ ಜೀವವನ್ನು ಉಳಿಸಿದ್ದರೆ,ಅವನು ಎಲ್ಲ ಜನರ ಜೀವಗಳನ್ನು ಉಳಿಸಿದ ರೀತಿಯಾಗುತ್ತದೆ.(ಕುರಾನ್ ೫:೩೨) "ನೆಲದಲ್ಲಿ ಕಿಡಿಗೇಡಿತನ ಹಬ್ಬಿಸುವುದೆಂದರೆ ಅನೇಕ ವಿಧದಲ್ಲಿ ಅರ್ಥೈಸಬಹುದಾಗಿದೆ.
  • ಆದರೆ ಸಾಮಾನ್ಯವಾಗಿ,ಇಡೀ ಸಮುದಾಯಕ್ಕೆ ಪರಿಣಾಮ ಬೀರುವ ಮತ್ತು ಸಮಾಜವನ್ನು ಅಸ್ಥಿರಗೊಳಿಸುವ ಅಪರಾಧಗಳು ಎಂದು ವ್ಯಾಖ್ಯಾನಿಸಲಾಗಿದೆ. ಈ ವಿವರಣೆಯಲ್ಲಿ ಬರುವ ಅಪರಾಧಗಳಲ್ಲಿ ಇವು ಸೇರಿವೆ : (೧) ದ್ರೋಹ,ಮುಸ್ಲಿಂ ಸಮುದಾಯದ ಶತ್ರುವಿಗೆ ಸಹಾಯ ಮಾಡಿದಾಗ,(೨)ಧರ್ಮಭ್ರಷ್ಟತೆ,ಧರ್ಮವನ್ನು ತೊರೆದುಹೋದಾಗ,(೩)ನೆಲ, ಕಡಲು ಅಥವಾ ವಾಯುಗಳ್ಳತನ(ಅಪಹರಣ)(೪)ಅತ್ಯಾಚಾರ;(೫)ವ್ಯಭಿಚಾರ;(೬)ಸಲಿಂಗ ಕಾಮದ ನಡವಳಿಕೆ[೮೫]

ಕ್ರೈಸ್ತ ಧರ್ಮ

  • ಆದರೆ ಕೆಲವರು ಏಸುಕ್ರಿಸ್ತನ ಬೋಧನೆಗಳಲ್ಲಿ ಇನ್ನೊಂದು ಕೆನ್ನೆಯನ್ನು ತೋರಿಸುವುದಕ್ಕೆ ಸಂಬಂಧಿಸಿದಂತೆ ಲ್ಯೂಕ್ ಸುವಾರ್ತೆ ಮತ್ತು ಮ್ಯಾಥಿವ್ ಸುವಾರ್ತೆಯಲ್ಲಿ ಮರಣದಂಡನೆಯನ್ನು ಖಂಡಿಸಲಾಗಿದೆಯೆಂದು ಕೆಲವರು ವ್ಯಾಖ್ಯಾನಿಸಿದ್ದಾರೆ. ಮತ್ತುJohn 8:7ವ್ಯಭಿಚಾರಿಣಿಯೊಬ್ಬಳಿಗೆ ಕಲ್ಲು ಹೊಡೆಯುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಿದ ಏಸುಕ್ರಿಸ್ತ, ಈ ಪದದೊಂದಿಗೆ ಗುಂಪಿಗೆ ಗದರಿಸುತ್ತಾನೆ.
  • "ಯಾರು ಪಾಪ ಮಾಡಿಲ್ಲವೇ ಅವರು ಮೊದಲ ಕಲ್ಲನ್ನು ಬೀಸಲಿ" ಉಳಿದವರು ಅದನ್ನು ಬೆಂಬಲಿಸುತ್ತಾರೆ.Romans 13:3-4 ಅಲ್ಲದೇ, ಮರಣದಂಡನೆಗೆ ಬೆಂಬಲವಿರುವ ಪರಿಸ್ಥಿತಿಗಳ ಇಡೀ ಪಟ್ಟಿಯನ್ನೇ ಹೊಂದಿದೆ. ಇವುಗಳ ಬಗ್ಗೆ ಕ್ರೈಸ್ತರ ನಿಲುವುಗಳು ಭಿನ್ನವಾಗಿವೆ.[೮೬] ೬ನೇ ದೈವಾಜ್ಞೆ (ರೋಮನ್ ಕ್ಯಾಥೋಲಿಕ್ ಮತ್ತು ಲುಥೇರನ್ ಚರ್ಚ್‌ಗಳಲ್ಲಿ ಐದನೆಯದು)ಯಲ್ಲಿ 'ನೀನು ಕೊಲ್ಲಬಾರದು' ಎಂದು ಬೋಧಿಸಲಾಗಿದೆ ಎಂದು ಎಂದು ಕೆಲವು ಪಂಥಗಳು ಹೇಳಿದರೆ 'ನೀನು ಹತ್ಯೆ ಮಾಡಬಾರದು' ಎಂದು ಬೋಧಿಸಿರುವುದಾಗಿ ಇನ್ನುಳಿದ ಪಂಧಗಳು ಹೇಳಿವೆ.
  • ಕೆಲವು ಪಂಥಗಳು ಈ ವಿಷಯದ ಬಗ್ಗೆ ಕಠಿಣ ನಿಲುವು ಹೊಂದಿರುವುದಿಲ್ಲ,ಇಂತಹ ಪಂಥಗಳ ಕ್ರೈಸ್ತರು ವೈಯಕ್ತಿಕ ನಿರ್ಧಾರ ಕೈಗೊಳ್ಳಲು ಸ್ವತಂತ್ರರು.[೮೭]

ರೋಮನ್ ಕ್ಯಾಥೋಲಿಕ್ ಚರ್ಚ್

ಚರ್ಚ್ ಮರಣದಂಡನೆಯನ್ನು ಕಾನೂನುಬದ್ಧ ವಧೆಯ ಸ್ವರೂಪದ ಶಿಕ್ಷೆಯೆಂದು ವರ್ಗೀಕರಿಸಿದೆ.ಮತಧರ್ಮಶಾಸ್ತ್ರದ ಅಧಿಕಾರಿ ಥಾಮಸ್ ಅಕ್ವಿನಾಸ್ ಅವರ ಚಿಂತನೆಯಿಂದ ಈ ಅಭಿಪ್ರಾಯ ಹುಟ್ಟಿಕೊಂಡಿದೆ. ಅವರು ಮರಣದಂಡನೆಯನ್ನು ಅಗತ್ಯ ತಡೆ ಮತ್ತು ನಿವಾರಣೆ ವಿಧಾನವಾಗಿ ಸ್ವೀಕರಿಸಿದ್ದರು. ಆದರೆ ಸೇಡಿನ ವಿಧಾನವಾಗಿ ಅಲ್ಲ.(ಮರಣದಂಡನೆ ಕುರಿತು ಅಕ್ವಿನಾಸ್ ಕೂಡ ನೋಡಿ) ರೋಮನ್ ಪ್ರಶ್ನೋತ್ತರ ಪುಸ್ತಕವು ಈ ಬೋಧನೆಯನ್ನು ಹೀಗೆಂದು ಹೇಳುತ್ತದೆ:

ಇನ್ನೊಂದು ರೀತಿಯ ಕಾನೂನುಬದ್ಧ ವಧೆಯು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದೆ.ಅವರಿಗೆ ಕಾನೂನು ಹಾಗೂ ನ್ಯಾಯಾಂಗ ಪ್ರಕ್ರಿಯೆ ಮೂಲಕ ಜೀವ ನೀಡುವ ಅಥವಾ ಜೀವ ತೆಗೆಯುವ ಅಧಿಕಾರ ನೀಡಲಾಗಿದ್ದು,ತಪ್ಪಿತಸ್ಥರಿಗೆ ಶಿಕ್ಷೆ ನೀಡಿ,ನಿರ್ದೋಷಿಗಳನ್ನು ರಕ್ಷಿಸುತ್ತಾರೆ. ಈ ಅಧಿಕಾರದ ಕೇವಲ ಬಳಕೆಯು,ಹತ್ಯೆ ಅಪರಾಧ ಒಳಪಡುವುದರಿಂದ ದೂರವಾಗಿದ್ದರೂ, ಹತ್ಯೆಯನ್ನು ನಿಷೇಧಿಸುವ ಈ ದೈವಾಜ್ಞೆಗೆ ಪರಮ ನಿಷ್ಠೆ ತೋರಿಸುವ ಕ್ರಮವಾಗಿದೆ.

