ತೋಕೆ ಗೋಧಿ

ಓಟ್ಸ್ ಸೆಳೇತ,ಹ್ರದಯ ಸಂಬಂಧಿ ಮತ್ತು ಇತರ ಪರಿಸ್ತಿತೀಯ ಚಿಕಿಸ್ತಿಗೆ ಸೂಚಿಸಲಾಗಿದೆ.
ತೋಕೆ ಗೋಧಿ
Oat plants with inflorescences
Scientific classification
ಸಾಮ್ರಾಜ್ಯ:
plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Monocots
(ಶ್ರೇಣಿಯಿಲ್ಲದ್ದು):
Commelinids
ಗಣ:
Poales
ಕುಟುಂಬ:
Poaceae
ಕುಲ:
ಅವೆನ
ಪ್ರಜಾತಿ:
A. sativa
Binomial name
Avena sativa
L. (1753)

ತೋಕೆ ಗೋಧಿ ಅಥವಾ ಓಟ್ಸ್ (ಅವೀನಾ ಸಟೀವಾ) ಅದೇ ಹೆಸರಿನಿಂದ ಪರಿಚಿತವಾಗಿರುವ ಅದರ ಬೀಜಕ್ಕಾಗಿ ಬೆಳೆಯಲಾಗುವ ಸೀರಿಯಲ್‍ನ ಒಂದು ಪ್ರಜಾತಿ. ತೋಕೆ ಗೋಧಿಯು ಓಟ್‍ಮೀಲ್ ಮತ್ತು ಚಪ್ಪಟೆ ತೋಕೆ ಗೋಧಿಯಾಗಿ ಮಾನವ ಸೇವನೆಗೆ ಸೂಕ್ತವಾಗಿದೆಯಾದರೂ, ಜಾನುವಾರುಗಳ ಮೇವಾಗಿ ಬಳಕೆ ಅದರ ಅತ್ಯಂತ ಸಾಮಾನ್ಯ ಬಳಕೆಗಳಲ್ಲಿ ಒಂದು. ಹೆಕ್ಸಪ್ಲಾಯಿಡ್ ಕಾಡು ತೋಕೆ ಗೋಧಿ ಸ್ಟರೀಲಿಸ್ ಅವೀನಾ ಸಟೀವಾ ಮತ್ತು ನಿಕಟವಾಗಿ ಸಂಬಂಧಿಸಿದ ಕಿರು ಬೆಳೆ ಅವೀನಾ ಬಿಜ಼ಂಟಿನಾದ ಕಾಡು ಪೂರ್ವಜವಾಗಿದೆ. ಇದು ಒಂದು ಏಕದಳ ಧಾನ್ಯವಾಗಿದ್ದು ಮನುಷ್ಯರು ಸೇವಿಸಲು ಯೋಗ್ಯವಾದ ಆಹಾರವಾಗಿದ್ದು , ದನಕರುಗಳು, ಕುದುರೆಗಳು ಮುಂತಾದ ಪಶುಗಳ ಆಹಾರವಾಗಿ ಪ್ರಮುಖವಾಗಿ ಬಳಕೆಯಾಗುತ್ತಿದೆ.ಯುರೋಪ್ , ಅಮೇರಿಕ , ರಶಿಯ , ಚೀನಾಗಳಲ್ಲಿ ಇದನ್ನು ಬೆಳೆಸುತ್ತಾರೆ.ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಗುಣಕ್ಕಾಗಿ ಇದನ್ನು ಆರೋಗ್ಯಕರ ಪೌಷ್ಟಿಕ ಆಹಾರ ಎಂದು ಪರಿಗಣಿಸಲಾಗುತ್ತಿದೆ.

ಉತ್ಪಾದನೆ

೨೦೧೩ರ ಉತ್ಪಾದನೆಯಲ್ಲಿ ಪ್ರಪಂಚ ಉನ್ನತ ಹತ್ತು ದೇಶಗಳು
(ಸಾವಿರ ಮೆಟ್ರಿಕ್ ಟನ್‍ಗಳಲ್ಲಿ)
 European Union7,581
 ರಷ್ಯಾ4,027
 ಕೆನಡಾ2,680
 ಆಸ್ಟ್ರೇಲಿಯಾ1,050
 ಅಮೇರಿಕ ಸಂಯುಕ್ತ ಸಂಸ್ಥಾನ929
 ಉಕ್ರೇನ್630
 ಬೆಲಾರುಸ್600
 ಚೀನಾ580
 ಚಿಲಿ560
 ಅರ್ಜೆಂಟೀನ400
ಪ್ರಪಂಚದ ಒಟ್ಟು ಉತ್ಪಾದನೆ'20,732
Source:[೧]

ಉಲ್ಲೇಖಗಳು