ನಾಡಿಯಾ ಮುರಾದ್

ನಾದಿಯಾ ಮುರಾಡ್‌ ಬೇಸ್‌ ತಾಹಾ (ಜನನ: 1993) ಯಾಜಿದಿ ಮಾನವ ಹಕ್ಕುಗಳ ಕಾರ್ಯಕರ್ತೆ,[೧][೨] ನೊಬೆಲ್ ಶಾಂತಿ ಪ್ರಶಸ್ತಿ ನಾಮನಿರ್ದೇಶಿತೆ[೩][೪] ಮತ್ತು ಸೆಪ್ಟೆಂಬರ್ 2016 ರಿಂದ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಾನವ ಕಳ್ಳಸಾಗಣೆಯ ಸಂತ್ರಸ್ತರ ಘನತೆಯ (UNODC) ಮೊದಲ ಸೌಹಾರ್ದ ರಾಯಭಾರಿ.[೫] ಇವರ ಚಳುವಳಿಯನ್ನು ಯಾಜ್ದ: ಜಾಗತಿಕ ಯಾಜಿದಿಗಳ ಸಂಸ್ಥೆ ಬೆಂಬಲಿಸಿದೆ.

ನಾಡಿಯಾ ಮುರಾದ್
ನಾಡಿಯಾ ಮುರಾದ್ (2017)
ಜನನ
ನಾದಿಯಾ ಮುರಾಡ್‌ ಬೇಸ್‌ ತಾಹಾ

1993 (ವಯಸ್ಸು 30–31)
ಕೊಚೊ, ಸಿಂಜರ್ , ಇರಾಕ್
ವೃತ್ತಿಮಾನವ ಹಕ್ಕುಗಳ ಕಾರ್ಯಕರ್ತೆ
Years active2014 - ಇಲ್ಲಿಯವರೆಗೆ

ಆಗಸ್ಟ್ 2014 ರಲ್ಲಿ ಇಸ್ಲಾಮಿಕ್ ಸ್ಟೇಟ್ (ISIS) ಇವರನ್ನು ಅಪಹರಿಸಿದ್ದರು.[೬] ಮೂರು ವರ್ಷಗಳ ನಂತರ, 1 ಜೂನ್ 2017 ರಂದು, ಅವರು ತನ್ನ ಊರಾದ ಕೊಚೊಗೆ ಮರಳಿದರು.[೭][೮]

ಆರಂಭಿಕ ಜೀವನ

ಮುರಾದ್ ಕೊಚೊ (ಸಿಂಜರ್, ಇರಾಕ್) ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ಕುಟುಂಬದವರು, ಯಾಜಿದಿ ಜನಾಂಗೀಯ-ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ರೈತರಾಗಿದ್ದರು.[೯]