ದೈವಾಜ್ಞೆಯ ಗುರಿಯು ಮಾನವ ಜೀವಕ್ಕೆ ರಕ್ಷಣೆ ಮತ್ತು ಭದ್ರತೆ ನೀಡುವುದಾಗಿದೆ. ಈಗ ಅಪರಾಧಕ್ಕೆ ಕಾನೂನುಬದ್ಧ ಪ್ರತೀಕಾರ ತೀರಿಸುವ ಸರ್ಕಾರಿ ಆಡಳಿತ ನೀಡುವ ಶಿಕ್ಷೆಗಳು ಸಾಮಾನ್ಯವಾಗಿ ಈ ಗುರಿಯತ್ತ ವಾಲಿವೆ.ಏಕೆಂದರೆ ಅವು ಆಕ್ರೋಶ ಮತ್ತು ಹಿಂಸಾಚಾರವನ್ನು ದಮನ ಮಾಡುವ ಮೂಲಕ ಜೀವಕ್ಕೆ ಭದ್ರತೆ ನೀಡುತ್ತದೆ. ಆದ್ದರಿಂದ ಡೇವಿಡ್‌ನ ಈ ಪದಗಳು: ನೆಲದ ಎಲ್ಲ ದುಷ್ಟರನ್ನು ಬೆಳಿಗ್ಗೆ ನಾನು ಸಾವಿಗೆ ಗುರಿಮಾಡಿದೆ,ದೇವರ ನಗರದಿಂದ ಎಲ್ಲ ಅಧರ್ಮದ ಪಾತಕಿಗಳನ್ನು ನಾನು ಕಡಿಯಬಹುದು.[೮೮]

ಎವಾಂಗಲಿಯಂ ವಿಟಾ(ಜೀವನದ ಸುವಾರ್ತೆ)ಯಲ್ಲಿ ಪೋಪ್ ಜಾನ್ ಪಾಲ್ II ಈ ಹೀಗೆಂದು ಸಲಹೆ ಮಾಡುತ್ತಾರೆ,ಅಪರಾಧಿಯಿಂದ ಸಮಾಜವನ್ನು ರಕ್ಷಿಸುವ ಏಕೈಕ ಮಾರ್ಗವಾಗಿದ್ದರೆ ಮಾತ್ರ ಮರಣದಂಡನೆ ನೀಡಬೇಕೇ ವಿನಾ ಬೇರೆ ಸಂದರ್ಭಗಳಲ್ಲಿ ಅದನ್ನು ತಪ್ಪಿಸಬೇಕು,ಶಿಕ್ಷೆಯು ಪರಿಪೂರ್ಣ ಅವಶ್ಯಕತೆ ಇಲ್ಲದೇ ಅಪರಾಧಿಗೆ ಮರಣದಂಡನೆ ವಿಧಿಸುವ ವಿಪರೀತದ ಮಟ್ಟಕ್ಕೆ ಇಳಿಯಬಾರದು,ಇನ್ನೊಂದು ಅರ್ಥದಲ್ಲಿ,ಸಮಾಜವನ್ನು ರಕ್ಷಿಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ಮಾತ್ರ ಮರಣದಂಡನೆ ವಿಧಿಸಬೇಕು. ಆದಾಗ್ಯೂ, ಇಂದು,ದಂಡನೆ ವ್ಯವಸ್ಥೆಯ ಸಂಸ್ಥೆಯಲ್ಲಿ ಸುಸ್ಥಿರ ಸುಧಾರಣೆಗಳ ಫಲವಾಗಿ,ಪ್ರಾಯೋಗಿಕವಾಗಿ ಅಸ್ತಿತ್ವದಲ್ಲಿರದಿದ್ದರೂ, ಅಂತಹ ಪ್ರಕರಣಗಳು ತೀರಾ ಅಪರೂಪದ್ದಾಗಿವೆ.[೮೯] ಕ್ಯಾಥೋಲಿಕ್ ಪ್ರಶ್ನೋತ್ತರ ಪುಸ್ತಕದ ಅತೀ ಇತ್ತೀಚಿನ ಆವೃತ್ತಿಯು ಈ ಅಭಿಪ್ರಾಯವನ್ನು ಪುನಃ ಮಂಡಿಸುತ್ತವೆ.[೯೦] ಜಾನ್ ಪಾಲ್ II ಮಂಡಿಸಿರುವ ಸಮಕಾಲೀನ ಪರಿಸ್ಥಿತಿಯ ಮೌಲ್ಯೀಕರಣಕ್ಕೆ ನಿಷ್ಠಾವಂತರು ಬದ್ಧರಾಗಬೇಕಿಲ್ಲ ಎನ್ನುವುದನ್ನು ಕಾರ್ಡಿನಲ್ ರಾಟ್ಜಿಂಗರ್ ದೃಢೀಕರಿಸಿದ್ದು,ಅವರು ೨೦೦೪ರಲ್ಲಿ ಹೀಗೆ ಬರೆದಿದ್ದಾರೆ,

ಮರಣದಂಡನೆ ಶಿಕ್ಷೆ ಅಳವಡಿಕೆ ಅಥವಾ ಯುದ್ಧ ಮಾಡುವ ನಿರ್ಧಾರವು ಕ್ಯಾಥೋಲಿಕ್‌ನಿಗೆ ಪವಿತ್ರ ಫಾದರ್ ಜತೆ ಪ್ರತಿಕೂಲವಾಗಿ ಕಂಡರೆ,ಆ ಕಾರಣಕ್ಕಾಗಿ ಅವನು ಪವಿತ್ರ ಪ್ರಭುಭೋಜನ ಸಂಸ್ಕಾರದಲ್ಲಿ ಸ್ವಯಂ ಭಾಗವಹಿಸುವುದಕ್ಕೆ ಅನರ್ಹನೆಂದು ಪರಿಗಣಿಸಬೇಕಿಲ್ಲ. ಸರ್ಕಾರಿ ಆಡಳಿತಗಳು ಯುದ್ಧಮಾಡದೇ ಶಾಂತಿ ಕಾಪಾಡುವಂತೆ ಚರ್ಚ್ ಒತ್ತಾಯಿಸುತ್ತದೆ ಹಾಗೂ ಕ್ರಿಮಿನಲ್‌ಗಳಿಗೆ ಶಿಕ್ಷೆ ನೀಡುವಾಗ ವಿವೇಚನೆ ಮತ್ತು ಕರುಣೆ ತೋರುವಂತೆ,ಆಕ್ರಮಣಕಾರಿಯನ್ನು ಹಿಮ್ಮೆಟಿಸಲು ಶಸ್ತ್ರಗಳನ್ನು ಕೈಗೆ ತೆಗೆದುಕೊಳ್ಳುವುದು ಅಥವಾ ಮರಣದಂಡನೆಯೊಂದೇ ಏಕೈಕ ದಾರಿಯಾದಾಗ ಅದಕ್ಕೆ ಅನುಮತಿ ಕೊಡಬಹುದು. ಯುದ್ಧ ಮಾಡುವ ಬಗ್ಗೆ ಮತ್ತು ಮರಣದಂಡನೆ ಅನ್ವಯಿಸುವ ಬಗ್ಗೆ ನ್ಯಾಯಸಮ್ಮತ ಭಿನ್ನಾಭಿಪ್ರಾಯಗಳು ಕ್ಯಾಥೋಲಿಕ್ಕರ ನಡುವೆ ಇರಬಹುದು,ಆದಾಗ್ಯೂ ಗರ್ಭಪಾತ ಮತ್ತು ಸುಖಮರಣಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿಲ್ಲ.[೯೧]

