ಫೀಲ್ಡ್ಸ್ ಪದಕ

ಗಣಿತಜ್ಞರಿಗೆ ಬಹುಮಾನ

ಫೀಲ್ಡ್ಸ್ ಪದಕವು ಅಂತರರಾಷ್ಟ್ರೀಯ ಗಣಿತ ಒಕ್ಕೂಟದ (ಐಎಂಯು) ಅಂತರರಾಷ್ಟ್ರೀಯ ಕಾಂಗ್ರೆಸ್‍ನಲ್ಲಿ ೪೦ ವರ್ಷಕ್ಕಿಂತ ಕಡಿಮೆ ವಯಸ್ಸಿನ ಇಬ್ಬರು, ಮೂವರು ಅಥವಾ ನಾಲ್ಕು ಗಣಿತಜ್ಞರಿಗೆ ನೀಡಲಾಗುವ ಪ್ರಶಸ್ತಿ. ಈ ಸಭೆಯು (ಕಾಂಗ್ರೆಸ್) ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯುತ್ತದೆ.

ಫೀಲ್ಡ್ಸ್ ಪದಕ
ಫೀಲ್ಡ್ಸ್ ಪದಕದ ಶಿರೋಭಾಗ
ಕೊಡಲ್ಪಡುವ ವಿಷಯಯುವ ವಿಜ್ಞಾನಿಗಳಿಗೆ ನೀಡುವ ಗಣಿತದಲ್ಲಿನ ಮಹೋನ್ನತ ಕೊಡುಗೆಗಳಿಗಾಗಿ
ದೇಶಬದಲಾಗುತ್ತದೆ
ಕೊಡಿಸಲ್ಪಡುಅಂತರರಾಷ್ಟ್ರೀಯ ಗಣಿತ ಒಕ್ಕೂಟ (ಐಎಂಯು)
ಸಂಭಾವನೆಕೆನೇಡಿಯನ್ $5,000
ಪ್ರಧಮವಾಗಿ ಕೊಡಲ್ಪಟ್ಟದ್ದು1936; ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೦". ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೦". (1936)
ಕೊನೆಯದಾಗಿ ಕೊಡಲ್ಪಟ್ಟದ್ದು2018 (2018)
ಅಧಿಕೃತ ಜಾಲತಾಣMathunion.org

ಫೀಲ್ಡ್ಸ್ ಪದಕವು ಒಬ್ಬ ಗಣಿತಜ್ಞನು ಪಡೆಯಬಹುದಾದ ಅತ್ಯಂತ ಉನ್ನತ ಗೌರವಗಳಲ್ಲಿ ಒಂದಾಗಿದೆ ಎಂದು ಪರಿಗಣಿತವಾಗಿದೆ, ಮತ್ತು ಇದನ್ನು ಗಣಿತಜ್ಞನ ನೊಬೆಲ್ ಪ್ರಶಸ್ತಿ ಎಂದು ವರ್ಣಿಸಲಾಗಿದೆ,[೧][೨][೩] ಆದರೆ ಪ್ರಶಸ್ತಿಯನ್ನು ಕೊಡುವ ಪ್ರಮಾಣ ದರ, ಪ್ರಶಸ್ತಿಗಳ ಸಂಖ್ಯೆ ಮತ್ತು ವಯೋಮಿತಿಗಳು ಸೇರಿದಂತೆ, ಹಲವು ಪ್ರಮುಖ ವ್ಯತ್ಯಾಸಗಳಿವೆ. ಎಆರ್‌ಡಬ್ಲ್ಯುಯು ನಡೆಸುವ ವಾರ್ಷಿಕ ಶೈಕ್ಷಣಿಕ ಶ್ರೇಷ್ಠತಾ ಸಮೀಕ್ಷೆಯ ಪ್ರಕಾರ, ಫೀಲ್ಡ್ಸ್ ಪದಕವನ್ನು ವಿಶ್ವಾದ್ಯಂತ ಗಣಿತದ ಕ್ಷೇತ್ರದಲ್ಲಿನ ಅತ್ಯುನ್ನತ ಪ್ರಶಸ್ತಿಯೆಂದು ಸ್ಥಿರವಾಗಿ ಪರಿಗಣಿಸಲಾಗಿದೆ,[೪] ಮತ್ತು ಇನ್ನೊಂದು ಪ್ರಸಿದ್ಧಿಯ ಸಮೀಕ್ಷೆಯಲ್ಲಿ, ಫೀಲ್ಡ್ಸ್ ಪದಕವು ಗಣಿತದಲ್ಲಿ ಎರಡನೇ ಅತಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿ ಆಬೆಲ್ ಪ್ರಶಸ್ತಿಯ ನಿಕಟ ಉತ್ತರಾಧಿಕಾರಿ ಎನಿಸಿಕೊಂಡಿತು.[೫][೬]

ಉಲ್ಲೇಖಗಳು