ಇಸ್ಲಾಮಿಕ್ ರಾಜ್ಯದ (ಐಸಿಸ್) ಸೆರೆಯಲ್ಲಿ

19 ನೇ ವಯಸ್ಸಿನಲ್ಲಿ, ಮುರಾದ್ ಉತ್ತರ ಇರಾಕ್ನ ಸಿಂಜಾರ್ನಲ್ಲಿ ಕೋಚೊ ಎಂಬ ಗ್ರಾಮದಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಯಾಗಿದ್ದರು. ಆ ಸಂದರ್ಭದಲ್ಲಿ ಇಸ್ಲಾಮಿಕ್ ರಾಜ್ಯ ಹೋರಾಟಗಾರರು, ಗ್ರಾಮದಲ್ಲಿನ ಯಾಜಿದಿ ಸಮುದಾಯದ ಮೇಲೆ ದಾಳಿ ನಡಿಸಿ, ಸುಮಾರು 600 ಜನರನ್ನು ಕೊಂದುಹಾಕಿದರು. ಇದರಲ್ಲಿ ನಾಡಿಯಾ ಸಹೋದರರು ಮತ್ತು ಮಲ ಸಹೋದರರೂ ಹತ್ಯೆಗೊಂಡರು. ಯುವತಿಯರನ್ನು ಗುಲಾಮಗಿರಿಗೆ ಒಡ್ಡಲಾಯಿತು. ಆ ವರ್ಷ ಇರಾಕ್ನ ಇಸ್ಲಾಮಿಕ್ ರಾಜ್ಯದಿಂದ ಸೆರೆಹಿಡಿದ 6,700 ಯಾಜಿದಿ ಮಹಿಳೆಯರಲ್ಲಿ ಮುರಾದ್ ಕೂಡ ಒಬ್ಬರು.[೧೦] ಅವರನ್ನು ಮೊಸುಲ್ ನಗರದಲ್ಲಿ ಒತ್ತೆಯಾಗಿತ್ತು ಕೊಳ್ಳಲಾಗಿದ್ದಲ್ಲದೇ, ಹೊಡೆದರು ಹಾಗೂ ಸಿಗರೇಟುಗಳಿಂದ ಸುಟ್ಟರು. ತಪ್ಪಿಸಿಕೊಳ್ಳಲು ಪ್ರಯತ್ನ ವಿಫಲಗೊಂಡಾಗ ಆರು ಮಂದಿ ಪುರುಷರು, ಆಕೆ ಪ್ರಜ್ಞಾಹೀನಳಾಗುವ ತನಕವೂ, ಇವರ ಮೇಲೆ ಅತ್ಯಾಚಾರ ನಡೆಸಿದರು. ಕೊನೆಗೂ ನವೆಂಬರ್ 2014 ರಲ್ಲಿ, ಅವರ ಮೇಲ್ವಿಚಾರಕ ಮನೆಯ ಬೀಗವನ್ನು ತೆರೆದು ಹೊರಹೋಗಿದ್ದಾಗ ತಪ್ಪಿಸಿಕೊಳ್ಳಲು ಸಾಧ್ಯವಾಯಿತು.[೧೧] ನೆರೆಹೊರೆಯ ಒಂದು ಕುಟುಂಬದವರು ಇವರನ್ನು ತಮ್ಮೊಂದಿಗೆ ಸೇರಿಸಿಕೊಂಡರು ಮತ್ತು ಅವರೇ ಇಸ್ಲಾಮಿಕ್ ರಾಜ್ಯ ನಿಯಂತ್ರಿತ ಪ್ರದೇಶದಿಂದ(ಕುರ್ದಿಸ್ತಾನ) ಮುರಾದ್ ರವರನ್ನು ಗುಪ್ತರವಾನೆ ಮಾಡಿಸಿ, ಉತ್ತರ ಇರಾಕ್ನ ಡುಹೊಕ್ನಲ್ಲಿ ನಿರಾಶ್ರಿತರ ಶಿಬಿರಕ್ಕೆ ಸೇರಲು ಅನುಕೂಲ ಕಲ್ಪಿಸಿಕೊಟ್ಟರು. ಫೆಬ್ರವರಿ 2015 ರಲ್ಲಿ, ಬೆಲ್ಜಿಯನ್ ದಿನಪತ್ರಿಕೆ, ಲಾ ಲಿಬ್ರೆ ಬೆಲ್ಜಿಕ್ ವರದಿಗಾರರಿಗೆ ರವಾಂಗ ಕ್ಯಾಂಪ್ನಲ್ಲಿರುವಾಗ, ಅವರು ತಮ್ಮ ಮೊದಲ ಹೇಳಿಕೆಯನ್ನು ನೀಡಿದರು.[೧೨] 2015 ರಲ್ಲಿ ಜರ್ಮನಿಯ ಬಾಡೆನ್-ವುರ್ಟೆಂಬರ್ಗ್ಗ ಸರ್ಕಾರದ, ನಿರಾಶ್ರಿತರ ಕಾರ್ಯಕ್ರಮದಿಂದ ಪ್ರಯೋಜನ ಪಡೆದ 1000 ಮಹಿಳೆಯರು ಮತ್ತು ಮಕ್ಕಳಲ್ಲಿ ಇವರೂ ಒಬ್ಬರು. ತದನಂತರ, ಅದೇ ಇವರ ಹೊಸ ಮನೆಯಾಯಿತು.[೧೩][೧೪]

ಸೆರೆಯ ನಂತರ

ಡಿಸೆಂಬರ್ 16, 2015 ರಂದು, ಮಾನವ ಕಳ್ಳಸಾಗಣೆ ಮತ್ತು ಸಂಘರ್ಷದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಮುರಾದ್ ವಿವರಿಸಿದರು. ಮಾನವ ಕಳ್ಳಸಾಗಣೆ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೊಟ್ಟಮೊದಲ ಚರ್ಚೆ ಇದಾಗಿತ್ತು. [೧೫]