ಎಲ್ಲ ಕ್ಯಾಥೋಲಿಕ್ಕರು ಮರಣದಂಡನೆ ಶಿಕ್ಷೆಯು ಕ್ಯಾಥೋಲಿಕ್ ಚರ್ಚ್ ಬೋಧನೆಗಳಿಗೆ ವ್ಯತಿರಿಕ್ತವಾಗಿರಬಾರದೆಂದು ಭಾವಿಸಿದ್ದಾರೆ ಹಾಗೂ ತಪ್ಪಿತಸ್ಥರಿಗೆ ಮರಣದಂಡನೆ ನೀಡುವ ರಾಜ್ಯದ ಅಧಿಕಾರವು ರಿವೇಲೇಷನ್ ಪುಸ್ತಕ ಮತ್ತು ಧರ್ಮಶಾಸ್ತ್ರಜ್ಞರ ಬರಹಗಳಿಂದ ಹೆಚ್ಚು ಅಧಿಕಾರ ಹೊಂದಿರುತ್ತದೆ,ಆ ಅಧಿಕಾರವನ್ನು ಬಳಸುವ ಯುಕ್ತತೆಯನ್ನು ಇತರೆ ಮತ್ತು ವಿವಿಧ ಪರಿಗಣನೆಗಳಿಂದ ನಿರ್ಧರಿಸಬೇಕಾಗುತ್ತದೆ.[೯೨]

ಆಂಗ್ಲಿಕನ್ ಮತ್ತು ಎಪಿಸ್ಕೋಪಾಲಿನ್

ಆಂಗ್ಲಿಕನ್ ಮತ್ತು ಎಪಿಸ್ಕೋಪಾಲಿಯನ್ ಬಿಷಪ್ಪರ ಲ್ಯಾಂಬೆತ್ ಸಮಾವೇಶವು ೧೯೮೮ರಲ್ಲಿ ಮರಣದಂಡನೆಯನ್ನು ಖಂಡಿಸಿತು :

This Conference: ... 3. Urges the Church to speak out against: ... (b) all governments who practice capital punishment, and encourages them to find alternative ways of sentencing offenders so that the divine dignity of every human being is respected and yet justice is pursued;....[೯೩]

ಯುನೈಟೆಡ್ ಮೆಥೋಡಿಸ್ಟ್ ಚರ್ಚ್

ಯುನೈಟೆಡ್ ಮೆಥೋಡಿಸ್ಟ್ ಚರ್ಚ್ ಇತರೆ ಮೆಥೋಡಿಸ್ಟ್ ಚರ್ಚ್‌ಗಳ ಜತೆಯಲ್ಲಿ ಮರಣದಂಡನೆಯನ್ನು ಖಂಡಿಸುತ್ತದೆ,ಮಾನವನ ಜೀವ ತೆಗೆಯುವುದಕ್ಕೆ ಪ್ರತೀಕಾರ ಅಥವಾ ಸೇಡಿನ ಕಾರಣವನ್ನು ಸ್ವೀಕರಿಸುವುದಿಲ್ಲವೆಂದು ಅದು ಹೇಳಿತು.[೯೪] ಬಡವರು, ಅವಿದ್ಯಾವಂತರು,ಜನಾಂಗೀಯ,ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮಾನಸಿಕ ಮತ್ತು ಭಾವನಾತ್ಮಕ ರೋಗಿಗಳು ಸೇರಿದಂತೆ ದಮನಿತ ವ್ಯಕ್ತಿಗಳ ಮೇಲೆ ಅನ್ಯಾಯವಾಗಿ ಮತ್ತು ಅಸಮಾನವಾಗಿ ಮರಣದಂಡನೆ ಹೇರಲಾಗುತ್ತದೆಂದು ಚರ್ಚ್ ಭಾವಿಸಿತು.[೯೫] ಯುನೈಟೆಡ್ ಮೆಥೋಡೊಡಿಸ್ಟ್ ಚರ್ಚ್‌ನ ಸಾಮಾನ್ಯ ಸಮಾವೇಶವು ಅದರ ಬಿಷಪ್‌ರಿಗೆ ಮರಣದಂಡನೆ ವಿರೋಧವನ್ನು ಎತ್ತಿಹಿಡಿಯುವಂತೆ ಹಾಗೂ ಸರ್ಕಾರಗಳು ಮರಣದಂಡನೆ ಶಿಕ್ಷೆಗೆ ತಕ್ಷಣದ ಸ್ಥಗಿತವನ್ನು ಜಾರಿಗೆ ತರುವಂತೆ ಕರೆ ನೀಡಿದೆ.

ಅಮೆರಿಕದ ಎವಾಂಗ್ಲಿಕಲ್ ಲುಥೇರನ್ ಚರ್ಚ್

ಇಸವಿ ೧೯೯೧ರಲ್ಲಿ ಸಾಮಾಜಿಕ ನೀತಿ ಹೇಳಿಕೆಯಲ್ಲಿ ELCA ಮರಣದಂಡನೆಯನ್ನು ವಿರೋಧಿಸುವ ನಿಲುವನ್ನು ಅಧಿಕೃತವಾಗಿ ತೆಗೆದುಕೊಂಡಿತು. ಮರಣದಂಡನೆ ಶಿಕ್ಷೆ ನೀತಿಗೆ ಪ್ರತೀಕಾರವು ಮುಖ್ಯಪ್ರೇರಣೆಯಾಗಿದ್ದು,ಪಶ್ಚಾತ್ತಾಪ ಮತ್ತು ಕ್ಷಮೆಯಿಂದ ಮಾತ್ರ ನಿಜವಾದ ಚಿಕಿತ್ಸೆ ನೀಡಲು ಸಾಧ್ಯವೆಂದು ಅದು ಹೇಳುತ್ತದೆ.[೯೬]

ದಕ್ಷಿಣ ಬ್ಯಾಪ್ಟಿಸ್ಟ್ ಸಂಪ್ರದಾಯ

ದಕ್ಷಿಣ ಬ್ಯಾಪ್ಟಿಸ್ಟ್ ಸಂಪ್ರದಾಯವು ೨೦೦೦ರಲ್ಲಿ ಬ್ಯಾಪ್ಟಿಸ್ಟ್ ನಂಬಿಕೆ ಮತ್ತು ಸಂದೇಶವನ್ನು ಪರಿಷ್ಕರಿಸಿತು. ಅದರಲ್ಲಿ ಸಂಪ್ರದಾಯವು ರಾಜ್ಯವು ಮರಣದಂಡನೆ ಶಿಕ್ಷೆಯನ್ನು ಬಳಸಬಹುದೆಂದು ಅಧಿಕೃತವಾಗಿ ಅನುಮತಿ ನೀಡಿತು. ಹತ್ಯೆಯಿಂದ ತಪ್ಪಿತಸ್ಥರಾದವರಿಗೆ ಮರಣದಂಡನೆ ವಿಧಿಸುವುದು ರಾಜ್ಯದ ಕರ್ತವ್ಯವೆಂದೂ,ದೇವರು ನೊಯಾಹಿಕ್ ಒಪ್ಪಂದದಲ್ಲಿ ಮರಣದಂಡನೆಯನ್ನು ಸ್ಥಿರಪಡಿಸಿದ್ದಾನೆಂದು ಅದರಲ್ಲಿ ತಿಳಿಸಲಾಗಿದೆ.

ಇತರೆ ಪ್ರೊಟೆಸ್ಟೆಂಟ್‌ಗಳು

  • ಮಾರ್ಟಿನ್ ಲೂಥರ್ ಮತ್ತು ಜಾನ್ ಕ್ಯಾಲ್ವಿನ್ ಸೇರಿದಂತೆ ಅನೇಕ ಪ್ರಮುಖ ಮುಖಂಡರು ಪ್ರೊಟೆಸ್ಟಂಟ್ ಸುಧಾರಣೆ ಪೂರ್ವದಲ್ಲಿ ಮರಣದಂಡನೆ ಪರವಾಗಿ ಸಾಂಪ್ರದಾಯಿಕ ತರ್ಕಸಮ್ಮತೆಯನ್ನು ಅನುಸರಿಸಿದರು ಹಾಗೂ ಲುಥೇರನ್ ಚರ್ಚ್‌ನ ಆಗ್ಸ್‌ಬರ್ಗ್ ಕನ್ಫೆಷನ್ ಸ್ಪಷ್ಟವಾಗಿ ಅದನ್ನು ಸಮರ್ಥಿಸಿತು. ಕೆಲವು ಪ್ರೊಟೆಸ್ಟಂಟ್ ಗುಂಪುಗಳು ಜೆನೆಸಿಸ್ 9:5–6,ರೋಮನ್ಸ್ 13:3–4 ಮತ್ತು ಲೆವಿಟಿಕಸ್ 20:1–27ಮರಣದಂಡನೆ ಶಿಕ್ಷೆಗೆ ಅನುಮತಿ ನೀಡಲು ಆಧಾರವೆಂದು ಉದಾಹರಿಸಿದರು.[೯೭]
  • ಮೆನ್ನೊನೈಟ್ಸ್,ಚರ್ಚ್ ಆಫ್ ದಿ ಬ್ರೆದರ್ನ್ ಮತ್ತು ಫ್ರೆಂಡ್ಸ್ ಅವು ಸ್ಥಾಪನೆಯಾದಾಗಿನಿಂದ ಮರಣದಂಡನೆಯನ್ನು ವಿರೋಧಿಸಿ ಅದಕ್ಕೆ ಇಂದಿಗೂ ಕೂಡ ತೀವ್ರ ವಿರೋಧವನ್ನು ಮುಂದುವರಿಸಿವೆ. ಈ ಗುಂಪುಗಳು ಇತರೆ ಕ್ರಿಶ್ಚಿಯನ್ನರ ಜತೆ ಮರಣದಂಡನೆಗೆ ವಿರೋಧಿಸಿ ದವು ಮತ್ತು ಏಸು ಕ್ರಿಸ್ತನ ಸರ್ಮನ್ ಆನ್ ದಿ ಮೌಂಟ್ಮ್ಯಾಥಿವ್ ಅಧ್ಯಾಯ5-7ರಲ್ಲಿ ಬರೆದಿದೆ)ಹಾಗೂ ಸರ್ಮನ್ ಆನ್ ದಿ ಪ್ಲೈನ್(ಲ್ಯೂಕ್ 6:17–49ರಲ್ಲಿ ಬರೆದಿದೆ)ಉದಾಹರಿಸಿವೆ. ಎರಡೂ ಉಪದೇಶಗಳಲ್ಲಿ ಏಸು ಕ್ರಿಸ್ತ ತನ್ನ ಅನುಯಾಯಿಗಳಿಗೆ,ಇನ್ನೊಂದು ಕೆನ್ನೆಯನ್ನು ತೋರಿಸುವ ಮತ್ತು ಶತ್ರುಗಳನ್ನು ಪ್ರೀತಿಸುವ ಬಗ್ಗೆ ಬೋಧಿಸುತ್ತಾನೆ. ಈ ಬೋಧನೆಗಳು ಅಹಿಂಸೆ ಸೇರಿದಂತೆ ಮರಣದಂಡನೆ ವಿರೋಧವನ್ನು ಬಿಂಬಿಸುತ್ತದೆಂದು ಈ ಗುಂಪುಗಳು ನಂಬಿಕೆಯಿರಿಸಿವೆ.

ಮಾರ್ಮಾನ್ಸ್

ದಿ ಚರ್ಚ್ ಆಫ್ ದಿ ಜೀಸಸ್ ಕ್ರೈಸ್ಟ್ ಆಫ್ ಲ್ಯಾಟರ್-ಡೇ ಸೇಂಟ್ಸ್(ಮಾರ್ಮನ್ಸ್ ಎಂದು ಸಹ ಕರೆಯಲಾಗುತ್ತದೆ)ಮರಣದಂಡನೆಯನ್ನು ಉತ್ತೇಜಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ. "ನಾಗರಿಕ ಕಾನೂನಿನ ಪ್ರಕ್ರಿಯೆಗಳ ಮೂಲಕ ಮಾತ್ರ ಈ ವಿಷಯ ನಿರ್ಧರಿಸಬೇಕು" ಎಂದು ಅವು ಅಧಿಕೃತವಾಗಿ ಹೇಳುತ್ತವೆ.[೯೮]

ಪೂರ್ವ ಸಾಂಪ್ರದಾಯಿಕ ಕ್ರಿಶ್ಚಿಯಾನಿಟಿ

ಪೂರ್ವ ಸಾಂಪ್ರದಾಯಿಕ ಕ್ರಿಶ್ಚಿಯಾನಿಟಿ ಸಾಮಾನ್ಯವಾಗಿ ಮರಣದಂಡನೆ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಿಕೊಂಡಿದೆ. ಆದರೆ ಈ ಧರ್ಮದಲ್ಲಿ ಎರಡೂ ರೀತಿಯಲ್ಲಿ ಹೇಳಿರುವುದು ಕಡಿಮೆ.

ಎಸೊಟರಿಕ್ ಕ್ರಿಶ್ಚಿಯಾನಿಟಿ

ರೋಸಿಕ್ರೂಸಿಯನ್ ಫೆಲೋಶಿಪ್ ಹಾಗೂ ಅನೇಕ ಇತರೆ ಕ್ರಿಶ್ಚಿಯನ್ ಎಸೊಟರಿಕ್(ಅಧಿಕೃತರಿಗೆ ಮಾತ್ರ ಪ್ರವೇಶವುಳ್ಳ ಮತದ) ಶಾಲೆಗಳು ಎಲ್ಲ ಸಂದರ್ಭಗಳಲ್ಲಿಯೂ ಮರಣದಂಡನೆಯನ್ನು ಖಂಡಿಸಿವೆ.[೯೯][೧೦೦]