ಐಎಸ್ಐಎಸ್ ಉಗ್ರರಿಂದ ಅಪಹರಣಕ್ಕೊಳಗಾಗಿ, ಲೈಂಗಿಕ ಗುಲಾಮಗಿರಿ, ಚಿತ್ರ ಹಿಂಸೆ, ನರಕಯಾತನೆ ಅನುಭವಿಸಿ ಅವರ ಪೈಶಾಚಿಕ ದುಷ್ಕೃತ್ಯಕ್ಕೆ ಸಿಲುಕಿಯೂ ಉಗ್ರರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡು ಬಂದಿರುವ ಇರಾಕ್ ನ ನಾದಿಯಾ ಮುರಾಡ್ ಅವರನ್ನು ವಿಶ್ವ ಸಂಸ್ಥೆ ಮಾನವ ಕಳ್ಳಸಾಗಣೆ ಸೌಹಾರ್ದ ರಾಯಭಾರಿಯನ್ನಾಗಿ ನೇಮಕ ಮಾಡಿತು. ನಾದಿಯಾ, ಮಾನವ ಕಳ್ಳ ಸಾಗಾಣೆಗೆ ಸಂಬಂಧಿಸಿದಂತೆ ಜನ ಜಾಗೃತಿ ಮೂಡಿಸುವ ಜವಾಬ್ದಾರಿ ಹೊರಲಿದ್ದಾರೆ. ಕಳ್ಳ ಸಾಗಾಣೆಗೆ ಬಲಿಯಾಗುತ್ತಿರುವರ ಸ್ಥಿತಿಗತಿ, ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ದೃಷ್ಟಿ ಹರಿಸಲಿದ್ದಾರೆ. ಮುರಾದ್ ತನ್ನ ಈ ಚಳುವಳಿಯ ಪರಿಣಾಮವಾಗಿ ಗಂಭೀರ ಜೀವಬೆದರಿಕೆಗಳನ್ನು ಸ್ವೀಕರಿಸಿದ್ದಾರೆ.

ಬಾರ್ಸಿಲೋನಾದಲ್ಲಿ ಶಾಂತಿ ಪ್ರಶಸ್ತಿ ಸ್ವೀಕರಿಸಿದ ಮೇಲೆ ನಾಡಿಯಾ ಮುರಾದ್ ಭಾಷಣ

ಸೆಪ್ಟೆಂಬರ್ 2016 ರಲ್ಲಿ, ಪತ್ರಕರ್ತೆ ಟೀನಾ ಬ್ರೌನ್ ನ್ಯೂಯಾರ್ಕ್ ನಗರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾದಿಯಾ ಅವರ ಚಳುವಳಿ ಅನ್ನು ಘೋಷಿಸಿದರು.[೧೬] ಇದು ನರಮೇಧದ ಸಂತ್ರಸ್ತರಿಗೆ ವಕಾಲತ್ತು ಮತ್ತು ನೆರವನ್ನು ನೀಡುತ್ತದೆ.[೧೭]

ಒಮ್ಮೆ ಐಎಸ್‌ ಸೋತುಹೋದರೆ ಆಗ ಉಗ್ರರು ಏನೂ ಆಗೇ ಇಲ್ಲವೆಂಬಂತೆ ಗಡ್ಡ ಬೋಳಿಸಿ ನಗರದ ರಸ್ತೆಗಳಲ್ಲಿ ನಡೆದಾಡುತ್ತಾರೆ

— ನಾದಿಯಾ ಮುರಾಡ್‌ ಬೇಸ್‌ ತಾಹಾ, ನಾದಿಯಾ ಮುರಾಡ್‌ ಬೇಸ್‌ ತಾಹಾ। source="ಪ್ರಜಾವಾಣಿ"[೧೮]

ಮಾನವ ಕಳ್ಳಸಾಗಣೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ಜನಾಂಗೀಯ ದೌರ್ಜನ್ಯ, ಐಎಸ್ಐಎಸ್ ಉಗ್ರರ ಪೈಶಾಚಿಕ ಕೃತ್ಯ ಇತ್ಯಾದಿಗಳ ಬಗ್ಗೆ ವಿಶ್ವಾದ್ಯಂತ ಜನಜಾಗೃತಿ ಹುಟ್ಟಿಸುವುದಕ್ಕಾಗಿ ನಾದಿಯಾ ತನ್ನದೇ ಆದ ವೆಬ್ ಸೈಟ್ ಆರಂಭಿಸಿದ್ದಾಳೆ