ಸಾಹಿತ್ಯ ಮತ್ತು ಮಾಧ್ಯಮದಲ್ಲಿ

ಸಾಹಿತ್ಯ

  • ಸುವಾರ್ತೆಗಳು ಏಸುಕ್ರಿಸ್ತನ ಮರಣದಂಡನೆಯನ್ನು ಸುದೀರ್ಘವಾಗಿ ಬಣ್ಣಿಸಿದ್ದು, ಇವು ಕ್ರಿಶ್ಚಿಯನ್ ನಂಬಿಕೆಯ ಮುಖ್ಯಭಾಗವಾಗಿ ರೂಪುಗೊಂಡಿದೆ. ಕ್ರೈಸ್ತರ ಕಲೆಗಳಲ್ಲಿ ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದನ್ನು ವಿಪುಲವಾಗಿ ಬಿಂಬಿಸಲಾಗಿದೆ. ವೆಲೇರಿಯಸ್ ಮಾಕ್ಸಿಮಸ್ ಕಥೆ ಡಾಮನ್ ಎಂಡ್ ಪೈಥಿಯಾಸ್ ಸತ್ಯನಿಷ್ಠೆಗೆ ಪ್ರಖ್ಯಾತ ಉದಾಹರಣೆಯಾಗಿದೆ.
  • ಡಾಮನ್‌ಗೆ ಮರಣದಂಡನೆ ವಿಧಿಸಲಾಗುತ್ತದೆ(ಓದುಗರಿಗೆ ಏಕೆಂದು ತಿಳಿಸುವುದಿಲ್ಲ)ಹಾಗೂ ಡಾಮನ್ ಕೊನೆಯ ವಿದಾಯಗಳನ್ನು ಹೇಳಿ ಹೋಗುವಾಗ ಅವನ ಸ್ಥಾನದಲ್ಲಿ ನಿಲ್ಲುವುದಾಗಿ ಫೈಥಾಸ್ ಮುಂದೆಬರುತ್ತಾನೆ. "ಎನ್ ಅಕರನ್ಸ್ ಎಟ್ ಔಲ್ ಕ್ರೀಕ್ ಬ್ರಿಜ್ ಆಂಬ್ರೋಸ್ ಬಿಯರ್ಸ್ ಅವರ ಸಣ್ಣ ಕತೆಯಾಗಿದ್ದು,೧೮೯೦ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಅಮೆರಿಕದ ಆಂತರಿಕ ಯುದ್ಧದ ಸಂದರ್ಭದಲ್ಲಿ ಕಾನ್ಫಡರೇಡ್ ಸಹಾನುಭೂತಿ ಉಳ್ಳವನನ್ನು ಗಲ್ಲಿಗೇರಿಸುವ ಕಥೆಯನ್ನು ಇದು ಹೊಂದಿದೆ.
  • ಡಿಕನ್ಸ್‌ನ ಎ ಟೇಲ್ ಆಫ್ ಟೂ ಸಿಟೀಸ್ ಪುಸ್ತಕದ ಮುಖ್ಯ ಪಾತ್ರಧಾರಿಯ ಪರಾಕಾಷ್ಠೆಯ ಮರಣದಂಡನೆಯಲ್ಲಿ ಕೊನೆಯಾಗುತ್ತದೆ. ವಿಕ್ಟರ್ ಹ್ಯೂಗೊ ಅವರ ದಿ ಲಾಸ್ಟ್ ಡೇ ಆಫ್ ಎ ಕಂಡೆಮ್ಡ್ ಮ್ಯಾನ್ (Le Dernier Jour d'un condamné ) ತಪ್ಪಿತಸ್ಥ ವ್ಯಕ್ತಿಯ ಮರಣದಂಡನೆಗೆ ಮುಂಚಿನ ಆಲೋಚನೆಗಳನ್ನು ಬಣ್ಣಿಸುತ್ತವೆ.
  • ಪುಸ್ತಕದ ಮುನ್ನುಡಿ ಸಹ ಗಮನಾರ್ಹವಾಗಿದ್ದು, ಮರಣದಂಡನೆಯ ವಿರುದ್ಧ ಹ್ಯೂಗೊ ಸುದೀರ್ಘವಾಗಿ ವಾದ ಮಾಡುತ್ತಾನೆ. ಅನೈಸ್ ನಿನ್ ಸಂಕಲನ ಲಿಟಲ್ ಬರ್ಡ್ಸ್‌‍‌ನಲ್ಲಿ ಸಾರ್ವಜನಿಕ ಮರಣದಂಡನೆಯ ಕಥೆಯನ್ನು ಕಾಮಪ್ರಚೋದಕವಾಗಿ ಬಿಂಬಿಸಿರುವುದು ಸೇರಿದೆ. ವಿಲಿಯಂ ಬರೋಸ್ ಕಾದಂಬರಿ ನೇಕಡ್ ಲಂಚ್‌ ಕೂಡ ಮರಣದಂಡನೆಯ ಕಾಮಪ್ರಚೋದಕ ಮತ್ತು ಅತಿವಾಸ್ತವಿಕವಾದ ವರ್ಣನೆಗಳನ್ನು ಸೇರಿಸಿದೆ.
  • ಬರೋಸ್ ವಿರುದ್ಧ ಅಶ್ಲೀಲತೆ ಕುರಿತ ವಿಚಾರಣೆಯಲ್ಲಿ,ಕಾದಂಬರಿಯು ಮರಣದಂಡನೆ ವಿರೋಧಿ ವಾದದ ಸ್ವರೂಪದಲ್ಲಿರುವುದರಿಂದ ದೋಷವನ್ನು ಮರೆಸುವ ರಾಜಕೀಯ ಮೌಲ್ಯದ ಅಂಶವನ್ನು ಹೊಂದಿದೆ ಎಂದು ಪ್ರತಿವಾದಿ ಯಶಸ್ವಿಯಾಗಿ ವಾದ ಮಂಡಿಸಿದರು. (೧}ಜಾನ್ ಗ್ರಿಶಾಮ್ ಅವರ ದಿ ಚೇಂಬರ್‌ ನಲ್ಲಿ ಯುವ ವಕೀಲನೊಬ್ಬ ತನ್ನ ಕ್ಲಾನ್ಸ್‌ಮ್ಯಾನ್ ತಾತನನ್ನು ಮರಣದಂಡನೆಯ ಶಿಕ್ಷೆಯಿಂದ ಪಾರುಮಾಡಲು ಯತ್ನಿಸುತ್ತಾನೆ. ಮರಣದಂಡನೆ ವಿರೋಧಿ ವಿಷಯಗಳ ನಿರೂಪಣೆಗೆ ಕಾದಂಬರಿ ಗಮನಾರ್ಹವಾಗಿದೆ.
  • ಬರ್ನಾರ್ಡ್ ಕಾರ್ನ್‌ವೆಲ್ ಕಾದಂಬರಿ ಗ್ಯಾಲೋಸ್ ತೀಫ್ ಹೂಡನ್ನಿಟ್ (ಯಾರು ಮಾಡಿದ್ದು-ಪತ್ತೆದಾರಿ ಕಾದಂಬರಿಯ ಸ್ವರೂಪ)ಕಥೆಯಾಗಿದ್ದು ೧೯ನೇ ಶತಮಾನದ ಪೂರ್ವದಲ್ಲಿ ಸಂಭವಿಸುತ್ತದೆ. ಅನೇಕ ಸಣ್ಣ ಅಪರಾಧಗಳಿಗೆ ಮರಣದಂಡನೆ ಶಿಕ್ಷೆಗಳಿಗೆ ಗುರಿಮಾಡುವ ಸರಣಿ ಕಾನೂನುಗಳಾದ ಬ್ಲಡಿ ಕೋಡ್ ಸಂದರ್ಭದಲ್ಲಿ ಇದು ಘಟಿಸುತ್ತದೆ. ನಾಯಕ ಮರಣದಂಡನೆಗೆ ಗುರಿಯಾದ ವ್ಯಕ್ತಿಯ ದೋಷವನ್ನು ತನಿಖೆ ಮಾಡುವ ಪತ್ತೆದಾರಿಯಾಗಿ ನೇಮಕವಾಗುತ್ತಾನೆ.
  • ಅವನು ಎದುರಿಸಿದ ಕಷ್ಟಗಳಿಂದ, ಉಗ್ರ ಕಾನೂನುಗಳು ಹಾಗೂ ಮರಣದಂಡನೆ ಕುರಿತು ಜನರ ಸಂತೃಪ್ತ ಮನೋಭಾವದ ಬಗ್ಗೆ ಕಠಿಣ ದೋಷಾರೋಪಕ್ಕೆ ದಾರಿಕಲ್ಪಿಸುತ್ತದೆ. ಜಾರ್ಜ್ ಆರ್ವೆಲ್ ಅವರ ಎ ಹ್ಯಾಂಗಿಂಗ್ ೧೯೨೦ರ ದಶಕದಲ್ಲಿ ಬರ್ಮದಲ್ಲಿ ಪೊಲೀಸ್‌ವೃತ್ತಿಯಲ್ಲಿ ಸೇವೆಸಲ್ಲಿಸುವಾಗ,ಅವನು ಪ್ರತ್ಯಕ್ಷದರ್ಶಿಯಾದ ಮರಣದಂಡನೆಯ ಕಥೆಯನ್ನು ಹೇಳುತ್ತದೆ. "ಇದು ಕುತೂಹಲಕಾರಿಯಾಗಿದ್ದರೂ,ಆರೋಗ್ಯಪೂರ್ಣ,ಪ್ರಜ್ಞಾಪೂರ್ವಕ ವ್ಯಕ್ತಿಯನ್ನು ನಾಶ ಮಾಡುವುದೆಂದರೆ ಏನೆಂದು ಆ ಕ್ಷಣದವರೆಗೆ ತಮಗೆ ತಿಳಿದಿರಲಿಲ್ಲವೆಂದು ಅವರು ಬರೆಯುತ್ತಾರೆ. *ಕೈದಿಯು ಕೆಸರುನೀರಿನಿಂದ ತಪ್ಪಿಸಿಕೊಳ್ಳಲು ಬದಿಗೆ ಸರಿದಿದ್ದನ್ನು ಕಂಡಾಗ,ತಾವು ನಿಗೂಢತೆಯನ್ನು,ಮಾತಿನಲ್ಲಿ ವರ್ಣಿಸಲಾಗದ ತಪ್ಪನ್ನು,ಪೂರ್ಣ ಗತಿಯಲ್ಲಿದ್ದ ಜೀವವನ್ನು ಅರ್ಧಕ್ಕೆ ಮೊಟಕು ಮಾಡಿದ್ದನ್ನು ಕಂಡೆ. ಆ ಮನುಷ್ಯ ಸಾಯುವ ಹಂತದಲ್ಲಿರಲಿಲ್ಲ, ನಾವು ಜೀವಂತವಿರುವ ರೀತಿಯಲ್ಲೇ ಅವನು ಜೀವದಿಂದಿದ್ದ..." ಮೈಕೆಲ್ ಫೌಕಾಲ್ಟ್ ಅವರ ಡಿಸಿಪ್ಲಿನ್ ಎಂಡ್ ಪನಿಷ್ : ದಿ ಬರ್ತ್ ಆಫ್ ದಿ ಪ್ರಿಸನ್ ಬಹುತೇಕ ಭಾಗ ಹಿಂಸೆಯನ್ನು ನಿರ್ಮೂಲನೆ ಮಾಡಿರುವ ಬಗ್ಗೆ ಹಾಗೂ ಶೀಘ್ರ ಹಾಗೂ ನೋವುರಹಿತ ಶಿಕ್ಷೆಗೆ ಸಂಬಂಧಿಸಿದ ಮರಣದಂಡನೆಯ ಕಥೆಯನ್ನು ಹೊಂದಿದೆ. ಈ ಶಿಕ್ಷೆಯನ್ನು ಹೆಚ್ಚಾಗಿ ದೇಹದ ಬದಲಿಗೆ ಆತ್ಮಕ್ಕೆ ಗುರಿಯಿರಿಸಲಾಗಿದೆಯೆಂದು ಫೌಕಲ್ಟ್ ನಂಬಿದ್ದಾನೆ.
  • ಎ ಲೆಸನ್ ಬಿಫೋರ್ ಡೈಯಿಂಗ್ ಮರಣದಂಡನೆಯ ಸಾಲಿನಲ್ಲಿದ್ದ ತಪ್ಪಾಗಿ ಶಿಕ್ಷೆಗೊಳಗಾದ ವ್ಯಕ್ತಿಯ ಕಥೆಯನ್ನು ಅನುಸರಿಸುತ್ತದೆ. ಆಲ್ಬರ್ಟ್ ಕ್ಯಾಮಸ್ ಅವರ ದಿ ಸ್ಟ್ರೇಂಜರ್ L'Étranger /ದಿ ಫಾರಿನರ್, ದಿ ಔಟ್‌ಸೈಡರ್ )ಗಿಲೋಟಿನ್(ತಲೆ ಕಡಿಯುವ ಯಂತ್ರ)ದ ಶಿಕ್ಷೆಗೆ ಗುರಿಯಾದ ಹತ್ಯೆಕೋರನ ಕಾಲ್ಪನಿಕ ವರ್ಣನೆ,ಅಲ್ಜೀರಿಯದಲ್ಲಿ ಕ್ಯಾಮಸ್ ಹಾಜರಾಗಿದ್ದ ವಿಚಾರಣೆಯನ್ನು ಈ ಕತೆ ಆಧರಿಸಿದೆ. ಕೊನೆಯಲ್ಲಿ ಹತ್ಯೆಕೋರ ತನ್ನ ಸನ್ನಿಹಿತ ಸಾವನ್ನು ಒಪ್ಪಿಕೊಳ್ಳುತ್ತಾನೆ ಹಾಗೂ ತನ್ನ ಮರಣದಂಡನೆಯಲ್ಲಿ ನೆರದಿದ್ದ ಭಾರೀ ಗುಂಪಿನಿಂದ ಬೈಗುಳ ಸುರಿಮಳೆಯನ್ನು ನಿರೀಕ್ಷಿಸುತ್ತಾನೆ.

ಚಲನಚಿತ್ರ, ಕಿರುತೆರೆ ಮತ್ತು ನಾಟಕ

  • ಅನೇಕ ಚಲನಚಿತ್ರಗಳು ಮರಣದಂಡನೆಯ ಕತೆಯನ್ನು ಆಧರಿಸಿದ್ದು,ಸೀಡ್, ಸಿಸ್ಟರ್ ಹೆಲನ್ ಪ್ರಿಜೀನ್ ಆಧಾರಿತ ಪುಸ್ತಕ ಡೆಡ್ ಮ್ಯಾನ್ ವಾಕಿಂಗ್,ದಿ ಗ್ರೀನ್ ಮೈಲ್, ದಿ ಲೈಫ್ ಆಫ್ ಡೇವಿಡ್ ಗೇಲ್ ಮತ್ತು ಡ್ಯಾನ್ಸರ್ ಇನ್ ದಿ ಡಾರ್ಕ್ ಸೇರಿವೆ.
  • ನಾಟಕ(ನಂತರ ಚಲನಚಿತ್ರವಾದ)ಎರಿಕ್ ಜೆನ್ಸನ್ ಅವರ ದಿ ಎಕ್ಸೋನರೇಟೆಡ್ ಮತ್ತು ಜೆಸ್ಸಿಕಾ ಬ್ಲಾಂಕ್ HBO ಸರಣಿ Oz ಮರಣದಂಡನೆ ಪರ/ವಿರುದ್ಧ ಪ್ರತಿ- ದೃಷ್ಟಿಕೋನಗಳ ಬಗ್ಗೆ ಗಮನಸೆಳೆಯಿತು.
  • ಪ್ರಿಸನ್ ಬ್ರೇಕ್ ೨೦೦೫ನೇ ಕಿರುತೆರೆ ಸರಣಿಯಾಗಿದ್ದು, ಅದರ ಮುಖ್ಯಪಾತ್ರಧಾರಿ ತನ್ನ ಸೋದರನನ್ನು ಮರಣದಂಡನೆಯಿಂದ ಪಾರು ಮಾಡಲು ಯತ್ನಿಸುತ್ತಾನೆ. ಇದಕ್ಕಾಗಿ ಯೋಜನೆಯೊಂದನ್ನು ರೂಪಿಸಿ ಸೆರೆಮನೆಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತಾನೆ.
  • ಚಲನಚಿತ್ರ ಲೆಟ್ ಹಿಂ ಹ್ಯಾವ್ ಇಟ್ ಯುವ ತಿಳಿವಳಿಕೆಯ ಪುರುಷನೊಬ್ಬನ ಕಥೆಯಾಗಿದ್ದು, ವಿವಾದಾತ್ಮಕವಾಗಿ ಆರೋಪಕ್ಕೆ ಗುರಿಯಾದ ನಂತರ,ನೇಣಿನ ಮೂಲಕ ಮರಣದಂಡನೆ ವಿಧಿಸಲಾಗುತ್ತದೆ.
  • ಪಾಲಿಷ್ ಚಿತ್ರತಯಾರಕ ಕ್ರಿಸ್ಟೋಫ್ ಕೈಸ್‌ಲೋವ್‌ಸ್ಕಿಯ ೧೯೮೮ನೇ ಚಲನಚಿತ್ರ ಎ ಶಾರ್ಟ್ ಫಿಲ್ಮ್ ಎಬೌಟ್ ಕಿಲ್ಲಿಂಗ್ ನಿರ್ದಯ ಹತ್ಯೆಯ ಘಟನೆಯ ಬಗ್ಗೆ ಹಾಗೂ ಕಟ್ಟಕಡೆಯಲ್ಲಿ ಹತ್ಯೆಕೋರನನ್ನು ನೇಣುಗಂಭಕ್ಕೆ ಏರಿಸುವ ಬಗ್ಗೆ ಸುಸ್ಪಷ್ಟ ನೋಟವನ್ನು ಒದಗಿಸುತ್ತದೆ. ದಿ ಸ್ಟೋನಿಂಗ್ ಆಫ ಸೊರಯಾ M. ೨೦೦೯ನೇ ಚಲನಚಿತ್ರವಾಗಿದ್ದು, ಕಲ್ಲುಹೊಡೆಯುವ ಮೂಲಕ ಮರಣದಂಡನೆಗೆ ಗುರಿಯಾದ ಬಾಲಕಿಯ ಕತೆಯನ್ನು ಆಧರಿಸಿದ ಚಿತ್ರವಾಗಿದೆ.
  • ದಿ ಎಕ್ಸಿಕ್ಯೂಷನ್ ಆಫ್ ಗ್ಯಾರಿ ಗ್ಲಿಟ್ಟರ್ ೨೦೦೯ನೇ ಚಲನಚಿತ್ರವಾಗಿದ್ದು,ಕಾಲ್ಪನಿಕ UKಯಲ್ಲಿ ಮರಣದಂಡನೆಯನ್ನು ಮರುಜಾರಿಗೆ ತರಲಾಗುತ್ತದೆ. ಫೋರ್ಟೀನ್ ಡೇಸ್ ಇನ್ ಮೇ ಮರಣದಂಡನೆಗೆ ಗುರಿಯಾದ ವ್ಯಕ್ತಿಯ ಕಥೆಯುಳ್ಳ BBC ಸಾಕ್ಷ್ಯ ಚಿತ್ರವಾಗಿದೆ. ನಂತರ ಸಾಕ್ಷ್ಯಾಧಾರವು ಅವನು ನಿರ್ದೋಷಿ ಎಂದು ಬಹಿರಂಗಮಾಡುತ್ತದೆ.
  • ೨೦೦೯ನೇ ಅರ್ಜೆಂಟೀನಾ ಚಿತ್ರ ದಿ ಸೀಕ್ರೇಟ್ ಇನ್ ದೇರ್ ಐಸ್ ಅತ್ಯುತ್ತಮ ವಿದೇಶಿ ಭಾಷೆಯ ಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಗೆ ಪುರಸ್ಕೃತವಾಗಿದೆ .ಚಿತ್ರದ ಅಂತ್ಯವು ಅನಿರೀಕ್ಷಿತ ತಿರುವು ತೆಗೆದುಕೊಂಡು,ಮರಣದಂಡನೆಯ ಬಗ್ಗೆ ಪಾತ್ರಧಾರಿಗಳ ಕಲ್ಪನೆಗಳು ಹಾಗೂ ಮತ್ತು ಬಲಿಪಶುಗಳು ಕಾನೂನನ್ನು ಕೈಗೆ ತೆಗೆದುಕೊಂಡಿದ್ದರಿಂದ ಉಂಟಾದ ಪರಿಣಾಮಗಳನ್ನು ಒಳಗೊಂಡಿದೆ.