ಪ್ರಶಸ್ತಿ - ಪುರಸ್ಕಾರಗಳು

  • 5 ಜನವರಿ 2016 ರಂದು ಇವರ ನೊಂದವರ ಬಗೆಗಿನ ಕಾಳಜಿಯನ್ನ ಗುರುತಿಸಿ. ಇರಾಕ್ ಸರಕಾರವು ಅವರನ್ನು 2016 ನೊಬೆಲ್ ಶಾಂತಿ ಪ್ರಶಸ್ತಿಗೆ ತನ್ನ ನಾಮ ನಿರ್ದೇಶನ ಮಾಡಿತು.[೧೯][೨೦][೨೧] ಒಬ್ಬ ನಾರ್ವೇಜಿಯನ್ ಶಾಸಕರಿಂದ ನಾಮನಿರ್ದೇಶನವು ಅನುಮೋದಿಸಲ್ಪಟ್ಟಿತು.[೨೨]
  • 16 ಸೆಪ್ಟೆಂಬರ್ 2016: ವಿಶ್ವ ಸಂಸ್ಥೆ ಮಾನವ ಕಳ್ಳಸಾಗಣೆ ಸೌಹಾರ್ದ ರಾಯಭಾರಿ[೨೩][೨೪] [೨೫][೨೬]
  • 10 ಅಕ್ಟೋಬರ್ 2016: ಕೌನ್ಸಿಲ್ ಆಫ್ ಯುರೋಪ್ ವ್ಯಾಕ್ಲಾವ್ ಹ್ಯಾವೆಲ್ ಮಾನವ ಹಕ್ಕುಗಳ ಪ್ರಶಸ್ತಿ
  • 27 ಅಕ್ಟೋಬರ್ 2016: ಸ್ವತಂತ್ರ್ಯ ಚಿಂತನೆಗೆ ಸಾಖ್ರೋವ್ ಪ್ರಶಸ್ತಿ (ಲಾಮಿಯಾ ಅಜಿ ಬಶರ್ರ ಜೊತೆ )[೨೭][೨೮][೨೯]

ಯಾಜಿದಿಗಳ ಬಗ್ಗೆ ಟಿಪ್ಪಣಿ

ಯಜಿದಿಗಳು, ಝೋರಾಷ್ಟ್ರಿಯನಿಸಂ, ಜುದಾಯಿಸಂ ಮತ್ತು ಇಸ್ಲಾಂ ಧರ್ಮ ಸೇರಿದಂತೆ ಈ ಧರ್ಮಗಳಿಂದ ಪ್ರಭಾವಿತವಾದ ಒಂದು ಮಿಶ್ರಪಂಥ, ಆದರೆ ಇಸ್ಲಾಮಿಕ್ ಸ್ಟೇಟ್ ಸದಸ್ಯರು ಅವರನ್ನು, ಅವರು ದೆವ್ವವನ್ನು ಪೂಜೆ ಮಾಡುವ ಪೇಗನ್’ಗಳು ಅಥವಾ ಧರ್ಮಹೀನರು ಮತ್ತು ಗುಲಾಮಗಿರಿಗೆ ಅಥವಾ ಸಾವಿಗೆ ಅರ್ಹರು ಪರಿಗಣಿಸುತ್ತದೆ. ಯಾಜಿದಿ ಮಹಿಳೆಯರು ಮತ್ತು ಹುಡುಗಿಯರು ಇಸ್ಲಾಮಿಕ್ ಸ್ಟೇಟ್ ಸದಸ್ಯರನ್ನು ಮದುವೆಯಾಗಿ ಅವರ "ಉಪಪತ್ನಿ" ಅಥವಾ ವೇಶ್ಯೆ ಆಗಲು ಒತ್ತಾಯಿಸುವ ಮೂಲಕ ಈ ಐಎಸ್ ಗುಂಪು ವ್ಯಭಿಚಾರ ಮಾಡುವುದರ ವಿರುದ್ಧ ಮತ್ತು ಕಾದಾಳುಗಳನ್ನು ರಕ್ಷಿಸಲು ಈ ಕ್ರಮ ಸಹಾಯವೆಂದು ಹೇಳುತ್ತಾರೆ.[೩೦][೩೧]

ನೋಡಿ

ಉಲ್ಲೇಖಗಳು