ಸಂಗೀತ

  • "೧೬ ಆನ್ ಡೆತ್ ರೋ",ಹಾಡು 2Pacನ ಮರಣೋತ್ತರ ಪ್ರಕಟವಾದ ಆಲ್ಬಂ R U ಸ್ಟಿಲ್ ಡೌನ್?

(ರಿಮೆಂಬರ್ ಮೀ)

  • "ವುಮೆನ್ಸ್ ಪ್ರಿಸನ್", ಲಾರೆಟ್ ಲಿನ್ರ ವಾನ್ ಲಿಯರ್ ರೋಸ್ ಆಲ್ಬಮ್‌ನ ಹಾಡು
  • "25 ಮಿನಿಟ್ಸ್ ಟು ಗೊ" ಶೆಲ್ ಸಿಲ್ವರ್‌ಸ್ಟೈನ್ಬರೆದ ಮತ್ತು ಜಾನಿ ಕ್ಯಾಶ್ಹಾಡಿದ ಎಟ್ ಫಾಲ್ಸಮ್ ಪ್ರಿಸನ್ ಮತ್ತು ದಿ ಬ್ರದರ್ಸ್ ಫೋರ್ಹಾಡು.
  • ನಿಕ್ ಕೇವ್ ಮತ್ತು ಬ್ಯಾಡ್ ಸೀಡ್ಸ್(ಜಾನಿ ಕ್ಯಾಶ್ ಕೂಡ ನಿರ್ವಹಿಸಿದ್ದಾರೆ)ಅವರ "ದಿ ಮರ್ಸಿ ಸೀಟ್" ವಿದ್ಯುತ್ ಕುರ್ಚಿಯ ಮೂಲಕ ಮರಣದಂಡನೆಗೆ ಗುರಿಯಾಗುವ ವ್ಯಕ್ತಿಯನ್ನು ಬಣ್ಣಿಸಿದೆ.ಅವನು ನಿರ್ದೋಷಿ ಎಂದು ಪ್ರತಿಪಾದಿಸುತ್ತಾ, ಕೊನೆಗಳಿಗೆಯಲ್ಲಿ ತಪ್ಪನ್ನು ಒಪ್ಪಿಕೊಳ್ಳುತ್ತಾನೆ.
  • ಮೆಟಾಲಿಕಾ ಅವರಿಂದ "ರೈಡ್ ದಿಲೈಟ್ನಿಂಗ್" ವಿದ್ಯುತ್ ಕುರ್ಚಿ ಮೂಲಕ ಮರಣದಂಡನೆಗೆ ಗುರಿಯಾಗುವ ವ್ಯಕ್ತಿಯನ್ನು ಆಧರಿಸಿದೆ. ಆದರೂ ಅವನು ಬುದ್ಧಿವಿಕಲ್ಪದ ಮೂಲಕ ಅಥವಾ ಸ್ವಾಯತ್ತತೆಯ ನಷ್ಟದಿಂದ ಅಂತಿಮವಾಗಿ ಶಿಕ್ಷಾರ್ಹನಲ್ಲವೆನಿಸುತ್ತಾನೆ.
  • ಐರನ್ ಮೇಡನ್ ಅವರ "ಹಾಲೋಡ್ ಬಿ ದೈ ನೇಮ್" ನೇಣಿನ ಮೂಲಕ ಮರಣದಂಡನೆ ಶಿಕ್ಷೆಗೆ ಗುರಿಯಾದ ವ್ಯಕ್ತಿಯೊಬ್ಬನನ್ನು ಕುರಿತದ್ದಾಗಿದೆ.
  • "ಗ್ರೀನ್ ಗ್ರೀನ್ ಗ್ರಾಸ್ ಆಫ್ ಹೋಮ್"ನಲ್ಲಿ ಮನೆಗೆ ಹಿಂತಿರುಗುತ್ತಿದ್ದಂತೆ ಕಂಡುಬಂದ ಹಾಡುಗಾರ ವಾಸ್ತವವಾಗಿ ಮರಣದಂಡನೆ ಶಿಕ್ಷೆಗಾಗಿ ಕಾಯುತ್ತಿದ್ದ.
  • ಶಾಕ್ ರಾಕ್ ಸ್ಟಾರ್ ಅಲೈಸ್ ಕೂಪರ್ ತನ್ನ ಪ್ರದರ್ಶನಗಳಿಗಾಗಿ ಮರಣದಂಡನೆಯ ಮೂರು ಭಿನ್ನ ವಿಧಾನಗಳನ್ನು ಬಳಸುತ್ತಿದ್ದ. ಮೂರು ವಿಧಾನಗಳು ಗಿಲ್ಲೋಟಿನ್,ವಿದ್ಯುತ್ ಕುರ್ಚಿ(ಹಿಂದೆಗೆದುಕೊಳ್ಳಲಾಗಿದೆ)ಹಾಗೂ ನೇಣು(ಮೊದಲ ವಿಧಾನ,ನಂತರ ಹಿಂದೆಗೆತ ನಂತರ ೨೦೦೭ನೇ ಪ್ರವಾಸದಲ್ಲಿ ಬಳಕೆ)
  • ಫ್ರೀಡಂ ಕ್ರೈ ಉಗಾಂಡದ ತಪ್ಪಿತಸ್ಥ ಕೈದಿಗಳು ನಿರ್ವಹಿಸಿದ ಹಾಡುಗಳ ಆಲ್ಬಂ. ಕೈದಿಗಳ ಹಕ್ಕು ಸಂರಕ್ಷಣೆ ದತ್ತಿಸಂಸ್ಥೆ ಆಫ್ರಿಕನ್ ಪ್ರಿಸನ್ಸ್ ಪ್ರಾಜೆಕ್ಟ್ ಧ್ವನಿಮುದ್ರಿಸಿತು ಮತ್ತು ಇದು ಆನ್‌ಲೈನ್‌ನಲ್ಲಿ ಲಭ್ಯವಿದೆ.[೧೦೧]
  • "ಗ್ಯಾಲೋಸ್ ಪೋಲ್" ಶತಮಾನಗಳಷ್ಟು ಪ್ರಾಚೀನವಾದ ಜನಪದ ಗೀತೆಯಾಗಿದ್ದು,ಲೀಡ್ ಬೆಲ್ಲಿಯಿಂದ ಜನಪ್ರಿಯವಾಗಿದೆ. ಅದು ಹಲವಾರು ಧ್ವನಿಮುದ್ರಿತ ಆವೃತ್ತಿಗಳನ್ನು ಕಂಡಿದೆ. ಲೆಡ್ ಜೆಪ್ಪೆಲಿನ್ ೭೦ರ ದಶಕದಲ್ಲಿ ಹಾಡನ್ನು ದ್ವನಿಮುದ್ರಿಸಿಕೊಂಡಿತು ಹಾಗೂ ತರುವಾಯ ನೋ ಕ್ವಾರ್ಟರ್ ಧ್ವನಿತರಂಗಗಳ ಸಂಗೀತದ ಪ್ರವಾಸಗಳ ಸಂದರ್ಭದಲ್ಲಿ ಪೇಜ್ ಅಂಡ್ ಪ್ಲಾಂಟ್‌ನಿಂದ ಪುನಶ್ಚೇತನ ಪಡೆಯಿತು.
  • ಬೀಸ್ ಗೀಸ್ ಹಾಡು "ಐ ಹ್ಯಾವ್ ಗೋಟ್ಟಾ ಗೆಟ್ ಎ ಮೆಸೇಜ್ ಟು ಯು" ಮರಣದಂಡನೆಗೆ ಗುರಿಯಾದ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ್ದು,ತನ್ನ ಪತ್ನಿಗೆ ಒಂದು ಅಂತಿಮ ಸಂದೇಶ ಕಳಿಸಲು ಬಯಸಿದ್ದ.
  • NOFXನ "ದಿ ಮ್ಯಾನ್ ಐ ಕಿಲ್ಲಡ್" ಹಾಡನ್ನು ಅವರ ವೂಲ್ವ್ಸ್ ಇನ್ ವ್ಯೂಲ್ವ್ಸ್ ಕ್ಲಾತಿಂಗ್ ಆಲ್ಬಂನಿಂದ ತೆಗೆದುಕೊಂಡು ಮಾರಕ ಚುಚ್ಚುಮದ್ದಿನಿಂದ ಮರಣದಂಡನೆ ಸರದಿಯಲ್ಲಿದ್ದ ವ್ಯಕ್ತಿಯ ದೃಷ್ಟಿಕೋನದಿಂದ ಹಾಡಲಾಗಿದೆ. ಸ್ಟೀವ್ ಅರ್ಲ್ ಅವರ "ಎಲ್ಲಿಸ್ ಯುನಿಟ್

ಒನ್"(ಡೆಡ್ ಮ್ಯಾನ್ ವಾಕಿಂಗ್ ಚಲನಚಿತ್ರದಿಂದ)ಹಾಡು ಜೈಲಿನ ಕಾವಲುಗಾರರ ದೃಷ್ಟಿಕೋನದಿಂದ ಮರಣದಂಡನೆಯನ್ನು ನೋಡುವ ಚಲನಚಿತ್ರ.

  • ಬ್ರೂಸ್ ಸ್ಪ್ರಿಂಗ್‌ಸ್ಟೀನ್‌ರ "ಡೆಡ್ ಮ್ಯಾನ್ ವಾಕಿಂಗ್"(ಡೆಡ್ ಮ್ಯಾನ್ ವಾಕಿಂಗ್ ಚಲನಚಿತ್ರದಿಂದ)ಮರಣದಂಡನೆಗೆ ಗುರಿಯಾದ ಕೈದಿಯ ದೃಷ್ಟಿಕೋನದಿಂದ ಬರೆಯಲಾಗಿದೆ. "ಲಾಂಗ್ ಬ್ಲಾಕ್ ವೈಲ್" ೧೯೫೯ರ ಹಾಡಾಗಿದ್ದು, US ನಲ್ಲಿ ಕಂಟ್ರಿ ಮತ್ತು ಜನಪದ ಮಾನದಂಡವನ್ನು ತಲುಪಿದೆ.
  • ಡಚ್ ರಾಕ್ ಬ್ಯಾಂಡ್ ಸ್ಯಾಂಡಿ ಕೋಸ್ಟ್‌ನ "ಕ್ಯಾಪಿಟಲ್ ಪನಿಶ್‌ಮೆಂಟ್" ೧೯೬೮ರಲ್ಲಿ ಧ್ವನಿಮುದ್ರಿಸಲಾಯಿತು. "ಕ್ಯಾಪಿಟಲ್ ಪನಿಶ್‌ಮಂಟ್"ಅಮೆರಿಕನ್ ಕ್ರಸ್ಟ್ ಪಂಕ್ ಬ್ಯಾಂಡ್ ಆಸ್‌-ರಾಟನ್‌ನ ೧೯೯೯ರ ಸಾಲಿನ ಗೀತೆ.
  • "ಟು ಹ್ಯಾಂಗ್‌ಮನ್" ೧೯೬೯ರ ಅಮೆರಿಕ ರಾಕ್/ಜನಪದ/ಕಂಟ್ರಿ ಬ್ಯಾಂಡ್ ಮ್ಯಾಸನ್ ಪ್ರಾಫಿಟ್‌ನ ಹಾಡಾಗಿದೆ. ಮರಣದಂಡನೆ ವಿರುದ್ಧ ಆಕ್ಷೇಪಿಸಿದ್ದರಿಂದ ಗಲ್ಲಿಗೇರಿಸುವ ವ್ಯಕ್ತಿಯನ್ನು ನೇಣಿಗೆ ಹಾಕಿದ ಕಥೆಯನ್ನು ಇದು ಹೇಳುತ್ತದೆ.

ಇವನ್ನೂ ನೋಡಿ

  • ಐ ಫಾರ್ ಎನ್ ಐ
  • ಅಮ್ನೆಸ್ಟಿ ಇಂಟರ್‌ನ್ಯಾಷನಲ್
  • ಡೆತ್ ಬೈ ಎ ಥೌಸಂಡ್ ಕಟ್ಸ್
  • The ಡೆತ್ ಪೆನಾಲ್ಟಿ: ಅಪೋಸಿಂಗ್ ವ್ಯೂಪಾಯಿಂಟ್ಸ್ (ಬುಕ್)
  • ರಿವೇಂಜ್
  • ಲೈಫ್ ಇಂಪ್ರಿಸನ್‌ಮೆಂಟ್

ಆಕರಗಳು

ಬಾಹ್ಯ ಕೊಂಡಿಗಳು

ಮರಣದಂಡನೆಗೆ ವಿರೋಧ

ಮರಣದಂಡನೆ ಪರವಾಗಿ

ಧಾರ್ಮಿಕ ದೃಷ್ಟಿಕೋನಗಳು

Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: